part 2
ಹುಡುಗನಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದರೇ ಹೇಗೆ?
ನನ್ನ ಚಿಕ್ಕಪ್ಪ ಖಡಾ ಖಂಡಿತವಾಗಿ ಒಪ್ಪಲೇ ಇಲ್ಲ..
" ಹೀಗೆಲ್ಲಾ ಮಾಡಿದರೆ.. ಮುಂದೆ ಪತಿಪತ್ನಿಯರಲ್ಲಿ ಹೊಂದಾಣಿಕೆ ಕಷ್ಟವಾಗಿಬಿಡುತ್ತದೆ.."
"ನೋಡೋಣ.. ಅವರು ಏನು ಹೇಳುತ್ತಾರೆಂದು..
ಅವರ ನಡೆಯನ್ನು ನೋಡಿ ನಾವು ಮುಂದುವರೆಯೋಣ..."
ನನಗೂ ಸರಿಯೆನಿಸಿತು..
ಮದುವೆ ಹುಡುಗನ ಮನೆಯಲ್ಲಿ ಮೀಟಿಂಗು ಶುರುವಾಯಿತು...
ಎಲ್ಲರಿಗೂ ಒಂದು ಥರಹದ ಸಂಕೋಚ...
ಹೇಗೆ ವಿಷಯವನ್ನು ಪ್ರಸ್ತಾಪಿಸುವದು?
"ನೋಡಿ ಇದು ನಮಗೆಲ್ಲರಿಗೂ ಒಂದು ಮುಜುಗರದ ಸಂಗತಿ..
ನಮಗೆ ಈ ಅಪವಾದವನ್ನು ಹೇಳುತ್ತಿರುವವರು ನಮ್ಮ ಪರಿಚಯಸ್ಥರು..
ನಿಮ್ಮ ಅಕ್ಕಪಕ್ಕದ ಮನೆಯವರು..!
ಇದರಲ್ಲಿ ಸತ್ಯ ಏನು...?
ಈ ವಿಷಯದ ಸತ್ಯಾಸತ್ಯತೆಯನ್ನು ನಮಗೆ ಮನವರಿಕೆ ಮಾಡಿಕೊಡುವದು ನಿಮ್ಮ ಜವಾಬ್ದಾರಿ.."
ಈಗ ಹುಡುಗ ಗಂಭೀರವಾದ..
" ನಮ್ಮೂರಲ್ಲಿ ಎಂಟು ಮನೆಗಳಿವೆ..
ಇಲ್ಲಿರುವ ಆರು ಮನೆಯವರು ಒಂದು ಜಮೀನಿನ ವಿಷಯದಲ್ಲಿ ನಮ್ಮ ಮೇಲೆ ಕೇಸು ಹಾಕಿದ್ದರು..
ಅದರಲ್ಲಿ ಎಲ್ಲ "ಕೋರ್ಟಿನಲ್ಲಿಯೂ.". ನಮಗೇ ಜಯವಾಯಿತು...
ಆಗ ಅವರೊಂದು ಪ್ರತಿಜ್ನೆ ಮಾಡಿದ್ದರು.."
"ಪ್ರತಿಜ್ಞೆಯಾ..? ಏನಂತ ?? "
"ಈ ಕೇಸಿನಲ್ಲೇನೊ ಗೆದ್ದು ಬಿಟ್ರಿ..
ಈ ಕೇಸಿನಲ್ಲಿ ನೀವು ಗೆಲ್ಲಲಿಕ್ಕೆ ನಿಮ್ಮ ಮಗ ಕಾರಣ..
ನಿಮ್ಮ ಮಗ ಹೇಗೆ ಮದುವೆಯಾಗುತ್ತಾನೆ ನಾವು ನೋಡಿಯೇ ಬಿಡುತ್ತೇವೆ..
ಯಾರು ಹೆಣ್ಣು ಕೊಡುತ್ತಾರೆ ನೋಡಿಯೇ ಬಿಡೋಣ.." ಅಂತ ಕೂಗಾಡಿದ್ದರು..
ನಮಗೆ ಈಗ ಎಲ್ಲವೂ ಅರ್ಥವಾಗುತ್ತಿದೆ..
ಹಿಂದೆ ಕೂಡಿ ಬಂದ ಸಂಬಂಧಗಳೆಲ್ಲ ಯಾಕೆ ಬೇಡವೆಂದರು ಅಂತ..
ಇದೆಲ್ಲ ಅವರ ಕರಾಮತ್ತು...
ನೀವು ನಮ್ಮ ಬಳಿ ನೇರವಾಗಿ ವಿಷಯ ಹೇಳಿದ್ದು ಒಳ್ಳೆಯದಾಯಿತು..."
ನಾವು ಈಗ ಮತ್ತೆ ಚಿಂತೆಗೆ ಬಿದ್ದೆವು..
"ಈ ಮಾತನ್ನು ಹೇಗೆ ನಂಬಬೇಕು..?
ಇದು ಈವರು ಹೇಳುತ್ತಿರುವದು.. .
ಇದರಲ್ಲಿ ಸತ್ಯ ಏನು? ಎಷ್ಟು..? "
ಅಷ್ಟರಲ್ಲಿ ಗಂಡಿನ ಕಡೆಯವರು ಕೋರ್ಟಿನ ಕಾಗದ ಪತ್ರಗಳನ್ನು ತೋರಿಸಿದರು...
ನಮ್ಮ ಕಡೆಯ ಹಿರಿಯರೊಬ್ಬರು ಕೇಳಿದರು..
"ಈ ಮೊದಲು ತಪ್ಪಿಹೋದ ಸಂಬಂಧಗಳ ವಿಳಾಸ ಕೊಡುವಿರಾ,,..?"
"ಓಹೊ...
ಖಂಡಿತ ತಗೊಳಿ..
ನಿಜ ಹೇಳ ಬೇಕೆಂದರೆ ಅವರು ಯಾಕೆ ಬೇಡವೆಂದರು ಎನ್ನುವದು ನಮಗೂ ಗೊತ್ತಿಲ್ಲ...
ಇದಕ್ಕೂ ಹೆಚ್ಚಿನ ಸಾಕ್ಷಿ , ಪುರಾವೆ ನಮ್ಮಲಿಲ್ಲ.."
ನಾನು ಮತ್ತು ಇನ್ನೊಬ್ಬರು ತಕ್ಷಣ ಅಲ್ಲಿಂದ ಹೊರಟು ಆ ಮೂರು ಜನರನ್ನು ಸಂಪರ್ಕಿಸಿದೆವು...
ಅವರೆಲ್ಲರೂ ಒಂದೇ ಕಾರಣ ಕೊಟ್ಟರು..
"ಮದುವೆ ಹುಡುಗನಿಗೆ,,, "ಅದೇ.." ಇಲ್ಲವಂತೆ....
ಹಾಗಾಗಿ ನಾವು ಮುಂದುವರೆಯಲಿಲ್ಲ..!"
"ನಿಮಗೆ ಈ ವಿಷಯ ಹೇಳಿದವರಾರು?"
"ಜಂಬೆಮನೆ ಗಂಗಕ್ಕ..
ಮತ್ತು ಅವರ ಅಕ್ಕಪಕ್ಕದ ಮನೆಯವರು..."
ನಮಗೆಲ್ಲರಿಗೂ ಈಗ ಸಮಾಧಾನವಾಯಿತು...
ಮದುವೆ ಹುಡುಗನೇ ಮಾತನಾಡಿದ..
"ಎಂಟು ಮನೆಗಳಿರುವ ಈ ಊರಿನಲ್ಲಿ ..
ಆರು ಮನೆಯವರು ಸೇರಿದರೆ..
ಒಬ್ಬನನ್ನು ನಪಂಸಕನನ್ನಾಗಿ ಮಾಡುವದು ಬಹಳ ಸುಲಭ..
ನಾವು ಬಹುಮತವನ್ನು ನಂಬುತ್ತೇವೆ.. ಅಲ್ಲವಾ?"
ಇದಕ್ಕೆ ನಮ್ಮಲ್ಲಿ ಉತ್ತರ ಇಲ್ಲವಾಗಿತ್ತು...
ಹುಡುಗನೇ ಮಾತನಾಡಿದ..
"ಸುಳ್ಳಿಗೆ ಸುಲಭದಲ್ಲಿ ಸಾಕ್ಷಿ, ಪುರಾವೆ ಸಿಕ್ಕಿಬಿಡುತ್ತದೆ...
ಸತ್ಯಕ್ಕೆ, ಪ್ರಾಮಾಣಿಕತೆಗೆ ಬಹಳ ಕಷ್ಟ..
ನಮ್ಮ ಪ್ರಾಮಾಣಿಕತೆಯನ್ನು ನಾವೇ ಹೇಳಿಕೊಳ್ಳುವಂಥಹ,
ಸಾಬಿತು ಮಾಡಿಕೊಳ್ಳುವ ಸಂದರ್ಭ ಯಾರಿಗೂ ಬರಬಾರದು...
ಇದು ಬಹಳ ನೋವಿನ..,
ಅಸಹಾಯಕತೆಯ ಸಂದರ್ಭ...
ನಿಮಗೆ ಇನ್ನೂ ಖಾತ್ರಿ ಬೇಕಾದಲ್ಲಿ ನಾನು ಒಂದು ಪೇಪರಿನಲ್ಲಿ ಬರೆದುಕೊಡುವೆ.."
"ನೋಡಿ ಅದೇನೂ ಬೇಕಿಲ್ಲ...
ಬೇಜಾರು ಮಾಡಿಕೊಳ್ಳಬೇಡಿ..
ಹೆಣ್ಣು ಹೆತ್ತವರಾಗಿ ಮಾತನಾಡಬೇಕಾಯಿತು..
ಈಗ ಎಲ್ಲವೂ ಸರಿಹೋಯಿತು..
ಇನ್ನು ಹಳೆಯದನೆಲ್ಲವನ್ನೂ ಮರೆತು ...
ನಮ್ಮ ಮಗಳನ್ನು ನಿಮ್ಮ ಮನೆಗೆ ತುಂಬಿಸಿಕೊಳ್ಳಿ..."
ಇನ್ನೇನು ..?
ಸಂಭ್ರಮ.. ಸಂತೋಷದಿಂದ.. ಮದುವೆಯೂ ಆಗಿ ಹೋಯಿತು...!
ಮದುವೆ ಮುಗಿಸಿ ನಾವೂ ಕೂಡ ಬೆಂಗಳೂರಿಗೆ ಬಂದೆವು...
ದಿನಗಳ ನಂತರ ಶಾರಿ ಮತ್ತೆ ಫೋನ್ ಮಾಡಿದಳು...
"ಪ್ರಕಾಶು..
ಮತ್ತೊಂದು ಸಮಸ್ಯೆ ಕಣೊ...!!"
ನನಗೆ ಆತಂಕವಾಯ್ತು..!!
"ಏನಾಯ್ತೆ ಶಾರಿ...??
ಮಗಳು.... ಅಳಿಯ ಹೊಂದಾಣಿಕೆಯಿಂದ ಇದ್ದಾರೇನೆ.?"
"ಪ್ರಕಾಶು... ಅವರಿಗೇನೋ...
ಅವರಿಬ್ಬರೂ ಚಂದವಾಗಿಯೇ ಇದ್ದಾರೆ...
ವಾರಕ್ಕೊಮ್ಮೆ ಸಿರ್ಸಿಗೆ ಹೋಗಿ ಸೀನೇಮಾ, ಹೊಟೆಲ್ಲು ಅಂತ ಸುತ್ತಾಡುತ್ತಾರಂತೆ.."
"ಮತ್ತೆ ಇನ್ನೇನು ? !!.."
"ಪ್ರಕಾಶು..
ಮತ್ತೇನಿಲ್ಲ..
ಏನು ಆಗಬೇಕಿತ್ತೋ.. ಅದು ಆಗಿಲ್ಲ...!
ಮದುವೆಯಾಗಿ... ಎಂಟು ತಿಂಗಳಾಯಿತು..
ಇನ್ನೂ ಹೊಸ ಸುದ್ಧಿಯಿಲ್ಲ...!! "
"ಈಗೆಲ್ಲ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿಕೊಳ್ಳುತ್ತಾರೆ..
ನೀನು ಎಲ್ಲದರಲ್ಲೂ ಸಂಶಯ ಮಾಡಬೇಡ ಮಾರಾಯ್ತಿ..."
"ಇಲ್ಲಪ್ಪಾ..
ಹಾಗೇನಿಲ್ಲ...
ಇಬ್ಬರನ್ನೂ ಕೇಳೀದೆ..
ಪ್ಲ್ಯಾನಿಂಗ್ ... ಗ್ಲೀನೀಂಗು ಏನೂ ಇಲ್ಲವಂತೆ..."
"ಮತ್ತೆ.. ???.. !!. ! "
"ಇಬ್ಬರೂ ಏನೂ ಮಾತನಾಡುತ್ತಿಲ್ಲ...ಕಣೋ..
ಹುಡುಗನ ಬಳಿ ಈ ವಿಷಯ ಕೇಳೀದರೆ ಗಂಭೀರಾನಾಗಿಬಿಡುತ್ತಾನೆ..."
"ಹುಡುಗಿ. ... ಕೇಳಬೇಕಿತ್ತು..?"
"ಅವಳನ್ನು ಕೇಳೀದರೆ.. ಏನೂ ಉತ್ತರ ಕೊಡುವದಿಲ್ಲ
ಕೋಪ ಮಾಡಿಕೊಳ್ತಾಳೆ...
ನೀನು ಒಮ್ಮೆ ಇಲ್ಲಿಗೆ ಬಾ ಮಾರಾಯಾ..
ಏನಾಗಿದೆ ಅಂತ ತಿಳಿದು ಕೊಳ್ಳಬೇಕು..
ಇದನ್ನೆಲ್ಲಾ ಸರಿ ಮಾಡಬೇಕು...
ಪ್ರಕಾಶು...
ಮದುವೆಯಾಗಿ ಎಂಟು ತಿಂಗಳಾಯ್ತು..!
ಜನರೆಲ್ಲ ಬಾಯಿಗೆ ಬಂದಂತೆ ಮತ್ತೆ ಆಡಿಕೊಳ್ಳುತ್ತಿದ್ದಾರೆ...
ಜಂಬೆ ಗಂಗಕ್ಕ.. ಆಗ ನಿಜ ಹೇಳಿರ ಬಹುದಾ??
ನನಗಂತೂ ಏನೂ ತೋಚುತ್ತಿಲ್ಲ... "
ಇದೇನಪ್ಪಾ ಎಲ್ಲವೂ ಸರಿಹೋಯ್ತು ಅಂದುಕೊಳ್ಳುವಷ್ಟರಲ್ಲಿ..
ಇದೊಳ್ಳೆ ಫಜೀತಿಯಾಯ್ತಲ್ಲ.. !
ಊರಿಗೆ ಹೋಗಬೇಕಾಯಿತಲ್ಲ... !
ಜಂಬೆ ಗಂಗಕ್ಕಳ ಮಾತು ನಿಜವಾಗಿರ ಬಹುದಾ?...
ನಾವು ಮೋಸ ಹೋಗಿಬಿಟ್ಟೆವಾ?...
Sunday, July 18, 2010
Subscribe to:
Post Comments (Atom)
48 comments:
Prakashanna,
Again Suspensaa bhaarii idiri neevu....next episode yaavaaga swamy?
ಶ್ರೀಧರ್ ...
ಇದು ಒಳ್ಳೆ ಫಜೀತಿ ಮಾರಾಯ್ರೆ...
ವಿಷಯವೇ ಹಾಗಿದೆ ಅಂದ ಮೇಲೆ ನಾನೇನು ಮಾಡಲಿಕ್ಕೆ ಸಾಧ್ಯ?
ಮದುವೆಯೇನೋ ಸಂಭ್ರಮ ಸಂತೋಷದಿಂದ ನೆರವೇರಿತು...
ಆದರೆ..
ಪದುಮಳ ಹೊಸ ಸುದ್ಧಿಯಿಲ್ಲ.... !
ಪ್ರತಿಕ್ರಿಯೆಗೆ ಧನ್ಯವಾದಗಳು...
hahaha mattondu samasyenaa... neevu parihaara prakashanna anta hesaru change madikolli
ಮನಸು....
ಗಂಡು ಹೆಣ್ಣಿನ ಸಂಬಂಧ ನಿಶ್ಚಯ ಮಾಡುವ ಸಂದರ್ಭ ಬಹಳ ನಾಜೂಕು..
ಸ್ವಲ್ಪವಾದರೂ ಎಡವಿದರೆ ಸಮಸ್ಯೆ ತಪ್ಪಿದ್ದಲ್ಲ...
" ನಿನ್ನ ತೂಕ ಜಾಸ್ತಿಯಿದೆ..
ನೋಡಿದರೆ ದೊಡ್ಡ ಮನುಷ್ಯನ ಥರ ಕಾಣ್ತೀಯಾ..
ಮದುವೆ ಮಾತುಕತೆಗೆ ನೀನೂ ಇರು.."
ಅಂತ ಹೇಳಿದ್ದಕ್ಕೆ..
ಅಲ್ಲಿ ಭಾಗವಹಿಸಿದ್ದಕ್ಕೆ..
(ಪ್ರೀತಿಯ ಶಾರಿ ಅಕ್ಕ ...ಈ ವಿಷಯ ಆಮೇಲಿರಲಿ)...
ಸಮಸ್ಯೆ ಮೂಲ ಏನೆಂಬುದು ತಿಳಿಯಲೇ ಬೇಕಾಯಿತಲ್ಲ... !
ಅಲ್ಲಿ ಹೋಗಿದ್ದೆ..ನಾಗು ಸಂಗಡ...
ಮುಂದೇನಾಯಿತು ಅಂತಾನಾ...?
ಎರಡು ದಿನ ಮೂರು ದಿನ ಅಷ್ಟೇ...
ನನಗೊಂದು ಹೊಸ ಬಿರುದು ದಯಪಾಲಿಸಿದ್ದಕ್ಕೆ ....
ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರಕಾಶಣ್ಣ,,,
ನಿಮ್ಮ ಕತೆಗಳು,,,ಸಸ್ಪೆನ್ಸೆ ಗಳು..... ಅಬ್ಬ,,, ಸಕತ್ ಮಜಾ ಇರುತ್ತೆ ನಿಮ್ಮ ಬರಹ ಓದಲು,,,, ಅದು... ಇದು,,,,, ಯಾವದನ್ನು ಏನ್ ಅಂತ ತಿಳ್ಕೊಬೇಕೋ......
hmm ಸರಿ,,,, ಮುಂದುವರಿಸಿ......ಕಾಯೋಣ,,,,,,,:-)
ಗುರು
ಗುರು...
"ಉಳಿದ ಮೂರು ಬಿಟ್ಟು ಸಂಬಂಧಗಳೂ...
"ಮದುವೆ ಮಾಣಿಗೆ (ಹುಡುಗ) "ಅದೇ.." ಇಲ್ಲವಂತೆ"
ಅಂದಾಗ ನಮಗೆ ಸಮಾಧಾನವಾದದ್ದು ನಿಜ...
ಒಂದಂತೂ ನಿಜ ಮದುವೆ ಸಂಭ್ರಮದಲ್ಲೂ ಒಂದುರೀತಿಯ ಅಳುಕಿತ್ತು..
"ವೈದ್ಯಕೀಯ ಪರೀಕ್ಷೆ ಮಾಡಿಬಿಡಬೇಕಿತ್ತಾ...?"
"ಎಲ್ಲಾ ಒಳ್ಳೆಯದಾಗಲಿ ಅಂತ ಮಾಡುತ್ತೇವೆ..
ಹಿರಿಯರನ್ನು, ದೇವರನ್ನು ನೆನೆದು..
ಹಾಗಂತ ಎಲ್ಲವೂ ಒಳ್ಳೆಯದಾಗಿ ಬಿಡುತ್ತದೆಯೆ?"
ಏನಾಗುತ್ತದೆ ನೋಡೋಣ..
"ಆ.. ಭಗವಂತನ ಹಣೆಯಲ್ಲಿ ದೇವರು ಬರೆದ ಹಾಗೆ ಆಗ್ತದೆ..."
ಮತ್ತೆ ಟೆನ್ಷನ್.. "ಪದುಮಳ ಹೊಸ ಸುದ್ಧಿಯಿಲ್ಲ....!!
ಧನ್ಯವಾದಗಳು ಪ್ರತಿಕ್ರಿಯೆಗೆ .....
Hi Prakashanna,
punaha suspence.........so bad.
ಪ್ರಕಾಶಣ್ಣ;ಮತ್ತೆ ಸಸ್ಪೆನ್ಸ?ನಿಮ್ದೊಳ್ಳೆ ಸಸ್ಪೆನ್ಸ್ ಸೀರಿಯಲ್ ಆಯ್ತಲ್ಲಾ!ಹೋಗ್ಲಿ ಬಿಡಿ ಭಗವಂತನ ಹಣೆಯಲ್ಲಿ ದೇವರು ಬರೆದ ಹಾಗೆ ಆಗತ್ತೆ!ಆಲ್ವಾ?
ಕ್ರಪಾ....
ಮದುವೆಗೆ ಮೊದಲು ಗಂಡು, ಹೆಣ್ಣು ಇಬ್ಬರೂ ವೈದ್ಯಕೀಯ ಪರೀಕ್ಷೆ ಮಾಡುವ ರೂಢಿಮಾಡಿಕೊಂಡರೆ ಒಳ್ಳೆಯದಲ್ಲವೆ?
ಇದರಲ್ಲಿ ತಪ್ಪೇನು ?
(ನಮ್ಮ ಹುಡುಗಿಗೆ ಈ ಸಮಸ್ಯೆ ಎದುರಾಯಿತು..
ಹಾಗಾಗಿ ನನಗೆ ಜ್ಞಾನೋದಯವಾಯಿತೇನೊ...!)
ನಮ್ಮಲ್ಲಿ ಇದು ರೂಢಿಯಾಗಿ ಬೆಳೆದರೆ ಒಂದು ಆರೋಗ್ಯಕರ ಬೆಳವಣಿಗೆ ಅಲ್ಲವೆ?
ಇದೇ.. ಲೇಖನದಲ್ಲಿ ಮುಗಿಸಲಾಗಲಿಲ್ಲ..
ಬೈದುಕೊಂಡರೂ ಪ್ರತಿಕ್ರಿಯೆ ಹಾಕಿದ್ದಕ್ಕೆ ಥ್ಯಾಂಕ್ಸ್.... !
ಬಹುಷಃ ನೀವು ಕೊಡಗಿನ ಕ್ರಪಾ ಇರಬೇಕು ಅಲ್ಲವಾ?
Hi prakashanna,
Naanu kodaginavlu alla Mangalore navlu.Monne navu nadaguli mahendrana maneyalli meet agiddevu(very brief meeting).Nimma pustaka avnige kottu hogidri naanu thakkondu bandu odida mele nimma fan agi bittiddene.
what next ? ? mundenaaytu . . .
ನಿಮ್ಮ ಸಸ್ಪೆನ್ಸ್ ಕಥೆ ಚೆನ್ನಾಗಿ ಬರುತ್ತಿದೆ ಹೆಗಡೆಯವರೇ, ಅಂತೂ ಹಾಗೇ ಕಾಯಿಸ್ಕೊಂದು ಮುಂದೆ ಕರೆಯುತ್ತೀರಿ ಅಲ್ಲವೇ, ಧನ್ಯವಾದ
Yes, I too have become serious...simply ..because Prakaash is testing our......
Anyway...!!!
ನಾನು ಇಂಗ್ಲೀಷ್ ನಲ್ಲಿ ಯಾಕೆ ಬರೆದಿದ್ದು ಅಂತ ಪ್ರಕಾಶ್ ಗೆ ಗೊತ್ತು....ಹಹಹಹ....ಕಾಯ್ತೀನಿ...ಕಾಯ್ತೀನಿ....
ಪ್ರಕಾಶಣ್ಣ,
ಈ ಸಾರಿ ಅರ್ದದಲ್ಲೇ ನಿಲ್ಲಿಸಿದ ಕಥೆ ಓದಿ ತುಂಬಾ ಸಿಟ್ಟು ಬಂತು....... ಎದುರುಗಡೆ ನೀವು ಇಲ್ಲದ್ದು ಒಳ್ಳೆಯದಾಯಿತು.... ಹ್ಹಾ ಹ್ಹಾ..... ಕಥೇನ ಎಳೆದು , ಜಗಿದು ಹೇಳೋದರಲ್ಲಿ ನೀವು ನಿಷ್ಣಾತರು ನೀವು...... ತುಂಬಾ ಚೆನ್ನಾಗಿ ಬರೆದಿದ್ದೀರಾ.....
ನನ್ನ ಬ್ಲಾಗ್ ಗೆ ಬಾರೋ ಪ್ರೋಗ್ರಾಮ್ ಯಾವಾಗ ಇದೆ.....
ಕ್ರಪಾ...
ತುಂಬಾ ಖುಷಿಯಾಯಿತು..
ನೀವು "ಹೆಸರೇ.. ಬೇಡ" ಪುಸ್ತಕ ಇಷ್ಟ ಪಟ್ಟಿದ್ದು...
ಮಹೇಂದ್ರ ಮತ್ತು ನಮ್ಮ ಗೆಳೆತನ ಬಹಳ ವರ್ಷಗಳ ಹಿಂದಿನದು...
ಮಹೇಂದ್ರ ಆಗ ಬಹಳ ಸಣ್ಣವ..
ಈಜಿನಲ್ಲಿ ಬಹಳ ಪರಿಣತಿ ಇದೆ..
ನನಗೆ ಈಜು ಕಲಿಸಿದ್ದು "ನಾಡಗುಳಿ" ಹುಡುಗರು...
ನಾಡಗುಳಿ ಹೊಳೆಯಲ್ಲಿ ಈಜು ಕಲಿತದ್ದು...
ಆ ತುಂಟ ಹುಡುಗರ ಸಹವಾಸ..
ಬಹಳ ಮಧುರ ಕ್ಷಣಗಳು ನನ್ನ ಜೀವನದಲ್ಲಿ...
ನನ್ನ ಚಿಕ್ಕಮ್ಮನ ತವರೂರು.. "ನಾಡಗುಳಿ.."
ನಾಡಗುಳಿ ನೆನಪಾದರೆ ನನಗೆ ನೆನಪಾಗುವದು..
ಆ ಹೊಳೆ..!
ಸ್ವಾತಂತ್ರ್ಯ ಹೋರಾಟಗಾರ "ಅಜ್ಜ"..!
ಅವನ ಕಥೆಗಳು.. ಸಾಹಸಗಳು...!
ಆ ಚಂದದ.. ಅಜ್ಜಿ...!
ಅವರ ಹಾಡುಗಳು...!
ಈ ಮಕ್ಕಳ ತುಂಟಾಟಗಳು...!
ವಾಹ್.. !
ಆ ಬಾಲ್ಯದ ನೆನಪುಗಳನ್ನು ಹಸಿರಾಗಿಸಿದ್ದಕ್ಕೆ ಧನ್ಯವಾದಗಳು...
ನಿಮ್ಮ ಪರಿಚಯವಾದದ್ದು ತುಂಬಾ ಸಂತೋಷವಾಯಿತು...
ಬರುತ್ತಾ ಇರಿ...
ಇದು ಒಳ್ಳೇ ಕಥೆ ಆಯ್ತಲ್ಲ ಮಾರಾಯ್ರೇ.... ಮೊದಲನೇ ಭಾಗ ಸಸ್ಪೆನ್ಸ್ ಅಂದುಕೊಂಡ್ರೆ ಎರಡನೇದೂ ಹಾಗೇ ಮಾಡಿಬಿಡೋದಾ...??
ನಾಗರಾಜ್..ಅನಿಲ ಬೇಡಗೆ...( )
ಏನು ಮಾಡಲಿ.. ?
ಈ ಘಟನೆಯೆ ಹಾಗಿದೆ...
ಪದುಮಳು... ಹೊಸ ಸುದ್ಧಿ ಮಾಡಲಿಲ್ಲ.. !
ಪ್ರಯತ್ನ ಪಟ್ಟು ಮಾಡಿದ ಮದುವೆ ಫಲ ನೀಡಲಿಲ್ಲ...
ಮುಂದೆ ಏನು ಮಾಡಬೇಕು?
ಮದುವೆಯಾದ ಮೇಲೆ ಇನ್ನೇನು ಮಾಡಲು ಸಾಧ್ಯ ?
ಸಾಧ್ಯತೆಗಳ ಲೆಕ್ಕಾಚಾರದಲ್ಲಿ ಮುಳುಗಿ ಹೋಗಿದ್ದೆ.... !
ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರಕಾಶಣ್ಣ...
ಕಥೆ ಚೆನ್ನಾಗಿತ್ತು.
ವಿಶೇಷವಾಗಿ
"ಪ್ರಕಾಶು..
ಮತ್ತೇನಿಲ್ಲ..
ಏನು ಆಗಬೇಕಿತ್ತೋ.. ಅದು ಆಗಿಲ್ಲ...!
ಮದುವೆಯಾಗಿ... ಎಂಟು ತಿಂಗಳಾಯಿತು..
ಇನ್ನೂ ಹೊಸ ಸುದ್ಧಿಯಿಲ್ಲ..." ಎಲ್ಲ ಕಡೆ ಎಲ್ಲ ಜನ ಒಳಗೊಳಗೇ ಕೇಳೋ ಪ್ರಶ್ನೆ ಇದೆ ಅಲ್ವ..?
ನಿಮ್ಮವ,
ರಾಘು.
baree suspense lli idta idde. bega next part bari..
ಕೆಲ ವರ್ಷದ ಹಿಂದೆ ನನ್ನ ಹತ್ತಿರದ ಸಂಭಂಧ (ವಧುವಿನ ) ಬಗ್ಗೆ ಕೆಟ್ಟದಾಗಿ ಬರೆದ ಪತ್ರ ವರನ ಕಡೆಯವರಿಗೆ ಕೈ ಸೇರಿತ್ತು. "ಊರು ಅಂದಮೇಲೆ ಹೊಲಗೇರಿ ಇದ್ದೇಇರ್ತು .ಕೆಲ ಜನ ಕಾಯ್ತಾ ಇರ್ತಹೊಸ ಸಂಭಂಧಕ್ಕೆ ಹುಳಿ ಹಿಂಡಲ್ಲೆ." ಎನ್ನುತ್ತಾ ವರನ ಕಡೆಯವರು ಪತ್ರ ಕದೆಗಣಿಸಿದರು. ವಿವಾಹ ಸಾಂಗವಾಗಿ ನೆರವೇರಿತು , ಈಗ ತುಂಬು ಸಂಸಾರ ಅವರದು.
hha hha hhaa.....
matte suspensu...
ಪ್ರಕಾಶಬಾವಾ ಹಳೆ ಘಟನೆನಾ ಹೊಸದಾಗಿ ನೆನಪು ಮಾಡಿದಾಗ ಯಂತಾ ಖುಷಿಯಾತು.
ನಿಂಗೆ ನೆನಪಿದ್ದಿಕ್ಕು ಮಾವಿನ ಹಣ್ಣು ಹೆಕ್ಕಲ್ಲ ಹೋಗಿದ್ದು, ಇಡೀ ದೆವೀಸರ ಊರ ಒಂದು
ನಾದ್ಗುಳಿ & ಕಂ ಒಂದು. ಕಥೆ ಹೇಳಿರೆ ಬ್ಲಾಗು ಬ್ಲೋಕಾಗೂಗ್ತು
ಸ್ವಾಮಿ....... ಏನಿದು.. ಹೀಗೆ ಅರ್ಧಕ್ಕೆ ನಿಲ್ಲಿಸಿದರೆ ಚೆನ್ನಾಗಿರಲ್ಲ.. ಬೇಗ ಬೇಗ ಮುಗಿಸಿ.. ಕುತೂಹಲಕಾರಿ ಯಾಗಿದೆ ನಿಮ್ಮ ಬರಹ.. ಮುಂದಿನ ಭಾಗ ಬೇಗನೆ ಕೊಡಿ ಇಲ್ಲಾಂದ್ರೆ ಸಿಮೆಂಟು ಮತ್ತು ಇಟ್ಟಿಗೆ ರೇಟ್ ಗಗನಕ್ಕೆರಿಸಿ ನಿಮಗೆ ತ್ರಾಸ ಕೊಡುವೆ :)
ಮತ್ತೂ ಮತ್ತೂ ಸಸ್ಪೆನ್ಸ್.. ಬರೀ ಕಾಯಿಸುವ ಕೆಲಸ ಪ್ರಕಾಶಣ್ಣಂದು.
ಚೆಂದವಾಗಿ ಮೂಡಿದೆ! ಮುಂದಿನ ಕಂತಿಗೆ ಕಾಯುತ್ತಿರುವೆವು!
ವಿ.ಆರ್. ಭಟ್ಟರೆ...
ಇದೇ ಲೇಖನದಲ್ಲಿ ಮುಗಿಸಲು ಹೊರಟಿದ್ದರೆ ಬಹಳ ಉದ್ದವಾಗುತ್ತಿತ್ತು..
ಹಾಗಾಗಿ ಕೊನೆಯ ಕಂತು ಬಾಕಿ ಉಳಿಯಿತು...
ನಮ್ಮ ನಿರ್ಧಾರಗಳ, ನಿರ್ಣಯಗಳ ಫಲಗಳನ್ನು ಮುಂದೆ ಕಾಲವೇ ಉತ್ತರ ಕೊಡ ಬೇಕಾಗುತ್ತದೆ..
ಒಳ್ಳೆಯದಾಗಲಿ ಅಂತ ನಾವು ಆ ಸಮಯ, ಸಂದರ್ಭಗಳಲ್ಲಿ ನಿರ್ಣಯಿಸಿರುತ್ತೇವೆ...
ಬಹಳ ತಲೆ ಕೆಡಿಸಿಕೊಂಡು , ಹಿಂದುಮುಂದಿನ ವಿಚಾರ ಮಾಡಿಯೇ ನಿರ್ಣಯ ತೆಗೆದು ಕೊಂಡಿರುತ್ತೇವೆ..
ಒಳ್ಳೆಯದಾಗುವ ಭರವಸೆಯೂ ಇದ್ದಿರುತ್ತದೆ...
ಆದರೆ ಯಾವುದೂ ನಮ್ಮ ಕೈಯಲ್ಲಿ ಇಲ್ಲವಲ್ಲ...!!
ಏನೂ ಬೇಕಾದರೂ ಘಟಿಸ ಬಹುದು...
ಇದರಿಂದಾಗಿಯೆ ಈ ನಮ್ಮ ಬದುಕಿನಲ್ಲಿ ಸ್ವಾರಸ್ಯ ಇದೆ... ಅಲ್ಲವೆ?
ಯವಾಗಲೂ ನಾವೆಣಿಸಿದಂತೆ ಆಗಬಾರದು..
ಏನಂತೀರಾ?
ಪ್ರೋತ್ಸಾಹದ ಪ್ರತಿಕ್ರಿಯೆಗೆ ಧನ್ಯವಾದಗಳು..
ಮುಂದೇನಾಯ್ತು.....
ಕುತೂಹಲ .........
ಪ್ರಕಾಶಣ್ಣ,
mathade suspense ......
NOT FAIR :(
ಪ್ರಕಾಶಣ್ಣ,
mathade suspense ......
NOT FAIR :(
ha ha ha very interesting ....& its all happening in our social life
Prakashanna, Matte suspense? Waiting for the next episode.....
ಪ್ರೀತಿಯ ಪ್ರಕಾಶ್ ಬಾವಂಗೆ
.ಅಂದು ಮೇ ೨೬ ನನ್ನ ಮದುವೆಯ ಹಿಂದಿನ ದಿನ. ಅಂದ್ರೆ ಆ ದಿನ ನಮ್ಮ ಮನೆಯಲ್ಲಿ ನಾಂದಿ ಕಾರ್ಯಕ್ರಮ.
ನನ್ನ ಅಮ್ಮನ ತಂಗಿಯರು ಹಾಗು ತಮ್ಮಂದಿರು ಅಪ್ಪನ ತಂಗಿಯರು ಮತ್ತವರ ಯಜಮಾನ್ರು ಎಲ್ಲರು ಇದ್ದರು.
ಕಾರ್ಯಕ್ರಮ ಬಹಳ ಸಡಗರದಿಂದಲೇ ನಡೆಯಿತು. ಮಧ್ಯಾನ್ಹ ೨.೩೦ಕ್ಕೆ ಊಟವೂ ಮುಗಿಯಿತು.ಆಗ ನನಗು
ಸ್ವಲ್ಪ ಬಿಡುವಾಯಿಟು. ಬಂದವರೊಂದಿಗೆ ತಮಾಷೆ ಮಾಡುತ್ತಾ ಟೀ ನಿರಿಕ್ಷೆಯಲ್ಲಿದ್ದೆವು. ದೆವೀಸರ್ ಮಾವ ಮಾತ್ರ
ಟೆನ್ಷನ್ನಲ್ಲಿದ್ರು. ನಾನು ಪೆರಟಿ ಪೆರಟಿ ಕಾರಣ ಕೇಳಿದೆ, ಹಾಗೆ ಅವರ ಉತ್ತರದಿಂದ ಕಂಗಾಲಾದೆ. ಆದ್ರೆ ನಾನು
ತಿಳಿದದ್ದೇ ತಪ್ಪಾಗಿತ್ತು. ಪಾಪ ಮಾವನಿಗೆನ್ ಗೊತ್ತು "ಹೀಗೂ ಉಂಟೇ" ಎಂದು.ಅವರ ಒತ್ತಡಕ್ಕೆ ಕಾರಣ ಏನು
ಗೊತ್ತ? ಮರುದಿನ ನನ್ನ ಮದುವೆ, ಆ ಕಾರ್ಯಕ್ರಮಕ್ಕೆ ಬರಲೇ ಬೇಕು ಆದ್ರೆ ಮನೆ ಕಾಯುವವರು ಯಾರು?
ಈ ದಿನ ಒಂದು ಹೆನ್ನಾಳಿಗೆ ಹೇಳಿದ್ದೆ ಅವಳು ಬಂದಳು ಸರಿಯಾಯ್ತು, ನಾಳೆನು ಬಾ ಅಂದ್ರೆ ಬೇಜಾರ್
ಮಾಡ್ಕೊಲ್ಬಹುದು ಅಂತ, ಆಗ ನನಗೊಂದು ಸತ್ಯ ತಿಳಿಯಿತು.ಮನೆ ಹೆಂಡ್ತಿ ಇಲ್ಲಾಂದ್ರೆ ಎಷ್ಟು ಕಷ್ಟ ಅಂತ.
ಇಂತಿ ನಿನ್ನ
ಮಹೇಂದ್ರ ನಾದ್ಗುಳಿ
ಜಲನಯನ... ಆಜಾದ್...
ನಿಜ ಹೇಳ್ತಾ ಇದ್ದಿನಿ...
ಈಗ ಈ ಘಟನೆ ಹೇಳಿದ್ದೆ ಸರಿ ಇದೆ...
ಯಾಕೆ ಅಂತ ಕೊನೆಯ ಕಂತು ಓದಿದಾಗ ಗೊತ್ತಾಗುತ್ತದೆ..
ನಾವು ಎಷ್ಟೇ.. ವಿಚಾರಮಾಡಿ..
ಬುದ್ಧಿವಂತಿಕೆಯಿಂದ ನಿರ್ಣಯ ತೆಗೆದು ಕೊಂಡರೂ..
ಅದು ವಿಫಲವಾಗಿ ಬಿಡಬಹುದು...
ಕಾಲವೇ ನಮ್ಮ ನಿರ್ಣಯಗಳಿಗೆ ಉತ್ತರ ನೀಡುತ್ತದೆ..
ಇಷ್ಟನ್ನು ಮಾತ್ರ ಹೇಳಬಲ್ಲೆ...
ನನಗೆ ಗೊತ್ತು ನಿಮಗೆಲ್ಲ ಕೋಪ ಬಂದಿದೆ ಅಂತ...
ಎದುರಿಗೆ ಸಿಕ್ಕಿದ್ದರೆ ಕುತ್ತಿಗೆ ಹಿಚುಕುತ್ತಿದ್ದೆ ಅಂತ ಇನ್ನೊಬ್ಬ ಸ್ನೇಹಿತ ಹೇಳುತ್ತಿದ್ದ...
ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರ ಋಣಿ...
ನಿಮ್ಮ ಪ್ರತಿಕ್ರಿಯೆಗಳೆ ನನಗೆ ಇನ್ನಷ್ಟು ಬರೆಯಲು "ಟಾನಿಕ್"
ಧನ್ಯವಾದಗಳು...
ದಿನಕರ್...
ನಾನು ಈ ಭಾಗದಲ್ಲಿ ಯಾಕೆ ಮುಗಿಸಲಿಲ್ಲ ಅನ್ನುವದು ಮುಂದಿನ ಕಂತನ್ನು ಓದಿದ ಮೇಲೆ ಗೊತ್ತಾಗುತ್ತದೆ..
ಎರಡು,ಮೂರುದಿನ ಕಾಯಿರಿ..ಪ್ಲೀಸ್..
ಎದುರಿಗೆ ಸಿಕ್ಕಿದ್ದರೆ ..!!
ಹ್ಹಾ..ಹ್ಹಾ.. !!!
ನನ್ನ ಇನ್ನೊಬ್ಬ ಮಿತ್ರ "ಕುತ್ತಿಗೆ ಹಿಚುಕುತ್ತಿದ್ದೆ" ಅಂತಿದ್ದ..
ನಿಮ್ಮ ಪ್ರ್ಇತಿಯ ಪ್ರತಿಕ್ರಿಯೆಗಳು ನನಗೆ ಬರೆಯಲು ಸ್ಪೂರ್ತಿ...
ಕೆಲಸದ ಒತ್ತಡ.. ಬಹಳವಿದೆ..
ಹಾಗಾಗಿ ನಿಮ್ಮೆಲ್ಲರ ಬ್ಲಾಗಿಗೆ ಸಕಾಲದಲ್ಲಿ ಬರಲಾಗುತ್ತಿಲ್ಲ..
ಬೇಸರ ಪಡದಿರಿ.. ಖಂಡಿತ ಬರುತ್ತೇನೆ..
ನಿಮ್ಮ ಪ್ರತಿಕ್ರಿಯೆಗಳು ನನಗೆ ಬರೆಯಲು ಸ್ಪೂರ್ತಿ...
ಧನ್ಯವಾದಗಳು...
ಗುರುಪ್ರಸಾದ್....
ನಮ್ಮ ನಿರ್ಣಯಗಳ ಫಲ ನಮ್ಮ ಹತ್ತಿರ ಇರುವದಿಲ್ಲವಲ್ಲ...
ಒಳ್ಳೆಯದಾಗಲಿ ಅಂತ ಮದುವೆ ಮಾಡಿಯಾಯಿತು...
"ಪದುಮಳ ಹೊಸ ಸುದ್ಧಿಯಿಲ್ಲ"
ಯಾಕೆಂದು ಕೇಳಿದರೆ ಉತ್ತರವಿಲ್ಲ.. !!
ಮುಂದೇನು??
ಮುಂದೇನು ಮಾಡ ಬಹುದು.. ಈ ಸಮಸ್ಯೆಗೆ ಪರಿಹಾರವೇನು?
ನನಗೆ ಸುಲಭದರಲ್ಲಿ ನೆನಪಾದದ್ದು ಗೆಳೆಯ "ನಾಗು"
ನಾಗುವನ್ನು ಕರೆದು ಕೊಂಡು ಹೋದರೆ ಪರಿಹಾರ ಸಾಧ್ಯವಾ?
ಪ್ರತಿಕ್ರಿಯೆಗೆ ಧನ್ಯವಾದಗಳು...
ರಘು....
ಇದು ನಿಜ...
ಮೊದಲು ಮದುವೆ.. ಮದುವೆ ಅಂತಾರೆ...
ಮದುವೆಯಾದ ಮೇಲೆ ಮಗು... ಮಗು ಅಂತಾರೆ...
ಸ್ವಲ್ಪ ತಡವಾದರೆ ಬಾಯಿಗೆ ಬಂದದ್ದು ಮಾತನಾಡಲು ತೊಡಗುತ್ತಾರೆ..
ಈ ಜನರ ಬಾಯಿಗೇನು ಮಾಡುವದು..?
ಇಲ್ಲಿ ಕೇಸು ಹಾಗಿಲ್ಲ...
ಮೊದಲೇ ಸಂಶಯದಲ್ಲಿ ಮದುವೆಯಾಗಿದೆ..
ಎಂಟುತಿಂಗಳಾದರೂ..
ಪದುಮಳ ಹೊಸ ಸುದ್ಧಿಯಿಲ್ಲ...
ಅಂದರೆ...!! ??
ಸಂಶಯದ ಮನಗಳಿಗೆ ಮತ್ತಷ್ಟು ಆಹಾರ ಸಿಕ್ಕಿಬಿಟ್ಟಿತಲ್ಲವೆ?
ಪ್ರೋತ್ಸಾಹಕ್ಕೆ ವಂದನೆಗಳು ರಘು....
ಪರವಾಗಿಲ್ಲರೀ ನೀವು, ಸಸ್ಪೆನ್ಸ್ ಉಳಿಯುವ೦ತೆ ಒ೦ದು ಕಡೆ ತ೦ದು ನಿಲ್ಲಿಸ್ತೀರಿ. ಮದುವೆ ಅ೦ತೂ ಆಯ್ತು, ಈಗ ಮಕ್ಳಾಗುತ್ತೋ ಇಲ್ಲವೋ ಎ೦ಬ ಚಿಂತೆ. ಬೇಗ ಹೇಳಿ ಬಿಡಿ ಮಾರಾಯ್ರೇ!!!
ಅಲ್ಲ ಪ್ರಕಾಶಣ್ಣ.........
ಏನೋ ಮಾಡುವೆ ಸಂಶಯದಲ್ಲೇ ಮುಗಿದು ಅಂತೂ ಸುಖಾಂತ್ಯ ಆಯ್ತು ಅಂದುಕೊಂಡರೆ ಇದೇನಿದು ಮತ್ತೊಂದು ಸಮಸ್ಯೆ? ಯಾಕೋ ಜೇಡರ ಬಲೆ ತರ ಸುತ್ತುತ್ತಾ ಇದೆ ಅಲ್ವಾ?
ಅವರ ಪ್ರಯತ್ನ ಕಡಿಮೆಯಾಯಿತಾ ಅಥವಾ ಸ್ವ ಇಚ್ಛೆಯಿಂದ ಕಾರ್ಯಕ್ರಮ ಮುಂದೂಡಲಾಗಿದೆಯಾ?
ಆದಷ್ಟು ಬೇಗ ಮು0ದೆನಾಯ್ತು ಅಂತ ಹೇಳಿ.........
ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆಯಲ್ಲಿದ್ದ ಕಾರಣ ಬ್ಲಾಗಿಗೆ ಭೇಟಿ ಕೊಡಲು ಆಗಿರಲಿಲ್ಲ. ಈಗಷ್ಟೇ ಎರೆಡೂ ಭಾಗವನ್ನು ಓದಿದೆ. ತಡವಾಗಿ ಬಂದಿದ್ದಕ್ಕೆ ಕ್ಷಮೆಯಿರಲಿ.
Ellakintha preeti mukya, adiladidare baduku shunya...
Nimma kathe and comments uttama...
ರಂಜನಾ...
ನಮ್ಮ ಹಿರಿಯರು ಅದಕ್ಕೆ ಹೇಳುವದು..
"ಹೆಣ್ಣು ಹೆತ್ತವರಾಗಿ ಅರ್ಥ ಮಾಡಿಕೊಳ್ಳಿ" ಅಂತ..
ಮದುವೆಯಾದ ಮೇಲೆ ಮಗಳು ಚೆನ್ನಾಗಿದ್ದರೆ ಅವರಷ್ಟು ಸಂಭ್ರಮ ಪಡುವವರು ಬಹುಷಃ ಜಗತ್ತಿನಲ್ಲಿ ಯಾರೂ ಇರಲಿಕ್ಕಿಲ್ಲ..
ಮಗಳು ಸಂಕಟ ಪಡುತ್ತಿದ್ದರೆ...?
ಆ ಅನುಭವ ಯಾರಿಗೂ ಬೇಡ...
ಪ್ರತಿಕ್ರಿಯೆಗೆ ಧನ್ಯವಾದಗಳು...
ayyo... munde enaaytu prakashanna ???
ಪ್ರಕಾಶಣ್ಣ
ಸಸ್ಪೆನ್ಸ ಇಡೋದ್ರಲ್ಲಿ ನೀವು ಎತ್ತಿದ ಕೈ
ಇನ್ನೇನೂ ಕಥೆ ಕೊನೆಯಾಯ್ತು ಅನ್ನೋದ್ರಲ್ಲಿ ಇನ್ನೊಂದು ತಿರುವು
ಮುಂದಿನ ಭಾಗಕ್ಕೆ ಕಾಯ್ತಾ ಇರ್ತಿವಿ
anna mathe ardhadhalle kai bidabedi bega bariri
ಜಗದೀಶ...
ಇದು ನಿಜ ..
ಒಂದು ಗಂಡು ಹೆಣ್ಣಿನ ಸಂಬಂಧವಾಗುತ್ತಿದೆ ಅಂದರೆ ಹೊಟ್ಟೆಕಿಚ್ಚಿನ ಜನ ಇಲ್ಲ ಸಲ್ಲದ ಮಾತುಗಳನ್ನಾಡಿ ಸಂಬಂಧ ಮುರಿಯುವದಕ್ಕೆ ತಯಾರಾಗಿರುತ್ತಾರೆ...
ಎಲ್ಲ ಕಡೆ ಇಂಥವರು ಇರುತ್ತಾರೆ...
ಕೆಲವು ಬಾರಿ ಸತ್ಯವಾಗುವದೂ ಉಂಟು..
ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುವಂಥಹ ಸಂದರ್ಭ... ಇದಾಗಿರುತ್ತದೆ...
ವಿವೇಕದಿಂದ ಕೂಲಂಕುಶವಾಗಿ ವಿಚಾರಿಸಿ ಮುಂದುವರೆಯಬೇಕಾಗುತ್ತದೆ...
ಹೀಗೆ ಮಾಡಿದ ಮೇಲೂ ನಮ್ಮ ನಿರ್ಧಾರ ತಪ್ಪಾದರೆ...?
"ತಿಂಗಳೆಂಟಾದರೂ.. ಪದುಮಳ ಹೊಸ ಸುದ್ದಿಯಿಲ್ಲ...!"
ಮತ್ತೆ ಆತಂಕ.. ಟೆನ್ಷನ್ ಶುರುವಾದದ್ದು ನಿಜ...
ನಿಮ್ಮ ಪ್ರೋತ್ಸಾಹಕ್ಕೆ..
ಪ್ರತಿಕ್ರಿಯೆಗೆ ಧನ್ಯವಾದಗಳು...
ಕಥೆ ಮುಗಿದು ಎಲ್ರೂ ಸುಖವಾಗಿರ್ತಾರೆ ಅಂದ್ಕೊಂಡ್ರೆ.. ಮತ್ತೆ ಸಸ್ಪೆನ್ಸಿಗೆ ತಂದಿಟ್ಟಿದೀರಲ್ಲ.. ಚೆನ್ನಾಗಿ ಬಂದಿದೆ ಎರಡು ಕಂತೂ.. ಮುಂದಿನದಕ್ಕಾಗಿ ಕಾಯ್ತಾ ಇದೀನಿ
ನಿಜ ಒಂದು ಸಂಶಯದಲ್ಲೇ ಮದುವೆ ಮಾಡಿದಾಗ ಇಂತಹ ಆತಂಕ ಇದ್ದೆ ಇರುತ್ತದೆ... ಒಳ್ಳೆ suspence ಇಟ್ಟು ಬರದ್ರಿ...ಮುಂದಿನ ಭಾಗ ಬೇಗ ಬರಲಿ.. super story ಪ್ರಕಾಶಣ್ಣ...
Post a Comment