Wednesday, July 14, 2010

ಆ... ಭಗವಂತನ ಹಣೆಯಲ್ಲಿ ...ದೇವರು ಬರೆದ ಹಾಗೆ ಆಗ್ತದೆ...!!

part 1


ಈ ನಡುವೆ ಊರಿಗೆ ಹೋದಾಗಲೆಲ್ಲ ಶಾರಿಯ ಮನೆಗೆ ಹೋಗುವದು ರೂಢಿ..

ಕಳೆದ ವರ್ಷವೂ ಹೋಗಿದ್ದೆ..


"ನೋಡು ಪ್ರಕಾಶು.. ನಾಳೆ ನನ್ನ ಮಗಳಿಗೆ "ಗಂಡು" ನೋಡಲಿಕ್ಕೆ ಬರ್ತಾರೆ..
ನೀನೂ ಇದ್ದು ಬಿಡು ..
ನಿನ್ನ ಈ ಭಾರಿ ಗಾತ್ರದ.. ಶರೀರತೂಕ ಇದ್ದರೆ ...
ನಮಗೂ ಮಾತುಕತೆಗೆ ಅನುಕೂಲ.. ಮಾರಾಯಾ   !!
ದೊಡ್ಡ ಮನುಷ್ಯ ಬಂದಿದ್ದಾರೆ ಅಂದುಕೊಳ್ಳುತ್ತಾರೆ..
ಇದ್ದು ಬಿಡು ಪ್ರಕಾಶು.."


ಅನ್ನುತ್ತ ಗಣಪ್ತಿ ಭಾವನ ಕಡೆ ನೋಡಿದಳು..


ಗಣಪ್ತಿ ಭಾವ ಬಾಯಿತುಂಬಾ ಎಲೆ ಅಡಿಕೆ ಹಾಕಿಕೊಂಡು.."ನೀನು ಇದ್ದು ಬಿಡು" ಎನ್ನುವ ಸನ್ನೆ ಮಾಡಿದರು..


ಶಾರಿಯ ಮಾತಿಗೆ ಇಲ್ಲವೆನ್ನಲು ನನ್ನ ಬಳಿ ಸಾಧ್ಯವೇ ಇಲ್ಲ.


ಸರಿ..


ಮರುದಿನ ನಾನೂ ಸಂಭ್ರಮದಿಂದ .., ಕುತೂಹಲದಿಂದ ತಯಾರಾದೆ..
ಸುಮಾರು ಹತ್ತುಗಂಟೆಯ ವೇಳೆಗೆ ಗಂಡಿನವರು ಬಂದರು...


ಹುಡುಗ ಬಹಳ ಚಂದವಾಗಿದ್ದ...
ಹಣೆಗೆ ಕುಂಕುಮ.. ಬಿಳಿಲುಂಗಿ..ಬಿಳಿ ಶರಟು..
ತುಂಬ ಲಕ್ಷಣವಾಗಿದ್ದ..


"ಈ ಹುಡುಗ ನಮ್ಮ ಹುಡುಗಿಯನ್ನು ಒಪ್ಪ ಬಹುದಾ...?"


ನಮ್ಮ ಶಾರಿಯ ಹುಡುಗಿ ಸ್ವಲ್ಪ ಕಪ್ಪು..
ನಮ್ಮ ಕಣ್ಣಿಗೆ ನಮ್ಮ ಮಕ್ಕಳು ಚಂದವಾಗಿ ಕಂಡರೂ..
ಲೋಕನೀತಿಯ ಸತ್ಯದಲ್ಲಿ.. ಹುಡುಗನಿಗೆ ಸರಿಯಾದ ಜೋಡಿಯಲ್ಲ ಎಂದು ಎನಿಸಿತು....


ಆಶ್ಚರ್ಯವೆಂದರೆ..
ಹುಡುಗನ ಕಡೆಯವರು ತಮ್ಮ ಒಪ್ಪಿಗೆಯನ್ನು ಸೂಚಿಸಿ..
ಅವರೂ ಸಂತೋಷದಿಂದ ಹೊರಟು ಬಿಟ್ಟರು..!


ಶಾರಿ.. ಗಣಪ್ತಿಭಾವ.. ನಮಗೆಲ್ಲ ಬಹಳ ಸಂತೋಷವಾಯಿತು...!


"ಇದು ಪುಟ್ಟಿಯ ಯೋಗ ಶಾರಿ..
ಬಹಳ ಸುಂದರ.. ಹುಡುಗ..
ಸುಸಂಕೃತನ ಹಾಗೆ ಕಾಣುತ್ತಾನೆ.... ಬಲು ಬೇಗ  ವಾಲಗ ಊದಿಸಿ  ಬಿಡು...
ಮದುವೆ ಮುಗಿಸಿ ಬೆಂಗಳೂರಿಗೆ ಹೋಗಿಬಿಡುತ್ತೇನೆ...."
ಎಲ್ಲರಿಗೂ  ಸಂತೋಷವಾಗಿತ್ತು...
ನಮ್ಮ ಕಣ್ಣೆದುರಿಗೆ ಬೆಳೆದ ಹುಡುಗಿಯ ಮದುವೆ...!!
ಒಳ್ಳೆಯ ಸಂಬಂಧ  ಕೂಡಿ ಬಂದಿದೆ  !!


ನಾನೂ ಸಹ ಖುಷಿಯಿಂದ ಮನೆಗೆ ಬಂದೆ..


ಒಂದೆರಡುದಿನಗಳಲ್ಲಿ ನಿಶ್ಚಿತಾರ್ಥವೂ ಆಗಿ ಹೋಯಿತು...!
ಮುಂದಿನವಾರವೇ ಮದುವೆ... !


ಒಂದು ದಿನ ಶಾರಿಯ ಫೋನ್.. !


"ಪ್ರಕಾಶು ಒಂದು ದೊಡ್ಡ ಸಮಸ್ಯೆ ಎದುರಾಗಿದೆ..!
ನೀನೇ ಬಂದು ನಿವಾರಿಸ ಬೇಕು..."


"ಏನಾಯ್ತು,,??"


"ಇವತ್ತು ಬೆಳಗಿನಿಂದ ಒಂದೇ ಸವನೆ ಫೋನ್ ಬರ್ತಿದೆ...
ಮದುವೆ ಗಂಡು "ಗಂಡಸೇ.. ಅಲ್ಲ..." .
ನಿಮ್ಮ ಮಗಳ ಜೀವನ ಹಾಳು ಮಾಡ ಬೇಡಿ... ಅಂತ..
ನನಗಂತೂ ತಲೆ ಕೆಟ್ಟು ಹೋಗಿದೆ.. ಮದುವೆಯ ಆಮಂತ್ರಣ ಪತ್ರಿಕೆ ಕೂಡ ಹಂಚುತ್ತಿದ್ದೇವೆ..
ಏನು ಮಾಡೋಣ ಮಾರಾಯಾ...?"


ನನಗೆ  ಆಶ್ಚರ್ಯವಾಯಿತು...ಆತಂಕವೂ  ಆಯಿತು  !


"ಯಾರು ಫೋನ್ ಮಾಡ್ತಿರೋದು...? ಪರಿಚಯದವರಾ ?"


"ಹೌದು ಪ್ರಕಾಶು..!
ಜಂಬೆಮನೆ ಗಂಗಕ್ಕ... ಫೋನು ಮಾಡಿದ್ದು..."


"ನನಗೆ ಅವಳ ಫೋನ್ ನಂಬರು ಕೊಡು.."
ನಾನು ಅವಳ ಫೋನ್ ನಂಬರ್ ತೆಗೆದುಕೊಂಡೆ..


ನನಗೆ ಜಂಬೆ ಮನೆ ಗಂಗಕ್ಕ ಪರಿಚಯ ಇದೆ..
ಸ್ವಲ್ಪ ಮಾತು ಜಾಸ್ತಿ... ಗಯ್ಯಾಳಿ..


ಗಂಗಕ್ಕನಿಗೆ ಫೋನ್ ಮಾಡಿದೆ..


" ಅಯ್ಯೋ.. ಪ್ರಕಾಶು... !
ನಾನು ಯಾಕೆ ಸುಳ್ಳು ಹೇಳಲಿ..? !!...
ಆ ಹುಡುಗನನ್ನು ನಾನು ಎತ್ತಿ ಆಡಿಸಿ ಬೆಳಸಿದ್ದೇನೆ...
ನಾನು ಕಣ್ಣಾರೆ ನೋಡಿದ್ದೇನೆ....!.
ಹುಡುಗನಿಗೆ  " ಅದೇ ",,,. ಇಲ್ಲ..  ಮಾರಾಯಾ..!!...
ನಿಮ್ಮ ಹುಡುಗಿಯ ಬಾಳು ಹಾಳು ಮಾಡಬೇಡಿ..."


ಈಗ ನನಗೂ... ತಲೆ ಕೆಟ್ಟು ಹೋಯಿತು....
ಮದುವೆ ಇನ್ನು ಒಂದುವಾರ ಇದೆ... ಈಗ ಈ ಸಮಸ್ಯೆ.. !
ಹಗುರವಾಗಿ ತೆಗೆದುಕೊಳ್ಳವ ಹಾಗೆಯೇ ಇಲ್ಲ....

ಇದು.. ಹುಡುಗಿಯ  ಬದುಕಿನ  ಪ್ರಶ್ನೆ.....!!

ನನ್ನ ಚಿಕ್ಕಪ್ಪನಿಗೆ ಫೋನ್ ಮಾಡಿದೆ...
" ಚಿಕ್ಕಪ್ಪ...
ಈ ಹುಡುಗನ ಬಗೆಗೆ ಈ ಥರಹದ ಅಪವಾದ ಬಂದಿದೆ...
ಸ್ವಲ್ಪ ಪೂರ್ವಾಪರ ವಿಚಾರಿಸ ಬೇಕಿತ್ತು..."


ಚಿಕ್ಕಪ್ಪನೂ ನಾಲ್ಕಾರು ಜನರನ್ನು ವಿಚಾರಿಸಿದ...

"ಹುಡುಗ ಒಳ್ಳೆಯ ಸ್ವಭಾವದವನು..
ಇಂಥಹ ಸಮಸ್ಯೆ ಇರಲಿಕ್ಕಿಲ್ಲ..!
ಹುಡುಗನ ಕಡೆಯವರು ಇಂಥಹ ಸುಳ್ಳು ಹೇಳಿ ಮದುವೆ ಮಾಡುವಂತಿಲ್ಲ..
ಇದು ಅಪರಾಧ..
ಒಂದು  ಪಂಚಾಯತಿ ಸಭೆ  ನಡೆಸಿದರೆ  ಉತ್ತಮ.."
ಅನ್ನುವ ಅಭಿಪ್ರಾಯ ಕೊಟ್ಟರು...


ಈ ಮಧ್ಯ ಶಾರಿಗೆ ಮತ್ತೆ ಬೇರೆ .. ಬೇರೆ ಫೋನ್ ಕಾಲ್ ಬಂದಿತು...
"ಹುಡುಗ ಗಂಡಸೇ.. ಅಲ್ಲ...
ಈ.. ಮೊದಲು ಮೂರು ಹೆಣ್ಣು ಮಕ್ಕಳು ಈ ಸಂಬಂಧ ಬೇಡವೆಂದಿದ್ದಾರೆ... !!"

ಈ ಥರಹ ಫೋನ್ ಮಾಡುವವರೆಲ್ಲರೂ  ನಮಗೆ ಪರಿಚಯದವರು ..  !!!

ನಮಗೆಲ್ಲ ತಲೆ ಕೆಟ್ಟು ಹೋಯಿತು.....

ಬಹಳ ವಿಚಿತ್ರ ಸನ್ನಿವೇಶ..!!.

ಹುಡುಗನಿಗೆ ಈ ವಿಷಯ ತಿಳಿಸುವದು ಹೇಗೆ..  ?? 
ಮುಂದೆ ಏನು ಮಾಡಬೇಕು..  ??

ಹೇಗೋ ಮಾಡಿ..ಹುಡುಗನ ಕಡೆಯವರಿಗೂ ಈ ಸಮಸ್ಯೆ ತಿಳಿಸಿದೆವು....
ಹುಡುಗನ ಕಡೆಯಿಂದ ಫೋನ್ ಬಂತು...


" ನನಗೆ ಇಂಥಹ ಸಮಸ್ಯೆಯಿಲ್ಲ...
ನೀವು ನನ್ನನ್ನು ನಂಬಬಹುದು..."

"ನೋಡಿ...
ಒಂದು ಪಂಚಾಯತಿ ಸಭೆ ನಡೆಸೋಣ... ಅಲ್ಲಿಯೇ ನಿರ್ಧಾರವಾಗಲಿ...
ನಿಮ್ಮ ಕಡೆಯ ಹಿರಿಯರೂ ಬರಲಿ...
ನಾವೂ ಬರುತ್ತೇವೆ..."

ಮದುವೆ ಹುಡುಗನಿಗೆ ಕೋಪ ಬಂತು..
"ಇದರಿಂದ  ನನ್ನ  ಮರ್ಯಾದೆ ಹೋಗುತ್ತದೆ..
ಇದಕ್ಕೆ ನಾನು ಒಪ್ಪುವದಿಲ್ಲ.. "

"ನಾವು ಹೆಣ್ಣು ಹೆತ್ತವರು..
ನಮ್ಮ ಕಷ್ಟವನ್ನು  ಸ್ವಲ್ಪ ಅರ್ಥ ಮಾಡಿಕೊಳ್ಳಿ...
ನಿಮಗೆ ಈಗಾಗಲೆ ಮೂರು ಮದುವೆಯ ಮಾತುಕತೆ ಮುರಿದು ಬಿದ್ದದ್ದು ನಮಗೆ ಗೊತ್ತಿದೆ...
ನಾವು ನಿಮಗೆ ಆಗುವ ಅವಮಾನ ತಪ್ಪಿಸಲು ಈ ಪಂಚಾಯತಿ ಸಭೆ ನಡೆಸಲು ಹೇಳಿದ್ದು.
ಬೇರೆ ಯಾವುದೇ ದುರುದ್ದೇಶವಿಲ್ಲ..
ನಮ್ಮ ಸಂಬಂಧವೂ ತಪ್ಪಿದರೆ ನಿಮಗೇ.. ಅವಮಾನ..."

ಈಗ  ಹುಡುಗ ಪಂಚಾಯತಿ ಸಭೆಗೆ ಒಪ್ಪಿದ....

ಶಾರಿಗೂ ಬಹಳ ಆತಂಕ..  !

"ಇಲ್ಲಿ  ಹುಡುಗನಿಗೂ ಅವಮಾನವಾಗಬಾರದು...
ನಮಗೂ ಮೋಸವಾಗ ಬಾರದು...
ಈ ಮದುವೆ ತಪ್ಪಿ ಹೋದರೂ  ಕಷ್ಟ...
ಏನಾಗ ಬಹುದು  ಪ್ರಕಾಶು...?"

"ಶಾರಿ... ಏನೂ ಭಯ ಪಡಬೇಡ...
ಪಂಚಾಯತಿ ಸಭೆಯಲ್ಲಿ ಎಲ್ಲವೂ ನಿರ್ಣಯವಾಗುತ್ತದೆ..."

ಶಾರಿಗೆ ಸಮಾಧಾನವಾಗಲಿಲ್ಲ...ಬಹಳ  ಬೇಸರವೂ ಆಗಿತ್ತು...

" ಪ್ರಕಾಶು..
ನನ್ನ ಪುಟ್ಟಿ  ಬಹಳ ಮುಗ್ಧೆ ಕಣೋ...
ಇದೆಲ್ಲ ಏನಾಗ ಬಹುದು  ??  
ಇದು ಈಗ  ನಮ್ಮ  ಕೈ ಮೀರಿದೆ...
ಏನಾಗುತ್ತದೋ ಆಗಲಿ ಬಿಡು... ದೇವರಿದ್ದಾನೆ...!
ಆ... ಭಗವಂತನ ಹಣೆಯಲ್ಲಿ ... ದೇವರು ಬರೆದ ಹಾಗೆ ಆಗ್ತದೆ..  !!

ಮುಂದೆ ಏನಾಗ ಬಹುದು..  ??  !!
ಎಲ್ಲರಿಗೂ  ಆತಂಕ ಶುರುವಾಯಿತು....




( ಇದು ಒಂದು ಸತ್ಯ ಘಟನೆ.. ...)


ಶಾರಿಯ ಪರಿಚಯಕ್ಕಾಗಿ  ಇಲ್ಲಿ ಕ್ಲಿಕ್ಕಿಸಿ...
http://ittigecement.blogspot.com/2009/05/blog-post_23.html











42 comments:

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

Prakaashanna, Baree suspense maadu neenu... :( :) :-D

AntharangadaMaathugalu said...

ಪ್ರಕಾಶ್ ಸಾರ್...
ಸತ್ಯ ಘಟನೆ ಅಂತ ಬೇರೆ ಹಾಕಿ ನಮ್ಮನ್ನೂ confuse ಮಾಡ್ತಿರೋ ಹಾಗನ್ನಿಸ್ತಿದೆ.... ಮುಂದುವರೆಯುತ್ತೇ ಬೇಗ ಅನ್ಕೊಂಡು ಕುತೂಹಲ ಬಿಗಿ ಹಿಡಿದಿದ್ದೇನೆ....

ಶ್ಯಾಮಲ

Ittigecement said...

ಪೂರ್ಣಿಮಾ...

ಮದುವೆ ನಿಶ್ಚಿತಾರ್ಥವಾಗಿದೆ...
ಮದುವೆಯ ಕರೆಯೋಲೆಯನ್ನು ಹಂಚುವ ಗಡಿಬಿಡಿ...
ಭರಾಟೆಯ ತಯಾರಿ ನಡೆದಿದೆ...

ಇಂಥಹ ಸಮಯದಲ್ಲಿ "ಇಂಥಹ ಸಮಸ್ಯೆ" !!

ನಿಜವಾ..? ಸುಳ್ಳಾ?

ಹುಡುಗಿಯ ಬದುಕಿನ ಪ್ರಶ್ನೆ ಇದು !

ನನಗೂ ಇದೆಲ್ಲ ಹೊಸದು...

ಶಾರಿಯ ಪ್ರೀತಿಗೆ.. ಅವಳ ನಂಬಿಕೆಗೆ..
ಹುಡುಗಿಯ ಬದುಕು...

ಬಹಳ ಆತಂಕ.. ಟೆನ್ಷನ್ !

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಅಂತರಂಗದ ಮಾತುಗಳು...

ಇದು ಸತ್ಯ ಘಟನೆ...

ಆತ್ಮೀಯರ ಮದುವೆಯ ಸಂದರ್ಭದಲ್ಲಿ ಇಂಥಹ ಪರಿಸ್ಥಿತಿ ಎದುರಾದರೆ ಬಹಳ ಕಷ್ಟ...

ಏನಾದರೂ ನಿರ್ಧಾರ ತೆಗೆದು ಕೊಳ್ಳುವದು ಕಷ್ಟ...

ಹುಡುಗನಿಗೆ ಅವಮಾನವಾಗಬಾರದು...
ನಮಗೆ ಮೋಸವೂ ಆಗಬಾರದು...

ಬಹಳ ಸಂದಿಗ್ಧ ಪರಿಸ್ಥಿತಿ ಇದು...

ನಮ್ಮೆಲ್ಲರ ತಲೆ ಕೆಟ್ಟು ಹೋಗಿತ್ತು...
ನನ್ನ ಚಿಕ್ಕಪ್ಪ/ ಚಿಕ್ಕಮ್ಮರ ತಲೆಯೂ ಸಹ...

ಪ್ರತಿಕ್ರಿಯೆಗೆ ಧನ್ಯವಾದಗಳು...

Dr.D.T.Krishna Murthy. said...

ಎಂತಹ ಪರಿಸ್ಥಿತಿ ಪ್ರಕಾಶ್!'ಮದುವೆ ಗಂಡಿಗೆ ಅದೇ ಇಲ್ಲ!'.ಸಸ್ಪೆನ್ಸ್ ನಲ್ಲಿಟ್ಟು ನಮ್ಮನ್ನು ಸಂಕಟಕ್ಕೆ ಸಿಗಿಸಿ ಒಳ್ಳೆಯ ಮಜಾ ತೊಗೊತೀರಿ!ಮುಂದೇನಾಯ್ತು ಅಂತ ಬೇಗ ಬರೆಯಿರಿ.ನಮಸ್ಕಾರ.

Ranjana H said...

nice story..munde enatu heli bega bari..waiting to read further..

Ittigecement said...

ಡಾ. ಕೃಷ್ಣಮೂರ್ತಿಯವರೆ...

ಹೆಣ್ಣುಗಂಡಿನ ಮದುವೆಯ ಮಾತುಕಥೆಯಲ್ಲಿ ನಾನು ಇದೇ ಮೊದಲ ಬಾರಿಗೆ ಭಾಗವಹಿಸುತ್ತಿದ್ದೆ..

ಸ್ವಲ್ಪವೂ ತಪ್ಪಾಗದಂತೆ ಮಾತನಾಡಬೇಕಿತ್ತು...
ಬಹಳ ಎಚ್ಚರಿಕೆಯ ನಡೆ ನಾವು ಇಡಬೇಕಿತ್ತು..

ಒಂದುವೇಳೆ ಹುಡುಗ ಒಳ್ಳೆಯವನಾಗಿದ್ದು..
ಹೇಳುವವರು ಸುಳ್ಳು ಹೇಳಿದ್ದರೆ.. ? !!!

ಆಮಂತ್ರಣ ಪತ್ರಿಕೆ ಹಂಚುವ ಸಮಯದಲ್ಲಿ ಈ ಸಂದಿಗ್ಧ ಪರಿಸ್ಥಿತಿ... !

"ಹುಡುಗ ಗಂಡಸೇ... ಅಲ್ಲ.. !!"
ಈ ರೀತಿ ಹೇಳುವವರು ಎಲ್ಲರೂ ನಮಗೆ ಪರಿಚಯದವರು !!!

ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್ ....

Ittigecement said...

ರಂಜಿತಾ...

ನಮ್ಮ ಶಾರಿಯ ಮಗಳು.. ಬಹಳ ಮುಗ್ಧೆ...
"ನೀವೆಲ್ಲ ಏನು ನಿರ್ಧಾರ ತೆಗೆದುಕೊಳ್ಳುತ್ತೀರೋ... ಅದಕ್ಕೆ ನನ್ನ ಸಮ್ಮತವಿದೆ" ಎಂದಿದ್ದಳು..
ಹುಡುಗ ನಮ್ಮ ಹುಡುಗಿಯನ್ನು ಇಷ್ಟಪಟ್ಟಿದ್ದ...

ಆದರೆ..
ಇಂಥಹ ಆರೋಪದಿಂದ ಮುಕ್ತವಾಗುವದು ಹೇಗೆ ?

ನಮಗೆಲ್ಲರಿಗೂ ಟೆನ್ಷನ್ !!

ಪ್ರತಿಕ್ರಿಯೆಗೆ ಧನ್ಯವಾದಗಳು...

shridhar said...

ಪ್ರಕಾಶಣ್ಣ,
ಒಂದಂತು ನಿಜ .. ಮದುವೆ ಗೊತ್ತಾದ ಮೇಲೆ .. ಹುಡುಗಿ ಬಗ್ಗೆ ಹುಡಗನ ಕಡೆಯವರಿಗೂ ಮತ್ತು ಹುಡುಗನ ಬಗ್ಗೆ ಹುಡುಗಿ ಕಡೆಯವರಿಗೂ ಹಚ್ಚಿ ಹಾಕಿ ಮಜಾ ತಗೊಳೋರು ಬಹಳ ಜನ ಇದಾರೆ. ಎಲ್ಲೊ ಒಂದೆರಡು ವಿಷಯ ನಿಜವಾಗಿರಬಹುದು.ಬಾಕಿಯದೆಲ್ಲ ಬರೆ ಪೂಳ್ಳು.ಈ ತರ ದ್ವೇಷ ಏಕೆ ಅಂತ ನಂಗೆ ಇನ್ನು ಅರ್ಥ ಆಗಿಲ್ಲ.
ನೀವು ಲೇಖನದಲ್ಲಿ ಹೇಳಿದಂತೆ ಈ ರೀತಿ ಘಟನೆ ಆದ್ರೆ ಮಾತ್ರ ಬಹಳ ಜಾಗರೂಕತೆಯಿಂದ ನಿಭಾಯಿಸ ಬೇಕಾಗುತ್ತದೆ.


ನನ್ನ ಬ್ಲೊಗ್ ಗೂ ಒಮ್ಮೆ ಬೇಟಿ ಕೊಡಿ.
ಶ್ರೀಧರ ಭಟ್ಟ

PARAANJAPE K.N. said...

ನೀವು ಇತ್ತೀಚೆಗೆ ಭಾರೀ ಸಸ್ಪೆನ್ಸ್ ಕಥೆ ಬರೀತೀರಿ ಮಾರಾಯ್ರೇ ? ಸತ್ಯ ಘಟನೆ ಅ೦ತ ಬೇರೆ ಹೇಳ್ತೀರಿ. ಕುತೂಹಲದ ಘಟ್ಟದಲ್ಲಿ ನಿಲ್ಲಿಸಿ ಮು೦ದಿನ ಕ೦ತಿಗೆ ಕಾಯುವ೦ತೆ ಮಾಡುತ್ತೀರಿ. ಚೆನ್ನಾಗಿದೆ. ನೀವು ಹೇಳಿದ ಸನ್ನಿವೇಶ ಬಹಳ ಬಿಕ್ಕಟ್ಟಿನದು. ಒ೦ದು ವೇಳೆ ನೀವು ಪ೦ಚಾಯಿತಿ ಸೇರಿಸಿ ವಿಚಾರಣೆ ಮಾಡಿದ ಮೇಲೆ ನಿಮ್ಮ ಪರೀಕ್ಷೆಯಲ್ಲಿ ಹುಡುಗ "ಗ೦ಡಸು" ಅ೦ತ ಪಾಸ್ ಆದರೂ ಅದು ಮು೦ದೆ ವಿವಾಹವಾದ ನ೦ತರ ಗ೦ಡಹೆ೦ಡಿರ ಮಧ್ಯದ ಸ೦ಬ೦ಧ ಹದಗೆಡೋದಕ್ಕೆ ನಾ೦ದಿ ಕೂಡ ಆಗಬಹುದು. ಮು೦ದಿನ ಕ೦ತಿಗೆ ಕಾದಿದ್ದೇನೆ.

PARAANJAPE K.N. said...

ನೀವು ಇತ್ತೀಚೆಗೆ ಭಾರೀ ಸಸ್ಪೆನ್ಸ್ ಕಥೆ ಬರೀತೀರಿ ಮಾರಾಯ್ರೇ ? ಸತ್ಯ ಘಟನೆ ಅ೦ತ ಬೇರೆ ಹೇಳ್ತೀರಿ. ಕುತೂಹಲದ ಘಟ್ಟದಲ್ಲಿ ನಿಲ್ಲಿಸಿ ಮು೦ದಿನ ಕ೦ತಿಗೆ ಕಾಯುವ೦ತೆ ಮಾಡುತ್ತೀರಿ. ಚೆನ್ನಾಗಿದೆ. ನೀವು ಹೇಳಿದ ಸನ್ನಿವೇಶ ಬಹಳ ಬಿಕ್ಕಟ್ಟಿನದು. ಒ೦ದು ವೇಳೆ ನೀವು ಪ೦ಚಾಯಿತಿ ಸೇರಿಸಿ ವಿಚಾರಣೆ ಮಾಡಿದ ಮೇಲೆ ನಿಮ್ಮ ಪರೀಕ್ಷೆಯಲ್ಲಿ ಹುಡುಗ "ಗ೦ಡಸು" ಅ೦ತ ಪಾಸ್ ಆದರೂ ಅದು ಮು೦ದೆ ವಿವಾಹವಾದ ನ೦ತರ ಗ೦ಡಹೆ೦ಡಿರ ಮಧ್ಯದ ಸ೦ಬ೦ಧ ಹದಗೆಡೋದಕ್ಕೆ ನಾ೦ದಿ ಕೂಡ ಆಗಬಹುದು. ಮು೦ದಿನ ಕ೦ತಿಗೆ ಕಾದಿದ್ದೇನೆ.

PARAANJAPE K.N. said...
This comment has been removed by the author.
ಮನಸು said...

ಪ್ರಕಾಶಣ್ಣ ನಿಜಕ್ಕೂ ಇಂತಹ ಸಂದರ್ಭ ಬಂದರೆ ಹೆಣ್ಣಾಗಲಿ, ಗಂಡಿನ ಕಡೆಯವರಾಗಲಿ ಎಲ್ಲರಿಗೂ ಕಷ್ಟ............ನೋಡೋಣ ಹೇಗೆ ನಿಭಾಯಿಸಿದಿರಿ ಎಲ್ಲರೂ ಸೇರಿ ಎಂದು....ಹೆಚ್ಚು ದಿನ ಕಾಯಿಸಬೇಡಿ. ಇದು ಕಥೆಯಲ್ಲ ಜೀವನ ಓಕೆನಾ!!!!!!

Unknown said...

ಕಥೆ ಚೆನ್ನಾಗಿದೆ.. ಆದ್ರೆ ಒಂದೇ ಒಂದು ಅನುಮಾನ.. ಭಗವಂತ ಅಂದ್ರೆ ಯಾರು? ದೇವರು ಅಂದ್ರೆ ಯಾರು? ಭಗವಂತನ ಹಣೆಯಲ್ಲಿ ದೇವರು ಬರೀತಾನ? :-)

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ಬಹಳ ಸಂಧಿಗ್ಧತೆ
ಮುಂದೇನಾಯಿತು ಎನ್ನುವುದನ್ನು ಬೇಗನೆ ಬರೆಯಿರಿ

ಸೀತಾರಾಮ. ಕೆ. / SITARAM.K said...

ಸ೦ದಿಗ್ದ ಸಮಸ್ಯೆಯ ಕಥೆಯನ್ನೂ ಕುತೂಹಲದ ಘಟ್ಟದಲ್ಲಿ ನಿಲ್ಲಿಸಿದ್ದಿರಾ... ಇನ್ನು ಮುಂದಿನ ಭಾಕ್ಕೆ ಕಾಯುವದೆ ಕೆಲಸ!

ಬಾಲು said...

desparetly waiting for the next episode. :)

Ittigecement said...

ಶ್ರೀಧರ್...

ಈ ವಿಷಯ ತುಂಬಾ ನಾಜೂಕು..
ಸ್ವಲ್ಪ ತಪ್ಪಿದರೂ.. ಎಲ್ಲರಿಗೂ ಕಷ್ಟ.. ಬೇಸರ...

ಗೆಳೆಯ "ಪರಾಂಜಪೆಯವರು" ಹೇಳಿದ ಹಾಗೆ..
ಹುಡುಗ ಗಂಡಸು ಅಂತ ಸಾಬೀತಾದರೂ..
ಮುಂದಿನ ವೈವಾಹಿಕ ಜೀವನ ಕಷ್ಟ..

ಮದುವೆ ನಿಂತು ಹೋದರೆ ಹುಡುಗಿಗೂ ಕಷ್ಟ..
ಮದುವೆಗೆ ಎಲ್ಲ ತಯಾರಿಯೂ ಆಗಿತ್ತು...

ನಮಗೆಲ್ಲರಿಗೂ ಇಕ್ಕಟ್ಟಿನ ಪರಿಸ್ಥಿತಿ..

ಸ್ವಲ್ಪ ಬ್ಯೂಸಿ ಇದ್ದಿದ್ದೆ... ನಿಮ್ಮ ಬ್ಲಾಗಿಗೂ ಬರುತ್ತೇನೆ..

ಪ್ರೋತ್ಸಾಹಕ್ಕೆ ಧನ್ಯವಾದಗಳು...

ಜಲನಯನ said...

ಪ್ರಕಾಶಾ...ನೀನು..ನನ್ನ ಈ ಮಾತನ್ನ ಬಹಳ ಗಂಭೀರವಾಗಿ ತಗೋ....ಅಲ್ಲ ನಿನಗಿಂತ ವಯಸ್ಸಿನಲ್ಲಿ ಹಿರಿಯವನಿದ್ದೀನಿ...ಅಷ್ಟೂ ಬೆಲೆ ಬ್ಯಾಡವಾ....ಗಾತ್ರ ದೊಡ್ದದಾದರೇನು ಗೋತ್ರ..?
ನೀನು..ಟೀವೀ ಸೀರಿಯಲ್ ಗೆ ಶುರು ಹಚ್ಕೋ... ತಲೆ ಹುಳ ಬಿಡೋದು ..ಅದು ಕೊರೆಯೋದನ್ನ ನೋಡೋದು...
ಟಿ.ಆರ್.ಪಿ ಹೆಚ್ಚಿಸ್ಕೊಳ್ಳೋದು ಎಲ್ಲಾ ನಿನ್ನಲ್ಲಿರೋ ಪಾಸಿಟಿವ್ ಪಾಯಿಂಟ್ಸೂ...ನಿಜವಾಗಿಯೂ.....
ಮತ್ತಿನ್ನೇನಯ್ಯಾ..ಪಂಚಾಯಿತಿ ಸೇರ್ಸಿ..ಏನ್ ನೋಡ್ಬೇಕು...ಅಲ್ಲಲ್ಲ ಗಂಡು ಏನ್ ತೋರಿಸ್ಬೇಕು ಅನ್ತಾ ನಿನ್ ಷಡ್ಯಂತ್ರ...??? ಹಹಹ....

Ittigecement said...

ಪರಾಂಜಪೆಯವರೆ...

ನೀವು ಅಂದಿದ್ದು ನಿಜ...
ಹುಡುಗ "ಗಂಡಸು" ಅಂತ ಸಾಬೀತಾದರೂ..
ಮುಂದೆ ಪತಿ/ಪತ್ನಿಯರಲ್ಲಿ ಹೊಂದಾಣಿಕೆ ಇಲ್ಲದಿದ್ದಲ್ಲಿ?

ನಾನು ಈ ಥರಹದ ಮದುವೆ ಮಾತುಕತೆಗೆ ಹೋಗಿದ್ದೇ ಇಲ್ಲ..
ಅನುಭವವೂ ಇಲ್ಲ...
ನನ್ನ ಮದುವೆಯನ್ನು ಅಕ್ಕ/ಬಾವ/ ಅಣ್ಣ/ ಚಿಕ್ಕಪ್ಪ ಮಾಡಿದ್ದರು..

ಸ್ವಲ್ಪ ದಪ್ಪಗೆ.. ಗುಂಡಗೆ ಇದ್ದೇನೆ ಅಂತ ಶಾರಿ ನನ್ನನ್ನು ಕರೆದಿದ್ದಳು..

ನನ್ನ ಸಮಸ್ಯೆ "ಚಿಕ್ಕಪ್ಪ/ಚಿಕ್ಕಮ್ಮರ ಬಳಿ ಹೇಳಿಕೊಂಡಾಗ ಅವರೂ ನನ್ನ ನೆರವಿಗೆ ಬಂದರು...

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಮನಸು...

ಮದುವೆ ನಿಂತು ಹೋದರೆ ಹೆಣ್ಣಿನ ಕಡೆಯವರಿಗೂ ಕೆಟ್ಟ ಹೆಸರು...
ಗಂಡಿಗೂ ಬಹಳ ಕಷ್ಟ...

"ನಾನು ಸಣ್ಣವನಿದ್ದಾಗ ಎತ್ತಿ ಆಡಿಸಿ ಬೆಳೆಸಿದ್ದೇನೆ...
ನೋಡಿದ್ದೇನೆ... ಅವನು ಗಂಡಸೇ.. ಅಲ್ಲ " ಅಂದರೆ
ಯಾರಿಗೆ ಈ ಸಂಬಂಧ ಮುಂದುವರೆಸುವ ಮನಸು ಬಂದೀತು ?

ನಮಗಂತೂ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಯಿತು....

ಧನ್ಯವಾದಗಳು...

geeta bhat said...

Wow, very much interesting.....!!!I am waiting for next episode....

ದಿನಕರ ಮೊಗೇರ said...

ಪ್ರಕಾಶಣ್ಣ,
ಇದೇನಿದು ಪ್ರಕಾಶಣ್ಣ ತುಂಬಾ ಸಿರಿಯಸ್ ಆಗಿ ಬರೀತಾ ಇದಾರೆ ಅನಿಸಿತು ಮೊದ ಮೊದಲು...... ಎಲ್ಲೂ ನಗುವಿನ ಸುಳಿವೇ ಇರಲಿಲ್ಲ..... ಅರ್ಧಕ್ಕೆ ಬಂದು ಮುಟ್ಟಿದೆ..... ಓದಿ, ನಗು ತಡೆಯಲಾಗಲಿಲ್ಲ.... ನೀವು ಹೇಗೆ ಇದನ್ನು nibhaayisidiri anta gambeeranaagi odide ..... mundina bhaaga bega bareyiri .....

Ittigecement said...

ರವಿಕಾಂತ ಗೋರೆಯವರೆ....

ಶಾರಿ ಸಂಬಂಧದಲ್ಲಿ ನನ್ನ ಅಕ್ಕ.. ದೊಡ್ಡಪ್ಪನ ಮಗಳು..!

ಅವಳು ಮಾತನಾಡುವದೇ ಹಾಗೆ...!

"ನಾವು ಏನೂ ಮಾಡಕ್ಕೆ ಆಗೊಲ್ಲಾ..
ಎಲ್ಲ ದೇವರ ಇಚ್ಛೆ.. ! ಎಂದು ಅನ್ನುವಾಗ..
ಸಿರ್ಸಿಕಡೆ.. ಈ ಥರಹ ಹೇಳುತ್ತಾರೆ..
ಬಹಳ ಮುಗ್ಧ ಜನರು.. !

"ಆ.. ಭಗವಂತನ ಹಣೆಯಲ್ಲಿ.. ದೇವರು ಬರೆದಾಂಗೆ ಆಗ್ತದೆ..!"

ಇಲ್ಲಿ ಈಗ ನಮ್ಮ ಕೈಯಲ್ಲಿ ಏನೂ ಉಳಿದಿಲ್ಲ...
ಮದುವೆಯ ಎಲ್ಲ ತಯಾರಿ ಆಗಿಬಿಟ್ಟಿದೆ...!

"ಆ.. ಭಗವಂತನ ಕೈಯಲ್ಲಿ ದೇವರು ಬರೆದಾಂಗೆ ಆಗ್ತದೆ.. !"

ರವಿ... ಧನ್ಯವಾದಗಳು...

Dileep Hegde said...

ತುಂಬಾ ಕುತೂಹಲಭರಿತ ಘಟನೆ ಪ್ರಕಾಶಣ್ಣ..
ಮುಂದೇನಾಗ್ತದೋ ಅಂತ ಕುತೂಹಲ ಹೆಚ್ಚುತ್ತಿದೆ..

"ವಾಲಗ ಓದಿಸು" ಇದು "ವಾಲಗ ಊದಿಸು" ಅಂತಾಗಬೇಕೆನೋ ಅಂತ ನನ್ನ ಅನಿಸಿಕೆ..

SSK said...

ಈ ನಿಜ ಕಥೆಯ ಮುಂದಿನ ಭಾಗ.....
ಏನಾಯಿತೆಂದು ಬೇಗ ತಿಳಿಸಿ
ಹುಡುಗಿಗೆ ನ್ಯಾಯ ದೊರೆಯಿತೇ....
ತಿಳಿಯಲು ಕಾಯುತ್ತಿದ್ದೇವೆ.

Raghu said...

ಕಥೆ ತುಂಬಾ ಚೆನ್ನಾಗಿದೆ.
ಶಾರಿ ಪಾತ್ರ ತುಂಬಾ ಇಷ್ಟ ಆಯಿತು.
ಮುಂದೇನು..?
ನಿಮ್ಮವ,
ರಾಘು.

Shantala Sayimane said...

ಪ್ರಕಾಶಣ್ಣ.....ಕಥೆ ತುಂಬಾ ಚೆನ್ನಾಗಿದೆ, ಕಾಯಿಸಬೇಡಿ...ಸಾಧ್ಯವಾದಷ್ಟು ಬೇಗ ಹೇಳಿಬಿಡಿ......

Ittigecement said...

ಗುರು (ಸಾಗರದಾಚೆಯ ಇಂಚರ)...

ನಿಶ್ಚಿತಾರ್ಥದ ಒಳಗೆ ಇಂಥಹ ವಿಷಯಗಳು ಗೊತ್ತಾದಲ್ಲಿ..
ಕೂಲಂಕುಶವಾಗಿ ವಿಚಾರಿಸಿ ಮುಂದುವರೆಯ ಬಹುದು...
ನಾವೂ ಕೂಡ ಈ ಹುಡುಗುನ ಬಗೆಗೆ ಮೊದಲು ವಿಚಾರಿಸಿದ್ದೆವು..
ನಮ್ಮ ಚಿಕ್ಕಪ್ಪ ಕೂಡ ವಿಚಾರಿಸಿದ್ದ..

ಮದುವೆಗೆ ಎಲ್ಲ ತಯಾರಿಯಾಗಿಬಿಟ್ಟಿತ್ತು..
ಈಗ ಧುತ್ತೆಂದು ಈ ಸಮಸ್ಯೆ.. "ಹುಡುಗ "ಗಂಡಸೇ.. ಅಲ್ಲ.." !!

ಒಂದು ಘಟನೆ ನಡೆದ ಮೇಲೆ ವಿಮರ್ಶಿಸುವದು ಸುಲಭ..
ನಡೆಯುವಾಗ "ನಿರ್ಧಾರ" ತೆಗೆದುಕೊಳ್ಳುವದು ಬಲು ಕಷ್ಟ..
ಯಾಕೆಂದರೆ ನಮ್ಮ ನಿರ್ಧಾರಗಳ ಫಲವನ್ನು "ಭವಿಷ್ಯ" ಹೆಳುತ್ತದೆ.. ಅಲ್ಲವೆ?

ನಾವು ತೆಗೆದುಕೊಂಡ ನಿರ್ಧಾರಗಳು ಸರಿಯೆ..? ತಪ್ಪೆ ? ಎನ್ನುವದು ಆಗ ಗೊತ್ತಾಗುವದಿಲ್ಲ..
ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ..

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸೀತಾರಾಮ್ ಸರ್...

ನಮ್ಮ ನಿರ್ಧಾರಗಳ ಫಲ ಒಳ್ಳೆಯದಾಗಿದ್ದರೆ..
ಯಾರೂ ಏನೂ ಹೇಳುವದಿಲ್ಲ...
ನಮ್ಮ ನಿರ್ಧಾರಗಳ ಫಲ ಕೆಡುಕಾಗಿದ್ದರೆ ಬಲು ಕಷ್ಟ..

ಈ ಮದುವೆಯ ವಿಷಯದಲ್ಲಿ ಎಷ್ಟು ಎಚ್ಚರಿಕೆಯಲ್ಲಿದ್ದರೂ ಸಾಲದು..

ಇದರಿಂದ ಒಂದು ದೊಡ್ಡ ಪಾಠವನ್ನು ಕಲಿತಿದ್ದೇನೆ...

ಧನ್ಯವಾದಗಳು ಸೀತಾರಾಮ್ ಸರ್...

Ittigecement said...

ಬಾಲು ಸರ್...

ನಾವು ಒಂದು ಸಾರಿ ಆ ಹುಡುಗನ ಜಾಗದಲ್ಲಿದ್ದು ವಿಚಾರ ಮಾಡೋಣ..
ಇಂಥಹ ಸಂದರ್ಭದಲ್ಲಿ ಏನು ಮಾಡ ಬಹುದಿತ್ತು...?
ಹುಡುಗಿ.. ಸಂಬಂಧ ಇಷ್ಟವಾಗಿದೆ..

ತನ್ನ ಇರುವಿಕೆಯ/ ತನ್ನ ಪೌರುಷದ ಬಗೆಗಿನ ಸಂದೇಹದ ಪಂಚಾಯತಿಯನ್ನು ಎದುರಿಸುವದು ಹೇಗೆ ?
ಯವತ್ತೂ ಮರೆಯಲಾಗದ ಅವಮಾನವಲ್ಲವೆ ?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಗೀತಾ....

ನಾವು ಆ ಹೆಣ್ಣುಮಗಳ ಜಾಗಲ್ಲಿದ್ದು ಸ್ವಲ್ಪ ವಿಚಾರ ಮಾಡೋಣ..
(ಅವಳು ಮುಗ್ಧೆ.. ಪ್ರಶ್ನೆ ಅದಲ್ಲ)
ಅಪ್ಪ/ಅಮ್ಮ ಹಿರಿಯರೆಲ್ಲ ಸೇರಿ ನಿರ್ಧಾರ ಮಾಡಿದ ಸಂಬಂಧ ಇದು..

ಈಗ ಮೇಲಿಂದ/ ಮೇಲಿಂದ ಫೋನ್ "ಹುಡುಗ ಸರಿಯಿಲ್ಲ.."

ಇದು ಹೌದೋ ಅಲ್ಲವೋ ಗೊತ್ತಾಗುವದು.. ಅವಳಿಗೆ ಮಾತ್ರ..
ಅದೂ.. ಮದುವೆಯಾದ ಮೇಲೆ..!

ಒಂದು ಹೆಣ್ಣುಮಗಳಾಗಿ ಈ ಪರಿಸ್ಥಿತಿಯನ್ನು ಎದುರಿಸುವದು ಬಹಳ.. ಬಹಳ ಕಷ್ಟ.. ಅಲ್ಲವಾ?

ಪ್ರತಿಕ್ರಿಯೆಗೆ ಧನ್ಯವಾದಗಳು...

Anonymous said...

ಪ್ರಕಾಶಣ್ಣ,,ನಿಮ್ಮ ಯಾವತ್ತಿನ ನವಿರಾದ ಹಾಸ್ಯ ಇಷ್ಟವಾಯ್ತು...

ಚೆನ್ನಾಗಿದೆ..

Ittigecement said...

ಜಲನಯನ (ಆಜಾದ್)

ನಾನು ಬರೆಯುವದು ಖುಷಿಗಾಗಿ..

ಇನ್ನು ಈ ಪಂಚಾಯತಿ ವಿಷಯ...

ನನ್ನಕ್ಕನ ಮಗಳ ಬದುಕಿನ ಪ್ರಶ್ನೆ..
ನೀರಿಗೆ ಇಳಿದಾಗಿದೆ...
ಚಿಕ್ಕಪ್ಪ/ಚಿಕ್ಕಮ್ಮ ಹಿರಿಯರ ಬೆಂಬಲವಿದೆ..
ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಆತ್ಮವಿಶ್ವಾಸ ನನ್ನಲ್ಲಿತ್ತು...

ಮುಂದೆ ಏನಾಯ್ತು ಅಂತನಾ...?

ಎರಡುದಿನ ಅಷ್ಟೆ...

ನಿಮ್ಮ ಪ್ರೀತಿಗೆ ನನ್ನ "ಸಲಾಮ್.."

ನಿಮ್ಮ ಕವನ ಸಂಕಲನ ಬಿಡುಗಡೆಯ ದಿನಕ್ಕಾಗಿ ನಾವೆಲ್ಲ ಕಾಯುತ್ತಿದ್ದೇವೆ...

ಜೈ ಹೋ.....

ಸಾಗರಿ.. said...

ಇದೆಂತು ಪ್ರಕಾಶಣ್ಣ, ಹಿಂಗೆಲ್ಲಾ ಕಾಯಿಸಲ್ಲಾಗ. ಮುಂದುವರಿದ ಭಾಗವನ್ನ ಬೇಗ post ಮಾಡಿಬಿಡಿ. ನಮಗೂ ನೆಮ್ಮದಿ.

ಸುಮ said...

ಪ್ರಕಾಶಣ್ಣ ಮುಂದೇನಾಯ್ತು ಬೇಗ ಹೇಳಿ.

Jyoti Hebbar said...

bega heli prakash... mundenaaytu?

ಅಹರ್ನಿಶಿ said...

ಪ್ರಕಾಶಣ್ಣ,

ಬಹಳ ದಿನಗಳ ನ೦ತರ ಬಿಡುವು ಮಾಡಿಕೊ೦ಡು ನಿಮ್ಮ ಬ್ಲಾಗಿಗೆ ಬ೦ದೆ,ನಿಮ್ಮ ಬರೆಯುವ ಉತ್ಸಾಹಕ್ಕೆ ಚಪ್ಪಾಳೆ.ನಿಮ್ಮ ಸಸ್ಪೆನ್ಸ್ ಗೆ ಚ೦ಡಮದ್ದಳೆ............ಒಬ್ಬ ಲೇಖಕನ ಯಶಸ್ಸು ಓದುಗರನ್ನು ಹಿಡಿದಿಡುವುದರಲ್ಲಿದೆ..ಅದು ನಿಮ್ಮಲ್ಲಿ ಹಿಮಾಲಯದಷ್ಟಿದೆ..ಎಲ್ಲರ ಹಾಗೇ ನನ್ನನ್ನೂ ಹಿಡಿದಿಟ್ಟೀದ್ದೀರಿ...ಮು೦ದಿನ ಭಾಗ ಯಾವಾಗ...ಕಥೆಯ ಅ೦ತ್ಯ ಹೇಗಿರಬಹುದೆ೦ದು ತಲೆಯಲ್ಲಿ ಹುಳ ಬಿಟ್ಟುಕೊ೦ಡಿರುವೆ. ಅದೇ ಹುಳದೊ೦ದಿಗೆ ಮು೦ದಿನ ತಿ೦ಗಳ ಭಾರತ ಭೇಟಿಯಲ್ಲಿ ನಿಮ್ಮನ್ನು ಸ೦ಧಿಸಬೇಕೆ೦ದು ಬಹಳ ಆಸೆ.

ವಿ ಡಿ ಭಟ್ ಸುಗಾವಿ said...

ಆ ಭಗವಂತ ಏನು ಬರೆದಿರಬಹುದೆಂಬ ಕುತೂಹಲ

Unknown said...

bhari iddalo kathe prakashanna.... kutoohala hechsule en beko adnella maadtri neevu.... churu jaasti aatu anistu odakadre... adre illin comment odidmele nimidea saryaagi click aydu anista iddu. ishtella kutoohala huttiskandu kadege adna odeyudralli tumba care beku prakashanna....

ಚಿತ್ರಾ said...

ಪ್ರಕಾಶಣ್ಣ
ಈಗಾಗಲೇ , ರಾಶಿ ಜನರ ಹತ್ರ ಬೈಸಿಕಂಡಿದ್ದೆ ನೀನು ! ಸಸ್ಪೆನ್ಸ್ ನಲ್ಲಿಟ್ಟು ಕಾಯಿಸ್ತೆ ಹೇಳಿ ! ಮತ್ತೆ ನಾನು ಅದನ್ನೇ ಹೇಳಿದ್ರೆ ಚೊಲೋ ಕಾಣ್ತಿಲ್ಲೆ ಅಲ್ದಾ?
ಆದರೆ , ಅರ್ಧಕ್ಕೆ ನಿಲ್ಸಿ ಸಿಟ್ಟು ತರಿಸಿದ್ದಂತೂ ಖರೆ !ನೋಡನ ಭಗವಂತನ ಹಣೆಲಿ ದೇವರೆಂತ ಬರದ್ದ ಹೇಳಿ !
ಅಲ್ಲಾ, ಒಂದು ಡೌಟು. ಒಳಗಿಂದೊಳಗೆ ತೊಂದರೆ ಇದ್ರೆ ... ಗೊತ್ತಾಗದು ಹ್ಯಾಂಗೆ ಹೇಳಿ ?

(ರಾಶಿ ದಿನ ಆತು ಯಾವ ಬ್ಲಾಗಿಗೂ ಹೋಗದೆ ,.. ಇವತ್ತು ನಿಂದೆ ಮೊದಲ ಬ್ಲಾಗ್ ನೋಡಿದ್ದು !)

Unknown said...

waiting for the next episode.