part... 1
ಆಗ ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದೆ....
ಬಹುಶಃ..
ಹತ್ತೋ.. ಹನ್ನೆರಡೋ.. ವಯಸ್ಸಿದ್ದಿರಬಹುದು...
ಒಂದು ದಿನ ನಮ್ಮೂರ ಪದ್ದಕ್ಕ ನನ್ನನ್ನು ಗುಟ್ಟಾಗಿ ಕರೆದು..
"ಪ್ರಕಾಶು ಈ ಚೀಟಿ ಯಂಕಟುಗೆ ಕೊಡು..
ಯಾರಿಗೂ ಕಾಣದ ಹಾಗೆ..
ಗೊತ್ತಾಗದ ಹಾಗೆ ಕೊಡು.. !.."
ನಂಗೆ ಕುತೂಹಲವಾಯಿತು..!
"ಪದ್ದಿ.. ...
ಅಂತಾದ್ದು ಏನಿದೆ ಇದರಲ್ಲಿ..? !!
ನೀನೇ... ಕೊಡು.. "
"ನೋಡು.... ಪ್ರಕಾಶು..
ನೀನು ಜಾಣ ಅಲ್ವಾ...?
ನನ್ನ ರಾಜ...!
ನಿಂಗೆ ನಿಂಬೆ ಹುಳಿ ಪೆಪ್ಪರ ಮೆಂಟು ಕೊಡ್ತಿನಿ..
ಮತ್ತೆ.. ..
ನಾನು ಚೀಟಿ ಕೊಡೊದು ಯಾರಿಗೂ ಹೇಳ ಬಾರದು..
ಹಾಗೆ...
ಯಂಕಟು ಒಂದು ಚೀಟಿ ಕೊಡ್ತಾನೆ..
ಅದನ್ನು ನಂಗೆ ತಂದು ಕೊಡು..
ಓಕೆ.. ನಾ ?.."
ನನಗೆ ನಿಂಬೆ ಹುಳಿ ಪೆಪ್ಪರ ಮೆಂಟಿನ ಹೆಸರು ಕೇಳಿ ಬಾಯಲ್ಲಿ ನೀರು ಬಂತು..
ಯಾರಾದರು ಪೇಟೆಗೆ ಹೋದಾಗ..
ಮಕ್ಕಳಿಗೆ ಬಹಳ ಅಪರೂಪವಾಗಿ ಸಿಗುತ್ತಿತ್ತು...
ಅವಳ ಶರತ್ತುಗಳಿಗೆ ಒಪ್ಪಿಕೊಂಡೆ..
ಒಂದು ಚೀಟಿ ವ್ಯವಹಾರದಲ್ಲಿ ಐದು ಪೆಪ್ಪರ ಮೆಂಟು ಸಿಗುತ್ತಿತ್ತು...
ನನಗೆ ಖುಷಿಯಾಯಿತು..
ಒಂದು ದಿನ ನನಗೆ ಸಿಕ್ಕ ಪೆಪ್ಪರ ಮೆಂಟಲ್ಲಿ ..
ಒಂದನ್ನು ನಾಗುವಿಗೂ..ಕುಷ್ಟನಿಗೂ ಕೊಟ್ಟೆ..
ಅವರಿಬ್ಬರಿಗೂ ಆಶ್ಚರ್ಯ.. !
"ಯಾರು ಕೊಟ್ರೊ ನಿಂಗೆ..?
ಎಲ್ಲಿ ಸಿಕ್ತೋ..?"
ಅವರಿಗೆ ಗೊತ್ತು..
ನನಗೆ ಪೆಪ್ಪರ ಮೆಂಟು ಹಾಗೆಲ್ಲ ಸಿಗೊದಿಲ್ಲ ಅಂತ..
"ಯಾರಿಗೂ ಹೇಳ ಬೇಡ್ರೋ.. ..
ಪದ್ದಿ ಕೊಟ್ಳು..."
ಎಲ್ಲ ವಿವರ ಹೇಳಿದೆ..
"ಎಲ್ಲಿ ?...
ಆ ಚೀಟಿ ತೋರಿಸು.. !!..."
"ಅದು ಹಾಗೆಲ್ಲ ತೋರಿಸ ಬೇಡ ಹೇಳಿದ್ದಾಳೆ ಕಣೊ..."
"ನಾವು ಯಾರಿಗೂ ಹೇಳೋದಿಲ್ವೊ.."
ಅವರಿಬ್ಬರಿಗೆ ಗುಟ್ಟಾಗಿ ತೋರಿಸಿದೆ..
ಇಬ್ಬರೂ ಬಹಳ ಆಸಕ್ತಿಯಿಂದ ಓದಿದರು...!!
"ಓ.... ಇದಾ... !!
ಇದು ಲವ್ವು ಲೆಟರು...!!"
"ಲವ್ ಲೆಟರಾ..? !!
ಏನೋ .. ಹಾಗಂದ್ರೆ.. !! ?.. "
" ಈ.. ಪದ್ದಿಗೆ...
ಆ... ಯಂಕಟು ಮೇಲೆ ಲವ್ ಆಗಿದೆ...!
ಅದಕ್ಕೆ ಪತ್ರ ಬರೆದಿದ್ದಾಳೆ..!
ಅದೇ.. ಲವ್ ಲೆಟರು..!.. "
"ನಾಗು...
ಲವ್ ಅಂದ್ರೆ ಏನೋ..?"
" ತಬ್ಬಿಕೊಳ್ಳೋದು..
ಅಷ್ಟೂ... ಗೊತ್ತಾಗದಿಲ್ವೇನೋ...? "
" ತಬ್ಬಿ ಕೊಳ್ಳುವದಾ? ಅದೆಲ್ಲಾ ಹೇಗೊ...?
ನಾನು ನಿನ್ನನ್ನು ತಬ್ಬಿ ಕೊಂಡರೆ ಲವ್ವಾ ?"
"ಅಲ್ವೋ...
ಗಂಡು ಮಕ್ಕಳು ಹೆಣ್ಣು ಮಕ್ಕಳನ್ನು ತಬ್ಬಿಕೊಳ್ಳುವದು...
ಅಪ್ಪ.. ಅಮ್ಮನನ್ನು ತಬ್ಬಿ ಕೊಳ್ಳುವದು...
ಅದು ಲವ್ವು...!
"ಇಶ್ಶಿ...!..
ಶೀ... ಥೂ... !
ಅದು ಹೇಗೋ...? !!
ನೀನು ಕೆಟ್ಟದ್ದಲ್ಲಾ ಹೇಳ್ತಿಯಾ.."
" ಇದೆಲ್ಲಾ ಹೇಗೆ ಕೆಟ್ಟದ್ದೋ...?
ಎಲ್ಲ ಸಿನೆಮಾದಲ್ಲಿ ತೋರಿಸೋದಿಲ್ವೇನೋ...?
ನಾವು "ಶಂಕರ್ ಗುರು" ಸಿನೇಮಾ ನೋಡಿಲ್ವಾ..?
ಅದರಲ್ಲಿ ಒಂದು ಹಾಡಿದೆ ಗೊತ್ತಾ...?"
"ಯಾವ ಹಾಡು...?"
"ಅದೇ......
ಚಿನ್ನಾ....
ಬಾಳಲ್ಲಿ...
ಈ ರಾತ್ರಿ ಇನ್ನೆಂದೂ ...
ಬರದೂ..
ಹೂ... ಮಂಚ..
ನಮಗಾಗಿದೆ... ಈ ಹಾಡು ಕೇಳಿಲ್ವಾ ..?"
"ಹೌದು...!
ಅಲ್ಲಿ ಲವ್ ಎಲ್ಲಿದೆ...?"
" ಪ್ರಕಾಶು...
ಆ ಹಾಡಲ್ಲಿ.. ಮುಂದೆ ಒಂದು ಸಾಲಿದೆ...
ಅದರಲ್ಲಿ ... ಲವ್ ಇದೆ...!.."
"ಏನದು...??
"ನಾನೂ... ನೀನು...
ನೀನೂ.. ನಾನು..
ಸೇರಿ..
ಇಂದು..
ಇಲ್ಲೇ ..
ಈಗ..
ಹ್ಹ..ಹ್ಹ..ಹ್ಹಾ.. ಹ್ಹಾ..ಹ್ಹಾ.... !!.!
ಇಲ್ಲಿ ಹ್ಹಾ..ಹ್ಹಾ.. ಹ್ಹಾ ಹ್ಹಾ... ಅಂದ್ರೆ ಲವ್ವು ಕಣೊ..."
"ಅದು ಹೇಗೊ..?? !!
ಹ್ಹ... ಹ್ಹಾ... ಹ್ಹಾ..ಹ್ಹಾ.. ಹ್ಹಾ.. ಅಂದ್ರೆ ಲವ್ವಾ..!! ?.."
" ಥೂ... ಹೋಗಪ್ಪಾ...
ನಿಂಗೆ ಏನೂ... ಗೊತ್ತಾಗೋದಿಲ್ಲ...
ಎಲ್ಲಾ ಬಿಡಿಸಿ ಹೇಳ್ಬೇಕು...
ಶಂಕರ್ ಗುರು ಸಿನೇಮಾದಲ್ಲಿ..
ರಾಜಕುಮಾರ ಪದ್ಮಪ್ರಿಯಾಳನ್ನು ತಬ್ಬಿಕೊಳ್ಳುವದಿಲ್ವೇನೊ...
ಹಾಡು ಹೇಳೊದಿಲ್ವೇನೊ...
ಅದೇ ಲವ್ವು.. !!."
ನಾನು ತಲೆ ಕೆರೆದು ಕೊಂಡೆ...
ಕಳೆದವಾರವಷ್ಟೆ ಮನೆಯವರೆಲ್ಲ ಹೋಗಿ "ಶಂಕರ್ ಗುರು" ಸಿನೇಮಾ ನೋಡಿ ಬಂದಿದ್ದೆವು...
ಆ ಹಾಡು... ಸನ್ನಿವೇಶ ಎಲ್ಲವೂ ನೆನಪಿದ್ದವು...
ನನಗೆ ಈಗ ಕುತೂಹಲ ಜಾಸ್ತಿಯಾಯಿತು....!
" ನಾಗೂ...
ಪದ್ದಕ್ಕ... ಯಂಕಟುಗೆ ತಬ್ಬಿ .. ಹಾಡು ಹೇಳ್ತಾಳೇನೊ...?"
"ಈ.. ಹಾಡು ಎಲ್ಲಾ.. ಸಿನೇಮಾದಲ್ಲಿ..
ಪದ್ದಿ.. ಯಂಕಟು ಹೇಗೆ ಲವ್ವು ಮಾಡ್ತಾರೆ ..?
ನೋಡ್ಬೇಕು ಕಣ್ರೊ..."
"ಬೇಡ್ವೊ...
ಅದೆಲ್ಲ ನಮಗ್ಯಾಕೆ... ?
ಆಮೇಲೆ ನಿಂಬೆ ಹುಳಿ ಪೆಪ್ಪರ ಮೆಂಟು ಸಿಗೊದಿಲ್ವೊ... !!."
"ನಾವು ಅವರಿಗೆ ಗೊತ್ತಾಗದ ಹಾಗೆ ನೋಡೋಣ್ವೊ..!! ."
" ಅದು ಹೇಗೆ ?? !!.."
" ನನ್ನ ಹತ್ರ ಒಂದು ಉಪಾಯ ಇದೆ..."
"ಹೌದಾ...! ಹೇಳು ಹಾಗಾದ್ರೆ.. !!
"ಪ್ರಕಾಶು...
ನಮ್ಮ ಕುಷ್ಟನ ಹತ್ತಿರ..
ಪದ್ದಿ ಬರೆದ ಹಾಗೆ ಒಂದು ಪತ್ರ ಬರೆಸೋಣ..
ಹಾಗೆ..
ಯಂಕಟು ಬರೆದ ಹಾಗೆ ಒಂದು ಪತ್ರ ನಾನು ಬರಿತೇನೆ..
ನೀನು.. ಇಬ್ಬರಿಗೂ.. ಈ ಪತ್ರ ಕೊಟ್ಟು ಬಾ..."
"ಆಗ.. ಏನಾಗ್ತದೆ...?"
" ಆ. .. ಪತ್ರದಲ್ಲಿ...
ನಮ್ಮನೆ ತೋಟದ..
ಅಶ್ವತ್ಥ ಮರದ ಬಳಿ ಬರುವಂತೆ ಬರೆಯುವಾ...!
ಅಲ್ಲಿ..
ನಾವು ನಮ್ಮನೆ ಈಶಾಡಿ ಮಾವಿನ ಮರ ಹತ್ತೋಣ....
ಯಾರಿಗೂ ಕಾಣುವದಿಲ್ಲ..!
ಅವರು ಹೇಗೆ "ಲವ್" ಮಾಡ್ತಾರೆ ...
ನೋಡಿಯೇ.. ಬಿಡೋಣ..!..! !.."
ನನಗೆ ಒಂಥರಾ ಥ್ರಿಲ್ ಆಗತೊಡಗಿತು.. !!
ಪದ್ದಕ್ಕ,.. ಯಂಕಟು .. ಹಾಡು ಹೇಳ ಬಹುದಾ ?? !!....
ಹೆದರಿಕೆ .... !!
ಆತಂಕ.. .. !!
ಮುಂದೆ ಏನಾಗ ಬಹುದು ?
(" ಶಂಕರ್ ಗುರು "ಹಾಡಿನ ಲಿಂಕ್ ...
ಇಲ್ಲಿದೆ....
ದಯವಿಟ್ಟು ಕೇಳಿ..
http://www.youtube.com/watch?v=lsly78fanNM)
ಕ್ಲಿಕ್ ಮಾಡಿ...
ಹಾಡು ಕೇಳಿ....
"ಹ... ಹ್ಹ.. ಹ್ಹ... ಹ್ಹಾ..ಹ್ಹಾ.. ಹ್ಹಾ.. !!.. "
Monday, April 12, 2010
Subscribe to:
Post Comments (Atom)
63 comments:
ಇದು ನಿಜವಾಗ್ಲೂ ನಮ್ಮನ್ನ ಯೋಚಿಸುವಂತೆ ಮಾಡುವ ಕಥೆ ಪ್ರಕಾಶಣ್ಣ..... ಈ ಟಿವಿ, ಸಿನೆಮಾಗಳ ಪ್ರಭಾವ ಮಕ್ಕಳ ಮನಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ ಅನ್ನೋದನ್ನ ನಾವು ಮತ್ತೊಮ್ಮೆ ಯೋಚಿಸಬೇಕಾಗಿದೆ ನಾವು.
ತುಂಬಾ ಇಷ್ಟವಾಯ್ತು...ಮುಂದಿನ part ಗೆ ತುಂಬಾ ಕಾಯಿಸಬೇಡಿ ಪ್ಲೀಜ್...:))
ನಮಸ್ಕಾರ ಪ್ರಕಾಶಣ್ಣ,,,
ಚೆನ್ನಾಗಿ ಇದೆ ನಿಮ್ಮ ಅನುಭವದ ಸ್ವಾರಸ್ಯಕರ ಸನ್ನಿವೇಶ,,,, ನಮ್ಮ ಆಟ ಪೆದ್ದುತನಗಳು ನೆನಪಿಗೆ ಬಂದವು.... ಆಗಿನ ವಯಸ್ಸಿನಲ್ಲಿ ಇರುವ ಕುತೂಹಲ , ಕಾತುರ , ಏನಾದರೂ ಹೊಸದನ್ನು ತಿಳಿದುಕೊಳ್ಳ ಬೇಕು ಎಂಬ ಹಂಬಲ... ಎಷ್ಟು ಮಜಾ ಇರುತ್ತೆ ಅಲ್ವ.. ಇವಾಗ ನೆನಪಿಸಿಕೊಂಡರೆ ನಗು ಬರುತ್ತೆ....
ಮುಂದಿನ ಬರಹಕ್ಕಾಗಿ ಕಾಯುತ್ತಿರುತ್ತೇನೆ......
ಓ ಮನಸೆ ನೀನೇಕೆ ಹೀಗೆ...
ಆ ಸಣ್ಣ ವಯಸ್ಸಿನಲ್ಲಿ ಪ್ರತಿಯೊಬ್ಬರಿಗೂ ಬಂದ ಕುತೂಹಲ.. ಇದು.
ಗಂಡು ಹೆಣ್ಣಿನ ಬೇಧ ತಿಳಿಯುವ..
ಬಾಲ್ಯ ದಾಟಿ ಹರೆಯ ಪ್ರವೇಶಿಸುವ ದಿನಗಳಲ್ಲಿ..
ಎಷ್ಟೇ ಸಂಸ್ಕಾರವಂತ ಮನೆತನವಿದ್ದರೂ...
ಮಕ್ಕಳಿಗೆ ಈ ಥರಹದ ಕುತೂಹಲ ಬಂದೇ ಬರುತ್ತವೆ...
ಆಗ ಮಾಧ್ಯಮ ಇಷ್ಟೆಲ್ಲ ಮುಕ್ತವಾಗಿರಲಿಲ್ಲ..
ಆದರೂ..
ಮಾಧ್ಯಮ ತನ್ನ ಪ್ರಭಾವ ಬೀರಿತ್ತು...
ಆದರೆ ಈಗ.. ?
ನೋಡುವ ಸಿನೇಮಾಗಳಲ್ಲಿ ..
ಹಾಡುಗಳಲ್ಲಿ ಮಳೆ ಬರುವದು ತೀರಾ ಸಹಜವಾಗಿ ಬಿಟ್ಟಿದೆ...
ಮಕ್ಕಳೊಂದಿಗೆ ನಾವು ಸಾಮಾನ್ಯವೆಂಬಂತೆ ನೋಡುತ್ತೇವೆ...
ಈಗ ಮಕ್ಕಳನ್ನು ಹೇಗೆ ಬೆಳೆಸ ಬೇಕು...?
ಏನು ತಿಳುವಳಿಕೆ ಕೊಡ ಬೇಕು...?
ಯಾಕೆಂದರೆ ಮಾಧ್ಯಮ ಬದಲಾಗುವದಿಲ್ಲ...
ನಿಮ್ಮ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....
ಗುರು...
ಈ ಪದ್ದಿ...
ಯಂಕಟು ಸಂಗಡ ಹಾಡು ಹೇಳ ಬಹುದಾ ??
ಯಾವ ಹಾಡು ಹೇಳ ಬಹುದು ?? ಎನ್ನುವ ಕುತೂಹಲ ನನಗೆ ಬಹಳ ಇತ್ತು...!
ಯಾಕೆಂದರೆ ಸಿನೇಮಾದಲ್ಲಿ ಪ್ರೀತಿಯಾದಾಗ ಹಾಡು ಹಾಡಿಸಿ ಬಿಡುತ್ತಿದ್ದರಲ್ಲಾ !
ಅದೆಲ್ಲ ನೆನಪಾದರೆ ಈಗ ತಡೆಯಲಾರದ ನಗು ಉಕ್ಕಿ ಬರುತ್ತದೆ !
ಪದ್ದಿ. ಯಂಕಟು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ವಾವ್ ..ಪದ್ದು - ಎಂಕಟ ಲವ್ ಸ್ಟೋರಿ!!. ಸೂಪರ್...ಮುಂದೆ ಏನಾಗಬಹುದು..ಕಾಯ್ತಾ ಇದ್ದೀವಿ:).
ಪ್ರಕಾಶಣ್ಣ ಕಥೆ ಮಾತ್ರ ಸೂಪರ್ ಆಗಿದೆ. ನಾನೂ ೨ನೆ ಕ್ಲಾಸ್ಸಲ್ಲಿದ್ದಾಗ ಯಾವುದೊ ಕನ್ನಡ ಸಿನಿಮಾ ನೋಡಿ ಲವ್ ಮಾಡೋದು ಅಂದ್ರೆ ಏನು ಅಂತ ನಮ್ಮ ಅಮ್ಮನ್ನ ಕೇಳಿ ಬೈಸ್ಕೊಂಡಿದ್ದು ನೆನಪಿದೆ.
ವನಿತಾರವರೆ...
ಈ ಘಟನೆ ನಿಮ್ಮೆಲ್ಲರ ಒತ್ತಾಯಕ್ಕೆ ಬರೆದದ್ದು...
ನನಗೆ ಒಂದು ಪ್ರೇಮ ಕಥೆ (ವಿಚಿತ್ರ) ಬರೆಯುವ ವಿಚಾರ ಇತ್ತು...
ಈ ಕನ್ನಡ ಶಾಲೆಯ ಹಲವಾರು ಘಟನೆ ನೆನಪಾಗುತ್ತಿದೆ..
ಇನ್ನು ನಾಲ್ಕು ಐದು ಕಂತುಗಳಲ್ಲಿ ಇದು ಬರುತ್ತದೆ..
ಎಲ್ಲವೂ ಮಸ್ತ್ ಇದೆ..
"ಚಿನ್ನಾ ಬಾಳಲ್ಲಿ..."
ಈ ಹಾಡು ಕೇಳಿದ್ದರೆ ಈ ಲೇಖನ ಇನ್ನಷ್ಟು ಮನದಟ್ಟಾಗುತ್ತದೆ..
ನಮ್ಮ ಸಜ್ಜನ ನಟ, ಗಾಯಕ ರಾಜಕುಮಾರ್ ಅವರು ಹಾಡಿದ ಈ ಹಾಡಲ್ಲಿ...
ಈ ರೀತಿಯ ಸಾಲುಗಳಿವೆ...
ಶಂಕರ್ ಗುರು ತುಂಬಾ ಹಿಟ್ ಸಿನೇಮಾ..
ಈ ಹಾಡೂ ಕೂಡ..
ಆದರೆ ಇದರ ಕೆಲವು ಸಾಲುಗಳು ಹೀಗೆ ಇವೆ..
ಆ ಸಾಲುಗಳು ಆ ವಯಸ್ಸಿನಲ್ಲಿ ಎಷ್ಟು ಪರಿಣಾಮಕಾರಿಯಾಗಿತ್ತು ಅಂದರೆ..
ಈಗ ನಗು ಬರುತ್ತದೆ..!
ಈಗಿನ ಹಾಡುಗಳಿಗೆ ಏನಂತೀರಿ ??
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು...
ಪದ್ದು & ಯಂಕಟಿ ಜೊತೆ ಕತೆ ಹ್ಹಾ ಹ್ಹಾ ಹ್ಹಾ ಹ್ಹೀ ಹ್ಹೀ ಹ್ಹೀ ಪ್ರಕಾಶಣ್ಣ ...
ಕಾಯಿಸಬೇಡಿ ಜಾಸ್ತಿ ........ ನಮ್ಮನ್ನಲ್ಲಾ ...... ಪದ್ದು ಮತ್ತೆ ಯಂಕಟಿಯಾ
ಹ್ಹಾ ಹ್ಹಾ ಹ್ಹಾ ಹ್ಹೀ ಹ್ಹೀ ಹ್ಹೀ
ವಿನೋದ್....
ಕಾರಂತಜ್ಜನನ್ನು ಒಮ್ಮೆ ಕೆಲವರು ಕೇಳಿದ್ದರು...
"ಮಕ್ಕಳಿಗೆ ಸ್ಕೂಲಿನಲ್ಲಿ ಲೈಂಗಿಕ ಶಿಕ್ಷಣ ಅಗತ್ಯವೆ ?"
ಕಾರಂತಜ್ಜ ಕೋಪದಿಂದ ಸಿಡಿಮಿಡಿಗೊಂಡಿದ್ದರು...
"ನಿಮ್ಮ ಮನೆಯ ನಾಯಿ, ಎಮ್ಮೆ ಹಸುಗಳಿಗೆ ಲೈಂಗಿಕ ಶಿಕ್ಷಣ ಕೊಟ್ಟಿದ್ದೀರಾ ?
ಅವೆಲ್ಲ ಆ ವಯಸ್ಸಿಗೆ ತನ್ನಿಂದ ತಾನೆ ಬರುತ್ತದೆ..
ಅದು ಪ್ರಕೃತಿ ಸಹಜ...
ಅದನ್ನು ಕ್ಲಾಸಿನಲ್ಲಿ ಹೇಳುವ ಅಗತ್ಯ ಇಲ್ಲ"
ಇಂಥಹ ವಿಷಯಗಳನ್ನು ತುಂಟ ಮಕ್ಕಳ ಎದುರು ಪಾಠ ಮಾಡುವ ಕಷ್ಟ ಯಾವ ಟೀಚರಿಗೂ ಬೇಡ... !
ಇಂಥಹ ಒಂದು ಸನ್ನಿವೇಷ ನೆನಪಾಗಿದೆ...
ಮುಂದಿನ ಭಾಗಗಳಲ್ಲಿ ಬರೆಯುವೆ..
ಇಂಥಹ ವಿಷಯಗಳನ್ನು ಮಕ್ಕಳಿಗೆ ಹೇಗೆ ತಿಳಿ ಹೇಳ ಬೇಕು ??
ವಿನೋದ್ ನಿಮ್ಮ ಬ್ಲಾಗಿನಲ್ಲಿ ನೀವು ತೆಗೆದ ಸುಂದರ ಫೋಟೊಗಳನ್ನು ಹಾಕಿ...
ಇನ್ನು ಬ್ಲಾಗಿನ ಹೆಸರು..
"ಹೆಸರೇ.. ಬೇಡ.. !" ಅಂತ ಇಡಿ...
ಹ್ಹಾ...ಹ್ಹಾ..ಹ್ಹಾ..!
ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ha ha ha.. hehehe he... oh ho ho ho... enree yaarigu heLabedaa anda vishaya ... ellarigu heLi.. blog nalli baradu nanage hotte novaagovaregu nagotara madidrala ree... good one superb :)
ಹೆಗಡೇಜಿ ಸೂಕ್ಷ್ಮವಿಷಯ ಮುಂದಿನ ಕಂತುಗಳನ್ನು ಹೇಗೆ ನಿಭಾಯಿಸುವಿರಿ ಈ ಬಗ್ಗೆ ಕುತೂಹಲವಿದೆ.
ಅದೇನು ನನ್ನ ಮನೆ ಕಡೇ ಬಂದೇ ಇಲ್ಲ....
prakashanna,
chennagide..
ಪ್ರಕಾಶಣ್ಣ,
ಇದು ಒಂದ್ಥರಾ ಸಿನಿಮಾಗಿಂತ ಮುಂಚೆ ಬರೊ ತುಣುಕು ಇದ್ದ ಹಾಗಿದೆ. ಹ ಹ ಹ ಹ ಹ ಹ... ಚೆನ್ನಾಗಿದೆ ಪ್ರೇಮ ಪತ್ರದ ಕಥೆ. ಪದ್ದು ಮತ್ತು ಯಂಕಟನ್ನ ನೀವು ಮುಂದೆ ಏನ್ ಮಾಡ್ತೀರಿ ಅಂತ ಕಾದು ನೊಡ್ತೀವಿ.
ಪ್ರಕಾಶಣ್ಣ,
ಇಂತಹ ಕಿಲಾಡಿ ಕೆಲಸ ಚಿಕ್ಕವರಿದ್ದಾಗ ಹೆಗೆ ಪಟಕ್ಕಂತ ತಲೆಗೆ ಹೊಳೆದುಬಿಡುತ್ತಲ್ಲ. ನನ್ನು highschool ಲಿ ಇದ್ದಾಗ ನನ್ನ claass mate ನ love letter ಕದ್ದು ಓದಿದ್ದೆ. ನನಗೂ ಯಾರು ನಾಚಿಕೆ ಎಲ್ಲಾ ಬಿಟ್ಟು ಪಷ್ಟಿಗೆ(ಮೊದಲಿಗೆ) i love you ಹೇಳ್ತಾರೆ ಅಂತ question mark ತಲೆಯಲ್ಲಿ ಇತ್ತು. ನಿಮ್ಮ ಕತೆ ಓದಿ ನನಗೂ ನನ್ನ ಬಾಲ್ಯದ ಕಿಲಾಡಿ ನೆನಪಾಯ್ತು.
ಪದ್ದು -ಎಂಕಟ ನ ಪ್ರೇಮ ಕತೆಗೆ ನಿಮ್ಮ ಪೋಸ್ಟ್ ಮ್ಯಾನ್ ಕೆಲಸ ಚೆನ್ನಾಗಿತ್ತು.
ಮುಂದಿನ ಭಾಗ ಯಾವಾಗ ಪ್ರಕಟವಾಗುತ್ತೆ..
ಮಕ್ಕಳಿಗೆ ಕುತೂಹಲ ಜಾಸ್ತಿತಾನೇ!!!ಕೆಲವೊಮ್ಮೆ ಆವರ ಪ್ರಶ್ನೆಗಳಿಗೆ ಉತ್ತರ ಕೊಡುವುದೇ ಕಷ್ಟದ ವಿಷಯ ಆಗುತ್ತಲ್ಲ ...
ಚೆನ್ನಾಗಿದೆ, ನಿಮ್ಮ ಮತ್ತು ನಿಮ್ಮ ಕಿಲಾಡಿ ಬಳಗದ ಒ೦ದೊ೦ದೇ ಪ್ರಕರಣ ಗಳು ಹೊರಬರುತ್ತಿವೆ. ಮು೦ದಿನ ಭಾಗಕ್ಕೆ ಕಾದಿದ್ದೇನೆ.
ತುಂಬಾ ಇಷ್ಟ ಆತು ಪ್ರಕಾಶಣ್ಣ.ನಿನ್ನಿಂದ ನಿರೀಕ್ಷೆ ಮಾಡದು
ಈ ಟೈಪ್ ಸರಳ ಸುಂದರ ಹಾಸ್ಯ.ಹ್ಮ್ ಬರಲಿ ಬರಲಿ ಬೇಗ ಮುಂದಿನ ಪಾರ್ಟು :):)
ಪ್ರಕಾಶಣ್ಣ
ಅವರಿಬ್ಬರ ಲವ್ವು ನೋಡಲು ಮುಂದಿನ ವಾರದವರೆಗೆ ಕಾಯಬೇಕೆ :)
ತುಂಬಾ ಚೆನ್ನಾಗಿದೆ ನಿಮ್ಮ ಕಥೆ
ನಿಮ್ಮ ಶೈಲಿ ಬಹಳ ಸೊಗಸು
ಪ್ರಕಾಶ್ ಸರ್, ಲವ್ ಸ್ಟೋರೀ ತುಂಬಾ ಚೆನ್ನಾಗಿದೆ. ನಿಂಬೆ ಹುಳಿ ಪೆಪ್ಪೆರ್ಮೆಂಟ್ ನ ನೆನಪು ನನ್ನ ಬಾಯಲ್ಲಿ ನೀರು ತರಿಸಿತು. ಇತ್ತೆಚೆಗೆ ಯಾವ ಅಂಗಡಿಗಳಲ್ಲೂ ಯಾಕೋ ಸಿಗುವುದೇ ಇಲ್ಲ! ಪ್ರೇಮ ಒಂದು ಸಹಜ ಕುತೂಹಲ. ಪ್ರೇಮ ಎಂಬುವುದು ಭಾವವೋ, ಕ್ರಿಯೇಯೊ ಎಂಬಂತಹ ಕೌತುಕೋ ಆ ವಯಸ್ಸಿನಲ್ಲಿ ಸಹಜ. ನಾನು ಬರ್ತೀನಿ ಮರದ ಮೇಲೆ....! ಮುಂದೆ ಅವರಿಬ್ಬರೂ ಏನ್ಮಾಡ್ತಾರೆ ಅಂತ!
-Vinay.
my dear "prakash sir", papa venkat ge khandita paddi inda "kapala moksha" tappidalla ansute.....
nim childhood na ond prasanga sakatagide.
ರಂಜಿತಾ....
ಬಾಲ್ಯದ ಆಟ...
ಆ ಹುಡುಗಾಟ.. ಎಲ್ಲವೂ ಸುಂದರ...
ಜಗಜಿತ್ ಸಿಂಗ್ ಒಂದು ಘಜಲ್ ಇದೆ
"ಶೌರತ್ ಭೀ ಲೇಲೊ...
ದೌಲತ್ ಭೀ ಲೇಲೊ...
ಮಗರ್ ಮುಝುಕೊ ಲೌಟಾದೊ...
ಬಚಪನ್ ಕಾ ಸಾವನ್..
ವೊ ಕಾಗಜ್ ಕೀ... ಕಷ್ತಿ...
ಬಾರಿಷ್ ಕಾ ಪಾನಿ..."
ಕೇಳಿದ್ದೀರಾ ? ದಯವಿಟ್ಟು ಕೇಳಿ...
ನಾನು ರೋಗಿಷ್ಟನಾಗಿದ್ದರೂ...
ನನ್ನ ಬಾಲ್ಯ ಸುಂದರವಾಗಿತ್ತು...
ಇನ್ನು ನಾಲ್ಕೈದು ಭಾಗಗಳಲ್ಲಿ ಇನ್ನೂ ಬರಲಿದೆ...
ಪ್ರೋತ್ಸಾಹಕ್ಕೆ ಧನ್ಯವಾದಗಳು... ರಂಜಿತಾ ..
ಮಾನಸ...
ನಮ್ಮ ಗೆಳೆಯರು ಹಾಗಿದ್ದಾರೆ...
ಅವರಲ್ಲಿ ಎಂಥಹ ಗುಟ್ಟು ಉಳಿಸುವದು ?
ಪದ್ದಕ್ಕ..
ಯಂಕಟು ಸಂಗಡ ಹಾಡು ಹೇಳುತ್ತಾಳಾ ? ಅನ್ನುವದೇ .. ನನಗೆ ಕೆಟ್ಟ ಕುತೂಹಲ!
ಈ ಸಿನೇಮಾ ಪ್ರಭಾವ ಬಹಳವಾಗಿ ಬಿಟ್ಟಿತ್ತು...
ರೆಡಿಯೋದಲ್ಲಿ ಬರುವ ಹಾಡುಗಳನ್ನು ಕೇಳುತ್ತ...
ಅವುಗಳನ್ನು ಹಾಡುತ್ತ...
ಬಾಲ್ಯದಿಂದ ಹರೆಯ ಪ್ರವೇಶಿಸುವ ದಿನಗಳು ಅವು...
ಪದ್ದಕ್ಕನಿಗೆ ನನ್ನ ಮೇಲೆ ಬಹಳ ವಿಶ್ವಾಸ...
ನಂಬಿಕೆ... ಪ್ರೀತಿ ವಾತ್ಸ್ಯಲ್ಯ ಕೂಡ..
ನನಗೆ "ನಾನು ಹೀಗೆ ಮಾಡ ಬಾರದು ಅನ್ನಿಸಿದರೂ..
ಕುತೂಹಲ ತಡೆಯಲಾರದಾದೆ...
ಮುಂದೇನಾಗ ಬಹುದು ನೋಡೋಣ...
ಪದ್ದಕ್ಕ... ಯಂಕಟು ಇಷ್ಟವಾಗಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ಬರುತ್ತಾ ಇರಿ...
ಉಮೇಶ್ ದೇಸಾಯಿಯವರೆ...
ನಾನು ಕಳೆದ ವಾರ ನಿಮ್ಮ ಬ್ಲಾಗಿನಲ್ಲಿ ಪ್ರತಿಕ್ರಿಯೆ ಹಾಕಲಿಕ್ಕೆ ಪ್ರಯತ್ನಿಸಿದ್ದೆ...
ಆಗಲಿಲ್ಲ...
ಮತ್ತೊಮ್ಮೆ ಪ್ರಯತ್ನಿಸುವೆ..
ಈ ಲೇಖನ ನಿನ್ನೆ ಬರೆದು ಮುಗಿಸಿದಾಗ ಸ್ವಲ್ಪ ಅಳುಕು ಇತ್ತು...
ಓದುಗರು ಇದನ್ನು ಒಪ್ಪುತ್ತಾರಾ ?
ಅಶ್ಲೀಲ ಅನ್ನಿಸಿಬಿಡ ಬಹುದಾ ?
ಹಾಗಾಗಿ "ಚೇತನಾ" ರವರಿಗೆ ತೋರಿಸಿ ಅಭಿಪ್ರಾಯ ಕೇಳಿದೆ..
"ಏನೂ ಸಮಸ್ಯೆಯಿಲ್ಲ ಪೋಸ್ಟ್ ಮಾಡಿ" ಎಂದರು..
ಮಕ್ಕಳು ದೊಡ್ಡವರಾಗುತ್ತಿದ್ದಾರೆಂದು ಪಾಲಕರಿಗೆ ಅರಿವಿರುವದಿಲ್ಲ...
ತಮ್ಮ ಮಕ್ಕಳು ಮುಗ್ಧರು" ಅನ್ನುವ ನಂಬಿಕೆ..
ಮಕ್ಕಳಿಗೆ ತಮ್ಮ ಹಿರಿಯರು ಇಟ್ಟಿರುವ ನಂಬಿಕೆ ತಿಳಿದಿರುತ್ತದೆ...
ಆದರೂ..
ಇಂಥಹ ಘಟನೆಗಳು.. ಕುತೂಹಲದಿಂದ ನಡೇದು ಬಿಟ್ಟಿರುತ್ತದೆ...
ವಯಸ್ಸಿನ ಸಹಜ ಕುತೂಹಲ..
ಬಲು ಸೂಕ್ಷ್ಮ ವಿಚಾರ..
ಕಳೆದ ಬಾಲ್ಯದ ಘಟನೆ ಮೆಲುಕು ಹಾಕುವದರಲ್ಲೂ ಒಂದು ಥರಹದ ಖುಷಿಯಿರುತ್ತದೆ...
ದೇಸಾಯಿಯವರೆ..
ತುಂಬಾ..
ತುಂಬಾ..
ಧನ್ಯವಾದಗಳು...
ಪ್ರಕಾಶಣ್ಣ...
ಎರಡು ಮೂರು ಸಾರಿ ಓದಿ..... ಹೊಟ್ಟೆ ತುಂಬಾ ನಗೆಯಾಡಿ... ಈಗ ಕಾಮೆಂಟ್ ಬರೀತಾ ಇದ್ದೇನೆ..... ಪ್ರಕಾಶಣ್ಣ ಸಿಂಪ್ಲಿ ಸೂಪರ್...... ನಿಮಗೆ, ಯಾವುದೇ ವಿಷಯವನ್ನ ಹೇಳೋವಾಗ ಹೇಗೆ ಹೇಳಬೇಕು ಅಂತ ಗೊತ್ತು...... ಅಶ್ಲೀಲತೆ ಮತ್ತು ಹಾಸ್ಯದ ನಡುವಿನ ತೆಳು ಗೆರೆಯನ್ನು ಆಚೀಚೆ ಮಾಡದೆ ಬರೆದಿದ್ದೀರಿ..... ಅಭಿನಂದನೆಗಳು....... ಬಾಲ್ಯದ ಆಟೋಟಗಳ ಬಗ್ಗೆ ಮುಂದೆಯೂ ಬರೆಯಿರಿ......ಬಿಂದಾಸ್....
ಪ್ರಕಾಶಣ್ಣ ,
' ಒಂದು ಚೀಟಿಯ ಕಥೆ ' ಮಜಾ ಇದ್ದು . ನೀ ಹೇಳಿದ ಹಾಗೆ ಎಂಥ ಸಂಸ್ಕಾರವಂತ ಕುಟುಂಬವಾದರೂ ಇಂಥಾ ವಿಷಯಗಳ ಬಗ್ಗೆ ಕುತೂಹಲ ಇದ್ದೆ ಇರುತ್ತದೆ .
ಕೆಲವು ವಿಷಯಗಳ ಬಗ್ಗೆ ಕುತೂಹಲ ಸಹಜವೇ ಎನ್ನುವುದು ನನ್ನ ಅಭಿಪ್ರಾಯ .ಆದರೆ , ಅದು 'ಕೆಟ್ಟ ಕುತೂಹಲ'ವಾಗಿ ಬದಲಾದರೆ ಕಷ್ಟವಾಗಬಹುದು !
ಅಂತು ಚೀಟಿ ವ್ಯವಹಾರ ಮಾಡ್ತಿದ್ದೆ ಹೇಳಾತು ! ಹಾ ಹಾ ಹಾ .. ಬೇಗ ಮುಂದುವರಿಲಿ .
ಪ್ರಕಾಶ, ಭಾಳ ಭಾಳ ಸಮಾಜ ಸೇವೆ ಮಾಡಿದ್ದೀಯಾ ಬಿಡಪ್ಪಾ ನೀನು...ಹಹಹ...ಆದ್ರೆ ಎಡ್ವಟ್ಟು ಮಾಡ್ದೆ ನೋಡು...ನಿನ್ನ ಫ್ರೆಂಡ್ಸ್ ಗೆ ಹೇಳಿ..ಅದೂ ಸೀಕ್ರೇಟು ಅಂತ...ಅದೂ ಸರಿ ಬಿಡು ಹಂಗೆ ಹೇಳ್ದೆ ಇದ್ದಿದ್ರೆ ಮುಂದೆ ಪದ್ದು-ಎಂಕ್ಟು ..ಪ್ರೇಮಾಯಣ..ಲೈವ್ ಆಗಿ ನೋಡೋ ಪ್ರಯತ್ನ ಆಗ್ತಿರ್ಲಿಲ್ಲ ಅಲ್ವಾ...?? ನೋಡುವಾ....ಇನ್ನೂ ಏನು ಕಾದಿದೆಯೋ...
ಕ್ಷಣ ಚಿಂತನೆ.. ( ಚಂದ್ರು)
ಎಷ್ಟೇ ಸಂಸ್ಕಾರದ ಕುಟುಂಬವಾಗಿದ್ದರೂ...
ಮಕ್ಕಳಲ್ಲಿ ಇಂಥಹ ಕುತೂಹಲ ಸಹಜ...
ನಿಮ್ಮ ಪ್ರೋತ್ಸಾಹದ ನುಡಿ ನನಗೆ ಇನ್ನಷ್ಟು ಬರೆಯಲು ಉತ್ಸಾಹ ಕೊಟ್ಟಿದೆ...
ಧನ್ಯವಾದಗಳು...
ರಮೇಶ...
ನಿಮ್ಮ ಬ್ಲಾಗ್ ನೋಡಿದೆ...
ಬಹಳ ಸುಂದರ ಶಾಯಿರಿ ಬರೆದಿದ್ದೀರಿ... ಅಭಿನಂದನೆಗಳು...
ಇನ್ನು ಮುಂದೆ ನಾವು ಯಕ್ಷಗಾನ ಕುಣಿದದ್ದು, ಮಾಸ್ತರೊಂದಿಗೆ ತುಂಟತನ ಮಾಡಿದ್ದು.. ಕುಷ್ಟನ ಸಾಹಸ ಕಥೆಗಳು.. ಕುಷ್ಟ ಸ್ವಲ್ಪ ದೊಡ್ಡವನಾದ ಮೇಲೆ ಪ್ರೇಮಿಸಿದ್ದು, ಮದುವೆಯಾದದ್ದು.....
ಓಹ್ ಬಹಳ ಇದೆ..
ಆದರೆ ನನಗೆ ಕಥೆ ಬರೆಯುವ ಗೀಳು ಹುಟ್ಟಿದೆ...
ನಾನು ಬರೆದ ಕಥೆಗಳು ಚೆನ್ನಾಗಿಲ್ಲವೆ ?
ನಾಗು, ಪೆಟ್ಟಿಗೆ ಗಪ್ಪತಿ, ಕುಷ್ಟರಿಗಿಂತ ಚೆನ್ನಾಗಿಲ್ಲವೆ ?
ದಯವಿಟ್ಟು ತಿಳಿಸಿ..
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
prakasha, saNNava iddaga ee kelsanu madidyana?yangakke gottagdodange? aarambha cholo taganje.khare heLakare makkaLa manassina kutoohalada bagge navu vicharane madyagtille.open aagi intha vishyagla charche maadtville.Sankochvo,madivantkeno,eno adda battittu kaaNtu.
Kathe mundvarili, Best of luck!!k
ಚಿಕ್ಕ ವಯಸ್ಸಿನಲ್ಲಿ ಈ ರೀತಿ ಅನುಭವಗಳು ಬಹುಶಃ ಎಲ್ಲರಿಗೂ ಆಗಿರುತ್ತೆ. ನಿಮ್ಮ ಬರಹ ಓದಿದ ಮೇಲೆ ನಗುವಿನ ಜೊತೆ ಹಳೆಯ ಓಡೋಡಿ ಬಂದವು.
ತುಂಬಾ ಖುಷಿಯಾಯ್ತು ಮಾಮ.
ಹಾ ಪ್ರಕಾಶಣ್ಣಾ....
ಸಣ್ಣಕ್ಕಿದ್ದಾಗಾ ಭಾರೀ ಭಾನ್ಗಡೆ ಹುಡ್ರು ನಿಂಗೊ ಹೇಳಾತು....
ನೀ ಹೇಳ್ದಾಂಗೆಯಾ "ರಸವಿದೇ".
ಹಮ್...ಹೌದು ಈಗಂತೂ ಮಕ್ಳ ಟಿವಿಯಿಂದ ಸರಿಯಾದದ್ದನ್ನು ಮಾತ್ರ ಕಲಿಯುವಂತೆ ಮಾಡುವದೇ ಕಷ್ಟ.ಕಥೆ ಚೆನ್ನಾಗಿದ್ದು.
ಪ್ರಕಾಶಣ್ಣ,,
ನೀವು ಬರೆಯುವ ಬರಹಗಳಲ್ಲಿ ನವಿರಾದ ಹಾಸ್ಯ ಇರುವಂತಹ ಬರಹಗಳು ನನಗೆ ತುಂಬಾ ಇಷ್ಟ..ನಿಮ್ಮ ಕೆಲವೊಂದು ತಂಟೆಗಳನ್ನು ನನ್ನ ಯಜಮಾನರೂ ಹೇಳುತ್ತಿರುತ್ತಾರೆ..
ನಿಜ,, ಬಾಲ್ಯ ಬಹಳ ಸುಂದರ..ಆ ಮುಗ್ಧತೆ, ಜವಾಬ್ದಾರಿ ಹಾಗೂ ಒತ್ತಡ ಇಲ್ಲದ ದಿನಗಳು ಅವಿಸ್ಮರಣೀಯ..
ಅಂತೆಯೇ ಈಗ ನಮ್ಮ ಮಕ್ಕಳು ಪ್ರೀತಿ, ಪ್ರೇಮದ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದೂ ಅಷ್ಟೇ ಕಷ್ಟ..
ನಿಮ್ಮ ,ನಾಗು ಮತ್ತು ಬಳಗದ ಲವ್ ಲೆಟರ್ ಪ್ರಸಂಗ ಸೊಗಸಾಗಿದೆ. ಕೆಲವೊಮ್ಮೆ ಚಿಕ್ಕ-ಪುಟ್ಟ ವಿಷಯಗಳೂ ಸೀರಿಯಸ್ ಟ್ವಿಸ್ಟ್ ಪಡೆದುಬಿಡುತ್ತವೆ....ಇದು ಹೇಗೆ ? ..
Hahahahaha... Mundina kantige kaayuve..
ಪ್ರಕಾಶಣ್ಣ
ಓದುಗರಿಗೆ curiosity build ಮಾಡಿ , ಸರಿಯಾದ ಸಮಯಕ್ಕೆ ಕತೆ ನ ಸ್ಟಾಪ್ ಮಾಡುವ ನಿಮ್ಮ ಕತೆಗಾರಿಕೆ ಚೆನ್ನಾಗಿದೆ . ಇನ್ನು ಮುಂದೆ ಏನಾಗಬಹುದು ಅಂತ ಉಸಿರು ಬಿಗಿ ಹಿಡಿದು ಓದುವಾಗ ಅಲ್ಲೇ ನಿಲ್ಲಿಸಿ ಬಿಟ್ಟಿದ್ದು ನೋಡಿ ನಿಜವಾಗಲು ಕೋಪದ ಜೊತೆ ನಗು ಬಂತು ಹ ಹಃ ಹಹಹಹಾ ....ಮುಂದು ವರೆಸಿ ಪ್ಲೀಸ್ ..
ಮನಸಾರೆ
ಪದ್ದಿ ಮತ್ತು ಯಂಕಟನ ಪ್ರೇಮ ಪ್ರಕರಣ ಸಖತ್ತಾಗಿದೆ !ಆದರೆ ಸ್ಟೋರಿ ಕ್ಲೈಮಾಕ್ಸ್ ಹಂತದಲ್ಲೇ ನಿಲ್ಲಿಸಿಬಿಟ್ಟಿರಲ್ಲಾ ಡೈರೆಕ್ಟರ್ ಸಾಹೇಬರೇ!ನಮಸ್ಕಾರ ಪ್ರಕಾಶ್.ನಿಂಬೆ ಹುಳಿ ಪೆಪ್ಪೆರ್ ಮೆಂಟ್ ಜ್ಞಾಪಿಸಿ ನಮ್ಮ ಬಾಲ್ಯದ ಕನಸುಗಳ ಬಿಚ್ಚಿಟ್ಟಿರಿ.ಮುಂದಿನ ಕಂತಿಗಾಗಿ ಕಾತುರದಿಂದ ಕಾಯುತ್ತಿದ್ದೇನೆ ! ನನ್ನ ಬ್ಲಾಗಿಗೂ ಒಮ್ಮೆ ಬನ್ನಿ .
ಸಾಗರಿ....
ನಿಮ್ಮ ಬ್ಲಾಗಿನ ಕವನ ಓದಿ ನಾನು ಕ್ಷಣ ಕಾಲ ಸುಮ್ಮನೆ ಕುಳಿತು ಬಿಟ್ಟಿದ್ದೆ...
ಬಹಳ ಮಾರ್ಮಿಕವಾಗಿದೆ... ಅಭಿನಂದನೆಗಳು...
ಆ ವಯಸ್ಸಿನಲ್ಲಿ ಅದು ಪ್ರೇಮವಲ್ಲ...
ಆಕರ್ಷಣೆ...
ವಯಸ್ಸಿನ ಸಹಜ ಕುತೂಹಲ
ಬಾಲ್ಯದಾಟಿ ಹರೆಯದ ಪ್ರವೇಶಿಸುವ ದೇಹದ ಪರಿಣಾಮ...
ಹರೆಯ ಪ್ರವೇಶಿಸುವ ದಿನಗಳ ಎಳೆಯನ್ನು ಬಿಡಿಸಿಡುವ ಪ್ರಯತ್ನ ಇದು..
ನಿಮ್ಮೆಲ್ಲರ ಪ್ರೋತ್ಸಾಹ ನಿಜಕ್ಕೂ ಉತ್ಸಾಹ ಕೊಟ್ಟಿದೆ..
ಧನ್ಯವಾದಗಳು ಸಾಗರಿ...
ಬರುತ್ತಾ ಇರಿ...
ಪ್ರಕಾಶ,
ನಿಮ್ಮ ಹದಿ ಹರೆಯದ ಲೀಲೆಗಳು ಸ್ವಾರಸ್ಕಕರವಾಗಿರುತ್ತವೆ. ಮುಂದಿನ ಭಾಗಕ್ಕಾಗಿ, ನಾನೂ ಈಶಾಡಿ ಮರದ ಬಳಿಗೆ ಕಾಯುತ್ತಿರುತ್ತೇನೆ!
ಶಶಿಯವರೆ...
ಮಕ್ಕಳ ಕುತೂಹಲದ ಪ್ರಶ್ನೆಗಳಿಗೆ ಕೆಲವೊಮ್ಮೆ ಉತ್ತರಾನೆ ಇರೋದಿಲ್ಲ...
ಇಲ್ಲಿ ನನ್ನ ಚಿಕ್ಕಮ್ಮ (ನನ್ನನ್ನು ಸಾಕಿದವರ ಪ್ರತಿಕ್ರಿಯೆ ಇದೆ, "ಗಂಗಾ" ಅಂತ.. ದಯವಿಟ್ಟು ಓದಿ..)
ನಾವು ಮಕ್ಕಳನ್ನ ಪಾಲಕರಾಗಿ ನೋಡುತ್ತೇವೆಯೆ ಹೊರತು...
ಮಕ್ಕಳಾಗಿ ಅಲ್ಲ...
ಅವರ ಮನದಲ್ಲೇನಿದೆ ಅಂತ ಯೋಚಿಸುವದೇ ಇಲ್ಲ...
ನನ್ನ ಪುಣ್ಯ..
ನನಗೆ ತಂದೆಯಿಲ್ಲದಿದ್ದರೂ..
ಒಳ್ಳೆಯ ಚಿಕ್ಕಪ್ಪ ಚಿಕ್ಕಮ್ಮ ಇದ್ದರು.. ಇದ್ದಾರೆ..
ಅವರಿಗೆ ನಾನು ಚಿರ ಋಣಿ...
ನನ್ನ ಕುತೂಹಲಗಳನ್ನು ತೃಪ್ತಿ ಪಡಿಸಿದ್ದಲ್ಲದೆ..
ನನ್ನಲ್ಲಿ ಕನಸುಗಳ ಮರ ನೆಟ್ಟು.., ಬೆಳೆಸಿದರು.. ಪೋಷಿಸಿದರು..
ಅವರು ಆದರ್ಶ ಪಾಲಕರು..
ಶಶಿಯವರೆ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..
ಬರುತ್ತಾ ಇರಿ..
ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗಳು.. ನನಗೆ ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ...
ಪರಾಂಜಪೆಯವರೆ...
ಬಾಲ್ಯದ ದಿನಗಳಲ್ಲಿ ನಾನು ಬಹಳ ವೀಕ್ ಆಗಿದ್ದೆ..
ನನ್ನ ಗೆಳೆಯರು ನನಗೆ ಬಹಲ ಸಪೋರ್ಟ್ ಮಾಡುತ್ತಿದ್ದರು..
ನನಗೆ ನಾನು ವೀಕ್ ಇದ್ದೇನೆ ಅಂತ ನನಗೆ ಅನ್ನಿಸಿರಲೇ ಇಲ್ಲ...
ರಘು, ದಿವಸ್ಪತಿ, ಸುಬ್ರಾಯ, ಗಪ್ಪತಿ, ನಾಗು, ಕುಷ್ಟ..
ಅವರ ಪಟ್ಟಿ ಉದ್ದವಾಗಿದೆ..
ಸುಬ್ರಾಯ ಹಾಗೂ ದಿವಸ್ಪತಿ ಓದುವದರಲ್ಲಿ ತುಂಬಾ ಬುದ್ಧಿವಂತರಾಗಿದ್ದರು..
ನಾನು ಆರಕ್ಕೇ ಏರಿಲ್ಲ...
ಮೂರಕ್ಕೆ ಇಳಿಯಲಿಲ್ಲ ಅನ್ನೊ ಹಾಗಿದ್ದೆ...
ಬಾಲ್ಯದ ದಿನಗಳನೆನಪು ಬಲು ಸೊಗಸು...
ಪದ್ದಿ, ಯಂಕಟು ಲವ್ ಪ್ರಸಂಗ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ಪ್ರಿಯ.. ಗೌತಮ್..
ನಿಜ ಹೇಳಲಾ ?
ನನಗೆ ಕಥೆ ಬರೆಯುವದೆಂದರೆ ಬಹಳ ಇಷ್ಟವಾಗುತ್ತಿದೆ..
ಅಲ್ಲಿ ಬೇರೊಂದು ಪ್ರಪಂಚ ಸೃಷ್ಟಿಸಿ..
ಕುಳಿತು ವಿಹರಿಸ ಬಹುದು...
ಬೇಕಾದ ತಿರುವು, ಮುರುವು ಕೊಡುತ್ತ ಡ್ರೈವ್ ಮಾಡ ಬಹುದು..
ಇಲ್ಲಿ ಹಾಗಿಲ್ಲ..
ಅಂಥಹ ಸ್ವಾಂತ್ರ್ಯವಿಲ್ಲ..
ನಾನು ಬರೆವ ಕಥೆಗಳೇಕೆ....
ಚೆನ್ನಾಗಿಲ್ಲವೆ ?
ಈ ಬಾಲ್ಯ ತುಂಟತನಗಳು, ಹೈಸ್ಕೂಲ್ ದಿನಗಳು.
ಕಾಲೇಜು ದಿನಗಳ ಪೆಟ್ಟಿಗೆ ಗಪ್ಪತಿ - ನಯನಾ,
ನಾಗು- ರಾಜಿಯರ ಪ್ರೇಮ ಪ್ರಸಂಗ ಬರೆದ ಮೇಲೆ ಅಲ್ಲಿ ಮತ್ತೆ ಏನಿಲ್ಲ...
ಆಗ ಬಹುಷಃ ಮತ್ತೆ ಕಥೆಗಳಿಗೇ ಮರಳಿ ಬರಬೇಕಾಗುತ್ತದೆ..
ಯಂಕಟು, ಪದ್ದಿ ಇಷ್ಟವಾಗಿದ್ದಕ್ಕೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...
ಸಾಗರದಾಚೆಯ ಇಂಚರ (ಗುರುಮೂರ್ತಿ)
ಆ ವಯಸ್ಸಿಗೆ ಸರಿ ತಪ್ಪುಗಳ ಅರಿವಿರುವದಿಲ್ಲ...
ಬರಿ ಕುತೂಹಲ...
ಚಿತ್ರಾಂಜಲಿಯವರು ಹೇಳಿದ ಹಾಗೆ ಅದು ಕೆಟ್ಟ ಕುತೂಹಲವಾಗ ಬಾರದಷ್ಟೆ...
ಪ್ರೋತ್ಸಾಹಕ್ಕೆ ಧನ್ಯವಾದಗಳು...
ವಿನಯ್...
ಆಗ ಐದು ಪೈಸೆಗೆ ಎಂಟು ನಿಂಬೆ ಹುಳಿ ಪೆಪ್ಪರಮೆಂಟು ಸಿಗುತ್ತಿತ್ತು...
ಹುಳಿ ಹುಳಿಯಾಗಿ..
ಸಿಹಿ..ಸಿಹಿಯಾಗಿ..
ನಿಂಬೆಹಣ್ಣಿನ ಪರಿಮಳದೊಂದಿಗೆ ಬಲು ರುಚಿಯಾಗಿರುತ್ತಿತ್ತು...
ನಿಜ ಈಗ ಅದು ಸಿಗುತ್ತಿಲ್ಲ...
ಬಹುರಾಷ್ಟ್ರೀಯ ಕಂಪನಿಗಳು ಬಂದಮೇಲೆ ನಮಗೆ
ನಮ್ಮ ಮಕ್ಕಳಿಗೆ ಹಲ್ಲು ಹಾಳಾಗುವ
ಕಹಿ ಚಾಕೋಲೇಟಿನ ರುಚಿ ಹಿಡಿಸಿದ್ದಾರೆ...
ಆಗಿನ ಸಮೃದ್ಧಿ..
ಮುಗ್ಧತೆ.. ನಾವು ಕಳೆದುಕೊಳ್ಳುತ್ತಿದ್ದೇವೆ...
ಈಗಿನ ಭಾಷೆಯಲ್ಲಿ ಹೇಳುವದಾದರೆ "ನಾಗರಿಕ"ರಾಗುತ್ತಿದ್ದೇವೆ...
ಪದ್ದಿ, ಯಂಕಟು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ಬರುತ್ತಾ ಇರಿ...
ಪಾಲ....
ಮುಂದಿನ ಆದಷ್ಟು ಬೇಗ ಹಾಕುವೆ...
ಮುಂದೆ ಏನಾಯಿತೆಂದು ಬಹಳಷ್ಟು ಊಹೆಗಳು ಬಂದಿವೆ...
ಅವುಗಳಲ್ಲಿ ಯಾವುದೂ ಅಲ್ಲ...!!
ದಯವಿಟ್ಟು ಸ್ವಲ್ಪ ಕಾಯಿರಿ...
ನಿಂಬೆ ಹುಳಿ ಪೆಪ್ಪರಮೆಂಟು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ಪುಷ್ಪಾರವರೆ...
ನನ್ನ ಬ್ಲಾಗಿಗೆ ಸ್ವಾಗತ...
ಮುಂದೆ ಏನಾಯಿತೆಂದು ಬಹಳಷ್ಟು ಜನ ತಮ್ಮ ಅನಿಸಿಕೆ ತಿಳಿಸಿದ್ದಾರೆ...
ಅವರ ಯಾವ ಊಹೆನೂ ಸರಿಯಾಗಿಲ್ಲ...
ಲವ್ ಲೆಟರ್ ದುರುಪಯೋಗ ಪಡಿಸಿಕೊಂಡರೆ ನಿಂಬೆಹುಳಿ ಪೆಪ್ಪರಮೆಂಟು ಕೈತಪ್ಪಿಹೋಗಬಹುದೆಂಬ ಹೆದರಿಕೆ...
ಅಲ್ಲಿ...
ಪದ್ದಿ, ಯಂಕಟು ಪ್ರೇಮಗೀತೆ ಹಾಡ ಬಹುದೆ ? ಎನ್ನುವ ಕೆಟ್ಟ ಕುತೂಹಲ !
ಬಹಳ ದೊಡ್ಡ ಸಂದಿಗ್ಧದಲ್ಲಿ ನಾನಿದ್ದೆ...
ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...
ಬರುತ್ತಾ ಇರಿ...
Love story Live agi nodo program, hmm chennagide, waiting for the next part.
ಪ್ರಕಾಶ್ ಸರ್...
ಪದ್ದು - ಎಂಕಟ ಲವ್ ಸ್ಟೋರಿ!! ತು೦ಬಾ ಚೆನ್ನಾಗಿದೆ...ಅದರಲ್ಲಿ ನಿಮ್ಮ ಪಾತ್ರ ಸೂಪೆರ್........ಮು೦ದೆ ನಿಮಗೆ ಪೆಪ್ಪೆರ್ಮೆ೦ಟೊ..ಅಥವಾ ಪನಿಶ್ಮೆ೦ಟೊ....ಕಾಯ್ತಾ ಇದೀವಿ............ಬೇಗ ಮು೦ದಿನ ಭಾಗ ಬರಲಿ.............
ದಿನಕರ (ದಿನು)
ಇದೀಗ ಶಂಕರ್ ಗುರು ಸಿನೇಮಾದ..
"ಚಿನ್ನಾ ಬಾಳಲ್ಲಿ.."ಹಾಡಿನ ವಿಡಿಯೋದ ಲಿಂಕನ್ನು ಬ್ಲಾಗಿನಲ್ಲಿ ಕೊಟ್ಟಿದ್ದೇನೆ..
ದಯವಿಟ್ಟು ಕೇಳಿ...
ನಮ್ಮ ರಾಜಕುಮಾರ್ ಇಂಥಹ ಹಾಡನ್ನೂ ಹಾಡಿದ್ದಾರೆ..
ಈ ಹಾಡು ಅಂದು ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಿತು..ಅನ್ನುವದು...
ಇಲ್ಲಿ ಎಲ್ಲವೂ ಸೂಚ್ಯವಾಗಿದೆ...
ಆದರೆ ಈಗಿನ ಹಾಡುಗಳು ಎಲ್ಲವೂ ಮುಕ್ತ... ಮುಕ್ತ...
ನಮ್ಮ ಮಕ್ಕಳನ್ನು ದೇವರೇ.. ಕಾಪಾಡ ಬೇಕು..
ಕಾಲಾಯ ತಸ್ಮೈ ನಮಃ....
ನಿಮ್ಮ ಪ್ರೀತಿಗೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...
ಚಿತ್ರಾ...
ಒಂದು ಚೀಟಿಯ ಕಥೆ ಇನ್ನೂ ಇದೆ...
ನಮ್ಮ ಸಿನೇಮಾಗಳಲ್ಲಿ ಪ್ರೇಮ ವ್ಯಕ್ತ ಪಡಿಸುವಾಗ ಈ ಹಾಡು ಬಳಸುವ ಪರಿಪಾಠ ಹೇಗೆ ಬೆಳೆಯಿತೊ... ಗೊತ್ತಿಲ್ಲ..
ನಾನು ಸಣ್ಣವನಿದ್ದಾಗ ಪ್ರೇಮವಾದಾಗ ಹಾಡು ಹೇಳುತ್ತಾರೆ..
ಅದು ಕಡ್ಡಾಯ ಅಂದು ಕೊಂಡಿದ್ದೆ...
ಹ್ಹಾ..ಹ್ಹಾ... !
ಹಳೆಯ ಸಿನೇಮಾಗಳಲ್ಲಿ ಪ್ರೇಮ ಹುಟ್ಟಿದಾಗ ಪರವಾಗಿಲ್ಲವಾಗಿತ್ತು..
ಸಭ್ಯರಾಗಿ ಮರ ಸುತ್ತುತ್ತ..
ಹಾಡು ಹೇಳಿಸುತ್ತಿದ್ದರು...
ಆದರೆ
ಈಗ...ಪ್ರೇಮ ಹುಟ್ಟಿದಾಗ... !!!!
ಅಬ್ಭಾ.. !
ಎಂಥಹ ಕಸರತ್ತು...
ಬ್ರೇಕ್ ಡ್ಯಾನ್ಸು... !
ಅಂಥಹ ಪ್ರೇಮದ ಕಸರತ್ತು ಮಾಡಿದರೆ ಎರಡು, ಮೂರುದಿನ ಮೇಲೆಳುವದಿಲ್ಲ...
ಮೈಕೈ ನೋವು ಬಂದು ಹಾಸಿಗೆಯಲ್ಲ್ಲಿ ಬಿದ್ದಿರ ಬೇಕು...
ಸಾಮಾನ್ಯ ಜನರ ಬಳಿ ಅಂಥಹ ಪ್ರೇಮ ಮಾಡಲಿಕ್ಕೇ ಸಾಧ್ಯವೇ.. ಇಲ್ಲ... ಅಲ್ಲವಾ?
ಹ್ಹಾ..ಹ್ಹಾ...!
ಸಿನೇಮಾದಲ್ಲಿ ಯಾಕೆ ಸಹಜವಾದ ಪ್ರೀತಿ, ಪ್ರೇಮ..
ಕಣ್ಣಲ್ಲಿ ವ್ಯಕ್ತ ಪಡಿಸುವ ಭಾವ.. ತೋರಿಸ ಬಾರದು ?
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
ಜಲನಯನ ( ಅಝಾದ್ )
ನನಗೆ ತುಂಬಾ ಕುತೂಹಲವಿದ್ದದ್ದು "ಯಂಕಟು, ಪದ್ದಿ" ಹಾಡು ಹೇಳುತ್ತಾರೆ...
ಅದು ಹೇಗೆ ?
ಸಿನೇಮಾ ಥರಹನೆ ?
ಎಂದೆಲ್ಲಾ ಸಂಶಯಗಳು... ತಲೆಯಲ್ಲಿ ಕೊರೆಯುತ್ತಿತ್ತು..
ಹಾಡು ಹೇಳುವದ್ದು ನೋಡುವ ಕೆಟ್ಟ ಕುತೂಹಲದಿಂದ ನಾಗು ಹೇಳಿದ ಚೀಟಿ ವ್ಯವಹಾರಕ್ಕೆ ಒಪ್ಪಿಕೊಂಡೆ..
ನಿಂಬೆ ಹುಳಿ ಪೆಪ್ಪರಮೆಂಟು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ... ದೋಸ್ತ್ !
ಗಂಗಾ (ಚಿಕ್ಕಮ್ಮ)
ಹೌದು..
ನಿಮಗೆಗೊತ್ತಾಗದ ಹಾಗೆ ಇದೆಲ್ಲ ಮಾಡಿದ್ದಿನಿ...
ಬಹುಷಃ ನಿಮ್ಮೆದುರಿಗೆ ಈಗ ಧೈರ್ಯವಾಗಿ ಹೇಳುತ್ತಿದ್ದೇನೆ..
ಒಬ್ಬ ಮಗನ ತಂದೆಯಾದ ಮೇಲೆ ಆ ಧೈರ್ಯ ಬಂದಿರ ಬಹುದು...
ಅದು ಧೈರ್ಯ ಹೆದರಿಕೆ ಪ್ರಶ್ನೆಗಿಂತ..
ಅದು ನಿಮ್ಮ ಮೇಲಿನ ಗೌರವ...
ನೀವು ಹೇಳಿದ್ದು ನಿಜ..
ನಾವು ಮಕ್ಕಳ ಕುತೂಹಲದ ಬಗ್ಗೆ ವಿಚಾರವನ್ನೇ ಮಾಡುವದಿಲ್ಲ..
ಅಲಕ್ಷಿಸಿ ಬಿಡುತ್ತೇವೆ..
ನಮ್ಮ ದೈನಂದಿನ ವ್ಯವಹಾರದಲ್ಲಿ ಮುಳುಗಿಹೋಗುತ್ತೇವೆ...
ಇಂಥಹ ವಿಷಯಗಳ ಬಗ್ಗೆ ಚರ್ಚೆಯನ್ನೂ ಸಹ ಮಾಡುವದಿಲ್ಲ..
ನೀವು ಹೇಳೀದ ಹಾಗೆ ಮಡಿವಂತಿಕೆಯೂ ಕಾರಣವಿರಬಹುದು...
ಆದರೆ ನೀವು, ಚಿಕ್ಕಪ್ಪ ಇದಕ್ಕೆಲ್ಲ ಅಪವಾದ...
ನನ್ನ ಕುತೂಹಲ ತಣಿಸಿದ್ದಲ್ಲದೆ...
ನನ್ನಲ್ಲಿ ಕನಸುಗಳ ಬೀಜಮೊಳೆಸಿದ್ದೀರಿ..
ನನ್ನ ಹುಚ್ಚುವಿಚಾರಗಳಿಗೆ ಒಂದು ಸರಿಯಾದ ಮಾರ್ಗದರ್ಶನ ಕೊಟ್ಟಿದ್ದೀರಿ..
ಥ್ಯಾಂಕ್ಸ್ ಅನ್ನೋ ಶಬ್ಧಕ್ಕೆ ...
ಅರ್ಥವೇ ಇಲ್ಲದಷ್ಟು ಪ್ರೋತ್ಸಾಹ ನನಗೆ ಕೊಟ್ಟಿದ್ದೀರಿ..
ನನ್ನ ಬಳಿ ಬೇರೆ ಶಬ್ಧಗಳಿಲ್ಲ...
ಹಾಗಾಗಿ "ಧನ್ಯವಾದಗಳು"
ಕತೆ ಚೆನ್ನಾಗಿದೆ . ಮು೦ದಿನ ಕ೦ತಿಗೆ ಕಾಯ್ತಾ ಇದ್ದೇವೆ.
ನಾಗರಾಜ್.. (ಎನಾರ್ಕೆ)...
ಬಾಲ್ಯವೆಂದರೆ..
ಹೂವಿನಂಥಹ ದಿನಗಳು...
ಸಿಹಿ ನೆನಪುಗಳು..
ಮಧುರ...
ಸುವಾಸನೆಯಂತೆ...
ಇಶ್ಟವಾಗಿದ್ದಕ್ಕೆ ಧನ್ಯವಾದಗಳು...
ಬರುತ್ತಾ ಇರಿ..
ಮೌನಿ.. (ಗುರು)
ಬಡಕಲು..
ಅಶಕ್ತತೆಯ ದೇಹವಾಗಿದ್ದರೂ..
ನನ್ನ ಗೆಳೆಯರು...
ನನ್ನನ್ನು ಸುಮ್ಮನೆ ಇರಲು ಬಿಡಬೇಕಲ್ಲ...
ಸಹಜವಾಗಿ ತುಂಟತನವೂ ಇತ್ತು...
"ರಸವಿದೇ..." ಇದರ ಬಗೆಗೆ ಇನ್ನೊಮ್ಮೆ ಬರೆಯುವೆ...
ಈಗಲೇ ಬೇಡ... ಅಲ್ಲವಾ ?
ಇಷ್ಟಪಟ್ಟಿದ್ದಕ್ಕೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...
ಆಕಾಶ ಬುಟ್ಟಿ...
ನನ್ನ ತುಂಟತನ ಹಾಗಿರಲಿ...
ನಿಮ್ಮ ಯಜಮಾನರು ಕಡಿಮೆ ಏನಿರಲಿಲ್ಲ...
ಆತ ಮನೆಯಲ್ಲಿರದೆ...
ಯಾವಾಗಲೂ ನಮ್ಮ ರೂಮಿನಲ್ಲೇ ಇರುತ್ತಿದ್ದ...
ನಿಮ್ಮ ಯಜಮಾನರ ತುಂಟನದ ಘಟನೆಗಳು ನನಗೆ ನೆನಪಿವೆ..
ಮುಂದೆ ಬರೆಯುವೆ...
ಹ್ಹಾ..ಹ್ಹಾ..!
ಸಿರ್ಸಿಯದಿನಗಳ ಬಗೆಗೆ ಇನ್ನೂ ಬಂದಿಲ್ಲ..
ಬರೆದಿಲ್ಲ..
ಒಂದು ಮಾತು..
ನಿಮ್ಮ ಯಜಮಾನರು ತುಂಬ ಸಭ್ಯ, ಒಳ್ಳೆಯ ಮನುಷ್ಯ...
ಬಹುಷಃ ನಮ್ಮ ಒಡನಾಟದಲ್ಲಿ ತುಂಟನಾದ ಅನ್ನಿಸುತ್ತದೆ...
ಲೇಖನ ಇಷ್ಟಪಟ್ಟಿದ್ದಕ್ಕೆ.. ಧನ್ಯವಾದಗಳು...
ಸುಬ್ರಮಣ್ಯ...
ಬಾಲ್ಯದ ತುಂಟತನಗಳು...
ಹಿರಿಯರು ಕಿವಿಹಿಡಿಯುವಲ್ಲೇ ಹೆಚ್ಚಾಗಿ ಕೊನೆಗೊಳ್ಳುತ್ತವೆ...
ಹಿರಿಯರಿಗೆ ಕಿರಿಯರು ಅರ್ಥವಾಗುವದಿಲ್ಲವಲ್ಲ...
ಮತ್ತು ಹಿರಿಯರು ದೊಡ್ಡವರಾಗಿ...
ತಮ್ಮ ಬಾಲ್ಯವನ್ನು ಮರೆತು ಬಿಟ್ಟಿರುತ್ತಾರೆ... ಅದಕ್ಕೆ...
ಸಧ್ಯದಲ್ಲೆ ಮುಂದಿನ ಭಾಗ ಬರೆಯುವೆ...
ಬನ್ನಿ ಈಶಾಡಿ ಮಾವಿನ ಮರದ ಬಳಿ...
ಬರುತ್ತೀರಲ್ಲ ?
ಪ್ರೋತ್ಸಾಹಕ್ಕೆ ಧನ್ಯವಾದಗಳು...
ರವಿಕಾಂತ್...
ಆ ಅಶ್ವತ್ಥ ಮರ ಹೇಗಿತ್ತು ಅಂದರೆ...
ಆ ಈಶಾಡಿ ಮಾವಿನ ಮರದ ಹತ್ತಿದರೆ ಮಾತ್ರ ಕಾಣುತ್ತಿತ್ತು...
ಅಲ್ಲಿಂದ ಈಶಾಡಿ ಮರ ಸರಿಯಾಗಿ ಕಾಣುತ್ತಿರಲಿಲ್ಲ..
ನಾಗು ಸರಿಯಾದ ಲೆಕ್ಕಾಚಾರವನ್ನೇ ಮಾಡಿದ್ದ...
ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ಒಳ್ಳೆಯದು ಅಲ್ಲವೆ ?
ಪ್ರತಿಕ್ರಿಯೆಗೆ ಧನ್ಯವಾದಗಳು...
ಚಿಕ್ಕವರಿದ್ದಾಗ ಲವ್ ಅಂದ್ರೆ ಏನು ಅಂತ ಪ್ರಶ್ನೆ ಬಂದಾಗೆಲ್ಲಾ ನಾವೂ ಕೂಡ ಹೀಗೇ ಏನೋ ಒಂದು ಸಮಜಾಯಿಶಿ ಕೊಟ್ಟು ಕೊಳ್ತಿದ್ವಿ.
ಕೆಲವು ಕ್ಷಣ ಬಾಲ್ಯದ ತುಂಟಾಟಗಳು ನೆನಪಿಗೆ ಬಂದು ಹೋದವು.
ಪ್ರಕಾಶ್ ಸರ್,
ಬಾಲ್ಯದಲ್ಲಿನ ಕುತೂಹಲ ತುಂಟಾಟ, ತರಲೇ...ಎಲ್ಲವೂ ಒಟ್ಟಿಗೆ ಇರುವಾಗ ನಡುವೆ ಲವ್ವು ಸೇರಿಕೊಂಡರೆ ಅನ್ನುವ ಕಾನ್ಸೆಪ್ಟೇ ಸೂಪರ್....ಚೆನ್ನಾಗಿದೆ ಮುಂದುವರಿಸಿ...
haahaha oLLe kathe tandiddeeri chennagide Love pari munduvarisi
tumba channagide...tamashe yagide...chalana chitrada dushparinaama da baggeyu ide...amele enaaguttade munduvarisi...
Post a Comment