Wednesday, March 17, 2010

ಇಷ್ಟಾರ್ಥ.......

ನಿಮಗೊಂದು ವಿಷಯ ಹೇಳಿ  ಬಿಡಬೇಕು...


ನಾನು ಆಸ್ತಿಕನಲ್ಲ...


ದೇವರು ಇದ್ದಾನೆಯೆ...?


ಇಲ್ಲವೆ...?


ಎರಡಕ್ಕೂ ಉತ್ತರ ಪ್ರಶ್ನಾರ್ಥಕ ಚಿಹ್ನೆಗಳೇ....!



ದೇವರ ಬಗ್ಗೆ ಏನೂ ಗೊತ್ತಿಲ್ಲ...



ಹಾಗಾಗಿ ನಾನು  ದೇವರನ್ನು ಪೂಜಿಸುವದಿಲ್ಲ...


ಪ್ರಾರ್ಥಿಸುವದಿಲ್ಲ...


ಕಳೆದ ವರ್ಷ ನನ್ನ ಕಾರ್ ಅಪಘಾತದಲ್ಲಿ ಸಾಯುತ್ತ.. ಸಾಯುತ್ತ ಬದುಕಿದೆ...


ಆಗಲೂ ಸಹ  ನಾನು ದೇವರನ್ನು ಪ್ರಾರ್ಥಿಸಿಲ್ಲ...


ನನ್ನ ಇಲ್ಲಿಯವರೆಗಿನ ಬದುಕಲ್ಲಿ ಎಷ್ಟೇ ಕಷ್ಟ, ನೋವು ಬಂದರೂ...
ನನಗೆ ದೇವರನ್ನು ಬೇಡಿಕೊಳ್ಳಬೇಕು ಅಂತ ನನಗೆ ಅನ್ನಿಸಿಯೇ ಇಲ್ಲ...


ಅಪರಾಧಿ ಮನೋಭಾವನೆ ದೈವ ಭಕ್ತಿಗೆ ಕಾರಣ ಅನ್ನುವದು ನನ್ನ ಬಲವಾದ ನಂಬಿಕೆ..


ನಾವು ನಮ್ಮ ಮನಸಾಕ್ಷಿಗೆ, ತಕ್ಕಂತೆ..
ಯಾರಿಗೂ ಅನ್ಯಾಯ.., ತೊಂದರೆ ಮಾಡದೇ ಬದುಕಿದ್ದಲ್ಲಿ...
ದೇವರ ಅವಶ್ಯಕತೆ ಇಲ್ಲವೆನ್ನುವದು ನನ್ನ ಸ್ಪಷ್ಟವಾದ  ಅಭಿಪ್ರಾಯ..


ಆದರೆ ನನ್ನ ಹೆಂಡತಿ ಬಹಳ ದೈವ ಭಕ್ತೆ....


ಹರಕೆ, ಉಪವಾಸ, ಭಜನೆ ಎಲ್ಲವನ್ನೂ ಮಾಡುತ್ತಾಳೆ...


ಸಿಹಿ ತಿಂಡಿಗಳನ್ನು ರುಚಿಕಟ್ಟಾಗಿ ಮಾಡಿ..
ನೈವೇದ್ಯ ಮಾಡಿ.. ನನಗೂ ಬಡಿಸುತ್ತಾಳೆ...


ಇದಕ್ಕೆಲ್ಲ ನನ್ನ ಅಭ್ಯಂತರ ಏನೂ ಇಲ್ಲ...


ಇಂದೂ ಸಹ ಬೆಳಿಗ್ಗೆ ದೇವರ ಪೂಜೆ ಮಾಡಿಯೇ ನಾಷ್ಟಾಕ್ಕೆ ತಯಾರಿ ಮಾಡುತ್ತಿದ್ದಳು..


ನನಗೆ ತಡವಾಗುತ್ತಿತ್ತು...
ಕೋಪ, ಸಿಟ್ಟು, ಟೆನ್ಷನ್    ......!


ಆದರೆ ನಾನು ನನ್ನ ಹೆಂಡತಿಗೆ ಬಯ್ಯುವದಿಲ್ಲ...
ನನ್ನಾಕೆಗೆ ಬಯ್ಯಲು, ಕೂಗಲು ನನ್ನಿಂದ ಆಗುವದಿಲ್ಲ..


ಯಾಕೆ ಅಂತ ಕೇಳ ಬೇಡಿ.. ಅದು ನನ್ನ ದೌರ್ಬಲ್ಯ...


ಅಷ್ಟರಲ್ಲಿ ಫೋನ್ ರಿಂಗಾಯಿತು...


"ಹಲ್ಲೋ..."


ನನ್ನ ತಂಗಿ ಅಳುತ್ತಿದ್ದಳು...


"ನಾನು ಅಣ್ಣಾ... ...
ಅಮ್ಮನಿಗೆ ಹಾರ್ಟ್ ಎಟಾಕ್ ಆಗಿದೆ.. ಜಲ್ದಿ ಬಾ ಅಣ್ಣಾ..
ಅಮ್ಮ ನಿನ್ನ ಹೆಸರು ಹೇಳ್ತಿದ್ದಾಳೆ...
ಅಪರೇಷನ್ ನಡಿತಾ ಇದೆ...
ಡಾಕ್ಟ್ರೂ... ಭರವಸೆ ಕೊಡುತ್ತಿಲ್ಲ...
ಬೇಗ...ಬಾ ಅಣ್ಣ..."


" ಅಯ್ಯೋ ..!!
ಇದೇನಮ್ಮ...!!
ಧೈರ್ಯವಾಗಿರಮ್ಮ..
ಅಮ್ಮನಿಗೆ ಏನೂ ಆಗುವದಿಲ್ಲ.. ನಾನು ಈಗಲೇ ಹೊರಟೆ..."


ನಾನು ಕಂಗಾಲಾದೆ...


ದುಃಖವಾಗುತ್ತಿತ್ತು...
ಮುಂದೆ ಏನು ಮಾಡ ಬೇಕೆಂದು ಸೂಚಿಸುತ್ತಿಲ್ಲ..
ಹೆಂಡತಿಗೆ ಹೇಳಿದೆ....


"ಅಮ್ಮನಿಗೆ ಹಾರ್ಟ್ ಎಟಾಕ್ ಆಗಿದೆ... ಆಸ್ಪತ್ರೆಯಲ್ಲಿದ್ದಾಳೆ..
ಅಪರೇಷನ್ ನಡಿತಾ ಇದೆಯಂತೆ....
ನಾವೆಲ್ಲ ಬೇಗ... ಹೊರಡೋಣ..."


" ನಾನು, ಪಾಪು ಯಾಕೆ ಬರಬೇಕು..?
ಪಾಪುಗೆ ಪರಿಕ್ಷೆ  ಬೇರೆ..ಹತ್ತಿರ ಬರ್ತಾ ಇದೆ. ...
ಅತ್ತೆಗೆ ಏನೂ ಆಗುವದಿಲ್ಲ..ಬಿಡ್ರಿ...


ನೀವೂ, ನಿಮ್ಮ ತಂಗಿಯೂ ....ಒಂದೇ ಥರಹದವರು...
ಇಲಿ ಹೋಯ್ತು ಅಂದ್ರೆ ಹುಲಿ ಹೋಯ್ತು ಅನ್ನುತ್ತೀರಿ..


ನಾನು ಪಾಪು ಬರುವದಿಲ್ಲ..
ನೀವು ಅಲ್ಲಿಗೆ ಹೋಗಿ ಫೋನ್ ಮಾಡಿ.
ಅವಶ್ಯಕತೆ ಇದ್ದಲ್ಲಿ ನಾವು ಬರ್ತೇವೆ.."


ಇಲ್ಲಿ ಅವಶ್ಯಕತೆ ಅಂದರೆ ಅಮ್ಮನ ಸಾವು ಅಂತ ಅರ್ಥ ಇರಬಹುದಾ...?


ಯಾಕೋ ಇದರ ಬಗೆಗೆ ಹೆಚ್ಚು ಮಾತಾನಾದಬೇಕೆಂದು ಅನ್ನಿಸಲಿಲ್ಲ...


ನಾನು ಬೇಗ ಬೇಗನೆ ತಿಂಡಿ ತಿಂದ.. ಶಾಸ್ತ್ರ ಮಾಡಿಕೊಂಡು ಹೊರಟೆ...


ಸ್ವಲ್ಪ ದಿನಗಳ ಹಿಂದೆ... ನನ್ನಮ್ಮ ನನ್ನ ಮನೆಯಲ್ಲಿಯೇ ಇದ್ದಳು...


ಕಳೆದವಾರ ನಾನೇ ....ನನ್ನ ತಂಗಿಯ ಮನೆಗೆ ಬಿಟ್ಟು ಬಂದೆ...


ತಂಗಿಯ ಮನೆಗೆ ಹೋಗುವ ಅನಿವಾರ್ಯತೆ ಎದುರಾದದ್ದು ನನ್ನ ಘನತೆಗೆ ತಕ್ಕುದುದಲ್ಲ...


ಅಂದು ರಾತ್ರಿ....ನಡೆದದ್ದು  ಇಷ್ಟೆ...


ನಾವೆಲ್ಲ ಊಟ ಮಾಡುವಾಗ ಪಾಪು ಬಂದು ...
ನಮ್ಮ ಹತ್ತಿರ ತನಗೂ ಬೇಕು ಅಂತ ಹಠ ಮಾಡುತ್ತಿದ್ದ..


ನನ್ನಮ್ಮ ಅವನಿಗೆ ಒಂದು ಕೈ ತುತ್ತು ತಿನ್ನಿಸಿ ಬಿಟ್ಟಳು..


ನನ್ನಾಕೆಗೆ ಇದೆಲ್ಲ ಈಷ್ಟವಾಗುವದಿಲ್ಲ...


"ಒಬ್ಬರ ಎಂಜಲು ಮತ್ತೊಬ್ಬರು ತಿನ್ನ ಬಾರದು..!
ಅದರಿಂದ ರೋಗ ಬರುತ್ತದೆ..!
ಇಷ್ಟು ಗೊತ್ತಾಗೋದಿಲ್ವಾ...
ಛೇ...
ಇದೆಲ್ಲಾ ....ಅನಾಗರಿಕತೆ...!! ..."


ಅಗತ್ಯಕ್ಕಿಂತ ಖಾರವಾಗಿ ನನ್ನಮ್ಮನ ಮೇಲೆ ಸಿಡುಕಿದಳು...


"ಅಯ್ಯೊ....
ನನ್ನ ಮಗ ಸಣ್ಣವನಿದ್ದಾಗ ...
ಮನೆಯಲ್ಲಿ ಎಲ್ಲರೂ ಇವನಿಗೆ ಕೈ ತುತ್ತು ತಿನ್ನಿಸಿದವರೇ...
ಏನಾಗಿದೆ ಇವನಿಗೆ....?
ಚೆನ್ನಾಗಿಯೇ ಇದ್ದಾನಲ್ಲ...
ಕೈ ತುತ್ತಿನಲ್ಲಿರೋ ಪ್ರೀತಿಯೇ  ಬೇರೆ...."


ಎನ್ನುತ್ತ ಅಮ್ಮ ನನ್ನ ಮುಖ ನೋಡಿದಳು..


"ಅಮ್ಮಾ...
ಆಗಿನ ಕಾಲದಂತೆ ಈಗಿನ ಕಾಲವಿಲ್ಲ...
ಮತ್ತೆ ಹಾಗೆ ತಿನ್ನಿಸ ಬೇಡಮ್ಮ... ಪ್ಲೀಸ್...."


ಅಮ್ಮನಿಗೆ ಬೇಸರವಾಯಿತು ಅನ್ನಿಸುತ್ತದೆ...
ಅರ್ಧ ಊಟಮಾಡಿ ಎದ್ದು ತನ್ನ ರೂಮಿಗೆ ಹೋದಳು..


ಪಾಪು ಮತ್ತೆ ಗಲಾಟೆ ಶುರು ಮಾಡಿದ...


" ನಾನು ಅಜ್ಜಿ   ಹತ್ತಿರ ಮಲಗ್ತೀನಿ...
ನಂಗೆ ಅಜ್ಜಿಯ ಕಥೆ ಬೇಕು..."


ನನ್ನಾಕೆಗೆ ರೇಗಿ ಹೋಯಿತು...


"ನಿಮ್ಮ ಅಮ್ಮ ಹೇಳುವ ಅಡುಗೂಲಜ್ಜಿ ಕಥೆಗೆ....
ಕಾಲಿಲ್ಲ.. ಕೈಯಿಲ್ಲ...


ಎಲ್ಲವೂ ದೇವರ ಕಥೆ...!
ಮನುಷ್ಯ ಪ್ರಯತ್ನ ಮಾಡಬೇಕು ಎಂದೆಲ್ಲ ಇರುವದೇ ಇಲ್ಲ...!


ಎಲ್ಲವನ್ನೂ ದೇವರು ಬಂದು ಮಾಡಿಕೊಡುತ್ತಾನೆ...!


ನನ್ನ ಮಗ ಹಳ್ಳಿ ಹುಡುಗನಾಗಿ ಬಿಡುತ್ತಾನೆ...!
ದಡ್ದನಾಗಿ...
ಗಮಾರನಾಗಿ... ಬಿಡುತ್ತಾನೆ...!!.."


ಈಗ ನನಗೆ ಕೋಪ ಬಂತು...


"ಯಾಕೆ ಹೀಗೆಲ್ಲ ಅಂತೀಯಾ..?? ...
ನಾನೂ ಹಳ್ಳಿಯವನೆ...


ನಾನೂ ಸಹ ನನ್ನಮ್ಮನ ಕಥೆ ಬೆಳೆದು ದೊಡ್ಡವನಾಗಿಲ್ಲವಾ...?


ಅಂಥಹ ಕುಗ್ರಾಮದಿಂದ ಬಂದು ...
ಈ ಬೆಂಗಳೂರಲ್ಲಿ ನೆಲೆ ಕಂಡು ಕೊಳ್ಳಲಿಲ್ಲವಾ...?


ದೇಶ , ವಿದೇಶ ಸುತ್ತಲಿಲ್ಲವಾ...?


ಎಂಥಹ ಮಾತು ಅಂತ ಆಡ್ತೀಯಾ...?
ಸ್ವಲ್ಪ ಸುಮ್ಮನಿರು.."


"ನಿಮ್ಮ ಸಾಧನೆ ನಾನು ಕಂಡಿಲ್ಲವಾ..?.?


ಈ ಬೆಂಗಳೂರಲ್ಲಿ ಒಂದು ಮನೆ ಮಾಡಲಿಕ್ಕಾಯ್ತಾ.. ನಿಮ್ಮ ಹತ್ತಿರ...?


ನಮ್ಮ ಪಾಪುಗೆ ಡೆಲ್ಲಿ ಪಬ್ಲಿಕ್ ಸ್ಕೂಲಲಲ್ಲಿ ...
ಒಂದು ಸೀಟು ತಗೊಳ್ಳಿಕ್ಕೆ ಆಯ್ತಾ ನಿಮ್ಮ ಹತ್ತಿರ..?.?


ನನ್ನ ಅಪ್ಪನ ಹತ್ತಿರ ಹಣ ತಂದು ನನ್ನ ಮಗನಿಗೆ ಸ್ಕೂಲ್ ಸೇರ್ಸಿದ್ದೇನೆ.!!.


ಈಗ ತೆಗೆದು ಕೊಂಡಿರೋ.. ಸೈಟು..
ನನ್ನ ಅಪ್ಪನ ಹಣದಿಂದ ..!!...


ನನ್ನ ಮಗ ನಿಮ್ಮಂತೆ ಆಗುವದು ಬೇಡ.."


ಎನ್ನುತ್ತ ಪಾಪುವನ್ನು ಎತ್ತಿಕೊಂಡು ರೂಮಿಗೆ ಹೋಗಿ ದಢಾರನೆ ಬಾಗಿಲು ಹಾಕಿಕೊಂಡಳು...


ಹೆಂಗಸರ ಮಾತು ಬಾಣದಂತೆ ಇರಿದು ಬಿಡುತ್ತವೆ....
ಹರಿತವಾಗಿ...
ಕ್ರೂರವಾಗಿ..
ನಿರ್ದಯವಾಗಿ....!


ಇಂಥಹ ಕ್ಷಣಗಳು ಯಾಕಾದರೂ ಬರುತ್ತದೆ..?
ತುಂಬಾ.. ಅಸಹ್ಯವಾದ.. ಅಸಹನೀಯ ಕ್ಷಣಗಳು...!.


ನನ್ನಮ್ಮನೂ .. ಹಠ ಹಿಡಿದಳು...


"ನಾನು ಮಗಳ ಮನೆಗೆ ಹೋಗುತ್ತೆನೆ..
ಇಲ್ಲಿ ನನ್ನ ಅಗತ್ಯ ಯಾರಿಗೂ ಇಲ್ಲ..
ಇಲ್ಲಿ ನನಗೆ ಇರಲು ಆಗುವದಿಲ್ಲ..."


ದೇವರೆ...!
ಯಾಕಾದರೂ ಇಂಥಹ ಸ್ಥಿತಿ ತಂದಿಡುತ್ತೀಯಾ...?


ಇತ್ತ ಅಮ್ಮ...!
ಅತ್ತ ಹೆಂಡತಿ...!...
ಮಧ್ಯದಲ್ಲಿ ಏನೂ ಮಾಡಲಾಗದ ನನ್ನ ಅಸಾಹಯಕತೆ....!!


ಕೊನೆಗೂ.. ಅಮ್ಮನ ಹಠವೇ ಗೆದ್ದಿತು...
ಮರುದಿನ ಬೆಳಿಗ್ಗೆಯೇ.. ಅಮ್ಮನನ್ನು ತಂಗಿಯ  ಬಿಟ್ಟು ಬಿಟ್ಟು ಬಂದೆ......

ಅದು ನನ್ನ ಅಸಹಾಯಕತೆ.. ದೌರ್ಬಲ್ಯದ  ಪರಮಾವಧಿ.....!


ಈಗ.. ಎಲ್ಲ ನೆನಪಾಗುತ್ತಿದೆ...


ನನಗೆ ದಿಕ್ಕು ತೋಚದಂತಾಯಿತು..


ನನ್ನ  ಅಮ್ಮ ಸತ್ತು ಹೋಗಿ ಬಿಡುತ್ತಾಳಾ...?


ಬಹಳ ಕಷ್ಟ ಪಟ್ಟು.. ನಮ್ಮನ್ನು ಬೆಳೆಸಿದ್ದಳು..


ಅವಳ ಬದುಕಿನ ಕೊನೆಯ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳ ಬೇಕಿತ್ತು...!
ಒಂದು ನೆಮ್ಮದಿಯ...
ಸಂತೃಪ್ತಿಯ ಸಾವು ಬರಬೇಕಿತ್ತು...!


ನನ್ನ ಬಗೆಗೆ ನನಗೇ... ಅಸಹ್ಯವೆನಿಸ ತೊಡಗಿತು....


ಹನಮಂತ ನಗರದ ಬಳಿ ಬಂದಿದ್ದೆ...


ಎದುರಿನ ತಿರುವಿನಲ್ಲಿ ಗಣಪತಿ ದೇವಸ್ಥಾನವಿದೆ...


ಯಾಕೊ... ಡ್ರೈವಿಂಗ್ ಮಾಡಲಾರೆ ಅನ್ನಿಸಿತು...


ಸ್ವಲ್ಪ ಹೊತ್ತು ಕಾರನ್ನು ದೇವಸ್ಥಾನದ ಪಕ್ಕದಲ್ಲಿ ನಿಲ್ಲಿಸಿಕೊಂಡೆ...


ಅಂದು ....
ತಂಗಿಯ ಮನೆಗೆ ಬಿಡಲು ಹೋದಾಗ ಅಮ್ಮ ಈ ದೇವಸ್ಥಾನಕ್ಕೆ ಹೋಗ ಬೇಕು ಎಂದಿದ್ದಳು..


"ನೋಡು ಪುಟ್ಟಾ..
ಈ ದೇವರು ತುಂಬಾ ಶಕ್ತಿ ದೇವರಂತೆ ..


ಇಲ್ಲಿ "ಇಷ್ಟಾರ್ಥ ಸಿದ್ಧಿ ಪೂಜೆ" ಅಂತ ಇದೆ..
ಆ ಪೂಜೆ ಮಾಡಿಸಿದರೆ ನಮ್ಮ ಆಸೆ ಎಲ್ಲವೂ ನೆರವೇರುತ್ತದಂತೆ...!
ಒಂದು ಸಾರಿ ಹೋಗಿ ಬರ್ತಿನೋ..."


"ಬೇಡಮ್ಮ..
ಇನ್ನೊಮ್ಮೆ ಹೋಗ ಬಹುದು..
ಈಗ ನನಗೆ ಆಫೀಸಿಗೆ ತಡವಾಗುತ್ತದಮ್ಮ...


ಅಮ್ಮಾ... ಒಂದು  ವಿಷಯ....."


" ಏನಪಾ ಪುಟ್ಟಾ...? "


"ನಮ್ಮನೆಯಲ್ಲಿ ನಡೇದ ಜಗಳ...
 ಅವಾಂತರದ ಬಗ್ಗೆ...
 ತಂಗಿಯ ಬಳಿ ಹೇಳ ಬೇಡಮ್ಮಾ... ಪ್ಲೀಸ್..."


"ಆಯ್ತು ಕಣಪ್ಪಾ...
ನಾನು ಯಾಕೆ ಹೇಳ್ಳೋ.. ಹೇಳುವದಿಲ್ಲ ಬಿಡು..."


ಅಮ್ಮ ಸುಮ್ಮನಾಗಿದ್ದರು...


ಮತ್ತೆ ತಂಗಿಯ ಫೋನ್...


" ಅಣ್ಣಾ...
ಅಣ್ಣಾ.. ಎಲ್ಲಿದ್ದೀಯಾ...?"

" ಹನುಮಂತ ನಗರದ ದೇವಸ್ಥಾನದ ಬಳಿ...
ಏನಾಯ್ತು...??..!!..?.."


" ಅಪರೇಷನ್ ನಡಿತಾ ಇದೆ...!
ನಮ್ಮವರು ಒಳ್ಳೆಯ ಸರ್ಜನ್ ಕರೆಸಿದ್ದಾರೆ....!
ಅಮ್ಮ ಬದುಕ ಬಹುದಂತೆ...!!!


"ಹೌದೇನೆ...?..!!.."

" ಹೌದು..ಅಣ್ಣಾ...
ಅಮ್ಮನಿಗೆ ಒಂದು ಆಸೆ ಇತ್ತು..
ನನ್ನ ಹತ್ತಿರ ಹೇಳಿಕೊಂಡಿದ್ದಾಳೆ..

"..ಏನು...?".

ನೀನು ಬರುವಾಗ...
ಇಷ್ಟಾರ್ಥ ಗಣಪತಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸ್ಕೊಂಡು ಬಾ...
ಅವಳ ಆಸೆಯಂತೆ.. ಪ್ರಸಾದ ಸಿಕ್ಕಿದರೆ  ಸಂತೋಷ ಪಡುತ್ತಾಳೆ...
ಅಣ್ಣಾ...
ಇಲ್ಲ ಅನ್ನಬೇಡ..
ಅಮ್ಮನ ನಂಬಿಕೆಗೆ..
ನಮ್ಮ ಅಮ್ಮನ ಬದುಕಿಗಾದರೂ ಪೂಜೆ ಮಾಡಿಸ್ಕೊಂಡು ಬಾ...


ಅಮ್ಮನಿಗೊಸ್ಕರ ಪ್ರಸಾದ ತೆಗೆದು ಕೊಂಡು ಬಾ... ಪ್ಲೀಸ್.."



ನಾನು...
ನನ್ನ ತಿಳುವಳಿಕೆ ಬಂದಾಗಿನಿಂದ ದೇವಸ್ಥಾನಕ್ಕೆ ಹೋಗಿಲ್ಲ..


ತಂಗಿಯ ಆಗ್ರಹಕ್ಕೆ..
ಅಮ್ಮನ ನಂಬಿಕೆಗಾದರೂ ಹೋಗಲೇ.. ಬೇಕಿತ್ತು...

ನನ್ನ ಇಲ್ಲಿಯವರೆಗಿನ ನಂಬಿಕೆ...
ಜೀವನ ತತ್ವಗಳು...?


ಯೋಚಿಸಲು ಹೆಚ್ಚು ಸಮಯವಿಲ್ಲ..


ದೇವಸ್ಥಾನದ ಒಳಗೆ ಅಡಿಯಿಟ್ಟೆ...


ಮತ್ತೆ ಅಳುಕು...


ನಾನು ಸೋತು ಹೋಗುತ್ತಿರುವೆ ಎನ್ನುವ ಭಾವ...!


ಅಲ್ಲಿ ಗಲ್ಲ ಪೆಟ್ಟಿಗೆಯ ಪಕ್ಕದಲ್ಲಿ ಒಬ್ಬ ಕುಳಿತ್ತಿದ್ದ...


ಅವನ ದೊಡ್ಡ ಹೊಟ್ಟೆ ನೋಡಿ ನನಗೆ ಅಸಹ್ಯವಾಯಿತು...


ಎಷ್ಟು ಹಣ ನುಂಗಿರ ಬಹುದು ಈತ...?


ಇವೆಲ್ಲವೂ ಸುಳ್ಳು... ಬೂಟಾಟಿಕೆ...


ಈ ದೇವಸ್ಥಾನಗಳು ಸೋಮಾರಿಗಳನ್ನು ಸೃಷ್ಟಿಸುತ್ತದೆ..
ಒಳಗೂ...
ಹೊರಗೂ....


"ಇಷ್ಟಾರ್ಥ ಸಿದ್ದಿ ಪೂಜೆ ...ಮಾಡಿಸ ಬೇಕಿತ್ತು..."


"ಐವತ್ತು ರುಪಾಯಿ ಕೊಡಿ..."


ನಾನು ಕೊಟ್ಟೆ..


ಆತ ಒಂದು ಪಾವತಿ ಚೀಟಿ ಕೊಟ್ಟ..
ಗರ್ಭಗುಡಿಯ ಮುಂದೆ ಬಂದೆ.. ಆರತಿ ಬಟ್ಟಲು ಹಿಡುದು ಒಬ್ಬ ಪೂಜಾರಿ ಬಂದ..


ನಾನು ಚೀಟಿ ಕೊಟ್ಟೆ...


ಈ ದೇವರ ಬಗೆಗೆ...
ಜೀವನದಲ್ಲಿ ಮೊದಲ ಬಾರಿಗೆ ನನ್ನ ಮನಸಾಕ್ಷಿಗೆ ವಿರುದ್ಧವಾಗಿ ನಡೆದು ಕೊಳ್ಳುತ್ತಿದ್ದೆ....


ಏನೋ ಮಂತ್ರ ಹೇಳಿ..
ಗಂಟೆ ತೂಗಿ.. ಆರತಿ ತಟ್ಟೆ ನನ್ನೆದುರಿಗೆ ಹಿಡಿದ...


ಕೈಯಲ್ಲಿ ಹೂವು ಕೊಟ್ಟು..


" ನೋಡಿ ...
ನಿಮ್ಮ ಮನಸ್ಸಲ್ಲಿ ಏನಿದೆಯೊ...
 ಅದನ್ನು ಪ್ರಾರ್ಥಿಸಿ ಈ ಹೂವನ್ನು ದೇವರ ಪೀಠಕ್ಕೆ ಹಾಕಿ...
ನಿಮ್ಮ  ಮನಸ್ಸಿನ ಆಶಯ ನೆರವೇರುತ್ತದೆ..."


ನಾನು ಹೂವನ್ನು ಕೈಗೆ ತೆಗೆದು ಕೊಂಡೆ...


ನನ್ನ ಇಲ್ಲಿಯವರೆಗಿನ  ಬದುಕಲ್ಲಿ...
ನನ್ನಮ್ಮನಿಗೆ  ಮಾತ್ರ  ಕೈ ಮುಗಿದಿದ್ದೆ..


ಮತ್ತೆ  ಯಾರಿಗೂ  ಇಲ್ಲಿಯವರೆಗೆ ಕೈ ಮುಗಿದಿಲ್ಲ...


ಅಮ್ಮನ ಪ್ರೀತಿ..


ಅವಳ ನಗು...


ಅವಳ ಮಡಿಲು..


ಮಮತೆ... ವಾತ್ಸ್ಯಲ್ಯ... ಎಲ್ಲ ನೆನಪಾಯಿತು...


ನನ್ನಮ್ಮ ಇನ್ನೂ... ಬದುಕ ಬೇಕು...!


ನನ್ನಾಕೆಯೂ ನೆನಪಾದಳು...


ಮನೆಯ ಅಸಹ್ಯವಾತಾವರಣ ಬೇಡವೆಂದರೂ ನೆನಪಾಯಿತು...


ನಾನು ಕಣ್ಮುಚ್ಚಿದೆ...


ಕೈಯಲ್ಲಿ ಹೂವಿತ್ತು...


ಕೈ ಮುಗಿದೆ...


" ದೇವರೆ...


ನೀನು ಇದ್ದೀಯಾ...?


ಇದ್ದಿಯಾ ಎಂದರೆ...


ನನ್ನಮ್ಮನ ಇಲ್ಲಿಯವರೆಗಿನ  ವೃತ.... ಉಪವಾಸ..


ಅವಳ ಮುಗ್ಧ  ಪೂಜೆ...ಪುನಸ್ಕಾರ....


ಅವಳ ಅಗಾಧವಾದ ನಂಬಿಕೆ..


ಇದಕ್ಕಾದರೂ ಬೆಲೆ ಕೊಟ್ಟು...


ನನ್ನದೂ ಒಂದು ಪ್ರಾರ್ಥನೆ....


ನನ್ನಮ್ಮನನ್ನು ಬದುಕಿಸ ಬೇಡಪ್ಪಾ.....


ಈಗಲೇ..


ಹೀಗೆಯೇ...


ಅವಳನ್ನು ಕರೆದುಕೊಂಡು ಹೋಗಿಬಿಡು..!!!."


ನಾನು
ಕಣ್ಮುಚ್ಚಿಯೇ... ನಿಂತಿದ್ದೆ...


ಬೇಡವೆಂದರೂ...


ಕಣ್ಣಲ್ಲಿ ನೀರು ಬರುತ್ತಿತ್ತು...






ಅಷ್ಟರಲ್ಲಿ ಫೋನ್ ರಿಂಗಾಯಿತು...


ಅದು ತಂಗಿಯ ಫೋನ್......!





(ಇದು  ಕಥೆ....)
 
 

107 comments:

ಚುಕ್ಕಿಚಿತ್ತಾರ said...

ಪ್ರಕಾಶಣ್ಣ..
ಇದು ಕಥೆ....ಆದರೂ ಅನೇಕ ಮನೆಗಳಲ್ಲಿನ ಜೀವನವೂ ಇರಬಹುದು...
ಸಾವು.... ಅನ್ನುವುದು ನಮ್ಮ ಮನಸ್ಸಿನ ಸಿದ್ಧಾ೦ತಗಳನ್ನ ಹಾಗ್ ಹಾಗೇ ಕೆಡವಿ ಬಿಡುತ್ತದೆ.
ಸಾವಿನ ಮನೆಗೊಮ್ಮೆ ಹೋಗಿಬ೦ದರೆ....ಅಲ್ಲಿನ ಸನ್ನಿವೇಶಗಳಿ೦ದ
ನಾವು ಸಾಕಷ್ಟು ಬದಲಾವಣೆ ಹೊ೦ದುತ್ತೇವೆ....!!!
ಸಾವಿನ ಭಯವೆ ಹಾಗಿದೆ...!!!ಇಲ್ಲಿರುವುದೆಲ್ಲಾ ಇಷ್ಟೆ ಅನ್ನುವುದು ಕ್ಷಣ ಕ್ಷಣಕ್ಕೂ ತಲೆ ಮೇಲೆ ಕುಟ್ಟಲು ಶುರು ಮಾಡಿಬಿಡುತ್ತದೆ...

Ittigecement said...

ಪ್ರೀತಿಯ ಚುಕ್ಕಿ ಚಿತ್ತಾರ...

ನಮ್ಮ ಮನೆಯ ಹಿರಿಯರಿಗೆ ನಾವು ಯಾಕೆ ಗೌರವ ಕೊಡುವದಿಲ್ಲ...?
ಹೆಂಡತಿ, ಮಕ್ಕಳ ಪ್ರೀತಿಯಲ್ಲಿ..
ಹಿರಿಯರನ್ನೇಕೆ ಮರೆಯುತ್ತೇವೆ...?

ಹೆಂಡತಿ ಏಕೆ ಅತ್ತೆಯನ್ನು ಪ್ರೀತಿಸ ಬಾರದು...?

ಮನೆಯಲ್ಲಿ ಹಿರಿಯರು ತಪ್ಪು ಮಾಡುವದಿಲ್ಲ ಎನ್ನುವದು ತಪ್ಪಾಗುತ್ತದೆ...
ಅವರೂ ಮನುಷ್ಯರು...
ತಪ್ಪಾಗುತ್ತದೆ...

ಅವರ ಹಿರಿತನಕ್ಕೆ...
ಅವರ ಹಿರಿತನದ ಬಾಳ್ವೆಗೆ...

ಅವರಿಗೊಂದು ನೆಮ್ಮದಿಯ ಸಾವನ್ನು ನಮಗೇಕೆ ಕೊಡಲಾಗುವದಿಲ್ಲ...??

ಇದು ನನ್ನನ್ನು ಬಹಳ ಕಾಡುವ ಪ್ರಶ್ನೆ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

ರಾಜೀವ said...

ಅದ್ಭುತ ಕ್ಲೈಮಾಕ್ಸ್. ಇದನ್ನು ಓದಿದಾಗ ಹೇಳಿಕೊಳ್ಳಲಾಗದ ಅನುಭವ ನೆನಪಾಯಿತು.
ಕೆಲವೊಂದು ಸಲ, ನಿರ್ಧಾರಗಳನ್ನು ತೆಗೆದುಕೋಳ್ಳಬೇಕಾದರೆ ಸಮಾಜಮುಖಿ, ಸಂಸಾರಮುಖಿಗಿಂತ ನಮ್ಮ ಸ್ವಾರ್ಥವೇ ಮೇಲಾಗಿ ಕಾಣಿಸುತ್ತದೆ.
ಇನ್ನೂ ಹೆಚ್ಚೆಚ್ಚು ಕಥೆಗಳ ನಿರೀಕ್ಷೆಯಲ್ಲಿ ...

ಓ ಮನಸೇ, ನೀನೇಕೆ ಹೀಗೆ...? said...

ತುಂಬಾ ಚೆನ್ನಾಗಿದೆ ...ನಿಜ ಜೀವನದ ಕನ್ನಡಿ ನಿಮ್ಮ ಕಥೆ.

Ittigecement said...

ಆತ್ಮೀಯ ರಾಜೀವ...

ಮನೆಯಲ್ಲಿ ನಡೆಯುವ ಅಸಹ್ಯ ಜಗಳದ ವಾತಾವರಣ...
ಅತ್ತ ತಾಯಿ..
ಇತ್ತ ಹೆಂಡತಿ...

ಬಹುಷಃ ಆತನಿಗೆ
"ತಾಯಿಯ ಸಾವನ್ನು ಬಯಸುವದೇ..ಸರಿಯಾದ ನಿರ್ಧಾರ.." ಅಲ್ಲವೆ...?

ಇಬ್ಬರೂ ನಮ್ಮ ಹತ್ತಿರದವರು..
ಯಾರಿಗೆ ಏನು ಹೇಳುವದು...?

ಇದು ಎಲ್ಲರ ಮನೆಯಲ್ಲಿ ಕಥೆಯಾಗಿಯೇ ಆಗಿರಲಿ...

ನನಗೆ ಇತ್ತೀಚೆಗೆ ಗೆಳೆಯರ ಅನೇಕ ಬ್ಲಾಗಿಗೆ ಹೋಗಲಾಗುತ್ತಿಲ್ಲ..

ದಯವಿಟ್ಟು ಕ್ಷಮಿಸಿ...

ರಾಜೀವ... ನಿಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು...

Ittigecement said...

ಓ ಮನಸೇ.. ..

ಯಾಕೆ ನಮ್ಮ ಬದುಕನ್ನು ಅಷ್ಟು ಸಂಕೀರ್ಣಗೊಳಿಸಿಕೊಳ್ಳ ಬೇಕು...

ತಾಯಿಗೂ..
ಹೆಂಡತಿಗೂ..
ಒಂದು ಹೊಂದಾಣಿಕೆ ಮಾಡಿಕೊಳ್ಳುವಂಥಹ ಒಂದು ವಾತಾವರಣ ನಿರ್ಮಿಸಲು ನಮ್ಮಲ್ಲೇಕೆ ಆಗುವದಿಲ್ಲ...?

ಮನೆಯ ಹಿರಿಯರು ಇನ್ನು ಎಷ್ಟು ದಿನ ಬದುಕ ಬಲ್ಲರು...?
ಕಿರಿಯರಿಗೆ ಸ್ವಲ್ಪ ತಾಳ್ಮೆ ಇದ್ದರೆ..
ಎಲ್ಲವೂ ಸಸೂತ್ರ ಅಲ್ಲವೆ...?

ಪ್ರತಿಕ್ರಿಯೆಗೆ ಧನ್ಯವಾದಗಳು... ಚೇತನಾ....

Anonymous said...

ಪ್ರಕಾಶಣ್ಣ,, ಮನ ಕಲಕುವ ಕಥೆ..

ನಿಮ್ಮ ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿದೆ..ನಿಮ್ಮಿಂದ ಇನ್ನೂ ಹೆಚ್ಚಿನ ಕಥೆಗಳನ್ನು ನಿರೀಕ್ಷಿಸುತ್ತಿರುವೆ..

ಸೀತಾರಾಮ. ಕೆ. / SITARAM.K said...

ಮನ ಭಾರವಾಯಿತು. ಹೃದಯ ತು೦ಬಿ ಬ೦ತು. ಭಾವನೆಗಳು ತು೦ಬು ಆರ್ದ್ರತೆ ಓದುಗರ ಮನ ಸೆಳೆದು ಬಿಡುತ್ತದೆ. ತು೦ಬಾ ಚೆನ್ನಾಗಿ ಬರೆದಿದ್ದಿರಿ ಪ್ರಕಾಶಣ್ಣ. ಅ೦ತ್ಯ ತು೦ಬಾ ಕಠೋರ ಅನಿಸಿತು. ಆದರೇ ಒಮ್ಮೆ ಇ೦ತಹವೂ ನಡೆಯುತ್ತವೆ ಅನಿಸಿತು. ಸ್ವಾರ್ಥ ಬದುಕಿನಲ್ಲಿ ಹಿರಿಯರ ಕಡೆಗಣನೆ ಯಾವ ನ್ಯಾಯ?
ಪ್ರಶ್ನೇ ಮಾರ್ಮಿಕವಾಗಿದೆ. ಧನ್ಯವಾದಗಳು .

nenapina sanchy inda said...

good one Prakash!!

u have the gift of story telling.

Keep writing and putting the link in gmail chat.
:-) :-) :-)
malathi S

ದಿನಕರ ಮೊಗೇರ said...

ಪ್ರಕಾಶಣ್ಣ,
fentabulas....... ಏನು ಬರಿಲೋ ಗೊತ್ತಾಗ್ತಿಲ್ಲ... ಇದು ಕಥೆ ಅಂತ ಮೊದಲೇ ಗೊತ್ತಾಯ್ತು..... ಅಂತ್ಯ ಮಾತ್ರ ಸೂಪರ್...... ನಮ್ಮನ್ನು ಹೆತ್ತು ಆಡಿಸಿ, ಕಳಿಸಿದ ತಂದೆ ತಾಯಿರನ್ನ, ನಾವು ಅವರ ಕೊನೆಗಾಲದಲ್ಲಿ ನೋಡಿಕೊಳ್ಳಲು ಆಗದೆ ಇದ್ದಾಗ ...... ಹರಸಿಕೊಳ್ಳೋದು ಇದನ್ನೇ..... ಅವರಿಗೆ ನೆಮ್ಮದಿಯ ಸಾವು ಕೊಡು ದೇವರೇ ಅಂತ....... ಎಂಥಾ ವಿಪರ್ಯಾಸ ಆಲ್ವಾ..... ಕಥೆ ಅಂದ್ರೆ ಇದು............ಮಾರ್ವಲ್ಲೆಸ್......

Shashi jois said...

ನಿಮ್ಮ ಕತೆ ಚೆನ್ನಾಗಿತ್ತು ಆದ್ರೆ ಅದೂ ನೈಜ ಘಟನೆಗೆ ಸಮೀಪವೇ ಇದೆಯಲ್ಲ .ತಾಯಿ,ಹೆಂಡತಿ ಮದ್ಯೆ ಸಿಲುಕಿದ ಅವನ ಸ್ಥಿತಿ ಹೇಗಿರಬೇಡ ಆಲ್ವಾ !

Ittigecement said...

ಆಕಾಶಬುಟ್ಟಿ...

ಇಂಥಹ ಅಸಹಾಯಕತೆ ನಮ್ಮಿಂದ ನಿರ್ಮಿತವಾದವು...
ಎಲ್ಲೋ ಒಂದುಕಡೆ..
ನಮ್ಮ ತನವನ್ನು ಬಿಟ್ಟುಕೊಟ್ಟಾಗ..
ಸ್ವಾಭಿಮಾನ ಬಿಟ್ಟಾಗ ಅಸಹಾಯಕತೆಯ ದೌರ್ಬಲ್ಯ ಅಂತಿಕೊಂಡು ಬಿಡುತ್ತದೆ...

ಅದರಿಂದ ಹೊರಗೆ ಬರುವದು ಅಸಾಧ್ಯ...

ಯಾಕೆ ಇಂಥಹ ಅಸಹಾಯಕ ಬದುಕು...?

ಅಪ್ಪ, ಅಮ್ಮರ ತ್ಯಾಗ, ವಾತ್ಸಲ್ಯ ಯಾಕೆ ಮರೆತು ಹೋಗುತ್ತದೆ...?

ಚೇತನಾ ಚಂದದ ಪ್ರತಿಕ್ರಿಯೆಗೆ..
ಕಥೆ ಓದಿ ಪ್ರೋತ್ಸಾಹಕೊಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್....!

Subrahmanya said...

ಕೆಲವೊಂದು ಸನ್ನಿವೇಷಗಳು ಭಾವನೆಗಳನ್ನು ಬೇಜಾರಾಗುವಷ್ಟರ ಮಟ್ಟಿಗೆ ಕೆದಕಿಬಿಡುತ್ತದೆ. ಸಾವೂ ಹಾಗೇ...ಮನಸ್ಸಿಗೆ ಮುಟ್ಟುವ ಕತೆ.

Ittigecement said...

ಸೀತಾರಾಮ್ ಸರ್...

ನನಗೆ ಈ ಕಥೆಯನ್ನು ಬರೆವಾಗ ಕಣ್ಣಲ್ಲಿ ನೀರು ಜಿನುಗಿತ್ತು...
ನಾನೂ ಕೂಡ ಒಬ್ಬ ತಾಯಿಯ ಮಗ..
ಹೆಂಡತಿಯ ಗಂಡ..
ಮಗನ ಅಪ್ಪ...

ಆದರೆ ಇಂಥಹ ವಾತಾವರಣ ಮಾತ್ರ ದೇವರ ದಯೆಯಿಂದ ಇಲ್ಲ...

ಆದರೆ.. ನನ್ನ ಅಮ್ಮನಿಗೆ ಹೀಗಾದರೆ ಹೇಗೆ ಎನ್ನುವದನ್ನು ನೆನೆದು..
ದುಃಖವಾಗಿದ್ದು ನಿಜ...

ಆದರೂ ಪರಿಸ್ಥಿತಿ..
ಸಂದರ್ಭಗಳು ಇಷ್ಟು ಕ್ರೂರವಾಗಿರಬಾರದು ಅಲ್ಲವಾ?

ಚಂದದ ಪ್ರತಿಕ್ರಿಯೆಗೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು....

Ittigecement said...

ನೆನಪಿನ ಸಂಚಿಯಿಂದ.. (ಮಾಲತಿ ಎಸ್.)

ನನ್ನ ಸ್ನೇಹಿತನೊಬ್ಬನಿಗೆ ಈ ವಾತಾವರಣ ಇತ್ತು...

ತಾಯಿ, ಹೆಂಡತಿಯ ಜಗಳ...

ಪರಿಸ್ಥಿತಿ ಎಲ್ಲಿಯವರೆಗೆ ಹೋಗಿತ್ತು ಅಂದರೆ...

ನನ್ನ ಗೆಳೆಯ ಆತ್ಮ ಹತ್ಯೆಗೆ ಪ್ರಯತ್ನಿಸಿದ್ದ...

ಈಗ ಪರಿಸ್ಥಿತಿ ಸುಧಾರಣೆ ಆಗಿದೆ...


ಇರುವ ನಾಲ್ಕುದಿನ ಪ್ರೀತಿಯಿಂದ ಯಾಕೆ ಇರಲಾಗುವದಿಲ್ಲ...?

ತುಂಬಾ ಥ್ಯಾಂಕ್ಸ್.. ಮಾಲತಿಯವರೆ....

ನಿಮ್ಮ ಬ್ಲಾಗಿಗೂ ಬರಲಾಗಲ್ಲಿಲ್ಲ ..
ಬೇಸರಿಸ ಬೇಡಿ...

ಮೌನಿ said...

ಪ್ರಕಾಶಣ್ಣ...
ನಾನು ನಿಜ ಘಟನೆ ಓದಿದಂತೆ ಓದಿಕೊಂಡು ಹೋದೆ....
ನಿಜಕ್ಕೂ ಚಿಕ್ಕದಾದರೂ ಕೊನೆಯ ಬಗ್ಗೆ ತುಂಬಾ ಕುತೂಹಲ ಹುಟ್ಟಿಸಿತು....ಹಲವು ಕಡೆ ಹೀಗೆ ಯಾಕಾದರೂ ನಡೆಯುತ್ತದೆಯೋ ಗೊತ್ತಿಲ್ಲ.

Ittigecement said...

ದಿನಕರ....

ಓದು, ವಿದ್ಯೆ.. ವಿಜ್ಞಾನ ಹೆಚ್ಚಾದಂತೆ...
ನಾವೇಕೆ ಸಂಕುಚಿತ ಮನೋಭಾವ ಜಾಸ್ತಿ ಮಾಡಿಕೊಳ್ಳುತ್ತಿದ್ದೇವೆ...?
ಇದು ಮನೆಯಾಗಲಿ ಅಥವಾ ದೇಶವಾಗಲಿ...

ನಾನು... ನನ್ನದು ಜಾಸ್ತಿಯಾಗಿಬಿಟ್ಟಿದೆ...

ಒಂದು ಮನೆಯಲ್ಲಿ ತಂದೆ, ತಾಯಿ ಹೆಂಡತಿ, ಮಗ ಒಟ್ಟಿಗೆ ಇರಲಾಗದಷ್ಟು...
ಸಂಕುಚಿತತೆ ಬೆಳೆದು ಬಿಟ್ಟಿದೆ...

ಯಾಕೆ...?

ನಾವು ತಪ್ಪಿದ್ದು ಎಲ್ಲಿ...?

ನಮ್ಮ ಹಿರಿಯರ ಬದುಕಿನ ಕೊನೆಗಾಲದಲ್ಲಿ ಸಂತೋಷದ ಸಮಯ ನಮಗೇಕೆ ಕೊಡಲು ಸಾಧ್ಯವಾಗುತ್ತಿಲ್ಲ...?

ದಿನಕರ ಪ್ರೋತ್ಸಾಹಕ್ಕೆ ಧನ್ಯವಾದಗಳು...

ನಿಮ್ಮ ಬ್ಲಾಗಿಗೂ ಬರಲಿಲ್ಲ...
ಬೇಸರಿಸ ಬೇಡಿ...

ಮನದಾಳದಿಂದ............ said...

ನಾನೇನೆಂದು ಹೇಳಲಿ ಪ್ರಕಾಶಣ್ಣ?
ಅತ್ತ ಹೆತ್ತು ಹೊತ್ತು ಸಾಕಿ ಸಲಹಿದ ಜೀವ ಒಂದುಕಡೆ,
ಜೀವಕ್ಕೆ ಜೀವವಾಗಿ, ತನ್ನದೆಲ್ಲವ ಅರ್ಪಿಸಿ ನಿಂತ ಪ್ರಾಣ ಇನ್ನೊಂದೆಡೆ,
ಎರೆಡು ಕಣ್ಣು ಗಳಲ್ಲಿ ಯಾವುದನ್ನೂ ಉಳಿಸಿಕೊಳ್ಳಬೇಕು? ಯಾವುದನ್ನೂ ಕಳೆದುಕೊಳ್ಳಬೇಕು?
ಅಪಾರ ಅನುಭವವನ್ನು ಹೊಂದಿದ ಹಿರಿಯರು ಅನುಸರಿಸಿಕೊಂಡು ಹೋಗಬಹುದಲ್ಲವೇ?
ಗೃಹಿಣಿಯಾದ ಹೆಂಡತಿ ಗೌರವದಿಂದ ನಡೆದುಕೊಳ್ಳಬಹುದಲ್ಲವೇ?
ಪ್ರತಿಯೊಬ್ಬ ಅತ್ತೆಯೂ ಒಂದು ದಿನ ಸೋಸೆಯಾಗಿರಲಿಲ್ಲವೇ?
ಎಲಾ ಸೊಸೆಯಂದಿರೂ ಒಂದು ದಿನ ಅತ್ತೆಯರಾಗುವುದಿಲ್ಲವೇ?
ಅತ್ತೆ-ಸೊಸೆಯರ ಹೊಂದಾಣಿಕೆ ಸಾಧ್ಯವೇ ಇಲ್ಲವೇ?
ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ ಇಂದಿಗೂ ನಿಗೂಢ!
ಒಂದು ವೇಳೆ ನಿಮ್ಮ ಕಥಾ ನಾಯಕನ ಸ್ಥಾನದಲ್ಲಿ ನಾನಿದ್ದರೂ ಕೂಡ ಹೀಗೆ ಮಾಡುತ್ತಿದ್ದೆನೋ ಏನೋ!
ಒಳ್ಳೆಯ ಕಥೆ. ದನ್ಯವಾದಗಳು.

Ittigecement said...

ಶಶಿಯವರೆ...

ಇಲ್ಲಿ ಪರಸ್ಪರ ಹೊಂದಾಣಿಕೆಯ ಸಮಸ್ಯೆ...

ಇದನ್ನು ಹೇಗೆ ನಿಭಾಯಿಸುವದು...?

ನಮ್ಮ ಕುಟುಂಬ ಪದ್ಧತಿಯ ಮೌಲ್ಯಗಳು.. ಜಾಗತೀಕರಣದಿಂದ ನಾಷವಾಗುತ್ತಿದೆಯಾ...?

ನಾವು ಯಾವುದೇ ಟಿವಿ ಜಾಹಿರಾತು ನೋಡಿದಾಗ ಅಲ್ಲಿ ನಮ್ಮ ಮೌಲ್ಯಗಳು ಅಲ್ಲಿರುವದಿಲ್ಲ...
ಟಿವಿ ಧಾರವಾಹಿಗಳಲ್ಲಂತೂ ಇನ್ನೂ ಕೆಟ್ಟದಾಗಿರುತ್ತವೆ...

ನಮ್ಮ ಮೇಲೆ ಮಾಧ್ಯಮಗಳ ಪ್ರಭಾವ ಬಹಳ...

ಅದರಿಂದಾಗಿ ಹೀಗಾಗಿ ಬಿಟ್ಟಿದ್ದೀವಾ...?

ಇದಕ್ಕೆ ಏನು... ಹೇಗೆ ಪರಿಹಾರ...?

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು ಶಶಿಯವರೆ....

Ittigecement said...

ಶಂಭುಲಿಂಗರವರೆ...

ಎಲ್ಲರೂ ನಮ್ಮವರೇ...
ಹತ್ತಿರದವರೇ...

ಆದರೂ ಹೊಂದಾಣಿಕೆ ಇರುವದಿಲ್ಲ...

ಪ್ರೀತಿಯನ್ನು ಹಂಚಿಕೊಂಡು ಬಾಳುವದು ನಮಗೆ ಗೊತ್ತಿಲ್ಲವಾ...?
ತನಗೊಬ್ಬನಿಗೇ ಈ ಪ್ರೀತಿ ಬೇಕೆನ್ನುವ ..
ಈ.. ಕೆಟ್ಟ ಸ್ವಾರ್ಥ ಈ ರೀತಿ ಮಾಡಿಸುತ್ತಿದೆಯಾ...?

ಸ್ವಲ್ಪ ವಿವೇಕದಿಂದ ಯೋಚಿಸಿದರೆ... ಇಲ್ಲಿ ಹೊಂದಾಣಿಕೆ ಅಸಾಧ್ಯವೇನಿಲ್ಲ ಅಲ್ಲವೆ...?

ತಾಳ್ಮೆ...
ತಿಳುವಳಿಕೆ..
ವಿವೇಕ ಇರಬೇಕು...
ರೂಢಿಸಿಕೊಳ್ಳ ಬೇಕು...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

ಸುಪ್ತವರ್ಣ said...

"ಹೆಂಗಸರ ಮಾತು ಬಾಣದಂತೆ ಇರಿದು ಬಿಡುತ್ತವೆ....ಹರಿತವಾಗಿ...ಕ್ರೂರವಾಗಿ..ನಿರ್ದಯವಾಗಿ....!" ಜಗತ್ತಿನ ಎಲ್ಲಾ ಗಂಡಸರ ಪ್ರತಿನಿಧಿಯಂತಿದೆ ಈ ಮಾತು. ಕಥೆಯ ಅಂತ್ಯ ಅನಿರೀಕ್ಷಿತ.

ಶಾಂತಲಾ ಭಂಡಿ (ಸನ್ನಿಧಿ) said...

ಪ್ರೀತಿಯ ಪ್ರಕಾಶಣ್ಣ...

ಇದೇ ಬದುಕು. ನಮ್ಮಂಥವರಿಗೆಲ್ಲ ಅತ್ತೆಮಾವಂದಿರು ಬೇಕು, ದೂರವಿದ್ದುಕೊಂಡು ಒಂದಿಷ್ಟು ಹೊಗಳಿಬಿಡುವುದಕ್ಕೆ. ಅವರು ಗಳಿಸಿಟ್ಟ ಸೊತ್ತು ನಮ್ಮ ಮಡಿಲಿಗೆ ಬೀಳುತ್ತದೆ ಎನ್ನುವಾಗಲೂ ಬೇಕು. ಅವರ ಖುಷಿ ನಮಗೆ ಸಂಬಂಧವಿಲ್ಲದ್ದು. ಅವರ ಕಾಳಜಿಯನ್ನು ಅವರೇ ನೋಡಿಕೊಳ್ಳುವತನಕ ಒಂದಿಷ್ಟು ಪ್ರೀತಿ ಅವರ ಮೇಲೆ. ಬರಬರುತ್ತ ಬೆಳೆಯುವ ಬದಲು ನಾವ್ಯಾಕಿಷ್ಟು ಚಿಕ್ಕವರಾಗುತ್ತೇವೆ ಅಂತ ನಾನೂ ತುಂಬ ಸಲ ಯೋಚಿಸುತ್ತೇನೆ.

ಹೀಗೆ ಯೋಚಿಸುವಾಗೆಲ್ಲ ಜಿ.ಎಸ್.ಶಿವರುದ್ರಪ್ಪನವರು ನೆನಪಾಗುತ್ತಾರೆ.

"ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಂಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲಿ"

ಪ್ರೀತಿಯಿಂದ,
-ಶಾಂತಲಾ ಭಂಡಿ

Me, Myself & I said...

ನಿಲ್ಲಿಸಿ ಬಿಟ್ರಲ್ಲಾ ಪ್ರಕಾಶಣ್ಣ???

ಮುಂದುವರಿಸಿ ಬೇಗ

Ittigecement said...

ಮೌನಿ (ಗುರುದಾಸ್)

ನಮ್ಮದೇ ...ಸಂಬಂಧಗಳು...
ನಾವೇ ನಿರ್ಮಿಸಿಕೊಂಡ ಬಾಂಧವ್ಯಗಳನ್ನು...
ಸಂಬಾಳಿಸಲು ನಮ್ಮಿಂದ ಆಗದೇ...?

ಎಲ್ಲರೂ ಒಂದೆಡೆ ಕುಳಿತು..
ನಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳಲು ಆಗುವದಿಲ್ಲವೇ..?

ನಮ್ಮವರ ಮಧ್ಯೆಯೇ.. ಯಾಕೆ ಈ ಗೋಡೆಗಳು...??

ನಮ್ಮವರೊಂದಿಗೆ ಮಾತನಾಡಲು ಯಾಕೆ ನಮಗೆ ಇಂಥಹ ಅಹಂ... ?

ಹತ್ತಿರದವರ ಸಂಗಡ ಮತ್ತಷ್ಟು ಪ್ರೀತಿ, ಸಂಬಂಧ ಗಟ್ಟಿಗೊಳಿಸುವ ಪ್ರಯತ್ನ ನಮ್ಮಲ್ಲಿ ಇರುವದಿಲ್ಲ ಯಾಕೆ...?

ಗುರುದಾಸ್ ನಿಮ್ಮ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಪ್ರೀತಿಯ ಪ್ರವೀಣ್... (ಮನದಾಳದಿಂದ..)

ಒಬ್ಬಳು ತನ್ನ ಪ್ರಾಣ ಒತ್ತೆ ಇಟ್ಟು ಹಡೆದ ತಾಯಿ...
ಮಮತೆಯ ದೇವತೆ....
ಇನ್ನೊಬ್ಬಳು ತನ್ನವರೆನ್ನೆಲ್ಲ ಬಿಟ್ಟು..
ನಮ್ಮನ್ನೇ ನಂಬಿ ಬಂದ...
ಪ್ರೇಮ ದೇವತೆ...

ಇಬ್ಬರೂ ಬಂದಿದ್ದು...
ನಾವು ಹಂಬಲಿಸುವ ಪ್ರೀತಿಗಾಗಿ...

ಮತ್ತೆ ಯಾಕೆ ಈ ಗೋಡೆಗಳು....?
ಯಾಕೆ ಭಿನ್ನಾಭಿಪ್ರಾಯಗಳು...?

ಬಹುಷಃ ನಾವು ಮುಕ್ತವಾಗಿ ಮಾತನಾಡುವದಿಲ್ಲ...
ಅದೇ ಸಮಸ್ಯೆ...

ಪ್ರವೀಣ್ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸುನಾಥ ಸರ್...

ನಮ್ಮ ಹೆತ್ತವರೊಂದಿಗೆ...
ನಮ್ಮ ಪ್ರೀತಿಯವರೊಂದಿಗೆ ಕದ್ದು ಮುಚ್ಚಿ ಏಕೆ...?
ನಮ್ಮವರೊಂದಿಗೆ ಮುಕ್ತವಾಗಿರ ಬಹುದಲ್ಲವೆ...?

ಎಲ್ಲರೂ ಒಂದೆಡೆ ಕುಳಿತು ಊಟ ಮಾಡುವದು...
ಪರಸ್ಪರ ಕಷ್ಟ ಸುಖ ಹಂಚಿಕೊಂಡು ಮಾತನಾಡುವದು...

ನಮ್ಮ ಹಿಂದಿನವರು ಈ ವಿಷಯದಲ್ಲಿ ಆದರ್ಷ ಅಲ್ಲವೆ...?

ಇಲ್ಲಿ ಮನೆಯ ಯಜಮಾನ..
ತಾಯಿಯೊಂದಿಗೆ..
ಅಪ್ಪನೊಂದಿಗೆ ಮಾತನಾಡದೆ ತಿಂಗಳುಗಟ್ಟಲೆ ಆಗಿಬಿಡುತ್ತದೆ...

ಮನೆಯ ಹಿರಿಯರೊಡನೆ ಮಾತನಾಡಲು ನಮ್ಮ ಬಳಿ ವಿಷಯವೇ ಇರುವದಿಲ್ಲ..!!!

ಇದು ವಿಪರ್ಯಾಸ...!!

ಸರ್.. ನಿಮ್ಮ ಪ್ರೋತ್ಸಾಹ...
ಆಶೀರ್ವಾದಕ್ಕೆ ಕೃತಜ್ಞತೆಗಳು...

Ittigecement said...

ಸುಪ್ತವರ್ಣ....

ಯಯಾತಿ ಕಾದಂಬರಿಯಲ್ಲಿ ಒಂದು ಮಾತು ಬರುತ್ತದೆ...

" ಹೆಂಗಸರ ಹೃದಯ ತೋಳಗಳ ಹೃದಯದಂತೆ..."
ಇದು ದೇವಯಾನಿಯ ಸ್ವಭಾವವನ್ನು ವರ್ಣಿಸುತ್ತ ವಿ.ಎಸ್. ಖಾಂಡೇಕರ್ ಹೇಳುತ್ತಾರೆ...

ಇದನ್ನು ಬರೆಯುವಾಗ "ಯಯಾತಿ" ನೆನಪಾದದ್ದು ಸುಳ್ಳಲ್ಲ...

ಹೆಂಗಸರು ಅಬಲೆಯರಲ್ಲ...

ಅವರ ಬಳಿ ಮಾತುಗಳಿವೆ..
ಅದು ಎಷ್ಟು ಘಾಸಿಗೊಳಿಸುತ್ತವೆ ಅಂದರೆ...

ನನ್ನ ಗೆಳೆಯನೊಬ್ಬ "ಆತ್ಮ ಹತ್ಯೆಗೆ" ಪ್ರಯತ್ನಿಸಿದ್ದ... !

ತನ್ನ ತಾಯಿ, ಹೆಂಡತಿಯ ಮಧ್ಯೆ..
ಸಮನ್ವಯ ತರಲು ಆತ ವಿಫಲನಾಗಿದ್ದ...

ಏನೇ ಹೇಳಿದರೂ...
ಹೆಂಗಸರ ಮಾತುಗಳಿಗೆ...
ಅವರೇ... ಸಾಟಿ...!!

ಮಹಾಭಾರತದಲ್ಲಿ.. ಭೀಮನೂ ಸಂಧಾನಕ್ಕೆ ಒಪ್ಪಿ ಬಿಡುತ್ತಾನೆ..
ಇದು ದ್ರೌಪದಿಗೆ ಗೊತ್ತಾಗಿ ಭೀಮನಲ್ಲಿ ಬಂದು ಮಾತನಾಡುತ್ತಾಳೆ..

"ಅವಳು ಮಾತನಾಡುವ ರೀತಿ..
ಧಾಟಿಯ ಪ್ರಭಾವಕ್ಕೆ ಒಳಗಾಗಿ
ಭೀಮ
ತನ್ನ ಮೆಚ್ಚಿನ ದೇವರು ಕೃಷ್ಣ,
ಎಂದೂ ಎದುರು ಮಾತನಾಡದ ಅಣ್ಣನ ಬಳಿ
"ನಾನು ಸಂಧಾನಕ್ಕೆ ಒಪ್ಪುವದಿಲ್ಲ ಅಂತ " ಕಡ್ಡಿ ಮುರಿದಂತೆ ಹೇಳಿ ಬರುತ್ತಾನೆ...

ಹೆಂಗಸರ ಮಾತಿಗೆ ಹೆಂಗಸರೇ... ಸಾಟಿ...
ಅಲ್ಲವೆ...?

ಧನ್ಯವಾದಗಳು...

Ranjita said...

ಪ್ರಕಾಶಣ್ಣಾ ವಾಸ್ತವಕ್ಕೆ ಅತೀ ಹತ್ತಿರ ಅನ್ನಸ್ತು .. ಕತೆ ತಾರಾ ಅನ್ನಸ್ತೆ ಇಲ್ಲೇ ... ಇಬ್ಬರ ಮದ್ಯೆ ಓದ್ದಾಡೋರಾ ಪರಿಸ್ಥಿತಿ ಯಾರಿಗೂ ಬೇಡಾ ಅಲ್ದ ??

umesh desai said...

ಹೆಗಡೇಜಿ ನಿಮ್ಮ ಕತೆ ಓದುವಾಗ ನನಗೆ ದೀವಾರ್ ನ " ಆಜ್ ಖುಷ್ ತೊ ಬಹುತ್ ಹೋಗೆ ತುಮ್..." ಈ ಡೈಲಾಗು ನೆನಪಿಗೆ ಬಂತು ನಿಮ್ಮ ಬ್ಲಾಗ್ ಬರವಣಿಗೆ ಹೇಗೋ ಹಾಗೆ ಕತೆಯಲ್ಲೂ ಓಘ ವಿದೆ. ಅದು ಹಿಡಿದು ನಿಲ್ಲಿಸುತ್ತದೆ.ಕನ್ನಡದಲ್ಲಿ ಈ ಓಘದ ಧಾಟಿ
ಅಪರೂಪ...ಅದು ಶೇಷನಾರಾಯಣರಿಗೆ ಸಿದ್ಧಿಸಿತ್ತು. ಈಗ ನಿಮಗೆ ಒಲಿದಿದೆ. ೨೦೧೦ ಲ್ಲೆ ಕಥಾಸಂಕಲನ ಬರಬಹುದೇ...
ಒಂದು ಬೇಜಾರು ನನ್ನ ಬ್ಲಾಗ್ ಕಡೆ ನಿಮ್ಮ ನೆರಳು ಬರದೇ ಬಹಳ ದಿನಗಳಾಗಿವೆ.....

ವಿನುತ said...

ಹೆಣ್ಣಿಗೆ ದೈಹಿಕ ಸಾಮರ್ಥ್ಯ ಕಡಿಮೆ ಇದ್ದರೂ, ಮಾತಿನ ಸಬಲತೆ ದುಪ್ಪಟ್ಟಿದೆ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದೀರಿ. ಜೊತೆಗೆ ನಂಬಿಕೆಗಳ ವೈರುಧ್ಯವನ್ನೂ ಚೆನ್ನಾಗಿ ಚಿತ್ರಿಸಿದ್ದೀರಿ. ಆದರೂ ಅಂತದೊಂದು ಅಂತ್ಯ ಅನಿವಾರ್ಯವಾಗಿತ್ತೇ ಎಂಬುದು ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ.

Sushrutha Dodderi said...

ದೈವದಿಂದಲೋ ಸ್ಥೈರ್ಯದಿಂದಲೋ, ಇಷ್ಟಾರ್ಥ ನೆರವೇರಿದರೆ ಆಯ್ತಲ್ಲ..? ಗುಡ್ ಕಥೆ..

Manasaare said...

ಪ್ರಕಾಶ್ ಅವರೇ ,
ನಿಮ್ಮ ಕಥೆ ಓದಿ ಒಂದು ಕ್ಷಣ ಏನೋ ಹೇಳಿಕೊಳ್ಳಲು ಅಗದಂತ ವೇಧನೆ ಅನುಭವಿಸಿದೆ . ಕಣ್ಣಲ್ಲಿ ನೀರು ಜೆನಿಗಿತು . ನಿವೊಬ್ಬ ಅದ್ಭುತ ಕಥೆಗಾರ್ , ಓದುಗರ ಕಣ್ಣಿನಲ್ಲಿ ನೀರು ಬಂದರೆ ಅದಕಿಂತ ಹೆಚ್ಚಿನ್ complement ಇನ್ನೊಂದಿರಲಾರದು ನಾನು ಒಬ್ಬ ಸೊಸೆ ಹಾಗೂ ಗಂಡು ಮಗುವಿನ ತಾಯಿ ಕೂಡ ಅದ್ದರಿಂದ ಕಥೇಲಿ ಬರುವ ಅತ್ತೆ -ಸೊಸೆ ಇಬ್ಬರ ಭಾವನೆಗಳು ಅರ್ಥ ಆಗುತ್ತವೆ . ಇವಾಗ ನನ್ನ ಮಗ ಹುಟ್ಟಿದ ಮೇಲೆ , ಮಕ್ಕಳೆಂದರೆ ತಾಯಿಗೆ ಏನು ಅಂತ ಅರ್ಥ ಆದ್ಮೇಲಂತೂ ಅತ್ತೆ ಇನ್ನು ಸ್ವಲ್ಪ ಅರ್ಥ ಆಗಿದ್ದಾರೆ . ಒಂದೇ ಮನೇಲಿ ಇದ್ದ ಮೇಲೆ ಸುಮಾರು ಸಲ difference ಬಂದೆ ಬರುತ್ತೆ , ಅದನ್ನ ಇಲ್ಲ ಅಂತ ಹೇಳೋಲ್ಲ ಆದ್ರೆ ಅದು ಮನೆಯ ನೆಮ್ಮದಿ ಹಾಳು ಮಾಡೋ ಲೆವೆಲ್ಗೆ ಮಾತ್ರ ಹೋಗಬಾರದು . ಒಂದು ಮಾತ್ರ ನಿಜ ಮನೆಯ ಸುಖ ನೆಮ್ಮದಿ ಅತ್ತೆ ಸೊಸೆಯಾರ ಕೈಯಲ್ಲಿ ಇದೆ .

ಮನಸಾರೆ

ಮನಸು said...

ಪ್ರಕಾಶಣ್ಣ,
ಕಥೆ ಚೆನ್ನಾಗಿದೆ, ಜೀವನದಲ್ಲಿ ಹೀಗೆ ಏರುಪೇರುಗಳು ನೆಡೆಯುತ್ತಲೇ ಇರುತ್ತವೆ...ಹೊಂದಾಣಿಕೆ ಅವಶ್ಯ .......

ಸವಿಗನಸು said...

ಪ್ರಕಾಶಣ್ಣ.,
ಓದಿ ಮನಸು ಭಾರವಾಯಿತು....
ಮನ ಕಲಕುವ ಕಥೆ....
ಅ೦ತ್ಯ ತು೦ಬಾ ಕಠೋರವಾಗಿತ್ತು....
ಯೂರಿಗೂ ಇಂತಹ ಪರಿಸ್ಥಿತಿ ಬೇಡ....
ತು೦ಬಾ ಚೆನ್ನಾಗಿ ಬರೆದಿದ್ದಿರಿ ...

Unknown said...

ಕಥೆಯ ವಸ್ತು ತುತ್ತಾ ಮುತ್ತಾ ಹಳೆಯದೇ ಆದರೂ ಅದನ್ನು ನೀವು ನಿರೂಪಿಸಿರುವ ರೀತಿ ಮಾತ್ರ ಅದ್ಭುತ. ಕಥೆಯ ೋಟ ನಾಗಾಲೋಟದಿಂದ ಕೂಡಿದೆ. ಒಂದರೆಕ್ಷಣವೂ ಮನಸ್ಸನ್ನು ಅತ್ತಿತ್ತ ಕದಲು ಬಿಡದೆ ಓದಿಸಿಕೊಳ್ಳುತ್ತದೆ.

ಅಲೆಮಾರಿ said...

great response prakashanna.khushi aatu:)

* ನಮನ * said...

ಆತ್ಮೀಯ ಪ್ರಕಾಶ್ ಮನ ಮುಟ್ಟುವ ಕತೆ,ನಾಸ್ತಿಕನಾದ ನನಗೆ ಅಮ್ಮನೇ ದೆವರೆನ್ನಲು ನಾನು ಮೊರನೆ ತರಗತಿಯಲ್ಲಿರುವಾಗಲೆ ಅಮ್ಮನು ಇಲ್ಲವಾದರು, ಡಿ.ವಿ.ಜಿ.ಜನ್ಮದಿನಾಚರಣೆ ಇಟ್ಟಿಗೆ ಸಿಮೆಂಟಿಗಾಗಿ...............


ಕಟ್ಟಡದ ಪರಿಯನಿಟ್ಟಿಗೆಯೆಂತು ಕಂಡೀತು ?|
ಗಟ್ಟಿ ನಿಲದದು ಬೀಳೆ ಗೋಡೆ ಬಿರಿಯುವುದು ||
ಸೄಷ್ಟಿ ಕೋಟೆಯಲಿ ನೀನೊಂದಿಟಿಗೆ ; ಸೊಟ್ಟಾಗೆ |
ಪೆಟ್ಟು ತಿನ್ನುವೆ ಜೋಕೆ- ಮಂಕುತಿಮ್ಮ ||
ಕಟ್ಟಡವು ಯಾವ ರೂಪದಲ್ಲಿ ಬರುವುದೆಂದು ಇಟ್ಟಿಗೆಗೆ ಹೇಗೆ ತಿಳಿಯುತ್ತದೆ ?ಇಟ್ಟಿಗೆ ಗಟ್ಟಿಯಾಗಿ ನಿಲ್ಲದಿದ್ದರೆ,ಗೋಡೆಯಲ್ಲಿ ಬಿರುಕುಂಟಾಗುತ್ತದೆ,ಜಗತ್ತು ಎನ್ನುವ ಈ ಕೋಟೆಯಲ್ಲಿ,ನೀನು ಒಂದು ಇಟ್ಟಿಗೆ ಮಾತ್ರ,ಇಟ್ಟಿಗೆ ಸರಿಯಾಗಿ ನಿಲ್ಲದೆ ಗೋಡೆ ಸೊಟ್ಟಾದರೆ,ಅದನ್ನು ನೆಟ್ಟಗೆ ಮಾಡಲು, ನಿನ್ನನ್ನು ಹೊಡೆಯುತ್ತಾರೆ,ಹುಶಾರಾಗಿದ್ದು,ಗೋಡೆ ಸೊಟ್ಟಗಾಗದಿರುವಂತೆ ನೀನು ನಿಲ್ಲು.

ಬಿಸಿಲ ಹನಿ said...

ಪ್ರಕಾಶ್ ಸರ್,
ನಮ್ಮ ಮನೆಯ ಹಿರಿಯರಿಗೆ ನಾವು ಯಾಕೆ ಗೌರವ ಕೊಡುವದಿಲ್ಲ...?
ಹೆಂಡತಿ, ಮಕ್ಕಳ ಪ್ರೀತಿಯಲ್ಲಿ..
ಹಿರಿಯರನ್ನೇಕೆ ಮರೆಯುತ್ತೇವೆ...?

ಹೆಂಡತಿ ಏಕೆ ಅತ್ತೆಯನ್ನು ಪ್ರೀತಿಸ ಬಾರದು...?

ಮನೆಯಲ್ಲಿ ಹಿರಿಯರು ತಪ್ಪು ಮಾಡುವದಿಲ್ಲ ಎನ್ನುವದು ತಪ್ಪಾಗುತ್ತದೆ...
ಅವರೂ ಮನುಷ್ಯರು...
ತಪ್ಪಾಗುತ್ತದೆ...

ಅವರ ಹಿರಿತನಕ್ಕೆ...
ಅವರ ಹಿರಿತನದ ಬಾಳ್ವೆಗೆ...

ಅವರಿಗೊಂದು ನೆಮ್ಮದಿಯ ಸಾವನ್ನು ನಮಗೇಕೆ ಕೊಡಲಾಗುವದಿಲ್ಲ...??

ಇದು ನನ್ನನ್ನು ಬಹಳ ಕಾಡುವ ಪ್ರಶ್ನೆ...

ನಾನೂ ಕೂಡ ಅವಾಗವಾಗ ಕೇಳಿಕೊಳ್ಳುವ ಪ್ರಶ್ನೆ ಇದು. ಉತ್ತರ ಹುಡುಕುತ್ತಿದ್ದೇನೆ ಸಿಗುತ್ತಿಲ್ಲ. ಬಹುಶಃ ಉತ್ತರ ಸಿಗದ ಪ್ರಶ್ನೆಯೇನೋ!

Ittigecement said...

ಶಾಂತಲಾ....

ಎಂಥಹ ಚಂದದ ಪ್ರತಿಕ್ರಿಯೆ...!!
ನಿಜಕ್ಕೂ ಖುಷಿಯಾಗುತ್ತದೆ...

ದೇಹದ ಮೇಲೆ ಹಿಡಿತವಿಲ್ಲದ ವಯಸ್ಸು...
ಸಹಜ ಪ್ರೀತಿಯ ಸಹಾಯ ಕೇಳಲೂ ಹಿಂಜರಿಯುತ್ತದೆ ಮನಸ್ಸು...
ಸೂಕ್ಷ್ಮ ಮನಸ್ಸಿನವರಿಗೆ ಒಂದು ಬಿರು ನುಡಿ ಸಾಕಾಗುತ್ತದೆ ನೊಂದು ಕೊಳ್ಳಲು..
ಆ ವಯಸ್ಸಿನಲ್ಲಿ..
ಎಲ್ಲರೂ ಇದ್ದು..
ತಾನು ಒಂಟಿ...
ತನ್ನವರೆನ್ನುವವರು ಯಾರೂ ಇಲ್ಲ
ತಾನು ಅತಂತ್ರ, ಅಸಹಾಯಕ.. ಎನ್ನುವ ಭಾವನೆ ಬಂದು ಬಿಟ್ಟರೆ...?

ನಮ್ಮ ಹಿರಿಯರ ...
ಇಳಿವಯಸ್ಸಿನ ಬದುಕು ಹಾಗಾಗಬಾರದು...
ಅದು ನಮ್ಮ ಜವಾಬ್ದಾರಿ...

ಜಿ,ಎಸ್,ಎಸ್. ರ ಕವನದಲ್ಲಿ ಎಷ್ಟೆಲ್ಲಾ ಅರ್ಥವಿದೆ...!

ಸಿಂಗಾಪುರದಲ್ಲಿರುವ ನನ್ನ ತಮ್ಮ ಈ ಹಾಡನ್ನು ತುಂಬಾ ಸೊಗಸಾಗಿ ಹಾಡುತ್ತಾನೆ...!

ಶಿವರುದ್ರಪ್ಪನವರ ಇನ್ನೊಂದು ಹಾಡೂ ಕೂಡ ನೆನಪಾಗುತ್ತದೆ...

"ಪ್ರೀತಿ ಇಲ್ಲದ ಮೇಲೆ...
ಮಾತಿಗೆ ಮಾತು..."

ಅದರ ಪೂರ್ಣ ಪಾಠ ಮರೆತು ಹೋಗಿದೆ...

ಶಾಂತಲಾ ತುಂಬಾ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಲೋದ್ಯಾಶಿಯವರೆ...

ವಿಭಕ್ತ, ಅವಿಭಕ್ತ ಕುಟುಂಬಗಳಲ್ಲಿ
ಧನಾತ್ಮಕ ಅಂಶಗಳೂ ಇವೆ...
ಋಣಾತ್ಮಕ ಅಂಶಗಳೂ ಇವೆ...

ಏನೇ ಇದ್ದರೂ...
ಹೆತ್ತವರನ್ನು, ಹಿರಿಯರನ್ನು
ಇಳಿವಯಸ್ಸಿನಲ್ಲಿ ಕಡೆಗಣಿಸುವದು ಯಾವ ನ್ಯಾಯ...?

ಒಂದು ಚಿಕ್ಕ ಸಾಂತ್ವನ...
ಅವರೊಡನೆ ಸ್ವಲ್ಪ ಸಮಯದ ಹರಟೆ..
ಆರೋಗ್ಯದ ಬಗೆಗೆ ಕಾಳಜಿಯ ಎರಡು ಮಾತುಗಳು...
ಇಷ್ಟೇ ಸಾಕು ಅವರನ್ನು ಉಲ್ಲಾಸಿತರನ್ನಾಗಿ ಇಡ ಬಹುದು...

ನಮ್ಮ ನಿತ್ಯದ ಒತ್ತಡದ ಬದುಕಿನಲ್ಲಿ ಅವರೂ ಕೂಡ ಮಹತ್ವದವರು ಅನ್ನುವಂಥಹ ಭಾವನೆಯನ್ನು
ನಾವು ಅವರಲ್ಲಿ ಮೂಡಿಸ ಬೇಕು..
ಮೊದಲು ಅವರ ಬಗೆಗೆ ಗೌರವ ಭಾವನೆ ನಮ್ಮಲ್ಲಿರಬೇಕು... ಅಲ್ಲವಾ...?

ಧನ್ಯವಾದಗಳು... ಲೋದ್ಯಾಶಿಯವರೆ...

Ittigecement said...

ರಂಜಿತಾ...

ನಮ್ಮ ನಿತ್ಯದ ಬದುಕಿನಲ್ಲಿ..
ಸಣ್ಣ ಪುಟ್ಟ ಮಾತುಗಳು...
ಬರುತ್ತದೆ... ಹೋಗುತ್ತದೆ..
ಅದಲ್ಲ...

ಒಟ್ಟಿಗೆ ಬಾಳುತ್ತಿರುವಾಗ ಹೊಂದಾಣಿಕೆಯ ..
ಹಿರಿಯರಿ ಗೌರವ ಕೊಡುವ...
ನಮ್ಮ ಮಕ್ಕಳಿಗೆ ನಾವು ಆದರ್ಶವಾಗುವ ನಡತೆ ನಮ್ಮದಾಗ ಬೇಕು..
ನಮ್ಮ ಹಿರಿಯರಿಗೆ ನಾವು ಗೌರವ ಕೊಡದೇ ಇದ್ದಲ್ಲಿ...
ನಾಳೆ ನಮ್ಮ ಮಕ್ಕಳು ಹೇಗೆ ನಮ್ಮನ್ನು ಗೌರವಿಸ ಬಲ್ಲರು ?

ಕಥೆ ಕಲ್ಪನೆಯಾದರೂ...
ವಾಸ್ತವಿಕತೆಗೆ ಹತ್ತಿರ ಇರಬಹುದಲ್ಲವೆ...?

ನಾನು ಮೊದಲೇ ಹೇಳಿದ ಹಾಗೆ
ಬದುಕಿನ ಬಣ್ಣಗಳನ್ನು ಈ ಕಥೆಗಳಲ್ಲಿ ಬಿಚ್ಚಿಡುವ ಪ್ರಯತ್ನ...

ಧನ್ಯವಾದಗಳು ರಂಜಿತಾ...

ಕ್ಷಣ... ಚಿಂತನೆ... said...

ಪ್ರಕಾಶಣ್ಣ,

ಇಷ್ಟಾರ್ಥ...

ಇದು ಕಥೆ ಎನಿಸಿದರೂ, ನಿತ್ಯ ಜೀವನದಲ್ಲಿ ಇಂತಹ ಅನೇಕವು ನಡೆದಿರುತ್ತವೆ, ನಡೆಯುತ್ತಿರುತ್ತವೆ...
ಆಸ್ತಿಕ ನಾಸ್ತಿಕನಾಗುವುದು, ನಾಸ್ತಿಕ ಆಸ್ತಿಕನಾಗುವುದು ಅವರವರ ನಂಬಿಕೆಗೆ ಬಿಟ್ಟಿದ್ದೆಂದರೂ...ಇದನ್ನೆಲ್ಲ ನಡೆಸುವ ಒಂದು ಕಾಣದ ಶಕ್ತಿಯಂತೂ ಇದ್ದೇ ಇದೆ. ಪ್ರತಿಯೊಬ್ಬರ ಅನುಭವಕ್ಕೆ ಬಂದೇ ಬಂದಿರುತ್ತದೆ.

ಅಲ್ಲದೆ, ಈ ಕಥಾ ನಾಯಕನು ಒಂದು ಕಡೆ 'ದೇವರೆ...!
ಯಾಕಾದರೂ ಇಂಥಹ ಸ್ಥಿತಿ ತಂದಿಡುತ್ತೀಯಾ...?
ಎಂದು ಪ್ರಶ್ನಿಸಿಕೊಳ್ಳುತ್ತಾನೆ.

ಎಲ್ಲಕ್ಕೂ ಕಾಲನೇ ಉತ್ತರ ಹೇಳುವವನು. ಇಲ್ಲಿ ನಂಬಿಕೆ (ಅದು ಅವನ ತಾಯಿಯದಿರಬಹುದು ಅಥವಾ ಆಗತಾನೇ ತನ್ನ ಮನಸ್ಸಿನಲ್ಲಿಯೇ ಮೂಡಿದ್ದಿರಬಹುದು) ಮುಖ್ಯವೆನಿಸುತ್ತದೆ, ಇದು ನನ್ನ ಅನಿಸಿಕೆ ಹಾಗೂ ಇವೆಲ್ಲ ದಿನನಿತ್ಯದಲ್ಲಿನ ಪಾತ್ರಗಳೇ ಆಗಿವೆ...

ಸ್ನೇಹದಿಂದ,

AntharangadaMaathugalu said...

ಪ್ರಕಾಶ್ ಸಾರ್..
ಇದು ಕಥೆಯಾದರೂ ವಾಸ್ತವಿಕವೇ... ಬಹುತೇಕ ಎಲ್ಲರ ಮನೆಯ ಕಥೆಯೇ... ಬರಿಯ ಸೊಸೆಯನ್ನೋ ಅಥವಾ ಅತ್ತೆಯನ್ನೋ ದೂರಲಾಗುವುದಿಲ್ಲ ಇಲ್ಲಿ... ಕೆಲವು ಹಿರಿಯರು ಸುತರಾಂ ಅನುಸರಿಸುವುದಿಲ್ಲ, ನಾನು ಅದನ್ನೂ ನೋಡಿದ್ದೇನೆ... ಸೊಸೆ ಮನೆಗೆ ಬಂದಾಗ, ವಯಸ್ಸಿನಲ್ಲಿ ಹಿರಿಯಳಾದ ಅತ್ತೆ, ಸೊಸೆಯನ್ನು ತುಂಬು ಹೃದಯದಿಂದ ಬರಮಾಡಿಕೊಂಡು, ಅತ್ತೆಯ ಬದಲು ಅಮ್ಮನಾಗಲು ಪ್ರಯತ್ನಿಸಿದರೆ, ಸೊಸೆಯೂ ಸೊಸೆಯಾಗುಳಿಯದೇ ಮಗಳಾಗ ಬಹುದು.. . ವಿಜ್ಞಾನ ಎಷ್ಟು ಮುಂದುವರೆದರೂ ನಾವು ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಗಳನ್ನು ತಂದುಕೊಳ್ಳದಿದ್ದರೆ ಈ ಸಮಸ್ಯೆ ಎಂದೆಂದಗೂ ಪರಿಹಾರವಾಗುವುದಿಲ್ಲ ... ನಾವು ಹಿರಿಯರಾಗಿ ಗೌರವ ಗಳಿಸುವಂತೆ ನಡೆದುಕೊಳ್ಳಬೇಕು ಅಲ್ವಾ ಸಾರ್... ಇದು ನನ್ನ ವೈಯುಕ್ತಿಕ ಅಭಿಪ್ರಾಯ ಅಷ್ಟೆ.... ಕಥೆಯ ನಿರೂಪಣೆ ಹೃದಯಸ್ಪರ್ಶೀಯವಾಗಿದೆ..

jaya said...

ಹನ್ನೆರಡು ವರ್ಷಗಳ ಹಿಂದೆ ನಮ್ಮತ್ತೆಯವರು ಅನಾರೋಗ್ಯದಿಂದ ಆಸ್ಪತ್ರೆಗೆ ಧಾಖಲಾಗಿದ್ದರು. ವೈದ್ಯರು ಕೈ ಚೆಲ್ಲಿದಾಗ ವಿಧಿ ಇಲ್ಲದೆ ನಮ್ಮ ಬಾವನವರಿಗೆ ಫೋನ್ ಮಾಡಿ (ಇರುವ ವಿಷಯವನ್ನೇ ಹೇಳಿ) ಬರಲು ತಿಳಿಸಿದೆವು. ಮರು ದಿನ ಮದ್ಯಾಹ್ನದ ವೇಳೆಗೆ ಬಾವನವರೋಬ್ಬರೇ ಬಂದಾಗ ನನಗೆ ನಿಜಕ್ಕೂ ಆಘಾತವೇ ಆಯಿತು. (ನಮ್ಮ ಮಾವನವರಿಗೂ) ಕೊನೆಗೆ ಮನ ತಡೆಯದೆ ನಾನು ವೀಣಾ (ಅವರ ಪತ್ನಿ) ಮತ್ತು ಮಗಳನ್ನು ಕರೆತರಲಿಲ್ಲವೇ ಎಂದಾಗ ನಮ್ಮ ಬಾವನವರು ಥಟ್ ಎಂದು ಹೇಳಿದ್ದು " ಇಲ್ಲಿ ಪರಿಸ್ಥಿತಿಯನ್ನು ನೋಡಿ ಅವರನ್ನು ಕರೆಸುತ್ತೇನೆ ಎಂದಾಗ ನನಗಾದ ಆಘಾತ ಅಷ್ಟಿಷ್ಟಲ್ಲ. ಆದರು ಸಿಟ್ಟಿನಿಂದ ನಿಮ್ಮ ಮಾತಿನ ಅರ್ಥವೇನು? ಅಮ್ಮನಿಗೆ ಹೆಚ್ಚು ಕಡಿಮೆಯಾದರೆ ಕೊನೆಯದಾಗಿ ಮುಖ ನೋಡಲು ನಿಮ್ಮ ಹೆಂಡತಿಯನ್ನು ಕರೆಸುತ್ತೀರಾ ಎಂದಾಗ ನನ್ನ ಕಣ್ಣಲ್ಲಿ ನೀರಿತ್ತು, ನನ್ನವರು ಅಲ್ಲಿಂದ ಎದ್ದು ಹೋದರು. ಮಕ್ಕಳಿಗಾಗಿ ಹಂಬಲಿಸುವ ತಾಯಿಯನ್ನು ನೋಡಲು ಮಕ್ಕಳಿಗೆ ಸಮಯವಿರುವುದಿಲ್ಲ. ಎಂಥ ವಿಪರ್ಯಾಸ ಅಲ್ಲವೇ?

PARAANJAPE K.N. said...

ಇದು ಕಥೆ ಅನ್ನಿಸುವುದೇ ಇಲ್ಲ, ವಾಸ್ತವ ಘಟನೆಯೊ೦ದನ್ನು ನೀವು ಸಚಿತ್ರ ವರ್ಣಿಸಿದ೦ತೆ ಬರೆದಿದ್ದೀರಿ. ಚೆನ್ನಾಗಿದೆ.

Ittigecement said...

ದೇಸಾಯಿಯವರೆ...

ಬೇಸರಿಸ ಬೇಡಿ...
ಸ್ವಲ್ಪ ಕೆಲಸದ ಒತ್ತಡದಿಂದಾಗಿ ಗೆಳೆಯರ ಬ್ಲಾಗಿಗೆ ಹೋಗಲಾಗಲಿಲ್ಲ...
ಸ್ವಲ್ಪ ಬಿಡುವಾದಾಗ ಬ್ಲಾಗ್ ಕಥೆ ಬರೆದೆ...
ಇನ್ನು ಮುಂದೆ ನಿಮ್ಮೆಲ್ಲರ ಬ್ಲಾಗಿಗೆ ಬರುವೆ...

ಶೇಷನಾರಾಯಣರು ಕಥಾಲೋಕದಲ್ಲಿ ತುಂಬ ದೊಡ್ಡ ಹೆಸರು..
ಅವರಿಗೂ..
ನನಗೂ ಹೋಲಿಕೆ ಅಜಗಜಾಂತರ...

ನೀವೆಲ್ಲ ಕಥೆಯನ್ನು ಮೆಚ್ಚಿ ಪ್ರೋತ್ಸಾಹದ ನುಡಿ ಬರೆದದ್ದು...
ನನಗೆ ಮತ್ತಷ್ಟು ಉತ್ಸಾಹ ಕೊಟ್ಟಿದೆ...
ಇನ್ನಷ್ಟು ಬರೆಯಲು ಸ್ಪೂರ್ತಿ ಕೊಡುತ್ತಿದೆ...

ತುಂಬಾ... ತುಂಬಾ ಥ್ಯಾಂಕ್ಸ್...

ನಾನು ನಿಮ್ಮ ಬ್ಲಾಗಿಗೆ ಸಧ್ಯದಲ್ಲೇ ಬರುವೆ...

Ittigecement said...

ವಿನೂತಾ...

ನನ್ನಾಕೆಯವರೂ ಸಹ ನಿಮ್ಮ ಮಾತನ್ನೇ ಹೇಳಿದ್ದರು...
ಇಷ್ಟು ಕ್ರೂರವಾದ ಅಂತ್ಯ ಬೇಡ ಅಂತ..

ಕಥಾ ನಾಯಕನಿಗೆ
ದಿನ ನಿತ್ಯದ ಜಗಳ..
ಚುಚ್ಚು ಮಾತು ಕೇಳಿ..

ತನ್ನ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಲಾಗುವದಿಲ್ಲವೆಂಬ ಕಟು ಸತ್ಯ...

ತನ್ನ ತಂಗಿಯ ಮನೆಯಲ್ಲಿ ಅಮ್ಮ ಉಳಿದರೆ ತನಗೆ " ಮಾನ. ಮರ್ಯಾದೆ " ಹೋಗುತ್ತದೆ...ಅದು ಅವಮಾನ..

ಈ ಎಲ್ಲ ಕಾರಣಗಳಿಂದ
ಅವನ "ಪ್ರಾರ್ಥನೆ" ಸರಿಯೆಂಬುದು ನನ್ನ ಅಭಿಪ್ರಾಯ...
ಅಲ್ಲವಾ...?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಸುಶ್ರುತ....

ಅವಮಾನ...
ಅಸಹಾಯಕತೆ...

ನಂಬಿದ ಮೌಲ್ಯಗಳ ಪರೀಕ್ಷೆ ಮಾಡುತ್ತವೆ... ಅಲ್ಲವಾ...?

ಕಥೆ ಇಷ್ಟವಾಗಿದ್ದಕೆ ಧನ್ಯವಾದಗಳು...

Ittigecement said...

ಮನಸಾರೆ....

ಎಷ್ಟು ಚಂದದ.. ಮಾತು ಹೇಳಿದ್ದೀರಿ...!

ಭಿನ್ನಾಭಿಪ್ರಾಯ ತೀರಾ ಸಹಜ...
ಸ್ವಲ್ಪ ತಾಳ್ಮೆ...
ತಿಳುವಳಿಕೆ...
ಹೊಂದಾಣಿಕೆ..
ಇದ್ದು ಬಿಟ್ಟರೆ... ಯಾವುದೂ ಕಷ್ಟ ಅಲ್ಲ ಅಲ್ಲವಾ...?

ತಂದೆ, ತಾಯಿ, ಮಗ , ಸೊಸೆ ಒಟ್ಟಿಗೆ ಬದುಕುವದು ಯಾಕೆ ?

ಎಲ್ಲರೂ ಪ್ರೀತಿಗಾಗಿ ಹಂಬಲಿಸುತ್ತಾರೆ...

ಅದೇ ಪ್ರೀತಿಗಾಗಿ ಜಗಳ ಮಾಡಿಕೊಂಡು ಮನಸ್ತಾಪ ಮಾಡಿಕೊಂಡು ಬಿಡುತ್ತಾರೆ...

ತನಗೊಬ್ಬನಿಗೇ ಪ್ರಿತಿ ಮೀಸಲಿರಬೇಕು...
ಅನ್ನುವ ಸ್ವರ್ಥ ಇಷ್ಟೆಲ್ಲ ಮಾಡಿಸಿಬಿಡುತ್ತದಾ?

ಪ್ರೀತಿಯನ್ನು ಹಂಬಲಿಸಿ...
ಸಿಕ್ಕಿದಾಗ ಹಂಚಿಕೊಂಡು ಬಾಳುವದನ್ನು ಅರಿತರೆ... ಎಲ್ಲವೂ ಸುಲಭ..

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ಪ್ರಕಾಶಣ್ಣ...

Ittigecement said...

ಮನಸು....

ವ್ಯಕ್ತಿಗಳ ನಡುವೆ ಭಿನ್ನಾಭಿಪ್ರಾಯ ಸಹಜ....

ಗಂಡ, ಹೆಂಡತಿ..
ಅಪ್ಪ ಮಗ..
ತಾಯಿ ಮಗ.. ಭಿನ್ನಾಭಿಪ್ರಾಯ ಬಂದೇ ಬರುತ್ತದೆ...

ಅದನ್ನು..
ತಾಯಿ, ಮಗಳು ಪರಿಹರಿಸಿಕೊಳ್ಳುವದಕ್ಕೂ...
ಅತ್ತೆ ಸೊಸೆ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳುವದಕ್ಕೂ ತುಂಬಾ ವ್ಯತ್ಯಾಸ ಇದೆ ಅಲ್ಲವೆ?

ಯಾಕೆ ಹೀಗೆ..?
ಯಾರೂ ದಡ್ಡರಲ್ಲ...
ತಮ್ಮ ಬದುಕನ್ನು ಸಂತೋಷವಾಗಿ ಹೇಗೆ ಇಟ್ಟುಕೊಳ್ಳ ಬೇಕೆಂದು ಎಲ್ಲರಿಗೂ ತಿಳಿದಿರುತ್ತದೆ...
ಆದರೂ...
ಯಾಕೆ ಈ ಜಿಡ್ಡು ? ಜಿದ್ದು ?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸವಿಗನಸು (ಮಹೇಶ್)...

ಕಥಾನಾಯಕ ನಾಸ್ತಿಕ...
ಮೊದಲ ಬಾರಿಗೆ...
ಅಸಹಾಯಕತೆ..
ಅವಮಾನ
ದುಃಖದಿಂದ ದೇವರ ಬಳಿ ಬೇಡುತ್ತಿದ್ದಾನೆ...
ತನಗಾಗಿ ಅಲ್ಲ...

ಅಮ್ಮನ ನಂಬಿಕೆಗಾಗಿ...
ಅವಳ ಬದುಕಿಗಾಗಿ...

ತಾನು ಅವಳ ಅಂತ್ಯಕಾಲದಲ್ಲಿ ಕೊಡಲಾಗದ ಸುಖ, ಸಂತೋಷ..... ಸಾವು ಕೊಡಲಿ ಅಂತನಾ ?

ತಾಯಿ ತಂಗಿ ಮನೆಯಲ್ಲಿದ್ದರೆ ತನಗೆ ಅವಮಾನ ಅಂತನಾ ?

ಎಲ್ಲಕಡೆ...
ಎಲ್ಲ ರೀತಿಯಿಂದಲೂ... ಮನುಷ್ಯನ ಕೆಟ್ಟ ಸ್ವಾರ್ಥ ರಪ್ಪೆಂದು ರಾಚುತ್ತದೆ ಅಲ್ಲವಾ ?

ಮಹೇಶ್ ಧನ್ಯವಾದಗಳು....

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ಇದು ಕೆವನ ಕಥೆ ಮಾತ್ರವಲ್ಲ
ಬಹಳಷ್ಟು ಮನೆಗಳಲ್ಲಿನ ನಿತ್ಯ ಸತ್ಯ ಸಂಗತಿ
ತಾಯಿ ಮಗಳು ಓಕೆ,
ಆದರೆ ಅತ್ತೆ ಸೊಸೆ ನಡುವೆ ಜಗಳ ಯಾಕೆ?
ಅರ್ಥವೇ ಆಗದ ಪ್ರಶ್ನೆಗಳಿವು
ಒಳ್ಳೆಯ ಬರಹ

shivu.k said...

ಸರ್,

ಇದೇನಿದು ಇಷ್ಟೊಂದು ವಾಸ್ತವದ ಆನಾವರಣ ಅಂತ ಮೊದಲು ಅನ್ನಿಸಿದರು ಕೊನೆಗೆ ಕತೆ ಅಂತ ಗೊತ್ತಾಯಿತು...

ತುಂಬಾ ಚೆನ್ನಾಗಿದೆ.

Ittigecement said...

ಸತ್ಯನಾರಾಯಣ ಸರ್....

ಕಥಾ ವಸ್ತು ನಮ್ಮ ದೈನಂದಿನ ಬದುಕಿನಲ್ಲೇ ಸಿಕ್ಕಿಬಿಡುತ್ತದೆ... ಅಲ್ಲವೆ ?
ನಮ್ಮ ಅನುಭವಗಳು..
ತುಸು ಒಗ್ಗರಣೆ...
ಮಸಾಲೆ...
ಸ್ವಲ್ಪ ಖಾರ...

ರುಚಿಗೆ ತಕ್ಕಷ್ಟು ಉಪ್ಪು , ಹುಳಿ...

ಕಥೆ ತಯಾರಾಗಿ ಬಿಡುತ್ತದಲ್ಲವೆ ?

ನಿಮ್ಮ ಮೆಚ್ಚುಗೆಯ ನುಡಿಗಳು ಇನ್ನಷ್ಟು ಬರೆಯಲು ಉತ್ಸಾಹ ಕೊಟ್ಟಿದೆ...

ತುಂಬು ಹೃದಯದ ಕೃತಜ್ಞತೆಗಳು...

Ittigecement said...

ಗೌತಮ್....

ಕಥೆಯನ್ನು ಓದಿ...
ತಪ್ಪು, ಒಪ್ಪುಗಳನ್ನು ತಿಳಿಹೇಳಿದ್ದಕ್ಕೆ ಕೃತಜ್ಞತೆಗಳು...

ನೀವು ಹೇಳಿದ ಹಾಗೆ ಇನ್ನು ಮುಂದೆ ಎಲ್ಲ ಪ್ರತಿಕ್ರಿಯೆಗಳಿಗೆ..
ಕಷ್ಟವಾದರೂ ಕೃತಜ್ಞತೆ ಹೇಳುವೆ...

ಥ್ಯಾಂಕ್ಸ್... ಥ್ಯಾಂಕ್ಸ್... ಗೌತಮ್ !

Ittigecement said...

ನಮನ (ಗಣೇಶ್)....

ನಿಮ್ಮ ಬದುಕು...
ಎದುರಿಸಿದ ಕಷ್ಟಗಳು...
ಸಾಧನೆಗಳು...
ನಿಮ್ಮ ಹವ್ಯಾಸಗಳು...
ಜ್ಞಾನ..


ಎಲ್ಲವೂ ನಮಗೆಲ್ಲರಿಗೆ ಆದರ್ಶ...

ನೀವು ಇಷ್ಟಪಟ್ಟಿದ್ದು ತುಂಬಾ ಖುಷಿಯಾಗುತ್ತದೆ...

ಇಂದು ಡಿವಿಜಿಯವರ ಜನ್ಮದಿನ...

ಅವರಂತು ಆಧ್ಯಾತ್ಮದ ಕಣಜವಾಗಿದ್ದರು...

ಎಷ್ಟು ಚಂದದ ಮಾತುಗಳನ್ನು (ಡಿವಿಜಿಯವರ) ಉದಾಹರಿಸಿದ್ದೀರಿ...

ತುಂಬಾ ತುಂಬಾ ಧನ್ಯವಾದಗಳು...

ಬರುತ್ತಾ ಇರಿ...

ನೀವು ಯಾಕೆ ಬ್ಲಾಗ್ ಬರೆಯ ಬಾರದು ?

ಬರೆಯಿರಿ ಪ್ಲೀಸ್.....

Ittigecement said...

ಉದಯ ಸರ್ (ಬಿಸಿಲ ಹನಿ)...

ನಮ್ಮ ಕುಟುಂಬ ನಾವೇ ಕಟ್ಟಿಕೊಂಡಿದ್ದಲ್ಲವೆ ?
ಸಂತೋಷವಾಗಿರಲಿಕ್ಕೆ...
ಭದ್ರತೆಗಾಗಿ...ಇರಲಿಕ್ಕೆ..

ಮತ್ತೆ ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ಮಾತನಾಡಿ ಯಾಕೆ ಪರಿಹರಿಸಿಕೊಳ್ಳುವದಿಲ್ಲ?

ಅಲ್ಲವೆ ?

ನಮ್ಮ ಕೆಲಸದ ಒತ್ತಡದ ಭರದಲ್ಲಿ..
ಮನೆಯ ಹಿರಿಯರನ್ನು ಅಲಕ್ಷಿಸಿ ಬಿಡುತ್ತೇವೆ..
ಅವರ ಬಳಿ ಕುಳಿತು ಒಳ್ಳೆಯ ಎರಡು ಮಾತುಗಳನ್ನು ಆಡುವದಿಲ್ಲ...

ನಮಗರಿವಿಲ್ಲದಂತೆ..
ಅವರಲ್ಲಿ ಅವರ ಬಗೆಗೆ "ಕೀಳರಮೆ" ಬರುವ ಹಾಗೆ ಮಾಡಿ ಬಿಡುತ್ತೇವೆ..
ಇದು ತಪ್ಪು...

ಉದಯ್ ಸರ್ ಪ್ರತಿಕ್ರಿಯೆಗಾಗಿ ಧನ್ಯವಾದಗಳು...

ಜಲನಯನ said...

ಕಥೆ ಅಂತ ಹೇಳಿ ಕಣ್ಣಲ್ಲಿ ನೀರು ತರಿಸೋದು ತರವೇನೋ ನಿನ್ಗೆ ಪ್ರಕಾಶ.....ಹೌದು...ಆದ್ರೆ ನಿನ್ನಷ್ಟು ನಾಸ್ತಿಕನಲ್ಲ....ಆಫ್ ಅಂಡ್ ಆನ್ ಅದೇನೋ ಹೇಳ್ತಾರಲ್ಲ ಡಿಮ ನ್ ಡಿಪ್ ಲೈಟು ಹಾಗೆ ನನ್ನ ಕಥೆ....ಆದ್ರೂ ಅಮ್ಮ ಅನ್ನೋ ..ಆ ಕಣ್ಣಿಗೆ ಕಾಣುವ ದೇವರ ಸಾವು-ಬದುಕಿನ ಬಗ್ಗೆ ಬಂದರೆ ಕಣ್ಣಿಗೆ ಕಾಣದವನ್ನ ಲೋ...ಯಾಕೋ ಹೀಗೆ ..ನಿನಗೆ company ಕೊಡೋಕೆ ಹೆಣ್ಣು ಗಂಡು ದೇವರುಗಳೆಲ್ಲ ಇದ್ದಾರೆ..ನನಗಿರೋದು ಒಂದೇ ತಾಯಿ ದೇವರು please spare her ಅಂತ ಕೇಳ್ಕೊಳ್ಳೋದ್ರಲ್ಲಿ ತಪ್ಪಿಲ್ಲ....
ಚನ್ನಾಗಿದೆ.....ಮುಂದೆ ಏನು..?

ಮೂರ್ತಿ ಹೊಸಬಾಳೆ. said...

ಎಲ್ಲರಿಂದ ಬೀಳ್ಕೊಂಡು ಅನ್ಯಮನಸ್ಕನಾಗಿ ಬೆಂಗಳೂರು ಏರ್ಪೋರ್ಟ್ ನ ಓಮನ್ ಏರ್ ಬೊರ್ಡಿಂಗ್ ಗೇಟ್ ನಲ್ಲಿ ಕುಳಿತು ನಿಮ್ಮ ಕಥೆಯನ್ನ ಓದಿದೆ ನಿಜವಾಗಿಯೂ ಕರುಳು ಕಿವುಚಿದಂತಾಯಿತು.
ತುಂಬಾ ಒಳ್ಳೆಯ ಕಥೆ ಬರೆದಿದ್ದೀರಿ ಹೀಗೇ ಮುಂದುವರೆಸಿ.

Ittigecement said...

ಚಂದ್ರು... (ಕ್ಷಣ ಚಿಂತನೆ...)

ಕಾಣುವ ದೇವರು ತಾಯಿಗಾಗಿ...
ಕಾಣದ ದೇವರಲ್ಲಿ ಪ್ರಾರ್ಥಿಸಿದ್ದು...
ಕೇಳಿದ್ದು..
ತನ್ನ ಮಮತೆಯ ಸಾವನ್ನು..

ಅಸಹಾಯಕತೆ..
ತನ್ನದೇ.. ಸರಿಪಡಿಸಲಾಗದ ತಪ್ಪುಗಳು..
ಪರಿಧಿಯಿಂದ ಹೊರಬರಲಾಗದೆ...
ಕಥಾನಾಯಕನನ್ನು ಕಟ್ಟಿ ಹಾಕಿವೆ..

ಕಥೆ ಇಷ್ಟವಾಗಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

Ittigecement said...

ಅಂತರಂಗದ ಮಾತುಗಳು...

ಸರಿಯಾಗಿ ಹೇಳೀದ್ದೀರಿ...

ಹಿರಿಯರಾದವರು ಮೊದಲು ಆದರ್ಶವಾಗಿರ ಬೇಕು..
ಆದರೆ ಏನಾಗುತ್ತದೆ...?
ಅವರು...
ತಮ್ಮ ಜೀವನವನ್ನು ಇಲ್ಲಿಯವರೆಗೆ...
ತಮಗೆ ಬೇಕಾದ ಹಾಗೆ.. ನಡೇದು..
ನಡೆಸಿಕೊಂಡು ಬಂದಿರುತ್ತಾರೆ..

ಸೊಸೆ ಎಲ್ಲಿ ತನ್ನ ಮಗನ ಪ್ರೀತಿಯನ್ನು ಕಸಿದುಕೊಂಡು ಬಿಡುತ್ತಾಳೊ ಎನ್ನುವ ಅತಂತ್ರದ ಭಯ!

ಅವರ ಅಲ್ಪಸ್ವಲ್ಪದ ಓದಿಗೆ.., ಜ್ಞಾನಕ್ಕೆ,
ಇಳಿವಯಸ್ಸಿನ...
ಋತುಚಕ್ರದ ಬದಲಾವಣೆ.. ಇತ್ಯಾದಿಗಳು..
ಅವರ ನಡತೆ, ಸ್ವಭಾದ ಮೇಲೆ ಪರಿಣಾಮ ಬೀರಿರುತ್ತದೆ...

ಆದರೆ ಇಲ್ಲಿ...
ಓದಿದ... ಸೊಸೆ ಸ್ವಲ್ಪ ತಾಳ್ಮೆ , ವಿವೇಕ ತೆಗೆದು ಕೊಳ್ಳ ಬಹುದಲ್ಲ.. ಎನ್ನುವದು ನನ್ನ ಸಲಹೆ ..
ತಪ್ಪೇನಮ್ಮಾ ?

ಚಂದದ ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಧನ್ಯವಾದಗಳು....

AntharangadaMaathugalu said...

ಪ್ರಕಾಶ್ ಸಾರ್...
ಖಂಡಿತಾ ತಪ್ಪೇನಿಲ್ಲಾ ಸಾರ್... ನನ್ನ ಪ್ರತಿಕ್ರಿಯೆಗೆ ನಿಮ್ಮ ಚಂದದ ಉತ್ತರ ನೋಡಿ.. ನನಗೆ ಮತ್ತೆ ನನ್ನ ಎರಡು ಮಾತುಗಳು ಹೇಳುವ ಆಸೆ... ಅಷ್ಟೆ... ಇದನ್ನು ಚರ್ಚಾ ವೇದಿಕೆ ಮಾಡುವ ಉದ್ದೇಶದಿಂದಲ್ಲ... ಎಲ್ಲಾ ಹೆಣ್ಣುಮಕ್ಕಳೂ ಮೊದಲು ಸೊಸೆಯರಾಗೇ ಆ ನಂತರ ಅತ್ತೆಯಾಗುವುದಲ್ಲವೇ? ಹಾಗಾಗಿ, ಜೀವನದ ಸಿಹಿ-ಕಹಿ ಉಂಡು, ಮಾಗಿದ, ಅನುಭವಸ್ಥರಾದ ನಾವು ಮೊದಲು ಆದರ್ಶ ಮೆರೆದರೆ, ಸೊಸೆ ನಮ್ಮನ್ನು ಅನುಸರಿಸುವುದರಲ್ಲಿ ಸಂಶಯವೇ ಇಲ್ಲ... ಪ್ರೀತಿ ಕೊಟ್ಟರೆ ಪ್ರೀತಿ ಪಡೆಯುತ್ತೇವೆಂಬುದು ನನ್ನ ಅಭಿಪ್ರಾಯ... ನನ್ನ ಉತ್ತರದಿಂದ ನಾನು ನಿಮ್ಮ ಭಾವನೆಗಳನ್ನು ನೋಯಿಸಿಲ್ಲವೆಂದು ಕೊಂಡಿದ್ದೇನೆ...

ನೀವು ನನ್ನ ಬ್ಲಾಗ್ ಗೆ ಕೂಡ ಬರದೇ ತುಂಬಾ ದಿನಗಳಾದವು. ಬನ್ನಿ ಸಾರ್... ಬಿಡುವು ಮಾಡಿಕೊಂಡು..

ಶಿವಪ್ರಕಾಶ್ said...

Nice story prakashanna :)

Ittigecement said...

ಮಂಗಳತ್ತೆ... (ಜಯಲಕ್ಶ್ಮೀ ಪಾಟಿಲ್)

"ಅವಶ್ಯಕತೆ ಇದ್ದರೆ ನಾನು, ಪಾಪು ಬರುತ್ತೇವೆ"

ನಾನು ಇಲ್ಲಿ ಬರೆದದ್ದು ಇಷ್ಟು ರಿಯಲಿಸ್ಟಿಕ್ ಆಗಿರುತ್ತದೆಂದು ಗೊತ್ತಿರಲಿಲ್ಲ...!

ಕೆಲವು ಹೆಣ್ಣುಮಕ್ಕಳು ಮದುವೆಯಾದಮೇಲೂ...
ಗಂಡನ ಮನೆಯನ್ನು ತನ್ನ ಮನೆಯನ್ನಾಗಿ ಮಾನಸಿಕವಾಗಿ ಸ್ವೀಕಾರ ಮಾಡಿರುವದೇ ಇಲ್ಲ...

ಗಂಡನ ಗಂಟು ಮಾತ್ರ ನೋಡುವ ಹೆಣ್ಣುಮಕ್ಕಳಿದ್ದರೆ...
ಅಂಥವರ ದಾಸ ಗಂಡನಾಗಿದ್ದರೆ ಇಂಥಹ ಘಟನೆಗಳು ಸಾಮಾನ್ಯ ಅಲ್ಲವಾ?

ಮೊಮ್ಮಕ್ಕಳನ್ನು ಕೊನೆಯ ಬಾರಿ ನೋಡ ಬೇಕೆನ್ನುವ ಹಿರಿಯರ ಆಸೆ ನೆನದು ಬಹಳ ಬೇಸರವಾಯಿತು...

ಇಲ್ಲಿ ಎಲ್ಲವೂ ಕೆಟ್ಟ ಸ್ವಾರ್ಥ , ಲಾಭ ದೃಷ್ಟಿ..!

ನಮ್ಮ ಕೌಟುಂಬಿಕ ಜೀವನದ ಆದರ್ಶಗಳು ಮರೆಯಾಗುತ್ತಿವೆ...

ನಿಮ್ಮ ಅನುಭವ ಕೇಳಿ ನಮಗೆ ನಿಜಕ್ಕೂ ಬೇಸರ, ದುಃಖವಾಯಿತು...

ನಿಮ್ಮ ಅನುಭವ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..

Ittigecement said...

ಪರಾಂಜಪೆಯವರೆ....

ತನ್ನ ತಂದೆ, ತಾಯಿ ಬಹಳ ನೋವು ಅನುಭವಿಸುತ್ತಿದ್ದರೆ...
ಆಗ ಮಕ್ಕಳು ದೇವರಲ್ಲಿ "ಅವರಿಗೆ ಸಾವು ದಯಪಾಲಿಸಪ್ಪಾ" ಅಂತ ಕೇಲುತ್ತಾರೆ..
ಇದು ಸಾಮಾನ್ಯ...

ಆದರೆ ತನ್ನ ಬಳಿ ಚೆನ್ನಾಗಿ, ಪ್ರೀತಿಯಿಂದ ನೋಡಿಕೊಳ್ಳಲಾಗದ ಅಸಾಹಯಕತೆ...
ತಂಗಿ ಮನೆಯಲ್ಲಿ ಅಮ್ಮನನ್ನು ಈದಲಾಗದೆ...

"ತಾಯಿಯ ಸಾವನ್ನು ಬಯಸುವದು ವಿಪರ್ಯಾಸ..."

ಈ ಕಥೆಯಲ್ಲಿ ನನ್ನ ಗೆಳೆಯನ ಅನುಭವ ಸ್ವಲ್ಪ ಸೇರಿದೆ..
ಕಲ್ಪನೆ ಜಾಸ್ತಿ ಇದೆ..

ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಸಾಗರಿ.. said...

ಸೊಸೆಯನ್ನು ಬೆಂಕಿಗೊಡ್ಡುವ ಅತ್ತೆಯಂದಿರು, ಸೊಸೆಯನ್ನು ತವರಿಗೆ ವಾಪಸ್ಸು ಕಳಿಸಿ ಕಾಲಮೇಲೆ ಕಾಲಿಟ್ಟು ಕುಳಿತು ಗತ್ತು ತೋರಿಸುವ ಅತ್ತೆಯಂದಿರು, ಹಿಂದೊಂದು ಮುಂದೊಂದು ತೋರಿಕೆ ಪ್ರೀತಿಯ ಅತ್ತೆಯಂದಿರು, ಮಗಳ ಹೊಟ್ಟೆಯಿಂದೆದ್ದು ಬಂದ ಮಗುವೇ ಜೀವ ಎಂದು ಕುಣಿಯುವ ಅತ್ತೆಯಂದಿರು, ಸೊಸೆಯೂ ಒಬ್ಬರ ಮಗಳು, ಸೊಸೆಗೂ ಆಸೆ ಆಕಾಂಕ್ಷೆ ಇದೆ ಎಂದು
ಮರೆತು ಅತಿರೇಕವಾಗಿ ವರ್ತಿಸುವ ಅತ್ತೆಯಂದಿರು ಇರುತ್ತಾರೆ. ಹಿರಿಯ ಜೀವಕ್ಕೆ ಶೋಭೆ ಕೊಡುವ ವರ್ತನೆ ಅವರಿಂದ ಅಸ್ಸಧ್ಯ.
ತಮ್ಮ ಸಮೂಹದಲ್ಲಿ ಸೊಸೆಯನ್ನು ಶಾಮೀಲು ಮಾಡಿಕೊಳ್ಳಲು ಹಿಂಜರಿವ ಅತ್ತೆಯಂದಿರೂ ಇರುತ್ತಾರೆ. ಅವರಿಗೆ ಸೊಸೆ ಮಗಳಾಗುವುದಿಲ್ಲ, ಸೊಸೆಗೆ ಅತ್ತೆ ಮಾವಂದಿರು ಅಪ್ಪ ಅಮ್ಮಂದಿರಾಗುವುದಿಲ್ಲ. ಇವರ ಜೊತೆ ಪ್ರೀತಿಯಿಂದಿರುವ ಅತ್ತೆ ಸೊಸೆಯಂದಿರೂ ಇರುತ್ತಾರೆ...ಆದರೂ ನಿಮ್ಮ ಕತೆ ತುಂಬಾ ವಾಸ್ತವಾಗಿದೆ.

Guruprasad . Sringeri said...

ಏನ್ಸಾರ್ ಇದ್ದಕ್ಕಿದ್ದಂತೆ ಸಡನ್ ಆಗಿ ಕಥೆಗೆ ಟರ್ನ್ ಕೊಟ್ಟುಬಿಟ್ರಿ....? ಟರ್ನಿಂಗ್ ಪಾಯಿಂಟ್ ಚೆನ್ನಾಗಿದೆ...! ಈ ಕಾಲದಲ್ಲಿ ಎಷ್ಟೋ ಜನಗಳಿಗೆ ಹೀಗೇ ಕಾಣುತ್ತದೆ, ಏಕೆಂದರೆ ಅವರು (ತಾಯಿ ತಂದೆಯರು) ಹೇಗೂ ವಯಸ್ಸಾದವರು, ಜೀವನದಲ್ಲಿ ಎಲ್ಲವನ್ನೂ (ಕಷ್ಟ, ಸುಖ, ಸಂತೋಷ) ಕಂಡು ಜೀವನದ ಕೊನೆಯನ್ನು ತಲುಪಿದವರು. ಇನ್ನು ಇದ್ದು ಅವರು ಮಾನಸಿಕ ವೇದನೆ ಅನುಭವಿಸುವುದಕ್ಕಿಂತ ಪರಮಾತ್ಮನ ಪಾದ ಸೇರುವುದೇ ವಾಸಿ ಎಂದೆನಿಸುತ್ತದೆ. ಆದರೆ ಪ್ರತಿಯೊಬ್ಬರೂ ಒಂದು ವಿಷಯವನ್ನು ನಿರ್ದಾಕ್ಷಿಣ್ಯವಾಗಿ ಮರೆಯುತ್ತಾರೆ. ನಮ್ಮ ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಎಷ್ಟು ಕಷ್ಟಪಟ್ಟು ಬೆಳೆಸಿರುತ್ತಾರೆ, ನಾವು ಖಾಯಿಲೆ ಬಿದ್ದಾಗ ಅವರು ನಮ್ಮನ್ನು ನೋಡಿಕೊಂಡ ರೀತಿಯನ್ನು ಒಮ್ಮೆ ನೆನಸಿಕೊಂಡರೆ...? ಖಂಡಿತವಾಗಿಯೂ ಇಂಥಾ ಪ್ರಾರ್ಥನೆಗಳನ್ನು ಮಾಡಲು ಸಾಧ್ಯವಿಲ್ಲ. ಅವರು ನಮ್ಮನ್ನು ಬೆಳೆಸಿ, ಶಿಕ್ಷಣ ಕೊಡಿಸಿ, ವಿದ್ಯಾವಂತರನ್ನಾಗಿ ಮಾಡಿದ ಮೇಲೆ ನಾವು ಅವರಿಗೆ ಮಾಡುವುದಾದರೂ ಏನು....? ಅವರು ನಮಗೋಸ್ಕರ ಇಷ್ಟೆಲ್ಲಾ ಮಾಡಿದ್ದಕ್ಕೆ ನಾವು ಅವರಿಗೆ ಇಂಥಾ ಪ್ರಾರ್ಥನೆಯನ್ನು ಮಾಡಬೇಕಾ...?

ಇದು ನಿಮ್ಮ ಕಲ್ಪನಾ ಕಥೆ ಹೌದು ಜೊತೆಗೆ ನಿಜ ಜೀವನದಲ್ಲಿ ನಾವು ಹಲವಾರು ಕಡೆ ಕಾಣುವ ಸತ್ಯವೂ ಹೌದು ಆದ್ದರಿಂದ ಈ ಕಾಮೆಂಟ್ ಹಾಕಿದ್ದೇನೆ :)

ನಿಮ್ಮ ಕಥೆಯನ್ನು ನನಗೆ ಮೊದಲು ಓದಿಸಿದಕ್ಕೆ ಧನ್ಯವಾದಗಳು,

Ittigecement said...

ಸಾಗರದಾಚೆಯ ಇಂಚರ (ಗುರುಮೂರ್ತಿ)

ಅತ್ತೆ, ಸೊಸೆಯರ ನಡುವಿನ "ಅಹಂ"
ಮಗನಿಗೆ ಉಭಯ ಸಂಕಟ..

ಇದರಿಂದ ಸಿಕ್ಕಾಪಟ್ಟೆ ನೊಂದು ನನ್ನ ಗೆಳೆಯ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ...
ಅದೃಷ್ಟ ಚೆನ್ನಾಗಿತ್ತು... ಬದುಕುಳಿದ..!
ಈಗ ಪರಿಸ್ತಿತಿ ಸುಧಾರಿಸಿದೆಯಂತೆ...
ಎಷ್ಟು ದಿನ ? ಗೊತ್ತಿಲ್ಲ..

ನಮಗೆ ಪ್ರೀತಿಯನ್ನು ಹಂಚಿಕೊಳ್ಳಲು ಬರುವದಿಲ್ಲವೆ ?

ಮಗನಿಗೆ ತಾಯಿ, ಹೆಂಡತಿಯನ್ನು ಸುಧಾರಿಸಿಕೊಂಡು ಹೋಗಲು ಬರುವದಿಲ್ಲವೆ?

ಇದನ್ನು ಅತ್ತೆ ಸೊಸೆ ಜಗಳದ ಮನೆಯವರೇ ಹೇಳ ಬೇಕು ಅಲ್ಲವಾ?

ಅತ್ತೆ, ಸೊಸೆ ಪ್ರೀತಿಯಿಂದ ( ಕೊನೆ ಪಕ್ಷ ಬಂದವರ ಎದುರಲ್ಲಿ) ಚೆನ್ನಾಗಿರುವದನ್ನು ತುಂಬಾ ನೋಡಿದ್ದೇನೆ...

ಧನ್ಯವಾದಗಳು ಗುರುಮೂರ್ತಿ......

Ittigecement said...

ಶಿವು ಸರ್....

ನಾನು ಈ ಕಥೆಯನ್ನು "ನಾನು" ಎನ್ನುವ ನಿರೂಪಕ ಇಲ್ಲದೆಯೇ ಬರೆದೆ....
ಆದರೆ ಆ ಕಥೆ ನನಗೆ ಮಾತ್ರವಲ್ಲ...
ನನ್ನಾಕೆಗೂ ಇಷ್ಟವಾಗಲಿಲ್ಲ...

ಕಥೆಯಲ್ಲಿ "ನಾನು" ಪ್ರವೇಶ ಮಾಡಿದಾಗಲೇ ಒಂದು ಸೊಗಸು ಬಂತು..
ನನಗೂ ಸಮಾಧಾನ ಆಯಿತು...

ಎಲ್ಲ ಕಥೆಗಳು ಹೀಗೆಯೇ ಆಗಿಬಿಟ್ಟರೆ ಒಂದು ರೀತಿಯ ಏಕತಾನತೆ ಅಲ್ಲವಾ?

ಇದರಿಂದ ಹೇಗೆ ಹೊರ ಬರುವದು...?
ಸಧ್ಯಕ್ಕಂತೂ ಗೊತ್ತಾಗುತ್ತಿಲ್ಲ...

ನಾನು ಇಲ್ಲದೆಯೆ ಕಥೆ ಬರೆದರೆ..

ಆ ಪಾತ್ರಗಳ ಪೋಷಣೆ, ಆಪ್ತತೆ,.... ಇನ್ನೂ ಏನೇನೊ ನನಗೆ ಸಿಗಲಿಲ್ಲ..

ಕಥೆಯಲ್ಲಿ "ನಾನು" ಪರಕಾಯ ಪ್ರವೇಶ" ಮಾಡಿದಾಗ ಕಥೆಯನ್ನು ಅನುಭವಿಸಲು ನನ್ನಿಂದ ಸಾಧ್ಯವಾಯಿತು....

ಕಥೆಯಲ್ಲಿ "ನಾನು" ಇರುವದು ತಪ್ಪಾ ?

ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು... ಶಿವು ಸರ್...

ಮಲ್ಲಿಕಾರ್ಜುನ.ಡಿ.ಜಿ. said...

ಸರ್, ಕಥೆ ತುಂಬಾ ಚೆನ್ನಾಗಿದೆ. ಆದಷ್ಟು ಬೇಗ ನಿಮ್ಮ ಕಥಾ ಸಂಕಲನ ಹೊರಬರಲಿ.

ಬಾಲು said...

ನೂರಾರು ಪುಟ ಬರೆದು ಹೇಳಾಬಹುದಾದದನ್ನ ಕೆಲವೇ ತೀಕ್ಷ್ಣ ಸಾಲುಗಳಲ್ಲಿ ಬರೆದು ಅಧ್ಬುತ ಕಥೆ ಮಾಡಿದ್ದಿರಿ.
ಕಥೇಲಿ ತತ್ವಜ್ಞಾನ ಕೂಡ ಸೇರಿರೋದು ಅದರ ತೂಕವನ್ನೇ ಬದಲಿಸಿದೆ ಅಂತ ನನ್ನ ಭಾವನೆ. ಇಂಟರ್ನೆಟ್ ಕೆಫೆ ಗೆ ಬಂದು ನಿಮ್ಮ ಬ್ಲಾಗು ನೋಡಿದ್ದು ಕುಶಿ ಆಯಿತು.

Ittigecement said...

ಆಝಾದು.. (ಜಲನಯನ )

ಇದು ಕಥೆ ಮಾರಾಯಾ...!

ನಾನು ದೇವರನ್ನು ನಂಬುತ್ತೇನೆ..
ಆದರೆ ಮೂಢ ನಂಬಿಕೆಯನ್ನಲ್ಲ...
ಒಂದು ಥರಹದ "ಭೀಮ ಭಕ್ತಿ".....

ಸತ್ಯವೇ ದೇವರು ಎಂದಾಗ...
ತಾಯಿ ಸತ್ಯ...

ಕಣ್ಣಿಗೆ ಕಾಣುವ ದೇವರು ತಾಯಿಯನ್ನೇ ಪೂಜಿಸೋದು ಉತ್ತಮ ಅಲ್ಲವಾ ?

"ಅಪರಾಧಿ ಮನೋಭಾವನೆ" ದೈವ ಭಕ್ತಿಗೆ ಕಾರಣ ಅನ್ನುವದು ತೀರಾ ಸತ್ಯ...
ದೇವರ ಅಗತ್ಯ ಇರೋದು ಅಪರಾಧಿ ಮನೋಭಾವಕ್ಕೆ,...

ಕಥೆಯ ಅಂತ್ಯ ಓದುಗರಿಗೆ ಬಿಟ್ಟಿದ್ದು...

ತಂಗಿಯ ಫೋನ್ ಬರುತ್ತದೆ...

"ತಾಯಿ ಬದುಕಿದ್ದಾಳೋ... ಇಲ್ಲವೋ ಅನ್ನುವದು.. ಓದುಗರಿಗೇ ಬಿಟ್ಟು ಬಿಡೋಣ...

ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು...

Ittigecement said...

ಮೂರ್ತಿ ಹೊಸ ಬಾಳೆ...

ಈಗಷ್ಟೆ ಮದುವೆಯಾಗಿ ಹೊಸ ಬಾಳನ್ನು ತುಳಿಯುತ್ತಿದ್ದೀರಿ...
ಶುಭಾಶಯಗಳು...

ಈ ಸಂದರ್ಭದಲ್ಲಿ ಓದುವ ಕಥೆ ಇದಲ್ಲವೇನೊ...

ಇರಲಿ...
ನಿಮಗಾಗಿ ಮುಂದಿನ ಕಥೆ ಒಂದು " ಲವ್ ಸ್ಟೋರಿ" ಬರೆಯುವೆ.....

ಕಥೆ ಇಷ್ಟ ಪಟ್ಟಿದ್ದಕ್ಕಾಗಿ ಧನ್ಯವಾದಗಳು...

akshata said...

ನಮಸ್ಕಾರ ಪ್ರಕಾಶ್ ಅವರೆ,
ಕಥೆ ತುಂಬಾ ವಾಸ್ತವಿಕವಾಗಿದೆ,ನಿಮಗಿಲ್ಲಿ ಹೆಂಡತಿ ಏಕೆ ಅತ್ತೆಯನ್ನು ಪ್ರೀತಿಸಬಾರದು ಅನ್ನುವ ಪ್ರಶ್ನೆ ಕಾಡುತ್ತದೆ ಎಂದು ಹೇಳಿದ್ದೀರಿ ಅಲ್ಲವೆ? ತನ್ನ ಹೆತ್ತವರನ್ನು ಪ್ರೀತಿಸಬೇಕು ಎಂದು ಇತ್ತ ಗಂಡನಿಗೂ ಹೆಂಡತಿಯಿಂದ ಅಪೇಕ್ಷೆಯಿರುತ್ತದೆ, ಹೆಂಡತಿಗೂ ಗಂಡನಿಂದ ಆ ಅಪೇಕ್ಷೆಯಿರುತ್ತದೆ, ಬರೀ ಅಪೇಕ್ಷೆಯಿಟ್ಟುಕೊಂಡರೆ ಸಾಕೆ? ಆ ನಿಟ್ಟಿನಲ್ಲಿ ಇಬ್ಬರಿಂದಲೂ ಪ್ರಯತ್ನವಾಗಬೇಕಲ್ಲವೆ? ತನ್ನ ತಂದೆತಾಯಂದಿರ ಬಗ್ಗೆ ಇಬ್ಬರೂ ತಂತಮ್ಮ ಸಹಚರರ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ಬಿತ್ತಿದರೆ ಮಾತ್ರ ಅದು ಸಾಧ್ಯ. ಇನ್ನು ಸುಮಾರು ಹೇಳಲಿಕ್ಕಿದೆ ಆದರೆ ಬಹಳ ಉದ್ದ ಉತ್ತರವಾಗಬಹುದು, ಕಥೆ, ನಿಮ್ಮ ಬರೆಯುವ ಶೈಲಿಯ ಬಗ್ಗೆ ಏನು ಹೇಳೋಣ, ಅದ್ಭುತ.
ಅಕ್ಷತ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

mane mneya mana manada kathe. horabaralaagada vyathe.ellavu prasnegalaagiye ulidu biduva kate. konegu uliyuvudu ???? gale.
nivandante idellaa kateyaagiye iddare eshtu chanda.

Unknown said...
This comment has been removed by the author.
Unknown said...

kathe vaastavakke teera hattira vagichannagi moodi bandide.ella kathegaLlliyu soseye yake tappitastaLagi uLiyuttaLe?ennuvudoo prasneyagiye kaaduttade.

Ittigecement said...

ಅಂತರಂಗದ ಮಾತುಗಳು....

ನೀವು ಮತ್ತೆ ಬಂದಿದ್ದು ಖುಷಿಯಾಯಿತು...

ಎರಡು ಕೈಯಿಂದ ಮಾತ್ರ ಚಪ್ಪಾಳೆ ಆಗಲು ಸಾಧ್ಯ...

ಆದರೆ ...
ಸೊಸೆಗೆ ಇನ್ನೂ ಬದುಕಿದೆ...
ಸಂತೋಷ, ಸಂಭ್ರಮ ಪಡಲು ವಯಸ್ಸಿದೆ..
ಓದಿದೆ... ತಿಳುವಳಿಕೆಯಿರುತ್ತದೆ...

ಹಾಗಾಗಿ ಸೊಸೆಯೆ ಹೊಂದಿಕೊಂಡರೆ ಹೊಂದಾಣಿಕೆ ಸುಲಭ ಅನ್ನುವದು ನನ್ನ ಅನಿಸಿಕೆ..

ಅತ್ತೆಗೆ ಹಾಗಲ್ಲ...

ವಯಸ್ಸಿನ ಅಶಕ್ತತೆ..
ಬದುಕಿನ ಅಂತ್ಯದ ಅತಂತ್ರ ಮನೋಭಾವನೆಯಲ್ಲಿ..
ಮಗನ ಪ್ರೀತಿ ಕಳೆದು ಕೊಂಡು ಬಿಡುತ್ತೀನೋ ಎನ್ನುವಂಥಹ ಇನ್‍ಸೆಕ್ಯುರಿಟಿ (ಅತಂತ್ರ)ಭಾವ ಕಾಡುತ್ತಿರುತ್ತದೆ..

ಹಾಗಾಗಿ ಸೊಸೆಯೇ ಸ್ವಲ್ಪ ತಾಳ್ಮೆ, ವಿವೇಕ ಇಟ್ಟುಕೊಳ್ಳುವದು ಎನ್ನುವದು ಒಂದು ಮುಖದ ಅಭಿಪ್ರಾಯ...

ಇಲ್ಲಿ ಎಷ್ಟು ಬೇಕಾದರೂ ಚರ್ಚೆಯಾಗಲಿ...
ವಿಷಯ ಕಡೆದಷ್ಟೂ ಒಳ್ಳೆಯದು...
ಹಾಗೆಯೆ ಪ್ರತಿ ಮನೆಯಲ್ಲಿ ಸಂತೋಷ ನೆಲಸಲಿ ಎನ್ನುವದು ಹಾರೈಕೆ...

ಮತ್ತೊಮ್ಮೆ... ಮಗದೊಮ್ಮೆ ಧನ್ಯವಾದಗಳು...

ಯಾಕೋ ಈ ಕಥೆಗೆ ಹೆಣ್ಣುಮಕ್ಕಳ ಪ್ರತಿಕ್ರಿಯೆ ಕಡಿಮೆ ಸಿಕ್ಕಿದೆ.. ಅಲ್ಲವೆ?

Ittigecement said...

ಶಿವಪ್ರಕಾಶ್...

ನಾನು ಸ್ವಲ್ಪ ತಾಯಿಯ ಕಡೆಗೆ...
ಅಜ್ಜಿಯ ಪರ ಅನ್ನುವದು ನಿಜ...

ಅದು ನನ್ನ ಜೀವನದಲ್ಲಿ ಅಮ್ಮನ ಪ್ರಭಾವ ಇರಬಹುದು...

ನನ್ನ ಮೊದಲ ಕಥೆಯಲ್ಲಿ "ಕಲ್ಲು ಬೇಂಚಿನಲ್ಲಿ" ಸೊಸೆಯ ಬಗೆಗೆ...
ಪರವಾಗಿ ಬರೆದಿದ್ದೀನಿ...

ಏನೇ ಇದ್ದರೂ...

ಆಯಾ ಕಥಾವಸ್ತುವಿನ ಮೇಲೆ ಅದು ಅವಲಂಬಿಸಿರುತ್ತದೆ...

ಇದೆಲ್ಲ ಯಾಕೆ ಹೇಳಬೇಕಾಯಿಂತೆಂದರೆ..

ಒಬ್ಬಳು ಸಹೋದರಿ ಈ ಮೇಲಿನಲ್ಲಿ ನನ್ನ ಆಕ್ಷೇಪಿಸಿದ್ದಾರೆ..
"ಪ್ರಕಾಶಣ್ಣ ಯಾವಾಗಲೂ ಅಮ್ಮನ ಪರ ಅಂತ"

ಇನ್ನೂ ಕಥೆಗಳು ಬರಲಿವೆ...
ದಯವಿಟ್ಟು..
ಸ್ವಲ್ಪ ಕಾಯಿರಿ...

ಶಿವು ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Sandeep K B said...

ನಾನು ಇನ್ನು ಒಂಟಿಯದ್ದರಿಂದ ಈ ಸಮಸ್ಯೆಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನಿಮ್ಮ ಈ ಕಥೆಯನ್ನು ಓದಿದ ಮೇಲೆ ಅನಿಸಿದ್ಹೊಂದೆ.
*******************************

" ಇದು ಜೀವನಕ್ಕೊಂದು ಕನ್ನಡಿ "

*******************************

AshaJP Bhat said...

ee kathe chennagide.
nimma blog ge naanu beti kodtta irttini.innu olle olle kathegalannu nammantha odugarigaagi rachisuttiralla.

Unknown said...

Kathe chennaagittu..

Shweta said...

ಪ್ರಕಾಶ್ ಅಣ್ಣ,
ನಾನು ಅಮ್ಮನ ಪಾರ್ಟೀ ನು ಅಲ್ಲ ಅತ್ತೆ ಪಾರ್ಟೀ ನು ಅಲ್ಲ ಹೆಂಡ್ತಿ ಪಾರ್ಟೀ ನು (ಏಕೆಂದರೆ ಎಲ್ಲದರಲ್ಲೂ ನಂಗೆ ರೋಲ್ ಇದೆ... ಎಲ್ಲಪಾತ್ರದಲ್ಲೂ ನಾನು ಭಾಗಿ )
ಅಮ್ಮನು ನೋಡಿದ್ದೆ ಅತ್ತೆನು ನೋಡಿದ್ದೆ..ಅಡಿಕ್ಕೆಲ್ಲ ಕಾರಣ ಜೆನರೇಶನ್ ಗ್ಯಾಪ್...THATS ALL....

Ittigecement said...

ಸಾಗರಿ....

ನಿಮ್ಮ ಮಾತು ನಿಜ ಇಂಥವರೂ ನಮ್ಮ ಜಗತ್ತಿನಲ್ಲಿ, ಅನುಭವದಲ್ಲಿ ಇದ್ದಾರೆ...
ಅವೆಲ್ಲ ಅಪರೂಪ....

ನಮ್ಮ ಹೆಚ್ಚಿನ ಅನುಭವದಲ್ಲಿ ಈ ಅತ್ತೆ, ಸೊಸೆ ಜಗಳ ಇದ್ದೇ ಇರುತ್ತದೆ...
ಹೆಚ್ಚಿನ ಎಲ್ಲರ ಮನೆಯಲ್ಲಿ...

ಈ ಅತ್ತೆ ತನ್ನ ಸೊಸೆಯನ್ನು ವೈರಿಯಂತೆ ಯಾಕೆ ನೋಡ ಬೇಕು ?
ಅಥವಾ ..
ಸೊಸೆ ತನ್ನ ಅತ್ತೆಯನ್ನು ತಾಯಿಯಂತೆ ಯಾಕೆ ನೋಡ ಬಾರದು ?

೮ಇದನ್ನು ಹೇಗೆ ಸರಿಪಡಿಸ ಬಹುದು ?

ಅಮೇರಿಕಾದಲ್ಲಿರುವ ಹೆಸರು ಹೇಳಲು ಇಚ್ಛಿಸದ ಸಹೋದರಿಯೊಬ್ಬಳು
"ನಾನು ತನ್ನ ಅತ್ತೆಯೆಯೊಡನೆ ಕದನ ವಿರಾಮ ಘೋಷಿಸಿದ್ದೇನೆ... ಮುಂದಿನ ನನ್ನ ನಡೆಯನ್ನು ಪ್ರಕಾಶಣ್ಣ ನೀನೇ ಹೇಳ ಬೇಕು "
ಎಂದು ಹೇಳಿದ್ದಾಳೆ...
ಈಗ ಇದೊಂದು ಸ್ವಾರಸ್ಯಕರ.. ಕುತೂಹಲ ಶುರುವಾಗಿಬಿಟ್ಟಿದೆ...

ಮೊದಲ ಹಂತದಲ್ಲಿ "ಮನೆಯಲ್ಲಿ (ಮಗನನ್ನೂ ಸೇರಿಸಿ) ಎಲ್ಲರೂ ಕುಳಿತು ಈ ಕಥೆಯನ್ನು ಓದಿ...
ಪ್ರತಿಕ್ರಿಯೆಯನ್ನೂ ಓದಿ...
ಎಲ್ಲರೂ ಒಟ್ಟಿಗೆ ಬದುಕುವದು... ಒಂದು ಹಿಡಿ ಪ್ರೀತಿಗಾಗಿ..
ಎಲ್ಲರೂ ನಮ್ಮವರೇ ಇರುವಾಗ ಪ್ರೀತಿಸುವದು.. ಕಷ್ಟವಲ್ಲ ಅಲ್ಲವೆ ?

ಸಾಗರಿ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....

Joshi Poornachandra said...

ಪ್ರಕಾಶಣ್ಣ,

first of all, nanu enhlish nalli barita eddi.. bejar maadkallda,... ok na..
Ega ninn kathe.. kathe rashi cholo eddu.. doubt e elle..

Secondly, ninu helliddu, and ninna vaadaa- vivada, adra bagge swalpa hellti.. (hindi proverb - Choto muh badi baat)

yallavra mane yalli hiriyaru erta.. ondu kade hendati manasanna novu maadale aagtille, enondu kade hiriyarige novu kodale aagtille.

Always there will be an ego in the old aged persons and also in the mind of the lady who is the wife..

the two persons think in the different way with the same intension..

Intension of both the persons is to hold the his man.

The mother or father (taayi, tande ) they think that they have given birth and bought him up with so much of difficulty.. so they think their son should listen to them,..

Wife:- Her intention is also same but with different reasoning,...
She has left behind her whole life and came with him. she has givin everything to her husband. why can't husband listen to her..

Now tell me Is there any thing wrong in their thinking.

As far as i know both think in the right way and also we can't blame any one.

Egoistic is ok to some extent, but the human being is also an example of the sacrifice.. The both (Taayi, Tande and the wife) the subjects should have this little in mind.

ಪ್ರಕಾಶಣ್ಣ,

nanu helliddu sari na tappa nange gottille. nanna manasalli eddiddu nanu hellidi..

ಚಿತ್ರಾ said...

ಪ್ರಕಾಶಣ್ಣ,
ಚೆನ್ನಾಗಿದೆ . ಇದರ ಹೊರತಾಗಿ ಏನು ಬರೆಯಲೂ ಸಾಧ್ಯವಾಗುತ್ತಿಲ್ಲ !

PrashanthKannadaBlog said...

ಬದುಕಿರುವಾಗ ಹೆತ್ತವರಿಗೆ ನೆಮ್ಮದಿಯ ಜೀವನ ಕೊಡದ ನಾವು, ಅವರಿಲ್ಲದಾಗ ಎಷ್ಟೋ ಸಾವಿರ ಸುರಿದು ಶ್ರಾದ್ದ ಮಾಡುತ್ತೇವೆ. ಜೀವನದ ಬಹುದೊಡ್ಡ ವ್ಯಂಗ್ಯ. ಕತೆ ಚೆನ್ನಾಗಿದೆ ಪ್ರಕಾಶ್. ವಂದನೆಗಳು.

Great Gili said...

Prakash avre,
Kathe chennagide, nanu katheya anthyavannu sukanthya vagi thegedukolluthene, thangiya phone baruthe, “ anna operation success agide amma chennagiddale, neenu bega ba “ ennuthale,… nasthikanu devarannu nodi vyagya nagu beeri hoguthane, na andukondanthe devaru illa, iddiddre nanna ishtarthvanna…….
Eee katheyalli nijavagloo magane sosegintha kettavnagibittidane… sose eno athege adjust agthilla nija, aadre savannu bayasuvashtu kroori avalalla… adre maga maadiddenu??
Iduve jeevana, ellaru onde thara iruvudilla… elavu navandukondanthe aaguvudilla… life annu light agi thagobeku annodu nanna yochane… vaimanassu yaralli thane iruvudilla??? Thayi magalu jagala maadi 1 month mathadade iruva katheyoo ide, adre ade sose adre bere pattavanne kattutheve, thande –maga, anna –thangi, malathaayi –magalu, ganda- hendathi, yaru thane jagala maaduvudilla??? Situation nu sereious thagondashtu problem jaasthi… ellaru helidanthe, swalpa adjustment, swalpa preethi , swalpa artha madikolluvike, lifenalli thumba mukhya…problems rubber thara.. eledashtu eleyuthe, doora hoguthe, ommele cut aguthe.
Avaravara bhavakke… avaravara bakuthige… Take it easy annode policy…. Innu work out aagilla andre
‘EK JAADU KI JAPPI DENA’ { Munna bhai MBBS ..policy }

Ashok Uchangi said...

ಇದು ಕಥೆಯಲ್ಲ ಜೀವನ!
ತುತ್ತಾ?---ಮುತ್ತಾ?
ಎಲ್ಲರ ಮನೆ ದೋಸೇನೂ ತೂತೇ!

ಅಶೋಕ ಉಚ್ಚಂಗಿ

armanikanth said...

idu prakashanna maatra bareyabahudaada kathe...
alla...mane maneya soseyarige alli iruva amma yaake ista aagolla?
hennige henne shatru anno maatu sullu maadalu hengasaru yaake prayatnisalla?
hendathi ya maatige viruddhavaagi nintu ammanannu support maado guna gandasarige yaake barolla?
idu katheyalla....jeevana!!!

mshebbar said...

ಸತ್ಯ ಎಂದಿದ್ದರೂ ಕಹಿ.
ನಾಸ್ತಿಕತೆಯ ಕಥೆಯಿಂದ
ಕಟು ಸತ್ಯ ಹೊರಗೆ.
-msh

mshebbar said...
This comment has been removed by the author.
Sandeep K B said...

well said great gilli, I Liked your Happy ending, There will be problem in everyone's Life.
we should face it.

kbsandeep.it@gmail.com

Ittigecement said...

ಗುರುಪ್ರಸಾದ್ ಶೃಂಗೇರಿ....

ಮದುವೆಯಾದ ಮೇಲೆ ತಾಯಿ, ತಂದೆಯರನ್ನೇಕೆ ಅಲಕ್ಷಿಸ ಬೇಕು ?
ಹೆಂಡತಿಗೂ, ತಾಯಿಗೂ ಪ್ರೀತಿ, ವಾತ್ಸಲ್ಯ ಕೊಡಲು ಯಾಕೆ ಸಾಧ್ಯವಾಗುವದಿಲ್ಲ ?

ನಿಜಕ್ಕೂ ಇಲ್ಲಿಯ "ಕಥಾನಾಯಕನ" ಪ್ರಾರ್ಥನೆ ಒಂದು ರೀತಿಯ "ಷಂಢತನ" !

ಮಾವನ ಮನೆಯ ಹಣಕ್ಕೆ ಮಾರಿಕೊಂಡು..
ಇತ್ತ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲಾಗದ ....
ಅವನೇ ಹುಟ್ಟಿಸಿಕೊಂಡ ಅಸಹಾಯಕತೆ !

ಕಥೆಯನ್ನು ಮೊದಲ ಬಾರಿ ಓದಿ...
ಸಲಹೆ ಸೂಚನೆ ಕೊಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಹುಡುಕಾಟದ ಮಲ್ಲಿಕಾರ್ಜುನ್...

ನೀವೇ ಗಂಟು ಬಿದ್ದು ಬ್ಲಾಗ್ ಶುರು ಮಾಡಿಸಿದ್ದೀರಿ...
ಮೊದಲ ಪುಸ್ತಕವೂ ಬಂದಿತು...
ಈಗ ಕಥಾ ಸಂಕಲನದ ಆಸೆ !!

ಸರ್...

ನಿಮ್ಮ ಪುಸ್ತಕ ಬಿಡುಗಡೆಯಾಗ ಬೇಕು...
ಇದು ನಮ್ಮೆಲ್ಲರ ಆಸೆ..

ಕಥೆಯನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...

ನಿಮ್ಮ ನಿಷ್ಕಲ್ಮಶ ಸ್ನೇಹಕ್ಕೆ ನನ್ನ ನಮನಗಳು !

Ittigecement said...

ಬಾಲು ಸರ್....

ಬದುಕು ಕಲಿಸುವ ಪಾಠ ಯಾವುದೇ ಶಾಲಾ, ಕಾಲೇಜು ಕಲಿಸುವದಿಲ್ಲ...
ತಾಯಿ, ಹೆಂಡತಿಯ ಜಗಳಕ್ಕೆ ಬೇಸತ್ತು..
ನನ್ನ ಗೆಳೆಯನೊಬ್ಬ ಆತ್ಮ ಹತ್ಯೆಗೆ ಪ್ರಯತ್ನಿಸಿದ್ದ...

ಅದರ ಎಳೆಯನ್ನಿಟ್ಟುಕೊಂಡು ಈ ಕಥೆ ಬರೆದೆ...

ನಿಮ್ಮೆಲ್ಲರ ಬ್ಲಾಗಿಗೆ ಬರಲಾಗಲಿಲ್ಲ...

ದಯವಿಟ್ಟು ಬೇಸರಿಸ ಬೇಡಿ...

ಕಥೆಯನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು....

Ittigecement said...

ಅಕ್ಷತ ದೇಶಪಾಂದೆಯವರೆ...

ನನ್ನ ಬ್ಲಾಗಿಗೆ ಸ್ವಾಗತ...

ಅಪೇಕ್ಷೆ.. ನಿರೀಕ್ಷೆಗಳಲ್ಲಿ ನಾವು ಕರ್ತವ್ಯ ಮರೆತು ಬಿಡುತ್ತೇವೆ...
ಹಿರಿಯರಿ ಗೌರವ ಕೊಡಬೇಕೆನ್ನುವ ಕನಿಷ್ಟ ಕರ್ತವ್ಯ ಮರೆತು ಬಿಡುತ್ತೇವೆ...

ನನ್ನ ಪರಿಚಯದವರಲ್ಲೇ ನೋಡಿದ್ದೇನೆ...
"ಹೆಂಡತಿಯ ಅಪ್ಪ, ಅಮ್ಮ"ರಿಗೆ ಗೌರವ ಕೊಡುವದಿಲ್ಲ...
ಮನೆಗೆ ಬಂದರೆ ಸರಿಯಾಗಿ ಮಾತನಾಡಿಸುವದಿಲ್ಲ...!

ಆದರೆ ಹೆಂಡತಿಯಿಂದ "ತನ್ನಪ್ಪ, ಅಮ್ಮರಿಗೆ ಗೌರವ ಬಯಸುತ್ತಾರೆ

ಇದು ವಿಪರ್ಯಾಸ !

ನಿಮ್ಮ ಪ್ರತಿಕ್ರಿಯೆ ಇಷ್ಟವಾಯಿತು...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಪ್ರೀತಿಯ ಕುಸು ಮಲಿಯಾಲ..

ಅತ್ತೆ, ಸೊಸೆಯರ ಹೊಂದಾಣಿಕೆಯಲ್ಲಿ ಗಂಡನ ಪಾತ್ರ ಬಲು ದೊಡ್ಡದು...
ಇಬ್ಬರನ್ನೂ ಬಲು ಸೂಕ್ಷ್ಮವಾಗಿ ನಡೆಸಿಕೊಳ್ಳುವ ಚಾಕಚಕ್ಯತೆ ಗಂಡನಿಗಿರ ಬೇಕು..

ಮದುವೆಯಾದ ಹೊಸತರಲ್ಲಿ ಮಗ ತನ್ನನ್ನು ಅಲಕ್ಷಿಸಿ ಬಿಡುತ್ತಾನೆ ಎನ್ನುವ ಭಾವನೆ ಬಾರದಂತೆ ನೋಡಿಕೊಳ್ಳಬೇಕಾಗುತ್ತದೆ..

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಪ್ರೀತಿಯ ಚಿಕ್ಕಮ್ಮ (ಗಂಗಾ)

ಬಹುಷಃ ಸೊಸೆಗೆ ಇನ್ನೂ ಬದುಕಿದೆ...
ಓದಿನ ತಿಳುವಳಿಕೆಯಿದೆ. ಅದಕ್ಕಾಗಿ ಅಪೇಕ್ಷೆಯೂ ಜಾಸ್ತಿ ಇರಬಹುದಾ ?

ನಿಮ್ಮೊಂದಿಗಿನ ಮಾತು ನನಗೆ ಬಹಳ ಇಷ್ಟವಾಯಿತು..
ಹೆಂಡತಿಯ ಎದುರಿಗೆ "ತಾಯಿಯನ್ನು ಹೊಗಳಿ ಅಟ್ಟಕ್ಕೇರಿಸಿ" ಮಾತನಾಡಿದರೆ ಹೆಂಡತಿಗೆ ಸರಿಯೆನಿಸುವದಿಲ್ಲ...
ಅದೀಗ ತಾನೆ ತನ್ನವರೆಲ್ಲರನ್ನೂ ಬಿಟ್ಟು ಬಂದು...
ಗಂಡನ ಮನೆಯಲ್ಲಿ ತನ್ನ ನೆಲೆಯನ್ನು ಕಂಡುಕೊಳ್ಳುವ ಕಾತುರದಲ್ಲಿರುವವಳಿಗೆ.. ಅತ್ತೆಯನ್ನು ಹೊಗಳುವ ಮಾತುಗಳು ಇಷ್ಟವಾಗುವದಿಲ್ಲ..
ತಾನು ಮಾಡಿದ್ದು ಗಂಡನಿಗೆ ಯಾಕೆ ಇಷ್ಟವಾಗುವದಿಲ್ಲ...
ಈ ಅತ್ತೆ ತನಗೊಂದು ಪ್ರತಿಸ್ಪರ್ಧಿ ಎನ್ನುವ ವಿಚಾರ ಬಂದುಬಿಡುತ್ತದೆ..

ಬರೀ ಜೀವ ಭಾವ ತುಂಬಿರುವ ಹೆಣ್ಣಿಗೆ
ವಾಸ್ತವಿಕತೆ, ವೈಚಾರಿಕತೆಯ ಬಗೆಗೆ ಅರಿವಿದ್ದರೂ...
ಆಕೆ ಸ್ಪಂದಿಸುವದು ಬರೀ ಭಾವಗಳಿಗೆ ಮಾತ್ರ..!!
ಬಾವನೆಗಳು ಅವಳ ಜೀವಾಳ.. !

ಕಥೆ ಬರೆಯುವ ಮುನ್ನ ನಿಮ್ಮೊಂದಿಗೆ ಮಾತನಾಡಿದ್ದರೆ ಈ ಕಥೆ ಬೇರೆ ಥರಹದ ಕಥೆಯಾಗುತ್ತಿತ್ತು...!!

ನಿಮ್ಮ ಪ್ರೋತ್ಸಾಹಕ್ಕೆ ನನ್ನ ನಮನಗಳು...

ಕಷ್ಟವಾದರೂ ಪ್ರತಿಕ್ರಿಯೆ ಇಲ್ಲಿ ಹಾಕಿದ್ದಕ್ಕೆ ಧನ್ಯವಾದಗಳು

Ittigecement said...

ಸಂದೀಪ್ ಕೆ.ಬಿ.....

ನನ್ನ ಬ್ಲಾಗಿಗೆ ಸ್ವಾಗತ...

ಮೊನ್ನೆ ನನ್ನ ಬಳಿ ಚಾಟ್ ಮಾಡುತ್ತ ಹೊರದೇಶದಲ್ಲಿರುವ ಸಹೋದರಿಯೊಬ್ಬಳು
"ನಾವು ಹೆಣ್ಣು ಮಕ್ಕಳೆಲ್ಲ ಪ್ರಕಾಶಣ್ಣನ ವಿರುದ ಮುಷ್ಕರ" ಮಾಡುತ್ತೇವೆ ಎಂದು ತಮಾಷೆಗೆ ಹೇಳಿದ್ದರು..

ಈ ಕಥೆ ಬದುಕಿನ ಬಣ್ಣದ ಒಂದು ಮುಖ ಮಾತ್ರ..
ಇದಕ್ಕೂ ಮೊದಲು ಬೇಕಾದಷ್ಟು ಬಾರಿ ಹೆಣ್ಣಿನ ತ್ಯಾಗ,ಪ್ರೀತಿ, ವಾತ್ಸಲ್ಯ ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ..

ಆದರೆ ಇಲ್ಲಿ ಪ್ರಶ್ನೆ ಇರುವದು "ಸೊಸೆ"ಯರ ಬಗೆಗೆ ಬರೆದಿರುವದು...

ನನ್ನ ಸಹೋದರಿಯರ ಬಗೆಗೆ ಮುಂದೆ ಒಂದು ಕಥೆ ಬರೆಯುವೆ...
ಅದು ಸೊಸೆಯರ ಬಗೆಗೆ...

ಖುಷಿ ತಾನೆ ?

ಸಂದೀಪ್ ನಿಮಗೆ ನನ್ನ ಧನ್ಯವಾದಗಳು....

Keshav.Kulkarni said...

ಪ್ರಕಾಶ,

ಕತೆ ಹೇಳುವ ಹೊಸ ಶೈಲಿಯನ್ನು ಕನ್ನಡದಲ್ಲಿ ಹುಟ್ಟುಹಾಕಿದ್ದೀರಿ. ನಿಮ್ಮ ಬ್ಲಾಗಿನಲ್ಲಿನ ಕತೆಗಳಲ್ಲಿ ಇದು ಬೆಸ್ಟ್!

ಕೇಶವ

Sharada said...

May be horoscope matching process should be tweaked a little bit..
Instead of matching boys and girls horoscope , Atte mattu soseya Jaataka match maadabeku anta kaanutte.

ವನಿತಾ / Vanitha said...

ಪ್ರಕಾಶಣ್ಣ,
ಇವತ್ತು ಪುನ ಓದಿದೆ, ಎಲ್ಲರ ಕಾಮೆಂಟ್ಸ್, ನಿಮ್ಮ ಪ್ರತಿಕ್ರಿಯೆ..Hats off to u..
ನಾನು ನನ್ನ ಅತ್ತೆಯ ಮುದ್ದಿನ ಸೊಸೆ..missing her a lot!!!..ಇತ್ತೀಚಿಗೆ ಪ್ರತಿ ಕಥೆಯಲ್ಲೂ ತುಂಬಾ ಬೇಜಾರು ಮಾಡಿಸ್ತಾ ಇದ್ದೀರಾ..ಸ್ವಲ್ಪ ಟಾಪಿಕ್ ಚೇಂಜ್ ಮಾಡಿ..ಮೊದಲಿನ ತರ ನಾಗು, ಗಪ್ಪತಿ.....etc etc....

ಚಿತ್ರಕಾರ said...

ಸುಂದರ ಬರಹ...ಒಳ್ಳೆಯ ಶೈಲಿ
ಕಥೆ ಚೆನ್ನಾಗಿದೆ
ಕಥನಾಯಕ ಹೇಗಿದ್ರೂ ದೇವರ ಹತ್ರ ಬೇಡ್ಕೊತಿದ್ದ.... ಅವ್ನು ತಾಯಿನ ಅಷ್ಟು ಪ್ರೀತಿಸುತ್ತಿದ್ರೆ ...ತಾಯಿ ಬದಲು ಹೆಂಡತಿನೇ ಸಾಯಲಿ ಅಂತ ಕೇಳಬಹುದಿತ್ತಲ್ವ :)

Ittigecement said...

ಆಶಾ ರವರೆ...

ನನ್ನ ಬ್ಲಾಗಿಗೆ ಸ್ವಾಗತ...
ಈ ಕಥೆ ಬರೆದು ಇಷ್ಟು ದಿನಗಳಾದರೂ ಇನ್ನೂ ಪ್ರತಿಕ್ರಿಯೆಗಳು ಬರುತ್ತಲೇ ಇವೆ...
ಸಂವಾದ, ಚರ್ಚೆಗಳು ನಡೆಯುತ್ತಲಿವೆ...
ಒಂದು ಕಥೆಗೆ ನೂರುಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬರುತ್ತದೆಂದರೆ ಖುಷಿಯಾಗುತ್ತದೆ...

ಒಂದು ಪ್ರೇಮ ಕಥೆ ಬರೆಯುವ ವಿಚಾರವಿದೆ...

ಆದರೆ..
ನಾಗು, ಪೆಟ್ಟಿಗೆ ಗಪ್ಪತಿ, ರಾಜಿ ಬರದೆ ಬಹಳ ದಿನಗಳಾದವು ಅಂತ ಒತ್ತಡವೂ ಇದೆ..
ಈ ಮಧ್ಯ ಕೆಲಸದ ಬಿಸಿ ಬೇರೆ..
ನೋಡೋಣ ಏನಾಗುತ್ತದೆಂದು..

ಬರೆಯುವದರಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ...
ದಿನದ ಒತ್ತಡ, ಆಯಾಸವೆಲ್ಲ ಮರೆತುಹೋಗುವಷ್ಟು ಉಲ್ಲಾಸ ಕೊಡುತ್ತದೆ ಈ ಬರವಣಿಗೆ...

ನಿಮಗೆಲ್ಲ ತುಂಬಾ ತುಂಬಾ ಧನ್ಯವಾದಗಳು..

Jayalaxmi said...

ಪ್ರಕಾಶ್, ನಿಮಗಾದ ಒಂದು ಸಣ್ಣ ಗೊಂದಲವನ್ನು ಸರಿಪಡಿಸೋಣ ಅಂತ....:-) ನೀವು, ನಾನೆಂದುಕೊಂಡು ಪ್ರತಿಕ್ರಿಯೆಗೆ ಉತ್ತರಿಸಿದ್ದೀರಲ್ಲ, ಆ ಜಯಲಕ್ಷ್ಮಿ ನಾನಲ್ಲ!!:-) ಅವರ್ಯಾರೋ ನನಗೂ ತಿಳಿಯದು.ಅವರು Jayalakshmi ಆದರೆ ನಾನು Jayalaxmi.:-)
ಈ ತಿರುಳ ಕಥೆಯಗಳು ಎಷ್ಟೇ ಬಂದರೂ ಸಹ ಎಲ್ಲರಿಗೂ ಆಪ್ತವಾಗುತ್ತವೆ ನಿಮ್ಮ ‘ಕತೆ’ಯಂತೆ.ಅಂತ್ಯ ಮಾರ್ಮಿಕವಾಗಿದೆ,ಇಷ್ಟವಾಯ್ತು.

PaLa said...

ಚೆನ್ನಾಗಿದೆ ಕಥೆ ಪ್ರಕಾಶ್..