Monday, March 15, 2010

ನವ ಚೈತ್ರದ..ಚಿತ್ರದ..ಕನಸು..!


ಹಳೆ
ಹಣ್ಣೆಲೆ
ಉದುರಿ..
ಎಳೆ..
ಹಸಿರೆಲೆ
ಚಿಗುರಿ..
ಚಿಗಿಯುವ ....


ಸೃಷ್ಟಿ..
ಪ್ರಕೃತಿಯಲಿ...


ಕಳೆ..
ಕಳೆದ..
ವ್ಯರ್ಥ ದಿನಗಳ...
ಮರೆತು
ಹೊಸ
ಭರವಸೆಯ
ಹಾಸು..
ನವ ಚೈತ್ರದ..
ಚಿತ್ರದ..
ಕನಸು..
ನನಸಾಗಿ...


ಉಗಾದಿಯಾಗಲಿ.......


ಸರ್ವರಿಗೂ...


ಆತ್ಮೀಯ.
ಓದುಗರಿಗೆ... 
 ಯುಗಾದಿಹಬ್ಬದ  ಶುಭಾಶಯಗಳು....

26 comments:

ಸೀತಾರಾಮ. ಕೆ. / SITARAM.K said...

ಹೊಸವರ್ಷದ ಸ್ವಾಗತಕ್ಕೆ ಹರುಷದ ಚುತುಕು. ಯುಗಾದಿ ಎಲ್ಲರ ಮನ-ಮನೆ ಬೆಳಗಿ ಸ೦ತಸ ನೀಡಲಿ ಎ೦ದು ಹಾರೈಸುವೆ. ಕಳೆ ಕಳೆದು ಹೋಗಿ
ಬೆಳೆ ಬೆಳೆದು ಬರಲಿ ಎ೦ದು ಆಶಿಸುತ್ತಾ
ತಮ್ಮ
ಸೀತಾರಾಮ.
NICE PHOTO TOO

Shashi jois said...

ನಿಮಗೂ ಯುಗಾದಿಯ, ಹೊಸವರ್ಷದ ಹಾರ್ದಿಕ ಶುಭಾಶಯಗಳು.ಚೆನ್ನಾಗಿದೆ

Ashok Uchangi said...

ಪ್ರಿಯ ಪ್ರಕಾಶ್
ನಿಮಗೂ ನಿಮ್ಮ ಕುಟುಂಬಕ್ಕೂ ಹಾಗೂ ಎಲ್ಲಾ ಬ್ಲಾಗಿಗರಿಗೂ ಯುಗಾದಿಹಬ್ಬದ ಹಾರ್ದಿಕ ಶುಭಾಶಯಗಳು.

ಕವನ ಹಾಗೂ ಚಿತ್ರ ಎರಡೂ ಚೆನ್ನಾಗಿವೆ.ಚಿತ್ರಗಳು ನೀವು ತೆಗೆದಿದ್ದಾ?

Subrahmanya said...

ಶುಭಾಶಯಗಳು ಪ್ರಕಾಶಣ್ಣ. :)

ದಿನಕರ ಮೊಗೇರ said...

ಪ್ರಕಾಶಣ್ಣ,
ನಿಮಗೂ ಹೊಸ ವರ್ಷದ ಶುಭಾಷಯ.... ತುಂಬಾ ಒಳ್ಳೆಯ ಚಿತ್ರ ಕವನ ಕಾಣಿಕೆಯಾಗಿ ಕೊಟ್ಟಿದ್ದೀರಿ..... ಧನ್ಯವಾದ....

ಸಾಗರದಾಚೆಯ ಇಂಚರ said...

ನಿಮಗೂ ಯುಗಾದಿಯ, ಹೊಸವರ್ಷದ ಹಾರ್ದಿಕ ಶುಭಾಶಯಗಳು

Ittigecement said...

ಸೀತಾರಾಮ್ ಸರ್...

ಬೇಂದ್ರೆಯವರು ಕೇಳುತ್ತಾರೆ..
"ವರುಷಕೊಂದು ಹೊಸತು ಜನ್ಮ.. ಈ ಜೀವ ರಾಶಿಗೆ..
ಮನುಜ ಜಾತಿಗಿಗೇಕೆ ಇಲ್ಲ ಅಂತ..?

ಪ್ರತಿ ಯುಗಾದಿ
ಚೈತ್ರದ
ಚಿತ್ತಾರ,,
ಪ್ರಕೃತಿ ಬಿಡಿಸುವದ ನೋಡಿ..
ನಾವೂ ಕಲಿಯ ಬೇಕಿದೆ..

ಕಳೆ..
ಕಳೆದು ಹೋದ..
ವ್ಯರ್ಥ ದಿನಗಳ.. ಮರೆತು...
ಹೊಸ ಕನಸು..
ಆಸೆ ಭಾವಗಳನ್ನು
ಈ ಶುಭದಿನದಂದು ಬೆಳೆಸಿಕೊಳ್ಳುವಾ...

ಹೊಸ ಯುಗವನ್ನು ಶುರುಮಾಡೋಣ... ಅಲ್ಲವೆ...?

ನಿಮಗೂ..
ನಿಮ್ಮ ಕುಟುಂಬದವರಿಗೂ
ಯುಗಾದಿ ಹಬ್ಬದ ಶುಭಾಶಯಗಳು...

ಮನದಾಳದಿಂದ............ said...
This comment has been removed by the author.
ಮನದಾಳದಿಂದ............ said...

ಹೊಸವರುಷಕೊಂದು ಸಿಹಿ ಕವನ ನಮಗೆ

ಇನ್ನೇಕೆ ಬೇಕು ಬೇವು-ಬೆಲ್ಲ

ಪ್ರಕಾಶಣ್ಣನ ಬ್ಲಾಗು ಓದಿದರೆ ಸಾಕು

ಅಡಗಿದೆ ಅಲ್ಲೇ ಜೀವನದ ಸಾರವೆಲ್ಲಾ!


ನಿಮಗೆ, ನಿಮ್ಮ ಕುಟುಂಬಕ್ಕೆ, ನಿಮ್ಮೆಲ್ಲಾ ಸ್ನೇಹಿತರಿಗೆ ಯುಗಾದಿಯ ಶುಭಾಶಯಗಳು ಪ್ರಕಾಶಣ್ಣ.

ವನಿತಾ / Vanitha said...

ಪ್ರಕಾಶಣ್ಣ,
ನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು:)

Me, Myself & I said...

ಶುಭಾಶಯಗಳು.

ಮೌನಿ said...

ಪ್ರಕಾಶಣ್ಣ
ಉಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು.
ಕವನ ಚೆನ್ನಾಗಿದೆ.

umesh desai said...

ಹೆಗಡೇಜಿ ಯುಗಾದಿ ಹಬ್ಬದ ಶುಭಾಶಯಗಳು..ಕವಿತೆ ಚೆನ್ನಾಗಿದೆ....

ಮನಸು said...

ಹೊಸವರ್ಷದ ಹಾರ್ದಿಕ ಶುಭಾಶಯಗಳು

ಸವಿಗನಸು said...

ಸೊಗಸಾದ ಕವನ...
ನಿಮಗೆಲ್ಲರಿಗೂ ಯುಗಾದಿಯ ಶುಭಹಾರೈಕೆಗಳು....
ಹೊಸ ವರುಷ ಇನ್ನಷ್ಟು ಹರುಷವನ್ನು ತರಲಿ.ulainv

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಯುಗಾದಿಯ ಹಾರ್ದಿಕ ಶುಭಾಶಯಗಳು

sunaath said...

ಪ್ರಕಾಶ,
ನಿಮಗೂ ಸಹ ಯುಗಾದಿಯ ಹಾಗು ಹೊಸ ವರ್ಷದ ಹಾರ್ದಿಕ ಶುಭಾಶಾಗಳು.

ಮನಮುಕ್ತಾ said...

ಪ್ರಕಾಶಣ್ಣ,
ಸುಖ, ಶಾ೦ತಿ ಹರುಷದ ಹೊನಲು ಬಾಳಲ್ಲಿ ಸದಾ ಹಸಿರಾಗಿರಲಿ.
ನಿಮಗೆಲ್ಲರಿಗೂ ಯುಗಾದಿಯ ಹಾಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.

shivu.k said...

ನಿಮಗೂ ಯುಗಾದಿಯ, ಹೊಸವರ್ಷದ ಹಾರ್ದಿಕ ಶುಭಾಶಯಗಳು....!

ಗೌತಮ್ ಹೆಗಡೆ said...

happy ugaadi prakashan:)

Ramesh said...

Prakashanna.. Nimagu mattu nimma kutumbadavarigu, Ugadi haagu hosavarshada shubhashayagalu...

akshata said...

ನಿಮಗೂ ನಿಮ್ಮ ಕುಟುಂಬದವರಿಗೂ ಉಗಾದಿಯ ಹಾರ್ದಿಕ ಶುಭಾಷಯಗಳು, ಉಗಾದಿಯ ನಿಮಿತ್ತದ ಚಿತ್ರ ಕವನ ಬಹಲ ಚನ್ನಾಗಿದೆ. ಧನ್ಯವಾದ.
ಅಕ್ಷತಾ.

ಕ್ಷಣ... ಚಿಂತನೆ... said...

ಪ್ರಕಾಶಣ್ಣ, ಹೊಸವರ್ಷದಾಗಮನಕ್ಕೆ ತಕ್ಕ ಚಿಗುರಿನ ಫೋಟೋ ಜೊತೆಗೆ ಚುಟುಕುಕವನ.
ನಿಮಗೂ ಹಾಗೂ ನಿಮ್ಮ ಕುಟುಂಬದವರೆಲ್ಲರಿಗೂ ಹೊಸವರ್ಷದ ಶುಬಾಶಯಗಳು (ತಡವಾಗಿ ತಿಳಿಸುತ್ತಿದ್ದೇನೆ). ಎಲ್ಲ ಹೊಸತೂ ತಮಗೆ ಸೇರಲಿ, ಹಳೆಯದೆಲ್ಲ ಹೊಸತಾಗಿ ಬರಲಿ...
ಸ್ನೇಹದಿಂದ,

AntharangadaMaathugalu said...

ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಸಾರ್...... ಕವನ ಚೆನ್ನಾಗಿದೆ.

ಜಲನಯನ said...

ಯುಗಾದಿಯಾಯಿತು
ಧನ್ಯ, ಎಳೆ ಮಾವಿನೆಲೆಯ ಮಧ್ಯೆ
ಕುಹೂ ಕುಹೂಗುಟ್ಟುವ
ಕೋಗಿಲೆಗೆ ಕಂಠಕೊಟ್ಟು
ಚನ್ನಾಗಿದೆ ನಿನ್ನ ಕವನ ಶುಭಾಷಯ...
ಮತ್ತೆ ಜೀಗುಡಲಿ ಕಾಡು
ಹಚ್ಚ ಹಸುರಿನ ನಡುವೆ..

ವಿನುತ said...

ಚೆಂದನೆಯ ಫೋಟೊ ಮತ್ತು ಕವನ. ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು