Thursday, December 10, 2009

ತೆರೆದು ಮುಚ್ಚುವ ಕಣ್ಣಿಗೆ ಎದುರಿನ ಮನಸ್ಸು ಗೊತ್ತಾಗುವದಿಲ್ಲ..ಕಾಚಶ್ರಿ  ಕೊಟ್ಟ  ತರೆಬೇತಿಯ ಫಲಿತಾಂಶ  ಹೊರಬರುವದರಲ್ಲಿತ್ತು..
ಲೈನ್ ಹೊಡೆಯುವದು  ಹೇಗೆ


ಯಾರಿಗೆ...? 


ಇತ್ತ  ರಾಜಿ ಬರುವದು ಕಾಣಿಸುತ್ತಿತ್ತು...!


ಅವಳು  ಉಪ್ಪು,ಹುಳಿ ಸೇರಿಸಿದ ಹದವಾದ ಖಾರದ ಮೆಣಸಿನಕಾಯಿ...!!


"ಈ ಕಡೆ ನೋಡ್ರೊ..  ಬಂಗಾರಿ ಬರ್ತಿದ್ದಾಳೆ..
ನನಗೆ ದೂರದ  ಸಂಬಂಧ.."


ಪೆಟ್ಟಿಗೆ ಗಪ್ಪತಿ ಹೇಳಿದ...


ಕಾಚಶ್ರೀಗೆ ಕೋಪ ಬಂದಿತು...


"ಈ ಸಂಬಂಧಿಕರ ಹತ್ರ ಇದೆಲ್ಲ  ಇಟ್ಕೋ ಬಾರ್ದು..
ಅವರು  ಬಹಳ ಡೇಂಜರ್ಸು.. ನನ್ನ ಅನುಭವದಿಂದ  ಹೇಳ್ತಿದ್ದೀನಿ ಸ್ವಲ್ಪ ಕೇಳ್ರೋ.."


ಆದರೆ ಪೆಟ್ಟಿಗೆ ಗಪ್ಪತಿ, ಸೀತಾಪತಿ ಕೇಳೋ ಮೂಡಿನಲ್ಲಿರಲಿಲ್ಲ..
ಹೊರಟೇ ಬಿಟ್ಟರು...


ಬಂಗಾರಿ  ಹತ್ತಿರ ಬಂದಳು..!


ಸೀತಾಪತಿ ಇನ್ನೂ ಹತ್ತಿರ ಹೋದ...!!


ಒಂದು ಕಣ್ಣು ಮುಚ್ಚಿ ಕಣ್ಣು ಹೊಡೆಯಲು ಹೋದ...


ಆಗಲಿಲ್ಲ..!
ಎರಡೂ ಕಣ್ಣು ಮುಚ್ಚಿ ಹೋಯಿತು...!!


ಮತ್ತೊಮ್ಮೆ  ಪ್ರಯತ್ನಿಸಿದ..!


ಅಗಲೂ ಎರಡು ಕಣ್ಣು ಮುಚ್ಚಿ ತೆರೆಯಿತು...!!


ಬಂಗಾರಿ ಪರಿಚಯದ ನಗು ನಕ್ಕಳು..!
ಹತ್ತಿರ  ಬಂದಳು...


"ಸೀತಣ್ಣ  ಮನೆಯಲ್ಲಿ ಎಲ್ಲ ಆರಾಮಾ...?"
ಅರೇ... ಸೀತಣ್ಣ... ಕಣ್ಣಿಗೆ ಎಂತಾ  ಆಯ್ತು..???
ಕಸ ಬಿದ್ದೋಯ್ತಾ? 
ಬಾ  ಕಣ್ಣಿಗೆ ಬಾಯಿಂದ  ಊದಿ ಕಸ ತೆಕ್ಕೊಡ್ತಿನಿ...!"ಸೀತಾಪತಿ  ಪೆಪ್ಪೆ..ಪ್ಪೆ.. ಅಂದ....!!!
ಏನೂ ಹೇಳಲೂ ಮಾತೇ ಹೊರಡಲಿಲ್ಲ..!


ಅಷ್ಟರಲ್ಲಿ ಪೆಟ್ಟಿಗೆ ಗಪ್ಪತಿ  ಸ್ವಲ್ಪ  ಬುದ್ಧಿವಂತಿಕೆ ತೋರಿಸಿದ..


ಬಲಗೈಯಿಂದ ಒಂದು ಕಣ್ಣು ಮುಚ್ಚಿಕೊಂಡ..
ಕಣ್ಣು ಮುಚ್ಚಿ ತೆರೆದ...!!!!
ಈಗ  ಕಣ್ಣು ಹೊಡೆಯುವದಕ್ಕೆ ಸರಿ ಆಯ್ತು...


ಬಂಗಾರಿಗೆ  ಆಶ್ಚರ್ಯವಾಯಿತು...!!


"ಗಪ್ಪತಿ ಅಣ್ಣ ಇದೇನಿದು..?  
ಏನಾಯ್ತು...?
ಒಂಥರಾ  ಆಡ್ತಿದೀಯಲ್ಲ... ಮೈ  ಹುಷಾರಿಲ್ವಾ...?"


ಅಷ್ಟರಲ್ಲಿ ದೂರದಿಂದ ಇದನ್ನೆಲ್ಲ ಗಮನಿಸುತ್ತಿದ್ದ ರಾಜಿ ಹತ್ತಿರ ಬಂದಳು.. 


" ನಿಮಗೆಲ್ಲ  ಮಾಡ್ಲಿಕ್ಕೆ ಬೇರೆ ಕೆಲ್ಸ ಇಲ್ವೇನ್ರೋ...? 
ಲೈನ್ ಹೊಡಿಲಿಕ್ಕೆ ಬಂದಿದ್ದೀರಲ್ಲ...!
ನೀವೆಲ್ಲ  ಓದಲಿಕ್ಕೆ ಬರ್ತೀರೋ ? ಲೈನ್ ಹೊಡಿಯಲಿಕ್ಕೊ..?
ನಿಮ್ಮ ಅಪ್ಪ, ಅಮ್ಮ ಇದಕ್ಕೆ ಅಂತ  ಕಾಲೇಜಿಗೆ ಕಳಿಸ್ತಾರೇನ್ರೋ..? ನಿಮಗೇನು ನಾಚಿಕೆ ಮರ್ಯಾದಿ ಏನೂ ಇಲ್ವಾ?"


ರಾಜಿಯನ್ನು ನೋಡಿ ಇಬ್ಬರೂ ಕಂಗಾಲಾದರು..


ಅವರ ಧೈರ್ಯಕ್ಕೆ ನಾಗು ಹತ್ತಿರ ಹೋದ...
ರಾಜಿಯನ್ನು ನೇರವಾಗಿ ಕೇಳಿದ...


"ಏನಾಯ್ತು...? ನಿಮಗೆ  ಏನಾದ್ರೂ ತೊಂದ್ರೆ ಆಯ್ತಾ...?"


"ನೀವೆಲ್ಲ  ಮಾಡೋ ಕೆಲ್ಸ ನಂಗೆ ಗೊತ್ತಾಗಲ್ವಾ? 
ಯಾಕೆ ಲೈನ್ ಹೋಡಿದ್ದೀರಾ?"


"ಯಾರು ಲೈನ್ ಹೊಡೆದದ್ದು..? ಅದು ಹೇಗೆ?"


"ಬುದ್ಧಿವಂತಿಕೆ ಬೇಡ.. 
ಕಣ್ಣು ಮುಚ್ಚಿಹೊಡೆದದ್ದನ್ನು ನಾನೇ ನೋಡಿದೆ...
ನಿಮಗೆನು ಮಾಡ್ಲಿಕ್ಕೆ ಬೇರೆ ಕೆಲ್ಸ ಇಲ್ವಾ? 
ನೀವೆಲ್ಲ  ಯಾಕೆ ಕಾಲೇಜಿಗೆ ಬರ್ತೀರಾ?"


ರಾಜಿ  ದಬಾಯ್ಸಿ ಜೋರಾಗಿ ಕೇಳಿದಳು...


" ಓದ್ಲಿಕ್ಕೆ .. ಅಂತ....  "


"ಓದಲಿಕ್ಕೆ ಬರೋವರು ಮಾಡೋ ಕೆಲ್ಸಾನಾ  ಇದು?? 
ತೀರಾ  ಚೀಪಾಗಿ ಲೈನ್ ಹೋಡೀತಿರಲ್ಲ...!!
ಛೇ..!! "


"ರಾಜಿಯವರೇ... ನೀವು ಯಾಕೆ ಕಾಲೇಜಿಗೆ ಬರ್ತಿರೋದು...?"


" ಓದಲಿಕ್ಕೆ"


" ಓದಲಿಕ್ಕೆ ಬರೊವ್ರು ಇಂಥಾ  ಡ್ರೆಸ್ಸಾ ಹಾಕೋದು...? 
ಗಂಡು ಮಕ್ಕಳಿಗೆ ಕೆರಳಿಸಲಿಕ್ಕೆ ಅಲ್ವಾ?
ತೊಡೆ ತೋರಿಸುವಂಥ   ಇಂಥಹ ಡ್ರೆಸ್ಸು ಓದಲಿಕ್ಕೆ ಯಾಕೆ..?"


"ನಿಮ್ಮ ಕಣ್ಣು ಸರಿ ಇಲ್ಲ.. 
ಮನಸ್ಸು ಸರಿ ಇಲ್ಲ ಅಂದಮೇಲೆ ಯಾವ ಡ್ರೆಸ್ಸು ಹಾಕಿದ್ರೂ ಅಷ್ಟೇನೆ..
ದೇವಸ್ಥಾನದಲ್ಲಿ ಶಿಲಾಬಾಲಿಕೆ ಇದ್ರೂ ಯಾರಾದ್ರೂ ಅಪಾರ್ಥ  ಮಾಡಿಕೊಳ್ತಾರಾ..?"


"ದೇವಸ್ಥಾನದಲ್ಲಿ ಭಕ್ತಿಭಾವ ಇಟ್ಕೊಂಡು, ಕೈ ಮುಗಿಲಿಕ್ಕೆ ಅಂತಾನೆ ಹೋಗಿರ್ತಾರೆ...
ದೇವ್ರ ಹತ್ರ ಕಷ್ಟ ಹೇಳಿಕೊಳ್ಳಿಕ್ಕೇ ಹೋಗಿರ್ತಾರೆ..
ಆಗ ಕಷ್ಟಬಿಟ್ಟು ಮತ್ತೇನೂ ಕಾಣುವದಿಲ್ಲ...
ಅಷ್ಟಲ್ಲದೆ ಅದು ಕಲ್ಲಿನ ಮೂರ್ತಿ...
ಮನಸ್ಸು ಕೆರಳುವಂಥಹ  ದೃಶ್ಯ  ನೋಡಿದ್ರೆ....
 ದೇವರ ಬಗ್ಗೆ ತಪಸ್ಸಿಗೆ ಕುಳಿತ ವಿಶ್ವಾಮಿತ್ರನ ಕಥೆ  ಆಗ್ತದೆ.."


"ಇದೇ ವಿಶ್ವಾಮಿತ್ರ ಎರಡನೇ ಬಾರಿ ಏನು ಮಾಡಿದ? 
ಯಾವ ಅಪ್ಸರೆಯೂ ಕುಣಿದರೂ ಏನೂ ಮಾಡ್ಲಿಲ್ಲ..
ದೇವರನ್ನ ಒಲಿಸಿಕೊಂಡ... 
ನಿಮಗೆ ನಿಮ್ಮ ಕಣ್ಣು ಮನಸ್ಸು ಸರಿ ಇಲ್ಲ...
ನನಗೆ ಚಂದ ಕಾಣಬೇಕು ಅಂತ ಇದೆ..
ಚಂದದ ಡ್ರೆಸ್ಸು ಹಾಕಿಕೊಂಡಿದ್ದೇನೆ.."


"ಈ ಚಂದ  ಬೇರೆಯವರು ನೋಡ್ಬೇಕು ಅಂತ ತಾನೆ ನಿಮ್ಮ ಮನಸ್ಸಿಲ್ಲಿರೋದು?
ನೋಡಿದವರು... ಪ್ರಶಂಸೆ ಮಾಡ್ಲಿ ಅಂತ ತಾನೆ ಮನಸಿನಲ್ಲಿರೋದು?
ಸಣ್ಣದಾಗಿ ಚುಡಾಯ್ಸಿದ್ರೆ ತಪ್ಪೇನಿದೆ? 
ನಿಮಗೇನೂ ಅವಮಾನ ಮಾಡಿಲ್ವಲ್ಲ..?"


"ನೋಡಿ ಮಿಸ್ಟರ್ ನಾಗು.. 
ನಾನು ಮಾತಾಡ್ತಿರೋದು ಇವರಿಬ್ಬರ ಬಳಿ. 
ನಿಮ್ಮ ಹತ್ರ ಅಲ್ಲ...
ನಿಮಗೂ ಇದಕ್ಕೂ ಸಂಬಂಧ ಇಲ್ಲ"


"ನೋಡಿ ರಾಜಿಯವರೆ... 
ಇವರಿಬ್ಬರೂ ಮಾತಾಡ್ತಿರೋದು ಬಂಗಾರಿ ಹತ್ರ...
ನಿಮಗೂ ಇದಕ್ಕೂ ಸಂಬಂಧ ಇಲ್ಲ..
ಇಷ್ಟಕ್ಕೂ ನೀವು ಯಾಕೆ ಕೋಪ ಮಾಡ್ಕೋತಿರಿ...?
ನಿಮಗೇನೂ ಮಾಡ್ಲಿಲ್ವಲ್ಲ..
ನಿಮಗೆ ಲೈನ್ ಹೊಡೆದಿಲ್ವಲ್ಲಾ  ಅಂತ ಬೇಜಾರಿದ್ರೆ ಹೇಳಿ..."


"ನನಗೇನಾದ್ರೂ.. ಲೈನ್ ಹೊಡೆದರೆ..  
ಕಾಲಲ್ಲಿದ್ದ ಚಪ್ಪಲ್ಲು ಕೈಗೆ ಬರ್ತದೆ...". ನಮಗೆ  ಟೆನ್ಶನ್   ಶುರುವಾಯ್ತು.. 
ಪರಿಸ್ಥಿತಿ ನಮ್ಮ  ಕೈ  ಮಿರ್ತಾ ಇದೆ ಅನಿಸಿತು...


"ಓಹೊ...ಹೀಗೋ...!
ಕಣ್ಣು ಮುಚ್ಚಿ ತೆಗೆದರೆ ಲೈನ್ ಹೊಡೆದ ಹಾಗಾ?
ನೋಡಿ ನಿಮಗೆ ಕಣ್ಣು ನಾನು ಹೊಡಿತೇನೆ...
ಇಷ್ಟ ಆದ್ರೆ ಇಟ್ಕೊಳ್ಳಿ.. ಕಷ್ಟ  ಆದ್ರೆ ಬಿಟ್ಟು ಹೋಗಿ"


ನೋಡು ನೋಡುತ್ತಿದ್ದ ಹಾಗೆ ನಾಗು ಕಣ್ಣು ಹೊಡೆದೇ ಬಿಟ್ಟ..!!.
ರಾಜಿಗೆ ಕೋಪ ಬಂತು..


"ನನಗೆ  ಲೈನ್  ಹೊಡಿತಿದ್ದಿರಾ...!!.???...? 
ಸ್ವಲ್ಪ ಹತ್ತಿರ ಬನ್ನಿ.."


ನಾಗುವಿಗೆ  ಮೊಂಡು ಧೈರ್ಯ...!! 
ಹತ್ತಿರ  ಹೋದ...


"ನಿಮಗೆ ಗಂಡುಮಕ್ಕಳಿಗೇನು? 
ಒಂದು ಕಣ್ಣು ಮುಚ್ಚಿ ತೆರೆದರೆ ಆಯಿತು...
ಒಂಥರಾ  ವಿಲಕ್ಷಣ ಆತ್ಮ ಸಂತ್ರಪ್ತಿ...!
ನಿಮ್ಮ  ಮುಚ್ಚಿದ ಕಣ್ಣಿಗೆ..ತೆರೆದ ಕಣ್ಣಿಗೆ 
ನಮ್ಮ ಭಾವನೆಗಳು ಗೊತ್ತಾಗುವದಿಲ್ಲ...
ನಮಗೂ ಒಂದು ಮನಸ್ಸು ಅಂತ ಇರ್ತದೆ... ಹೃದಯ ಇರ್ತದೆ...
ನಿಮಗೆ ಯಾಕೆ ಈ ಕೀಚಕನ  ಮನಸ್ಸು..?
ನಿಮಗೆ ಯಾಕೆ ಇಂಥಹ ಭಾವನೆಗಳು ಬರ್ತದೆ?
ಚಂದ ನೋಡುವ  ಮನಸ್ಸಿಗೆ ನಮ್ಮ ಭಾವನೆಗಳು..
ಯಾಕೆ ಅರ್ಥ  ಆಗೋದಿಲ್ಲ??
ನಮ್ಮ ಭಾವನೆಗಳು ನಿಮಗೆ ಯಾಕೆ  ಮುಖ್ಯ ಅನಿಸೋದಿಲ್ಲ?"


ನಾಗು ಇದನ್ನು ನಿರೀಕ್ಷಿಸಲಿಲ್ಲ..!!


ಗರ ಬಡಿದವನಂತೆ ನಿಂತಿದ್ದ...!!


 "ನೋಡ್ರೋ.. ಪ್ರಿನ್ಸಿಪಾಲ್ರು ಬಂದ್ರು.. ಕ್ಲಾಸಿಗೆ ಹೋಗೋಣ್ರೊ.."
ಪೆಟ್ಟಿಗೆ ಗಪ್ಪತಿ ಜೋರಾಗಿ ಹೇಳಿದ...!


ಪ್ರಿನ್ಸಿಪಾಲರು  ಬರುತ್ತಿದ್ದರು....!!.
(ಬಹಳ ಕೆಲಸದ ಒತ್ತಡದಿಂದಾಗಿ  ಇನ್ನೂ  ಕೆಲವು ಓದುಗರಿಗೆ  "ಹೆಸರೇ.. ಬೇಡ"  ಪುಸ್ತಕ  ಕಳಿಸಲಾಗಲಿಲ್ಲ. 
ದಯವಿಟ್ಟು ಬೇಸರಿಸದಿರಿ.  ಒಂದೆರಡು ದಿನಗಳಲ್ಲಿ  ಕಳುಹಿಸಿಕೊಡುವೆ... ಪ್ರೋತ್ಸಾಹ ಹೀಗೆಯೇ ಇರಲಿ...
ಪ್ರಕಾಶಣ್ಣ)34 comments:

ಸುಪ್ತವರ್ಣ said...

ಎಲ್ಲಾ ದುರಾದೃಷ್ಟ...ರಾಜಿಗೆ ಗೊತ್ತಾದದ್ದು ಬಂಗಾರಿಗೆ ಗೊತ್ತಾಗಲಿಲ್ಲ...ರಾಜಿ ಏನನ್ನೋ ಹೇಳಲು ಯತ್ನಿಸುತ್ತಿದ್ದಾಳೆ...ಅದು ನಾಗುಗೆ ಗೊತ್ತಾಯಿತೋ ಇಲ್ಲವೋ ನಮಗೆ ಗೊತ್ತಾಗಲಿಲ್ಲ!

Ittigecement said...

ಸಪ್ತವರ್ಣರವರೆ...

ರಾಜಿ ಒಂದು ಚಿದಂಬರ ರಹಸ್ಯ..!
ನಾಗುವಿಗೆ ಅರ್ಥವಾಯಿತೊ ಇಲ್ಲವೋ ಅನ್ನುವದು ಸಹ ರಹಸ್ಯ..!!

ರಾಜಿ ಹೇಳಿದ ಮಾತುಗಳಲ್ಲಿನ ಸತ್ಯ ನಾಗುವಿಗಲ್ಲದೆ
ನಮಗೆಲ್ಲ ಮನದಟ್ಟಾಗಿತ್ತು.

ಅವರ ಜಗಳ ಇನ್ನೂ ಇತ್ತು.
ಇಬ್ಬರ ಧ್ವನಿಯೂ ತಾರಕಕ್ಕೆ ಏರಿತ್ತು.

ಕೊನೆಯಲ್ಲಿ ರಾಜಿ ಹೇಳಿದ ಸತ್ಯ
ಮತ್ತು ವಿಷಯ ಹೇಳಿದ ರೀತಿ
ನಮಗೆಲ್ಲ ಆಶ್ಚರ್ಯವಾಗಿತ್ತು...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... said...

ಪ್ರಕಾಶಣ್ಣ,
ರಾಜಿ ಹೇಳಿದ ಮಾತಿನ ರಹಸ್ಯ ಅರಿಯುವುದು ಕಷ್ಟವೇ ಹೌದು!
ಚೆಂದದ ಬರಹ.

ಧನ್ಯವಾದಗಳು.

ಚುಕ್ಕಿಚಿತ್ತಾರ said...

ಇದು ಒಳ್ಳೆ ಕಥೆ .. ನಾಗು ನಿಮ್ಮೆಲ್ಲರ ಸಹಾಯಕ್ಕೆ ಅ೦ತ ಬ೦ದು ತಾನೆ ಸಿಕ್ಕಿಕೊ೦ಡನಾ ಪಾಪ...!!!!!!ಪ್ರಕಾಶಣ್ಣ ಸಸ್ಪೆನ್ಸ್ ಮಹಾ ಕೆಟ್ಟದ್ದು.... ಮು೦ದುವರೆಯಲಿ ಲೈನು ಹೊಡೆಯುವುದು....

ಬಾಲು said...

ಲೈನ್ ಹೊಡೆದ ತಪ್ಪಿಗೆ ಬಪ್ಪರೆ ಪ್ರವಚನ. ಈ ಹುಡುಗಿರೆಲ್ಲ ಕೆಲವು ಸಲ ಲೈನ್ ಹೊಡಿಬೆಕದ್ರೆ ಕೆಟ್ಟ ಫಿಲಾಸಫಿ ಕುಯ್ಯುತ್ತಾರೆ, ಇದರ ಬಗ್ಗೆ ನಾಗು ಭಾಗಷ್ಯ ಒಂದು ದೊಡ್ಡ ಸಂಶೋದನೆ ಮಾಡಿರಬಹುದು. ಅದನ್ನು ನಮಗೂ ತಿಳಿಸಿ, ಇಲ್ಲಿ ಸುತ್ತ ಮುತ್ತ ಸಿಕ್ಕಪತೆ ಚಂದ ಇರೋ ಹುಡುಗಿರು ಓಡಾಡುತ್ತಾ ಇರ್ತಾರೆ, ನಮಗೂ use ಆಗುತ್ತೆ.

Anonymous said...

olle iddu anna, munde enta aatu?

bega bare plz :)

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಕಥೆ ಕುತೂಹಲವಾಗ್ತಾ ಇದೆ
ರಾಜಿಯ ಮಾತುಗಳ ಹಿಂದಿನ ರಹಸ್ಯ ಏನು?
ಹೆಣ್ಣಿನ ಭಾವನೆಗಳು ಸ್ವತಹ ಹೆಣ್ಣಿಗೆ ಗೊತ್ತಿರದ ರಹಸ್ಯ ಎಂದು ಎಲ್ಲೋ ಓದಿದ ನೆನಪು

Shankar Prasad ಶಂಕರ ಪ್ರಸಾದ said...

ಹಹಹಹ...ಚೆನ್ನಾಗಿದೆ ಪ್ರಹಸನ.
ಇದೆಲ್ಲಾ ಹೇಗೆ ನಿಮಗೆ ಅನುಭವವಾಯಿತು ಪ್ರಕಾಶಪ್ಪ ?
ಗಪ್ಪತಿ, ನಾಗು, ಸೀತಣ್ಣ ಇನ್ನೇನ್ ಮಾಡುದ್ರು ?
ರಾಜಿ ಏನಂದ್ರು ? ಸಖತ್ ತುದೀಲಿ ಇದ್ದೀನಿ ನಾನು.
ಚೆನ್ನಾಗಿದೆ ಈ ಲೇಖನ ಕೂಡಾ.

ಕಟ್ಟೆ ಶಂಕ್ರ

AntharangadaMaathugalu said...

ಚೆನ್ನಾಗಿದೆ ಪ್ರಕಾಶ್ ಅವರೇ...
ಬೇಗ ಮುಂದುವರೆಸಿ.......

sunaath said...

ಪ್ರಕಾಶ,
ಲೈನು ಹೊಡೆಯೋದರ ತಂತ್ರಜ್ಞಾನ ಹಾಗು ತತ್ವಜ್ಞಾನ ಚೆನ್ನಾಗಿದೆ. ಇನ್ನು ಹೊಡೆದೋರ ಗತಿ ಏನಾಯ್ತು ಅನ್ನೋದನ್ನಷ್ಟು ಬೇಗನೇ ಹೇಳಿ!

ಜಲನಯನ said...

ಪ್ರಕಾಶ್
ಯಾರಿಗೆ ಯಾರುಂಟು ಲೈನಿನ ಸಂಸಾರ
ಹುಡುಗಿಯ ಪಟಾಯ್ಸಲು ಲೈನು ಹೊಡಿಯಲು ಹೋದೆ
ಹೊಡೆಯೋ ಲೈನಿಗೆ ಮುಂಚೆ ರಾಜಿಯೇ ಹೊಡೆದಳು ಹರಿಯೇ....
ಹಹಹ...ಚನ್ನಾಗಿದೆ ಲೈನಾಯಣ...ಇನ್ನು ಯುದ್ಧಕಾಂಡ ಬರಬೇಕಿದೆ..ಅಲ್ವಾ...??

Ittigecement said...

ಕ್ಷಣ ಚಿಂತನೆ (ಚಂದ್ರು)

ತೆರೆದು ಮುಚ್ಚುವ ಕಣ್ಣು ಅರಿಯದು...
ಎದುರಿನ ಮನದ ಆಳವ..
ನೋಡುವ ಕಣ್ಣಿಗೆ ಚಂದ ಬೇಕು..
ಮನಕೆ ಬೇಕು ಇಂಪು...

ಪ್ರೀತಿ , ಪ್ರೇಮ
ಹೃದಯದಲ್ಲಿ ಅಲ್ಲ..
ತಲೆಯಲ್ಲಿ...

ಅಲ್ಲವಾ?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಚುಕ್ಕಿ ಚಿತ್ತಾರಾ....

ಎದುರಿಗಿರುವ ಹೆಣ್ಣಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ...
ಚುಡಾಯಿಸುವದು ಒಂದುರೀತಿಯ "ಅತ್ಯಾಚಾರ" ಅದು...!

ರಾಜಿ ಅದನ್ನು ನಮಗೆ ಮನನ ಮಾಡಿಸಿದಳು...

ಅವಳ ಮನದಲ್ಲಿ ಏನಿತ್ತೋ...!!

ಹೆಣ್ಣು ನಿಗೂಢ...
ಚಿದಂಬರ ರಹಸ್ಯ....!

ಈ ರಾಜಿ ಈಗಲೂ ಇದೆಲ್ಲವನ್ನು ಒಪ್ಪಿಕೊಳ್ಳುತ್ತಾಳೆ..!

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು....

Unknown said...

ಚೆನ್ನಾಗಿದೆ ... ಬೇಗನೆ ಮುಂದುವರೆಸಿ...

ಸೀತಾರಾಮ. ಕೆ. / SITARAM.K said...

ಹೆಣ್ಣಿನ ಮನಸ್ಸು ಅರಿಯೋದು ಕಷ್ಟ.
ರಾಜಿ ಬ೦ಗಾರಿಯರ ನಡು- ಗಪ್ಪಣ್ಣ ಹಾಗೂ ಸೀತಣ್ಣರೂ ಗುರು ನಾಗುವಿನೊಡನೆ ಕಲಿತ ಪಾಠವೇನು ಎ೦ಬ ಕೂತುಹಲ ಬೇಗ ಮು೦ದುವರೆಸಿ....................

Unknown said...

ನಿಮ್ಮ ಬರವಣಿಗೆಯ ಓಟ ಸೂಪರ್, ಶಯಲಿಯಂತೂ ಹೊಟ್ಟೆ ಉರಿಸುತ್ತಿದೆ!
ಅದು ಹೀಗೇ ಮುಂದುವರೆಯಲಿ.

nenapina sanchy inda said...

ಹಾ ಹಾ ಹಾ ಒಳ್ಳೆ ಕಿತಾಪತಿ ಗ್ಯಾಂಗ್ ಮಾರಾಯ್ರೆ ನಿಮ್ಮದು
:-)
ಮಾಲತಿ ಎಸ್.

Ittigecement said...

ಬಾಲು ಸರ್....

ನಾಗು ಇದರ ಬಗೆಗೆ ಸರಿಯಾದ ಉತ್ತರವನ್ನೇ ರಾಜಿಗೆ ಕೊಟ್ಟಿದ್ದಾನೆ...
ಅವರಿಬ್ಬರ ನಡುವಿನ ಶೀತಲ ಸಮರ ಮಸ್ತ್ ಆಗಿತ್ತು...
ದಿನಕ್ಕೂ ಒಂದೊಂದು ತಿರುವು...!

ಇವರಿಬ್ಬರ ಜಗಳದ ಮಧ್ಯದಲ್ಲಿ ನಾವೆಲ್ಲ ಸುಸ್ತು..!

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

ಶಿವಪ್ರಕಾಶ್ said...

ಕಣ್ಣು ಮುಚ್ಚಲು ಪಟ್ಟ ಸಾಹಸಗಳು...
ಹ್ಹಾ ಹ್ಹಾ ಹ್ಹಾ...
ರಾಜಿ ಅವರ ಮಾತಿನ ಒಳ ಅರ್ಥ ಏನಿತ್ತೋ.... ;)

Ittigecement said...

ಶ್ರೀ.....

ನಮ್ಮ ದಕ್ಷಿಣ ಭಾರತದಲ್ಲಿ ಲೈನ್ ಹಾವಳಿ ಅಷ್ಟಾಗಿ ಇಲ್ಲ.
ಉತ್ತರದಲ್ಲಿ ಬಹಳ ಇದೆ.
ಅದೂ ತೀರಾ ಕೆಟ್ಟದಾಗಿ.

ಅವೆಲ್ಲ ವಿಕೃತಮನಸ್ಸಿನ ತೃಷೆ ಅಂತ ನನ್ನ ಭಾವನೆ.

ಚುಡಾಯಿಸುವಿಕೆ ಸಹ್ಯವಾಗಿದ್ದರೆ ಏನೂ ತಕರಾರಿಲ್ಲ.
ಸಭ್ಯತೆಯನ್ನು ಮೀರಬಾರದಷ್ಟೆ.

ಕೆಲವು ಹೆಣ್ಣುಮಕ್ಕಳೂ ಲೈನ್ ಹೊಡೆಯುವದನ್ನು ನಾನು ನೋಡಿದ್ದೇನೆ.

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಗುರುಮೂರ್ತಿಯವರೆ...

ಆ ಸನ್ನಿವೇಷ ಹೇಗಿತ್ತೆಂದರೆ
ರಾಜಿ ನಾಗುವಿಗೆ ಹೊಡೆಯುತ್ತಾಳೆ ಎಂದೆ ನಾವೆಲ್ಲ ಭಾವಿಸಿದ್ದೇವು.
ಕೋಪದಿಂದ ಜಗಳ ಜೋರಾಗಿಯೇ ನಡೆದಿತ್ತು.

ಆದರೆ ರಾಜಿ ಮಾತುಗಳು ನಮಗೆ ಬಹಳ ಆಶ್ಚರ್ಯವಾಯಿತು.

ಕೊನೆಯವರೆಗೂ ಅವಳೊಂದು ರಹಸ್ಯವೇ....!!

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಶಂಕ್ರಣ್ಣ...

ಪೆಟ್ಟಿಗೆ ಗಪ್ಪತಿ ಮತ್ತು ಸೀತಾಪತಿಗೆ ಬಂಗಾರಿ "ಅಣ್ಣ" ಅಂತ ಕರೆದದ್ದು
ನಮಗೆಲ್ಲ ಸಿಕ್ಕಾಪಟ್ಟೆ ನಗು ತರಿಸಿತ್ತು.

ತಡೇಯಲಾರದೆ ಅಲ್ಲೇ ದೊಡ್ಡದಾಗಿ ನಕ್ಕಿದ್ದೆವು.

ಕಣ್ಣುಹೊಡೆಯಲು ಅವರು ಪಟ್ಟ ಸಾಹಸ ಮಜಾ ಇದ್ದು...!

ಪ್ರತಿಕ್ರಿಯೆಗೆ ಧನ್ಯವಾದಗಳು.

ಹಿತ್ತಲಮನೆ said...

ಪ್ರಕಾಶಣ್ಣ, ತೆರೆದು ಮುಚ್ಚುವ ಕಣ್ಣಾ ಅಥವಾ ಮುಚ್ಚಿ ತೆರೆಯುವ ಕಣ್ಣಾಗಬೇಕಿತ್ತಾ ?

Ittigecement said...

ಅಂತರಂಗದ ಮಾತುಗಳು....

ಕೆಲಸದ ಒತ್ತಡದ ನಡುವೆ ನಿಮ್ಮೆಲ್ಲರ ಬ್ಲಾಗಿಗೆ ಭೇಟಿಕೊಡಲು ಆಗಲ್ಲಿಲ್ಲ..
ಆದರೂ...
ಇಲ್ಲಿ ಬಂದು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

ತಲೆಯಲ್ಲಿ ಬೇರೆ ಥರಹದ ಐಡಿಯಾಗಳು ಬರುತ್ತಿವೆ...

ಈ ನಾಗು, ರಾಜಿ..
ಪೆಟ್ಟಿಗೆ ಗಪ್ಪತಿಗಳಿಗೆ ಸ್ವಲ್ಪ ದಿನ ವಿಶ್ರಾಂತಿ ಕೊಟ್ಟು

ವಾಸ್ತವತೆಯ ಅನುಭವಗಳ...
ಬದುಕಿನ ಬಣ್ಣಗಳ ಕಡೆ ಹೋದರೆ ಹೇಗೆ?
ಎನ್ನುವ ವಿಚಾರ ತಲೆಯಲ್ಲಿ ಹೊಕ್ಕಿದೆ...!

ನೋಡೋಣ ಏನಾಗುತ್ತದೆಂದು..

ನಿಮ್ಮೆಲ್ಲರ ಬ್ಲಾಗಿಗೆ ಒಂದೆರಡು ದಿನಗಳಲ್ಲಿ ಬರುವೆ..
ಬಹಳ.. ಬಹಳ ಓದುವುದಿದೆ...

ದಯವಿಟ್ಟು ಕ್ಷಮಿಸಿ...

ಪ್ರೋತ್ಸಾಹ ಹೀಗೆಯೇ ಇರಲಿ...

PARAANJAPE K.N. said...

ಪ್ರಕಾಶರೇ
ರಾಜಿ , ನಾಗು, ಪೆಟ್ಟಿಗೆ ಗಪ್ಪತಿ, ಹೀಗೆ ನಿಮ್ಮಿ೦ದ ನಮಗೆ ಪರಿಚಿತವಾದ ಪಾತ್ರಗಳನ್ನು ಒಳಗೊ೦ಡ ಲೇಖನ ಸುಲಲಿತವಾಗಿ ಓದಿಸಿಕೊ೦ಡು ಹೋಯಿತು. ತೆರೆದು ಮುಚ್ಚುವ ಕಣ್ಣಿಗೆ, ಎದುರಿನ ಮನಸು ಗೊತ್ತಾಗುವುದಿಲ್ಲ ಎ೦ಬ ತತ್ವವೂ ಇದೆ. ಚೆನ್ನಾಗಿದೆ. ಅದೇನೋ ಹೊಸ ವಿಚಾರ ನಿಮ್ಮ ತಲೆ ಹೊಕ್ಕಿದೆ ಅ೦ತ ಹೇಳಿದ್ದೀರಲ್ಲ, ಅದಕ್ಕೆ ಕಾದಿದ್ದೇನೆ.

Prabhuraj Moogi said...

ಬಹಳ ದಿನಗಳಿಂದ ನಿಮ್ಮ ಬ್ಲಾಗ್ ಕಡೆ ಸುಳಿಯಲೇ ಆಗಿರಲಿಲ್ಲ, ಇಂದು ಬಂದು ನೋಡಿದ್ರೆ... ನೀವು ಲೈನ ಹೊಡೀತಾ ಇದೀರಾ :) ಎನು ಮತ್ತೆ ಕಾಲೇಜ್ ಲೈಫ್ ನೆನಪಾಗಿದೆ ಅನ್ಸತ್ತೆ...
ನನ್ನ ಫ್ರೆಂಡ ಲೈನ್ ಹೊಡೆಯೋ ಸ್ಟೈಲೇ ಬೇರೆ.. ಬೈಕ್ ಮೇಲಿರೋವಾಗ ಹುಡುಗಿ ಕಂಡೆ, ಹೆಡಲೈಡ ಫ್ಲಾಶ್ ಮಾಡ್ತಾನೆ!!!(ON-OFF) ಒಳ್ಳೇ ಐಡಿಯಾ, ಬೇರೆಯವರೊ ಮುಂದೆ ಹೋಗೊ ಗಾಡಿಗೆ ಸೈಡ್ ಕೇಳ್ತಾ ಇದಾನೆ ಅನ್ಕೋಬೇಕು ನೋಡಿ ಹಾಗೆ...

ಮನಸು said...

ನಿಮ್ಮ ಕೆಲಸದ ಒತ್ತಡದಲ್ಲೂ ನಮ್ಮನ್ನು ನಗಿಸುತ್ತಲಿದ್ದೀರಲ್ಲ ಧನ್ಯವಾದಗಳು
ಬಾರಿ ಚೆನ್ನಾಗಿದೆ ಒಳ್ಳೆ ಸ್ನೇಹದ ಗುಂಪು ಇತ್ತು ಅನ್ನಿ ಆಗ, ಚೆನ್ನಾಗಿ ಎಂಜಾಯ್ ಮಾಡಿದ್ದೀರಿ ಕಾಲೇಜ್ ಜೀವನ.... ಮುಂದೇನಾಯಿತು ತಿಳಿಸಿ. ಮತ್ತೆ ಈಗಿನ ಹುಡುಗರಿಗೆ ತರಬೇತಿ ನೀಡುತ್ತಲಿದ್ದೀರಾ ಲೈನ್ ಹೊಡೆಯೋದು ಹೇಗೆ ಎಂದು ಹಹಹ ಚೆನ್ನಾಗಿದೆ ಮುಂದುವರಿಸಿ.
ವಂದನೆಗಳು

ದಿನಕರ ಮೊಗೇರ said...

ಪ್ರಕಾಶಣ್ಣ,
ಲೈನ್ ಹೊಡೆಯೋದು ಸಹ ಒಂದು ಕಲೆ ಅಂತ ನಿಮ್ಮ ಈ ಪ್ರಸಂಗದಿಂದ ಗೊತ್ತಾಗ್ತಾ ಇದೆ...... ರಾಜಿಯ ಮನಸ್ಸು ನಾಗು ಗೆ ಅರ್ಥ ಆಗಿ ನಿಮ್ಮಗೆಲ್ಲ ' ಪಾಯಸ' ಊಟ ಸಿಗತ್ತಾ ಅಂತ ನನ್ನ ಅನುಮಾನ..... ಮುಂದಿನ ಭಾಗ ಬೇಗಬರಲಿ.......

ಚಿತ್ರಾ said...

ಪ್ರಕಾಶಣ್ಣ ,
ನಿಮ್ಮ ಗುಂಪಿನ ಕೀಟಲೆ ಒಂದೇ ಎರಡೇ? ಹಾ ಹಾ ಹಾ ..
ಹಾಸ್ಯಮಯವಾಗಿ ಆರಂಭವಾದ ವಿಷಯ , ಈಗ ಸ್ವಲ್ಪ ಗಂಭೀರವಾಗಿ ಯೋಚಿಸುವಂತೆ ಮಾಡಿದೆ.
ಎಷ್ಟೋ ಸಲ , ಲೈನ್ ಹೊಡೆಯುವುದು ಕೇವಲ ತಮಾಷೆಗೋ , ಥ್ರಿಲ್ ಗೋ ಆರಂಭವಾಗಿದ್ದು ಅದೆಷ್ಟೋ
ಹೆಣ್ಣುಮಕ್ಕಳ ಭವಿಷ್ಯವನ್ನೇ ಹಾಳುಮಾಡುವ ತಿರುವು ತೆಗೆದುಕೊಳುವುದನ್ನೂ ಕಂಡಿದ್ದೇನೆ. ತಮ್ಮದಲ್ಲದ
ತಪ್ಪಿಗೆ ಮನೆಯವರ ಕೆಂಗಣ್ಣಿಗೆ ಗುರಿಯಾಗಿ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಿದ ಎಷ್ಟು ಹುಡುಗಿಯರಿಲ್ಲ ಅಲ್ಲವೇ? ನಿಜ,
ಒಮ್ಮೆ ಮುಚ್ಚಿ ತೆರೆಯುವ ಕಣ್ಣಿಗೆ ಆ ಹುಡುಗಿಯ ಮನಸ್ಸಿನಲ್ಲಿ ಆ ಕ್ಷಣ ಮೂಡಿದ ಭಾವನೆಗಳು , ಗಾಬರಿ, ಮುಜುಗರ ಅರ್ಥವಾಗುವುದೇ?
ಮುಂದಿನ ಭಾಗ ಬೇಗ ಬರಲಿ .. ಕಾಯುತ್ತಿದ್ದೇನೆ.

Ittigecement said...

ಸುನಾಥ ಸರ್....

ಹದಿಹರೆಯದ ಆ ವಯಸ್ಸಿನಲ್ಲಿ ಚುಡಾಯಿಸಬೇಕೆಂಬ ಆಸೆ ಪ್ರಬಲವಾಗಿದ್ದರೂ..
ಎಲ್ಲೋ ಒಂದು ಅಳುಕು..
ಅದು ತಪ್ಪುಎನ್ನುವ ಭಾವನೆ ನಮ್ಮನ್ನೆಲ್ಲ ಕಾಡುತ್ತಿತ್ತು.

ಆಗ ನಮಗೆ ಸಹಾಯ ಮಾಡಲು ಬಂದವನು "ಕಾಚಶ್ರೀ"

"ಇದೆಲ್ಲ ತಪ್ಪಲ್ಲ.
ಆದರೆ ಹೆಣ್ಣುಮಕ್ಕಳಿಗೆ ಬೇಸರ ಆಗದಂತೆ..
ಡೀಸೆಂಟಾಗಿ ಹೊಡೆಯಬಹುದು..
ಅದು ಸರಿ" ಎಂದ.

ನಂತರ ನಡೆದದ್ದು ಇತಿಹಾಸ..!!

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ರಾಜೀವ said...

ಯಾರಪ್ಪಾ ಕಂಡು ಹಿಡಿದ್ರು ಈ ಪ್ರೀತಿನಾ? ಪ್ರೀತಿ ಮಾಡಿದ್ರೆ ಪ್ರೀತಿಸುವವನನ್ನು/ವಳನ್ನ ಮಾತ್ರಾ ನೋಡ್ಬೇಕು. ಪ್ರೀತಿ ಮಾಡದೇ ಇದ್ರೆ ಎಲ್ಲಾ ಹುಡುಗರನ್ನೂ/ಹುಡುಗಿಯರನ್ನೂ ನೋಡ್ಬೊಹುದು, ಲೈನ್ ಹೊಡಿಬಹುದು, ಅಲ್ವೇ?

ಲೈನ್ ಹೊಡೆಯುವುದರ ಬಗ್ಗೆ ನೀವು ಒಂದು ಥೀಸೀಸ್ ಬರಿಯಬಹುದೇನೋ!!

ಹ್ಮ್ಮ್ ... ಮುಂದೆ?

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಕಾಚಶ್ರೀ ಕೊಟ್ಟ ತರಬೇತಿ ಎಲ್ಲೆಲ್ಲಿಗೋ ಹೋಯ್ತಲ್ಲ!!
ರಾಜಿಯ ಮಾತುಗಳಿಂದ ನಾಗುವಿನ ಮುಂದಿನ ಕಾರ್ಯಾಚರಣೆ ಏನು? ಕುತೂಹಲಕಾರಿಯಾಗಿದೆ.

ಸುಧೇಶ್ ಶೆಟ್ಟಿ said...

ರಾಜಿ ಹೇಳಿದ್ದು ಖರೇ ಇದೆ!

ಮು೦ದಿನ ಭಾಗಕ್ಕೆ ಕಾಯ್ತೀನಿ... :)

mshebbar said...

ಹೋಯ್,
ಬರೆಯುವಾಗ ಕಷ್ಟ ಆಗಲಿಲ್ಲವಾ?
ಅದು ಹೇಗೆ ಬರೆಯುತ್ತೀ?
ನಮ್ಮಲ್ಲಿ ಹೆಣ ಇಟ್ಕೊಂಡು ತಿನ್ನೋದಿಲ್ಲಾಪಗಪ್ಪ.
ಮನಮುಟ್ಟುವಂತಿದೆ
-mshebbar