Friday, October 23, 2009

ಬದುಕಿ ಉಳಿದರೆ ನಾಚಿಕೆ ಮರ್ಯಾದಿ ಎಲ್ಲ...!!

ಕೆಲವು ದಿನಗಳ ಹಿಂದೆ ಊರಿಗೆ ಹೋಗಿದ್ದೆ...

ಸಿರ್ಸಿಯಲ್ಲಿ ನನ್ನ ಸ್ನೇಹಿತರನ್ನು ಭೇಟಿಯಾಗ ಬೇಕಿತ್ತು...


"ಅಣ್ಣಾ... ಸಿರ್ಸಿಗೆ ಹೋಗಿ ಬರ್ತೇನೆ...

ಏನಾದ್ರೂ ಸಾಮಾನು ತರುವದು ಇದೆಯಾ..?"

ಪೇಟೆಗೆ ಹೋಗುವ ಮುನ್ನ ಹೀಗೆ ಕೇಳುವದು.. ವಾಡಿಕೆ...


"ತರಕಾರಿ ತರಬೇಕಿತ್ತು.. ಮಾರಾಯ ..

ನಿನ್ನ ನೋಡಿದರೆ....
ಸಾಮಾನಿನ ಬೆಲೆ ಜಾಸ್ತಿ ಹೇಳಿ ಹೆರೆದು ಬಿಡ್ತಾರೆ..
ಕಾನಸೂರಿನಲ್ಲಿ ಹೆಗಡೇರ ಅಂಗಡಿಯಲ್ಲಿ ಹೇಳಿಟ್ಟಿದ್ದೇನೆ...
ಆ ಸಾಮಾನು ತಗೊಂಡು ಬಾ..."

ನಾನು ಸರಿ ಎಂದೆ...


"ಹೋಗುವಾಗ ಕುಷ್ಟನೂ... ಬರ್ತಾನೆ..

ಅವನಿಗೆ ಆರೋಗ್ಯ ಸರಿ ಇಲ್ಲಂತೆ ಕರೆದು ಕೊಂಡು ಹೋಗು.."

ಕುಷ್ಟನಿಗೂ ಖುಷಿಯಾಗಿತ್ತು..!!


"ಸಣ್ಣ ಹೆಗಡೇರೆ.. ನಿಮ್ಮ ಸಂಗಡ ಕಾರಲ್ಲಿ ಹೋಗಬೇಕು ಅಂತ ಆಸೆ ಇತ್ರ..

ಇವತ್ತು ಪೂರ್ತಿ ಆಯ್ತು ನೋಡಿ... ."

ನಾನೂ ಕುಷ್ಟನೂ ಲೋಕಾಭಿರಾಮವಾಗಿ ಮಾತನಾಡುತ್ತ.. ಸಿರ್ಸಿ ಹತ್ತಿರ ಬಂದೆವು...


"ಕುಷ್ಟ ನಿನಗೆ ಯಾವ ಡಾಕ್ಟರ್ ಹತ್ತಿರ ಹೋಗಬೇಕು..? ಏನಾಗಿದೆ..?"


ಕುಷ್ಟ ಸ್ವಲ್ಪ ನಾಚಿಕೊಂಡ...


"ಪಕಾಸ್ ಹೆಗ್ಡೇರೆ... ನಂಗೆ  ..

ಸಾಮಾನು ಡಾಕ್ಟರ್ " ಹತ್ರ ಹೋಗಬೇಕ್ರಾ..!"

ನನಗೆ ಅಶ್ಚರ್ಯವಾಯಿತು...!!


" ಸಾಮಾನಿನ ಡಾಕ್ಟರ್ರಾ.??.?

ಯಾರು ಅದು..?"

" ಅದೇರ್ರಾ...

ನಿನ್ನೆ ಬೆಟ್ಟದಿಂದ ಇಳಿಯುವಾಗ ಬಿದ್ದು..
ನನ್ನ " ಸಾಮಾನಿಗೆ "  ಪೆಟ್ ಆಗಿದೆರ್ರಾ..
ನಟರಾಜ್ ರೋಡಿನಲ್ಲಿ ಇದ್ದರಲ್ರಾ.." ನಾಯಕ್ ಡಾಕ್ಟ್ರು."...
ಅವ್ರು ಸಾಮಾನು ಡಾಕ್ಟ್ರಂತೆ.. ಅವರ ಬಳಿ ಹೋಗುವಾ ಅಂತ..
ಒಳ್ಳೆ ಔಷಧ ಕೊಡ್ತಾರಂತೆ.."

ನನಗೆ ಈಗ ಅರ್ಥವಾಯಿತು...


ನಾನು ಅವನನ್ನು ಆಲ್ಲೇ ಬಿಟ್ಟು... 

ನನ್ನ ಸ್ನೇಹಿತ ಮೂರ್ತಿಯನ್ನು ನೋಡಲು ಹೊರಟೆ..
ಸಿರ್ಸಿ ಬಸ್ಟಾಂಡಿನ ಹತ್ತಿರ ಅವನ ಅಂಗಡಿ ಇದೆ...

ಕಾಲೇಜು ದಿನಗಳಲ್ಲಿ ಅವನ ಅಂಗಡಿ ನಮ್ಮ ಅಡ್ಡವಾಗಿತ್ತು....


ಮೂರ್ತಿಗೆ ತುಂಬಾ ಖುಷಿ ಆಯ್ತು...

ತುಂಬಾ ದಿನಗಳಾಗಿತ್ತು ಭೇಟಿಯಾಗದೆ..

"ಮೂರ್ತಿ.. ಚೆನ್ನಾಗಿದ್ದೀಯಾ...? ಹೇಗಿದೆ ಬಿಸಿನೆಸ್...?

ಹಬ್ಬ ಜೋರಾ..?"

"ಏನಿಲ್ಲ .. ಪ್ರಕಾಶು...... .

ನಾಳೆ ದೀಪಾವಳಿ.. ಆಯುಧ ಪೂಜೆ..
ಕೆಲಸಗಾರರು ಎಲ್ಲಾ ಸಾಮಾನು ತೊಳೆದು ಇಡ್ತಾ ಇದ್ದಾರೆ..
ನಾಳೆ ಎಲ್ಲಾ ಸಾಮಾನಿಗೂ ಪೂಜೆ ಮಾಡ್ಬೇಕಲ್ಲಾ..
ಅಲ್ಲಾ ಬೆಂಗಳೂರಲ್ಲಿ ಪೂಜೆ ಯಾವಾಗಾ..?
ಅಲ್ಲಿ  ಸಾಮಾನುಗಳ ಪೂಜೆ  ಎಲ್ಲಾ ಇದೆಯಾ..?"

ನಂಗೆ ನಗು ಬಂತಾದರೂ ತಡೇದು ಕೊಂಡೆ...


"ಬೆಂಗಳೂರಲ್ಲಿ ಆಯುಧ ಪೂಜೆ ನವರಾತ್ರಿಯಲ್ಲಿ ಮಾಡ್ತಾರೆ"


ಮೂರ್ತಿ ನಕ್ಕ...ನಂಗೂ ತಡೆದು ಕೊಳ್ಳಲಾಗಲಿಲ್ಲ..
ಇದೇ ಸಂದರ್ಭ ಅಂತ ಜೋರಾಗಿ ನಕ್ಕು ಬಿಟ್ಟೆ...

ಅಷ್ಟರಲ್ಲಿ ಮೂರ್ತಿ ಗೆಳೆಯ ಗುರು ಬಂದ... ಅವರದು ಹಾರ್ಡ್‍ವೇರ್ ಅಂಗಡಿ ಇದೆ...


"ಮಾರಾಯಾ.. ನಾಳೆ ಪೂಜೆಗೆ ಅಂತ ಸಾಮಾನು ತೊಳಿತಾ ಇದ್ದೆ..

ಎಲ್ಲ ಸಾಮಾನು ಯಾಕೆ ತೊಳಿಬೇಕು..?
ಶಾಸ್ತ್ರಕ್ಕೆ ಅಂತ ಒಂದೆರಡು ತೊಳೆದು ಪೂಜೆ ಮಾಡಿದ್ರೆ ಆಗಲ್ವಾ..?
ಹೀಗೆಲ್ಲ ತೊಳೆದರೆ ಕೆಲವು ಹಳೆ ಸಾಮಾನಿಗೆ ಜಂಗ್ ಹಿಡಿದು ಬಿಡ್ತದೆ..

ಹಳೆ ಸಾಮಾನಿಗೆಲ್ಲಾ ಯಾಕಪ್ಪಾ ಪೂಜೆ...?


ನನ್ನಪ್ಪನಿಗೆ ಹೇಳಿದ್ರೆ ಕೇಳ್ತಾಇಲ್ಲ.. ಮಾರಾಯಾ...

ವರ್ಷಕ್ಕೊಮ್ಮೆ ಆದ್ರೂ ಸಾಮಾನಿಗೆ ನೀರು ಹಾಕಿ ತೊಳಿಬೇಕು ಅಂತ ಹಠ ...
ಅವರ ಹತ್ರ ಎಂತಾ ಜಗಳ ಅಂತ ಈ ಕಡೆ ಬಂದೆ.."

ನನಗೆ ಅಲ್ಲಿ ನಿಲ್ಲಲಾಗಲಿಲ್ಲ...


ಕೆಲಸ ಎಲ್ಲ ಮುಗಿಸಿ ... 

ಕುಷ್ಟನನ್ನು ಕರೆದು ಕೊಂಡು ಕಾನಸೂರಿಗೆ ಹೊರಟೆ..

"ಏನಾಯ್ತು ಕುಷ್ಟ..? ಡಾಕ್ಟ್ರು ಏನು ಹೇಳಿದ್ರು..?"


"ಪಕಾಸ್ ಹೆಗ್ಡೇರೆ.. 

ಈ ಡಾಕ್ಟ್ರು ಸರಿ ಇಲ್ರ..


ಎಂತಾ .... ಮರ್ಯಾದಿ ಇಲ್ಲದ ಜನ ಮಾರಾಯ್ರೆ...!

ರಾಮ...ರಾಮಾ...!... 

ನನ್  ನಾಚಿಕೆ .. ಮರ್ವಾದಿ, ಎಲ್ಲಾ ತೆಗೆದು ಬಿಟ್ರು...!
ಇಶ್ಯೀ... 
ಅದೆಲ್ಲ ...ಹೇಳೂಕೆ ನಾಚ್ಕೇರ್ರಾ....!

ಡಾಕ್ಟ್ರ ಹತ್ರೆ .. 
ಮರ್ಯಾದಿ ಇಟ್ಕೋ ಬಾರ್ದು ಅಂತ ಉಪದೇಸ ಬೇರೆ ಕೊಟ್ರು..
ಈ ಔಷಧ ತಗೊ.., ಎರಡು ದಿನ ಬಿಟ್ಟು ಮತ್ತೆ ಬಾ ಅಂತ ಹೇಳಿದ್ರು.."

"ಹಾಗೆ ಮಾಡು ಎರಡು ದಿನ ಬಿಟ್ಟು ಮತ್ತೆ ಹೋಗಿ ಬಾ.."


" ಇಷ್ಟು .. ಮರ್ಯಾದಿ ಹೋಗಿದ್ದು ಸಾಕ್ರ...


ಪದೆ.. ಪದೆ ಮರ್ಯಾದಿ ತೆಗಿಸಿಕೊಳ್ಳೋಕೆ ನಾನೇನು ರಾಜಕೀಯದವ್ನಾ..?

ಲಂಚ ಕೇಳೋ.. ಆಫಿಸರ್ನಾ...?
ನನ್  ಕೈಲಿ  ಆಗೂದಿಲ್ರ...!
 ಮಗನ್ನ ಕಳಸ್ತೆ.. ಔಷಧಿ ತರ್ಲಿಕ್ಕೆ.."

"ಅವರು "ತಪಾಸಣೆ" ಮಾಡಿ ಔಷಧ ಕೊಡ ಬೇಕಾಗ್ತದೆ...
ಪೆಟ್ಟಾಗಿದ್ದು ನಿಂಗೆ..
ನೀನೇ ಹೋಗಬೇಕು ಮಾರಾಯಾ.."

"ನನ್ನ ಮಗ ಸಣ್ಣವ...ಸರಿ..
ನಮ್ ಪಕ್ಕದ ಮನೆ ನಾಣಿ ಕಳಸ್ತೆ...
ನಂಗೆ ಹೀಗ್ ಹೀಂಗೆ ಆಗ್ತದೆ ಅಂತ ಅವ ಡಾಕ್ಟ್ರ ಹತ್ರ ಹೇಳ್ತಾನೆ..

ಅಲ್ರಾ... 
ಕಾಮತ್ರು ನಂಗೆ ಮಂತ್ರಿಸಿ ಕೊಡ್ಬೇಕಾದ್ರೆ...
ನನ್ನ ಮಗನ್ನ ಕಳಸ್ತಿದ್ದೆ..

ಕಾಮತ್ ರಿಗೆ   ಆಯ್ತದೆ... ಡಾಕ್ಟ್ರಿಗೆ ಆಗೋದಿಲ್ವ..?

ಕಾಮತ್ರು ಎಷ್ಟು ದೊಡ್ಡ ಜನಾ...? 
ಏನು ಕಥೆ..!
ಕಾಮತ್ರ ಯೋಗ್ಯತೆ ಇದೆಯಾ ಇವರಿಗೆ...?

ಮಂತ್ರ ಹೇಳಿ ಗಂಡು ಮಗನ್ನ ಕೊಡ್ಸಿದವ್ರು..!!!

ಅವ್ರಿಗಿಂತ ದೊಡ್ಡವ್ನ... ಈ ಡಾಕ್ಟರ್ರು...?? "

" ಇಲ್ಲಪ್ಪಾ ನೀನೇ ... ಹೋಗ್ಬೇಕು..."

"ಉಪದೇಸ ... ಮಾಡಿದಂಗೆ ಅಲ್ಲ ಮರ್ವಾದಿ ಕಳ್ಕೊಳ್ಳದು.. !

ಮರ್ವಾದಿ ... ಕಳೊಂಡವ್ನಿಗೆ ಗೊತ್ತು..ಅದು ಏನು ಅಂತ...

ನಿಮಗೇನು ಗೊತ್ತು ನನ್ ಕಷ್ಟ...?

ಮರ್ಯಾದಿ  ಬಿಚ್ಕೊಂಡು ಡಾಕುಟ್ರ  ಎದುರಿಗೆ ಕೂತ್ಕೊಳ್ಳೋದು

ಎಷ್ಟು ಕಷ್ಟ ನಿಮಗೆ ಗೊತ್ತಾ ?

ಈ... ಡಾಕ್ಟ್ರು ಸ್ವಲ್ಪ ಮಳ್ಳು..ಮಾರಾಯ್ರೆ....!

ಸುಮ್ನೆ ಔಷಧ ಕೊಡೋದ್ ಬಿಟ್ಟು.. 
ನೆಗಿ ಆಡ್ತಾರ್ರೇ ಮಾರಾಯ್ರೆ..!

ನನ್ನ ನೋಡಿ ಕಿಸಿ ಕಿಸಿ ನಗ್ತಾರೆ...! "

"ನೋಡು... ಕುಷ್ಟ ..
ಕಡಿಮೆ ಆಗದೇ ಇದ್ರೆ ನೀನೇ... ಹೋಗಬೇಕು..
ಕೆಲವೊಂದು ನಿನಗೆ ಗೊತ್ತಾಗುದಿಲ್ಲ..
ನಾನು ಹೇಳಿದ್ದು ಕೇಳು..

ನಿನ್ನ ಪಕ್ಕದ ಮನೆ ಯಂಕನಿಗೆ ಏನಾಯ್ತು...?
ಅದೇ ನೋವಲ್ಲಿ  ಕೊನೆಗೆ..ಸತ್ತು ಹೋದ.. 
ನಾಚ್ಕೆ ಮಾಡ್ಕೊಂಡು..!

ಬದುಕಿ ಉಳಿದರೆ ನಾಚ್ಕೆ, ಮರ್ಯಾದಿ...ಎಲ್ಲಾ ..!


 ಇದಕ್ಕೆಲ್ಲ ನಾಚಿಕೆ ಇಟ್ಗೋಬೇಡ....."

"ಆಯ್‍ತ್ರ.. ಹಾಂಗೇ ಮಾಡ್ತೆ.."ಅಷ್ಟರಲ್ಲಿ ಕಾನಸೂರಿಗೆ ಬಂದೆವು.... 


ಅಲ್ಲಿ.. 
ಕಾನಸೂರು ಹೆಗಡೇರ ಅಂಗಡಿಗೆ ಬಂದೆವು...

ಅದು ಸುತ್ತ ಮುತ್ತಲಿನ ಹಳ್ಳಿಗರ ಅಡ್ಡ...

ಅಲ್ಲಿ  ಕಲ್ಕಟ್ಟೆ  ಗೋವಿಂದಣ್ಣ ಸಿಕ್ಕಿದ...

ಅವ ಹಳೆ ದೋಸ್ತ...

"ಅರೇ... ಪ್ರಕಾಶಾ... !

ಆರಾಮಾ..?
ಸಿರ್ಸಿಗೆ ಬಂದಿದ್ದಾ?"

" ಹೌದು ಮಾರಾಯಾ... ಏನು ವಿಶೇಷ..?"


"ಏನೂ ಇಲ್ಲ ಮಾರಾಯಾ..!

ನಿನ್ನೆ ಸಿರ್ಸಿಯಲ್ಲಿ ಒಂದು ಭಾನಗಡಿ ಘಟನೆ.. ಆಯ್ತು.."

"ಏನಾಯ್ತು...!!.?"

" ಬಸ್ಟಾಂಡಲ್ಲಿ ಎಲ್ಲಕಡೆ ಬರೆಸಿ ಇಟ್ಟಿದ್ದಾರೆ...

" ನಿಮ್ಮ ನಿಮ್ಮ ಸಾಮಾನುಗಳಿಗೆ ನೀವೇ ಜವಾಬ್ದಾರರು.."

" ಸಾಮಾನು ಕಳ್ಳರಿಂದ ಎಚ್ಚರಿಕೆಯಿಂದ ಇರಬೇಕು" ಅಂತ..."


"ಅದು.. ನಿಜ ಏನಾಯ್ತು.!!.?"

" ಅಮ್ಮಚ್ಚಿ ಮಂಜಣ್ಣ ತನ್ನ ಸಾಮಾನು ...
ಅಲ್ಲೇ ಕಲ್ಲು ಬೇಂಚಿನ ಮೇಲಿಟ್ಟು ಒಳಗಡೆ ಹೋಟ್ಲಿಗೆ ಹೋಗಿದ್ನಂತೆ..


ಚಹ ಕುಡಿದು ಬರುವಷ್ಟರಲ್ಲಿ ಮಂಜಣ್ಣನ ಸಾಮಾನು ಮಾಯಾ..!!

ಕಳ್ಳರು ಅವನ ಸಾಮಾನು ಎತ್ತಿಕೊಂಡು ಹೋಗಿ ಬಿಟ್ಟಿದ್ರು..!!!."ಗೋವಿಂದಣ್ಣ ಬಹಳ ಬೇಸರ ಪಟ್ಟುಕೊಂಡ...

" ಕಾಲ ಕೆಟ್ಟು ಹೋಯ್ತು ಪ್ರಕಾಶ...!!

ಈ ಕಳ್ಳ ಜನ ಎಂತಹ ಸಾಮಾನನ್ನೂ ಬಿಡೋದಿಲ್ಲ.. ಮಾರಾಯಾ..."


ಅಷ್ಟರಲ್ಲಿ ಕುಷ್ಟ ಬಾಯಿ ಹಾಕಿದ...


" ಸಾಮಾನು ಕಳ್ರು ಎಲ್ಲ ಕಡೆ ಇರ್ತಾರ್ರ...

ನಮ್ಮ ಸಾಮಾನು ಬಗ್ಗೆ ನಾವು ಎಚ್ಚರಿಕೆಯಲ್ಲಿ ಇರಬೇಕ್ರ...

ನಂಗೆ ....ಇದು ಮಾತ್ರ ಅರ್ಥ ಆಗೂದಿಲ್ರಾ...!


ಅಲ್ಲಾ.. ಈ.. ಮಂಜಣ್ಣ...!!

ತಮ್ಮ ಸಾಮಾನೂ ... 
ಯಾಕೆ.. ...ಹೊರಗೆ ಇಟ್ಟು ಹೋದ್ರು..?? !!...?"

(ಕುಷ್ಟನ ಕಥೆಯನ್ನು ಕಿರು ಚಿತ್ರ ಮಾಡಿದರೆ ಹೇಗೆ..?
ನಮ್ಮ ಪ್ರತಿಭಾನ್ವಿತ ಸ್ನೇಹಿತರಾದ ಹೇಮಂತ್ ಕೇಳುತ್ತಿದ್ದಾರೆ..

ಖುಷಿಯಾಗುತ್ತಿದೆ....

ವಿವರಗಳಿಗೆ ಪ್ರತಿಕ್ರಿಯೆ ಓದಿ..

ಕಿರು ಚಿತ್ರ ಮಾಡಿದರೆ ಹೇಗಿರುತ್ತದೆ..?)

85 comments:

Ranjita said...

ಚೆನಾಗಿದೆ ಪ್ರಕಾಶಣ್ಣ ..
ನಿಜ ಇಲ್ಲಿ ಹಾಸ್ಯದ ಜೊತೆಗೆ ಒಂದು ಸಂದೇಶ ಕೊಟ್ಟಿದ್ದಿರಿ .. ದನ್ಯವಾದಗಳು

Ittigecement said...

ರಂಜಿತಾ....

ಕೆಲವೊಂದು ವಿಷಯದಲ್ಲಿ ನಮ್ಮ ಜನ ಅತಿಯಾಗಿ ನಾಚಿಕೆ ಮಾಡಿಕೊಂಡು..
ಜೀವಕ್ಕೇ ಸಂಚಾರ ತಂದುಕೊಳ್ಳುತ್ತಾರೆ...

ರವಿ ಬೆಳಗೆರೆಯವರು ಇದನ್ನು ತಮ್ಮ "ಖಾಸ್ ಬಾತಿನಲ್ಲಿ" ಹೇಳಿದ್ದಾರೆ...

ಇದು ಬಹುಷಃ ನಮ್ಮ ದೇಶದಲ್ಲಿರುವ ಅತಿಯಾದ ಮಡಿವಂತಿಕೆ, ಮತ್ತು ಅನಕ್ಷರತೆ ಕಾರಣ ಇರಬಹುದೇನೋ....

ನಮ್ಮೂರಲ್ಲೊಂದು ಇಂಥಹ ಘಟನೆ ಆಗಿದೆ...


ಇನ್ನು ಇಲ್ಲಿ ನಗಲಿಕ್ಕೆ ಯಾವ ಅಡೆತಡೆಯೂ ಇಲ್ಲ.... ಬಿಂದಾಸ್ ನಗ ಬಹುದು....

ನಕ್ಕರೆ ರೋಗಗಳು ದೂರವಾಗುವದಂತೆ....

ಹೆಣ್ಣುಮಕ್ಕಳು ಇದಕ್ಕೆ ಪ್ರತಿಕ್ರಿಯೆ ಕೊಡುವದಿಲ್ಲ ಅಂದುಕೊಂಡಿದ್ದೆ...

ನಕ್ಕಿದ್ದಕ್ಕೆ ಧನ್ಯವಾದಗಳು...

venkob said...

masthagiddu prakashanna :).

D said...

ಹ್ಹ ಹ್ಹ ಹ್ಹಾ.. ಈ ಸಾಮಾನ್ ಕಾಲ್‌ದಲ್ಲಿ ಆಗಿದ್ದಲ್ಲ ಹೋಗಿದ್ದಲ್ಲ ಮಾರಾಯಾ..!

ಸುಧೇಶ್ ಶೆಟ್ಟಿ said...

ಅಯ್ಯಪ್ಪ.... ನಕ್ಕೂ ನಕ್ಕೂ ಈಗ ಸುಧಾರಿಸಿಕೊಳ್ತಾ ಇದ್ದೇನೆ ಪ್ರಕಾಶಣ್ಣ.....

Me, Myself & I said...

ಆತ್ಮೀಯ,

ಎಲ್ಡೂವರೆ ಗಂಟೆ ಕಾಶೀನಾಥ್ ರ ಅವಾಂತರ ಪಿಕ್ಚರ್ ನೋಡಿದ ಅನುಭವ ಆಯ್ತು. ಮೊನ್ನೆ ಇಂತದ್ದೇ ಒಂದು ಬರಹನ ನನ್ನ ಬ್ಲಾಗಲ್ಲಿ ಹಾಕಿದ್ದೆ.

ಕಳೆದ ಬಾರಿ ಊರಿಂದ ಬಾಲ್ಯದ ನೆನ್ಪು ತಂದೀನಿ ಅಂದಿದ್ರಿ, ಇಲ್ನೋಡಿದ್ರೆ ಸಾಮಾನಿನ ಕಳ್ಳರಿದ್ದಾರೆ ಅಂತಹ ಎಚ್ಚರಿಕೆ ಕೊಡ್ತಾ ಇದ್ದೀರ. ಒಟ್ಟಲ್ಲಿ ಊರಲ್ಲಿ ಆಯುಧ ಪೂಜೆ ಮಾಡಿದ್ರಿ.

ನಿಮ್ಮ ಬರಹಕ್ಕೆ ಎಂದಿನಂತೆ ನನ್ಕಡೆಯಿಂದ ಅಭಿನಂದನೆಗಳನ್ನ ಸಲ್ಲಿಸ್ತೀನಿ.

ಜಲನಯನ said...

ಹಹಹ.....ಏನ್ರೀ ಪ್ರಕಾಶ್ ಇಟ್ರಲ್ಲಾ...ಬಾಂಬನ್ನೇ...ದೀಪಾವಳಿ ಮುಗಿದ್ರೂ ನಿಮ್ಮ ಸದ್ದು ಅಡಗೊಲ್ಲ..!! ನಕ್ಕಿದ್ದೇ ನಕ್ಕಿದ್ದು,,,
ನನಗೆ ನಮ್ಮ ಪಿಯುಸಿ ಸಮಯದಲ್ಲಿ (Govt Science College, ನೃಪತುಂಗ ರೋಡ್) ನಮ್ಮ ಕನ್ನಡ ಉಪ-ಪಠ್ಯ ಜರ್ಮನಿಯ ಪ್ರವಾಸ ಕಥನ (ಶ್ರೀನಿವಾಸ ..ಲೇಖಕರು) ನಮ್ಮ ಉಪನ್ಯಾಸಕರೂ ಶ್ರೀನಿವಾಸಯ್ಯ ಎನ್ನುವವರು...ಅದರಲ್ಲಿ ಹಲವು ಕಡೆ..ಸಾಮಾನು..ಬರುತ್ತೆ ಅದನ್ನ ನಮ್ಮ ಉಪನ್ಯಾಸಕರು ಹಾಸ್ಯಕ್ಕಾಗಿಯೇ ನೀವು ಹೇಳಿರುವ ಅರ್ಥದಲ್ಲಿ ಎನ್ನುವಂತೆ ಉಪನ್ಯಾಸ ಸಮ್ಯದಲ್ಲೂ ಉಪಯೋಗಿಸುತ್ತಿದ್ದರು..ಅದಕ್ಕೆ ನಾವೆಲ್ಲಾ ಅವರನ್ನ ಸಾಮಾನು ಶ್ರೀನಿವಾಸಯ್ಯ ಎಂದೇ ನಮ್ಮಲ್ಲಿ ನಿಕ್ ನಾಮಕರಣ ಮಾಡಿದ್ದೆವು..ಸುಮಾರು ಮುಕ್ಕಾಲು ವರ್ಷದ ಅವಧಿ ಮುಗಿದಿತ್ತು, ಶ್ರೀನಿವಾಸಯ್ಯ ನವರಿಗೆ ವರ್ಗವಾಯ್ತು ಅನ್ಸುತ್ತೆ..ನಮ್ಮ ಇನ್ನೊಬ್ಬ ನಮ್ಮ ನೆಚ್ಚಿನ ಡಾ.ಓಂಕಾರಪ್ಪ ನವರ ಪಾಲಿಗೆ ಆ ಪಠ್ಯವನ್ನು ಮುಗಿಸುವ ಹೊಣೆ ಬಿತ್ತು. ಮೊದಲ ದಿನ ಅವರು ಬಂದು ಹಾಜರಾತಿ ತಗೊಂಡರು ನಂತರ ನಾವು alphabetical orderನಲ್ಲಿ ಕುಳಿತಿರುತ್ತಿದ್ದ ಕಾರಣ ಮತ್ತು ಕ್ಲಾಸಿನಲ್ಲಿ ಸ್ವಲ್ಪ ಹೆಚ್ಚೇ ಪ್ರತಿಕ್ರಿಯಿಸುತ್ತಿದ್ದ ನನ್ನನ್ನ ~ ರೀ ಆಜಾದ್ ಇದನ್ನ ಯಾರ್ರೀ ಹ್ಯಾಂಡಲ್ ಮಾಡ್ತಿದ್ದದ್ದು ?? ಎಂದಾಗ...ನಮ್ಮ ವಾಡಿಕೆಯಂತೆ..ಸಾಮಾನು ಶ್ರೀನಿವಸಯ್ಯನವರು ಸರ್ ಎಂದು ಬಾಯಿತಪ್ಪಿ ಬಂದೇ ಬಿಡ್ತು...ಇಡೀ ಕ್ಲಾಸೇ ಗೊಳ್ ಎಂದು ನಗಲಾರಂಭಿಸಿದಾಗ...ಓಂಕಾರಪ್ಪನವರೂ ಅದೇನೋ ನನಗೂ ಹೇಳ್ರಪ್ಪಾ ಎಂದಾಗ ನಾವು ಕೊಟ್ಟ ವಿವರ ಕೇಳಿ ಅವರೂ ನಕ್ಕುಬಿಟ್ಟರು..

Ittigecement said...

ವೆಂಕೋಬ (ವೆಂಕಟೇಶ್)

ಹ್ಹಾ... ಹಾ....!

"ಮರ್ವಾದಿ ಕಳ್ಕೊಂಡವ್ನಿಗೆ ಗೊತ್ತು ಅದರ ಕಷ್ಟ ಏನು ಅಂತ..." ಅಲ್ವಾ...?

ನನ್ನ ಗೆಳೆರ ಸಂಗಡ ಇದನ್ನು ಹೇಳುವಾಗ ಇನ್ನೂ ಒಂದಷ್ಟು ಇದೆ...
ಇಲ್ಲಿ ಸುಮಾರು ೩೦% ಕಟ್ ಮಾಡಿದ್ದೇನೆ...

ಇಷ್ಟಪಟ್ಟು ನಕ್ಕಿದ್ದಕ್ಕೆ ಧನ್ಯವಾದಗಳು...

Ittigecement said...

ಪ್ರಿಯ "ಡಿ..."

ನೀವು ಯಾರು ಅಂತ ಗೊತ್ತಾಗ್ಲಿಲ್ರ...!!

ಲಂಡನ್ನಿನವ್ರ..? ಹ್ಹಾ..ಹ್ಹಾ....!

ಈ ಮರ್ವಾದಿ ಕಥೆ ಇನ್ನೂ ಇದೇರ್ರ...

ನೀವು ಖುಷಿ ಪಟ್ಟು ನಕ್ಕಿದ್ದಕ್ಕೆ ಧನ್ಯವಾದಗಳು...

Ittigecement said...

ಸುಧೇಶ್....

ನಿಮ್ಮ ಬ್ಲಾಗಿಗೆ ಬರದೆ ತುಂಬಾ ದಿನ ಆಯ್ತು ... ಬೇಸರಿಸ ಬೇಡಿ...
ಸಿಕ್ಕಾಪಟ್ಟೆ ಕೆಲಸದ ಒತ್ತಡ...

"ಕಾಮತ್ರು ... ಮಂತ್ರಿಸಿ ಗಂಡು ಮಗನ್ನ ಕೊಟ್ಟವ್ರು...
ಅವ್ರಿಗಿಂತ ದೊಡ್ಡವ್ನ ಈ ಡಾಕ್ಟ್ರು...?"

ಅವನಿಗೆ ತಿಳಿಸಿ ಹೇಳುವಾಗ ನಾನು ಸುಸ್ತಾಗಿದ್ದೆ...

ನಕ್ಕಿದ್ದಕ್ಕೆ ನನಗೂ ಖುಷಿಆಗಿದೆ ಸುಧೇಶ್...!

ಧನ್ಯವಾದಗಳು...

Ittigecement said...

ಲೋದ್ಯಾಶಿಯವರೆ...

ನಿಮ್ಮ ಬ್ಲಾಗಿಗೂ ಬರದೆ ಬಹಳ ದಿನ ಆಯ್ತು...
ವಿಪರೀತ ಕೆಲಸ... ಬೇಸರ ಪಡದಿರಿ...

ಈ ನಡುವೆ ನಿಮ್ಮ ಬ್ಲಾಗಿನಲ್ಲಿ ಅಳುವ ವಿಷಯ ಜಾಸ್ತಿ ಆಗಿಬಿಟ್ಟಿದೆ ಅಂತ ದೂರುಗಳು ಬಂದವು...

ಹಾಗಾಗಿ ಈ ಲೇಖನ...

ಆಯುಧ ಪೂಜೆ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು....

Ittigecement said...

ಆಝಾದ್ ಸರ್.....(ಜಲನಯನ..)

ನಿಮ್ಮ ಅನುಭವ ಓದಿದ ಮೇಲೆ...
ಈಗ ಧರ್ಯ ಬಂತು ನೋಡ್ರಿ....

ಇದು ಇನ್ನೂ ಮುಗಿಲ್ಲ... ಮುಂದೆ ಯಾವಾಗಲಾದ್ರೂ ಹಾಕುವೆ...

ನಿಮ್ಮ ಉಪನ್ಯಾಸಕರು ಬಲು ಮೋಜಿನವ್ರು ಕಣ್ರೀ....

ನಮ್ಮ ರಾಜ್ಯದ, ದೇಶದ ಬಜೆಟ್ ಮಂಡನೆ ಆದ ಮರುದಿನ ಪೇಪರ್ ಓದಬೇಕು...

ಮಸ್ತ್ ಇರ್ತದೆ... ಹ್ಹಾ...ಹ್ಹಾ...!

ಸಾಮಾನಿಗೂ ಟ್ಯಾಕ್ಸ್ ಹಾಕ್ತಾರ್ರೆ ಮಾರಾಯ್ರೆ...!!

ನಿಮ್ಮ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು... ಸರ್....!

Unknown said...

ನಿಮ್ಮ ಹಾಸ್ಯ ಅದರ ವಿಡಂಬನೆ ಚೆನ್ನಾಗಿದೆ...

Ittigecement said...

ಈಶುಕುಮಾರ್...

ಒಂದು ಸಣ್ಣ ಎಳೆಯನ್ನು ಹಿಡಿದು...
ಈ ಹಾಸ್ಯವಾಗಿದೆ...

ಹಳ್ಳಿಯ ಜನರು ಇಂಥಹ ವಿಷಯಗಳಲ್ಲಿ ಅಜ್ಞಾನದಿಂದ ಬಹಳ ಕಷ್ಟಗಳನ್ನು ಅನುಭವಿಸುತ್ತಾರೆ...

ಪೇಟೆಯ ಜನರೇನೂ ಕಮ್ಮಿಯಿಲ್ಲ...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

umesh desai said...

ಹೆಗಡೇಜಿ "ಸಾಮಾನು ಪುರಾಣ" ಸಾಮಾನ್ಯವಾದುದಲ್ಲ ಏನು ನಮ್ಮ ಬ್ಲಾಗ್ ಕಡೆ ಬಂದೇ ಇಲ್ಲ ಭಾಳ ಬಿಸಿನಾ?

Ittigecement said...
This comment has been removed by the author.
Ittigecement said...

ಉಮೇಶ್ ಜೀ....

ಎಲ್ಲ ಬ್ಲಾಗ್ ಸ್ನೇಹಿತರ ಕ್ಷಮೆ ಕೇಳುವೆ...
ಸ್ವಲ್ಪ ಕೆಲಸದ ಒತ್ತಡ...
ಪುಸ್ತಕ ಬಿಡುಗಡೆಯ ಕೆಲಸಗಳು... ಇತ್ಯಾದಿಯಿಂದಾಗಿ ನನ್ನ ಗೆಳೆಯರ ಬ್ಲಾಗ್ ಕಡೆ ಬರಲಾಗಲಿಲ್ಲ...

ದಯವಿಟ್ಟುಬೇಸರಿಸದಿರಿ....

ನಾನು ಕುಷ್ಟನ ಇನ್ನೊಂದು ಕಥೆ ಬರೆದು ಇಟ್ಟಿದ್ದೆ...
ಅದು ಸ್ವಲ್ಪ ಭಾವನಾತ್ಮಕ ಕಥೆ...

ಆದರೆ ನನ್ನ ಗೆಳೆಯರು
"ಇಟ್ಟಿಗೆ ಸಿಮೆಂಟಿನಲ್ಲಿ ನಗು" ಕಾಣದೆ ಬಹಳ ದಿನಗಳಾಗಿ ಬಿಟ್ಟವು...
ಏನಾದರೂ ಜೋಕ್ ಹಾಕು ಮಾರಾಯಾ.."
ಅಂತ ಒತ್ತಾಯಿಸಿದ್ದಕ್ಕೆ ಈ ಲೇಖನ...

ಈ ಸಾಮಾನಿನ ಕಥೆ ಇಲ್ಲಿಗೆ ಮುಗಿದಿಲ್ಲ...
ಮನೆಗೆ ಬಂದು ತಲುಪುವವರೆಗೆ ಈ ಕಥೆ ಇದೆ...

ಅದನ್ನು ಮುಂದೆಯಾವಗಲಾದರೂ ಹಾಕುವೆ...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು....

ಚಿತ್ರಾ said...

ಪ್ರಕಾಶಣ್ಣ ,
ನಂಗೆ ನಕ್ಕೂ ನಕ್ಕೂ ಕಣ್ಣಲ್ಲಿ ನೀರು ಬರೋ ಹಂಗಾಗೊತು ! ಒಂದು ದಿನಬಳಕೆಯ ಸಾದಾ ಸೀದಾ ಶಬ್ದದ ಅವಾಂತರ !!!!
ನಮ್ಮ ಊರ ಬದಿಗೆ ಹಿಂಗಿದ್ದೆ ಎಷ್ಟೋ ಶಬ್ದಗಳಿದ್ದು ಅಲ್ದಾ ? ಕೆಲವೊಂದು ಸಲ ಮುಜುಗರ ತಂದರೆ , ಕೆಲವೊಂದು ಸಲ ತಮಾಷೆಯಾಗ್ತು ! ನಾವು ಅರ್ಥ ಮಾಡ್ಕ್ಯಂದ ಹಾಂಗೆ !
ನನ್ನ ಬಯಲು ಸೀಮೆಯ ಗೆಳತಿಯೊಬ್ಬಳು ಹೇಳಿದ್ದು ನೆನಪಾಯಿತು.ಅವರ ಕಡೆ ಚಿಕ್ಕ ಮಕ್ಕಳಿಗೆ ' ಮುತ್ತು ಕೊಡು ' ಎನ್ನಲು " ಬೆಲ್ಲ ಕೊಡು" ಎನ್ನುತ್ತಿದ್ದರಂತೆ. ಆ ಊರಿಗೆ ಹೊಸದಾಗಿ ಮದುವೆಯಾಗಿ ಬಂದ ಹೆಣ್ಣೊಬ್ಬಳು ಅಂಗಡಿಗೆ ಹೋದಾಗ ನಾಚುತ್ತಾ " ಸ್ವಲ್ಪ ಬೆಲ್ಲ ಕೊಡ್ರೀ " ಎಂದು ಕೇಳಿದಾಗ ಕೀಟಲೆ ಸ್ವಭಾವದ ನಡುವಯಸ್ಸಿನ ಅಂಗಡಿಯಾತ " ಏನವ್ವಾ, ಇಷ್ಟು ಮಂದಿ ಮುಂದ ಕೇಳಲಿಕ್ಕೆ ಹತ್ತಿಯಲ್ಲಾ ? " ಎಂದಾಗ ಅಕ್ಕ ಪಕ್ಕ ದವರೆಲ್ಲ ಜೋರಾಗಿ ನಕ್ಕು ಬಿಟ್ಟರಂತೆ .ಪಾಪ ಏನೂ ತಿಳಿಯದ ಆ ಹುಡುಗಿಗೆ ಅವಳ ಜೊತೆಗೆ ಹೋಗಿದ್ದ ಸಣ್ಣ ಹುಡುಗಿ ಅದರ ಅರ್ಥವನ್ನು ಬಿಡಿಸಿ ಹೇಳಿದಾಗ ಅವಳು ಕೆಂಪಾಗಿ ಮನೆಗೆ ಓಡಿ ಬಂದವಳು ಮತ್ತೆ ಆ ಕಡೆ ತಲೆಯೇ ಹಾಕಲಿಲ್ಲವಂತೆ !
ಒಟ್ಟಿನಲ್ಲಿ ಟಿಪಿಕಲ್ ಪ್ರಕಾಶ್ ಹೆಗಡೆ ಸ್ಟೈಲ್ ನಲ್ಲಿ ಮನಪೂರ್ತಿ ನೆಗ್ಯಾಡ್ಸಿದ್ದಕ್ಕೆ ಧನ್ಯವಾದಗಳು

ಮನಸು said...

ಚೆನಾಗಿದೆ ಪ್ರಕಾಶಣ್ಣ ..
ಹಾಸ್ಯ ಜೊತೆಗೆ ಮುಗ್ದತೆ ಎದ್ದು ಕಾಣುತ್ತದೆ.
ತಿಳುವಳಿಕೆ ಕಡಿಮೆ ಇದ್ದರಿಂದ ಕುಷ್ಟರವರು ನಾಚಿಕೆ ತೋರಿದ್ದಾರೆ. ಹಳ್ಳಿ ಜನರಲ್ಲಿ ಇನ್ನು ಹೆಚ್ಚು ಬದಲಾವಣೆ ಅವಶ್ಯಕ ಅಲ್ಲವೆ..?

sunaath said...

ಪ್ರಕಾಶ,
ಇನ್ನೆಂದಾದರೂ ಸಾಮಾನು ತರಲಿಕ್ಕೆ ಮಾರ್ಕೆಟ್ಟಿಗೆ ಹೋದಾಗ, ನಿಮ್ಮ ಹರಟೆಯ ನೆನಪಾಗಿ ನಗೆ ಉಕ್ಕಿ ಬರೋದೇ.

Ittigecement said...

ಚಿತ್ರಾ...

ನಿಮ್ಮ ಬೆಲ್ಲದ ಕಥೆ ಮಸ್ತ್ ಆಗಿದೆ...
ನಿಮ್ಮ ಕಥೆ ಓದಿದಾಗ ಒಂದು ಜೋಕ್ ನೆನಪಾಯ್ತು...

ಒಂದು ಪಾಪು ಎಲ್ಲರೆದುರಿಗೆ ನನಗೆ "ಉಚ್ಚೆ" ಬರ್ತದೆ ಅಂತಿತ್ತಂತೆ...
ಅ ಪಾಪು ಅಮ್ಮ ತನಗೆ ನಾಚಿಕೆ ಅಗುತ್ತದೆ ಎಂದು
ಉಚ್ಚೆ ಬದಲಿಗೆ "ಹಾದು" ಶಬ್ಧ ಹೇಳಲು ಹೇಳ್ತಾಳೆ...

ಮುಂದೆ ಆ ಪಾಪು ಮೂತ್ರ ಬಂದಾಗಲೆಲ್ಲ "ಅಮ್ಮ ನಾನು ಹಾಡು ಹೇಳಬೇಕು" ಅನ್ನುತ್ತಿತ್ತಂತೆ...

ಒಂದು ಸಾರಿ ಆ ಪಾಪು ಅಜ್ಜನ ಮನೆಗೆ ಬರುತ್ತದೆ...
ರಾತ್ರಿ ಅಜ್ಜನ ಪಕ್ಕದಲ್ಲೆ ಕಥೆ ಕೇಳುತ್ತ ಮಲಗುತ್ತದೆ...
ಅಜ್ಜನಿಗೂ ಖುಷಿ...
ಮಧ್ಯದಲ್ಲಿ "ತಾತಾ... ತಾತಾ... ನಾನು ಹಾಡು ಹೇಳಬೇಕು " ಅಂತ ಹೇಳುತ್ತದೆ...
ತಾತನಿಗೇನು ಗೊತ್ತು..?
"ಬೇಡ ಪಾಪು.. ಈಗ ಮಧ್ಯರಾತ್ರಿ..
ನಾಳೆ ಬೆಳಿಗ್ಗೆ ಹೇಳ ಬಹುದು.."

ಪಾಪು ಏನೇ ಮಾಡಿದರೂ ಕೇಳುವದಿಲ್ಲ...
ಕೊನೆಗೆ ತಾತ ಸೋಲುತ್ತಾನೆ...

"ಓಕೆ .. ಪಾಪು.. ನನ್ನ ಕಿವಿಯಲ್ಲಿ ಹಾಡು ಹೇಳು ಅಂತ "ಪಾಪುವಿಗೆ ಕಿವಿ ಕೊಡುತ್ತಾರೆ...

ಪಾಪು ಹಾಡು ಹೇಳುತ್ತದೆ...

ನಿಮ್ಮ ನಗುವಿಗೆ ನನ್ನ ನಮನಗಳು...

ಸಾಗರದಾಚೆಯ ಇಂಚರ said...

ಸಾಮಾನು ಕಳ್ಳರು ಕಥೆ ಆಗಿದ್ದಲರ ಮಾರಾಯ್ರ, ದೀಪಾವಳಿ ಮರುದಿನ ಒಳ್ಳೆ ಸಾಮಾನು ಕಥೆನೇ
ಹಾಕವ್ರೆ ನಮ್ಮ ಪಕಾಸ್ ಅಣ್ಣ
ಒಳ್ಳೆಯ ಬರಹ

shivu.k said...

ಪ್ರಕಾಶ್ ಸರ್,

ನಿನ್ನೆಯಿಂದ ತುಂಬಾ ಕೆಲಸ, ಇವತ್ತೂ ಕೂಡ ಓಡಾಟ, ಸುಸ್ತು. ನಡುವೆ ನಿಮ್ಮ ಈ ಹೊಸ ಲೇಖನ ಓದಿ ನಗು ತಡೆಯಲಾಗಲಿಲ್ಲ. ನನ್ನ ಸುಸ್ತೆಲ್ಲಾ ಮಾಯವಾಯ್ತು. ಮತ್ತೆ ಸಂಜೆ ಮದುವೆ ಚತ್ರಕ್ಕೆ ಖುಷಿಯಿಂದ ಹೋಗಬಹುದು. ಒಂಥರ ಟಾನಿಕ್ ಕೊಟ್ಟ ಹಾಗೆ ಆಯ್ತು....

ಹಳ್ಳಿ ಜನರ ಮುಗ್ದತೆಯ ಜೊತೆಗೆ ಸಂದೇಶವನ್ನು ಹೊತ್ತು ತಂದ ಲೇಖನ ತುಂಬಾ ಚೆನ್ನಾಗಿದೆ.

ಸವಿಗನಸು said...

ಪ್ರಕಾಶಣ್ಣ ,
ಚೆನ್ನಾಗಿದೆ....
ಹಾಸ್ಯದ ಜೊತೆಗೆ ಒಂದು ಸಂದೇಶ ಸಹ ಕೊಟ್ಟಿದ್ದಿರಿ .....
ಮತ್ತಷ್ಟು ಬರಲಿ....
ಧನ್ಯವಾದಗಳು....

ಚುಕ್ಕಿಚಿತ್ತಾರ said...

ಪ್ರಕಾಶ್ ಅವರೆ ...
ನಿಮ್ಮ ಬರಹಗಳನ್ನು ಓದುತ್ತಿದ್ದರೆ, ಸಿರಸಿಯ ನನ್ನ ಅಜ್ಜನ ಮನೆ ನೆನಪಾಗುತ್ತದೆ. ಅಲ್ಲೂ ನಿಮ್ಮ ಕಥಾನಾಯಕನನ್ನು ಹೊಲುವ ಅಳೊಬ್ಬ ಇದ್ದ. ಮುಗ್ಧತೆ ಮನಕ್ಕೆ ಹತ್ತಿರ ಅಲ್ಲವೆ...?

ಸೀತಾರಾಮ. ಕೆ. / SITARAM.K said...

ನಿಮ್ಮ ಲೇಖನ ಓದಿ ನಕ್ಕಿದ್ದೆ ನಕ್ಕಿದ್ದು. ಅದಕ್ಕಿ೦ತಾ ಹೆಚ್ಚಾಗಿ ಪ್ರತಿಕ್ರಿಯೆಗಳಲ್ಲಿರುವ "ಬೆಲ್ಲಾ ಕೊಡೊದು""ಕಿವಿಯಲ್ಲಿ ಹಾಡೊದು" ಮು೦ತಾದವುಗಳನ್ನ ತಮ್ಮ ಸ್ಫೂರ್ತಿಯಿ೦ದ ಹ೦ಚಿಕೊ೦ಡ ಸಹೃದಯಿಗಳ ಅನುಭವ ಲೇಖನದ ಗರಿಮೆ ಹೆಚ್ಚಿಸಿವೆ. ಸಾಮಾನಿಗೆ ಪರ್ಯಾಯವಾಗಿ "ತಮ್ಮ" ಹಗು "ತ೦ಗಿ" ಅನ್ನೋ ಪದಗಳು ಉತ್ತರ ಕರ್ನಾಟಕದಲ್ಲಿ ಇನ್ನೂ ಚಾಲ್ತಿಯಲ್ಲಿದ್ದು ಹಲವು ಅಭಾಸಕ್ಕೆ ಕಾರಣ ಅಗುತ್ತೆ.

AntharangadaMaathugalu said...

ಪ್ರಕಾಶ್ ರವರೇ........

ಬರಹ ಲಘುವಾಗಿ ಸಕತ್ತಾಗಿದೆ....

ಶ್ಯಾಮಲ

ಮೌನಿ said...

ಪ್ರಕಾಶಣ್ಣ....
ತುಂಬಾ ಮಜವಾಗಿದ್ದು.ನಾನು ಒಬ್ಬನೇ ಕೂತು ಓದಿ ನಕ್ಕದ್ದೇ ನಕ್ಕದ್ದು.....ಪಾಪಾ ಕುಷ್ಟನ ಮುಗ್ಧತೆ....

ಗುರು.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಪ್ರಕಾಶಣ್ಣ, ಆ 'D' ಆನೆಯಾ.. ಅದು ಎಂತಕ್ಕೆ ಹಂಗೆ ಬಂಜು ಹೇಳಿ ದೇವ್ರಾಣೆ ಗೊತ್ತಿಲ್ಲೆ! ಆದ್ರೂವಾ ನಿಂಗೆ ಹೆಂಗೆ ಗೊತ್ತತು ಹೇಳಿ ಗೊತ್ತಾಜಿಲ್ಲೆ..! Any way - ಮತ್ತೆ - ಹ್ಹ ಹ್ಹ ಹ್ಹಾ.. :-)

Ittigecement said...

ಮನಸು....
ನಿಜ ಹಳ್ಳಿಗರಲ್ಲಿ ಈ ಬಗ್ಗೆ ತಿಳುವಳಿಕೆ ಬರಬೇಕು...
ಅವನನ್ನು ಒಪ್ಪಿಸುವದರಲ್ಲಿ ನನಗೆ ಸಾಕು ಬೇಕಾಯಿತು...

ಇದರ ಎರಡನೆಯ ಭಾಗವನ್ನು ಬರಿಬೇಕಾ...?

ಇದರ ಪರಿಣಾಮ ಏನಾಗಿದೆ...?

ನಮ್ಮನೆಯಲ್ಲಿ "ಸಾಮಾನು" ಪದವನ್ನು ಬಳಸುತ್ತಿಲ್ಲ...

ಹ್ಹಾ...ಹ್ಹಾ...ಹ್ಹಾ...!

ಧನ್ಯವಾದಗಳು "ಮನಸು"

Ittigecement said...

ಸುನಾಥ ಸರ್....

ನಮ್ಮನೆಯಲ್ಲಿ "ಸಾಮಾನು" ಶಬ್ಧವನ್ನು ನಿಷೇಧಿಸಲಾಗಿದೆ...

ಅದರ ಬದಲಿಗೆ "ವಸ್ತು" ಅನ್ನುತ್ತೇವೆ...

ಸಾಮಾನಿನ ಅರ್ಥ ಗೊತ್ತಿಲ್ಲದವರು ನಮ್ಮನೆಗೆ ಬಂದು ಮಾತಾಡುವಾಗ ಅವರಿಗೆ ಒಂದು ಥರಹದ ಅಭಾಸ..!

"ಕೋಣೆಯಲ್ಲಿರೋ .. ವಸ್ತುಗಳನ್ನು ಸರಿಯಾಗಿ ಇಡಬೇಕು.." ಅಂದರೆ ಹೇಗಿರುತ್ತದೆ...?

ಒಬ್ಬರು ಹಾಗೇ ಹೇಳಿದರು..

"ಹೆಗಡೆಯವರೆ... ನಿಮ್ಮ ಮನೆಯಲ್ಲಿ ಎಷ್ಟು ಶುದ್ಧವಾದ ಕನ್ನಡ ಬಳಸುತ್ತೀರಿ..
ಖುಷಿಆಯಾಗುತ್ತದೆ" ಎಂದು...

ಹ್ಹಾ... ಹಾ...!

ನೀವು ಅಂಗಡಿಗೆ ಹೋದಾಗ ಒಳ್ಳೆಯ ಸಾಮಾನು ಖರಿದಿಸಿ .. ಸರ್...!
ಸಾಮಾನಿನ ರೇಟನ್ನೂ ಸಹ ನೋಡಿ...

ಹಾ...ಹ್ಹಾ...!

ಧನ್ಯವಾದಗಳು...ಸುನಾಥ ಸರ್...!

ದಿನಕರ ಮೊಗೇರ said...

ಪ್ರಕಾಶಣ್ಣ,
ಓದಿ ನಗಾಡಿ ನಗಾಡಿ ಹೊಟ್ಟೆ ನೋವು ಬಂತು......ಪೇಟೆಗೆ ಹೋಗಿ 'ಸಾಮಾನು' ತರೋವಾಗೆಲ್ಲ ನಗು ಬರೋದು, ಗಂಭೀರ ವಿಷಯವನ್ನು ನಗಿಸು ನಗಿಸುತ್ತಲೇ ಹೇಳಿದ್ದಿರಿ, ಧನ್ಯವಾದಗಳು......

Ittigecement said...

ಡಾ. ಗುರುಮೂರ್ತಿ...

ಸಾಮಾನ್ ಕಥೆ ಇನ್ನೂ ಐತ್ರ...
ಇದು ಇನ್ನೂ ಮುಗಿದಿಲ್ರ...

ಅಲ್ರ ಅಮ್ಮಚ್ಚಿ ಗೋವಿಂದಣ್ಣ ತಮ್ಮ ಸಾಮಾನು ಯಾಕೆ ಹೊರಗೆ ಇಟ್ಟು ಹೋದ್ರು...?
ಇದು ನನ್ನ ಸಮಸ್ಯೆರ...!!

ಗುರು ಸಾಹೇಬ್ರ.. ಈ ಸಾರಿ ಊರಿಗೆ ಬಂದಾಗ ನಮ್ಮ ಕಡೆನೂ ಬನ್ನಿ ಆತ...
ಬರುವಾಗ ಫಾರಿನ್ ಸಾಮಾನ್ ತನ್ನಿ...
ಚೆನ್ನಾಗಿರ್ತದಂತಲ್ರ..

ಧನ್ಯವಾದಗಳು ಗುರು....

Unknown said...

ನಿಮ್ಮ "ಸಾಮಾನಿನ" ಕಥೆ ಚೆನ್ನಾಗಿದೆ ಪ್ರಕಾಶಣ್ಣ... ಹಾಸ್ಯದ ಜೊತೆ ಸಂದೇಶವನ್ನು ನೀಡಿದ್ದೀರಿ
ನಕ್ಕು ನಕ್ಕು ಸುಸ್ತಾದೆವು :) ಮುಂದಿನ ಭಾಗದ ನಿರೀಕ್ಷೆಯಲ್ಲಿ............

Me, Myself & I said...

^^^^^^
ಪ್ರಕಾಶಣ್ಣ ಬರ್ದಿದ್ದು ಅದು ಕುಶ್ಟನ ಸಾಮಾನ್ರಿ . ಅದು ಲೇಖಕರ ಸಾಮಾನಿನ ಕಥೆ ಅಂತೇಳಿ ನೀವು ಗೊಂದಲದಲ್ಲಿದ್ದೀರಿ.
ಗೊಂದಲದಿಂದ ಹೊರ್ಗೆ ಬನ್ನಿ.

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶಣ್ಣ...
ಎಂತ ಹೇಳ್ತ್ರಿ ಮರ್ರೆ :-)

ಬಿಸಿಲ ಹನಿ said...

ಪ್ರಕಾಶ್ ಸರ್,
ನಿಮ್ಮ ಹಾಸ್ಯ ಪ್ರಜ್ಞೆ ಅಸಾಮಾನ್ಯವಾದದು. ‘ಸಾಮಾನಿ’ನ ಸಂಗತಿ ಓದಿ ಬಿದ್ದೂ ಬಿದ್ದೂ ನಕ್ಕೆ. ಇಂಥ ಇನ್ನಷ್ಟು ಸಂಗತಿಗಳನ್ನು ಕೇಳಲು ಕಾತರರಾಗಿದ್ದೇವೆ. ದಯವಿಟ್ಟು ಉಣಬಡಿಸಿ.

ಮುಸ್ಸ೦ಜೆ said...

ತು೦ಬಾ ಸಾಸ್ಯಮಯವಗಿದ್ದು ಪ್ರಕಶಣ್ಣ.. ಧನ್ಯವಾದಗಳು :)

Ittigecement said...

ಶಿವು ಸರ್....

ಬರಹದ ಸಾರ್ಥಕತೆ ಇರುವದು ಇಲ್ಲೇ...
ನಿಜ ಹೇಳ ಬೇಕೆಂದರೆ..
ಇದನ್ನು ಬಹಳ
ಕಷ್ಟ ಪಟ್ಟು ಬರೆದದ್ದು...

ಎಲ್ಲೂ ಅಶ್ಲೀಲ ಶಬ್ಧಗಳಿಲ್ಲದೆ...
ಇಂಥಹ ವಿಷಯ ಹೇಳುವದು ಬಹಳ ಕಷ್ಟ..
ನಿನ್ನೆ "ಆಝಾದ್" ಸರ್ ಇದನ್ನೇ ಹೇಳುತ್ತಿದ್ದರು...

ಮನಬಿಚ್ಚಿ ನಕ್ಕಿದ್ದೀರಲ್ಲ...
ಅದನ್ನು ವ್ಯಕ್ತಪಡಿಸಿದ್ದೀರಲ್ಲ....
ಅಷ್ಟಲ್ಲದೇ... ಖುಷಿಯನ್ನು ಫೋನ್ ಮಾಡಿಯೂ ವ್ಯಕ್ತ ಪಡಿಸಿದ್ದೀರಿ...

ಇಷ್ಟು ಸಾಕು ನನಗೆ...

ಪ್ರತಿಕ್ರಿಯೆಗಳು ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ...
ಇದನ್ನು ಬಯಸುವದು ತಪ್ಪಲ್ಲ ಎನ್ನುವದು ನನ್ನ ಭಾವನೆ....

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಸವಿಗನಸು...(ಮಹೇಶ್)...

ಬಸ್ಟ್ಯಾಂಡಿನಲ್ಲಿ
"ನಿಮ್ಮ ಸಾಮಾನುಗಳ ಬಗೆಗೆ ಜಾಗ್ರತೆಯಿಂದ ಇರಿ..
ನಿಮ್ಮ ಸಾಮಾನುಗಳಿಗೆ ನಾವು ಜವಾಬ್ದಾರರಲ್ಲ.."

ಇವೆಲ್ಲ ಓದಿದಾಗ...
ನನಗರಿವಿಲ್ಲದಂತೆ..
ಬೇಡವೆಂದರೂ..
ನಗುವೊಂದು ಮೂಡಿಬಿಡುತ್ತದೆ..

ಮಹೇಶ್ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಚುಕ್ಕಿಚಿತ್ತಾರ...

ನಿಮ್ಮ ಬ್ಲಾಗಿನ ಹೆಸರು ತುಂಬಾ ಚೆನ್ನಾಗಿದೆ...
ನಿಮ್ಮ ಬರವಣಿಗೆಯೂ ಸತ್ವಯುತವಾಗಿದೆ...

ಈ ಥರಹ ಮುಗ್ಧತೆಯ ಜೊತೆಗಿನ ಹಾಸ್ಯದ ಕಣಜ ನಮ್ಮಲ್ಲಿದೆ...

ಮಲೆನಾಡಿನ "ಇಸ್ಪೀಟ್ ಆಟದ ಜೋಕ್" ಅಂತೂ ಸೂಪರ್ ಆಗಿರ್ತದೆ...

ನಿನ್ನೆ ಒಬ್ಬರು ಹೇಳುತ್ತಿದ್ದರು "ಕನ್ನಡದ ಮಾತಿಗೆ ಹನ್ನೆರಡು ಅರ್ಥ.." ಅಂತ..

ಅದು ನಿಜ...

ಮುಗ್ಧತೆ ಮನಕ್ಕೆ ಹತ್ತಿರ...
ಯಾಕೆಂದರೆ ಅದನ್ನು ಎಲ್ಲರೂ ಇಷ್ಟಪಡುತ್ತಾರೆ...

ನಿಮ್ಮ ನಗುವಿಗೊಂದು ನನ್ನ ಸಲಾಮ್...

Ittigecement said...

ಸೀತಾರಾಮ್ ಸರ್....

ಚಿತ್ರಾರವರ ಬೆಲ್ಲಕೊಡುವ ಜೋಕ್ ಗೆ ನಾನು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೇನೆ...
ಅವರ ಬ್ಲಾಗಿನಲ್ಲಿ ಬಹಳ ಹಾಸ್ಯ ಲೇಖನಗಳಿವೆ ಓದಿ...

ಕನ್ನಡದ ಮಾತಿಗೆ ಹನ್ನೆರಡು ಅರ್ಥಗಳು..."

ಹಾಸ್ಯಕ್ಕಾಗಿ.. ನಗುವಿಗಾಗಿ ಬೇರೆ ಎಲ್ಲೂ ಹೋಗಬೇಕಿಲ್ಲ...
ಅದನ್ನು ನೋಡುವ ಕಣ್ಣಿರಬೇಕು..
ಅನುಭವಿಸುವ ಮನವಿರಬೇಕು...

ಅಲ್ಲವಾ...?

ಕುಷ್ಟನ ಹಾಸ್ಯ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ.... :D :D :D

ರೂpaश्री said...

innu samaanu annuva pada elle Odidroo nimma blog nenapaaguyaMte maaDibiTTri !

Nagaraj Bhat said...

Prakash Bava...
Saaman Samachara Hasya & Arthamaya vagithu. Saman part 2 Yavag?

Nagaraj Bhat said...

good

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಎಲ್ಲರೂ ನಿಮ್ಮ ಸಾಮಾನನ್ನ(ಕಥೆ) ನೋಡಿದ ಮೇಲೆ ತಡವಾಗಿ ಬಂದೆ ಕ್ಷಮಿಸಿ.ತುಂಬ ತುಂಬ ನಗುಬರಿಸುವಂತಿದೆ. ನಿಮ್ಮಿಂದಾಗಿ ನಮ್ಮ Dictionary ಬದಲಾಗುತ್ತಿದೆ. ಇದರ ಮುಂದಿನ ಭಾಗವನ್ನೂ ಬರೆದೆ ಸಾಮಾನಿನ ಹೊರೆ ಇಳಿಸಿ ಮಾರಾಯ್ರೆ!!!

Ittigecement said...

ಶ್ಯಾಮಲರವರೆ..(ಅಂತರಂಗದ ಮಾತುಗಳು..)

ನನ್ನ ಗೆಳೆಯನೊಬ್ಬ ಹೇಳಿದ್ದ..
ಈ ಲೇಖನಕ್ಕೆ ಹೆಣ್ಣುಮಕ್ಕಳು ಪ್ರತಿಕ್ರಿಯೆ ಕೊಡಲಿಕ್ಕೆ ಬರುವದೇ ಇಲ್ಲ ಎಂದು...
ನೀವೆಲ್ಲ ಅದನ್ನು ಸುಳ್ಳಾಗಿಸಿದ್ದೀರಿ...

ಅದಕ್ಕಾಗಿ ಇಲ್ಲಿ ಬಂದ ಎಲ್ಲ ಹೆಣ್ಣುಮಕ್ಕಳಿಗೆ ಅಭಿನಂದನೆಗಳು..

ಇಂಥಹ ಹಾಸ್ಯ ದಿನನಿತ್ಯ ಎಲ್ಲರ ಮನೆಯಲ್ಲಿ ಸಹಜವಾಗಿ ಆಗುತ್ತಿರುತ್ತದೆ..
ಆದರೆ ಇವುಗಳಿಗೊಂದು ಲೇಖನ ರೂಪ ಸಭ್ಯರೀತಿಯಲ್ಲಿ ಕೊಡುವದು ಬಹಳ ಕಷ್ಟ..
ನಿಮ್ಮೆಲ್ಲರ ಪ್ರತಿಕ್ರಿಯೆ ನನಗೆ ಉತ್ಸಾಹ ತುಂಬಿದೆ...

ನಿಮ್ಮ ಪ್ರೋತ್ಸಾಹ ನನ್ನಲ್ಲಿ ಉತ್ಸಾಹ ತಂದಿದೆ...
ಧನ್ಯವಾದಗಳು...

Ittigecement said...

ಪೂರ್ಣಿಮಾ...

ನನಗೆ ನೀನೇ ಪ್ರತಿಕ್ರಿಯೆ ಕೊಟ್ಟಿದ್ದು...
ಬಹುಷಃ ನಾಚಿಕೆ ಆಗಿ ಬೇರೆ ಹೆಸರಲ್ಲಿ ಕೊಟ್ಟಿರ ಬಹುದು ಅಂದು ಕೊಂಡೆ...

ಹೇಗೆ ಗೊತ್ತಾಯ್ತು...?

ಅದು ಗೊತ್ತಾಗಿ ಬಿಡುತ್ತದೆ...

ಧೈರ್ಯವಾಗಿ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ...
ಇಷ್ಟಪಟ್ಟು ನಕ್ಕಿದ್ದಕ್ಕೆ
ಅಭಿನಂದನೆಗಳು...
ಧನ್ಯವಾದಗಳು...

Ittigecement said...

ಮೂಕರೋಧನೆ....

ನಮ್ಮ ಹಳ್ಳಿಗಳಲ್ಲಿ ಕೆಲವರಿರುತ್ತಾರೆ...
ಪ್ರತಿ ಮಾತಿಗೂ ನಗಿಸುತ್ತಾರೆ...

ನಮ್ಮೂರಲ್ಲಿ ಒಬ್ಬರಿದ್ದಾರೆ...
ನಾನು ಈಸಾರಿ ಊರಿಗೆ ಹೋದಾಗ ಒಬ್ಬ ಹುಡುಗ ಅಪಘಾತದಲ್ಲಿ ತೀರಿಕೊಂಡಿದ್ದ...
ಒಳ್ಳೆಯ ಹುಡುಗ.. ಇಡೀ ಊರೇ ಶೋಕದಲ್ಲಿತ್ತು...
ಎಲ್ಲರಿಗೂ ಸಹಜವಾಗಿ ದುಃಖವಾಗಿತ್ತು...
ಸಣ್ಣವರಿದ್ದಾಗ ಆಡಿದ ನೆನಪುಗಳು....
ನನಗೂ ಸಹ ಕಣ್ಣಲ್ಲಿ ನೀರು ಬರುತ್ತಿತ್ತು...

ಈ ಪುಣ್ಯಾತ್ಮ ನನ್ನ ಕಿವಿಯಲ್ಲಿ ಬಂದು ಏನೋ ಹೇಳಿದ...

ಎಂತದ್ದು ಮಾರಾಯ್ರೆ...?!!

ಹೇಗೋ.. ಹೇಗೋ.. ತಡೆದು ಕೊಂಡು ಪಕ್ಕದ ತೋಟಕ್ಕೆ ಹೋಗಿ ನಕ್ಕು ಬಂದೆ...!

ಅಂಥಹ ಸಾವಿನ ಸಮಯದಲ್ಲೂ ಹಾಸ್ಯ ಪ್ರಜ್ಞೆ ನೋಡುವ ಅವರಿಗೆ ಪ್ರಣಾಮಗಳು...

ಅವರು ನನ್ನಣ್ಣ...!!!

ಅವರು ಏನು ಹೇಳಿದರು ಅಂತ ಕುತೂಹಲವಾ...?

ಇನ್ನೊಮ್ಮೆ ಬ್ಲಾಗಿನಲ್ಲೇ ಬರೆಯುವೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು... ಗುರು...

Ittigecement said...

ಪ್ರಿಯ ದಿನಕರ...

ಈ ಸಾಮಾನಿನ ಕಥೆ ಇನ್ನೂ ಎರಡು ಭಾಗದಷ್ಟಿದೆ...
ಎಲ್ಲವನ್ನೂ ಹೇಳುವದು ಕಷ್ಟ.. ಹಾಗಾಗಿ ಇನ್ನು ಒಂದು ಭಾಗದಲ್ಲಿ ಮುಗಿಸುವೆ...

ಆದರೆ ಈಗಲೇ ಬೇಡ ಅನಿಸುತ್ತದೆ.. ಏಕತಾನತೆ ಬಂದು ಬಿಡ ಬಹುದು ಅಂತ....!

ಕುಷ್ಟನ ಸಾಮಾನಿನ ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಬಾಲು said...

ತುಂಬಾ ಗಂಬೀರವಾದ ಸಮಸ್ಯೆನ ಹಾಸ್ಯ ಲೇಪನದೊಂದಿಗೆ ಬರೆದಿದ್ದೀರಿ. ಓದಿ ನಕ್ಕು, ಸುಸ್ತಾಯಿತು.
ಕುಷ್ಟ ಮಾತ್ರ ಅಲ್ಲ ಅ ಸಮಸ್ಯೆ ಇಂದ ಬಳಲುತ್ತಾ ಇರೋದು, ಬಹು ಪಾಲು ಜನರು ನಾಚಿಕೆ, ಪಾಚಿಕೆ ಅಂತ ಡಾಕ್ಟರ್ ಹತ್ತಿರ ಹೋಗೋಲ್ಲ, ಗುಪ್ತವಾಗಿ ಸಿಕ್ಕಾಪಟ್ಟೆ ನೋವು ಆನುಭವಿಸ್ತಾರೆ, ಇಂತಹವರಿಗೆ ತಿಳಿ ಹೇಳಬೇಕಾದ ಅಗತ್ಯ ಇದೆ.

ಕುಷ್ಟ ನ ತರದವರು ಹಳ್ಳಿಗಳಲ್ಲಿ ಮಾತ್ರ ಅಲ್ಲ, ಇಲ್ಲಿ ಪೇಟೆ ಗಳಲ್ಲೂ ಇದ್ದಾರೆ, ಟಿವಿ ಯಲ್ಲಿ ಬಾರೋ ಯಾವುದು ಜಾಹಿರಾತಿನ ಮುಲಾಮು ಉಪಯೋಗಿಸೋದು, ಸ್ನೇಹಿತ ಹೇಳಿದ ಮಾತ್ರೆ ನುಂಗೋದು ಎಲ್ಲಾ ಇಲ್ಲೂ ಇದೆ.

ಆಡು ಮಾತಿನಿಂದ ಆಗುವ ಅರ್ಥ, ಅಪಾರ್ಥ ಗಳನ್ನು ಚೆನ್ನಾಗಿ ಬರೆದಿದ್ದೀರಿ. :) :)

Shankar Prasad ಶಂಕರ ಪ್ರಸಾದ said...

ಪ್ರಕಾಸಪ್ಪ,
ಬರೆಯೋದಕ್ಕೆ ಇಂಥ "ಸಾಮಾನ್" ನ ಎಲ್ಲಿಂದ huDuktyaa ?
ಭಲೇ ಇದ್ಯಾ ? ಅಂದ ಹಾಗೆ ನೀವು ನಿಮ್ಮದ್ದಕ್ಕೆ ಪೂಜೆ ಮಾಡಿದ್ದು ನವರಾತ್ರಿಗೋ ಅಥ್ವಾ ದೀಪಾವಳಿಗೋ ?
ಶಂಕ್ರ

Anonymous said...

praakashanna chennagi iddu, full comedy :)

Ittigecement said...

ಅನು....

ಇವತ್ತು ಒಬ್ಬರು ನನಗೆ ಹೇಳುತ್ತಿದ್ದರು...

ಇಂಥಹ ಲೇಖನ ಬರೆಯುವದಷ್ಟೇ ಕಷ್ಟ
"ಇವುಗಳಿಗೆ ಪ್ರತಿಕ್ರಿಯೆ ಕೊಡುವದು..."

ನೀವು, ನಿಮ್ಮ ಯಜಮಾನರು ನಕ್ಕಿದ್ದು ಖುಷಿಯಾಯ್ತು...

ಬರುತ್ತಾ ಇರಿ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಲೋದ್ಯಾಶಿಯವರೆ...

ಹ್ಹಾ...ಹ್ಹಾ...
ಕಾಲೆಳೆಯುವದಕ್ಕೆ ಶುರು ಹಚ್ಚಿಕೊಂಡ್ರಾ...?

ಅದಕ್ಕೇ ಹೇಳುವದು .."ಕನ್ನಡ ಭಾಷೆಗೆ ಹನ್ನೆರಡು ಅರ್ಥ" ಅಂತ....

ಹ್ಹಾ...ಹ್ಹಾ...!
ಅವರು ಹೇಳಿದ್ದು...
ನೀವು ವಿವರಣೆ ಕೊಟ್ಟಿದ್ದು ಎರಡೂ ಚೆನ್ನಾಗಿದೆ...

ಮತ್ತೊಮ್ಮೆ ಧನ್ಯವಾದಗಳು...

Me, Myself & I said...

ಆತ್ಮೀಯ
ಇಲ್ಲಿ ಪ್ರತಿಕ್ರಿಯೆ ಕೊಡ್ಬೇಕಾದ್ರೆನೆ ಎಷ್ಟೊಂದು ಎಚ್ಚರ ವಹಿಸಬೇಕು. ಅಂತದ್ರಲ್ಲಿ ಅಷ್ಟೊಂದು ಸೊಗಸಾಗಿ ಬರಹ ಬರ್ದಿದ್ದೀರಲ್ಲ, ಅದು ಹೇಗೆ?

Ittigecement said...

ರಾಜೇಶ್...

ಏನು ಹೇಳೂದು ಮಾರಾಯ್ರೆ...
ಗೊತ್ತಿದ್ದೂ... ಗೊತ್ತಿದ್ದೂ...
ಅಮ್ಮಚ್ಚಿ ಗೋವಿಂದಣ್ಣ ಎಂತಕ್ಕೆ ..
ತಮ್ಮ ಸಾಮಾನು ಹೊರಗೆ ಇಟ್ಟು ಹೋದ್ರು...?

ಇದು ನಂಗೆ ಅರ್ಥ ಆಗ್ತಿಲ್ಲ... ಮಾರ್ರೆ..."

ನಕ್ಕಿದ್ದಕ್ಕೆ ಧನ್ಯವಾದಗಳು...

Ittigecement said...

ಪ್ರಿಯ ಲೋದ್ಯಾಶಿಯವರೆ...

ಅನು ಅವರು ಬೇಕಂತಲೇ.. ಹಾಗೆ ಬರೆದಿದ್ದಾರೆ...
ನನಗೆ ಮಾತಿಗೆ ಸಿಕ್ಕಿದ್ದರು ಅವರು...

ಅವರೂ ಸಹ ಬಹಳ ಜೋಕ್ ಮಾಡುತ್ತಾರೆ..
ಅವರ ಬಳಿ ಮಾತಾಡುತ್ತಿದ್ದರೆ ಹೊತ್ತು ಹೋಗುವದೇ ತಿಳಿಯುವದಿಲ್ಲ...

ಅವರಿಗೂ ಬ್ಲಾಗ್ ಬರೆಯಲು ಹೇಳುತ್ತಿರುವೆ...

ಇದನ್ನು ಬರೆಯಲು ಕಷ್ಟ ಆಗಿದ್ದು ನಿಜ...

ನಿಮ್ಮ ಪ್ರೀತಿಗೆ ಶರಣು... ಶರಣು ..

Ittigecement said...

ಉದಯ್... (ಬಿಸಿಲ ಹನಿ)

ಇದನ್ನು ಬರೆಯುವಾಗಲೇ ಸಿಕ್ಕಾಪಟ್ಟೆ ನಕ್ಕಿದ್ದೇನೆ...
ನನ್ನ ಗೆಳೆಯ ಅಶ್ಲೀಲ ಶಬ್ಧ ಹಾಕದೆ ಇದನ್ನು ಬರೆಯಲು ಸಾಧ್ಯವೇ ಇಲ್ಲ ಅಂತ ಬೆಟ್ ಕಟ್ಟಿದ್ದರು..

ಇದರಲ್ಲಿ ಒಬ್ಬ ವಿಮಾ ಏಜಂಟ್ ಮಾತಾಡುವ ಮಾತು ಇತ್ತು...
ಅದನ್ನು ತುಂಬಾ ಕಟ್ ಮಾಡಿ ಹಾಕಿದ್ದೆ..
ಸರಿ ಕಾಣಲಿಲ್ಲ..
ಅದನ್ನು ಸಂಪೂರ್ಣವಾಗಿ ತೆಗೆದು ಹಾಕಿದೆ..

ಮೆಚ್ಚಿ.., ನಕ್ಕಿದ್ದಕ್ಕೆ ಖುಷಿ ಆಯ್ತು..

ಧನ್ಯವಾದಗಳು ಉದಯ್...

Ittigecement said...

ಮುಸ್ಸಂಜೆ ಇಂಪು....

ಹಳ್ಳಿಗಳಲ್ಲಿರುವ ಹಾಸ್ಯ ಪ್ರವರ್ತಿಯವರಿಗೆ ಯಾವುದೇ ಅಡೇ ತಡೇ ಇರುವದಿಲ್ಲ...
ಬಿಂದಾಸ್ ಆಗಿ ಜೋಕ್ ಮಾಡುತ್ತಾರೆ..

ಅವರ ಮಾತುಗಳ ಬಗೆಗೆ ಯಾರೂ ಸಹ ಅಪಾರ್ಥ ಮಾಡಿಕೊಳ್ಳುವದಿಲ್ಲ..

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಶಿವಪ್ರಕಾಶ್....

ನಿಮ್ಮ ಬ್ಲಾಗಿನ ಲೇಖನಗಳು ಮಸ್ತ್ ಇರುತ್ತವೆ...
ಹೊಸತನ ಇರುತ್ತದೆ...

ಪ್ರಭು, ನಿಮ್ಮದು, ಉಮಿ ಬಾಳಿಕಾಯಿಯವರು, ಲೋದ್ಯಾಶಿ, ಯಳವತ್ತಿ...
ಇನ್ನೂ ಬಹಳಷ್ಟು ಬ್ಲಾಗಿಗರ ಬರೆಯುವ ಲೇಖನಗಳು ಸೊಗಸಾಗಿರುತ್ತದೆ..
ಪ್ರತಿಯೊಂದೂ ಹೊಸತನ ಇರುತ್ತದೆ...
ವೈವಿಧ್ಯತೆ ಇರುತ್ತದೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು ಶಿವು....

Unknown said...

chennagide ha ha ha... joteyalli sandeshavide.

sweet hammu said...

thilidukollabekada thumba sukshma vishayavannu hasyada mishritha shyalinalli sandesha kottiddeera, baraha thumba chennagide, sadya adre nanu edannu short filmge balasikollabahude?

Kishan said...

That's a heavy dose of humor! Fabulous freestyle writing...

I have heard there are many laughter therapy camps running for the general health, I suggest everybody to read this blog everyday instead to keep the doctor away !!!...laughter, the best medicine.

Ittigecement said...

ರೂಪಾಶ್ರೀಯವರೆ...

ನಿನ್ನೆ ಒಬ್ಬ ಹೆಣ್ಣುಮಗಳು ಈ ಲೇಖನ ತನಗೆ ಮುಜುಗರ ಆಯಿತೆಂದು ದೂರಿದ್ದರು..
ಅದಕ್ಕಾಗಿ ನಾನು ಸ್ಸಾರಿ ಕೇಳಿದೆ...

ಕೆಲವರಿಗೆ ಇಷ್ಟ..
ಕೆಲವರಿಗೆ ಕಷ್ಟ..

ನಿಜ ನಮ್ಮನೆಯಲ್ಲಿ ಈ ಶಬ್ಧವನ್ನು ಅವತ್ತೇ ನಿಷೇಧಿಸಲಾಯಿತು..
"ನಾನು ಕುಷ್ಟನ ಬಳಿ ಮಾತನಾಡ ಬಾರದೆಂಬ ಆರ್ಡರ್ ಕೂಡ ಪಾಸಾಗಿದೆ..."

ನಿಮ್ಮ ಪ್ರೋತ್ಸಾಹ ಬಹಳ ಖುಷಿ ತಂದಿತು...

ತುಂಬಾ... ತುಂಬಾ ಥ್ಯಾಂಕ್ಸ್...
ಈ ನಡುವೆ ನೀವು ಬರುವದು ತುಂಬಾ ಅಪರೂಪ ಆಗಿದೆ...

ಪ್ರಕಾಶಣ್ಣ..

Ittigecement said...

ನಮಸ್ತೆ,,, ನಾಗರಾಜ್...

ನಿಮ್ಮ ಉತ್ಸಾಹ, ಖುಷಿ, ನನಗೆ ಟಾನಿಕ್...

ಪ್ರತಿಕ್ರಿಯೆಗಳು ಇನ್ನಷ್ಟು ಬರೆಯಲು ಉತ್ಸಾಹ ನನಗಂತೂ ಕೊಡುತ್ತದೆ..

ಬರುತ್ತಾ ಇರಿ...

ಧನ್ಯವಾದಗಳು...

Ittigecement said...

ಹುಡುಕಾಟದ ಮಲ್ಲಿಕಾರ್ಜುನ್...

ನಿಮ್ಮ ಹಲವಾರು ಅಡಚಣೆಗಳ ಮಧ್ಯೆ ಬಂದು ನೀವು ಪ್ರತಿಕ್ರಿಯೆ ಕೊಟ್ಟಿದ್ದು ತುಂಬಾ ಖುಷಿ ತಂದಿದೆ..
ಪೂರಾ ದಿನ ನೀವು ಬ್ಯೂಸಿಯಾಗಿರ್ತೀರಿ... ಸಂಗಡ
ಮೈತುಂಬಾ ಹವ್ಯಾಸಗಳು..!
ಎಲ್ಲವನ್ನೂ ಹೇಗೆ ನಿಭಾಯಿಸುತ್ತೀರಿ?

ಇದರ ಮುಂದಿನ ಭಾಗ ಬರಿಬೇಕೊ, ಬೇಡವೊ ಎನ್ನುವ ಗೊಂದಲದಲ್ಲಿದ್ದೇನೆ...

ಸಾಮಾನು ಬಗ್ಗೆ ಖುಷಿ ಪಟ್ಟಿದ್ದು ನನಗೂ ಖುಷಿಯಾಯಿತು.
ಮುಂದೆ ನಮ್ಮೂರಿಗೆ ಹೋದಾಗ ನಿಮಗೆ "ಕುಷ್ಟನ" ಪರಿಚಯ ಮಾಡಿಕೊಡುವೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಬಾಲು ಸರ್...

ನಿಮ್ಮ ಅರ್ಥಗರ್ಭಿತ ಪ್ರತಿಕ್ರಿಯೆಗೆ ನನ್ನದೊಂದು ಸಲಾಮ್....
ನಿವೆನ್ನುವದು ೧೦೦% ಸತ್ಯ...

ನಾಚಿಕೆಯೇ ಒಂದು ದೊಡ್ಡ ರೋಗ...
ಇಂಥಹ ವಿಷಯಗಳಲ್ಲಿ ನಾಚಿಕೆ ಇಟ್ಟುಕೊಳ್ಳ ಬಾರದು...

ಅಂಥಹ ಗುಪ್ತ ಜಾಗಗಳಲ್ಲಿ ಪೆಟ್ಟಾಗಿ ಸಾವುಗಳೂ ಸಂಭವಿಸಿ ಬಿಡುತ್ತವೆ...
ನಮ್ಮೂರಲ್ಲಿ ಇಂಥಹ ಘಟನೆ ಆಗಿದೆ...

ನಿಜ ನಮ್ಮ ಸಂಸ್ಕಾರ,
ಅತೀ... ಮಡಿವಂತಿಕೆ.. ಈ ನಾಚಿಕೆಯನ್ನು ಹುಟ್ಟು ಹಾಕಿಬಿಡುತ್ತೇವೆ...

ನಗುವದರ ಸಂಗಡ...
ನಮ್ಮನ್ನೂ ಚಿಂತನೆಗೆ ಹಚ್ಚಿದ್ದಕ್ಕೆ ತುಂಬಾ.. ತುಂಬಾ ಧನ್ಯವಾದಗಳು...

Ittigecement said...

ಶಂಕ್ರಪ್ಪಣ್ಣ...

ನಮೋನ್ನಮಃ...!!

ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

ನೀವು ಮತ್ತೆ ಬ್ಲಾಗ್ ಲೋಕಕ್ಕೆ ಮರಳಿದ್ದಕ್ಕೆ ನಮಗೆಲ್ಲ ಖುಷಿಯಾಗಿದೆ...

ಬರಿತಾ ಇರಿ...

Ittigecement said...
This comment has been removed by the author.
Ittigecement said...

ವಿನುತಾ...

ಆಡು ಮಾತು...
ಮುಗ್ಧತೆಗಳ ಸಮ್ಮಿಲನ...
ನಗೆಯ ಬುಗ್ಗೆಗೆ ಕಾರಣ...

ನಕ್ಕಷ್ಟೂ ನಗುವಿದೆ...
ಅತ್ತಷ್ಟೂ ಅಳುವಿದೆ...

ಅಳು, ನಗುವಿಗೆರಡೂ ನೀರ ಹನಿಗಳು ಬರುತ್ತದೆ ..
ಹೆಸರು ಮಾತ್ರ " ಕಣ್ಣೀರು.".....

ಅಳುತ್ತ ನಗ ಬಹುದು...
ನಗುತ್ತ ಅಳ ಬಹುದು...

ಎಲ್ಲವೂ ಭಾವಗಳ ಹೊಯ್ದಾಟ...
ಮನಸ್ಸಿನ, ಹೃದಯದ ತಾಕಲಾಟ...

ನಿಮ್ಮ ಪ್ರತಿಕ್ರಿಯೆ ಖುಷಿಯಾಯಿತು...
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸುಮ said...

ಹ್ಹ..ಹ್ಹ..ಹ್ಹ.... ಪ್ರಕಾಶಣ್ಣ ನಕ್ಕು ನಕ್ಕು ಸುಸ್ತಾತು.ಜೊತೆಗೆ ಇಂತಹ ವಿಚಾರದಲ್ಲಿ ಸಂಕೋಚದಿಂದ ಆರೋಗ್ಯ ಹದಗೆಡಿಸಿಕೊಳ್ಳುವವರ ಬಗ್ಗೆ ಸಂತಾಪವು ಆಯಿತು.

Dileep Hegde said...

ನಮ್ಮ ಸಾಮಾನಿಗೆ ನಾವೇ ಜವಾಬ್ಧಾರರು... ಹಹಹ... ಸಕ್ಕತ್ ಆಗಿದೆ ಪ್ರಕಾಶಾಣ್ಣ... :)

Ittigecement said...

ಸ್ವೀಟ್ ಹಮ್ಮು (ಹೇಮಂತ್ ಅವರೆ..)

ಮಳೆ ಇರಲಿ, ಮಂಜೂ ಇರಲಿ" ಸಿನೇಮಾದ ಛಾಯಾಗ್ರಹಣ ತುಂಬಾ ಚೆನ್ನಾಗಿತ್ತು..
ಸಿನೇಮಾ ಕೂಡ..
ಚಂದದ ಛಾಯಾಗ್ರಹಣಕ್ಕಾಗಿ ನಿಮಗೆ ಅಭಿನಂದನೆಗಳು..

ಇಷ್ಟವಿಲ್ಲದಿದ್ದರೂ ಸಹ "ಅಶ್ಲೀಲ" ನಮ್ಮ ಬದುಕಿನಲ್ಲಿ ಅನಿವಾರ್ಯ..

ಈ ಥರಹದ ಸಮಸ್ಯೆಗಳನ್ನ ಹಾಸ್ಯವಾಗಿ ಹೇಳ ಬಹುದು...
ಇದು ದೃಶ್ಯಮಾಧ್ಯಮದಲ್ಲಿ ಬಂದರೆ ಇನ್ನೂ ಪರಿಣಾಮಕಾರಿಯಾಗಿ ಮೂಡ ಬಲ್ಲದು...

ಹೇಗಿದ್ದರೂ ಮಾತನಾಡುತ್ತೇನೆ ಎಂದು ಹೇಳಿದ್ದಿರಲ್ಲ...ಮಾತನಾಡೋಣ...

ನಿಮ್ಮ ಪ್ರತಿಭೆಗೆ, ಪ್ರಯತ್ನಕ್ಕೆ ಇನ್ನಷ್ಟು ಯಶಸ್ಸು ಸಿಗಲೆಂದು ಹಾರೈಸುತ್ತೇನೆ...

ನಿಮಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

Anonymous said...

ಪ್ರಕಾಶಣ್ಣ,
ಚೆನ್ನಾಗಿದೆ ಈ ಹಾಸ್ಯ ಬರಹ...
ನಮ್ಮ ಹಳ್ಳಿಗರ ಮುಗ್ದತೆಯನ್ನು ತುಂಬಾ ಚೆನ್ನಾಗಿ ಈ ಬರಹದಲ್ಲಿ ಮುಡಿಸಿದ್ದಿರಿ.

ನಿಮ್ಮ ಕುಷ್ಟನ ಮುಗ್ದತೆ ನಮ್ಮನೆಯ ರಾಮನ (ಕೆಲಸದವನು. ಅವನು ಕೆಲೆಸದವನು ಅನ್ನೋಕಿಂತ ನಮ್ಮನೆಯ ಮಗ ಅನ್ನಬಹುದು.. ನನ್ನ ಪ್ರೀತಿಯ ರಾಮಣ್ಣ..) ನೆನಪನ್ನು ತರಿಸಿತು. ಹಬ್ಬದ ಸಂಭ್ರಮ ಮುಗಿಸಿ, ಬೇಸರಿಸಿಕೊಂಡು ಮತ್ತೆ ವಾಪಸ್ ಬೆಂಗಳೂರಿಗೆ ಬಂದವಳಿಗೆ ಈ ನಿಮ್ಮ ಬರಹ, ಮತ್ತೆ ಸಿರ್ಸಿಗೆ ಕರೆದೊಯ್ದು ಮೊಗದಲ್ಲಿ ನಗು ತರಿಸಿತು. ಧನ್ಯವಾದ....

Anonymous said...

ಅಣ್ಣ..ನಿನ್ನ ಒಂದು ಲೇಖನಕ್ಕಿ೦ತ ಒ೦ದು ಚೆನ್ನಾಗಿದ್ದು.. .

Anonymous said...

ಅಣ್ಣ..ನಿನ್ನ ಒಂದು ಲೇಖನಕ್ಕಿ೦ತ ಒ೦ದು ಚೆನ್ನಾಗಿದ್ದು.. .

Unknown said...

ಹಹಹ... ನಿಮ್ಮ ಸಾಮಾನು ಬರಹ ಚೆನ್ನಾಗಿತ್ತು... ನೀವು ಆಯುಧ ಪೂಜೆ ಮಾಡಿದ್ರಾ? ಸಾಮಾನಿಗೆ??
ಹೀಗೆ ಬರೆಯುತ್ತಿರಿ... ದಿನವಿಡೀ ಕೆಲಸ ಮಾಡಿ ಮನೆಗೆ ಮರಳಿದ ಜೀವಗಳಿಗೆ ನಿಮ್ಮ ಬರಹಗಳು ಮುದ ನೀಡುತ್ತವೆ...
ಮುಂದೆ ಬರೆಯುವೆ... ಸ್ವಲ್ಪ ಸಾಮಾನು ತರಲು ಅಂಗಡಿಗೆ ಹೋಗಬೇಕಾಗಿದೆ.. (ಸಾಮಾನು ಅಂಗಡಿಗೆ :))

Unknown said...

ಪ್ರಕಾಶ್ ಈಗ ಓದಿದೆ ನಿಮ್ಮ(!) ........ನಿನ ಕಥೆ. ನಾನೊಮ್ಮೆ ಪ್ರಥಮ ಪಿಯುಸಿ ಕ್ಲಾಸಿನಲ್ಲಿ ಪಾಠ ಮಾಡುವಾಗ ಕೆಲವು ಹುಡುಗರಿಗೆ ಎಷ್ಟು ಃಏಳಿದರೂ ಅರ್ಥವಾಗುತ್ತಿಲ್ಲ, ಜೊತೆಗೆ ಗುಸುಗುಸು ಮಾಡುತ್ತಿದ್ದಾರೆಂದು ಕೋಪಿಸಿಕೊಂಡಿ (ಸು)ಸಂಸ್ಕೃತ ಬಳಸಿ ಉಪದೇಶ ನೀಡುತ್ತಿದ್ದೆ. ಆಗ ೊಮ್ಮೆ ನಿಮ್ಮ ತಲೆಯಲ್ಲೇನು ಸಾಮಾನು ಇಲ್ಲವೇನು? ಎಂದುಬಿಟ್ಟೆ ಇಡೀ ಕ್ಲಾಸ್ ನಕ್ಕಿತ್ತು. ಆಗ ನನಗೆ ಅರಿವಾಗಿರಲಿಲ್ಲ. ನಿಮ್ಮ ಲೇಖನ ಓದಿ ಅವರು ನಿಕ್ಕಿದ್ದೇಕೆಂದು ಈಗ ನನಗೆ ಅರ್ಥವಾಯಿತು. ನಮ್ಮ ಕಡೆ ಎಲ್ಲಾ ಅತ್ಯಂತ ಸಹಜವಾಗಿ
ಸಂತೆ ಸಾಮಾನು,
ಸಂತೆ ಸಾಮಾನಿನ ಚೀಲ,
ಸಾಮಾನಿನ ಬ್ಯಾಗು, ಎಂದು ಬಳಸುತ್ತಾರೆ. ಮುಂಚೆಯೆಲ್ಲಾ ಮದುವೆ ಗೊತ್ಥಾದರೆ ಮದುವೆಗೆ ಸಾಮಾನು ಮಾಡಬೇಕು ಎಂದು ಅವಸರ ಪಡಿಸುತ್ತಿದ್ದುದನ್ನೂ ಕೇಳಿದ್ದೇನೆ. ಮದುವೆಗೆ ಸಾಮಾನು ಮಾಡುವುದೆಂದರೆ........!!!
(ಸಂತೆಗಳಿಗೆ ಹೋಗಿ ಸಾಮಾನು ಖರೀದಿಸುವುದು) ಇದು ಸಾಮಾನಿನ ಪುರಾಣ ಯಾರು ಎಷ್ಟು ಬೇಕಾದರೂ ಸೇರಿಸಿ ಸಾಮಾನಿನ ಪುರಾಣವನ್ನು ಬೆಳಸಬಹುದು

ಹೆಸರು:ಪ್ರದೀಪ said...

ಸೂಪರ್! ಕಾಲೇಜಿನ ನಂತರ ಕಳೆದು ಹೋಗಿದ್ದ ಸಾಮಾನು ಮತ್ತೆ ಸಿಕ್ಕಂತಾಯಿತು!!

ಹೆಸರು:ಪ್ರದೀಪ said...
This comment has been removed by the author.
viju said...

ayyo prakashanna innu negyadale sadya ilyo....mast baradde...nangu ega kushtan nodavu kansta iddu.....

Badarinath Palavalli said...

ಸಾರ್, ಹಾಗೊಂದು ವೇಳೆ ಕಿರು ಚಿತ್ರ ಮಾಡಿದರೆ ನಾನೇ ಛಾಯಾಗ್ರಾಹಕ.

ಸಾಮಾನು ಪುರಾಣ ಮಜವಾಗಿತ್ತು.

ಅಂದಹಾಗೇ ಇಂದಿನ ಪ್ರಸಕ್ತ ಪರಿಸ್ಥಿತಿಗೆ ಕನ್ನಡಿಯಂತಹ ಸಾಲುಗಳು:
"ಪದೆ.. ಪದೆ ಮರ್ಯಾದಿ ತೆಗಿಸಿಕೊಳ್ಳೋಕೆ ನಾನೇನು ರಾಜಕೀಯದವ್ನಾ..?
ಲಂಚ ಕೇಳೋ.. ಆಫಿಸರ್ನಾ...?
ಕೈಲಿ ಆಗೂದಿಲ್ರ...!"

Unknown said...

ಇದು 'ಸಾಮಾನ್ಯ ಸಮಾಚಾರ'ವಲ್ಲ... ಪ್ರಕಾಶ್ ಜಿ ಬರೆದರೆ ಅದು ಅಸಾಮಾನ್ಯ ಸಮಾಚಾರವೇ...
ಪಾಪ, ಆತನ ಸಾಮಾನಿನ ಸಮಾಚಾರವನ್ನು ನೀವು ಹೀಗೆಲ್ಲ ಎಲ್ಲರಿಗೂ ಬಿತ್ತರಿಸಿಬಿಡುವುದಾ...?
"ಬೇಕೇನು ಸಾಮಾನು..." ಹಾಡು ನೆನಪಾಗದೆ ಇರಲಿಲ್ಲ...
ಈಗಷ್ಟೇ ನಗೆ ನಿಲ್ಲಲೋ ಬೇಡವೋ ಎನ್ನುತ್ತಿದೆ...