Saturday, March 14, 2009
ನಾನೂ...ಒಂಥರಾ.. " ಅಡಪೊಟ್ರು " ಸಾಹೇಬ್ರೆ...!!...!!
ನನ್ನ ದೇಹದ ಭಾಗಗಳೆಲ್ಲವೂ ಮಾತಾಡುತ್ತಿದ್ದವು...
ನಿಧಾನವಾಗಿ ಕಾಲೆಳೆಯುತ್ತ ಸತ್ಯನೆಡೆಗೆ ಬಂದೆ..
ಅಂಗಾತ ಮಲಗಿ ಶವಾಸನ ಹಾಕಿ ಮಲಗಿ ಬಿಟ್ಟಿದ್ದ...!
'ಸತ್ಯ ಏನಾಯ್ತೊ..? ಏಳೊ.."
ಎಬ್ಬಿಸುವ ಪ್ರಯತ್ನ ಮಾಡಿದೆ..
ಮೆಲ್ಲಗೆ ಕಣ್ಣು ತೆರೆದ..
ಪ್ರಲಾಪ ಶುರು ಮಾಡಿದ...
" ಇಡೀ " ಬ್ರಹ್ಮಾಂಡ " ನನ್ನ ಮೇಲೆ ಬಿದ್ದಂತಾಯಿತು ಕಣೊ...!"...
ಎಲ್ಲಿಯ " ನಲವತ್ತೈದು " ಕೇಜಿ..?
ಎಲ್ಲಿಯ " ಕ್ವಿಂಟಾಲು.".?
ಬಂಡೆಗಲ್ಲಿನ ಹಾಗೆ ನನ್ನ ಮೇಲೆ ಬಿದ್ದು " ಇಸ್ತ್ರೀ" ಹೊಡೆದು ಬಿಟ್ಯಲ್ಲೋ ..!"
" ನಂಗೂ ನೋವಾಗಿದೆ ಮಾರಾಯಾ.. ಏಳು.. ವೈದ್ಯರನ್ನು ಭೇಟಿ ಮಾಡಿ ಬಾ.."
ಎಬ್ಬಿಸಿದೆ..
ಸಾವಕಾಶವಾಗಿ ಎದ್ದು ವೈದ್ಯರನ್ನು ಭೇಟಿ ಮಾಡಲು ಹೋದ...
ನಾನು ಅಲ್ಲೇ ಕುಳಿತೆ...
ಆಟೋದವ ಅದೂ ಇದು ಮಾತಾಡಲು ಶುರು ಮಾಡಿದ...
ಆಟೊದವನಿಗೆ ಅಪರಾಧಿ ಮನೋಭಾವನೆ ಕಾಡಿರಬೇಕು..
" ಬೇಜಾರಗ್ಬೇಡ್ರಿ.. ಸಾಹೇಬರ...
ದಿನವಿಡಿ ದುಡಿತೀನ್ರೀ.. ರಾತ್ರಿ ಆಟೋ ಓಡುಸ್ತೀನ್ರೀ..
ಬದುಕು ಕಷ್ಟ ಸಾಹೆಬರೆ.. ಹಣ ಸಾಲದು.."
"ಯಾಕೆ ಸಾಲೋದಿಲ್ರೀ..?"
" ಮನೆ ತುಂಬಾ ಮಕ್ಕಳ್ರೀ..
ಅವರಿಗೆ ಬಟ್ಟೆ ಬರೆ.. ಊಟ ತಿಂಡಿ.. ಬದುಕು.. ಕಷ್ಟಾರೀ..
ಇಪ್ಪತ್ತು ವರ್ಷದಿಂದ ಆಟೋ ನಡಸ್ತಾ ಇದ್ದೀನ್ರಿ..
ಯಾವ ರಾಜಕಿಯದವ್ರು ಬಂದ್ರೂ...
ಬದುಕು ಹಾಗೇ ಇದೇರಿ..""
" ಯಾಕೇ ಅಷ್ಟೆಲ್ಲ ಮಕ್ಕಳು ಮಾಡ್ಕೊಂಡ್ರಿ..?
ಕುಟುಂಬ ಯೋಜನಾ ಮಾಡ್ಕೋಬೇಕಿತ್ತು...."
" ಸಾಹೇಬ್ರೆ " ಅದು " ಬೇರೆ...
ಇದೇ... ಬೇರೆ...!
ಮನೆಯಲ್ಲಿ " ಶಾಂತಿ " ಇರ ಬೇಕೆಂದ್ರ....
ಮನೆ ತುಂಬಾ ಮಕ್ಕಳಿರಬೇಕ್ರಿ..!!"
" ಮಕ್ಕಳಿದ್ರೆ ಗಲಾಟೆ ಅಲ್ವೇನಪ್ಪಾ..?"
" ಅದೇ ಗುಟ್ಟು ಸಾಹೇಬ್ರೆ,..
ಮಕ್ಕಳ ಗಲಾಟೆ ಇರ್ತದರಿ...
ಮನೆಯಲ್ಲಿ ಹೆಂಗಸ್ರು ಸುಮ್ನೆ ಶಾಂತಿಯಿಂದ ಇರಬೇಕು ಅಂದ್ರ..
ಮನೆ ತುಂಬಾ.. ಮಕ್ಕಳಿರಬೇಕ್ರಿ..
ಮಕ್ಕಳ ಕೆಲಸಾದಾಗ...
ನಮ್ಮ"ಹೆಂಗಸ್ರು" ನಮ್ಮ ಹತ್ರ....
ಜಗಳ ಮಾಡೋದಿಲ್ರೀ...
ನಾವು ಮನೆಗೆ ಹೋದಾಗ ಶಾಂತಿಯಿಂದ ಇರ್ತಾರ್ರೀ..
ಏನ್ ಹೇಳ್ತಿರಿ ಸಾಹೇಬ್ರ..?"
" ನಿಮ್ಮನೆಯಲ್ಲಿ " ಶಾಂತಿ " ಇದೆಯೇನಪ್ಪಾ..? "
" ಇದೇ ಸಾಹೇಬ್ರ..
ಮಕ್ಕಳ ಗಲಾಟೆ ಏನೂ ಅನಿಸೋದಿಲ್ರಿ..
ದೊಡ್ಡ ಮೀಸೆ.., ಕೆಂಪು ಕಣ್ಣು ಬಿಟ್ರೆ.. ಮಕ್ಕಳು ಸುಮ್ನೆ ಇರ್ತಾರ್ರೀ...
ನನ್ನ ಹೆಂಡ್ತಿ "ಶಾಂತಿ" ನೂ ಶಾಂತವಾಗಿರ್ತಾರ್ರಿ...!"
" ಮತ್ತೆ ಖರ್ಚು...?"
" ಖರ್ಚಿಗೆ ಕಷ್ಟ ಆಗ್ತದ ..
ಒಂದು ಮಗ ಇದ್ದಾಗ ನೂರು ರುಪಾಯಿ ಅಂಗಿ ತಗೊತಿದ್ದೆ..
ನಾಲ್ಕು ಮಕ್ಕಳು ಇದಾರೆ..
ಇಪ್ಪತ್ತೈದು ರೂಪಾಯಿದು "ನಾಲ್ಕು " ಅಂಗಿ ತಗೋತಾ ಇದ್ದಿನ್ರಿ...!
ಸಾಹೇಬ್ರೆ ಇನ್ನೊಂದು ವಿಷಯ.. ನಿಮಗೆ ಎಷ್ಟು ಮಕ್ಕಳಿದಾರ್ರೀ.."
" ಒಬ್ನೇ ಕಣಪ್ಪಾ...."
" ಛೇ.. ಛೇ.. ಪ್ಯಾಟಿ.. ಮ್ಯಾಲಿನೋವ್ರು...
ಇದೆ ತಪ್ಪು ಮಾಡ್ತಾರ್ರಿ...
ಜಾಸ್ತಿ ಮಕ್ಕಳಿದ್ರೆ .. ಒಬ್ಬನಾದರೂ..
ಕೊನೆ ಕಾಲದಾಗ .. ನೋಡ್ಕೊತಾನ್ರಿ....
ಒಂದೆ ಮಗ ಇದ್ದು..
ಹೆಂಡ್ತಿ ಬಂದಮೆಲೆ ತಲೆ ಕೆಟ್ಟು ಹೋದ್ರೆ.. ?
ಏನು ಮಾಡ್ತಿರ್ರಿ.. ಸಾಹೇಬ್ರ...!..?? "....."
ಇನ್ನೂ ಏನೇನೋ ಹೇಳ್ತಾ ಇದ್ದ..
ಹಿಂದಿನಿಂದ ಬಂದ ಸತ್ಯನಿಗೆ ತಡೆಯಲಾಗಲಿಲ್ಲ...
" ನೋವು ಕೊಟ್ಟಿದ್ದಲ್ಲದೇ...
ಪುಕ್ಕಟೆ ಉಪದೇಶಾ ಮಾಡ್ತಿಯಲ್ಲೋ..
ಸಾಕಪ್ಪ ಉಪದೇಶ.. ಮಾರಾಯಾ..!
ಎಲ್ಲಾ ಕೆಲಸ " ಆಯಿತು..
ಈಗ ಹೋಗೋದು ಹೇಗೆ..?"
" ನಾನಿದ್ದೀನಲ್ಲ ಸಾಹೇಬ್ರೆ..!"...
" ಬೆಳಗಿನ ತನಕ ಸೊಳ್ಳೆ ಹತ್ರ ಕಡಿಸಿಕೊಂಡು..
" ಸತ್ತು." .. ಹೋದ್ರೂ ಪರವಾಗಿಲ್ಲಾ.. ನಿನ್ನ ಆಟೋ ಬೇಡಪ್ಪಾ.."
ಆದರೆ ಏನು ಮಾಡುವದು..?
ಕೊನೆಗೆ ನಾನೂ, ಸತ್ಯ ಇಬ್ಬರೂ ಸೇರಿ..
ಒಂದು ಉಪಾಯ ಮಾಡಿದೆವು..
"ನೋಡಪ್ಪಾ.. ನೀನು ಗಾಡಿಯನ್ನ..
ಎರಡು ನಿಮಿಷ " ಚಾಲು " ಮಾಡಬೇಕು.......
ನಂತ್ರ " ಆಫ್ " ಮಾಡ್ಬೇಕು..
ಹೊಟೆಲ್ ಹೋಗು ತನಕ.. ಹೀಗೆ ಹೋಗ ಬೇಕು..
ನಿಧಾನ ಬಿಡಬೇಕು..
ಹಾಗಾದ್ರೆ ಬರ್ತೀವಿ.."
ಇದಕ್ಕೆ ಅವನೂ ಒಪ್ಪಿಕೊಂಡ...
ನಾವು ಆಟೋದ ಮೇಲೆ ಕುಳಿತು ....
" ಆಫ್ ಮಾಡು.."
" ಆನ್ ಮಾಡು".... ಅನ್ನುತ್ತ ಹೊಟೆಲ್ ಗೆ ಬಂದೆವು...
ಅಲ್ಲೇ ಮೆಡಿಕಲ್ ಅಂಗಡಿಯಲ್ಲಿ ಮಾತ್ರೆ ತೆಗೆದು ಕೊಂಡು..
ರೂಮಿನಲ್ಲಿ ಮಲಗಿದ್ದಷ್ಟೇ ಗೊತ್ತು...
ಬೆಳಿಗ್ಗೆ ಎದ್ದಾಗ ಮೈಕೈ ನೋವು ಇನ್ನೂ ಇತ್ತು..
ಅಲ್ಲೇ ಗೊಬ್ಬರದಂತಹ "ನಾಷ್ಟಾ" ಮಾಡಿ ರೂಮನ್ನು ಖಾಲಿ ಮಾಡಲು ರೆಸೆಪ್ಷನ್ ಬಳಿ ಬಂದರೆ...!!
ಸಣ್ಣ ಬ್ಯಾಗು ಎಲ್ಲೂ... ಕಾಣ್ತಾನೇ ಇಲ್ಲ...!
ಅದರಲ್ಲಿ "ಹದಿನೈದು ಸಾವಿರ" ರೂಪಾಯಿ ಕ್ಯಾಶ್ ಇತ್ತು...!
ಅಯ್ಯೋ ದೇವರೆ..ಏನಪ್ಪಾ ಇದು...?? !!
ಮುಂದೇನು ಮಾಡಬಹುದು ಅನ್ನುತ್ತಾ...ಇರುವಾಗ...
ತನ್ನ ಕಪ್ಪನೆಯ.. ಹಲ್ಲು .. ತೋರಿಸುತ್ತ..
ನಗುತ್ತ ಆಟೋದವ ನಿಂತಿದ್ದ...!
"ಸಾಹೇಬ್ರೆ .. ನಿನ್ನೆ ನಿಮ್ಮ ಬ್ಯಾಗು ಆಟೋದಲ್ಲೇ ಇದ್ದಿತ್ರಿ..!
ಹಣ ಇದ್ರೆ ಎಣಿಸ್ಕೊ ಬಿಡ್ರಿ.."
ಅನ್ನುತ್ತಾ ಬ್ಯಾಗು ಕೊಟ್ಟ...!
ಲಗುಬಗೆಯಿಂದ ಎಣಿಸಿದೆ...
ಎಲ್ಲವೂ ಸರಿಯಾಗಿತ್ತು... ಹೋದ ಜೀವ ಬಂದಂತಾಗಿತ್ತು...!
ಒಂದು ರೀತಿಯ ಕ್ರತಜ್ಞತಾ ಭಾವ ಬಂದಿತು.....
ಸತ್ಯ ಅವನಿಗೆ ಐನೂರು ಕೊಡಲು ಹೋದ....
ಅವನಿಗೆ ಪ್ರಾಮಾಣಿಕರನ್ನು ಕಂಡರೆ ಹ್ರದಯ ಕರಗಿ ಹೋಗುತ್ತದೆ...
"ಇದೆಲ್ಲಾ ಬ್ಯಾಡ್ರೀ ಸಾಹೇಬ್ರೆ..
ನೂರು ರುಪಾಯಿ ಸಾಕ್ರಿ.."
ನಾವು ಎಷ್ಟೇ ಹೇಳಿದರೂ ನೂರು ರುಪಾಯಿ ತೆಗೆದು ಕೊಂಡ..
"ಯಾಕಪ್ಪಾ.. ನಾವು ಖುಷಿಯಿಂದಲೇ ಕೊಡ್ತಾ ಇದ್ದೇವೆ ತಗೋ..."
" ಬ್ಯಾಡ್ರೀ ಸಾಹೇಬ್ರೆ....
ನಾನು ಅಷ್ಟೇಲ್ಲಾ ಒಳ್ಳೆ ಮನುಷ್ಯ ಆಲ್ರೀ..
ನನ್ನ ಥರ ಆಟೋ ಇಲ್ಲಿ ಎಲ್ಲೂ.. ಇಲ್ರೀ..
ನೀವು ಪೋಲಿಸ್ ಕಂಪ್ಲೇಂಟು ಕೊಟ್ರೆ ...
ನಂಗೇ ಒಳಗೆ ಹ್ಹಾಕಿ...
ಒದ್ದು ವಸೂಲಿ ಮ್ಮಾಡ್ತಾರೀ..
ನಂಗೆ ಇಷ್ಟೇ ಸಾಕ್ರಿ....
ನನ್ನ " ಆಟೋ ".. ಥರ....
ನಾನೂ...ಒಂಥರಾ "ಅಡಪೋಟ್ರು.. " ಸಾಹೇಬ್ರಾ..! ಬರ್ತಿನ್ರಿ..."
ಅನ್ನುತ್ತ ಆಟೋ ಹತ್ತಿ ಸ್ಟಾರ್ಟ್ ಮಾಡಿದ..
ಆಟೋ ನೋಡಿದೆ..
ಬ್ರೇಕು.., ಲೈಟು..., ಹಾರ್ನು..,
ಏನೂ ಇಲ್ಲದ .. ಆಟೋಕ್ಕೆ..
ಮೇಲಿನ " ಹೊದಿಕೆಯೂ " ಅದಕ್ಕೆ ಇಲ್ಲವಾಗಿತ್ತು...!
(ಇದರ ಹಿಂದಿನ "ಪೋಸ್ಟ್" ಓದಿ...)
( ಈ ಲೇಖನಕ್ಕೆ ಓದುಗರ ಉತ್ತಮ ಪ್ರತಿಕ್ರಿಯೇಗಳಿವೆ ಓದಿ..)
Subscribe to:
Post Comments (Atom)
72 comments:
ಆಟೋದಿಂದ ಬಿದ್ದು ಏಟು ಆದರೂ... ನಿಮ್ಮ ದುಡ್ಡು ಜೋಪಾನ ಮಾಡಿದ. :)
ಎಂದಿನಂತೆ... ನಕ್ಕು ನಕ್ಕು ಸಾಕಾಯಿತು...
ಅಂತರ್ವಾಣಿ...
ಆ ಆಟೋದವನ ವ್ಯಕ್ತಿತ್ವದ ಬಗೆಗೆ ತಲೆ ಕೆಡಿಸಿ ಕೊಂಡಿದ್ದೇನೆ...
ಅವನ ಬಳಿ ಬರೋಬ್ಬರಿ ಎರಡು ತಾಸು ಮಾತಾಡಿದ್ದೇನೆ..
ತುಂಬಾ ಸ್ವಾರಸ್ಯಕರವಾಗಿತ್ತು..
ಸಾವಿನ ಬಗೆಗೆ ಅವನ ಮಾತುಗಳು..
ನನ್ನನ್ನು ಯಾವಾಗಲೂ ಕಾಡುತ್ತದೆ..
ಅದನ್ನು ಮುಂದೆ ಯಾವಾಗಲಾದರೂ ಬರೆಯುವೆ..
ಅವನು ತಾನು ಪ್ರಾಮಾಣಿಕ ಅಲ್ಲ ಎಂದು ಹೇಳುವಲ್ಲಿ..
ಅವನ ಒಳ್ಳೆಯತನ.. ಪ್ರಾಮಾಣಿಕತೆ ಸಾಬೀತಾಗುತ್ತದೆ ಅಲ್ಲವೆ..?
ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು...
ಪ್ರಕಾಶಣ್ಣ...
ಎಷ್ಟೋ ಜನರ ಬದುಕೇ ಇದು. ಹೆಡ್ ಲೈಟ್, ಕೊನೆಗೆ ಮೇಲ್ಚಾವಣಿಯೂ ಇಲ್ಲದ, ಬ್ರೇಕಿಲ್ಲದೆ ಸಾಗಿದ ಈ ಆಟೋವಿನ ಹಾಗೆ. ಆದರೂ ಸಾಗುತ್ತಲೇ ಇರುತ್ತಾರೆ.
ಅಲ್ಲೆಲ್ಲೋ ಪ್ರಾಮಣಿಕತೆ ಹಂಚಿಹೋಗಿದೆಯಲ್ಲ, ಅದು ಅಲ್ಲಲ್ಲಿ ಒಬ್ಬೊಬ್ಬರಲ್ಲಿ ಕಾಣುತ್ತದೆ, ಬದುಕಿಗಿಷ್ಟು ಭರವಸೆಯನ್ನು ಅದರಲ್ಲೇ ಕಾಣುತ್ತ ಮುನ್ನಡೆಯುತ್ತಲಿರುತ್ತೇವೆ.
ಚೆಂದದ ಬರಹಕ್ಕೆ ಧನ್ಯವಾದ.
ಪ್ರಕಾಶ್ ಸರ್,
ತುಂಬಾ ಕಲಿತೀವಿ, ತುಂಬಾ ತಿಳ್ಕೊತೀವಿ ಅನ್ನೋ ಆತುರದಲ್ಲಿ ನಮ್ಮ ಮುಗ್ಧತೆ ಮತ್ತು ಅಮಾಯಕತೆ ಗಾಳಿಗೆ ತೂರಿ ಬಿಟ್ಟಿದ್ದೀವೇನೋ ಅನ್ಸುತ್ತೆ. ಆಟೋದವನ ನಿಷ್ಕಲ್ಮಷತೆ ಮನಸ್ಸಿಗೆ ಆಪ್ತವೆನಿಸಿತು. ಮತ್ತೆ ನಿಮ್ಮ ಬರಹದ ನಿರೂಪಣೆಯ ಬಗ್ಗೆ ಎರಡು ಮಾತಿಲ್ಲ.
ಪ್ರಕಾಶ್ ಸರ್,
ಬದುಕು ಅದೆಷ್ಟೇ ಕಷ್ಟಕ್ಕೆ ಬಿದ್ದರೂ ಪ್ರಾಮಾಣಿಕತೆ, ಮತ್ತು ಮುಗ್ದತೆಯನ್ನು ಕಳೆದುಕೊಳ್ಳಬಾರದು.....ಓದಿನ ಮತ್ತು ಪ್ರಸ್ಥುತತೆಯ ಜ್ಞಾನ ಆಟೋದವನಿಗೆ ಕಡಿಮೆ ಇದ್ದರೂ[ಅದೇ ಕಾರಣಕ್ಕೆ ಮನೆತುಂಬ ಮಕ್ಕಳು]ಅವನಿಗೆ ಸಂತೋಷ ಹುಡುಕುವ ದಾರಿ ಗೊತ್ತು....ಅನುಭವಿಸುವ ರೀತಿ ಗೊತ್ತಿದೆ....ಮತ್ತು ಅದೆಲ್ಲಕ್ಕಿಂತ ಪ್ರಾಮಾಣಿಕತೆಯಿಂದ ಸಿಗುವ ಸಂತೋಷ ಹೆಚ್ಚು ಮನಸ್ಸಿಗೆ ಉಲ್ಲಾಸ ತರುತ್ತದೆ ತಿಳಿದುರುವಂತ ಆಡಪೋಟ್ರು ಅವನು.
ನಮಗೆಲ್ಲಾ ತುಂಬಾ ಒಳ್ಳೆ ವಿಚಾರ ತಿಳಿಯುತ್ತದೆ ಅಲ್ಲವೇ...ನಾವೇನೇ ದುಡಿದು...ಅದು ಇದು ಎಲ್ಲಾ ಮಾಡಿದರೂ ಕೂಡ ಖುಷಿ ಸಿಗುವ ಮೂಲವನ್ನೇ ಸರಿಯಾಗಿ ಹುಡುಕಿಕೊಂಡಿಲ್ಲ.....
ಹಾಸ್ಯದಲ್ಲಿಯೇ...ಜೀವನಮುಖಿಯಾದ ವಿಚಾರವಿದೆ....ಲೇಖನ ನಗುತ್ತಲೇ ಮನತಟ್ಟುತ್ತದೆ...
ಧನ್ಯವಾದಗಳು...
ಎಂಥಾ ವೇದಾಂತಿ ಸರ್ ಆ ಆಟೋದವನು!
ಮಕ್ಕಳು ಜೋರಾಗಿ ಅರಚುವುದರ ಮುಂದೆ ಹೆಂಡತಿ ಕಿರುಚುವುದು ಚಿಕ್ಕದಾಗಿ ಕೇಳಿಸುತ್ತದೆ!! ಹಾಗಾಗಿ ಮನೆ ಮಾನಸ್ಸಿಗೆ ಶಾಂತಿ!!
ಅಡಪೋಟ್ರು ಆಟೋ ಅವನನ್ನು ಪ್ರಾಮಾಣಿಕನನ್ನಾಗಿಸಿದೆ!
ಪ್ರಯಾಣಿಕರನ್ನು ಹಿಗ್ಗಾಮುಗ್ಗಾ ಮಾಡಿದರೂ, ಇಡೀ ಲಕ್ಷ್ಮೇಶ್ವರದಲ್ಲೇ ಹೆಸರುವಾಸಿಯಾದ ಅದು ಅವನನ್ನು ಬೇರೆಯವರ ವಸ್ತುಗಳನ್ನು ತೆಗೆದುಕೊಳ್ಳದಂತೆ ಮಾಡಿದೆ. ಅದಕ್ಕಾಗಿ ಮೇಚ್ಚಲೇಬೇಕು.
ನಿಮ್ಮ ಸ್ಟಾಕಲ್ಲಿ ಎಷ್ಟೊಂದು ಕಥೆಗಳಿವೆ ಸರ್. ಬರೀ ಹಾಸ್ಯವೇ ಅಲ್ಲ, ಇಲ್ಲಿ ಮನಸ್ಸಿಗೆ ಮುಟ್ಟುವ ಕಥನಗಳಿವೆ.
Nice post and I liked it.
I have also met couple of these kind of characters where they readily admit that they are not as good person as one thinks and they behave differently with different people in life, which are completely opposite. They show different color to different people based on the other party's treatment(I think).
ಪ್ರಕಾಶ್ ಸರ್,
ಹಿಂತಿರುಗಿ ಬಂದ ಪ್ರಯಾಣ ಬಲು ಚೆನ್ನಾಗೇ ಇದೆ.ಮನೆಯಲ್ಲಿ " ಶಾಂತಿ " ಇರ ಬೇಕೆಂದ್ರ....ಮನೆ ತುಂಬಾ ಮಕ್ಕಳಿರಬೇಕ್ರಿ..!!"ಅಟೋ ಚಾಲಕ ಮಾತು ನಗು ತರಿಸಿತು ಹ ಹ ಹ ಸದ್ಯ ನಿಮ್ಮ ದುಡ್ಡು ನಿಮ್ಮಗೆ ಸಿಕ್ಕಿತಲ್ಲ ಚಾಲಕನಿಗೆ ನೂರು ನಮಸ್ಕಾರ ಮಾಡಬೇಕು ಹ ಹ ಹ ... ಮೈ ನೋವದದಕ್ಕೆ ದುಡ್ಡು ವಾಪಾಸ್ ಬಂದಿದ್ದು ಹ ಹ ಹ ನನ್ನ ಆಟೋ ನಲ್ಲಿ ಕೂತು ಮೈನೋವು ಮಾಡಿಕೊಂಡಿದ್ದಾರೆ, ಇನ್ನು ದುಡ್ಡು ಹೋದ್ರೆ ಅಸ್ಟೆ ಅಂತ ಮುಗೀತು ಅವರ ಕತೆ ಎಂದು ವಾಪಸ್ ತಂದು ಕೊಟ್ಟಿದ್ದಾನೆ... ಹ ಹ ಹೇಗೋ ಒಟ್ಟಲ್ಲಿ ಮೈನೋವು ಒಂದು ಮಾತ್ರೆ ಕಡಿಮೆ ಮಾಡುತ್ತೆ.. ಹಣಕ್ಕೆ ಇನ್ನೆಸ್ಟು ಮೈನೋವು ಮಾಡಿಕೊಳ್ಳಬೇಕಿತ್ತೋ ಅಲ್ಲವೇ..?
ಆಟೋ ಚಾಲಕನ ಮುಗ್ಧತೆ ಎದ್ದು ಕಾಣುತ್ತಿದೆ.. ನಾವು ಕಲಿಯುವುದು ಬಹಳ ಇದೆ ಇಲ್ಲಿ..
ಶಾಂತಲಾ...
ಇಂಥಹ ಪ್ರತಿಕ್ರಿಯೆ ಬಹಳ ಖುಷಿ ಕೊಡುತ್ತದೆ..
ಹಾಸ್ಯದ ಸಂಗಡ ಇಂಥಹದೊಂದು ಭಾವ ಕಂಡಲ್ಲಿ..
ನನ್ನ ಬರವಣಿಗೆಗೆ ಮೆರಗು ಅಂದುಕೊಂಡಿದ್ದೇನೆ...
ಈ ಪ್ರಾಮಾಣಿಕತೆ ಬಹಳ ಕಷ್ಟದ್ದು..
ಅನುಮಾನದ ಮನಸ್ಸುಗಳಿಗೆ ನಾವೇ ಸಾಬೀತು ಪಡಿಸುವ ..
ಸಂದರ್ಭ ನಮಗೆ ಬಂದಾಗ ಅದರ ಕಷ್ಟ ಗೊತ್ತಾಗುತ್ತದೆ..
ನಮ್ಮ ಅನುಭವದಲ್ಲಿ ವ್ಯಕ್ತಿ ನಮಗೆ ಹೇಗೆ ಕಾಣುತ್ತಾನೊ..
ಅದನ್ನು ನಂಬಬೇಕು ಅನ್ನುವವನು ನಾನು..
ಇದೇ ಡ್ರೈವರ್ ಸಂಗಡದ ಮಾತು ಕಥೆಯಲ್ಲಿ
ನಾನು ಕಂಡಿದ್ದೇನೆ...
ಅವನ ವ್ಯಕ್ತಿತ್ವ ಬಹಳ ಕಾಡಿದೆ..
ಮುಂದೆ ಯಾವಾಗಲಾದರೂ ಇವನ ಸಂಗಡ ನಡೆದ ಮಾತು ಕಥೆ ಬರೆಯುವೆ...
ಮನೆಯ ಶಾಂತಿ ಕಾಪಾಡುವ ಬಗೆಗೆ ಅವನ ಸಲಹೆ ಬಗೆಗೆ..
ಏನೂ ಅನ್ನಿಸಲೇ ಇಲ್ಲವಾ..?
ಚಂದದ ಪ್ರತಿಕ್ರಿಯೆಗೆ ವಂದನೆಗಳು...
ಪಾವನಾ...
ನೀನು ನೆನಪಿಸಿದ್ದಕ್ಕೆ ಈ ಲೇಖನ ಬರೆದೆ...
ಅಡಪೋಟ್ರು ಆಟೊ" ಖುಷಿ ಪಟ್ಟಿದ್ದಕ್ಕೆ..
ಅಭಿನಂದನೆಗಳು..
ಶುಭಾಶೀರ್ವಾದಗಳು..
ರಾಜೇಶ್...
ನಿಮ್ಮ ಬ್ಲಾಗಿನ ಚಂದದ ಬರಹಕ್ಕೆ ಅಭಿನಂದನೆಗಳು...
ಇದೊಂದು ಚರ್ಚೆಯ ವಿಷಯ..
"ನಾನು ಒಳ್ಳೆಯವನಲ್ಲ" ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಾಗ ಅವನು ಒಳ್ಳೆಯವನೇ...?
ಅಲ್ಲ....ಎಂಬುವದು ನನ್ನ ಭಾವನೆ...
ಅವನು "ಪ್ರಾಮಾಣಿಕ" ಅನ್ನಬಹುದು ಅಲ್ಲವಾ..?
ಪ್ರಾಮಾಣಿಕ "ಒಳ್ಳೆಅಯವನಾಗಿರಬೇಕೆಂದೇನೂ ಇಲ್ಲವಲ್ಲ..
ಏನಂತೀರಿ..?
ಪ್ರತಿಕ್ರಿಯೆಗೆ ಧನ್ಯವಾದಗಳು...
ಕೆಳಮದ್ಯಮ ವರ್ಗದ ಪರಿಸ್ತಿತಿ,ಅವರ ವಿತಂಡವಾದ,ಪ್ರಾಮಾಣಿಕತೆಯ ಹಿಂದಿನ ಸ್ವಾರ್ಥ,ಎಲ್ಲವನ್ನೂ ತುಂಬ ಉತ್ತಮ ವಾಗಿ ಪ್ರಕಾಶೀಕರಿಸಿದ್ದೀರಿ.(ನಿಮ್ಮ ವಿಶಿಷ್ಟ ಬರವಣಿಗೆ ಯಲ್ಲಿ ವಿವರಿಸಿದ್ದೀರಿ)
ಧನ್ಯವಾದಗಳು.
ಶಿವು ಸರ್...
ಓದಿದವರಿಗೆಲ್ಲ..
ಬದುಕನ್ನು ಅನುಭವಿಸುವ,..
ಪ್ರತಿಕ್ಷಣದಲ್ಲಿದ್ದು..
ಸಂತೋಷ ಪಡುವ ಭಾವ ಇರುತ್ತದೆಂದು ಹೇಳಲಿಕ್ಕಾಗದು..
ಹಾಗೆಯೆ ಹಳ್ಳಿಯ ಆಟೋ ಡ್ರೈವರ್ ಇದನ್ನು ತನ್ನದೇ ಅನುಭವದಲ್ಲಿ
ಕಂಡು ಕೊಂಡಿದ್ದಾನೆ ಬದುಕಿನ ಸತ್ಯಗಳನ್ನು...
ಘಟನೆ ನಗು ತರಿಸಿದರೂ..
ಅವನು ನೆನಪಿನಲ್ಲುಳಿಯುತ್ತಾನೆ...ಬೇರೆ ಕಾರಣಕ್ಕಾಗಿ...
ಚಂದದ ಪ್ರತಿಕ್ರಿಯೆಗೆ ವಂದನೆಗಳು...
ಮಲ್ಲಿಕಾರ್ಜುನ್...
ಎಂತಹ ತರ್ಕ ಅಲ್ಲವಾ..?
ಮಕ್ಕಳು ಜಾಸ್ತಿ ಇದ್ದ ಹೆಣ್ಣುಮಕ್ಕಳು ಶಾಂತವಾಗಿರುತ್ತಾರಾ..?
ಗಂಡನ ಸಂಗಡ ಶಾಂತಿಯಿಂದಿರುತ್ತಾರಾ..?
ಒಂದೇ ಮಕ್ಕಳ ಸಮಸ್ಯೆಯ ಪರಿಹಾರ ಹೇಗಿದೆ..?
ಆ ಪುಣ್ಯಾತ್ಮನ ಆಟೊ..
ಅಲ್ಲಿ ಬಹಳ ಪ್ರಸಿದ್ಧಿ..
ಹಾಗಾಗಿ ಪ್ರಾಮಾಣಿಕನಾದ..!
ಸಾವಿನ, ಬದುಕಿನ ಬಗೆಗೆ ಅವನ
ಅಭಿಪ್ರಾಯ ಬಹಳ ಮಸ್ತಾಗಿದೆ..
ಬರೆಯುವೆ ಮತ್ತೊಮ್ಮೆ...
ಪ್ರತಿಕ್ರಿಯೆಗೆ ವಂದನೆಗಳು..
ಕಿಶನ್...
ಇದು ತುಂಬಾ ಸಿಂಪಲ್...
ನಮ್ಮ ಸಂಗಡ ಹೇಗೆ ಇರುತ್ತಾರೊ..
ಅವರೊಡನೆ ಹಾಗೆಯೇ ಇದ್ದು ಬಿಡುವದು..
ತುಂಬ ನೇರವಾಗಿ ಬದುಕುವವರಿಗೆ ಮಾತ್ರ ಅದು ಸಾಧ್ಯ..
ಐದುನೂರು ರುಪಾಯಿಯನ್ನು ತೆಗೆದು ಕೊಂಡು..
ಅಡಪೋಟ್ರು ಆಟೊವನ್ನು ರಿಪೇರಿ ಮಾಡಬಹುದಿತ್ತಲ್ಲ..
ಪ್ರ್ಯಾಕ್ಟಿಕಲ್ ಆಗಿದ್ದರೆ ಹಾಗೆ ಮಾಡುತಿದ್ದನೇನೊ..
ಭಾವಾರ್ತಿಯಾದವರಿಗೆ ಅದು ಕಷ್ಟ ಆಯಿತೇನೋ...
ಇದೂ ಕೂಡ ಚರ್ಚೆಯ ವಿಷಯ ಅಲ್ಲವಾ..?
ಲೇಖನ ಇಷ್ಟ ಪಟ್ಟಿದ್ದಕ್ಕೆ
ಅಭಿನಂದನೆಗಳು...
ಹಾಸ್ಯ ಹೇಗಿತ್ತು ಸ್ವಾಮಿ...?
ಮನಸು...
ತುಂಬಾಮಕ್ಕಳಿರುವ ಹೆಣ್ಣುಮಕ್ಕಳು..
ಹೆಣಗಿ ಹೈರಾಣಾಗಿರುತ್ತಾರೆ...
ಸಾಕಪ್ಪಾ ಅಂತ ಸುಮ್ಮನಿರಬಹುದು..
ಒಮ್ಮೆ ಹಳ್ಳಿ ಎಲ್ಲ ತಿರುಗಿ ಅಭ್ಯಾಸ ಮಾಡ ಬಹುದಾದ ವಿಷಯ..
ಹಣ ಸಿಕ್ಕಿತಲ್ಲ.. ಹೋದ ಜೀವ ಬಂದಂತಾಗಿತ್ತು...
ಅಡಪೋಟ್ರು ಆಟೊ .. ಮತ್ತು ಚಾಲಕ
ಚೆನ್ನಾಗಿರಲಿ ಎಂದು ಹಾರೈಸಬೇಕು ಅಲ್ಲವಾ..?
ಹಾಸ್ಯ ಇಷ್ಟ ಪಟ್ಟಿದ್ದಕ್ಕೆ..
ಚಂದದ ಪ್ರತಿಕ್ರಿಯೆಗೆ..
ವಂದನೆಗಳು...
ಪ್ರಕಾಶಣ್ಣ,
ಅಂತೂ ಅಲ್ಲಿಂದ ಆರಾಮಾಗಿ(??) ವಾಪಸ್ ಬಂದಿರಲ್ಲ, ಅಷ್ಟೇ ಸಾಕು.
ತುಂಬಾ ಮಕ್ಕಳಿದ್ದರೆ ಒಬ್ಬರಾದರೂ ನೋಡಿಕೊಳ್ಳಬಹುದು ಎಂಬ ಅವನ ಆಲೋಚನೆ ತುಂಬಾ practical ಆಗಿದೆ.
ಮನೆ ತುಂಬಾ ಮಕ್ಕಳಿದ್ದರೆ ಮನೆಯಲ್ಲಿ ಶಾಂತಿ!! ಆಹಾ ಎಂತಾ ಯೋಚನೆ! ಪಾಪ ಅವನ ಹೆಂಡತಿಯ ಗತಿ! 'ಶಾಂತಿ'ಯನ್ನು ಬಿಟ್ಟು ಉಳಿದೆಲ್ಲರಿಗೂ ಶಾಂತಿ ಇರುತ್ತದೆ ಅನ್ನಿಸುತ್ತದೆ!
ಅವನ ಜೊತೆ ಅಷ್ಟು ಹೊತ್ತು ಏನು ಮಾತಾಡಿದಿರಿ? ಆದಷ್ಟು ಬೇಗ ಬರೆಯಿರಿ.
ಕೊನೆಗೆ ಆ ಆಟೊದವನ ಪ್ರಾಮಾಣಿಕತನದ ಬಗ್ಗೆ ಬರೆದದ್ದು ಬಹಳ ಚೆನ್ನಾಗಿತ್ತು.. ಮನೆ ತುಂಬ ಮಕ್ಕಳಾಗಿ(ಈಗ ಇರೋವು ಅಷ್ಟೇ ಅಲ್ಲದೆ ಇನ್ನೂ ಜಾಸ್ತಿ "ಶಾಂತಿ"ಗಾಗಿ) ನೂರ್ಕಾಲ ಬಾಳು ಅಂತ ಹರಿಸಿ ಬರಬೇಕಿತ್ತು...
ಮೂರ್ತಿ...
ಪ್ರಾಮಾಣಿಕತೆ ಬಗೆಗೆ ನನ್ನಲ್ಲಿ ಒಂದು ವಿಚಿತ್ರ ಅನುಭವವಿದೆ...
ಅದನ್ನು ಬರೆಯಲೇ ಬೇಕೆನಿಸುತ್ತದೆ....
ಚಾಲಕ ನಿಜವಾಗಿಯೂ ಪ್ರಾಮಾಣಿಕನಿರಬಹುದು..
ನೋಡಿದರೆ ಬಾಯಿ ಬಡಾಯಿ ಥರದವನ ಹಾಗೇ ಇದ್ದ...
ಹದಿನೈದು ಸಾವಿರ ಕಡಿಮೆ ಹಣವೇನಲ್ಲವಲ್ಲ..!
ಒಟ್ಟಿನಲ್ಲಿ ಕೆಲವರನ್ನು ಅರ್ಥ ಮಾಡಿಕೊಳ್ಳುವದು ಬಹಳ ಕಷ್ಟ...!
ಗೊಂದಲದ ವ್ಯಕ್ತಿತ್ವ...ಅಲ್ಲವಾ..?
ಹೋಗಲಿ ಬಿಡಿ..
ಅಡಪೋಟ್ರು ಆಟೊ ಇಷ್ಟಪಟ್ಟಿದ್ದಕ್ಕೆ
ಹ್ರದಯ ಪೂರ್ವಕ ವಂದನೆಗಳು...
ಜ್ಯೋತಿ...
ನನಗೆ ಪರಿಚಯದ ಹಿರಿಯೊರಬ್ಬರಿದ್ದಾರೆ..
ಅವರಿಗೆ ಎರಡು ಗಂಡು ಮಕ್ಕಳು..
ಒಳ್ಳೆಯ ಸಂಬಳ..ಮಕ್ಕಳಿಗೆ ಮದುವೆಯಾಗಿ..
ಮಕ್ಕಳಾಗಿ ಬೇರೆ ಮನೆಯಲ್ಲಿದ್ದಾರೆ..
ಹಿರಿಯರ ಮಡದಿ ಇಲ್ಲ.
ಅವರಿಗೆ ಎಂಬತ್ತೆಂಟು ವರ್ಷ..
ಅವರ ಅಡಿಗೆ ಅವರೆ ಮಾಡಿಕೊಳ್ಳುವಂಥ ಸ್ಥಿತಿ.. ಅವರದು...
ಎಷ್ಟು ಮಕ್ಕಳಿದ್ದರೇನು ಅಲ್ಲವಾ..?
ಜ್ಯೋತಿಯವರೆ...
ಬೆಳಗಿನ ಜಾವ ನಾಲ್ಕು ಗಂಟೆಯವರೆಗೆ ಅಲ್ಲಿ ಇರಬೇಕಾಗಿತ್ತು...
ಅಡಪೋಟ್ರು ಆಟೋದವನಿಗೆ ಮಾತನಾಡುವ ಚಟ..
ಸೊಗಸಾದ ಮಾತುಗಾರ...
ಅವನ ದ್ರಷ್ಟಿಯಲ್ಲಿ ಜೀವನ, ಬದುಕು, ಸಾವು..
ಎಲ್ಲ ಕೇಳಿದೆ.. ಮಾತಾಡಿದೆ..
ಬಹಳ ಮಜ ಇದೆ..
ಇನ್ನೊಮ್ಮೆ ಖಂಡಿತ ಬರೆಯುವೆ...
ಧನ್ಯವಾದಗಳು..
ಪ್ರಭು...
ನನ್ನ ಪರಿಸ್ಥಿತಿ ನೋಡಿ..
ಅಡಪೋಟ್ರು ಆಟೋದಲ್ಲಿ ಬಂದು..
ನರಕದ ದರ್ಶನ ಆಗಿತ್ತು..
ಆ ಕತ್ತಲ ರಾತ್ರಿಯಲ್ಲಿ..
ಆ ಅಪರಿಚಿತ ಚಾಲಕನ ಸಂಗಡ..
ಮಾತಾಡದೆ ಸುಮ್ಮನಿರ ಬಹುದಿತ್ತು...
ನನಗೂ ಚಟ ಕಣ್ರೀ...ಮಾತಾಡುವದು..!
ಆ ಯಾತನೆಯ ಮೈಕೈ ನೋವಿನ ಸಂಗಡ ..
ಗಹನವಾದ ವಿಚರದ ಮಾತು...!
ಹ್ಹಾ..ಹ್ಹಾ...!
ಅವನು ಸಾವು , ಬದುಕಿನ ಬಗೆಗೆ ಹೇಳಿದ ವಿಚಾರ ನನ್ನ ತಲೆ ಕೆಡಿಸಿತು..
ಓದಿ ಖುಷಿ ಪಟ್ಟಿದ್ದಕ್ಕೆ..
ಧನ್ಯವಾದಗಳು...
ಪ್ರಕಾಶ,
ಆ ಆ^ಟೋಕ್ಕೆ ಹೆಡ್ಲೈಟ್ ಇರಲಿಕ್ಕಿಲ್ಲ. ಆದರೆ ಆ^ಟೋದವನ
ಹೃದಯದಲ್ಲಿ ಮಾತ್ರ ಲೈಟ್ ಇದೆ. ಎಂಥಾ ಜೀವನಾದರ್ಶವನ್ನು, ಎಷ್ಟು ಸಿಂಪಲ್ ಆಗಿ ತೋರಿಸಿದಿರಿ, ಪ್ರಕಾಶ!
ನಿಮಗೆ ಅಭಿನಂದನೆಗಳು.
ಪ್ರಕಾಶ್ ಅವರೇ,
ಹೆಚ್ಚು ಮಕ್ಕಳಲ್ಲಿ ’ಶಾಂತಿ’ ಹುಡುಕುವವನಲ್ಲಿ, ಒಬ್ಬನಾದರೂ ಕೊನೆಗಾಲಕ್ಕಾಗಲಿ ಎಂಬ ಸ್ವಾರ್ಥವಿತ್ತೇ? ಹಣ ಹಿಂದಿರುಗಿಸುವ ಪ್ರಾಮಾಣಿಕತೆಯ ಹಿಂದೆ, ಪೋಲಿಸರು ಹಿಡಿದಾರೆಂಬ ಭಯವಿತ್ತೇ? ನಾನು ಅಡಪೋಟ್ರು, ಒಳ್ಳೆಯವನಲ್ಲ ಎಂದೆನ್ನುವದರಲ್ಲಿಯೇ ಆತನ ಮುಗ್ಧತೆಯಿತ್ತೇ? ಮೇಲಿನ ಹೊದಿಕೆಯೂ ಅದಕ್ಕಿಲ್ಲವಾಗಿತ್ತು ಎನ್ನುವುದರೊಂದಿಗೆ ಅಂತರಾಳವನ್ನು ತೆರೆದಿಡುತ್ತೀರಿ. ಓದುಗರನ್ನು ಚಿಂತನೆಗೆ ಹಚ್ಚುತ್ತೀರಿ. ಹಾಸ್ಯಲೇಪನದೊಂದಿಗೆ ಗಂಭೀರ ಪ್ರಶ್ನೆಗಳನ್ನು ಮುಂದಿಡುವ ಈ ನಿಮ್ಮ ಶೈಲಿ ಹಾಗೂ ಸುಂದರ ಬರಹಕ್ಕೆ ಅಭಿನಂದನೆಗಳು.
ಒಂದು ಚಿಕ್ಕ ಸಂದೇಹ. ನಿಮ್ಮ ಲೇಖನದಲ್ಲಿ ಬಳಕೆಯಾಗಿರುವುದರಿಂದ ಕೇಳಬಹುದೆಂದುಕೊಳ್ಳುತ್ತೇನೆ. ’ಬ್ರಂಹ್ಮಾಂಡ’ ಈ ಪದದ ಬಳಕೆ ಹೀಗೆಯೇ? ಬ್ರಹ್ಮಾಂಡ ತಪ್ಪೇ? ಹೇಗೆ ಬರೆದಾಗ್ಯೂ, 'brahma' ಎಂದು ಬರೆದು 'bramha' ಎಂದೇಕೆ ಓದುತ್ತೇವೆ?
ಪ್ರಕಾಶರೇ,
ನಿಮ್ಮ ಅದಪೋಟ್ರು ರಿಕ್ಷಾವಾಲ ನ ವೇದಾ೦ತ, ಪ್ರಾಮಾಣಿಕತೆ, ನಿಮಗಾದ ಅನುಭವ, ಎಲ್ಲವನ್ನು ಮನಮುಟ್ಟುವ೦ತೆ ಕಟ್ಟಿಕೊಟ್ಟಿದ್ದೀರಿ. ಚೆನ್ನಾಗಿದೆ. ಗ್ರಾಮೀಣ ಭಾಗದ ಜನರಲ್ಲಿ ಅಷ್ಟೋ ಇಷ್ಟೋ ಉಳಿದಿರುವ ಪ್ರಾಮಾಣಿಕತೆ ನಗರ ವಾಸಿಗಳಲ್ಲಿ ಇಲ್ಲವೆನ್ನಬಹುದೇನೋ ? ಆ ಅಡಪೋಟ್ರು ರಿಕ್ಷಾವಾಲಾ ನ ಪ್ರಾಮಾಣಿಕತೆ ನಮ್ಮ ನಗರಕೇ೦ದ್ರಿತ ಆಟೋಚಾಲಕರಲ್ಲಿ
ಖ೦ಡಿತವಾಗಿಯೂ ಇಲ್ಲ.
ನಾವು ಒಂತರ ಆಡಪೋಟ್ರುಗಳೆ, ಹಹ.........ಹಹ...
ಸುನಾಥ ಸರ್...
ಎಷ್ಟು ಸುಂದರವಾಗಿ ಹೇಳಿದ್ದೀರಿ ..!
ನಿಜ..., ಸರ್..
ಆತ ಐನೂರು ರುಪಾಯಿ ತೆಗೆದು ಕೊಂಡಿದ್ದರೆ ನಾವೇನೂ ಹೇಳುತ್ತಿರಲಿಲ್ಲಾ...
ಓದಿಗೂ..,
ಪಾಲಿಸುವ ಬದುಕಿನ ತತ್ವಗಳಿಗೂ..
ಸಂಬಂಧವೇ ಇಲ್ಲ ಅಲ್ಲವಾ..?
ಚಂದವಾದ ಪ್ರತಿಕ್ರಿಯೆಗೆ ವಂದನೆಗಳು..
ವಿನುತಾ..
ಇಂಥಹ ಪ್ರತಿಕ್ರಿಯೆಗಳು..
ಮತ್ತಷ್ಟು ಬರೆಯಲು ಪ್ರೇರೇಪಿಸುತ್ತವೆ..
ಅವನೊಡನೆ ಮಾತಾಡಿದ ವಿಷಯಗಳೂ ಇನ್ನೂ ಇವೆ..
ಅದನ್ನು ಇನ್ನೊಮ್ಮೆ ಬರೆಯುವೆ...
" ಬ್ರಹ್ಮಾಂಡ" ಇದು ಸರಿ..
ಬರಹದಲ್ಲಿ ನನ್ನಿಂದ ದೋಷ ಆಗಿತ್ತು ..
ಸರಿ ಪಡಿಸುವೆ..
"ಬ್ರಹ್ಮ" ನಿಂದ "ಬ್ರಹ್ಮಾಂಡ" ಆಗಿದೆ
ಇದು ನನ್ನ ತಿಳುವಳಿಕೆ..
ಚಂದ್ರಕಾಂತ ಅಥವಾ ಸುನಾಥ ಸರ್..
ಅಥವಾ ಇನ್ಯಾರ ಬಳಿಯಾದರೂ ಕೇಳಿ ತಿಳಿದು..
ತಿಳಿಸುವೆ..
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..
ಪರಾಂಜಪೆಯವರೆ..
ನನ್ನ ಅನುಭವದ ಪ್ರಕಾರ..
ಒಳ್ಳೆಯತನಕ್ಕೆ..
ಯಾವುದೇ.. ಪ್ರಾಂತ.., ಭಾಷೆ,ಧರ್ಮ,..
ಮತ ದೇಶಗಳ
ಇತಿಮಿತಿ ಅದಕ್ಕಿಲ್ಲ..
ಇಂಥವರು ಎಲ್ಲಕಡೆಯೂ ಇರುತ್ತಾರೆ..
ಸಲ್ಲುತ್ತಾರೆ..
ಹಾಗೆ ಕೆಟ್ಟವರೂ ಕೂಡ..
ನಗರ ಪ್ರದೇಶದ ಬದುಕಿನ ..
ಅನಿವಾರ್ಯ ಹೋರಾಟ...
ಸ್ವಲ್ಪ ದಾರಿ ತಪ್ಪಿಸಿ..
ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು..
ಏನಂತೀರಿ..?
ಧನ್ಯವಾದಗಳು..
ಮೋಹನ್..
ಪ್ರತಿಕ್ರಿಯೆಗೆ
ಧನ್ಯವಾದಗಳು
ಪ್ರಕಾಶ್ ಅವರೆ
ನಿಮ್ಮ ಬರಹ ತುಂಬಾ ಇಷ್ಟವಾಯಿತು. ನಾನು ಯಾವಾಗಲೂ ಇದೇ ವಿಷಯ ಯೋಚಿಸುತ್ತಿರುತ್ತೇನೆ. ನಮ್ಮ ತಂದೆ ಏಳು ಮಕ್ಕಳನ್ನು ಬೆಳೆಸಿ ತಾವೂ ಬದುಕಿನ ಸಂತೋಷ ಸವಿದರು. ಆಸ್ತಿ ಮಾಡಲಿಲ್ಲ. ವಿದ್ಯೆ ಕೊಟ್ಟರು, ನಮಗೆ ಗುಂಪಿನಲ್ಲಿ ಬದುಕುವುದನ್ನು ಹೇಳಿಕೊಟ್ಟರು. ಸ್ವಾರ್ಥ ಬಿಟ್ಟು ಹಂಚಿಕೊಳ್ಳುವುದನ್ನು ಹೇಳೀಕೊತ್ತರು, ಹೇಳಿಕೊಟ್ಟರು ಅನ್ನುವುದಕ್ಕಿಂತ ಏಳು ಜನರ ಮಧ್ಯದಲ್ಲಿ ನಾವಿದನ್ನು ಕಲಿತೆವು ಕಷ್ಟ ಬಂದಾಗ ಸಹಿಸುವು ಶಕ್ತಿ ಬಂತು
ಈಗ ಒಂದೋ ಎರಡೋ ಮಕ್ಕಳಿರುವ ( ನಾವೂ ನೀವೂ ಏಲ್ಲಾ)ಎಲ್ಲರೂ ಮಕ್ಕಳು ಕೇಳುವ ಮುಂಚೆ ಎಲ್ಲವನ್ನೂ ಒದಗಿಸಿ ಕೃತಕೃತ್ಯರಾದೆವೆಂದುಕೊಳ್ಳುತ್ತಾರೆ. ಆದರೆ ಆ ಮಕ್ಕಳು ಸ್ವಾರ್ಥಿಗಳಾಗಿ, ಹಠಮಾರಿಗಳಾಗಿ ಕಷ್ಟ ಸಹಿಸುವ ಶಕ್ತಿ ಇಲ್ಲದವರಾಗುತ್ತಾರೆ.
ನಿಮ್ಮ ಲೇಖನಕ್ಕೆ ಈ ಮಾತುಗಳು ಎಷ್ಟರಮಟ್ಟಿಗೆ ಹೊಂದುತ್ತದೋ? ತುಂಬಾ ಮಕ್ಕಳಿರುವುದೇ ಸರಿ ಎಂದು ನಾನು ಹೇಳುತ್ತಿಲ್ಲ.
ವಿನುತ ಅವರ ಮಾತಿಗೆ ನಾನು ಉತ್ತರಿಸಬಹುದು ಎಂದಿರುವಿರಿ. Thanks ಬ್ರಹ್ಮ , ದುಃಖ ಇವೆಲ್ಲವೂ ಸಂಸ್ಕೃತದಿಂದ ಬಂದ ಪದಗಳು. ಅಲ್ಲಿ brahma (ಬ್ರಃಮ) ಎಂದೇ ಉಚ್ಚರಿಸುತ್ತಾರೆ/ಬೇಕು. ಆದರೆ ಕನ್ನಡಕ್ಕೆ ಬಂದ ಸಂಸ್ಕೃತ ಪದಗಳು ನಮ್ಮ ಜಾಯಮಾನಕ್ಕೆ ಹೊಂದಿಕೊಂಡಾಗ ಬ್ರಮ್ಹ, ದುಖ್ಖ ಎಂದು ಉಚ್ಚರಿಸಲ್ಪಡುತ್ತವೆ. ಬರವಣಿಗೆಯಲ್ಲಿ ಮಾತ್ರ ಹಾಗೇ ಉಳಿಸಿಕೊಂಡಿದ್ದೇವೆ.
ಹ ಹ.. ಆಟೊದವನ ಶಾಂತಿ ತತ್ವ ಚೆನ್ನಾಗಿದೆ!
ನಿಮ್ಮ ಪ್ರಸಂಗದ ಚಂದದ ವರ್ಣನೆ.. ಈ ಆಟೋ ಕಥೆ ಕೇಳಿದ ಮೇಲೆ, ಬೆಂಗಳೂರಿನ ಆಟೋದವರು ಎಷ್ಟೇ ಕೆಟ್ಟದಾಗಿ ಓಡಿಸಿದರೂ ಒಪ್ಪಿಕೊಳಬೇಕು!
ಈ ಆಟೋದವ ಎಲ್ಲ ಅರ್ಥಗಳಲ್ಲೂ "ಆತ್ಮ"ವಿರುವವ!!
ಬೇರೆ ಮಾತು ಬೇಕಿಲ್ಲ, ಅಲ್ಲವೆ?
ಅಡಪೋಟ್ರು andre enu? :-S
ಆಟೋ ಚಾಲಕನ ಪ್ರಾಮಾಣಿಕತೆ ಮೆಚ್ಚಬೇಕಿದ್ದರೂ, ಆತನ ವ್ಯಕ್ತಿತ್ವದಲ್ಲಿ ಗೊಂದಲ ಎದ್ದು ಕಾಣುತ್ತದೆ. ಏನೇ ಆದರೂ ಗುರಿ ತಲುಪಿಸುವ ಆತನ ಮನಸ್ಸು ಮಾತ್ರ ನಿಷ್ಕಳಂಕ.
ಆದ್ರೆ... ಹೆಚ್ಚು ಮಕ್ಕಳಿದ್ರೆ ಹೆಂಡ್ತಿಗೆ ನನ್ನ ಬಳಿ ಜಗಳ ಮಾಡೋದಿಕ್ಕೆ ಪುರುಸೊತ್ತಿಲ್ಲ ಎಂಬ ಆವನ ಲಾಜಿಕ್ಕು???
ಹಹಹಹ
ಚೆನ್ನಾಗಿದೆ ನಿಮ್ಮ ಬರಹ.
ಇದೇ ಬದುಕು, ಇಷ್ಟೇ ನಮ್ಮ ಬದುಕು. ನಿಷ್ಕಲ್ಮಶವಾದ ಬದುಕು. ಪ್ರಾಮಾಣಿಕತೆ ಇಂದ ಬದುಕುವುವವನಿಗೆ ಯಾವುದರ ಭಯವೂ ಇಲ್ಲ. ಜೀವನ ಕಷ್ಟ ಇರುತ್ತೆ. ನಿಮ್ಮ ಬರವಣಿಗೆಯ ಶೈಲಿ ಚೆನ್ನಾಗಿದೆ. ಸ್ಪೆಲಿಂಗ್ ತಪ್ಪುಗಳು ಇವೆ.
If each man or woman could understand that every other human life is as full of sorrows, or joys, or base temptations, of heartaches and of remorse as his own . . . how much kinder, how much gentler he would be.”
ಚೆಂದದ ಬರಹಕ್ಕೆ ಧನ್ಯವಾದ.
ಚೆನ್ನಾಗಿದೆ ಅನುಭವ :-)
ಚಂದ್ರಕಾಂತರವರೆ..
ನನಗೆ...
ಭಾಷೆಯ ಅಥವಾ ಇತರೆ ಯಾವುದೇ ತಿಳಿಯದ ವಿಚಾರ ಬಂದಲ್ಲಿ..
ನಿಮ್ಮ, ಸುನಾಥ ಸರ್, ನೆನಪಾಗುತ್ತದೆ...
ಮೊನ್ನೆ ನಮ್ಮ ಅಪಾರ್ಟಮೆಂಟಲ್ಲಿ ಹಿರಿಯೊರಬ್ಬರು ಹೇಳುತ್ತಿದ್ದರು..
ಮಕ್ಕಳೀಂದಲೂ, ಮೊಮ್ಮಕ್ಕಳಿಂದಲೂ..
ಸೇವೆ ಮಾಡಿಸಿಕೊಳ್ಳುವ ಭಾಗ್ಯ ಪಡೆದು ಬಂದಿರಬೇಕು...
ಅದು ನಿಜವಿರಬಹುದೇನೋ..
ಎಷ್ಟೇ ಒಳ್ಳೆಯ ಮಕ್ಕಳಿರಲಿ..,ಸಂಸ್ಕಾರವಿರಲಿ..
ತಂದೆ, ತಾಯಿವರನ್ನು ಅಲಕ್ಷಿಸಿದ್ದನ್ನು ನಾನು ಕಂಡಿದ್ದೇನೆ...
ಆ ಅಡಪೋಟ್ರು ಚಾಲಕನೊಡನೆ ಇನ್ನೂ ಮಾತಾಡಿದ್ದೇನೆ..
ಸ್ವಾರಸ್ಯಕರವಾಗಿದೆ..
ಮತ್ತೊಮ್ಮೆ ಬರೆಯುವೆ..
ನಿಮ್ಮ ಉತ್ತರದಿಂದ "ವಿನುತಾ ಮೇಡಮ್" ಅನುಮಾನ ಪರಿಹಾರವಾಗಿರಬಹುದು..
ಈಗಲಾದರೂ ಒಪ್ಪಿಕೊಳ್ಳಿ..
ನೀವು ನನ್ನ ಗುರುವಾಗಿದ್ದೀರಿ..
ಲೇಖನ ಮೆಚ್ಚಿದ್ದಕ್ಕೆ, ಅನುಮಾನ ಪರಿಹರಿಸಿದ್ದಕ್ಕೆ..
ವಂದನೆಗಳು...
ಮಾನವೀಯತೆ ಮುಗ್ಧತೆ ತುಂಬಿದ ಆಟೋದವನ ಮನಸ್ಸು ತುಂಬಾ ಇಷ್ಟವಾಯಿತು.ಅವನು ಹಣ ತಂದು ವಾಪಸ್ಸು ತಂದು ಕೊಡಲು ಒಂದು ಕಾರಣ ಇತ್ತು. ವಾಪಸ್ಸು ಅವನ ಆಟೋ ಹತ್ತೋ ಮೊದಲು ನೀವು ಅವನನ್ನು ಗದರಿಸಿದ್ದೀರಲ್ಲಾ ಅದಿಕ್ಕೆ ದುಡ್ಡು ವಾಪಸ್ಸು ಬಂತು ಅಲ್ವಾ ಪ್ರಕಾಶಣ್ಣ. ಆದ್ರು ಅತನು ಆಡಿದ ಮಾತು ಅದನ್ನ ನೀವು ಹೇಳಿದ ರೀತಿ ನನ್ನ ಮನಸಲ್ಲಿ ಬೇರೂರಿ ಬಿಟ್ಟಿದೆ.
ಪ್ರಕಾಶಣ್ಣ,
ಆಟೋ ಡ್ರೈವರ್ ಲಾಜಿಕ್ ಕೇಳಿ ತುಂಬಾ ನಗು ಬಂತು.. ಮನೆಯಲ್ಲಿ ಶಾಂತಿ ನೆಲೆಸಲು ಮನೆತುಂಬಾ ಮಕ್ಕಳು!!! :)
ಆದರೆ ಕೊನೆಯಲ್ಲಿ ಆತನ ಪ್ರಾಮಾಣಿಕತೆ ತುಂಬಾ ಇಷ್ಟವಾಯಿತು. ಪೋಲಿಸ್ ಭಯಕ್ಕೇ ಆಗಿರಲಿ, ಇನ್ನೇನೋ ಕಾರಣವಿರಲಿ, ನಿಮ್ಮ ದುಡ್ಡು ನಿಮಗೆ ತಂದು ಕೊಟ್ಟ. ಕೊಟ್ಟದ್ದಕ್ಕೆ ಕಾರಣವನ್ನೂ ಅಷ್ಟೇ ಪ್ರಾಮಾಣಿಕವಾಗಿ ಹೇಳಿದ. ಅಂತೂ ಒಳ್ಳೆಯ ಆಟೋ ಪ್ರಯಾಣವೇ ಆಯಿತೆನ್ನಬಹುದು :)
ಒಳ್ಳೆಯವನಲ್ಲ ಎಂದೆನ್ನುವದರಲ್ಲಿಯೇ ಆಟೂ ದವನ ಪ್ರಾಮಾಣಿಕತೆ ಇದೆ. ಮನೆ ತು೦ಬ ಮಕ್ಕಳಿದ್ದರೆ ಮನೆಯಲ್ಲಿ ಶಾ೦ತಿ... ತು೦ಬ ಅಧ್ಬುತ ಐಡಿಯ!!!
ಹಗಲೂ ರಾತ್ರೆ ದುಡಿಯುವ ಅ ಆಟೊ ದವನಿಗೆ ತನ್ನ ಬದುಕಿನಲ್ಲಿ ಭರವಸೆ ಇದೆ, ಇದು ತು೦ಬಾ ಕುಶಿಯ ವಿಚಾರ.
ಚೆಂದದ ಬರಹಕ್ಕೆ ಧನ್ಯವಾದ.
ಪ್ರಕಾಶ್
ನನ್ನನ್ನು ಗುರುವಾಗಿಸಿಕೊಂಡರೆ ನಾನು ಸ್ವಲ್ಪ ಜಾಸ್ತಿ ಕಿವಿ ಹಿಂಡುವ ಮಾತಾಡುತ್ತೇನೇನೋ? ಆದರೂ ನನ್ನನ್ನು ಗುರು ಎಂದು ನೀವು ಪದೇ ಪದೇ ಹೇಳುತ್ತಿರುವುದಕ್ಕೆ ಕೃತಜ್ಞತೆಗಳು.
ವಿನುತಾ ಅವರ ವಿಶ್ಲೇಷಣೆ ನನಗೆ ಬಹಳ ಇಷ್ಟವಾಯಿತು.
ಪ್ರಕಾಶ್ ರವರಿಗೂ, ಚಂದ್ರಕಾಂತ ಅವರಿಗೂ,
ಮಾಹಿತಿಗಾಗಿ ಧನ್ಯವಾದಗಳು.
ಗುರುಪ್ರಸಾದ್..
ಡಿವಿಜಿಯವರ ಜನ್ಮದಿನದ ನೆನಪು ಮಾಡಿಸಿ..
ನಿಮ್ಮ ಬ್ಲಾಗಿನಲ್ಲಿ ಒಳ್ಳೆಯ ಲೇಖನ ಬರೆದಿದ್ದೀರಿ..
ಅದಕ್ಕೆ ಅಭಿನಂದನೆಗಳು..
ಇಲ್ಲಿಮಹಾ, ದೊಡ್ಡ ಅಡಪೋಟ್ರು ಆಟೊ ಡ್ರೈವರ್ ಗಳಿದ್ದಾರೆ..
ಇಲ್ಲಿ ಕೆಲವರು ಬಹಳ ಸುಲಿಗೆ ಮಾಡುತ್ತಾರೆ..
"ಅಡಪೋಟ್ರುಗಳು" ಎಲ್ಲೆಡೆ ಸಿಗುತ್ತಾರೆ..
ವಂದನೆಗಳು..
ಜ್ಯೋತಿಯವರೆ...
ನನ್ನ ಬ್ಲಾಗಿಗೆ ಸ್ವಾಗತ..
ಓಹೋ.. "ಆತ್ಮ" ಇಲ್ಲಿಯೂ ನುಸುಳಿತಾ..?
ಹ್ಹಾ... ಹ್ಹಾ...
ಈ ಅಡಪೋಟ್ರು ಆಟೋದವ ..
ಒಳ್ಳೆಯ.."ಪುಣ್ಯ್ಯಾತ್ಮ"..!
ವಂದನೆಗಳು...
ಶ್ರೀನಿಧಿಯವರೆ....
ಈ ಎರಡು ಲೇಖನ ಓದಿದ ಮೇಲೆಯೂ ..
" ಅಡಪೋಟ್ರು " ಅಂದರೆ ಅರ್ಥವಾಗಲಿಲ್ಲವೇ...?
ಇನ್ನೊಮ್ಮೆ ಓದಿ ದಯವಿಟ್ಟು...
ಆಗಲೂ ಆಗದಿದ್ದರೆ...
ಮುಂದಿನ ಲೇಖನ ಬರುತ್ತಿದೆ ..
ಸ್ವಲ್ಪ ಕಾಯಿರಿ...
ಪ್ಲೀಸ್...
ಅವಿಸ್ ಬ್ಲಾಗ್( ತಪ್ಪಿದ್ದರೆ ಕ್ಷಮಿಸಿ)..
ನನ್ನ ಬ್ಲಾಗಿಗೆ ಸ್ವಾಗತ...
ನನ್ನದೊಂದು ಪ್ರಶ್ನೆ..
"ನಾನು ಪ್ರಾಮಾಣಿಕನಲ್ಲ "..
ಎಂದು "ಪ್ರಾಮಾಣಿಕ" ವಾಗಿ ಒಪ್ಪಿಕೊಂಡರೆ..
ಅವನು "ಪ್ರಾಮಾಣಿಕನೇ..?'
ಮೆಚ್ಚಿ ಪ್ರೋತ್ಸಾಹಿಸಿದ್ದೀರಿ..
ಧನ್ಯವಾದಗಳು...
Hahahaha... :-)
ಸತ್ಯಪ್ರಕಾಶರವರೆ..
ನಿಮ್ಮ ಅನುಭವದ ನುಡಿ ಸತ್ಯ...
ಪ್ರಾಮಾಣಿಕನಿಗೆ ಕಷ್ಟವಾದರೂ..
ಭಯದ, ಅಳುಕಿನ
ಬದುಕಿರುವದಿಲ್ಲ...
ಅಕ್ಷರ ದೋಷಗಳನ್ನು ತಿದ್ದಿ ಕೊಳ್ಳುವೆ...
ಮತ್ತೆ , ಮತ್ತೆ ಬರುತ್ತಾ ಇರಿ...
ಧನ್ಯವಾದಗಳು..
ಕಲ್ಲಾರಮನೆ ಮಹೇಶ್..
ನನ್ನ ಬ್ಲಾಗಿಗೆ ಸ್ವಾಗತ..
ಚಂದದ ಪ್ರತಿಕ್ರಿಯೆಗೆ ವಂದನೆಗಳು..
ಅನ್ನಪೂರ್ಣಾರವರೆ...
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..
ಹೀಗೆ ಬರುತ್ತಾ ಇರಿ..
ಭಾವನಾ ಲಹರಿ...
ಅವನು ಪ್ರಾಮಾಣಿಕನೇ..
ಒಂದೂ ಮಾತಾಡದೆ..
ನಾವು ಕೊಟ್ಟ ಐದು ನೂರು ರುಪಾಯಿ ತೆಗೆದು ಕೊಂಡು ಹೋಗಬಹುದಿತ್ತು..
ತೆಗೆದು ಕೊಂಡಿದ್ದು ನೂರುರೂಪಾಯಿ ಮಾತ್ರ..
ಸ್ವಲ್ಪ ಹಾಸ್ಯವಾಗಿ ಮಾತಾಡುವವ...
ಅಷ್ಟೆ..ಅನಿಸುತ್ತದೆ...
ಪ್ರತಿಕ್ರಿಯೆಗೆ ಧನ್ಯವಾದಗಳು...
ತೇಜಸ್ವಿನಿ...
ನಮ್ಮೂರಿನಲ್ಲಿ ಒಬ್ಬರಿದ್ದಾರೆ..
ಅವರಿಗೆ ಬರೊಬ್ಬರಿ.. ಹನ್ನೆರಡು ಮಕ್ಕಳು..
ಅವಳ ಕೊನೆಯಮಗಳು..
ತನ್ನ ಮಗನ ಮಗಳಿಗಿಂತ ಸಣ್ಣವಳು..!
ಆಶ್ಚರ್ಯವೆಂದರೆ..
ಅವರು ಬಹಳ ಶಾಂತ ಸ್ವಭಾವ..
ಮೌನ ಗೌರಿ..
ಅವರಿಗೆ ಕೋಪ ಬಂದಿದ್ದಂತೂ ನಾವ್ಯಾರೂ ನೋಡಿಲ್ಲ...
ಹ್ಹಾ,,,!! ಹ್ಹಾ,,,!! ನಿಜ ಇರಬಹುದಾ ಅವನ ತರ್ಕ...?
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...
ಬಾಲು ಸರ್...
ಕಳೆದ ಇಪ್ಪತ್ತು ವರ್ಷದಿಂದ ..
ಇದೇರೀತಿಯ ಬದುಕಿನಲ್ಲೂ ...
ಭರವಸೆ.., ಕನಸು ಇದೆಯಲ್ಲ...
ಪ್ರಾಮಾಣಿಕತೆನೂ ಸತ್ತಿಲ್ಲವಲ್ಲ...
ಆ... ಅಡಪೋಟ್ರು ಆಟೋ ಇಟ್ಟು ಕೊಂಡು...
ಬಾಲುರವರೆ... ನಿಮ್ಮ ಸೂಕ್ಷ್ಮತೆಗೆ ವಂದನೆಗಳು...
ಚಂದ್ರಕಾಂತರವರೆ...
ನೀವು ನಾನು ಬ್ಲಾಗ್ ಶುರು ಮಾಡಿದಾಗಿಲಿಂದ..
ಇದುವರೆಗೆ ನನ್ನನ್ನು ಪ್ರೋತ್ಸಾಹಿಸಿ..
ತಪ್ಪಿದ್ದಲ್ಲಿ ತಿದ್ದಿದ್ದೀರಿ...
ನಿಮ್ಮ ಲೇಖನದಿಂದಲೂ ಪ್ರಭಾವಿತನಾಗಿದ್ದೇನೆ..
ನೀವು ನನ್ನ ಗುರುವಲ್ಲದೇ ಇನ್ನೇನು..?
ಗುರುದಂಡನೆ ಶ್ರೇಯಸ್ಸಿಗೆ ಅಂತ ತಿಳಿದ್ದಿದ್ದೇನೆ...
ಧಾರಾಳವಾಗಿ ಕಿವಿಹಿಂಡ ಬಹುದು..
ಆ ಆಸೆ ಕೂಡ ನನಗಿದೆ...
ನೀವೊಮ್ಮೆ ವಿನುತಾರವರ ಬ್ಲಾಗಿಗೊಮ್ಮೆ ಹೋಗಿ ಬನ್ನಿ..
ಅರ್ಥಪೂರ್ಣವಾದ ಲೇಖನ, ಕವನ ಬರೆಯುತ್ತಾರೆ...
ಧನ್ಯವಾದಗಳು...
ವಿನುತಾರವರೆ...
ಧನ್ಯವಾದಗಳು..
ಶಿವಶಂಕರ್...
ಕಷ್ಟ , ಬಡತನಗಳಿದ್ದರೂ..
ಪ್ರಾಮಾಣೀಕತೆ ಬಿಡಲಿಲ್ಲ...
ಎಡವಟ್ಟು ಕೆಲಸ ಮಾಡಿದ್ದರೂ..
ಎತ್ತರಕ್ಕೇ ಏರಿ ಬಿಡುತ್ತಾನೆ...
ಗೌರವದ ಭಾವ ಆವರಿಸಿ ಬಿಡುತ್ತದೆ..
ಅವನೊಡನೆ ಬದುಕು, ಸಾವಿನ ಬಗೆಗೆ ..
ಮಾತಾಡಿದ್ದೇನೆ..
ಅವನದೇ ಭಾಷೆ, ಅವನದೇ ಧಾಟಿಯಲ್ಲಿ..
ಮತ್ತೊಮ್ಮೆ ಬರೆಯುವೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು..
ಗೋರೆಯವರೆ...
ಲೇಖನ ಮೆಚ್ಚಿದ್ದಕ್ಕೆ ವಂದನೆಗಳು...
ಪ್ರಕಾಶಣ್ಣ,
ನಕ್ಕು ನಕ್ಕು ಸುಸ್ತಾಯ್ತು. ಆದರೂ ಆಟೋದವನ ಪ್ರಾಮಾಣಿಕತೆಯ ಮುಂದೆ ಅವನು ನಿಮಗೆ ಕೊಟ್ಟ ಕಷ್ಟ ಓಕೆ ಅನಿಸುತ್ತೆ
ಪ್ರಕಾಶರವರೆ,ನೀವು ಬರೆದ ಶೈಲಿ ತುಂಬಾ ಚೆನ್ನಾಗಿದೆ.
ನೀವು ತುಂಬಾ ಒಳ್ಳೆಯವರಾಗಿದ್ದಕ್ಕೆ , ನಿಮಗೆ ಸಿಗುವ ಜನರೆಲ್ಲಾ ಒಳ್ಳೆಯವರೇ ಆಗಿರುತ್ತಾರೆ.
ಪ್ರಕಾಶ್ ಸರ್,
ಬಿಡುವಾದಾಗೊಮ್ಮೆ ಆ ಕಡೆಯ ಬಡ ಜನರ ಜೊತೆ ಸಂಭಾಷಿಸಿ ನೋಡಿ, ಆ ತರದ ವೇದಾಂತಿಗಳು ತುಂಬಾ ಜನ ಸಿಗ್ತಾರೆ. ಅದೆಲ್ಲ ಅವರ ಬಡ ಬದುಕು ಕಲಿಸುವ ಪಾಠ.
ನೀವು ಅವನಿಗೆ ಬಲವಂತವಾಗಿ ಐನೂರು ಕೊಟ್ಟಿದ್ದರೂ ಅವನ ಆಟೋ ರಿಪೇರಿ ಆಗುತ್ತಿರಲಿಲ್ಲ. ಏಕೆಂದರೆ, ಆ ಐನೂರಕ್ಕೆ ಅವ ಇನ್ನಷ್ಟು ದುಡ್ಡು ಸೇರಿಸಿ ಅಂತಹುದೇ ಇನ್ನೊಂದು ಆಟೋ ಖರೀದಿಸುತ್ತಿದ್ದ. ಏಕೆಂದರೆ ಆ ತರದ ಆಟೋಗಳು ಅಲ್ಲಿ ಸಾಮಾನ್ಯ ಮತ್ತು ಅಲ್ಲಿನ ರಸ್ತೆಗಳಲ್ಲಿ ಓಡಿಸಿದರೆ ಎಂತಹ ಹೊಸ ವಾಹನವಾದರೂ ಸರಿ ಎರಡೇ ತಿಂಗಳಿನಲ್ಲಿ ಹಳೆಯದಾಗುತ್ತೆ.
ಘಟನೆಯನ್ನು ಪ್ರಸ್ತುತಪಡಿಸಿದ ರೀತಿ ತುಂಬಾ ಇಷ್ಟವಾಯಿತು.
ಗುರುಮೂರ್ತಿಯವರೆ...
ಅದು ನಿಜ...
ಅವನ ದಿನಿತ್ಯದದ ಕಷ್ಟ, ಕಾರ್ಪಣ್ಯದ ಮುಂದೆ..
ನಮ್ಮ ನೋವು ಏನೂ ಅಲ್ಲ...
ಪ್ರತಿದಿನದ ಸಮಸ್ಯೆಯಲ್ಲಿ ಆತ ಹತಾಶನಗಲಿಲ್ಲವಲ್ಲ..!
ವಂದನೆಗಳು... ಗುರು..
ವಾಣಿಯವರೆ...
ಲೇಖನ ಮೆಚ್ಚಿದ್ದಕ್ಕೆ.. ಧನ್ಯವಾದಗಳು...
ಪ್ರೋತ್ಸಾಹ ಹೀಗೆಯೇ ಇರಲಿ...
ಉಮೀ.....
ಬಡ ಬದುಕು ಕಲಿಸಿದ ಪಾಠ..!
ಬದುಕಿನಲ್ಲಿ ಬಡತನವಿದ್ದರೂ..
ಹ್ರದಯ ಶ್ರೀಮಂತಿಕೆ ಇದೆಯಲ್ಲ....!
ಜನ್ಮದಿಂದ ಬೆನ್ನು ಬಿಡದ ಕಷ್ಟಕಾರ್ಪಣ್ಯಗಳು..
ಬದುಕಿನ ಉತ್ಸಾಹಕ್ಕೆ ಧಕ್ಕೆ ತರುವದಿಲ್ಲವಲ್ಲ...
ಅವರಿಂದ ನಾವು ಪಟ್ಟಣದವರು ಕಲಿಯುವದು ಬಹಳಷ್ಟಿದೆ...
ನೀವೆನ್ನುವದು ನಿಜ...
ಆ ಕಚಡಾ ರಸ್ತೆಯಲ್ಲಿ ಎಂಥಹ ಹೊಸ ಗಾಡಿಗಳು ..
ಹೊದಿಕೆಯಿಲ್ಲದ "ಅಡಪೋಟ್ರು" ಗಾಡಿಗಳಾಗಿ ಬಿಡುತ್ತವೆ...
ನೀವು ಆ ಭಾಗದವರಾಗಿ ಹೊಸ ವಿಷಯಗಳನ್ನು
ತಿಳಿಸಿದ್ದಕ್ಕೆ ವಂದನೆಗಳು..
ಪ್ರಕಾಶ್ ಸರ್...
ಎಲ್ಲಾದ್ರೂ ಎಡವಿಬಿಟ್ರಾ? ಅಂಥ ಓದುತ್ತಾ ಹೋದೆ...
ಓದು ಮುಗಿದ ಮೇಲೆ ಉಳಿದಿದ್ದು ಇಷ್ಟೇ: ಆಟೋದವನ ಪ್ರಾಮಾಣಿಕತೆ ಮತ್ತು ಹಾಸ್ಯದ ಹೊನಲು.
ಮತ್ತೊಮ್ಮೆ ನಗಿಸಿದ್ದಕ್ಕೆ ಥ್ಯಾಂಕ್ಸ್ ಸರ್.
-ಧರಿತ್ರಿ
ಪ್ರಕಾಶ್,
ಚೆನ್ನಾಗಿದೆ ನಿಮ್ಮಆಟೋ ಪುರಾಣ ,, ತಡವಾಗಿ ನಿಮ್ಮ ಬ್ಲಾಗಿಗೆ ಬಂದರು, ಹಿಂದಿನ ಮತ್ತೆ ಇ ಲೇಖನ ಒಟ್ಟಿಗೆ ಓದಿದೆ. ನಿಜವಾಗ್ಲೂ ತುಂಬ ಚೆನ್ನಾಗಿ ಇತ್ತು ಅಂತ ಕಾಣುತ್ತೆ ನಿಮ್ಮ ಆಟೋ experience , ಆಟೋದವನ ಪ್ರಾಮಾಣಿಕತೆ ಕೂಡ ಮೆಚ್ಚುವಂತದೆ. ಇನ್ನು ಮುಂದೆ ಬೇರೆ ಉರಿನಲ್ಲಿ ಎಲ್ಲಾದರು ಆಟೋ ಹತ್ತಬೇಕಾದರೆ , ಆಟೋನ ಪೂರ್ತ ಚೆಕ್ ಮಾಡಿ ಹತ್ತುತ್ತಿರ ಅಂತ ಕಾಣುತ್ತೆ ......
ಗುರು
ಧರಿತ್ರಿ...
ನಿಜ ಅವನ ಸರಳತೆ, ಪ್ರಾಮಾಣಿಕತೆ ಬಹಳ ಇಷ್ಟವಾಗುತ್ತದೆ..
ನೀವು ಇಷ್ಟಪಟ್ಟಿದ್ದು ಖುಷಿಯಾಯಿತು..
ಪ್ರೋತ್ಸಾಹ ಹೀಗೆಯೇ ಇರಲಿ..
ಧನ್ಯವಾದಗಳು..
ಗುರುರವರೆ...
ನಿಜ ಆಟೊ ಅಂದರೆ ಹೆದರಿಕೆಯಾಗಿಬಿಟ್ಟಿದೆ...
ನಮ್ಮ ಮಿತ್ರ ಸತ್ಯ ಆಟೊವೆಂದರೆ ಓಡಿಹೋಗುತ್ತಾನೆ...
ಒಮ್ಮೆ ನಾವಿಬ್ಬರೂ ಬಸ್ ಪ್ರಯಾಣಮಾಡಿದ್ದೇವು..
ಅದು ಸ್ವಲ್ಪ ಬೇರೆ ಥರಹದ ಅನುಭವ..
ಲೇಖನ ಮೆಚ್ಚಿದ್ದಕ್ಕೆ
ಧನ್ಯವಾದಗಳು..
ಪ್ರಕಾಶಣ್ಣ... ತು೦ಬಾ ದಿನಗಳಾಯಿತು ನಿಮ್ಮ ಬ್ಲಾಗ್ ಓದದೆ... ಪರೀಕ್ಷೆ ಕಾಟ... ಆಟೋ ಪ್ರಸ೦ಗದ ಎರಡನೇ ಪಾರ್ಟ್ ಓದಿ ಖುಷಿಯಾಯಿತು....
ಸುಧೇಶ್....
ನೀವು ಯಾವಾಗ ಬಂದರೂ ಸ್ವಾಗತ...
ಲೇಖನ ಮೆಚ್ಚಿದ್ದಕ್ಕೆ ಖುಷಿಯಾಗುತ್ತದೆ...
ಇನ್ನೂ ಬರೆಯೊ ಉತ್ಸಾಹ ತರುತ್ತದೆ...
ಪ್ರೋತ್ಸಾಹಕ್ಕೆ ಧನ್ಯವಾದಗಳು....
Post a Comment