Tuesday, February 24, 2009

ಅವರವರ ..ಭಾವದಲ್ಲಿ.. ಬಾನಿನ.. "ಭಾಸ್ಕರ"

"ತತ್ವಜ್ಞಾನಿ" ಕಣ್ಣಲ್ಲಿ... ರವಿ..

ಉದಯ ರವಿಗೆ ಎಷ್ಟು ಅಂದದ.. ಬಣ್ಣ
..?

ಅಸ್ತದಲ್ಲೂ ತುಂಬುವನು.. ಕಣ್ಣ
...!

ಸುಖ, ದುಃಖ ಒಂದೇ ಮಾಡಿದನು
...

ತಿಳಿದವರ ನಡೆಯೇ ಹಾಗಲ್ಲವೇನು
...?



"ಹೋರಾಟಗಾರ" (ರಾಜಕಾರಣಿ) ಕಣ್ಣಲ್ಲಿ... ದಿನಕರ..

ಆರಂಭದಲಿ ಹುರುಪು..., ಹೋರಾಟದ ರಂಗು..
ಸುತ್ತೆಲ್ಲ ಕೆಂಪೆರಚಿ..., ಭರವಸೆಯ ಗುಂಗು...
ಎಲ್ಲರ ಬದುಕಿಗೂ ಬಣ್ಣ ತುಂಬುತ್ತಾನೆ..
ಮೊಗ್ಗನರಳಿಸುತ್ತಾನೆ.. , ಹಿಗ್ಗ ಚೆಲ್ಲುತ್ತಾನೆ...
ನಮ್ಮ ನಾಯಕನಾಗುತ್ತಾನೆ..

ತಂಪಾಗಿರುವವರ ಕಿಡಕಿಯಲಿ.. ನುಗ್ಗಿ..
ಅವರ ಶೀತ ಬಿಡಿಸುತ್ತಾನೆ..
ಮೇಲೆರಿದಂತೆ ಅಚ್ಚ ಬಿಳಿಯ ಹೊದಿಕೆ..
ಬಣ್ಣಗಳ ಕೈಬಿಟ್ಟ.. ಕೂಲಿಗಳ ಮೈಸುಟ್ಟ...

ಅಧಿಕಾರ ಕಳೆದು ಸಂಜೆ ಕೆಳಗಿಳಿದಾಗ..
ಮತ್ತೆ ಕೆಂಪನೆಯ ಮುಸುಕು...
ನೆಚ್ಚ ಬಾರದು ನೇಸರನ ಗೋಸುಂಬೆ ಥರದವನು
..!



"ಭಾಮಿನಿ" ಕಣ್ಣಲ್ಲಿ.. ಭಾಸ್ಕರ...


ಮುಂಜಾನೆ "ಉಷೆಯೊಡನೆ"
.....

ಬಣ್ಣ ಬಣ್ಣದ ಇನಿಯ...

ಸಂಜೆ ಮತ್ತದೇ ರಂಗು...

"ಸಂಧ್ಯೆ" ಇದ್ದಾಳೆ ಸನಿಹ....!



ಮಧ್ಯಾನ್ಹದಲಿ ನೋಡಲಾಗದು ಇವನ...

ಒಂಟಿ ನೇಸರ ಕುಕ್ಕುತ್ತಾನೆ ಕಣ್ಣ...

ಹೆಣ್ಣು ಬಳಿಯಲ್ಲಿರದಿದ್ದರೆ ಗಂಡು ಬದುಕಿಗೆ..

ಎಲ್ಲಿದೆ ಚೆಲುವು.., ಚಂದದ.. ಬಣ್ಣ..??!!

55 comments:

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ಬೊಂಬಾಟ್ ಆಗಿವೆ ಕವನಗಳು...
ಮೂರು ದೃಷ್ಟಿಕೋನದಲ್ಲಿ ಒಬ್ಬ ಸೂರ್ಯ, ಅಮೂರ್ತ ಪರಿಕಲ್ಪನೆ, ಸೊಗಸಾಗಿದೆ.
-ರಾಜೇಶ್ ಮಂಜುನಾಥ್

ಮಲ್ಲಿಕಾರ್ಜುನ.ಡಿ.ಜಿ. said...

ಅದೇ ನೇಸರ,ಸುಡು ಸುಡುವ ಸೂರ್ಯ,ಭಾಮಿನಿಯ ಭಾಸ್ಕರ,ಉದಯ ರವಿ... ಎಷ್ಟೊಂದು ಚಂದವಾಗಿ ಬರೆದಿರುವಿರಿ. ಹೀಗೂ ನೋಡಬಹುದು ಎಂದು ಸುಂದರವಾದ ಕವಿತೆಯಿಂದ ತೋರಿಸಿಕೊಟ್ತ ನಿಮಗೆ ಥ್ಯಾಂಕ್ಸ್...ಥ್ಯಾಂಕ್ಸ್...ಥ್ಯಾಂಕ್ಸ್...

Ittigecement said...

ರಾಜೇಶ್...

ತತ್ವಜ್ಞಾನಿ ಬದುಕಿನ ಸತ್ಯವನ್ನು ಸೂರ್ಯನಲ್ಲಿ ಕಾಣುತ್ತಾನೆ...
ಸೂರ್ಯೋದಯ ಸುಖವಾದರೆ,ಸೂರ್ಯಾಸ್ತ ಕಷ್ಟ..

ರಾಜಕೀಯದವ ಮಿಥ್ಯ ವನ್ನು ಕಾಣುತ್ತಾನೆ
ಸೂರ್ಯ "ಗೋಸುಂಬೆಯಂಥವ..
ಬಣ್ಣ ಬದಲಾಯಿಸುತ್ತಾನೆ..ಎಂದು..

ಹೆಣ್ಣು ಸೂರ್ಯನಲ್ಲಿ ಬದುಕನ್ನು ಕಾಣುತ್ತಾಳೆ..
ಮಧ್ಯಾಹ್ನದಲಿ ಸೂರ್ಯನ ಬಳಿ ಯಾರೂ ಇಲ್ಲವಲ್ಲ...
ಹೆಣ್ಣಿಲ್ಲದ ಗಂಡಿನ ಬಾಳು...ಎಂದೆಲ್ಲಾ
ಪ್ರಕ್ರತಿ- ಪುರುಷದ ಕಲ್ಪನೆ..

ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಗೊತ್ತಿಲ್ಲ..

ನಿಮ್ಮ ಪ್ರತಿಕ್ರಿಯೆ ನೋಡಿದರೆ ಸಂತೋಷವಾಗುತ್ತದೆ..
ಪ್ರೋತ್ಸಾಹ ಹೀಗೆಯೇ ಇರಲಿ

ಧನ್ಯವಾದಗಳು...

ಚಿತ್ರಾ ಸಂತೋಷ್ said...

ಪ್ರಕಾಶ್ ಸರ್..ಬೊಂಬಾಟ್ ಕವನ.ಡಿಫರೆಂಟು ..ಪ್ರಕಾಶ್ ಸರ್ ಕವನನೂ ಬರೀತಾರ? ನಂಗೆ ಗೊತ್ತೇ ಇರಲಿಲ್ಲ.
ಅವರವರ ಭಾವದಲ್ಲಿ ..ಬಾನಿನ 'ಭಾಸ್ಕರ' ಎನ್ನುತ್ತಲೇ ..ನಮ್ಮೊಳಗಿನ ಭಾವದ ಭಾವದ 'ಭಾಸ್ಕರ'ನನ್ನೂ ತೋರಿಸಿಬಿಟ್ಟಿರಿ. ಒಳ್ಳೆ ಕಲ್ಪನೆ....
-ಚಿತ್ರಾ

PARAANJAPE K.N. said...

ಪ್ರಕಾಶರೇ,
ದಿನಕರನ ದಿನಚರಿಯನ್ನು ವಿಭಿನ್ನ ವ್ಯಕ್ತಿತ್ವಗಳ ದೃಷ್ಟಿಕೋನದಲ್ಲಿ ಕಾವ್ಯವಾಗಿಸಿದ್ದಿರಿ. ಕಲ್ಪನೆ ವಿಶಿಷ್ಟವಾಗಿದೆ. ಕವನ ಚೆನ್ನಾಗಿದೆ.

shivu.k said...

ಪ್ರಕಾಶ್ ಸರ್,

ಒಬ್ಬ ನೇಸರ ಮೂರು ವಿಭಿನ್ನ ಜನರ ಕಣ್ಣಿಗೆ....ಮನಸ್ಸಿಗೆ.. ಹೇಗೆ ಮೂಡುತ್ತಾನೆ ಅನ್ನುವುದನ್ನು ಸುಂದರವಾಗಿ ಕವನಗಳಲ್ಲಿ ವರ್ಣಿಸಿದ್ದೀರಿ.....
ನೇಸರ,ಸುಡು ಸುಡುವ ಸೂರ್ಯ,ಭಾಮಿನಿಯ ಭಾಸ್ಕರ,ಉದಯ ರವಿ... ಇವೆಲ್ಲಾ ರೂಪಕಗಳು ಕವನಕ್ಕೆ ಪೂರಕವಾಗಿವೆ...

ಛಾಯಾಗ್ರಹಕನ ಕಣ್ಣಿಗೆ... ಮನಸ್ಸಿಗೆ ... ನೇಸರ ಹೇಗೆ ಕಾಣುತ್ತಾನೆಂದು ಒಂದೆರಡು ಪದ ಪ್ರಯೋಗವಾಗಿದ್ದರೆ ಚೆನ್ನಾಗಿತ್ತು... ಅನ್ನೋದು ನನ್ನ ಅನಿಸಿಕೆ[ಸ್ವಾರ್ಥ]

Prashant said...

hey mama...why have u not written the views of a man of watching the sunrise/set...do write that also

Unknown said...

One of my close friend suggested to read your blog,then I have visited 1st time,really you are good in writing.I have noticed one thing that,the way of your writing skill is very similar to Mr.Ravi Belegere.I am the fan of Belegere.Now that "fan"giri is shifted upon you.I am very enjoying to read your blog.
I know that you are a good "heartist"and also I know about you one thing is you are a good "artist" too? Let me confirm Please tell me yes or no!!!!!
{Khushwant Pune}

ಶಿವಪ್ರಕಾಶ್ said...

Nice one prakash..

ತೇಜಸ್ವಿನಿ ಹೆಗಡೆ said...

ಪ್ರಕಾಶಣ್ಣ,

"ನೆಚ್ಚ ಬಾರದು ನೇಸರನ ಗೋಸುಂಬೆ ಥರದವನು..!"

ಈ ವಾಕ್ಯ ತುಂಬಾ ಅಚ್ಚರಿ ತಂದಿತು. ಈವರೆಗೆ ನೇಸರನ ಕುರಿತು ಈ ಉಪಮೆ ಬಳಸಿದ್ದನ್ನು ನಾ ಕಾಣೆ. ಎಲ್ಲಿಯ ನೇಸರ ಎಲ್ಲಿಯ ಗೋಸುಂಬೆ!! ನಿಜಕ್ಕೂ ನಿಮ್ಮ ಕಲ್ಪನೆ ಮೆಚ್ಚುಗೆಯಾಯಿತು. ಅದಕ್ಕೇ ತಾನೆ ಹೇಳಿದ್ದು ರವಿ ಕಾಣದ್ದು ಕವಿಕಂಡ ಎಂದು..:) ಕವನ ಚೆನ್ನಾಗಿದೆ.

Unknown said...

super ..!!!!!!! excelent..
now i read all the posts ..every article is nice... words are excelent...

Ittigecement said...

ಮಲ್ಲಿಕಾರ್ಜುನ್..

ಕಲ್ಪನೆಗೆ ಎಲ್ಲೆಯುಂಟೆ..?

ನಿಜ ಹೇಳ ಬೇಕೆಂದರೆ ಈ ಕವನ ಇನ್ನೂ ಇತ್ತು..

ಓದುಗರಿಗೆ ಬೇಸರ ಬಂದೀತೆಂದು

ಮೂರೇ ಕಲ್ಪನೆ ಹಾಕಿದೆ..

ನೀವು ಭಾಸ್ಕರನನ್ನು ಇಷ್ಟಪಟ್ಟಿದ್ದು ಖುಷಿಯಾಯಿತು..

ನಿಮ್ಮ ಬ್ಲಾಗ್ ವೈವಿದ್ಯಮಯವಾಗಿದೆ

ಅಭಿನಂದನೆಗಳು..

Ittigecement said...

ಚಿತ್ರಾ..

ನಾನು ಹೈಸ್ಕೂಲಿಗೆ ಹೋಗುವಾಗ..
ನನಗೆ "ಗಣಿತ" "ಎಂದರೆ ಕಬ್ಬಿಣ ಕಡಲೆಯಾಗಿತ್ತು

"ಗಣಿತ" "ತಗಣಿ"

ಎಂದು ಒಂದು ಕವನ ಬರೆದು..
ಗಣಿತದ ಮೇಷ್ಟ್ರ ಬಳಿ ಉಗಿಸಿಕೊಂಡಿದ್ದೆ..

ನನ್ನ ಕಲ್ಪನೆ ಇಷ್ಟವಾಗಿದ್ದಕ್ಕೆ
ಹ್ರದಯ ಪೂರ್ವಕ ವಂದನೆಗಳು...

Ittigecement said...

ಪರಾಂಜಪೆಯವರೆ..

ದಿನಕರನ ಕವನ ಇಷ್ಟವಾಗಿದ್ದು ಬಹಳ ಸಂತೋಷವಾಯಿತು..

ಈ ರಾಜಕೀಯದವರನ್ನು ನೋಡಿ..
ಎಲ್ಲಿ ಬೇಕಾದರೂ "ತಪ್ಪು, ದೋಷ" ಹುಡುಕುತ್ತಾರೆ..

ಸೂರ್ಯನಲ್ಲೂ "ಗೋಸುಂಬೆ" ತನವನ್ನು ಕಂಡ ಕಲ್ಪನೆ...

ಇಷ್ಟವಾಗಿದ್ದಕ್ಕೆ
ಧನ್ಯವಾದಗಳು..

Vani Satish said...

Nice....nice...nice...
Baanina Bhaskarana,
Bhaavadali baredu,
Bhaavageeteya teradi,
Belakina Paradeyali,
Banna Balida Chitradante,
..............Bannisiruve!!!!!

NiTiN Muttige said...

avaravara bhaava... tumba ishta aatu....

Sunil Mallenahalli said...

Avana Banna..tumbuvudu namma kanna..haa haa nimma kalpane sooper. nimma kavanagala maale chennagide...

Sunil Mallenahalli

Geetha said...

ಸರ್ ತುಂಬ ಚೆನ್ನಾಗಿದೆ ಕವನ. ಫೊಟೋ ಕೂಡ ಚೆನ್ನಾಗಿದೆ.ರಾಜಕಾರಣಿ ಕಣ್ಣಲ್ಲಿ ಸೂರ್ಯನ್ನ ಬಣ್ಣಿಸಿರೋದು ತುಂಬ ವಿಭಿನ್ನವಾಗಿದೆ!!..ಸೂರ್ಯ - ಗೋಸುಂಬೆ!! ಹಹಹ

ನಿಮ್ಮ ಕವನ ಸ್ಕೂಲಲ್ಲಿ ಓದಿದ ’ದಿನಕರ ದೇಸಾಯಿ’ಅವರ ಚುಟುಕ ನೆನಪಿಸಿತು -- "ಅವರವರ ಮನದಂತೆ ದೃಷ್ಟಿಯು ಬೇರೆ, ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ, ಚಿಕ್ಕ ಮಕ್ಕಳಿಗೆ ಶಶಿ ಬಾಂದಳದ ಚಂಡು, ವಿಜ್ಞಾನಿಗಳಿಗೆಲ್ಲ ಬರಿ ಕಲ್ಲು ಗುಂಡು!"

Ittigecement said...

ಶಿವುಸರ್..

ನಾನು ನಿಮ್ಮ ಥರಹದ ಫೋಟೊಗ್ರಾಫರ್ ಆಗಿದ್ದಲ್ಲಿ..
ನೀವು ಹೇಳಿದ ಪ್ರಯತ್ನ ಮಾಡಿ ಬಿಡುತ್ತಿದ್ದೇನೇನೊ...

ಒಳ್ಳೆಯ ಸಲಹೆ..

ಹಾಗೆ ಮಾಡಿದ್ದರೆ ಇನ್ನೂ ಚೆನ್ನಾಗಿರುತಿತ್ತು...

ಕವನದ ಕಲ್ಪನೆಯ ಮಹತ್ವ ಇಷ್ಟು ಇರುತ್ತಿರಲಿಲ್ಲವೇನೋ..

ನನ್ನ ಕಲ್ಪನೆ ನೀವು ಇಷ್ಟ ಪಟ್ಟಿದ್ದು...
ತುಂಬಾ ಸಂತೋಷವಾಯಿತು..

ಧನ್ಯವಾದಗಳು...

Ittigecement said...

ಪ್ರಾಶಾಂತು...

ಗಂಡಸರಿನ ಅನಿಸಿಕೆ...

ಮುಂಜಾವಿನ ನಿಶೆಗೆ ಉಷೆ ಇದ್ದಾಳೆ..
ಸಂಜೆಯ ಸಂಧ್ಯಾ ಚಂದವಿದ್ದಾಳೆ..

ಮಧ್ಯಾಹ್ನ..ತಂಪಾಗಿಸಲು.. ಮನದನ್ನೆಯೇಕೆ ಇಲ್ಲ.....?

ಸಣ್ಣವಯಸ್ಸು ..
ನಿನಗೆ ಅರ್ಥವಾಯಿತಾ...?

Ittigecement said...

ಖುಷಿ ...

ನೀವು ನನ್ನ ಬ್ಲಾಗಿಗೆ ಬಂದಿದ್ದು..
ಇಷ್ಟ ಪಟ್ಟಿದ್ದು .. ನನಗೂ ಖುಷಿಯಾಯಿತು.

ನನ್ನ ಮಡದಿಯವರಿಗೆ ಸ್ವಲ್ಪ ಹೊಟ್ಟೆ ಉರಿಯಾಯಿತೇನೋ..
ಹೇಳಲಿಲ್ಲ...

ರವಿ ಬೆಳಗೆರೆ ಬಹಳ ದೊಡ್ಡ ಹೆಸರು.. ಶಕ್ತಿ..
ಅವರಿಗೆ ಅವರೆ ಸಾಟಿ..

ನಾನು ಬೆಳಗೆರೆಯವರ ಅಭಿಮಾನಿ..
ಅವರು ಹಾಗೂ ಲಂಕೇಶ್ ನನಗೆ ಇಷ್ಟ
ಅವರಿಬ್ಬರ ಪ್ರಭಾವ ನನ್ನ ಮೇಲೆ ಅಗಿರಬಹುದು..

ನನಗೆ ಎಸ್.ಎಲ್. ಭೈರಪ್ಪ, ಕಾರಂತಜ್ಜ ಅಂದರೆ ಬಹಳ ಬಹಳ ಇಷ್ಟ..

ನಾನು ಸಣ್ಣವನಿದ್ದಾಗ ಚಿತ್ರ ಚೆನ್ನಾಗಿ ಬಿಡಿಸುತ್ತಿದ್ದೆ..
ನನಗೆ ಕಲಾಕಾರ ಆಗಬೇಕೆಂದು ಬಹಳ ಆಸೆ ಇತ್ತು...

ಅದರಿಂದ ಹೊಟ್ಟೆ ತುಂಬಿಸಿಕೊಂಡವರು ಕಡಿಮೆ..
ಎಂದು ನನ್ನ ಚಿಕ್ಕಪ್ಪ ಸೈನ್ಸ್ ಗೆ ಕಳಿಸಿದರು...

ಅದನ್ನೂ ಮಾಡದೆ ಆರ್ಟ್ಸ್ ನಲ್ಲಿ ಫೇಲ್ ಆಗಿ..
ಮುಂದೆ ಹೀಗಾದದ್ದು ಇತಿಹಾಸ...

ಇರಲಿ...

ನನ್ನ ಬ್ಲಾಗ್ ಓದಿ ಎಂದು ಹೇಳಿದ ನಿಮ್ಮ

ಸ್ನೇಹಿತರು ಯಾರು..?

ನಿಮ್ಮ ಅಭಿಮಾನ.. ಪ್ರೋತ್ಸಾಹ ಹೀಗೆಯೇ ಇರಲಿ..

ಬಂದು ಪ್ರತಿಕ್ರಿಯೆ ಕೊಡುತ್ತಿರಿ...
ಧನ್ಯವಾದಗಳು...

Ittigecement said...

ಶಿವಪ್ರಕಾಶ್..

ನಿಮ್ಮ ಈ ಸಾರಿಯ ಕಥನ ಬಹಳ ಚೆನ್ನಾಗಿದೆ..
ನನ್ನ "ನನಗೊಂದು ಮಹದಾಸೆ " ನೆನಪಾಯಿತು..

ಪ್ರತಿಕ್ರಿಯೆಗೆ ವಂದನೆಗಳು..

Ittigecement said...

ತೇಜಸ್ವಿನಿ...

ಅಂತೂ ನನ್ನನ್ನೂ ಕವಿ ಮಾಡಿಬಿಟ್ಟಿದ್ದೀರಿ...

ಆದರೆ ನಿಮ್ಮಷ್ಟು,.. ಆಳವಾಗಿ..
ಅರ್ಥಗರ್ಭಿತವಾಗಿ ಬರೆಯಲು ಬರುವದಿಲ್ಲ
ಹೊಟ್ಟೆಕಿಚ್ಚು ಇದೆ...

ನನ್ನ ಕಲ್ಪನೆ ಇಷ್ಟವಾದದ್ದು ಖುಷಿಯಾಯಿತು...

ಇಂಥಹ ಎಡವಟ್ಟು ಕಲ್ಪನೆಗಳು ನನಗಿಷ್ಟ..

ಪ್ರತಿಕ್ರಿಯೆಗೆ ಹ್ರದಯ ಪೂರ್ವಕ ವಂದನೆಗಳು...

Ittigecement said...

ರೂಪಾ...

ನನ್ನ ಬ್ಲಾಗಿಗೆ ಸುಸ್ವಾಗತ..

ನೀವು ನನ್ನ ಕಥನಗಳನ್ನು ಇಷ್ಟ ಪಟ್ಟಿದ್ದು..
ಬಹಳ ಸಂತೋಷವಾಯಿತು...

ನಿಮ್ಮ ಅಭಿಮಾನ, ಪ್ರೋತ್ಸಾಹ ಹೀಗೆಯೇ ಇರಲಿ...

ಹೀಗೆಯೆ ಬರುತ್ತಿರಿ..

ಧನ್ಯವಾದಗಳು...

Ittigecement said...

ವಾಣಿಯವರೆ...

ನನ್ನ ಕವನಕ್ಕಿಂತ ನಿಮ್ಮ ಪ್ರತಿಕ್ರಿಯೆಯ
ಕವಿತೆ ಬಹಳ ಚಂದವಾಗಿದೆ...

ನಿಮ್ಮ ಬ್ಲಾಗ್ ಯಾವಾಗ ಶುರು ಮಾಡುವಿರಿ..?

ನಾವೆಲ್ಲ ಕಾಯುತ್ತಿದ್ದೇವೆ..!

ಚಂದವಾದ ಪ್ರತಿಕ್ರಿಯೆಗೆ

ಧನ್ಯವಾದಗಳು...

Ittigecement said...

ನಿತಿನ್..

ಹುಚ್ಚು ಮನಸ್ಸಿನ ಹುಚ್ಚು ಕಲ್ಪನೆಗಳು ಅನ್ನ ಬಹುದೇನೋ..
ಅಲ್ಲವಾ..?

ಇಷ್ಟಪಟ್ಟಿದ್ದಕ್ಕೆ, ಪ್ರತಿಕ್ರಿಯೆಗೆ
ಧನ್ಯವಾದಗಳು..

ಕೃಪಾ said...

super!!!!

Unknown said...

Oho!!Wonderfull!!
Please do not stop writing.
I am also a good reader.And I am also reading novels,books written by great writers like Bhairappa,Karant etc....in kannada.
our taste is same!!
{Khushwant Pune}

Anonymous said...

ಕವನ ತುಂಬಾ ಚೆನ್ನಾಗಿದೆ ಪ್ರಕಾಶಣ್ಣ.. ಹೀಗೇ ಬರೀತಿರಿ..

ಅಂತರ್ವಾಣಿ said...

neevobba vyakthi 3 bere thara yochise bariyodu hosa tara prayOga. chennagide.. munduvarisi kaviyaNNa

sunaath said...

ಹಾಯ್ ಪ್ರಕಾಶ,
ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎಂದು ಹೇಳುತ್ತಾರೆ. ರವಿ ಯಾವಯಾವ ತರಹಾ ಕಾಣುತ್ತಾನೆ ಎನ್ನುವ ಸುಂದರವಾದ ಕಲ್ಪನೆಯನ್ನು ಕವನರೂಪದಲ್ಲಿ ಹೇಳಿದ್ದೀರಿ. ಅಭಿನಂದನೆಗಳು.

ಯಾರದೋ ನಿರೀಕ್ಷೆಯಲ್ಲಿ said...
This comment has been removed by the author.
Anonymous said...

ಪ್ರಕಾಶಣ್ಣ
ಎಷ್ಟು ಚೆನ್ನಾಗಿ ವರ್ನಿಸಿದ್ದಿರ ನೇಸರನ ಬಗ್ಗೆ
ಅದರಲ್ಲೂ ರಾಜಕಾರಣಿ ನೇಸರನ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದೀರ

ಕ್ಷಣ... ಚಿಂತನೆ... said...

ಪ್ರಕಾಶ್ ಅವರೆ, ಫೋಟೋ ಮತ್ತು ಬರಹ ತುಂಬಾ ಚೆನ್ನಾಗಿದೆ.

ಮನಸು said...

ಪ್ರಕಾಶ್ ಸರ್,
ತತ್ವಜ್ಞಾನಿ, ಹೋರಾಟಗಾರ,ಭಾಮಿನಿ ಎಲ್ಲರ ಭಾವನೆ ನೀವು ತಿಳಿಸಿದಿರಿ ಆದರೆ ಸೀಮೆಂಟು ಮರಳಿನ ಮಧ್ಯೆ ಇರುವವರು ಯಾವ ಭಾವದಲ್ಲಿ ಹೇಳುತ್ತಾರೆ ಹೇಳಲಿಲ್ಲ...ಮುಂದೆ ಬರೆಯಿರಿ..
ನೇಸರನಿಗೆ ನಿಮ್ಮ ಸೀಮೆಂಟು ಸುಣ್ಣ ಬಣ್ಣದಿಂದ ಅಲಂಕಾರಗೂಳಿಸಿ,
ಕವನ ತುಂಬಾ ಚೆನ್ನಾಗಿದೆ.. ಬಹಳ ಇಷ್ಟವಾಯ್ತು ಎಲ್ಲರು ಅವರದೇ ತರಹದಲ್ಲಿ ಯೋಚಿಸುತ್ತಾರೆ, ಭಾವಿಸುತ್ತಾರೆ ನಿಜ.. ಹೀಗೆ ಹಲವು ಕವನ ಬರಲಿ... ನೀವು ಕವನ ಬರೆಯುತ್ತೀರಿ ಎಂದಾಯಿತು ಈಗ..ಮುಂದುವರಿಸಿ..

Umesh Balikai said...

ಪ್ರಕಾಶ್ ಸರ್,

ರವಿಯ ರಂಗಿನ ಸೊಬಗಿಗೆ ಮನಸೋಲದವರಾರು. ಚಂದ್ರನ ತಂಪು ಬೆಳಕಿನಷ್ಟೇ ಅಹ್ಲಾದಕರ ಅವನ ಮುಂಜಾವು ಮತ್ತು ಮುಸ್ಸಂಜೆಯ ಬೆಳಕಿನಾಟ.

ಹೆಣ್ಣು ಬಳಿಯಲ್ಲಿರದಿದ್ದರೆ ಗಂಡು ಬದುಕಿಗೆ..

ಎಲ್ಲಿದೆ ಚೆಲುವು.., ಚಂದದ.. ಬಣ್ಣ..??!!

ಆದರೆ, ಗಂಡು ಬಳಿ ಬಂದಾಗ ಹೆಣ್ಣಿನ ಕೆನ್ನೆಯೂ ಭಾಸ್ಕರನಂತೆ ಕೆಂಪಾಗುವುದಲ್ಲವೇ :)

Ittigecement said...

ಸುನಿಲ್ ...

ನಿಮ್ಮ ಬ್ಲಾಗ್ ಕೂಡ ಚೆನ್ನಾಗಿದೆ..
ಒಳ್ಳೆಯ ಅರ್ಥ ಪೂರ್ಣವಾಗಿರುವ ..
ಕವನ.. ಲೇಖನ ಬರೆಯುತ್ತೀರಿ...

ನನ್ನ ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು..

ಹೀಗೆ ಬರುತ್ತಾ ಇರಿ...

Ittigecement said...

ಗೀತಾ...

ನಿಮ್ಮ ಇಂಗ್ಲೀಷ್ ಕವನಗಳು ತುಂಬಾನೇ ಚೆನ್ನಾಗಿರುತ್ತವೆ...
ನನಗೆ ಆ ರೀತಿ ಬರೆಯಲು ಬರುವದಿಲ್ಲವಲ್ಲ...

ಈ ಕಲ್ಪನೆ .. ಕವನ ..
ನನಗೆ ಹೊಸದು..
ನಿಮ್ಮ ಮೆಚ್ಚುಗೆಗೆ
ಧನ್ಯವಾದಗಳು..

Ittigecement said...

ಕ್ರಪಾರವರೆ...

ನಿಮ್ಮ ಅಭಿಮಾನಕ್ಕೆ..
ವಿಶ್ವಾಸಕ್ಕೆ.. ಏನು ಹೇಳಬೇಕು ಗೊತ್ತಾಗುತ್ತಿಲ್ಲ..

ಅದಕ್ಕೆಲ್ಲ ನನಗೆ ಯೋಗ್ಯತೆ ಇದೆಯೇ ಎಂದೆಲ್ಲ ವಿಚಾರ ಬರುತ್ತದೆ...

ನೀವೆಲ್ಲ ಓದುವವರೆಗೆ ಬರೆಯುವೆ...

ನಿಮ್ಮ ಪ್ರೋತ್ಸಾಹ.. ಅಭಿಮಾನ
ಹೀಗೆಯೇ ಇರಲಿ..
ನೀವು ಈ ಸಾರಿ ಇಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದು ತುಂಬಾ ಖುಷಿಯಾಯಿತು..

ಹೀಗೆ ಬರುತ್ತಾ ಇರಿ..

ಹ್ರದಯ ಪೂರ್ವಕ ವಂದನೆಗಳು

Ittigecement said...

ಖುಷಿ...

ತುಂಬಾ ಸಂತೋಷ...

ನೀವು ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ..

ಪ್ರೋತ್ಸಾಹ.., ಅಭಿಮಾನ ಹೀಗೆಯೇ ಇರಲಿ...

ಧನ್ಯವಾದಗಳು...

Ittigecement said...

ಜ್ಯೋತಿಯವರೆ...

ನೀವು ನನ್ನ ಕಲ್ಪನೆ ಮೆಚ್ಚಿದ್ದಕ್ಕೆ..
ಹ್ರದಯ ಪೂರ್ವಕ
ಧನ್ಯವಾದಗಳು..

ಹೀಗೆಯೆ ಬರುತ್ತಾ ಇರಿ...

Ittigecement said...

ಅಂತರ್ವಾಣಿ...

ಇಲ್ಲಿ ಒಟ್ಟು ಆರು ಕಲ್ಪನೆ ಗಳಿದ್ದವು..
ಬೋರ್ ಆಗಿಬಿಡುತ್ತದೆಂದು ಮೂರಕ್ಕೆ ಇಳಿಸಲಾಯಿತು..

ನನಗೆ ಇದೆಲ್ಲ ಹೊಸದು..

ನಿಮ್ಮಷ್ಟು ಚೆನ್ನಾಗಿ ಆಳವಾಗಿ..
ಸಹಿತ್ಯಪೂರ್ಣವಾಗಿ..
ಬರೆತಲು ಬರುವದಿಲ್ಲ...

ನಿಮ್ಮ ಮೆಚ್ಚುಗೆಗೆ

ಧನ್ಯವಾದಗಳು...

Ittigecement said...

ಸುನಾಥ ಸರ್..

ನಿಮಗೆಲ್ಲಿ ಬೇಸರವಾಅಯಿತೇನೋ ಅಂದು ಕೊಂಡುಬಿಟ್ಟಿದ್ದೆ..

ಶಾಂತಲಾ ಭಂಡಿ ಬರೆದ ಕವನ ..
ಓದಿ ಸ್ಪೂರ್ತಿಯಿಂದ ..
ಈ ಕವನ ಬರೆದೆ...

ಸರ್..
ಧನ್ಯವಾದಗಳು..

Ittigecement said...

ಭಾವನ ಲಹರಿ..

ನಿಮ್ಮ ಬ್ಲಾಗಿನಲ್ಲಿ ನೀವು ಬರೆದ ಕಥೆಗೆ ಪ್ರತಿಕೆ ಕೊಡಲು ಆಗುತ್ತಿಲ್ಲ..
ಏಕೆಂದು ಗೊತ್ತಾಗುತ್ತಿಲ್ಲ.

ರಾಜಕೀಯದವರೇಕೆ ಹೀಗಿರುತ್ತಾರೆ..?
ಹೀಗೆ ಇರಬೇಕು..?
ಅಲ್ಲವಾ..?

ನಿಮ್ಮ ಮೆಚ್ಚುಗೆಗೆ

ಧನ್ಯವಾದಗಳು..

Ittigecement said...

ಕ್ಷಣ ಚಿಂತನೆ...

ಪ್ರತಿಕ್ರಿಯೆಗೆ ಧನ್ಯವದಗಳು..
ಹೀಗೆ ಬರುತ್ತಾ ಇರಿ..

Ittigecement said...

ಮನಸು...

ನನ್ನ ಕವಿತೆಗಿಂತ ನಿಮ್ಮ ಪ್ರತಿಕ್ರಿಯೆಯೇ ಚಂದವಾಗಿದೆ ಅನಿಸುತ್ತದೆ..

ಆರ್ಥಿಕ ಮುಗ್ಗಟ್ಟು ಬೇಡ..
ಎಲ್ಲೆಡೆ ಸಮ್ರುದ್ಧಿಯಿರಲಿ..
ಮಳೆ ಬೇಡ..
ನೀರು ಇರಲಿ..
ಬಿಸಿಲು ಇರಲಿ..
ಸುಡು ಬಿಸಿಲು ಬೇಡ..
ಇಟ್ಟಿಗೆ ಸಿಮೆಂಟಿನ ಕೆಲಸ ಅನುಗಾಲವೂ ನಡೆದಿರಲಿ..
ಎಲ್ಲರ ಮನೆಯಲ್ಲೂ..

ಹ್ಹಾ..ಹ್ಹಾ!..

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಉಮೀ...

ನಿಮ್ಮ ಕಲ್ಪನೆಯೂ ಸೊಗಸಾಗಿದೆ..

ನೀವೂ ಕವಿತೆ ಬರೆಯಿರಿ..
ನನ್ನ ಕಲ್ಪನೆ ಮೆಚ್ಚಿದ್ದಕ್ಕೆ
ಧನ್ಯವಾದಗಳು...

Greeshma said...

ಸಕ್ಕತ್ ಪ್ರಕಾಶಣ್ಣ!!!
ಇಟ್ಟಿಗೆ ಸಿಮೆಂಟ್ ದೃಷ್ಟಿಕೋನದ ಕವನನೂ ತುಂಬಾ ಚೆನಾಗಿದೆ :)

Ittigecement said...

ಗ್ರೀಷ್ಮಾ...

ರಜಕುಮಾರ್ ಹಾಡಿದ ಹಾಡೊಂದು ನೆನಪಾಗುತ್ತಿದೆ..
"ಬರೆದುದು ಎಲ್ಲ ಕವನವೇ ಆದರೆ..
ಕವಿಗಳಿಗೆಂಥಾ ಸೊಗಸು...!"

ಬರೆದುದು ಎಲ್ಲ ಮೆಚ್ಚುವ ಓದುಗರಿದ್ದರೆ..?

ಕವಿ ಮನಸು...
ಕನಸು ..
ಕಲ್ಪನೆಗಳೇ ಚಂದ..

ಅಲ್ಲವಾ..?

ಪ್ರತಿಕ್ರಿಯೆಗೆ ವಂದನೆಗಳು...

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಹಿಂದೊಮ್ಮೆ ನೀವು ಬರೆದ‘ಉಗ್ರಗಾಮಿ’ ಕವನವೂ ತುಂಬ ಇಷ್ಟವಾಗಿತ್ತು.
ಈ ಕವನದಲ್ಲೂ ಎಲ್ಲ ಸಾಲುಗಳೂ ಚೆಂದವೇ. ಅದರಲ್ಲೂ ಹೋರಾಟಗಾರರ ಕಣ್ಣಲ್ಲಿ ದಿನಕರನ ಬಣ್ಣಗಳು, ಅದ್ಭುತ ಕಲ್ಪನೆಯೇ ಸರಿ. ತುಂಬ ಚೆನ್ನಾಗಿ ಬರೆದಿದ್ದೀರಿ.

ನನ್ನ ಕಾಲೇಜಿನ ದಿನಗಳಲ್ಲಿ ಜೇನುಕಲ್ಲುಗುಡ್ಡಕ್ಕೆ ಹೋಗಿಬಂದ ದಿನ ನಾ ಬರೆದ ಸಾಲುಗಳು ನೆನಪಾದವು.

ಚೆಂದದ ಕಲ್ಪನೆಗೆ, ಸುಂದರ ಸಾಲುಗಳಿಗೆ ಧನ್ಯವಾದ.

Ittigecement said...

ಶಾಂತಲಾ...

ನಿಜ ಹೇಳಬೇಕೆಂದರೆ ನೀವು ಬರೆದ "ಅಪ್ಪನ"
ಕವನ ನನಗೆ ಸ್ಪೂರ್ತಿಯಾಗಿದೆ...

ಇದು ಕವನ ಬರೆಯುವ ಪ್ರಯತ್ನ....

ಹುಚ್ಚು ಮನಸ್ಸಿನ "ವಿಚಿತ್ರ ಕಲ್ಪನೆಗಳು"

ಇಷ್ಟವಾಯಿತಲ್ಲ...!

ಖುಷಿಯಾಯಿತು..

ಪ್ರೋತ್ಸಾಹ ಹೀಗೆಯೇ ಇರಲಿ...

ನಿಮ್ಮ ಲೇಖನ
ಕವನಗಳು..

ಯಾರಿಗಾದರೂ ಸ್ಪೂರ್ತಿಕೊಡುವಂತಿರುತ್ತದೆ..

ಧನ್ಯವಾದಗಳು...

Chandrika said...

chappALe!
ati suMdara!

Ittigecement said...

ಚಂದ್ರಿಕಾ..

ಕವನ..
ಇಷ್ಟವಾಗಿದ್ದಕ್ಕೆ..

ಖುಷಿಯಾಯಿತು..

ಧನ್ಯವಾದಗಳು..!

ಹೀಗೆ ಪ್ರೋತ್ಸಾಹವಿರಲಿ

Ranjita said...

ಹಾಯ್ ಪ್ರಕಾಶಣ್ಣ , ಸಕತ್ ಇದ್ದು ಕವನ .. ತುಂಬಾ ಇಸ್ಟಾ ಆತು ...

Ittigecement said...

ರಂಜಿತಾ..

ಕವನ ಮೆಚ್ಚಿದ್ದಕ್ಕೆ

ಧನ್ಯವಾದಗಳು...