Friday, February 6, 2009

" ಚೇತನಾ.." ನನ್ನೆಡೇಗೇ..... ಬರುತ್ತಿದ್ದಳು...!!

ಸಂಬಂಧಗಳಿಗೆ ಹೆಸರು ಬೇಕಾ..? ಅದರಲ್ಲೂ ಗಂಡು ಹೆಣ್ಣಿನ ಸಂಬಂಧಗಳಿಗೆ....?

ಕೆಟ್ಟ ಭಾವನೆಗಳಿಲ್ಲದೆ..

ಒಂದು ಒಳ್ಳೆಯ ... ಭಾವನಾತ್ಮಕ ಸಂಬಂಧ.. ಇರಬಾರದೇ..?

ನಾನು ಕಾಲೇಜಿನಲ್ಲಿರುವಾಗ ಈ ಪ್ರಶ್ನೆ ಬಹಳ ಕಾಡಿದೆ...

ಹೆಣ್ಣು ಮಕ್ಕಳ ಸಂಗಡ ಸಂಕೋಚವಾಗಿರುತ್ತಿದ್ದೆ..

ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ.ಮಿಮಿಕ್ರಿಯಗಳಲ್ಲಿ ಭಾಗ ವಹಿಸುತ್ತಿದ್ದೆ..

ಹರುಕು, ಮುರುಕು ಜೋಕು ಮಾಡುತ್ತಿದ್ದೆ...

ಸಹಜವಾಗಿ ಕಾಲೇಜಿನಲ್ಲಿ ಎದ್ದು ಕಾಣುತ್ತಿದ್ದೆ...

ಇದೇ ಸಮಸ್ಯೆ ಆಯಿತು...

ಗೆಳೆಯರೂ ಏನೆಂದರೂ ಬೇಜಾರು ಇರುತ್ತಿರಲಿಲ್ಲ...
ಕ್ಲಾಸಿನ ಹುಡುಗಿಯರು.."ಅಣ್ಣ... ಪ್ರಕಾಶಣ್ಣ.." ಅನ್ನುತ್ತಿದ್ದರು..

ಅನ್ನಲಿ ಬಿಡಿ..

ಆದರೆ ಕೆಲವು ಚಂದದ ಮುಖಗಳು ಹಾಗಂದಾಗ ಬೇಜಾರಾಗುತ್ತಿತ್ತು...

ನನಗೆ ಚಂದ ಕಾಣುವ ಮುಖಗಳು...

ಅಂದದ ಕಣ್ಣುಗಳು...ಹಾಗೆಂದು ಬಿಟ್ಟರೆ,,,?

ಏನುಮಾಡುವದು..?

ಇಡೀ ಕಾಲೇಜಿಗೆ ಸಾರ್ವತ್ರಿಕವಾಗಿ "ಪ್ರಕಾಶಣ್ಣನಾಗಿ " ಹೋಗಿದ್ದೆ...

"ಚೇತನಾ.." ನನಗೆ ಚಂದ ಕಾಣುತ್ತಿದ್ದಳು...

ಹೊಸದಾಗಿ ಕಾಲೇಜಿಗೆ ಬಂದಿದ್ದಳು... ಕಪ್ಪಗಿದ್ದಳು..

ಕಣ್ಣುಗಳು ಬಹಳ ಚಂದವಾಗಿ.. ಮಾತಾಡುತ್ತಿದ್ದವು...

ಮಾತಾಡಲು ಅವಕಾಶವಾಗಲಿಲ್ಲ...

ರಕ್ಷಾಬಂಧನ ಹತ್ತಿರ ಬರುತ್ತಿತ್ತು....

ಇವಳೂ "ಪ್ರಕಾಶಣ್ಣ " ಅಂದು ಬಿಟ್ಟರೆ...?

ಭಾವ .. ಸಂಬಂಧಕ್ಕೆ ಹೆಸರು ಬೇಕೇ ಬೇಕಾ..?

ಕೆಟ್ಟ ಭಾವನೆಗಳಿಲ್ಲದ.. "ಗೆಳೆಯ.. ಗೆಳತಿ" ಸಂಬಂಧ ಇರಬರದಾ..?

ಕೆಲವರ ಸಂಗಡವಾದರೂ ಒಳ್ಳೆಯ.. "ಗೆಳೆತನ" ಇರಬಹುದಲ್ಲ..!!

ತಂಗಿಯರೊಡನೆ ಮಾತಾಡುವದೆ ಬೇರೆ...
ಗೆಳೆಯರೊಡನೆ ಮಾತಾಡುವದೆ ಬೇರೆ..

ಹಳ್ಳಿ ಕಾಲೇಜು.. ಹೆಣ್ಣು ಮಕ್ಕಳ ಸಂಗಡ "ಗೆಳೆತನದ ಕಲ್ಪನೆ" ಅಲ್ಲಿ ಇರಲಿಲ್ಲ...

ಫ್ರೀಯಾಗಿ.."ಗೆಳೆಯ..,ಗೆಳತಿಯರೊಡನೆ " ಹರಟೆ.. " ಬೇಕು...

ನಗಬೇಕು.. ಜೋಕು ಹೇಳಿಕೊಳ್ಳಬೇಕು...

ಅದು ಆ ಹಳ್ಳಿ ಕಾಲೇಜಿನಲ್ಲಿ ಹೇಗೆ ಸಾಧ್ಯ..?

ಅಪಾರ್ಥದ " ಕಣ್ಣುಗಳು " ಹಿಂದೆಯೇ ಇರುತ್ತಿತ್ತು...

ನನ್ನ ಸಮಸ್ಯೆಗಳಿಗೆ.. ನಾಗುವೇ ಪರಿಹಾರ ಕೊಡಬಲ್ಲ...!

"ನೋಡೊ .. ಈ.. ಚೇತನಾನೂ " ಪ್ರಕಾಶಣ್ಣ " ಅಂದು ಬಿಟ್ಟರೆ.. ಸಮಸ್ಯೆ ಕಣೊ.."

ನನ್ನ ಚಡಪಡಿಕೆ ಹೇಳಿಕೊಂಡೆ...

""ಏನೋ.. ಏನಾದಳೊ..ನಿನ್ನ ... ವಿಜಯಾ..?"

ಛೇ ..ಹಾಗಲ್ಲವೊ...ಎಲ್ಲರ ಸಂಗಡನೂ ಲವ್ವು ಅಲ್ಲವೊ.. ಗೆಳೆತನ ಇರಬಾರದೇನೊ...?

ನನಗೆ ನಿನ್ನ ಥರ ಒಬ್ಬ " ಗೆಳತಿ " ಬೇಕು ಕಣೋ...

ಇವಳೂ ಪ್ರಕಾಶಣ್ಣ ಅಂದು ಬಿಟ್ಟರೆ.. ಕಷ್ಟ ..

ಲೋ ಹನುಮಂತ ಅರ್ಥ ಮಾಡಿಕೊ... ಮಾರಾಯಾ..!

ಕಂಡ ಕಂಡ ಹೆಣ್ಣು ಮಕ್ಕಳೆಲ್ಲ ಪ್ರಕಾಶಣ್ಣ.. ಪ್ರಕಾಶಣ್ಣ ... ಹೇಳ್ತಾರಲ್ಲೋ...

ನಾನು ಪ್ರೀತಿ ಮಾಡೋದು " ವಿಜಯಾ " ಮಾತ್ರಾ.....

ಒಂದು ಹುಡುಗಿ.. ಗೆಳೆತನ ಬೇಕು ಕಣೊ..

" ಅಣ್ಣಾ... " ಅಂದು ಬಿಟ್ಟರೆ ಹೇಗೆ ಫ್ರೀಯಾಗಿ ಮಾತಾಡಲೊ.."


"ನಿನಗೆ ಅವರ ಹತ್ರ.. ಕೆಟ್ಟ.... ಕೆಟ್ಟ .. ಮಾತಾಡಬೇಕೇನೋ.. ???.."


ಛೆ... ಖಂಡಿತಾ ಇಲ್ಲಪ್ಪಾ....

ಏನಪ್ಪಾ ನೀನು ನನ್ನ ಇಷ್ಟೇ.. ಅರ್ಥ ಮಾಡ್ಕೊಂಡಿದಿಯಾ..?

ಏನೇ ಆದರೂ ..ಆ ಹೆಣ್ಣುಮಕ್ಕಳ ಸಂಗಡ ಇವಳೂ " ಪ್ರಕಾಶಣ್ಣ "...

ಅನ್ನಬಾರದು ಕಣೊ.."


" ಏನಪ್ಪಾ ಚೇತನಾ ನಿನ್ನ ಸಂಗಡ ನಿನ್ನ ಹೆಸರು ಹಿಡಿದು ಕರೆಯ ಬೇಕು . ..

ಅಷ್ಟೇ ತಾನೇ..?

ಸರಿ.. ಅವಳು ನಿನ್ನ ಹೆಸರು ಹಿಡಿದು ಕರೆಯುವ ಹಾಗೆ ಮಾಡ್ತೇನೆ.."

ಆದರೆ... ಆದರೆ.. !!.. "


" ಏನು ಆದರೆ..? ನಿರ್ಮಲಾ ಹೊಟೆಲ್ಲು..

ಲಕ್ಕಣ್ಣನ.. ಮಸಾಲೆ ಮಂಡಕ್ಕಿ ನನ್ನಿಂದ ಆಗಲ್ಲಪ್ಪಾ"


" ಅಲ್ಲ.., ನೀನು ಇಂದು ಸಾಯಂಕಾಲ ಊರಿಗೆ... ಹೋಗು..

ಎರಡು ದಿವಸ ಬಿಟ್ಟು ಬಾ..

ಇಲ್ಲಿ ನಾನು ಎಲ್ಲ " ಸರಿ " ಮಾಡ್ತೀನಿ.."


" ಬೆಳಗಾವಿ ಚರ್ಚ್ಚಾ ಸ್ಪರ್ಧೆಗೆ ನಾನು ಸಿಲೆಕ್ಟ್ ಆಗೊ ಭರವಸೆ .. ಇದೆ ಮಾರಾಯಾ.!..

ತಯಾರಿ ಮಾಡ್ಕೊ ..ಬೇಕು.... ರೂಮಿನಲ್ಲೇ ಇರ್ತಿನಿ..

ಏನೊ ನಿನ್ನ ಐಡಿಯಾ..? ನಾಗು.. ಏನು ಮಾಡ್ತೀಯೋ..?.."


" ಅದೆಲ್ಲ ಹೇಳಕ್ಕಾಗಲ್ಲ..
ನೀನು ದೆವಿಸರದಲ್ಲೇ... ತಯಾರಿ ಮಾಡ್ಕೊ..
ನನ್ನಲ್ಲಿ ಭರವಸೆ ಇಡು.. ಹೋಗಿ ಬಾ..ನಾನು " ಸರಿ " ಮಾಡ್ತೀನಿ.. "

ಮತ್ತೇನು..?... ನನಗೆ ಬೇರೆ ದಾರಿಯೇ ಇರಲಿಲ್ಲ...

ಸಾಯಂಕಾಲ ಊರಿಗೆ ಹೊರಟೆ...

ತಲೆಯಲ್ಲಿ ಒಂದೇ ವಿಚಾರ....

ಏನು ಮಾಡ್ತಾನೆ ಈ ನಾಗು..?

ಏನು ಮಾಡಬಹುದು..?... ಬಗೆಹರಿಯಲಿಲ್ಲ...

ಎರಡು ದಿನ ಬಿಟ್ಟು ... ಬಂದೆ...

ಬಸ್ಸಿಂದ ಇಳಿದೆ...

ಉಮಾಪತಿ, ತೆಂಗಿನಕಾಯಿ ಸಿಕ್ಕರು...

" ಪ್ರಕಾಶಣ್ಣ " ಯಾವಾಗ ಬಂದೆ..??? ?"

ವಿಚಿತ್ರವಾಗಿ ಕೇಳಿದರು...!!

".. ಲೋ.. ತೆಂಗಿನ ಕಾಯಿ ಏನಾಯ್ತೋ. ?..!!..

ನಿಮಗೆಲ್ಲ .. ನಾನ್ಯಾವಾಗ "ಪ್ರಕಾಶಣ್ಣ " ಆದನೋ..?"

ಅವರು ಉತ್ತರ ಕೊಡದೆ.. ಮುಸಿ ಮುಸಿ ನಗುತ್ತ.. ನಡೆದರು..

ಏನಾಗಿದೆ ಇವರಿಗೆ,,,.?

ನಾಗು ... ಎಲ್ಲೋ ಎಡವಟ್ಟು ಮಾಡಿದ್ದಾನೆ.. ಅನ್ನಿಸಿ ಬಿಡ್ತು...!

ಪೀರಿಯಡ್ ಸ್ಟಾರ್ಟ್ ಆಗಿಬಿಟ್ಟಿದ್ದವು..

ಕಾಲೇಜು ಪ್ರವೇಷಿಸುತ್ತಿದ್ದಂತೆ ಎಲ್ಲೆಲ್ಲೂ ನನ್ನ ಹೆಸರು..!

" ಪ್ರಕಾಶಣ್ಣ " ಬೆಳಗಾವಿಗೆ ಕಳಿಸಿ.."

ಪ್ರತಿಭೆಗೆ ಅನ್ಯಾಯ ಮಡಬೇಡಿ.."

ಪ್ರಕಾಶಣ್ಣನಿಗೆ ಅನ್ಯಾಯ ಮಾಡಬೇಡಿ.."

ಹಳ್ಳಿ ಪ್ರತಿಭೆ.. " ಪ್ರಕಾಶಣ್ಣ. ".!

" ಪ್ರಕಾಶಣ್ಣ.". ನಮ್ಮ.." ಪ್ರಕಾಶಣ್ಣ.."...!

ಪ್ರಕಾಶಣ್ಣ..ಪ್ರಕಾಶಣ್ಣ..ಗೆದ್ದು... ಬಾ.. ಪದಕ..!"

ಇಡೀ ಕಾಲೇಜಿನ ತುಂಬ ನನ್ನ ಹೆಸರೇ.. ಹೆಸರು...!

" ಪ್ರಕಾಶಣ್ಣ.. ಪ್ರಕಾಶಣ್ಣ...!!

ನನಗೆ ತಲೆ ಚಿಟ್ಟು ಹಿಡಿದು ಹೋಯಿತು....!

ಮಧ್ಯ ದಾರಿಯಲ್ಲೇ ನಾಗು ಸಿಕ್ಕಿದ...

ನನಗೆ ಅವನ ಕತ್ತು ಹಿಚುಕಿ.. ಸಾಯಿಸಿ... ಬಿಡಬೇಕು ಅನ್ನಿಸಿತು...!

"ಏನಪ್ಪ ಇದು ಎಲ್ಲಿ ನೋಡಿದ್ರೂ .. "ಪ್ರಕಾಶಣ್ಣ ,." ." ಪ್ರಕಾಶಣ್ಣ ".. ಅಂತ ಬರೆದಿದ್ದೀಯಾ..??

ಏನೋ ಇದು..?? ..?"

ನನಗೆ ಕೋಪದಿಂದ.. ಮೈಯೆಲ್ಲಾ ಉರಿಯುತ್ತಿತ್ತು....!

"ನಿನ್ನ ಹೆಸರು ಕಣೊ..! "ಪ್ರಕಾಶಣ್ಣ " ..!

ಏನು ಮಾಡ್ಲಿ. ." ೯೦% " ಹೆಣ್ಣು ಮಕ್ಕಳು ನಿಂಗೆ " ಪ್ರಕಾಶಣ್ಣ " ಅಂತಲೇ ಕರೆಯೋದು..

ಇದೇ ನಿನ್ನ ಹೆಸರು ಮಾಡ್ಕೋ....". ಪ್ರಕಾಶಣ್ಣ" ..!

ನಿನ್ನಹೆಸರೇ.. " ಪ್ರಕಾಶಣ್ಣ..." ಆದಮೇಲೆ ನಿಂಗೆಕೆ ಸಂಕೋಚ..?"


" ಅದು ಹೇಗೊ..? ಬೊಗೊಳೊ.. ಮೊದ್ಲು... "


" ನಿಮ್ಮ ಪಕ್ಕದ ಮನೆ ತಾತನ ಹೆಸರು ಏನೋ..?

"ಅಣ್ಣಣ್ಣ".. !

"ಅವರಿಗೇನಾದ್ರೂ ..." ಗೆಳತಿ " ಇದ್ದಿದ್ದ್ರೆ ಏನಂತ ಕರಿತಿದ್ರೋ?

" ಅಣ್ಣಣ್ಣ".. !

" ಆಗ ಯಾರದ್ರೂ ಅಪಾರ್ಥ ಮಾಡಿ .. ಕೊಳ್ಳುತ್ತಿದ್ದರೆನೋ...?

ತಾತನಿಗೂ ಏನು ಅನ್ನಿಸುತ್ತಿರಲಿಲ್ಲ...!

ನೆನಪಿಟ್ಟುಕೋ...

ಅವರ ಹೆಂಡತೀನೂ ಮನಸ್ಸಲ್ಲಿ "ಅಣ್ಣಣ್ಣ " ಅಂತಾನೇ ಹೇಳೋದು.."

ನೀನು ಚಿಂತೆ ಬಿಡೊ..".ಪ್ರಕಾಶಣ್ಣ"... ಅಂದ..!!

" ಎಡವಟ್ಟು... ನನ್ನ ಮಗನೆ... "...!

... ಹಲ್ಲಕಟ್ಟ... ನನ್ನ ಮಗನ್ನ ತಂದು..!!

ನನಗೆ ಕೋಪ ತಡಿಯಲಿಕ್ಕೆ ಆಗಲಿಲ್ಲ...

ನಾನು ನನ್ನ ಕೈಲಿದ್ದ ಬುಕ್ಸ್ ಅವನ ಮೇಲೆ ಬಲವಾಗಿ ಎಸೆದೆ...

ಆತ ತಪ್ಪಿಸಿಕೊಂಡು.. ಓಡಿದ..


ಲೈಬ್ರರಿಗೆ ಬಂದೆ ಮುಖ್ಯ ಲೈಬ್ರೈರಿಯನ್ " ಗೋಪಾಲಣ್ಣ " ಸಿಕ್ಕರು..

ನನಗೆ ಪುಕ್ಕಟೆ ಪುಸ್ತಕ ಕೊಟ್ಟು ಉಪಕಾರ ಮಾಡುತ್ತಿದ್ದರು..

ನಾನು "ನಮಸ್ಕಾರ " ಅಂದೆ

"ಕಂಗ್ರಾಟ್ಸ್ ಪ್ರಕಾಶಣ್ಣ.. "


ನನ್ನ ಮೈಗೆಲ್ಲ .. " ಬೆಂಕಿ "... ಹಚ್ಹ್ಚಿದಂತಾಯಿತು...!

ಮೊದ್ಲು ಹೆಣ್ಣು ಮಕ್ಕಳಷ್ಟೇ... ಹೇಳುತ್ತಿದ್ದರು..

ಈಗ ಇಡೀ ಕಾಲೇಜೆ ಹೇಳ್ತಾ ಇದೆ...!


" ಪ್ರಕಾಶಣ್ಣ... ನೀನು ಬೆಳಗಾವಿಗೆ ಚರ್ಚ ಸ್ಪರ್ಧೆಗೆ ಸಿಲೆಕ್ಟ ಆಗಿದ್ದೀಯಾ..

ಎಲ್ಲ ನಾಗುವಿನ ಕರಾಮತ್ತು..

ಅವನು ಕಾಲೇಜು ಮಕ್ಕಳನ್ನೆಲ್ಲ ಒಟ್ಟಿಗೆ ಸೇರಿಸಿ...

ಪ್ರಿನ್ಸಿಪಾಲರ ಬಳಿ "ಪ್ರಕಾಶಣ್ಣನ್ನನ್ನು.."

ಬೆಳಗಾವಿಗೆ ಕಳಿಸಿ ಅಂತ ಭಾಷಣ ಬಿಗಿದ..

ಅವರೂ ಒಪ್ಪಿದರು..

ಅಭಿನಂದನೆಗಳು. "ಪ್ರಕಾಶಣ್ಣ " .

ಗೆದ್ದು ಬಾಪ್ಪ.."

ಎಂದು ಹರಸಿದರು...

ನನಗೆ ನಗಬೇಕೋ.. ಖುಷಿ ಪಡಬೇಕೋ ಗೊತ್ತಾಗಲಿಲ್ಲ.....


ನನಗೆ ಕ್ಲಾಸಿಗೆ ಹೋಗಲು ಭಯವಾಯಿತು..!

ಏನು ಮಾಡಲಿ..?......


ತಲೆಕೆರೆಯುತ್ತ ಅಲ್ಲೇ... ನಿಂತು ಬಿಟ್ಟೆ.....!


ದೂರದಿಂದ....." ಚೇತನಾ " ..ಲೈಬ್ರರಿ ಕಡೆ... ಬರುತ್ತಿದ್ದಳು...
....!!


ಹಾಂ.. !! ... ನನ್ನೆಡೆಗೆ... ಬರುತ್ತಿದ್ದಳು...!! ??...


ನನ್ನ .... ಹ್ರದಯ ಬಾಯಿಗೆ .. ಬಂದಂತಾಗಿತ್ತು...!!...!




87 comments:

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಿಯ ಚಿಕ್ಕಪ್ಪಾ...

ಚೆಂದದ ಬರಹ, ಯಾವತ್ತಿನ ಹಾಗೆ :-)

sjkltqwrktgf!!!!!!!!??????????
9(!`~+*7}\|=+_-)(&^%$@!
________________________
########################

ಮೂರ್ತಿ ಹೊಸಬಾಳೆ. said...

ಪ್ರಕಾಶಣ್ಣ,
ನನಗೆ ನಾಗೂ ಹೇಳದಿದ್ದರೂ,ನಿಮ್ಮ ಸ್ನೇಹಿತರು ಯಾರೂ ಸಿಗದಿದ್ದರೂ,ಅಷ್ಟೆಲ್ಲ ಯಾಕಪ್ಪ ನ ನಿನ್ನ ನೋಡದೇ ಇದ್ದರೂ ನೀ ಈ ಬ್ಲೊಗ್ ಬರೆಯುವುದಕ್ಕೆ ಮೊದಲೇ ನಿನ್ನ ಪ್ರಕಾಷಣ್ಣ ಅಂತ ಕರೆದೆ ಎಂಬಲ್ಲಿಗೆ ನಿನಗೆ ನಿಜಾರ್ಥ ದಲ್ಲಿ ಮೊದಲ ಮಾತುಕತೆಯಲ್ಲೋ,ಭೇಟಿಯಲ್ಲೋ ಅಣ್ಣನಾಗಿಬಿಡುವ ಗುಣ ಸ್ವಭಾವ ಇದೆ.

Unknown said...

ಪ್ರಕಾಶಣ್ಣ, munde enayitu? :) kathe bahala intersting ide ..

Ittigecement said...

ಶಾಂತಲಾ..!

ಹ್ಹೋ..ಹ್ಹೋ..ಹ್ಹೇ..

ನನಗೆ ಮೊದಲ ಪ್ರತಿಕ್ರಿಯೇನೇ ಹೀಗೆ ಬರುತ್ತದೆ ಅಂದು ಕೊಂಡಿರಲಿಲ್ಲ...

ನಮ್ಮ ಕಾಲೇಜಿನಲ್ಲಿ ಒಬ್ಬ "ಸುಬ್ರಾಯ" ಅನ್ನುವವ ಇದ್ದ..

ಎಲ್ಲರಿಗೂ ಅವನು "ಸುಬ್ಬಣ್ಣ" ನಾಗಿದ್ದ..
ಅವನ ಅಪ್ಪ ,ಅಮ್ಮನಿಗೂ, ... ಅವನ ಗೆಳತಿಗೂ..

ಅವನ ಇಷ್ಟ್ಪಟ್ಟ ಹುಡುಗಿ " ಆಯ್ ಲವ್ ಯು "ಸುಬ್ಬಣ್ಣ " ಅಂದಿದ್ದಳಂತೆ..

ನಾನು ಕೇಳುವದಿಷ್ಟೆ..

ಹುಡುಗ ಹುಡುಗಿಯ ಮಧ್ಯೆ ಒಳ್ಳೆಯ ಗೆಳೆತನ ಇರಬಾರದೆ?

ನನ್ನ ನಾಗುವಿನ, ಸತ್ಯ, ದಿವಾಕರನ ಥರಹ,,?

ಈ ಹೆಣ್ಣು ಮಕ್ಕಳೇಕೆ ತೆಗೆದ ಬಾಯಿಗೆ "ಅಣ್ಣಾ" ಅಂತ ಏಕೆ ಅನ್ನುತ್ತಾರೆ?

ಹೆಸರು ಹೇಳಿ ಕರೆಯ ಬಹುದಲ್ಲ..!

ಶುದ್ಧ ಹ್ರದಯದ, ಪ್ರವಿತ್ರವಾದ "ಸ್ನೇಹ"ವೂ ಇರಬಹುದಲ್ಲ?

ಮಗಳೆ..

ಬರಹಗಾರನಲ್ಲದ ನನಗೆ ..

ಒಂದೊಂದೂ ಪ್ರತಿಕ್ರಿಯೆ ಅಮೂಲ್ಯ..

ಬರುತ್ತಾ ಇರು..

"ಅಣ್ಣನ" ಲೇಖನ ಓದಿ ಖುಷಿಯಾಗಿದ್ದಕ್ಕೆ "ಅಭಿನಂದನೆಗಳು.".!

Ittigecement said...

ಮೂರ್ತಿ...


ಚೇತನಾ ಏನು ಹೇಳಿದಳು...?

ಇನ್ನೊಮ್ಮೆ ಹೇಳುವೆ...!


ನಿಜ ಮೊದಲ ಮೊದಲ ಸಂಭೋಧನೇಯೆ "ಪ್ರಕಾಶಣ್ಣ " ಅಂದಿದ್ದೆ..

ಸಹೋದರತೆಯೂ ಒಂದು ಅಮೂಲ್ಯ ಭಾಂದವ್ಯ..

ಎಲ್ಲೋ ಒಬ್ಬ ಹುಡುಗಿಯ ಸಂಗಡ ..

ನಿಷ್ಕಲ್ಮಶವಾದ "ಸ್ನೇಹ" ಇಅರಬೇಕೆನ್ನುವದು "ಆಸೆ ಆಗಿತ್ತು"

ಅದು ತಪ್ಪಲ್ಲ...

ಈ ಎಡಬಿಡಂಗಿ ನಾಗು "ಇಡೀ ಕಾಲೇಜಿಗೆ"

ಪ್ರಕಾಶಣ್ಣ ಮಾಡಿಬಿಟ್ಟಿದ್ದ...!

ಅದೂ ಒಳ್ಳೆಯದೇ ಆಯಿತು..

ಹೇಗೆ ಅಂತೀಯಾ?

ಬ್ಲೋಗ ಓದುತ್ತಾ ಇರು .. "ಚೇತನಾಳ" ಎರಡನೇ ಪ್ರಸಂಗದಲ್ಲಿ ಬರೆಯುವೆ..!

ಪ್ರತಿಕ್ರಿಯೆಗೆ ಧನ್ಯವಾದಗಳು..

"ಅಣ್ಣನ" ಬರಹ ಖುಷಿ ಪಟ್ಟಿದ್ದಕ್ಕೆ ಅಭಿನಂದನೆಗಳು..

ಬರುತ್ತಾ ಇರು..

Ittigecement said...

ವಿಜಯ್...

ನಿಮ್ಮ ಬ್ಲಾಗ್ ಬಹಳ ಆಸಕ್ತಿ ಪೂರ್ಣವಾಗಿದೆ...

ಶುಭವಾಗಲಿ...

ಇನ್ನೇನು "ಪ್ರೇಮಿಗಳ "ದಿನ ಬರುತ್ತಿದೆ

ಪರ, ವಿರೋಧ ಶುರುವಾಗುತ್ತಿದೆ...

ಇದೆಲ್ಲ ನೋಡುತ್ತಿದ್ದ ಹಾಗೆ ಇದು ನೆನಪಾಯಿತು...

ಮುಂದೆ ಒಮ್ಮೆ "ಚೇತನಾ ಏನಂದಳು..?" ಬರೆಯುವೆ...

ಇದನ್ನು ಓದಿದರೆ ಹಿಗ್ಗಾ, ಮುಗ್ಗಾ "ಪ್ರೀತಿಯಿಯಿಂದ " ಬಯ್ಯುವದಂತೂ ಗ್ಯಾರೆಂಟಿ...!

ನಿಮ್ಮ ಪ್ರೋತ್ಸಾಹ ಹೀಗೆಯೆ ಇರಲಿ...

ಪ್ರತಿಕ್ರಿಯೆಗೆ..

"ಅಣ್ಣನ" ಲೇಖನ ಮೆಚ್ಚಿ ಖುಷಿ ಪಟ್ಟಿದ್ದಕ್ಕೆ

ವಂದನೆ..
ಅಭಿವಂದನೆ..

Rajendra Bhandi said...

ಯನ್ನ Friend ಒಬ್ಬ ಗಣೇಶ ಹೇಳಿ ಇದ್ದ, ಅವಂಗು ಎಲ್ಲ ಗಣೆ ಶಣ್ಣ ಹೇಳ್ತಿದ್ದ.....

Ashok Uchangi said...

ಪ್ರಾಣೇಶರ ಹಾಸ್ಯ ಪ್ರಸಂಗವೊಂದರಲ್ಲಿ ಒಬ್ಬನ ಹೆಂಡತಿಯ ಹೆಸರು ಅಕ್ಕಮ್ಮ.ಈಕೆಯನ್ನು ಶಾರ್ಟ್ ಅಂಡ್ ‘ ಸ್ವೀಟ್ ’ ಆಗಿ ಇವಳ ಗಂಡ ‘ ಅಕ್ಕ‘ ಎನ್ನಬೇಕು ಇಲ್ಲಾ
‘ ಅಮ್ಮಾ“ ಎನ್ನಬೇಕು...ಛೇ...ಪಾಪ...

ನಿಮ್ಮ ಬಗ್ಗೆಯೂ ನನಗೆ ಕನಿಕರವಿದೆ...!

ಅಶೋಕ ಉಚ್ಚಂಗಿ
http://mysoremallige01.blogspot.com/

PARAANJAPE K.N. said...

ಪ್ರಕಾಶರೇ,
ಹಳೆಯ ನೆನಪುಗಳು ಮಧುರ ಅನುಭೂತಿಯನ್ನು ಕೊಡ್ತಾವೆ.
ಬರಹ ಆಪ್ತವಾಗಿದೆ.

ತೇಜಸ್ವಿನಿ ಹೆಗಡೆ said...

:) :D

ಮನಸು said...

ನಿಮ್ಮ ಕಾಲೇಜು ಜೀವನ ಬಲುಚೆನ್ನಾಗಿದೆ,
ನಾಗು ಅವರು ಹೇಳಿದ ಮಾತು ನಿಜ ಈಗ ನಾಗಣ್ಣ, ಕರಿಯಣ್ಣ ಅಂತ ಹೆಸರು ಇಟ್ಟುಕೊಂಡಿರುವವರು ಏನು ಮಾಡಬೇಕು ಹೇಳಿ... ಹ ಹ ಹ....... ನಿಮಗೂ ಹಾಗೆ ಪಾಪ ನಿಮಗೆ ಆಗ ಬೇಜಾರು ಆಗಿರಬೇಕು... ಕಾಲೇಜು ಜೀವನ ಬೇರೆ.. ಈಗಾಗಿದ್ದರೆ ಆ ಅಣ್ಣ ಒಪ್ಪುತಿತ್ತು ಅಲ್ಲವೇ...? ಈಗಲೂ ಒಪ್ಪುವಿದಿಲ್ಲವೇನು ಏನು ಹೇಳುತ್ತೀರಿ ಹಹಹ
ಚೇತನ ...............ಅಲ್ಲೇ ಬರುತ್ತಿದ್ದಾರೆ ಇನ್ನು ಮಾತೆ ಆಡಿಲ್ಲ.......... ಆ ಮಾತು ಕೇಳುವ ನೀರಿಕ್ಷೆಯಲ್ಲಿರುವೆವು...

ನಿಮ್ಮ ಬಾಯಿಗೆ ಬಂದಿದ್ದ ಹೃದಯ ಅದರ ಸ್ಥಳಕ್ಕೆ ಸರಾಗವಾಗಿ ತಲುಪಿರುತ್ತೆಂದು ಭಾವಿಸುತ್ತೇವೆ..

ವಂದನೆಗಳು..

ಶಿವಪ್ರಕಾಶ್ said...

ha ha ha
:D

Shankar Prasad ಶಂಕರ ಪ್ರಸಾದ said...

ಪ್ರಕಾಶಪ್ಪ (ಫಾರ್ ಎ ಚೇಂಜ್),
ನೀವೂ ಚೇತನ ಅವ್ರನ್ನ ಚೇತನಕ್ಕ ಅಂತ ಕರೆದಿದ್ರೆ ಪ್ರಾಬ್ಲಂ ಸಾಲ್ವ್ ಆಗ್ತ ಇತ್ತಾ?
ಏನೋಪ್ಪ, ಹಳೆ ವಿಚಾರ ಅಲ್ವೇ, ಅದಕ್ಕೆ ಏನಾಗಿದ್ರೂ ಓಕೆ. ಆಗೋಗಿದೆ ಅನ್ನೋ ಕಾರಣಕ್ಕೆ.
ಏನಂತೀರಾ?
ಆದರೂ, ಚೇತನ ಏನಂತಾ ಹೇಳುದ್ರು ?

ಕಟ್ಟೆ ಶಂಕ್ರ

ಚಿತ್ರಾ ಸಂತೋಷ್ said...

ಪ್ರಕಾಶ್ ಸರ್...
ಏನ್ಸಾರ್ ನಿಮ್ ಕತೆ..ದಿನ ಹೋದಂತೆ ಕಾಲೇಜು, ಲವ್ವ್, ಹಳೇ ಹುಡುಗೀರ ಹೆಸರನ್ನೆಲ್ಲ ತಂದು ಬ್ಲಾಗಿನಲ್ಲಿ ಕಿತಾಪತಿ ಮಾಡ್ತಾ ಇದ್ದೀರಿ..ಚೇತನಾ ಎದುರಿಗೆ ಬಂದಾಗ,,,ಹೃದಯ ಬಾಯಿಗೆ ಬಂದು..ಬಾಯಿಗೆ ಬಂದ ಹೃದಯ .. 'ಆಮೇನಾಯ್ತು'..?ಹೇಳಲೇ ಇಲ್ಲ..ಇದು ಮೋಸ..ಮೋಸ..ನಮ್ಮಂಥ ಕುತೂಹಲಕಾರರಿಗೆ ಮಾಡಿರುವ ನಯವಂಚನೆ ಸಾರ್. ಆಂಟಿಯ ನಂಬರ್ ಕೊಡಿ..ಬ್ಲಾಗ್ ನಲ್ಲಿ ತನ್ನ ಹಳೇ ಕತೆಯನ್ನೆಲ್ಲ ಹೇಳಿ..ನಮ್ ತಲೆಯನ್ನೆಲ್ಲ ಕೆಡಿಸ್ತಾರೆ ಅಂತ ದೂರು ಕೊಡ್ತೀನಿ. ಹೀಗೇ ಕ್ಲಾಸಿನಲ್ಲಿ ಇದ್ದ ಹುಡುಗೀರ ಹೆಸರನ್ನೆಲ್ಲಾ ಹೇಳಿ ಹೇಳಿ..ಕೊನೆಗೆ ಅವರೆಲ್ಲ ಸೇರಿ, ನಿಮ್ 'ಮನೆಗೆ ಭರೋ' ಚಳವಳಿ ಹೂಡಿಯಾರು ಹುಷಾರು..!!!(:):):):)

ಮತ್ತೆ ಸರ್..ನಾನು ಚಿಕ್ಕಂದಿನಿಂದಲೂ ಹೆಚ್ಚಿನವರನ್ನೆಲ್ಲ ಅಣ್ಣಾಂತ ಕರೀತಾ ಇದ್ದೆ..ಅದು ಅಣ್ಣ ಅಂತ ಕರೆಯದೆ ಏನಾಗುತ್ತೋ ಅಂತ ಭಯದಿಂದಲ್ಲ..ಅಣ್ಣ ಶಬ್ಧನೇ ಅಷ್ಟು ಮಧುರ..ತುಂಬಾ ಮುಗ್ಧವಾಗಿರುತ್ತೆ. ಹಾಗೇ ಕರೆದು ಇಂದಿಗೂ ನನ್ನ ತುಂಬಾನೇ ಪ್ರೀತಿಸುವ ಡಜನ್ ಗಟ್ಟಲೆ ಅಣ್ಣಂದಿರು ಸಿಕ್ಕಿದ್ದಾರೆ. ಅವ್ರ ಪ್ರೀತಿ ಕಂಡಾಗ ಬೇರೇನೂ ಬೇಡ ಅನಿಸುತ್ತೆ ಗೊತ್ತಾ?

-ಚಿತ್ರಾ

Shankar Prasad ಶಂಕರ ಪ್ರಸಾದ said...

ಚಿತ್ರಕ್ಕೋ,
ಹುಡುಗಿಯರಿಗೆ ಅಣ್ಣ ಅಂತಾ ಕರೆಯೋದು ಆಪ್ಯಾಯಮಾನವಾಗಿ ಇರಬಹುದು. ಆದ್ರೆ ಇರೋ ಹುಡುಗೀರೆಲ್ಲಾ ಅಣ್ಣಾ ಅಂತ ಕರೆಯೋಕ್ಕೆ ಶುರು ಮಾಡಿದರೆ, ನಮ್ಮಂಥಾ ಹುಡುಗರ ಗತಿ ಏನಾಗಬೇಡಾ ? ಅದೂ ಪ್ರಕಾಶಣ್ಣನ ಹಾಗೆ ಕಾಲೇಜಿನ ಒಬ್ಬ ಪಾಪ್ಯುಲರ್ ಹುಡುಗನಿಗೆ ?
ಸ್ವಲ್ಪ ಯೋಚನೆ ಮಾಡಿ.. ಹುಡುಗನಾಗಿ ಹುಟ್ಟೋದು ಅಂದ್ರೆ ಸಿಕ್ಕಾಪಟ್ಟೆ ಕಷ್ಟ ಕಣ್ರೀ. ಈ ಥರ ಸಂದರ್ಭ ಬಂದ್ರೆ ಇನ್ನೂ ಕಷ್ಟ.
ಗೊತ್ತಾ ?
ಕಟ್ಟೆ ಶಂಕ್ರ

Ittigecement said...

ರಾಜೇಂದ್ರ ಭಂಡಿಯವರೆ...

ಸಾರ್ವತ್ರಿಕವಾಗಿ "ಅಣ್ಣ" ನಾಗ್ಗುವದು ಬಹಳ ಕಷ್ಟ

ಚೇತನಾ ಎಲ್ಲಿ "ಅಣ್ಣಾ" ಅಂದು ಬಿಡ್ತಾಳೋ ಎಂಬ ಹೆದರಿಕೆ ಬಹಳ ಇತ್ತು..

ಎಡವಟ್ಟು ಆಗಿದ್ದು ನಾಗುವಿನಿಂದ...

ಕಾಲೇಜಿನ ಹುಡುಗರು, ಲೆಕ್ಚರುಗಳು, ಸ್ಟಾಫ್. ಕಂಡ ಕಂಡವರೆಲ್ಲರಿಗೆ "ಅಣ್ಣ" ನಾಗಿ ಹೋದೆ...

ಮಸಾಲೆ ಮಂಡಕ್ಕಿ "ಲಕ್ಕಣ್ಣ" ನೂ ಅದರಲ್ಲಿ ಸೇರಿಕೊಂಡಿದ್ದ..

ಹೀಗಾಗಿಯೇ ಇರಬಹುದೇನೋ...

ಎಲ್ಲೊ ಒಂದುಕಡೆ ಮುಗ್ಧವಾದ,,ನಿಷ್ಕಲ್ಮಶವಾದ "ಸ್ನೇಹದ" ಗೆಳತಿಯನ್ನು ಮನ ಬಯಸಿತ್ತೇನೋ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಾ ಇರಿ...

Ittigecement said...

ಅಶೋಕ್...

ನಾನು ಪ್ರಾಣೇಶರ ಅಭಿಮಾನಿ..

ಏನು ನಗಸ್ತಾರಿ ಅವರು..

ನಮ್ಮ ಪಕ್ಕದ ಮನೆ ತಾತನ ಹೆಸರು "ಅಣ್ಣಣ್ಣ"

ಅವರ ಹೆಂಡತಿಯ ಹೆಸರು"ಅಕ್ಕಕ್ಕ"...!

ಹೆಸರೇ ಹಾಗಿದ್ದಮೇಲೆ ಇನ್ನೇನು ಚಿಂತೆ..? ನಾಗು ಮಹಾ ಖಿಲಾಡಿ...

ಆತ ನನ್ನ ಸಲುವಾಗಿ ಹುಡುಗರನ್ನೆಲ್ಲ ಒಟ್ಟುಗೂಡಿಸಿ..
ನನ್ನ ಪರವಾಗಿ ಮಾತನಾಡಿದ್ದು "ಒಳ್ಳೆಯಕೆಲಸವೇ..!"

ಆದರೆ ಈ ಎಡಬಿಡಂಗಿ ಕೆಲಸಕ್ಕಾಗಿ ಸರಿಯಾಗಿ ಉಗಿಸಿಕೊಂಡ ..

ನನ್ನಿಂದ..

ಆದರೆ ನಾನಾಗ ಎಲ್ಲೆಡೆ"ಪ್ರಕಾಶಣ್ಣ"ನಾಗಿ ಹೋಗಿದ್ದೆ

ಚಂದದ ಪ್ರತಿಕ್ರಿಯೆಗಾಗಿ ವಂದನೆಗಳು..

Ittigecement said...

ಪರಾಂಜಪೆಯವರೆ...

ನಿಮ್ಮ ಹೊಸ ಬ್ಲಾಗು ಚೆನ್ನಾಗಿದೆ..

ಅಭಿನಂದನೆಗಳು...

ನಾವು ಕಾಲೇಜಿನ ಸ್ನೇಹಿತರು ಸೇರುತ್ತೀವಲ್ಲ..

ಆಗ ನಗುವಿನ ಹೊಳೆಯೋ..ಹೊಳೆ..

ಈಗ ಸಂಸಾರದ , ವ್ಯವಹಾರದ...ಭಾರಹೊತ್ತು..

ನಗುವನ್ನೇ... ಮರೆತ ಕ್ಷಣ ..

ಅ ಮಧುರ ನೆನಪುಗಳು ..

ಬಹಳ ಖುಷಿತರುತ್ತದೆ...

ಪ್ರತಿಕ್ರಿಯೆಗಾಗಿ ಧನ್ಯವಾದಗಳು..

ಹೀಗೆ ಬರುತ್ತಾ ಇರಿ...

Ittigecement said...

ತೇಜಸ್ವಿನಿಯವರೆ...

ನಿಮ್ಮ ಮುಗುಳ್ನಗು ಎಲ್ಲ ಹೇಳುತ್ತಿದೆ...

ಕ್ಷಮಿಸಿ ಬಿಡಿ...

ನನ್ನ ಬ್ಲಾಗಿನ ಎಲ್ಲಾ ಸಹೋದರಿಯರಿಗೂ..

ಈ ಲೇಖನ "ಮುಜುಗರ " ತಂದಿದೆ...

ಈ ಅಣ್ಣನಿಗಾಗಿ ಮರೆತು ಕ್ಷಮಿಸಿ ಬೀಡಿ...

ಕಾಲೇಜಿನ ಆ ದಿನಗಳಲ್ಲಿ ಹಾಗನಿಸಿತ್ತು..

ಈಗ ನಲವತ್ತು ತುಂಬಿದೆ..

ನನಗೆ "ಪ್ರಕಾಶಣ್ಣ" ಎಂದು ಕರೆಯಿಸಿ ಕೊಳ್ಳುವದರಲ್ಲಿ

ನನಗೆ ಖುಷಿಯಿದೆ..

ಹೆಮ್ಮೆಯೂ ಇದೆ...

ಎಲ್ಲ "ಸಹೋದರಿಯರ "ಕ್ಷಮೆ" ಕೇಳುವೆ...

"ಕ್ಷಮಿಸಿದ್ದೀರಿ ತಾನೆ.. ಈ "ಡುಮ್ಮಣ್ಣನನ್ನು."....?

ಪ್ರತಿಕ್ರಿಯೆಗಾಗಿ ಧನ್ಯವಾದಗಳು...

Kishan said...

"ಪ್ರಕಾ-ಶಣ್ಣ", ಲಕ್ಕಣ್ಣ, ಸುಬ್ಬಣ್ಣ, ಎಂದು ಕರಯುವುದರಲ್ಲಿ ಒಂಥರಾ ಖುಷಿ ಇದೆ ಸ್ವಾಮಿ ! ಕನ್ನಡದಲ್ಲಿ ಇವು ಹಾಸು-ಹೊಕ್ಕಾದ, ಹೆಸರುವಾಸಿ ಹೆಸರುಗಳು! ಇದೇ ಥರ "ಕಿಶನ್ಅಣ್ಣ", ಕೃಷ್ಣಅಣ್ಣ ಅಂತ ಸಾರ್ವತ್ರಿಕವಾಗಿ ಯಾರೂ ಕರೆಯುವುದಿಲ್ಲ :)
The two main characters(not ಚೇತನಾ!) in the story-line and the build up has made it a very interesting reading!

Ittigecement said...

ಮನಸು....

ಕಾಲೇಜು ದಿನಗಳಲ್ಲಿ..

ಕೆಲವು ಹುಡುಗಿಯರು "ಅಣ್ಣ" ಅಂದು ಬಿಟ್ಟರಲ್ಲಾ..
ಅಂದು ಬೇಸರವಾದದ್ದು ನಿಜ..

ಅದು ಆಗ ಅನಿಸಿದ್ದು... ಈಗ ವಯಸ್ಸಾಯಿತಲ್ಲ...

ಅಣ್ಣ ಅಂದರೇ ಖುಷಿನೇ...

ಈಗ ಗೆಳೆಯರು, ಗೆಳತೀಯರು ಎಲ್ಲ ಬೇಕಾದಷ್ಟಿದ್ದಾರೆ...

"ಚೇತನಾ" ಏನು ಹೇಳಿದಳು...?

ಸಧ್ಯದಲ್ಲೇ ಬರೆಯುವೆ...

ಅಲ್ಲೂ "ನಾಗುವಿನ ಕಿತಾಪತಿಯಿದೆ...

ನಾಗುವಿಗೆ ಬಯ್ಯ ಬೇಡಿ...

ಸ್ವಲ್ಪ ತಲೆಹರಟೆ ಅನ್ನುವದನ್ನು ಬಿಟ್ಟರೆ..

ಮನಸು ತುಂಬಾ ಒಳ್ಳೆಯದು...

ಈ ಸಮಾಜ ಸಂಬಂಧಗಳಿಗೆ ಒಂದು " ಹೆಸರು " ಇಡುತ್ತದೆ...

ಹಾಗೆ.."ಹೆಸರು" ... ಕೇಳುತ್ತದೆ ಅಲ್ಲವಾ..?

ಒಂದು ರೀತಿಯಲ್ಲೆ ಇದು ಸರಿ ಅಲ್ಲವಾ..?

ಇಲ್ಲದಿದ್ದರೆ "ಪಾಶ್ಚಿಮಾತ್ಯರಿಗೂ, ನಮಗೂ ವ್ಯತ್ಯಾಸವೇನು ಬಂತು..?

ಏನು ಹೇಳುತ್ತೀರಿ..?

Rajath said...

kadegoo chetana Prakashanna ande bittalu antayitu. che che che. . .
ishtondu bad luck irbardagittu. eee one way kathene hinge maraya, modle helkkyambale dhairya irtille ondu hrudaya sikyabiddu oddadadeya nodu. innondu hrudayakke idella hyange artha agtu paapa. . . artha agtille....

Ittigecement said...

ಶಿವ ಪ್ರಕಾಶ್...

ನಗು ಇನ್ನೂ ಉಳಿಸಿ ಕೊಂಡಿರಿ...

"ಚೇತನಾ" ಏನು ಹೇಳಿದಳು..?

ಸಸ್ಪೆನ್ಸ್ ಇನ್ನೂ ಇದೆ..

ಹೀಗೆ ಬರುತ್ತಿರಿ..

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಶಂಕ್ರಣ್ಣಾ...

"ಪ್ರಕಾಶಪ್ಪ" ಅಂತ ನನ್ನ ಈವರೆಗೆ ಯಾರೂ ಕರೆದಿರಲಿಲ್ಲ ನೋಡ್ರಿ..

ಕೇಳಿಯೂ ಇರಲಿಲ್ಲ...

ಚೆನ್ನಾಗಿದೆ...

ಈ ಅಣ್ಣ ಅತ್ತಿಗೆ ಅನ್ನೋದು ಮಹತ್ವ ಅಲ್ಲ...
ಹ್ರದಯದಲ್ಲಿ ಏನಿದೆ...?
ಅದು... ಮುಖ್ಯ.. ಏನಂತೀರಿ..?

ಭಾವನೆ ಮುಖ್ಯವಾಗಿರೋ ಸಮಯದಲ್ಲಿ "ಏನು ಅಂತ ಕರೆಯದಿದ್ದರೂ ಓಕೇ ನೇ.....

"ಅಣ್ಣಣ್ಣ.. ಅಕ್ಕಕ್ಕ" ಹೆಸರಿನವರೆ "ಗಂಡ ಹೆಂಡತಿ" ಆಗಿದ್ದರಲ್ಲ..!

"ಚೇತನ" ಏನು ಹೇಳಿದಳು... ಅದು ರಹಸ್ಯವಾಗಿದೆ... ಸಾರ್..

ಮುಂದಿನ ಬ್ಲಾಗ್ ಕಾಯುತ್ತಿರಿ..

ಚಂದದ ಪ್ರತಿಕ್ರಿಯೆಗೆ ವಂದನೆಗಳು..

Ittigecement said...

ಚಿತ್ರಾ.


ನನ್ನ ಕಾಲೇಜಿನ ಹುಡುಗಾಟಿಕೆಗಳು.., ಗೆಳೆಯ ಗೆಳೆಯ ಗೆಳತಿಯರು..

ಹಾಸ್ಯ ಕಥೆಗಳು.. ಎಲ್ಲವೂ ನನ್ನ "ಶ್ರೀಮತಿ"ಯವರಿಗೆ ಗೊತ್ತು...

ಅವರಲ್ಲರೂ ನಮ್ಮನೆಗೆ ಬರುತ್ತಾರೆ...

ಆ ಹರಟೆಯಲ್ಲಿ ಇವೆಲ್ಲ ಹೊರಗೆ ಬರುತ್ತದೆ...

ನಾವೆಲ್ಲ ಒಂದು ಸೇರುವ ದಿನಗಳು ಬಹಳ ಖುಶಿ ಕೊಡುತ್ತವೆ...

"ಅಣ್ಣ" ಭಾವನಾತ್ಮಕತೆಯ ಸಂಬಂಧ..

ನನಗೂ ಹಲವಾರು ತಂಗಿಯರಿದ್ದಾರೆ...

ಅವರ ಪ್ರೀತಿ. ಭ್ರಾತತ್ವ.. ನನಗೆ ಹೇರಳವಾಗಿ ಸಿಕ್ಕಿದೆ..

" ನಿಮ್ಮ ಒಂದು ಹಿಡಿ ಪ್ರೀತಿ" ಲೆಖನ ನಾನು ಎಷ್ಟು ಬಾರಿ ಓದಿದ್ದೇನೆ.. ಗೊತ್ತಿಲ್ಲ..

ತುಂಬಾ ಚೆನ್ನಾಗಿದೆ... ಹ್ರದಯ ಸ್ಪರ್ಶಿಯಾಗಿದೆ...

ನಿಮಗೆ ಈ ಜಗತ್ತಿನ ಎಲ್ಲ ಪ್ರೀತಿ ಸಿಗಲಿ..

ಸಿಗದೇ ಇರುವ ಪ್ರೀತಿಯೂ ಸಿಗಲಿ..

ಪ್ರೀತಿ, ಪ್ರೇಮದ ,ಸ್ನೇಹದ "ಶರಧಿ"ಯಲ್ಲಿ ನೀವಿರಿ..

ಎಂದು ಹಾರೈಸುವೆ...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಶಂಕ್ರಣ್ಣಾ...

ನೀವೆನ್ನೋದೂ ನಿಜ...

ಇದ್ದ ಹುಡುಗೀಯರೆಲ್ಲ "ಅಣ್ಣಾ" ಅಂದು ಬಿಟ್ಟರೆ ಹುಡುಗರ ಗತಿಯೇನು..?

ನನಗಂತೂ ಬಹಳ ಕಷ್ಟವಾಗಿತ್ತು...

ಅವರಿಗೆ "ಅಣ್ಣ" ನಾಗಿ ಬಿಟ್ಟರೆ ...

ರಕ್ಷಾ ಬಂಧನದಲ್ಲಷ್ಟೇ ಖುಷಿ...

ಅಲ್ಲವಾ..?

Ittigecement said...

ಕಿಶನ್....

ನಮ್ಮನೆಯಲ್ಲಿ ನಾನೇ ಸಣ್ಣವನಾಗಿದ್ದೆ..
ಎಲ್ಲರೂ ನನ್ನ ಹೆಸರು ಹಿಡಿದು ಕರೀತಿದ್ರು..

ನನ್ನ ಚಿಕ್ಕಪ್ಪನ ಮಕ್ಕಳು..

ಪ್ರಕಾ"ಶಣ್ಣ" ಅನ್ನಲಿಕ್ಕೆ ಶುರು ಮಾಡಿದ್ರು..

"ನೋಡಿ ಮಕ್ಕಳಾ ನಾನು ನಿಮಗೆಲ್ಲ ದೊಡ್ಡೋನು..

"ಶಣ್ಣ" ನಲ್ಲ

ನನಗೆ "ಪ್ರಕಾಶದೊಡ್ಡ" ಅಂತ ಕರೆಯಿರಿ ಅಂದಿದ್ದೆ..

ತುಂಬಾ ದಿನಗಳ ವರೆಗೆ ಅದು ಜಾರಿಯಲ್ಲಿತ್ತು..

ಅದು ಹೇಗೆ ಬಿಟ್ಟು ಹೋಯಿತು ಗೊತ್ತಾಗುತ್ತಿಲ್ಲ...

ನನಗೆ "ಪ್ರಕಾಶ ದೊಡ್ಡ" ಅಂತಲೂ ಹೆಸರಿತ್ತು...

ನೆನಪಿಸಿದ್ದಕ್ಕೆ ವಂದನೆಗಳು..

ಹೀಗೆ ಬರುತ್ತಾ ಇರಿ..

ಧನ್ಯವಾದಗಳೂ...

Ittigecement said...

ರಜತ್...

ನನಗೆ "ಚೇತನಾ" ಮೇಲೆ ಲವ್ ಇಲ್ಲಾಗಿತ್ತು ಮಾರಾಯಾ..!

ಒಂದು ಸಭ್ಯ ಮನಸ್ಸಿನ "ಗೆಳೆತನ" ಇರಲಿ ಎಂದು ಬಯಸಿದ್ದೆ...

ಈ " ಒನ್ ವೇ" ಕಥೆ "ವಿಜಯಾ" ಸಂಗಡ ಅನುಭವ ಆಗಿದೆ..

ಅದು ಬಹಳ ಕಷ್ಟ ಮಾರಾಯಾ...

ಮನಸ್ಸಿನ ಭಾವನೆ ಹೇಳಿ ಬಿಡಬೇಕು ..

ಅದೊಂದೆ "ಒನ್ ವೇ" ಸಮಸ್ಯೆಗೆ ಪರಿಹಾರ...

"ಅಣ್ಣನ" ಫಜೀತಿ ಮಜಾ ಮಾಡಿದ್ದಕ್ಕೆ ವಂದನೆಗಳು

ಪ್ರತಿಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಿರಿ...

ಅಂತರ್ವಾಣಿ said...

ಕಾಲೇಜಿನಲ್ಲಿ ಮಾತ್ರ ಅಲ್ಲ, ಬ್ಲಾಗು ಲೋಕದಲ್ಲೂ ನೀವು ಎಲ್ಲರಿಗು ಪ್ರಕಾಶಣ್ಣ!

ಚೆನ್ನಾಗಿದೆ ಲೇಖನ. ಮುಂದಿನ ಭಾಗಕ್ಕೆ ಕಾಯುತ್ತಾಯಿದ್ದೀನಿ.

Ittigecement said...

ಅಂತರ್ವಾಣಿ....

ಈಗ ಯಾರಾದ್ರೂ "ಪ್ರಕಾಶಣ್ಣ" ಅಂದಿದ್ರೆ ಬೇಜಾರಾಗುತ್ತೇನೋ..

ಆಗ ಬೇಜಾರಾಗುತ್ತಿತ್ತು...

ಎಲ್ಲಾ ಎಡವಟ್ಟು ಆಗಿದ್ದು ...

ನಮ್ಮ ನಾಗು ಅಡಪೋಟ್ರುವಿನಂದಾಗಿ..

ಆ ಅಡಪೋಟ್ರು ಕೆಲಸ ಮಾಡಿದ್ದಾಕಾಗಿ ಚೆನ್ನಾಗಿ ಬಯ್ಸಿ ಕೊಂಡ..

ಆ ಅಡಪೋಟ್ರು ಕೆಲಸಕ್ಕೆ...

ತೆಂಗಿನಕಾಯಿ, ಪುಸ್ತಕದ ಬದ್ನೆಕಾಯಿ.. ಎಲ್ಲ ಅವನಸಂಗಡ

ಇದ್ದಿದ್ರಂತೆ..

ಎಲ್ಲರ ಬಳಿಯೂ.."ಪ್ರಕಾಶಣ್ಣ.., ಪ್ರಕಾಶಣ್ಣ " ಅಂತ

ಡಿಸ್ಕಸ್ ಮಾಡ್ತಿದ್ರಂತೆ..

ಒಟ್ಟಿನಲ್ಲಿ "ಸಾರ್ವತ್ರಿಕವಾಗಿ" ..

ಪ್ರಕಾಶಣ್ಣನಾಗಿ ಹೋದೆ...

ಹ್ಹಾ..ಹ್ಹಾ..
ಪ್ರತಿಕ್ರಿಯೆಗೆ ವಂದನೆಗಳು..

ಸುಧೇಶ್ ಶೆಟ್ಟಿ said...

paapa prakaashanna:):)

huduga hudugiya madhhye nirmala sneha irabeku annuvudakke nannadoo sahamatha ide...

ಜ್ಯೋತಿ said...
This comment has been removed by the author.
Anonymous said...

ಪ್ರಕಾಶ್ ಸರ್ ಅಲ್ಲಲ್ಲ ಪ್ರಕಾಶಣ್ಣ,
ನೀವು ಬರೆದಿರುವದನ್ನ ಶ್ರೀರಾಮ ಸೇನೆಯವರು ಓದಿದರೆ ಅವಳ ಕೈಯಲ್ಲೂ ರಾಖಿ ಕಟ್ಟಿಸಿ ಬಿಡುತ್ತಾರೆ ಹುಶಾರ್! ;-

sunaath said...

ಪ್ರಕಾಶೂ,
"ಅಣ್ಣ" ಅಂತ ಕರೆಸಿಕೊಳ್ಳೋಕೂ ಪುಣ್ಯ ಬೇಕಣ್ಣ.
You are lucky. ಚೇತನಾಳೂ ನಿಮ್ಮನ್ನ "ಅಣ್ಣ" ಅಂತ ಕರೆದಿರಲೀ ಅಂತ ಹಾರೈಸುತ್ತೇನೆ.

ಚಿತ್ರಾ said...

"ಪ್ರಕಾಶಣ್ಣ "

ಕಡೆಗೆ ಚೇತನಾ ಏನಂತಕರೆದ್ಲು ಹೇಳಿ ನಂಗಕ್ಕೆ ಗೊತ್ತಾಯ್ದೇ ಇಲ್ಲೆ !! ಸಸ್ಪೆನ್ಸ್ ನಲ್ಲಿಟ್ಟುಬಿಟ್ರಿ.ಭಾಳಾ ಅನ್ಯಾಯ .

ನಿಮ್ಮನ್ನು ಕಾಡಿದ ಪ್ರಶ್ನೆ ನನಗೂ ಬಹಳಷ್ಟು ಸಲ ಕಾಡಿದೆ. ಒಳ್ಳೆಯ ಸ್ನೇಹಕ್ಕೆ ಲಿಂಗಭೇದ ಬೇಕೆ ಎಂಬುದು .ಏನೇ ಇದ್ದರೂ , ನನ್ನ ಒಳ್ಳೆಯ ಸ್ನೇಹಿತರ ಬಳಗದಲ್ಲಿ ಸ್ನೇಹಿತೆಯರು ಬೆರಳೆಣಿಕೆಯಷ್ಟು.ಯಾವ ವಿಷಯವನ್ನೇ ಆಗಲಿ , ಮುಕ್ತವಾಗಿ ಚರ್ಚಿಸುವ, ಒಬ್ಬರನ್ನೊಬ್ಬರು ಕಾಲೆಳೆದು ಕೀಟಲೆ ಮಾಡುವಷ್ಟು ನಿರ್ಮಲ ವಾದ ಸ್ನೇಹವನ್ನು ಹಲವು ಸ್ನೇಹಿತರೊಂದಿಗೆ ಈಗಲೂ ಕಾಯ್ದುಕೊಂಡಿದ್ದೇನೆ ಎನ್ನಲು ಹೆಮ್ಮೆಯಿದೆ.

Ittigecement said...

ಸುಧೇಶ್...

ಎಲ್ಲರೂ ಸ್ನೇಹಿತರಾಗಲು ಸಾಧ್ಯವಿಲ್ಲ..

ಎಲ್ಲರೂ ಸಹೋದರಿ,ಸಹೋದರರಾಗಲೂ ಅಸಾಧ್ಯ..

ಭಾವನಾತ್ಮಕವಾಗಿ ಹ್ರದಯಕ್ಕೆ ಸಂಬಂಧಪಟ್ಟ ವಿಷಯ...

ಆಗ ಅನಿಸಿದ್ದು...ಒಬ್ಬಳು "ಗೆಳತಿ " ಇರಬಾರದಾಗಿತ್ತೆ..?

ಈಗ ಇದ್ದಾರೆ..

ಅವರಿಂದಾಗಿ ಅವರ "ಗಂಡಂದಿರೂ" ಒಳ್ಳೆಯ ಸ್ನೇಹಿತರಾಗಿದ್ದಾರೆ...

ಆದರೆ ಒಬ್ಬ "ನಾಗು, ಒಬ್ಬ ಸತ್ಯ, ಒಬ್ಬ ದಿವಾಕರ...

ಹಾಗೇ.. ಅದೇ ಮಟ್ಟಕ್ಕೆ ಗೆಳತಿಯರೂ ಇದ್ದಾರೆ...

ನನ್ನ ಭಾವನೆಗೆ ಬೆಂಬಲ ಕೊಟ್ಟಿದ್ದಕ್ಕೆ..

ಧನ್ಯವಾದಗಳು...

ನಿಮಗೆ "ಗೆಳತಿಯರಿದ್ದಾರೆಯೇ..?"

Ittigecement said...

ಜ್ಯೋತಿ....

ನಾನೂ ಶ್ರೀ ರಾಮನ ಭಕ್ತ...!

ಶುದ್ಧ ಹ್ರದಯದ ಸ್ನೇಹಕ್ಕೆ ಯಾರ ವಿರೋಧವೂ ಇರುವದಿಲ್ಲ...

"ಚೇತನಾ" ನನ್ನ ಸ್ನೇಹಿತೆಯಾಗಿದ್ದರೆ ಚೆನ್ನಾಗಿತ್ತು....ಎಂದು ಅನಿಸಿತ್ತು..

ಆದಳಾ...?

ಮುಂದೆ ಬರೆಯುವೆ...

ಪ್ರತಿಕ್ರಿಯೆಗಾಗಿ ಧನ್ಯವಾದಗಳು.....

"ಸರ್" ತೆಗೆದು..

"ಅಣ್ಣಾ" ಅಂದಿದ್ದಕ್ಕೆ ..

ಸಾವಿರ..ಸಾವಿರ..ವಂದನೆಗಳು...

ಬರುತ್ತಾ ಇರಿ .".ಅಣ್ಣನ ಮನೆಗೆ.."

Ittigecement said...

ಸುನಾಥ ಸರ್....

ನಿಮ್ಮ ಪ್ರತಿಕ್ರಿಯೆಗೆ ಕಾದು ಕುಳಿತಿದ್ದೆ...

ಇಷ್ಟವಾಗಿಲ್ಲವೇನೋ ಅಂದುಕೊಂಡೆ...

ಪ್ರತಿಕ್ರಿಯೆಗಾಗಿ ವಂದನೆಗಳು..

ಇಡೀ ಕಾಲೇಜಿಗೆ "ಅಣ್ಣ" ನಾಗುವದು ಪುಣ್ಯವೇ..!

ಖುಷಿಯೂ ಹೌದು...

"ಚೇತನಾ.. ಏನಂದಳು...??? "

ಅದು ಇತಿಹಾಸ...!

ಇದು ಕೆಲವೇ ., ಕೆಲವರಿಗೆ ಗೊತ್ತು..

ನನ್ನ ಮಡದಿಗೂ ಗೊತ್ತು...

ಸರ್,,

"ಆ ರೀತಿ ಹಾರೈಸಬೇಡಿ...ಪ್ಲೀಸ್.."

ಹ್ರದಯ ಬಾಯಿಗೆ ಬಂದು ಬಿಡುತ್ತದೆ...!

"ಪ್ರಕಾಶೂ " ಅಂದಿದ್ದಕ್ಕೆ ..

ಧನ್ಯ... ಧನ್ಯವಾದಗಳು...

Ittigecement said...

ಚಿತ್ರಾ...

ಹೊಟ್ಟೆಕಿಚ್ಚು ಆಗುತ್ತಿದೆ...

ನನಗೆ ಕಾಲೇಜು ದಿನಗಳಲ್ಲಿ ಆ "ಮಹದಾಸೆ"

ಬಹಳವಾಗಿತ್ತು...

ಫೈನಲ್ ಇಯರ್ ನಲ್ಲಿ ಬಹಳಷ್ಟು ಸ್ನೇಹಿತೆಯರಾದರು...

ಹಾಡು, ಹರಟೆ, ಕೀಟಲೆ ಬಹಳ ಮಜವಾಗಿತ್ತು...

ಅದನ್ನು ಈಗಲೂ ಕಾಪಾಡಿಕೊಂಡಿದ್ದೇನೆ...

"ಚೇತನಾ ಏನಂದಳು..?

ದಯವಿಟ್ಟು ಮುಂದಿನ ವಾರದ ವರೆಗೆ ಕಾಯಿರಿ...!

"ಈ ಅಣ್ಣನ ಮನೆಗೆ ಬರುತ್ತಾ ಇರಿ..

ಕರೆಯ ಬೇಕಿಲ್ಲ ತವರಿಗೆ ಬರಲು..

ಹೀಗೆಯೇ ಬಂದುಬಿಡಿ...

ಧನ್ಯವಾದಗಳು..

shivu.k said...

ಪ್ರಕಾಶ್ ಸರ್,


ನೀವು ನಿರೀಕ್ಷಿಸಿದ ಶುದ್ಧ ಗೆಳೆತನ, ಕೆಲವರಿಂದ ಸಿಗುತ್ತದೆ.[ ನನ್ನ ಅದೃಷ್ಟಕ್ಕೆ ಅಂತ ಗೆಳೆಯರು ನನಗೂ ಇದ್ದಾರೆ]ಅವರಲ್ಲಿ ಆತ್ಮೀಯತೆ, ಸ್ವಲ್ಪ ಸಲಿಗೆ, ಚೂರು..ತುಂಟತನ...ಸದಾ ಪ್ರೀತಿಸುವ ಮನಸ್ಸು...ದೂರದಿಂದಲೇ ಚೆನ್ನಾಗಿರಲಿ ಎಂದು ಆರೈಸುವ ಪರಿಪೂರ್ಣತೆ...ನಮ್ಮಿಂದ ಏನೂ ನಿರೀಕ್ಷಿಸದಿರುವಿಕೆ..ಬದುಕಿನ ಕಷ್ಟಗಳ ಹಿಂದೆ ಬಿದ್ದಾಗ ಪ್ರೋತ್ಸಾಹ...ಆತಂಕಗೊಂಡಾಗ ಹೆಗಲು ನೀಡಿ ಆತ್ಮವಿಶ್ವಾಸ ತುಂಬುವ ಪರಿ...ಎಲ್ಲಕ್ಕಿಂತ ಪೊಸೆಸೀವ್ ನೆಸ್ ಇಲ್ಲದಿರುವಿಕೆ...[ಮೈ ಆಟೋಗ್ರಾಪ್ ಚಿತ್ರದಲ್ಲಿ ಮೂರನೆ ಗೆಳೆತಿ ಪಾತ್ರಧಾರಿ]ಬೇಕೆನಿಸುತ್ತದೆ..

ಮುಂದಿನ ಕತೆಗಾಗಿ ನಾನು ಕಾಯುತ್ತಿದ್ದೇನೆ...

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಹ ಹ್ಹ ಹ್ಹಾ... ಸಖತ್!
ಇದನ್ನ ಓದಿ ನನ್ನ ಅಣ್ಣನ ಪರಿಸ್ಠಿತಿ ನೆನಪಿಗೆ ಬಂತು. ನಾ ಕಾಲೇಜಿಗೆ ಹೋಗವಾಗ ನಂಗೆ ಸಿಕ್ಕಾಪಟ್ಟೆ ಗೆಳತೀರು ಇದ್ದಿದ್ದ (ಈಗ್ಲೂ ಇದ್ದ!). ನಾನು ನನ್ ಅಣ್ಣಂಗೆ ’ಅಣಾ..’ ಹೇಳಿ ಬಾಯೆಳೆದು ಹೇಳ್ದಾಂಗೆ - ನನ್ನ ಗೆಳತಿಯರೂ ಅವಂಗೆ ’ಅಣಾ..’ ಹೇಳೇ ಕರೀತಿದ್ದ. ಪಾಪ, ಒಂದೊಂದ್ಸಲ ’ನಿನ್ ಕಾಲದಲ್ಲಿ ಆಪ್ಪದಲ್ಲ ಕೂಸೆ - ಊರೊಟ್ಟಿನ್ ಅಣ್ಣ ಆಗೋಜಿ ಆನು’ ಹೇಳಿ ಬೇಜಾರು ಮಾಡ್ಕ್ಯತ್ತಿದ್ದಾ ಅಣ್ಣ. :)

Hema Powar said...

ಸರ್,
ಹಾಸ್ಯಬರಹವಾದರೂ ಗಂಭೀರ ಅನಿಸುವಂತಹ ವಿಷ್ಯ ಒಂದನ್ನ ಮನಸಿನಲ್ಲಿ ಉಳಿಸುತ್ತೀರಿ. ಅದೇಕೆ ಹುಡುಗರ ಜೊತೆ ಗೆಳೆತನ ಬೆಳೆಸುವಾಗ ಹುಡುಗೀರು ಹಿಂಜರೆದು ಬಿಡ್ತಾರೆ? (ಕೆಲವೊಮ್ಮೆ ಹುಡಗರೂ ಕೂಡ)ಆರೋಗ್ಯಕರವಾದ ಸ್ನೇಹವೊಂದನ್ನ ಒಪ್ಪಿಕೊಳ್ಳೋಕೆ ಹೆದರಿಬಿಡ್ತಾರಲ್ಲ ಏಕೆ ಅಂತ?

Unknown said...

Hema Powar avare.. ಹಿಂಜರಿಕೆ ಬಗ್ಗೆ ನನ್ನಗೆ ಅನ್ನಿಸುವುದು ಏನೆಂದರೆ,
೧. ನಮ್ಮ ಸುತ್ತ ಆ ರೀತಿಯ ಉದಾಹರಣೆಗಳು ಜಾಸ್ತಿ ಇಲ್ಲ
೨. ಜನ ಏನಂತಾರೋ ಅನ್ನೋ ಭಯ
೩. ಆ ರೀತಿಯ ಒಂದು ಗೆಳೆತನ ಫಲಪ್ರದವಗತ್ತೋ ? ಆಗದಿದ್ದರೆ ಆಮೇಲೆ ಏನಾದರು ತೊಂದರೆ ಆದೀತೆ ಅನ್ನುವ ಅನುಮಾನ
ಇವೆಲ್ಲಾ ಸೇರಿ ಹುಡುಗರು ಹುಡುಗಿಯರೂ ಗೆಳೆತನದಿಂದ ಹಿಂಜರಿಯುವಂತೆ ಮಾಡುತ್ತವೆ..

ಮಲ್ಲಿಕಾರ್ಜುನ.ಡಿ.ಜಿ. said...

ಸರ್, ಪಕಾಶಣ್ಣ ಆಗಿ ನೀವು ಮಿಸ್.ಚೇತನರನ್ನು ಹೇಗೆ ಮುಖಾಮುಖಿಯಾದ್ರಿ? ವ್ಯಾಲೆಂಟೈನ್ಸ್ ದಿನ ಹೇಳಿಬಿಡಿ... ಒಳ್ಳೆ ಯಂಡಮೂರಿ ತರ ತುದಿಗಾಲಲ್ಲಿ ನಿಲ್ಲಿಸಿಬಿಡ್ತೀರ...
ಬೇಗ ಹೇಳಿ ಪುಣ್ಯ ಕಟ್ಕೊಳ್ಳಿ...

Prabhuraj Moogi said...

ಇದು ಹೆಚ್ಚಾನೆಚ್ಚು ಸ್ಕೂಲು ಕಾಲೇಜಿನಲ್ಲಿ ಆಗೊ ಅನುಭವ, ಅಲ್ಲದೆ ನಿಮ್ಮ ಹೆಸರಿಗೆ ಅಣ್ಣ ಚೆನ್ನಾಗಿ ಹೊಂದಿಕೊಂಡುಬಿಡುತ್ತಾದರಿಂದ ಹಾಗಾಗಿದೆ... ಎಲ್ಲೊ ಮನಸಿನಲ್ಲಿ ಗೆಳತಿಯೊಬ್ಬಳಿರಲೆಂದಿದ್ದು ಸರಿ, ಅದರೀಗ ಹುಡುಗ ಹುಡುಗಿ ಗೆಳೆಯರಾಗಿರಲು ಸಾಧ್ಯವಿಲ್ಲದಂತಾಗಿದೆ

ಚಿತ್ರಾ ಸಂತೋಷ್ said...

ಪ್ರಕಾಶ್ ಸರ್..ನಿಮ್ಮ ಪ್ರೀತಿಯ ಹಾರೈಕೆಗಳು ಸದಾ ಎನಗಿರಲಿ. ಪ್ರೀತಿ ಪ್ರತಿಯೊಬ್ಬರ ಬದುಕಲ್ಲೂ ಬತ್ತದ ತೊರೆಯಾಗಬೇಕು.

@ಕಟ್ಟೆ ಶಂಕ್ರಣ್ಣೋ...ಹಿಹಿ ಪಾಪ..ನಿಮ್ ಪಾಡು ಅದಾ? ಹೌದೌದು..ಕೆಲವರಿಗೆ ಇರಿಸುಮುರಿಸು.."ಹುಡುಗನಾಗಿ ಹುಟ್ಟೋದು ಅಂದ್ರೆ ಸಿಕ್ಕಾಪಟ್ಟೆ ಕಷ್ಟ ಕಣ್ರೀ. .." ಅಂದ್ರಿ..ಅದು ಹೇಗೇ ಕಷ್ಟ ಶಂಕ್ರಣ್ಣ..ಸ್ವಲ್ಪ ಹೇಳ್ತೀರಾ..ನೀವು ಒಳ್ಳೆ ಶಂಕ್ರಣ್ಣ ಅಲ್ವಾ?

-ಚಿತ್ರಾ

ಹಿತ್ತಲಮನೆ said...

ಚೇತನಕ್ಕ ಕೂಡ 'ಪ್ರಕಾಶಣ್ಣ' ಅಂತಲೇ ಅಂದಿರ್ತಾಳೆ ಬಿಡಿ...ಒಂದು ಕಡೆ 'ಶುಧ್ಧ ಸ್ನೇಹ' ಅಂತೀರಿ...ಮತ್ತೊಂದು ಕಡೆ ಅಣ್ಣ ಅಂದಿದ್ದಕ್ಕೆ ದಿಗಿಲು ಬೀಳುತ್ತೀರಿ...ನಾಗುನಿಂದಾಗಿ 'ಪ್ರಕಾಶಣ್ಣ' ಅನ್ನುವುದು ಕೂಡ ಹುಡುಗಿಯರಿಗೆ safe ಅಲ್ಲ ಅಂತಾಯ್ತು ! ಹಿಹ್ಹಿಹ್ಹಿ...! ಸುಮ್ನೆ ಕಾಲೆಳೆಯುವದಕ್ಕಂದೆ !

Santhosh Rao said...

ಬೇಗ ಪೂರ್ತಿ ಕಥೆ ಹೇಳಿ ಮುಗಿಸಿ .. ಜಾಸ್ತಿ ಹೊತ್ತು ಇಂಟರ್ವಲ್ ನಲ್ಲಿ ಪಾಪ್ ಕಾರ್ನ್ ತಿಂತಾ ಇರೋಕಾಗಲ್ಲ ..

Ittigecement said...

ಶಿವು ಸರ್...

ಗಂಡು,ಹೇಣ್ಣು ಭೇದವಿಲ್ಲದ ಸ್ನೇಹದ ಕಲ್ಪನೆ ಬಹಳ ಚಂದ..

ಅದಕ್ಕೆ "ಆತ್ಮ ಸಖ" ಅಥವಾ "ಆತ್ಮಸಖಿ" ಅನ್ನ ಬಹುದೇನೋ..
ಅಂಥಹ ಪರಿಶುದ್ಧ ಸ್ನೇಹದ ಭಾವ ಅದು...

ಅಣ್ಣ,ತಮ್ಮ, ಬಾವ, ಅಪ್ಪ,ಸಹೋದರಿ. ಅಮ್ಮ. ಮೈದುನ ಈ ಥರಹದ..
ಸಂಬಂಧಗಳ ಹೊರತಾಗಿ ಮೀರಿದ್ದು "ಈ ಸ್ನೇಹ" ಬಂಧ...

ಧುರ್ಯೋಧನನ ಮಡದಿ ಹಾಗೂ ಕರ್ಣನಿಗೆ ಇದ್ದ ಸ್ನೇಹದ ..
ಉದಾಹರಣೆ ಕೊಡಬಹುದೇನೋ...

ಮದುವೆಯಾದಮೇಲೂ ಈ ಸ್ನೇಹ ಮುಂದುವರೆದಲ್ಲಿ..
ಅವರು ಭಾಗ್ಯವಂತರೇ ಸರಿ..

ನಮ್ಮ ಸಂಸ್ಕ್ರತಿಯಲ್ಲಿ ..
ಇದಕ್ಕೂ ಅವಕಾಶವಿದೆ...

ಮಾನಸಿಕ ಸಧ್ರಡತೆ ಬೇಕು..ವಿಶ್ವಾಸದ ತಳಹದಿ ಬೇಕು..

ಗೆಳೆಯ, ಗೆಳತಿಯರೇ..
ನೀವೆಷ್ಟು ಭಾಗ್ಯವಂತರು..?

ಗೆಳೆಯ... ಶಿವು..
ಚಂದದ ಪ್ರತಿಕ್ರಿಯೆಗಾಗಿ ವಂದನೆಗಳು..

PaLa said...

ಪ್ರಕಾಶಣ್ಣ :),
ವಾರಾಂತ್ಯ ಊರಲ್ಲಿರ್ಲಿಲ್ಲ ನಾನು, ನಿಮ್ಮ ಬರಹ ಓದೋದು ತಡಾ ಆಯ್ತು..
--
ಪಾಲ

shivu.k said...

ಪ್ರಕಾಶ್ ಸರ್,

ನಿಮ್ಮ ಈ ಲೇಖನ ಮತ್ತು ಇವೆಲ್ಲಾ ಪ್ರತಿಕ್ರಿಯೆಗಳನ್ನು ಓದಿದ ಮೇಲೆ ನನ್ನ ಭಾವ ಹೇಳಿದ ಸತ್ಯಕತೆಯೊಂದು ನೆನಪಿಗೆ ಬರುತ್ತಿದೆ...ಅದನ್ನು ನನ್ನದೇ ಶೈಲಿಯಲ್ಲಿ ಬರೆಯುವ ಉತ್ಸಾಹವಿದೆ..ಅದು ವ್ಯಾಲೆಂಟೈನ್ ಡೇಗೆ ತುಂಬಾ ಸೂಕ್ತ ಅನ್ನಿಸುತ್ತೆ. ಪ್ರಯತ್ನಿಸುತ್ತೇನೆ....

Ittigecement said...

ಪೂರ್ಣಿಮಾ..

ಸಾರ್ವತ್ರಿಕವಾಗಿ "ಅಣ್ಣ"ನಾಗುವದರಿಂದ ಲಾಭನೂ ಇದೆ..
ಅದನ್ನು ಮುಂದೊಮ್ಮೆ ಬ್ಲಾಗಿನಲ್ಲಿ ಬರೆಯುವೆ...

ಕೆಲವು ಬಾರಿ ಮನಸ್ಸಿಗೆ ಕಷ್ಟವಾಗುವದೂ ಹೌದು..
ನಿಮ್ಮಣ್ಣನಿಗೆ ಆಗಿದ ಹಾಗೆ..
ಖುಷಿಯೂ ಜಾಸ್ತಿ ಇದೆ..

ಸ್ವಲ್ಪವೇ ಬೇಸರ....

ಇದುವೇ ಜೀವನಾ..
ಇದುವೇ ಜೀವನಾ..

ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆ ಬರುತ್ತಾ ಇರಿ..

Ittigecement said...

ಹೇಮಾರವರೆ...

ಅಂಥಹ ವಿಶ್ವಾಸದ ವ್ಯಕ್ತಿ ಸಿಗಬೇಕು...
ನಮಗೆ ನಂಬುಗೆಯೂ ಬೆಳಿಯಬೇಕು..
ಸ್ನೇಹ ಮೂಡಬೇಕು..
ಸಮಾಜದ ಬಗೆಗೆ ತಲೆ ಕೆಡಿಸಿಕೊಳ್ಳಬಾರದು..

ಸಂಗಡ..

ಸ್ನೇಹಿತ "ವಿಜಯ" ಹೇಳಿದುದೂ ನಿಜ..

ಮತ್ತೆ "ಶಿವು" ಅವರಿಗೆ ನಾನು ಕೊಟ್ಟ ಪ್ರತಿಕ್ರಿಯೆ ಓದಿ...

ಸಂಶಯ ನಿವಾರಣೆ ಆಗಿರಬಹುದೆಂದು ತಿಳಿಯಲೇ..

ಪ್ರತಿಕ್ರಿಯೆಗೆ ವಂದನೆಗಳು..
ಬರುತ್ತಾ ಇರಿ..

Rajath said...

aeh hello, prakashanna, neeneno helde adu estu chenda bhagyavantaru, namma culture nallli adakke avkasha iddu anta, but elli. Nobody accepts that real friendship btwn an married woman and a married man. so many things come inbtwn that relation. If v say that infront of 10 people 9 definately think odd and wont accept 1 may or may not accept. finaly these heartlyfriends end up in saying Ex friends themselves or by people around us. it is not that simple to maintain that. you may have to undergo somuch of emotional imbalance throughout the relation and even with this hardship you one day feel no every step of this relation has very strong limitations which u can not cross in any situations. we may be knowing that this precious relation is shaking because of some unavoidable expressions behind which there is some untold limitations. But we can not cross that and our intelect prefers to b silent to uphold imp persons of our society no matter what it means to that your heartly friend. We all bound to respect this democracy of our society which only belong to we middle classbakras. any way some very special subject of reality.

Ittigecement said...

ವಿಜಯ್..

ನೀವೆನ್ನುವದು ಅಕ್ಷರ ಸಹ ಸತ್ಯ..

ನಿಮ್ಮ ಮಾತನ್ನು ಒಪ್ಪುತ್ತೇನೆ..

ಪ್ರತಿಕ್ರಿಯೆಗೆ ..
ಮತ್ತೊಮ್ಮೆ ಧನ್ಯವಾದಗಳು..

Ittigecement said...

ಮಲ್ಲಿಕಾರ್ಜುನ್..

ಇಡೀ ಕಾಲೇಜಿಗೆ.."ಪ್ರಕಾಶಣ್ಣ"ನಾದ ಮೇಲೆ..

ಚೇತನಾಹೇಗೆ ಎದುರಿಸಿದೆ ಅದನ್ನು ಇದೇ ವಾರ ಹಾಕುವೆ ..


ಯಂಡಮೂರಿಯವರು ಬಹಳ ದೊಡ್ಡ ಹೆಸರು.. ಸರ್..

ನಿಮ್ಮ ಪ್ರತಿಕ್ರಿಯೆ "ಟಾನಿಕ್"ನಂತಿದೆ..

ಮತ್ತೂ ಬರೆಯೋಣ ಎಂದು ಉತ್ಸಾಹ ತರುವಂತಿದೆ..

ನಿಮ್ಮ ಬ್ಲಾಗಿನ "ಪ್ರವಸಕಥನ" ಮತ್ತು "ಫೋಟೊ" ಬಹಳ ಚೆನ್ನಾಗಿದೆ..

ಹೀಗೆ ಬರುತ್ತಾ ಇರಿ..

ಧನ್ಯವಾದಗಳು..

Rajath said...

Hema powaravare, Your question has no correct answer. only way to find answer is to have that friendship and then get the answer practicaly. think off now. have you that confidance? courage? that hunger,? start now and then. . . tell me

Ittigecement said...

ಪ್ರಭುರವರೆ..

ಗೆಳೆಯ.. ಗೆಳತೀಯರಾಗಿ ಇರಬಹುದಲ್ಲ..

ನಾನು ಕಾಲೇಜಿಗೆ ಹೋಗುವಾಗಲೇ ..
ಸ್ವಲ್ಪ ಕಷ್ಟವಾದರೂ ಅಂಥಹ ವಾತಾವರಣ ಇತ್ತು..

ನನಗೆ ತಿಳಿದ ಹಾಗೆ ಈಗ ವಾತಾವರಣ ಚೆನ್ನಾಗಿದೆ..

ಈಗ "ನೀವೆಲ್ಲ" ಓಡಾಡೂವದನ್ನು ನೋಡಿದಾಗ..
ಸಹಜವಾಗಿ ಸಣ್ಣದಾಗಿ"ಹೊಟ್ಟೆಕಿಚ್ಚು" ಆಗುತ್ತದೆ..

ಏನಂತೀರಿ?

ಧನ್ಯವಾದಗಳು...

Ittigecement said...

ಚಿತ್ರಾರವರೆ..

ನಿಮ್ಮ ಹಾರೈಕೆ ಖುಷಿ ತಂದಿದೆ...

ಶಂಕ್ರಣ್ಣ ಹೇಳಿದುದರಲ್ಲೂ ನಿಜ ಇದೆ...

ಎಲ್ಲ ಹುಡುಗೀಯರೂ "ಅಣ್ಣ" ಅಂದುಬಿಟ್ಟರೆ..

ಹುಡುಗನಿಗೆ "ಕಷ್ಟ" ಆಗೋಲ್ವಾ..?

ನೋಡಿದವರೆಲ್ಲ "ಅಣ್ಣಾ " ಅಂದು ಬಿಟ್ರೆ..?

(ತಮಾಷೆಗೆ ಅಂದದ್ದು.. ಸುಮ್ಮನೆ ಕಾಲೆಳೆಯುವದಕ್ಕೆ..!)

ಹ್ಹಾ..ಹ್ಹ,,.!

ಶುಭವಾಗಲಿ.. ಚಿತ್ರಾ..!

Ittigecement said...

ಹಿತ್ತಲಮನೆ ಬೀಗಣ್ಣನವರೆ...

ಚೇತನಾ ನನ್ನ "ಗೆಳತಿಯಾಗಿರಲಿ" ಅನಿಸಿತು...
ಯಾವುದೇ ಕೆಟ್ಟ ಭಾವನೆ ಇಲ್ಲದೆ...

ಒಂದು ಒಳ್ಳೆಯ ಸ್ನೇಹಭಾವದ ಅರ್ಥದಲ್ಲಿ..

ನನಗೆ ಆ ಥರಹದ ಭವನೆ ಇರುವಾಗ..

"ಅಣ್ಣಾ" ಅಂದು ಬಿಟ್ಟರೆ..?

ಬೇಜಾರಾಗೋದಿಲ್ವಾ.. ಹಿತ್ತಲಮನೆಬೀಗಣ್ಣನವರೆ..!!

ಅರ್ಥ ಮಾಡಿಕೊಳ್ಳಿ...!!

ನಾಗು ನನ್ನ ಹೆಸರನ್ನೇ "ಪ್ರಕಾಶಣ್ಣ " ಮಾಡಲು ಹೊರಟಿದ್ದ...

ಅದು ಅವ "ಐಡ್ಯ.. ಮಾಡ್ಯಾರ.."!

ಸಮಾಧಾನವಾಯಿತೇ....?

ಹ್ಹೋ..ಹ್ಹೋ..!

ಧನ್ಯವಾದಗಳು...!



ಅದೇ ಹೆಸಾರಾಗಿ ಬಿಟ್ಟಲ್ಲಿ ಸಮಸ್ಯೇಯೆ ಇರುವದಿಲ್ಲವಲ್ಲ...!

Ittigecement said...

ಸಂತೋಷ್...

ಎಲ್ಲಿ ಹೋಗಿದ್ರಿ.. ಇಷ್ಟು ದಿನ...?
ಬಹಳ ದಿನಗಳ ಭೇಟಿ..!


ಈ ವಾರನೇ ಹೇಳಿ ಬಿಡ್ತೇನೆ ಸ್ವಲ್ಪ ಇರಿ.. ಸರ್...

ವಿರಾಮದ ಸಮಯದಲ್ಲಿ...

ಇಲ್ಲಿನ ಬಿಸಿ ಬಿಸಿ ಚರ್ಚೆ ಓದಿ ಸರ್..

ನಿಮ್ಮ ತಾಳ್ಮೆಗಾಗಿ... ಧನ್ಯವಾದಗಳು..

Ittigecement said...

ಪಾಲಚಂದ್ರ..
ಅಂತೂ ಬಂದಿರಲ್ಲ...

"ಅಣ್ಣ"ನ ಲೇಖನ ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು..!

Ittigecement said...

ಶಿವು..

ನೀವು "ಸ್ಪೆಶಲ್"

ನೀವು ಎನೂ ಮಾಡಿದರೂ "ಸ್ಪೆಶಲ್ " ಇರುತ್ತದೆ..

ಪ್ರೇಮಿಗಳ ದಿನ ನಿಮ್ಮ ಬ್ಲಾಗಿನ ಬಾಗಿಲಲ್ಲಿ ಕಾಯುವೆ..

ಹಾಕಿಬಿಡಿ ಸರ್..

ಕಾಯಿಸ ಬೇಡಿ..

Ittigecement said...

ರಜತ್..

ನೀವು ಯಾವ ಅರ್ಥದಲ್ಲಿ ಹೇಳುತ್ತಿರುವಿರೊ ಗೊತ್ತಾಗುತ್ತಿಲ್ಲ..

ನಾನು ಇಲ್ಲಿ ಬರೆದ ಪ್ರತಿಕ್ರಿಯೆ ಎಲ್ಲವನ್ನೂ ಓದಿ..

ಅಮೇಲೆ ತಿಳಿಸಿ..

ನಿಜ ಇಂಥಹ "ಕಲ್ಪನೇ' ಚಂದ ಹೇಳಿದ್ದೇನೆ...

ಆದರೆ ಇಂಥಹ "ಗೆಳತಿಯರು" ನನಗಿದ್ದಾರೆ..

ಹಲವರಿಗೂ ಇದ್ದಾರೆ...

ಈ ಲೆಖನ ಬರೆದ ಮೇಲೆ ನನಗೆ ಹಲವರ ಫೋನ್ ಬಂದಿದೆ ,,
ಕೆಲವರ ಪ್ರತಿಕ್ರಿಯೆಯಲ್ಲಿ ಇದು ವ್ಯಕ್ತವಾಗಿದೆ..

ಸಮಸ್ಯೆ ಅದಲ್ಲ...

ಅಂಥಹ ಶುದ್ಧ ಸ್ನೇಹಕ್ಕೆ ನಾವೆಷ್ಟು "ಅರ್ಹರು..?"

ನಮ್ಮ ಅನುಬಂಧ ಅವರ ಸಂಗಡ ಹೇಗೆ ಇದೆ..?

ಅವರಿಗೆ ತೊಂದರೆಯಾಗದೆ, ಭಾವನೆಗಳನ್ನು ನೋಯಿಸದೆ..
ಎಷ್ಟು ಅರ್ಥ ಮಾಡಿ ಕೊಂಡಿದ್ದೇವೆ..?

ಅಲ್ಲಿ ಬಯಸುವದಕ್ಕಿಂತ ಹೆಚ್ಚು "ತ್ಯಾಗದ" ಭಾವ ಇರಬೇಕು..

ಸಮಾಜ ಸಂಶಯ ಬಾರದ ರೀತಿಯಲ್ಲೂ ಇರಬಹುದಲ್ಲ..

ಇದ್ದವರಿದ್ದಾರೆ..

ಅದು ಒಂದು ಸ್ವಾರ್ಥ ರಹಿತ ಅನುಬಂಧ...

ಕೆಲವು ಸಂದರ್ಭದಲ್ಲಿ ದೂರದಿಂದ ಖುಷಿ ಪಡಬೇಕಾಗುತ್ತದೆ..

ನೀವು ಚರ್ಚೆಗೆ ಒಂದು ಗಂಭೀರತೆ ತಂದಿದ್ದು ಖುಷಿಯಾಯಿತು..

ನಾನೇದಾರೂ ತಪ್ಪಿದ್ದಲ್ಲಿ ಕ್ಷಮಿಸಿ..

ಧನ್ಯವಾದಗಳು..

ಕೆ. ರಾಘವ ಶರ್ಮ said...

ಚೇತನಾ ಬಂದು ಎಂತ ಹೇಳ್ತು ಹೇಳಿ ಕುತೂಹಲ ಆವ್ತಿದ್ದು...

ಅದರ ಬೇಗ ಬ್ಲಾಗ್ಲಿ ಅಪ್ಡೇಟ್ ಮಾಡಿ "ಪ್ರಕಾಶಣ್ಣ"...

:-) :)

Ittigecement said...

ರಾಘವ..

ನನ್ನ ಬ್ಲಾಗಿಗೆ ಸ್ವಾಗತ...

ಸ್ವಲ್ಪವೇ... ತಡ..

ಇನೊಂದೆರಡು ದಿನ...

ಸ್ವಲ್ಪ... ಕೆಲಸದ ಒತ್ತಡ...

ನಿಮ್ಮ ತಾಳ್ಮೆಗೆ ನನ್ನ ನಮನ....

ಪ್ರೋತ್ಸಾಹ ಹೀಗೆಯೆ ಇರಲಿ...

ಹೀಗೆಯೆ ಬರುತ್ತಾ ಇರಿ...

Umesh Balikai said...

ಹ್ಹ ಹ್ಹ ಹ್ಹಾ ...ಎಲ್ಲಿ ನಾನು ಮೆಚ್ಚಿದ ಹುಡುಗಿ ರಾಕೀ ಕಟ್ಟಿ "ಅಣ್ಣ" ಎನ್ನುತ್ತಾಳೋ ಅಂತ ಹೆದರಿ ರಾಕೀ ಹಬ್ಬದ ದಿನ ಕಾಲೇಜಿಗೇ ಚಕ್ಕರ್ ಹೊಡೆದದ್ದಿದೆ. ಒಂದು ಸಮಸ್ಯೆಯನ್ನು ಅತಿ ಸುಲಭವಾಗಿ ಬಗೆಹರಿಸುವುದು ಹೇಗೆ ಅಂತ ನಾಗುವಿನಿಂದಲೇ ಕಲಿಯಬೇಕು. ಮುಂದಿನ ಭಾಗಕ್ಕಾಗಿ ಕಾತರದಿಂದ ಕಾಯುತ್ತಿರುವೆ.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಕಥೆಯನ್ನು ಹೆಣೆಯುವುದರಲ್ಲಿ ತಾವು ಸಿದ್ಧಹಸ್ತರು. ತಮ್ಮ ಕಲ್ಪನೆ ಎಷ್ಟೋ ಹೊಸ ಜೀವಗಳನ್ನೇ ಸೃಷ್ಟಿಸುತ್ತದೆ. ಬರವಣಿಗೆ ಸಾಗುತ್ತಿರಲಿ.

Rajath said...
This comment has been removed by a blog administrator.
ಭಾರ್ಗವಿ said...

ಇಲ್ಲಿ ನಿಮ್ಮ ನಾಗು ಸಹಾಯವಿಲ್ಲದೆ ನೀವೇ ಪ್ರಕಾಶಣ್ಣ,,,,, ಪ್ರಚಾರ ಮಾಡಿಬಿಟ್ಟಿರಿ ಹಹಹ.
ಚೆನ್ನಾಗಿದೆ ಬರಹ. ನಮ್ಮನೆ ಪಕ್ಕದಮನೆಯವರೊಬ್ಬರು ಹೊಸದಾಗಿ ಮದುವೆಯಾದವರು. ಅವರ ಯಜಮಾನ "ತಮ್ಮಣ್ಣ" ಅಂತ. ದೊಡ್ದವರೆಲ್ಲರು ಆಕೆಗೆ ತಾಯೀ,,,, ನಿನ್ನ ತಮ್ಮಣ್ಣ ಅದನೇನೆ? ಅಂದ್ರೆ ಪಾಪ ಆಕೆ ಮುಖಾನೆ ನೋಡೋಕಾಗ್ತಿರಲಿಲ್ಲ. ನಾವೆಲ್ಲ ಚಿಕ್ಕವರು. ನಮಗದೇ ಆಟ. ಬರುಬರುತ್ತಾ ಆಕೆಗೂ ಅಭ್ಯಾಸವಾಗಿಬಿಟ್ಟಿತ್ತು:).

Ittigecement said...

ಉಮೀ..

ಚೇತನಾ ಒಬ್ಬಳಾದರೂ..

ಗೆಳತಿಯಾಗಿರಲಿ.. ಎನ್ನುವದು ನನ್ನ ಆಶಯವಾಗಿತ್ತು...

ಆ ನಾಗುವಿನ ತಲೆಯಲ್ಲಿ ಏನಿತ್ತೋ?

ನಿಮ್ಮ ರಕ್ಷಾ ಬಂಧನದ ಕಥೆ ಚೆನ್ನಾಗಿದೆ..

ಇನ್ನೊಂದೆರಡು ದಿನ ಕಾಯಿರಿ..

ಕೆಲಸದ ಒತ್ತಡ..ಬರೆಯುವೆ...

ಪ್ರೋತ್ಸಾಹ ಹೀಗೆಯೆ ಇರಲಿ...

ಧನ್ಯವಾದಗಳು...

Ittigecement said...

ಗುರುಮೂರ್ತಿಯವರೆ...

ನನ್ನ ಬ್ಲಾಗಿಗೆ ಸ್ವಾಗತ..

ವಾಸ್ತವದ ನೆಲೆಗಟ್ಟಿನಲ್ಲಿ ಸ್ವಲ್ಪ ಕಲ್ಪನೆ ಇದ್ದಲ್ಲಿ ಮಜ ಇರುತ್ತದೆ..

ನಿಮ್ಮ ಬ್ಲಾಗೂ ಕೂಡ ಚೆನ್ನಾಗಿದೆ..

ಹೀಗೆ ಬರುತ್ತಾ ಇರಿ..

ಧನ್ಯವಾದಗಳು

Ittigecement said...

ಭಾರ್ಗವಿಯವರೆ....

ಇಲ್ಲಿ ನನ್ನಾಗಲೇ ಎಲ್ಲರೂ "ಪ್ರಕಾಶಣ್ಣ"ನನ್ನಾಗಿ ಮಾಡಿಬಿಟ್ಟಿದ್ದಾರೆ...

"ಸುನಾಥ" ಸರ್ ಹೇಳುವಹಾಗೆ "ಅಣ್ಣ" ನೆನಿಸಿ ಕೊಳ್ಳಲು..
ಪುಣ್ಯ ಮಾಡಿರಬೇಕು..

ಈ ಹೆಸರಿನ ಸೊಗಸಿನ ಬಗೆಗೆ..
ಒಳ್ಳೆಯ ನಗುವಿನ ವಿಷಯವಿದೆ..
ಮುಂದೆ ಒಮ್ಮೆ ಬರೆಯುವೆ...

ಭಾರ್ಗವಿಯವರೆ..

ತಮ್ಮ ಪ್ರೋತ್ಸಾಹ ಹೀಗೆಯೆ ಇರಲಿ

ಧನ್ಯವಾದಗಳು..

b.saleem said...

ಪ್ರಕಾಶ ಸರ್
ನಿಮ್ಮ ಕಾಲೇಜಿನ ದಿನಗಳು ಅದ್ಭುತವಾಗಿವೆ.
ಇದೆರಿತಿ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ
ಪ್ರಕಾಶ ಸರ್ ಅಲ್ಲಲ್ಲ ಪ್ರಕಾಶಣ್ಣ .

Ittigecement said...

ಸಲೀಮ ರವರೆ..

ನಿಮ್ಮ ಫೋಟೊಗ್ರಫಿಯ ಬಗೆಗೆ ಸ್ನೇಹಿತ "ಶಿವು"

ಆಗಾಗ ಹೇಳುತ್ತಿರುತ್ತಾರೆ..

ನಿಮ್ಮದೂ ಒಂದು ಬ್ಲಾಗ್ ಓಪನ್ ಮಾಡಿ..

ನಮಗೂ ನಿಮ್ಮ ಕಲೆಯನ್ನು ಉಣ ಬಡಿಸಿ...

ಪ್ರೋತ್ಸಾಹ ಹೀಗೆಯೆ ಇರಲಿ..

ಬರುತ್ತಾ ಇರಿ..

"ಬಹೂತ್.. ಶುಕ್ರಿಯಾ.."!!

ಧನ್ಯವಾದಗಳು..

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್
ಒಂದು ಜೋರು ಮಳೆ ಬಂದು, ವಾತಾವರಣ ಸ್ವಲ್ಪ ತಿಳಿಯಾದ ಮೇಲೆ ನಾನು ನಿಮ್ಮ ಬ್ಲಾಗಿಗೆ ಬಂದಂತಿದೆ, ಅಭಿಪ್ರಾಯಗಳ ಜಡಿ ಮಳೆಯಾಗುತ್ತಲೇ ಇದೇ ಇಲ್ಲಿ, ಬೆಳಿಗ್ಗೆಯಿಂದ ನಿಮ್ಮ ಈ ಲೇಖನವನ್ನು ಮತ್ತು ಎಲ್ಲ ಅಭಿಪ್ರಾಯವನ್ನು ಓದಿ ಮುಗಿಸಿದೆ.
ನಾನು ಪಿ.ಯು.ಸಿ ಯಲ್ಲಿದ್ದಾಗ ನನ್ನ ಗೆಳೆಯನೊಬ್ಬ ನಮ್ಮ ಮನೆಯ ಸಮೀಪದಿಂದ ಕಾಲೇಜಿಗೆ ಬರುತ್ತಿದ್ದ ಹುಡುಗಿಯನ್ನು ಇಷ್ಟಪಟ್ಟಿದ್ದ, ಇವನ ಕೀಟಲೆ ಜಾಸ್ತಿಯಾದ್ದರಿಂದ ರಕ್ಷಾ ಬಂಧನದಲ್ಲಿ ಅವನನ್ನು ಹಿಡಿದು ರಾಖಿ ಬಿಗಿದು "ಅಣ್ಣಾ" ಅಂತ ಕರೆದು ಸೇಡು ತೀರಿಸಿ ಕೊಂಡಿದ್ದಳು. ಕೊನೆಗೆ ಅವಳು ನನ್ನ ಜೊತೆ ಸ್ವಲ್ಪ ಸಲುಗೆಯಿಂದ ಇದ್ದದ್ದನ್ನು ಸಹಿಸಿಕೊಳ್ಳದ ಗೆಳಯೋತ್ತಮ ಅವಳನ್ನು ತಡೆದು ನನಗು ರಾಖಿ ಕಟ್ಟಿಸಿಬಿಟ್ಟಿದ್ದ, ಎಲ್ಲ ನಾನು ಆ ಹುಡುಗಿಯ ಹಿಂದೆ ಬಿದ್ದಿದ್ದೆ ಅಂತ ಅಪಾರ್ಥ ಮಾಡಿ ಕೊಂಡು ಬಿಟ್ಟಿದ್ದರು.
ಮತ್ತೆ ನಿಮ್ಮ ಈ ಕಥೆಯನ್ನು ಅರ್ಧಕ್ಕೇ ನಿಲ್ಲಿಸಿದ್ದೀರಿ, ಮೊಗೆಕಾಯಿ ಕಥೆ ಕೂಡ ಮುಂದುವರೆಸಿಲ್ಲ, ನಮಗೆ ಅನ್ಯಾಯ(!) ಮಾಡದೆ ಕಥೆ ಪೂರ್ತಿಯಾಗಿ ಹೇಳಿ ಮುಗಿಸಿದರೆ ನಿಮಗೂ ಒಳ್ಳೆಯದು(?).

ಈ ಲೇಖನದ ಬಗ್ಗೆ ಹೆಚ್ಚಿನದೇನು ಹೇಳಲು ನನಗೆ ಉಳಿದಿಲ್ಲ, ಈಗಾಗಲೇ ಎಲ್ಲರು ಹೇಳಿಯಾಗಿದೆ. ನಿಮ್ಮ ತಿಳಿ ಹಾಸ್ಯ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.
-ರಾಜೇಶ್ ಮಂಜುನಾಥ್

chetana said...

ಮಜವಾಗಿದೆ,
ನಕ್ಕೂ ನಕ್ಕೂ ಸುಸ್ತಾಗುತ್ತಾ ಓದಿದೆ.
ಕಾಲೇಜಿನ ದಿನಗಳು ನೆನಪಾದವು.

- ಚೇತನಾ ತೀರ್ಥಹಳ್ಳಿ

Ittigecement said...

ರಾಜೇಶ್....

ಎಲ್ಲಿಗೆ ಹೋಗಿಬಿಟ್ಟಿದ್ದೀರಿ?

ನಿಮ್ಮ ಘಟನೆ ಓದಿ ನಗು ಬಂತು..

ಪ್ರೇಮವಿಲ್ಲಾದಿದ್ದಾಗ.. "ರಾಖಿ" ಕಟ್ಟಿದರೆ

ಏನೂ ಅನ್ನಿಸುವದಿಲ್ಲ...ಅಲ್ಲವಾ?

ರಾಜೇಶ್..

ಮೊಗೆಕಾಯಿ ಕಥೆ ಅರ್ಧಕ್ಕೆ ಬಿತ್ಟ್ಟಿಲ್ಲ..

ಒಂದು ಹಂತಕ್ಕೆ ಮುಗಿಸಿದ್ದೇನೆ..

ನಾಗು, ರಾಜಿಯ "ಅನುಮತಿಗೆ" ಕಾಯುತ್ತಿರುವೆ..

ಈ ವಾರ "ಚೇತನಾ ಕಥೆ" ಮುಂದುವರೆಸುವೆ..

ಎಲ್ಲವನ್ನೂ ಬರೆದರೆ ಉದ್ದವಾಗಿಬಿಡುತ್ತದೆ..

ನಿಮ್ಮ ಪ್ರೋತ್ಸಾಹ..

ನನಗೆ ಉತ್ಸಾಹ..

ಧನ್ಯವಾದಗಳು...

Ittigecement said...

ಚೇತನಾ ತೀರ್ಥಹಳ್ಳಿಯವರೆ..


ನಿಮ್ಮ ಬಗೆಗೆ ಓದಿದ್ದೇನೆ..
ನಿಮ್ಮ ಬರಹಗಳ ಅಭಿಮಾನಿ ನಾನು..

ನೀವು ಮೆಚ್ಚಿದ್ದು ನನಗೆ "ಹೆಮ್ಮೆ"

ನನ್ನ ಬ್ಲಾಗಿಗೆ ಸ್ವಾಗತ..

ಹೀಗೆ ಪ್ರೋತ್ಸಾಹ ಇರಲಿ..

ಧನ್ಯವಾದಗಳು..

Unknown said...

ಪ್ರಕಾಶಣ್ಣಾ, ಮುಂದಿನ ಕಂತಿಗೆ ಕಾಯ್ತಾ ಇದ್ದಿ.
ನನಗೂ ಬಹಳ ಸಲ ಅನ್ನಿಸಿದ್ದು ಇದರ ಬಗ್ಗೆ. ಬಹಳ ಸಲ ನಾವೂ ಸಲ ಒಂದು ಸುಮ್ಮನೆಯ ಗೆಳೆತನ ಮಾಡಲೆ ಹೆದ್ರಕತ್ವನ ಹೇಳಿ ಇದ್ದು ನಂಗೆ. ಆದ್ರೆ ಆ ರೀತಿಯ ಗೆಳೆತನ ಇದ್ದರೆ ಒಂದು ಆರೋಗ್ಯಪೂರ್ಣವಾದ ವಾತಾವರಣ ಇರ್ತು ಹೇಳಿ ಅನ್ನಿಸ್ತು.

Ittigecement said...

ಮಧು...

ಪುರಾಣದಲ್ಲಿ ಧುರ್ಯೋಧನನ ಮಡದಿಗೂ,
ಕರ್ಣನಿಗೂ ಅಂಥಹ "ಸ್ನೇಹದ"ದ ಬಗೆಗೆ ಪ್ರಸ್ತಾಪ ಬರುತ್ತದೆ

ನಮ್ಮ ಸಂಸ್ಕ್ರತಿಯಲ್ಲೂ ಇದು ಇತ್ತೆಂದು ಗೊತ್ತಾಗುತ್ತದೆ..

ಆ ಗೆಳೆತನ ಸಿಕ್ಕವರು ಪುಣ್ಯವಂತರು ಎಂದು ನನ್ನ ಭಾವನೆ..

ಆ "ಅನುಬಂಧವನ್ನು" ಅನುಭವಿಸುವದೂ ಭಾಗ್ಯವೇ ಸರಿ..

ಮದುವೆಯ ಮೊದಲು ಸಮಸ್ಯೆಯಾಗುವದಿಲ್ಲ..

ಮದುವೆಯಾದಮೇಲೆ "ಇತಿಮಿತಿ"ಗಳನ್ನರಿತು..

ನಡೆದಲ್ಲಿ.. ಇದು ಸಾಧ್ಯ..

ನಿಮಗೂ ಅಂಥಹ "ಅನುಬಂಧ" ಸಿಗಲೆಂದು ಹಾರೈಸುವೆ..


ಪ್ರೇಮಿಗಳ ದಿನದ ಬಗೆಗೆ ಬೇರೆಯದನ್ನೇ ಬರೆಯುವ ವಿಚಾರ ಇತ್ತು..

ಆದರೆ ಇದರ ಮುಂದುವರೆದ ಭಾಗ ಬರೆಯುವೆ..
ಸ್ವಲ್ಪ ಕಾಯಿರಿ ಪ್ಲೀಸ್...

ಧನ್ಯವಾದಗಳು..

ವಿನುತ said...

ಪ್ರಕಾಶ್ ರವರೇ, ತಪ್ಪಾಯ್ತು ಪ್ರಕಾಶಣ್ಣರವರೇ :))
ಸಂದರ್ಭಕ್ಕನುಸಾರವಾಗಿ, ಗಂಭೀರವಾದ ಪ್ರಶ್ನೆಯೊಂದಕ್ಕೆ, ಹಾಸ್ಯದ ಲೇಪನ ಕೊಟ್ಟು ಎದೆಗುದಿಯಲ್ಲಿ ನಿಲ್ಲಿಸಿದ್ದೀರಿ. ಧನ್ಯಳಾದೆ ಓದಿ!!
’ಗೆಳೆತಿಯೊಬ್ಬಳಿದ್ದರೇ’ ಎಂಬ ನಿಮ್ಮ ಪ್ರಶ್ನೆ ಇಂದಿಗೂ ಪ್ರಸ್ತುತ, ’ಗೆಳೆಯನೊಬ್ಬ ಸಿಕ್ಕರೆ?’ ಎನ್ನುವ ಹುಡುಗಿಯರ ಧ್ವನಿಯೊಂದಿಗೆ. ಗೆಳೆತನ ಮತ್ತು ಪ್ರೀತಿ ಇವುಗಳ ನಡುವಿನ ಎಳೆ ತೀರ ಸಣ್ಣದಾಗಿದೆಯೆಂದು ನಾವು ಭಾವಿಸಿರುವುದೇ ಇಂತಹ ಸಂಬಂಧಗಳಿಂದ ನಮ್ಮನ್ನು ಹಿಂಜರಿಯುವಂತೆ ಮಾಡುತ್ತದೆಯೇನೊ? ಹಮ್ಮು, ದುರುದ್ದೇಶ, ದುರಾಲೋಚನೆಗಳಿಲ್ಲದ ಅಂತಹ ಸಂಬಂಧವೇನಾದರೂ ದೊರೆತಲ್ಲಿ ನಮ್ಮ ಪುಣ್ಯವೇ ಸರಿ!

ಮನಸ್ವಿ said...

ಎಲ್ಲರೂ ಅಣ್ಣ ಅಣ್ಣ ಅಂದ್ರೆ ನಿಂಗೆ ಬೇಜಾರ್ ಆಗ್ತು ಹೇಳ್ದೆ ಅಲ್ದ... ಅದ್ಕೆ ನಾನು ಹಂಗೆ ಕರ್ಯದಿಲ್ಲೆ! ಹೌದು ಅತ್ತಿಗೆಗೆ ಯಾವ ಊರಪಾ?! ಹೃದಯ ಒಂದೇ ಬಾಯಿಗೆ ಬಂದಿತ್ತಾ.. ಕಿಡ್ನಿ ಏನಾತು....?.. ಕಾಯ್ತ ಇರ್ತಿ ಬರಿ ಬಾಯಿಗೆ ಬಂದಿದ್ದ ಹೃದಯದ ಬಗ್ಗೆ.. :)

ಓದಿಗೊಂದು ಬ್ಲಾಗು... said...

ಪ್ರಕಾಶಣ್ಣ.....
ಚೇತನ ನಿಮ್ಮ ಗೆಳತಿ.... ಆದರೂ ಹತ್ತಿರ ಬರುವಾಗ ಢವ ಢವ.... ಬರಿ ಗೆಳತಿಯೋ.... ಇಲ್ಲ ಜನುಮದ ಗೆಳತಿಯೋ?? ಹಾಗಿರಲಿ, ನಿಮ್ಮ ಗೆಳತಿ ಈಗ ನಿಮ್ಮ ಸಂಪರ್ಕದಲ್ಲಿದ್ದಾಳೆಯೇ??

Ittigecement said...

ವಿನುತಾರವರೆ..

ನನ್ನ ಬ್ಲಾಗಿಗೆ ಸ್ವಾಗತ..

ಎಲ್ಲರಿಗೂ ಅಂಥಹ ಸ್ನೇಹ ಬೇಕು ಅನಿಸುತ್ತದೆ..

ಕೆಟ್ಟ ಭಾವನೆಗಳಿಲ್ಲದ ಆ ಅನುಭಾವ

ಪರಿಶುದ್ಧ ಹ್ರದಯಕ್ಕೆ ಮಾತ್ರ ಲಭಿಸುತ್ತದೆ

ನಿಮ್ಮ ಮಾತು ನಿಜ..

ನಿಮ್ಮ ಬ್ಲಾಗಿನ ಕವಿತೆ ನನಗೆ ಬಹಳ ಇಷ್ಟ ಆಯಿತು

ಪ್ರೀತಿಯ ಹಲವು ಮಜಲುಗಳನ್ನು ತೆರೆದಿಟ್ಟಿದ್ದೀರಿ..

ಪ್ರತಿಕ್ರಿಯೆ ಧನ್ಯವಾದಗಳು

Ittigecement said...

ಮನಸ್ವಿ..

ಆಗ ಅಣ್ಣ ಅಂದಿದ್ದಕ್ಕೆ ಕಷ್ಟವಾಗಿತ್ತು.. ಈಗಲ್ಲ ಮಾರಾಯಾ..!

ಗೆಳತಿ ಎನ್ನುವದು ಹ್ರದಯಕ್ಕೆ ಅರ್ಥವಾಗುವ ವಿಷಯ ಅಲ್ಲವಾ..?
ಅಲ್ಲಿ ಕಿಡ್ನಿಗೇನು ಕೆಲಸ..?

ಹ್ಹ..ಹ್ಹ..!

Ittigecement said...

ತಮ್ಮಾ... (ಓದಿಗೊಂದು ಬ್ಲಾಗು)

ಎಲ್ಲ ಹೆಣ್ಣುಮಕ್ಕಳು ಪ್ರಕಾಶಣ್ಣ..ಪ್ರಕಾಶಣ್ಣ.

ಅಂತಿದ್ರಪಾ..

ಇವಳಾದ್ರೂ "ಗೆಳೆಯಾ" ಅನ್ನಲಿ ಎನ್ನೋ ಆಸೆ ಇತ್ತು ಕಣಪ್ಪಾ..

ಈ ಗೆಳತಿ ಅನ್ನೋದು ಹ್ರದಯಕ್ಕೆ ಸಂಬಂಧಿಸಿದ ವಿಶಯ ಅಲ್ಲೇನಪಾ..?

ಹಾಗಾಗಿಎದೆಯಲ್ಲಿ.. "ಡವ..ಡವ,,.. ಅಂತಿತ್ತಪಾ..!

ಈಗಲೂ ಸಂಪರ್ಕ ಇದೆಯಾ..?

ಅವಳು ಎಂಥಹ ಗೆಳತಿ..?

ಇದಕ್ಕೆಲ್ಲಾ....

ಮುಂದಿನ ಲೇಖನ ಓದಿ..

ಮತ್ತೆ ಪ್ರತಿಕ್ರಿಯೆ ಕಡಬೇಕು ನೋಡ್ರಪಾ..!

ನಿಮ್ಮ ಪ್ರತಿಕ್ರಿಯೆ ಶರಣ್ರೀ ಯಪಾ..!