ಇದ್ದಕ್ಕಿದ್ದಂತೆ... ಮೈಯೆಲ್ಲ ಬೆವರಿತು...
ಎದೆಯಲ್ಲಿ ಒಂದು ತರಹದ ನೋವಿನ ಛಳಕು...!
ಮೈ ಅದುರತೊಡಗಿತು...!
ಮೈ ಅದುರತೊಡಗಿತು...!
ಸಾವಿರಾರು ಸೂಜಿಗಳಿಂದ ನನ್ನ ಹೃದಯವನ್ನು ಚುಚ್ಚಿದಂತಾಯಿತು..
ತಡೆಯಲಾರದ ನೋವು... !
ಜೋರಾಗಿ ಕೂಗಬೇಕೆಂದು ಕೊಂಡೆ...
ಧ್ವನಿ ಹೊರಗೆ ಬರಲಿಲ್ಲ....
ಅಯ್ಯೋ.. !!
ಇದೇ.. ನನ್ನ ಸಾವಾ...?
ನಾನು ಸಾಯುತ್ತಿದ್ದೇನಾ..? ...
ಅಯ್ಯೋ.. !
ಅಸಾಧ್ಯ ನೋವು... ನೋವು...!
ನನ್ನ ಹೃದಯ ಒಡೆದು ಹೋಗುತ್ತಿದೆಯಾ....?
ಎದೆಯನ್ನು ಗಟ್ಟಿಯಾಗಿ ಹಿಡಿದುಕೊಂಡೆ...
ಬದುಕಿನ ಕಟ್ಟಕಡೆಯ ನೋವು ಇದೇನಾ?
ನಿಲ್ಲಲಾಗಲಿಲ್ಲ....
ಕಣ್ಣು ಕತ್ತಲೆ ಸುತ್ತಿ ಬಂತು...
ನಾನು ಬೀಳುತ್ತಿರುವೆ... ಅಯ್ಯೋ.. ಆಯ್ಯೋ....!!
.... .......... ....... ....
ಎಚ್ಚರಾಗುತ್ತಿದೆ...
ಕಣ್ಣುಬಿಡಲು ಪ್ರಯತ್ನಿಸಿದೆ.....
ಮೆಲ್ಲಗೇ... ಕಣ್ಣು ಬಿಟ್ಟೆ...
ಮಂಜು.. ಮಂಜಾಗಿ.. ಅಸ್ಪಷ್ಟವಾಗಿ ಕಾಣಿಸಿತು...
ಮಂಜು.. ಮಂಜಾಗಿ.. ಅಸ್ಪಷ್ಟವಾಗಿ ಕಾಣಿಸಿತು...
ಕಣ್ಣು ಬಿಡಲಾಗಲಿಲ್ಲ...
"ನೋಡಿ ಇವರ ಹತ್ತಿರದವರು ಯಾರು.. ?
ಅವರನ್ನು ಸ್ವಲ್ಪ ಅರ್ಜಂಟಾಗಿ ಕರೆಸಿಬಿಡಿ...
ಇವರು ಹೆಚ್ಚೆಂದರೆ ಇನ್ನೆರಡು ದಿನ ಬದುಕ ಬಹುದು...
ಮೊದಲೇ ಬಂದಿದ್ದರೆ ...ಏನಾದರೂ ಪ್ರಯತ್ನ ಮಾಡ ಬಹುದಿತ್ತು...
ಈಗ ಪರಿಸ್ಥಿತಿ ಕೈ ಮೀರಿದೆ.."
ಅಂದರೆ....! ?
ನಾನು ಸಾಯ್ತಾ ಇದ್ದೀನಾ?
ಇದು ನನ್ನ ಕೊನೆ.. !
ನಾನು ಸಾಯ್ತಾ ಇದ್ದೀನಾ?
ಇದು ನನ್ನ ಕೊನೆ.. !
ಮತ್ತೆ ಸೂಜಿ ಚುಚ್ಚಿದ ನೋವು !
" ಡಾಕ್ಟ್ರೆ..
ಇವರಿಗೆ ಹತ್ತಿರದವರು ಯಾರೂ ಇಲ್ಲ...
ಹೆಂಡತಿಯೊಡನೆ ಪ್ರತ್ಯೇಕವಾಗಿದ್ದಾರೆ.."
ಜೀವನ ಪೂರ್ತಿ ಹಣ.. ಹಣ ಅಂತ ಹಣದ ಹಿಂದೆಯೇ.. ಬಿದ್ದಿದ್ದರು..
ಹೆಂಡತಿಯೊಡನೆ ಪ್ರತ್ಯೇಕವಾಗಿದ್ದಾರೆ.."
ಜೀವನ ಪೂರ್ತಿ ಹಣ.. ಹಣ ಅಂತ ಹಣದ ಹಿಂದೆಯೇ.. ಬಿದ್ದಿದ್ದರು..
ತುಂಬಾ ಪ್ರ್ಯಾಕ್ಟಿಕಲ್ ಮನುಷ್ಯ..
ಪಕ್ಕಾ ವ್ಯವಹಾರಸ್ಥ..
ಇವರ ಮಕ್ಕಳೂ.. ಸಹ ಇವರ ಹತ್ತಿರ ಇಲ್ಲ....
ಇವರ ಮಕ್ಕಳೂ.. ಸಹ ಇವರ ಹತ್ತಿರ ಇಲ್ಲ....
ತನ್ನ ಮಕ್ಕಳಿಗೆಲ್ಲ ಪ್ರತ್ಯೇಕ ಮನೆ ಮಾಡಿಕೊಟ್ಟು ಇವರು
" ಹೌದಾ ? ..
ಇವರ ಮಕ್ಕಳಿಗೆ ಕರೆಸಿ..
ಇವರ ಮಕ್ಕಳಿಗೆ ಕರೆಸಿ..
ಇವರ ಮಡದಿಗೂ ತಿಳಿಸಿ...
ಇವರನ್ನು ಮನೆಗೆ ಕರ್ಕೊಂಡು ಹೋಗ್ತಾರೋ..
ಅಥವಾ ಜೀವ ಹೋಗೋ ತನಕ ಇಲ್ಲೇ ಇಡ್ತಾರೋ ಅವರು ನಿರ್ಣಯಿಸಲಿ..
ನಮ್ಮ ಬಿಲ್ ಯಾರು ಕೊಡುತ್ತಾರೆ.. ನೋಡೋಣ..
ನಾನು ಆಮೇಲೆ ಬರ್ತೇನೆ.."
ಬಹುಷಃ ... ಡಾಕ್ಟರ್ ಹೋದರು ಅನಿಸುತ್ತದೆ..
ನನಗೆ ಷಾಕ್.. !!
ಅಯ್ಯೋ... ದೇವರೇ.. !!!
ನಾನು ಸಾಯ್ತಾ ಇದ್ದೀನಾ?..
ಮೆಲ್ಲಗೇ ಕಣ್ಣು ಬಿಟ್ಟೆ...
ನನ್ನ ಹತ್ತಿರದದಲ್ಲಿದ್ದವರು ಹೆಂಡತಿಗೆ ಕೂಗಿ ಕರೆದರು...
ನನ್ನಾಕೆ ಓಡೋಡಿ ಬಂದಳು... !
"ಆಯಾಸ ಮಾಡ್ಕೋಬೇಡಿ... ಆಸ್ಪತ್ರೆಯಲ್ಲಿದ್ದೀರಿ...
ಏನೋ ಸಣ್ಣ ತೊಂದರೆಯಾಗಿದೆ..
ಎಲ್ಲವೂ ಸರಿಯಾಗುತ್ತದೆ ಅಂತ ಡಾಕ್ಟರ್ ಹೇಳಿದ್ದಾರೆ.."
ನನ್ನಾಕೆ ಮುಖ ನೋಡಿದೆ...
ಎಂಥಹ ಮುಗ್ಧೆ ನನ್ನಾಕೆ.. !
ಅಡಿಗೆ ಮನೆ..
ದೇವರ ಮನೆಯಲ್ಲೇ... ತನ್ನ ಜೀವನ ಪೂರ್ತಿ ಕಳೆದಳು.. !!
ದೇವರ ಮನೆಯಲ್ಲೇ... ತನ್ನ ಜೀವನ ಪೂರ್ತಿ ಕಳೆದಳು.. !!
ಕೇವಲ ನನ್ನ ಬೇಕು ಬೇಡಗಳಿಗಾಗಿ ಬದುಕಿದಳು....
ಏನೇನೋ.. ವ್ರತಗಳು...!
ವಾರಕ್ಕೆ ಮೂರು ದಿನ ಉಪವಾಸಗಳು... !
"ಯಾಕೆ .. ಈ ಥರಹ ಉಪವಾಸ ಮಾಡ್ತಿಯಾ?
ಅಪರಾಧಿ ಮನೋಭಾವನೆ ದೇವರ ಭಕ್ತಿಗೆ ಕಾರಣವಂತೆ..
ನಿನ್ಯಾಕೆ ಇಷ್ಟೆಲ್ಲಾ ವ್ರತ ಮಾಡ್ತಿಯಾ..?"
ಅಂತ ಒಮ್ಮೆ ಕೇಳಿದ್ದೆ...
ಅಂತ ಒಮ್ಮೆ ಕೇಳಿದ್ದೆ...
"ನೋಡಿ..
ನಿಮಗೆ ದೇವರ ಮೇಲೆ ಭಕ್ತಿ ಇಲ್ಲ.. .
ನಿಮಗೆ ದೇವರ ಮೇಲೆ ಭಕ್ತಿ ಇಲ್ಲ.. .
ನನಗೆ ಇದೆ..
ಅದನ್ನಾದರೂ ಮಾಡಲು ಬಿಡಿ..
ಅದನ್ನಾದರೂ ಮಾಡಲು ಬಿಡಿ..
ದಯವಿಟ್ಟು.."
ಇವಳಿಗೆ ಜೀವನ ಪೂರ್ತಿ ಎಷ್ಟೆಲ್ಲ ತೊಂದರೆ ಕೊಟ್ಟೆ..!
ಛೇ.. !
ಹೊರಗಿನ ಪ್ರಪಂಚ ನೋಡಲೂ ಸಹ ಬಿಡಲಿಲ್ಲ...
ಮನೆಯಲ್ಲೇ ಬಂಧಿಸಿ ಇಟ್ಟುಬಿಟ್ಟೆ.. !
ಜೀವನ ಪೂರ್ತಿ..ನನ್ನ ಸೇವೆ....
ಅಡುಗೆ ಮನೆ.. ದೇವರ ಮನೆಯಲ್ಲೇ ಇಟ್ಟುಬಿಟ್ಟೆ..
ಅಡುಗೆ ಮನೆ.. ದೇವರ ಮನೆಯಲ್ಲೇ ಇಟ್ಟುಬಿಟ್ಟೆ..
ನಾನು ಪೂರ್ತಿ ನನ್ನ ವ್ಯವಹಾರ... ಹಣ.. ಅಂತ ಮುಳುಗಿ ಹೋದೆ....
ನನ್ನವಳ ಬಗೆಗೆ ವಿಚಾರವನ್ನೇ ಮಾಡಿಲ್ಲ...
ನನ್ನವಳ ಬಗೆಗೆ ವಿಚಾರವನ್ನೇ ಮಾಡಿಲ್ಲ...
ನಾನು ಹೋದ ಮೇಲೆ ಇವಳ ಗತಿ..? ..?
ಅಯ್ಯೋ ದೇವರೆ..!
ನನ್ನ ಕಣ್ಣೆದುರೇ.. ನನ್ನಾಕೆ ಹೋಗಿಬಿಟ್ಟಿದ್ದಾರೆ ಒಳ್ಳೆಯದಿತ್ತು....
ಏನು ಮಾಡಲಿ...?
"ನೋಡು...
"ನೋಡು...
ನಾನು ಮನೆಗೆ ಹೋಗ ಬೇಕು...
ಸ್ವಲ್ಪ ಅರ್ಜೆಂಟಾಗಿ ಮಕ್ಕಳನ್ನೆಲ್ಲ ಕರೆಸು..."
ಸ್ವಲ್ಪ ಅರ್ಜೆಂಟಾಗಿ ಮಕ್ಕಳನ್ನೆಲ್ಲ ಕರೆಸು..."
ಮಕ್ಕಳೆಲ್ಲ ಬಂದರು...
ನಾನು ಹಠ ಹಿಡಿದು ಮನೆಗೆ ಬಂದೆ...
ನಾನು ತುರ್ತಾಗಿ ನನ್ನ ಮಡದಿಗೆ...
ಅವಳ ಮುಂದಿನ ಬದುಕಿಗೆ... ಏನಾದರೂ ಮಾಡಬೇಕಿತ್ತು..
ದೊಡ್ಡ ಮಗನನ್ನು ಕರೆಸಿದೆ...
ಆತ ತನ್ನ ಹೆಂಡತಿಯೊಡನೆ ಬಂದ...
ತನ್ನ ಮಗನನ್ನು ಎತ್ತಿಕೊಂಡಿದ್ದ..
ಅವನ ಹೆಂಡತಿ ಅವನ ಕೈ ಹಿಡಿದುಕೊಂಡಿದ್ದಳು...
ಅವನ ಹೆಂಡತಿ ಅವನ ಕೈ ಹಿಡಿದುಕೊಂಡಿದ್ದಳು...
ನನಗೆ ನನ್ನ ಹೆಂಡತಿ ನೆನಪಾದಳು...
ನಾನು ನನ್ನ ಮಡದಿಗೆ ಸ್ವಲ್ಪವಾದರೂ ಪ್ರೀತಿ ಕೊಡಬೇಕಿತ್ತು...
ಛೇ... !
ನಾನು ನನ್ನ ಜೀವನದಲ್ಲಿ ಎಲ್ಲವನ್ನೂ ವ್ಯವಹಾರವಾಗಿ ಮಾಡಿದೆ....
ನನ್ನ ಮದುವೆಯನ್ನೂ ಕೂಡ...
ಮಾವನ ಬಳಿ ಹಣ, ಸೈಟು ತೆಗೆದು ಕೊಂಡಿದ್ದೆ....
ಜೀವನ ಪೂರ್ತಿ ನಾನು ಓಡುತ್ತಲೇ.. ಕಳೆದು ಬಿಟ್ಟೆ....
ಒಮ್ಮೆಯಾದರೂ... ಸ್ವಲ್ಪ ನಿಂತು...
ನನ್ನ ಬದುಕಿನಲ್ಲಿ ಸ್ವಲ್ಪ ಹಿಂತಿರುಗಿ ನೋಡ ಬೇಕಿತ್ತು...
ಬಹಳ ದೊಡ್ಡ ತಪ್ಪು ಮಾಡಿದೆ...
ಬದುಕಿನ ಪೂರ್ತಿ ಹಣದ ಹಿಂದೆ ಬೀಳಬಾರದಿತ್ತು...
" ನೋಡು... ಮಗನೆ..
ಡಾಕ್ಟ್ರು ಹೇಳೀದ್ದಾರೆ..
ನಾನು ಇನ್ನೊಂದು ದಿನ ಬದುಕಿದರೆ ಹೆಚ್ಚು...
ನಾನು ಇನ್ನೊಂದು ದಿನ ಬದುಕಿದರೆ ಹೆಚ್ಚು...
ನನ್ನ ಜೀವನ ಪೂರ್ತಿ..
ನಿಮ್ಮ ಬದುಕನ್ನು ಚೆನ್ನಾಗಿಡಲು ದುಡಿದೆ...
ನಿಮಗೆಲ್ಲ ಪ್ರತ್ಯೇಕ ವ್ಯವಹಾರ ಮಾಡಿಕೊಟ್ಟು ನಿಮ್ಮ
ಜೀವನಕ್ಕೊಂದು ನೆಲೆ ಮಾಡಿದೆ..
ನಾನು ಸಾಯ್ತಾ ಇದ್ದೀನಿ..
ನಾನು ಸತ್ತ ಮೇಲೆ....
ನಿನ್ನ ಅಮ್ಮ... "
ನಿನ್ನ ಅಮ್ಮ... "
ನನಗೆ ದುಃಖವಾಯಿತು..
ಗಂಟಲು ಬಿಗಿದು ಕೊಡಿತು..
ಹೇಳಬೇಕಿದ್ದ ಮಾತೆಲ್ಲ ಕಣ್ಣಲ್ಲಿ ನೀರಾಯಿತು..
ಎಂಥಹ ಅಸಹಾಯಕತೆ ಇದು.. !
"ಅಪ್ಪಾ.. ಆಯಾಸ ಮಾಡ್ಕೋಬೇಡಿ..
ನಿಶ್ಚಿಂತೆಯಾಗಿರಿ..
ನಮ್ಮನೆಯ ಹತ್ತಿರ ಒಂದು ವೃದ್ಧಾಶ್ರಮವಿದೆ..
ಬಹಳ ಚೆನ್ನಾಗಿದೆ..
ಬಹಳ ಚೆನ್ನಾಗಿದೆ..
ಅದನ್ನು ನಡೆಸುವವರು ನನಗೆ ಬಹಳ ಬೇಕಾದವರು..
ಅಮ್ಮಾ ಅಲ್ಲಿರ್ತಾಳೆ..
ನಾನು ದಿನಾಲೂ ಹೋಗಿ ನೋಡ್ಕೊಂಡು ಬರ್ತೇನೆ.
ಅಪ್ಪಾ.... ನೀವು ಚಿಂತೆ ಮಾಡ್ಬೇಡಿ... "
ನಾನು ಕಣ್ಣ್ಮುಚ್ಚಿಕೊಂಡೆ... ...
ನಾನು ಮಾಡಿದ ಕರ್ಮ ನನ್ನನ್ನು ಬಿಡುತ್ತಿಲ್ಲ...
ನಾನು ನನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ...
ಅವರಿಗೊಂದು ಪ್ರತ್ಯೇಕ ಮನೆ ಮಾಡಿ..
ಆಳು ಕಾಳುಗಳನ್ನಿಟ್ಟಿದ್ದೆ..
ದಿನಾಲೂ ನಾನು ಹೋಗಿ ಮಾತನಾಡಿಸುತ್ತಿದ್ದೆ..
ದಿನಾಲೂ ನಾನು ಹೋಗಿ ಮಾತನಾಡಿಸುತ್ತಿದ್ದೆ..
ಅಪ್ಪ ಹೋದ ಕೆಲವು ದಿನಗಳಲ್ಲಿ ಅಮ್ಮನೂ ಹೋಗಿಬಿಟ್ಟಳು...
ನನಗೆ ನಿರಾಸೆಯಾಯಿತು... ಏನು ಮಾಡಲಿ?
ಎರಡನೇ ಮಗನನ್ನು ಕರೆಸಿದೆ..
"ಅಪ್ಪಾ..
ನಮ್ಮ ಸಂಬಂಧಿಕರೊಬ್ಬರು ಬಹಳ ಬಡವರಿದ್ದಾರೆ..
ಅವರಿಗೊಂದು ಬಾಡಿಗೆ ಮನೆಕೊಡಿಸಿ....
ಅಮ್ಮನನ್ನು ನೋಡಿಕೊಳ್ಳಲು ಹೇಳುತ್ತೇನೆ..
ಅಮ್ಮನನ್ನು ನೋಡಿಕೊಳ್ಳಲು ಹೇಳುತ್ತೇನೆ..
ನೀವು ಚಿಂತೆ ಮಾಡಬೇಡಿ...
ನನ್ನ ಮನೆಯಲ್ಲೇ ಇಟ್ಟುಕೊಳ್ಳಬಹುದಿತ್ತು...
ನಿಮಗೆ ಗೊತ್ತಲ್ಲ ಹೆಂಗಸರ ವಿಷಯ..
ಹಾಗಾಗಿ ಹೀಗೆ ಮಾಡುತ್ತೇನೆ..
ಹಾಗಾಗಿ ಹೀಗೆ ಮಾಡುತ್ತೇನೆ..
ನಾನು ದಿನಾಲೂ ಹೋಗಿ ನೋಡ್ಕೊಂಡು ಬರ್ತೇನೆ..
ನೀವು ಚಿಂತೆ ಮಾಡ್ಬೇಡಿ.. ಅಪ್ಪಾ..."
ಬಿತ್ತಿದಂತೆ ಬೆಳೆ...!
ಗಿಡದಂತೆ ಫಲ !
ಸಣ್ಣ ಮಗನನ್ನು ಕರೆಸಲಿಲ್ಲ...
ಇವರಿಗಿಂತ ಬೇರೆಯಾಗಿ ಮತ್ತೆ ಆತ ಬೇರೆ ಏನೂ ಹೇಳಲಾರ... ಅನ್ನಿಸಿತು...
ಬೇರೆ ಏನಾದರೂ ವ್ಯವಸ್ಥೆ ಮಾಡಲೇ.. ಬೇಕಿತ್ತು....
ಏನು ಮಾಡಲಿ?
ನನ್ನಾಕೆಗೆ ಮಾರ್ಕೆಟ್ಟಿಗೆ ಹೋಗಿ ಒಂದು ಕೇಜಿ ತರಕಾರಿ ತರಲೂ ಗೊತ್ತಿಲ್ಲ...!
ಈ ಕೆಟ್ಟ ಜಗತ್ತಿನಲ್ಲಿ...
ನನ್ನ ಮುಗ್ಧ ಹೆಂಡತಿ..
ನನ್ನ ಮುಗ್ಧ ಹೆಂಡತಿ..
ಈ ವಯಸ್ಸಿನಲ್ಲಿ ಹೇಗೆ ಬದುಕುತ್ತಾಳೆ..?
ನನ್ನ ದಬ್ಬಾಳಿಕೆಗೆ ತಲೆಯಾಡಿಸಿ...
ತುಟಿ ಎರಡು ಮಾಡದೇ.. ನನ್ನೊಂದಿಗೆ ಬದುಕಿದ ....
ಇವಳಿಗೆ ಏನಾದರೂ ವ್ಯವಸ್ಥೆ ಮಾಡಬೇಕಲ್ಲ..!!
ಇವಳಿಗೆ ಏನಾದರೂ ವ್ಯವಸ್ಥೆ ಮಾಡಬೇಕಲ್ಲ..!!
ಏನು ಮಾಡಲಿ...?
ಮಡದಿಯನ್ನೇ ಕೂಗಿದೆ..
ಓಡೋಡಿ ಬಂದಳು...!
"ನೋಡು..
ನಿನಗೆ ಬದುಕಿನಲ್ಲಿ ಒಂದು ಸಂಭ್ರಮ...
ಒಂದು ನಗು.. ಸಂತೋಷ ಏನೂ ಕೊಡಲಿಲ್ಲ...
ಯಾವದಕ್ಕೂ ನಿನ್ನ ಇಷ್ಟ ಏನೆಂದು ಕೇಳಲಿಲ್ಲ...
ಯಾವದಕ್ಕೂ ನಿನ್ನ ಇಷ್ಟ ಏನೆಂದು ಕೇಳಲಿಲ್ಲ...
ಕೊನೆ ಪಕ್ಷ ಒಂದು ಆತ್ಮೀಯ ಮಾತನ್ನೂ ಆಡಲಿಲ್ಲ...
ನಾನು ಸಾಯ್ತಾ ಇದ್ದೀನಿ...
ಒಂದಷ್ಟು ಹಣ ಮಾಡಿದ್ದೇನೆ...... "
ನನ್ನಾಕೆ ಅಳುತ್ತಿದ್ದಳು..
ಆಕೆ ನನ್ನ ಬಾಯಮೇಲೆ ಕೈ ಇಟ್ಟು ಬಾಯಿ ಮುಚ್ಚಿದಳು..
ನನಗೂ ದುಃಖ ತಡೆದುಕೊಳ್ಳಲಾಗುತ್ತಿಲ್ಲ...
ಈ ತರಹದ ಅಸಹನೀಯ ಅಸಹಾಯಕತೆ.. ಯಾರಿಗೂ ಬರಬಾರದು....
"ನೋಡಿ ನಿಮಗೆ ಏನೂ ಆಗುವದಿಲ್ಲ..
ನನಗೆ ದೇವರ ಮೇಲೆ ನಂಬಿಕೆ ಇದೆ... ಇರಿ.. ಬಂದೆ...!
ಯಾರನ್ನೋ.. ಕರೆದುಕೊಂಡು ಬಂದಳು....
"ನೋಡಿ ನೀವು ಚಿಂತೆ ಮಾಡ ಬೇಡಿ..
ನನ್ನ ತಮ್ಮನನ್ನು ಕೇಳಿ ..
ಒಂದು ಲಾಯರ್ ಹಿಡಿದು ನಿಮ್ಮ ವಿಲ್ ಬರೆಸಿದ್ದೇನೆ..
ಇದಕ್ಕೊಂದು ಸಹಿ ಹಾಕಿಬಿಡಿ..."
ಆ ಲಾಯರ್ ನನ್ನ ಮುಂದೆ ಪೇಪರ್ ಹಿಡಿದ...
ಮತ್ತೆ .....
ಎದೆಯಲ್ಲಿ ಸಾವಿರ ಸೂಜಿಗಳಿಂದ ಚುಚ್ಚಿದ ಅನುಭವ... !
ಎದೆಯಲ್ಲಿ ಸಾವಿರ ಸೂಜಿಗಳಿಂದ ಚುಚ್ಚಿದ ಅನುಭವ... !
ಹೃದಯ ಹಿಂಡುವ ನೋವು...ಗಂಟಲು ಉಬ್ಬಿ ಬಂತು....!
ಇದು ನನ್ನ ಸಾವಾ..?.. !!
























