Saturday, August 8, 2009

ಕಿವಿಯೂ.... ಚೆಲುವೆಲ್ಲಾ... ತಂದೆಂದಿತು....!!



ಕೂದಲಿನ ಮರೆಯಲ್ಲಿ...
ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತ ...
ಸುಮ್ಮನಿರುವ ಕಿವಿಗೆ ತೂತು ಯಾಕೆ ಮಾಡಬೇಕು...??

ಈ... ನೋವು, ಕಣ್ಣೀರು ಎಲ್ಲಯಾಕೆ..?

ನನಗೆ ಅನುಮಾನ ಬಂದರೆ ಮೊದಲು ನೆನಪಾಗುವದು
ದಿ ಗ್ರೇಟ್ "ನಾಗು"
ಅವನ ಬಳಿಯೇ ಕೇಳಿದೆ....

"ಲೋ... ಪ್ರಕಾಶು ....
ನಮ್ಮ ಹಿರಿಯರು.. ಹುಚ್ಚರಲ್ಲ...
ಕಿವಿಯಲ್ಲಿ ಮೆದುಳಿಗೆ ಸಂಬಂಧಪಟ್ಟ ನರತಂತುಗಳು ಇವೆ...
ಅಲ್ಲಿ ತೂತು ಮಾಡಿದರೆ ಮೆದುಳು ಉದ್ದೀಪನೆಯಾಗುತ್ತದೆ....
ಪ್ರಚೋದನೆಯಾಗುತ್ತದೆ...
ನಮ್ಮಲ್ಲಿ ಗಂಡು ಹೆಣ್ಣಿನ ಬೇಧವಿಲ್ಲದೆ ಕಿವಿ ತೂತು ಮಾಡಿರುತ್ತಾರೆ..."
ಜನ ಬುದ್ಧಿವಂತರಾಗುತ್ತಾರೆ...
ಕಿವಿ ಚುಚ್ಚೋದರಿಂದ...
ನಿನ್ನಂಥವನ ತಲೆಯಲ್ಲೂ ಅನುಮಾನಗಳು ಬರುತ್ತವೆ..."


ನಾಗು ಮತ್ತೆ ಕೇಳಿದ. ...
" ನಿನಗೆ ಯಾರಾದರೂ ಇಂಟರ್ ನೆಟ್ ತಜ್ಞರು,
ಅರ್ಥ ಶಾಸ್ತ್ರಜ್ಞರು ಗೊತ್ತಿದ್ದರೆ ತಿಳಿಸು..

ನನ್ನ ಕೆಲವು ಅನುಮಾನಗಳನ್ನು ಪರಿಹರಿಸಿ ಕೊಳ್ಳ ಬೇಕು..."

ಈಗ ನನಗೆ ನೆನಪಾದದ್ದು ಗೆಳೆಯ
"ರಾಜೇಶ್ ಮಂಜುನಾಥ್"

ರಾಜು ಫೋನ್ ನಂಬರ್ ಕೊಟ್ಟೆ...
ಭಾವುಕ, ಬುದ್ಧಿವಂತ ...
ಸದಾ ಚಟುವಟಿಕೆಯಲ್ಲಿರುವ ನಗು ಮುಖದ ಹುಡುಗ....

ನಾಗು , ರಾಜು ಏನು ಮಾಡಿದರು ಗೊತ್ತಾಗಲಿಲ್ಲ....

ಆದರೆ ಮರುದಿನ.....
ಇಬ್ಬರು ಸೇರಿ ಹೇಳಿದ ವಿಷಯ ಕೇಳಿ...
ನಾನು ದಂಗಾಗಿ ಹೋದೆ....!!

" ಲೋ... ಪ್ರಕಾಶು... ನಮ್ಮದೇಶದ ಜನ ಸಂಖ್ಯೆ ಎಷ್ಟೋ...?"

"ನೂರು ಕೋಟಿ"

" ಇದರಲ್ಲಿ ನಲವತ್ತು ಪರ್ಸಂಟ್ ಹೆಣ್ಣುಮಕ್ಕಳು ಅಂದುಕೊ...
ಅದರಲ್ಲಿ, ಕಿವಿಗೆ ಏನನ್ನೂ ಧರಿಸದವರು,
ಜಾತಿ ಪಾತಿ ಎಲ್ಲ ಹದಿನೈದು.. ಪರ್ಸಂಟ್ ಕಳೆದು ಬಿಡು"

" ಉಳಿದದ್ದು ಇಪ್ಪತ್ತಾರು ಕೋಟಿ ಮಹಿಳೆಯರು... "

" ಹಾಗಾದರೆ ಈ ಇಪ್ಪಾತಾರು ಕೋಟಿ ಹೆಂಗಸರು...
ಒಬ್ಬಬ್ಬರು ತಲಾ ೫ ಗ್ರಾಮ್ ಚಿನ್ನ ಕಿವಿಗೆ ಧರಿಸುತ್ತಾರೆ ಅಂದುಕೊಂಡರೆ....
ಎಷ್ಟಾಯಿತು ಗೊತ್ತಾ... ಪ್ರಕಾಶು...?

"ಮಾರಾಯಾ... ಪುಣ್ಯಾತ್ಮಾ...
ನನ್ನ ಕಿವಿ ತೂತು ಈಗ ಮುಚ್ಚಿ ಹೋಗಿದೆ...
ನನಗೆ ಈಗ ಅನುಮಾನವಷ್ಟೇ ಬರೋದು...
ಪರಿಹಾರ ಹೊಳಿಯೋದಿಲ್ಲ....
ನೀನೇ ಹೇಳು..."

"೧೩೦೦ ಟನ್... ಬಂಗಾರ ಆಯಿತು...!!.."

" ಅಬ್ಬಾ...!! ಅಯ್ಯೋ... !! ಹೌದೇನೋ...?"

"ನಿಜ... ಇದು ಎಷ್ಟು ರೂಪಾಯಿ ಆಯಿತು ಗೊತ್ತಾ...???.."

"....!!...??...!!."

" ಲೋ.... ಪ್ರಕಾಶು...
ಇದು ನಿನ್ನ ಬಳಿ ಎಣಿಸಲಾಗದಷ್ಟು...!
೧,೮೨,೦೦೦ ಕೋಟಿ.. ರುಪಾಯಿಗಳು..!!!!
೧.೮೨ ಟ್ರಿಲಿಯನ್ ಅಂತ ಹೇಳ ಬಹುದು...."

ನಾನು ಎಚ್ಚರ ತಪ್ಪಿ ಬೀಳುವದೊಂದು ಬಾಕಿ....!!!!!

" ಅಂದರೆ....
ಕರ್ಣಾಟಕದ ಮೂರುವರ್ಷದ ಬಜೆಟ್ ಹಣದಲ್ಲಿ ನಿಭಾಯಿಸ ಬಹುದು...!!!!!

ನಮ್ಮದೇಶದ ರಕ್ಷಣಾ ವೆಚ್ಚವನ್ನು ನಿಭಾಯಿಸಿ....
ಕಾಶ್ಮೀರದ ಖರ್ಚನ್ನೂ ಭರಿಸ ಬಹುದು...!!!

" ಬಾಂಗ್ಲಾದೇಶದ ವಾರ್ಷಿಕ ಬಜೆಟ್ ಎರಡುವರ್ಷ ಮಾಡ ಬಹುದು....!!

ನನಗೆ ತಡೆದು ಕೊಳ್ಳಲಾಗಲ್ಲಿಲ್ಲ...

"ಪ್ರಕಾಶು... ಇನ್ನೊಂದು ವಿಷಯ ಗೊತ್ತಾ...??
... ಆರ್ಥಿಕ ಮುಗ್ಗಟ್ಟು ನಮ್ಮ ದೇಶಕ್ಕೆ ಸಮಸ್ಯೆನೇ ಅಲ್ಲ....
ನಮ್ಮ ಹೆಣ್ಣು ಮಕ್ಕಳು ಸ್ವಲ್ಪ ದೊಡ್ಡ ಮನಸ್ಸು ಮಾಡಿದರೆ....!!

" ಮಾರಾಯಾ.., ನೀನೂ..., ರಾಜೇಶ್ ಇದನ್ನೇ ಹುಡುಕಿದಿರಾ...??
ದೇಶದ ಹೆಣ್ಣು ಮಕ್ಕಳು ನಿಮ್ಮನ್ನು ಸುಮ್ಮನೆ ಬಿಡುವದಿಲ್ಲ....
ಹೋಗಿ ಪೋಲಿಸ್ ಪ್ರೊಟೆಕ್ಷನ್ ತಗೊಳ್ಳಿ...
ಮನೆಗೆ ಹೋಗಿ ವಿಷಯ ಹೇಳ ಬೇಡಿ...
ದೊಣ್ಣೆ ತಗೋತಾರೆ...."


ರಾಜೇಶ್ ಮತ್ತು ನಾಗು ಹೇಳಿದ ವಿಷಯದಲ್ಲಿ ತರ್ಕ ಇದೆ ಅನಿಸಿತು.....

... ಕಿವಿಯಲ್ಲಿ ಎಷ್ಟು ತೂತು ಇದೆಯೆಂದು ಹೇಳ ಬಲ್ಲಿರಾ...?

ಚಿನ್ನದಂತಹ ಮನಸ್ಸು... ಹೃದಯದ ಬಂಗಾರಿಗೆ...
ಬಂಗಾರವೆಂದರೆ ಯಾಕಿಷ್ಟು ಮೋಹ...?


ಕಣ್ಣು ಬಿಟ್ಟು ...ನೀ .. ನೋಡು ಒಮ್ಮೆ...
ಕಿವಿಯ ಸೌಂದರ್ಯವಾ....!!



ಆರಂಕುಶ ವಿಟ್ಟೋಡೆನ್ನ ಮನ ನೆನೆವುದು...
ತರುಣಿಯ ಚಂದದ ಕಿವಿಗಳನು......


ಕಿವಿಯೂ.... ಚೆಲುವೆಲ್ಲಾ ತಂದೆಂದಿತು....!!


ಕಿವಿಯ ನೋಡುತಿರೆ....
ಮೊಗವ ನೋಡುವಾಸೆ....


ನಿನ್ನ ಕಿವಿಯ ಅಂದ...
ನುಡಿಸಿದೆ ನನ್ನ ಹೃದಯದಿ.... ಸರಿಗಮ.......



ಕವಿಯ ಕಾವ್ಯದ ಸೊಬಗು... ನಿನ್ನಯ ಕಿವಿಯು.....


ಕಿವಿಯ ಅಂದ ಚಂದ... ನೋಡುತ...
ಮನದ ಮೃದಂಗದ ... ತಕಧಿಮಿತಾ....


ಜಯಂತ್ ಕಾಯ್ಕಿಣಿಯವರ ಶಬ್ಧಗಳಲ್ಲಿ...
ಪದ್ಯವಾಗುವಾಸೆ......
ರಾಗವಾಗಿ ಹಾಡಾಗುವಾಸೆ....


ನನ್ನೊಲವಿನ ಓಲೆ...
ಬರೆಯುವೆನು...
ನಲ್ಲಾ..
ಕಿವಿಯೋಲೆಯ ಮೇಲೆ....

ನಿನ್ನ ಮೆಚ್ಚುಗೆಯ ನೋಟವೊಂದು ಸಾಕೆನಗೆ...
ಕಾದಿರುವೆ .. ಕಾತರದಿ... ತಿಳಿಯದೆ ನಿನಗೆ...?

ನನ್ನೊಲವು, ಚೆಲುವು...
ಹಲವು ಬಗೆಯ ಕಲರವು...
ನಿನ್ನ ಹ್ರದಯದಿ ಜಾಗ ಪಡೆಯಲು
ಈ ಎಲ್ಲ ಅಲಂಕಾರವು....



ಗೋರಿ ತೇರಾ ಕಾನ್ ಬಡಾ ಪ್ಯಾರಾ.....


ಮೈ ತೊಗಯಾ... ಮಾರಾ....
ದೇಖೆ ....ಯಹಾಂ..ರೇ....!!


ಹರಳು..... ರಗಳೆಯಾಗದೆ.... ತರಳೆ...?



ಜೋಲುವ.. ತೂಗುವ ವಿಸ್ಮಯ.... ವಿಚಿತ್ರ....!!


ತುಮ್ ... ಆಗಯೇ... ಹೋ...
ನೂರ್ ಆಗಯಾ... ಹೇ...!!



ಚಾಂದ್ ಜೈಸೆ ಮುಖಡೆಪೆ... ಯೇಹೈ.... ಸಿತಾರಾ...!!




ಅಂದ... ಚಂದ ವಿಚಿತ್ರದಲ್ಲೂ ಇದೆ....!!


ತೂತಿಲ್ಲದೆಯೂ ಅಲಂಕಾರ....


ಚಂದದ ಹಿಂದೆ ನೋವು ಇರಬೇಕಿಲ್ಲ....!!


ಹಳೆಯ ಸೊಬಗು.... ಹೊಸತನದ ಬೆಡಗು... ಕೂಡಿರಲು...


ಇವಳು ಯಾರು ಬಲ್ಲೆಯೇನು...?
ಮಲ್ಲಿಗೆ ಮುಡಿದವಳೇ...
ಚಂದದಾ ಮನಸಿನವಳೇ...
ಬ್ಲಾಗ್ ಲೋಕದಾ.... ಸಹೋದರಿಯೇ...!!
ಇವಳು ಯಾರು ಬಲ್ಲೆಯೇನು...?



ಚಿನ್ನವಾದರೇನು ಶಿವಾ...?
ಬೆಳ್ಳಿ ಯಾದರೇನು.... ಶಿವಾ...
ಕಿವಿಯಲ್ಲಾ ಚಂದವೇ.. ಶಿವಾ....



ಮತ್ತೆ.. ಮತ್ತೆ..
ಮತ್ತೂ
...
ಮತ್ತೇರಿಸಿದೆಯಲ್ಲೇ......
ನಷೆಯಿಲ್ಲದ ಮತ್ತು........
ನಿನ್ನ ಕಿವಿಯ ನತ್ತು....!!


ನಾಗು ಮತ್ತೆ ನನ್ನನ್ನು ಪ್ರಶ್ನಿಸಿದ...

" ನೋಡಪಾ....
ತೂತುಗಳನ್ನು ಹೆಚ್ಚಾಗಿ ಹೆಣ್ಣು ಮಕ್ಕಳಿಗೇ....ಮಾಡಿ...
ಬಂಗಾರ, ಬೆಳ್ಳಿ ತೂಗು ಬಿಡುತ್ತಾರೆ.... ... ಯಾಕೆ ಗೊತ್ತಾ...?"


" ಪುಣ್ಯಾತ್ಮಾ... ದೇವರಾಣೆ ಗೊತ್ತಿಲ್ಲ..."

" ಪ್ರಕಾಶು... ಅದಕ್ಕೂ ಕಾರಣ ಇದೆ....
ಈಗಲೇ ಬೇಡ ಮುಂದಿನವಾರ ಹೇಳ್ತೇನೆ...."

ಎಂದು ರಾಜೇಶ್ ನನ್ನು ಎಳೆದು ಕೊಂಡು ಹೂರಟು ಹೋದ....

ಯಾಕೆ ಹೆಣ್ಣುಮಕ್ಕಳಿಗೆ... ಹೀಗೆ ಮಾಡುತ್ತಾರೆ...?"

ನಾನು ಕಿವಿಯನ್ನು ಒಮ್ಮೆ... ಮುಟ್ಟಿಕೊಂಡೆ... !!

ಮತ್ತೆ... ಅನುಮಾನಗಳು..ಶುರುವಾದವು ...!!.......!!




(ಕೃತಜ್ಞತೆಗಳು...

ವಿನೂತ......
ಡಾ. ಪ್ರಶಾಂತ್...
ಡಾ. ಲತಾ...
.................
..................
ರೂಪದರ್ಶಿಗಳು...)



(ಛಾಯಾ ಚಿತ್ತಾರಾ...
ನನ್ನ ಪ್ರೊಫೈಲ್ ನೋಡಿ.... )

Friday, July 31, 2009

ಗಂಜಿಯಲ್ಲಿ.. ಬಿದ್ದ ..ನೊಣದ ...ಹಾಗೆ..!!

ನಲ್ಮೆಯ... ಓದುಗ ಸಹೋದರ ಸಹೋದರಿಯರಿಗೆ...

" ರಕ್ಷಾ ಬಂಧನದ " ಶುಭಾಶಯಗಳು...

ನಿಮ್ಮೆಲ್ಲ... ಆಸೆ ..
ಕನಸುಗಳು...
ನನಸಾಗಲಿ....
ಪ್ರೀತಿಯಿಂದ....
ಪ್ರಕಾಶಣ್ಣ..)
.................................................................................................................



ಮಲ್ಲಿಕಾರ್ಜುನ್‍ರ ಹೊಸಕಾರು "ರಿಟ್ಜ್ " ನಾನು ಡ್ರೈವ್ ಮಾಡುತ್ತಿದ್ದೆ....


ನಾವು "ಆ" ಊರನ್ನು ತಲುಪಿಯಾಗಿತ್ತು...

ಎಲ್ಲಿಗೆ ಹೋಗಬೇಕಾಗಿತ್ತೊ ಅಲ್ಲಿನ ವಿಳಾಸ ಸರಿಯಾಗಿ ಗೊತ್ತಿರಲಿಲ್ಲ....

ಕಾರು ಪಕ್ಕಕ್ಕೆ ತೆಗೆದುಕೊಂಡು..
"ಇಲ್ಲಿ ವಿಶ್ವ ಜ್ಞಾನ ಶಾಲೆ ಎಲ್ಲಿ ಬರುತ್ತದೆ...?"
ಅಂತ ಒಬ್ಬನನ್ನು ಕೇಳಿದೆವು...

ತಲೆಗೂದಲನ್ನು ಎಣ್ಣೆಹಾಕಿ ಒಪ್ಪವಾಗಿ ಬಾಚಿ, ಹಣೆಗೊಂದು ಗಂಧದ ಬೊಟ್ಟು...
ಬಿಳೆಲುಂಗಿ...
ಜಗತ್ತಿನಲ್ಲಿರುವ ಎಲ್ಲ ಬಗೆಯ ಆತ್ಮ ಸಂತೃಪ್ತಿಯ ಮುಖ ...
ತಲೆಕೆರೆದು ಕೊಳ್ಳುತ್ತ...

"ಏನು ಸಾರ್... ವಿಶ್ವನಾಥ ದೇವಸ್ಥಾನವಾ...?"

ಮಲ್ಲಿಕಾರ್ಜುನ್ ತಮ್ಮ ಎರಡೂ ಕೈಯ್ಯನ್ನು ತಮ್ಮ ಬಾಯಿ ಬಳಿತಂದು..
ತಮ್ಮಲ್ಲಿದ್ದ ಬಲವನ್ನೆಲ್ಲ ಹಾಕಿ ಕೂಗಿ ಮತ್ತೆ ಕೇಳಿದರು..

" ಸಾರ್... ವಿಶ್ವ ಜ್ಞಾನ ಶಾಲೆ..."

ಮತ್ತೆ ತಲೆ ಕೆರೆದು ಕೊಂಡಿತು ಆವ್ಯಕ್ತಿ...
ಆಕಾಶ ನೋಡಿದ....

" ವಿಶಾಖ ಪಟ್ಟಣವಾ...?
ಈ ಹೆಸರು ಎಲ್ಲೋ ಕೇಳಿದಿನಿ... ಅದು ಇಲ್ಲಿ ಬರಲ್ಲ ಸಾರ್.."

ನಾಗು ಕಾರಿನಿಂದ ಇಳಿದು...
ಅವರ ಬಳಿ ಹೋಗಿ...ಜೋರಾಗಿ ಕೇಳಿದ...

"ಸಾರ್... ವಿಶ್ವ ಜ್ಞಾನ ಶಾಲೆ ಎಲ್ಲಿದೆ...?"

"ನಿಧಾನಕ್ಕೆ ಹೇಳಿ.. ನನ್ನ ಕಿವಿ ಸರಿಯಾಗಿದೆ...
ಸಾರ್.... ಪ್ರಾರ್ಥನಾ ಶಾಲೆನಾ...? ಇಲ್ಲೇ ಮುಂದಕ್ಕೆ ಹೋಗಿ..." ಅಂದ....

ನಾಗು ಅತ್ಯಂತ ತಾಳ್ಮೆಯಿಂದ...
"ಹೌದಾ ಸಾರ್... ತುಂಬಾ ಉಪಕಾರವಾಯ್ತು...
ಏನ್ ಸಾರ್ ನೀವು ಇದೇ ಊರಿನವರಾ.....?"
ಅಂತ ಕೇಳಿದ....

"ಹೌದು ಸಾರ್... ಇಲ್ಲೇ ಹುಟ್ಟಿ ಬೆಳ್ದಿರೋದು....
ಮಾರಮ್ಮನ ದೊಡ್ಡಿಯವನು..."

ಮುಂದೆ ಹೋಗಿ ಬೇರೆಯವರನ್ನು ಕೇಳೋಣ ಅಂದು ಕೊಳ್ಳುವಷ್ಟರಲ್ಲಿ ಇನ್ನಿಬ್ಬರು ಬೈಕಿನಲ್ಲಿ ಬಂದರು...
ಅವರನ್ನು ಕೇಳಿದೆವು ..
ಅವರು ಸರಿಯಾದ ವಿಳಾಸ ಕೊಟ್ಟರು...

ನಾಗು ಅವರನ್ನು "ಸಾರ್ ನೀಮ್ಮೂರು ಯಾವುದು..?" ಅಂತ ಕೇಳಿದ....

"ಸಾರ್ ನಾವು ಮಂಗಳೂರಿನವರು" ಅಂತ ಹೇಳಿದರು...

ನಾವು ಅವರು ಹೇಳಿದ ಹಾಗೆ ಆ ಜಾಗ ತಲುಪಿದೆವು...
ಮತ್ತೆ ನಮ್ಮ ಸ್ನೇಹಿತರಿಗೆ ಫೋನ್ ಮಾಡಿ ನಾವು ಅಲ್ಲಿ ಬಂದಿದ್ದೇವೆ ಎಂದೆವು...

" ನೀವು ಅಲ್ಲಿಂದ ನೇರವಾಗಿ ಇನ್ನೂ ಮೂರು ಕಿಲೊಮೀಟರ್ ಮುಂದೆ ಚನ್ನ ಕೇಶವ ಟೆಂಪಲ್ ಬಳಿ ಬನ್ನಿ.." ಎಂದರು....

ನಾವು ಮತ್ತೆ ಮುಂದೆ ಹೋದೆವು...

ನಾವು ಅಲ್ಲಿ ಬರುವಷ್ಟರಲ್ಲಿ ಆ ಮಹಾಶಯರೂ ಬಂದಿದ್ದರು...

"ನೀವು ಈ ವಿಳಾಸ ಮೊದಲೇ ಹೇಳ ಬಹುದಿತ್ತಲ್ಲ... ಸರ್..
ನಮಗೆ ಸ್ವಲ್ಪ ಕನ್ಫ್ಯೂಸ್ ಆಯ್ತು.."

"ಅಯ್ಯೋ... ಹೆಗಡೆಯವರೆ.. ನಾನು ಸ್ವಲ್ಪ ದೂರದಲ್ಲಿದ್ದೆ..
ಬರಲಿಕ್ಕೆ ತಡ ಆಯ್ತು.. ಇರ್ಲಿ...
ಬನ್ನಿ ಜಾಗ ತೋರಸ್ತೀನಿ..."

ಅವರು ಅಲ್ಲಿಂದ ಎರಡು ಗಂಟೆ ಓಡಾಡಿಸಿ ಜಾಗ ತೋರಿಸಿದರು...

ಅವರು ತೋರಿಸಿದ ಸೈಟು, ಪೇಪರ್, ಜಾಗ ಯಾವುದೂ ಸರಿ ಇಲ್ಲವಾಗಿತ್ತು...

"ಸರ್... ನಾವು ಬೆಂಗಳೂರಿಗೆ ಹೋಗಿ ಮನೆಯಲ್ಲೊಮ್ಮೆ ಮಾತಾಡಿ ತಿಳಿಸ್ತೇವೆ..."

ಅವರ ಹಾಗೆ ಮಾತಾಡಿದೆವು...

ಸೈಟ್ ನೋಡಲು ಬಂದಿದ್ದ ನಮ್ಮ ಉತ್ಸಾಹ ಟುಸ್ ಆಯಿತು...!

ಸರಿ ಇನ್ನು ಏನು...?
ವಾಪಸ್ ಹೊರಡ ಬೇಕಲ್ಲ... ಮತ್ತೆ ವಿಳಾಸದ ಸಮಸ್ಯೆ...!

ಈ ಬಾರಿ ಆ ಸ್ನೇಹಿತರೇ ಹೇಳಿದರು..
"ನೀವು ನನ್ನ ಫಾಲೋ ಮಾಡಿ...
ನನ್ನ ಶಾಪ್‍ನಿಂದ ನಿಮಗೆ ಮುಖ್ಯ ರಸ್ತೆ ಸಿಗುತ್ತದೆ"

ನಾವು ಅವರನ್ನು ಅನುಸರಿಸಿ ಅವರ ಶಾಪ್‍ಬಳಿ ಬಂದೆವು...

"ಹೆಗಡೆಯವರೆ... ಬನ್ನಿ ಟೀ ಕುಡಿದು ಹೋಗುವಿರಂತೆ.."

ನಮಗೆ ಸಾಕುಸಾಕಾಗಿತ್ತು...
ಏನೋ ನೆಪ ಹೇಳಿ ಅಲ್ಲಿಂದ ಹೊರಟೇವು....

ನಮಗೆಲ್ಲ ಬಹಳ ಆಶ್ಚರ್ಯವಾಗಿತ್ತು...
" ಅಲ್ಲ ... ಊಟ ಮಾಡುವ ಸಮಯ...ಟೀ ಗೆ ಕರಿತಾ ಇದ್ದಾರಲ್ಲ...!"

ನಾಗುವೇ ಹೇಳಿದ...

"ಅವರು ವ್ಯವಹಾರಸ್ಥರಾಗಿದ್ದರೆ..
ಮುಂದೊಂದು ದಿನದ ಬಿಸಿನೆಸ್ ಲೆಕ್ಕಾಚಾರ ಇಟ್ಟುಕೊಂಡಾದರೂ ಊಟಕ್ಕೆ ಕರಿಯ ಬೇಕಿತ್ತು..
ಪ್ರಕಾಶ್ ಗುತ್ತಿಗೆದಾರ, ಶಿವು, ಮಲ್ಲಿ ಫೋಟೊಗ್ರಾಫರ್ಸ್...
ಇವುರುಗಳ ಸ್ನೇಹ ಲಾಭ ಇತ್ತು...
ಹೋಗಲಿ ಸ್ವಲ್ಪ ಮಾನವೀಯ ಭಾವನೆಗಳು ಇದ್ದಲ್ಲಿ ,..
ಸ್ನೇಹಕ್ಕಾದರೂ ಊಟಕ್ಕೆ ಕರೆಯ ಬೇಕಿತ್ತು..

ನನಗೆ ಅನಿಸುತ್ತೆ...
ಈ ಮನುಷ್ಯ.. ಇಲ್ಲಿನ ಮೂಲ ನಿವಾಸಿ...
ಇಲ್ಲಿಯೇ ಹುಟ್ಟಿ ಬೆಳೆದವರು... ಹೌದೋ.. ಅಲ್ಲವೋ..?"


ನನಗೆ ಆಶ್ಚರ್ಯ...!

"ನಿಜ ಮಾರಾಯಾ...
ಅವನು ಇಲ್ಲಿನ ಮಗ...!! ನೀನು ಹೇಗೆ ಗೆಸ್ ಮಾಡಿದೆ..!!..??.."

ನಾಗು ಮುಗುಳು ನಗೆ ನಕ್ಕ.......

"ಇವತ್ತು ಈ ಊರು ಬಿಡುವದರೊಳಗೆ ನಿಮಗೊಂದು ಆಶ್ಚರ್ಯದ ವಿಷಯವೊಂದನ್ನು ಹೇಳುತ್ತೇನೆ...
ನೀವೂ ಕೂಡ ಜನರನ್ನು ನೋಡಿ ಗೆಸ್ ಮಾಡ ಬಹುದು... ನೋಡುತ್ತಿರಿ.." ಅಂದ...

ನಮಗೆಲ್ಲ ಆಶ್ಚರ್ಯ... ಕುತೂಹಲ....!

ಶಿವು ತಮ್ಮ ಪರಿಚಯದವರೊಬ್ಬರಿಗೆ ಬ್ಯಾಗ್ ಬಗ್ಗೆ ಕೇಳುತ್ತಿದ್ದರು...

"ಹದಿನೈದು ದಿನಗಳ ಹಿಂದೆ ಆರ್ಡರ್ ಕೊಟ್ಟಿದ್ದೆ..
ನಿನ್ನೆನೂ ಫೋನ್ ಮಾಡಿದ್ದೆ..ಬನ್ನಿ ನಾಳೆ ಕೊಡ್ತಿನಿ ಅಂದಿದ್ದರು..
ಆದರೆ ಈಗ ಆ ಬ್ಯಾಗ್ ರೆಡಿ ಇಲ್ಲ ಅನ್ನುತ್ತಿದ್ದಾರೆ ..."

ಬೇಸರ ಮಾಡಿಕೊಳ್ಳುತ್ತಿದ್ದರು...

ನಾಗು ಮತ್ತೆ ಬಾಯಿ ಹಾಕಿದ...
"ಶಿವು ಸಾರ್...
ಆ ಬ್ಯಾಗ್‍ನವರು ಇಲ್ಲಿಯೇ ಹುಟ್ಟಿ ಬೆಳೆದ ಮೂಲನಿವಾಸಿಗಳು.. ಹೌದೋ ಅಲ್ಲವೋ...?"

ಶಿವುಗೂ ಆಶ್ಚರ್ಯ...
"ನಿಮಗೆ ಹೇಗೆ ಗೊತ್ತಾಯಿತು ಮಾರಾಯಾ..?"

ನಾಗು ಮತ್ತೆ ಮುಗುಳು ನಗೆ ನಕ್ಕ..

ಆ ಉರಿನಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ
ಶಿವು ಮಲ್ಲಿಕಾರ್ಜುನ್‍ರಿಗೆ ಬಹಳ ದಿನಗಳ ಹಿಂದೆ ಪ್ರಶಸ್ತಿ ಬಂದಿತ್ತು...
ಆದರೆ ಆ ಕಮೀಟಿ ಜನ ಫೋಟೊ ವಾಪಸ್ ಮಾಡಿರಲಿಲ್ಲ...
ಫೋನ್ ಮಾಡಿ ಕೇಳಿದರೆ ಫೋನ್ ಎತ್ತುತ್ತಲೇ ಇಲ್ಲ...
ಅವರಿಗೆ ಹೊರಗಿನಿಂದ ಬಂದು ಪ್ರಶಸ್ತಿ ಪಡೆದ ಇವರ ಬಗೆಗೆ ಅಸೂಯೆ ಇತ್ತಾ...?

ನಾಗು ಮತ್ತೆ ಕೇಳಿದ...
"ಮಲ್ಲಿಯವರೆ...
ನೀವು ಫೋನ್ ಮಾಡಿದ ವ್ಯಕ್ತಿ ಈ ಊರಿನ ಮೂಲ ನಿವಾಸಿಗಳು.. ನಿಜಾನಾ...?"


"ಹೌದೋ ಮಾರಾಯಾ...!
ಸರಿಯಾದ ಊಹೆ... ಇದು ಹೇಗೆ ಗೆಸ್ ಮಾಡ್ತೀಯಾ ...ಪುಣ್ಯಾತ್ಮಾ..!!.."

ನಾಗು ಸ್ವಲ್ಪ ಗಂಭೀರವಾಗಿ ಹೇಳಿದ....

"ನೋಡಿ ನೀವು ಯಾವುದೇ ಸಿಟಿಗೆ ಹೋಗಿ...

ಸಿರ್ಸಿಯಿಂದ ಹಿಡಿದು .., ಸಿಂಗಾಪುರದವರೆಗೂ ಹೋಗಿ ನೋಡಿ...

ಹೆಚ್ಚಿನದಾಗಿ ಆ ಸಿಟಿ ಹೊರಗಿನಿಂದ ಬಂದ ಜನರಿಂದ ಬೆಳೆದಿರುತ್ತದೆ...

ಅಲ್ಲಿನ ಮೂಲ ನಿವಾಸಿಗಳು
ಗಂಜಿಯಲ್ಲಿ ಬಿದ್ದ ನೊಣದ ಹಾಗೆ ಇರುತ್ತಾರೆ...

ಜೀವನ ಉತ್ಸಾಹ... ಏನಾದರೂ ಮಾಡ ಬೇಕೆಂಬ , ಸಾಧಿಸುವ ಛಲ ಬತ್ತಿ ಹೋಗಿರುತ್ತದೆ...

ಆ ನಗರ ಬೇಳೆಯುವ ಓಟದಲ್ಲಿ ಓಡಲಾಗದೆ...
ಹಿಂದುಳಿದು ಬಿಡುತ್ತಾರೆ...
ಅದರಿಂದಾಗಿ ಹೊರಗಿನಿಂದ ಬಂದವರ ಮೇಲೆ..
ಹೊಟ್ಟೆಕಿಚ್ಚು.., ಮತ್ಸರ ಬೆಳೆಸಿಕೊಳ್ಳುತ್ತಾರೆ..."


"ಇದು ಯಾಕೆ... ಹೀಗೆ...?"

"ಹೊರಗಿನಿಂದ ಬಂದವರಿಗೆ ಇಲ್ಲಿ ಪ್ರತಿಯೊಂದನ್ನೂ ತಾವೇ ಸೃಷ್ಟಿಸಿಕೊಳ್ಳ ಬೇಕು...

ಯಾವುದೂ ಪುಕ್ಕಟೆಯಾಗಿ ಇಲ್ಲಿ ಸಿಗುವದಿಲ್ಲ...

ಹಾಗಾಗಿ ಅವರಿಗೆ ಬದುಕು ಕಲಿಸಿದ ಪಾಠ..

ಚುರುಕಾಗಿ ಇರುವ ಅನಿವಾರ್ಯತೆಯಲ್ಲಿ ಅವರಿರುತ್ತಾರೆ...

ಸ್ಪರ್ಧೆಯಲ್ಲಿ ಮುಂದಿರುತ್ತಾರೆ...

ಆದರೆ ಇಲ್ಲೇ ಹುಟ್ಟಿ ಬೆಳೆದ ಶ್ರೀಮಂತರಾದರೆ ಅಪ್ಪ ಮಾಡಿದ ಆಸ್ಥಿಯಿರುತ್ತದೆ...

ಬಡವಾರಾದರೆ ಹೊರಗಿನಿಂದ ಬಂದ ಜನರ ಸ್ಪರ್ಧೆಗೆ ನಿಲ್ಲಲಾಗುವದಿಲ್ಲ...

ಹೀಗಾಗಿ ಒಂಥರಾ ಜೋಗುಭಧ್ರ ಆಗಿಬಿಟ್ಟಿರುತ್ತಾರೆ... "

ನಾಗು ಮತ್ತೂ ಮುಂದುವರೆಸಿದ...

"ನೋಡಿ....
ಮುಂಬೈ ಪಟ್ಟಣ ಹೆಚ್ಚಾಗಿ ಬೆಳೆದದ್ದು ಗುಜರಾತಿಗಳು, ಮಾರ್ವಾಡಿಗಳಿಂದ...
ನಮ್ಮ ಬೆಂಗಳೂರೂ ಸಹ... ಹೀಗೇನೇ...
ಚೆನ್ನೈ.. ಯಾಕೆ ಹೈದರಬಾದ್, ಬೆಂಗಳೂರ್ ಥರಹ ಬೆಳೆದಿಲ್ಲ ಗೊತ್ತಾ...?"

"ಅಯ್ಯೋ.. ಅಲ್ಲಿ ಹೊರಗಿನವರಿಗೆ ಮೂರುಕಾಸಿನ ಬೆಲೆಯೇ ಇಲ್ಲ...!!"

"ಹಾಗೂ ಇರಬಹುದು...
ಅಮೇರಿಕಾ ಡೆವಲಪ್ ಆಗಿದ್ದರೆ ಅಲ್ಲಿನ ಮೂಲನಿವಾಸಿಗಳಿಂದ ಅಲ್ಲ...
ಯುರೋಪ್‍ನಿಂದ ಹೋದ ಬ್ರಿಟಿಷರಿಂದ...ಪೋರ್‍ಚುಗೀಸರಿಂದ...

ಇನ್ನು ಆಸ್ಟ್ರೇಲಿಯಾದಲ್ಲಿ..
ಹೊಟ್ಟೆಕಿಚ್ಚು, ಮತ್ಸರದಿಂದ ಭಾರತೀಯರ ಮೇಲೆ ದಾಳಿ ಆಗ್ತಾ ಇದೆ..."


ನಾಗುವಿನ ವಿಚಾರ ಸರಣಿ ಹೀಗೇ ಸಾಗಿತ್ತು...
ಅದು ಸರಿಯೋ ತಪ್ಪೊ ಅಂತ ವಿಮರ್ಶೆಮಾಡುವ ಸ್ಥಿತಿ ನಮ್ಮದಿರಲಿಲ್ಲ...
ನಮಗೆಲ್ಲ ಬಹಳ ಹಸಿವಾಗಿತ್ತು...
ಹೊಟೆಲ್ ಬಳಿ ಕಾರು ನಿಂತಿತು...

ನಾಗು ಹೇಳಿದ
"ನಮಗೆಲ್ಲ ಒಂದು ಸ್ಪರ್ಧೆ ಇಲ್ಲಿದೆ...
ತಿಂಡಿ ನಾನು ಆರ್ಡರ್ ಮಾಡ್ತೇನೆ..
ನೀವೆಲ್ಲ ನೋಡ್ತಾ ಇರಿ.. ಒಂದು ಮಜಾ ಇದೆ......" ಅಂದ...


ಹೊಟೆಲ್‍ನಲ್ಲಿ ಸಪ್ಲಾಯರ್ ನಾಗು ಕರೆದ...
"ನೋಡಪಾ... ಈ ಹೊಟೆಲ್‍ನಲ್ಲಿ ಯಾವ ತಿಂಡಿ ಚೆನ್ನಾಗಿದೆ...?"

"ಸಾರ್ ಇಡ್ಲಿ ವಡೆ... ಮಸಾಲೆ ದೋಸೆ..ಪ್ಲೇನ್ ದೋಸೆ... ಸೆಟ್ ದೋಸೆ...."

"ನೋಡಿ.. ಇಲ್ಲಿ ಮಾಡಿರುವ ತಿಂಡಿ ನೀವು ರುಚಿನೋಡಿರುತ್ತೀರಿ...
ಅಥವಾ... ಇಲ್ಲಿ ಹೆಚ್ಚಾಗಿ ಇಷ್ಟ ಪಟ್ಟು ತಿನ್ನುವ ತಿಂಡಿಯನ್ನು ಐದು ಪ್ಲೇಟ್ ತನ್ನಿ"
ಅಂದ......

ಸಪ್ಲಾಯರನಿಗೆ ಆಶ್ಚರ್ಯವಾಗಿರ ಬೇಕು... ಸ್ವಲ್ಪ ಹೊತ್ತು ತಲೆಕೆರೆದು ಕೊಂಡ...

"ಆಯ್ತು ಸಾರ್.. " ಅಂತ ಒಳಗೆ ಹೋದ...

ನಾಗು ಮತ್ತೆ ಶುರು ಹಚ್ಚಿಕೊಂಡ.....

"ನೋಡ್ರೊ....
ಅವನು ತರುವ ತಿಂಡಿಯ ರುಚಿಯ ಮೇಲೆ ನಾವೆಲ್ಲ ಹೇಳ ಬೇಕು..
ಅವನು ಇಲ್ಲಿನ ಮೂಲನಿವಾಸಿ ಹೌದೋ ಅಲ್ಲವೋ ಅಂತ...
ಇದು ಸ್ಪರ್ಧೆ...ಬಹುಮಾನ ಗ್ಯಾರೆಂಟಿ ಇದೆ..."

ನಮಗೆಲ್ಲ ಕುತೂಹಲದಿಂದ ಟೆನ್ಷನ್ ಶುರುವಾಯಿತು....

ಈ ತರಲೆ ನಾಗು ಏನಾದರೂ ಒಂದು ಮಾಡುತ್ತಲೇ ಇರುತ್ತಾನೆ....
ಸ್ವಲ್ಪ ಹೊತ್ತಿನ ಮೇಲೆ ಸಪ್ಲಾಯರ್ ಬಂದ....

ಅವನ ಟ್ರೇ ನಲ್ಲಿ ಐದು "ಮಸಾಲೆದೋಸೆಗಳಿದ್ದವು..."

ನಾಗು ಹೇಳಿದ..
"ರುಚಿನೋಡೀ ... ಹೇಳ್ರೋ...!."

ನಾವು ಲಗುಬಗೆಯಿಂದ ಮಸಾಲೆ ದೋಸೆ ಬಾಯಿಗಿಟ್ಟೇವು...

ನಾಗು ನನ್ನ ಮುಖ ನೋಡಿದ...

"ಈ ಹುಡುಗ ... ಬೇರೆ ಊರಿನವನು..." ಅಂದೆ...

ಮಲ್ಲಿಕಾರ್ಜುನ್ ಹೇಳಿದರು
"..ರುಚಿ ಓಕೆ... ಇವನು ಬೇರೆ ಊರಿನವನೇ ಇರಬಹುದು.."

ನಾಗು ಶಿವು ಮುಖ ನೋಡಿದ...

"ಇದು... ಕ್ರಾಸ್ ಬೀಡ್.... ಸಾರ್.... !!

ಹಳ್ಳಿ ಹಲಸಿನ ಮರ..!

ಪೇಟೆಯ ಜಾತಿ ಮರ...ಮಿಕ್ಸ್ ಆಗಿಬಿಟ್ಟಿದೆ...!!."

ನಮಗೆ ನಗು ತಡೇಯಲಾಗಲಿಲ್ಲ....!
ಹಂಚು ಹಾರಿಹೋಗುವಷ್ಟು ನಗು....!

ನಾಗು ಅಜಿತ್ ಮುಖ ನೋಡಿದ....

" ನಾಗು ಸಾರ್.... ಇದು ಕಸಿ ಮರ.... ಮಿಕ್ಸಡ್ ಸ್ಯಾಂಪಲ್ಲು...."

ನಮಗೆಲ್ಲ ಮತ್ತೆ ನಗು...!
ತಡೆಯಲಾರದಷ್ಟು ನಗು...!

ತಿಂಡಿ ತಿಂದಾಯಿತು ಸಪ್ಲಾಯರ್ ಬಂದು ಬಿಲ್ಲು ಕೊಟ್ಟ......

ನಾಗು ಈಗ ಕೇಳಿದ...
"ನಿಮ್ಮೂರು ಯಾವುದು ಯಜಮಾನ್ರೆ..??."

"ನಮ್ಮೂರಾ... ತುಮಕೂರಿನ ಹತ್ತಿರ ಕೊರಟಗೆರೆ...!!"

ನಮಗೆಲ್ಲ ಮತ್ತೆ ನಗು... ನಗುತ್ತಲೆ ಇದ್ದೆವು...

ನಾಗು ಬಿಲ್ಲ್ ಹಣ ಕೊಟ್ಟ......

ನನಗೆ, ಮಲ್ಲಿಕಾರ್ಜುನ್‍ಗಿಬ್ಬರಿಗೂ ಖುಷಿಯಾಯಿತು.....ನಾವು ಹೇಳಿದ್ದು ಸರಿಯಾಗಿತ್ತಲ್ಲ..!

ಆತ ಬಿಲ್ ವಾಪಸ್ ತಂದು ಕೊಟ್ಟ...

ಅಜಿತ್‍ಗೆ ಇನ್ನೂ ಕುತೂಹಲ ಬಿಟ್ಟಿರಲಿಲ್ಲ...

"ನೋಡ್ರಿ...ಯಜಮಾನ್ರೆ...!
ನಿಮ್ಮ ರಿಲೇಟಿವ್ಸ್ ಯಾರಾದರೂ ಈ ಊರಲ್ಲಿ ಇದ್ದಾರಾ...?"

ಸಪ್ಲಾಯರ್ ತುಂಬ ಖುಷಿಯಿಂದ ಹೇಳಿದ...!!

"ಹೌದು ಸಾರ್....!!

ನನ್ನ ಅಮ್ಮ .... ಇದೇ ಊರಿನವರು..!!.??.!!"

ನಮಗೆಲ್ಲ ನಗು ತಡೆಯಲು ಸಾಧ್ಯವಾಗಲೇ ಇಲ್ಲ....!

ಹೊಟ್ಟೆ ಹುಣ್ಣಾಗುವಷ್ಟು ನಕ್ಕೇವು...
ನಕ್ಕು ನಕ್ಕು ಕಣ್ಣಲ್ಲಿ ನೀರು ಬಂತು.....

ದಾರಿಯಲ್ಲಿ ಬರುವಾಗ ಬಸ್‍ಸ್ಟ್ಯಾಂಡ್‍ಗಳಲ್ಲಿ ನಾಗು ಬಹಳಷ್ಟು ಮೂಲನಿವಾಸಿಗಳನ್ನು ತೋರಿಸಿದ....

ಅವರಲ್ಲಿ ಕೆಲವರು......

ತಲೆ ಮೇಲೆ ಕೈಹೊತ್ತು ಕುಳಿತಿದ್ದರು.....

ಬಾಯಿಗೆ ಕಡ್ಡಿಹಾಕಿ ಕ್ಲೀನ್ ಮಾಡುತ್ತ ಮಾತಾಡುತಿದ್ದರು...

ಸುಮ್ಮನೆ ಆಕಾಶ ನೋಡುತ್ತಿದ್ದರು... ಆಕಳಿಕೆ ಹೊಡೆಯುತ್ತಿದ್ದರು...

ಕೆಲವರ ಮುಖದಲ್ಲಿ ಜಿಗುಪ್ಸೆ ಬೇಸರವಿತ್ತು... ನಿರಾಸೆಯಿತ್ತು...

ಇನ್ನೂ ಕೆಲವರ ಮುಖದಲ್ಲಿ...

ಈ ಜಗತ್ತಿನ ಎಲ್ಲ ಬಗೆಯ ಆತ್ಮ ಸಂತೃಪ್ತಿ ಕಾಣುತ್ತಿತ್ತು...
ತೃಪ್ತ ಭಾವನೆ ಇತ್ತು....

ಆಳಸಿತನದ ಪರಮಾವಧಿ ಭಾವ ಎದ್ದು ಕಾಣುತ್ತಿತ್ತು....

ಗಂಜಿಯಲ್ಲಿ ಬಿದ್ದ ನೊಣದ ಹಾಗೆ...

ಜೋಗ್ ಭದ್ರನ ಮುಖದ ಕಳೆ ತುಂಬಿ ತುಳುಕುತ್ತಿತ್ತು........

ನಾಗು ಮತ್ತೂ ಹೇಳಿದ....
ಮೂಲ ನಿವಾಸಿಗಳೆಂದರೆ... ಗಂಡಂದಿರುಗಳ ....ಹಾಗೆ...
ಆಫೀಸಿಗೆ ಹೋದರೆ ಕೆಲಸ ಮಾಡ್ತಾರೆ...

ಮನೆಯಲ್ಲಿ
...ಐದು ಪೈಸೆ... ಕೆಲಸ ಮಾಡಲ್ಲ...!!
ಪುಕ್ಕಟೆ ಉಪದೇಶ ಹೊಡೆಯುತ್ತ...
ಕೂತಿರ್ತಾರೆ...!!
(ನನ್ನ ಬ್ಲಾಗ್ ಫಾಲೋ ಮಾಡುವ ಕೆಲವು ಬ್ಲಾಗುಗಳ ಲಿಂಕ್ ಸಿಗುತ್ತಿಲ್ಲ...
ಇನ್ನು ಕೆಲವು ಸ್ನೇಹಿತರ ಈಮೇಲ್ ಕೂಡ ಸಿಗುತ್ತಿಲ್ಲ...
ದಯವಿಟ್ಟು...
ತಮ್ಮ ಬ್ಲಾಗ್ ಲಿಂಕ್ ನೊಂದಿಗೆ ನನಗೆ ಈಮೇಲ್ ಮಾಡುವಿರಾ...?
ನನ್ನ ಈ ಮೇಲ್..
kash531@gmail.com) )


(ಪ್ರಿಯ ಓದುಗರೇ... ನನ್ನ ಪುಸ್ತಕಕ್ಕೆ ಏನು ಹೆಸರು ಇಡಬೇಕು..?
ಹೆಸರುತೋಚುತ್ತಿಲ್ಲ... ದಯವಿಟ್ಟು ಒಳ್ಳೆಯಹೆಸರನ್ನು ಸೂಚಿಸಿ...
ಪುರಸ್ಕಾರವುಂಟು...
ಮೇಲ್ ಮಾಡುವಿರಾ...?)

( ಲೇಖನಕ್ಕೆ ಸುಂದರ
ಪ್ರತಿಕ್ರಿಯೆಗಳಿವೆ... ದಯವಿಟ್ಟು ಓದಿ... ಭಾಗವಹಿಸಿ...)


Sunday, July 26, 2009

ಹಕ್ಕಿ... ಹಕ್ಕಿ..! ಬಣ್ಣದ ಹಕ್ಕಿ...!

ನಾನು..ತಾಯಿ...

ನನ್ನ.. ಮಗು ಇದು...

ಈ ಪುಟ್ಟ ಮರಿಗೆ.. ನಾನು ಹೊಟ್ಟೆ ತುಂಬಿಸ ಬೇಕು.....

ಗೂಡು ಕಟ್ಟಿ ಸಂಸಾರ ಮಾಡಬೇಕು...

ಪುಟ್ಟ ಹಕ್ಕಿಗಳಿಗೆ ಹೇಗೆ ತಿಳಿಯುತ್ತದೆ...??





ಬಣ್ಣ ಬಣ್ಣದ ಹಕ್ಕಿಗಳು....
ಜಾತಿಗಳು ಬೇರೆ.. ಬೇರೆ...!
ಬದುಕಲಿಕ್ಕೆ ಏನೂ ತೊಂದರೆ ಇಲ್ಲವಲ್ಲ.....!!



ನಾನೂ, ನೀನು ಜೋಡಿ...

ಜೀವನ ಎತ್ತಿನ ಗಾಡಿ...

ಗೂಡು ಕಟ್ಟುವದು ಗಂಡು ಹಕ್ಕಿ,..
ಪುಟ್ಟ ಮರಿಗೆ ಹೊಟ್ಟೆ ತುಂಬಿಸಿ..
ಹಾರುವದನ್ನು ಕಲಿಸುವದು ತಾಯಿ ಹಕ್ಕಿ....
ಪುಟ್ಟ ಹಕ್ಕಿಗಳಿಗೆ ಇದೆಲ್ಲ... ಹೇಗೆ ಗೊತ್ತಾಗುತ್ತದೆ...??



"ಹೇಗಿದೆ ಜೀವನಾ... ? ಮಳೆ ಬೆಳೆ ಎಲ್ಲಾ ಹೇಗೆ...?"

ಪಕ್ಷಿಗಳು
ಮಾತಾಡುತ್ತಾವಾ...?
ಸ್ಪಂದಿಸುತ್ತಾವಾ...?
ಅವುಗಳಿಗೊಂದು ಭಾಷೆ ಇದೆಯಾ...?



ಒಂದೊಂದು ಹಕ್ಕಿಗೂ..
ಒಂದೊಂದು ಬಣ್ಣ..
ಇದು ಸ್ರಷ್ಟಿಯ ವೈಚಿತ್ರ್ಯ ಕಣಣ್ಣಾ...


ಕಾಡಿನ ನಾಶ..!
ವಾತಾವರಣ ಮಾಲಿನ್ಯ...!
ಮೂಕ
ಹಕ್ಕಿಯ ರೋದನ.. ಕೇಳುವರಾರು...?




ಹಸಿರೆಲೆ ನಡುವೆ ಹಾಯಾಗಿರುವ...
ನನ್ನ ಪ್ರಪಂಚಕ್ಕೂ ಬಂದಿದೆ ಕುತ್ತು....!


ನಾನು ಪಕ್ಷಿ ರಾಜ...
ನನ್ನ
ಚಂದವೇ ನನಗೆ ವೈರಿ....!




ನನ್ನ ರೆಕ್ಕೆ, ಪುಕ್ಕ ಹೇಗಿದೆ...?



ಕಪ್ಪಿದ್ದರೇನು...?
ಚಂದವೇ ಅಲ್ಲವೇ...?




ಬಾ ಕಟ್ಟೋಣ ಪುಟ್ಟ ಮನೆಯೊಂದನು... .......
ಕೆಟ್ಟ ..ಮಾನವನ ಕಣ್ಣು ಬೇಳದೆಡೆ....



ನನ್ನ ಚಂದಕೆ ಸಾಟಿಯಾರು...?





ಕ್ರೂರತೆಯೂ ಅಂದ...
ಕ್ರೌರ್ಯವೂ..
ಚಂದ... ! ಚಂದ...!




ನಾನು ಹೀಗಿದ್ದರೆನೆ ಚಂದ.....!

ಎಲ್ಲಿ ನನ್ನ ಆಹಾರ....??



ತಲೆಗೊಂದು ಜುಟ್ಟು...
ಇದೆ
ನನ್ನ ಅಂದದ ಗುಟ್ಟು....!



ಸದ್ದಿರದ ಪಸಿರುಡೆಯ..
ಮಲೆನಾಡ
ಬನಗಳಲಿ..........
ಮೊರೆವ ತೊರೆಯೆಡೆಯಲ್ಲಿ... ಗುಡಿಸಲೊಂದಿರಲಿ...




ಕಾಡೆಲ್ಲ ಅಳಿದ ಮೇಲೆ....
ಎಲ್ಲಿದೆ ನನ್ನ ನೆಲೆ...??



ನಮ್ಮ ಪುಟ್ಟ ಸಂಸಾರದ...
ಮೇಲೆ ನಿನಗೇಕೋ... ಕೆಟ್ಟ ..ಕಣ್ಣು.. ??




ನೀಲಿ ಆಗಸದಲ್ಲಿ ... ಸ್ವಚ್ಚಂದವಾಗಿ...

ಹಾಯಾಗಿ ಹಾರಾಡಲು ಬಿಡ ಬಾರದೆ...?



ಬಿಳಿಯ..
ಕರಿಯ...
ಭೇದ ಭಾವ ನಮ್ಮಲ್ಲಿಲ್ಲವೋ...!

ಪ್ರೀತಿಯಿಂದ ಬದುಕುವ ರೀತಿ, ನೀತಿ..ತಿಳಿಯೋ... !


(ನನ್ನ ಬ್ಲಾಗ್ ಫಾಲೋ ಮಾಡುವ ಕೆಲವು ಬ್ಲಾಗುಗಳ ಲಿಂಕ್ ಸಿಗುತ್ತಿಲ್ಲ...
ಇನ್ನು ಕೆಲವು ಸ್ನೇಹಿತರ ಈಮೇಲ್ ಕೂಡ ಸಿಗುತ್ತಿಲ್ಲ...
ದಯವಿಟ್ಟು...
ತಮ್ಮ ಬ್ಲಾಗ್ ಲಿಂಕ್ ನೊಂದಿಗೆ ನನಗೆ ಈಮೇಲ್ ಮಾಡುವಿರಾ...?
ನನ್ನ ಈ ಮೇಲ್..
kash531@gmail.com) )

ಇಲ್ಲಿ ನೋಡಿ..
ಛಾಯಾ ಚಿತ್ತಾರಾ...
(ನನ್ನ ಪ್ರೊಫೈಲ್)