Friday, June 26, 2009

ಕಣ್ಣು.. ಕಣ್ಣು ಒಂದಾಯಿತು..! .ನನ್ನಾ... ನಿನ್ನಾ ಮನಸೇರಿತು....!!

part 2


"ಪ್ರಕಾಶು ಒಂದು ಕವನ ಬರೆದು ಕೊಡೋ..."

ನನಗೆ ಪಿಕಲಾಟಕ್ಕೆ ಶುರುವಾಯಿತು....

"ಎಂತುದು ಮಾರಾಯಾ...?
ಏನು ವಿಷಯ..? ಏನು ಕಥೆ..?

ನಾನೇನೂ ಕವಿ ಅಲ್ಲ ಮಾರಾಯಾ..."

ನಾಗು ಹೇಳಿದ...
"ಈ ಕವನ, ಕವಿತೆ .. ಬರಿಲಿಕ್ಕೆ ಕವಿಗಳು ಯಾಕೋ...??
ಏನೋ...ಒಂದಷ್ಟು .. ಅರ್ಥವಾಗದ ಶಬ್ಧ ಹಾಕಿ ..
ಗೊಂದಲ ಮಾಡಿದರೆ ಕವನ ಆಗುತ್ತದಪ್ಪಾ..
ಅರ್ಥ ಆಗದಿದ್ದರೂ ಪರವಾಗಿಲ್ಲ ...
ಅದಕ್ಕೇನು ಪ್ರಾಸ ಬೇಕಾ...?
ವ್ಯಾಕರಣ ಬೇಕಾ...?
ಕವಿತೆ ಅಂದ್ರೆ ಹೇಗಿರ ಬೇಕು ಗೊತ್ತಾ...?
ಡಾಕ್ಟರ್ ಮೆಡಿಸಿನ್ ಚೀಟಿ ತರಹ ಇರಬೇಕು..
ನಮ್ಮಂಥವರಿಗೆ ಅರ್ಥ ಆದಹಾಗೆ ಅನಿಸಬೇಕು..
ಅರ್ಥ ಆಗಿರ ಬಾರದು...
ಆದರೆ... ಅರ್ಥ ಆಗೊರಿಗೆ ಅರ್ಥ ಆದ್ರೆ ಸಾಕು...
ನೀನು ಬರೆಯಪಾ......"

"... ಯಾಕೆ..?? "

"ಅದೆಲ್ಲ ಕೇಳ ಬೇಡ ...
ಪ್ರತಿಯೊಂದೂ ಕವಿತೆಗೂ ...

ಸಿದ್ದಾಪುರದ ನಿರ್ಮಲಾ ಹೊಟೆಲನಲ್ಲಿ ಮಸಾಲೆ ದೋಸೆ,..
"ಐನ್ ಕೈ ಜ್ಯೂಸ್" ನಲ್ಲಿ ಜ್ಯೂಸ್...
ಲಕ್ಷ್ಮೀ, ಮತ್ತು ಸೆಂಟ್ರಲ್ ಟಾಕೀಸ್ ನಲ್ಲಿ ಸಿನೇಮಾಗಳು..
ನೀನು ಬರಿ ಮಾರಾಯಾ..."

ನಾನು ಆಯಿತೆಂದೆ...
ಒಂದು ಕವನ ಗೀಚಿದೆ....

ಅವನಿಗೆ ಕೊಟ್ಟೆ...

"ನನ್ನ ಬಿಳಿ ಹಲ್ಲಿನ...
ಕ್ಲೋಸ್ ಅಪ್ ನಗುವಿನ...
ಹಿಂದೆ ..
ಕೊಳೆತು ನಾರಿ...
ಹೊಮ್ಮುತ್ತಿರುವ...
ಹೊಲಸು...
...........
ನನಗಷ್ಟೇ.... ಗೊತ್ತು...!!!.."


ಕವನ ಓದಿ ನಾಗು ದಂಗಾಗಿ ಹೋದ ...!!

" ಏನೋ ಇದು...???.. !!
ಕವಿತೇನಾ ಇದು...?

ಹೋಗ್ಲಿ ಬಿಡು... ಇದು ಚೆನ್ನಾಗಿದೆ... !
ಇಂಥದ್ದೇ ಬರಿ...!
ಇನ್ನೂ ದೊಡ್ಡದಾಗಿ ಬರಿ ಮಾರಾಯಾ..."


ದಿನಾಲೂ ನಾನು ಕವನ ಬರೆಯೋದು...
ಈತ ನನಗೆ ಮಸಾಲೆ ದೋಸೆ ,..
ಸಿನೇಮಾ ತೋರಿಸೋದು ಶುರುವಾಯಿತು...

ಈ ನಾಗು ದಿನಾಲು ನನಗೆ ವಿಷಯ ಕೊಡುತ್ತಿದ್ದ....
'ಇವತ್ತು " ಭಾರತದ ಜನಸಂಖ್ಯೆ " ಬಗೆಗೆ ಬರಿ...!!.."

" ಇವತ್ತು " ಕುಟುಂಬ ಯೋಜನೆ " ಬಗೆಗೆ ಬರಿ...!! "

ಇಂದು "ಇಂದಿರಾ ಗಾಂಧಿ ಮತ್ತು ರಾಜಕುಮರ್ ಮೂಗಿನ " ಬಗೆಗೆ ಬರಿ"

ಇಂದು " ಮುರಾರ್ಜಿ ದೇಸಾಯಿಯವರ ಸ್ವಮೂತ್ರ ಪಾನದ " .. ಬರಿ.."

ಕೊಡುತ್ತಿರುವದು ಎಲ್ಲಾ ಎಡವಟ್ಟು ಐಡಿಯಾಗಳೇ...!

ನನಗೆ ತಲೆ ಕೆಟ್ಟು ಹೋಯಿತು...!!

"ಲೋ ಇವತ್ತು ಇದೆಲ್ಲಾ ಯಾಕೆ ಅಂತ ಹೇಳೋವರೆಗೂ..
ಕವನ ಬರೆದು ಕೊಡೋದಿಲ್ಲ..."

ಪಟ್ಟು ಹಿಡಿದು ಕುಳಿತೆ...

"ಪ್ರಕಾಶು...
ನಮ್ಮ "ಪೆಟ್ಟಿಗೆ ಗಪ್ಪತಿ" ನನಗೊಂದು ಕಾಂಟ್ರಕ್ಟು ಕೊಟ್ಟಿದ್ದಾನೆ..!!"


" ಏನು..?"

" ಅವನೊಂದು ಹುಡುಗಿ ಇಷ್ಟ ಪಟ್ಟಿದ್ದಾನೆ......
ಅವಳು ಇವನನ್ನು ನೋಡಿ ಇಷ್ಟ ಪಡುವಂತೆ ಮಾಡಬೇಕು...
ಅದು ಕಾಂಟ್ರಕ್ಟು...
ಅವಳು ಇವನನ್ನು ಇಷ್ಟ ಪಡುವಂತೆ ನಾನು ಪತ್ರ ಬರೆದು ಕೊಡ ಬೇಕು.."


" ಇಂಥಾ...ಕವಿತೆ ಕೊಟ್ರೆ ...
ಅವಳು ಎಲ್ಲಿ ಇವನನ್ನು ಇಷ್ಟ ಪಡ್ತಾಳೋ...?"


" ಅದನ್ನು ಕಟ್ಟಿಕೊಂಡು ನಮಗೇನು..??
ಇದು ಎಷ್ಟು ದಿನ ಎಳೆಯುತ್ತೋ...ಅಷ್ಟು ದಿನ ನಮಗೆ ಲಾಭ...!
ಅಷ್ಟು ದಿನ ನಮಗೆ ಸಿನೆಮಾ.., ಮಸಾಲೆ ದೋಸೆ..
ಇನ್ನೋಂದು ವಿಷಯ ...
ಇವನೂ, ಅವಳೂ ... ಇನ್ನೂ ..ಮಾತಾಡ್ತಾ ಇಲ್ಲವಂತೆ..

ಎಲ್ಲ ಕಣ್ಣು ಸನ್ನೆ ಬಾಯಿಸನ್ನೆಯಂತೆ...
ಇವನು ಕೊಟ್ಟ ಪತ್ರಕ್ಕೆ ...
ಸಧ್ಯಕ್ಕೆ ಒಳ್ಳೆಯ ಮುಗುಳ್ನಗೆ ಬಂದರೆ ಸಾಕಂತೆ..!!.
ನೀನು ಬರೆಯೋ ಕವನಕ್ಕೆ ಅವಳು ನಕ್ಕರೆ ಸಾಕು ಕಣೋ..."


" ಯಾರು ಆ ಹುಡುಗಿ...?"

" ಅದನ್ನು ಮಾತ್ರ ನಾನು ಕೇಳ ಬಾರದಂತೆ..."

" ಈ...ಥರ " ಮೂರಾರ್ಜಿಮೂತ್ರ ಪಾನ,..
ರಾಜಕುಮಾರ್ ಮೂಗು.." ಅಂತೆಲ್ಲ ಬರೆದಿದ್ದನ್ನು ಆತ ನೋಡಲ್ವೇನೋ..?"

" ಪೆಟ್ಟಿಗೆ ಗಪ್ಪತಿ ಹತ್ತಿರ ಹೋಗಿ...
ಹುಡುಗಿ ಯಾರೆಂದು ನಾನು ಕೇಳ ಬಾರದು..

ಹಾಗೆ ಆತ ...
ನಾನು ಬರ್ದು ಕೊಟ್ಟ ಪತ್ರ ಒಡೆದು ನೋಡ ಬಾರದು..

ಇದು ಕಂಡೀಷನ್, ಕರಾರು ಆಗಿದೆ..
ನಮಗೇನು ಆಗಬೇಕಿದೆ..?
ನೀನು ನಾನು ಹೇಳಿದ ಹಾಗೆ ಬರಿ..."


"ನಿನಗೇ ಇಂಥವರು ಸಿಗೋದು ಸಾಕು ಮಾರಾಯಾ..."

ಅಂದಿನಿಂದ ಕವನಗಳು, ಕವಿತೆಗಳು....
ಜೋರಾಗಿ.. ಬರೆದಿದ್ದೇ... ಬರೆದದ್ದು...!!


ಪೆಟ್ಟಿಗೆ ಗಪ್ಪತಿ ಬಹಳ ಖುಷಿಯಲ್ಲಿದ್ದ...
ತನ್ನಷ್ಟಕ್ಕೆ ಹಾಡುತ್ತಿದ್ದ...
ನಮ್ಮ ಸಂಗಡ ಮಾತಾಡಲು ಬರುತ್ತಿರಲಿಲ್ಲ...
ಒಬ್ಬಂಟಿಯಾಗಿ...
ರೂಮಿನಲ್ಲಿ ಪ್ರೇಮಗೀತೆಗಳನ್ನು ಷಿಳ್ಳೆ ಹಾಕುತ್ತ.. ಹಾಡುತ್ತಿದ್ದ...

"ಕಣ್ಣು... ಕಣ್ಣು ಒಂದಾಯಿತು....
ನನ್ನಾ... ನಿನ್ನಾ... ಮನಸೆರಿತು..."

ಎಲಾ ಇವನಾ...?

ಈತ ಹುಡುಗಿ ಹತ್ತಿರ ಹೇಗೆ ಭೇಟಿಯಾಗ್ತಾನೆ..?
ಸಂಕ್ಷಿಪ್ತವಾಗಿ ಮಾತನಾಡಲೇ ಬರದ ಈತನಿಗೆ..
ಯಾವ ಹುಡುಗಿ ನೋಡುತ್ತಿರ ಬಹುದು...?

ಇವನ ಘಂಟೆಗಟ್ಟಲೆ ಪುರಾಣದ ಕೊರೆತ ಹೇಗೆ ಸಹಿಸಿ ಕೊಳ್ತಾಳೆ..?

ಸಂಕೋಚ ಸ್ವಭಾವದ ಆತ ಹೇಗೆ , ಎಲ್ಲಿ ..?
ಪತ್ರ ಕೊಡುತ್ತಿದ್ದ ಅನ್ನೋದು ಯಕ್ಷ ಪ್ರಶ್ನೆ ಆಯಿತು...!


ಪ್ರೇಮ ಮತ್ತು ಕೆಮ್ಮು ಮುಚ್ಚಿಡಲಿಕ್ಕೆ, ಬಚ್ಚಿಡಲಿಕ್ಕೆ ಅಗುವದಿಲ್ಲವಂತೆ....

ನನ್ನ ಸಂಗಡ ಸೀತಾಪತಿ, ಉಮಾಪತಿ ಸೇರಿಕೊಂಡರು...

"ತೆಂಗಿನಕಾಯಿತಲೆ ಸೀತಾಪತಿ" ಇದರಲ್ಲಿ ಬಹಳ ಜೋರು...

ಆತ ಕಂಡು ಹಿಡಿದೇ ಬಿಟ್ಟ...!

ಕ್ಲಾಸಿನಲ್ಲಿ ಪೆಟ್ಟಿಗೆ ಗಪ್ಪತಿ ನೋಟ್ ಬುಕ್ ಎಲ್ಲ ಸಂಗ್ರಹ ಮಾಡಿ..
ಸ್ಟಾಫ್ ರೂಮಿನಲ್ಲಿ ಇಟ್ಟು ಬರುತ್ತಿದ್ದ...

ಹಾಗೆಯೇ ಅದನ್ನು ಲೆಕ್ಚರರ್ ನೋಡಿ ಆದಮೇಲೆ....
ಸ್ಟಾಫ್ ರೂಮಿನಿಂದ ಕ್ಲಾಸಿಗೆ ತಂದಿಡುತ್ತಿದ್ದ...

ಅಲ್ಲಿ ..ಆ... ಹುಡುಗಿಯ ನೋಟ್ ಬುಕ್ಕಿನಲ್ಲಿ ..
ಈ ಪ್ರೇಮಪತ್ರ ಇಡುತ್ತಿದ್ದ....!


ಅಬ್ಭಾ...! ಎಂಥಹ ಸಂಪರ್ಕ ಮಾಧ್ಯಮ...!!!!

ಎಲ್ಲಾ ಸರಿ...
ಆ... ಹುಡುಗಿ ಯಾರು...?

ಒಂದುದಿನ ನಾವೆಲ್ಲ ಪೆಟ್ಟಿಗೆ ಗಪ್ಪತಿಯನ್ನೇ ನೋಡುತಿದ್ದೇವು......

ಪಾಠ ಕೇಳಿಸಿಕೊಳ್ಳಲಿಲ್ಲ....

ಸಾವಕಾಶವಾಗಿ ಪೆಟ್ಟಿಗೆ ಗಪ್ಪತಿಯ ಕಣ್ಣು...
ಹೆಣ್ಣುಮಕ್ಕಳ ಕಡೆಗೆ ತಿರುಗಿತು...!

ಕ್ಯಾಮರಾ ಥರಹ ಅಲ್ಲಿ ,ಇಲ್ಲಿ , ಹುಡುಕಿತು....
ಅವನ ಸಂಗಡ ನಮ್ಮ ಕಣ್ಣುಗಳು ಓಡಾಡಿತು....!
ಎಲ್ಲಕಡೆ ಓಡಾಡಿ ಒಂದು ಕಡೆ ನಿಂತಿತು....!

ನಾವೂ ಅದೇ ಕೋನದಲ್ಲಿ ನೋಡಿದೆವು...!!

ಅರೇ,,..!... ಹಾಂ...!!!!

"ಅವಳು ರಾಜಿ...!!!!"

ತನ್ನ ಕಣ್ಣಂಚಿನ ಮಿಂಚಲ್ಲೇ ಕೊಲ್ಲುವ ಹುಡುಗಿ...!!

ರಾಜಿ.. ಒಂದು ಮುಗುಳ್ನಗು ಪೆಟ್ಟಿಗೆ ಗಪ್ಪತಿಕಡೆ ಕೊಟ್ಟಳು....!!

ಅಬ್ಭಾ.... ಪೆಟ್ಟಿಗೆ ಗಪ್ಪತಿಯೇ...!!

ಭರ್ಜರಿ ಹುಲಿಯನ್ನೇ ಬೇಟೆಯಾಡಿದ್ದ....!

ಅಷ್ಟರಲ್ಲಿ ಕಾಲೇಜಿನ ಜವಾನ...
ಒಂದು ನೋಟಿಸನ್ನು ಲೆಕ್ಚರರಿಗೆ ಕೊಟ್ಟ..

ಅವರು ಅದನ್ನು ಜೋರಾಗಿ ಓದಿದರು....

" ನಾಡಿದ್ದು... ನಮ್ಮ ಕಾಲೇಜಿನಲ್ಲಿ.. ಎಲ್ಲ ಕ್ಲಾಸುಗಳಲ್ಲಿ..
ರಕ್ಷಾಬಂಧನ ಕಾರ್ಯಕ್ರಮವಿದೆ...
ಇದು ಕಡ್ಡಾಯ...
ತಪ್ಪಿಸಿಕೊಂಡವರಿಗೆ ದಂಡ ವಿಧಿಸಲಾಗುವದು...
ಬರದಿದ್ದವರು ಪಾಲಕರನ್ನು ಕರೆದು ಕೊಂಡು ವಿವರಣೆ ಕೊಡಬೇಕು..
ರಕ್ಷಾ ಬಂಧನ ನಮ್ಮ ಕಾಲೇಜಿನಿಂದ ಉಚಿತವಾಗಿ ಸಪ್ಲೈ ಮಾಡಲಾಗುತ್ತದೆ..
ನಾವೆಲ್ಲ ಸಹೋದರತೆ ಬಾಂಧವ್ಯವನ್ನು ಬೆಳೆಸುವಲ್ಲಿ ಈ ಕಾರ್ಯಕ್ರಮ ಮಾಡೋಣ.."

ಎಲ್ಲರೂ ನಾಗುವಿನ ಕಡೆಗೆ ಮುಖಮಾಡಿದರು....

"ಕಾಪಾಡು ಮಾರಾಯಾ" ಎನ್ನುವಂತೆ...

ನಾಗು ದೀರ್ಘವಾಗಿ, ಗಹನವಾಗಿ ವಿಚಾರ ಮಡುತ್ತಿದ್ದ......

ಎಂಥ ಐಡಿಯಾ ಕೊಡ ಬಹುದು ಈತ...??
ನಮಗೂ ಕುತೂಹಲ ಜಾಸ್ತಿಯಾಯಿತು....!!(ದಯವಿಟ್ಟು ನಾನು ಬರೆದ.. "ಗಪ್ಪತಿ ಅನ್ನುವ ಅಡಪೊಟ್ರು " ಓದಿ....
http://ittigecement.blogspot.com/2009/03/blog-post_22.html

71 comments:

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ..
ರಾಕಿ ಹಬ್ಬಕ್ಕೆ ತಪ್ಪಿಸಿಕೊಳ್ಳೋಕೆ ಏನ್ ಉಪಾಯ ಕೊಟ್ಟ ರೀ, ನಾಗು ?

ಎಚ್. ಆನಂದರಾಮ ಶಾಸ್ತ್ರೀ said...

ಕವನಗಳು ಗೋಜಾಗಿರುವ ಈ ದಿನಗಳಲ್ಲಿ ನಿಮ್ಮೀ ಕವನಸದೃಶ ಬರಹ ಮೋಜಾಗಿದೆ! ’ಕೇಫ’ರ ಲಘುಬರಹಗಳಲ್ಲಿನ ಶೌರಿ-ಪಾಂಡು ಸಂವಾದಗಳನ್ನು ನೆನಪಿಗೆ ತರುತ್ತದೆ. ಹಾಗೆಂದಾಕ್ಷಣ ಪ್ರಭಾವಿತವೆಂದರ್ಥವಲ್ಲ, ಸಂಪೂರ್ಣ ಸ್ವಂತಿಕೆಯಿಂದ ಕೂಡಿದೆ.

Anonymous said...

ನಿಮ್ಮ ಹೆಡ್ಡಿಂಗ್ ನೋಡಿದಾಗ ಇದೇನಪ್ಪ ಅಂದ್ಕೊಂಡೆ!! ಪೋಸ್ಟ್ ಸಖತ್ತಾಗಿ ಇದೆ. ನಿಜವಾಗ್ಲೂ ಈ ರಾಜಿ, ನಾಗು ನಿಮ್ಜೊತೆ ಇದ್ದವರ ಅಥ್ವಾ ನಿಮ್ಮ ಕಾಲ್ಪನಿಕ ಪಾತ್ರಗಳಾ?
ಇದನ್ನ ಓದಿದಾಗ ನನ್ನ ಕಾಲೆಜಿನ ದಿನಗಳು ನೆನಪಾಗ್ತಾ ಇದೆ.....
ನೀವೆಲ್ಲ ಹುಡುಗಿಯರಿಂದ ರಾಕೀ ಕಟ್ಟಿಸಿಕೊಳ್ಳೋದನ್ನ ಹೇಗೆ ತಪ್ಪಿಸಿಕೊಂಡ್ರಿ (ಹ...ಹಾ...ತಪ್ಪಿಸ್ಕೊಂಡೇ
ಇರ್‍ತಿರಾ..ಅದು ನಂಗೊತ್ತು!!) ಅನ್ನೋದನ್ನ ಹೇಳೋಕ್ಕೆ ಮರೀಬೇಡಿ!!

ಸಿಮೆಂಟು ಮರಳಿನ ಮಧ್ಯೆ said...

ಶಿವ ಪ್ರಕಾಶ್.....

ರಾಜಿಯನ್ನು ನಾಗು ಇಷ್ಟ ಪಡುತ್ತಿದ್ದ....
ಪೆಟ್ಟಿಗೆ ಗಪ್ಪತಿಯ ಬೆಳವಣಿಗೆ ಅವನಿಗೆ
ಹೊಟ್ಟೆಯಲ್ಲಿ ಹಸಿಮೆಣಸಿನ ಕಾಯಿ ಹಾಕಿ ಅರೆದ ಹಾಗಾಯಿತು...

ಈಗಲೇ ಹೇಳಿ ಬಿಟ್ಟರೆ ಹೇಗೆ...!??
ಸ್ವಲ್ಪ ಇರಿ....

ಲೇಖನ ಇಷ್ಟಪಟ್ಟಿದ್ದಕ್ಕೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಆನಂದರಾಮ ಶಾಸ್ತ್ರಿಗಳೆ...

ನನ್ನ ಬ್ಲಾಗಿಗೆ ಸ್ವಾಗತ....
ನಿಮ್ಮಂಥವರ ಪ್ರೋತ್ಸಾಹ ನನಗೆ ಉತ್ಸಾಹ ತರಿಸುತ್ತದೆ...
ಇನ್ನಷ್ಟು ಬರೆಯಲು ಪ್ರೇರಣೆ...

ಈ ಅರ್ಥವಿಲ್ಲದ ಕವನಗಳನ್ನು ಆ ರಾಜಿ ಓದುತ್ತಿದ್ದಳು...
ಓದಿ ನಗು ಬರದೇ ಇನ್ನೇನು...?
ಆ ಪೆಟ್ಟಿಗೆ ಗಪ್ಪತಿ ಬಹಳ ಖುಷಿಯಲ್ಲಿರುತ್ತಿದ್ದ....

ನಮಗೆ ಮಸಾಲೇ ದೋಸೆ, ಸಿನೇಮಾ...!!

ಲೇಖನ ಮೆಚ್ಚಿಕೊಂಡಿದ್ದಕ್ಕೆ,
ಪ್ರೋತ್ಸಾಹಕ್ಕೆ ಧನ್ಯವಾದಗಳು...

ಬರುತ್ತಾ ಇರಿ....

ಬಾಲು said...

ಚೆನ್ನಾಗಿದೆ ಬರಹ.
ಆಮೇಲೆ ರಾಕಿ ಹಬ್ಬ ದ ದಿನ ತಪ್ಪಿಸಿ ಕೊಳ್ಳಲು ಏನು ಉಪಾಯ ಮಾಡಿದಿರಿ.

ಕೆಲವೇ ಕೆಲವು ವರ್ಷಗಳ ಹಿಂದೆ ನಾವು ಓದುವಾಗ
ನಮಗೆ ರಾಕಿ ಹಬ್ಬ ದ ಭಯವಿರಲಿಲ್ಲ.
ಯಾಕೆಂದರೆ ನಮ್ಮ ಕ್ಲಾಸ್ ಹುಡುಗಿಯರು
ಬರಿ ರಾಕಿ ಕಟ್ಟಲು ಅಷ್ಟೇ ಲಾಯಕ್ಕು ಅನ್ನುವ
ತೀರ್ಮಾನ ನಾವು ಮಾಡಿ ಆಗಿತ್ತು!! :)

(ಇ ತೀರ್ಮಾನ ಹುಡುಗಿಯರಿಗೆ ತೀವ್ರ ಇರಿಸು ಮುರಿಸು
ಉಂಟಾಗಿ ರಾಕಿ ಕಟ್ಟಲು ಹಿಂದೆ ಮುಂದೆ ನೋಡುತ್ತಾ ಇದ್ದರು )

ಅಂದಿನ ನೆನಪು ತರಿಸಿದ್ದಕ್ಕೆ ಧನ್ಯವಾದಗಳು!!

ಕ್ಷಣ... ಚಿಂತನೆ... Think a while said...

ಸರ್‍, ಲೇಖನ ಚೆನ್ನಾಗಿದೆ. ಕುತೂಹಲದಿಂದ ಓದಿಸಿಕೊಂಡು ಹೋಗುತ್ತಿದೆ. ಮುಂದೇನು ಮಾಡಿದರು ಈ ಹುಡುಗರು ಎಂಬ ಯೋಚನೆಗೆ ಬೀಳಿಸಿದ್ದೀರಿ. ಮುಂದಿನ ಸಂಚಿಕೆಗಾಗಿ ಕಾಯುತ್ತಾ...

ಸಸ್ನೇಹದೊಂದಿಗೆ,

ಚಂದ್ರಶೇಖರ ಬಿ.ಎಚ್.

Archana said...

ಪ್ರೇಮ ಮತ್ತು ಕೆಮ್ಮು ಮುಚ್ಚಿಡಲಿಕ್ಕೆ, ಬಚ್ಚಿಡಲಿಕ್ಕೆ ಅಗುವದಿಲ್ಲವಂತೆ....ಎನ್ನೋ ಸಾಲು ಒಪ್ಪಲೇ ಬೇಕಾದುದು ಅಲ್ಲವಾದರೂ ಇಷ್ಟವಾಯಿತು.

ಅಚ್ಚು...

Ravi Hegde said...

ಬ್ಲಾಗ್ ಗೆ ಬಂದು ಅನಿಸಿಕೆ ತಿಳಿಸಿದ್ದೀರಿ ಧನ್ಯವಾದಗಳು.

ನಿಮ್ಮ ಬ್ಲಾಗ್ ಓದಿ ಅನಿಸಿಕೆ ತಿಳಿಸುವೆನು.

ರವಿ

ರಾಜೀವ said...

ಪ್ರಕಾಶ್ ಅವರೇ,

ಇಷ್ಟು ಜನ ರಾಜಿಯ ಹಿಂದೆ ಬೀಳುವುದನ್ನು ನೋಡಿ ನನಗೂ ಒಂದು ಸಲ ಈ ರಾಜಿಯನ್ನು ನೂಡಬೇಕೆನಿಸಿದೆ. ಅವಳ ಫೋಟೋ ಇದ್ದರೆ ಕೊಡ್ತಿರಾ? (ನಾಗಿಗೆ ಹೇಳಬೇಡಿ. ಅವನು ಇನ್ನೇನೋ ತಿಳಿದುಕೊಂಡಾನು). ಒಂದು ಫೋಟೋಗೆ ಒಂದು ಮಸಾಲೆ ದೋಸೆ.

ಕಥೆ ಸ್ವಾರಸ್ಯಕರವಾಗಿದೆ. ಮುಂದೆ?

shivu said...

ಪ್ರಕಾಶ್ ಸರ್,

ಲೇಖನ ಎಂದಿನಂತೆ ಸರಾಗವಾಗಿ ಹೈವೇ ರೋಡಿನಲ್ಲಿ ಒಂದೇ ವೇಗದಲ್ಲಿ ಹೋಗುವಂತೆ ಓದಿಸಿಕೊಂಡು ಹೋಗುತ್ತಿತ್ತು...ಸಡನ್ನಾಗಿ ರಾಖಿ ಕಾರ್ಯಕ್ರಮ ಬಂದಕೂಡಲೇ ತಿರುವು ತೆಗೆದುಕೊಂಡುಬಿಟ್ಟಿತ್ತಲ್ಲ...

ನಾಗುವಿಗೆ ಎಂಥ ಐಡಿಯಾ ಹೊಳೆದಿರಬಹುದು..

ಅದಕ್ಕಾಗಿ ಕಾಯುತ್ತಿದ್ದೇನೆ....

asha said...

ಈ ರಾಜಿಗೆ ಸ್ವಲ್ಪ ವಿಚಾರ ಕಡಿಮೆ ಅನಿಸ್ತದೆ...
ನಿಮ್ಮ ಕ್ಲಾಸ್ ಮೇಟ್ ಆಗಿ ನಾನು ಬರಬೇಕಿತ್ತು...

ನಿಮ್ಮ ಪ್ರಿನ್ಸಿಪಾಲರ ಐಡಿಯಾ ಎಲ್ಲಾ ಕಾಲೇಜಿನಲ್ಲೂ ತರಬೇಕಿತ್ತು....

sunaath said...

ಪ್ರಕಾಶ,
ನಿಮ್ಮ ಹೊಸ ಲೇಖನಕ್ಕಾಗಿ ಕಾಯ್ತಾ ಇದ್ದೆ. ಕವನಗಳನ್ನು ಓದಿ ತುಂಬಾ ಖುಶಿ ಆಯ್ತು. Continue, please.

ಜಲನಯನ said...

ಪರ್ಕಾಸಪ್ಪೋ...ಅಯ್ ಅದೇನಂತ ಮಾಡೀಯಾ..?? ಉಡೀರ್ಗ್ ಕೈಲಿ ಕೆಂಪುದಾರ ರಾಕಿ ನೋಡಿದ್ರೆ ಹಾವ್ ಹಿಡ್ಕಂಡ್ ಕೈ ಕಂಡಂಗಾಗಿರ್ಬೇಕಲ್ಲ..??
ಎಲ್ಲಾರ್ನೂ ಅಕ್ಕ ತಂಗೀರಂಗೆ ನೋಡೋಕಾಯ್ತದಾ ಏಳ್ ಮತ್ತೆ....
ಪಸಂದಾಗ್ ಬರ್ದಿದ್ದೀ ಬುಡು...

ಶಿವಶಂಕರ ವಿಷ್ಣು ಯಳವತ್ತಿ said...

ಏನ್ ಪ್ರಕಾಶಣ್ಣ...

ಮಾಂಡೊವಿ ಕಾದಂಬರಿಯಲ್ಲಿನ ಕಥಾನಾಯಕನ ನೆನಪು ಮಾಡಿಸ್ತಿದ್ದೀರಿ,,,

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ
www.shivagadag.blogspot.com

Ranjita said...

ಪ್ರಕಾಶಣ್ಣಾ ತುಂಬಾ ಚೆನ್ನಾಗಿದೆ ಲೇಖನ .. ಕವನ ಅಂತು ಧಂ ಟಾಪ್ .. ಏನ್ ಐಡಿಯಾ ಕೊಟ್ರು ಬೇಗ ಬರೀರಿ :) ಕಾಯ್ತಾ ಇದಿವಿ .

Prabhuraj Moogi said...

ಈ ನಾಗು ಸೂಪರ ಸರ್ ಎಲ್ರನ್ನೂ ಏಮಾರಿಸೊದರಲ್ಲಿ ಎತ್ತಿದ ಕೈ ಅಂತನಿಸುತ್ತೆ...ಅಂತೂ ರಾಜಿಗೆ ಹುಡುಗ ಸಿಕ್ಕಿದಾನೆ ಅಂತಾಯ್ತು, ಇನ್ನು ರಾಖಿ ದಿನ ಏನಾಯ್ತು ಬೇಗ ಬರಲಿ.. ನಾಗು ಚಾಲಾಕಿ ಯಾರ ಕೈಗೂ ಸಿಕ್ಕಿರಲ್ಲ ಅನಿಸುತ್ತದೆ

SSK said...

ಪ್ರಕಾಶ್ ಹೆಗ್ಡೆ ಅವರೇ,
ಚೆನ್ನಾಗಿದೆ, ಮುಂದಿನ ಭಾಗ ಬೇಗ ಬರಲಿ.

ಶಾಂತಲಾ ಭಂಡಿ said...

ಪ್ರಕಾಶಣ್ಣ...
ನಾಗೂ ಸರಣಿಯ ಎಲ್ಲ ಲೇಖನಗಳು ಸೊಗಸಾಗಿ ಮೂಡಿಬರುತ್ತಿವೆ.
"ಕವಿತೆ ಅಂದ್ರೆ ಹೇಗಿರ ಬೇಕು ಗೊತ್ತಾ...?
ಡಾಕ್ಟರ್ ಮೆಡಿಸಿನ್ ಚೀಟಿ ತರಹ ಇರಬೇಕು..
ನಮ್ಮಂಥವರಿಗೆ ಅರ್ಥ ಆದಹಾಗೆ ಅನಿಸಬೇಕು..
ಅರ್ಥ ಆಗಿರ ಬಾರದು...
ಆದರೆ... ಅರ್ಥ ಆಗೊರಿಗೆ ಅರ್ಥ ಆದ್ರೆ ಸಾಕು..."
ನನಗೆ ಓದುವಾಗ ಯಾಕೋ ಇಂಥಸಾಲುಗಳು ಹೆಚ್ಚು ಇಷ್ಟವಾಗುತ್ತವೆ. ಹೀಗೆ ನೀವು ಬರೆಯುತ್ತೀರಲ್ಲ, ಇಂಥ ವಾಕ್ಯಗಳು ನಿಮ್ಮ ಸಾಲುಗಳಿಗಿಷ್ಟು ಗಟ್ಟಿತನ ಕೊಟ್ಟು ಬರಹಕ್ಕಿಷ್ಟು ವಜನ್ ಕೊಡುತ್ತವೆ.
ಸುಮ್ಮನೆ ಓದಿ ನಕ್ಕು ಮರೆಯುವಂಥ ಸಾಲುಗಳು ಆ ಕ್ಷಣದ ಖುಷಿಯಾದರೆ ಇಂಥ ಸಾಲುಗಳು ಅವಿಸ್ಮರಣೀಯ ಎನಿಸಿಕೊಳ್ಳುತ್ತವೆ.
ಬರೆಯುತ್ತಿರಿ.

dileephs said...

ಪ್ರಕಾಶ್ ಸರ್..

ತುಂಬಾ ಇಷ್ಟವಾಯ್ತು..... ರಾಖೀ ಹಬ್ಬದ ದಿನ ಏನಾಯ್ತು ಅಂತ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗ್ತಿದೆ.... ಜಾಸ್ತಿ ಕಾಯಿಸಬೇಡಿ.. :)

umesh desai said...

ಹೆಗಡೆ ಅವರಿಗೆ ನಿಜಕ್ಕೂ ಹಳೆಯ ದಿನಗಳು ಅಪ್ಯಯಮಾನ್ ಅವುಗಳ ಸೊಗಸೇ ಸೊಗಸು..
ರಾಜಿ ಸಿಕ್ಕಳೋ ಇಲ್ಲವೊ ಗೊತ್ತಾಗಲಿಲ್ಲ...!

ಸಿಮೆಂಟು ಮರಳಿನ ಮಧ್ಯೆ said...

ಸುಮನಾ....

ರಾಜಿ, ನಾಗು ಎಲ್ಲರೂ ನನ್ನ ಸ್ನೇಹಿತರು...
ನಾವೆಲ್ಲ ಜೊತೆಯಲ್ಲಿ ಓದಿದವರು...
ನಾಗು ನನ್ನ ಬ್ಲಾಗ್ ಫಾಲೋ ಮಾಡ್ತಿದ್ದಾನೆ..

ಇದೆಲ್ಲವೂ ಸತ್ಯ ಘಟನೆಗಳು...

ರುಚಿಗೆ ತಕ್ಕ ಮಸಾಲೆ, ಒಗ್ಗರಣೆ ಹಾಕಿ ನಿಮ್ಮ ಮುಂದಿಟ್ಟಿದ್ದೇನೆ....

ನಾಗುವಿನ ಪ್ರೇಮ ಪ್ರಕರಣ ಬರೆಯಲು ಅನುಮತಿ..
ಇಬ್ಬರಿಂದಲೂ ಸಿಕ್ಕಿರಲಿಲ್ಲ...

ಇವೆಲ್ಲ ನಾಗುವಿನ ಪ್ರೇಮ ಕಥೆಯ ಹಿನ್ನೆಲೆ....

ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ವಂದನೆಗಳು....

ಸಿಮೆಂಟು ಮರಳಿನ ಮಧ್ಯೆ said...

ಬಾಲು ಸರ್....

ನಿಮ್ಮ ಪ್ರತಿಕ್ರಿಯೆ ಅಂದರೆ ನನಗೆ ಸ್ವಲ್ಪ ಹೆದರಿಕೆ ಇರುತ್ತದೆ...
ನನ್ನ ಲೇಖನಗಳ ಅಂತ್ಯವನ್ನು ನೀವು ಊಹಿಸುವ ರೀತಿ..
ನನಗೆ ಬಹಳ ಆಶ್ಚರ್ಯ ಉಂಟು ಮಾಡುತ್ತದೆ...
ನನ್ನ ಚೇತನಾ " ಲೇಖನಗಳನ್ನು ಹೆಚ್ಚುಕಡಿಮೆ ಸರಿಯಾಗಿ ಊಹಿಸಿ ಬಿಟ್ಟಿದ್ದಿರಿ...
ಆದರೆ ಇಲ್ಲಿ ಬೇರೆ ಥರ ಇದೆ...

ರಕ್ಷಾಬಂಧನ ಕಟ್ಟಿಸಿಕೊಳ್ಳದಿರಲು..
ನಿಮ್ಮ ಐಡಿಯಾ ಸೂಪರ್...!!

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಕ್ಷಣ ಚಿಂತನೆ....

ನಾಗು ಒಬ್ಬ ಅಸಾಧ್ಯದವ....
ಎಂಥಹ ವಿಚಾರಗಳೋ...
ಅವನ ಐಡಿಯಾಗಳೋ....
ನಾವಂತೂ ಬಹಳ ಸಾರಿ ಬೆಸ್ತು ಹೋಗಿದ್ದೇವೆ...

ಅವನನ್ನು ನೋಡಿದರೆ ಈ ಥರಹದ ಮನುಷ್ಯ ಅಂತ ಊಹೆ ಮಾಡುವದು ಕಷ್ಟ...

ಸ್ನೇಹ ಜೀವಿ....

ಪ್ರತಿಕ್ರಿಯೆಗೆ ವಂದನೆಗಳು....

Mahesh said...

ಪ್ರಕಾಶಣ್ಣ,
ಲೀಖನ ಸರಾಗವಾಗಿ ಮೂಡಿ ಬನ್ದಿದೆ. ನಾಗು ಅಸಾದ್ಯ ರಾಕಿ ಕಟ್ಟಿಸಿಕೊಳದೆ ಇರೊಕೆ ಎನಾದ್ರು ಉಪಾಯ ಮಾಡೆ ಮಾಡಿರ್ತರೆ ನಾಗು.... ರಾಕಿ ಹಬ್ಬ ದಿನ ಎನಾಯ್ತು ಕಾಯುತಾ ಇದ್ದಿವಿ ....

Ranjana Shreedhar said...

ಪ್ರಕಾಶಣ್ಣ
ಸೂಪರ್ ಬರಹ... ಕವನ ತುಂಬಾ ಚೆನ್ನಾಗಿವೆ.. ಕವನ ಹೇಗೆ ಬರೆಯಬೇಕು ಅಂತ ಟಿಪ್ಸ್ ಕೊಟ್ಟಿದಿರ...!! ಸಕ್ಕತ್ತಾಗಿದೆ....

Geetha said...

ಹಹಹ...ಚೆನ್ನಾಗಿದೆ ಸರ್ ಕವನ ಮತ್ತು ಬರಹ. ಭಾರಿ ಇದ್ದಾರೆ ನಿಮ್ಮ ಪ್ರಿನ್ಸಿಪಾಲರು !!

ನಮ್ಮ ಸ್ಕೂಲಲ್ಲಿ ತುಂಬಾ circulate ಅಗ್ತಿದ್ದ ಒಂದು ಜೋಕು....... ರಾಜೀವ್ ಗಾಂಧಿ ಅವರು ಸೋನಿಯಾ ಅವ್ರನ್ನ ಮದುವೆ ಆಗಿದ್ದು ಯಾಕೆ? ಯಾಕಂದ್ರೆ ಅವ್ರು ಸ್ಕೂಲಲ್ಲಿ ಪ್ರಮಾಣ ಮಾಡಿದ್ದರು - "ನಾನು ಭಾರತ ಮಾತೆಯ ಪುತ್ರ, ಎಲ್ಲ ಭಾರತೀಯರು ನನ್ನ ಸೋದರ,ಸೋದರಿಯರು" ಅಂತ!

ಸಿಮೆಂಟು ಮರಳಿನ ಮಧ್ಯೆ said...

ಅರ್ಚನಾ...

ಪ್ರೇಮ ಮತ್ತು ಕೆಮ್ಮು ಮುಚ್ಚಿಡಲು ಬಹಳ ಕಷ್ಟ...
ಎರಡು ಬ್ಂದಿತೆಂದರೆ...,
ಆಯಿತೆಂದರೆ....
ವ್ಯಕ್ತವಾಗಲೇ ಬೇಕು...

ವ್ಯಕ್ತವಾದಮೇಲೆ ಇತರರ ಅನುಭವಕ್ಕೂ ಬಂದೇ ಬರುತ್ತದೆ...
ಎರಡನ್ನು ಹತ್ತಿಕ್ಕಿಡುವದು ಕಷ್ಟ....

ಏನಂತೀರಿ...?

ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ರವಿಯವರೆ...

ನನ್ನ ಬ್ಲಾಗಿಗೆ ಸ್ವಾಗತ....
ನನ್ನ ಹಳೆಯ ಲೇಖನಗಳನ್ನೂ ಓದಿ....

ಇಷ್ಟವಾದಲ್ಲಿ ಖುಷಿಯಾಗುತ್ತದೆ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ರಾಜೀವ್...

ನಿಜವಾಗಿಯೂ ಅವಳು ಬಹಳ ಸುಂದರಿ...
ಸಿಲ್ಕ್ ಸ್ಮಿತಾ ಅಂತ ಒಬ್ಬಳು ನಟಿ ಇದ್ದಳು..
ಅವಳ ಕಣ್ಣುಗಳ ಹಾಗೇ ಇತ್ತು...

ಈಗ ಮದುವೆಯಾಗಿ..
ಅವಳು ಬಯಸಿದ ಬದುಕಿನಲ್ಲಿ..
ಸುಖಿ ಸಂಸಾರದಲ್ಲಿ ಮುಳುಗಿದ್ದಾಳೆ..

ಹೆಚ್ಚಿಗೆ ಹೇಳಲಾರೆ...

ಬ್ಲಾಗ್ ಓದುತ್ತಾ ಇರಿ...
ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್....

ರಾಖಿ ಕಟ್ಟಿಸಿಕೊಳ್ಳಲಿಕ್ಕೆ ನಮ್ಮ ಅಭ್ಯಂತರ ಏನಿರಲಿಲ್ಲ....
ನಮ್ಮಲ್ಲಿ ಎಲ್ಲ ಹುಡುಗರೂ ..
ಹೆಚ್ಚಿನವರು ಮನಸ್ಸಿನಲ್ಲಿ..ಒಂದೊಂದು ಹುಡುಗಿಯನ್ನು...
ಇಷ್ಟ ಪಡುತ್ತಿದ್ದರು...

ಇಷ್ಟಪಡುವ ಹುಡುಗಿ ಎಲ್ಲಿ ರಾಖಿ ಕಟ್ಟು ಬಿಡ್ತಾಳೋ ಎನ್ನುವ ಭಯ....

ನಾಗುವಿನ ಮನಸ್ಸಿನಲ್ಲಿರುವದೇ ಬೇರೆ ಬಿಡಿ....

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಆಶಾ ಮೇಡಮ್ ...

ಶರಣು.....

ಜೀವನ ಪೂರ್ತಿ ನನ್ನ ಸಂಗಡನೇ ಇರ್ತೀರಲ್ಲ...
ಕ್ಲಾಸ್ ಮೇಟ್ ಆಗಿ ಬರಬೇಕಿತ್ತಾ...?
ಮನಸ್ಸಿನಲ್ಲಿದ್ದ ವಿಜಯಾ ಆಗಲೇ ದೂರವಾಗಿ ನಿಮ್ಮ ಹಿಂದೆ ಬೀಳುತ್ತಿದ್ದೆ...

ನನ್ನ ಮಾವ ಮಿಲಿಟರಿಯವರು ತುಂಬಾ ಸ್ಟ್ರಿಕ್ಟ್ ಅಲ್ಲವೇ..?

ಅದು ದೊಡ್ಡ ಕಥೆಯಾಗಿ ಬಿಡುತ್ತಿತ್ತು...
ಹೀಗಾಗಿದ್ದೆ ಚೆನ್ನಾಗಿದೆ...

ರಾಜಿಯವರ ಬಗೆಗೆ "ನೋ... ಕಮೆಂಟ್ಸ್...."

ಪ್ರಿನ್ಸಿಪಾಲರ ಐಡಿಯ ಫ್ಲಾಪ್ ಮಾಡಲಿಕ್ಕೆ ನಮ್ಮಲ್ಲಿ ಬಹಳ ಐಡಿಯಾಗಳಿವೆ...

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್.....

ನನ್ನ ಅಭಿಪ್ರಾಯದಲ್ಲಿ ಕವನವೆಂದರೆ ಹಾಡಲಿಕ್ಕೆ ಬರಬೇಕು...
ನಾನು ಬರೆದ ಅಡಪೋಟ್ರು ಕವನಗಳು..
ರಾಜಿಮುಖದಲ್ಲಿ... ನಗು ತರಿಸಲಿಕ್ಕೆ...

ಮುರಾರ್ಜೀ ಮೂತ್ರಪಾನ, ಇಂದಿರಾ ಗಾಂಧಿಯವರ ಮತ್ತು ರಾಜಕುಮಾರ್
ಮೂಗನ್ನು ಹೋಲಿಸಿ ಬರೆದ ಕವನ...ಹ್ಹಾ..ಹ್ಹಾ...!

ಪೆಟ್ಟಿಗೆ ಗಪ್ಪತಿಯಿಂದ ಏನೋ ಊಹೆಯಲ್ಲಿದ್ದ ರಾಜಿಗೆ..
ಕುಟುಂಬ ಯೋಜನೆಯ ಕವನ ಬಂದರೆ ರಿಯಾಕ್ಷನ್ ಹೇಗಿರ ಬಹುದು...!!

ಆಮೇಲೆ ಪರಿಚಯ ಆದಮೇಲೆ ನಾವೆಲ್ಲ ನಕ್ಕಿದ್ದೇ ನಕ್ಕಿದ್ದು...!

ನನ್ನ ಮೊದಲನೇ ಲೇಖನದಿಂದ ಇಲ್ಲಿಯವರೆಗೂ..
ನನ್ನನ್ನು ಪ್ರೋತ್ಸಾಹಿಸಿದ್ದಕ್ಕೆ...

ಧನ್ಯ... ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಜಲನಯನ....

ಮಂಡ್ಯ ಭಾಷೆ ಅಷ್ಟಾಗಿ ನನಗೆ ಗೊತ್ತಿಲ್ಲ...
ಕಲ್ತ್ಕೋತಿನಿ ಇರಿ...
ಎಷ್ಟು ಚಂದ ಅಲ್ವಾ... ಆ ..ಮಾತಾಡುವ ಸೊಗಸು...!!

ಅಷ್ಟೆಲ್ಲ ಹೆಣ್ಣುಮಕ್ಕಳಲ್ಲಿ ಯಾರೋ ಒಬ್ಬಳು ಮನಸ್ಸಲ್ಲಿ ಇಷ್ಟವಾಗಿರುತ್ತಾರೆ...
ಹೇಳಿಕೊಳ್ಳಲು ಧೈರ್ಯವಿಲ್ಲ...

ಅವಳು ಎಲ್ಲಿ ರಾಖಿ ಕಟ್ಟಿಬಿಡುತ್ತಾಳೋ ಎನ್ನುವ ಭಯ....

ನಮ್ಮ ಹುಡುಗರಿಗೇ ಆದದ್ದು ಇದೇ....

ನಿಮ್ಮ ಸುಂದರ ಪ್ರತಿಕ್ರಿಯೆಗೆ ನನ್ನ ನಮನಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವಶಂಕರ್.....

ಹೇಗಿದೆ ಆರೋಗ್ಯ...?
ಪೂರ್ತಿ ಹುಶಾರಾದ ಮೇಲೆ ಬ್ಲಾಗ್ ಲೋಕಕ್ಕೆ ಬನ್ನಿ.. ರೆಸ್ಟ್ ತಗೊಳ್ಳಿ....

ಮಾಡೋವಿ ಇನ್ನೂ ಓದಿಲ್ಲ.....
ಅನಾರೋಗ್ಯದ ನಡುವೆಯೂ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ರಂಜಿತಾ....

ನಾಗುವಿಗೆ ಎರಡು ಸಮಸ್ಯೆ...

ರಾಜಿ ತನಗೆ ಇಷ್ಟವಾಗಿದ್ದಾಳೆ....!
ಪೆಟ್ಟಿಗೆ ಗಪ್ಪತಿ ಕಣ್ಣು ಹಾಕಿದ್ದಾನೆ.....!

ಪ್ರಿನ್ಸಿಪಾಲರ ಎದುರಲ್ಲಿ ಆದ ಜಗಳದ ಪರಿಣಾಮ ತನಗೆ "ರಾಖಿ" ಕಟ್ಟುಬಿಟ್ಟರೆ...?

ದೊಡ್ಡ ಸಮಸ್ಯೆಗಳು ಇವೆಲ್ಲ ಆ ಕಾಲಕ್ಕೆ...!!

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಪ್ರಭು...

ನಾಗು ಸಮಸ್ಯೆಯನ್ನು ಎದುರಿಸುವವನು...
ಬೆನ್ನುಹಾಕಿ ಓಡುವವನಲ್ಲ....

ಸ್ಪಷ್ಟ... ನೇರ...
ಮನಸ್ಸಿನಲ್ಲಿ, ಮಾತಿನಲ್ಲಿ ಯಾವುದೇ ಗೊಂದಲವಿಲ್ಲ....
ನಾಗುವಿಗೆ ಯಾವಾಗಲು ಒಂದು ನಂಬಿಕೆ...

ಪ್ರತಿ ಸಮಸ್ಯೆಗೂ ಒಂದು ದಾರಿ ಪರಿಹಾರವಾಗಿ ಇದ್ದೇ ಇರುತ್ತದೆ...

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....

ಸುಧೇಶ್ ಶೆಟ್ಟಿ said...

ಕಾಲೇಜು ದಿನಗಳನ್ನು ನಿಮ್ಮಷ್ಟು ಎ೦ಜಾಯ್ ಮಾಡಿದವರೂ ಯಾರೂ ಇರಲಿಕ್ಕಿಲ್ಲ ಪ್ರಕಾಶಣ್ಣ... ನನ್ನ ಫ್ರೆ೦ಡ್ಸ್ ಯಾರಾದರೂ ಬೋರು ಆಗ್ತಿದೆ, ಏನಾದ್ರೂ ಓದೋಕ್ಕೆ ಮೇಲ್ ಮಾಡು ಅ೦ದಾಗ ನಿಮ್ಮ ಬ್ಲಾಗ್ ಬರಹಗಳನ್ನು ಕಳಿಸಿಕೊಡುತ್ತೇನೆ... ಅವರೆಲ್ಲರೂ ನಿಮ್ಮ ಬರಹಗಳನ್ನು ಬಹುವಾಗಿ ಮೆಚ್ಚಿಕೊ೦ಡಿದ್ದಾರೆ....

ತು೦ಬಾ ಇಷ್ಟವಾಗುತ್ತದೆ ನಿಮ್ಮ ಬರಹಗಳು.... ರಾಖಿ ಕಟ್ಟಿಸಿಕೊಳ್ಳುವದನ್ನು ತಪ್ಪಿಸಿಕೊಳ್ಳಲು ನಾಗು ಏನು ಉಪಾಯ ಮಾಡಿರಬಹುದು ಎ೦ದು ತಿಳಿದುಕೊಳ್ಳಲು ಕಾತುರನಾಗಿದ್ದೇನೆ....

ಮನಸು said...

hahaha super!!! post...

ಸಿಮೆಂಟು ಮರಳಿನ ಮಧ್ಯೆ said...

ಎಸ್ಸೆಸ್ಕೆ ಯವರೆ....

ರಾಜಿಗೆ ಬಣ್ಣವಿಲ್ಲದಿದ್ದರೂ...
ಚಂದವಾದ..
ಅತ್ಯಕರ್ಷಕವಾದ ಕಣ್ಣುಗಳಿದ್ದವು...
ತಾನು ಹೇಗೆ ಚಂದಕಾಣುತ್ತೇನೆ..
ಎನ್ನುವ ಸೌಂದರ್ಯ ಪ್ರಜ್ಞೆ ಅವಳಿಗಿತ್ತು....

ಸೌಂದರ್ಯ ಪ್ರಜ್ಞೆ ಎಲ್ಲರಿಗೂ ಇರುವದಿಲ್ಲ...
ಖರ್ಚುಮಾಡಿದರೂ ..
ಒಪ್ಪುವ ಫ್ಯಾಷನ್ ಮಾಡಿಕೊಳ್ಳುವದು.. ಒಂದು ಕಲೆ....

ಅದು ರಾಜಿಗೆ ತಿಳಿದಿತ್ತು...
ಹುಡುಗರನ್ನು ಆಟ ಆಡಿಸುತ್ತಿದ್ದಳು....

ಪ್ರತಿಕ್ರಿಯೆಗೆ ಧನ್ಯವಾದಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
"ಕವನ" ಬರೆಯುವುದನ್ನು ನಿಮ್ಮ ನಾಗು ಡಾಕ್ಟರ್ ಪ್ರಿಸ್ಕ್ರಿಪ್ಷನ್ ಗೆ ಹೋಲಿಕೆ ಕೊಟ್ಟಿರುವುದು ಇಷ್ಟವಾಯಿತು.
ಅವರು ಕೊಡುವ ವಿಷಯಗಳು, ವ್ಯತಿರಿಕ್ತವಾಗಿ ಆಲೋಚಿಸುವ ಪರಿ ಅಮೋಘವಾಗಿದೆ. ನಿಮ್ಮ ಬ್ಯಾಚಿನ ಬಗ್ಗೆ ನೀವು ಬರೆಯುತ್ತಿರುವ ಸಂಗತಿಗಳನ್ನು ಆಧರಿಸಿ ಚಿತ್ರ ಮಾಡಿದರೆ ಹೇಗೆ? ರಮೇಶ್ ನಿರ್ದೇಶನ ಮಾಡಬೇಕು. ಏನಂತೀರಿ?
ತೆಲುಗಿನವರಿಗೆ ಗೊತ್ತಾದರೆ ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಿಬಿಡುತ್ತಾರೆ. ಅಲ್ಲಿ ಕಾಮಿಡಿಗೆ ಮೊದಲ ಆಧ್ಯತೆ.
ಇರಲಿ. ಮುಂದೇನಾಯ್ತು?!!

NiTiN Muttige said...

ಹ್ಹೆಹೆಹ್ಹೀಎಹೆಹ್ಹೆಹೆಹೆಹೆಹೆಹೆಹ್ಹೆಹೆಹೆಹೀಹೆಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹೆಹೆಹೀಹೆಹ್ಹೆ

ನೀವು ನಿಮ್ಮ ನಾಗು ಏನಾದ್ರು ಮಾಡಿ ಗಣಪ್ತಿಗೆ ರಾಖಿ ಕಟ್ಸಿ ರಾಜಿ ಕೈಯಿಂದ್ದ ನಿವು ಪಾರಾಗ್ತಿರಾ ಬಿಡಿ!!

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ....

ನಿಮ್ಮಂತೆ ಗಟ್ಟಿ ಬರಹಗಳನ್ನೋ, ಅರ್ಥವತ್ತಾದ ಕವನಗಳನ್ನೋ
ನನಗೆ ಬರೆಯಲು ಅಸಾಧ್ಯ...
ನಾನು ಸಾಹಿತ್ಯ ಅಷ್ಟೆಲ್ಲ ಓದಿಲ್ಲ...
ಇಟ್ಟಿಗೆ ಸಿಮೆಂಟಿನ ಕೆಲಸದ ಮಧ್ಯೆ...
ಇನ್ನೆಂಥಹ ಲೇಖನ
ಕವನ ಬರಲು ಸಾಧ್ಯ...?

ನೀವು ತುಂಬಾ ಚೆನ್ನಾಗಿ ಬರೆಯುತ್ತೀರಿ...
ನಿಮ್ಮ ಓದು, ಚಿಂತನೆ
ನಿಮ್ಮ ಕೆಲಸದಲ್ಲಿ ಕಾಣ ಬಹುದು.....
ಬರೆಯುವವರು ಓದಬೇಕು....
ಚಿಂತನೆ ಅಗತ್ಯ... ಅಲ್ಲವಾ..?

ನನ್ನ ಬರಹದಲ್ಲಿ ನಗುವ ವಿಷಯ ಬಿಟ್ಟರೆ
ಹೆಚ್ಚಿನ ಡೆಪ್ತ್ ಏನೂ ಇರುವದಿಲ್ಲ....

ಕೆಲವೊಮ್ಮೆ ಏನು ಬರೆಯಬೇಕೆಂದು ನನಗೆ ಸೂಚಿಸದೇ ಇದ್ದಾಗ..
ನಿಮ್ಮ ಹಳೆಯ ಬರಹಗಳನ್ನು ಓದಿ..
ಸ್ಪೂರ್ತಿ ಪಡೆದದ್ದು ಇದೆ....

ನಿನ್ನ ಪ್ರೋತ್ಸಾಹಕ್ಕೆ ಹ್ರದಯಪೂರ್ವಕ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ದಿಲಿಪ್....

ನನ್ನ ಬ್ಲಾಗಿಗೆ ಸ್ವಾಗತ....

"ಅಣ್ಣಾ "
ಎನ್ನುವ ಶಬ್ಧವನ್ನೂ ಅಪಾರ್ಥದಿಂದ ನೋಡುವವರು..ಇದ್ದಾಗ..
ರಕ್ಷಾ ಬಂಧನ ಬಲು ವಿಶಿಷ್ಟ ಎನಿಸುತ್ತದೆ...

ಕಟ್ಟುವ ದಾರದಲ್ಲಿ ಸಂಬಂಧ ಇರುವದಿಲ್ಲ..
ಮನಸ್ಸಿನ ಭಾವದಲ್ಲಿ...
ಮನದಲ್ಲಿ ಮೂಡುವ ಅನುಬಂಧದಲ್ಲಿ..

"ಬಾಂಧವ್ಯ" ಶಬ್ಧಕ್ಕೊಂದು ವಿಶೇಷ ಅರ್ಥ ಬರುತ್ತದೆ...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್ ದೇಸಾಯಿಯವರೆ...

ನಮ್ಮ ನಾಗುವಿನ ತರಲೆ ಐಡಿಯಾಗಳು..
ನಮ್ಮ ಗುಂಪಿನ ಹುಡೌಗರು..
ಅವರ ಪ್ರೆಮ ಕಥೆಗಳು...

ಆ ಹೆಣ್ಣುಮಕ್ಕಳು...
ನಿಜಕ್ಕೂ ಅವೆಲ್ಲ ಸೊಗಸಾದ ನೆನಪುಗಳು...

ಪ್ರತಿಕ್ರಿಯೆಗೆ ವಂದನೆಗಳು...

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ದಿನದಿನಕ್ಕೂ ಉತ್ಸಾಹ ಹೆಚ್ಚಿಸುತ್ತಿದೀರಿ
ತುಂಬಾ ಕುತೂಹಲಬರೋಟ ಅನುಭವ ನಿಮ್ಮದು

ಬರೆಯುತ್ತಿರಿ

vinuta said...

Prakashanna,
Tumba chennagide lekhana. spashtavada baraha.Nanna college dinagalannu nenapisutta iddiri.Munde hege tappisikondri rakhi habbada dina?

ಸಿಮೆಂಟು ಮರಳಿನ ಮಧ್ಯೆ said...

ಮಹೇಶ್....

ನೀವಂದ ಹಾಗೆ ನಾಗು ಅಸಾಧ್ಯ...
ಅವನ ಐಡಿಯಾಗಳೋ..
ಅವನ ಉಪಾಯಗಳು ಮಜವಾಗಿರುತ್ತಿದ್ದವು...

ಆದರೆ ಸಭ್ಯವಾಗಿರುತ್ತಿದ್ದವು...
ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ರಂಜನಾ....

ಪರೀಕ್ಷೆ ಹೇಗಾಯಿತು...?
ಈ ದಿನಗಳಲ್ಲೂ ಪ್ರತಿಕ್ರಿಯಿಸಿದ್ದಕ್ಕೆ ಖುಷಿಯಾಗುತ್ತದೆ....

ನಾಗು ಕವನ, ಲೇಖನ ಬರೆಯೋದು ಹೇಗೆ ಅಂತ ಹೇಳಿದ...
ಅದರ ಟಿಪ್ಸ್ ಮುಂದಿನ ಭಾಗದಲ್ಲೂ ಬರಲಿದೆ...

ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಬಿಸಿಲ ಹನಿ said...

ಬಿದ್ದು ಬಿದ್ದು ನಕ್ಕೆ. ಗಪ್ಪತಿ ಗಪ್ಪತಿ ಮೋರಗಯಾ!

ವಿನುತ said...

ಕುತೂಹಲಕಾರಿ ಬರಹ. ಹಾಸ್ಯದೊ೦ದಿಗೆ ಕವನದ definition ಚೆನ್ನಾಗಿದೆ. ಹಿ೦ದಿನ ಬರಹದಲ್ಲಿ ಗಪ್ಪತಿ ನಯನಳನ್ನು ಪ್ರೀತಿಸಿ ಅಡಪೋಟ್ರು ಆಗ್ತಾನೆ, ಇಲ್ಲಿ ರಾಜಿ ಅ೦ತಿದೆ? ಬಹುಶ: ಮು೦ದಿನ ಬರಹದಲ್ಲಿ ಉತ್ತರ ಸಿಗಬಹುದು.

ಸಿಮೆಂಟು ಮರಳಿನ ಮಧ್ಯೆ said...

ಗೀತಾರವರೆ.....

ತುಂಬಾ ಚೆನ್ನಾಗಿದೆ ನಿಮ್ಮ ರಾಜೀವ್ ಗಾಂಧಿ ಜೋಕ್....

ನಿಮ್ಮ ಕವನಗಳು ತುಂಬಾ ಮಸ್ತ್ ಆಗಿರುತ್ತವೆ...

ಪ್ರಿನ್ಸಿಪಾಲರ ಈಅಡಿಯ ಯಶಸ್ವಿಯಾಗಿತ್ತು...!!

ಲೇಖನ ಮೆಚ್ಚಿದ್ದಕ್ಕೆ ವಂದನೆಗಳು...

venkob said...

superrrrrrrrrrrrrrr agiddu :)

Guru's world said...

ಪ್ರಕಾಶ್,
ಮತ್ತೊಂದು ಚಿತ್ರ ವಿಚಿತ್ರ ವಾದ ಬರಹ.....ತುಂಬ ಚೆನ್ನಾಗಿ ಇದೆ.....ಹಾಗೆ ಓದಿಸಿಕೊಂಡು ಹೋಗುತ್ತೆ ..... ಗಪ್ಪತಿ ಅನ್ನೋ ಹೆಸರೇ ಮಸ್ತ್ ಆಗಿ ಇದೆ..... ಮುಂದಿನ ಬರಹಕ್ಕಾಗಿ ಎದಿರು ನೋಡ್ತಾ ಇದ್ದೇನೆ....
ಗುರು

koundinya said...

sakkat maja ide sir nimma articles naguvige cyrup

ರೂpaश्री said...

ಜನರನ್ನು ನಗಿಸೋದು ಕಷ್ಟದ ಕೆಲಸ. ನಗುವಿಗೆ ಟಾನಿಕ್ ನಿಮ್ಮ ಬ್ಲಾಗ್ ಪ್ರಕಾಶ್ ಅವ್ರೆ! ನಾಗು ಕವನದ ಬಗ್ಗೆ ಹೇಳಿದ ಮಾತುಗಳು ತುಂಬಾ ಇಷ್ಟ ಆಯ್ತು.
ನಿಮ್ಮ ಲೇಖನ ಓದಿದಾಗ ನನ್ನ ಕಾಲೇಜಿನ ದಿನಗಳು ನೆನಪಾಯ್ತು. ಅಂದು ಬಹಳಷ್ಟು ಹುಡುಗರು ಕ್ಲಾಸಿಗೆ ಚಕ್ಕರ್ ಹೊಡಿತ್ತಿದ್ರು. ಅಲ್ಲದೆ ಮೊದಲನೆ ವರ್ಷ ರಾಖಿ ಕಟ್ಟಿಸಿಕೊಂಡವನ ಕೈಯಲ್ಲಿ ಐದು ವರ್ಷದಲ್ಲಿ ತಾಳಿ ಕಟ್ಟಿಸಿಕೊಂಡ ಘಟನೆಯೂ ನಮ್ಮಲ್ಲಿ ನಡೆಯಿತು!!

ಮುಂದೆ, ರಾಜಿಯ ಕೈಯಲ್ಲಿ ಗಪತ್ತಿಗೆ ರಾಖಿ ಕಟ್ಟಿಸುವಂತೆ ನಾಗು ಏನಾದ್ರು ಪ್ಲಾನ್ ಮಾಡಿರಬೇಕು ಅನ್ಸುತ್ತೆ...

ಸಿಮೆಂಟು ಮರಳಿನ ಮಧ್ಯೆ said...

ಸುಧೇಶ್....

ಕಾಲೇಜಿನ ದಿನಗಳಲ್ಲಿ ನಡೆದ ಘಟನೆಗಳು..
ನೆನಪಾದರೆ ಖುಷಿಯಾಗುತ್ತದೆ..
ನನ್ನ ಸ್ನೇಹಿತರು ಬಳಿಯಲ್ಲೇ ಇದ್ದಾರೆ...

ಆಗಾಗ ನೆನಪು ಮಾಡಿಕೊಳ್ಳುತ್ತಿರುತ್ತೇವೆ...

ನಿಮಗೂ, ನಿಮ್ಮ ಸ್ನೇಹಿತರಿಗೆ
ನನ್ನ ವಂದನೆಗಳು...

ರವಿಕಾಂತ ಗೋರೆ said...

Hahaha

ಸಿಮೆಂಟು ಮರಳಿನ ಮಧ್ಯೆ said...

ಮನಸು....

ಪರಿಕ್ಷೆಯ ತಯಾರಿಯಲ್ಲಿದ್ದರೂ...
ರಜಾದಲ್ಲಿ ಬೆಂಗಳೂರಲ್ಲಿದ್ದರೂ...

ಬ್ಲಾಗ್ ಓದಿ ಖುಷಿ ಪಟ್ಟಿದ್ದಕ್ಕೆ ವಂದನೆಗಳು...

ಪ್ರಕಾಶಣ್ಣ...

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್....

ನಾಗುವಿನ ವಿಚಾರಗಳೇ ಹಾಗೆ...
ವಿಚಿತ್ರ ಹಾಗು ಮಜವಾಗಿರುತ್ತದೆ....

ನಿಜ ಕೆಲವು ಕವನ ನಮ್ಮ ಮಟ್ಟ ಮೀರಿ ..
ವೈಚಾರಿಕವಾಗಿ ಮೇಲಿನ ಸ್ತರದಲ್ಲಿರುವದರಿಂದ
ಅರ್ಥವಾಗುವದು ಕಷ್ಟ...

ಯಾಕೆ ಅಷ್ಟು ಕಷ್ಟ ಪಟ್ಟು ಕವನ ಬರಿಬೇಕು...?
ಅದನ್ನು ಓದಲೂ ಬಹಳ ಕಷ್ಟ....
ಹೇಳುವದನ್ನು ನೇರವಾಗಿ ಹೇಳಿಬಿಡಬೇಕಪ್ಪಾ...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ನಿತಿನ್......

ಯಾವ ಹೂವು.. ಯಾರ ಮುಡಿಗೋ...
ಯಾರ ಒಲವು ಯಾರ ಕಡೆಗೊ...?

ಬ್ಲಾಗ್ ನೋಡುತ್ತಾ ಇರಿ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಡಾ. ಗುರುಮೂರ್ತಿಯವರೆ....

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ನಿಮ್ಮ ಕವನ ಸಂಕಲನ ಕಾರ್ಯಕ್ರಮ ಯಶಸ್ವಿಯಾಗಲಿ
ಎಂದು ಶುಭ ಹಾರೈಸುವೆ...

ಭಾರತಕ್ಕೆ ಬರುತ್ತಿದ್ದೀರಲ್ಲವೆ...?

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಉದಯ್ (ಬಿಸಿಲ ಹನಿ)

ಲೇಖನ ಓದಿ ಖುಷಿ ಪಟ್ಟಿದ್ದಕ್ಕೆ
ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ವಿನೂತಾರವರೆ....

"ಗಪ್ಪತಿ ನಯನಾ" ತುಂಬಾ ಮಜಾ ಇದೆ...
ಅದನ್ನೂ ಬರೆಯುವೆ...
ಕಾಲೇಜಿನ ದಿನಗಳ ಬಗೆಗೇ ಬರೆಯುತ್ತಾ ಹೋದರೆ ಏಕತಾನತೆ ಆಗಿಬಿಡಬಹುದು...

ಮಧ್ಯದಲ್ಲಿ ಒಂದು ಬ್ರೇಕ್ ಕೊಟ್ಟು ಬರೆಯೋಣ...

ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ವೆಂಕೋಬ...

ನನಗೆ ಗೊತ್ತು ನೀನು "ವೆಂಕಟೇಶ್" ಅಂತ....

ಕಾಲೇಜಿನ ದಿನಗಳ ನೆನಪನ್ನು..
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಬರ್ತಾ ಇರು ಮಾರಾಯಾ...

ಸಿಮೆಂಟು ಮರಳಿನ ಮಧ್ಯೆ said...

ಗುರು..........

ನಿಮ್ಮ ಬ್ಲಾಗು ತುಂಬಾ ಮಸ್ತ್ ಇದೆ...
ಪ್ರತಿ ಬಾರಿ ಏನೋ ಹೊಸತು, ಕುತೂಹಲ...

ಸಿರ್ಸಿ ಕಡೆ ಗಣಪತಿ ಹೆಸರನ್ನು ಪ್ರೀತಿಯಿಂದ ಗಪ್ಪತಿ ಎಂದು ಕರೆಯುತ್ತಾರೆ...
ನನಗೆ ತಿಳಿದ ಹಾಗೆ ಮಂಡ್ಯ, ಮೈಸೂರು, ಬೆಂಗಳೂರು ಕಡೆ ಗಣಪತಿ ಹೆಸರು ಇಡುವದಿಲ್ಲ...
ಯಾಕೊ.. ಗೊತ್ತಿಲ್ಲ...

ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಅಜಿತ್ ಕೌಂಡಿನ್ಯ....

ನಿಮ್ಮನ್ನು ಕಂಡರೆ ಅಸೂಯೆ ಆಗುತ್ತದೆ...
ಈ ದಿನಗಳಲ್ಲಿ ಸಹಿತಿಗಳ, ಸಾಹಿತ್ಯದ ನಂಟು..
ನಾಟಕ, ಸ್ಕ್ರಿಪ್ಟು , ನಿರ್ದೇಶನ.
ಸಂಗಡ ಓದಿನಲ್ಲೂ ಜೋರು....
ಖುಷಿಯಾಗುತ್ತದೆ....

ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

ನಿಮ್ಮೆಲ್ಲ ಪ್ರಯತ್ನಕ್ಕೂ ಶುಭ ಹಾರೈಕೆಗಳು...

ಸಿಮೆಂಟು ಮರಳಿನ ಮಧ್ಯೆ said...

ರೂಪಾಶ್ರೀಯವರೆ....

ನಿಮ್ಮ ಹೊಸ ಬ್ಲಾಗ್ ಓಪನ್ ಆಗಿದೆಯಾ...?
ನನಗೆ ಗೊತ್ತೇ ಇರಲಿಲ್ಲ...
ಶುಭ ಹಾರೈಕೆಗಳು...

ನಿಮ್ಮ ಅನುಭವ ಮಜವಾಗಿದೆ...
ಮುಂದೆ ಏನಾಯ್ತು ಅಂತ ಏನು ಹೇಳಲಿ...?
ನೀವೇ ಓದಿ ಬಿಡಿ...

ನಿಮ್ಮ ಮೆಚ್ಚುಗೆಗೆ
ನನ್ನದೊಂದು ಸಲಾಮ್...

RAJENDRA HEGDE said...

Ganjiyalli bidda nonagalu is the reality. I also analysed the personality of some colleagues and found that whet U said in ur blog is right and the way presented the matter is very nice