Tuesday, June 16, 2009

ಬಳೆಗಾರ ಚನ್ನಯ್ಯ ..ನವಿಲೂರಿಗೆ ಬಂದಾಗ....!!

ಹಲವು ವರ್ಷಗಳ ನಂತರ ಅಣ್ಣ, ಅತ್ತಿಗೆ ಮಕ್ಕಳು ಊರಿಂದ ಬಂದಿದ್ದರು ..
ಬೆಂಗಳೂರೆಲ್ಲ ತೋರಿಸ ಬೇಕಿತ್ತು ..
ಅಷ್ಟರಲ್ಲಿ ಬ್ಲಾಗ್ ಗೆಳೆಯ "ಅಜಿತ್ ಕೌಂಡಿನ್ಯ " ಫೋನ್ ಮಾಡಿ ...
" ಇಂದು ರಂಗ ಶಂಕರದಲ್ಲಿ ಡಾ. ಬಿ.ವಿ. ರಾಜಾರಾಮರ "ಮೈಸೂರು ಮಲ್ಲಿಗೆ" ನಾಟಕವಿದೆ ..
ನೋಡಿ ಬನ್ನಿ " ಎಂದರು....

ನನ್ನಣ್ಣ ಜೀವನದಲ್ಲಿ ನಾಟಕ ನೋಡಿದವರಲ್ಲ...
ಅಳುಕಿನಿಂದಲೇ ಕರೆದು ಕೊಂಡು ಹೋದೆ....

ಶಂಕರ್ ನಾಗ್ ರ ನೆನಪಿನಲ್ಲಿ "ಅರುಂಧತಿ ನಾಗ್" ಕಟ್ಟಿದ ಒಂದು ಸುಂದರ ನಾಟಕ ಮಂದಿರ ಅದು...
ನಾಟಕ ಆಸಕ್ತರಿಗೆ ಅಲ್ಲಿ ಎಲ್ಲವು ಇದೆ...
ಪುಸ್ತಕಗಳು... ಒಳ್ಳೆಯ ಸಿನೆಮಾ ಸೀಡಿಗಳು...
ಸಂಗೀತದ ಸೀಡಿಗಳು...

ಮಳೆಗಾಲದಲ್ಲಿ ಬೆಚ್ಚನೆಯ ಟೀ, ಕಾಫಿ....
ಕುರುಕುಲು ತಿಂಡಿಗಳು....

ಅಲ್ಲಿನ ವಿನ್ಯಾಸದಲ್ಲಿ ಒಂದು ರೀತಿಯ ಪ್ರತ್ಯೇಕತೆ ಎದ್ದು ಕಾಣುತ್ತಿತ್ತು.....

Tickets ಸಮಸ್ಯೆ ಇರಲಿಲ್ಲ...

ಡಾ. ರಾಜಾರಾಮರಿಗೆ ಮೊದಲೇ ಫೋನ್ ಮಾಡಿ ಬುಕ್ ಮಾಡಿದ್ದೆ....

ಅಲ್ಲಿನ ಆಸನಗಳ ವ್ಯವಸ್ಥೆಯು ಚೆನ್ನಾಗಿದೆ....


ನಾಟಕ ಶುರುವಾಯಿತು....

ಪ್ರೇಕ್ಷಕರ ನಡುವಿನಿಂದ ಒಬ್ಬ ಬಳೆಗಾರ ಸ್ಟೇಜ್ಗೆ ಹೋಗುತ್ತಿದ್ದಾನೆ....!!

ಬಳೆಗಾರ ಚನ್ನಯ್ಯ..!!
ನಮ್ಮ ನಾಡಿನ ಪ್ರೇಮಕವಿ ಡಾ. ಕೆ. ಎಸ. ನರಸಿಂಹ ಸ್ವಾಮಿಯವರ ಸ್ರಷ್ಟಿಸಿದ ಪಾತ್ರ...!

ಪ್ರೀತಿಸುವ ಹ್ರದಯಗಳಿಗೆ..
ಬೆಚ್ಚನೆಯ ಪಿಸುನುಡಿಗಳ ಕವನ ಬರೆದ...
ಜನಸಾಮಾನ್ಯರ ನಾಲಿಗೆಯಲ್ಲಿ ನಲಿವ..
ಒಲವಿನ ಮಲ್ಲಿಗೆಯ ಕವಿ....

ಐವತ್ತುವರ್ಷಗಳ ನಂತರ ಚನ್ನಯ್ಯ ನವಿಲೂರಿಗೆ ಬರುತ್ತಾನೆ...
ನವಿಲೂರಿನ ಅವನ ನೆಚ್ಚಿನ "ಮೈಸೂರು ಮಲ್ಲಿಗೆಯ" ಕವಿಯ ಮನೆಗೆ ಬರುತ್ತಾನೆ..

ಇಂದಿನ ನವಿಲೂರನ್ನು ಕಂಡು ದಂಗಾಗಿ ಹೋಗುತ್ತಾನೆ...!"ನಮ್ಮ ಕಾಲದಲ್ಲಿ ಇಂಗೆಲ್ಲಿತ್ರವ್ವಾ...?"...?"

ಅಲ್ಲಿ ಕವಿಯ ಮನೆಯವರ ಬಳಿ ತನ್ನ ಹಳೆಯ ನೆನಪಿನ ಸಿಹಿ ಬುತ್ತಿಯನ್ನು ಬಿಚ್ಚುತ್ತಾನೆ...

ಒಂದರ ಹಿಂದೊಂದು ಸುಂದರ ಧ್ವನಿಯಲ್ಲಿ...
ಮನಮೋಹಕ ಹಾಡುಗಳು...!
ಕಚಗುಳಿಯಿಕ್ಕುವ ಮಾತಿನ ಚಟಾಕಿಗಳು....

ವಾಹ್...!!" ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ..."

ಅಹಾ...!!
.. ಹಾಡು ...!
.... ಧಾಟಿ...!
ನಮ್ಮನ್ನೇ .... ಕುಣಿಸಿ ಬಿಡುವ .....
ಸರಳ ನ್ರತ್ಯ.... ವಾಹ್ .!!

ಕವಿಯೋಡನೆ ಕುಣಿಯುವ ಬಳೆಗಾರ ಚನ್ನಯ್ಯ...!


ಕವಿಯ ಒಳ್ಳೆಯ ತನವನ್ನು.., ಅವನ ಸಂಗಡದ ಒಡನಾಟವನ್ನು ಮೆಲುಕುಹಾಕುತ್ತಾನೆ ....
ನಮ್ಮನ್ನೂ ಕಾಲಕ್ಕೆ ಕರೆದೊಯ್ಯುತ್ತಾನೆ....


" ಇವಳು ಯಾರು ಬಲ್ಲೆಯೇನು..?" ಹಾಡುವ ಪ್ರೇಮಕವಿ....

ಗ್ರಾಮೀಣ ಸೊಗಡಿನ .... ಸಭ್ಯತೆಯ ಗಡಿದಾಟದ... ...
ನವಿರಾದ... ಹ್ರದಯ ತಟ್ಟುವ ಪ್ರೇಮ....!!" ರಾಯರು ಬಂದರು ಮಾವನ ಮನೆಗೆ...
ರಾತ್ರಿಯಾಗಿತ್ತು...
ಹುಣ್ಣಿಮೆ ಹರಸಿದ......"


ವಿರಹ ತಾಳದೆ ಪ್ರೇಮಕವಿ ಮಾವನ ಮನೆಗೆ ಬರುತ್ತಾನೆ.....!
ಹೆಂಡತಿ ಕಾಣದ ಪರಿತಪಿಸುತ್ತಾನೆ...!

ಅಕ್ಕ ಎಲ್ಲೆಂದು
ನಾದಿನಿಯೂ ಸರಿಯಾದ ಉತ್ತರ ಕೊಡುವದಿಲ್ಲ....!


"ಪದುಮಳು.... ಬಂದಳು ನಸುನಗುತಾ..."

ಮರುದಿನ ಬೆಳಿಗ್ಗೆ ಮನದನ್ನೆಯ ಮುಖನೋಡಿ ಸಂತಸ....!!
ಅಂದಿನ ಕಾಲದ ದಾಂಪತ್ಯದ ಸೊಗಸು...!
ಬೆಡಗು... ಬಿನ್ನಾಣ....
!
ಆಡಂಬರವಿಲ್ಲದ ಸರಳತೆಯ ಬದುಕು....."ನಿ... ಬರುವದಾರಿಯಲಿ...."

ಕವಿಯ ಮಗಳನ್ನು ನೋಡಲು ಬಂದಾಗ ಮಗಳು ಹೇಳುವ ಹಾಡು....

"ಶಾನಭೋಗರ ಮಗಳು ತಾಯಿ ಇಲ್ಲದ ಹುಡುಗಿ ...""ಎಮ್ಮಮನೆ ಅಂಗಳದೀ.... ಬೆಳೆದೊಂದ ಹೂ ವನ್ನು ನಿಮ್ಮ ಮಡಿಲಿಗೆ....."

ಹ್ರದಯ ಕಲುಕುವ ಮಗಳ ವಿದಾಯ....!
ವ್ಯವಹಾರದ ಬದುಕು ಅರಿಯದ....
ಪ್ರೇಮಕವಿ ಬಾಳಲ್ಲಿ ಸಮಸ್ಯೆಗಳ ಸರಮಾಲೆ...
ಕತ್ತಲೆ ಬೆಳಕಿನ ಮೋಡಿ...

ಬಳೆಗಾರ ಚನ್ನಯ್ಯನ ಸಾಂತ್ವನ...
ಮಾವನ ಅಭಿಮಾನಿ ಮಗಳ ಗಂಡ...

ಮಾತು ಮಾತಿಗೂ ಹಾಡು...!
ಮಾತಿನ ನಡುವೆ ನಗೆ ಚಟಾಕಿ...
!


ಇಳಿವಯಸ್ಸಿನಲ್ಲಿ ತಾನು ಬರೆದ ಹಾಡುಗಳ ನೆನಪು...
ಮಡದಿಯೊಡನೆ ಸರಸ .....
ಮನ ಬಿಚ್ಚಿ ಮಾತು... ಹ್ರದಯದ ಅಳಲು....
" ನಿನ್ನ... ಪ್ರೇಮದ ....ಪರಿಯ...

ನಾನರಿಯೆ ....ಕನಕಾಂಗಿ..."
...............................................

"ನನ್ನ ಹಾಡಿನ ನಾಯಕಿ ನೀನೆ... ಕಣೆ..."

"ನನ್ನ ಹಾಡುಗಳಲ್ಲಿ ಯಾವುದು ಇಷ್ಟವಾಗುತ್ತೆ ನಿನಗೆ...?"


ಇಳಿವಯಸ್ಸಿನ ಸರಸ ಪ್ರೆಮಸಲ್ಲಾಪ....!
ಮಡದಿಯ ನಾಚಿಕೆ.... !

ಮುದಿವಯಸ್ಸಿನ ಮಾಗಿದ ಪ್ರೇಮ...
.!"ಮೈಸೂರು ಮಲ್ಲಿಗೆಯ" ಕಂಪನ್ನು ಬೇರೆ ಊರಿಗೆ ಹರಡಲು ಹೊರಟ ಬಳೆಗಾರ ಚನ್ನಯ್ಯ....

ಕವಿಯ ಮನೆಯವರ ಕೈಯಲ್ಲಿ ಮೈಸೂರು ಮಲ್ಲಿಗೆ ಗಿಡದ ಕಾಣಿಕೆ ಕೊಡುತ್ತಾನೆ....
ಕೊನೆಯಲ್ಲಿ ಕಲಾಗಂಗೋತ್ರಿ ತಂಡದವರಿಂದ ...
ಆಗಮಿಸಿದ ಆಯ್ದ ಮಹನೀಯರಿಗೆ ನೆನಪಿನ ಕಾಣಿಕೆ...
"ಮೈಸೂರು ಮಲ್ಲಿಗೆ ಗಿಡ..!!"
(" ಯುದ್ಧ ಭಾರತ " ನಾಟಕ ಮತ್ತು ಹಲವಾರು ಗಿತನಾಟಕಗಳ ರಚನೆಕಾರ ದಿವಾಕರ ಹೆಗಡೆಯವರಿಗೆ ಮಲ್ಲಿಗೆ ಗಿಡದ ಕಾಣಿಕೆ)ನಾಟಕ ಮುಗಿದ ಮೇಲೆ ಮನದಲ್ಲಿ ಕಾಡುವ ...
ಕೆ.ಎಸ. . ಮತ್ತು ...
ಅವರ ಪ್ರೇಮ ಗೀತೆಗಳು....

ಕಣ್ಣಿರು ತರಿಸುವ ....
ನಾಟಕ ನಿರ್ದೇಶಕ ಡಾ. ಬಿ.ವಿ. ರಾಜಾರಾಂರವರ ಮನೋಜ್ಞ ಅಭಿನಯ...ಹಾಡು ಹೇಳುತ್ತಾ..
ನವಿಲಿನಂತೆ ನರ್ತಿಸುತ್ತಾ...
ನಾಟಕದ ನಿರೂಪಕನಾಗಿ...
ನಮ್ಮ ನಿಮ್ಮಲ್ಲಿ ಒಂದಾಗಿ ...
ಮರೆಯಲಾಗದ ... ಅದ್ಭುತ ಪ್ರತಿಭೆ....
ನಾಟಕದ ರಚನೆಕಾರ... "ರಾಜೇಂದ್ರ ಕಾರಂತ..."


ನಾಟಕ ಮುಗಿದ ಮೇಲೆ ಅಣ್ಣನನ್ನು ಕೇಳ್ದೆ "ಅಣ್ಣ ನಾಟಕ ಹೇಗಿತ್ತು...??"

"ಅದ್ಭುತ ಕಣೋ.... !
ಇದನ್ನು
ನಾನು ನೋಡದಿದ್ದರೆ ಏನನ್ನೋಕಳೆದು ಕೊಳ್ಳುತ್ತಿದ್ದೆ...
ಬೆಂಗಳೂರಿಗೆ ಬಂದಿದ್ದು ಸಾರ್ಥಕ ಆಯಿತು ಕಣೋ...!"

ಅಣ್ಣನಿಗೆ ಬಹಳ ಖುಷಿಯಾಗಿತ್ತು...
ಕಣ್ಣಿನ ಅಂಚಿನಲ್ಲಿ ಕಂಡೂ ಕಾಣದಂತೆ ಕಣ್ಣಿರಿನ ಹನಿಯಿತ್ತು...!

ನೀವು ಇದನ್ನು ನೋಡಿರದಿದ್ದರೆ ಖಂಡಿತ ನೋಡಿ....
ಇನ್ನೊಮ್ಮೆ...
ಮತ್ತೊಮ್ಮೆ...
ಮಗದೊಮ್ಮೆ....
ಯಾಕೆಂದರೆ ನಾಟಕದ ಕೆಲವು ಸನ್ನಿವೇಶಗಳು...,
ಪಾತ್ರಧಾರಿಗಳು...
ಬದಲಾಗುತ್ತ...
ಪ್ರತಿನಿತ್ಯ ಹೊಸತಾಗಿ... ಹೊಸತನವಿರುತ್ತದೆ...

ಕೆ.ಎಸ. . "ಮೈಸೂರು ಮಲ್ಲಿಗೆ ಕವನಗಳ ಹಾಗೆ....

ನಿತ್ಯ ನೂತನವಾಗಿರುತ್ತದೆ...(21/06/2009 ಮತ್ತೆ ರಂಗ ಶಂಕರದಲ್ಲಿ
"ಮೈಸೂರು ಮಲ್ಲಿಗೆ" ನಾಟಕವಿದೆ..
ಮಧ್ಯಾಹ್ನ 3.30pm ಮೊದಲನೆಯ ಷೋ...
7pm ಎರಡನೆಯ ಷೋ...
ಟಿಕೆಟ್ ಗಾಗಿ 9448069667 ಫೋನ್ ಮಾಡಿ ಮೊದಲೇ ಬುಕ್ ಮಾಡಿಕೊಳ್ಳಿ
ಇದು ಡಾ.ಬಿ.ವಿ. ರಾಜಾರಾಮರ ಫೋನ್ ನಂಬರ್))68 comments:

ಶಾಂತಲಾ ಭಂಡಿ said...

ಪ್ರಕಾಶಣ್ಣ...
ಅಧ್ಬುತ ಫೋಟೋಗಳು, ನನ್ನ ನೆಚ್ಚಿನ ಎಲ್ಲ ಹಾಡಿನ ಸಾಲು.
ಕಣ್ದುಂಬಿ, ಮನದುಂಬಿ ಬರುತ್ತದೆ.
ಮಲ್ಲಿಗೆಯ ಹಾಡುಗಳು, ಯಾವತ್ತೂ ಇಷ್ಟವೇ.
ಮಲ್ಲಿಗೆಯ ಕಂಪು ಅಲ್ಲಿಂದ ಇಲ್ಲಿಯತನಕ, ಎಲ್ಲಿ ಹೋದರೂ ಅಲ್ಲಿಯತನಕ ಮಲ್ಲಿಗೆ ಕವಿಯ ಮಲ್ಲಿಗೆಯ ಹಾಡುಗಳು.
ಮರುಳಾಗದ ಮನವಾವುದು ಹೇಳೀ!
ನನ್ನೂರಿನ ಬಳೆಗಾರನ ಇಲ್ಲಿಗೂ ಕಳಿಸಿಕೊಟ್ಟಿದ್ದಕ್ಕೆ ಇನ್ನೊಂದು ಧನ್ಯವಾದ ಹೇಳಲೇ?
ಮತ್ತೊಮ್ಮೆ ಧನ್ಯವಾದ.

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶಣ್ಣ,
ಬರಹ ಮತ್ತು ವಿವರಣೆ ಸೊಗಸಾಗಿದೆ. ಜೊತೆಗೆ ಫೋಟೋಗಳು ಸಹ... ಕೆಲಸದ ಒತ್ತಡ ಸ್ವಲ್ಪ ಜಾಸ್ತಿ ಇರುವುದರಿಂದ ಹೋಗಲಾಗುವುದಿಲ್ಲ ಎಂಬ ಬೇಸರವು ಇದೆ. ಮುಂದೆಂದಾದರೂ ಅವಕಾಶ ಸಿಕ್ಕರೆ ಖಂಡಿತ ತಪ್ಪಿಸುವುದಿಲ್ಲ.

ರೂpaश्री said...

ಮಲ್ಲಿಗೆಯ ಹಾಡಿನ ಜೊತೆ ಬಳೆಗಾರನ ದ್ರಶನ ಮಾಡ್ಸಿದಕ್ಕೆ ವಂದನೆಗಳು ಪ್ರಕಾಶ್ ಅವರೆ:)
ಅದ್ಭುತ ಫೋಟೋಗಳು, ನನ್ನ ನೆಚ್ಚಿನ ಹಾಡಿನ ಸಾಲುಗಳು!!

Ramya Hegde said...

ಪ್ರಕಾಶಣ್ಣ..,
ಸುಂದರವಾದ ಫೋಟೋಗಳು ಮತ್ತು ಅಷ್ಟೇ ಚಂದದ ನಿರೂಪಣೆ.ಮೈಸೂರು ಮಲ್ಲಿಗೆಯ ಎಲ್ಲ ಕವನಗಳು ಎಷ್ಟು ಚಂದ. ಅವುಗಳ ಕಂಪನ್ನು ಇಲ್ಲಿಯವರೆಗೂ ಬರುವಂತೆ ಮಾಡಿದ್ದಕ್ಕೆ ಧನ್ಯವಾದಗಳು.

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ....

ಇನ್ನೂ ಹಲವು ಹತ್ತು ಹಾಡುಗಳಿವೆ ಆ ನಾಟಕದಲ್ಲಿ...
ನರಸಿಂಹ ಸ್ವಾಮಿಯವರ ಎಲ್ಲ ಒಳ್ಳೆಯ ಹಾಡುಗಳನ್ನು ಅಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ..
ಅಲ್ಲಿ ನಮ್ಮನ್ನು ಅಳಿಸುತ್ತಾರೆ..
ನಗಿಸುತ್ತಾರೆ....
ಅದರಲ್ಲಿ ನಾವು ಒಂದಾಗಿ ಹೋಗುತ್ತೇವೆ..
ನಾಟಕದ ಒಂದು ಭಾಗವಾಗಿ ಹೋಗುತ್ತೇವೆ...

"ಎಮ್ಮಮನೆ ಅಂಗಳದೀ ಬೆಳೆದೊಂದ ಹೂವನ್ನು.."
ಹೇಳುವಾಗ ನಮ್ಮ ಮಗಳನ್ನು ಗಂಡನ ಮನೆಗೆ ಕಳಿಸುತ್ತಿದ್ದೆವೇನೋ ಅನಿಸುತ್ತದೆ...

ಈ ನಾಟಕ ನಾವು ನೋಡದಿದ್ದರೆ ನಮಗೇ ನಷ್ಟ....

ಮೆಚ್ಚಿನ ಪ್ರೇಮಕವಿಯ ಹಾಡು ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

PARAANJAPE K.N. said...

ಪ್ರಕಾಶರೇ
ನಾವೇ ರ೦ಗಶ೦ಕರದಲ್ಲಿ ಕೂತು ನಾಟಕ ನೋಡಿದ ಅನುಭವವಾಯ್ತು. ದೃಶ್ಯ ವೈಭವವನ್ನು ಚೆನ್ನಾಗಿ ಪೋಣಿಸಿ, ಅ೦ದದ ಚಿತ್ರಗಳ ಸಹಿತ ಕೊಟ್ಟಿದ್ದೀರಿ. ಬಹಳ ಚೆನ್ನಾಗಿದೆ. ನಾನು ರ೦ಗಶ೦ಕರಕ್ಕೆ ಹೋಗಿಯೇ ಇಲ್ಲ, ಒಮ್ಮೆ ಹೋಗಬೇಕೆನಿಸಿದೆ.

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್....

ಮೈಸೂರು ಮಲ್ಲಿಗೆ ನಾಟಕದ ಬಗೆಗೆ ಎಷ್ಟು ಹೇಳಿದರೂ ಕಡಿಮೆ...
ಅಲ್ಲಿ ಸಮಯ ಹೋದದ್ದೇ ಗೊತ್ತಾಗುವದಿಲ್ಲ...

ಎಲ್ಲ ಕಲಾವಿದರ ಅಭಿನಯವೂ ಅದ್ಭುತ...!!
ಮಾತಿಲ್ಲದೇ ಬಂದು ಹೋಗುವ ..
ಬ್ರಾಹ್ಮಣರ ಪಾತ್ರವಂತೂ ನಗು ಉಕ್ಕಿಸುತ್ತದೆ...!!

ಸಂಗೀತದ ಬಗೆಗೆ ಎರಡು ಮಾತಿಲ್ಲ...

ಎಲ್ಲವೂ ಚೆನ್ನಾಗಿದೆ...
ಒಮ್ಮೆಯಾದರೂ ನೋಡಿ ಬನ್ನಿ...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

umesh desai said...

ಹೆಗಡೆ ಸರ್ ಆ ನಾಟಕ ನೋಡಬೇಕು ಈ ಶನಿವಾರ ಪ್ರಯತ್ನ ಮಾಡುವೆ.ಫೋಟೋ ಸುಪರ್ಬ ಆಗಿವೆ ನೀವು ಏನೇ ಅನ್ರಿ
ನಾಟಕ ನೋಡೋದಿದ್ರೆ ರಂಗಶಂಕರದಲ್ಲಿ ನೋಡಬೇಕು ಕಳೆದ ತಿಂಗಳು "ಗೋಕುಲ ನಿರ್ಗಮನ"ಕ್ಕೆ ಹೋಗಿದ್ದೆ
ಪುಣೆಯಿಂದ ನನ್ನ ಅಣ್ಣ ಬಂದಿದ್ದ ಅವನೂ ನಾಟಕ ಎಂಜಾಯ್ ಮಾಡಿದ....

sunaath said...

ಪ್ರಕಾಶ,
ನಿಮ್ಮ ಚಿತ್ರಗಳನ್ನು ಹಾಗೂ ವರ್ಣನೆಯನ್ನು ಓದಿದಾಗ ನಾಟಕ ನೋಡಿದಷ್ಟೇ ಖುಶಿಯಾಯಿತು. ಇಂತಹ ಮಾಹಿತಿಗಳನ್ನು ಆಗಾಗ
ಕೊಡುತ್ತಿರಿ.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ತುಂಬಾ ಚಂದದ ಬರಹ, ಆ ನಾಟಕ ಮುಂದಿನ ತಿಂಗಳು ಇದ್ದಾರೆ ಹೇಳಿ, ನಾವೂ ನೋಡುತ್ತೇವೆ.
ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು,

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ನಿಮ್ಮ ವಿವರಣೆ ತುಂಬಾ ಚನ್ನಾಗಿತ್ತು.
ನನಗೆ ನಾಟಕ ನೋಡುವ ಆಸೆ ಹುಟ್ಟಿಸಿದ್ದಿರಿ.
ನಾನು ಈ ಭಾನುವಾರ ಬೆಂಗಳೂರಿನಲ್ಲಿ ಇರುವುದು ಸಂಶಯ. ಆದಸ್ಟು ನೋಡಲು ಪ್ರಯತ್ನಿಸುತ್ತೇನೆ.
ವಿಳಾಸ ಮತ್ತು ದೂರವಾಣಿ ಸಂಖೆ ಕೊಟ್ಟಿದ್ದಕ್ಕೆ ಧನ್ಯವಾದಗಳು...

PaLa said...

ಪ್ರಕಾಶ್,
ಮೈಸೂರು ಮಲ್ಲಿಗೆಯ ಕಂಪನ್ನು ಚಿತ್ರಗಳೊಂದಿಗೆ ನಿಮ್ಮ ಬ್ಲಾಗಿನಲ್ಲಿ ಪಸರಿಸಿದ್ದೀರಿ. ಲೈಟಿಂಗಿನ, ಬಣ್ಣದ ಉಪಯೋಗ ಚೆನ್ನಾಗಿಯೇ ಪಡೆದುಕೊಂಡಿದ್ದೀರಿ. ಕೊನೇಯ ಚಿತ್ರದ ಸಂಯೋಜನೆ ತುಂಬಾ ಚೆನ್ನಾಗಿದೆ.

ಆದರೆ ಹೆಚ್ಚಿನ ಚಿತ್ರಗಳಲ್ಲಿ ಶಾರ್ಪ್ನೆಸ್ ಕಡಿಮೆಯಿದ್ದು ಬ್ಲರ್ ಆಗಿದೆ. ಬೆಳಕು ಕಡಿಮೆ ಇದ್ದು ಫ್ಲಾಷ್ ಬಳಸದೇ ಇದ್ದುದರಿಂದ (ಬಳಸದೇ ಇದ್ದದ್ದು ಒಳ್ಳೆಯದಾಯಿತು, ಇನ್ ಬಿಲ್ಟ್ ಫ್ಲಾಷ್ ಚಿತ್ರಗಳು ನೆರಳು ಬೆಳಕಿನಾಟವನ್ನು ಹಾಳು ಮಾಡುತ್ತದೆ) ಲಾಂಗ್ ಎಕ್ಸ್ಪೋಶರ್ ಆಗಿದ್ದು ಇದಕ್ಕೆ ಕಾರಣವಿರಬಹುದು. ಕೊನೇಯ ಚಿತ್ರದ ಉದಾಹರಣೆ ತೆಗೆದುಕೊಂಡರೆ ಅಲ್ಲಿ ಶಟ್ಟರ್ ಸ್ಪೀಡ್ ೧/೨೦ ಸೆಕೆಂಡ್ ಇದೆ. ಸಾಮಾನ್ಯವಾಗಿ ಶಟ್ಟರ್ ಸ್ಪೀಡ್ ೧/೬೦ ಸೆಕೆಂಡ್ಗಿಂತ ಕಡಿಮೆ ಇದ್ದಲ್ಲಿ ಚಿತ್ರದಲ್ಲಿ ಶೇಕ್ ಕಾಣಿಸುವುದು. ಐ.ಎಸ್.ಓ. ಜಾಸ್ತಿ ಮಾಡಿಕೊಂಡು ಶಟ್ಟರ್ ಸ್ಪೀಡ್ ೧/೬೦ ಅಥವಾ ಅದಕ್ಕಿಂತ ಹೆಚ್ಚು ಇರುವಂತೆ ನೋಡಿಕೊಂಡರೆ ಚಿತ್ರದಲ್ಲಿಯ ಶೇಕ್ (ಬ್ಲರ್) ಕಡಿಮೆ ಮಾಡಿಕೊಳ್ಳಬಹುದು.

ರವಿಕಾಂತ ಗೋರೆ said...

Uttama baraha... Matte hale haadugalannu nenapu maadisidiri.. ivattu manege hogi aa haadugalannu omme kelabeku...

ಸಿಮೆಂಟು ಮರಳಿನ ಮಧ್ಯೆ said...

ರೂಪಾಶ್ರೀಯವರೆ....

ರಂಗಶಂಕರದ ಒಳಗೆ ಕ್ಯಾಮರಾ ತೆಗೆದು ಕೊಂಡು ಹೋಗುವ ಹಾಗಿಲ್ಲ...
ಡಾ. ಬಿ.ವಿ.ರಾಜಾರಾಮರ ಅನುಮತಿ ಪಡೆದು ತೆಗೆದು ಕೊಂಡು ಹೋದದ್ದು...

ಅಲ್ಲಿ ನಾಟಕ ನೋಡುವ ಸಂದರ್ಭ ಟೆಕ್ನಿಕಲ್ ವಿಷಯಗಳ ಬಗೆಗೆ ಹೆಚ್ಚು ಗಮನ ಹರಿಸಲಾಗಲಿಲ್ಲ...
"ಆಟೋ" ಮೋಡ್ ಇಟ್ಟುಕೊಂಡು ಫೋಟೊ ತೆಗೆದೆ....
ರೆಸಲ್ಯೂಷನ್ ಕಡಿಮೆ ಇದ್ದಿದ್ದರೆ ಅಷ್ಟಾಗಿ ಶಾರ್ಪ್ನೆಸ್ಸ್ ಕಡಿಮೆ ಇರುತ್ತಿತಲಿಲ್ಲವೇನೋ...

ಆದರೆ ನಾಟಕದ ರಸಾನುಭವಕ್ಕೆ ..
ಅಲ್ಲಿನ ಭಾವಾಪೂರ್ಣ ಸನ್ನಿವೇಷಗಳನ್ನು
ಆಸ್ವಾದಿಸಲು ಈ ಫೋಟೊಗಳು ಸಾಕು ಅನಿಸುತ್ತದೆ...

ಹಾಡುಗಳು..
ಕಚಗುಳಿ ಇಡುವ ಮಾತುಗಳು...
ಸಮಯ ಸರಿದದ್ದೇ ಗೊತ್ತಾಗುವದಿಲ್ಲ...

ಅಲ್ಲಿನ ಕತ್ತಲು, ಬೆಳಕಿನ ಸಂಯೋಜನೆ..
ವೇಷ, ಭೂಷಣ..
ಎಲ್ಲವೂ ಸುಂದರ...

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ರಮ್ಯಾ....

ನಾಟಕದಲ್ಲಿ ಪ್ರತಿಯೊಂದು ಸನ್ನಿವೇಷ.., ಮಾತುಗಳು .
ನೋಡುಗರ ಮನ ಸೆಳೆಯುತ್ತವೆ...
ಹಿಡಿದಿಡುವಲ್ಲಿ ಯಶಸ್ಸಾಗಿವೆ...

ಇಲ್ಲಿ ಸಂಗೀತ ಕಲಾವಿದರ ಬಗೆಗೆ ಹೇಳದಿದ್ದರೆ ಅಪೂರ್ಣವಾಗಿಬಿಡುತ್ತದೆ..
ಸುಂದರವಾಗಿ, ಮಧುರ ಕಂಠದಿಂದ ..
ನಮ್ಮನ್ನು ಭಾವಲೋಕಕ್ಕೆ ಕರೆದೊಯ್ಯುತ್ತಾರೆ...

"ಹತ್ತು ವರುಷದ ಹಿಂದೆ...
ಮುತ್ತೂರ ತೇರಿನಲಿ..."
ಹಾಡುವಾಗ ನಾವೂ ಕುಣಿದುಬಿಡಬೇಕು ಅನಿಸುತ್ತದೆ...

ನಾಟಕ ಮುಗಿದ ಮೇಲೂ..
"ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ..."
ಹಾಡು ನಮ್ಮ ಹ್ರದಯಕ್ಕಿಳಿದು ಬಿಡುತ್ತದೆ....

ಈಗಲೂ ಗುನುಗುತ್ತಿರುವೆ....

ಫೋಟೊ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

ಕ್ಷಣ... ಚಿಂತನೆ... Think a while said...

ಪ್ರಕಾಶ್ ಸರ್‍, ನಾಟಕವನ್ನು ನಾವೇ ರಂಗಶಂಕರದಲ್ಲಿ ಕುಳಿತು ನೋಡಿದಂತೆ ಬರೆದಿದ್ದೀರಿ. ಹಾಡುಗಳನ್ನು ಸಹ ನೆನಪಿನಲ್ಲಿ ಇರುವುದು. ಅಂತಹ ಒಂದು ನಿರೂಪಣೆ ನಿಮ್ಮಿಂದ ಬಂದಿದೆ. ಜೊತೆಗೆ ಫೋಟೋಗಳೂ ಸಹ ಅದ್ಭುತವಾಗಿವೆ. ಇಂತಹ ಒಂದು ಬರಹ ಕೊಟ್ಟಿದ್ದಕ್ಕೆ ಧನ್ಯವಾದಗಳು.

ಸಸ್ನೇಹಗಳೊಂದಿಗೆ,

ಚಂದ್ರಶೇಖರ ಬಿ.ಎಚ್.

ಮನಸು said...

nanage nanna snehita ee nataka nodalu helidda haage naavu snehitarellarannu karedukondu hoguvudagi heliddane kooda.. 21st tappade hogutteve...

nimma nirupane natagada prati hejjeyannu tiliside bahala dhanyavadagaLu

shivu said...
This comment has been removed by the author.
shivu said...

ಪ್ರಕಾಶ್ ಸರ್,

ಸೂಪರ್...! ನಾಟಕವನ್ನು ನೋಡಿದಷ್ಟೇ ಖುಷಿಯಾಯಿತು....ಸೊಗಸಾದ ಫೋಟೋಗಳು, ಅದಕ್ಕೆ ತಕ್ಕಂತೆ ವಿವರಣೆ...ಪಾತ್ರಧಾರಿಗಳ ಪರಿಚಯ...ಎಲ್ಲವೂ ಕೆ.ಎಸ್.ನ. ಪ್ರೇಮಕವಿತೆಗಳಂತೆ....

ನಾನು ಈಗಲೇ ಫೋನ್ ಮಾಡಿ ೩-೩೦ ರ ಆಟಕ್ಕೆ ಎರಡು ಟಿಕೆಟ್ ಬುಕ್ ಮಾಡಿಕೊಳ್ಳುತ್ತೇನೆ....

ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನಿಮ್ಮಣ್ಣ ಹೇಳಿದಂತೆ ಈ ನಾಟಕ ನೋಡದಿದ್ದರೆ ಜೀವನದಲ್ಲಿ ಏನಾದರೂ ಕಳೆದುಕೊಂಡಂತೆ. ನನ್ನ ಭಾನುವಾರದ ಕಾರ್ಯಕ್ರಮ??? ನೀವೇ ಹೇಳಿ ಏನು ಮಾಡುವುದು? ಮನೆಯವರೆಲ್ಲ ಸೇರಿ ನಾಟಕಕ್ಕೆ ಹೋಗೋಣವಾ?
ಅಕ್ಕಿ ಮೇಲೂ ಆಸೆ ನೆಂಟರಮೇಲೂ ಪ್ರೀತಿ!!

ಬಾಲು said...

ನಾನು ರಂಗ ಶಂಕರದ ಕಾಯಂ ಗಿರಾಕಿ. ಅಲ್ಲಿನ ನಾಟಕ, ಒಳಗಿನ ರಂಗ ಭೂಮಿ, ಬೆಳಕಿನ ವ್ಯವಸ್ಥೆ ಹಾಗು ಯಾವಾಗಲು ನಡೆಯುವ ಸದಭಿರುಚಿಯ ಪ್ರಯೋಗ ಗಳು ನನಗೆ ಇಷ್ಟ. ಅಷ್ಟೇ ಅಲ್ಲ ಅಲ್ಲಿ ಸಿಗೋ ಕಾಸ್ಟ್ಲಿ ಕಾಫಿ, ಸ್ಯಾಂಡ್ ವಿಚ್ ಅಭಿಮಾನಿ ಕೂಡ ಹೌದು.

ಒಳ್ಳೆಯ ನಾಟಕದ ಪರಿಚಯಿಸಿದ್ದಕ್ಕೆ ನಿಮಗೆ ತುಂಬ ಧನ್ಯವಾದಗಳು.

Guru's world said...

ಪ್ರಕಾಶ್
ನಿಮ್ಮ ಬ್ಲಾಗಿನಿಂದ ಮತ್ತೊಮ್ಮೆ ಮೈಸೂರು ಮಲ್ಲಿಗೆ ನೋಡಿದ ಹಾಗೆ ಆಯಿತು.... ತುಂಬ ಒಳ್ಳೆಯ ನಿರೂಪಣೆ,, ಹಾಗೆ ಫೋಟೋ ಕೂಡ......ನಾಟಕ ದಲ್ಲಿ ನೋಡೋ ಅನುಭವನೆ ಬೇರೆ ಅಲ್ವ.....

ಗುರು

Geetha said...

ತುಂಬಾ ಚೆನ್ನಾಗಿವೆ ಸರ್ ಫೋಟೋಗಳು ಮತ್ತು ನಿಮ್ಮ ವಿವರಣೆ. ನಾಟದ ನೋಡಬೇಕೆನಿಸುತ್ತಿದೆ..

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ...

ಯವಾಗಲಾದರೂ ಏಕೆ...?
ಭಾನುವಾರವೇ ಬನ್ನಿ..

ನಮ್ಮ ಬ್ಲಾಗ್ ಸ್ನೇಹಿತರೆಲ್ಲ...
ಒಟ್ಟು ಇದುವರೆಗೆ ಹದಿನೈದು ಜನ ..
ಮಧ್ಯಾಹ್ನ ೩.೩೦ ರ ಷೋಕ್ಕೆ ಟಿಕೆಟ್ ಬುಕ್ ಮಾಡಿಸಿದ್ದೇವೆ....

ಬನ್ನಿ ಸಂತೋಷಿಸೋಣ....

ಮೆಚ್ಚಿನ ಪ್ರೇಮಕವಿಯ ಹಾಡುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

ಬಿಸಿಲ ಹನಿ said...

ಪ್ರಕಾಶ್‍ವರೆ,
ಮೈಸೂರು ಮಲ್ಲಿಗೆಯ ನಾಟಕದ ಬಗೆಗಿನ ನಿಮ್ಮ ಚಿತ್ರ ಲೇಖನ ಚನ್ನಾಗಿ ಮೂಡಿ ಬಂದಿದೆ. ನಾನು ಬೆಂಗಳೂರಿನಲ್ಲಿರುವಾಗ ಆಗಷ್ಟೆ ಈ ನಾಟಕ ತಯಾರಾಗಿ ಪ್ರಯೋಗ ಕಂಡಿತ್ತು. ಆದರೆ ನೋಡಲಾಗಿರಲಿಲ್ಲ. ಈ ಸಾರಿ ಜುಲೈನಲ್ಲಿ ಬೆಂಗಳೂರಿಗೆ ಬಂದಾಗ ಈ ನಾಟಕವನ್ನು ನೋಡುವೆ.

Sumana said...

ನಿಮ್ಮ ಪೋಸ್ಟ್ ನೋಡಿ ತುಂಬಾ ಖುಷಿ ಆಯ್ತು!! ನಾನು ಈ ನಾಟಕಾನ ಸಾಗರದ ಹತ್ತಿರದ ಹೆಗ್ಗೋಡಿನಲ್ಲಿ ಹೋದ ತಿಂಗಳು ನೋಡಿದ್ದೆ...ಆದರೆ ಅದು ಅವರ ಬೆಸ್ಟ್ ಶೋ ಆಗಿರಲಿಲ್ಲವಂತೆ..KSNರವರ ಕಟ್ಟಾ ಅಭಿಮಾನಿಯಾದ ನನಗಂತೂ ಅವರನ್ನೇ ನೋಡಿದಂತಾಯ್ತು!! ನೀವು ಫೋಟೋ ಸಹಿತ ವಿವರಣೆ ನೀಡಿರುವುದು ಬಹಳ ಚೆನ್ನಾಗಿ ಬಂದಿದೆ!!

ನನ್ನವರು ಭಾನುವಾರ ಹೋಗೋಣ ಅಂತಿದಾರೆ..ಅವರಿಗೆ ನಿಮ್ಮನ್ನೂ ನೋಡಬೇಕಂತೆ!!!!! NAME PLATE ಹಾಕಿಕೊಂಡು ಬರಕ್ಕೆ ಮರಿಯಾಬೇಡಿ..ನಿಮ್ಮನ್ನು ಗುರುತು ಹಿಡಿಯಬೇಕಲ್ಲ.

VERY NICE POST!! KEEP WRITING!!

ಸಿಮೆಂಟು ಮರಳಿನ ಮಧ್ಯೆ said...

ದೇಸಾಯಿಯವರೆ ...

ಈ ನಾಟಕದ ಪ್ರತಿ ದ್ರಶ್ಯದಲ್ಲಿ ನಿರ್ದೇಶಕರ ಕೆಲಸ ಕಾಣುತ್ತದೆ...
ನರಸಿಂಹ ಸ್ವಾಮಿಯವರ ಹಾಡುಗಳನ್ನು ಇಟ್ಟುಕೊಂಡು..
ಇಂಥಹ ಸುಂದರ ದ್ರಷ್ಯ-ಕಾವ್ಯ ಬರೆದ ರಚನೆ ಕಾರರು...

ಡಾ. ಬಿ.ವಿ.ರಾಜಾರಾಮ್
ಮತ್ತು
ರಾಜೇಂದ್ರ ಕಾರಂತ್ ಇಬ್ಬರೂ ಸ್ತುತ್ಯಾರ್ಹರು ....

ಬನ್ನಿ ಮಧ್ಯಾಹ್ನ ೩.೩೦ಕ್ಕೆ...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್....

ನಮ್ಮ ಮೆಚ್ಚಿನ ವರಕವಿ
ದ.ರಾ. ಬೇಂದ್ರೆಯವರ ಬಗೆಗೆ ಇಂಥಹ...
ನಾಟಕದ......
ಪ್ರಯತ್ನ ನನ್ನ ಆತ್ಮೀಯ ಸ್ನೇಹಿತರು ಮಾಡುತ್ತಿದ್ದಾರೆ...
ಅದು ಇದಕ್ಕಿಂತ ಭಿನ್ನವಾಗಿ ಬರೆಯುತ್ತಿದ್ದಾರೆ....

ಸಧ್ಯದಲ್ಲಿಯೇ ನಮಗೆ ಆ ಅವಕಾಶವೂ ಸಿಗಬಹುದು...

ಚಿತ್ರ ಲೇಖನ ಮೆಚ್ಚುಗೆ ಆಗಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಡಾ. ಗುರುಮೂರ್ತಿಯವರೆ....

ಭಾರತಕ್ಕೆ ಸ್ವಾಗತ...

ಪ್ರತಿ ತಿಂಗಳೂ ಈ ನಾಟಕದ ಷೋ ಇದ್ದಿರುತ್ತದೆ...
ನೀವು ಬಂದಾಗ ನನ್ನನ್ನು ಸಂಪರ್ಕಿಸಿ..
ಅಥವಾ...
ರಾಜಾರಾಮರನ್ನು ಸಂಪರ್ಕಿಸಿ....

ಖಂಡಿತ ಒಮ್ಮೆಯಾದರೂ ನೋಡಿ...

ಫೋಟೊ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವಪ್ರಕಾಶ್....

ಕೊನೆಯ ಹಂತದ ದ್ರಷ್ಯಗಳಂತೂ ಸೂಪರ್ ಆಗಿವೆ...
ಇಳಿವಯಸ್ಸಿನ ದ್ಂಪತಿಗಳ ಸಂಭಾಷಣೆ...
ಅಭಿನಯ... ಮನಕಲಕುತ್ತವೆ...

ಪ್ರೇಮಕವನ ಬರೆದ ಕವಿಯ ದಾಂಪತ್ಯದ ಸೊಗಸು...
ಡಾ. ರಾಜಾರಾಮರ ಅಭಿನಯದಲ್ಲಿ ನೋಡಿದರೇ ಸೊಗಸು...

ಒಮ್ಮೆಯಾದರೂ ನೋಡಿ...
ಮಿಸ್ ಮಾಡಿಕೊಳ್ಳ ಬೇಡಿ...
೩.೩೦ರ ಷೋ.... ಮರೆಯ ಬೇಡಿ...
ಎಲ್ಲರೂ ಸೇರೋಣ...

ಸಿಮೆಂಟು ಮರಳಿನ ಮಧ್ಯೆ said...

ಪಾಲಚಂದ್ರ...

ಇಲ್ಲಿ ತಾಂತ್ರಿಕ ಅಂಶಗಳಿಗಿಂತ...
ನಾಟಕದ ಸೊಗಸಿಗೆ ಮಹತ್ವ ಕೊಟ್ಟಿರುವೆ....

ಫೋಟೋಗಳು ನೋಡಲಿಕ್ಕೆ ಸೊಗಸಾಗಿದೆಯಲ್ಲವೇ...?

ನೀವು ಈ ನಾಟಕ ನೋಡಿದ್ದೀರಾ..?

ಬನ್ನಿ ಅಂದು ಸೇರೋಣ.......
೩.೩೦ರ ಷೋಕ್ಕೆ...
ಒಟ್ಟು ಹದಿನೈದಕ್ಕೂ ಹೆಚ್ಚಿನ
ಬ್ಲಾಗ್ ಸ್ನೇಹಿತ ಕುಟುಂಬದವರೊಂದಿಗೆ....

ಫೋಟೊ ತೆಗೆಯುವ ತಾಂತ್ರಿಕ ಮಾಹಿತಿಗಾಗಿ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ರವಿಕಾಂತರೆ...

ನಾನೂ ಕೂಡ ಹಾಡುಗಳನ್ನು ಕೇಳುತ್ತ ಈ ಲೇಖನ ಬರೆದಿರುವೆ...

ಇನ್ನೂ ಅತ್ಯುತ್ತಮ ಹಾಡುಗಳಿಗೆ....
ಫೋಟೊಗಳಿದ್ದರೂ........
ತುಂಬ ಉದ್ದವಾಗಿಬಿಡುತ್ತದೆ ಎಂದು ಡಿಲೀಟ್ ಮಾಡಿದೆ....

ಆ ಹಾಡುಗಳ ಸೊಗಸು..
ಕೇಳುವ ಆನಂದವೇ ಬೇರೆ ಅಲ್ಲವೆ..?

ಸಿಮೆಂಟು ಮರಳಿನ ಮಧ್ಯೆ said...

ಕ್ಷಣ ಚಿಂತನೆ....

ಒಳ್ಳೆಯ ನಾಟಕವನ್ನು ಪ್ರೇಕ್ಷಕರು ನೋಡುತ್ತಾರೆ ಅನ್ನುವದಕ್ಕೆ ಇದೇ ನಾಟಕ ಸಾಕ್ಷಿಯಾಗಿದೆ..
ಇದರ ಜನಪ್ರೀಯತೆ ಬಹಳ....
ನಾನು ಇದುವರೆಗೆ ಎರಡು ಬಾರಿ ಹೋಗಿದ್ದೆ....
ಎರಡೂ ಬಾರಿಯೂ ಹೌಸಫುಲ್...!

ಎರಡೂ ಬಾರಿ...
ನಟ, ನಟಿಯರು..
ಕೆಲವು ಸನ್ನಿವೇಷ..ಬದಲಾಗಿತ್ತು...
ಬೋರ್ ಬರಲಿಲ್ಲ....

ಫೋಟೊ ಲೇಖನ ಮೆಚ್ಚಿದ್ದಕ್ಕೆ ವಂದನೆಗಳು...

ಉಮೇಶ ಬಾಳಿಕಾಯಿ said...

ಪ್ರಕಾಶ್ ಸರ್,

ಚಿತ್ರ-ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ನೀವೂ ಸಹ ಯಾವುದೇ ವೃತ್ತಿಪರ ಛಾಯಾಗ್ರಾಹಕರಿಗಿಂತ ಕಡಿಮೆ ಏನಿಲ್ಲ.. ರಂಗ ಪ್ರಯೋಗದ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದೀರಿ.

ನಾನು ತುಂಬಾ ದಿನಗಳಿಂದ ಎದುರು ನೋಡುತ್ತಿದ್ದೆ ಈ ತರದ ರಂಗ ಪ್ರಯೋಗವನ್ನು ವೀಕ್ಷಿಸಲಿಕ್ಕೆ.. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ನನ್ನ ಪರಿಸ್ತಿತಿ.. ನನ್ನ ದುರಾದೃಷ್ಟ ಅನ್ಸುತ್ತೆ... ಈ ವಾರಾಂತ್ಯ ಊರಿಗೆ ಹೋಗುವ ಕಾರ್ಯಕ್ರಮವಿದೆ.. ಬೆಂಗಳೂರಲ್ಲೇ ಇದ್ದಿದ್ದರೆ ಖಂಡಿತ ಮಿಸ್ ಮಾಡ್ಕೋ ತಿರ್ಲಿಲ್ಲ..

ಕೆ ಎಸ್ ಎನ್ ರ ಪ್ರೇಮಗವನಗಳ ನೆನಪು ತರಿಸುವ ಚಂದದ ಬರಹಕ್ಕೆ ವಂದನೆಗಳು.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಪ್ರಕಾಶಣ್ಣ, ಊರು/ಬೆಂಗಳೂರನ್ನು ಬಿಟ್ಟು ಇಲ್ಲಿ ಬಂದಮೇಲೆ ನಾವಿಬ್ಬರು ‘ಮಿಸ್’ ಮಾಡಿಕೊಳ್ಳುವ ಕುಟುಂಬ, ಗೆಳೆಯರ ಬಳಗ, ಸುಗಮ ಬಸ್ .. ಇತ್ಯಾದಿಗಳ ಲಿಸ್ಟ್ ಜತೆ ಸೇರೋದು ಈ ರಂಗಶಂಕರವೂ ಹೌದು..! ನಾವು ಸಾಕಷ್ಟು ನಾಟಕ/ರಂಗ ಪ್ರಯೋಗಗಳನ್ನು ಅಲ್ಲಿ ನೋಡಿದ್ದೇವೆ. ‘ಒಡಕಲು ಬಿಂಬ’ ಅಂಥ ಅದ್ಭುತ ರಂಗ ಪ್ರಯೋಗಗಳಲ್ಲಿ ಒಂದು.
ಚೆಂದದ ಚಿತ್ರಗಳು ಹಾಗೂ ಬರಹಕ್ಕಾಗಿ ನಿಮಗೆ ಥ್ಯಾಂಕ್ಸ್!

ಸಿಮೆಂಟು ಮರಳಿನ ಮಧ್ಯೆ said...

ಮನಸು.....

ತುಂಬಾ ಖುಷಿಯಾಯಿತು...

ಕುವೈತಿನಿಂದ ಬೆಂಗಳೂರಿಗೆ ಬಂದಿದ್ದೀರಲ್ಲವೆ..?
ಹೇಗಿದೆ ರಜಾ ದಿನಗಳು..?
ತಪ್ಪದೇ ನೋಡಿ ಈ ನಾಟಕವನ್ನು...
ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ...
ನಾವೂ ನಮ್ಮ ಬ್ಲಾಗ್ ಸ್ನೇಹಿತರೂ ಬರುತ್ತಿದ್ದೇವೆ...
೩.೩೦ರ ಷೋ ಕ್ಕೆ...

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್....

ಖಂಡಿತ ಎಲ್ಲರೂ ಹೋಗೋಣ...
ನಾಟಕದ ಕಥಾವಸ್ತುವೇ ಚೆನ್ನಾಗಿದೆ...

ಬಳೆಗಾರ ಚನ್ನಯ್ಯ...
ಅಂದು, ಇಂದಿನ ಕಾಲದ ಹೋಲಿಕೆಯನ್ನು ತನ್ನ
ಮುಗ್ಧ ಮಾತುಗಳಿಂದ..
ನಮ್ಮನ್ನು ನಗಿಸಿ..
ಚುಚ್ಚುತ್ತಾನೆ...ಎಚ್ಚರಿಸುತ್ತಾನೆ...

ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್...

ನಿಮ್ಮನೆಗೆ ಬರುವ ಕಾರ್ಯಕ್ರಮ ಬದಲಾಯಿಸೋಣ...
ನೀವೇ ಬನ್ನಿ "ನಮ್ಮನೆಗೆ"
ಮುಂದಿನವಾರ ನಿಮ್ಮನೆಗೆ ಬರೋಣವಂತೆ..
ಈ ವಾರ ಎಲ್ಲರೂ ಸೇರಿ ಮೈಸೂರು ಮಲ್ಲಿಗೆ ನೋಡೋಣ...

ಹೇಗಿದ್ದರೂ ನೋಡಲಿಕ್ಕೆ ಬರ್ತಾ ಇದ್ದಿರಲ್ಲ...
ಬನ್ನಿ...
ಕ್ಯಾಮರಾನೂ ತನ್ನಿ...

ಸಿಮೆಂಟು ಮರಳಿನ ಮಧ್ಯೆ said...

ಬಾಲು ಸರ್...

ಅಲ್ಲಿಯ ಕಾಫೀ, ಟೀ ಚೆನಾಗಿರುತ್ತದಂತೆ...
ತಿಂಡಿ ಚೆನ್ನಾಗಿತ್ತು...

ನನಗೆ ಇಷ್ಟವಾಗಿದ್ದು ಅಲ್ಲಿನ
ಲೈಬ್ರರಿ...
ಒಳ್ಳೊಳ್ಳೆ ಆಯ್ದ ಪುಸ್ತಕಗಳು..
ಸಿನೇಮಾ ಸೀಡಿಗಳು...
ಕಟ್ಟಡದ ವಿನ್ಯಾಸ....

ಎಲ್ಲವೂ ಚೆನ್ನಾಗಿವೆ...

ಚಿತ್ರ ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

jayalaxmi said...

ನಾಟಕದ ಕುರಿತು ಬರೆದದ್ದು ಕಂಡು ಖುಷಿ ಆಯ್ತು. ನಿಜವಾಗ್ಲು ಒಳ್ಳೆಯ ನಾಟಕ.ರಾಜೇಂದ್ರ ಕಾರಂತ ಒಳ್ಳೆಯ ನಾಟಕಕಾರ. ಅವರಿಗೆ ಭಾಷೆಯ ಮೇಲೆ ಹಿಡಿತವಿದೆ.

ವಿನುತ said...

ಮೈಸೂರು ಮಲ್ಲಿಗೆಯ ಕ೦ಪನ್ನು ಚಿತ್ರ ಹಾಗೂ ಬರಹದ ಮೂಲಕ ಮತ್ತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದಗಳು.

ಬಿಸಿಲ ಹನಿ said...

ಪ್ರಕಾಶ್ ಅವರೆ,
ನೀವು ಕೊಟ್ಟಿರುವ ಲಿಂಕನ್ನು ಓದಿದೆ. ಜೀವನದಲ್ಲಿ ಅಪ್ಪನ ಪಾತ್ರ ಬಹಳ ಮುಖ್ಯವಾದುದು. ನೀವು ಚಿಕ್ಕ ವಯಸ್ಸಿನಲ್ಲಿ ಅಪ್ಪನನ್ನು ಕಳೆದುಕೊಂಡು ಚಿಕ್ಕಪ್ಪ, ಅಕ್ಕಂದಿರ ಗರಡಿಯಲ್ಲಿ ಬೆಳೆದಿರಿ. ನಾನು ಅಪ್ಪ ಬೇಜವಾಬ್ದಾರಿಯಾಗಿದ್ದರಿಂದ ಚಿಕ್ಕಂದಿನಿಂದಲೆ ಅವನಿಂದ ದೂರವಾಗಿ ದೊಡ್ದಪ್ಪ, ಅಕ್ಕಂದಿರ ಗರಡಿಯಲ್ಲಿ ಬೆಳೆದೆ. ಇಬ್ಬರಲ್ಲೂ ಒಂದೇ ಸಾಮ್ಯತೆಯಿದೆ. ಆ ಕಾರಣಕ್ಕೆನೇ ನಾವು ಇಷ್ಟೊಂದು ಗಟ್ಟಿಯಾಗಿ ಬೆಳೆದೆವಾ? ಗೊತ್ತಿಲ್ಲ! ಚಂದ್ರಕಾಂತವರು ಹೇಳುವಂತೆ ನಮ್ಮನ್ನು ನೋವುಗಳು ರೂಪಿಸಿದಷ್ಟು ನಲಿವುಗಳು ರೂಪಿಸುವದಿಲ್ಲ. ಎಷ್ಟೊಂದು ಸತ್ಯದ ಮಾತು! ಈ ಲಿಂಕನ್ನು ಇಲ್ಲಿ ಕೊಟ್ಟು ಒಳ್ಳೆಯದು ಮಾಡಿದಿರಿ. ಬಹುಶಃ ನಾವಿಬ್ಬರು ಸಮಾನ ದುಃಖಿಗಳಾಗಿದ್ದರಿಂದ ಇನ್ನಷ್ಟು ಹತ್ತಿರವಾದೆವನಿಸುತ್ತಿದೆ.

ಸಿಮೆಂಟು ಮರಳಿನ ಮಧ್ಯೆ said...

ಉದಯ್.....

ನನಗೆ ಬಂದ ಆತ್ಮೀಯ ಪ್ರತಿಕ್ರಿಯೆಗಳಲ್ಲಿ ಇದೂ ಒಂದು....
ಚಂದ್ರಕಾಂತರವರ ಪ್ರತಿಕ್ರಿಯೆಗಳೇ ಹಾಗೆ...
ಅನುಭವದ ಮಾತುಗಳು...
ಕೆಲವೊಮ್ಮೆ ನಾನು ಬರೆದ ಲೇಖನಗಳಿಗಿಂತ ಅವರ ಪ್ರತಿಕ್ರಿಯೆ ತುಂಬಾ ಚೆನ್ನಾಗಿರುತ್ತದೆ...

ನನಗೇನೋ ಕಾಣದ ಅಪ್ಪನನ್ನು ನೆನಪಿಸಿಕೊಂಡು ಮಿಸ್ ಮಾಡಿಕೊಳ್ಳುತ್ತಿರುವೆ..
ಜೀವನದಲ್ಲಿ ಏನೂ ಅರಿಯದ...
ಓದೂ ಅರಿಯದ ನಮ್ಮಮ್ಮ...
ಬದುಕಿನ ಆಸರೆ...
ಭರವಸೆ...ಆಗಿದ್ದ...
ನಮ್ಮಪ್ಪನ ಅಗಲಿಕೆ ಹೇಗೆ ಸಹಿಸಿಕೊಂಡಿರ ಬಹುದು...
ಸಣ್ಣ ಮಕ್ಕಳಾದ ನಮ್ಮನ್ನು ಬೆಳೆಸಿದಳು...?
ಆ ನೋವನ್ನು ಹೇಗೆ ಸಹಿಸಿಕೊಂಡಿರಬಹುದು...?

ಕೆರೆನೋ, ಬಾವಿನೋ ನೋಡಿಕೊಂಡಿದ್ದರೆ...??

ಬದುಕಿನ.., ಆಸೆಗಳು .., ಭರವಸೆಗಳು...
ನಾವೇ .. ನಮ್ಮಲ್ಲಿ ಹುಟ್ಟಿಸಿಕೊಳ್ಳಬೇಕು...

ತುಂಬಾ... ಧನ್ಯವಾದಗಳು...

kanasumanasu said...

Prakashanna..
Tumba chennagi vivarane maadidira adake takante fotos saha haakidira....ee kaladaali nataka nodo janaru kadime aagtha idare...nimma lekana nodi rangashankara ke jana barutare...

ವಿನಾಯಕ ಕೆ.ಎಸ್ said...

ಪ್ರಕಾಶಣ್ಣ,
ನಿನ್ನೆ ಮಾತಿಗೆ ಕುಳಿತಾಗ ಮಿತ್ರ ರಾಜೇಂದ್ರ ಕಾರಂತರು ಈ ಬ್ಲಾಗಿನಲ್ಲಿ ನಾಟಕದ ಫೋಟೊಗಳಿವೆ ಅಂತಾ ಹೇಳಿ ಅಡ್ರೆಸ್‌ ಕೊಟ್ಟರು. ಅದು ನೋಡಿದರೆ ನಿಮ್ಮ ಬ್ಲಾಗ್‌...ಇಲ್ಲಿಂದ ಒಂದೆರಡು ಪೋಟೊ ಎತ್ತಾಕಿಕೊಳ್ಳಲು ನಿರ್ಧಸಿದ್ದೇನೆ! ಚೆಂದದ ನಾಟಕ. ಚೆಂದದ ಬರಹ. ನಾನು ಈ ವಾರ ಅದರ ಕುರಿತಾಗಿಯೇ ಬರೆಯಬೇಕು ಅಂದುಕೊಂಡಿರುವೆ...ಫೋಟೊ ತೆಗೆದುಕೊಳ್ಳಬಹುದಾ?
ವಿನಾಯಕ ಕೋಡ್ಸರ

ಸಿಮೆಂಟು ಮರಳಿನ ಮಧ್ಯೆ said...

ವಿನಾಯಕ.....

ಖಂಡಿತ ಮಾರಾಯಾ.....
ತೆಗೆದುಕೋ.....

ನನ್ನ ಬಳಿ ಇನ್ನಷ್ಟು ಫೋಟೊಗಳಿವೆ....

ಫೋಟೊ, ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಬರ್ತಾ ಇರು ಮಾರಾಯಾ.......

ನನ್ನ email....
kash531@gmail.com

saMparkisu....

ಶ್ರೀನಿಧಿ.ಡಿ.ಎಸ್ said...

ನಾನು ಹದಿನೇಳು ಬಾರಿ ಈ ನಾಟಕ ನೋಡಿ, ಸದ್ಯಕ್ಕೆ ಮತ್ತೆ ಮತ್ತೆ ಈ ನಾಟಕಕ್ಕೆ ಹೋಗಬಾರದು ಅಂತ ತೀರ್ಮಾನಿಸಿದ್ದೇನೆ.:)

ಫೋಟೋಸ್ ಚೆನ್ನಾಗಿದೆ.

ಸಿಮೆಂಟು ಮರಳಿನ ಮಧ್ಯೆ said...

ಗುರು....

ನಾಟಕ ತುಂಬಾ ಚೆನ್ನಾಗಿದೆ...
ಒಮ್ಮೆ ನೋಡಿ ತಿಳಿಸಿ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಗೀತಾರವರೆ....

ದಯವಿಟ್ಟು ನೋಡಿ ...
ಮಿಸ್ ಮಾಡಿಕೊಳ್ಳ ಬೇಡಿ....
ನೋಡಿ ಅನುಭವ ತಿಳಿಸಿ....
ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಉದಯ್..( ಬಿಸಿಲ ಹನಿ)

ನೀವು ಬಂದಾಗ ತಿಳಿಸಿ...
ನಾಟಕ ಎಲ್ಲಿದೆಯೆಂದು ತಿಳಿಸುವೆ...

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು

ಸಿಮೆಂಟು ಮರಳಿನ ಮಧ್ಯೆ said...

ಸುಮನಾರವರೆ....

ನನ್ನ ಗುರುತು ಹಿಡಿಯುವದು ಕಷ್ಟವಾಗಲಿಲ್ಲ ಅಲ್ಲವಾ....?
ಆರಡಿ ಉದ್ದ
ಆರಡಿ ಅಗಲ...
ಈ ವಿವರಣೆ ತುಂಬ ಸುಲಭವಾಯಿತಲ್ಲವೇ...?

ನಾಟಕ ಎಂಜಾಯ್ ಮಾಡಿದ್ದಕ್ಕೆ ಧನ್ಯವಾದಗಳು...

ಪ್ರೀತಿ, ಪ್ರೋತ್ಸಾಹಕ್ಕೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್....

ನಿಜಕ್ಕೂ ಈ ನಾಟಕ ಒಂದು ಸುಂದರ ಅನುಭವ...
ನಾನು ಮೂರು ಬಾರಿ ನೋಡಿರುವೆ....

ಪ್ರತಿಯೊಬ್ಬ ಕಲಾವಿದರು, ಸಂಗೀತ, ನಿರ್ದೇಶನ
ಎಲ್ಲವೂ ಚನ್ನ...
ಹಾಡುಗಳು ನಮ್ಮ ಪ್ರೇಮ ಕವಿ ಕೆ.ಎಸ್. ನ ರವರು....

ಮಿಸ್ ಮಾಡಿಕೊಂಡರೆ ನಿಮಗೆ ಲಾಸ್....

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಪೂರ್ಣಿಮಾ....

ನಾನು ನಾಟಕ ನೋಡುವದು ಕಡಿಮೆ....
ದಿವಾಕರ ಹೆಗಡೆಯವರ ಯುದ್ಧಭಾರತ ನೋಡಿದ ಮೇಲೆ ಇದೇ ನಾಟಕ...

ಈ ನಾಟಕದಲ್ಲಿ
ಈಗಿನ ಮತ್ತು ಹಿಂದಿನ ಸಂಸ್ಕ್ರ್‍ಅತಿಗಳ ತಿಕ್ಕಾಟವಿದೆ...
ನಾವು ಎಲ್ಲಿ ಜಾರುತ್ತಿದ್ದೇವೆ ಎನ್ನುವ ಸಂದೇಶವಿದೆ....
ಇನ್ನೂ ಬೇಕಾದಷ್ಟು....

ಒಮ್ಮೆ ನೋಡಿ ಭಾರತಕ್ಕೆ ಬಂದಾಗ....

ಪ್ರತಿಕ್ರಿಯೆಗೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಜಯಲಕ್ಷ್ಮೀಯವರೆ....

ನಿಜ ರಾಜೇಂದ್ರ ಕಾರಂತರು ಒಳ್ಳೆಯ ನಾಟಕಕಾರ....
ನಟನೆಕೂಡ ಅದ್ಭುತ....
ಸಣ್ಣ ಸಣ್ಣ ಅಭಿವ್ಯಕ್ತಿಯಲ್ಲೂ ಅವರು ಮಿಂಚುತ್ತಾರೆ....

ಸಂಗಡ ಡಾ. ರಾಜಾರಾಮರು...

ನಮ್ಮ ಕಣ್ಣ ಮುಂದೆ ಪ್ರೇಮಕವಿಯ ಕೊನೆಯ ದಿನಗಳ
ತೊಳಲಾಟವನ್ನು ಸಮರ್ಥವಾಗಿ ಬಿಂಬಿಸುತ್ತಾರೆ...
ಅವರಿಗೆ ತಕ್ಕ ಅಭಿನಯ ಸೀತಾದೇವಿಯ ಪಾತ್ರದಲ್ಲಿ...

ನಿಜಕ್ಕೂ ನಮ್ಮ ಪ್ರೇಮಕವಿಯವ ದಾಂಪ್ತ್ಯ ಹೀಗೆ ಸೊಗಸಾಗಿದ್ದೀತ್ತಾ...?
ಅಂಥಹ ಕಷ್ಟದಲ್ಲೂ ಕೂಡ...!

ವಾಹ್...!


ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ವಿನೂತಾರವರೆ.....

ಒಮ್ಮೆ ..
ದಯವಿಟ್ಟು ಈ ನಾಟಕ ನೋಡಿ....

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಕನಸುಮನಸು(ಮಹೇಶ್)

ನಮ್ಮ ನಾಡು, ಜಲ, ಭವ್ಯ ಪರಂಪರೆಗಳನ್ನು,
ಸಂಸ್ಕ್ರ್‍ಅತಿಯನ್ನು ಎತ್ತಿಹಿಡಿಯುತ್ತದೆ ಈ ನಾಟಕ....

ಸುಂದರಾದ ನಾಟಕ...

ನೀವೂ ಕೂಡ ಒಮ್ಮೆ ಇಲ್ಲಿಗೆ ಬಂದಾಗ ನೋಡಿ...

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಶ್ರೀನಿಧಿ......

ಹದಿನೇಳು ಬಾರಿ ಈ ನಟಕ ನೋಡಿದ್ದೀರಾ...!!!??

ಭೇಷ್....!
ನಾನೀಗಾಗಲೇ ಮೂರು ಬಾರಿ ನೋಡಿರುವೆ.....

ನನಗಂತೂ ಇನ್ನೂ ನೋಡಬೆಕೆನಿಸುತ್ತದೆ...

ಎಂಥಹ ಅದ್ಭುತ ನಾಟಕ ಅಲ್ಲವಾ...?

ಫೋಟೋಗಳನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...

ಬರುತ್ತಾ ಇರಿ....

Kishan said...

Nice narration and excellent photos. Its difficult to take those unless you have a good vantage point.

ಭಾರ್ಗವಿ said...

ಎಲ್ಲಾ ನನಗಿಷ್ಟದ ಹಾಡುಗಳೇ. ಫೋಟೋ ಸಮೇತ ಹಂಚಿಕೊಂಡಿದ್ದು ಖುಷಿಯಾಯ್ತು . ತುಂಬಾ ಧನ್ಯವಾದಗಳು.

ಧರಿತ್ರಿ said...

ಒಂದು ವರ್ಷದ ಹಿಂದೆ ಇದೇ ರಂಗಶಂಕರದಲ್ಲಿ ಮೈಸೂರು ಮಲ್ಲಿಗೆ ನೋಡಿ ಖುಷಿಪಟ್ಟಿದೆ. ಇದೀಗ ನೀವು ಮತ್ತೊಮ್ಮೆ ದರ್ಶನ ಮಾಡಿದ್ದೀರಿ.
ಬರಹ ತುಂಬಾ ಇಷ್ಟವಾಯಿತು..ಹೊಸ ವಿಷಯ..ಇನ್ನಷ್ಟು ಮನ ಆಕರ್ಷಿಸಿತು..
ತಡವಾಗಿ ಬಂದೆ...ಬೈಕೋಬೇಡಿ
-ಧರಿತ್ರಿ

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ... ನಾಟಕ ನಾನು ನೋಡಿದೆ ರ೦ಗಶ೦ಕರಕ್ಕೆ ಹೋಗಿ... ಒ೦ದು ಸು೦ದರ ಸ೦ಜೆಯನ್ನು ಅನುಭವಿಸಿದ ಭಾಗ್ಯ ನಮ್ಮದಾಯಿತು. ಅಷ್ಟು ಮನತಟ್ಟಿತು ನಾಟಕ. ರಾಜೇ೦ದ್ರ ಕಾರಾ೦ತರ ಲಘುದಾಟಿಯ ಹಾಸ್ಯ, ಎಲ್ಲಾ ಕಲಾವಿದರ ಅಧ್ಬುತ ನಟನೆ ನಾಟಕದ ತು೦ಬಾ ತನ್ಮಯತೆಯಿ೦ದ ಇರುವ೦ತೆ ಮಾಡಿತು. ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ತು೦ಬಾ ಅಭಿಮಾನ ಮೂಡಿಸಿತು ಮತ್ತು ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಅನಿಸಿತು.

ಕೆ.ಎಸ್.ನ ಅವರ ಸು೦ದರ ಪದ್ಯಗಳನ್ನು ನಾಟಕದ ತು೦ಬಾ ಬಳಸಿಕೊ೦ಡಿದ್ದು ತು೦ಬಾ ಚ೦ದವಾಗಿತ್ತು.

ತು೦ಬಾ ಧನ್ಯವಾದಗಳು ಪ್ರಕಾಶಣ್ಣ... ನಿಮ್ಮ ಬ್ಲಾಗ್ ಮೂಲಕವೇ ನನಗೆ ಆ ನಾಟಕ ಇದೆ ಅ೦ತ ಗೊತ್ತಾಗಿದ್ದು ನೋಡಿ.

Harihara Sreenivasa Rao said...

naatakanella blog nlle torisidderi.Ruchi hattisiro reeti cennagide. Aadare.... neevu heege ellanoo tilisidare ...modlee naavu kannadadooru swami... naatkaanuoo ille noodidare ticket kottu kalavidaranna ulisooru yaaru?

Kole Basava said...

ನಾ ನೋಡದೆ ಏನನ್ನೋ ಕಳಕೊಂಡಂತೆ ನೋವಾಗಿದೆ

sandesh said...

Sir, natka nodlikke aagadidroo adanna kanmunda tandu nilsidri. thanks a lot. nam hubli-dharwad kade ondu sala ee nataka nadeeli annodu nanna aase.

ಚುಕ್ಕಿಚಿತ್ತಾರ said...

ಪ್ರಕಾಶಣ್ಣ
ಮೈಸೂರುಮಲ್ಲಿಗೆ ನೋಡಬೇಕಾಯ್ತು..
ನಿಮ್ಮ ನಿರೂಪಣೆ ನೋಡಬೇಕೆನ್ನುವ ಕಾತುರವನ್ನು ಹೆಚ್ಚಿಸುತ್ತಿದೆ.