Sunday, June 7, 2009

ಇಷ್ಟ ಆಗದವರೊಡನೆ ... ಬದುಕುವದೇ ... ಜೀವನ...!! ( 1 )


ಬಹಳ ದಿನಗಳಿಂದ ತಲೆಯಲ್ಲಿ ಒಂದೇ ವಿಚಾರ.....

"ಅವನನ್ನು ಮತ್ತೆ ನನ್ನ ಜೀವನದಲ್ಲಿ ಬರಲು ಬಿಡಬಾರದು..."

ಇಷ್ಟೆಲ್ಲ ವರ್ಷಗಳು ಸ್ನೇಹಿತನಾಗಿ ನನ್ನ ಸಂಗಡ ಇದ್ದವ...
ಈ ನಡುವೆ ಆತ ಬೋರಾಗಿ ಬಿಟ್ಟಿದ್ದ...
ಅವನ ಸಂಗಡ ಇರುವದು ಅಸಹನೀಯ ಎನಿಸಿ ಬಿಟ್ಟಿತ್ತು....

"ಇನ್ನು ನೀನ್ನ ಅಗತ್ಯ ನನಗಿಲ್ಲ ...
ನಿನ್ನ ಸಾಂಗತ್ಯ ಇಷ್ಟವಾಗುತ್ತಿಲ್ಲ....
ನನ್ನ ಜೀವನದಿಂದ ದೂರ ಹೋಗು.. ...
ನನ್ನನ್ನು ನನ್ನ ಪಾಡಿಗೆ ಇರಲು ಬಿಡು" ...ಅಂದೆ...

ಅಷ್ಟು ಸುಲಭದಲ್ಲಿ ಹೋದಾನೆಯೇ...?

ಇಷ್ಟು ವರ್ಷಗಳ ಸ್ನೇಹದಿಂದ ಇದ್ದು...
ಈಗ ಇದ್ದಕ್ಕಿಂದ್ದಂತೆ
"ದೂರವಾಗು .....
ನಿನ್ನ ಅಗತ್ಯ ನನಗಿಲ್ಲ ಅಂದರೆ...??"

ಅಷ್ಟು ಸುಲಭದಲ್ಲಿ ದೂರವಾಗುವ ಆಸಾಮಿಯಲ್ಲ.....

ಬಹಳ ತಿಳಿ ಹೇಳಿದೆ...

"ನಿನ್ನಿಂದ ಉಪಕಾರನೂ ಆಗಿದೆ... ಆದರೆ ಈಗ ನಿನ್ನ ಅಗತ್ಯ ನನಗಿಲ್ಲ...
ನಿನ್ನಿಂದ ನಾನು ಬಹಳಷ್ಟು ಕಳೆದು ಕೊಂಡಿದ್ದೇನೆ...
ನನ್ನ ಬಹಳಷ್ಟು ಜನ ದೂರ ಆಗ್ತಾ ಇದ್ದಾರೆ ...

ನಿನ್ನ ಸ್ನೇಹದಿಂದ ನನಗೆ ಸಂತೋಷನೂ ಸಿಕ್ಕಿದೆ....
ಆದ್ರೆ ನಿನ್ನ ಸ್ನೇಹ ನನಗೆ ಸಹಜವಲ್ಲ...
ನಿನ್ನ ಗೆಳೆತನ ನಾನು ಇಷ್ಟಪಟ್ಟು ಮಾಡಿದ್ದಲ್ಲ....
ದಯವಿಟ್ಟು... ದಯವಿಟ್ಟು...
ನನ್ನ ಬದುಕಿನಿಂದ ದೂರ ಇರು..."


ಸ್ವಲ್ಪ ದಿನ ದೂರ ವಾದಂತೆ ಕಂಡರೂ...
ಮತ್ತೆ ಸ್ನೇಹದ ನಗು ನಕ್ಕು...

ಮರಳಿ ಮೋಡಿ...ಮಾಡಿ... ಬಂದು ಬಿಡುತ್ತಿದ್ದ....!

ಅವನ ನಗುವಿಗೆ ನಾನು ಕರಗಿ ಹೋಗುತ್ತಿದ್ದೆ....

ನನ್ನ ಅಸಹಾಯಕತೆ, ದೌರ್ಬಲ್ಯದ ಲಾಭ ತೆಗೆದುಕೊಳ್ಳುತ್ತಿದ್ದ....

ಇವನಿಂದ ದೂರವಾಗುವದು ಹೇಗೆ....??

ಅವನನ್ನು ಸಾಯಿಸಿ ಬಿಡಬೇಕು...!!! ನಿರ್ದಯವಾಗಿ...!!

ಇಷ್ಟು ದಿನ ನನ್ನ ಖುಷಿ, ಸಂತೋಷ ..
ನನ್ನ ಬದುಕಿನ ಎತ್ತರದ ಸ್ತರದಲ್ಲಿ ...ಜೊತೆಯಾಗಿ ಇದ್ದವ...
ಬೇಡ ಅಂದ ಕೂಡಲೇ ಸಾಯಿಸಿ ಬಿಡಬೇಕಾ...?

ನನಗೆ ಕಾಣ್ತಾ ಇರೋದು.. ಇದೋಂದೇ ದಾರಿ......!!

ಅದು ನನ್ನಿಂದ ಸಾಧ್ಯನಾ.....??

ಈ... ಜಗತ್ತಿನಲ್ಲಿ ....
ಸಾಯಿಸೋದು ಅಷ್ಟು ಸುಲಭಾನಾ....?


ಈ ಜಗತ್ತಿನಲ್ಲಿ "ಮರ್ಡರ್" ಮಾಡೋನು ನಾನೊಬ್ನೇ ಅಲ್ಲ,,,..
ಮರ್ಡರ್ ಮಾಡಿ ಬಹಳಷ್ಟು ಜನ ಬದುಕಿದ್ದಾರೆ..
ಪ್ರತಿನಿತ್ಯ ಮರ್ಡರ್ ಆಗ್ತನೇ ಇರ್ತದೆ...
ಅದರಲ್ಲಿ ನಾನೂ ಒಬ್ಬ.....


ಮನಸ್ಸಿನಲ್ಲಿ ಧ್ರಡ ನಿರ್ಧಾರ ಮಾಡಿದೆ...
ಅದಕ್ಕೆ ಬಹಳ ದಿನ ಕುಳಿತು ಪ್ಲಾನ್ ಕೂಡ ಮಾಡಿದೆ...
ಮನಸ್ಸನ್ನು ಗಟ್ಟಿ ಮಾಡಿಕೊಂಡೆ....

ನನ್ನ ಸ್ನೇಹಿತರೊಬ್ಬರ ಬಳಿ ಸಹಾಯ ಕೇಳಿದೆ...
ಮೊದಲು ಅನುಮಾನಿಸಿದರೂ ಆಮೇಲೆ "ಹುಂ" ಅಂದರು...

ಅವರಿಗೆ ಅವರದೇ ಹವ್ಯಾಸಗಳು... ಮೈ ತುಂಬಾ ಕೆಲಸ...
ಹಗಲು ರಾತ್ರಿಯೆನ್ನದೆ ದುಡಿಯುವ ಮನುಷ್ಯ...
ಆದರೆ ನಾನು ಪ್ಲಾನ್ ಮಾಡಿ ಹೇಳಿದ ದಿನ ಅವರಿಗೆ ಸಹಕಾರ ಕೊಡಲು ಆಗಲಿಲ್ಲ.....

" ಅವನನ್ನು ಸಾಯಿಸಿದರೆ ಮಾತ್ರ ನನಗೆ ನೆಮ್ಮದಿ....."

ಇನ್ಯಾರು...?? ನನಗೆ ಸಹಾಯ ಮಾಡಬಲ್ಲರು....?

ರೌಡಿಸಮ್ ಹಿನ್ನೆಲೆ ಇರುವ ...

" ಶ್ರೀನಿವಾಸ್ ರಾಜು "...!!

ಕೋಣನ ಕುಂಟೆಯ ಹೇರ್ ಕಟಿಂಗ್ ಸೆಲೂನ್ ಮಾಲಿಕ ನನ್ನ ಸ್ನೇಹಿತ...
ನಾನೆಂದರೆ ತುಂಬ ಅಭಿಮಾನ....
ಅವರ ಬಳಿ ಡಿಟೇಲಾಗಿ... ಎಲ್ಲವನ್ನೂ ಹೇಳಿದೆ......

ಅವನನ್ನು ಸಾಯಿಸುವ ನನ್ನ ಪ್ಲಾನನ್ನೂ ಹೇಳಿದೆ....!

"ನೋಡಿ ರಾಜು.... ಯಾರಿಗೂ ಹೇಳ ಬಾರದು....
ಗೊತ್ತಾಗಲೂ ಬಾರದು..
ಇದು ನನ್ನ ನಿನ್ನ ನಡುವೆ ಮಾತ್ರ ಇರಬೇಕು....

ಅವನನ್ನು ಸಾಯಿಸದಿದ್ದರೆ ನನಗೆ ಸಮಾಧಾನ ಇಲ್ಲ....
ಆವನನ್ನು ಸಾಯಿಸಲು ನೀವು ನನಗೆ ಸಹಕಾರ ಕೊಡ ಬೇಕು...
ನನ್ನ ಸ್ನೇಹದ ಮೇಲೆ ಆಣೆ...
ಯಾರಿಗೂ ಗೊತ್ತಾಗದ ಹಾಗೆ ಈ ಕೆಲಸ ಆಗ ಬೇಕು.... "


"ಪ್ರಕಾಶ ಹೆಗಡೆಯವರೆ..... ನಿಮಗೆಂಥಾ ಹುಚ್ಚು...??
ಅಂಥವರು ಎಲ್ಲರ ಜೀವನದಲ್ಲೂ ಇರ್ತಾರೆ....
ಬರ್ತಾರೆ ..!!.
ಹೋಗ್ತಾರೆ... ..!
ಅದರ ಬಗ್ಗೆ ಅಷ್ಟೆಲ್ಲ ತಲೆ ಕೆಡಿಸಿ ಕೊಳ್ಳ ಬೇಡಿ....

ನೀವು ಅವನನ್ನು "ಎಂಟರ್ಟ್ರೇನ್" ಮಾಡದಿದ್ರೆ ಆಯ್ತಪ್ಪಾ...!

ನಮಗೆ ಯಾರಾದ್ರೂ ಆಗದಿದ್ರೆ , ...
ಇಷ್ಟ ಆಗದಿದ್ರೆ ಸಾಯಿಸಿ ಬಿಡೋದಾ...??

ಇಷ್ಟ ಆಗದವರೊಡನೆ ಬದುಕುವದೇ ಜೀವನ...

ಇಷ್ಟ , ಕಷ್ಟಗಳೇ ಬದುಕು...!!

ನನ್ನನ್ನೇ ನೋಡಿ ನಾನು ಇಷ್ಟ ಆಗದಿದ್ದರೂ ಜೀವನ ನಡಸ್ತಾ ಇಲ್ಲವಾ...?

ಹೆಗಡೆಯವರೇ....
ಯಾಕೆ ಇದಕ್ಕೆಲ್ಲ ತಲೆ ಕೆಡಿಸ್ಕೊತಿರಾ..??..
"ನವರತ್ನ ತೈಲ ಹಾಕಿ ಮಸಾಜ್ " ಮಾಡಿ ಕೊಡ್ತೀನಿ
ಮನೆಗೆ ಹೋಗಿ ಮಲಗಿ....
ಈ ಮರ್ಡರ್ ನಿಮ್ಮಿಂದ ಆಗದ ಕೆಲಸ... ಕೆಲಸ..."


"ರಾಜು ನಿಮಗೆ ನನ್ನ ಕಷ್ಟ ಅರ್ಥ ಆಗೊದಿಲ್ಲ....
ನಿಮಗೆ ಮನಸ್ಸಿಲ್ಲದಿದ್ದರೆ ಬೇಡ ಬಿಡಿ... "


"ಹೆಗಡೆಯವರೆ... ಬೇಸರ ಮಾಡಿಕೊಳ್ಳ ಬೇಡಿ...
ನಾನು ನಿಮಗೆ ಸಹಾಯ ಮಾಡ್ತೇನೆ...
ನನ್ನ ಸ್ನೇಹಿತ ಒಬ್ಬರಿದ್ದಾರೆ....
ಆತನ ಬಳಿ ಸ್ವಲ್ಪ ಹುಷಾರು...!
ನಕ್ಸಲ್ ಹಿನ್ನಲೆ ಇರುವ ಮನುಷ್ಯ...
ಕೋಪ ಜಾಸ್ತಿ.. ತಾಳ್ಮೆ ಕಡಿಮೆ... ...
ಅವನು ಈ ಕೆಲಸ ಖಂಡಿತ ಮಾಡಿ ಕೊಡ್ತಾನೆ..
ಅವರ ಬಳಿ ನಿಮ್ಮನ್ನು ಕಳಿಸಿ ಕೊಡ್ತೇನೆ.."

"ಅಯ್ತು ಮಾರಾಯಾ...
ಆತನ ಕಾಟ ತಪ್ಪಿದರೆ ಸಾಕು.. ನೀನು ಒಂದು ಲೆಟರ್ ಕೊಡು......"
ಅಂದೆ...

"ಹೆಗಡೆಯವರೇ... ನಮ್ಮ ದಂಧೆಯಲ್ಲಿ ಲೆಟರ್ ಗೆ ಏನೂ.. ಕೆಲಸ ಇಲ್ಲ..
ಆತ ".ಹೇ.ಗು"...

"ಅಂದರೆ...??"

" ಹೆಬ್ಬೆಟ್ಟಿನ ಗುರುತು ಅಂತ.... ಓದು, ಬರಹ ಅವನಿಗೆ ಗೊತ್ತಿಲ್ಲ...
ನಾನು ಫೋನ್ ಮಾಡಿ ಹೇಳ್ತೇನೆ .. ನಿಮ್ಮ ಕೆಲಸ ಆಗ್ತದೆ..."

ರಾಜು ನನಗೆ ಯಾರನ್ನು ಭೇಟಿ ಮಾಡಬೇಕೆಂದು ವಿಳಾಸ ಕೊಟ್ಟ...

ನಾನು ನನ್ನ ದಿನ ನಿತ್ಯದ ಡ್ರೆಸ್ಸಿನಲ್ಲಿ ಹೋದರೆ ಯಾರದರೂ ಪರಿಚಯ ಹಿಡಿದು ಬಿಟ್ಟಾರು...!
ನನ್ನ ಗುರುತು ಸಿಗದ ಹಾಗೆ ಹೋಗಬೇಕು...!

ಅಪರಿಚಿತನ ಹಾಗೆ....!!

ಮನೆಯಲ್ಲಿ ನನ್ನ ಮಗ, ಮಡದಿಗೂ... ಸುಳಿವು ಸಿಗ ಬಾರದು.....!!

ಅವರು ಅಡ್ಡಗಾಲು ಹಾಕಿ ಬಿಟ್ಟರೆ....??
ಎಲ್ಲವನ್ನೂ ಬಹಳ ಎಚ್ಚರಿಕೆಯಿಂದ...
ಜಾಗರೂಕತೆಯಿಂದ ತಯಾರಿ ಮಾಡಿದೆ....

" ಯಾಲಕ್ಕಿ ಉಪಬೆಳೆಗೆ " ಹಾಕಿಕೊಂಡ ಕಾಫಿ ಬಣ್ಣದ ಶರ್ಟಿನಲ್ಲಿ ನೆಲ ಒರೆಸಿ....
ಮತ್ತೂ ಹಳೆಯದನ್ನಾಗಿ ಮಾಡಿಕೊಂಡೆ...

ಊರಿಂದ ತಂದ ಹಳೆಯ ಲುಂಗಿ ಇತ್ತು..
ಅದನ್ನೂ ನೆಲ ಒರೆಸಿ .. ಕಾಲಿನಲ್ಲಿ ತುಳಿದು...
ಸ್ವಲ್ಪ ಗಲೀಜು ಮಾಡಿಕೊಂಡೆ...

ಅಲ್ಲಲ್ಲಿ ಹರಿದ ..ಕಾಲು ಒರೆಸುವ ಒಂದು ಟವೆಲ್ಲು....
ಹೆಗಲ ಮೇಲೆ ಹಾಕಿಕೊಳ್ಳಲು...!


ನಾನು ರೆಡಿ ಆದೆ....

ಹಿಂದಿನ ದಿನ ಶ್ರೀನಿವಾಸ್ ರಾಜು ಕೊಟ್ಟ ವಿಳಾಸ ಹಿಡಿದು ....
ಆತನ ಸಲೂನ್ ನೋಡಿ ಬಂದೆ.....

ಮಾರನೆಯ ದಿನ ಬೆಳಿಗ್ಗೆ ನಾಲ್ಕು ವರೆಗೆ ಎದ್ದೆ...
ಸ್ನಾನ ಮಾಡಲಿಲ್ಲ....

ಬೆವರಿನ ವಾಸನೆ ಇದ್ದರೆ ಒಳ್ಳೆಯದು..
ಗಡ್ಡ ಮಾಡದೆ ನಾಲ್ಕು ದಿನವಾಗಿತ್ತು...
ಶೇವಿಂಗ್ ಮಾದದೆ ಹಾಗೇಯೇ ಬಿಟ್ಟಿದ್ದೆ..
ನನ್ನ ಡ್ರೆಸ್ಸ್ ಗೆ ತಕ್ಕದಾದ ಮುಖ ಇರಬೇಕಲ್ಲ....!!

ಕಾರನ್ನು ಡ್ರೈವ್ ಮಾಡಿ ಕೊಂಡು ರಾಜಾಜಿನಗರದ ಸ್ಲಮ್ ಬಳಿ ಬಂದೆ....
ಅವನ ಅಂಗಡಿಯಿಂದ ಸ್ವಲ್ಪ ದೂರದಲ್ಲಿ ಕಾರ್ ಪಾರ್ಕ್ ಮಾಡಿದೆ...

ಅಷ್ಟರಲ್ಲಿ ಫೋನ್.. ಶ್ರಿನಿವಾಸ್ ರಾಜುದು...!

" ಹೆಗಡೆಯವರೆ.....
ಆ ಮನುಷ್ಯ ಸಿಕ್ಕಾಪಟ್ಟೆ ಕೋಪಿಷ್ಟ...!
ತಾಳ್ಮೆ ಇಲ್ಲ....!

ತುಂಬಾ ಎಚ್ಚರಿಕೆ.. ಹುಷಾರಾಗಿ ಇರಬೇಕು....!
ನಾನು ಬಂದು ಬಿಡ್ಲಾ......?.
ಅವನ ಶಾಪಿನಲ್ಲಿ ಅವನ ಬಳಿ ಮಾತಾಡುತ್ತಾ ಕುಳಿತಿರ್ತೀನಿ...."


"ಬೇಡ ಮಾರಾಯಾ... ನೀನು ಬಂದರೆ ಕೆಲಸ ಹಾಳಾಗ್ತದೆ...
ಅಂಥಹ ತೊಂದರೆ ಬಂದರೆ ನಿನಗೆ ಫೋನ್ ಮಾಡ್ತೇನೆ...
ನೀನು ಇನ್ನು ನಂಗೆ ಫೋನ್ ಮಾಡಬೇಡ.."

ಇನ್ನು ನನ್ನಾಕೆ ಫೋನ್ ಮಾಡಿ ಬಿಟ್ಟರೆ...?
ಅವಳಿಗೂ ಹೇಳಿದೆ...
"ನಾನು ಬರುವದು ಸಾಯಂಕಾಲ ಆಗಬಹುದು...
ಯಾವುದೋ ಪ್ರಾಜೆಕ್ಟ್ ಡಿಸ್ಕಷನ್ ಇದೆ...
ಫೋನ್ ಮಾಡ ಬೇಡ..."

ಹಾಗೆ ಪಾರ್ಟ್ನರ್ ಸತ್ಯನಿಗೂ ಏನೋ ಸುಳ್ಳು ಹೇಳಿದೆ...

ಇನ್ನು ಉಳಿದವ "ಮಲ್ಲಿಕಾರ್ಜುನ್..."

ಆಗ ಆರು ಗಂಟೆ ಆಗುತ್ತಿತ್ತು....
"ಪಾಪ... ಮಲಗಿರ್ತಾನೆ..ಬೆಳಗಿನ ಸಿಹಿ ನಿದ್ರೆಯಲ್ಲಿ..
ಅವನ ಫೋನ್ ಬಂದಾಗ... ನೋಡೋಣ"
ಅಂದು ಕೊಂಡೆ


ಅವನಿಗೆ ಫೋನ್ ಮಾಡಲಿಲ್ಲ....
ಫೋನ್ ಸೈಲೆಂಟ್ ಮೋಡಿನಲ್ಲಿಟ್ಟೆ..

ಕಾರಿನಲ್ಲಿ ಕಷ್ಟ ಪಟ್ಟು ಡ್ರೆಸ್ಸ್ ಬದಲಿಸಿದೆ....

ಎಲ್ಲ ತಯಾರಿ ಆಯಿತು.....!

ಮತ್ತೊಮ್ಮೆ ಅವನ ಅಂಗಡಿ ನೋಡಿದೆ....

ಎದೆಯಲ್ಲಿ... ಡವ ಢವ...!!
ಎದೆಯಲ್ಲಿ ಒಂಥರಾ ಅಳುಕು....!!


ಈ ಹುಚ್ಚೆಲ್ಲ ಯಾಕೆ ?....
ವಾಪಸ್ ಹೋಗಿ ಬಿಡಲೇ...ಅನಿಸಿತು...

ಇಲ್ಲ....!! ಧೈರ್ಯ ಮಾಡಿಕೊಂಡೆ...
ಮನಸ್ಸನ್ನು ಗಟ್ಟಿ ...ಮಾಡಿಕೊಂಡೆ...

ಹಳ್ಳಿಯಲ್ಲಿ ಬೆಳೆದ ನನಗೆ ಈ ಕಾರು.. ಹಣದಿಂದ
ಸ್ವಲ್ಪ "ಅಹಂಕಾರ" ಬಂದ ಹಾಗೆ ಇತ್ತು...

ಅಹಂಕಾರದ ಪ್ರಕಾಶ ಹೆಗಡೆಯನ್ನು ಸಾಯಿಸ ಬೇಕಿತ್ತು....
ನನ್ನಲ್ಲಿ ಗೊತ್ತಿಲ್ಲದಂತೆ ಬೆಳೆಯತೊಡಗಿದ.....
"ಅಹಂಕಾರ" ಸಾಯಿಸಲೇ ಬೇಕಿತ್ತು....

ತೀರಾ ಸಹಜವಾದುದನ್ನು ಕಳೆದು ಕೊಳ್ಳುತ್ತಿದ್ದೇನೆ ಅನಿಸ ತೊಡಗಿತು....

ಒಂದು ದಿನ ನನ್ನದಲ್ಲದ ಜಾಗದಲ್ಲಿ "ನಾನಾಗಿರದೆ"...

"ಬೇರೆಯವನಾಗಿ" ಕೆಲಸ ಮಾಡಿದರೆ ಹೇಗೆ...?

ಈ ಥರಹದ ಪ್ರಯತ್ನ ಯಾಕೆ ಮಾಡ ಬಾರದು ಅನಿಸಿತು....

ಈ ಹೇರ ಕಟಿಂಗ್ ಸಲುನ್ ಒಳಗೆ ಹೋಗಲು ರೆಡಿ ಆಗಿ ನಿಂತಿದ್ದೆ.....

ಮುಂದೆ ಏನಾಗ ಬಹುದು...? ?
ಕಳವಳ.....,!!

ಭಯ ಮಿಶ್ರಿತ ಆತಂಕ.....!!

ಏನಾದರೂ ಆಗಲೀ...
ಎಂದು ಅಂಗಡಿಯ ಕಡೆ ಹೆಜ್ಜೆ ಹಾಕಿದೆ ..
...............................
ಸ್ವಲ್ಪ ಅಳುಕಿನಿಂದ... .......


68 comments:

umesh desai said...

ಹೆಗಡೆ ಅವರೆ ಗೆಸ್ ಮಾಡಿದೆ ಎಂದು ಸಂಭ್ರಮಿಸೋಹಾಗಿಲ್ಲ ಆದರೂ ಆ ಮನುಷ್ಯ ನೀವೆ ಹಾಗೂ ನಿಮ್ಮ ಒಡನಾಡಿ ನಿಮ್ಮ ಉದ್ದಕೂದಲು ಅಥವಾ ಗಡ್ಡ ಆಗಿರಲು ಸಾಕು....

ಸಿಮೆಂಟು ಮರಳಿನ ಮಧ್ಯೆ said...

ದೇಸಾಯಿಯವರೆ......

ನಾನೊಂದು ಆಧ್ಯಾತ್ಮದ ಕೋರ್ಸ್ ಮಾಡಿದ್ದೆ ಕೆಲವು ದಿನಗಳ ಹಿಂದೆ...
ಅದರಲ್ಲಿ ಈ ಥರಹ ಮಾಡಿನೋಡಿ ಎಂದಿದ್ದರು...

ಯಾಕೆ ಮಾಡಿನೋಡ ಬಾರದೆಂಬ "ಹುಳ" ತಲೆಯಲ್ಲಿ ಹೊಕ್ಕಿತು....

ಇದರಲ್ಲಿ ಸೀಕ್ರೇಟ್ ಏನೂ ಇಲ್ಲ...
ನಾನು ಸಲೂನ್ ಅಂಗಡಿಯಲ್ಲಿ ಒಂದು ದಿನ ಕೆಲಸ ಮಾಡಲು ಹೊರಟಿದ್ದೇನೆ....
ಅಲ್ಲಿ ಹೋಗಿ .., ಅಲ್ಲಿನ ಅನುಭವ ಗೆಳೆಯ ಮಲ್ಲಿಕಾರ್ಜುನ್ ಬಳಿ ಹೇಳಿಕೊಂಡೆ.

ಅಲ್ಲಿನ ಅನುಭವಗಳೊ....!!!

ನನಗೆ ಏನು ಹೇಳಬೇಕೆಂದು ತೋಚುತ್ತಲೇ ಇಲ್ಲ.....!

ಪ್ರತಿಕ್ರಿಯೆಗೆ ಧನ್ಯವಾದಗಳು...

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ಇನ್ನೇನೇನಿದೆ ನಿಮ್ಮ ಬರಹದ ಬತ್ತಳಿಕೆಯಲ್ಲಿ, ನಿಮ್ಮ ಬರಹಗಳ ನಿರೂಪಣೆ ಶೈಲಿ ಮತ್ತು ಹೇಳಬೇಕೆಂದಿರುವುದನ್ನು ಹೇಳಿ ಮುಗಿಸುವ ರೀತಿ ಎಲ್ಲಾ ಸೂಪರ್. ಇಂತಹ ಹೊಸ ಪ್ರಯೋಗಗಳು ಇನ್ನಷ್ಟು ಬರಲಿ. ಮುಂದಿನ ಕಂತಿಗೆ ಕಾಯ್ತಿರ್ತೀನಿ.
ಈ ಬರಹದ ವಿಚಾರದಲ್ಲಿರುವ ನಿಮ್ಮ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ.

Amit Hegde said...

ಹೊಯ್ ಎಂತ ಮರ್ರೆ ಸಸ್ಪೆನ್ಸ್ ತಡ್ಕಣುಕೆ ಆತ್ತಿಲ್ಲೇ.....!

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್....

ನನ್ನದಲ್ಲದ ಜಾಗದಲ್ಲಿ...
ನಾನಾಗಿರದೆ... ಕೆಲಸ ಮಾಡುವದು...
ಅದೂ ಈ ವಯಸ್ಸಿನಲ್ಲಿ,
ಇಂಥಹ ಲೈಫ್ ಗೆ
ಜೀವನ ಅಡ್ಜೆಸ್ಟ್ ಆದ ಮೇಲೆ....

ಕಲ್ಪನೆಯೇನೋ ಚೆನ್ನಾಗಿತ್ತು....

ವಾಸ್ತವದಲ್ಲಿ...??

ನನ್ನ ಹುಚ್ಚು ತೆವಲುಗಳ ಅನುಭವದಲ್ಲಿ ಇದೂ ಒಂದು ಸೇರ್ಪಡೆಯಾಯಿತು.....

ಹ್ಹಾ... ಹ್ಹಾ....!!

ಸಿಮೆಂಟು ಮರಳಿನ ಮಧ್ಯೆ said...

ಅಮಿತ್....

ಸ್ವಲ್ಪ ತಡ್ಕಣಿ ಮಾರ್ರೇ....

ಹಂಗೆಲ್ಲಾ ಹೇಳೂಕ್ಕಾತ್ತಾ....!!

ಅಲ್ಲಿಗೆ ಹೋಗೋಕ್ಕು ಮುಂಚೆ ನಂಗೂ ಟೆನ್ಷನ್ ಆತ್ತೆ...
ಮಜಾ ಇತ್ತೆ...

ಮುಂದಿನ ಸಲ ಹೇಳ್ತಿನಿ ಕಾಣಿ....

ನಿಮ್ಮಗೆ ಖುಷಿ ಆಗಿದ್ದು ..
ನಮ್ಗೂ ಖುಷಿ ಆತ್ ಕಾಣಿ...

ಬರ್ತಾ ಇರ್ರಿ ಮಾರ್ರೆ....

sunaath said...

ಪ್ರಕಾಶ,
ಕೊನೆಯ ಗಳಿಗೆವರೆಗೂ suspenseನಲ್ಲಿಯೇ ಮುಳುಗಿದ್ದೆ.
ಒಳ್ಳೇ ಚೇತೋಹಾರಿ ಬರಹ.

Ramya Hegde said...

ವಾಹ್..,ಇದೆಂತ ಪ್ರಯೋಗ...!!!.ಅಲ್ಲಿ ಏನೇನೆಲ್ಲಾ ಅನುಭವಗಳು ಆಗಿರಬಹುದು ಅಂತ ಯೋಚನೆ ಮಾಡ್ತಾ ಇದ್ದೆ. ತುಂಬಾ ಇಂಟರೆಸ್ಟಿಂಗ್ ಅನ್ನಿಸ್ತಾ ಇದ್ದು.ಮುಂದಿನ ಭಾಗ ಬೇಗನೆ ಬರಲಿ.

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್....

ಶ್ರೀನಿವಾಸ ರಾಜು ನನಗೆ ಮೂರು ವರ್ಷದಿಂದ ಪರಿಚಯ...
ವಿಶ್ವಾಸದವ... ಮೊದಲು ಆತ ಒಪ್ಪಲಿಲ್ಲ....
ಕಷ್ಟ ಪಟ್ಟು ಒಪ್ಪಿಸಿಯಾಯಿತು....
"ತನ್ನ ಗೆಳೆಯ ಬಹಳ ಕೋಪಿಷ್ಟ,
ನಾನು ಅವನ ಶಾಪಿನಲ್ಲಿ ಇರುತ್ತೇನೆ...
ನಿನ್ನ ಪರಿಚಯ ಇಲ್ಲದವರ ಹಾಗೆ..." ಅಂದ...

ರಾಜು ಅಲ್ಲಿರುವದು ಯಾಕೋ ಸರಿ ಕಾಣಲಿಲ್ಲ.....

ಆ ಹೇರ್ ಕಟಿಂಗ್ ಸಲೂನಲ್ಲಿ
ನಾನು "ನಾನಾಗಿರದೇ"...
ಬೇರೆಯವನಾಗಿ ಇರಬೇಕಿತ್ತು....

ಸುನಾಥ ಸರ್ ...
ಲೇಖನ ಮೆಚ್ಚಿದ್ದಕ್ಕೆ ವಂದನೆಗಳು....

ಸಿಮೆಂಟು ಮರಳಿನ ಮಧ್ಯೆ said...

ರಮ್ಯಾ.....

ಕಾರಿನಲ್ಲಿ ಡ್ರೆಸ್ ಬದಲಿಸಿ...
ಸೆಲೂನಿಗೆ ಹೋಗಲು ಬಹಳ ಟೈಮ್ ತೆಗೆದುಕೊಂಡೇ...

ಎಲ್ಲಿಯಾದರೂ ಎಡವಟ್ಟಾದರೆ...?

ಆಗಿನ ಮನಸ್ಥಿತಿ ಹೇಗಿತ್ತೆಂದರೆ..
ಪಟಾಕಿಗೆ ಬೆಂಕಿ ಹಚ್ಚಿಯಾಗಿದೆ...
ಇನ್ನೂ ಶಬ್ಧವಾಗಿಲ್ಲ...

ಅದರ ಮಧ್ಯದ ಸಮಯವಿರುತ್ತದಲ್ಲಾ

ಹಾಗಿತ್ತು ನನ್ನ ಮನಸ್ಸಿನ ಹೊಯ್ದಾಟ....

ಇಷ್ಟವಾಗಿದ್ದಕ್ಕೆ ಧನ್ಯವಾದಗಳು....

Kishan said...

ರೀ, ನಿಮ್ಮ ತಲೆಯಲ್ಲಿ ತರಹಾವರೀ ಹುಳಗಳಿವೆ ಎಂದು ಗೊತ್ತಿತ್ತು ಆದರೆ ಇದ್ಯವದೋ ಹೊಸ ಖತರ್ನಾಕ್ "breed" ಇದ್ಯಲ್ಲ್ರೀ !

You have made a solid foundation for interesting sequels !!

ಸಿಮೆಂಟು ಮರಳಿನ ಮಧ್ಯೆ said...

ಕಿಶನ್.......

ಅದು ಸ್ವಭಾವ ಕಣ್ರೀ.....
ನನ್ನ ಇನ್ನೊಬ್ಬ ಮಿತ್ರ ಶಿವು ಒಂದು ಗಾದೆ ಹೇಳುತ್ತಿರುತ್ತಾರೆ..
"ಮಾಡೋ ಕೆಲ್ಸ ಬಿಟ್ಟು ಬೀದಿಯಲ್ಲಿ ಹೋಗೊ ದಾಸಯ್ಯನ ಹಿಂದೆ ಹೋದಾಂಗೆ" ಅಂತ....

ಆದ್ರೆ ಈ ಅನುಭವ ಮಸ್ತ್ ಮಜಾ ಇತ್ತು...

ಪ್ರತಿಕ್ರಿಯೆಗೆ ವಂದನೆಗಳು....

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ದೇಹ ಮತ್ತು ಮನಸ್ಸು ಕೊಂಚ ಬಲಿತ ಮೇಲೆ, ಅನುಭವ ಹಿಗ್ಗಿದ ಮೇಲೆ, ಅದರಲ್ಲೂ ಸ್ವತಂತ್ರವಾಗಿ ಕಾಲಮೇಲೆ ನಿಂತು ಸಾಧನೆಮಾಡಿರುವ ನೀವು ಹೀಗೆ identity ಕಳೆದುಕೊಂಡು ಒಂದು ದಿನದ ಮಟ್ಟಿಗೆ ಅದೂ ಸಲೂನಿನಲ್ಲಿ ಕೆಲಸ ಮಾಡುವ ಗುಂಡಿಗೆಗೆ ಏನನ್ನುವುದು? ಅದನ್ನೂ ಒಳ್ಳೆ ಸಸ್ಪೆನ್ಸ್ ಇಟ್ಟು ಬರೆದಿರುವಿರಲ್ಲ, ಇದಕ್ಕೇನನ್ನುವುದು?
ಅಂಗಡಿಯಲ್ಲಿ ನನ್ನ ಸ್ನೇಹಿತರಿಬ್ಬರಿಗೆ ನೀವು ಫೋನಿನಲ್ಲಿ ಹೇಳಿದ ತಕ್ಷ್ಸಣ ಹೇಳಿದೆ. "ಅವರನ್ನೊಮ್ಮ ನೋಡಬೇಕಲ್ಲ" ಅಂತ ಒಬ್ಬ ಅಂದರೆ, ಇನ್ನೊಬ್ಬ , "ಇದನ್ನು ಫಿಲಂನಲ್ಲಿ ಬಳಸಿಕೊಂದರೆ ಹೇಗಿರುತ್ತೆ?" ಅಂದ.
ನಾವು ಊಹೆ ಮಾಡಿಕೊಂಡರೂ ಮೈ ಜುಮ್ಮೆನ್ನುತ್ತೆ, ಅಂತಹುದರಲ್ಲಿ ನಿಮ್ಮ ಕಥೆ ಎಂಥದ್ದು? ಮುಂದೇನಾಯಿತು ಎಂದು ಸತಾಯಿಸಬೇಡಿ... ಬೇಗ ಹಾಕಿ ಪುಣ್ಯ ಕಟ್ಟಿಕೊಳ್ಳಿ!

ಚಂದ್ರಕಾಂತ ಎಸ್ said...

ನಿಮ್ಮ ಈ ಬರಹ ಇಷ್ಟವಾಯಿತು. ನಿಜ ನಮ್ಮಲ್ಲಿ ನಮಗೆ ತಿಳಿದಿರುವಂತೆಯೇ ನುಸುಳಿ ತಲೆ ಎತ್ತುವ ಅಹಂಕಾರ ಇದೆಯಲ್ಲಾ ಅದನ್ನು ಮಣಿಸುವುದು ಬಲು ಕಷ್ಟ. ಅದು ಅಹಂಕಾರ ಎಂದು ತಿಳಿಯದಿದ್ದರಂತೂ ಅದು ನಮ್ಮ ಮೇಲೇ ಸವಾರಿ ಮಾಡುತ್ತದೆ. ಬರವಣಿಗೆಯ ಶೈಲಿ ಚೆನ್ನಾಗಿದೆ. ಮುಂದಿನದನ್ನು ಕಾಯುತ್ತಿದ್ದೇನೆ.

ನೀವು ಹೃ ಕೃ ದೃ ಗಳನ್ನು ಹ್ರು ಕ್ರು ..ಎಂದು ಬರೆಯುತ್ತೀರಲ್ಲಾ ಅದಕ್ಕೊಂದು ಸಲಹೆ. hRu = ಹೃ ಆಗುತ್ತದೆ. hru = ಹ್ರು ಆಗುತ್ತದೆ. ಪ್ರಯತ್ನಿಸಿ

Geetha said...

ನಮಸ್ಕಾರ ಸರ್,
ನಿಮ್ಮ ಈ ಬರಹ ಬಹಳ ಚೆನ್ನಾಗಿದೆ.
ನಿಜವಾಗಿಯು ನಿಮ್ಮ ಈ ಪ್ರಯತ್ನ ಸಾಮಾನ್ಯದಲ್ಲ. Hats off to you Sir

Prabhuraj Moogi said...

ಸರ್ ಯಾರ ಮೇಲೆ ಸಿಟ್ಟು ಬಂದು ಯಾರ ಮುಗಿಸಲು ಪ್ಲಾನ ಹಾಕೀದೀರಿ ಅಂತ ಯೋಚೆನೆ ಮಾಡ್ತಿದ್ದೆ, ಒಳ್ಳೆ ಸಸ್ಪೆನ್ಸ್ ಇಟ್ಟಿದ್ದಿರಿ... ನೀವು ಮಾಡುವ ಪ್ರಯೋಗಗಳಿಗೊ ಏನ್ ಹೇಳಬೇಕು... ಇಂಥದ್ದೆಲ್ಲ ಮಾಡಲು ನಿಜಕ್ಕೊ ದೈರ್ಯ ಮತ್ತು ಇಚ್ಛಾಶಕ್ತಿ ಬೇಕು... hats off sir...

Guru's world said...

ಪ್ರಕಾಶ್ ....
ಏನ್ ಸರ್,, ಒಳ್ಳೆ ಪತ್ತೇದಾರಿ ಕಾದಂಬರಿಕಾರರಾಗಲು ಹೊರಟಿದ್ದಿರ.. ತುಂಬ ಚೆನ್ನಾಗಿದೆ ಒಳ್ಳೆ ಪ್ರಯೋಗ,,, ಸಸ್ಪೆನ್ಸ್ ತುಂಬ ಕುತೂಹಲ ಮೂಡಿಸುತ್ತಿದೆ....

ಗುರು

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್...

ಇಂಥಹ ತಲೆಹರಟೆ ಎಡವಟ್ಟು ಕೆಲಸಗಳನ್ನು ಈ ಮೊದಲು ಬೇಕಾದಷ್ಟು ಮಾಡಿದ್ದೇನೆ...

ಕತಾರ್ ದೇಶದಲ್ಲಿದ್ದಾಗ "ಒಂಟೆ ಹಾಲನ್ನು " ಕುಡಿಯಲು ಭಗಿರತ ಪ್ರಯತ್ನ ಮಾಡಿದ್ದೆ...
ಅದನ್ನು ಬರೆದರೆ ಒಂದು ಧಾರವಾಹಿಯೇ ಆದೀತು....

ಅಲ್ಲಿ ನಡೆದ ಘಟನೆ ಬಗೆಗೆ ಮುಂದೆ ಬರೆಯುವೆನಲ್ಲ....

ನಾಲ್ಕು ಜನರಿಗೆ ಕೆಲಸ ಕೊಟ್ಟ ನಾನು
ಆ ಪುಣ್ಯಾತ್ಮನ ಹತ್ರ ಕೆಲಸ ಗಿಟ್ಟಿಸ ಬೇಕಾದರೆ ಕಷ್ಟ ಪಡ ಬೇಕಾಯಿತು....

ನನ್ನ ಹುಚ್ಚುತನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಚಂದ್ರಕಾಂತರವರೆ....

ಈ ಅಹಂ" ನಮಗೆ ಗೊತ್ತಿಲ್ಲದಂತೆ..
ನಮ್ಮ ಮಾತಿನಲ್ಲೋ, ನಡೆ,ನುಡಿಯಲ್ಲೋ ...
ಅರಿಲ್ಲದಂತೆ ನುಸುಳಿರುತ್ತದೆ...

ನಮ್ಮ ಆತ್ಮೀಯರಿಗೆ ಅದು ಅನುಭವಕ್ಕೆ ಬಂದಿರುತ್ತದೆ..
ಕೆಲವರು ಸುಮ್ಮನಿರುತ್ತಾರೆ..
ಕೆಲವರು ಎದುರಿಗೆ ಹೇಳುತ್ತಾರೆ...
ನನ್ನ ಎದುರಿಗೆ ನನ್ನ ದೋಷ ಹೇಳುವ ಆತ್ಮೀಯರು
ನನಗೆ ಇದ್ದಾರಲ್ಲ ಎನ್ನುವ ಖುಷಿ ನನಗಿದೆ....

ನೀವು ಹೇಳಿದ ಹಾಗೆ "ಹ್ರ್‍ಅದಯ" ಅಂತ ಬರೆದಿದ್ದೇನೆ...
ನೀವೇ ನೋಡಿ.. ಸರಿಯಾಗಿ ಬರುತ್ತಿಲ್ಲ...
ಹರೀಷ್, ಮತ್ತೆ ಯಾರಾದರೂ ನಮ್ಮನೆಗೆ ಬಂದಾಗ ತಿದ್ದಿಕೊಳ್ಳುವೆ...

ನಿಮ್ಮ ಪ್ರತಿಕ್ರಿಯೆಗೆ ಯಾವಾಗಲೂ ಕಾಯುತ್ತಿರುತ್ತೇನೆ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಗೀತಾ.....

ಅಹಂಕಾರದಿಂದ ನಮಗೆ ಎಷ್ಟು ಖುಶಿಯಾಗುತ್ತದೆ ಗೊತ್ತಾ...?
ನಮ್ಮ ಕಾರಿನ ಬಗೆಗೋ, ಮನೆಯ ಬಗೆಗೋ ಬಹಳ ಹೆಮ್ಮೆಯಿಂದ..
ಅದರ ಖರ್ಚಿನ ಬಗೆಗೆ ಹೇಳಿಕೊಳ್ಳುತ್ತೀವಲ್ಲ...
ಎದುರಿಗೆ ಇರುವ ಮನುಷ್ಯ ಯಾರೆಂದು ತಿಳಿಯದೆ ಅದು ತಪ್ಪು...
ಸ್ವಂತ ಮನೆ ಇರದವನ ಬಳಿ ನಮ್ಮನೆಯ ಬಗೆಗೆ, ಖರ್ಚು ಮಾಡಿದ ರೀತಿಯ ಬಗೆಗೆ ಹೇಳಿ ಕೊಳ್ಳುವದಿದೆಯಲ್ಲ..
ಅದು ಅಕ್ಷಮ್ಯ "ಅಹಂಕಾರ"

ನಿಮಗೆ ನನ್ನ ತಲೆಹರಟೆ ಕೆಲಸ ಇಷ್ಟವಾಗಿದ್ದಕ್ಕೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಪ್ರಭು....

ಮಹಾಭಾರತದಲ್ಲಿ ಧರ್ಮರಾಜನಿಗೆ "ಆತ್ಮಹತ್ಯೆ" ಮಾಡಿಕೊಳ್ಳುವಂಥ ಸನ್ನಿವೇಶವೊಂದು ಬರುತ್ತದೆ...
ಹೇಗೆ ಮಾಡಿಕೊಳ್ಳುವದು...?

ಅಗ ಕ್ರ್‍ಅಷ್ಣ ಸಲಹೆ ಕೊಡುತ್ತಾನೆ...
"ಧರ್ಮರಾಯ... ನೀನು ನಿನ್ನ ಆತ್ಮ ಪ್ರಶಂಸೆ ಮಾಡಿಕೊ..
ಅದು ಆತ್ಮ ಹತ್ಯೆಗೆ ಸಮ" ಅಂತ.....

ಶ್ರೀಮಂತರು ದಿನಾಲು ಲೆಕ್ಕವಿಲ್ಲದಷ್ಟು ಬಾರಿ "ಆತ್ಮ ಹತ್ಯೆ" ಮಾಡಿಕೊಳ್ಳುತ್ತಾರೆ....

ನಿಮ್ಮ ಬ್ಲಾಗಿನ "ದಾಂಪತ್ಯದ" ಸೊಬಗಿನ ಲೇಖನಗಳು ಬಹಳ ಇಷ್ಟವಾಗುತ್ತದೆ...
ಬೇಜಾರಾದಾಗ ನಿಮ್ಮ ಬ್ಲಾಗಿಗೆ ಹೋಗಿ ಬಂದರೆ ಖುಶಿಯಾಗುತ್ತದೆ...

ನನ್ನ ಹುಚ್ಚುತನ ಮೆಚ್ಚಿಕೊಂಡಿದ್ದಕ್ಕೆ ವಂದನೆಗಳು....

ಸಿಮೆಂಟು ಮರಳಿನ ಮಧ್ಯೆ said...

ಗುರು.....

ಈ ಲೇಖನದ ಶುರುವಿನಲ್ಲೇ "ನಾನು ಹೇರ್ ಕಟಿಂಗ್ ಸಲೂನಿನಲ್ಲಿ" ಕೆಲಸಕ್ಕೆ ಹೊರಟಿದ್ದೇನೆಂದು ಹೇಳ ಬಹುದಿತ್ತು...
ಸ್ವಲ್ಪ ಟ್ವಿಸ್ಟ್, ಮತ್ತು ಸಸ್ಪೆನ್ಸ್ ಇರಲಿ ಎಂದು ಹೀಗೆ ಬರೆದೆ...

ಇನ್ನೊಂಡು ನೀವು ಗಮನಿಸಿರ ಬೇಕು...
ಈ ಲೇಖನ ಎರಡು ಬಾರಿ ಓದುತ್ತೀರಿ....

ನಾನು ಸಾಯಿಸಲಿಕ್ಕೆ ಹೊರಟ ಮನುಷ್ಯ "ನಮ್ಮೊಳಗಿನ ಅಹಂಕಾರ" ಎಂದು ತಿಳಿದಾಗ..
ಮತ್ತೊಮ್ಮೆ ಓದಿರುತ್ತೀರಿ...
ನಾನು ವರ್ಣಿಸಿರುವ ಮನುಷ್ಯನ ಕಲ್ಪನೆ ಸರಿಯಾಗಿದೆಯಾ ತಿಳಿಸಿ....

ಈ ಪ್ರಯೋಗ ಸರಿನಾ..? ಇಷ್ಟವಾಗಬಹುದಾ..?

ಎಂದೆಲ್ಲಾ ಕುತೂಹಲವಿದೆ....

ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ನಿಮ್ಮ ಬ್ಲಾಗಿನ ಹುಡುಕಾಟಗಳು ಬಲು ಮಸ್ತ್ ಇರುತ್ತವೆ ಗುರು....

PARAANJAPE K.N. said...

ಪ್ರಕಾಶರೆ, ಒ೦ದೊಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಓದಿದ ಹಾಗಾಯಿತು. ಬಹಳ ಚೆನ್ನಾಗಿ ಕಟ್ಟಿದ್ದೀರಿ. ಕಥನಕ್ರಮ ಚೆನ್ನಾಗಿದೆ. ಹೌದು, ನಮ್ಮೊಳಗಿನ ಅಹ೦ಕಾರ ನಮ್ಮ ಮೊದಲ ಶತ್ರು, ಅದನ್ನು ಕೊಲ್ಲಬೇಕು. ಚೆನ್ನಾಗಿದೆ. ಇನ್ನಷ್ಟು ಸರಕು ನಿಮ್ಮ ಸ್ಟಾಕಿನಿ೦ದ ಹೊರಬರಲಿ.

Ranjana Shreedhar said...

ಪ್ರಕಾಶಣ್ಣ....

'ಇಷ್ಟ ಆಗದವರೊಡನೆ ಬದುಕುವದೇ ಜೀವನಾ...!!' ಅಂತ ಟೈಟಲ್ ನೋಡಿ, 'ಸಂಬಂಧ' ಗಳ ನಡುವಿನ ಮಾತನ್ನ ಹೇಳಕ್ಕೆ ಹೊರಟಿದಿರ ಅಂದುಕೊಂಡೆ. ಓದೋಕೆ ಸ್ಟಾರ್ಟ್ ಮಾಡಿದಾಗ ಏನೋ ಸಸ್ಪೆನ್ಸ್ ಕತೆ ಅಂತ ಅನಿಸ್ತು... ಆದರೆ ಕೊನೆಗೆ ಗೊತ್ತಾಯ್ತ ನೀವು ಸಲೂನ್ ಅಂಗಡಿಗೆ ಹೊರಟಿದ್ದಿರ ಅಂತ... ಯಾಕೆ? ನೀವು ಕೊಲ್ಲಬೇಕು ಅಂದುಕೊಂಡ ಆ ಮನುಷ್ಯ ಯಾರು?! ಓದುಗರ ತಲೆಗೊಂದು 'ಹುಳ' ಬಿಟ್ಟಿದಿರ... ನಿಜವಾಗಲೂ ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ. ಇದು ನಿಮ್ಮ ಅನುಭವದ ಒಂದು ಭಾಗ ಅನಿಸುತ್ತೆ ಅಲ್ಲವ? ಮುಂದೆ ಏನಾಗಿರಬಹುದು ಅಂತ ಯೋಚಿಸೋಕೆ ಸ್ಟಾರ್ ಮಾಡಿದಿನಿ... ಬೇಗ ನೀವೇ ಹೇಳಿಬಿಡ್ತಿರ ಅನ್ಕೊತಿನಿ....!!

ಕ್ಷಣ... ಚಿಂತನೆ... Thinking a While.. said...

ಪ್ರಕಾಶ್ ಸರ್‍, ಲೇಖನ ಕುತೂಹಲಭರಿತವಾಗಿ ಭರದಿಂದ ಓದುವಂತೆ ಮಾಡಿತು.
??????
?????
ಮುಂದೇನು? ಎಂಬ ಕುತೂಹಲದಿಂದ...ಕಾಯುವಂತೆ ಮಾಡಿದೀರಿ!!!

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ಒಳ್ಳೆ ಸಸ್ಪೆನ್ಸ್ ಸ್ಟೋರಿ...

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನಿಮ್ಮ ಕಥೆ ಬಹಳ ಕುತೂಹಲಕಾರಿಯಾಗಿದೆ. ಕಥೆ ಹೆಣೆದ ರೀತಿ ನಿಜಕ್ಕೂ ಅದ್ಭುತ.
ಮುಂದಿನ ಸಂಚಿಕೆಗೆ ಕಾಯುತ್ತಿರುವೆ.

PaLa said...

ಬರಹದ ಶೈಲಿ ತುಂಬಾ ಸೊಗಸಾಗಿದೆ, ಕೊನೇಯವರೆಗೂ ಕೂತೂಹಲ ಉಳಿಸಿಕೊಂಡು ಓದಿಸಿಕೊಂಡು ಹೋಗಿದೆ. ನಿಮ್ಮ ವೇಷ ಭೂಷಣದ ಬಗ್ಗೆ ಕೊಟ್ಟ ವಿವರಣೆ ಕಣ್ಣಿಗೆ ಕಟ್ಟುವಂತಿದೆ. ನಿಮ್ಮ ಮೊದಲನೆಯ ಕಾಮೆಂಟಿನಲ್ಲಿ ಇದರ ಬಗ್ಗೆ ಹೇಳದೆ ಕುತೂಹಲ ಉಳಿಸಿದ್ದರೆ ಇನ್ನೂ ಚೆನ್ನಾಗಿತ್ತು. ಮುಂದಿನ ಕಂತಿಗೆ ಕಾಯುತ್ತಾ..

Anonymous said...

wht a suspense till the end!!!

nimma haage enaadroo maadokke naneg aagolvalla anta anista ide!!!

ita a pleasure to read ur blogs..keep wirting!

ಬಾಲು said...

ಅ ತರ ಮಾಡೋದ್ರಿಂದ ಬದುಕನ್ನು ಮತ್ತು ಹಸನು ಮಾಡ್ಕೊಬಹುದ? ನಾವು ಇನ್ನೆಲ್ಲೋ ನಾವಾಗದೆ ಬದುಕುವುದು. ಒಳ್ಳೆಯ ಕಾನ್ಸೆಪ್ಟ್. ಆದರೆ ಇದಕ್ಕೆ ತುಂಬ ಇಚ್ಚಾಶಕ್ತಿ ಬೇಕು.

ಮುಂದಿನ ಕಂತಿನಲ್ಲಿ ಅ ಪ್ರಯೋಗ ದಿಂದ ಆದ ಮಾನಸಿಕ ವಾಗಿ ಲಾಭಗಳೇನು ಆದುವು ಅಂತ ಬರೆಯಿರಿ.

ಮತ್ತೆ ಬರಹದ ಶೈಲಿ ಕೂಡ ಚೆನ್ನಾಗಿದೆ.

vinuta said...

baravanige enoo chennagide.suspect eke? helikollalu kashta tane?

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ......

ಈ ಅಹಂಕಾರ ಅಗತ್ಯವಾಗಿ ನಮ್ಮಲ್ಲಿ ಇರಬೇಕು...
ಸ್ವಲ್ಪ... ಎಲ್ಲಿ ಅಗತ್ಯವೋ ಅಲ್ಲಿ....

ತೀರಾ ಒಳ್ಳೆಯತನದ ಜಂಬ ಕೂಡಾ "ಅಹಂಕಾರವೇ...." ಅನಿಸುತ್ತದೆ...

ಅಹಂಕಾರ ನಾನು ಗೆದ್ದಿದ್ದೇನೆ...
ನನಗೆ ಅ"ಅಹಂಕಾರ ಇಲ್ಲ" ಅನ್ನುವಲ್ಲೂ ಅಹಂಕಾರದ ಇರುವಿಕೆ ಕಾಣಿಸುತ್ತದೆ...

ಅಹಂಕಾರ ಖುಷಿಯನ್ನೂ ಕೊಡುತ್ತದೆ...
ನಮಗೆ ಅರಿವಿಲ್ಲದಂತೆ ನಮ್ಮೊಳಗೆ ನುಸುಳಿ...
ನಮ್ಮವರನ್ನು ದೂರ ಮಾಡುತ್ತದೆ....

ನಾನು ಈ ಲೇಖನದಲ್ಲಿ ...
ನಾನು ಸಾಯಿಸಲಿಕ್ಕೆ ಹೊರಟ ವ್ಯಕ್ತಿ ನನ್ನ ಒಳಗಿನ "ಅಹಂಕಾರ"
ಎಂದರೆ ಲೇಖನದ ಸ್ವಾರಸ್ಯ ಇಷ್ಟಾಗಿ ಇರುತ್ತಿರಲಿಲ್ಲ ಎನ್ನುವದು ನನ್ನ ಅನಿಸಿಕೆ....

ನನ್ನೊಳಗಿನ "ಅಹಂಕಾರವನ್ನು" ವ್ಯಕ್ತಿಯಂತೆ ಚಿತ್ರಣ ಮಾಡದಿದ್ದರೆ...
ನೇರವಾಗಿ ನನ್ನ ದೌರ್ಬಲ್ಯದ ಬಗೆಗೆ ಬರೆಯ ಬೇಕಾಗಿತ್ತು...
ಅದನ್ನು ಹೀಗೆ ಬರೆದರೆ ತಪ್ಪಿಸ ಬಹುದಲ್ಲ....!!

"ವಿನೂತಾ" ರವರು ಊಹಿಸಿದ ಹಾಗೆ...

ದೌರ್ಬಲ್ಯದ ಬಗೆಗೆ ನೇರವಾಗಿ ಹೇಳುವದು ಸ್ವಲ್ಪ ಕಷ್ಟವೆನಿಸಿತು......

ಪ್ರತಿಕ್ರಿಯೆಗೆ ಧನ್ಯವಾದಗಳು.....

ಜಲನಯನ said...

ಪ್ರಕಾಶ್, ಓದಲು ಮೊದಲು ಮಾಡಿದಂತೆಲ್ಲಾ...ತಲೆ ಕೆಡಿಸ್ಕೋ ಬಾರ್ದು...ತಲೆ ಕೆಡಿಸ್ಕೋ ಬಾರ್ದು...ಅಂದ್ಕೊಂಡೇ ಓದ್ದೆ...ಮತ್ತೆ..ಮತ್ತೆ..ಅದೇ..ನಿರ್ಧಾರ...ಕೊನೆಗೆ ಬರುವ ಹೊತ್ತಿಗೆ...ಈಗೀಗ ಕಡಿಮೆಯಾಗುತ್ತಿರುವ ತಲೆಕೂದಲು ಜಾಸ್ತಿ ಆಗ್ತಾ ಇವೆ ಅನ್ನಿಸಿದ್ದು ನನ್ನ ಮಗಳು See Abba (ಡ್ಯಾಡಿ ಅನ್ನೊಲ್ಲ..ಅಬ್ಬಾ..ಅಂತ ಕನ್ನಡದಲ್ಲಿ ಬರೆದರೆ ಬೇರೆ..ಅರ್ಥ ಅಬ್ಬಾ!!! ಆಗಿಬಿಡುತ್ತೆ)..ನಿನ್ನ ತಲೆಕೂದಲು ಅಡ್ಡಾದಿಡ್ಡಿ ಬೆಳ್ದುಬಿಟ್ಟೈತೆ...ಅಂತ ಹೇಳಿದಾಗಲೇ...ಏನು ಮಾಡ್ಕೋಬಾರ್ದು ಅಂತ ಇದ್ನೋ ಅದನ್ನ ಮಾಡ್ಕೊಂಡಿದ್ದೆ ಅಂತ....ಅಂದರೆ...ನಿಮ್ಮ ಲೇಖನದ ಸಸ್ಪೆನ್ಸ್ ಹುಡುಕೋ ಪ್ರಯತ್ನ ದಲ್ಲಿ......ತಲೆ ಕೆಡಿಸ್ಕೊಂಡಿದ್ದೆ......!!! ಓಕೆ..ಓಕೆ...wait ಮಾಡ್ತೇನೆ...ನೀವು ತಿಳಿಸೋವರ್ಗೆ.....

ಬಿಸಿಲ ಹನಿ said...

ನಮಗೆ ಇಷ್ಟವಾಗದವರ ಜೊತೆ ಬದುಕುವದು, ಇಷ್ಟವಾಗದ್ದನ್ನು ಮಾಡುವದೇ ಜೀವನ ಎಂಬ ಗಹನ ವಿಚಾರವನ್ನು ತುಂಬಾ ಸೂಚ್ಯವಾಗಿ ಸಸ್ಪೆನ್ಸ್ ಕತೆಯ ಮೂಲಕ ಹೇಳಿದ್ದೀರಿ. ಸಾಮಾನ್ಯ ಘಟನೆಗಳನ್ನೇ ಅಸಾಮಾನ್ಯ ಸಂಗತಿಗಳನ್ನಾಗಿ ಪರಿವರ್ತಿಸುವ ನಿಮ್ಮ ಕೌಶಲ್ಯಕ್ಕೆ ಬೆರಗಾಗಿದ್ದೇನೆ. Thanks for the nice article.

ಸಿಮೆಂಟು ಮರಳಿನ ಮಧ್ಯೆ said...

ರಂಜನಾ....

ನಾವು ಸಂಬಂಧಗಳಲ್ಲಿ ಮಾತ್ರವಲ್ಲ....
ಗುಣಗಳಲ್ಲೂ "ವಿರುದ್ಧ"ಗಳ ಸಂಗಡ ಬದುಕುತ್ತೇವೆ....
ಪ್ರತಿ ಕ್ಷಣದಲ್ಲೂ ಸಂಘರ್ಷ ನಡೆದಿರುತ್ತದೆ...
ಹೇಗೆ ಸಂಬಂಧಗಳಲ್ಲಿ "ಅನಿವಾರ್ಯತೆ" ನಮ್ಮನ್ನು ಕೂಡಿಸಿರುತ್ತದೊ...
ಹಾಗೆ ಇಲ್ಲಿಯೂ ಕೆಲ "ಅನಿವಾರ್ಯತೆ"
ನಮ್ಮನ್ನು ಕಾಡುತ್ತದೆ...
"ವಿರುದ್ಧಗಳು" ನಮ್ಮನ್ನಗಲಿ ಹೋಗುವದಿಲ್ಲ....

"ವಿರುದ್ಧಗಳೋಡನೆಯೇ ಬದುಕು...."

ಅಹಂಕಾರ ಬಿಡ ಬೇಕೆಂದರೂ ಎಲ್ಲಿಯೋ ಒಂದುಕಡೆ ಸುಪ್ತವಾಗಿ ಕುಳಿತಿರುತ್ತದೆ....

ಪ್ರತಿಕ್ರಿಯೆಗೆ ವಂದನೆಗಳು.....

ಸಿಮೆಂಟು ಮರಳಿನ ಮಧ್ಯೆ said...

ಕ್ಷಣ ಚಿಂತನೆ....

ನಾವೊಂದು ಬೈಕ್ ಖರಿದಿಸುತ್ತೇವೆ..
ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ...
ದಿನಾಲು ಬಸ್ಸಿನಲ್ಲಿ ಓಡಾಡುವನ ಬಳಿ..
ಬೈಕಿನ ಬಗೆಗೆ ಹೇಳಿದರೆ ಅವನು ನಿಮಗೆ "ಅಹಂ' ಜಾಸ್ತಿಯಾಗಿದೆ ಅಂದುಕೊಳ್ಳುತ್ತಾನೆ....

ನಮಗೆ "ಆ ಬಗೆಗೆ ಕಲ್ಪನೆ ಇಲ್ಲದಿದ್ದರೂ ಅವನ ದ್ರಷ್ಟಿಯಲ್ಲಿ ನಮಗೆ "ಅಹಂಕಾರ" ಬಂದು ಬಿಟ್ಟಿರುತ್ತದೆ...

ಕೆಲವೊಮ್ಮೆ ಈ "ಅಹಂಕಾರ" ಅರ್ಥವೇ ಆಗುವದಿಲ್ಲ....

ಪ್ರತಿಕ್ರಿಯೆಗೆ ವಂದನೆಗಳು...

preethi said...

tumbaa chennagide sir.

ಉಮೇಶ ಬಾಳಿಕಾಯಿ said...

ಪ್ರಕಾಶ್ ಸರ್,

ಅಬ್ಬಾ! ಇಂತಹ ವಿಚಿತ್ರ ಸಾಹಸಗಳಿಗೆಲ್ಲ ಕೈ ಹಾಕ್ತೀರಾ ನೀವು!? ಅಹಂ ಅನ್ನು ಮೆಟ್ಟಿ ನಿಲ್ಲುವ ನಿಮ್ಮ ಪ್ರಯತ್ನ ಶ್ಲಾಘನೀಯ. ನಿರೂಪಣಾ ಶೈಲಿ ನಿಮ್ಮ ಮೊದಲಿನ ಎಲ್ಲ ಬರಹಗಳಿಗಿಂತ ಚೆನ್ನಾಗಿದೆ, ತುಂಬಾ ಕುತೂಹಲ ಕೆರಳಿಸ್ತು; ಒಳ್ಳೇ ಪತ್ತೇದಾರಿ ಕಥೆ ಓದಿದಂಗಿತ್ತು. ಮತ್ತೆ, ನಿಮ್ಮ ಪ್ರಯತ್ನದಲ್ಲಿ ಯಶಸ್ಸು ಕಂಡಿರಾ? ಬೇಗ ಮುಂದಿನ ಭಾಗ ಬರಲಿ.

- ಉಮೀ :)

ರೂಪಾ said...

ಪ್ರಕಾಶ್ ಸಾರ್
ಮೊದಲ ಕೆಲವು ಸಾಲುಗಳ ಓದುತ್ತಾ ಇದ್ದಾಗ ಯಾವುದೋ ಕಥೆ (ಪತ್ತೆದಾರಿ ಕಥೆ ) ಬರೆದಿದ್ದಾರೇನೋ ಎಂದುಕೊಂಡೆ. ನಂತರ ನಿಮ್ಮ ಹೆಸರಿನ ಉಪಯೋಗ ನೋಡಿ ಇದ್ಯಾವುದೋ ಟ್ರಿಕ್ ಇರಬೇಕು ಅಂತ ಉಹಿಸಿಕೊಂಡೆ
ಅರ್ಧ ಓದುತ್ತಿದ್ದಂತೆ ಯಾರೋ ಬಂದು ಕೊರೆಯ ಹಚ್ಚಿದರು. ನನಗೋ ಇಲ್ಲಿ ನಿಮ್ಮ ಕಥೆಯ ಮುಂದಿನ ಭಾಗ ಓದುವ ತವಕ ಅವರನ್ನು ಬೇಗ ಬೇಗ ಸಾಗ ಹಾಕಿ ಕೊನೆಯ ಸಾಲುಗಳ ಓದುತ್ತಿದ್ದಂತೆ ಕುತೂಹಲ ಕರಗಿ ನಿಜಕ್ಕೂ ಒಳ್ಳೇ ಯೋಜನೆ ಅಂತನ್ನಿಸಿತು.
ಬರಹ ಚೆನ್ನಾಗಿದೆ
ಇನ್ನೇನೋ ಊಹಿಸಿಕೊಳ್ಳುತ್ತಿದ್ದೆ (ಪಕ್ಕಾ ಕ್ರೈಮ್ ಸ್ಟೋರಿ ಸಿಗುತ್ತೇನೋ ಅಂತ)
:)

Dr. B.R. Satynarayana said...

ಪ್ರಕಾಶ್ ಸರ್ ಒಳ್ಳೆಯ ಸಸ್ಪೆನ್ಸ್! ಚೆನ್ನಾಗಿ ಹಿಡಿದಿಟ್ಟುಬಿಟ್ಟಿತ್ತು. ನಿಮ್ಮ ಕಥನ ಶಯಲಿಯ ಬಗ್ಗೆ ಈ ಹಿಂದೆಯೂ ಬರೆದಿದ್ದೆ. ಅದು ದಿನದಿಂದ ದಿನಕ್ಕೆ ಮಾಗುತ್ತಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಈ ಬರಹದಲ್ಲಿ ಒಂದು ಅಸಹಜತೆ ನನಗೆ ತೋಚಿತು. ಅದು ಎಷ್ಟರಮಟ್ಟಿಗೆ ಸರಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದು ಹೀಗಿದೆ. ಶ್ರೀನಿವಾಸರಾಜು ಕೊಟ್ಟ ವಿಳಾಶ ಹಿಡಿದು ನೀವು ಹೊರಟಿದ್ದೀರಿ. ಆಗ ಶ್ರೀನಿವಾಸ ರಾಜು ಫೋನ್ ಮಾಡಿ
" ಹೆಗಡೆಯವರೆ.....
ಆ ಮನುಷ್ಯ ಸಿಕ್ಕಾಪಟ್ಟೆ ಕೋಪಿಷ್ಟ...!
ತಾಳ್ಮೆ ಇಲ್ಲ....!
ತುಂಬಾ ಎಚ್ಚರಿಕೆ.. ಹುಷಾರಾಗಿ ಇರಬೇಕು....!
ನಾನು ಬಂದು ಬಿಡ್ಲಾ......?. ನೀವು ನನ್ನ ಪರಿಚಯ ಅಂತ ಹೇಳೋದಿಲ್ಲ...
ಅವನ ಶಾಪಿನಲ್ಲಿ ಅವನ ಬಳಿ ಮಾತಾಡುತ್ತಾ ಕುಳಿತಿರ್ತೀನಿ...."
ಎನ್ನುತ್ತಾನೆ.
ಕೊನೆಯ "ನೀವು ನನ್ನ ಪರಿಚಯ ಅಂತ ಹೇಳೋದಿಲ್ಲ...
ಅವನ ಶಾಪಿನಲ್ಲಿ ಅವನ ಬಳಿ ಮಾತಾಡುತ್ತಾ ಕುಳಿತಿರ್ತೀನಿ...." ಎಂಬ ಸಾಲುಗಳು ಗೊಂದಲಕ್ಕೆ ಕಾರಣವಾಗಿವೆ. ಶ್ರೀನಿವಾಸರಾಜು ಅವರೇ ನಿಮ್ಮನ್ನು ಕಳುಹಿಸುತ್ತಿರುವುದಾಗಿ ಆ ಆಸಾಮಿಗೆ ಫೊನ್ ಮಾಡಿರುತ್ತೇನೆ ಎಂದಿದ್ದರಲ್ಲ! ಮತ್ತೆ ಈ ಸಾಲುಗಳು ಬೇಕಾಗಿತ್ತೆ?

ಸಿಮೆಂಟು ಮರಳಿನ ಮಧ್ಯೆ said...

ಶಿವ ಪ್ರಕಾಶ್....

ನನ್ನ ಹೊಸತನದ ಪ್ರಯೋಗ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಡಾ. ಗುರುಮೂರ್ತಿಯವರೆ....

ನಿಜ ಅನುಭವಕ್ಕೆ ಸ್ವಲ್ಪ "ಮಸಾಲೆ" ಸೇರಿದ್ದೇನೆ (ಮಾತಿಗೆ)..
"ಅಹಂಕಾರ " ಎಂದು ಮೊದಲೇ ಹೇಳಲಿಲ್ಲ....

ಹಾಗಾಗಿ ಸಸ್ಪೆನ್ಸ್ ಅನಿಸಿದೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಪಾಲಚಂದ್ರ....

ನಾನು ಬರೆದುದು ಅರ್ಥ ಆಗಿಲ್ಲವೇನೋ ಅನ್ನಿಸಿತು....
ಮುಂದಿನ ಸಂಚಿಕೆಯಲ್ಲಾದರೂ ಹೇಳಲೇ ಬೇಕಿತ್ತು...

ನನಗೆ "ಅಹಂಕಾರ" ಉಪಮೆ ಕೊಡುವದಕ್ಕಿಂತ..
ಆ ಅನುಭವ ಹೇಳಿಕೊಳ್ಳುವದು ಮುಖ್ಯ ಅನಿಸಿತು...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಸುಮನಾರವರೆ....

ಇಂಥಹ ಹುಚ್ಚುತನಗಳನ್ನು ಬಹಳಷ್ಟು ನಾನು, ನಮ್ಮ ಗೆಳೆಯರು ಮಾಡಿದ್ದೇವೆ...
ನಿಮ್ಮ ಪ್ರತಿಕ್ರಿಯೆ ಓದುತ್ತಿದ್ದ ಹಾಗೆ ಕಾಲೇಜಿನ ದಿನಗಳಲ್ಲಿ...
ನಾವು ಮಾಡಿದ..
ಇಂಥಹುದೇ ಘಟನೆ ನೆನಪಾಗುತ್ತಿದೆ....
ಅದನ್ನು ಬ್ಲಾಗಿನಲ್ಲಿ ಬರೆವೆ...

ನೆನಪಿಸಿದ್ದಕ್ಕೆ...
ಲೇಖನ ಮೆಚ್ಚಿದ್ದಕ್ಕೆ
ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಬಾಲು ಸರ್....

ಇದು ಒಂಥರಾ ಹುಚ್ಚುತನವೇ ಸರಿ...
ಇದರಿಂದ ಆದ ಲಾಭಗಳೇನು...?

ಖಂಡಿತ ಅಗಿದೆ...
ಮುಂದಿನ ಕಂತಿನಲ್ಲಿ...ಬರೆವೆ....

ಪ್ರತಿಕ್ರಿಯೆಗೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ವಿನುತಾ....

ನನ್ನ ಲೇಖನದಲ್ಲಿ "ಅಹಂಕಾರವನ್ನು" ನನ್ನ ಬೇಡವಾದ ಗೆಳೆಯನೆಂದು ಚಿತ್ರಿಸಿದ್ದೇನೆ...
ಅಹಂಕಾರ ಎಂದು ಹೇಳಿಬಿಟ್ಟಿದ್ದರೆ ಸ್ವಾರಸ್ಯ ಕಡಿಮೆ ಅಗುತ್ತಿತ್ತು ಎನ್ನುವದು ನನ್ನ ಅನಿಸಿಕೆ...

ನೇರವಾಗಿ "ಅಹಂಕಾರ" ಅಂತ ಹೇಳಿಬಿಟ್ಟಿದ್ದರೆ..
ನನ್ನ ದೌರ್ಬಲ್ಯದ ಬಗೆಗೆ ಹೇಳಲೇ ಬೇಕಾಗಿತ್ತು...
ಅದು ಸ್ವಲ್ಪ ಕಷ್ಟ...

ಉಪಾಯವಾಗಿ..
ಉಪಮೆಮೂಲಕ ಹೇಳಿದ್ದು ಸರಿಯಲ್ಲವೇ..?

ಇಷ್ಟಪಟ್ಟಿದ್ದಕ್ಕೆ ವಂದನೆಗಳು....

ಸಿಮೆಂಟು ಮರಳಿನ ಮಧ್ಯೆ said...

ಜಲನಯನ....

ಸಸ್ಪೆನ್ಸ್ ಇಷ್ಟವಾಗಿದ್ದು ಖುಷಿಯಾಗುತ್ತದೆ...
ಶ್ರೀನಿವಾಸ್ ರಾಜು ಬಳಿ ಮಾತಾಡುವಾಗ ನಿಜ ಹೇಳಿ ಬಿಡೋಣ ಅನಿಸಿತು...

ಆದರೆ ಕೊನೆಯಲ್ಲಿ ಹೇಳಿದರ್‍ಏ ಉತ್ತಮ ಅನಿಸಿತು...

ಈ ಸಸ್ಪೆನ್ಸ್ ಮೂಲ ಕಹೆಗೆ..
ಉದ್ದೇಶಕ್ಕೆ ತೊಡಕಾಗ ಬಾರದಲ್ಲ...
ಹಾಗಾಗಿ ಇದೇ ಲೇಖನದಲ್ಲಿ ಹೇಳಿದೆ...
ಪ್ರತಿಕ್ರಿಯೆಗೆ ವಂದನೆಗಳು....

ನಿಮ್ಮ ಮಗನಿಗೂ ಶುಭಾಶಯಗಳು...

ಸಿಮೆಂಟು ಮರಳಿನ ಮಧ್ಯೆ said...

ಉದಯ್..(ಬಿಸಿಲ ಹನಿ)

ನಾವು ಯಾವಾಗಲೂ ನಮ್ಮ ಸಂಗಡ ಇರುವ
"ವಿರುದ್ಧಗಳ" ಸಂಗಡವೇ ಬದುಕುತ್ತೇವೆ...
ಅದು ಸಂಬಂಧಗಳಲ್ಲೂ ಇರಬಹುದು...
ನಮ್ಮ ಗುಣ ಸ್ವಭಾವಗಳಲ್ಲೂ ಇರಬಹುದು...
ಸಂಘರ್ಷ ಇದ್ದೇ ಇದೆ...

ನಮ್ಮದಲ್ಲದ ಜಾಗದಲ್ಲಿ...
ನಾವು ನಾವಾಗಿರದೆ...
ಕೆಲಸ ಮಾಡಿದ ಅನುಭವ ನನ್ನದಾಯಿತು...

ಅದರಿಂದ ಏನು ಲಾಭ ...?

ಮುಂದಿನ ಕಂತಿನಲ್ಲಿ ಬರೆವೆ....

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Annapoorna Daithota said...

ಚೆನ್ನಾಗಿದೆ :)

ನನ್ನ ಅನಿಸಿಕೆ; ಇದು ತೆವಲು ಅಥವಾ ಹುಚ್ಚುತನ ಅಲ್ಲ, ಜೀವನೋತ್ಸಾಹದ ಒಂದು ರೀತಿ. ಯಾಂತ್ರಿಕವಾಗುವ ಬದಲು, ಈ ಥರ, ಅಥವಾ ಮನಸ್ಸಿಗೊಪ್ಪುವ ಬದಲಾವಣೆಗಳಿದ್ದರೇ ಬದುಕು ಸುಂದರ.

jayalaxmi said...

andukonDiddannu maaDibiDuva nimma guNa iShTavaaytu..

ವಿನುತ said...

ನಿಮ್ಮ ಈ ಬರಹದಲ್ಲೊ೦ದು ವೈವಿಧ್ಯತೆ ಇದೆ. ಮೊದಲಿಗೆ ನಾನೆಲ್ಲೋ ನಿಮ್ಮ ಕೂದಲು ಕತ್ತರಿಸುವುದೋ ಅಥವಾ ಯಾವುದೋ ಹಳೇ ವಸ್ತು ಮಾರುವುದರ ಬಗ್ಗೆ ಹೇಳುತ್ತಿದ್ದಿರೆನೋ ಎ೦ದುಕೊ೦ಡೆ. ಆದರೆ, ಕೊನೆಯಲ್ಲಿ ಒಳ್ಳೆಯ ತಿರುವು ಕೊಟ್ಟಿದ್ದೀರಿ. ಹಾಸ್ಯ ಮತ್ತು ಸಸ್ಪೆನ್ಸ್ ನೊ೦ದಿಗೆ ಒ೦ದು ಉತ್ತಮ ವಿಚಾರಯುತ ಲೇಖನ. ನಿಮ್ಮ ಮು೦ದಿನ ಅನುಭವಗಳಿಗಾಗಿ ಕಾಯುತ್ತ..
-ವಿನುತ

Anonymous said...

ee reethiyaagi baredu nimma bloginalli odugarannu katti hakibittidiralla sir......

nannallu nim thara nooraru huchchu yochane ide..eradu baari success kooda aagide.

ondu dodda asena nanna snehithara munde elidaaga nakku-baidu summanagiddaru...

nimge ista aaythu andre,,,
ondu sala jotheyaagi aa kelasakke kai haakona,,, enanthira?????


inti nimma pritiya,

shivashankara vishnu yalavathi

www.shivagadag.blogspot.com

ಧರಿತ್ರಿ said...

ಪ್ರಕಾಶ್ ಸರ್..ನಿಮ್ಮ ಕಮೆಂಟುಗಳು ಅರ್ಧಶತಕ ಬಾರಿಸಿದ ಮೇಲೆ ನಾನಿಲ್ಲಿ ಬಂದಿರುವೆ..ಕ್ಷಮಿಸಿಬಿಡಿ! ನಿಮ್ಮ ಬರಹ ಯಾವಾಗಲೂ ಹೀಗೇ. ಕುತೂಹಲ..ಕುತೂಹಲ..ಕುತೂಹಲ! ಆಮೇಲೆ ಧಾರವಾಹಿ ತರ..ಮುಂದಿನ ಭಾಗದಲ್ಲಿ ನಿರೀಕ್ಷಿಸಿ..ಹೆಹೆಹೆ! ಚೆನ್ನಾಗೈತೆ ಸರ್..ನಿಮ್ಮ ಬೊಂಬಾಟ್ ಐಡಿಯಾ. 'ಇಷ್ಟ ಆಗದವರ ಜೊತೆ ಬದುಕುವುದೇ ಜೀವನ' ಈ ಪರಿಕಲ್ಪನೆ ತುಂಬಾನೇ ಇಷ್ಟವಾಯಿತು..ಇಷ್ಟವಿಲ್ಲದವರ ಜೊತೆ ನಾವು ಬದುಕಾಕೆ ಕಲಿತೆವು ಅಂದ್ರೆ ನಾವು ನಿಜವಾಗಲೂ ಜೀವನದಲ್ಲಿ ಬದುಕಾಕೆ ಕಲಿತಿದ್ದೀವಿ ಅಂತ ಅಲ್ವಾ?
-ಧರಿತ್ರಿ

Geeta said...

Namaskara....
nimma ella lekhanada haage idu tubha chenagi banju.startingninda konevarigu suspense ittkandu bandiddu,oodale jasti khushi kodtu.matte ee AHANKARA hechina janaralli irtu,aadre adanna bittu badakale tubha jana ista padathville.aadre neevu adranna manasinda kittakale hair cutting shopvaregu hogiddu neejavaglu mechhabekadde.you'r GRATE!!!!!!!!!!

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯವರೆ.....

ಅನುಭವ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು....

ಬರುತ್ತಾಇರಿ...

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್....

ಇಂಥಹ ಹುಚ್ಚು ಐಡಿಯಾಗಳು ಕೆಲವು ಬಾರಿ ಕುತ್ತಿಗೆಯವರೆಗೆ ಬಂದಿದ್ದೂ ಇದೆ....

ಐಡೆಂಟಿಟಿಯಲ್ಲಿ "ಅಹಂಕಾರ" ಇದೆ ಅಂತ ನನ್ನ ಅನಿಸಿಕೆ...
ನಮಗೆ ಬಹಳ ತೊಂದರೆ ಕೊಡುವದು ಆ "ಐಡೆಂಟಿಟಿ...."

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

ಪ್ರೇಮಿಗೆ ಬರೆದ ನಿಮ್ಮ ಲೇಖನ ಸಕತ್ ಆಗಿದೆ...

ಸಿಮೆಂಟು ಮರಳಿನ ಮಧ್ಯೆ said...

ರೂಪಾ....

ನಾನು ಮೊದಲು ಓದಿದ್ದು "ಪತ್ತೆದಾರಿಗಳನ್ನು"
ಸಿಕ್ಕಾಪಟ್ಟೆ ಆಸಕ್ತಿಯಿಂದ ಓದುತ್ತಿದ್ದೆ....
ಈಗಲೂ ಪತ್ತೆದಾರಿಯೆಂದರೆ ಖುಷಿ....

ಅವುಗಳ ಪ್ರಭಾವ ನನ್ನ ಬರಹಗಳಲ್ಲಿ ಆಗಿರ ಬಹುದು...

ನಿಮ್ಮ ಉತ್ಸಾಹ ಭರಿತ ಪ್ರತಿಕ್ರಿಯೆ ಖುಷಿಯಾಗುತ್ತದೆ...

ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಾಯಣರೆ.....

ನಿಮ್ಮ ಅನುಮಾನ ಸರಿಯಿದೆ....

ಸಸ್ಪೆನ್ಸ್ ಕ್ರಿಯೇಟ್ ಮಾಡುವ ಭರದಲ್ಲಿ ನನ್ನಿಂದ ಆ ತಪ್ಪಾಗಿದೆ...
ಅದನ್ನು ಈಗ ಸರಿಪಡಿಸಿದ್ದೇನೆ....

ನನ್ನದಲ್ಲದ ಜಾಗದಲ್ಲಿ ನಾನಾಗಿರದೆ...
ಬೇರೆಯವರಾಗಿ ಒಂದುದಿನ ಇರುವದು...
ಎಷ್ಟು ರಿಸ್ಕ್, ಮತ್ತು ಎಷ್ಟು ಅಪಾಯಕಾರಿ ಎನ್ನುವ ಕಹಿ ಅನುಭವ ನನಗಾಗಿದೆ....

ಪ್ರತಿಕ್ರಿಯೆಗೆ ಹ್ರದಯ ಪೂರ್ವಕ ವಂದನೆಗಳು....

ಸಿಮೆಂಟು ಮರಳಿನ ಮಧ್ಯೆ said...

ಅನ್ನಪೂರ್ಣಾರವರೆ....

ನಿಮ್ಮ ಮಾತು ಅಕ್ಷರಸಹ ಸತ್ಯ....

ಬದುಕು ನಿಂತ ನೀರಾಗ ಬಾರದು...
ಹೊಸತನ, ಕುತುಹಲ ಇರಬೇಕು...
ನಮ್ಮ ಹಿರಿಯರು ಎಷ್ಟು ಆಸಕ್ತಿಯಿಂದ ಜೀವನ ನಡೆಸುತ್ತಿದ್ದರು...!!
ನಮ್ಮದು ತೀರಾ ಯಾಂತ್ರಿಕ ಜೀವನ ಆಗ್ತಾ ಇದೆ....

ಮನಸ್ಸು ಬಿಚ್ಚಿ ನಗಲೂ ಸಹ ನಮ್ಮಿಂದ ಆಗ್ತಾ ಇಲ್ಲ....

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಜಯಲಕ್ಷ್ಮೀಯವರೆ......

ಐಡೆಂಟಿಟಿ ನಮಗೆ ತೊಂದರೆ ಕೊಡುತ್ತದೆ...
ನಾನು ಹೊರಟಿರುವದು "ನಮ್ಮದಲ್ಲದ" ಪ್ರಪಂಚಕ್ಕೆ...

ಅದರಿಂದ ಲಾಭವೇ ಹೊರತು ಹಾನಿಯಿಲ್ಲ ಎನ್ನುವದು ನನ್ನ ಅನುಭವ....

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ವಿನೂತಾರವರೆ....

ಅನೇಕ ನನ್ನ ಸ್ನೇಹಿತರು ನನ್ನನ್ನು ಕೇಳಿದರು...
"ಈ ವಿಷಯಕ್ಕೆ ಸಸ್ಪೆನ್ಸ್ ಬೇಡಾಗಿತ್ತು...
ವಿಷಯವೇ ಬಹಳ ಗಹನವಾಗಿದೆ" ಎಂದು...

ಆದರೆ ಮೊದಲೇ ನೇರವಾಗಿ ವಿಷಯ ಗೊತ್ತಾಗಿ ಬಿಟ್ಟಿದ್ದರೆ ಏನೂ ಹೊಸತನ ಇರುತ್ತಿರಲಿಲ್ಲ ಅನ್ನುವದು ನನ್ನ ವಾದ...

ಹೀಗೆ ಬರೆದದ್ದರಿಂದ ಎರಡು ಬಾರಿ ಓದ ಬೇಕಾಗುತ್ತದೆ....

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವಾ ಗದಗ್...

ನಿಮ್ಮ ವಯಸ್ಸಿನಲ್ಲಿ ಇಂಥಹ ಹುಡುಗಾಟಿಕೆ ಬಹಳಷ್ಟು ಮಾಡಿದ್ದೇನೆ....
ಕಾಲೇಜಿನಲ್ಲಂತೂ ನಮ್ಮ ಪುಂಡಾಟಿಕೆ ಸಕತ್ ಇರ್ತಿತ್ತು....
ಬೇರೆಯವರಿಗೆ ನೋವಾಗದ ಹಾಗೆ...

ನಿಮ್ಮ ಇಂಥಹ ವಿಚಾರ ಇದ್ದಲ್ಲಿ ಖಂಡಿತ ತಿಳಿಸಿ....
ಚೆನ್ನಾಗಿದ್ದರೆ ಖಂಡಿತ ನಮ್ಮ ಪ್ರೋತ್ಸಾಹ..
ಸಹಕಾರ ಇದೆ...

ಇದನ್ನು ಓದಿದದ ಅನೇಕ ಮಿತ್ರರು ಹೊಸ, ಹೊಸ ಐಡಿಯಾ ತರುತ್ತಿದ್ದಾರೆ...
ನನಗೆ ಈಮೇಲ್ ಮಾಡಿ...

ನಿಮ್ಮ ಉತ್ಸಾಹಕ್ಕೆ ಅಭಿನಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಧರಿತ್ರಿ....

ಇಷ್ಟ ಆಗದವರೊಡನೆ ಬದುಕುವದೇ ಜೀವನಾ....

ನಮ್ಮ ಗುಣ ಸ್ವಭಾವಗಳು...
ಕೆಲವೊಂದು ನಮಗೇ ಇಷ್ಟವಾಗುವದಿಲ್ಲ...

ಅ ಸ್ವಭಾವಗಳ ಸಂಗಡ ನಾವು ಬದುಕುವದಿಲ್ಲವೇ...?

ವ್ಯಕ್ತಿ ಸಂಬಂಧಗಳ ಸಂಗಡವೂ ಹಾಗೇ ಆಗುತ್ತದೆ....

ನೀವು ಯಾವಾಗಲಾದರೂ ಬನ್ನಿ...

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ..
ಹಾಗು ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಗೀತಾರವರೆ....

ನಾನು ಕಷ್ಟಪಟ್ಟು ಮೇಲೆ ಬಂದವನು...
ನನ್ನಲ್ಲಿ ಅಹಂಕಾರ ಇಲ್ಲ ಅನ್ನುವ ಸ್ವಭಾವದಲ್ಲೂ "ಅಹಂಕಾರದ ಛಾಯೆ ಕಾಣುತ್ತದೆ"
ಒಟ್ಟಿನಲ್ಲಿ ನಮ್ಮ ಐಡೆಂಟಿಟಿ....
ನಮಗೆ ಹೆಚ್ಚಿನ ಸಮಯ ಶತ್ರುವಾಗಿರುತ್ತದೆ...

ಈ ಐಡೆಂಟಿಟಿಯಿಂದ ತುಂಬಾ ಹತ್ತಿರದವರು ...
ದೂರವಾದರೂ ಗೊತ್ತಾಗದ ಮನಸ್ಥಿತಿ ಅದು...
ಅರ್ಥವಾದರೂ ಒಪ್ಪಿಕೊಳ್ಳದ ಮನಸ್ಥಿತಿ ಅದು....

ಚಂದದ ಪ್ರತಿಕ್ರಿಯೆಗೆ ವಂದನೆಗಳು....

Sakkat TASTY! said...

Dear friend

We are the regular viewers (and also readers) of your blog.. Hats off to you..

We are running a food catering company, named "Sakkat" in Bangalore. You can go through the website www.sakkatfood.com for complete details.. There, we have a special service called "Food for thought". We need very interesting, innovative, fresh, thought provoking, damn good writing for our customers.. We believe that your writing has that power. We gladly appreciate if you can contribute for this service by giving us your masterpiece writings.. Our Head-H.R.Section will get back to you if you need any clarifications about the mode of work we expect from you.

You can also feel free to reach us via e-mail (service@sakkatfood.com, sakkatchef@gmail.com) or via phone (94814 71560).

Expecting your positive response :)
Sakkat team

koundinya said...

sir ee kathe neevu nanage heliddiri aadare eerthi barvanige naanu nijakkoo nirkshisralilla
nijakkoo super nanagannisuvudu istte ee nimma lekhanavannu prathiyobbaroo odalebeku aagale nammanu naavu ariyalu saashay