Thursday, July 2, 2009

ಯಾವ ಹೂವು.... ಯಾರ ಮುಡಿಗೋ...! ಯಾರ ಒಲವು.. ಯಾರ ಕಡೆಗೋ...!!

part 3


ಲ್ಲ ಹುಡುಗರಿಗೂ ದೊಡ್ಡ ಸಮಸ್ಯೆ ಧುತ್ತೆಂದು ಎದುರಿಗೆ ಬಂದು ಬಿಟ್ಟಿತು...

ಕಾಲೇಜಿನಲ್ಲಿ ನಡೆವ "ರಕ್ಷಾ ಬಂಧನ " ಹೇಗೆ ಎದುರಿಸುವದು....?

ನಾಗು ಎಲ್ಲರಿಗೂ ಧೈರ್ಯ ಹೇಳಿದ..
"ನೋಡ್ರೊ.. ಎಲ್ಲದಕ್ಕೂ ಪರಿಹಾರ ಇದ್ದೇ ಇದೆ..
ನಿಮಗೆಲ್ಲ ಯಾವ ಹುಡುಗಿ ಇಷ್ಟ ಅಂತ ಮೊದಲು ಲೀಸ್ಟ್ ಕೊಡಿ"

ತೆಂಗಿನ ಕಾಯಿ ಸೀತಾಪತಿ ತಲೆ ಕೆರೆದು ಕೊಂಡ..

"ನಾಗು ನನ್ನ ಕೇಸು ಇನ್ನೂ ಮನಸ್ಸಲ್ಲೇ ಇದೆ ಕಣೊ..
ನನ್ನ ಬಳಿ ಲೀಸ್ಟ್ ಇದೆ ... ಈ..
ಆರು ಜನರಲ್ಲಿ ಯಾರಾದರೂ ಒಬ್ಬರು ಅಂತ...
ಆರು ಜನ ರಾಖಿ ಕಟ್ಟದೆ ಇದ್ರೆ ಆಯ್ತು ನೋಡು..."

ತನ್ನ ಸಮಸ್ಯೆ ಇಟ್ಟ...

" ಎಲ್ಲರದ್ದೂ ಇದೇ ಸಮಸ್ಯೆ ಏನ್ರೋ...?..
ಓಕೆ ಮಾರಾಯ್ರ.....
ಎಲ್ಲರೂ ಗಪ್ಪತಿ ಬಳಿ ತಮ್ಮ ಲೀಸ್ಟ್ ಕೊಡ್ರೊ.."
ಅಂತ ನನ್ನನ್ನು ಕಾಲೇಜು ಮೈದಾನಕ್ಕೆ ಎಳೆದು ಕೊಂಡು ಹೋದ...

"ಪ್ರಕಾಶು...
ನಾನು "ರಾಜಿ" ಇಷ್ಟ ಪಡ್ತಿದ್ದೀನಿ ಅಂತ ಗೊತ್ತಿದ್ದೂ..
ಗಪ್ಪತಿ ಹೀಗೆ ಮಾಡಿದ್ದಾನಲ್ಲ...!
ಈ ದಿನ ಗಪ್ಪತಿಗೆ ಬರೆದು ಕೊಡೊ..
ವಿಷಯ , ರೂಪ ಬದಲಾವಣೆ ಆಗ ಬೇಕು....
ಈಗ ನೀನು ಲೇಖನ ಬರಿಯಬೇಕು...."

"ಲೇಖನ ಬಹಳ ಸುಲಭ ಕಣೋ...
ಎಸ್ಸೇ .. ನಿಬಂಧ .. ಥರ ಅಲ್ವೇನೋ..
ಬರೀತಿನಿ ಬಿಡು..."

"ಲೋ... ಲೇಖನ ಅಂದ್ರೆ...
ಹೇಗೇಗೋ ಬರೆದು ಬಿಡ ಬೇಡ...
ಅದಕ್ಕೂ..ಒಂದು ರೀತಿ.. , ನೀತಿ ಇದೆ...
ಒಳ್ಳೇ... ಗೌಳಿ ಎಮ್ಮೆ...
ಉಚ್ಛೆ ಹೊಯ್ದ ಹಾಗೆ ಬರಿ ಬೇಡ..."

"ಎಮ್ಮೆ ಉಚ್ಛೆ ಹೊಯ್ದ ಹಾಗಾ..?..!!..?
ಲೇಖನಕ್ಕೂ ಎಮ್ಮೆ... ಉಚ್ಛೆ ಹೊಯ್ಯುವದಕ್ಕೂ ...
ಏನು ಸಂಬಂಧ ಮಾರಾಯಾ...?"

"ಲೋ... ಎಮ್ಮೆ ಉಚ್ಚೆ ಹೇಗೆ ಹೊಯ್ತದೆ ನೋಡೀದೀಯಾ..?"

" ನೋಡಿದ್ರೂ... ನೆನಪಾಗ್ತ ಇಲ್ಲ...
ಕಲ್ಪನೆ ಬರ್ತಾ ಇಲ್ಲ...!!"

"ಎಮ್ಮೆ ಹೇಗೆ ಹುಚ್ಛೆ ಹೊಯ್ತದೆ..?
ನಾಲ್ಕೂ ಕಾಲು ಅಗಲಿಸಿ...
ಬಾಲ ಮೇಲಕ್ಕೆ ಎತ್ಗೊಂಡು.....
ಬೆನ್ನು ಬಗ್ಗಿಸಿ..
ಪ್ರೀತಿಯಿಂದ... ಆಕಾಶಾ ನೋಡ್ತಾ....
ಜೊಳ.. ಜೊಳ ಅಂತ...
ಒಂದೇ ಸಮನೆ ....
ಬಕೆಟಲ್ಲಿದ್ದ ನೀರು ತಲೆಗೆ ಹೊಯ್ಕೊಳ್ಳೋ ಹಾಗೆ
ಒಂದೇ ಉಸುರಿಗೆ ಎಲ್ಲವನ್ನೂ ಭರ್ರ್ ಎಂದು ಹೊಯ್ದು ಮುಗಿಸ್ತದೆ......"

" ಛೇ... ಛೇ....!! "

"ನೀನು ಹೇಳುವ ವಿಷಯ ಪ್ಯಾರಾ ಮಾಡಿ ಹೇಳು..
ಓದುವವನಿಗೆ ಸ್ವಲ್ಪ ಮಧ್ಯದಲ್ಲಿ ಬ್ರೇಕ್ ಕೊಡು..
ವಿಶ್ರಾಂತಿ ಕೊಡು...
ಬುಡದಿಂದ.. ಕೊನೆತನಕ...
ಒಂದೇ ಪ್ಯಾರಾಗ್ರಾಫ್ ನಲ್ಲಿ...
ಎಮ್ಮೆ ಉಚ್ಛೆ ಹೊಯ್ದ ಹಾಗೆ... ಮಾಡಬೇಡ...
ಅದಕ್ಕೊಂದು... ಲಯ.., ಹದ .. ಇರಬೇಕು..
ಇಲ್ಲಾ ... ಅಂದ್ರೆ...
ಓದುವವ.. ಎದ್ದೋಗಿ ಬಿಡ್ತಾನೆ ಅಷ್ಟೆ.."

" ಅರ್ಥ ಆಯ್ತು ಗುರುವೆ... ಈಗ ವಿಷ್ಯ ಹೇಳು ಪುಣ್ಯಾತ್ಮಾ... "
ನಾಗು ವಿಷಯ ಹೇಳುತ್ತ ರೂಮಿಗೆ ಕರೆದು ಕೊಂಡು ಹೋದ...
ಅವನು ಹೇಳಿದ ರೀತಿಯಲ್ಲಿ ಲೇಖನ ಬರೆದು ಕೊಟ್ಟೆ...

ಮರುದಿನ ಬೆಳಿಗ್ಗೆ ನಾಗು
ನಮ್ಮ ಗುಂಪಿನವರನ್ನು ಕರೆದು ಹೇಳಿದ...
"ನೋಡ್ರೋ...
ನಮ್ಮ ಕ್ಲಾಸಿನಲ್ಲಿ ಕೆಲವು ಪುಣ್ಯಕೋಟಿ ಹಸುಗಳಿವೆ..."

ಉಮಾಪತಿ ತಲೆ ಕೆರೆದು ಕೊಂಡ...

"ಪುಣ್ಯಕೋಟಿ ಹಸುಗಳಾ...? ಏನೋ ಹಾಗಂದ್ರೆ..?"

"ನೋಡ್ರೋ...
ಕೆಲವು ಹೆಣ್ಣುಮಕ್ಕಳನ್ನ ನೋಡಿದ್ರೆ...
ಏನೂ.. "ಭಾವನೆ".. ಬರಲ್ಲ...
ನೋಡಿದರೆ ತಂಗಿ ಅಂತ ಮನಸ್ಸಿಗೆ ಅನಿಸಿ ಬಿಡ್ತದೆ..
ಅಂಥಹ ನಾಲ್ಕು ಗೋವುಗಳನ್ನು ನೀವೇ ರೆಡಿ ಮಾಡಿ ಕೊಳ್ಳಿ...
ಅವರಿಗೆ ಮೊದಲೇ ತಿಳಿಸಿಡಿ..ನನಗೆ ನೀವೆ ರಾಖಿ ಕಟ್ಟಿ ಅಂತ..
ಅವರಿಗೆ ಗಿಫ್ಟ್ ಅಂತ ಕಾಸೂ ಕೊಡಿ.."

ಎಲ್ಲರಿಗೂ ಬಹಳ ಸಂತೋಷವಾಯಿತು...
ಮುಖ ಅರಳಿತು...

ನಾಗು ಮತ್ತೆ ಹೇಳಿದ..
"ಇಷ್ಟೇ ಸಾಲದು ...
ನಾಳೆ ಬೆಳಿಗ್ಗೆ ಅರ್ಧ ಗಂಟೆ ಮೊದ್ಲು ಬನ್ನಿ ..
ಇನ್ನೊಂದು ರಕ್ಷಣಾ ತಂತ್ರ ಇದೆ...
ಪ್ರತಿಯೊಬ್ಬರೂ ಅದನ್ನು ಮಾಡಿಕೊಳ್ಳಲೇ.. ಬೇಕು..."

ಎಲ್ಲರೂ ಖುಷಿಯಿಂದ ತಲೆ ಹಾಕಿ..
ತಮ್ಮ... ತಮ್ಮ ..ಪುಣ್ಯಕೋಟಿ ಹಸುಗಳನ್ನು ಹುಡುಕ ಹೊರಟರು...

ನಾಗು ಪೆಟ್ಟಿಗೆ ಗಪ್ಪತಿ ಕರೆದು ಪತ್ರ ಕೊಟ್ಟ...

ಗಪ್ಪತಿಗೆ ಆಶ್ಚರ್ಯ "ಇದೇನೋ ಸ್ವಲ್ಪ ದಪ್ಪ ಇದೆ..?'

ನಾಗು ಮುಗುಳ್ನಕ್ಕ ... "ನೀನು ಕೊಟ್ಟು ಬಾರೋ ಸಾಕು ..
ಹುಡುಗಿ ಓಡಿ ಬರ್ತಾಳೆ..." ಅಂದ...

ಗಪ್ಪತಿಗೆ ಖುಷಿಯಯಿತು...

ಮರುದಿನ ಬೆಳಿಗ್ಗೆ ಎಲ್ಲರೂ ನಾಗುವಿನ ರೂಮಿನ ಎದುರಿಗೆ ಜಮಾಯಿಸಿದ್ದರು...

ಏನು ಮಾಡ್ತಾನೆ ಈ ನಾಗು ಅಂತ ಕೆಟ್ಟ ಕುತೂಹಲ....!

ನಾಗು ರೂಮಿನಿಂದ ಬಂದವನೇ...
ಪ್ರತಿಯೊಬ್ಬರಿಗೂ ಒಂದೊಂದು ಪ್ಯಾಕ್ ನೀಡಿದ...!

ಎಲ್ಲರೂ ಬಿಚ್ಚಿ ನೋಡಿದರು..!

ಅದರಲ್ಲಿ "ರಾಖಿಯಿತ್ತು...."

"ಲೇ ನಾಗು ಇದೇನೋ.. ಇದು ..??..!
ಏನೋ ಮಾಡ್ತೀಯಾ ಅಂದುಕೊಂಡರೆ ..
ನಿನೂ ಪ್ರಿನ್ಸಿಪಾಲ್ ಆಗಿಬಿಟ್ಯಲ್ಲೋ..."

" ಲೋ ಮಕ್ಕಳ್ರಾ....
ಆ ಹೆಣ್ಣುಮಕ್ಕಳು ಕಟ್ಟೋಕ್ಕಿಂತ ಮೊದ್ಲು...
ನಿಮಗೆ ನೀವೆ ಕಟ್ಗೋ ಬಿಡಿ...
ಅಕಸ್ಮಾತ್ ನಿಮ್ಮ ಮನಸ್ಸಿನಲ್ಲಿರೋ ಹುಡುಗಿಯರು ಕಟ್ಟಲಿಕ್ಕೆ ಬಂದರೆ..
"ನನಗೆ ಇಷ್ಟೆಲ್ಲ .. ಕಟ್ಟಿಬಿಟ್ಟಿದ್ದಾರೆ....
ಕೈ ..ಕಾಲಿ.. ಇರೋರಿಗೆ ಕಟ್ಟಿ.."
ಅಂತ ಅವರಿಗೆ ಹೇಳಿ..."


ಎಲ್ಲ ಹುಡುಗರಿಗೂ ನಾಗುವಿನ ಮೇಲೆ ಭಯಂಕರ ಕ್ರತಜ್ಞತೆ ಬಂದು ಬಿಟ್ಟಿತು....

ನಾವೆಲ್ಲ ಕೈತುಂಬಾ ರಾಖಿ ಕಟ್ಟಿಕೊಂಡು ಕಾಲೇಜಿಗೆ ಹೋದೆವು...

ಸಭೆಯಲ್ಲಿ ಪ್ರಿನ್ಸಿಪಾಲರು ಗಂಭೀರವಾಗಿದ್ದರು...

"ಎಷ್ಟು ಜನ ಇವತ್ತು ಬರಲಿಲ್ಲ...??..? "

ಅಂತ ಗಂಡು ಮಕ್ಕಳ ಕಡೆಗೇ ... ನೋಡಿದರು...

ನಾವೆಲ್ಲ ನಮ್ಮ ಕ್ಲಾಸಿನ ಗಂಡುಮಕ್ಕಳನ್ನು ಎಣಿಸಿದೆವು...

ಪೆಟ್ಟಿಗೆ ಗಪ್ಪತಿ ಬರಲೇ ಇಲ್ಲ...!!

ಅವನನ್ನು ಸೇರಿಸಿ ಒಟ್ಟೂ ನಾಲ್ಕೂ ಜನ ಬರಲಿಲ್ಲವಾಗಿತ್ತು...

ಪ್ರಿನ್ಸಿಪಾಲರು..
"ನೋಡಿ ರಾಖಿಯೆಂದರೆ ಅದು ಬರಿ ದಾರವಲ್ಲ..
ಕಟ್ಟುವ ದಾರದಲ್ಲಿ ಸಂಬಂಧ ಇರುವದಿಲ್ಲ...
ಅದರ ಹಿಂದಿನ ಭಾವದಲ್ಲಿ.
ಮೂಡುವ ಅನುಬಂಧದಲ್ಲಿರುತ್ತದೆ...

ಇಂದು ಬಾರದೇ ಇರುವ ವಿದ್ಯಾರ್ಥಿಗಳ ಬಗೆಗೆ...
ಎಲ್ಲೋ ಒಂದು ಕಡೆ ಹೆಮ್ಮೆ ಎನಿಸುತ್ತದೆ...

ಅವರು ಅದಕ್ಕೆ ಅಷ್ಟು ಮಹತ್ವ ಕೊಟ್ಟಿದ್ದಾರಲ್ಲ...ಎಂದು..

ಆದರೆ ಅವರಿಗೆಲ್ಲ ನಾಳೆ ಪನಿಶ್ಮೆಂಟು ಇದೆ.."

ಎಲ್ಲರೂ ರಾಖಿ ಕಟ್ಟಿಸಿ ಕೊಡರು...

ಹೆಚ್ಚಾಗಿ ಪುಣ್ಯಕೋಟಿ ಹಸುಗಳು ರಾಖಿ ಕಟ್ಟಿದರು...

ರಾಜಿ ನಮ್ಮ ಗುಂಪಿನ ಒಬ್ಬರಿಗೂ ರಾಖಿ ಕಟ್ಟಲು ಬರಲಿಲ್ಲ...

ಹುಡುಗರಿಗೆಲ್ಲ ಖುಷಿಯಾಗಿತ್ತು...

ರೂಮಿಗೆ ಬಂದೆವು...
ಪೆಟ್ಟಿಗೆ ಗಪ್ಪತಿ ರೂಮಿನಲ್ಲಿ ದೊಡ್ಡದಾಗಿ ಹಾಡು ಹೇಳಿಕೊಳ್ಳುತ್ತಿದ್ದ...

"ಯಾವ ಹೂವು... ಯಾರ ಮುಡಿಗೋ...
ಯಾರ ಒಲವು... ಯಾರ ಕಡೆಗೋ..."

ಉಮಾಪತಿ ನಾಗುವಿನ ಕಾಲೆಳೆಯಲು ಶುರು ಮಾಡಿದ...

"ನೀನು ಏನೇ ಹೇಳು ನಾಗು...
ಈ.. ಪೆಟ್ಟಿಗೆ ಗಪ್ಪತಿ....
ಗೊತ್ತಿದ್ದು .., ಗೊತ್ತಿದ್ದು..,ರಾಜಿ ಲವ್ವು ಮಾಡ ಬಾರದಿತ್ತು...
ಅದೂ ನಿನ್ನ ಸಹಾಯ ತೆಗೆದು ಕೊಂಡು...
ನೋಡು ಇಂದು ಚಕ್ಕರ್ ಹಾಕಿ..
ಪ್ರಿನ್ಸಿ ಹತ್ತಿರ ಗ್ರೇಟ್ ಅನ್ನಿಸ್ಕೊಬಿಟ್ನಲ್ಲ...!!.."

ಅಷ್ಟರಲ್ಲಿ ಹೆಣ್ಣು ಮಕ್ಕಳ ಗುಂಪೊಂದು ನಮ್ಮ ರೂಮಿನ ಹತ್ತಿರ ಬಂತು...!

ರಾಜಿಯ ಗುಂಪು...!!..??...!

ನಮಗೆಲ್ಲ ಗಾಭರಿಯಾಯಿತು...

ಸೀತಾಪತಿ ಸಣ್ಣಗೆ ಚೀರಿದ...

" ಆ... ಭೀಮನ ಮೀಸೆಯವ "ರಾಜಿ" ಅಪ್ಪ...!!
ಮಿಲಟರಿ ಸುಬ್ಬರಾಯ...!!!
ನಾಗೂ...
ಇವತ್ತು
ನಮ್ಮ ಕಥೆ ಮುಗಿಯಿತು...!!"


ಉಮಾಪತಿ ಮತ್ತೂ ಗಾಭರಿ ಆದ..!!

"ಅಲ್ಲಿ ನೋಡ್ರೋ...
ನಮ್ಮ ಲೆಕ್ಚರರ್ ಅವರ ಸಂಗಡ ಬರ್ತಾ ಇದ್ದಾರೆ..!!
ಯಾಕ್ರೋ...??!!..
.
..ಓಡಿ ಹೋಗೋಣ್ವಾ...??!!"

ನೋಡು ....ನೋಡುತ್ತಿದ್ದ ಹಾಗೆ ಅವರು ನಮ್ಮ ಬಿಲ್ಡಿಂಗ್ ಪ್ರವೇಶಿಸಿದರು.....

ನಮ್ಮೆಲ್ಲರ ಎದೆ ಢವ... ಢವ ಹೊಡೆಯ ತೊಡಗಿತು..

ಕವನದ ಬಗೆಗೆ ರಾಜಿ ಸೇಡು ತಿರಿಸ್ಕೋ ಬಹುದಾ...??...!!

ಆತಂಕ.... !!
ಭಯ....!!


ದಪ್ಪ ಮೀಸೆಯವ ನಮ್ಮನ್ನು ದುರುಗುಟ್ಟಿ ನೋಡಿದ ಹಾಗೆ ಅನಿಸಿತು....


(ದಯವಿಟ್ಟು ನಾನು ಬರೆದ
"
ನಗುವವರ ಮುಂದೆ ಎಡವಿ ಬೀಳ ಬೇಡ " ಓದಿ...
)
http://ittigecement.blogspot.com/2008/12/blog-post_14.html


( ನನ್ನ ಬ್ಲಾಗನ್ನು ಫಾಲೋ ಮಾಡುವವರ ಸಂಖ್ಯೆ ಶತಕ ದಾಟಿದೆ....

ಫಾಲೋ ಮಾಡದೆ ಓದುವವರ ಸಂಖ್ಯೆ ಇದಕ್ಕೂ ಮೀರಿದೆ...

ಖುಷಿಯಾಗುತ್ತದೆ...

It is a great feeling....!

ನಿಮ್ಮ ಪ್ರೋತ್ಸಾಹ , ಅಭಿಮಾನ, ಪ್ರೀತಿ ಹೀಗೆ ಇರಲಿ..

ಇದು ನನಗೆ ಇನ್ನೂ ಬರೆಯಲು ಉತ್ಸಾಹ ನೀಡುತ್ತದೆ....


ಎಲ್ಲ ಓದುಗರಿಗೂ ನನ್ನ ನಮನಗಳು...
ಪ್ರೀತಿಯಿಂದ...
ಇಟ್ಟಿಗೆ ಸಿಮೆಂಟು ...

55 comments:

Mahesh said...

ಪ್ರಕಾಶಣ್ಣ,
ಗಪ್ಪತಿ ಯಾಕೆ ರೂಮ್ ನಲ್ಲೆ ಉಳಿದ ಅನ್ತ ಗೊತಾಗಲಿಲ್ಲ. ಸುಬ್ಬರಾಯರು ಯಾಕೆ ಬನ್ದರು. ಇನ್ನು ಮುನ್ದಿನ ಭಾಗ ಇದೆ ಅನ್ತ ತಿಳಿದಿದೆ ಬೇಗ ನೋಡುವ ಕುತೂಹಲ. ಪುಣ್ಯಕೋಟಿ ಉಪಾಯ ಚೆನ್ನಾಗಿತ್ತು. ನನ್ನ ಮಗ ತನ್ನ ಅಮ್ಮನಿಗೆ ಪುಣ್ಯಕೋಟಿ ಅನ್ತನೆ ಕರೆಯೊದು ಅವನು ಕರು ಅನ್ತೆ.ಹಹಹಹ್ಹ

ಸಿಮೆಂಟು ಮರಳಿನ ಮಧ್ಯೆ said...

ಮಹೇಶ್....

ಗಪ್ಪತಿಗೆ ನಾಗುವಿನ ಉಪಾಯದ ಮೇಲೆ ಪೂರ್ತಿ ನಂಬಿಕೆ ಇತ್ತಿಲ್ಲವೇನೋ...
ಮಿಲಿಟರಿ ಸುಬ್ಬುರಾಯರು ರಾಜಿಯ ಅಪ್ಪ....
ಮಗಳ ಸಂಗಡ ಬಂದಿದ್ದಾರೆ...
ಯಾಕೆ....

ಮುಂದಿನ ಭಾಗಕ್ಕಾಗಿ ಕಯಬೇಕು...

ನಾವೆಲ್ಲ ಪುಣ್ಯಕೋಟಿ ಎಂದು ಕರೆಯುತ್ತೇವೆ ಅಂತ
ಒಮ್ಮೆ ಅವರೆಲ್ಲ ಜಗಳ ಮಾಡಿದ್ದರು ...

ಲೇಖನ ಇಷ್ಟವಾಗಿದ್ದಕ್ಕೆ ವಂದನೆಗಳು...

ರಾಜೀವ said...

ಪ್ರಕಾಶ್ ಅವರೇ,

ನೀವು ಎಮ್ಮೆಯ ವಿಷಯ ಹೇಳಬೇಕಾದಾಗಲೇ, ನೀವು ಈ ಭಾಗದಲ್ಲಿ ಕ್ಲೈಮ್ಯಾಕ್ಸ್ ಹೇಳುವುದಿಲ್ಲ ಎಂದು ತಿಳಿದುಬಂತು. ಇರಲಿ, ಮುಂದಿನ ಭಾಗಕ್ಕೆ ಕಾಯುತ್ತಿರುತ್ತೇನೆ.

ಎಮ್ಮೆಯನ್ನು ಇಷ್ಟು ಸೂಕ್ಶ್ಮವಾಗಿ ಗಮನಿಸಿದ ನಿಮ್ಮ ನಾಗಿ ಅಸಾಮಾನ್ಯನೇ ಹೌದು. ಪಾಪ ಗಪ್ಪತಿ.

ಸಿಮೆಂಟು ಮರಳಿನ ಮಧ್ಯೆ said...

ರಾಜೀವರವರೆ....

ನಾನು ಈ ಎಪಿಸೋಡಲ್ಲೇ ಮುಗಿಸಿದ್ದೆ...
ಸ್ವಲ್ಪ ಉದ್ದವಾಗಿತ್ತು...
ಸ್ನೇಹಿತ "ನಿತಿನ್ ಮುತ್ತಿಗೆ"
ಸ್ವಲ್ಪ ಕಟ್ ಮಾಡಿ ಎರಡು ಪಾರ್ಟ್ ಮಾಡಿದರೆ ಒಳ್ಳೆಯದು ಅಂದ....
ನನಗೂ ಹೌದೆನಿಸಿತು....

ಕವನ..
ಲೇಖನದ ಬಗೆಗೆ ನಾಗುವಿನ ಅನಿಸಿಕೆ, ತಿಳುವಳಿಕೆ...
ಇನ್ನೂ ಮುಗಿದಿಲ್ಲ...
ಮುಂದಿನ ಭಾಗದಲ್ಲಿ ಹೇಳುತ್ತಾನೆ ಓದಿ....

ಪ್ರತಿಕ್ರಿಯೆಗೆ ವಂದನೆಗಳು...

ಕ್ಷಣ... ಚಿಂತನೆ... Think a while said...

ಸರ್‍, ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಡುತ್ತಿದೆ ನಿಮ್ಮ ಸರಳ ಬರಹ. ಜೊತೆಗೆ ಒಂದಿಷ್ಟು ನಗು ಹಾಗೂ ಸಸ್ಪೆನ್ಸ್ ಹೀಗೆಯೇ ಮುಂದುವರೆಯಲಿ...

ಚಂದ್ರಶೇಖರ ಬಿ.ಎಚ್.

ಬಾಲು said...

ಹಹಹ ಚೆನ್ನಾಗಿದೆ.
ನಿಮ್ಮ ಪ್ರಿನ್ಸಿಪಾಲರು ಭಯಂಕರ ಒಳ್ಳೆಯವರು,
ರಾಕಿ ಹಬ್ಬದ ದಿನ ಬರದವರನ್ನು
ಗ್ರೇಟ್ ಅಂದು ಬಿಟ್ಟರಲ್ಲ!!! :) :)

shivu said...

ಪ್ರಕಾಶ್,

ಇದಂತೂ ಸಕ್ಕತ್ ಕುತೂಹಲ ಕೆರಳಿಸಿದೆ....

ಓದುತ್ತಿದ್ದಂತೆ ಎಲ್ಲವೂ ಕಣ್ಣಮುಂದೆ ಸಾಗಿದಂತೆ ಆಗಿ ಬಲು ಬಲು ಮಜ ಬಂತು.....ನಿಮ್ಮ ಕಾಲೇಜು ದಿನಗಳ ಐಡಿಯಾಗಳು, ಅನುಭವಗಳು, ಆಟಗಳೆಲ್ಲಾ ಒಳ್ಳೇ ಮಜವೆನಿಸುತ್ತೆ....ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ...

ಧನ್ಯವಾದಗಳು.

Ranjana Shreedhar said...

ಪ್ರಕಾಶಣ್ಣ,
ಸೂಪರ್....ಮುಂದಿನ ಭಾಗ ಯಾವಾಗ್ ಬರತ್ತೆ... ಕಾಯ್ತಾ ಇರ್ತೀನಿ...

ರವಿಕಾಂತ ಗೋರೆ said...

ಸೂಪರಾಗಿದೆ... ಮುಂದಿನ ಕಂತಿಗೆ ಕಾಯುತ್ತಿದ್ದೇನೆ...

ಸಿಮೆಂಟು ಮರಳಿನ ಮಧ್ಯೆ said...

ಕ್ಷಣ ಚಿಂತನೆ...

ಏನು ಮಾಡೋಣ... ಹೇಳಿ...?
NAAGU... ಬು ಬಲು ಚಾಲಾಕಿ...
ನಿಮಗೂ ಗೊತ್ತಾಗಿದೆ...
ರಾಜಿ...?
ಹೇಗಿದ್ದಾಳೆ... ಗೊತ್ತಿಲ್ಲ...
ಅಪ್ಪನ ಸಂಗಡ, ಲೆಕ್ಚರರ್ ಸಂಗಡ ನಮ್ಮೆಡೆಗೆ ಬರ್ತಿದ್ದಾಳೆ...
ಆ... ಕ್ಷಣ..
ಆ... ಟೆನ್ಷನ್ ನಮಗೇ.. ಗೊತ್ತು...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಬಾಲು ಸರ್....

ನಮ್ಮ ಪ್ರಿನ್ಸಿಪಾಲರು ಸಿಕ್ಕಾಪಟ್ಟೆ ಕಟ್ಟುನಿಟ್ಟಿನ ಜನ....

ಕಾರ್ಯಕ್ರಮಕ್ಕೆ ಬರದಿದ್ದವರಿಗೆ...
ಬಲು ಚೆನ್ನಾಗಿ ಸ್ಪೆಷಲ್ ಇತ್ತು....

ಅದನ್ನು ಹೇಳಿ ಬಿಡಲಾ...?

ಬೇಡ ಬ್ಲಾಗಿನಲ್ಲೇ ಓದಿ....

ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್....

ನಾನು ಬ್ಲಾಗ್ ಶುರುಮಾಡಿದಾಗ ಇಷ್ಟೆಲ್ಲ ಲೇಖನ ಬರೆಯುತ್ತೇನೆ....
ಇಷ್ಟೆಲ್ಲ ಉತ್ತೇಜನ ಸಿಗುತ್ತದೆ ಎಂದು
ಕನಸು, ಮನಸಲ್ಲೂ ಎಣಿಸಿರಲಿಲ್ಲ....

2008 ಡಿಸೆಂಬರ್ 14 ರಂದು
"ನಗುವವರ ಮುಂದೆ ಎಡವಿ ಬೀಳ ಬೇಡ" ಬರೆದೆ...

ನೀವು, ಮಲ್ಲಿಕಾರ್ಜುನ್..
ಆ ಘಟನೆ ಮುಂದುವರೆಸಲು ಆಗಲೇ ಹೇಳಿದ್ದ ನೆನಪು...

ಆದರೆ ಯಾಕೋ ಆಗಲಿಲ್ಲ....

ನನ್ನ ಪ್ರತಿಯೊಂದು ಹೆಜ್ಜೆ ಪ್ರೋತ್ಸಾಹಿಸುತ್ತ ಬಂದ ..
ನಿಮಗೆ...
ಎಲ್ಲರಿಗೂ ...
ಒಂದು ಸಿಹಿ ಸುದ್ದಿ ಕೊಡಲಿದ್ದೇನೆ...

ನಿರೀಕ್ಷಿಸಿ....

ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ರಂಜನಾ....

ನಿನ್ನೆ "ನಿತಿನ್ ಮುತ್ತಿಗೆ" ಹೇಳಿರದಿದ್ದರೆ ..
ಈ ಭಾಗದಲ್ಲೇ ಲೇಖನ ಮುಗಿಸಿದಿದ್ದೆ...

ಇನ್ನೂ ಉದ್ದವಾಗಿತ್ತು....

ಮೈಸೂರಿನಲ್ಲಿದ್ದರೂ....
ಲೇಖನ ಓದಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ರವಿಕಾಂತ್ ಗೋರೆಯವರೆ...

ಮುಂದಿನ ಲೇಖನದ ನಂತರ "ನಾಗುವಿನ " ಸಾಹಸಗಳಿಗೆ
ಸ್ವಲ್ಪ ವಿರಾಮ ಕೊಡಬೇಕೆಂದಿದ್ದೇನೆ...

ಏಕತಾನತೆ ಆಗಿಬಿಡಬಹುದು...

ಹೇಳುವದೂ ಇನ್ನೂ ಬಹಳ ಇದೆ...
ನಾಗು, ರಾಜಿ ಕಥೆ...
"ನಯನಾ ಮತ್ತು ಗಪ್ಪತಿ" ಪ್ರಕರಣ..
ಸೀತಾಪತಿ ಕಥೆ,
ಬೆಳಗಾವಿ ಚರ್ಚಾ ಸ್ಪರ್ಧೆ ಕಥೆ...
....................

ಲೇಖನ ಇಷ್ಟ ಪಟ್ಟಿದ್ದಕ್ಕೆ ವಂದನೆಗಳು....

NiTiN Muttige said...

ಪುಣ್ಯಕೋಟಿಯ ಉಪಮೆ ಸಕತ್ ಆಗಿದೆ ಮಾರಾಯ್ರೆ!!!...

ಗೀತಾ ಗಣಪತಿ said...

ಪ್ರಕಾಶಣ್ಣ,
ದ್ವೀತಿಯಾರ್ಧದಲ್ಲಿ ಪೆಟ್ಟಿಗೆ ಗಪ್ಪತಿಗೆ ತಕ್ಕ ಶಾಸ್ತಿ ಕಾದಿದೆ ಅಂತ ಅನ್ನಿಸ್ತ ಇದೆ, ಹೌದಾ? :)

vinuta said...

Raji ge gottittu ansatte Nagu vichara..Naguvina emme ucchehoyda hage ennuva barahada bagegina kalpane ishtavayitu. lekhana nagisutta munde sagide.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ರಾಖಿ ಯಾರಕೈಲಿ ಕಟ್ಟಿಸಿಕೊಳ್ಳಬೇಕು ಮತ್ತು ಕಟ್ಟಿಸಿಕೊಳ್ಳದಂತೆ ರಕ್ಷಣಾತಂತ್ರ... ಅಬ್ಬಬ್ಬಾ ನಿಮ್ಮ ನಾಗು ಐಡಿಯಾಗಳ ಕಣಜ.
ಪತ್ರವೆಂದರೆ ಎಮ್ಮೆ ಉಚ್ಚೆ ಉಯ್ದಂತಿರಬಾರದು ಎಂದು ವರ್ಣಿಸುವ ಪರಿ ಓದಿ ಬಿದ್ದು ಬಿದ್ದು ನಕ್ಕೆ.ನೀವು ಪತ್ರದಲ್ಲಿ ಏನು ಬರೆದಿದ್ದ್ರಿ? ರಾಜಿ ಗ್ಯಾಂಗ್ ಬಂದು ಏನು ಮಾಡಿದ್ರು? ಕುತೂಹಲ ತಡೆಯಲಾಗುತ್ತಿಲ್ಲ. ಯಂಡಮೂರಿಗೆ ಸೈಡ್ ಹೊಡೀತೀರ ನೀವು.

sunaath said...

ಭಯಂಕರ ಸಸ್ಪೆನ್ಸ್ ಇಟ್ಟುಕೊಂಡು ಹೊರಟಿದ್ದೀರಾ. ಕುತೂಹಲದಿಂದ ಮುಂದಿನ ಕಂತಿಗಾಗಿ ಎದುರು ನೋಡುತ್ತಿದ್ದೀನಿ.

ಉಮೇಶ ಬಾಳಿಕಾಯಿ said...

ಪ್ರಕಾಶ್ ಸರ್,

ಒಳ್ಳೇ ಕ್ರೈಮ್ ಸ್ಟೋರೀ ಥರಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸ್ತಾ ಇದೆ ನಿಮ್ಮ ಬರಹ. ಕಾಲೇಜಲ್ಲಿ ರಾಖಿ ಹಬ್ಬ ಬಂದಾಗ ನಿಮ್ಮ ನಾಗೂಗೆ ಹೊಳೆದ ಐಡಿಯಾ ಗಳೆಲ್ಲಾ ನಮಗೆ ಹೊಳೆಯುತ್ತಲೇ ಇರ್ಲಿಲ್ಲ ನೋಡಿ. ಮುಂದೆ ಏನಾಯ್ತು? ರಾಜಿ ಅಪ್ಪನ ಕೈಯಲ್ಲಿ ಎಲ್ಲರಿಗೂ ಲಾತ ಬಿದ್ದಾವಾ? ಅಥವಾ ಎಲ್ಲರಿಗೂ ರಾಜಿ ಅಪ್ಪಾಣೆ ಮುಂದೆ ನಿಂತು ರಾಜಿ ಕೈಲಿ ರಾಖಿ ಕಟ್ಟಿಸಿದರಾ? ಬೇಗ ಬರೀರಿ.. ಕುತೂಹಲ ತಡೆಯೋಕಾಗ್‍ತಿಲ್ಲ.

ಸಿಮೆಂಟು ಮರಳಿನ ಮಧ್ಯೆ said...

ನಿತಿನ್.....

ನಿಮ್ಮ ಸಲಹೆ ತುಂಬಾ ಉಪಯುಕ್ತವಾಯಿತು....
ಇಲ್ಲದಿದ್ದರೆ ಲೇಖನ ಇನ್ನೂ ಉದ್ದವಾಗಿ ಬಿಡ್ತಿತ್ತು....

ನಾಗುವಿನ ಬತ್ತಳಿಕೆಯಲ್ಲಿ ಇನ್ನೂ ಹೆಸರುಗಳಿವೆ...
ಸಿರ್ಸಿ ಕಾಲೇಜಿಗೆ ಬಂದಮೇಲೆ ಇನ್ನಷ್ಟು ಉಪಮೆಗಳ ಸ್ರಷ್ಟಿ ಆಯಿತು....

ಉಪಮೆ ಮತ್ತು ಲೇಖನ ಇಷ್ಟವಾಗಿದ್ದಕ್ಕೆ
ಮತ್ತು ..
ಉಪಯುಕ್ತ ಸಲಹೆ ಕೊಟ್ಟಿದ್ದಕ್ಕೆ
ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಗೀತಾ ಗಣಪತಿಯವರೆ...

ಇಟಲಿಯಿಂದ ಭಾರತಕ್ಕೆ ಬರುತ್ತಿದ್ದೀರಿ ಸ್ವಾಗತ....

ಮುಂದೇನು ಆಯಿತು ಅಂತ ನಿಮ್ಮ ಊಹೆಗೆ ಬಿಟ್ಟು ಬಿಟ್ಟಿದ್ದೇನೆ...

ರಾಜಿ ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿರಬಹುದಾ...?
ರಾಖಿ ಕಟ್ಟಿ ಕಾಂಪ್ರಮೈಸ್ ಆಗಲಿಕ್ಕೆ ಬಂದಿದ್ದಳಾ..?

ಅವಳ ಸಂಗಡ ನಮ್ಮ ಲೆಕ್ಚರರ್...!
ಮತ್ತು ...
ಮೀಸೆ ಮಿಲಿಟರಿ ಸುಬ್ಬರಾವ್...!!

ನಾನು ಏನು ಹೇಳಲಿ...?

ಲೇಖನ ಇಷ್ಟಪಟ್ಟಿದ್ದಕ್ಕೆ
ವಂದನೆಗಳು....

ಸಿಮೆಂಟು ಮರಳಿನ ಮಧ್ಯೆ said...

ವಿನುತಾ....

ನಾಗು ಬುದ್ಧಿವಂತ ನಮಗೆಲ್ಲ ಗೊತ್ತಿದೆ...

ರಾಜಿ ಬಗ್ಗೆ ಹೆಚ್ಚೇನೂ ವಿಷಯ ತಿಳಿದಿಲ್ಲ....
ಅಂದ ಇರುವವರಿಗೆ ಬುದ್ದಿ ಮಂದ...
ಅಂತ ಗಾದೆಯೊಂದಿದೆ....

ಹಾಗೆ ಇರಲಿಕ್ಕಿಲ್ಲ....

ನಮ್ಮ ನಾಗು...
ನನಗೆ..
ಲೇಖನ ಬರೆಯಲು ಕಲಿಸಿದ ಮೊದಲ ಗುರು....

ಅವನಿಗೆ ಅದ್ಭುತವಾದ ಕಾಮನ್ ಸೆನ್ಸ್ ಇದೆ....

ಆತನ ಬಳಿ ಇದ್ದು ಬಿಟ್ಟರೆ ಒಂದು ಹೊಸ ಪ್ರಪಂಚಕ್ಕೆ ಹೋಗಿ ಬರುತ್ತೇವೆ...
ಫ್ರೆಷ್ ಆಗಿ ಬಿಡುತ್ತೇವೆ...

ನಿಜಕ್ಕೂ ವಿಸ್ಮಯ ವ್ಯಕ್ತಿ ಆತ....

ರಾಖಿ ಪ್ರಕರಣ ಇಷ್ಟಪಟ್ಟಿದ್ದಕ್ಕೆ ವಂದನೆಗಳು...

ರೂpaश्री said...

ವಾಹ್ ಸೂಪರ್!
ನಿಮ್ಮ ನಾಗುದು ಸ್ವಾರಸ್ಯಕರ ವ್ಯಕ್ತಿತ್ವ.. ತಾನು ರಾಖಿಯಿಂದ ತಪ್ಪಿಸಿಕೊಳ್ಳೋದಲ್ಲದೆ, ತನ್ನ ಮಿತ್ರರನೆಲ್ಲಾ ಬಚಾವ್ ಮಾಡಲು ಮಸ್ತ್ ಪ್ಲಾನ್ ಮಾಡಿದ!!
ಮುಂದೇನು.. ಕಾಯ್ತಿದ್ದೇನೆ...

ಸಿಮೆಂಟು ಮರಳಿನ ಮಧ್ಯೆ said...

ಹುಡುಕಾಟದ ಮಲ್ಲಿಕಾರ್ಜುನ್....

ನಿಮ್ಮ ಈ ಬಾರಿಯ ಲೇಖನ ತುಂಬಾ ಚೆನ್ನಾಗಿದೆ....

ನಾಗುವಿನ ಉಪಾಯಗಳನ್ನು ಊಹಿಸುವದು ಬಹಳ ಕಷ್ಟ ಇತ್ತು....
ಹ್ರದಯವಂತ...
ಎಂಥಹುದೇ ಸಮಯದಲ್ಲೂ ಸಹಾಯ ಮಾಡಲು ಬರುತ್ತಿದ್ದ...
ಅವನೆಂದರೆ ನಮಗೆಲ್ಲ
ಬಹಳ ಭರವಸೆ....

ಎಂಥಹ ಕಷ್ಟದ ಸಮಯವಿರಲಿ
ತಾಳ್ಮೆಯ ಪರಿಹಾರವಿರುತ್ತಿತ್ತು....

ಪತ್ರವಲ್ಲ ಅದು...
ಅದೊಂದು ಲೇಖನದ ರೂಪ...
ಅದು ನಾಲ್ಕು ಪೇಜಿನಲ್ಲಿ ಬರೆದದ್ದು...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್.....

ನಿನ್ನೆ ನಾನು ನನ್ನ ಎಲ್ಲ ಲೇಖನಗಳ ಪ್ರತಿಕ್ರಿಯೆ ಓದಿದೆ.....
ನಿಮ್ಮ ಪ್ರತಿಕ್ರಿಯೆ ನನ್ನ ಮೊದಲ ಲೇಖನದಿಂದಲೂ ಇದೆ....!

ಸರ್ ನಿಮ್ಮ ಪ್ರೋತ್ಸಾಹ..
ಬೆನ್ನು ತಟ್ಟಿ ಉತ್ಸಾಹ ತುಂಬುತ್ತೀರಲ್ಲ....
(ನನಗಂತ ಅಲ್ಲ...)
ನನ್ನ ಬ್ಲಾಗ್ಮಿತ್ರರೆಲ್ಲರ ಪರವಾಗಿ..
ನಿಮಗೊಂದು ನಮನ....

ಈ ನಾಗು ಅಸಾಧ್ಯ ಬಿಡಿ ಸರ್...

ಇಷ್ಟಪಟ್ಟಿದ್ದಕ್ಕೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್.....

ಏನು ಅಂತ ಹೇಳಲಿ...?

ಭಯಂಕರ ಮೀಸೆ...
ದೊಡ್ಡ ಕಣ್ಣು...
ಮಿಲಿಟರಿ ಮೇಜರ್ ಸುಬ್ಬರಾವ್...!!
ನೋಡಿದರೆ ಭಯವಾಗುವ ವ್ಯಕ್ತಿತ್ವ....

ಆ ಮನುಷ್ಯನೋಡನೆ ಮಾತಾಡುವದಿರಲಿ..
ನೋಡಲಿಕ್ಕೂ ಭಯ....ಅದೂ ನಮ್ಮ ತಪ್ಪಿನ..ಅಪರಾಧಿ ಮನೋಭಾವ ಇಟ್ಟುಕೊಂಡು...

ರಾಖಿ ಪ್ರಕರಣ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಜಲನಯನ said...

ಪ್ರಕಾಶ್, ಅಲ್ಲಾ...ಒಂದು ಈಹೊತ್ತು..ಇತ್ಯರ್ಥ ಆಗೇ ಬಿಡ್ಲಿ, ಅಲ್ರೀ...ಇಟ್ಟಿಗೆ ಸಿಮೆಂಟ್ ಮಧ್ಯೆ ಇಷ್ಟೆಲ್ಲಾ ಸಸ್ಪೆನ್ಸ್, ಥ್ರಿಲ್ಲು, ದಿಲ್ಲು ಇರೋ ಬ್ಲಾಗ್ ಸರಣಿ ಪೋಸ್ಟ್ ಮಾಡ್ತೀರಲ್ಲಾ...??? ಯಾವ ಸಿಮೇಂಟ್ ಉಪಯೋಗಿಸ್ತೀರಿ...??? ತುಂಬಾ SUPER ರೀ......ಮುಂದೇನು ..?? ಫಿನಿಶಿಂಗ್ ಗೆ...glazed tiles ಆ..?? marbel ಆ?? ಒಟ್ಟಿನಲ್ಲಿ...ಸೂಪರ್ ಇರುತ್ತೆ ಬಿಡಿ...

ಸಿಮೆಂಟು ಮರಳಿನ ಮಧ್ಯೆ said...

ರೂಪಾರವರೆ....

ನಿಮಗೆ ನಾಗುವಿನ ಬಗೆಗೆ ಇನ್ನೂ ಹೇಳಬೇಕು..
ಅವನ ವ್ಯಕ್ತಿತ್ವದ ಚಿತ್ರಣ ಬಿಡಿಸಬೇಕು ಎಂದು
ಅನಿಸುತ್ತೆಯಾದರೂ...
ಅದು ಮುಂದಿನ ಲೇಖನಗಳ ಆಹಾರವಸ್ತು...
ಬಹಳ ಕಷ್ಟ ಪಟ್ಟು ತಡೆ ಹಿಡಿದ್ದಿದ್ದೇನೆ....

ಒಟ್ಟಿನಲ್ಲಿ ಅವನು ವಿಚಿತ್ರ, ವಿಸ್ಮಯ....

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಜಲನಯನ....

ನಿಮ್ಮ ಅಭಿಮಾನ ದೊಡ್ಡದು....

ನೀವು ಹಿಂದಿನ ಬಾರಿ ಮಾತಾಡಿದ ಹಾಗೆ...
ಮಂಡ್ಯದ ಗಂಡು ಭಾಷೆಯಲ್ಲಿ ಬರಿಬೇಕಿತ್ತು...
ಸೊಗಸಾಗಿರುತ್ತದೆ....

ನಿಮ್ಮ ಬಿಚ್ಚು ಮನಸ್ಸಿನ ಪ್ರತಿಕ್ರಿಯೆ...
ಪ್ರೋತ್ಸಾಹಕ್ಕೆ...
ಹ್ರದಯಪೂರ್ವಕ ಧನ್ಯವಾದಗಳು....

Guru's world said...

ಪ್ರಕಾಶ್
ತುಂಬ ಚೆನ್ನಾಗಿ ಇದೆ ರೀ... ಇನ್ನು ಎಷ್ಟು wait ಮಾಡಿಸ್ತಿರ ಸರ್... ಎಮ್ಮೆ ಉಚ್ಚೆ ಮಾಡಿದ ಹಾಗೆ ಮಾಡಬಾರದು ಅಂತಾನ.....
ಸರಳ ಬರವಣಿಗೆನಲ್ಲೇ ನವಿರಾದ ಹಾಸ್ಯ ತುಂಬ ಇಷ್ಟ ಆಯಿತು...
ಸರಿ ಇನ್ನೇನ್ ಮಾಡೋದು,,, next ಬ್ಲಾಗ್ ಪೋಸ್ಟ್ ಗಾಗಿ wait ಮಾಡ್ತಾ ಇರ್ತೇವೆ.....

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶಣ್ಣ,

ಸಕತ್ತ್ ಕುತೂಹಲ... ಮುಂದಿನ ಭಾಗ ಆದಷ್ಟು ಬೇಗ ಬರಲಿ.

PARAANJAPE K.N. said...

ಪ್ರಕಾಶರೆ
ಚೆನ್ನಾಗಿದೆ ಕಥಾನಕ. ಮು೦ದಿನ ಭಾಗದ ನಿರೀಕ್ಷೆಯಲ್ಲಿದ್ದೇನೆ.

ವಿನುತ said...

ಊಹೆಗೂ ಮೀರಿದ ಉಪಾಯಗಳು! ಆ ದಿನಗಳನ್ನು ಅಷ್ಟೇ ರಸಮಯವಾಗಿ ತೆರೆದಿಡುವ ನಿಮ್ಮ ಶೈಲಿ! ಎಲ್ಲವೂ ಅದ್ಭುತ! ಅಭಿನ೦ದನೆಗಳು.

Dr. B.R. Satynarayana said...

ಪ್ರಕಾಶ್ ಸರ್
ಮತ್ತೆ ಬ್ಲಾಗ್ ಚಟುವಟಿಕೆಗೆ ಹಿಂದಿರುಗಿದ್ದೇನೆ. ಓದುವುದು ತುಂಬಾ ಇರುವುದರಿಂದ ಹಾಗೂ ಅಕಾಡೆಮಿಕ್ ವರ್ಷದ ಾರಂಭವಾದ್ದರಿಂದ ಸ್ವಲ್ಪ ಬ್ಯುಸಿ. ಆದ್ದರಿಂದ ಕೇವಲ ಫೋಟೋಗಳನ್ನು ನೋಡುವುದಷ್ಟೇ ಮಾಡಿದ್ದೇನೆ ಮತ್ತೆ ಬರುತ್ತೇನೆ.

ಸಿಮೆಂಟು ಮರಳಿನ ಮಧ್ಯೆ said...

ಗುರು ...

ಎಲ್ಲೋ ಒಂದು ಕಡೆ ನಾಗು ಹೇಳಿದ್ದು ಸತ್ಯ ಅಲ್ಲವಾ...?

ನಾಗುವಿಗೆ ಅಸಾಧ್ಯ ಕಾಮನ್ ಸೆನ್ಸ್...
ಎಂಥಹ ಸಂದರ್ಭವೇ ಇರಲಿ..
ತಾನೇ ಮುಂದು ನಿಂತು ಮಾತಾಡಿ...
ಯಾರೇ ಇರಲಿ ಅರ್ಥ ಮಾಡಿಸಿ ಬರುತ್ತಿದ್ದ...
ಆತ ಹೇಳಿದ್ದು ನಿಜವೆಂದು ತಲೆ ಆಡಿಸುವಂತೆ ಮಾಡಿಸಿಬಿಡುತ್ತಿದ್ದ...

ಅದೂ ಕೂಡ ಒಂದು ಕಲೆ..

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್....

ಭರವಸೆ, ನಂಬಿಕೆ..
ವಿಶ್ವಾಸ ನಮ್ಮಲ್ಲಿ ಯಾವಾಗಲೂ ಇರುವಂತೆ ಮಾಡುತ್ತಿದ್ದ ಈ ನಾಗು...
ಅವನಿಂದ ಕೀಟಲೆಗೊಳಗಾದರೂ..
ಯಾರೂ ಅವನನ್ನು ಪ್ರೀತಿಸುವದನ್ನು ಬಿಡುತ್ತಿರಲಿಲ್ಲ...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ....

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ವಿನೂತಾರವರೆ....

ಆ ದಿನಗಳ
ಮರೆಯಲಾಗದ...
ಗೆಳೆಯರು...
ಗೆಳೆತನ...
ಪ್ರತಿಕ್ಷಣಗಳ....
ನೆನಪುಗಳು.....
ನೆನಪಾಗಿ ಇವೆಯಷ್ಟೆ....
ಮರಳಿ ಬಾರವು...
ನನಸಾಗಿ..

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸುಧೇಶ್ ಶೆಟ್ಟಿ said...

ಅಯ್ಯೋ...

ಮು೦ದಿನ ಭಾಗದಲ್ಲಿ ಏನಾಗುತ್ತೋ!

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಗಪ್ಪತಿ ಕಥೆ ಕೇಳಲು ಕಾತುರರಾಗಿದ್ದೇವೆ ಈಗ.
ನೀವು ಒಂದು ಪತ್ತೇದಾರಿ ಕಾದಮಬ್ರಿ ಬರೆಯಿರಿ. ಕುತೂಹಲ ಹುಟ್ಟಿಸಲು ನಿಮ್ಮಿಂದ ಕಲಿಯಬೇಕು.
ಮುಂದಿನ ಸಂಚಿಕೆ ಯಾವಾಗ?

SSK said...

ಪ್ರಕಾಶ್ ಅವರೇ,
ನಮ್ಮೆಲ್ಲರನ್ನೂ ಕುತೂಹಲದ ಕೋಣೆಯಲ್ಲಿ ಬಂದಿಸಿ ಬಿಟ್ಟಿದ್ದೀರಿ! ಇನ್ನೂ ಒಂದು ವಾರ ಅಲ್ಲೇ ಇರುವಂತೆ ಮಾಡಿಬಿಟ್ಟಿದ್ದೀರಿ!! ಆದಷ್ಟು ಬೇಗ ನಮ್ಮೆಲ್ಲರ ಕುತೂಹಲವನ್ನು ತಣಿಸಿ ಪುಣ್ಯ ಕಟ್ಟಿಕೊಳ್ಳಿ, ಹ ಹ ಹ್ಹ ಹ್ಹ ಹ್ಹಾ .........!!!

ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಾಯಣರೆ....

ಯಾವಾಗಲಾದರೂ ಬನ್ನಿ...ಓದಿ...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುಧೇಶ್....

ನಮ್ಮ ಹ್ರದಯ ಬಾಯಿಗೆ ಬಂದಿತ್ತು....

ರಾಜಿ ಮೇಲೆ ಕಪ್ಪು ಕವಿತೆ ಬರೆದು ಅಪರಾಧಿ ಮನೋಭಾವ ನಮಗಿತ್ತು...
ಇಲ್ಲಿ ನೋಡಿದರೆ ಲೆಕ್ಚರರ್, ಅಪ್ಪನ ಸಂಗಡ ಬಂದಿದ್ದಾಳೆ...

ಸಿಕ್ಕಾಪಟ್ಟೆ ಆತಂಕ.....!

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಡಾ. ಗುರುಮೂರ್ತಿಯವರೆ...(ಸಾಗರದಾಚೆಯ ಇಂಚರ)

ನೀವು ಭಾರತಕ್ಕೆ ಬರುತ್ತಿದ್ದೀರಲ್ಲ... ಬನ್ನಿ...
ನಿಮ್ಮ ಕವನ ಸಂಕಲನದ ಬಿಡುಗಡೆ ಸಮಾರಂಭಕ್ಕೆ
ಶುಭ ಕೋರುವೆ....

ಲೇಖನ ಆಸಕ್ತಿಯಿಂದ ಓದಿ
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಎಸ್ಸೆಸ್ಕೆಯವರೆ....

ತುಂಬಾ... ತುಂಬಾ ಖುಷಿಯಾಗುತ್ತಿದೆ....

ನನ್ನ ಬ್ಲಾಗ್ ಫಾಲೋ ಮಾಡುತ್ತಿರುವವರ ಸಂಖ್ಯೆ..
ಶತಕ ದಾಟಿದೆ...

ಫಾಲೋ ಮಾಡದೇ ಓದುತ್ತಿರುವವರ ಸಂಖ್ಯೆ..
ಇದಕ್ಕೂ ಜಾಸ್ತಿ ಇದೆ....

ಎಲ್ಲ ಓದುಗರಿಗೂ ನನ್ನ ವಂದನೆಗಳು...

ನನ್ನ ಜವಾಬ್ದಾರಿ ಹೆಚ್ಚಿದೆ....

ಪ್ರತಿಕ್ರಿಯೆಗೆ ಧನ್ಯವಾದಗಳು...

asha said...

ಆಕರ್ಷಕ್ ಶತಕ್ ಕೇಲಿಯೆ...
ಬಧಾಯಿ.. ಹೋ....!!

ಜಯ್...ಹೋ..!

umesh desai said...

ಹೆಗಡೆ ಅವರೆ ಮುಂದಿನ ಕಂತು ಯಾವಾಗ ?

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

...

ಆಪ್ ಕಾ ಶುಭ ಕಾಮನಾ ಕೇಲಿಯೆ ಧನ್ಯವಾದ್....

ಜಯ್... ಹೋ...!

ಚಿತ್ರಾ said...

ಪ್ರಕಾಶಣ್ಣಾ,

ಛೇ, ಮತ್ತೆ ಸಸ್ಪೆನ್ಸ್ ನಲ್ಲಿಟ್ಟು ಬಿಟ್ರಿ !!! ಇದೇ ನಿಮ್ಮ ಟ್ರಿಕ್ ಅಂತ ಗೊತ್ತಾಗ್ತ ಇದೆ . ಹೀಗೆ ಕೆಟ್ಟ ಕುತೂಹಲ ಉಳಿಸ್ತಿರೋದ್ರಿಂದಾನೇ ನಿಮ್ಮ ಹಿಂಬಾಲಕರ ಸಂಖ್ಯೆ ಶತಕವೇ ಏನು , ಸಹಸ್ರ ದಾಟಿದರೂ ಆಶ್ಚರ್ಯವಿಲ್ಲ !!! ನೀವು ಹೀಗೆ ಬರೀತಾನೇ ಇರಿ ಸಂಖ್ಯೆ ಬೆಳೀತಾನೇ ಇರಲಿ !

Prabhuraj Moogi said...

ಒಳ್ಳೆ ಐಡಿಯಾ ಸಾರ್, ಹುಡುಗೀರು ಕಟ್ಟೋ ಮೊದಲೇ ನಾವೇ ಕಟ್ಟಿಕೊಂಡು ಬಿಡೋದು... ಎಂಟನೆ ಕ್ಲಾಸಿನಲ್ಲಿ ಇದ್ದಾಗ, ಕ್ಲಾಸ ಮಾನಿಟರ ಆಗಿದ್ದೆ, ಎಲ್ರೂ ರಾಖಿ ಕಟ್ಟಿ ಮೊಣಕೈವರೆಗೂ ತುಂಬಿತ್ತು! ಈಗ ನೆನಪಾದ್ರೆ ನಗು ಬರತ್ತೆ... ಹಾಗಂತ ಪೋಲಿ ಎನೂ ಆಗಿರಲಿಲ್ಲ :) ಆದ್ರೂ ಕ್ಲಾಸ ಮಾನಿಟರ ಅಂತ ಎಲ್ರೂ ಕಟ್ಟಿದ್ದು. ಗಪ್ಪತಿ ಗತಿ ಏನಾಯ್ತು ಮುಂದೆ...

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್ ದೇಸಾಯಿಯವರೆ....

ಇದೇ ವಾರ ಹಾಕ್ತಾ ಇದೀನಿ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಪಾಚು-ಪ್ರಪಂಚ said...

ಪ್ರಕಾಶಣ್ಣ..

ನಾಗುವಿನ ಐಡಿಯಾ ಇಷ್ಟವಾಯಿತು...! ನಮಗೆ ನಾವೇ ರಾಖಿ ಕಟ್ಟಿಕೊಂಡು ಉಳಿದವರಿಂದ ಬಚಾವಾಗುವುದು..!!
ಬಹಳ ಮಜವಾಗಿಯೆ ಕಾಲೇಜು ದಿನಗಳನ್ನು ಕಳೆದಿದ್ದಿರ..!! ನಾನೂ ರಕ್ಷಾ ಬಂಧನ ದಿನ ಕಾಲೇಜಿಗೆ ರಜ ಹಾಕಿದ್ದೆ...!

ಸುಂದರ ದಿನಗಳನ್ನು ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು ..!!

-ಪ್ರಶಾಂತ್ ಭಟ್