ಗಿರಿನಗರದಲ್ಲಿ ಒಂದು ಸಭೆ...
ಪರಮ ಪೂಜ್ಯ ಸ್ವಾಮೀಜಿಯವರ.. ಆಗಮನ ಇನ್ನೂ... ಆಗಿರಲಿಲ್ಲ...
ವೇದಿಕೆಯಲ್ಲಿದ್ದ ಸಿ.ಎಚ್.ಎಸ್, ಭಟ್ ರವರು ತುಂಬ ಹಾಸ್ಯಮಯವಾಗಿ.. ಮಾತಾಡುತ್ತಿದ್ದರು..
ಅವರು ಒಳ್ಳೆಯ ಮಾತುಗಾರರು..
ಅವರು " ಪ್ರೇರಣಾ ಮೋಟಾರ್ಸ್ " ನಲ್ಲಿ ವ್ಯವಸ್ಥಾಪಕರು..
ತುಸು ಹೊತ್ತು ಅವರೇ.. ಹಾಸ್ಯವಾಗಿ..ಮಾತಾಡಿದರು..
ಸ್ವಾಮೀಜಿಯವರು ಇನ್ನೂ ಬರಲಿಲ್ಲ..
" ಸಭಾಸದರೆ.. ತುಂಬಾ ಹೊತ್ತಿನಿಂದ ನಾನೇ ಮಾತಾನಾಡುತ್ತಿದ್ದೇನೆ...
ಇಲ್ಲಿ ಯಾರಾದರೂ ಏನಾದರೂ ಹಾಸ್ಯ, ಜೋಕು,
ಮಿಮಿಕ್ರಿ ಮಾಡುವದಾದರೆ.. ಬನ್ನಿ... ಈ ವೇದಿಕೆ ನಿಮಗಾಗಿದೆ.."
ಶುದ್ಢವಾದ ಭಾಷೆಯಲ್ಲಿ ಭಟ್ಟರು ಆಹ್ವಾನ ಇತ್ತರು..
ಸಭೆಯಲ್ಲಿ ಗದ್ದಲ ಶುರುವಾಯಿತು...
ಸ್ವಲ್ಪ ಹೊತ್ತು ಕಳೆಯಿತು..
ಎಲ್ಲರೂ ತಮ್ಮತಮ್ಮಲ್ಲೇ ಮಾತಾಡುತ್ತಿದ್ದರೇ ಹೊರತು ವೇದಿಕೆಗೆ ಯಾರೂ ಬರಲಿಲ್ಲ...
ಒಂದು ಮೂಲೆಯಲ್ಲಿ ನಾನು , ನನ್ನ ಮಡದಿ, ನನ್ನ ಮಗ ಕುಳಿತ್ತಿದ್ದೇವು...
" ನಾನು ಕಾಲೇಜು ದಿನಗಳಲ್ಲಿ.. ಈ ಥರ ವೇದಿಕೆ ಸಿಕ್ಕಿದಾಗ ಮಿಮಿಕ್ರಿ ಮಾಡುತ್ತಿದ್ದೆ...
ಇಲ್ಲಿ ಯಾರೂ ಈ ಥರ ಇಲ್ಲವಾ..?
ಬೋರಾಗಿದೆ..... ಏನಾದರೂ ಜೋಕು ಮಾಡಿದ್ದರೆ.. ನಗಬಹುದಿತ್ತು.."
ಎಂದು ನಾನು ಹೇಳಿದೆ
" ಮನೆಯಲ್ಲಿ ಅಷ್ಟೆಲ್ಲ ಬಡಾಯಿ ಬಿಡುತ್ತೀರಲ್ಲ..
ಹೋಗಿ ಏನಾದರೂ ಮಾಡಿ.. ನೋಡೋಣ....!! "
ಎಂದು ವ್ಯಂಗವಾಗಿ ಬಾಣ ಬಿಟ್ಟಳು ನನ್ನ ಮಡದಿ....!
" ನಾನು ಮಾಡುತ್ತಿದ್ದುದು ಕಾಲೇಜು ದಿನಗಳಲ್ಲಿ..
ಈಗಲ್ಲ.. ..ನೀನು ಸುಮ್ಮನಿರು... "
ನಾನು ಬಾಯಿ ಮುಚ್ಚಿಸಲು ನೋಡಿದೆ...
" ಅಮ್ಮಾ.. ಇಂದು ರಾತ್ರಿ ನನಗೆ ಮಲಗುವಾಗ ...
"ಉತ್ತರನ ಪೌರುಷದ " .... ಕಥೆ ಹೇಳಮ್ಮ..!! "
ಎಂದು ಮಗನೂ ಬಾಣ ಬಿಟ್ಟು ಬಿಟ್ಟ..!
" ಅದು ಹಾಗಲ್ಲ.. ಇಷ್ಟೆಲ್ಲ ಜನರ ನಡುವೆ ಮಾತಾಡುವ ಮೋದಲು...
ಸ್ವಲ್ಪವಾದರೂ ತಯಾರಿ.. ಬೇಡವೆ....?..."
ನಾನು ತರ್ಕಶಾಸ್ತ್ರದ ಪಾಠ ಶುರು ಮಾಡಿದೆ..
" ನೋಡಿ ನಿಮ್ಮ ಕಾಲೇಜಿನ ಕಥೆ ಕೇಳಿ,... ಕೇಳಿ...
ಕಿವಿ ತೂತು ಆಗಿ ಬಿಟ್ಟಿದೆ..!
ಬರಿ.. ಬಾಯಿ ಬಡಾಯಿ...!
ಸ್ಟೇಜ್ ಗೆ ಹೋಗಿ.. ಏನಾದರು ಮಾಡಿ....!
ಒಂದು ಸಾರಿಯಾದರೂ ..ಏನಾದರೂ ಮಾಡಿ...
ಸಾಬೀತು ಪಡಿಸಿ ಬಿಡಿ ...ನೋಡಿ ಬಿಡೋಣ...!
ಆಗ ನೀವು ಇಲ್ಲಿಯವರೆಗೆ ಹೇಳಿದ್ದೆಲ್ಲ ನಿಜ ಎಂದು ಒಪ್ಪುತ್ತೇನೆ...!! .. "
ಮತ್ತೆ ಸವಾಲು...!!
ಏಳು ವರ್ಷದ ಸಂಸಾರ ನಡೆಸಿದ್ದೇನೆ...!
ಆದರೂ... ನಂಬಿಕೆ... ಇಲ್ಲವಾ..?..!!
ಸಧ್ಯ..... "ಗಂಡಸಾಗಿದ್ದರೆ.. ಸ್ಟೇಜ್ ಮೇಲೆ ಹೋಗಿ ನೋಡುವಾ...!! "
ಪುಣ್ಯ..ಹಾಗೆ ....ಅನ್ನಲಿಲ್ಲವಲ್ಲ!
ಭೂಮಿ ... ಬಾಯ್ಬಿರಿದು..... ನನ್ನನ್ನು.. ನುಂಗ ಬಾರದೆ..?
ಅನ್ನಿಸಿ ಬಿಡ್ತು...
ಯಾಕೋ ಒಂದು ಕೈ ನೋಡಿಯೇ ಬಿಡೋಣ ಅನ್ನಿಸಿತು...
ಮಗನ ಕಣ್ಣಲ್ಲಿ "ಹಿರೋ" ಆಗಿ ಬಿಡುವಂಥ.. ಅವಕಾಶ...!
ಸಾವಾಕಾಶವಾಗಿ ಎದ್ದು ನಿಂತೆ..
" ರೀ... ತಮಾಷೆಗಂದೆ ಕೂತ್ಕೊಳ್ಳಿ..!! "
ನನ್ನ ಮಡದಿ ಗಾಭರಿಯಿಂದ ಹೇಳಿದಳು..
ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ..
ಅಲ್ಲಲ್ಲಿ ಜಾಗ ಮಾಡಿಕೊಳ್ಳುತ್ತ ವೇದಿಕೆಗೆ ಬಂದೆ...
ಸಿ.ಎಚ್.ಎಸ್. ಭಟ್ಟರು ಸ್ವಾಗತಿಸಿದರು..
" ಈಗ ಪ್ರಕಾಶ ಹೆಗಡೆಯವರು ತಮ್ಮೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.."
ಅನೌನ್ಸ್ ಮಾಡಿಯೇ ಬಿಟ್ಟರು...!!
ನಾನು ಮೈಕಿನ ಮುಂದೆ ಬಂದು ನಿಂತೆ...
ನನಗೆ ಮೊದಲಿನಿಂದಲೂ ಸಭಾ ಕಂಪನ ಇಲ್ಲವಾಗಿತ್ತು...
ಆದರೂ ... ಎಲ್ಲೋ ..... ಅಳುಕು...!
ದೈರ್ಯವಾಗಿ ಶುರು ಮಾಡಿಕೊಂಡೆ..
" ಮಾನ್ಯ.. ಇವರೆ... ಸನ್ಮಾನ್ಯ ...ಅವರೇ..!
ಹಾಗೂ ಇಲ್ಲಿ ಇದಾಂಥಹ.." ಇವರುಗಳೆ.."...!!.. "
ಎನ್ನುತ್ತ ಸೇರಿದ ಜನರ ಕಡೆಗೆ ನೋಡಿದೆ..
ಜನರಿಗೆ ಮೊದಲು ಅಷ್ಟಾಗಿ ಗೊತ್ತಾಗಲಿಲ್ಲ....
" ಇನ್ನು ಸ್ವಲ್ಪ ಇದರಲ್ಲೇ ..ಪರಮ ಪೂಜ್ಯ.." ಇವರು.." ಇಲ್ಲಿಗೆ ಇದಾಗಲಿದ್ದಾರೆ...
ಈ .".ಅವರು.." ತುಂಬಾ ಅದು ಮಾಡಿದ್ದಾರೆ...
ಅದಕ್ಕಾಗಿ.. ನಾನು.." ಅವರಿಗೆ..".. ಇದು ಮಾಡುತ್ತೇನೆ"
ಎಂದು ಕೈ ಮುಗಿದೆ...
ಜನರಿಗೆ ಸ್ವಲ್ಪ ಗೊತ್ತಾಗ.. ಹತ್ತಿತು...
" ಮಾನ್ಯರೆ...
ಇಂದು ನಾವು "ಇದನ್ನು " ಮಾಡುತ್ತಿಲ್ಲ...
ನಾವೇ ನಮ್ಮ "ಇದನ್ನು" ಇದು ಮಾಡದಿದ್ದರೆ....
ಇನ್ನು.." ಇದನ್ನು " ಯಾರು... ಮಾಡಬೇಕು..?
ನಮ್ಮ ಹಿಂದಿನವರು ."..ಇದನ್ನು.." ಮಾಡುತ್ತಿದ್ದರು..
ಈಗ ನಾವು ಮತ್ತೆ .".ಇದನ್ನು " ಮಾಡಲು ಶುರು ಮಾಡಬೇಕು.. "
ನನ್ನ ಮಗನ ಕಡೆ ನೋಡಿದೆ...
ಜನರ ಸಂಗಡ ಈತನೂ ನಗಲು.. ಶುರು ಮಾಡಿದ್ದ....!!
" ಮಹಾಜನಗಳೇ......
ನಮ್ಮ " ಇದು " ಅದಾಗುತ್ತಿದೆ....
ನಾವು " ಅದಾಗಲಿಕ್ಕೆ.." ಬಿಡಬಾರದು....!!..."
ಎಂದು ಘರ್ಜಿಸಿದೆ...!!
ಜನ ಚಪ್ಪಳೆ ಶುರು ಮಾಡಿದರು..!!
ಖುಷಿಯಿಂದ ನಗಲಿಕ್ಕೆ ಶುರು ಮಾಡಿದರು...!!
ನನಗೆ ಮತ್ತೂ ...ಉತ್ಸಾಹ ...ಬಂತು..
" ಯುವರಾಜ್ ಸಿಂಗ್ " ಬ್ಯಾಟಿಂಗ್ ಫಾರ್ಮ್ ಗೆ...
ಬಂದ ಹಾಗೆ ಇತ್ತು ನನ್ನ ಮಾತುಗಳು...
" ಸನ್ಮಾನ್ಯ ಇವರುಗಳೇ...
ಇಂದಿನ.. ಈ... ಇದಕ್ಕೆ ನಮ್ಮೆಲ್ಲರ..." ಇದೆ " ಕಾರಣ...!
ಹಾಗಾಗಿ ನಾವೆಲ್ಲ " ಇದಾಗಬೇಕು." ... !
ನಮ್ಮಲ್ಲಿ ಯಾವುದೇ " ಇದಿರಬಾರಾರದು." ....."
ಮಗ ಖುರ್ಚಿಯಮೇಲೆ ನಿಂತುಕೊಂಡು ಎಂಜೋಯ್... ಮಾಡುತ್ತಿದ್ದ...!
ನಾನು ಇನ್ನೂ ಸ್ವಲ್ಪ ಹೊತ್ತು ... " ಅದೂ ..ಇದು " ಮಾತನಾಡಿ.....
" ಇಲ್ಲಿಯವರೆಗೆ ನನ್ನ ಈ ... " ಇದನ್ನು" ...
" ಅದು "ಮಾಡಿದ್ದಕ್ಕೆ ..
ನಾನು ನಿಮಗೆಲ್ಲ " ಇದಾಗಿದ್ದೇನೆ."..!!....
ನನಗೆ " ಇದನ್ನು " ಮಾಡಲಿಕ್ಕೆ...
" ಇದು " ಮಾಡಿದ ...ಇವರಿಗೆ...
ನಾನು... ತುಂಬಾ " ಇದಾಗಿದ್ದೇನೆ "....!
ಇಲ್ಲಿಗೆ ನನ್ನೀ " ಇದನ್ನು " ಅದು ಮಾಡುತ್ತೇನೆ....!! .."
ಅಂದೆ...!
ಚಪ್ಪಾಳೆಯೋ ....!!... ಚಪ್ಪಾಳೆ...!!
ಜನರಿಗೆ ಎಷ್ಟು "ಇದಾಯಿತೋ..ಅದಾಯಿತೋ " ಗೊತಾಗಲಿಲ್ಲ...!
ತಕ್ಷಣ ಸಿ.ಎಚ್.ಎಸ್. ಭಟ್ಟರು ಮೈಕ್ ಬಳಿ ಬಂದರು...
" ಇಲ್ಲಿಯವರೆಗೆ ನಮ್ಮನ್ನು ... " ಇದು " ಮಾಡಿದ ...
"ಇವರಿಗೆ " ...ನಾವೆಲ್ಲ ತುಂಬಾ " ಇದಾಗಿದ್ದೇವೆ "....!
ಅವರಿಗೆ ತುಂಬಾ " ಇವುಗಳನ್ನು ".. ಅರ್ಪಿಸುತ್ತೇವೆ... !! .. "
ಅಂದಾಗ ಮತ್ತೆ ಚಪ್ಪಾಳೆ...!!
ಮಗ ನನ್ನನ್ನು ಅಭಿಮಾನದಿಂದ ನೋಡುತ್ತಿದ್ದ...!!
ಜನರೆಲ್ಲ ನನ್ನನ್ನೇ ನೋಡುತ್ತಿದ್ದರು......
ನನಗೆ.... ಒಂದು ರೀತಿಯಲ್ಲಿ.....
"ಇದಾಗಿ.." .... .."ಅದಾಗಿತ್ತು..'..!!...
" ಅದೂ" ......ಆಗಿ ..." ಇದಾಗಿ " ...ಬಿಟ್ಟಿತ್ತು..........!!
Friday, January 2, 2009
Subscribe to:
Post Comments (Atom)
51 comments:
ಪ್ರಕಾಶಣ್ಣ,
ಇದು ತು೦ಬ ಅದಾಗಿದ್ದು :-)
ಹೆ..ಹೆ..ಹೀ....ಬಹಳ ಮಜವಾಗಿದ್ದು ಲೇಖನ...ನೀವು ಇಷ್ಟು ಚೊಲೊ ಹೆ೦ಗೆ ಬರೆತ್ರಿ ಮಾರಾಯ್ರೆ?
ಹ..... ಹ..... ಹ್ಹಾ.....
ತುಂಬ ತುಂಬ ಚೆನ್ನಾಗಿದೆ ಸರ್
:D :D :D
ಗೀತಾ.. ಗಣಪತಿಯವರೆ...
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...
ನಾನು ಸಣ್ಣವನಿದ್ದಾಗ ನನ್ನ "ಚಿಕ್ಕಪ್ಪ "
"ಇದನ್ನು" ನನಗೆ ಹೇಳಿಕೊಟ್ಟಿದ್ದರು...
ನೀವು " ಇದನ್ನು " ...
ತುಂಬಾ " ಅದು " ಮಾಡಿದ್ದಕ್ಕೆ...
ನಾನು ನಿಮಗೆ ತುಂಬಾ "ಅದಾಗಿದ್ದೇನೆ...!" ...!!
ಗೀತಾರವರೆ....
ಇದನ್ನು ಒಮ್ಮೆ ಕತಾರನಲ್ಲೂ ಮಾಡಿದ್ದೆ...
ಹಿಂದಿಯಲ್ಲಿ....
"ನನಗೆ ಬಹುಮಾನ ಕೂಡ ಬಂದಿತ್ತು
" ಉಷಾ ಉತ್ತುಪ್.." ಕೊಟ್ಟಿದ್ದರು...
ನಿಮಗೆ " ಇದರಿಂದಾಗಿ " ತುಂಬಾ ಇದಾಗಿದೆಯಲ್ಲ..!
ನನಗೆ ಅಷ್ಟು ಸಾಕು..!
ನಾನು.. ನಿಮಗೆ ತುಂಬಾ " ಅದಾಗಿದ್ದೇನೆ...!!"
ಪ್ರಕಾಶ್ ಸಾರ್,
ಹ..ಹ..ಹಿ...ಹಿ...
ಚಪ್ಪಾಳೆ..ಚಪ್ಪಾಳೆ....[ನನ್ನದೂ ಜೋರಾಗಿ ಕೇಳೀಸಿತಾ...]
ಶಿವು ಸರ್....
ನೀವು " ಇದನ್ನು " ಮಾಡಿ ಕೊಟ್ಟಿದ್ದಾಕ್ಕಾಗಿ "ಇದಾಗಿದೆ "
ನಾನು ನಿಮಗೆ ತುಂಬಾ ಇದಾಗಿದ್ದೇನೆ...!
ನಿಮ್ಮ " ಇದು " ಯಾವಾಗಲೂ ಇರಲಿ...!
ನಿಮಗೆ "ಇವುಗಳನ್ನು " .. " ಅದು " ಮಾಡುತ್ತೇನೆ..
ನಂಗೆ ನಿಜ್ವಾಗ್ಲೂ "ಇದು" "ಅದು" ಎಂತೂ ಅರ್ಥಾನೇ ಆಜಿಲ್ಲೆ!! ನನ್ನ ಟ್ಯೂಬ್ಲೈಟ್ ಅಂದ್ಕಂಡ್ರೂ ಪರ್ವಾಗಿಲ್ಲೆ. ಎಲ್ಲವನ್ನು ಬಿಡಿಸಿ "ಇದನ್ನು" ಅಂದ್ರೆ "ಅದು" "ಇದು ಎಂತದು ಹೇಳ್ತ್ರಾ?!:)
ಇದು ಅದಾಗಿದ್ದು ಪ್ರಕಾಶಣ್ಣ !
ತೇಜಸ್ವಿನಿಯವರೆ....
ಇದು ಭಾಷಣದ ರೂಪ...
ನಿಜವಾಗಿಯೂ ನಡೆದದ್ದು..!
ಶಾಲಾ ಕಾಲೇಜಿನಲ್ಲಿ ನಾನು ಮಾಡಿದ್ದೇನೆ.
ರಾಘವೇಶ್ವರ ಸ್ವಾಮಿಜಿಯವರ ಕಾರ್ಯಕ್ರಮ ಅದಾಗಿತ್ತು..
ಇಲ್ಲಿ ವ್ಯಕ್ತಿಗಳ, ವಸ್ತು, ನಾಮಪದಗಳಿಗೆ "ಅದು , ಇದು, ಇವರು, ಅವರು' ಹೇಳುವದು..
ನೀವು ತಾಳ್ಮೆಯಿಂದ ಇನ್ನೊಮ್ಮೆ ಓದಿ..
ನಿಮಗೆ "ಇದಾಗುತ್ತದೆ"
ಕ್ಷಮಿಸಿ..
ಅರ್ಥವಾಗುತ್ತದೆ..
ಅಯಿತಾ..?
ಸುಧೀಂದ್ರ....
ನಿಮಗೆ ಹೊಸ "ಅದರ" ಇದನ್ನು ಹೇಳಲು ಅದಾ"ಗಿತ್ತು...
ನಿಮಗೂ ,, ನಿಮ್ಮ "ಇವರಿಗೂ" ನನ್ನ ಹಾರ್ದಿಕ ಇವುಗಳು...
ನಿಮ್ಮ " ಇದಕ್ಕೆ " ನಾನು " ಅದಾ"ಗಿದ್ದೇನೆ..
ಪ್ರಕಾಶಣ್ಣ.. Hilarious! ನೀನು ರಾಜಕಾರಣಿನಾ?? ಅವು ಹಿಂಗೇ ಮಾತಾಡ್ತ!!
ಹರೀಷ್....
" ನಾನವನಲ್ಲ.." ಮಾರಾಯಾ..!
ನನಗೆ" ಇಟ್ಟಿಗೆ ಸಿಮೆಂಟಿದೆ..."
ಅವರಿಗೆಲ್ಲಾ "ಇದಿದ್ದರೆ" ಹೀಗಾಗುತ್ತಿರಲಿಲ್ಲ...!
ಎಲ್ಲಾ ನಮ್ಮ ನಮ್ಮ "ಇದಲ್ಲವಾ..?'
ನಿಮ್ಮ" ಇದಕ್ಕೆ " ನಾನು ತುಂಬಾ "ಇದಾಗಿದ್ದೇನೆ"...
ತುಂಬಾ ಇದರಿಂದ "ಅದು"
ಯೇ ಮಾರಾಯಾ...ಎಲ್ಲಿಲ್ಲಿಂದ ತರ್ತೆ ಇದ್ನೆಲ್ಲವ ? ಅಂತೂ ಹೆಂಡ್ತಿ ದೃಷ್ಟಿಯಲ್ಲಿ 'ಅದು' ಮತ್ತೆ ಮಗನ ದೃಷ್ಟಿಯಲ್ಲಿ 'ಇದು' ಆದ್ಯಲ್ಲ... ಅಷ್ಟು ಸಾಕು. ನಮ್ಮ ದೃಷ್ಟಿಯಲ್ಲಿ ನೀನು ಆಗ್ಲೇ ಭಾರಿ ಇಂವ ಬಿಡು...
ಆತ್ಮೀಯ ಹಿತ್ತಲಮನೆಯವರೆ....
ನೀವು ನನಗೇ ಅದು ಮಾಡಿದ್ರೊ..?
ಇದು ಮಾಡಿದ್ರೊ ...?
ಗೊತ್ತಾಗಲಿಲ್ಲ...!!
ನಿಮ್ಮ .. ಈ...ಇದಕ್ಕೆ ನನ್ನ " ಅದು " ಗಳು...
ಪ್ರಕಾಶಣ್ಣ,
ಇದನ್ನು ಆದು ಮಾಡುತ್ತಾ.. ತುಂಬಾ ಇದು ಮಾಡುತ್ತಾಯಿದ್ದೆ.
[ಇದನ್ನು ಓದುತ್ತಾ ತುಂಬಾ ನಗುತ್ತಾಯಿದ್ದೆ...]
Fantastic... ಈ ತರದ್ದೆ ಬೇರೆ ಅದು ಇದ್ದರೆ ಇಲ್ಲಿ ಸ್ವಲ್ಪ ಅದ್ದನ್ನು ಮಾಡಿ..
ಪ್ರಕಾಶಣ್ಣ...
ಇದನ್ನ ಅದುಮಾಡಿ(ಓದಿ) ಯಂಗನೂ ಅದಾಡ್ಜ. (ನೆಗ್ಯಾಡ್ಜ)
ಇದು ಭಾರೀ ಅದಿದ್ದು (ಚೊಲೊ ಇದ್ದು)
ಅದಕ್ಕೆ ಇಲ್ಲೇ ಇದನ್ನ ಮಾಡ್ಬುಡ್ತಿ. ಅವ್ಕೂ ಎಲ್ಲರಿಗೂ ಅದ್ ಮಾಡಿದ್ದಿ ಹೇಳ್ಬುಡು ಪ್ಲೀಸ್.
(ನಿನ್ನ ಹಿಂದಿನ ಲೇಖನಕ್ಕೆ ಇಲ್ಲೇ ವಿಶ್ ಮಾಡ್ಬುಡ್ತಿ. ಆಶಕ್ಕಂಗೆ,ಯನ್ನ ಅಳಿಯಂಗೆ ಎಲ್ಲರಿಗೂ ವಿಶ್ ಮಾಡಿದ್ದಿ ಹೇಳ್ಬುಡು ಪ್ಲೀಸ್)
ಇದು ಅವರೇ ಕಾಯಿ ಸೀಸನ್.ಚೆನ್ನಾಗಿ ಅವರೇ... ಇವರೇ..ಎಂದು ಶುರುಹಚ್ಚಿಕೊಂಡು ಅಲ್ಲಿ ಅದು ಮಾಡಿದ್ದನ್ನು ಇಲ್ಲಿ ಇದು ಮಾಡಿ ನಮಗೆ ಅದು ಮಾಡಿದ ಇದೋ ನಿಮಗೆ ಇದು.
ಅಶೋಕ ಉಚ್ಚಂಗಿ
http://mysoremallige01.blogspot.com/
ಎಷ್ಟು ಮಸ್ತಾಗಿ ಇದು ಮಾಡಿದ್ದೀರಿ,ಪ್ರಕಾಶ!
ನಿಮಗೆ ನನ್ನ ಅನೇಕಾನೇಕ ಇದುಗಳು.
ಹ್ಞಾ, ಇದು ಮಾಡುವದನ್ನು ಮುಂದುವರೆಸಬೇಕಪ್ಪಾ ನೀವು.
ಪ್ರಕಾಶ್ ಸರ್,
ಅದನ್ನು ಹುಡುಕುತ್ತ ಇದನ್ನು ಓದಿದೆ, ಇದನ್ನು ಓದಿ ಅದನ್ನು ತಡೆಯಲಾಗಲೇ ಇಲ್ಲ, ನಿಮ್ಮ ಅದು ಬಹಳ ಚೆನ್ನಾಗಿದೆ, ಅದನ್ನು ಬಳಸಿ ಇದರ ಬಗ್ಗೆ ಹೀಗೆ ಬರೀತಾ ಇರಿ.
ನಿಮಗೆ ಪ್ರೀತಿಯ ಅದು ಮತ್ತು ಇದು
-ರಾಜೇಶ್ ಮಂಜುನಾಥ್
ಸಿಮೆಂಟು ಮರಳಿನ ಮಧ್ಯೆಯೂ "ಇದನ್ನು" ಕೇಳಿ,, ನಮಗಂತೂ ತುಂಬಾ ತುಂಬಾ 'ಇದಾಗಿದೆ'. ಇದನ್ನು ಓದಿದವರು "ಇದಾಗ"ದಿದ್ದರೆ ಮತ್ತೆ ಕೇಳಿ.!!!
ನನಗೀಗ ಎಲ್ಲಾ "ಇದಾಯಿತು" :)
ಆಹಾ...ಇಂತಹಾ ಇದನ್ನ ನಮಗೂ ಹೇಳಿದ್ದಕ್ಕೆ ನಾನಂತು ಸಿಕ್ಕಾಪಟ್ಟೆ ಇದಾಗಿದ್ದೇನೆ. ನಿಮಗೊಂದು "ಇದು".
ಅಂತರ್ವಾಣಿ...
ಇದು ನಿಜವಾಗಿಯೂ ನಡೆದ ಘಟನೆ...
ನನ್ನ ಶಾಲಾ, ಕಾಲೇಜು ದಿನಗಳಲ್ಲಿ...
ಬಹಳ ಬಾರಿ " ಇದನ್ನು " ಮಾಡಿ ಚಪ್ಪಾಳೆ ಗಿಟ್ಟಿಸಿ ಕೊಂಡಿದ್ದೇನೆ...
" ಇದರಿಂದ " ನಿಮಗೆ ತುಂಬಾ "ಇದಾಗಿದ್ದಕ್ಕೆ"....
ನನಗೂ ಬಹಳ " ಇದಾಗಿದೆ "...
ಹ್ಹಾ..ಹ್ಹಾ..!
ಶಾಂತಲಾ....
ನೀವೆಲ್ಲ " ಇದನ್ನು " " ಇದು " ಮಾಡಿದ್ದು ನನಗೂ ಬಹಳ " ಇದಾಗಿದೆ "
ಆದರೆ ನೀನು ಇಲ್ಲೇ " ಇದನ್ನು " ಮಾಡಬಾರದಂತೆ...
ಎಲ್ಲಿ ಮಾಡಬೇಕೋ ಅಲ್ಲೆ " ಇದನ್ನು " ಮಾಡಬೇಕಂತೆ..!!
ಹಹ್ಹಾ..ಹ್ಹಾಹ್ಹಾ...
(ನನ್ನ ಪ್ರತಿಕ್ರಿಯೆ ಏನೇನೋ ಅರ್ಥ ಕೊಟ್ಟಿದ್ದರೆ.. ...
" ಅದಕ್ಕೆ " ನಾನು " ಇದಲ್ಲಾ" )
ಅಶೋಕರೆ....
ನೀವು " ಇದನ್ನು " ಬಹಳ "ಇದು" ಮಾಡಿದ್ದಕ್ಕೆ
ನಾನೂ ಕೂಡ ನಿಮಗೆ ಬಹಳ
" ಇದಾಗಿದ್ದೇನೆ..!"
ಸುನಾಥ..ಸರ್...
ಏನೇ ಹೇಳಿದರೂ ನಿಮ್ಮ " ಇದು" ಇದ್ದಾಂಗೆ ನಮ್ಮ "ಇದು" ಇರೂದಿಲ್ರಿ...
ನಿಮ್ಮಷ್ಟು "ಇದಾಗಿ" ನಮಗೆ "ಇದು" ಮಾಡಲಿಕ್ಕೆ ಬರೂದಿಲ್ರಿ..
ನಿಮ್ಮ " ಇದೇ " ಬೇರೆ.. ನಮ್ಮ " ಇದೇ " ಬೇರೆ..
ನೀವು "ಇದನ್ನು" ಇದು ಮಾಡಿದ್ದಕ್ಕ ನಾನು ನಿಮಗ
ಭಾಳ.. "ಇದಾಗಿದೇನ್ರಿ..."
ನಿಮ್ಮ "ಇದು" ನನ್ನ ಮ್ಯಾಲ ಯಾವಾಗಲೂ "ಇದಾಗಿಲ್ರಿ..."
(ತಮಾಷೆಗೆ ಬರೆದೆ .. ಬೇಸರ ಬೇಡ..)
ನಿಮ್ಮ ಆಶೀರ್ವಾದ ಯಾವಗಲೂ ಇರಲಿ ಸರ್...
ರಾಜೇಶ್ ಮಂಜುನಾಥ್...
ನಿಮ್ಮ "ಅದು" "ಇದು" ತಗೊಂಡು ನನಗೆ ಬಹಳ "ಇದಾಗಿ" ಬಿಟ್ಟಿದೆ...!!
ನಿಮ್ಮ "ಇದಕ್ಕೆ" ನಾನು ಬಹಳ ಇದಾಗಿದ್ದೇನೆ...!
ನಿಮ್ಮ "ಇದು " ಯಾವಗಲೂ ಹೀಗೇಯೆ " ಇದಾಗಿ" ಇರಲಿ..
ಅಸತ್ಯ -ಅನ್ವೇಷಿಯವರೆ...
ನಮಗೆ ನನ್ನ ಬ್ಲೋಗಿಗೆ ಸುಸ್ವಾಗತ...
ನಿಮ್ಮ "ಇದೂ" ಕೂಡ ಬಹಳ "ಇದಾಗಿದೆ"
ನೀವು ನನ್ನ ಈ.. "ಇದನ್ನು"... "ಇದು" ಮಾಡಿದ್ದಕ್ಕೆ....
ನಾನು ನಿಮಗೆ ಬಹಳ "ಇದಾಗಿದ್ದೇನೆ..."!!
ನಿಮಗೆ ನನ್ನ "ಇದುಗಳು..!
ತೇಜಸ್ವಿನಿಯವರೆ...
ನನಗೆ ಈಗ ಬಹಳ ಇದಾಯಿತು...
ನಾನು ನಿಮಗೆ ಇದಾಗಲಿಲ್ಲವಲ್ಲ ಎಂದು ಬಹಳ ಅದು ಮಾಡ್ಕೋಂಬಿಟ್ಟಿದ್ದೆ...
ನಿಮಗೆ ನನ್ನ "ಅದುಗಳು"
(ಎಂಥಾ ಕನ್ನಡ..!
ಅನ್ನಬೇಡಿ..!)
ಲಕ್ಶ್ಮೀಯವರೆ...
ಇದನ್ನು ಓದಿ ನಿಮಗೆ "ಇದಾಗಿದ್ದು" ನನಗೂ ಬಹಳ "ಅದಾಗಿದೆ..."
ನಿಮ್ಮ "ಇದಕ್ಕೆ" ನಾನು ತುಂಬಾ "ಅದಾಗಿದ್ದೇನೆ."...
ನಿಮ್ಮ "ಇದು" ಯಾವಾಗಲೂ ಹೀಗೆಯೆ ಇರಲಿ..
ನಮಗೂ ಸಹ "ಅದುಗಳು"
ಪ್ರಕಾಶ್,
ನಿಮ್ಮ ’ಇದು’ ತುಂಬಾ ’ಅದಾಗಿದೆ’.
ಸಕ್ಕತ್ ರೀ ನೀವು...
ಅಂದಹಾಗೆ, ಹೊಸ ವರ್ಷದ ಸವಿ ಹಾರೈಕೆಗಳು...
ಅನಿಲ್.....
ನಿಮ್ಮ ಇದೂ ಕೂಡ ಬಹಳ "ಇದಾಗಿದೆ,,,"
ನಿಮ್ಮ ಇದಕ್ಕೆ ನನ್ನ ಹ್ರತ್ಪೂರ್ವಕ "ಅದುಗಳು"
ಹೀಗೆ "ಇದು " ಮಾಡ್ತಾ ಇರಿ...
"ಇದುಗಳು"
ಹ್ಹ ಹ್ಹ...
ಶ್ರೀಯುತ ’ ಇವರೇ’ ,
ನಿಮ್ಮ ’ಇದನ್ನು ’ ಓದಿ ಬಹಳಾ ಇದಾಯ್ತು !
ಒಂದು ಪ್ರಶ್ನೆ . ನಿಮ್ಮ ’ಇದನ್ನು’ ಕೇಳಿ , ನಿಮ್ಮ ’ಇವರಿಗೆ’ ಅದಾಯಿತೋ ಇಲ್ಲವೋ ತಿಳಿಯಲಿಲ್ಲ !
ಅಂದಹಾಗೇ, ಇಲ್ಲಿನ ’ ಇದನ್ನೆಲ್ಲ ’ ಓದಿದರೆ, ಬಹುಶಃ ಓದಿದವರೆಲ್ಲರೂ ’ಅದು, ಇದು’ ಎಂದೇ ಇದು ಮಾಡುತ್ತಿದ್ದಂತೆ ಕಾಣಿಸುತ್ತದೆ ! :))
’ಇದು’ ಬಹಳ ’ಅದಾಯಿತು’...
:):):)
ಚಿತ್ರಾ ಇವರೆ....
ನಿಮಗೆ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...
ನಮ್ಮನೆ "ಇವರು" ಇದಾದ ಮೇಲೆ ಸ್ವಲ್ಪ ದಿವಸ
"ಇದಾಗಿದ್ದರು"...
ಆ ದಿನಗಳ "ಇದನ್ನು" ಕೇಳುತ್ತಿದ್ದರು..
ಆದರೆ ಮತ್ತೆ "ಇದರ" ಬಗೆಗೆ ಇದ ಮಾಡ ಹೊರಟರೆ...
ಮತ್ತೆ "ಇದು" ಮಾಡ್ತಾರೆ..
ನಾನು "ಅದನ್ನೆಲ್ಲ" ಇದು ಮಾಡಿಲ್ಲ ಅಂತ ಅನುಮಾನ ಮಾಡ್ತಾರೆ..
ಇದು "ಇದಾ..?" ನೀವೆ ಇದ ಮಾಡಿ...!
ನಾನು ನಿಮ್ಮಗಳ ಇದಕ್ಕೇ ಇದ ಬಿಡ್ತೇನೆ....
ನಿವಾದರೂ ಇವರಿಗೆ "ಇದು" ಹೇಳಿ
ಅದರೆ ನಿವೆಲ್ಲ ಇದನ್ನು ಇದು ಮಾಡಿದ್ದೀರಲ್ಲ ..
ನಾನು ನಿಮಗೆಲ್ಲ ಇದಾಗಿದ್ದೇನೆ..
ನಿಮಗೆ ನನ್ನ "ಇದುಗಳು"
ಸುಧೇಶ್..ಇವರೆ...
ನನ್ನ ಈ.. ಇದನ್ನು ...
ನೀವು... ಅದು ಮಾಡಿದ್ದಕ್ಕೆ ...
ನಿಮಗೆ ನನ್ನ
"ಅದುಗಳು.."
ಸಾರ್ ನಿಮಗೊಂದು ದೊಡ್ಡ ’ಇದು’ :)
Hema Powar
ಹೇಮಾ...ಇವರೇ....
ನೀವು ಇದನ್ನು ಅದು ಮಾಡಿದ್ದಕ್ಕೆ...
ನಿಮಗೂ ಕೂಡ... ನನ್ನಿಂದ...
ದೊಡ್ಡ .."ಇದು"..!
ಒಳ್ಳೆಯ ಬರಹ. ನಮ್ಮ ಸ್ನೇಹಿತರೊಂದಿಗೆ ಮಾತಾಡುವಾಗ "ಇದು" ಶಬ್ದಕ್ಕೆ ಒಂದು ಪರ್ಯಾಯ ಅರ್ಥವನ್ನು ನಾವು ಉಪಯೋಗಿಸುತ್ತೇವೆ.
"ಇದು" = "ಶೀನ ಶೆಟ್ಟಿಯ @#$%^" (censored word) ಅಂತ. "ಇದು" ಇದು..ಇದು ಎಂದು ಮಾತಾಡುವವರ ಕಾಟ ತಡೆಯಲಿಕ್ಕೆ..
ಗಿರಿಯವರೆ....
ನನ್ನ ಬ್ಲೋಗಿಗೆ ಸುಸ್ವಾಗತ...
ಹೊಸ ಕ್ಯಾಲೆಂಡರ ವರ್ಷದ ಶುಭಾಶಯಗಳು...
ಹೀಗೆ ಬರುತ್ತಾ ಇರಿ...
ಪ್ರತಿಕ್ರಿಯೆಗೆ ವಂದನೆಗಳು...
ಓದಿ ಹೊಟ್ಟೆಯೆಲ್ಲ ಇದಾಗಿ.... ಇನ್ನು ಅದಾಗಬೇಕು ಅಲ್ಲಿಯವರೆಗೂ ನಕ್ಕಿದ್ದಾಯ್ತು..;)
HA.....HA....
masthagiddu :)
anda hage entha agittu??
ರಂಜಿತ್...
ನನ್ನ ಬ್ಲೋಗಿಗೆ ಸುಸ್ವಾಗತ...
ನೀವು ಅದಾಗಿ.. ಇದಾಗಿ.. ಇದುಮಾಡಿ ನಕ್ಕಿದ್ದು ...
ನನಗೂ ಬಹಳ ಇದಾಯಿತು...
ಹೀಗೆ ಬರುತ್ತಾ ಇರಿ...
ನಿಮ್ಮ ಇದಕ್ಕೆ ಹ್ರದಯ ಪೂರ್ವಕವಾಗಿ..
ನನ್ನ ಇದುಗಳು...
ವೆಂಕಟೇಶ್....
ನಿಮ್ಮ "ಇದು" ನನಗೆ ಬಹಳ "ಅದು" ತಂದಿತು...
ನೀವು ಅಂದಿನ "ಇದಕ್ಕೆ "
ಹಾಜರಿದ್ದೀದ್ದೀರಿ...
ಅಲ್ಲವಾ..?
ನಿಮಗೆ ನನ್ನ "ಅದುಗಳು.."
ಹುಶ್! ನೆಂಟರು, ಸ್ನೇಹಿತರಿಗೆಲ್ಲಾ ಅಡಿಗೆ ಮಾಡಿ, ಉಪಚಾರ ಮಾಡಿ, ಊರು ಸುತ್ತಾಡಿಸಿ " ಇದಾಗಿದ್ದೆ", ನಿಮ್ಮ ಲೇಖನ ಓದಿ " ಇದಾದೆ!". ನಿಮಗೆ ದೊಡ್ಡ "ಇದು". :)
ಗಿರಿಜಾರವರೆ...
ಹೊಸವರ್ಷದ ಶುಭ ಕಾಮನೆಗಳು...
ತುಂಬಾ ದಿವಸಗಳಾಯಿತು ನೀವು ಇದಾಗ(ಬರ)ಲಿಲ್ಲ ಅಂದುಕೊಂಡಿದ್ದೆ..
ನೀವು ಇದಾಗಿದ್ದಕ್ಕೆ ನನಗೆ ಬಹಳ ಅದಾಗಿದೆ...
ಇಲ್ಲಿ ನಿಮ್ಮ ಇದಕ್ಕಾಗಿ ನನ್ನ "ಅದುಗಳು.."...
ಬರ್ತಾ..ಇರಿ...
ನಿಮ್ಮ ಅದು ಇದು ತುಂಬಾ ಚೆನ್ನಾಗಿದೆ.ಕಾಮೆಂಟ್ ಹಾಕುವಾಗಲೂ ನಗ್ತಾನೆ ಇದ್ದೀನಿ. ಇಲ್ಲಿ ಬಂದ ಪ್ರತಿಕ್ರಿಯೆ & ಅದಕ್ಕೆ ನಿಮ್ಮ ಪ್ರತಿಕ್ರಿಯೆ ಸೂಪರ್( ಅದರಲ್ಲೂ ನೀವು ಶಾಂತಲರವರಿಗೆ ಹೇಳಿರುವುದು).
ಬೇಜಾರಾದಾಗ ನಿಮ್ಮ ಬ್ಲಾಗ್ ಗೆ ಬಂದ್ರೆ ಸ್ವಲ್ಪ ಹೊತ್ತಿನಲ್ಲೇ ಯಾಕೆ ಬೇಜಾರಾಗಿತ್ತು ಅಂತಾನೆ ಮರ್ತು ಹೋಗುತ್ತೆ. ಹೀಗೆ ಬರೀತಿರಿ.
ಭಾರ್ಗವಿಯವರೆ...
ನನ್ನ ಹ್ರದಯ ತುಂಬಿಬಂದಿದೆ....
ನಿಜವಾಗಿಯೂ ಬರೆಯುವದು ನನಗೆ ಗೊತ್ತಿಲ್ಲ...
ಸಾಹಿತ್ಯ ಅಭ್ಯಾಸವೂ ಮಾಡಿಲ್ಲ...
ನಿಮ್ಮ ಇಂಥಹ ಪ್ರತಿಕ್ರಿಯೆಯಿಂದ ಹೆದರಿಕೆಯೂ ಆಗುತ್ತದೆ...
ಇದನ್ನು ಉಳಿಸಿಕೊಳ್ಳ ಬೇಕಲ್ಲ...
ಇದು ನನ್ನಿಂದ ಆದೀತೆ..?
ಗೊತ್ತಿಲ್ಲ..
ನಿಜವಾಗಿಯೂ.....
"ನಾನು ನಿಮಗೆಲ್ಲ .....
ತುಂಬಾ.. ತುಂಬಾ.. ಇದಾಗಿದ್ದೇನೆ.."...
very nice... just couldn stop laughing!!
Nangoo ivattu idagittu. Idoo ade adu
Post a Comment