Tuesday, January 13, 2009

ಚಂದದ..ಮಗಳೇ...

ನನ್ನ ಚಂದದ ಮಗಳೇ...

ಪುಟ್ಟ.. ಪುಟ್ಟ..ಹೆಜ್ಜೆ ಗೆಜ್ಜೆಯ ಸದ್ದುಗಳು...

ನಿನ್ನ ಪ್ರೀತಿ.. ಪ್ರೇಮದ ತೊದಲು ಮಾತುಗಳು...

ಮುದ್ದು ಮುಖದ ಕಿರುನಗು...

ನನ್ನೆದೆಯಲ್ಲಿ ಬಿಟ್ಟು ಹೋಗುವದೇಕೆ.. ಮಗಳೇ...

ಇಲ್ಲಿ.... ಹೀಗೆಯೇ ಇರಬಾರದೇ...?ಮುಂದೊಂದು ದಿನ..ಇನಿಯನೊಬ್ಬನ ಮಡದಿಯಾಗಿ....

ಅವನಾಸೆ... ಬೇಕುಗಳಲಿ.....

ಕಳೆದು ಹೋಗದಿರು... ಮಗಳೆ...

ಈ.. ಮುದಿ ಜೀವದ ನೆನಪು ಮರೆತು....!ನಿನ್ನ ಸಾಧನೆಯ ಉತ್ತುಂಗದಲಿ..

ನನ್ನಾಸೆ,ಹೆಮ್ಮೆಯ ಗೆಲುವನ್ನು ಕಂಡೆ...

ನಿನ್ನ ಚಂದದ ನಗುವಿನ ಸಂಸಾರವ ನೋಡಿ...

ನಿನ್ನಗಲಿಕೆಯ..ಎದೆಯ. ಹಿಂಡುವ.. ನೋವ.. ಮರೆಯಲೆತ್ನಿಸಿದೆ...ಮತ್ತೆ ಮುದ್ದು ಮೊಮ್ಮಗನ ಆಸೆ...

ಅವನ ನಗು ತುಂಟತನದ ಸೊಗಸು....

ಈ ಜೀವಕೆ ಮತ್ತೆ ನಕ್ಕು.. ಬದುಕುವಾಸೆ..

ನೀನೇ ತಂದೆ... ತಾಯಿಯಾಗಿ.... ಮಗಳೇ....!


ಸಂಕ್ರಮಣದ...
ಶುಭಾಶಯಗಳು...!!

ನಿಮ್ಮೆಲ್ಲ...
ಕನಸು.. ನನಸಾಗಲಿ....!!


42 comments:

Harish - ಹರೀಶ said...

ನೀನೇ ತಂದೆಯಲ್ಲ ಮಗಳೆ.. ತಾಯಿಯಾಗಿ.. !!
ವಾವ್! ಚಿತ್ರಾಲಂಕಾರ ಪ್ರಯೋಗ!

ಅಂದ್ಹಂಗೆ .. ಈ ಚಿತ್ರ ಯಾರದ್ದು?

ಮನಸು said...

ತುಂಬ ಚೆನ್ನಾಗಿದೆ,

ಹೆಣ್ಣು ಮಕ್ಕಳೇ ಹಾಗೆ ಅಪ್ಪಾಮ್ಮನ ಬಿಟ್ಟು ಬೇರೆಲ್ಲೋ ಜೀವನ ಮಾಡಬೇಕಾಗುತ್ತೆ....


ಸಂಕ್ರಾಂತಿಯ ಶುಭಾಶಯಗಳು.....

sunaath said...

ಸಂಸಾರವೃಕ್ಷದ ಸಿಹಿ ಇರೋದೇ ಮಕ್ಕಳು, ಮೊಮ್ಮಕ್ಕಳು ಎನ್ನುವ ಫಲಗಳಲ್ಲಿ ಅಲ್ಲವೆ, ಪ್ರಕಾಶ?
ಸಂಕ್ರಮಣದ ಹಾರ್ದಿಕ ಶುಭಾಶಯಗಳು.

ಸಿಮೆಂಟು ಮರಳಿನ ಮಧ್ಯೆ said...

ಹರೀಷ್....

ನಮ್ಮ ಆಪ್ತರಲ್ಲಿ.. ರಕ್ತ ಸಂಬಂಧದಲ್ಲಿ...

ನಮ್ಮೆಲ್ಲ ಭಾವನೆಯ.. ಹಂಚಿಕೊಳ್ಳುವ ಭಾವ ಇದೆಯಲ್ಲ
ಅದು ಬಹಳ ಮಧುರ...!

ಅದು ತಾಯಿ ಮಗನ , ಅಣ್ಣ, ತಮ್ಮನ , ಅಪ್ಪ ಮಗಳ....
ಯಾವುದೇ ಬಂಧ ಇರಬಹುದು...

ಬಹಳ ದಿನಗಳ ನಂತರ ನಮ್ಮನೆಗೆ ಅಕ್ಕ ಬಂದಿದ್ದಳು...

ಅಕ್ಕೆಗೂ "ಅಪ್ಪನ" ನೆನಪಿಲ್ಲ...

ನಾನು ಮಗಳ "ಅಪ್ಪನಾಗಿ" ಈ ಕವನದ ಪ್ರಯತ್ನ...!

ಪ್ರತಿಕ್ರಿಯೆಗೆ ಧನ್ಯವಾದಗಳು...

Geetha said...

ಓಹೋ....ನಿಮ್ಮ ಮಗನಿಗೆ ಮಗಳ ವೇಷ ಹಾಕಿ ಅವನ(ಳ) ಮದುವೇನು ಮಾಡ್ಬಿಟ್ರಲ್ಲ ಸರ್ ಪದ್ಯದಲ್ಲೇ!!

ಮಕರ ಸಂಕ್ರಾಂತಿಯ ಶುಭಾಶಯಗಳು,
ನಾಳೆ ಎಳ್ಳು ಬೀರಲು ನಿಮ್ಮ ಮಗ(ಳ)ನ್ನ ಇದೇ get-up ನಲ್ಲಿ ಕಳಿಸಿದ್ರೆ ಚೆನ್ನ... :)

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ನಿಮ್ಮ ಮಗ(ಳು) ತುಂಬಾ ಮುದ್ದಾಗಿದ್ದಾಳೆ :)
ಅದೇನೇ ಇರಲಿ.. ನಿಮ್ಮ ಸಾಲುಗಳು ಒಬ್ಬ ಹೆಣ್ಣು ಮಗಳ ತಂದೆಯ ಆಂತರ್ಯವನ್ನು ತೆರೆದಿಟ್ಟಿದೆ, ಕಣ್ಣು ತುಂಬಿ ಬರುತ್ತದೆ.
ನಿಮಗೆ ಮತ್ತು ನಿಮ್ಮ ಕುಟುಂಬವರ್ಗಕ್ಕೆ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು.
-ರಾಜೇಶ್ ಮಂಜುನಾಥ್

ತೇಜಸ್ವಿನಿ ಹೆಗಡೆ- said...

ಒಂದು ಕ್ಷಣ ಒದು ನಿಮ್ಮ ಮಗಳದೇ ಫೋಟೋ ಇರಬೇಕೆಂದೆನಿಸಿದೆ. ತುಂಬಾ ಮುದ್ದಾಗಿದ್ದಾಳೆ(ನೆ) :)

ನನ್ನ ಕಡೆಯಿಂದಲೂ, ನಿಮಗೆಲ್ಲರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

ಮಲ್ಲಿಕಾರ್ಜುನ.ಡಿ.ಜಿ. said...

Some ಕ್ರಾಂತಿಯ ಶುಭಾಶಯಗಳು ಸರ್‍! ನವರಸ ತುಂಬಿರುವ ನಿಮ್ಮ ಬ್ಲಾಗ್ ಕೂಡ ಕ್ರಾಂತಿಯೇ ಮತ್ತು ಕಾಂತಿ ಕೂಡ. ಎಲ್ಲರಿಗೂ ಶುಭವಾಗಲಿ.

Ashok Uchangi said...

ಈ ರಾಜಾಸ್ತಾನಿ ಹುಡುಗಿ(ಗ)ತುಂಬಾ ಚೆನ್ನಾಗಿದೆ.ಏನಾದರೂ ಒಂದು ಕೀಟಲೆ ಮೂಡುತ್ತಿರುತ್ತೀರಲ್ಲಾ!
ಅಶೋಕ ಉಚ್ಚಂಗಿ
http://mysoremallige01.blogspot.com/

shivu K said...

ಪ್ರಕಾಶ್ ಸಾರ್,

ಇದೇನಿದು, ಸಂಕ್ರಾಂತಿ ಹಬ್ಬದ ದಿನ ಸಂ-ಕ್ರಾಂತಿ ನಡೆಯುತ್ತಿದೆಯಲ್ಲಾ......ನಾನಲ್ಲಿದ್ದಿದ್ದರೆ ಒಂದು ಒಳ್ಳೆಯ ಲೈಟಿಂಗಿನಲ್ಲಿ ಮಾಡೆಲಿಂಗ್ ಫೋಟೊ ತೆಗೆದುಬಿಡುತ್ತಿದ್ದೆ.....ಒಟ್ಟಿನಲ್ಲಿ ನೀವು ಏನೇನೋ ನಡೆಸುತ್ತೀರೀ....

ಫೋಟೋಗೆ ತಕ್ಕ ಕವ-ನವ? ಅಥವ ನವ-ಕವನಕ್ಕೆ ಫೋಟೋನಾ ? ಬಲು ಮಜವಾಗಿದೆ ಎರಡು !!

ಸಂಕ್ರಮಣದ ಹಾರ್ದಿಕ ಶುಭಾಶಯಗಳು.

ಭೂಮಿಕಾ said...

ಹೃದಯ ತುಂಬಿ ಬಂತು... ನಿನ್ನ ಮಗಳ ಜಾಗದಲ್ಲಿ ನನ್ನ ಮಗಳು ಒಂದು ಕ್ಷಣ ನಿಂತಂತಾಯಿತು. ನಿಂಗೇನೋ ಕಲ್ಪನೆ. ನಂಗೆ ಇದು ಒಂದು ದಿನ ವಾಸ್ತವ !

ಶಾಂತಲಾ ಭಂಡಿ said...

ಪ್ರಕಾಶಣ್ಣ...

ಒಂದುಮನೆಗೆ ಹೆಣ್ಣುಮಗಳಾಗಿ ನಾನೂ ಮತ್ತೊಂದುಮನೆಗೆ ಬರೋವಾಗ ನನ್ನ ಅಪ್ಪ ಅಮ್ಮರ ಭಾವನೆಗಳನ್ನ ಮತ್ತೊಮ್ಮೆ ನಿಮ್ಮ ಕವನದಲ್ಲಿ ಕಂಡೆ. ನಿಮ್ಮದಲ್ಲದ ಪಾತ್ರಗಳನ್ನೂ ಹೊಕ್ಕು ಅ ಭಾವನೆಗಳನ್ನು ಅನುಭವಿಸುವ ನಿಮ್ಮ ಸಾಮರ್ಥ್ಯಕ್ಕೆ ಶರಣು.

ನನಗೆ ಒಬ್ಬಳು ಮಗಳು ಇದ್ದಿದ್ರೆ ನಿಮ್ಮ ಮಗಂಗೇ ಕೊಟ್ಬಿಡ್ತಿದ್ದಿ. ಒಳ್ಳೇ ಮಾವ. ಇಲ್ಲದ ಹೆಣ್ಣುಮಗಳ ಬಗ್ಗೆ ಎಷ್ಟು ಚೆಂದದ ಭಾವನೆಗಳು!

ನಿಮ್ಮ ಅಕ್ಕನಿಗೆ ಸಂಕ್ರಾಂತಿಯ ಉಡುಗೊರೆಯಾಗಿ ಬಲು ಅಂದದ ಉಡುಗೊರೆಯನ್ನೇ ಕೊಟ್ಟಿದ್ದೀರಿ. ನಿಮ್ಮ ಬರಹಗಳು ಇಷ್ಟವಾಗುವುದೇ ಹೀಗೆ.

ನಿಮ್ಮೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು.

ಶರಶ್ಚಂದ್ರ ಕಲ್ಮನೆ said...

ಪ್ರಕಾಶಣ್ಣ, ಹಿಂಗೆ ಫೋಟೋ ಹಾಕ್ತಾ ಇದ್ರೆ ಜಾತಕ ಕೆಳ್ಕ್ಯಂದು ಬತ್ತ ನೋಡು... :)

ಪಾಲಚಂದ್ರ said...

ಉಪನಯನದ ಸಮಯದಲ್ಲಿ ಹಿಂಗೆ ಹುಡ್ಗಿ ವೇಷ ಹಾಕಿ ಫೋಟೋ ತೆಗೀತಾರಲ್ಲ, ಚೆನ್ನಾಗಿದೆ. ನಿಮಗೂ ಕೂಡ ಸಂಕ್ರಾಂತಿಯ ಶುಭಾಷಯ

ಚಿತ್ರಾ said...

ಪ್ರಕಾಶ್ ,

ಎದೆ ತುಂಬುವ ಕವನ !
ಆದರೆ , ಇಂದಿನ ಪರಿಸ್ಥಿತಿಯಲ್ಲಿ , ಈ ಭಾವನೆಗಳು ಮಗಳಿಗಷ್ಟೇ ಅಲ್ಲ ಮಗನ ಬಗ್ಗೆಯೂ ಹೊಂದುತ್ತವೆ ಎಂದು ನನ್ನ ಅನಿಸಿಕೆ .
ಅಂದಹಾಗೇ , ಹರೀಶ ,
ನಿಂಗೆ , ಕವನಕ್ಕಿಂತ ಫೋಟೋನೆ ಹೆಚ್ಚು ಇಷ್ಟ ಆದ ಹಾಂಗೆ ಕಾಣ್ತಲ ಮಾರಾಯ? ;)

ಸಿಮೆಂಟು ಮರಳಿನ ಮಧ್ಯೆ said...

ಮನಸು....

ಮಗಳು ಹುಟ್ಟಿದಾಗಿನಿಂದ ತಂದೆಗೆ ನೋವಿನ ಸೆಲೆಯೋದು ಶುರುವಾಗಿರುತ್ತದೆ...
ಬಿಟ್ಟು ಹೋಗುತ್ತಾಳಲ್ಲ.... ಎಂದು..
ತಂದೆ ಮಗಳ ಅನುಬಂಧ ನನಗೆ ಅನುಭವಿಸಲು ಆಗುವದಿಲ್ಲವಲ್ಲ ಎಂಬ ಸಣ್ಣ ಕೊರಗು ಇದೆ...
ಸೊಸೆ ಬರುತ್ತಾಳಲ್ಲ...
ಅವಳೆ ಮಗಳು.. ಅಲ್ಲವಾ..?.....

ನಿಮಗೆ ಸಂಕ್ರಾಂತಿಯ ಶುಭಾಶಯಗಳು...

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್...

ರಕ್ತ ಸಂಬಂಧಗಳ ಅನುಬಂಧ .....
ಗೌರವ ಕೊಡುವ ಭಾವನೆ ಈಗ ಕಡಿಮೆಯಾಗುತ್ತಿದೆ...
ವಯಸ್ಸಾದ ಹಿರಿಯರ ಭಾವನೆಗಳು ಈಗಿನ ಕಿರಿಯರಿಗೆ..
ಅರ್ಥವಾಗುವದಿಲ್ಲ...
ಅರ್ಥಮಾಡಿಕೊಳ್ಳುವ ವ್ಯವಧಾನವೂ ಇಲ್ಲ...
ಸಂಬಂಧಗಳ ಕೊಂಡಿ ಕಳಚುತ್ತಿದೆಯೆ..?
ಹಾಗಾಗ ಬಾರದು...

ನಿಮಗೆ ಸಂಕ್ರಮಣದ ಶುಭಾಶಯಗಳು...

ಸಿಮೆಂಟು ಮರಳಿನ ಮಧ್ಯೆ said...

ಗೀತಾರವರೆ...

ಕಂಡು ಹಿಡಿದು ಬಿಟ್ಟಿರಲ್ಲ...
ನನ್ನಕ್ಕ, ನಾನು ಸೇರಿದಾಗ ಇಂತಹ ತುಂಟಾಟ ಮಾಡುತ್ತಿರುತ್ತೇವೆ..
ನನ್ನ ಹೆಂಡತಿ ಸಾಥ್ ನೀಡಿದಳು...

ನಿಮ್ಮ "ಒಬ್ಸರ್ವೇಷನ್" ಗೆ ಅಭಿನಂದನೆಗಳು...

ಆಶೀಷ್..ಮೊದಲು ಒಪ್ಪಲಿಲ್ಲ...
ಅವನ "ಅತ್ತೆ" ಒಪ್ಪಿಸಿದಳು...


ಸರಸತ್ತೆ "ದೋಸೆ, ಚಟ್ನಿ" ರುಚಿ ನೋಡಲಿಲ್ಲ ಅಲ್ಲವಾ..?

ಒಮ್ಮೆ ರುಚಿ ನೋಡಿ... ನಗಲಿಕ್ಕೆ..

ನಿಮಗೆ ಸಂಕ್ರಮಣದ ಶುಭಾಶಯಗಳು...

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್...

ನೀವು " ಆಶೀಷ್" ಫೋಟೊ ಮೊದಲೆ ನೋಡಿ ಬಿಟ್ಟಿದ್ದಿರಲ್ಲವಾ..?

ಮನುಷ್ಯ ಸಂಬಂಧಗಳಲ್ಲಿ " ಸ್ವಾರ್ಥ" ಭಾವ ಬಂದು ಬಿಟ್ಟರೆ...
ಅದರಷ್ಟು ಕೆಟ್ಟದು ಇನ್ನಿಲ್ಲ...

ಜೀವನದಲ್ಲಿ "ಕೆಲವೇ.... ಕೆಲವರ " ಬಳಿಯಾದರೂ ಸ್ವಾರ್ಥ ಇಲ್ಲದೇ ಇರಬಹುದಲ್ಲ..

ಅಂಥವರೊಡನೆ ಕಳೆಯುವ ಸಮಯ ಬಹಳ ಆತ್ಮೀಯವಾಗಿರುತ್ತದೆ...

ಅಂಥಹ ಸಂಬಂಧಗಳಲ್ಲಿ ಒಂದು ..

" ತಂದೆ ಮಗಳ" ಅನುಬಂಧ...
ಅದನ್ನು ವರ್ಣಿಸಲು ಶಬ್ಧಳಿಲ್ಲ..

ನನ್ನದೊಂದು ಪ್ರಯತ್ನ ..
ನಿಮಗೆ ಇಷ್ಟವಾಗಿದುದಕ್ಕೆ...

ಧನ್ಯವಾದಗಳು...
ನಿಮಗೆ ಸಂಕ್ರಮಣದ ಶುಭಾಶಯಗಳು...

ಸಿಮೆಂಟು ಮರಳಿನ ಮಧ್ಯೆ said...

ತೇಜಸ್ವಿನಿಯವರೆ...

ನನ್ನಕ್ಕ ಅಂದರೆ ನನ್ನ ಮಗನಿಗೆ ತುಂಬಾ ಖುಷಿ..
ಕೆಲವೇ ಕ್ಷಣಗಳ "ಶರತ್ತು" ಹಾಕಿ ಸೀರೆ ಉಡಲು ಒಪ್ಪಿದ..
ಬ್ಲೋಗನಲ್ಲಿ ಹಾಕಬಾರದೆಂಬ ಶರತ್ತು ಇರಲಿಲ್ಲ..

ನಿಮಗೂ ನಿಮ್ಮ ಮನೆಯವರೆಲ್ಲರಿಗೂ ಸಂಕ್ರಾಂತಿಯ ..
ಹಾರ್ದಿಕ ಶುಭ ಕಾಮನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್....

ನಿಮ್ಮ ಬ್ಲೋಗಿನ "ಮುತ್ತಿನ ಸರಗಳ" ಫೋಟೊಗಳು.. ಸೂಪರ್...!

ವರ್ಣಿಸಲು ಶಬ್ಧಗಳಿಲ್ಲ...

ನಿಮಗೆ, ಶಿವುರವರಿಗೆ "ಆಶೀಷ್" ಈ ರೂಪ ಸಿಕ್ಕಿದ್ದರೆ..
ಅವಾರ್ಡ್ ಫೋಟೊ ತೆಗೆದು ಬಿಡುತ್ತಿದ್ದೀರೆನೋ..

ನನಗೆ ಆಗಲಿಲ್ಲ...

ನಿಮಗೂ, ನಿಮ್ಮ ಮನೆಯವರಿಗೆಲ್ಲ
ಬೇವುಬೆಲ್ಲ..
ನಿಮ್ಮೆಲ್ಲ..
ಅಸೆ.. ಕನಸುಗಳೆಲ್ಲ...

ನನಸಾಗಲಿ.....

ಶುಭ ಕಾಮನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಅಶೋಕ್...

ಹೇಗೆ ಸುಮ್ಮನಿರಲಿ...?

ನನ್ನಕ್ಕ ಬೇರೆ ಬಂದಿದ್ದಳು..
ಮತ್ತೆ ಬಾಲ್ಯದ ನೆನಪುಗಳೊಂದಿಗೆ...
ನನ್ನ ಅಕ್ಕನ ಮಕ್ಕಳಿಗೂ ಹೀಗೆ ಮಾಡುತ್ತಿದ್ದೆವು...
"ಆಶೀಷ್" ಗೂ ಮಾಡಿ ಬಿಟ್ಟೆವು...

ಹ್ಹಾ..ಹ್ಹಾ..!

ನಿಮಗೂ ಸಂಕ್ರಮಣದ ಶುಭಾಶಯಗಳು...

ಭಾರ್ಗವಿ said...

ನಿಮ್ಮ ಮಗಳು ಅಶಿತ ತುಂಬಾ ಚೆನ್ನಾಗಿದ್ದಾಳೆ. ಆಶಿಶ್ ಅಂತ ತಿಳಿಯಲು ಮತ್ತೊಮ್ಮೆ ನೋಡಬೇಕಾಯ್ತು.ಕವನವು ತುಂಬಾ ಚೆನ್ನಾಗಿದೆ.ನಿಮ್ಮ ಮುಂಬರುವ ಸೊಸೆ ಬಹಳ ಅದೃಷ್ಟವಂತಳು ಅಂತ ಮಾತ್ರ ಹೇಳಬಲ್ಲೆ.
ನಿಮಗೂ ಸಂಕ್ರಮಣದ ಶುಭಾಷಯಗಳು.

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್....

ನಾನು " ಏನೇನೋ" ಮಾಡ ಹೊರಟರೆ...
ಆಶೀಷ್ ಕೂಡ.. ನೋ..ನೋ.." ಅಂದ..

ನಿಮ್ಮ ಕೈಗೆ " ಆಶೀಷನ" ಈ ರೂಪ ಸಿಕ್ಕಿದ್ದರೆ...!
ಅದರ ಮಜಾ ಬೇರೆಯೇ ಇರುತ್ತಿತ್ತು...!!
ಕನ್ನಡ ದಿನಪತ್ರಿಕೆಯ ಮುಖಪುಟದಲ್ಲಿ ಹಾಕಿ ಬಿಡುತ್ತಿದ್ದೀರೆನೋ..!

ನೀವು, ಮಲ್ಲಿಕಾರ್ಜುನ್ ಇಬ್ಬರೂ...
ಅದ್ಭುತ ಛಾಯಾಗ್ರಾಹಕರು..!

ನಿಮಗೂ ನಿಮ್ಮ ಮನೆಯವರಿಗೂ ..
ಸಂಕ್ರಾಂತಿಯ ಶುಭ ಹಾರೈಕೆಗಳು...

ಸರ್ ಗುಟ್ಟಾಗಿಡಲು ಸಾಧ್ಯವಾಗಿಲ್ಲ...
ಹ್ಹಾ..ಹ್ಹಾ...!

ಸಿಮೆಂಟು ಮರಳಿನ ಮಧ್ಯೆ said...

ಭೂಮಿಕಾ...

ಬ್ಲೋಗ್ ಲೋಕಕ್ಕೆ ಸುಸ್ವಾಗತ....

ನಮ್ಮ ರಕ್ತ ಸಂಬಂಧಗಳೇ ಹಾಗೆ...

ಹೆಣ್ಣು ಮಕ್ಕಳಷ್ಟು ಭಾವುಕರಾಗಿ ಗಂಡುಮಕ್ಕಳಿರುವದಿಲ್ಲ... ಕಡಿಮೆ....

ಹೆಣ್ಣುಮಕ್ಕಳು ಪ್ರೀತೀಸುವಷ್ಟು ಗಂಡುಮಕ್ಕಳಿಂದ ಆಗುವದಿಲ್ಲ...
ಮದುವೆಯಾದಮೇಲಂತೂ..
ಗಂಡುಮಕ್ಕಳಿಗೆ ಕೆಲವು "ಅನಿವಾರ್ಯತೆಗಳು" ಎದುರಿಗೆ ಬಂದು ಬಿಡುತ್ತವೆ...
ಆದರೆ ...
ಹೆಣ್ಣುಮಕ್ಕಳು..ಆ "ಅನಿವಾರ್ಯತೆಗಳನ್ನೂ"

ಮೀರಿ....

ತಮ್ಮ ತಾಯಿಯನ್ನ.. ತಂದೆಯನ್ನ..
ಹಂಬಲಿಸುತ್ತಾರೆ...
ಶುದ್ಧವಾಗಿ....ನಿಷ್ಕಲ್ಮಶವಾಗಿ ಪ್ರೀತಿಸುತ್ತಾರೆ...

ಹಾಗಾಗಿ.. ಹೆಣ್ಣುಮಕ್ಕಳೇ ಒಂದು ಕೈ ಮೇಲೆ ....
ಅಲ್ಲವಾ..?

ನಿನ್ನಿಂದ ಹಲವಾರು ಬರಹಗಳ ನಿರಿಕ್ಷೆಯಲ್ಲಿರುವೆ...

ನಿಮ್ಮೆಲ್ಲರಿಗೂ..
ಸಂಕ್ರಾಂತಿ...
ಶುಭ ತರಲಿ...

Harish - ಹರೀಶ said...

@ಚಿತ್ರಕ್ಕಾ, ಇತ್ತೀಚಿಗೆ ಬ್ಲಾಗಲ್ಲಿ ನನ್ ಕಾಲ್ ಎಳೆಯವ್ವು ಜಾಸ್ತಿ ಆಜ.. ನೀನೂ ಒಬ್ಳು ಹೊಸ ಸೇರ್ಪಡೆ.. ಆ ಫೋಟೋ ಪ್ರೊಫೈಲ್ ಫೋಟೋ ಎರಡೂ ಒಂದೇ ಥರ ಕಂಡ್ಚು.. ಅದ್ಕೆ ಕೇಳ್ದಿ :-)

Kishan said...

the last line "ನೀನೇ ತಂದೆ... ತಾಯಿಯಾಗಿ.... ಮಗಳೇ....!" has quadrupled the weight of the poem and depicts the true expectations of parents. FantasticO!

ಶ್ರೀಯುತ ಇಟ್ಟಿಗೆಸಿಮೆಂಟು ಹಾಗೂ ಎಲ್ಲಾ ಸಹ ಓದುಗರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು !

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ.....

ನನಗೆ " ಮಗಳೆ" ಆಗುವಳು ಎಂಬ ನಿರೀಕ್ಷೆಯಲ್ಲಿದ್ದೆ....
ಹೆಸರೂ ಕೂಡ ಸಿಲೆಕ್ಟ್ ಮಾಡಿಬಿಟ್ಟಿದ್ದೆ...

ದೇವರು ಎಲ್ಲವನ್ನೂ ಅದರಂತೇ ಮಾಡಿ...

ಕೊನೆಗೆ ಮನಸ್ಸು ಬದಲಿಸಿದ ಅನಿಸುತ್ತದೆ...


ನನಗೆ ಹೆಣ್ಣುಮಕ್ಕಳೆಂದರೆ ಹೊಟ್ಟೆಕಿಚ್ಚಿದೆ...

ನಾವು ಯಾವುದೇ ಅನುಭವ ಅನುಭವಿಸಬಹುದು...

ಆದರೆ...
ಸಣ್ಣ.. ಸಣ್ಣ.. ವಿಷಯಗಳಿಗೂ ಸಂಭ್ರಮ ಪಡುವ...
ಖುಷಿ ಪಡುವ.. ಮನಸು...
ಒಂದು ತಾಯಿಯಾಗಿ.. ಪ್ರೀತಿ ಧಾರೆ ಎರೆಯುವ.....
ತಾಯಿಯ... ಹ್ರದಯ......

ಗಂಡಸರಿಗೆ......

ಬರುವದೂ ಇಲ್ಲ..
ಅರ್ಥವಾಗವದೂ...ಇಲ್ಲ...

ಆ ಬಗ್ಗೆ ಬೇಸರವಿದೆ....

ನಿಮಗೂ.. ನಿಮ್ಮ ಮನೆಯವರಿಲ್ಲರಿಗೂ...
ಸಂಕ್ರಾಂತಿಯ... ಶುಭಾಶಯಗಳು....

ಸಿಮೆಂಟು ಮರಳಿನ ಮಧ್ಯೆ said...

ಶರತ್....

ಅವನನ್ನು ಒಪ್ಪಿಸುವದು ನನ್ನಿಂದಾಗಲಿಲ್ಲ...

ಅವನ ಅತ್ತೆಯೇ ಬರಬೇಕಾಯಿತು...

ಫೋಟೋದಲ್ಲಿರುವದಕ್ಕಿಂತಲೂ..
ಚಂದವಾಗಿ ಕಾಣುತ್ತಿದ್ದ...!

ನಿಮಗೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು...

ಸಿಮೆಂಟು ಮರಳಿನ ಮಧ್ಯೆ said...

ಪಾಲಚಂದ್ರ...

ನಿಮ್ಮ ಬ್ಲೋಗಿನ.. "ಕುಂದಾಪುರದ" ಭಾಷೆಯ ಲೇಖನ ನನಗೆ ಬಹಳ ಇಷ್ಟವಾಯಿತು...

ಹೆಣ್ಣು ವೇಷದಲ್ಲಿ ನನ್ನ ಮಗ ತುಂಬಾ ಮುದ್ದಾಗಿ ಕಾಣುತ್ತಿದ್ದ...

ನಾನು ಫೋಟೊಗ್ರಫಿಯಲ್ಲಿ ಪರಿಣಿತನಲ್ಲ..
ನಿಮ್ಮ ಲೇಖನಗಳು "ಫೋಟೊಗ್ರಫಿಗೆ" ತುಂಬ ಉಪಯುಕ್ತವಾಗಿದೆ...

ನಿಮಗೆ ಸಂಕ್ರಾಂತಿಯ ಶುಭಾಶಯಗಳು...

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ...

ನಿವೆನ್ನುವದು ನಿಜ..

ಆದರೂ ಗಂಡುಮಕ್ಕಳು ತಮ್ಮ ಬಳಿಯಲ್ಲಿರುತ್ತಾರೆಂಬ ಭಾವನೆ....

ಹೆಣ್ಣುಮಕ್ಕಳು ಮದುವೆಯಾಗಿ ದೂರ ಹೋಗಿಬಿಡುತ್ತಾರೆಂಬ ಭಾವ...

ತಂದೆಗೆ ಯಾವಾಗಲೂ.. ಕಾಡುತ್ತಿರುತ್ತದೆ...

ಅದು ನನ್ನ ಮಗನ ಫೋಟೊ ಎಂದು ಗೊತ್ತಾಗದಿರಲಿ ಎಂದು ಕೊಂಡಿದ್ದೆ...

ಆದರೆ ಎಲ್ಲರಿಗೂ ಗೊತ್ತಾಗಿ ಹೋಯಿತು..!

ನಿಮಗೆ ಸಂಕ್ರಾಂತಿಯ ಶುಭಾಶಯಗಳು...

ಸಿಮೆಂಟು ಮರಳಿನ ಮಧ್ಯೆ said...

ಭಾರ್ಗವಿಯವರೆ...

ಗಂಡಿಗೆ ಹೆಣ್ಣಷ್ಟು...
ಪ್ರೀತಿ ಮಾಡಲೂ ಬರುವದಿಲ್ಲ...
ಸಣ್ಣ.. ಸಣ್ಣ ವಿಷಾಯಗಳಿಗೆ ಖುಷಿ, ಬೇಸರ ಮಾಡಿಕೊಳ್ಳಲೂ ಬರುವದಿಲ್ಲ...
ಸ್ವಲ್ಪ ನೀರಸ.. ಅಂದರೂ ತಪ್ಪಾಗಲಾರದು...

ಅದಕ್ಕೇ ನಮ್ಮ ಹಿರಿಯ ಕವಿಗಳು ಹೆಣ್ಣನ್ನು " ಪ್ರಕ್ರತಿಗೆ" ಹೋಲಿಸಿದ್ದಾರೆ...

ಅಲ್ಲವಾ..?

ನಿಮಗೆ ಸಂಕ್ರಾಂತಿಯ ಶುಭಾಶಯಗಳು...

ಸಿಮೆಂಟು ಮರಳಿನ ಮಧ್ಯೆ said...

ಹರೀಷ್....

ಅದು ಯಾಕೋ ಗೊತ್ತಿಲ್ಲ...

ನಿಮ್ಮನ್ನು ಕಂಡರೆ ನನಗೂ ಹಾಗೇ ಅನಿಸುತ್ತದೆ...!

ಕಾಲೆಯೋಣ ಅನಿಸುತ್ತದೆ...!

ಬೇಸರವಿಲ್ಲತಾನೇ..?

ಸಂಕ್ರಾಂತಿಯ ಶುಭಾಶಯಗಳು...

ಸಿಮೆಂಟು ಮರಳಿನ ಮಧ್ಯೆ said...

ಕಿಶನ್...

ಆ ವಾಕ್ಯ ಮೊದಲು...

"ನೀನೇ... ತಂದೆಯಲ್ಲ.. ಮಗಳೆ ... ತಾಯಿಯಾಗಿ"

ಅಂತಿತ್ತು...

ಅಮೇಲೆ ಯಾಕೋ ಸರಿ ಹೊಂದಲಿಲ್ಲ ಎಂದು.. ಬದಲಿಸಿದೆ...

ನಿಮಗೂ ಸಹ
ಸಂಕ್ರಾಂತಿಯ ಶುಭಾಶಯಗಳು...

Harish - ಹರೀಶ said...

ಹ್ಮ್ಮ್.. ಎಳೀರಿ ಎಳೀರಿ.. ಸ್ವಲ್ಪ ಉದ್ದ ಆದ್ರೆ ನಂಗೂ ಒಳ್ಳೇದು..

ಸಿಮೆಂಟು ಮರಳಿನ ಮಧ್ಯೆ said...

ಹರೀಷ್...

ಬಹುಷಃ ನಿಮ್ಮ ತುಂಟತನದಿಂದ..
ನಮಗೆ ಹಾಗೇ ಅನಿಸಬಹದು..

ಹ್ಹಾ..ಹ್ಹಾ..!!

ಅಂತರ್ವಾಣಿ said...

ಚೆನ್ನಾಗಿ ಕಾಣಿಸ್ತಾನೆ ಆಶಿಶ್ :)
ಕವನವೂ ಸೂಪರ್ ಪ್ರಕಾಶಣ್ಣ

ಸಿಮೆಂಟು ಮರಳಿನ ಮಧ್ಯೆ said...

ಜಯಶಂಕರ...

ಸಂಕ್ರಮಣದ ಶುಭಾಶಯಗಳು...

ಎಲ್ಲಿ ಹೋಗಿದ್ರಿ ಇಷ್ಟು ದಿನ...?

ಬಹಳ ಕಷ್ಟ ಪಟ್ಟು ಒಪ್ಪಿಸಿ ತೆಗೆದದ್ದು...

ಪ್ರತಿಕ್ರಿಯೆಗೆ ಧನ್ಯವಾದಗಳು...

ಚಿತ್ರಾ ಕರ್ಕೇರಾ said...

ಪ್ರಕಾಶ್ ಸರ್..ಚೆಂದದ ಮಗಳಿಗೆ ಇಷ್ಟೆಲ್ಲ ಹೇಳಿದ್ದೀರಾ..ನಮಗೂ ಒಳ್ಳೆ ಕಿವಿಮಾತು...ನಂಗಂತೂ ನಿಮ್ ಮಾತುಗಳು ಭಾಳ ಖುಷಿ ತಂದುವು. ಯಾಕೋ 'ತವರೂರ ಮನೆ ನೋಡ ಬಂದೆ.." ಹಾಡು ನೆನಪಾಯಿತು. ಏನೇ ಇರಲಿ..ನನ್ ತಲೆಯಲ್ಲಿ ಚೆಂದದ ಮಗಳೇ,,.,,ಚೆಂದದ ಮಗಳೇ,,,,ಅಂತ ನಿಮ್ ಪತ್ರ ನಿತ್ಯ ಸುಫ್ರಭಾತದಂತೆ ಅಚ್ಚೊತ್ತಿಬಿಡ್ತು. ಸರ್ರ್ರರುಉಉಉಉಉ..ಫೋಟೋ ಯಾರದ್ದು?.....
-ಚಿತ್ರಾ

ಭಾರ್ಗವಿ said...

ಸ್ವಲ್ಪ ನೀರಸ,,,(101%) ತುಂಬಾ ನಿಜ:-). ಎಷ್ಟು ಚೆನ್ನಾಗಿ ಹೇಳಿದ್ದೀರಿ.ಇನ್ನು ಹೆಣ್ಣು & ಪ್ರಕೃತಿ ಬಗ್ಗೆ ದೂರದರ್ಶನದಲ್ಲಿ (ತುಂಬಾ ಹಿಂದೆ ನೋಡಿದ್ದು ಈಗ ಬರುತ್ತೋ ಇಲ್ಲೋ ಗೊತ್ತಿಲ್ಲ) ನಾನು ಹಡೆದವ್ವಾ,,,ಹೆಸರು ಪ್ರಕೃತಿ ಮಾತೇ,,,,, ಅಂತ ಬರುತ್ತಿದ್ದ ಹಾಡು ನೆನಪಾಯ್ತು.ತುಂಬಾ ಇಷ್ಟವಾದ ಹಾಡು.ಎಲ್ಲಾ ನೆನಪು. ಧನ್ಯವಾದಗಳು.

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ.....

ಅದು ನಿಮ್ಮ ಪ್ರೀತಿಯ "ಆಶೀಷ್"

ಪ್ರೀತಿಸುವ ಹ್ರದಯವಿದ್ದರೆ....

ಪ್ರೀತಿಸಬಹುದಲ್ಲ....
ಮಗಳಾದರೇನು.. ಮಗನಾದರೇನು..?

ಮಗಳೆಂದು ಕನಸು ಕಂಡೆ...

ಅಗಲಿಲ್ಲ....

ಒಮ್ಮೆ ಈ ವೇಷ ತೊಡಿಸಿ ನೋಡಿ ಅನುಭಾವ..
ಅನುಭವಿಸಿದೆ...

ಸಂತೋಷವಾಗಿತ್ತು...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಭಾರ್ಗವಿಯವರೆ....

ಹೆಣ್ಣಾಗಿ ಅನುಭವಿಸಲು...
ಖುಷಿ ಪಡಲು..
ನಮ್ಮಂಥಹ ಗಂಡಸರಿಗೆ ಸಾಧ್ಯವಿಲ್ಲ...

ಇದೇ ಕಾರಣಕ್ಕೆ ಹೊಟ್ಟೆಕಿಚ್ಚೂ ಕೂಡ ಇರುತ್ತದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...