Tuesday, January 6, 2009

ಆಕಳಿಕೆಯಲ್ಲಿದೆ...ಸ್ವರ್ಗ ಸುಖಾ...!!!


ಈ... ಪ್ರಪಂಚದ.. ಅರಿವೇ ಇಲ್ಲದೆ.. ಬೆಕ್ಕಣ್ಣ ಮಲಗಿತ್ತು...
ಆಶೀಷನಿಗೆ ಸುಮ್ಮನಿರಲಾಗಲಿಲ...
"ಅಪ್ಪಾ ..ಸುಮ್ಮನೆ..ಮಲಗಿ.. ಬಿಟ್ಟಿದೆಯಲ್ಲಪ್ಪಾ.....!! "
ಬಹಳ .. ಪೇಚಾಡಿದ.....
"ಮಗನೆ .. ಕ್ಯಾಮರಾ.. ತಗೊಂಡು .. ಬಾ. ." ಅಂದೇ.....
ಆಶೀಷ.. ಒಂದು ದಾರದ ತುದಿಯಿಂದ..... ..
ಅದರ ಮೂಗಿಗೆ..." ಗಿಲಾಗಿಲಾ.."
ಅಂತ ... ಮಾಡಿದ...
ನಾನು ಫೋಟೋ ತೆಗೆಯುತ್ತಾ ಹೋದೆ....

20 comments:

ಶರಶ್ಚಂದ್ರ ಕಲ್ಮನೆ said...

ಎಲ್ಲ ಫೋಟೋಗಳೂ ಚನ್ನಾಗಿದ್ದು ಪ್ರಕಾಶಣ್ಣ. ಈ ಫೋಟೋ ತುಂಬ ಇಷ್ಟ ಆತು. ಅಪ್ಪ ಮಗ ಸೇರಿ ಒಳ್ಳೆ ಫೋಟೋಗಳನ್ನ ತೆಗದ್ದಿ :)

ಸಿಮೆಂಟು ಮರಳಿನ ಮಧ್ಯೆ said...

ಶರತ್...

ಈ ಫೋಟೊ ತೆಗೆದದ್ದು ಆಶೀಶನೇ...!!

ಉಳಿದ ಫೋಟೊ ತೆಗೆದದ್ದು ನಾನು..

ಅವನ ಕಿತಾಪತಿಗೆ ಸಾಥ್ ನೀಡಿದೆ..

ನೀನು ಬಿಡಿಸಿದ ಚಿತ್ರಗಳು ಸೂಪರ್ ಮಾರಾಯಾ..!
ಚಂದವಾಗಿ ಬಿಡಿಸಿದ್ದೀಯಾ..

ಪ್ರತಿಕ್ರಿಯೆಗೆ ಧನ್ಯವಾದಗಳು...

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ಯಾಥಾ ರಾಜ ತಥಾ ಪ್ರಜಾ ಅನ್ನೋ ಹಾಗಿದೆ ನೀವು ಅಪ್ಪ ಮಗನ ಫೋಟೋಗ್ರಫಿ. ಚಿತ್ರಗಳು ಹಾಗು ಸಮಯ ಪ್ರಜ್ಞೆ ಚೆನ್ನಾಗಿದೆ, ಜೊತೆಗೆ ನಿರೂಪಣೆಯ ಬಗ್ಗೆ ಅಂತು ಎರಡು ಮಾತಿಲ್ಲ.
-ರಾಜೇಶ್ ಮಂಜುನಾಥ್

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್ ಮಂಜುನಾಥ್...

ಮಗ ತುಂಟನಲ್ಲ ಅನ್ನುವದೇ ನನ್ನ ಕೊರಗು..

ತುಂಬಾ ಜಂಟಲ್ಮನ್..

ಪ್ರತಿಕ್ರಿಯೆಗೆ ಧನ್ಯವಾದಗಳು...

ಚಂದ್ರಕಾಂತ ಎಸ್ said...

ಸೊಗಸಾದ ಚಿತ್ರಗಳು ಅಷ್ಟೇ ಸೊಗಸಾದ ನಿರೂಪಣೆ. ಅಂತೂ ನಿಮ್ಮ ಆಶೀಶ ಉತ್ತಮ ಛಾಯಾಚಿತ್ರಕಾರನಾಗುವ ಲಕ್ಷ್ಣ ತೋರುತ್ತಿದ್ದಾನೆ. ಅವನಿಗೆ ಅಭಿನಂದನೆಗಳನ್ನು ತಿಳಿಸಿ.

ಚಿತ್ರಾ said...

ವಾಹ್ !

ಭಾರಿ ಚೆನಾಗಿ ಬಂಜು. ವೆರಿ ಗುಡ್ ಆಶೀಷ್ !
ಎಲ್ಲಾ ಫೋಟೋ ನೂ ಅವನೇ ತೆಗೆದಿದ್ದಾ? ಗುಡ್ ಟೈಮಿಂಗ್ !

ರಾಘವೇಂದ್ರ ಕೆಸವಿನಮನೆ. said...

ಹೆಗಡೇರೆ,
ಫೋಟೋಸ್ ಎಲ್ಲಾ ಸೂಪರ್ಬ್..!! ನಮ್ಮ ಕಡೆಯಿಂದ ನಿಮ್ಮ ಪುತ್ರರತ್ನನಿಗೊಂದು ಥ್ಯಾಂಕ್ಸ್ ಹೇಳಿಬಿಡಿ. ಹಾಗೇ ಫೋಸು ಕೊಟ್ಟ ಬೆಕ್ಕಿಗೂ.....!!!!!
ನಿಮ್ಮ ಅದು... ಇದು ... ಲೇಖನವೂ ಚಲೋ ಇತ್ತು.
- ರಾಘವೇಂದ್ರ ಕೆಸವಿನಮನೆ.

ಸಿಮೆಂಟು ಮರಳಿನ ಮಧ್ಯೆ said...

ಚಂದ್ರಕಾಂತರವರೆ...

ಆಶೀಶ್ ನಿಮಗೆ ವಂದನೆ ತಿಳಿಸಿದ್ದಾನೆ

ಪ್ರಯತ್ನ , ತರಬೇತಿ ಇದ್ದರೆ ಅಗಬಹುದೇನೊ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಾ ಇರಿ...

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ....

ಇದೊಂದೆ ಫೋಟೊ ಅವನು ತೆಗೆದಿರುವದು...

ಅವನು ನಿಮಗೆ ವಂದನೆ ತಿಳಿಸಿದ್ದಾನೆ...

ಹಿಂದುಗಡೆಯಿಂದ ಪುಷ್ ಮಾಡಿದಷ್ಟು ಸಾಲದು ಅವನಿಗೆ...

ಸಂಕೋಚ ಸ್ವಭಾವ...

ಧನ್ಯವಾದಗಳು...

ಹೀಗೆ ಬರುತ್ತಾ ಇರಿ...

ಸಿಮೆಂಟು ಮರಳಿನ ಮಧ್ಯೆ said...

ರಾಘವೇಂದ್ರರವರೆ....

ನನ್ನ ಮಗ ಮಹಾಷಯನೂ ನಿಮಗೆ ವಂದನೆ ತಿಳಿಸಿದ್ದಾನೆ...

ಬೆಕ್ಕು ನಮ್ಮ ಹಳೆಮನೆಯಲ್ಲಿತ್ತು..
(ಬಾಡಿಗೆ ಮನೆ)

ಪ್ರತಿಕ್ರಿಯೆ ವಂದನೆಗಳು...

ನೀವು ಇದು ಓದಿ ಅದಾಗಿದ್ದಕ್ಕೂ...

ನನ್ನ ಅದುಗಳು...

ಚಿತ್ರಾ ಕರ್ಕೇರಾ said...

ಯಪ್ಪಾ..ಎಂಥ ಫೋಟೋಗಳು..ಎಂಥ ಮಾತುಗಳು. ಏನೋ ಪ್ರಕಾಶ್ ಸರ್ ದಿನಸರಿದಂತೆ ತುಂಬಾ ಚೆನ್ನಾಗಿ ಬರೀತಾ ಇದ್ದಾರೆ. ಆಶೀಸ್ ಗೆ ನನ್ನ ನೆನೆಕೆಗಳನ್ನು ತಿಳಿಸಿ.
-ಚಿತ್ರಾ

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾರವರೆ....

ಆಶೀಷ್..ತಮಗೆ ವಂದನೆ ತಿಳಿಸಿದ್ದಾನೆ...

ಹ್ರದಯ ಪೂರ್ವಕ ವಂದನೆಗಳು...

ಬರುತ್ತಾ ಇರಿ..

sunaath said...

ನಿಮ್ಮ ಬೆಕ್ಕಣ್ಣ ಎಷ್ಟು ಚೆಂದವಾಗಿದ್ದಾನಲ್ಲಾ!

ಸಿಮೆಂಟು ಮರಳಿನ ಮಧ್ಯೆ said...

ಸುನಾಥ್ ಸರ್...

ನನಗೆ ಬೆಕ್ಕು ಅಂದರೆ ಸ್ವಲ್ಪನೂ ಇಷ್ಟವಿಲ್ಲ...

ಸಣ್ಣವರಿದ್ದಾಗ "ಅಪಶಕುನ" ಎಂದು ಕೇಳಿದರ ಪರಿಣಾಮವೇನೋ...

ಪೂರ್ವಗ್ರಹ ಪೀಡಿತನಾಗಿಲ್ಲ..
ಆದರೂ...
ಚಂದ ಕಾಣುವದೆಂತೂ ಹೌದು...

ಸರ್..ಪ್ರತಿಕ್ರಿಯೆಗೆ ವಂದನೆಗಳು...

ತೇಜಸ್ವಿನಿ ಹೆಗಡೆ- said...

"ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೆ.." ಹಾಡು ನೆನಪಾಯಿತು. ತುಂಬಾ ಮುದ್ದಾಗಿದೆ ಬೆಕ್ಕು. ಮರಿ ಫೋಟೋಗ್ರಾಫರ್ ಕೆಲ್ಸ ಕೂಡ ಚೆನ್ನಾಗಿದೆ :) ಭವಿಷ್ಯಕ್ಕೆ ಒಂದೊಳ್ಳೆಯ ಫೋಟೋಗ್ರಾಫರ್ ತಯಾರಾಗುತ್ತಿದ್ದಾನೆಂದಾಯಿತು :)

ಸುಧೇಶ್ ಶೆಟ್ಟಿ said...

ಬೆಕ್ಕು So sweet... ಎಷ್ಟು ಮುದ್ದಾಗಿದೆ ಬೆಕ್ಕು. ಈ ಐಡಿಯಾ ಕೊಟ್ಟ ಆಶೀಷನಿಗೆ ನನ್ನ ಕಡೆಯಿ೦ದ ಒ೦ದಿಷ್ಟು ’ಇದುಗಳು’ ಮತ್ತು ನಿಮಗೂ ಕೂಡ....

ಸಿಮೆಂಟು ಮರಳಿನ ಮಧ್ಯೆ said...

ತೇಜಸ್ವಿನಿಯವರೆ...

ನಿಮ್ಮ ಅರ್ಧ ಶತಕಕ್ಕೆ ನನ್ನ ಅಭಿನಂದನೆಗಳು...

ನಿಮ್ಮ ಅಳಿಯನಿಗೆ ನಾಚಿಕೆ ಸ್ವಭಾವ..ಸಂಕೋಚ...
ಏನು ಮಾಡ್ತಾನೋ.. ಏನು ಆಗ್ತಾನೋ..
ಪ್ರಯತ್ನ..,ಪಟ್ಟರೆ ಆಗಬಹುದೇನೋ...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಸುಧೇಶ್...

ಬೆಕ್ಕು ಈಗ ನಮ್ಮ ಸಂಗಡ ಇಲ್ಲ...
ನಾವು ಬಾಡಿಗೆ ಮನೆಯಲ್ಲಿದ್ದಾಗ ಇತ್ತು...

ಆಶೀಷ್ ನಿಮಗೆ ಧನ್ಯವಾದ ಹೇಳಿದ್ದಾನೆ...

ತನ್ನ ತುಂಟತನ ಮೆಚ್ಚುವವರಿದ್ದಾರೆಂದು ಖುಷಿಯಾಗಿದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

Geetha said...

ಪಾಪ ಬೆಕ್ಕು ಕನಸಲ್ಲಿ ಮಹಾರಾಣಿನ ನೋಡಕ್ಕೆ ಲಂಡನ್ ಗೆ ಹೊಗಿತ್ತೋ ಏನೊ....ನಿದ್ರಾಭಂಗ ಮಾಡ್ಬಿಟ್ರಲ್ಲಾ ಸರ್ :D

ತುಂಬ ಚೆನ್ನಾಗಿದೆ ಬೆಕ್ಕಿನ ಫೋಟೊ ಮತ್ತು ಅಡಿಬರಹ ಕೂಡ. ನಿಮ್ಮ ಮಗ ಬಹಳ ಚೂಟಿ ಇದ್ದಾನಲ್ವ...

ಸಿಮೆಂಟು ಮರಳಿನ ಮಧ್ಯೆ said...

ಗೀತಾರವರೆ...

ಬೆಕ್ಕಿಗೆ ದಿನಾ ಮಹಾರಾಣಿ ಕನಸಾ..?

ಕನಸು ಕಾಣಲಿಕ್ಕೇನು...?...
no problem... ಅಲ್ಲವಾ..?

ಆಶೀಷ್ ನಿಮಗೆ ಧನ್ಯವಾದಗಳನ್ನು ತಿಳಿಸಿದ್ದಾನೆ....

ಪ್ರತಿಕ್ರೆಯೆಗೆ ಧನ್ಯವಾದಗಳು...