Thursday, November 27, 2008

ಹೀಗೊಂದು..ತೀರದ ಆಸೆ...

ಮುಕ್ತಿ ಬೇಡ ದೇವರೆ...
ಪರಕಾಯ ಪ್ರವೇಶ ವಿದ್ಯೆ ತಿಳಿಸು..
ಜನ್ಮದಲಿ ತೀರದ ಅತ್ರಪ್ತಿ, ಕುತೂಹಲ....
ತೀರದ ಆಸೆಗಳಿವೆ...

ಸರಕಾರಿ ಸಂಬಳ ಸೌಲಭ್ಯ ಪಡೆದರೂ..
ಲಂಚದ ಸುಲಿಗೆ ಮಾಡಿ...
ಜನ್ಮ ಸಾರ್ಥಕದ ಅಧಿಕಾರಿಯ...
ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ...

ಧರ್ಮದ ಹೆಸರಲಿ..ಮುಗ್ಧ ಜನರ...
ಹತ್ಯೆ, ರಕ್ತದ ಓಕುಳಿಯಾಟವನಾಡಿ..
ಶಹೀದನಾಗುವ ಮತಾಂಧ ಉಗ್ರನ ...
ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ...


ಬಡತನ, ದಲಿತತನ ಶೋಷಣೆ ಮಾಡಿ...
ಹಣದ , ಸ್ವರ್ಗದ ಆಮಿಷ ತೋರಿಸಿ...
ತಮ್ಮ ದೋಷ ಮರೆಮಾಚುವ...
ಮತಾಂತರದ ಧರ್ಮಗುರುವಿನ..
ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ....


ರಾಮನ ಆಣೆಮಾಡಿ, ಮತ ಪಡೆದು....
ಗಣಿ ಹಣಕ್ಕೆ ಮಾರಿಕೊಂಡು...
ಅಧಿಕಾರ, ಹಣದ ತೆವಲಿಗೆ ಬಿದ್ದಮಂತ್ರಿಗಳ...
ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ...


ದೇಶವೆಲ್ಲ ಬೆಂಕಿ ಹೊತ್ತಿ ಉರಿಯುತ್ತಿದ್ದರೂ...

ಆಸ್ತಿ ಮಾಡಿ ,ಮತ ಬ್ಯಾಂಕ ಆಸೆ, ಅಧಿಕಾರ ಮಾಡುವ....

ಜಾತ್ಯಾತೀತ ರಾಜಕಾರಣೀಯ...

ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ...

(ಎಂದೂ ಕವನ ಬರೆಯದ ನಾನು , ಇಂದು ಮುಂಬೈ ನ್ಯೂಸ್ ನೋಡಿ..

ಮನದ ತುಮಲ ಹೊರಹಾಕಿದ್ದೇನೆ,,,

ತಪ್ಪಿದ್ದರೆ.. ಕ್ಷಮಿಸಿ )

38 comments:

Lakshmi Shashidhar Chaitanya said...

ಖಂಡಿತಾ ತಪ್ಪೇನು ಮಾಡಿಲ್ಲ ತಾವು...ಚೆನ್ನಾಗಿ ಬರ್ದಿದ್ದಿರಿ. ನಿಜ್ವಾಗ್ಲು..ಮುಂಬೈ ಬ್ಲಾಸ್ಟ್ಸ್ ನೋದಿನನಗೂ ಹೀಗೆ ಅನ್ನಿಸ್ತು.

Mohan said...

ಚೆನ್ನಾಗಿದೆ ಕವಿಗಳೆ

ಅಂತರ್ವಾಣಿ said...

PH avare,
eegaina sthithi bagge chennaagi bardiddeera..

avarugaLige aatma saakshi iruttaa? nanagEno sandeha..

ಚಂದ್ರಕಾಂತ ಎಸ್ said...

ನಿಮ್ಮ ಮನದ ನೋವು ಹತಾಶೆ, ಕೋಪ ಎಲ್ಲಾ ಭಾವನೆಗಳೂ ಕವನದ ರೂಪದಲ್ಲಿ ಹೊರಹೊಮ್ಮಿವೆ. ಹಿಂದೆ ಕ್ರೌಂಚ ಪಕ್ಷಿಯ ವಧೆಯನ್ನು ನೋಡಿ ವಾಲ್ಮೀಕಿ ರಾಮಾಯಣ ಬರೆದನೆಂಬ ಪ್ರತೀತಿ ಇದೆ. ಹಿಂಸೆ ದುಃಖವೂ ಕವನ ಸೃಷ್ಟಿಗೆ ಕಾರಣವಾಗಬಹುದು.

ಆದರೂ ಪರಕಾಯಪ್ರವೇಶ ಮಾಡದೆಯೇ ಅವರ ಅಂತರಂಗ , ಸ್ವಾರ್ಥ, ವಿಕೃತ ಮನೋಭಾವ ಎಲ್ಲವೂ ಸ್ಫಟಿಕದಷ್ಟು ಪಾರದರ್ಶಕವಾಗಿದೆಯಲ್ಲವೇ ?

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

:( :( :(

Good one though...

Anonymous said...

ನೀವು ಬರೆದದ್ದರಲ್ಲೇನೂ ತಪ್ಪಿಲ್ಲ ಕಣ್ರೀ.. ಆದ್ರೆ, ಮನಸ್ಸಾಕ್ಷಿಯೇ ಇಲ್ಲದವರ ಮನಸ್ಸರಿಯಲು ಸಾಧ್ಯವೇ....

ಚಿತ್ರಾ ಸಂತೋಷ್ said...

ಪ್ರಕಾಶ್...ಚೆನ್ನಾಗಿಯೇ ಬರೆದಿದ್ದೀರಲ್ಲಾ..keep it up! ಬುಧವಾರ ರಾತ್ರಿ ಮುಂಬೈ ಸ್ಫೋಟ, ರಕ್ತದೋಕುಳಿ ನೋಡಿ ಕಣ್ಣಿಂದ ಹನಿ ಬಿಂದುಗಳಷ್ಟೇ ಉದುರಿದ್ದವು...very bad day! ಭಾರತದಲ್ಲಿ ಮಾತ್ರ ಹಾಗಾಗಲು ಸಾಧ್ಯವಾಯಿತು..ಸಾಧ್ಯವಾಗುತ್ತಿದೆ.
-ಚಿತ್ರಾ

Ittigecement said...

ಲಕ್ಶ್ಮೀಯವರೆ..
ಮನಸ್ಸಿಗೆ ತುಂಬಾ ನೋವಾಗಿತ್ತು..ಲೇಖನ ಬರೆಯೋಣ ಅಂದುಕೊಂಡೆ..
ಎಲ್ಲರಿಗೂ ಚೆನ್ನಾಗಿ ಬೈದುಬಿಡೋಣ ಅಂದುಕೊಂಡೆ.
ನಿಮ್ಮಂತೆ ಪ್ರಬುದ್ಧವಾಗಿ ಬರೆಯಲಾರೆ ಎನ್ನುವ ಅಳುಕು.
ಒಂದುಸರಿ ಕವನದಲ್ಲಿ ಪ್ರಯತ್ನ ಮಾಡೋಣ ಅನ್ನಿಸಿತು..
ತಪ್ಪುಗಳು ಬಹಳ ಇವೆ..
ಆದರೂ ಮೆಚ್ಚುಗೆ ಮಾತುಗಳನ್ನಾಡೀದಿರಲ್ಲ..!!
ಅದಕ್ಕೆ ಧನ್ಯವಾದಗಳು..

Ittigecement said...

ಮೋಹನ್...
ನನ್ನನ್ನು ಕವಿ ಮಾಡಿ ಬಿಟ್ಟರಲ್ಲ.!!
ಕವನದ ವಿಷಯ ಜನರಿಗೆ ಇಷ್ಟವಾಯಿತಲ್ಲ..!!
ತುಂಬಾ ಧನ್ಯವಾದಗಳು..

Ittigecement said...

ಅಂತರ್ವಾಣಿಯವರೆ...
ನನಗೂ ನಿಮ್ಮಂತೆ ಸಂದೇಹ ಸರ್..!!
ಎಂಥಹ ಚರ್ಮ ಇವರದು..!!
ಛೆ..!
ನಿಮ್ಮ ಪ್ರತಿಕ್ರಿಯೆ ಇಂಥವರ ವಿರುದ್ಧದ ಮತ್ತೊಂದು ಧ್ವನಿ ..!
ಧನ್ಯವಾದಗಳು...

Ittigecement said...

ಚಂದ್ರಕಾಂತರವರೆ..
ಎಲ್ಲವೂ ಸ್ಫಟಿಕದಷ್ಟು ಸ್ಪಷ್ಟ ನಿಜ..
ಆದರೆ.. ಬೇರೆಯವರನ್ನು ಸಾಯಿಸಲು ಹೇಳುವ ಮತ..!!
ಪಾಪಪ್ರಜ್ನೆಯಿಲ್ಲದೆ ಅದನ್ನು ಒಪ್ಪುವ...ಆ ಕ್ಷುದ್ರ...ಮನಸ್ಸು, ಆತ್ಮಸಾಕ್ಷಿ..!!
ಒಮ್ಮೆ ಒಳ ಹೊಕ್ಕಿ ನೋಡೋಣ ಅನ್ನಿಸಿತು..
ನಮ್ಮ ಆಂತರ್ಯಕ್ಕೆ ಅದು ಅರ್ಥವಾಗುವ ವಿಷಯವಲ್ಲ..
ಪ್ರತಿಕ್ರಿಯೆಗೆ..ನೋವಿನಲ್ಲಿ ಭಾಗಿಯಾಗಿದ್ದಕ್ಕೆ ವಂದನೆಗಳು..

Ittigecement said...

ಪೂರ್ಣಿಮಾ..
ನೀವು ಸ್ವತಹ ಕವಿಗಳು..
ಎರಡು ಶಬ್ಧದಲ್ಲೇನೊ ಹೇಳಿದ್ದೀರಿ..
ಅದು ಪ್ರೋತ್ಸಾಹ ಅಂದುಕೊಡಿದ್ದೇನೆ..
ತುಂಬಾ ತುಂಬಾ ಧನ್ಯವಾದಗಳು..ಬರುತ್ತಾ ಬರುತ್ತಾ ಇರಿ..

Ittigecement said...

ಪ್ರದೀಪ್...
ನನ್ನ ಬ್ಲೊಗ್ ಗೆ ಸ್ವಾಗತ..
ನೀವೆನ್ನುವದು ನಿಜ.. ನಮ್ಮ ನಾಯಕರ ಮನಸ್ಥಿತಿ ಬ್ರಹ್ಮನಿಗೂ ಅರ್ಥವಾಗಿರಲಿಕ್ಕಿಲ್ಲ, ಅವನ ಸ್ರಷ್ಟಿಯೇ ಆಗಿದ್ದರೂ ಕೂಡ..
ಪ್ರತಿಕ್ರಿಯೆಗೆ ಧನ್ಯವಾದಗಳು...

Santhosh Rao said...

chennagide saar.. :)

Ittigecement said...

ಚಿತ್ರಾರವರೆ...
ನಿಜ ಹೇಳಬೇಕೆಂದರೆ ಅಂದು ಬೆಳಿಗ್ಗೆ ಕೆಲಸಕ್ಕೆ ಹೋಗಲಿಲ್ಲ..
ತಿಂಡಿ ತಿನ್ನಲೂ ಮನಸ್ಸಾಗಲಿಲ್ಲ..
ನಿಮ್ಮ ಲೇಖನ ಕೂಡ ಬಹಳ ಚೆನ್ನಾಗಿ ಬರೆದಿದ್ದೀರಿ..
ಅದಕ್ಕೆ ಅಭಿನಂದನೆಗಳು...
ಪ್ರತಿಕ್ರಿಯೆಗೆ..ವಂದನೆಗಳು..
ಬರುತ್ತಾ ಇರಿ..

Ittigecement said...

ಸಂತೋಷ್...
ಪ್ರತಿಕ್ರಿಯೆಗೆ ಧನ್ಯವಾದಗಳು...
ಬರುತ್ತಾಇರಿ...

Kishan said...

ಹೃದಯಕ್ಕೆ ತಟ್ಟುವಂತೆ ಬರೆದಿದ್ದೀರಿ. Glad that you have re-kindled your poem writing skill again!

Ittigecement said...

ಕಿಶನ್...
ನಿಜ ಹೈಸ್ಕೂಲ್ ದಿನಗಳಲ್ಲಿ ಕವನ ಬರೆಯುತ್ತಿದ್ದೆ.

" ಗಣಿತವೆ..
ತಗಣಿಯಾಗಿ..
ಏಕಾದರೂ
ನನ್ನ ಕಾಡುವೆ ಹೇಳು..?"

ಎಂದು ಬರೆದು ಬೈಸಿ ಕೊಂಡೀದ್ದು ನೆನಪಾಗುತ್ತಿದೆ..!!!
ನೆನಪಿಸಿದ್ದಕ್ಕೆ ವಂದನೆಗಳು..

jomon varghese said...

ಕವಿಗಳೇ ಈ ಪ್ರಯೋಗ ಚೆನ್ನಾಗಿದೆ. ಟಿವಿ9 ನೋಡಿದರೆ ನೀವು ಇನ್ನಷ್ಟು ಕವಿತೆಗಳನ್ನು ಬರೆಯಬಹುದು.

papannavar said...

prakashravare,

nimma kai idu beralugalu onde savanagi illa annodu tiliri.

Ittigecement said...

ಜೋಮನ್...
ನನ್ನ ಬ್ಲೊಗ್ ಗೆ ಸ್ವಾಗತ..
ಪ್ರತಿಕ್ರಿಯೆಗೆ ಧನ್ಯವಾದಗಳು...
ದಯವಿಟ್ಟು ಬರುತ್ತಾ ಇರಿ...

Ittigecement said...

ಇಬ್ರಾಹಿಮ್....
ನನ್ನ ಬ್ಲೊಗ್ ಗೆ ಸುಸ್ವಾಗತ...
ನೀವೆನ್ನುವದು ಹೌದು...ಐದು ಬೆರಳುಗಳು ಸರಿ ಇರುವದಿಲ್ಲ
ಆದರೆ ಅವು ನಮಗೆ ಎಷ್ಟು ಸಹಾಯವಾಗಿದೆ..?
ಎಲ್ಲಾ ಬೆರಳುಗಳು ಸರಿಯಾಗಿ ಇದ್ದು ಬಿಟ್ಟಿದ್ದರೆ ನಮಗೆ ತೊಂದೆರೆಯೇ ಆಗುತ್ತಿತ್ತು.. ಅಲ್ಲವಾ?

ನನಗೆ ಬಹಳ ಬೇಸರವಾಗುವದು ಈ ರಾಜಕಾರಿಣಿಗಳ ಬಗ್ಗೆ.(ಎಲ್ಲಾ ಪಕ್ಷಗಳನ್ನೂ ಸೇರಿಸಿ ಹೇಳುತ್ತಿದ್ದೇನೆ)
ಅವರು ಸರಿ ಇದ್ದರೆ ಉಳಿದ ಎಲ್ಲಾ ಸಮಸ್ಯೆಗಳು ಸರಿ ಆಗಬಹುದೇನೋ..
ಏನಂತೀರಿ?
ನೀವೂ ಬ್ಲೊಗ್ ಶುರು ಮಾಡಿ..ನಿಮ್ಮ ಅಭಿಪ್ರಾಯಗಳನ್ನು ನಮ್ಮೊಡನೆ ಹಂಚಿಕೊಳ್ಳಿ...
(ಇಟ್ಟಿಗೆ , ಮರಳಿನ ನಾನೇ ಬರೆಯುತ್ತಿದ್ದೇನೆ..)
ನೀವೂ ಬರೆಯಿರಿ..

Bhavanishankar said...

Nimma hudugiya kathe chennagithu.
Short and Sweet.

Bhavanishankar
Bangalore

Unknown said...

Prakash Sir,

Lekhanakkinta kavanadalle bhavanegalu bahala chennagi vyktha aagide, bharathada prathiyobbaru thale thaggisabekada ghatane idu, kelave thingalugala antharadalli ugraru melinda mele daali nadesi amayakara jeeva thegita idru ghana sarkaragalu kannu muchchi balisha helike needutta bhadrata vyavasthege marpadu tharuva bagge bari charchisuva hantadalle iruvante nodikolluttiruva ketta rajakiya, swahita swartha brashtacharada parakashtateyalle teli mulugiruva Su(Ku)prasidda rajakeeya mutsaddigalu, tadaratriyavaregu kudidu kunidu kuppalisalu avakasha needabeku endu prathibhatane nadesuva buddijeevigalu iruva namma deshada dusthithi ugrara attahasakke hidida kannadi, inthavarannu namma prathinidhigalendu aarisi kalisiddakke tale taggisabekaddu navu.

Ittigecement said...

ಭವಾನಿಶಂಕರ್....
ನನ್ನ ಬ್ಲೊಗ್ ಗೆ ಸುಸ್ವಾಗತ...
ಇದೇ ರೀತಿ ಬರುತ್ತಾ ಇರಿ...
ಸಲಹೆ ಸೂಚನೆ ಕೊಡುತ್ತಾ ಇರಿ..
ವಂದನೆಗಳು...

Ittigecement said...

ಶ್ರೀಯವರೆ....
ನನ್ನ ಬ್ಲೊಗ್ ಗೆ ಸ್ವಾಗತ...

ನಿಮ್ಮ ಕಳಕಳಿ ಕಂಡು ತುಂಬಾ ಖುಷಿಯಾಯಿತು..
ಚುನಾವಣೆ ಬಂತೆಂದರೆ ನಿಲ್ಲುವ ಅಭ್ಯರ್ಥಿಗಳನ್ನು ನೋಡಿದರೆ ಮತ ಚಲಾಯಿಸುವದೇ ಬೇಡ ಅನ್ನಿಸಿ ಬಿಡುತ್ತದೆ.
ಏನು ಮಾಡೋಣ.. ನಮಗೇ ಬೇರೇ ವಿಧಿಯೇ ಇಲ್ಲ...
ಬರುತ್ತ ಇರಿ..
ಧನ್ಯವಾದಗಳು...

ಚಂದ್ರಕಾಂತ ಎಸ್ said...

ಈ ದಿನದ ಬ್ಲಾಗ್ ಬುಟ್ಟಿಯಲ್ಲಿ( ಕನ್ನಡಪ್ರಭ)ದಲ್ಲಿ ಮತ್ತೊಮ್ಮೆ ನಿಮ್ಮ ವಿಜಯಾಳ ಕತೆ ಓದಿದ್ದಾಯಿತು. ನಿಮ್ಮ ಎಲ್ಲಾ ಬರವಣಿಗೆಗಳಾಲ್ಲಿ ತುಂಬಾ ಇಷ್ಟವಾದದ್ದು ಕೆಂಪಜ್ಜಿಯ ಕತೆ.

ಚಂದ್ರಕಾಂತ ಎಸ್ said...

ಈ ದಿನದ ಬ್ಲಾಗ್ ಬುಟ್ಟಿಯಲ್ಲಿ( ಕನ್ನಡಪ್ರಭ)ದಲ್ಲಿ ಮತ್ತೊಮ್ಮೆ ನಿಮ್ಮ ವಿಜಯಾಳ ಕತೆ ಓದಿದ್ದಾಯಿತು. ನಿಮ್ಮ ಎಲ್ಲಾ ಬರವಣಿಗೆಗಳಾಲ್ಲಿ ತುಂಬಾ ಇಷ್ಟವಾದದ್ದು ಕೆಂಪಜ್ಜಿಯ ಕತೆ.

Ittigecement said...

ಚಂದ್ರಕಾಂತರವರೆ..
ನನಗೆ ಗೊತ್ತೇ ಇರಲಿಲ್ಲ.
ಈಗ ಕನ್ನಡ ಪ್ರಭ ಹುಡುಕುತ್ತಿದ್ದೇನೆ..
ಸ್ನೇಹಿತರಿಗೆ ಹೇಳುತ್ತಿದ್ದೇನೆ..
ಒಂದುಸಾರಿ ನೋಡಬೇಕಲ್ಲ..ಎಂದು.

ತುಂಬಾ...
ತುಂಬಾ...
ಧನ್ಯ..
ಧನ್ಯವಾದಗಳು..!!!.

ಚಂದ್ರಕಾಂತ ಎಸ್ said...

ನಿಮ್ಮ ಬ್ಲಾಗ್ ಪರಿಚಯವಾಗಿದ್ದೇ ಹಿಂದೆ ’ ಬ್ಲಾಗಾಯಣ’ದಲ್ಲಿ( ಕನ್ನಡಪ್ರಭ-intenet ಆವೃತ್ತಿ). ಬಹುಶಃ ನಿಮ್ಮ ವಾಸ್ತು ಅವಾಸ್ತವ...ಬರಹ

ಬ್ಲಾಗ್ ಬುಟ್ಟಿ ಪ್ರತಿ ಭಾನುವಾರ ಮುದ್ರಿತ ಅವೃತ್ತಿಯಲ್ಲಿ ಪ್ರಕಟವಾಗುತ್ತೆ.

Ittigecement said...

ಚಂದ್ರಕಾಂತರವರೆ..
ಇದೂ ಕೂಡ ನನಗೆ ಗೊತ್ತಿರಲಿಲ್ಲ..!
ಛೆ.. ಗೊತ್ತೆ ಆಗಲಿಲ್ಲವಲ್ಲ!
ನಿಮಗೆ ಮತ್ತೊಮ್ಮೆ ವಂದನೆಗಳು..
ಧನ್ಯವಾದಗಳು..

Mohan said...

ಕವಿಗಳೇ
"ಗಿಚಿ ಗಿಚಿ ಬರೆದಾನು ಪೆಜು ಪೆಜಲೆ
ಲೆಕ್ಕ ಸುತ್ತಿ ನೊಡಿದಾಗ-
ಮಾರ್ಕ ಬಂದವು 36
ಪೆಜು ಬರೆದದ್ದು 66" ಹಂಗೆ ಸ್ವಾಮಿ
ಹಂಗೆಯೆ ನಮ್ಮ ರಾಜಕಾರಿಣಿಗಳು ನಿಮ್ಮ ಬಾವನೆ ಗೊತ್ತಾಗುತ್ತೆ ನಮಗೆ

Ittigecement said...

ಮೋಹನ್...

ನಾವು ಏನು ಮಾಡಬಹುದು ಈ ಸಮಸ್ಯೆಗಳಿಗೆ..?

ಏನು ಮಾಡೋಣ..?

ತುಂಬಾನೆ ಬೇಸರವಾಗುತ್ತದೆ.. ಅಲ್ಲವಾ?

ಹರೀಶ ಮಾಂಬಾಡಿ said...

ನನಗೂ ಅರಿಯುವಾಸೆ...
ಕವನ ಚೆನ್ನಾಗಿದೆ

Ittigecement said...

ಹರೀಷ್...
ಬ್ಲೋಗ್ ಗೆ ಸುಸ್ವಾಗತ...
ತುಂಬಾ ತುಂಬಾ ಧನ್ಯವಾದಗಳು...
ಬರುತ್ತಾ ಬರುತ್ತಾ ಇರಿ...

Harisha - ಹರೀಶ said...

ಪ್ರಕಾಶಣ್ಣ, ಚೆನ್ನಾಗಿ ಬರದ್ದೆ :-)

ನನಗೂ ಒಂದು ಆಸೆ.. ಅವರ ಆತ್ಮ ಸಾಕ್ಷಿ ನೋಡುವ ನೆಪದಲ್ಲಿ ಅವರ ದೇಹ ಹೊಕ್ಕು, ನರಸಿಂಹಾವತಾರ ತಾಳಿ ಅವರನ್ನು ಸೀಳಿ ಹೊರಬರಬೇಕೆನ್ನುವುದು!!

Ittigecement said...

ಹರೀಷ್....
ಹಹ್ಹಾ..ಹಹ್ಹಾಆ...
ಆ ಶಕ್ತಿ ನನಗಿದ್ದಿದ್ದರೆ ನಿಮಗಿಂತ ಮೊದಲೆ ಅವರನ್ನು ಸಾಯಿಸಿ ಬಿಡುತ್ತಿದ್ದೆ...
ನನಗೆ ನಿಜವಾಗಿಯೂ ನಿಮ್ಮ ಲೇಖನ ಮತ್ತು, ದಾಸರ ಪದ್ಯ ಎರಡೂ ಇಷ್ಟವಾಯಿತು.. ನಾನು ಹೇಳುವದೆಲ್ಲವನ್ನೂ ಸರಿಯಾಗಿ ಹೇಳಿದ್ದೀರಿ..
ಹೀಗೆ ಬರುತ್ತ ಇರಿ...

shivu.k said...

ಸಾರ್,
ಈಗಿನ ಮನಸ್ಥಿತಿಯಲ್ಲಿ ಇಷ್ಟೊಂದು ಮುಂದಿದ್ದೀರಿ. ಇನ್ನು ನಿಮ್ಮ ಬೇಡಿಕೆ ಈಡೇರಿದ ಮೇಲೆ ದೇವರೇ ಗತಿ ![ತಮಾಷೆಗೆ ಹೇಳಿದೆ] ಪರವಾಗಿಲ್ಲ ನೀವು ಕವನ ಬರೆಯುತ್ತೀರಿ ನೋಡೋಣ ಯಾವ ಎತ್ತರಕ್ಕೆ ತಲುಪುತ್ತೀರೋ ನೋಡೋಣ ! ನಾವು ಕಾಯುತ್ತಿರುತ್ತೇವೆ. ಅದನ್ನು ನೋಡಲು.