Monday, December 1, 2008

ಉಗ್ರಗಾಮಿಗಳ..ವಿರುದ್ಧ....!!???

ಮೊನ್ನೆ ನಡೆದ ಮುಂಬೈ ಘಟನೆಯಿಂದ ಮನಸ್ಸಿಗೆ ನೋವಾಗಿತ್ತು. ಹೀಗೆ ಆದಾಗಲೆಲ್ಲಾ ನಾನು ನನ್ನ ಚಿಕ್ಕಪ್ಪ ಅಥವಾ ನನ್ನ ಬಾವನ ಬಳಿ ಮಾತಾಡಿ ಮನಸ್ಸು ಹಗುರ ಮಾಡಿ ಕೊಳ್ಳುತ್ತೇನೆ

ನನ್ನ ಚಿಕ್ಕಪ್ಪ ಮತ್ತು ನನ್ನ ಬಾವ ಇಬ್ಬರೂ ಬಹಳ ಪ್ರಾಮಾಣಿಕ ವ್ಯಕ್ತಿಗಳು.....

ಚಿಕ್ಕಪ್ಪ ಅಧ್ಯಾಪಕ ವ್ರತ್ತಿಯಿಂದ ನಿವ್ರುತ್ತಿಯಾದರೂ ಆ ಹಳ್ಳಿಯಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆ ತೆಗೆಯ ಬೇಕೆಂದು ಒಡಾಟ, ಗುದ್ದಾಟ ಮಾಡಿ, ಈಗ ಅದರ ಗೌರವ ಮುಖ್ಯಾಧ್ಯಪಕರು.

ಅವರಿಗೆ ಹಣ ಮುಖ್ಯ ಅಲ್ಲ...
ಯಾರ್ಯಾರದ್ದೋ ಏನೇನೊ ಸಮಸ್ಯೆಯಲ್ಲ ತನ್ನ ಮೈಮೇಲೆ ಎಳೆದುಕೊಂಡು ಪರಿತಾಪ ಪಟ್ಟು ಕೊಂಡರೆ ಮಾತ್ರ ರಾತ್ರಿ ನಿದ್ದೆ ಬರುತ್ತೇನೊ..

ಇನ್ನು ನನ್ನ ಬಾವ ..ಅವರೂ ಕೂಡ ಹಾಗೆ..ರಾಷ್ಟ್ರಿಕ್ರತ ಬ್ಯಾಂಕ ವ್ಯವಸ್ಥಾಪಕರು..ಯಾರಿಗೂ ಇಲ್ಲಿಯವರೆಗೆ ಲಂಚಕೊಡದೆ ಬಾಳುವೆ ನಡೆಸಿದ್ದಾರೆ..!

ನನಗೆ ಬೇಸರ ವಾದಾಗಲೆಲ್ಲ ಇವರಿಬ್ಬರ ಸಂಗಡ ಮಾತನಾಡುತ್ತೇನೆ..ಮನಸ್ಸು ಹಗುರ ಮಾಡಿ ಕೊಳ್ಳಲು...

" ಹಲೋ ಬಾವಾ...ಎಲ್ಲಾ ಚೆನ್ನಾಗಿದ್ದೀರಾ..?"

ಹೌದಪಾ.. ನೀವೆಲ್ಲ ಚೆನ್ನಾಗಿದ್ದೀರಾ,,? ಮತ್ತೇನು ವಿಶೇಷ..? "

"ಮತ್ತೇನಿಲ್ಲ ಬಾವಾ.. ಮುಂಬೈ ವಿಚಾರ.. ಬಹಳ ಬೇಸರವಾಗಿದೆ.."

"ಸಂದಿಪ್.. ಅಂತ್ಯಕ್ರಿಯೆಲ್ಲಿ ಭಾಗವಹಿಸಿ ಶ್ರದ್ದಾಂಜಲಿ ಅರ್ಪಿಸಬೇಕಾಗಿತ್ತು..ಸ್ವಲ್ಪ ಸಮಾಧಾನ ವಾಗಿರುತ್ತಿತ್ತು.."

"ಅದಕ್ಕೆ ಹೋಗಿದ್ದೆ.. ತುಂಬಾ ಜನ..ಸಾವಿರಾರು ಗಾಡಿಗಳು ಬಂದಿದ್ದವು..ಅಲ್ಲೂ ಅವ್ಯವಸ್ಥೆ..!!!"

"ಯಾಕೆ ಏನಾಯ್ತು..?"

"ಬಹಳ ಜನರಿಗೆ ನೋಡಲಿಕ್ಕೆ ಆಗಲಿಲ್ಲ...!!. ಜನರೆಲ್ಲ ಶಾಪ ಹಾಕುತ್ತಿದ್ದರು.. !!."

"ಹೌದಾ.!!.?"

"ಅರಮನೆ ಮೈದಾನದಲ್ಲಿ ಈಡಬೇಕಾಗಿತ್ತು.. ! ಎಲ್ಲರೂ ನೋಡಬಹುದಾಗಿತ್ತು..! ಇತ್ಯಾದಿ.. ನೀನು ...ಏನೇ ಹೇಳು ಬಾವ ಜನ ಎಚ್ಚೆತ್ತು ಕೊಂಡಿದ್ದಾರೆ..! ಎಷ್ಟೆಲ್ಲಾ ಜನ..ಅವರಾಗಿಯೆ ಬಂದಿದ್ದವರು.! ಜನ ಬದಲಾವಣೆಯಾಗಿದ್ದಾರೆ.!! ಜನರಿಗೆ ದೇಶ ಭಕ್ತಿ ಜಾಸ್ತಿಯಾಗಿದೆ..!! ಈ ವ್ಯವಸ್ಟೆಯ ಬಗೆಗೆ ರೋಸಿ ಹೋಗಿದ್ದಾರೆ..!! " ... ನನಗೆ ಆವೇಶ ಬಂದಿತ್ತು..

"ಹೌದಾ..ಹಾಗಾದರೆ.. ನೀನೆ... ಸಂಘಟನೆ ಮಾಡು..!! ಬ್ರಷ್ಟಾಚಾರದ ವಿರುದ್ದ ಹೋರಾಟ ಮಾಡು..!!ಉಗ್ರಗಾಮಿಗಳ ವಿರುದ್ಧ ಆಂದೋಲನ ಶುರು ಮಾಡು..!!..ಎಷ್ಟು ಜನ ನಿನ್ನ ಹಿಂದೆ ಬರ್ತಾರೆ..ನೋಡು..??"

" ...... ಹ್ಹಾಂ...ನಾನಾ..?...!!??......" ನಾನು ಜರ್ರನೆ ಇಳಿದು ಹೋದೆ...

ನಾನು ಅವಕ್ಕಾದೆ..!!!

ನಾನು...??.. ಸಂಘಟನೆಯಾ....??? ನಾನೇನು..??..
ನನ್ನ ಬಿಸಿನೆಸ್ಸ್ ಏನು..?
ನನ್ನ ವ್ಯವಹಾರದ ಕಥೆಯೇನು..? ???

" ಬಾವಾ .....ಅಕ್ಕ ಚೆನ್ನಾಗಿದ್ದಾರಾ...? ...ಬೆಂಗಳೂರಿಗೆ ಯಾವಾಗ ಬರ್ತೀರಿ..? ಆಯಿ ..ಚೆನ್ನಾಗಿದ್ದಾಳಾ..? "

ಬಾವನಿಗೆ ಅರ್ಥವಾಗಿರಬೇಕು... ...

.. ಮತ್ತೆ ಚಿಕ್ಕಪ್ಪನಿಗೂ ಫೋನ್ ಮಾಡುವ ಧೈರ್ಯವೂ..ನನಗೆ... ಬರಲಿಲ್ಲ......!!.



8 comments:

NilGiri said...

ಸದ್ಯಕ್ಕೆ ಯಾವುದೇ ಸಂಘಟನೆಯನ್ನೂ ಮಾಡಬೇಡಿ. ಉಗ್ರಗಾಮಿಗಳ ವಿರುದ್ಧ ಆಂದೋಲನ ಮಾಡಿದರೆ ನಿಮ್ಮನ್ನೂ" ಉಗ್ರವಾದಿ"ಗಳ ಗುಂಪಿಗೆ ಸೇರಿಸುತ್ತಾರೆ. ಮುಸ್ಲಿಂ ಉಗ್ರರ ವಿರುದ್ಧ ಹೋರಾಡಿದರೆ " ಹಿಂದೂ ಉಗ್ರ"ರೆಂದು ಬಣ್ಣಿಸಿ, ಅಲ್ಪ ಸಂಖ್ಯಾತರ ಬಗ್ಗೆ ತಮಗೆಷ್ಟು ಆದರ, ಅವರಿಗಿರದ ಸೋದರತ್ವ ನಮ್ಮಲ್ಲೆಷ್ಟು ತುಂಬಿ ತುಳುಕುತ್ತಿದೆ ಎಂಬುದನ್ನು ತೋರಿಸುವ " ಬುದ್ಧಿಜೀವಿ"ಗಳು ಸಾಕಷ್ಟಿದ್ದಾರೆ.

Mohan said...

ಹೆಗೆಡೆರೆ ನಾವು ಪ್ರತಿಬಟೆಸುವ ಶಕ್ತಿ ಕಳಕೊಂಡಿದಿವಿ ಅನ್ನುಸೊಲ್ಲವ, ಎಲ್ಲೊ ಒಂದುಕಡೆ ಸಿನಿಕ ಆಗ್ತಾಯಿದಿವಿ ನಿಲ್ ಗಿರಿಯವರೆ.

Ittigecement said...

ಗಿರಿಜಾರವರೆ..
ನೀವೆನ್ನುವದು ಅಕ್ಷರಸಹ ಸತ್ಯ.

ಸಮಸ್ಯೆ ನಮ್ಮ ಕಾಲುಬುಡಕ್ಕೆ ಬಂದಾಗ ನಾವು ಹಿಮ್ಮುಕರಾಗುತ್ತೇವೆ..
ನಮಗೆ ಬೇಜಾರಾಗುತ್ತದೆ, ನೋವಾಗುತ್ತದೆ ಎಲ್ಲ ನಿಜ...
ಎಲ್ಲೊ ಒಂದು ಕಡೆ ನಮ್ಮ ತನವನ್ನು ನಾವು ಕಳೆದು ಕೊಳ್ಳುತ್ತಿದ್ದೇವೆ.. ಅಲ್ವಾ ಮೇಡಮ್..?

ಪ್ರತಿಕ್ರಿಯೆಗೆ.. ಧನ್ಯವಾದಗಳು...

Ittigecement said...

ಮೋಹನ್...
ದ್ರಢ ನಿಲುವು, ವಿಶ್ವಾಸ ನಮಗಿಲ್ಲ...
ನಮಗೆ ಸ್ವಂತಿಕೆ ಇಲ್ಲ..
ನೀವೆನ್ನುವ ಹಾಗೆ ನಾವು ಸಿನಿಕರಾಗುತ್ತಿದ್ದೇವೆ..
ಕಣ್ಣೇದುರು ನಂಬಬಹುದಾದ ಒಬ್ಬನೇ.. ಒಬ್ಬ ನಾಯಕನಿಲ್ಲ...
ಮಡೋಣ.. ಧುಮುಕೋಣ ಅನ್ನಿಸುತ್ತದೆ..
ಆತ್ಮ ವಿಶ್ವಾಸ ಇಲ್ಲ..
ಏನಂತೀರಿ..ಮೋಹನ್..?

ಚಂದ್ರಕಾಂತ ಎಸ್ said...

ಒಂದು ಮಾತಂತೂ ಸತ್ಯ. ನಮ್ಮ ಎಲ್ಲ ರೋಷ , ಕೋಪ ಸಿಟ್ಟು ಮುಂತಾದ ಭಾವನೆಗಳಿಗೆ ನಾವುಗಳು ಮಾತಿನ ರೂಪ ಕೊಟ್ಟು ಬಿಡುಗಡೆಯ ಭಾವ ಕಾಣುತ್ತೇವೆ. ಇನ್ನು ನಿಜವಾದ ಹೋರಾಟದ ಪ್ರಶ್ನೆಯೇ ಬರುವುದಿಲ್ಲ.ಬರವಣಿಗೆಯ ಮೂಲಕವೇ ಶತ್ರುಗಳನ್ನು ಕೊಂದೂ ಬಿಡುತ್ತೇವೆ,( ಲೇಖನಿ ಕತ್ತಿಗಿಂತ ಹರಿತ ಎನ್ನುತ್ತೇವೆ) ಆದರೆ ವಾಸ್ತವದಲ್ಲಿ ಯಾವಯಾವುದೋ ಕಾರಣಗಳನ್ನು ತರ್ಕಬದ್ಧವಾಗಿ ಕೊಟ್ಟುಕೊಂಡು ಕ್ರಿಯಾತ್ಮಕವಾಗಿ ಏನನ್ನೂ ಮಾಡುವುದಿಲ್ಲ. ನಾವೆಲ್ಲರೂ ಹೇಡಿಗಳು ಕಣ್ರಿ. ಆದರೆ ನಾವುಗಳು ಅದನ್ನು ಧೈರ್ಯವಾಗಿ ಒಪ್ಪಿಕೊಳ್ಳುವುದಿಲ್ಲ. ( ಮಾತು ಕಟುವಾಗಿದ್ದರೆ ಕ್ಷಮಿಸಿ)

Ittigecement said...

ಚಂದ್ರಕಾಂತರವರೆ..
ಈ ಸಂಭಾಷಣೆ ನನಗೆ ಬಹಳ ಕಾಡಿತ್ತು.
ನಮಗೆ ಏನೇನೊ ಮಾಡಬೇಕು ಎಂದು ಅನಿಸುತ್ತದೆ.
ಮೊನ್ನೆ ನನ್ನ ಕ್ಲಾಸ್ ಮೇಟ್ ಒಬ್ಬ " ನಾವು ಮದುವೆಯಾಗಿರದಿದ್ದರೆ ಈ ಉಗ್ರಗಾಮಿಗಳ ವಿರುದ್ಧ ಕ್ರಿಯಾತ್ಮಕವಾಗಿ ಹೋರಾಟ ಮಾಡಬಹುದಿತ್ತು ಕಣೊ" ಅಂದ.

ನಾವು ಬಂಧಿತರಾಗಿದ್ದೇವೆ. ನಮಗೆ ಗೊತ್ತಿಲ್ಲದಂತೆ.
ನಾವು ಆಷಾಢಭೂತಿಗಳು...
ನೀವು ಏನು ಹೇಳಿದರೂ ನಮಗೆ ನಾಚಿಕೆ, ಕೋಪ ಬರದಷ್ಟು ಬಂಧಿತರಾಗಿದ್ದೇವೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..

ಹಿತ್ತಲಮನೆ said...

ನಿಮ್ಮ ಸ್ನೇಹಿತ ಹೇಳಿದ್ದು ನಿಜ. ಆದ್ರೆ ಮದುವೆ ಆಗದೇ ಇದ್ರೆ ಇಷ್ಟು ಸಿಟ್ಟು ಬರ್ತಿತ್ತಾ ? ಹಿಹ್ಹಿಹ್ಹಿ....ಸುಮ್ನೆ ಮಾತಿಗಂದೆ ..ಅಷ್ಟೆ..!

Ittigecement said...

ಹಿತ್ತಲಮನೆಯವರೆ....

ಪ್ರೇಮಂಗೆ ಹೇಳಕಾತು ನೋಡು...

ಮದುವೆಯಾದಮೇಲೆ ಸಿಟ್ಟು ಬರುತ್ತದೆ ಅಂದ್ರೆ ಈ "ಉಗ್ರಗಾಮಿಗಳೆಲ್ಲ" ಮದುವೆಯಾದವರೆ..?