Saturday, October 31, 2009

ಅಪ್ಪನಂಥಹ... ಚಿಕ್ಕಪ್ಪ...!


ನಾನು ಸಣ್ಣವನಿದ್ದಾಗ
ಬಹಳ ವೀಕ್ ಆಗಿದ್ದೆ..
ಬಡಕಲು ಕಾಲು, ಕೈಗಳು..
ದೊಡ್ಡದಾದ ತಲೆ...
"ದೊಡ್ಡತಲೆ ಪ್ರಕಾಶ" ಅನ್ನುವ ಅಡ್ಡ ಹೆಸರು ಕೂಡ ನನಗಿತ್ತು...

ನಾನು ಸಣ್ಣವನಿದ್ದಾಗ ನನಗೆ ರಿಕೆಟ್ಸ್ ರೋಗ ಆಗಿತ್ತು...

ಬಹಳ ವೀಕ್ ಆಗಿದ್ದರಿಂದ ಉಳಿದ ಮಕ್ಕಳ ಹಾಗೆ ಆಡಲು ಕಷ್ಟ ಆಗುತ್ತಿತ್ತು...
ನನ್ನ ಪಾದಗಳು ಎಲ್ಲರಂತೆ ಉದ್ದವಾಗಿರದೆ...
ಅಡ್ಡವಾಗಿ ತಿರುಗಿಕೊಂಡಿದ್ದವು...

ಒಂದು ಮಾರು ನಡೆಯುವಷ್ಟರಲ್ಲಿ ಎರಡುಸಾರಿ ಬೀಳುತ್ತಿದ್ದೆ...

ಓಡಾಡುವಾಗ ಕಾಲುಗಳು ಒಂದಕ್ಕೊಂದು ತಾಗಿ ಬಿದ್ದು ಬಿಡುತ್ತಿದ್ದೆ...
ಆಡಲು ಹೋದರೂ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದೆ...

ಆ ನನ್ನ ಕಾಲುಗಳಿಗೊಂದು ಬೆಳ್ಳಿಯ ಬಳೆ...

ನನ್ನಜ್ಜ ಧರ್ಮಸ್ಥಳಕ್ಕೆ ಹರಕೆ ಹೊತ್ತುಕೊಂಡಿದ್ದನಂತೆ..

ಆ ಬಳೆಗಾಗಿ ಉಳಿದ ಮಕ್ಕಳೆಲ್ಲ ಹಾಸ್ಯ ಮಾಡುತ್ತಿದ್ದರು...
"ಇದು ಸೇರುಗಾರನ ಬಳೆ.." ಅಂತ..

ಬೇಸರವಾಗುತ್ತಿತ್ತು...ನೋವಾಗುತ್ತಿತ್ತು...
ದುಃಖವೂ ಆಗುತ್ತಿತ್ತು...

ಯಾರಬಳಿಯಲ್ಲಾದರೂ ಹೇಳಿಕೊಳ್ಳಬೇಕು ಅನಿಸುತ್ತಿತ್ತು..
ನನ್ನನ್ನು ಚಾಳಿಸುವ ಮಕ್ಕಳಿಗೆ ಬಯ್ಯಿಸ ಬೇಕು ಎಂದು ಅನಿಸುತ್ತಿತ್ತು...

ಯಾರ ಬಳಿ ಹೇಳಿಕೊಳ್ಳ ಬೇಕು...?

ಮನೆತುಂಬಾ ಮಕ್ಕಳು... ಅಮ್ಮನಿಗೋ ಮೈತುಂಬಾ ಕೆಲಸ...

ಒಂಟಿಯಾಗಿರುತ್ತಿದ್ದೆ... ಅದು ಅನಿವಾರ್ಯವೂ ಆಗಿತ್ತು...

ಆಡಲು ಬರದ ಮಕ್ಕಳಿಗೆ
ಯಾರೂ
ಸ್ನೇಹಿತರು ಬರುವದಿಲ್ಲ...

ನಾನಾಗ ನಾಲ್ಕನೆ ತರಗತಿ..
ಒಂದುದಿನ ನನ್ನ ಚಿಕ್ಕಪ್ಪ ಒಂದು ಮಕ್ಕಳ ಪತ್ರಿಕೆ ತಂದುಕೊಟ್ಟರು...

ಈಗಿನ ಪ್ರಖ್ಯಾತ ನಟಿ, ನಿರೂಪಕಿ ಸುಂದರಿ "ಅಪರ್ಣಾ"ರವರ ಮುಖಪುಟದ ಪತ್ರಿಕೆ....!

ಅದು "ಪಾಪಚ್ಚಿ"...! ಅದು ಮಕ್ಕಳ ಪತ್ರಿಕೆ...!

ಅದರಲ್ಲಿರೋ... ಕಥೆಗಳನ್ನು ಓದಿದೆ... ತುಂಬಾ ಚೆನ್ನಾಗಿತ್ತು...

ಯಾರೋ ಪಕ್ಕದಲ್ಲಿ ಕುಳಿತು ಕಥೆ ಹೇಳಿದಂತಿತ್ತು...

ಓದುತ್ತ... ಓದುತ್ತ ಜಗತ್ತನ್ನೇ.. ಮರೆತು ಬಿಟ್ಟೆ...

ಓದುವದು ನನಗೆ ಬಹಳ ಇಷ್ಟವಾಯಿತು...
ಯಾರೂ ನನ್ನೊಂದಿಗೆ ಆಡಲು ಬಾರದ ಸಮಯದಲ್ಲಿ ಪುಸ್ತಕಗಳು ನನಗೆ ಗೆಳೆಯನಾಗಿಬಿಟ್ಟಿತು...

ನನ್ನ ಜೀವನದ ಒಂಟೀತನದಲ್ಲಲ್ಲೆಲ್ಲ ಈ ಗೆಳೆಯ ನನ್ನೊಂದಿಗಿದ್ದಾನೆ..
ಯಾರೂ ಕೊಡದ ಸಮಾಧಾನ, ಸಾಂತ್ವನ.. ಈತ ಕೊಟ್ಟಿದ್ದಾನೆ...

ನನ್ನನ್ನು ನನ್ನಷ್ಟಕ್ಕೇ.. ನಗಿಸಿದ್ದಾನೆ..
ಅಳಿಸಿದ್ದಾನೆ..
ಭಾವದ ಅಲೆಯಲ್ಲಿ ತೇಲಿಸಿದ್ದಾನೆ...!

ನನ್ನಲ್ಲಿದ ಕನಸುಗಳನ್ನು ನನ್ನಲ್ಲಿಟ್ಟಿದ್ದಾನೆ...!
ಎಲ್ಲಿಲ್ಲದ ಹುಚ್ಚು ಕಲ್ಪನೆಯನ್ನು ನನ್ನಲ್ಲಿ ತುಂಬಿದ್ದಾನೆ...!

ಇಂಥಹ ಸ್ನೇಹಿತನನ್ನು ನನಗೆ ಕೊಟ್ಟ ನನ್ನ ಚಿಕ್ಕಪ್ಪನಿಗೆ ಹೇಗೆ ಕೃತಜ್ಞತೆ ಹೇಳಲಿ...?

ಶಬ್ಧಗಳಿಗೆ ಶಕ್ತಿಯಿಲ್ಲ...

ನನಗೆ ಓದುವ ಚಟ ಹಿಡಿಸಿದ ನನ್ನ ಚಿಕ್ಕಪ್ಪನಿಗೆ ನಮನಗಳು....

ನನ್ನ ಪುಸ್ತಕ ನನ್ನ ಚಿಕ್ಕಪ್ಪನಿಗೆ ಅರ್ಪಣೆ....


ನನ್ನ...

ಇಂದಿನ ಸಂತಸ.. ಯಶಸ್ಸೆಲ್ಲ..

ನನ್ನದಲ್ಲ...

ಹಾಗಂತ...ನಿನ್ನದೂ ಅಲ್ಲ..!!

ದಾರಿಗೊತ್ತಿರದ ಬಾಳಲ್ಲಿ..

ಸರಿಯಾಗಿ ನಿಲ್ಲಲೂ ಬಾರದ

ನನ್ನ ಬಾಲ್ಯದಲ್ಲಿ..

ದಿಕ್ಕನ್ನು ತೋರಿದ..

ನಿನ್ನ...ತೋರು ಬೆರಳಿನದು...!

ಚಿಕ್ಕಪ್ಪಾ...

ನನ್ನ ಪುಟ್ಟ ಕೈಗೆ..

ನೀ.... ಕೊಟ್ಟ... ತೋರು ಬೆರಳಿನದು...!!
( ಪ್ರಿಯ ಓದುಗರೆ...
ನನಗಂತೂ ಮೊದಲ ಪ್ರೇಮದ ಸಂಭ್ರಮ... ಸಡಗರ...!
ಹೆಸರೇ... ಬೇಕಿರದ ನನ್ನ ಕಥನಗಳು ಪುಸ್ತಕವಾಗುತ್ತಿವೆ.. ..
ಇದೇ ಬರುವ ನವೆಂಬರ್ ಹದಿನೈದಕ್ಕೆ..
ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ....
ಬಿಡುಗಡೆಯಾಗಲಿದೆ...

ಇದಕ್ಕೆ ಮಾರ್ಗದರ್ಶನ... ಸಹಾಯ, ಸಲಹೆ ಸೂಚನೆ ಕೊಟ್ಟು...
ಸಹಾಯ ಮಾಡಿ...
ಪ್ರೀತಿಯಿಂದ ಮುನ್ನುಡಿ ಬರೆದು ಕೊಟ್ಟವರು ನಮ್ಮ ಮೆಚ್ಚಿನ ಜಿ. ಎನ್. ಮೋಹನ್ ರವರು
ಬೆನ್ನುಡಿಯನ್ನು.. ಬ್ಲಾಗ್ ಲೋಕದ ಕಾಕಾ...
ನಮ್ಮೆಲ್ಲರ ಮೆಚ್ಚಿನ ಸುನಾಥ ಸರ್...
ಅಕ್ಕರೆಯಿಂದ ಬರೆದು ಕೊಟ್ಟು ಬೆನ್ನುತಟ್ಟಿದ್ದಾರೆ...

ನನ್ನ ವ್ಯವಹಾರದ ಕೆಲಸದ ಜೊತೆಗೆ...
ಪುಸ್ತಕ ಸಂಭ್ರಮದ ಖುಷಿ... ಒತ್ತಡ..
ಹೇಗೆ ನಿಭಾಯಿಸುತ್ತೇನೋ.. ಗೊತ್ತಿಲ್ಲ...

ನಿಮಗೆಲ್ಲ ಪ್ರತ್ಯೇಕವಾಗಿ ಕರೆಯುತ್ತೇನೆ...
ಬರುತ್ತೀರಲ್ಲ..!
ಖುಷಿಯಲ್ಲಿ.. ಸಂತೋಷದಲ್ಲಿ ಪಾಲ್ಗೊಳ್ಳುತ್ತೀರಲ್ಲ...?

ನೀವು ಅಲ್ಲಿ ಬಂದಾಗ ನಗಿಸಲು ಸ್ಪೆಷಲ್ ಗೆಸ್ಟ್ ಬರಲಿದ್ದಾರೆ...!

ಸ್ನೇಹಿತ ಶಿವುರವರ "ವೆಂಡರ್ ಕಣ್ಣು"..

ಗೆಳೆಯ ದಿವಾಕರನ ನಾಟಕಗಳು "ಉದ್ಧಾರ ಮತ್ತು ಸಂತೆ"

ನನ್ನ ಪುಸ್ತಕದ ಹೆಸರು...
" ಹೆಸರೇ.. ಬೇಡ..!!..."

ಈ ಹೆಸರು ಕೊಟ್ಟವರು ಯಾರು...?
ಹೇಗೆ ಬಂತು ಈ ಹೆಸರು..?
ನಿಮ್ಮನ್ನು ನಗಿಸಲು ಬರುವ ಸ್ಪೆಷಲ್ ಗೆಸ್ಟ್ ಯಾರು...?

ಇನ್ನು ನಾಲ್ಕಾರು ದಿನಗಳಲ್ಲಿ ಹೇಳುವೆ....

ನಿಮ್ಮ ಪ್ರೋತ್ಸಾಹಕ್ಕೆ ನನ್ನ ನಮನಗಳು...)108 comments:

ದಿಲೀಪ್ ಹೆಗಡೆ said...

All the best PrakashaNNa.. :)

ಸಿಮೆಂಟು ಮರಳಿನ ಮಧ್ಯೆ said...

ಧನ್ಯವಾದಹಳು ದಿಲಿಪ್...

ನಿಮ್ಮ ಆಗಮನದ ನಿರೀಕ್ಷೆಯಲ್ಲಿ....!

Ramya Hegde said...

ಅಭಿನಂದನೆಗಳು ಪ್ರಕಾಶಣ್ಣ..,
ನಿಮಗೆ ಎಲ್ಲ ಕೆಲಸಗಳಲ್ಲೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ.

ಶಂಕರ ಪ್ರಸಾದ said...

ಕಾಯ್ತಾ ಇರ್ತೀವಿ ಆ ದಿನಕ್ಕೆ.
ಆಲ್ ದಿ ಬೆಸ್ಟ್ ಪ್ರಕಾಶಪ್ಪ.

ಕಟ್ಟೆ ಶಂಕ್ರ

ಮುಸ್ಸ೦ಜೆ ಇ೦ಪು said...

Congrats and all the very best Prakashanna :)

ನಿಮ್ಮೂರ ಹುಡುಗಿ said...

Congrats prakashanna...
all the best....

ಸಿಮೆಂಟು ಮರಳಿನ ಮಧ್ಯೆ said...

ರಮ್ಯಾ...

ತುಂಬಾ ಥ್ಯಾಂಕ್ಸ್...!

ಸಿಮೆಂಟು ಮರಳಿನ ಮಧ್ಯೆ said...

ಶಂಕ್ರಪ್ಪಣ್ಣಾ...

ನೀವು ಅವತ್ತು ಬರ್ಲೇ ಬೇಕು ಕಣಣ್ಣೋ...
ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

Thank you...!" ಮುಸ್ಸಂಜೆ ಇಂಪು..."

ನಿಮ್ಮೆಲ್ಲರ ಆಗಮನದ ನಿರೀಕ್ಶೆಯಲ್ಲಿ....

ಸಿಮೆಂಟು ಮರಳಿನ ಮಧ್ಯೆ said...

Thank you...! Ranjanaa...!

ದಿನಕರ ಮೊಗೇರ.. said...

ಪ್ರಕಾಶಣ್ಣ,
ಅಭಿನಂದನೆಗಳು......ಪುಸ್ತಕ ಪ್ರಕಾಶನಕ್ಕೆ.... ಥ್ಯಾಂಕ್ಸ್, ನಿಮ್ಮ ಚಿಕ್ಕಪ್ಪನಿಗೆ...ನಿಮ್ಮಂಥ ಬರಹಗಾರನಿಗೆ ಒದೆಂಬ ಸ್ನೇಹಿತನ ಪರಿಚಯ ಮಾಡಿ ಕೊಟ್ಟಿದ್ದಕ್ಕೆ... ಪ್ರಕಾಶಣ್ಣ, ಒಂದೇ ಬೇಜಾರೆಂದ್ರೆ, ಮಂಗಳೂರಿನಲ್ಲಿರುವ ನನ್ನಂಥವರಿಗೆ ಪುಸ್ತಕ ಬಿಡುಗಡೆ ನೋಡುವ ಅವಕಾಶ ಸಿಗುತ್ತೋ ಇಲ್ವೋ ಅಂತ..... ಒಂದು ವಿನಂತಿ, ನಮಗೆಲ್ಲ ದಯವಿಟ್ಟು, ಪೋಸ್ಟ್ ಮುಖಾಂತರ ಅಥವಾ ಕೊರಿಯರ್ ಮೂಲಕ ಕಳುಪಿಸಿ.... ಅದರ ವೆಚ್ಹವನ್ನು ನಾನು ಮೊದಲೇ ಕಳಿಸಿಕೊಡುತ್ತೇನೆ.... ಪುಸ್ತಕದ ಮೇಲೆ ' ಹಸ್ತಾಕ್ಷರ' ಹಾಕಲು ಮರೆಯದಿರಿ... ನಿಮ್ಮ ಅಭಿಯಾನ ಹೀಗೆ ಮುಂದುವರಿಯಲಿ...

ಶಾಂತಲಾ ಭಂಡಿ said...

ಪ್ರಿಯ ಪ್ರಕಾಶಣ್ಣ...
ಬರಲಿರುವ ನಿಮ್ಮ ಪುಸ್ತಕಕ್ಕೆ ಅಭಿನಂದನೆಗಳು, ಕಾರ್ಯಕ್ರಮಕ್ಕೆ ಶುಭಾಶಯ :-)

ಚಿತ್ರಾ said...

ಪ್ರಕಾಶಣ್ಣ ,
ನಿಮಗೆ ಪುಸ್ತಕಗಳ ಪರಿಚಯ ಮಾಡಿಕೊಟ್ಟು ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿದ , ಒಬ್ಬ ಒಳ್ಳೆಯ ಬರಹಗಾರನನ್ನು ನಮಗೆ ಪರಿಚಯಿಸಿದ ನಿಮ್ಮ ಚಿಕ್ಕಪ್ಪನವರಿಗೆ ಮೊದಲಿಗೆ ಧನ್ಯವಾದಗಳನ್ನು ಹೇಳಬೇಕು.
ನಿಮ್ಮ ಪುಸ್ತಕದ ಬಿಡುಗಡೆಗಾಗಿ ನನ್ನ ಹಾರ್ದಿಕ ಅಭಿನಂದನೆಗಳು ! " ಹೆಸರೇ ಬೇಡ" ದ ಪುಸ್ತಕ ಮತ್ತು ಅದರ ಲೇಖಕರು ಅತ್ಯಂತ ಹೆಸರುವಾಸಿಯಾಗಲಿ ಎನ್ನುವುದು ನಮ್ಮ ತುಂಬು ಹೃದಯದ ಹಾರೈಕೆ !

ಸೀತಾರಾಮ. ಕೆ. said...

ಬಹಳ ನವಿರಾಗಿ ತಮ್ಮ ಸಾಹಿತ್ಯದ ಗೀಳಿನ ಮೂಲದ ಬಗ್ಗೆ ವಿವರಿಸಿದ್ದೀರ್‍ಆ. ಧನ್ಯವಾದಗಳು.
"ಹೆಸರೇ ಬೇಡ " ಬಿಡುಗಡೆಗೆ ಕಾಯ್ತಾ ಇದ್ದೇವೆ. ನವು ತಪ್ಪದೇ ಬರುತ್ತೇವೆ. ಈ ನೆವದಲ್ಲಿ ಬೆ೦ಗ್ಳೂರು ನೋಡ್ಬೋದು. ಬ್ಲೊಗ್-ಮಿತ್ರರನ್ನ ಭೇಟಿ ಆಗ್ಬೋದು.
ಲೇಖನ ಚೆನ್ನಾಗಿದೆ "ದೊಡ್ಡ ತಲೆ ಪ್ರಕಾಶಾ!!" ಹೆ ಹೆ

umesh desai said...

ಹೆಗಡೇಜಿ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಅಗಾವಾಗಿ ಅಭಿನಂದನೆಗಳು...!
ಮತ್ತ ಅವತ್ತು ಕಾಕಾನೂ ಬರ್ತಾರೇನು? ನಾ ಅಂತೂ ಬರತೇನಿ....

ಸವಿಗನಸು said...

ಪ್ರಕಾಶಣ್ಣ,
ನಿಮಗೆ ಪುಸ್ತಕವನ್ನು ಕೈಗೆ ಕೊಟ್ಟು ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿದ ನಿಮ್ಮ ಚಿಕ್ಕಪ್ಪನವರಿಗೆ ಧನ್ಯವಾದಗಳು...
ನಿಮ್ಮ ಪುಸ್ತಕದ ಬಿಡುಗಡೆಗೆ ನಮ್ಮ ಹಾರ್ಧಿಕ ಶುಭಾಶಯಗಳು ....
"ಹೆಸರೇ ಬೇಡ" ಎಲ್ಲೆಡೆ ಹೆಸರಾಗಲಿ....

vishweshwar said...

Prakaashanna!nanagantu aamantrana saaku!muddam barti.....Wish u the function Grand Grand Grand Grand Success!!!!!!!!!!!

ಸುಮ said...

ಓದುವ ಅಭ್ಯಾಸವಿದ್ದವರಿಗೆ ಪ್ರಾಯಶಃ ಒಂಟಿತನ ಕಾಡುವುದಿಲ್ಲ.ಅಂತಹ ಸ್ನೇಹಿತನ ಪರಿಚಯ ಮಾಡಿಕೊಟ್ಟ ಚಿಕ್ಕಪ್ಪನಿಗೆ ನೀವು ಸಲ್ಲಿಸಿರು ಗೌರವ ಮನಮುಟ್ಟುವಂತಿದೆ ಪ್ರಕಾಶಣ್ಣ.
ನಿಮ್ಮ "ಹೆಸರೆ ಬೇಡ"ದ ಕೀರ್ತಿ ಎಲ್ಲೆಡೆ ಹಬ್ಬಲಿ ಎಂದು ಆಶಿಸುವೆ.

ಲೋದ್ಯಾಶಿ said...

ಆತ್ಮೀಯ

ಅಭಿನಂದನೆಗಳು.
ನಿಮ್ಮ "ಹೆಸರೇ ಬೇಡ..." ಪುಸ್ತಕವನ್ನ ಕರ್ನಾಟಕದ ಇತರ ಭಾಗಗಳಲ್ಲಿ ಇರುವ ಓದುಗರಿಗೆ ಕೂಡ ತಲುಪಿಸುತ್ತೀರಾ ತಾನೇ?
ಅಥವ ಕೇವಲ ಬೆಂಗಳೂರಿನ ಪುಸ್ತಕ ಮಳಿಗೆಗಳಿಗೆ ಮಾತ್ರ ಸೀಮಿತವಾಗಿಸ್ತೀರ?

ಸಮಾರಂಬದ ಆಮಂತ್ರಣ ಕಳ್ಸಿ ಮತ್ತೆ !

PARAANJAPE K.N. said...

ಪ್ರಕಾಶರೇ, ನಿಮ್ಮ ಪುಸ್ತಕದ ಬಗ್ಗೆ ಕುತೂಹಲವಿದೆ, ಕಾಯುತ್ತಿದ್ದೇನೆ, ಖಂಡಿತ ಬರುವೆ, ನಿಮ್ಮ ಮತ್ತು ನಿಮ್ಮ ಮಿತ್ರರ ಸಾಹಸಕ್ಕೆ ಯಶ ಕೋರುತ್ತೇನೆ, ಅಭಿನಂದನೆಗಳು. ಶುಭವಾಗಲಿ.

ಶಿವಪ್ರಕಾಶ್ said...

ನಿಮ್ಮ ಪುಸ್ತಕದ ಟೈಟಲ್ ಸಕತಗಿದೆ...
ಅಭಿನಂದನೆಗಳು ಪ್ರಕಾಶಣ್ಣ :)

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ದಿನಕರ...

ನಿಮ್ಮ ಸ್ನೇಹಕ್ಕೆ, ಪ್ರೀತಿಗೆ ನನ್ನ ನಮನಗಳು...

ಪ್ರಕಾಶಕರ ಬಳಿ ಮಾತನಾಡಿ..
ನಿಮಗೆ ಪುಸ್ತಕದ ವ್ಯವಸ್ಥೆ (ದೂರದಲ್ಲಿರುವವರಿಗೆ)
ಖಂಡಿತ ಮಾಡುವೆ...

ಇಲ್ಲವಾದಲ್ಲಿ ನಾನೇ ಕಳುಹಿಸಿಕೊಡುವೆ...

ಕಾರ್ಯಕ್ರಮಕ್ಕೆ ದಯವಿಟ್ಟು ಬರಲು ಪ್ರಯತ್ನಿಸಿ...

ಹಿತ್ತಲಮನೆ said...

ಅಭಿನಂದನೆಗಳು ಪ್ರಕಾಶಣ್ಣ ! All the best!

ಚುಕ್ಕಿಚಿತ್ತಾರ said...

ಪ್ರಕಾಶಣ್ಣ. ನಿಮ್ಮ "ಹೆಸರೇ ಬೇಡ" ಪುಸ್ತಕದ ಹೆಸರು ಹೋದಲ್ಲೆಲ್ಲಾ ಹೆಸರುವಾಸಿಯಾಗಲಿ. ಹೆಸರಿಗೆ ಹೆಸರು ಎ೦ದು ಹೆಸರಿಟ್ಟು ಹೆಸರಾದವನ ಹೆಸರೇ ಹೆಸರಿಲ್ಲದಿರುವಾಗ ಹೆಸರಿಗೇಕೆ ಅಷ್ಟೊ೦ದು ಹೆಸರು.....? ಹೆಸರಿಲ್ಲದ ಅಡುಗೆಯ ರುಚಿಗೇನು ಕೊರತೆ...? ಹೆಸರೇ ಬೇಡ ಚೆನ್ನಾಗಿದೆ.
ನನಗೂ ಓದುವುದರಲ್ಲಿ ಸಿಕ್ಕುವ ಆನ೦ದ ಇನ್ನಾವುದರಲ್ಲಿಯೂ ಸಿಗದು.ನಿಮ್ಮ ಪುಸ್ತಕಗಳು ಪ್ರಕಾಶನಗೊಳ್ಳುತ್ತಲೇ ಇರಲಿ.

Geeta said...

Wow!!
Congratulation.........! ninna kanasu nanasagta irodakke kushi aagta iddu.book oodo habit iravarige ontitana kadadu kadime,barediradanna odale astu santosha aagtu heli aadre....bariyale kutre innestu santosha aagtena alda..? Ninage devru aa kalena kottidda.adralli neenage nirakshegintalu hechhina YASHASSU sigali heladu nammellara haraike.......WISH U GOOD LUCK!!

ಬಿಸಿಲ ಹನಿ said...

ಪ್ರಕಾಶ್ ಅವರೆ,
ನೀವು ಚಿಕ್ಕವರಿದ್ದಾಗ ರಿಕೆಟ್ಸ್ ರೋಗ ನಿಮ್ಮನ್ನು ಅಂಟಿಕೊಂಡು ಕೀಳರಿಮೆಯಿಂದ ಬಳಲುತ್ತಿರುವಾಗ ನಿಮ್ಮನ್ನು ಪುಸ್ತಕಲೋಕಕ್ಕೆ ಪರಿಚಯಿಸಿ ನಿಮ್ಮನ್ನು ಒಬ್ಬ ಉತ್ತಮ ಮನುಷ್ಯನನ್ನಾಗಿ ಮಾಡಿದ್ದಾರೆ. ನಿಮ್ಮ ಬಾಳು ಬೆಳಗಿದ ಅಂಥ ಚಿಕ್ಕಪ್ಪನಿಗೆ ನೀವು ನಿಮ್ಮ ಮೊದಲ ಪುಸ್ತಕವನ್ನು ಅರ್ಪಿಸಿದ್ದು ನಿಜಕ್ಕೂ ಶ್ಲಾಘನೀಯ!
“ಹೆಸರೇ ಬೇಡ” ಎನ್ನುವ ನಿಮ್ಮ ಪುಸ್ತಕಕ್ಕೆ ಹಾರ್ಧಿಕ ಸ್ವಾಗತ. ಕಾರ್ಯಕ್ರಮದಲ್ಲಿ ನಾನಿರುವದಿಲ್ಲವಾದರೂ ನನ್ನ ಶುಭಹಾರೈಕೆಗಳು ಇದ್ದೇ ಇರುತ್ತವೆ. Happy book releasing & wish you a grand success!

Raghu said...

All the best prakash...Keep going...
Raaghu.

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ...

ಈ ಬ್ಲಾಗ್ಲೋಕದಿಂದಾಗಿ ನನಗೊಂದು ಐಡೆಂಟಿಟಿ ಸಿಕ್ಕಿದೆ...
ನಾನು ಬರೆದುದ್ದನ್ನು ಜನ ಅಕ್ಕರೆಯಿಂದ ಓದುತ್ತಾರೆ...
ಇದರಿಂದಾಗಿ ಅಪಾರ ಪ್ರೀತಿಯೂ ಸಿಕ್ಕಿದೆ...

ಈ ಬ್ಲಾಗ್ ಲೋಕದ ಎಲ್ಲರಿಗೂ ನನ್ನ ನಮನಗಳು...

ನಿಮ್ಮೆಲ್ಲರ ಶುಭ ಹಾರೈಕೆ ನನಗೆ ಇನ್ನಷ್ಟು ಉತ್ಸಾಹ ಕೊಟ್ಟಿದೆ...
Thanks .. a.. lot..!

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ...

ನಾನು ಓದುವಾಗ ಹೇಗೆ ತಲ್ಲೀನನಾಗಿ ಓದುತ್ತೇನೋ..
ಹಾಗೆಯೇ...
ಬರೆಯುವಾಗಲೂ ಸಹ ತಲ್ಲೀನನಾಗಿ ಬಿಡುತ್ತೇನೆ...

ಆ ಕ್ಷಣದ ನನ್ನ ಭಾವಗಳು ಅಲ್ಲಿರುತ್ತವೆ..

ಯಾವಾಗ ಬೇಕಾದರೂ ನನ್ನ ಹತ್ತಿರ ಬರೆಯಲಾಗುವದಿಲ್ಲ..
ಅದಕ್ಕೊಂದು ಮೂಡು ಬರಬೇಕು...

ನನ್ನ ಚಿಕ್ಕಪ್ಪ ಸ್ವತಃ ಒಬ್ಬ ಶಿಕ್ಷಕ...
ಅವರು ಸಾವಿರಾರು ಮಕ್ಕಳಿಗೆ ವಿದ್ಯಾಬುದ್ಧಿ ಕೊಟ್ಟಿದ್ದಾರೆ..

ನನಗೆ ಪಾಲಕರಾಗಿ, ಶಿಕ್ಷಕರೂ ಆಗಿದ್ದರು...
ಅವರೂ ಸಹ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರುತ್ತಾರೆ...

ನಿಮ್ಮೆಲ್ಲರ ಶುಭ ಹಾರೈಕೆಗಳಿಗೆ ನನ್ನ ನಮನಗಳು...

ರಾಜೀವ said...

ಆಗ ನಿಮಗೆ ಸ್ನೇಹಿತರು ಇಲ್ಲದಿದ್ದರೇನಾಯಿತು? ಈಗ ಇದ್ದಾರಲ್ಲಾ? ಅದಕ್ಕೆ ಪರೋಕ್ತವಾಗಿ ಕಾರಣರಾದ ನಿಮ್ಮ ಚಿಕ್ಕಪ್ಪಾವರಿಗೆ ಧನ್ಯವಾದಗಳು.

ಬರವಣಿಗೆ ಎಂಬ ಇಟ್ಟಿಗೆ ಜೊತೆ, ಕಲ್ಪನೆ-ಅನುಭವಗಳೆಂಬ ಸಿಮೆಂಟ್ ಸೇರಿಸಿ, ಪ್ರೀತಿ ವಿಶ್ವಾಸದಿಂದ ಪೇಯಿಂಟ್ ಮಾಡಿ ಒಂದು ದೊಡ್ಡ ಅರಮನೆಯನ್ನೇ ಕಟ್ಟಿದ್ದೀರಾ. ನಿಮ್ಮ ಪುಸ್ತಕ ಬಿಡುಗಡೆಗೆ ಅಭಿನಂದನೆಗಳು.

ಸುಧೇಶ್ ಶೆಟ್ಟಿ said...

ತು೦ಬಾ ಖುಷಿ ಆಗ್ತಿದೆ....

Keshav Kulkarni said...

all the best!

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನಿಮ್ಮ ಪುಸ್ತಕ ಪ್ರೀತಿಗೆ ಕಾರಣರಾದ ನಿಮ್ಮ ಚಿಕ್ಕಪ್ಪಗೆ ನಮನಗಳು. ಅವರಿಂದಾಗಿ ನಮಗೀಗ ನಗೆಯ ಗುತ್ತಿಗೆದಾರರು ದೊರಕಿದ್ದಾರೆ. ನಿಮ್ಮ ಬರಹಗಳು ನಮ್ಮನ್ನು ರಂಜಿಸಿದೆ,ಯೋಚಿಸುವಂತೆ ಮಾಡಿದೆ. ಪುಸ್ತಕ ರೂಪದಲ್ಲಿ ಬಂದಾಗ ಅದರ ಸೊಗಸೇ ಬೇರೆ. ಸ್ನೇಹಿತರಿಗೆ, ನೊಂದವರಿಗೆ ಗಿಫ್ಟ್ ಕೊಡಲು ನಿಮ್ಮ ಪುಸ್ತಕ ಚೆನ್ನಾಗಿರುತ್ತದೆ.ನಿಮಗೆ ಮನಃಪೂರ್ವಕ ಅಭಿನಂದನೆಗಳು.

sunaath said...

ಪ್ರಕಾಶ,
ನಿಮ್ಮಿಂದ ಇನ್ನೂ ಅನೇಕ ಸಾಹಿತ್ಯಕೃತಿಗಳು ಹೊರಬರಲಿ. ನಿಮ್ಮ
ಹಾಗು ನಿಮ್ಮ ಮಿತ್ರರ ventureಗೆ ನನ್ನ ಹಾರ್ದಿಕ ಶುಭಾಶಯಗಳು.
(ಆರೋಗ್ಯಸಮಸ್ಯೆಯಿಂದಾಗಿ ನನಗೆ ವೈಯಕ್ತಿಕವಾಗಿ ಉಪಸ್ಥಿತನಾಗಲು ಸಾಧ್ಯವಾಗಲಾರದು ಎನ್ನುವ ವ್ಯಥೆ ನನಗಿದೆ.)

ಮನಸು said...

ಅಭಿನಂದನೆಗಳ ಜೊತೆಗೆ ಹೆಸರೇ ಇಲ್ಲದ ಪುಸ್ತಕ ಹೆಸರು ಮಾಡಲೆಂದು ಆಶಿಸುತ್ತೇವೆ. ಮತ್ತಷ್ಟು ಹೊಸಬಗೆಯ ಪುಸ್ತಕಗಳು ಹೊರಬರಲಿ. ದೂರ ಇರುವವರಿಗಾಗಿ ನಿಮ್ಮ ಪುಸ್ಲಕಗಳನ್ನು ಮೀಸಲಿಡಿ.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಸಿಮೆಂಟು ಮರಳಿನ ಮಧ್ಯೆ said...

ಸೀತಾರಾಮ್ ಸರ್...

ನೀವು ಬರಲು ಒಪ್ಪಿಕೊಂಡಿದ್ದು ಬಹಳ ಖುಷಿಯಾಯಿತು...
ಬನ್ನಿ ಅಂದು ನಮ್ಮ ಬ್ಲಾಗ್ ಲೋಕದ ಅನೇಕ ಸ್ನೇಹಿತರು ಬರುತ್ತಾರೆ...
ಅಲ್ಲಿ ಬ್ಲಾಗ್ ಲೋಕದವರೇ ಹೆಚ್ಚಾಗಿ ಸೇರಿರುತ್ತಾರೆ...

ನಾವೆಲ್ಲ ಎಷ್ಟೋ ಸ್ನೇಹಿತರ ಮುಖ ಪರಿಚಯ ಮಾಡಿಕೊಳ್ಳ ಬಹುದು...

ದೊಡ್ಡ ತಲೆ ಪ್ರಕಾಶ ನಿಮಗಾಗಿ ಕಾಯುತ್ತಿರುತ್ತಾನೆ...

ಧನ್ಯವಾದಗಳು...

Kishan said...

"ಚಿಕ್ಕಪ್ಪಾ...ನನ್ನ ಪುಟ್ಟ ಕೈಗೆ..ನೀ.... ಕೊಟ್ಟ... ತೋರು ಬೆರಳಿನದು...!!"
Very nice framing and heart touching sentence; dampened my eyes...

All the very best... ALWYAS....

Best wishes to your book release, book and the success.

Guru's world said...

ಪ್ರಕಾಶ್ ಅಣ್ಣ,,
ಖಂಡಿತ ವಾಗಿಯೂ ನಿಮ್ಮ ಪುಸ್ತಕ ಬಿಡುಗಡೆ ಸಮಾರಂಬಕ್ಕೆ ತಪ್ಪದೆ ಬರುತ್ತೇವೆ... ನಿಮ್ಮ ಹವ್ಯಾಸ, ಕಲೆ ಗೆ ನಮ್ಮ ಪ್ರೋಸ್ತಾಹ ಯಾವಾಗಲು ಇದೆ... I wish you All the best.:-)
Guru

ಗೋಪಾಲ್ ಮಾ ಕುಲಕರ್ಣಿ said...

"ಹೆಸರೇ ಬೇಡ..." tumba cheenagide hesaru.
All The Best...:)

ವಿನುತ said...

ನಿಜ. ಒಳ್ಳೆಯ ಪುಸ್ತಕಗಳಿಗಿ೦ತಲೂ ಉತ್ತಮ ಸ್ನೇಹಿತರು ಬೇರಿಲ್ಲ. ಅಭಿನಂದನೆಗಳು ಪುಸ್ತಕ ಪ್ರಕಟಣೆಗೆ. ಯಶಸ್ಸು ನಿಮ್ಮದಾಗಲಿ.

Prashanth Arasikere said...

ontitanada baduku hagu nivu anubasida novvu yarigu barade irli antha devaralli koruttene ..nimma ballayada dinagalu nenuskondu nangu bejar aythu.

Sumana said...

ಬಾಲ್ಯದ influence ನಮ್ಮ ಜೀವನದಲ್ಲಿ ಮುಂದೆ ಎಷ್ಟಿರುತ್ತೆ ಅನ್ನೋಕ್ಕೆ ನಿಮ್ಮದು ಒಂದು ಒಳ್ಳೆಯ ನಿದರ್ಶನ. ನಿಮ್ಮ ಚಿಕ್ಕಪ್ಪನಿಗೆ ನಮ್ಮದೂ ಸಲಾಮ್ :)

ನಿಮ್ಮ ಪುಸ್ತಕದ ಬಿಡುಗಡೆ ಚೆನ್ನಾಗಿ ಆಗಲಿ ಹಾಗೂ "ಹೆಸರೇ ಬೇಡ ".....ಎಲ್ಲರಿಗೂ ಬೇಕಾಗಲಿ!!

shridhar said...

ವಯಕ್ತಿಕ ಕಾರಣದಿಂದಾಗಿ ನಿಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲವಲ್ಲ ಎಂದು ಬೇಜಾರಗುತ್ತಿದೆ.
ಪುಸ್ತಕವನ್ನಂತು ಮುದ್ದಾಂ ಕೊಂಡು ಓದುತ್ತೇನೆ.
ನಿಮ್ಮ ಹಾಗು ನಿಮ್ಮ ಗೆಳೆಯರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಚೆನ್ನಾಗಿ ನಡೆಯಲೆಂದು ಆಶಿಸುತ್ತೇನೆ.

Shree said...

all the best anna

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಎಲ್ಲ ಚೊಲೋದಾಗ್ಲಿ ಪ್ರಕಾಶಣ್ಣ..

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಪುಸ್ತಕ ಬಿಡುಗಡೆ ಸಮಾರಂಬಕ್ಕೆ ಹಾರ್ದಿಕ ಶುಭಾಶಯಗಳು
ಎಲ್ಲವೂ ಒಳಿತಾಗಲಿ
ಬರಲು ಆಗದೆ ಇದ್ದಿದ್ದಕ್ಕೆ ಬೇಸರವಿದೆ,
ಆದರೆ ಸದಾ ಶುಭ ಹಾರೈಕೆಯಿದೆ

Deepasmitha said...

ಅಭಿನಂದನೆಗಳು ಪ್ರಕಾಶ್ ಅವರೆ. ಹೆಸರು ಇಲ್ಲದ ಪುಸ್ತಕ ಹೆಸರುವಾಸಿಯಾಗಲಿ

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶಣ್ಣ...
ಎಲ್ಲಾ ಒಳಿತಾಗಲಿ... ಖಂಡಿತ ನಾನಂತೂ ಬಂದೇ ಬರ್ತೀನಿ.

Shweta said...

ನಿಮ್ಮ ಕುಶಿಗೆ ನನ್ನ ಹಾರ್ದಿಕ ಅಭಿನಂದನೆಗಳು...ಖಂಡಿತವಾಗಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬರುತ್ತೇನೆ...'ಹೆಸರೇ ಬೇಡ' ದ
ಪುಸ್ತಕವನ್ನು ಓದಲೇ ಬೇಕು ..
ಹೀಗೆ ಬರೆಯುತ್ತಾ ಇರಿ ಪ್ರಕಾಶ ಅಣ್ಣ ..ನಿಮಗೆಒಳ್ಳೆಯದಾಗಲಿ
-ಶ್ವೇತಾ.

ರಾಜೇಶ್ ನಾಯ್ಕ said...

ವ್ಹಾ! ನಿಮ್ಮ ಪುಸ್ತಕ! ಸಂತೋಷದ ಸುದ್ದಿ. ಅಭಿನಂದನೆಗಳು.

Geetha said...

ನಮಸ್ಕಾರ ಸರ್ :)

ನಿಮ್ಮ ಪುಸ್ತಕ ಬಿಡುಗಡೆ ವಿಷಯ ತುಂಬಾ ಖುಷಿಯಾಯ್ತು...all the best . ನಿಮ್ಮ ತುಂಬಾ ಲೇಖನಗಳು ಓದದೆ miss ಆಗಿಬಿಟ್ಟಿವೆ..ಈಗ ಒಂದೊಂದಾಗಿ ಓದಿ ನಗುವೆ..

ರೂಪಾ ಶ್ರೀ said...

parichaya irada eshto janarannu naanu avara aksharagala moolaka gurutisiddene.. anthavarellaa nimma pustaka bidugade dina nodalu siguttaare!!!!

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್ ದೇಸಾಯಿಯವರೆ...

ಅಂದಿನ ಬಿಡುಗಡೆ ಕಾರ್ಯಕ್ರಮಕ್ಕೆ ನಮ್ಮ ಚಿಕ್ಕಪ್ಪ ಊರಿನಿಂದ ಬರುತ್ತಿದ್ದಾರೆ..
ಅವರು ನನ್ನ ಕಷ್ಟದ ಸಮಯದಲ್ಲಿ ಒಂದೇ ಅಲ್ಲ..
ಖುಷಿಯ ಕ್ಷಣಗಳನ್ನೂ ತಪ್ಪಿಸುವದಿಲ್ಲ..

ನನ್ನ ಕಥನದಲ್ಲಿ ಬರುವ ಅನೇಕರು ಅಂದು ಬರುತ್ತಾರೆ...

ನಾಗು ಬರುತ್ತಾನೆ..
ರಾಜಿ ಬರಬಹುದು...

ಇಬ್ಬರಲ್ಲಿ ಒಬ್ಬರಂತೂ ಬರುತ್ತಾರೆ...

ರಾಜಿಯ ಅಪೇಕ್ಷೆಯಂತೆ ಅವಳು ಬಂದರೆ ಅವಳ ಪರಿಚಯ ನಾನು ಮಾಡಿಕೊಡ ಬಾರದಂತೆ..

ನಮ್ಮಲ್ಲಿ ಮದುವೆಯಾದ ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ಇರುವ ಸಮಸ್ಯೆಗಳೆ ಅವಳಿಗೂ ಇದೆ...
ಅದು ಪತಿ ಸಮಸ್ಯೆ...

ನಿಮ್ಮೆಲ್ಲರ ಉತ್ಸಾಹ ನನಗೆ ಖುಷಿ ತರಿಸಿದೆ...

ಧನ್ಯ...
ಧನ್ಯವಾದಗಳು..

shivu said...

ಪ್ರಕಾಶ್ ಸರ್,

ಯಾವ ಬೀಜ ಎಂಥ ಮರವಾಗುತ್ತದೆ ಎನ್ನುವುದನ್ನು ಬಲ್ಲವರಾರು? ಅದ್ರೆ ಬೀಜಗಳನ್ನು ಹೆಕ್ಕಿ ಸರಿಯಾದ ಜಾಗದಲ್ಲಿ ಬಿತ್ತಾಗ ಮಾತ್ರವೇ ಅದು ಗಿಡವಾಗಿ, ಮರವಾಗಿ ಬೆಳೆಯಬಲ್ಲದು. ಅಂತ ಕೆಲಸವನ್ನು ನಿಮ್ಮ ಚಿಕ್ಕಪ್ಪ ಮಾಡಿದ್ದಾರೆ. ನಮಗೆ ಸದಾ ನಗುತ್ತಾ, ನಗಿಸುತ್ತಿರುವ ಪ್ರಕಾಶ್ ಹೆಗಡೆಯವರನ್ನು ರೂಪಿಸಿದ ನಿಮ್ಮ ಚಿಕ್ಕಪ್ಪನಿಗೆ ಸಾವಿರ ನಮನಗಳು.

Prashanth P Channammanavar said...

ತುಂಬಾ ಚೆನ್ನಾಗಿ ಇದೆ ನಿಮ್ಮ ಸಿರ್ಸಿ ಪಯಣದ ಅನುಭವ ........ ನನ್ನ ವಬ್ಬ ಅಣ್ಣ ನಿಮ್ಮ ಅಭಿಮಾನಿ

ಇಂತಿ ನಿಮ್ಮ,
ಪ್ರಶಾಂತ್ ಚನ್ನಮ್ಮನವರ್

Ravi said...

Prakashanna. Congratulations!!!
Expecting more and more like this

Annapoorna Daithota said...

ಅಭಿನಂದನೆ ಹಾಗೂ ಶುಭಹಾರೈಕೆಗಳು :)

ಜಲನಯನ said...

ನಮ್ಮ ಚಿಕ್ಕಂದಿನಲ್ಲಿ ನಮಗೆ ಏನೋ ಒಂದು ರೀತಿಯಲ್ಲಿ ಆಪ್ಯಾಯಕರ ಮತ್ತು ಅತಿ ಪ್ರಿಯರಾಗಿ ಕೆಲವರು ಉಳಿದುಬಿಡುತ್ತಾರೆ...ಅಂತಹವರಿಂದಲೇ ಬಹುಮುಖ್ಯ ಪ್ರೇರಣೆ..ಮತ್ತು ದಿಗ್ದರ್ಶನ ಆಗುವುದು...ನಿಮ್ಮ ವಿಷಯದಲ್ಲಿ ಆದಂತೆ...ನನಗೆ ಬಹುಶಃ ನನ್ನ ತಾತ (ತಾಯಿಯ ತಂದೆ) ...ಅವರ ಪ್ರೋತ್ಸಾಹ ಸಿಕ್ಕಿರದಿದ್ದಿದ್ದರೆ ಬಹುಶಃ ನಾನು ಕನ್ನಡ ..ಬರವಣಿಗೆ..ನಾಟಕಗಳಿಗೆ ಹೋಗುತ್ತಿರಲಿಲ್ಲ. ನಿಮ್ಮ ಚಿಕ್ಕಪ್ಪನವರಿಗೆ ನಮ್ಮ ನಮನ ಹಾಗೇ...ಹಾಂ ಹೌದಲ್ಲ ...ನಿಮ್ಮ ಪುಸ್ತಕ ಬಿಡುಗಡೆ ಘಳಿಗೆಯೂ ಬಂದೇ ಬಿಡ್ತು....ಪ್ರಕಾಶ್...ನಿಮ್ಮ ಮತ್ತು ಶಿವು (ಹಾಗೂ ಇತರ ಸ್ನೇಹಿತರೂ ಇದ್ದರೆ) ಎಲ್ಲರಿಗೆ ನಮ್ಮ ಶುಭಾಷಯಗಳು ಮತ್ತು ಅಭಿನಂದನೆಗಳು.

Shantala Sayimane said...

ಹೆಸರೇ ಬೇಡದ ನಿಮ್ಮ ಪುಸ್ತಕ, ಹೆಸರುವಾಸಿ ಆಗುವದರಲ್ಲಿ ಅನುಮಾನವೇ ಇಲ್ಲ......
ಶುಭಾಶಯಗಳು.

Umesh Balikai said...

ನಿಜಕ್ಕೂ ತುಂಬಾ ತುಂಬಾ ಸಂತೋಷ ಸರ್.. ಬಹಳ ದಿನಗಳಿಂದ ಕಾಯ್ತಾ ಇದ್ವಿ, ಸುದಿನ ಹತ್ರ ಬರ್ತಾ ಇದೆ... ಎಲ್ಲ ಒಳ್ಳೆಯದಾಗಲಿ. ನಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ನಿಮ್ಮೊಂದಿಗೆ ಸದಾ ಇರ್ತವೆ. ಅಭಿನಂದನೆಗಳು.

- ಉಮೇಶ್

Prashanth P Channammanavar said...

ಪ್ರಕಾಶವರೆ ತಪ್ಪು ತಿಳಿದುಕೊಳ್ಳಲಿಲ್ಲ ಅಂದರೆ ನಿಮಗೆ ನನ್ನದೊಂದು ಸಲಹೆ ........ (ನನಗೆ ಓದುವ ಚಟ ಹಿಡಿಸಿದ ನನ್ನ ಚಿಕ್ಕಪ್ಪನಿಗೆ ನಮನಗಳು....) ..... ಚಟ ಅಂತ ಬಳಸುವ ಬದಲು ಹವ್ಯಾಸ ಅಂತ ಬಳಸಿದರೆ ತುಂಬಾ ಚೆನ್ನಾಗಿರುತ್ತೆ ಅಂತ ನನ್ನ ಅಬಿಪ್ರಾಯ ...... ದಯವಿಟ್ಟು ತಪ್ಪುತಿಳಿದುಕೊಳ್ಳಬೇಡಿಇಂತಿ ನಿಮ್ಮ,

ಪ್ರಶಾಂತ್ ಚನ್ನಮ್ಮನವರ್

AntharangadaMaathugalu said...

ಪ್ರಕಾಶ್ ರವರೇ...
ನಿಮ್ಮ ಪುಸ್ತಕ ಬಿಡುಗಡೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ತುಂಬಾ ತಡವಾಗಿದ್ದಕ್ಕೆ ಕ್ಷಮೆ ಇರಲಿ...

ಶ್ಯಾಮಲ

ಸಿಮೆಂಟು ಮರಳಿನ ಮಧ್ಯೆ said...

ಸವಿಗನಸು(ಮಹೇಶ್)

ನನ್ನ ಚಿಕ್ಕಪ್ಪ ಶಿಕ್ಷಣ ಪ್ರೇಮಿ..
ಅನೇಕ ಬಡ ಮಕ್ಕಳ ಫೀಸ್ ಕೂಡ ತಾವೇ ಕೊಟ್ಟು ಅವರಿಗೆ ಶಿಕ್ಷಣ ಕೊಟ್ಟಿದ್ದಾರೆ...
ನನಗೆ ಅವರು ಶಿಕ್ಷಕರೂ ಹೌದು...

ನಿಮ್ಮ ಶುಭ ಹಾರೈಕೆಗಳಿಗೆ ನಮನಗಳು...

ಸಿಮೆಂಟು ಮರಳಿನ ಮಧ್ಯೆ said...

ವಿಶ್ವೇಶ್ವರ....

ನಮಸ್ತೆ...

ನಾನು ಕರೆಯುವದು ಹೆಚ್ಚೊ...
ನೀವೆಲ್ಲ ಬರುವದು ಹೆಚ್ಚೊ...?

ನೀವು ಸಿರ್ಸಿಯಿಂದ ಬರುವದು ತುಂಬಾ ಖುಷಿಯಾಗಿದೆ....

ನಿಮ್ಮ ಪ್ರೋತ್ಸಾಹಕ್ಕೆ ನನ್ನ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಸುಮ...

ನಿಮ್ಮ, ನಿಮ್ಮನೆಯವರ ಶುಭ ಹಾರೈಕೆಗಳಿಗೆ ನನ್ನ ನಮನಗಳು...

ದಯವಿಟ್ಟು ಬನ್ನಿ....

ಸಿಮೆಂಟು ಮರಳಿನ ಮಧ್ಯೆ said...

ಲೋದ್ಯಾಶಿಯವರೆ...

ನಿಮ್ಮ ಕಳಕಳಿಗೆ ನನ್ನ ಧನ್ಯವಾದಗಳು...

ನಮ್ಮ ಪುಸ್ತಕಗಳು ಹುಬ್ಬಳ್ಳಿ, ಧಾರವಾಡದ ಪುಸ್ತಕದ ಮಳಿಗೆಗಳಲ್ಲೂ ಸಿಗುವ ವ್ಯವಸ್ಥೆ ಮಾಡುತ್ತೇವೆ...

ನಿಮಗೆಲ್ಲ ಪೋಸ್ಟ್ ಮೂಲಕ ಕಳಿಸುವ ವ್ಯವಸ್ಥೆ ಮಾಡುತ್ತೇನೆ...

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ...

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ...

ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು...
ನೀವು ಬರುವದು ಖುಷಿಯಾಗಿದೆ...
ದಯವಿಟ್ಟು ಬನ್ನಿ...

ಸಿಮೆಂಟು ಮರಳಿನ ಮಧ್ಯೆ said...

ಶಿವಪ್ರಕಾಶ್...

ಮೆಚ್ಚುಗೆಗೆ ಧನ್ಯವಾದಗಳು...
ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ....

ಸಿಮೆಂಟು ಮರಳಿನ ಮಧ್ಯೆ said...

ಹಿತ್ತಲಮನೆ ( ಎಮ್ಮಾರು)

ಧನ್ಯೋಸ್ಮಿ...!!!!!!!

ಬರುತ್ತೀರಲ್ಲ... ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಚುಕ್ಕಿಚಿತ್ತಾರ...

ನೀವು ಖುಷಿಪಟ್ಟಿದ್ದು ಸಂತೋಷವಾಗುತ್ತದೆ...

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ...
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಗೀತಾ....

ತುಂಬಾ ತುಂಬಾ ಥ್ಯಾಂಕ್ಸ್....

ನಿಜ "ಬರೆಯೋದರಲ್ಲಿ ಇರೋ ಸುಖಾ....ಗೊತ್ತೇ ಇರಲಿಲ್ಲ...."

ನಿಮ್ಮ ಶುಭಹಾರೈಕೆಗಳಿಗೆ ನನ್ನ ನಮನಗಳು...

ದಯವಿಟ್ಟು ಬನ್ನಿ... ಬರುತ್ತೀರಲ್ಲ...!

ಸಿಮೆಂಟು ಮರಳಿನ ಮಧ್ಯೆ said...

ಬಿಸಿಲ ಹನಿ(ಉದಯ)

ದೂರದ ನಾಡಿನಲ್ಲಿರುವ ನಿಮ್ಮ ಶುಭ ಹಾರೈಕೆಗಳು ಇನ್ನಷ್ಟು ಖುಷಿ ತರಿಸಿದೆ..

ನಿಮ್ಮ ಶುಭ ಕಾಮನೆಗಳಿಗೆ ಧನ್ಯವಾದಗಳು...

ತಾವೂ ಕೂಡ ಬರಲು ಪ್ರಯತ್ನಿಸಿ.....

ಸಿಮೆಂಟು ಮರಳಿನ ಮಧ್ಯೆ said...

ರಘು.....

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ದಯವಿಟ್ಟು ಬನ್ನಿ.. ಕಾರ್ಯಕ್ರಮ ಚಂದಗಾಣಿಸಿ....

ಸಿಮೆಂಟು ಮರಳಿನ ಮಧ್ಯೆ said...

ರಾಜೀವ...

ಒಂಟಿತನ ನಿವಾರಣೆಗೆ ನನ್ನ ಚಿಕ್ಕಪ್ಪ ಕಲಿಸಿಕೊಟ್ಟ ದಾರಿ ಬಲು ದೊಡ್ಡದು....

ಓದುವದರಿಂದ ನಮ್ಮ ಚಿಂತನಾ ಶೀಲತೆ ಜಾಸ್ತಿಯಾಗುತ್ತದೆ...

ಧನ್ಯವಾದಗಳು....

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ....

ಸಿಮೆಂಟು ಮರಳಿನ ಮಧ್ಯೆ said...

ಸುಧೇಶ್...

ನೀವಂತೂ ಬಂದೇ ಬರುತ್ತೀರೆಂದು ಹೇಳಿದ್ದೀರಿ...
ಅಂದು ನಿಮ್ಮ ಮುಖ ನೋಡಲು ಕಾದಿರುತ್ತೇನೆ...

ದಯವಿಟ್ಟು ಬನ್ನಿ....

ಸಿಮೆಂಟು ಮರಳಿನ ಮಧ್ಯೆ said...

ಕೇಶವ ಸರ್...

ನಿಮ್ಮ ಶುಭಕಾಮನೆಗಳು ಇನ್ನಷ್ಟು ಉತ್ಸಾಹ ತರಿಸಿದೆ...

ಸಾಧ್ಯವಾದರೆ ತಾವೂ ಬನ್ನಿ...

ನಿಮಗೆ ನನ್ನ ನಮನಗಳು...

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್...

ಇದು ನಿಜ...
ನಿಮ್ಮಂತೆಯೇ ನಾನು ಕೂಡ ಪುಸ್ತಕಗಳನ್ನು ಉಡುಗೊರೆ ಕೊಡುತ್ತೇನೆ...

ನನ್ನ ಪುಸ್ತಕಕ್ಕೆ ಚಂದದ ಹೆಸರು ಸೂಚಿಸಿದ ನಿಮಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್..

ನನ್ನ ಮೊದಲ ಲೇಖನದಿಂದ ಇಲ್ಲಿಯವರೆಗೂ ನೀವು ಕೊಟ್ಟ ಪ್ರೋತ್ಸಾಹ ನಾನು ಮರೆಯುವದಿಲ್ಲ...

ನನ್ನ ಪುಸ್ತಕಕ್ಕೆ ನೀವು ಬೆನ್ನುಡಿ ಬರೆದು ಕೊಟ್ಟು ಮತ್ತಷ್ಟು ಪ್ರೋತ್ಸಾಹ ತುಂಬಿದ್ದೀರಿ...

ಈ ಸಾರಿ ಊರಿಗೆ ಬಂದಾಗ ನಿಮ್ಮನ್ನು ಭೇಟಿಯಾಗಲು ಬರುವೆ....

ನಿಮ್ಮ ಆಶೀರ್ವಾದ ಹೀಗೆಯೇ ಇರಲಿ...

ಸಿಮೆಂಟು ಮರಳಿನ ಮಧ್ಯೆ said...

ಮನಸು (ಸುಗುಣಾ..)

ನೀವೂ ಕೂಡ ನನ್ನ ಬರಹಗಳಿಗೆ ತಪ್ಪದೇ ಪ್ರತಿಕ್ರಿಯೆ ಕೊಟ್ಟು ಪ್ರೋತ್ಸಾಹಿಸಿದ್ದೀರಿ...

ಧನ್ಯವಾದಗಳು...

ಬರಲು ಪ್ರಯತ್ನಿಸಿ..

ಶುಭ ಕಾಮನೆಗಳು ಯಾವಗಲೂ ಹೀಗೆಯೇ ಇರಲಿ....

ಸಿಮೆಂಟು ಮರಳಿನ ಮಧ್ಯೆ said...

ಕಿಶನ್...

ನನಗೆ ಆ ವಯಸ್ಸಿನಲ್ಲಿ ಆ ತೋರು ಬೆರಳು ಬೇಕಾಗಿತ್ತು...
ತಂದೆಯಂತೆ ಬಂದು..
ಭರವಸೆ ತುಂಬಿದ ಚಿಕ್ಕಪ್ಪನಿಗೆ ಚಿರ ಋಣಿ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಗುರು....

ತುಂಬಾ .. ತುಂಬಾ ಥ್ಯಾಂಕ್ಸ್...

ನಿಮ್ಮನ್ನು ಅಂದು ನಾನು ಬಾಗಿಲಲ್ಲೇ ಕಾಯುತ್ತಿರುತ್ತೇನೆ...

ದಯವಿಟ್ಟು ಬನ್ನಿ...

ಸಿಮೆಂಟು ಮರಳಿನ ಮಧ್ಯೆ said...

ಗೋಪಾಲ್.....

ಪ್ರೋತ್ಸಾಹಕ್ಕೆ ಧನ್ಯವಾದಗಳು...

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ....

ಸಿಮೆಂಟು ಮರಳಿನ ಮಧ್ಯೆ said...

ವಿನುತಾರವರೆ...

ನೀವು ಬಹುಷಃ ಅಮೇರಿಕಾದಲ್ಲಿರಬೇಕಲ್ಲವೆ...
ಇಲ್ಲೇ ಇದ್ದರೆ ತಪ್ಪಿಸ ಬೇಡಿ....
ದಯವಿಟ್ಟು ಬನ್ನಿ...

ಸಿಮೆಂಟು ಮರಳಿನ ಮಧ್ಯೆ said...

ಪ್ರಶಾಂತ್ ಅರಸಿಕೆರೆ...

ನನ್ನ ಬ್ಲಾಗಿಗೆ ಸ್ವಾಗತ...

ತಾವೂ ಕೂಡ ಕಾರ್ಯಕ್ರಮಕ್ಕೆ ದಯವಿಟ್ಟು ಬನ್ನಿ... ಕಾಯುತ್ತೇನೆ....

ಸಿಮೆಂಟು ಮರಳಿನ ಮಧ್ಯೆ said...

ಸುಮನಾರವರೆ....

ನೀವೂ, ನಿಮ್ಮನೆಯವರೂ ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
ಬರುತ್ತೀರಲ್ಲ...?

ಸಿಮೆಂಟು ಮರಳಿನ ಮಧ್ಯೆ said...

ಶ್ರೀಧರ್...

ಇತ್ತೀಚೆಗೆ ನಿಮ್ಮ ಪರಿಚಯ ಆದದ್ದು...

ದಯವಿಟ್ಟು ಬರಲು ಪ್ರಯತ್ನಿಸಿ ... ಬನ್ನಿ...
ಖುಷಿಯಾಗುತ್ತದೆ...

ದಯವಿಟ್ಟು ಬನ್ನಿ....
ಪ್ರಕಾಶಣ್ಣ..

ಸಿಮೆಂಟು ಮರಳಿನ ಮಧ್ಯೆ said...

ಶ್ರೀ....

ದಯವಿಟ್ಟು ಬರಲು ಪ್ರಯತ್ನಿಸಿ...

ಪ್ರಕಾಶಣ್ಣ..

ಸಿಮೆಂಟು ಮರಳಿನ ಮಧ್ಯೆ said...

ಪೂರ್ಣಿಮಾ...

ಥ್ಯಾಂಕ್ಸ್... ಧನ್ಯವಾದಗಳು...

ಬರಲು ಪ್ರಯತ್ನಿಸು...
ಪ್ರಕಾಶಣ್ಣ...

ಸಿಮೆಂಟು ಮರಳಿನ ಮಧ್ಯೆ said...

ಸಾಗರದಾಚೆಯ ಇಂಚರ... (ಗುರು)

ಪ್ರೋತ್ಸಾಹಕ್ಕೆ ಧನ್ಯವಾದಗಳು...
ನಿಮ್ಮ ಶುಭಕಾಮನೆಗಳಿಗೆ ನನ್ನ ನುಡಿ ನಮನಗಳು....

ಬರಲು ಪ್ರಯತ್ನಿಸಿ....

ಸಿಮೆಂಟು ಮರಳಿನ ಮಧ್ಯೆ said...

ದೀಪಸ್ಮಿತ....

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ...
ಪರಿಚಯ ಮಾಡಿಕೊಳ್ಳೋಣ...

ಪ್ರಕಾಶಣ್ಣ...

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್....

ತುಂಬಾ ಖುಷಿಯಾಗುತ್ತಿದೆ....
ಬ್ಲಾಗಿನ ಮೂಲಕ ಒಂದು ವರ್ಷದಿಂದ ಪರಿಚಯವಾದರೂ ಇನ್ನೂ ಮುಖನೋಡಿಲ್ಲ...

plz.. ಬನ್ನಿ... ಮುಖಪರಿಚವೂ ಆಗುತ್ತದೆ...

ಸಿಮೆಂಟು ಮರಳಿನ ಮಧ್ಯೆ said...

ಶ್ವೇತಾ..

ಹೀಗೆ ಇಲ್ಲಿ ಹೇಳಿದರೆ ಸಾಲುವದಿಲ್ಲ...

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ...

ಪ್ರಕಾಶಣ್ಣ...

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್ ನಾಯಕ್...

ನೀವು ನನ್ನ ಬ್ಲಾಗಿಗೆ ಬಂದಿದ್ದು ನನಗಂತೂ ನೆನಪಿಲ್ಲ...

ನಿಮ್ಮ ಶುಭ ಹಾರೈಕೆಗಳು ಇನ್ನಷ್ಟು ಉತ್ಸಾಹ ತರಿಸಿದೆ ಧನ್ಯವಾದಗಳು...

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ....

ಸಿಮೆಂಟು ಮರಳಿನ ಮಧ್ಯೆ said...

ಗೀತಾರವರೆ...

ಅಪರೂಪಕ್ಕಾದರೂ ಬಂದು ಬಂದಿದ್ದು ಖುಷಿಯಾಯಿತು...

ದಯವಿಟ್ಟು... ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ...

ನಿಮಗಾಗಿ ಕಾಯುತ್ತೇನೆ...

ಮತ್ತೊಮ್ಮೆ ಥ್ಯಾಂಕ್ಸ್....

ಸಿಮೆಂಟು ಮರಳಿನ ಮಧ್ಯೆ said...

ರೂಪಾಶ್ರೀಯವರೆ...

ನೀವು ಬರುತ್ತೀರೆಂದು ಮಾತು ಕೊಟ್ಟಿದ್ದೀರಿ...
ದಯವಿಟ್ಟು "ಅವರನ್ನೂ" ಕರೆದು ಕೊಡು ಬನ್ನಿ....

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್...

ನನ್ನ ಚಿಕ್ಕಪ್ಪನ ದೇವತಾ ಮನುಷ್ಯರು...

ಅವರಿಗೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು...

ಪ್ರೋತ್ಸಾಹಕ್ಕೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಪ್ರಶಾಂತ್ ಚನ್ನಮ್ಮನವರ್....

ನಿಮಗೂ..
ನಿಮ್ಮ ಅಣ್ಣನವರಿಗೂ ನನ್ನ ಸಲಾಮ್....

ದಯವಿಟ್ಟು ತಾವೆಲ್ಲರೂ ಕಾರ್ಯಕ್ರಮಕ್ಕೆ ಬನ್ನಿ...

ನಿಮ್ಮ ಅಭಿಮಾನಕ್ಕೆ, ಪ್ರೋತ್ಸಾಹಕ್ಕೆ ಖುಷಿಯಾಗುತ್ತದೆ...
ಸಂತೋಷ ಹೇಳಲು ನನ್ನಲ್ಲಿ ಶಬ್ಧಗಳಿಲ್ಲ...

ದಯವಿಟ್ಟು ಬನ್ನಿ...

ಸಿಮೆಂಟು ಮರಳಿನ ಮಧ್ಯೆ said...

ರವಿ....

ತುಂಬಾ... ತುಂಬಾ ಥ್ಯಾಂಕ್ಸ್...

ಪ್ರೀತಿ, ಅಭಿಮಾನ, ಪ್ರೋತ್ಸಾಹಕ್ಕೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಅನ್ನಪೂರ್ಣಾರವರೆ...

ನಿಮ್ಮ ಶುಭಕಾಮನೆಗಳು ನನಗೆ ಇನ್ನಷ್ಟು ಉತ್ಸಾಹ ತಂದಿದೆ...
ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ...
ಕಾಯುತ್ತೇನೆ....

ಸಿಮೆಂಟು ಮರಳಿನ ಮಧ್ಯೆ said...

ಜಲನಯನ..( ಪ್ರೀತಿಯ ಆಝಾದ್ ಸರ್)

ನಿಮ್ಮ ನುಡಿಮುತ್ತುಗಳಿಗೆ ನನ್ನ ನಮನಗಳು...

ನಿಮ್ಮ ಕನ್ನಡ ಪ್ರೇಮಕ್ಕೆ ನನ್ನ ಸಲಾಮ್...

ನೀವೂ ಕಾರ್ಯಕ್ರಮಕ್ಕೆ ಬಂದಿದ್ದರೆ ಇನ್ನೂ ಕಳೆ ಕಟ್ಟುತ್ತಿತ್ತು...

ದಯವಿಟ್ಟು ಬರಲು ಪ್ರಯತ್ನಿಸಿ....

ಪ್ರೋತ್ಸಾಹಕ್ಕೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ....

ತುಮ್ಬಾ... ತುಂಬಾ ಧನ್ಯವಾದಗಳು...
ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ...
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್....

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ... ಪ್ರೋತ್ಸಾಹಿಸಿ...

ನಿಮ್ಮನ್ನೆಲ್ಲ ನಾನು ಕಾಯುತ್ತಿರುತ್ತೇನೆ...
ದಯವಿಟ್ಟು ಬನ್ನಿ...

ಪ್ರತಿಯೊಬ್ಬರಿಗೂ ಮುಖತಹಃ ಕರೆಯಲು ಸಾಧ್ಯವಾಗದಿರ ಬಹುದು...
ಬೇಸರಿಸದೇ ದಯವಿಟ್ಟು ಬನ್ನಿ...

ಪ್ರಕಾಶಣ್ಣ...

ಸಿಮೆಂಟು ಮರಳಿನ ಮಧ್ಯೆ said...

ಪ್ರಶಾಂತ್....ಚನ್ನಮ್ಮನ್ನವರ್...

ನಾನು ಮೂಲತಃ ಹಳ್ಳಿಯವನು...
ಹಳ್ಳಿಯ ಪ್ರಭಾವ ನನ್ನ ಮೇಲೆ ಬಹಳ ಇದೆ...

ಅಲ್ಲಿ ಚಟ ಶಬ್ಧ ಬಳಸುವದು ಜಾಸ್ತಿ...

ನೀವೆನ್ನುವದು ಸರಿಯಾಗಿದೆ.. ಅಲ್ಲಿ ಹವ್ಯಾಸ ಶಬ್ಧ ಹೆಚ್ಚು ಸೂಕ್ತವಾಗಿರುತ್ತದೆ....

ನಿಮ್ಮ ಸಲಹೆಗೆ ಖಂಡಿತ ಬೇಸರವಿಲ್ಲ...

ನೀಮ್ಮನ್ನೂ, ನಿಮ್ಮಣ್ಣನವರನ್ನೂ ನಾನು ಎದುರು ನೋಡುತ್ತಿರುವೆ...
ಅಂದು ಕಾರ್ಯಕ್ರಮದಲ್ಲಿ...
ದಯವಿಟ್ಟು ಬನ್ನಿ...

ಸಿಮೆಂಟು ಮರಳಿನ ಮಧ್ಯೆ said...

ಶ್ಯಾಮಲಾರವರೆ...

ಖಂಡಿತ ತಡವಾಗಿಲ್ಲ...
ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ...
ಅಲ್ಲಿ ಬಹಳ ಬ್ಲಾಗಿಗರು ಬರುತ್ತಾರೆ..
ಅದೊಂದು ಬ್ಲಾಗಿಗರ ಕೂಟವಾಗಲಿದೆ..

ಎಲ್ಲರ ಪರಿಚಯವಾಗುತ್ತದೆ...
ಬನ್ನಿ..
ಅಲ್ಲಿ ಸಿಗೋಣ..

ಸುಪ್ತವರ್ಣ said...

ಮೊದಲ ಪುಸ್ತಕಕ್ಕಾಗಿ ಅಭಿನಂದನೆಗಳು ಸರ್! ಚಿಕ್ಕಪ್ಪನಿಗೆ ತೋರಿಸಿದ ಗೌರವ ನೋಡಿ ಭಾವುಕನಾದೆ.

ಸಿಮೆಂಟು ಮರಳಿನ ಮಧ್ಯೆ said...

ಸಪ್ತವರ್ಣ....

ಏನೂ ಅರಿಯದ ಆ ವಯಸ್ಸಿನಲ್ಲಿ...
ನಮ್ಮ ಚಿಕ್ಕಪ್ಪ ಕೈ ಹಿಡಿದು ನಡೆಸಿದ್ದರಿಂದ...
ನಮಗೆ ಇವತ್ತು ಒಳ್ಳೆಯದಾಗಿದೆ...

ಪ್ರತಿಕ್ರಿಯೆಗಳಿಗೆ ಧನ್ಯವಾದಗಳು...

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ....

Nagaraj Bhat said...

Prakash Bavanige Hardika Subhashayagalu......