Thursday, October 1, 2009

ರಾತ್ರಿಯ ಕತ್ತಲು ಕಂಡರೆ ದುಃಖಕ್ಕೆ ಸಮಾಧಾನ...!


part...2


ಭೈರಪ್ಪ ಬೆಳಿಗ್ಗೆ ಮನೆ ಬಳಿ ಬಂದು ....
ಕೂಗಾಡುವ ದೃಶ್ಯ ಕಣ್ಣೆದುರಿಗೆ ಬಂತು...

ಅಕ್ಕಪಕ್ಕದ ಜನ...
ನನ್ನ ಸಂಬಂಧಿಕರು...

ಪಕ್ಕದ ಮನೆಯ ಸ್ನೇಹಿತ ಕಾಮತ್...!
ಅವರ ಮನೆಯವರು...!

ಇದೆನ್ನೆಲ್ಲ ನೋಡಿ ಅಳುತ್ತಿರುವ ನನ್ನಾಕೆ..


ಗಲಾಟೆಯನ್ನು ನೋಡಿ ಮಾತಾಡದೆ ನಿಲ್ಲುವ...
ಏನೂ ಅರಿಯದ ನನ್ನ ಕಂದ....

ನಾಚಿಕೆ.., ಅಪಮಾನ...ನಾನು ಮಾಡಿಲ್ಲ ತಪ್ಪಿಗೆ...!

ಮನೆಗೆ ಬಂದೆ...

ನನ್ನಾಕೆಯ ನಡತೆಯಲ್ಲಿ ಏನೋ ವ್ಯತ್ಯಾಸ...!!
ಅನುಮಾನ ಬಂದಿರ ಬಹುದಾ...?

ನನ್ನಾಕೆಯ ಮುಖ ನೋಡಿದೆ...

"ಜೀವನ ಪೂರ್ತಿ ನನ್ನನ್ನೇ... ನಂಬಿ ಬಂದವಳನ್ನು ...
ಮಧ್ಯ ದಾರಿಯಲ್ಲಿ...ಬಿಟ್ಟುಹೋಗಬೇಕಾಯಿತಲ್ಲ...

ಅದೂ... ಸಾಲದ ಹೊರೆ ಹೊರಿಸಿ...!
ಮುಂದೆ ಹೇಗೆ ನಿಭಾಯಿಸ ಬಹುದು...?

ಮಗನ ವಿದ್ಯಾಭ್ಯಾಸ...??

ಎಲ್ಲ ಸಮಸ್ಯೆಗಳನ್ನು.. ಒಂಟಿಯಾಗಿ ಹೇಗೆ ಎದುರಿಸ ಬಹುದು...?

ನಾನು ತಪ್ಪು ಮಾಡುತ್ತಿದ್ದೇನೆ... ಅನಿಸತೊಡಗಿತು...
ಅವಳನ್ನು ನೋಡುವ ಧೈರ್ಯ ನನ್ನಲ್ಲಿರಲಿಲ್ಲ..


ಆ ಸಮಯದಲ್ಲಿ. ಪರಿಸ್ಥಿತಿಯಲ್ಲಿ ....
ತಪ್ಪು ಮಾಡುತ್ತಿದ್ದೇನೆ ಎನ್ನುವ ಅಪರಾಧಿ ಮನೋಭಾವವಿದ್ದರೂ... 
ಬೇರೆ ಮಾರ್ಗವಿಲ್ಲವಾಗಿತ್ತು...
 ಮಡದಿ ಮುಂದೇನು ಮಾಡ ಬಹುದು ಎನ್ನುವದರ ಬಗೆಗೆ ತಲೆ ಕೆಡಿಸಿಕೊಳ್ಳುವಷ್ಟು  ವ್ಯವಧಾನವಿರಲಿಲ್ಲ... 
ಸಿಕ್ಕಾಪಟ್ಟೆ ಇನ್ಸುರೆನ್ಸ್ ಪಾಲಿಸಿ ಮಾಡಿಸಿ "ಅಪಘಾತದ" ಥರಹ ಸತ್ತುಬಿಟ್ಟರೆ...?

ಒಹ್.... ಇದೇ ಸರಿ...!ನಾಳೆಯ ಬೆಳಗನ್ನು ನೋಡದಿರುವದೇ ಉತ್ತಮ...


ಹೇಗೆ...?

ವಿಷ....!
ವಿಷ ಕುಡಿದುಬಿಡುವದು...!

ಮನೆಗೆ ಬಂದು ಹೆಂಡತಿ ಮಗನನ್ನು ಬಿಟ್ಟವನೇ..
ಹೊಸಕೆರೆ ಹಳ್ಳಿಯ ಸರ್ಕಲ್ ಕಡೆ ಹೋದೆ..
ಅಲ್ಲೊಬ್ಬ ಹೆಗ್ಗಣ, ಇಲಿಗಳಿಗೆ ವಿಷ ಕೊಡುತ್ತಿದ್ದ...

ಒಂದು ಬಾಟಲಿಯನ್ನು ತಂದೆ...

ಈ ವಿಷ ನಕಲಿಯಾಗಿದ್ದು ಸರಿಯಾಗಿ ಕೆಲಸ ಮಾಡದಿದ್ದಲ್ಲಿ...?

ಎರಡನೆಯ ಮಾರ್ಗ  ಇರಲೇ ಬೇಕಿತ್ತು....

ನಿದ್ದೆ ಗಳಿಗೆ...!
ವಿಷ ಕುಡಿದು.. ನಿದ್ದೆ ಗುಳಿಗೆ ನುಂಗಿದರಾಯಿತು...!

ನಿದ್ದೆಗುಳಿಗೆ ಎಲ್ಲಿ, ಹೇಗೆ ಪಡೆಯುವದು...?

ಮನೆಗೆ ಬಂದು ಮಲಗುವ ಹಾಸಿಗೆಯ ಕೆಳಗೆ ಬಾಟಲಿಯನ್ನು ಬಚ್ಚಿಟ್ಟೆ...

ಶೆಟ್ಟರ ಮೆಡಿಕಲ್ ಶಾಪಿಗೆ ಬಂದೆ..
ಅವರು ನಾಲ್ಕು ವರ್ಷದಿಂದ ಪರಿಚಯ...

"ಶೆಟ್ರೆ..

ನಮ್ಮ ಪರಿಚಯದವರೊಬ್ಬರು ಊರಿಂದ ಬಂದಿದ್ದಾರೆ..
ಅವರಿಗೆ ನಿದ್ದೆ  ಮಾತ್ರೆ  ಇಲ್ಲದೆ ಮಲಗೊ ಅಭ್ಯಾಸ ಇಲ್ಲ..
ದಯವಿಟ್ಟು ನಿದ್ದೆ ಮಾತ್ರೆ  ಕೊಡಿ..."

ಅವರು ನಯವಾಗಿ ನಿರಾಕರಿಸಿದರು...

" ಹೆಗಡೆಯವರೇ... ಹಾಗಲ್ಲ ಕೊಡಬಾರದು"

ನಾನು ಪರಿಪರಿಯಾಗಿ ಬೇಡಿಕೊಂಡಿದ್ದರಿಂದ...
ಬಹಳ ಪರಿಚಯ ಇದ್ದುದರಿಂದ...
ಎಂಟು ಗುಳಿಗೆ ಕೊಟ್ಟರು...

ಮನಸ್ಸೆಲ್ಲ ಗೊಂದಲದ ಗೂಡಾಗಿತ್ತು...
ಊಟವೂ  ಸರಿಯಾಗಿ ಸೇರಲಿಲ್ಲ...
ಮುದ್ದಿನ ಮಗ ಮಲಗಲು ಕರೆದ...
ದಿನದ ಅಭ್ಯಾಸದಂತೆ ....

"ಅಪ್ಪಾ ... ನನಗೆ ಕಥೆ ಹೇಳು..."

ನನ್ನ ಮಗನಿಗೆ ನಾನು ಕಥೆ ಹೇಳಿ ಮಲಗಿಸುವ ಅಭ್ಯಾಸ...

ಅವನನ್ನು ಮಲಗಿಸಿ ಹೇಳಿದೆ


" ಪುಟ್ಟಾ...
ಇವತ್ತು ನನಗೆ ಕಥೆ ನೆನಪಾಗುತ್ತಿಲ್ಲ...
ನನ್ನ ಮನಸ್ಸು ಸರಿಯಾಗಿಲ್ಲ...
ನಾಳೆ
ಹೇಳುತ್ತೀನಿ ಕಣೊ...

ರಾಜಾ....
ಇವತ್ತು... ನನ್ನ ಕೈ ಹಿಡಿದುಕೊಂಡು ಮಲಗು..."

"ಅಪ್ಪಾ...
ನಿನಗೆ ಹಣದ ತೊಂದರೆ ಇದೆಯಂತೆ ಹೌದಾ..?

ನಾನು ಇನ್ಮೇಲೆ ಸಿನೇಮಾ , ಹಣ್ಣು ...ಅಂತೆಲ್ಲ ಖರ್ಚು ಮಾಡಿಸೋದಿಲ್ಲಪ್ಪ...
ಅಮ್ಮ ನನಗೆಲ್ಲ ಹೇಳಿದ್ದಾಳೆ..
ನಾನು ಗುಡ್ ಬಾಯ್ ಆಗ್ತಿನಪ್ಪಾ...
ನಿಂಗೊಂದು ಒಳ್ಳೇ ಕೆಲಸ ಸಿಕ್ಕಮೇಲೆ ಸಿನೆಮಾ  ತೋರಿಸು...
ನೀನು ತುಂಬಾ... ತುಂಬಾ ಹಣ ಮಾಡಿಕೊ...
ಅಲ್ಲಿವರೆಗೆ ನನಗೆ ಏನೂ ಬೇಡಪ್ಪಾ..
ಇವತ್ತು ನಿನಗೆ ತೊಂದರೆ ...ಆಯ್ತಾ...  ಅಪ್ಪಾ...?"ನನ್ನ  ಕಂದನಿಗೆ  ಏನಂತ ಹೇಳಲಿ...?ನನಗೆ ಮಾತಾಡಲು ಆಗಲಿಲ್ಲ... ಗಂಟಲು ಉಬ್ಬಿ ಬಂತು...


ನನ್ನಲ್ಲಿ ಶಬ್ಧಗಳಿಲ್ಲವಾಗಿತ್ತು...

ಅವನನ್ನು ಅಲ್ಲೇ ಬಿಗಿದಪ್ಪಿದೆ...

ಇದೇ.. ನನ್ನ ಕೊನೆಯ  ಅಪ್ಪುಗೆಯಾ?

ಆತ ಸ್ವಲ್ಪ ಹೊತ್ತಿನಲ್ಲಿ ನಿದ್ದೆಗೆ ಜಾರಿದ...ನಾಳೆ ಬೆಳಗಾದರೆ...
ಭೈರಪ್ಪನನ್ನು ..
ಆತನ ಜನರನ್ನು ಹೇಗೆ ಎದುರಿಸುವದು...?
ಏನು ಹೇಳಲಿ...? ಏನು ಉತ್ತರ ಕೊಡಲಿ...?


ಅಷ್ಟರಲ್ಲಿ ನನ್ನಾಕೆ ಬಂದಳು...

"ಸ್ವಲ್ಪ .... ಹಾಲಿಗೆ ಬನ್ನಿ.. ನಿಮ್ಮ ಬಳಿ ಮಾತನಾಡ ಬೇಕು.."

ಹಾಲಿಗೆ ಬಂದೆ...
ಹಾಲಲ್ಲಿ ಕತ್ತಲೆ ಇತ್ತು.... ಲೈಟ್ ಹಾಕಲಿಲ್ಲ...

ಆ ಸನ್ನಿವೇಶಕ್ಕೆ ಬೆಳಕು ಬೇಕಿರಲಿಲ್ಲ....


ಮಾತೂ ಬೇಕಿರಲಿಲ್ಲ.....


"ನೋಡಿ...
ನೀವು ವಿಷದ ಬಾಟಲು ತಂದಿದ್ದು ನನಗೆ ಗೊತ್ತಾಗಿದೆ...
ಯಾಕೆ ಧೈರ್ಯ ಕಳೆದು ಕೊಂಡು ಬಿಟ್ಟಿರಿ..?

ನೀವೇನೂ ತಪ್ಪು ಮಾಡಿಲ್ಲವಲ್ಲ...
ಏನೇ ಬಂದರೂ ಧೈರ್ಯವಾಗಿ ಎದುರಿಸೋಣ...


ತೀರಾ ಕಷ್ಟ ಎನಿಸಿದರೆ ಎಲ್ಲರೂ ಒಟ್ಟಿಗೆ ಹೋಗೋಣ...!


ನಾವು ನಂಬಿ ಮೋಸ ಹೋದೆವು...
ನಿಜ...
ಸ್ವಲ್ಪ ತಾಳ್ಮೆ ತಂದು ಕೊಳ್ಳಿ...

ನಾವೆಲ್ಲ ಒಂದಾಗಿ ಎದುರಿಸೋಣ...
ನಮ್ಮ ಸಂಗಡ ನ್ಯಾಯ ಇದೆ.....

ನಂಬಿದ  ದೇವರಿದ್ದಾನೆ.."

ನನಗೆ ದುಃಖ ತಡೆಯಲಾಗಲಿಲ್ಲ...
ಇಬ್ಬರಿಗೂ ದುಃಖ ಒತ್ತರಿಸಿ ಬಂತು....

ರಾತ್ರಿಯ ಕತ್ತಲು ಕಂಡರೆ.... ದುಃಖಕ್ಕೆ ಸಮಾಧಾನ...!

ಆ ಕತ್ತಲಲ್ಲೇ ಇಬ್ಬರೂ..ಅತ್ತೆವು...


ಸ್ವಲ್ಪ ಹೊತ್ತು ....
ಸಮಾಧಾನವಾದನಂತರ ಒಂದು ದೃಢ ನಿರ್ಧಾರ ಮಾಡಿದೆ..

ಬದುಕನ್ನು... ಬದುಕಿ...ಗೆಲ್ಲ ಬೇಕು....

ಕಾಣದ ಸಾವಿಗಿಂತ ....
ಎದುರಿಗಿರುವ ..ಬದುಕು ದೊಡ್ಡದು.....


ಬೆಳಕು ಬೆತ್ತಲೆ ಮಾಡಿಬಿಡುತ್ತದೆ.....
ದುಃಖ ತಪ್ತ ಮನಸ್ಸು ಕತ್ತಲೆಯನ್ನು ಬಯಸುತ್ತದೆ...

ಕತ್ತಲು ಕೊಡುವ ಸಮಾಧಾನ..
ಸಾಂತ್ವನ...
ಬೆಳಕು ಕೊಡಲಾರದು....ಇಂಥಹ ಚಂದದ ಸಂಸಾರ...
ಹೆಂಡತಿ.. ಮಗನನ್ನು... ಬಿಟ್ಟು ಹೋಗಬಾರದು.....
ನನ್ನಿಂದ ಎಂಥಹ ಪ್ರಮಾದವಾಗಿಬಿದುತ್ತಿತ್ತು !!


ಛೇ...


ಯಾಕೋ ಎಲ್ಲಿಲ್ಲದ ಆತ್ಮವಿಶ್ವಾಸ  ನನ್ನಲ್ಲಿ ಬಂದಿತ್ತು...


ಇಟ್ಟಿಗೆ ಕೊಟ್ಟ  ಭೈರಪ್ಪನವರಿಗೆ ನಾನೇ ... ಫೋನ್ ಮಾಡಿದೆ...


" ಭೈರಪ್ಪನವರೆ....
ನೀವು ನಾಳೆ ಹತ್ತು ಗಂಟೆಗೆ ನಮ್ಮನೆಗೆ ದಯವಿಟ್ಟು ಬರಬೇಕು...
ನಿಮಗೆ ಇಷ್ಟು ದಿನ ಸುಳ್ಳು ಹೇಳಿ ತಪ್ಪಿಸಿ ಕೊಂಡಿದ್ದಕ್ಕೆ ...
ಕ್ಷಮಿಸಿ ಬಿಡಿ....

ನಿಮ್ಮ ಬಳಿ ಮಾತನಾಡಬೇಕು...
ನಾನು ಮನೆಯಲ್ಲೇ ಇರುತ್ತೇನೆ...

ದಯವಿಟ್ಟು ಬನ್ನಿ.."


ಅವರು ...ಬರುತ್ತೇನೆಂದರು...


ನಾನು ಒಟ್ಟೂ .. " ಒಂಬತ್ತು" ಜನರಿಗೆ ಹಣ ಕೊಡಬೇಕಾಗಿತ್ತು...

ಅವರೆಲ್ಲರಿಗೂ.... ಬೆಳಿಗ್ಗೆ ಹತ್ತು ಗಂಟೆಗೆ ಬರಲು ಹೇಳಿದೆ....

ರಾತ್ರಿ ನಿದ್ದೆ ಬರದಿದ್ದರೂ...
ರಾತ್ರಿ ಬಹಳ ಉದ್ದವಾಗಿದೆ ಅನಿಸಿದರೂ...

ಹೊಸ...
ಬೆಳಗಿಗಾಗಿ....
ಹೊಸ ಬೆಳಕಿಗಾಗಿ...ಕಾಯತೊಡಗಿದೆ.....( ದಯವಿಟ್ಟು ಇದರ ಹಿಂದಿನ ಲೇಖನ ಓದಿ...)


(ಇದು ಯಾವುದೇ ವ್ಯಕ್ತಿ ದೂಷಣೆಗಾಗಿ ಅಲ್ಲ...
ಯಾವುದೇ ಸಂದರ್ಭದಲ್ಲಿ ದುಡುಕಿನ ನಿರ್ಧಾರ ತೆಗೆದು ಕೊಳ್ಳ ಬಾರದು..
ಇದು ಇದರ ಉದ್ದೇಶ...)54 comments:

Anonymous said...

anna nice one..
entakke hingella baradde.?

vishweshwar said...

Prakashanna!
Excellent!superb!

ಗೋಪಾಲ್ ಮಾ ಕುಲಕರ್ಣಿ said...

ಚೆನ್ನಾಗಿದೆ ...ಮುಂದಿನ ಸಂಚಿಗೆ ಕಾಯುತ್ತಿರುವೆ ...

ಸೀತಾರಾಮ. ಕೆ. said...

ಬದುಕಿನ ಅನುಭವಗಲ ಕಷ್ಟಗಳ ಪಾಠ ಗುಟುಕಾಗಿ ನೀಡುತ್ತಾ ತಮ್ಮ ಕಹಿ ಅನುಭವಗಳ ಹ೦ಚಿಕೊ೦ಡು ಬೇರೆಯವರನ್ನು ಕಷ್ಟಗಳ ಎದುರಿಸಲು ಗಟ್ಟಿಗೊಳಿಸುವ ತಮ್ಮ ಲೇಖನ ಅದ್ಭುತ.

vinuta said...

Prakash anna,
kashtadalli mulugi barediro hagide.
excellent, chennagide.

ಕ್ಷಣ... ಚಿಂತನೆ... bhchandru said...

ಪ್ರಕಾಶಣ್ಣ,

ನಿಮ್ಮ ಅನುಭವಗಳನ್ನು, ಕಷ್ಟಕೋಟಲೆಗಳನ್ನು ಹಂಚಿಕೊಂಡಿರಿ. ಆ ದು:ಖದ ಸನ್ನಿವೇಶಕ್ಕೆ ನಾವೇ ಪಾತ್ರರಾಗಿದ್ದರೆ... ಎನಿಸಿತು. ಆಗಿರುತ್ತೇವೆ, ಒಂದಲ್ಲಾ ಒಂದು ವಿಧದಲ್ಲಿ. ಆದರೆ, ಅಂದಿನ ದಿನದಂದು ನಿಮ್ಮ ಶ್ರೀಮತಿಯವರು ನೀಡಿದ ತಾಳ್ಮೆಯು ಹಾಗೂ ಅದರಿಂದ ನಿಮ್ಮಲ್ಲಿ 'ಧೈರ್ಯಂ ಸರ್ವತ್ರ ಸಾಧನಂ' ಎಂದು ನೀವು ನಿರ್ಧರಿಸಿದ್ದು ಸರಿಯಾಗಿಯೇ ಇದೆ. ಒಂದು ನಿಮಿಷದ ಸಮಾಧಾನದಿಂದ/ತಾಳ್ಮೆಯಿಂದ ಏನಾದರೂ ಸಮಸ್ಯೆಗೆ ಪರಿಹಾರವು ದೊರಕಿಯೇ ತೀರುತ್ತದೆ.

ಇಲ್ಲಿ ತಾಳ್ಮೆ, ಜೊತೆಗೆ ಇದು ನನ್ನೊಬ್ಬನಿಗೆ ಬಂದ ಕಷ್ಟವೇನಲ್ಲ, ರಾಜ-ಮಹಾರಾಜರಿಗೇ ಅಂತಹ ಕಷ್ಟನಷ್ಟಗಳಿರುವಾಗ ಎಂದು ನಮಗೆ ನಾವೇ ಅಭಯವನ್ನಿತ್ತುಕೊಂಡು 'ವಿಲ್‌ ಪವರ್‍' ಮೂಲಕ ಬದುಕನ್ನು ಎದುರಿಸಲು ಸಜ್ಜಾಗಬೇಕು ಎಂಬುದನ್ನು ನಿಮ್ಮ ಈ ಅನುಭವಗಳು ತಿಳಿಸುತ್ತವೆ.

ಮುಂದೇನಾಯಿತು? ಭೈರಪ್ಪನವರೊಂದಿಗೆ ಇತರರೂ ಬಂದಾಗ ಏನು ನಡೆಯಿತು? ಎಂಬ ಕುತೂಹಲವಿದೆ.

ಚಂದ್ರು

ಸಿಮೆಂಟು ಮರಳಿನ ಮಧ್ಯೆ said...

ಶ್ರೀ....

" ಆತ್ಮ ಹತ್ಯೆ " ಒಂದು ಕ್ಷಣದ ನಿರ್ಧಾರ....

ಆ... ಕ್ಷಣವನ್ನು ತಪ್ಪಿಸಿಕೊಂಡರೆ ಬದುಕಿಬಿಡ ಬಹುದು...

ವಿವೇಚನೆ, ವಿವೇಕ ಕೆಲಸ ಮಾಡಿದ್ದಲ್ಲಿ...
ಎಂಥಹ ಕಷ್ಟಗಳನ್ನೂ ಗೆದ್ದು ಬರಬಹುದು....

ಈ ಅನುಭವ ಓದಿ ದುಡುಕಿನ ನಿರ್ಧಾರ ತಪ್ಪಿದಲ್ಲಿ
ನನ್ನ ಲೇಖನದ ಸಾರ್ಥಕತೆ....

ನಮ್ಮ ಮೇಲಿನ ನಂಬಿಕೆ, ವಿಶ್ವಾಸ ಕಳೆದು ಕೊಳ್ಳ ಬಾರದು...

ಧನ್ಯವಾದಗಳು... ಶ್ರೀ...

ಸಾಗರದಾಚೆಯ ಇಂಚರ said...

Prakashanna,

marvellous, kathe bareyadu ninninda kaliyavu, prati kshana kutoohala huttisite, odta odta nave ellidya hele gottagtille,

ninge inyavaglu aa sthiti baradu beda,

ರಾಜೀವ said...

ಪ್ರಕಾಶ್ ಅವರೆ,

ನಿಮ್ಮ ಅನುಭವವನ್ನು ಓದುವುದಕ್ಕೆ ತುಂಬಾ ಚೆನ್ನಗಿದೆ. ಆದರೆ ಆ ಸ್ಥಾನದಲ್ಲಿ ನಾವೇ ಇರುವುದನ್ನು ನೆನಸಿಕೊಂಡರೆ ಮಾತೇ ಹೊರಡದಷ್ಟು ಭಯಂಕರವಾಗಿ ಕಾಣಿಸುತ್ತದೆ.

ಮನುಷ್ಯ ಅವನು ಕಷ್ಟದಲ್ಲಿರಬೇಕಾದರೆ ತೋರಿಸುವ ಸ್ವರೂಪವೇ ಅವನ ನಿಜವಾದ ಸ್ವರೂಪವಂತೆ.

ಮುಂದೇನಾಯಿತು ಎಂದು ಊಹಿಸಬಹುದು. ಆದರೆ ಹೇಗಾಯಿತು ಎಂದು ತಿಳಿಯುವ ಕುತೂಹಲ. ಮುಂದುವರೆಸಿ ನಿಮ್ಮ ಅನುಭವಕಥೆಯನ್ನು.

PARAANJAPE K.N. said...

"ಕತ್ತಲು ಕೊಡುವ ಸಮಾಧಾನ.. ಸಾ೦ತ್ವನ... ಬೆಳಕು ಕೊಡಲಾರದು....
ಬದುಕನ್ನು... ಬದುಕಿ...ಗೆಲ್ಲ ಬೇಕು....ಕಾಣದ ಸಾವಿಗಿಂತ ....
ಎದುರಿಗಿರುವ ..ಬದುಕು ದೊಡ್ಡದು...."
ಈ ಸಾಲುಗಳು ಇಷ್ಟವಾದವು. ನಿಮ್ಮದು ಅನುಭವಜನ್ಯ ಬರಹವಾದ್ದರಿ೦ದ ಅದರಲ್ಲಿ ಕಟು ವಾಸ್ತವತೆಯ ಅ೦ಶವಿದೆ. " ಮುಂದೇನು," ಅಂತ ಓದುಗರನ್ನು ಕುತೂಹಲದತ್ತ ಒಯ್ಯುವ ನಿಮ್ಮ ಶೈಲಿ ಕೂಡ ಅನುಪಮ. ಮುಂದೆ ಹೇಳಿ ....

ಮನಸು said...

ಪ್ರಕಾಶಣ್ಣ,
ಇದು ಕಥೆಯಲ್ಲ ಜೀವನ ಎಂದು ಗೊತ್ತು... ನಿಮ್ಮ ಅಂದಿನ ದುಃಖ ಸಹಿಸಿಕೊಂಡು ಜೀವನ ಸಾಗಿಸಿದ್ದು ಬಲು ದೊಡ್ಡವಿಷಯ.... ನಿಮ್ಮ ಬರಹ ಎದೆಗುಂದಿದ ಜೀವನಗಳಿಗೆ ಧೈರ್ಯ ಕೊಡುವಂತದು...
ನಿಮ್ಮ ಮಗನ ಮಾತು ಹಾಗು ಕತ್ತಲಿಯಲ್ಲಿ ನೀವು ನಿಮ್ಮಕೆಯೂಂದಿಗಿನ ಮಾತುಗಳು ನನ್ನಂತ ಭಾವುಕ ಜೀವಿಗೆ ದುಃಖ ತರಿಸುತ್ತೆ...
ನಿಜವೆಂದರೆ ನನ್ನ ಕಣ್ಣು ಒದ್ದೆಯಾಯಿತು... ಜೋರು ದುಃಖ ತೋರ್ಪಡಿಸಲು ಕಚೇರಿಯಲ್ಲಿದ್ದೀನಿ ಅದಕ್ಕೆ ನನ್ನ ದುಃಖ ತಡೆದೆ...
ಎಲ್ಲಾ ಕಷ್ಟಗಳನ್ನು ನುಂಗಿ ನೆಡೆದವರು ಮುಂದೊಂದು ದಿನ ಉತ್ತುಂಗ ಸ್ಥಾನದಲ್ಲಿರುತ್ತಾರೆ...
ಧನ್ಯವಾದಗಳು
ನೀವು ತಮಾಷೆ ಲೇಖನಗಳ ಜೊತೆಗೆ ಭಾವುಕ ಲೇಖನಗಳನ್ನು ಚೆನ್ನಾಗಿ ಬರೆಯಬಲ್ಲಿರಿ..
ಮುಂದಿನ ಭಾಗಕ್ಕೆ ಕಾಯುತ್ತಲಿರುವೆ.
ವಂದನೆಗಳು

ದಿನಕರ ಮೊಗೇರ said...

"ಕತ್ತಲು ಕೊಡುವ ಸಮಾಧಾನ..
ಸಾಂತ್ವನ... ಬೆಳಕು ಕೊಡಲಾರದು....
ಹಾಲಲ್ಲಿ ಕತ್ತಲೆ ಇತ್ತು.... ಲೈಟ್ ಹಾಕಲಿಲ್ಲ...
ಆ ಸನ್ನಿವೇಶಕ್ಕೆ ಬೆಳಕು ಬೇಕಿರಲಿಲ್ಲ..."
ಪ್ರಕಾಶಣ್ಣ, ನಿಮ್ಮ ಕಥೆಗಾಗಿ ಕಾಯ್ತಾ ಇದ್ದೆ, ನನ್ನ ಬ್ಲಾಗ್ನಲ್ಲಿ ಅಪ್ಡೇಟ್ ಆಗಲೇ ಇಲ್ಲ.....ಅದಕ್ಕೆ ಈಗ ಓದಿದೆ.... ಅಣ್ಣ, ನಿಮ್ಮಂಥವರ ಅನುಭವ ನಮಗೆಲ್ಲಾ ದಾರಿದೀಪ.... ಓದಿ ಮುಗಿಸಿ ಸುಮಾರು ಹೊತ್ತು ಸುಮ್ಮನೆ ಕೂತೆ.... ಏನು ಬರೆಯೋದು ಅಂತ ಗೊತ್ತಾಗ್ಲಿಲ್ಲ..... ಈಗಲೂ ಗೊತ್ತಾಗ್ತಿಲ್ಲ ಏನು ಬರೆಯೋದು ಅಂತ....... really superb experience....

ಸುಮ said...

ಪ್ರಕಾಶಣ್ಣ ಇಂತಹ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿದ ನಿಮಗೆ ಹಾಗು ಅದಕ್ಕೆ ನಿಮ್ಮನ್ನು ಅಣಿಗೊಳಿಸಿದ ಅಕ್ಕನಿಗೆ ಅಭಿನಂದನೆಗಳು. ನಿಮ್ಮ ಈ ಬರಹ ಅನೇಕ ನೊಂದ ಮನಗಳಿಗೆ ಸ್ಫೂರ್ತಿ ನೀಡುವುದು ಖಂಡಿತ.

Guru's world said...

ಪ್ರಕಾಶ್
ತುಂಬ ಚೆನ್ನಾಗಿ ಹೇಳ್ತಾ ಇದ್ದೀರಾ.. ಹೌದು ಎಲ್ಲರ ಜೀವನದಲ್ಲೂ ಒಮ್ಮೊಮ್ಮೆ ಹೀಗೆ ಹಾಗುವ ಮನಸಿನ ತಳಮಳವನ್ನು ಚೆನ್ನಾಗಿ ಹೇಳ್ತಾ ಇದ್ದೀರಾ...ಮನಸ್ಸಿಗೆ ಒಂದು ಚೂರು ನೋವಾದರೂ ಸಾಕು,, ಏನೇನೋ ಯೋಚನೆ ಮಾಡುವುದಕ್ಕೆ ಹೋಗುತ್ತೆ....
"ಕತ್ತಲು ಕೊಡುವ ಸಮಾಧಾನ..ಸಾಂತ್ವನ... ಬೆಳಕು ಕೊಡಲಾರದು...." ಎಷ್ಟು ಅರ್ಥ ಇದೆ ಇದರಲ್ಲಿ.....ವೆರಿ ನೈಸ್ ...
ಮುಂದುವರಿಸಿ....

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ಕಷ್ಟದ ಸಮಯದಲ್ಲಿ ಎದೆ ಗುಂದುವುದು ಸಹಜ. ಅದನ್ನು ಮೆಟ್ಟಿ ನಿಲ್ಲುವುದೇ ಜೀವನ.
ನಂಗೊತ್ತು. ಹೇಳುವುದು ಸುಲಭ. ಅನುಭವಿಸುವುದು ಕಷ್ಟ ಅಂತ.
ನಾವು ಬದಲಾಗೋಣ.
ಕಷ್ಟಗಳು ನಮ್ಮನ್ನು ನೋಡಿ ಹೆದರಬೇಕು. ನಾವು ಅವುಗಳನ್ನು ನೋಡಿ ಅಲ್ಲ.
ಬಂದದೆಲ್ಲ ಬರಲಿ, ಎದುರಿಸಿಬಿಡೋಣ...

ಸಿಮೆಂಟು ಮರಳಿನ ಮಧ್ಯೆ said...

ವಿಶ್ವೇಶರ (ವಿಶ್ವ)

ಆ ದಿನಗಳನ್ನು ದಾಟಿ..
ಅನುಭವಿಸಿ ಬಂದಿದ್ದು..
ಎಲ್ಲ ಕನಸಂತೆ ಇಂದು ಅನಿಸುತ್ತದೆ...

ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಈ ರೀತಿ ಕಷ್ಟಗಳನ್ನು ಅನುಭವಿಸಿರುತ್ತಾರೆ...
ಎದೆ ಗುಂದಬಾರದು...

ಯಾರಿಗೂ ಪ್ರತಿಕ್ರಿಯೆ ಕೊಡದ ನೀವು ನನ್ನ ಬ್ಲಾಗಿಗೆ ಬಂದಿದ್ದು ಖುಷಿಯಾಯಿತು
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಗೋಪಾಲ್ ಕುಲಕರ್ಣಿಯವರೆ...

ಅಂಥಹ ಸಂದರ್ಭಗಳು ನಮ್ಮ ಕೈಮೀರಿದವುಗಳು...
ಧೈರ್ಯದಿಂದ ಇರಬೇಕು ಎನ್ನುವದನ್ನು ನಾನು ಕಲಿತದ್ದು...

ನಮ್ಮ ಓದು, ಬುದ್ಧಿವಂತಿಕೆ
ಆಸಮಯದಲ್ಲಿ ಕೆಲಸಕ್ಕೆ ಬರುವದಿಲ್ಲ...

ನಮ್ಮ ವಿವೇಕ, ವಿವೇಚನೆ..
ತಾಳ್ಮೆ... ಧೈರ್ಯ ಬಹಳ ಸಹಾಯ ಮಾಡುತ್ತದೆ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸೀತಾರಾಮ್ ಸರ್...

ಒಂದು ಆತ್ಮೀಯ ಸಾಂತ್ವನ ಮಿರಾಕಲ್ ಸೃಷ್ಟಿಸಿಬಿಡುತ್ತದೆ...
ನಾನು ನಿನ್ನೊಂದಿಗೆ ಇದ್ದೇನೆ ಅನ್ನುವ ಒಂದು ಮಾತು...

ಅಸಾಧ್ಯವನ್ನೂ ಸಾಧ್ಯ ಮಾಡಿಬಿಡುತ್ತದೆ...

ನಮ್ಮ ಹತ್ತಿರದವರಿಂದ ಆ ಮಾತು
ಬಂದಾಗ ಜಗತ್ತನ್ನೇ ಗೆಲ್ಲುವ ವಿಶ್ವಾಸ ಬಂದುಬಿಡುತ್ತದೆ...

ಇವೆಲ್ಲ ತೀರಾ ಭಾವುಕತೆ ಅನಿಸಿದರೂ...
ನನ್ನ ಅನುಭವದಲ್ಲಿ
ಇದು ಸತ್ಯ....

ಸೀತಾರಾಮ್ ಸರ್... ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ವಿನುತಾ...

ನೋವು ಉಂಡವನಿಗೆ ಮಾತ್ರ ಗೊತ್ತು ಅದರ ಆಳ ಎಷ್ಟೆಂಬುದು.....

ಬದುಕು ಚೆನ್ನಾಗಿರಲೆಂದು ಎಲ್ಲರೂ ಬಯಸುವದು...
ಬದುಕು ಕಸಿಯುವದು ಮಾನವೀಯತೆ ಅಲ್ಲ...

ಜನರು ಯಾಕಾದರೂ ಅಂಥಹ ನಿರ್ಧಾರಗಳನ್ನು ತೆಗೆದುಕೊಂಡುಬಿಡುತ್ತಾರೋ...
ಅದು ತಪ್ಪು...

ನಮ್ಮ "ಅತೀತ" ನಮ್ಮನ್ನು ಬಿಡುವದಿಲ್ಲವಲ್ಲ...
ಬೇಡವೆಂದರೂ ನೆನಪಾಗಿ ಉಳಿದುಬಿಡುತ್ತದೆ...

ಕೆಲವು ಘಟನೆಗಳೇ ಹಾಗೆ...
ಗಾಯ ಮಾಸಿದರೂ..
ನೋವು ನೆನಪಾಗಿ
ಉಳಿದುಬಿಡುತ್ತದೆ...
ಕಾಡುತ್ತದೆ...
ಕಾಡುತ್ತಲೇ ಇರುತ್ತದೆ..
ನಾವು ಮರೆತಂತೆ ನಗಬೇಕು... ಹಾಗೆಯೇ ನಟಿಸಬೇಕು...
ಅಲ್ಲವಾ...?

ನಿಮ್ಮ ಬಾಳು ಹಸನಾಗಿರಲೆಂದು ಹಾರೈಸುವೆ..

ನಿಮ್ಮ ಅಭಿಮಾನಕ್ಕೆ..
ಪ್ರೋತ್ಸಾಹಕ್ಕೆ... ಧನ್ಯವಾದಗಳು...

ಲೋದ್ಯಾಶಿ said...

ಏನ್ ಪ್ರಕಾಶ್ ಸರ್ ಇದು,

ಹೂಂ...ಏನೂ ಹೇಳೋ ಹಾಗಿಲ್ಲಾ. ಎಲ್ಲಾ ನೀವೇ ಹೇಳ್ತಾ ಇದ್ದೀರಾ.

AntharangadaMaathugalu said...

ಪ್ರಕಾಶ್ ಸಾರ್..
ಓದಿ ಕಣ್ಣು ತೇವವಾಗಿದ್ದಂತೂ ನಿಜ. ಅದಕ್ಕಲ್ಲವೇ ಅರ್ಧಾಂಗಿಯೆನ್ನುವುದು...ಇಂತಹ ಅರ್ಧಾಂಗಿಯನ್ನು ಪಡೆದ ನೀವೇ ಧನ್ಯರು..... ಬದುಕನ್ನು ಬದುಕಿ ತೋರಿಸಬೇಕು ಎಂಬ ಸಾಲು ಸಿಕ್ಕಾಪಟ್ಟೆ ಇಷ್ಟ ಆಯಿತು....
ತುಂಬಾ ಕುತೂಹಲಕರವಾಗಿದೆ......

ಶ್ಯಾಮಲ

ವಿನುತ said...

"ಬದುಕನ್ನು... ಬದುಕಿ...ಗೆಲ್ಲಬೇಕು....ಕಾಣದ ಸಾವಿಗಿಂತ ....ಎದುರಿಗಿರುವ ..ಬದುಕು ದೊಡ್ಡದು...."
ಬಹುಶ: ಆತ್ಮಹತ್ಯೆ ನಿರ್ಧಾರ ಕೈಗೊ೦ಡವರೆಲ್ಲರೂ ಒ೦ದೆರಡು ಕ್ಷಣ ಕೇವಲ ಒ೦ದೆರಡು ಕ್ಷಣ ಕತ್ತಲಲ್ಲಿ ಮು೦ದಿನ ಬದುಕಿನ ಬಗ್ಗೆ, ಆತ್ಮೀಯರ ಬಗ್ಗೆ ಆಲೋಚಿಸಿದರೆ ಅವರಿಗೆ ಬೆಳಕು ಕ೦ಡೀತು... ನಿಮ್ಮ ಈ ಲೇಖನ ಜೀವನದಲ್ಲಿ ಸೋತು ಹತಾಶರಾದವರಿಗೊ೦ದು ದಾರಿತೋರಲಿ ಎ೦ದೇ ಆಶಿಸುತ್ತೇನೆ..

ವನಿತಾ / Vanitha said...

ಬದುಕನ್ನು ಬದುಕಿ ಗೆಲ್ಲ ಬೇಕು, ಕಾಣದ ಸಾವಿಗಿಂತ ಎದುರಿಗಿರುವ ಬದುಕು ತುಂಬಾ ತುಂಬಾ ದೊಡ್ಡದು..

ನಿಮ್ಮಾಕೆಯನ್ನು ಮೆಚ್ಚಲೇಬೇಕು..

ಶಾಂತಲಾ ಭಂಡಿ said...

ಪ್ರಕಾಶಣ್ಣ...
ಆಶಕ್ಕಳನ್ನೂ ಹಾಗೂ ನಿಮ್ಮನ್ನೂ ಮೆಚ್ಚಲೇಬೇಕು. ನಿಮ್ಮ ಮಗ ಇನ್ನಷ್ಟು ಇಷ್ಟವಾಗುತ್ತಾನೆ. ನೀವುಗಳು ಬದುಕನ್ನು ಪ್ರೀತಿಸುವ ರೀತಿ, ಎಂಥ ಹೊತ್ತಿನಲ್ಲೂ ಸುತ್ತಲಿನ ಜವಾಬ್ಧಾರಿ ಸಾವನ್ನು ಹಿಡಿದುನಿಲ್ಲಿಸುತ್ತದೆಯೆಂಬುದನ್ನು ಸಾರುವ ಈ ಬರಹ ಇಷ್ಟವಾಗುತ್ತದೆ. ಬದುಕಿನಲ್ಲಿ ಅತೀ ಜವಾಬ್ಧಾರಿ ಹೊತ್ತವರಿಂದ, ಬದುಕನ್ನು ಅತೀ ಪ್ರೀತಿಸುವವರಿಂದ ಸಾವು ಖಂಡಿತವಾಗಿ ಹೆದರಿ ದೂರವೇ ನಿಲ್ಲುತ್ತದೆಯೆಂಬ ಸಾರವನ್ನು ಸಮಸ್ಯೆಯ ಸುಳಿಯಲ್ಲಿರುವ ಕೆಲವರಾದರೂ ಈ ಬರಹದಿಂದ ಖಂಡಿತವಾಗಿ ಅರಿತಾರು.
ಮಾದರಿ ಲೇಖನ.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನಿಮ್ಮ ಕಷ್ಟದ ದಿನಗಳ ಬಗ್ಗೆ ಓದುವುದು ಪ್ರತಿಯೊಬ್ಬರಿಗೂ ಅನುಭವ ಪಾಠದಂತಿದೆ. ನೀವು ಹಾದು ಬಂದ ಈ ಪಯಣವನ್ನು ಓದುವಾಗ ನನಗರಿವಾಗದೇ ಕಣ್ಣಲ್ಲಿ ನೀರು ಬಂತು. ಆ ವಿಷಗಳಿಗೆಯನ್ನು ದಾಟಿಸಲು ನೆರವಾದ ನಿಮ್ಮ ಮನೆಯವರ ಮನೋಸ್ಥೈರ್ಯ ನಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ.

ಸವಿಗನಸು said...

ಪ್ರಕಾಶಣ್ಣ,
ಓದುತ್ತಿದ್ದರೆ ಕಣ್ಣು ಒದ್ದೆಯಾಯಿತು....
ಮೊದಲ ಕಂತಿನಲ್ಲಿ ಕಥೆ ಅಂದುಕೊಂಡಿದ್ದೆ....
ಶುಭವಾಗಲಿ ನಿಮಗೆ...

Laxman (ಲಕ್ಷ್ಮಣ ಬಿರಾದಾರ) said...

ಪ್ರಕಾಶ ರವರೆ,
ಕಾಲ್ಪನಿಕವಾಗಿ ಕೂಡ ಆತ್ಮಹತ್ಯೆ ವಿಚಾರ ನಮ್ಮ ಹತ್ತಿರ ಸುಳಿಯಬಾರದು. ಎಲ್ಲ ಹತ್ತು ಜನರನ್ನು ಮನೆಗೆ ಬರ ಹೇಳಿದ್ದು
ಘಟನೆಯಲ್ಲಿನ ಮಹತ್ವದ ತಿರುವು. ಏನೆ ಇರಲಿ ನಾವು ಪಲಾಯನವಾದವನ್ನು ಅನುಸರಿಸಬಾರದು ಅದು ನಮ್ಮನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿ ಬಿಟ್ಟು ನಮ್ಮ ಆತ್ಮಸ್ಥೈರ್ಯ ಕಳೆದು ಬಿಡುತ್ತದೆ. ನಿಜವನ್ನು ಎದುರಿಸಿ ಬಿಟ್ರೆ ಮನಸು ನಿರಾಳ, ಹಾಗೆ ಸಮಸ್ಯೆಗೆ ಒಂದು ಪರಿಹಾರ ಹುಡುಕಲು ಸಮಯ ಸಿಗುತ್ತದೆ.
ಕೇಲವು ದಿನಗಳ ನಂತರ ಆ ಘಟನೆ ನಮಗೆ ನಗು ತರಿಸುತ್ತದೆ. ಜೀವನದಲ್ಲಿ ಏಲ್ಲವನ್ನು ಅನುಭವಿಸಿ ಕಲಿಯಲು ಆಗುವದಿಲ್ಲ ಆದ್ದರಿಂದ ಬೇರೆಯವರ ಅನುಭವಗಳು ನಮಗೆ ಪಾಠವಾಗುತ್ತದೆ ಅಲ್ಲವೆ?

umesh desai said...

ಹೆಗಡೇಜಿ ಸುಖದ ದಿನಗಳಲ್ಲಿ ಕಳೆದ ದಿನಗಳ ನೋವು ನೆನಪು ಮಾಡಿಕೊಳ್ಳಬೇಕು ಸುಖದ ಮಜಾ ಇನ್ನು ಹೆಚ್ಚಾಗುತ್ತದೆ ಅಂತ
ಹಿರಿಯರೊಬ್ಬರು ಹೇಳುತ್ತಿದ್ದರು. ನೀವು ಆ ದಿನಗಳನ್ನು ಮರೆತಿಲ್ಲ ಈಗ ಎಲ್ಲ ಸರಿಯಾಗಿದೆಯಲ್ಲ ನಿಮ್ಮ ಮನೆಯವರಿಗೆ
ಅಭಿನಂದನೆ ತಿಳಿಸಿರಿ .

ಸಿಮೆಂಟು ಮರಳಿನ ಮಧ್ಯೆ said...

ಚಂದ್ರಶೇಖರ್....

ನ್ಯಾಯ.., ದೇವರು... ಧೈರ್ಯ ಅಂತ ಏನೇ ಹೇಳಿದರೂ...

ಆ ಸಮಯದಲ್ಲಿ,
ಅಂಥಹ ಸಂದರ್ಭದಲ್ಲಿ...
ಎಷ್ಟೇ ತಿಳುವಳಿಕೆ ಇದ್ದವರಿಗೂ ಬುದ್ಧಿ ಮಖಾಗಿ ಬಿಡುತ್ತದೆ....

ಅದು ಆಕ್ಷಣದ ನಿರ್ಧಾರವಾದ್ದರಿಂದ
ಅದರಿಂದ ಹೊರ ಬರುವ ಪ್ರೇರಣೆ ಸಿಗಬೇಕು... ಅಷ್ಟೆ...

ನಿಮ್ಮ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

ತೇಜಸ್ವಿನಿ ಹೆಗಡೆ- said...

ಪ್ರಕಾಶಣ್ಣ,

ಎನು ಹೇಳಲೂ ತಿಳಿಯುತ್ತಿಲ್ಲ.. ಮುಂದಿನ ಭಾಗಕ್ಕಾಗಿ ಕಾಯುತ್ತಲಿರುವೆ.. ತಿಳಿಯಲು ಕಾತುರಳಾಗಿರುವೆ. ನಿಮ್ಮ ಹಾಗೂ ಮನೆಯವರ ಆತ್ಮಸ್ಥೈರ್ಯ ಸದಾ ಹೀಗೇ ಇರಲೆಂದು ಹಾರೈಸುವೆ.

nenapina sanchy inda said...

:-(
Thats very sad da
malathi S

Jagadeesh Balehadda said...

ಆ ಕತ್ತಲಲ್ಲೇ ಇಬ್ಬರೂ..ಅತ್ತೆವು...

ಬೆಳಕು ಬೆತ್ತಲೆ ಮಾಡಿಬಿಡುತ್ತದೆ.....
ದುಃಖ ತಪ್ತ ಮನಸ್ಸು ಕತ್ತಲೆಯನ್ನು ಬಯಸುತ್ತದೆ...
...............................
ಈ ಸಾಲು ಏಕೋ ನನ್ನನ್ನೂ ಕಾಡುತ್ತಿದೆ..........

ಸಿಮೆಂಟು ಮರಳಿನ ಮಧ್ಯೆ said...

ಡಾ. ಗುರುಮೂರ್ತಿಯವರೆ(ಸಾಗರದಾಚೆಯ ಇಂಚರ)

ಇದನ್ನು ಬರೆಯುತ್ತಿದ್ದ ಹಾಗೆ ನನಗೂ ಕಷ್ಟವಾಯಿತು...
ಹಳೆಯದೆಲ್ಲ ನೆನಪಾಗಿ ಮನಸ್ಸು ಭಾರವಾಯಿತು...

ಇನ್ನೂ ಕೆಲವು ವಿಷಯ ಕಟ್ ಮಾಡಿದ್ದೇನೆ...

ಅವೆಲ್ಲವೂ ನೆನಪಾಗಿಯೇ ಇರಲಿ...
ಕಾಡುತ್ತಲಿರಲಿ...
ಮತ್ತೆ ಎದುರಾಗುವದು ಬೇಡ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ರಾಜೀವ....

ಅಂಥಹ ಕೆಟ್ಟ ಸಮಯದಲ್ಲೂ..
ಅಂತಃಕರಣವಿರುವವರು ಸಿಗುತ್ತಾರೆ..
ಆಮೇಲೆ ಅವರು ನಮ್ಮ ಜೀವನದ ಭಾಗವಾಗಿಬಿಡುತ್ತಾರೆ...

ಅದನ್ನು ನಿಮಗೆ ಹೇಳಲೇ ಬೇಕು...

ಇನ್ನೊಮ್ಮೆ ಯಾವಾಗಲಾದರೂ ಹೇಳುವೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ...

ಜೀವನ ಕಲಿಸುವ ಪಾಠವನ್ನು ಬೇರೆಯಾವ ವಿಶ್ವವಿದ್ಯಾಲಯವೂ ಕಲಿಸುವದಿಲ್ಲ...
ಕಷ್ಟಗಳನ್ನು ಎದುರಿಸುವ ಬಗೆಯನ್ನು ಯಾರೂ ಹೇಳಿಕೊಟ್ಟರೂ...
ನಮ್ಮ ಅನುಭವದ ರೀತಿಯಲ್ಲೇ ಎದುರಿಸ ಬೇಕಾಗುತ್ತದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮನಸು...

ಒಂದು ಸಮಸ್ಯೆಯನ್ನು ..
ಒಂದು ಭಾವುಕ ವ್ಯಕ್ತಿ ಎದುರಿಸುವದಕ್ಕೂ..
ತೀರಾ ಪ್ರ್ಯಾಕ್ಟಿಕಲ್ ಮನುಷ್ಯ ಎದುರಿಸುವದಕ್ಕೂ ಬಹಳ ವ್ಯತ್ಯಾಸವಿದೆ...

ಭಾವಜೀವಿಗಳು..
ಮರ್ಯಾದೆಗೆ ಅಂಜುವವರು...
ತಮ್ಮ ಭಾವನೆಗಳನ್ನು ಹಂಚಿಕೊಳ್ಳದಿರುವವರು..
ದುಡುಕಿನ ನಿರ್ಧಾರ ತೆಗೆದುಕೊಳ್ಳುವದು ಜಾಸ್ತಿ...

ಯಾರಿಗೂ ಅಂಥಹ ಸಂದರ್ಭ ಬಾರದಿರಲಿ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ದಿನಕರ...

ನಿಮ್ಮ ಬ್ಲಾಗಿಗೆ ಬಂದಿದ್ದೆ..
ನಿಮ್ಮ "ಅಪ್ಪನ" ಕವಿತೆ ಬಹಳ ಇಷ್ಟವಾಯಿತು..
ಪ್ರತಿಕ್ರಿಯೆ ಹಾಕಲಿಕ್ಕೆ ಬರ್ತಾ ಇಲ್ಲ... ತಾಂತ್ರಿಕ ದೋಷ...
ದಯವಿಟ್ಟು ಸರಿಪಡಿಸಿ...

ಅನುಬಹವಗಳು ನಮ್ಮನ್ನು ಮತ್ತಷ್ಟು ಪಕ್ವ ಮಾಡುತ್ತದೆ..

ಈಸ ಬೇಕು ಇದ್ದು ಜಯಿಸ ಬೇಕು...

ನಿಮ್ಮ ಪ್ರೀತಿಗೆ, ಪ್ರೋತ್ಸಾಹಕ್ಕೆ ಧನ್ಯವಾದಗಳು...
ಪ್ರಕಾಶಣ್ಣ...

Prashanth Arasikere said...

hello..prakash avre nimma lekana tumba chennagide baduku ellavnnu kalisuttade ennuvudakke..ide sakshi..nimma ulida baraha vannu oduttene..

ಸಿಮೆಂಟು ಮರಳಿನ ಮಧ್ಯೆ said...

ಸುಮ....

ಹೇಗೆ ಇದ್ದರೂ ಜೀವನ ಕಳೆಯಬಹುದು...

ಹೊಟ್ಟೆಗೆ ಗತಿ ಇಲ್ಲದೆ ಬೇಡಿ ತಿನ್ನುವ ಭಿಕ್ಷುಕರನ್ನು ನೋಡಿ..
ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಬದಲಿಸಿಕೊಳ್ಳ ಬಹುದು...

ಜಗತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಒಂದೇ ಒಂದು ಜೀವಿ ಅಂದರೆ...
"ಮನುಷ್ಯ" ಮಾತ್ರ..

ಪ್ರತಿಕ್ರಿಯೆಗೆ ಧನ್ಯವಾದಗಳು...

ನನಗೆ "ನಾಗಂದಿಗೆ" ಬ್ಲಾಗ್ ಲಿಂಕ್ ಸಿಕ್ಕಿಲ್ಲ ...
ಕೊಡುವಿರಾ...?

ಬಿಸಿಲ ಹನಿ said...

ನಿಜಕ್ಕೂ ಮುಂದೇನು ಮುಂದೇನು ಏನಾಗುತ್ತದೆ ಎನ್ನುವ ಕುತೂಹಲವನ್ನು ಹಿಡಿದಿಟ್ಟಿಕೊಂಡು ಓದಿಸಿಕೊಂಡು ಹೋಗುವ ಕತೆ ತುಂಬಾ ಮಾರ್ಮಿಕವಾಗಿದೆ. ಆತ್ಮಹತ್ಯೆ ಅಂಥ ಸಾಮಾನ್ಯ ವಸ್ತುವನ್ನು ಹೊಂದಿರುವ ಕಥೆ ನಿಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಗಮನ ಸೆಳೆಯುತ್ತದೆ. ಹ್ಯಾಟ್ಸಾಫ್!

ದಿನಕರ .. said...

ನೀವು ಮೆಚ್ಹಿದ್ದಕ್ಕೆ ಧನ್ಯವಾದಗಳು..... ತಾಂತ್ರಿಕ ದೋಷ ಇತ್ತು.... ಈಗ ಸರಿಪದಿದ್ದೇನೆ......

ಸಿಮೆಂಟು ಮರಳಿನ ಮಧ್ಯೆ said...

ಪ್ರಿಯ ಗುರು...

ಆ ಸಮಯದಲ್ಲಿ ನನ್ನ ಮನಸ್ಥಿ ಏನಾಗಿತ್ತೆಂದರೆ..
ತಲೆಯಲ್ಲಿ ಏನೂ ಸೂಚಿಸದಂತಾಗಿ..
ಮಂಕುಕವಿದಂತಾಗಿತ್ತು..
ಮನ ಗೊಂದಲದ ಗೂಡಾಗಿತ್ತು..
ಒಂದೆಡೆ ಸ್ಥಿರವಾಗಿ , ತಾಳ್ಮೆಯಿಂದ ಕುಳಿತು ವಿಚಾರ ಮಾಡುವ ಮನಸ್ಥಿತಿಯನ್ನು ಕಳೆದು ಕೊಂಡು ಬಿಟ್ಟಿದ್ದೆ...

ಏನಾದರೂ ಬದಲಾವಣೆ ಇರಲೆಂದು ಸಿನೇಮಾ ಹೋದರೆ ಅಲ್ಲೂ ಅಸಹನೆ ಜಾಸ್ತಿಯಾಯಿತು...

ಆ ಪರಿಸ್ಥಿತಿ ಹಾಗಿತ್ತು...

ಅವಮಾನ, ನಾಚಿಕೆ..
ಅಸಹನೆಯ ಪರಿಸ್ಥಿತಿ...
ನನ್ನಲ್ಲಿರುವ ತಾಳ್ಮೆಯನ್ನು ಪರಿಕ್ಷಿಸುವಂತಿತ್ತು...

ಪ್ರತಿಕ್ರಿಯೆಗೆ ಧನ್ಯವಾದಗಳು...

shivu said...

ಪ್ರಕಾಶ್ ಸರ್,

ಬದುಕಿನ ಕಹಿ ಸತ್ಯಗಳು ಏನೆಲ್ಲಾ ಅವಘಡಗಳನ್ನು ಸೃಷ್ಟಿಸಿಬಿಡುತ್ತವೆ ಅನ್ನುವುದಕ್ಕೆ ನಿಮ್ಮ ಅವತ್ತಿನ ಕಹಿ ಘಟನೆಗಳೇ ಸಾಕ್ಷಿ. ನಾನು ಏನನ್ನೇ ಮಾಡಬೇಕಾದರೂ ಒಂದು ಕ್ಷಣ ತಡೆದು ಮಾಡಿದರೇ ಆಗುವ ಪರಿಣಾಮವೇ ಬೇರೆ. ಹಾಗೆ ತಡೆದಿದ್ದು ನಿಮ್ಮ ಶ್ರೀಮತಿಯವರು. ಅದಕ್ಕೆ ಬದುಕಿನ ಅಮೂಲ್ಯ ಕ್ಷಣಗಳು ಎನ್ನುತ್ತಾರೆ.

ರಾತ್ರಿಯ ಕತ್ತಲು ಕಂಡರೆ.... ದುಃಖಕ್ಕೆ ಸಮಾಧಾನ...!
ಆ ಕತ್ತಲಲ್ಲೇ ಇಬ್ಬರೂ..ಅತ್ತೆವು...
ಬೆಳಕು ಬೆತ್ತಲೆ ಮಾಡಿಬಿಡುತ್ತದೆ.....ದುಃಖ ತಪ್ತ ಮನಸ್ಸು ಕತ್ತಲೆಯನ್ನು ಬಯಸುತ್ತದೆ...
ಕತ್ತಲು ಕೊಡುವ ಸಮಾಧಾನ..ಸಾಂತ್ವನ... ಬೆಳಕು ಕೊಡಲಾರದು....

ಇಂಥ ತೂಕವುಳ್ಳ ಬರಹದ ಸಾಲುಗಳು ಇತ್ತೀಚಿಗೆ ನಿಮ್ಮ ಲೇಖನಗಳಲ್ಲಿ ಕವಿಸಮಯದಂತೆ ಹೊರಹೊಮ್ಮುತ್ತಿವೆ. ಇದು ಖಂಡಿತ ಬೆಳವಣಿಗೆಯ ಲಕ್ಷಣ.

ಮುಂದುವರಿಸಿ..

Annapoorna Daithota said...

ಇಂಥಾ ಸಂದರ್ಭಗಳಲ್ಲಿ, ಹಾಗೆ ಮಾಡಿ, ಹೀಗೆ ಮಾಡಿ ಅಥವಾ ಹಾಗೆ ಮಾಡ್ಬಾರ್ದಿತ್ತು, ಹೀಗೆ ಮಾಡ್ಬಾರ್ದಿತ್ತು ಅಂತ ಟೀಕೆ, ಸಲಹೆಗಳ ಸುರಿಮಳೆ ಸುರಿಯುತ್ತೆ. ತೊಂದರೆಗೆ ಸಿಲುಕಿದವರಿಗೆ ಬೇಕಾಗಿರುವುದು ಬರೀ ಧೈರ್ಯ ಕೊಡುವ, ಒಳ್ಳೆಯ ಮಾತುಗಳು, ಸಾಧ್ಯವಾದರೆ ಸಹಾಯ. ಆದರೆ, ಟೀಕೆ ಮಾಡುವ, ಬಿಟ್ಟಿ ಸಲಹೆ ನೀಡುವ ವ್ಯಕ್ತಿಗಳು ಇದಕ್ಕೆ ತಯಾರಿರುವುದಿಲ್ಲ.

ಇಂಥಾ ಸಮಯದಲ್ಲಿ ಮನಸ್ಥೈರ್ಯ ಉಳಿಸಿಕೊಳ್ಳುವುದು ಎಲ್ಲರಿಗೂ ಸಾಧ್ಯವಾಗುವಂಥದ್ದಲ್ಲ. ನಿಮ್ಮಿಬ್ಬರಿಗೂ ಅದು ಸಾಧ್ಯವಾಗಿದೆಯೆಂದರೆ ಅದು ಅಭಿನಂದನೀಯ.

ಅಭಿನಂದನೆಗಳು :-)

Shweta said...

Prakaashanna ,
estella pareekshegalu bartu alda??
jeevana dodda teacher....
neevu face maadida reeti odidre bhaala feel aagtu...
hege solve aayitu?

ಚಿತ್ರಾ said...

ಪ್ರಕಾಶಣ್ಣ,
ಎಲ್ಲಾ ಓದಿ ಮುಗಿದ ಮೇಲೆ ಪ್ರತಿಕ್ರಿಯೆ ಬರೆಯನ ಹೇಳಿ ಸುಮಾರು ದಿನದಿಂದ ಕಾಯ್ತಾ ಇದ್ದಿ . .
ಪರಿಸ್ಥಿತಿನ ಹ್ಯಾಂಗೆ ಸುಧಾರಿಸಿದೆ ಹೇಳಿ ಕುತೂಹಲ ಆಗ್ತ ಇದ್ದು . ಬೇಗ ಮುಂದುವರಿಸು

sunaath said...

ಆಘಾತಕಾರಿ ಸಂಗತಿ. ಆದರೆ, ಅರ್ಧಾಂಗಿನಿ ಅಂದರೆ ಹೀಗಿರಬೇಕು. ಅವರಿಗೆ ನನ್ನ hats off!

ರೂಪಾ said...

ಪ್ರಕಾಶ್ ಸಾರ್
ಓದುತ್ತಾ ಇದ್ದಂತೆ ಮನಸ್ಸು ಒಂದು ಥರಾ ವಿಷಾದದ ಸುತ್ತಾ ಸುತ್ತುತ್ತಿತ್ತು ನಿಮ್ಮ ಹೆಂಡತಿಯ ಮಾತು ಓದುತ್ತಿದ್ದಂತೆ ಚೇತರಿಕೆ ನೀಡಿತು
ನಿಮ್ಮ ಅರ್ಧಾಂಗಿ ನಿಜಕ್ಕೂ ಬಹು ದೊಡ್ಡ ಗುಣದವರು. ಎಲ್ಲರೂ ಬೆಳಕಲ್ಲಿ ಉತ್ತರ ಕಾಣಬಯಸುತ್ತಾರೆ ಆದರೆ ನೀವು ಕತ್ತಲೆಯಲ್ಲಿ ಬೆಳಕ ಕಂಡಿದ್ದೀರಾ
ನಿಮ್ಮೆಲ್ಲಾ ಕಷ್ಟಗಳೂ ಪರಿಹಾರವಾಗಿ ನಿಮ್ಮ ನೆಂಟರು ಕೂಡಲೆ ನಿಮ್ಮ ಬಾಕಿಯನ್ನು ಕೊಡಲೆಂದು ನಾನು ನಂಬಿರುವ ಸೌತಡ್ಕ ಗಣಪತಿಯಲ್ಲಿ ಕೇಳಿಕೊಳ್ಳುತ್ತೇನೆ.

Umesh Balikai said...

ಪ್ರಕಾಶ್ ಸರ್,

ಹಿಂದಿನ ಲೇಖನ ಓದಿದ್ದೆ ಆದರೆ ಕಾಮೆಂಟಿಸಲು ಆಗಿರಲಿಲ್ಲ. ಇದು ಸಂಪೂರ್ಣ ನಿಜವೋ ಅಥವಾ ಪಾಠಕ್ಕಾಗಿ ಸ್ವಲ್ಪ ವೈಭವೀಕರಿಸಿದ್ದೊ ಗೊತ್ತಿಲ್ಲ ಆದರೆ ಕ್ಶ್ಟಕ್ಕೆ, ಅವಮಾನಕ್ಕೆ ಹೆದರಿ ನಂಬಿ ಬಂದ ಹೆಂಡತಿಯನ್ನು, ಚಿಕ್ಕಮಗುವನ್ನು ಮತ್ತು ಆತ್ಮಹತ್ಯೆಯ ನಂತರ ಅವರ ಪರಿಸ್ಥಿತಿಯನ್ನು ಯೋಚಿಸದೇ ಆತ್ಮಹತ್ಯೆಯ ಬಗ್ಗೆ ದುಡುಕಿನಿಂದ ಯೋಚಿಸುವುದು ತುಂಬಾ ತಪ್ಪು ಅನ್ನಿಸ್ತು. ಸಾಲದ ಸುಳಿಗೆ ಸಿಕ್ಕು ಕಷ್ಟ ಬಂದ ಮೇಲೆ ಅದನ್ನು ಎದುರಿಸಲು ಹೆಣಗುವುದು ಒಂದು ರೀತಿ. ಸಾಲದ ಸುಳಿಗೆ ಸಿಲುಕದೇ ಸಾಧ್ಯವಾದಷ್ಟು ಎಚ್ಚರಿಕೆ ವಹಿಸುವುದು ಇನ್ನೊಂದು ರೀತಿ. ವ್ಯವಹಾರದ ವಿಷಯದಲ್ಲಿ ಯಾರನ್ನೂ ನಂಬ ದೇ ಇರಬೇಕಾದ್ದು ಅನಿವಾರ್ಯ. ನಂಬಿಕೆ ಇಲ್ಲದೇ ವರ್ತಿಸುವುದರಿಂದ ಸದ್ಯದ ವ್ಯವಹಾರಕ್ಕೆ ಸ್ವಲ್ಪ ಮಟ್ಟಿನ ನಷ್ಟವಾಗಬಹುದು. ಆದರೆ ಅದರಿಂದ ಭವಿಷ್ಯದಲ್ಲಿ ಜೀವಕ್ಕೆ ಮತ್ತು ಬಾಳಿಗೆ ಆಪತ್ತು ತರುವಂತಹ ಸನ್ನಿವೇಶಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಲು ಸಾಧ್ಯ ಅನ್ನ್ಸುತ್ತೆ. ಎನೀವೇ, ಜೀವನದ ಪಾಠ ಹೇಳುವಂತಾ ಬರಹಕ್ಕೆ ಧನ್ಯವಾದಗಳು.

ಕೆಳಗಿನ ಕೆಲವು ಸಾಲುಗಳು ತುಂಬಾ ಇಷ್ಟವಾದವು:

ರಾತ್ರಿಯ ಕತ್ತಲು ಕಂಡರೆ.... ದುಃಖಕ್ಕೆ ಸಮಾಧಾನ...!

ಕತ್ತಲು ಕೊಡುವ ಸಮಾಧಾನ..
ಸಾಂತ್ವನ...
ಬೆಳಕು ಕೊಡಲಾರದು....

ಕಾಣದ ಸಾವಿಗಿಂತ ....
ಎದುರಿಗಿರುವ ..ಬದುಕು ದೊಡ್ಡದು....


- ಉಮೇಶ್

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ...

ಮೈ ಜುಮ್ ಅನ್ನಿಸ್ತು ಒಮ್ಮೆ ನೀವು ಆಗ ತೆಗೆದುಕೊ೦ಡಿದ್ದ ನಿರ್ಧಾರ ಕೇಳಿ.... ಅತ್ಗೆ ಬಗ್ಗೆ ತು೦ಬಾ ಗೌರವ ಮೂಡಿತು....

ಹೇಗೆ ಪರಿಸ್ಥಿತಿ ನಿಭಾಯಿಸಿದಿರಿ ಅ೦ತ ತಿಳಿದುಕೊಳ್ಳಲು ಕಾಯ್ತಾ ಇದೀನಿ....

ಲೋದ್ಯಾಶಿ said...

ಪ್ರಕಾಶ್ ಸಾರ್,

ಸಾಲ ಮಾಡಿ ಮನೆ ಕಟ್ಟಿಸಿ ಕೊಡೊ ದೈರ್ಯಕಿಂತ, ಮನೆಯಲ್ಲಿ ಅದೂ ಮಡದಿ ಮಕ್ಕಳು ಇರುವಾಗಲೇ ವಿಷ ಕುಡಿಯುವುದಕ್ಕೆ ತುಂಬಾ ದೈರ್ಯಾ ಬೇಕು. ನಿಮಗೆ ಅಷ್ಟೊಂದು ದೈರ್ಯ ಹೇಗೆ ಬಂತು?

ರವಿಕಾಂತ ಗೋರೆ said...

Mundenaayitu???!!!!! Bega heli...

ಕಾವ್ಯಾ ಕಾಶ್ಯಪ್ said...
This comment has been removed by the author.
ಕಾವ್ಯಾ ಕಾಶ್ಯಪ್ said...

ಬೆಳಕು ಬೆತ್ತಲೆ ಮಾಡಿಬಿಡುತ್ತದೆ.....
ದುಃಖ ತಪ್ತ ಮನಸ್ಸು ಕತ್ತಲೆಯನ್ನು ಬಯಸುತ್ತದೆ...

ಕತ್ತಲು ಕೊಡುವ ಸಮಾಧಾನ..
ಸಾಂತ್ವನ...
ಬೆಳಕು ಕೊಡಲಾರದು....

ನಿಜವಾದ ಸಾಲುಗಳು... ತುಂಬಾ ಚೆನ್ನಾಗಿ ಪರಿಸ್ಥಿತಿ ವರ್ಣನೆ ಮಾಡಿದ್ದೆ ಪ್ರಕಾಶಣ್ಣ... ಮಗನ ಜೊತೆ ಸಂವಾದ ಅಂತು ಸೂಪರ್... ಮನಸ್ಸಿಗೆ ಮುಟ್ಟ ಹಂಗೆ ಇದ್ದು...