Thursday, November 12, 2009

ಹೇಗಿದ್ದರೂ... ನಗಬಹುದು....!
ನನ್ನ ಆತ್ಮೀಯ ಗೆಳೆಯ ನಾಗು ಫೋನ್ ಮಾಡಿದ್ದ...
ಈ ಕೆಲಸಗಳ ಒತ್ತಡ.. 
ಬೆಂಗಳೂರು ಟ್ರಾಫಿಕ್ಕು...
ನನಗೂ ಸಾಕು ಸಾಕಾಗಿತ್ತು..
ಮೈತುಂಬಾ ಕೆಲಸವಿದ್ದರೂ ಸೀದಾ ನಾಗುವಿನ ಮನೆಗೆ ನಡೆದೆ...

ನಾಗು ನೋಡಿ ನನಗೂ ಖುಷಿಯಾಯಿತು..
ಕೆಲವು ದಿನಗಳ ಹಿಂದೆ ಅವನಿಗೆ ಶಸ್ತ್ರ ಚಿಕಿತ್ಸೆ ಆಗಿತ್ತು...


ಈಗ ಎದ್ದು ಓಡಾಡುತ್ತಿದ್ದ...
ಮುಖದಲ್ಲಿ ಅಶಕ್ತತೆ ಇದ್ದರೂ ನಗುವಿತ್ತು..

"ಏನಪ್ಪಾ ನಾಗು ಚೆನ್ನಾಗಿದ್ದೀಯಾ..? 
ಹೇಗಿದ್ದೀಯಾ ಈಗ..?"

"ಈಗ ಚೆನ್ನಾಗಿದ್ದೀನಿ..ಯಾಕೋ ಗೊತ್ತಿಲ್ಲ
ನನ್ನ ಜೀವ, ಜೀವನ, ಪ್ರಾಣ ಎಲ್ಲ ಭಾರ ಆಗಿದೆ ಕಣೋ..!!..."
ನನಗೆ ಗಾಭರಿ, ಆತಂಕ ಆಯಿತು...

"ಯಾಕೊ.. ಹಾಗಂತೀಯಾ..?
ತೊಂದ್ರೆ ಇದ್ರೆ ಹೇಳೊ.. ಮಾರಾಯಾ.. ನಾನಿದ್ದೀನಿ.."

"ಅಯ್ಯೊ..!
 ಆ ಭಾರ ಎಲ್ಲ ನಾನೇ ಹೊರಬೇಕಪ್ಪಾ...!
ಎಷ್ಟೆಂದರೂ... ಅದು ನನ್ನ ಜೀವನ ...
ನನ್ನ ಪ್ರಾಣ... !
ಹೇಗೆ ಈ ಭಾರ ಹೊರಬೇಕು ಅಂತ ಚಿಂತೆ ಆಗ್ತಿದೆ ಕಣೋ...."

ಅಡಿಗೆ ಮನೆಯಿಂದ ಪಾತ್ರೆಗಳ ಶಬ್ಧ ಕೇಳಿಸಿತು...
ಸ್ವಲ್ಪ ಜೋರಾಗಿಯೇ ಇತ್ತು...!

ನಾಗು ನೋಡಿದೆ.. 
ಸೊರಗಿ ಹೋಗಿದ್ದ...
ಆಘಾತದಿಂದ ಇನ್ನೂ ಪೂರ್ತಿ ಚೇತರಿಸಿಕೊಂಡಿಲ್ಲ ಅನಿಸಿತು...
ಅವನನ್ನು ನೋಡಿ ಕನಿಕರ ಮೂಡಿತು....

"ನಾಗು.. 
ಹೀಗೆಲ್ಲ ಹೇಳಬೇಡ್ವೊ... ಯಾಕೊ ಏನಾಯ್ತು..?..
ಹಣಕಾಸಿನ ತೊಂದರೆ ಇದೆಯೇನೋ...? "

ಅಷ್ಟರಲ್ಲಿ ನಾಗುವಿನ ಹೆಂಡತಿ ಧುಮು.. ಧುಮು ಅನ್ನುತ್ತ..ನಮ್ಮ ಬಳಿ ಬಂದಳು..
ಸಿಕ್ಕಾಪಟ್ಟೆ ಕೊಪದಲ್ಲಿದ್ದಳು...

"ಪ್ರಕಾಶಾ...
ಇದು ನನ್ನ ಬಗ್ಗೆ ಹೇಳಿದ್ದು ಕಣೊ...
ಇವರು ನನ್ನ ಬಳಿ ಯಾವಗಲೂ ...."ನೀನೇ ನನ್ನ ಪ್ರಾಣ...!!
ನೀನೇ ನನ್ನ ಜೀವಾ...!
ನೀನೇ ನನ್ನ ಜೀವನಾ..! ಅನ್ನುತ್ತಾರೆ...!
ಅವರಿಗೆ ಬದುಕು ಭಾರ ಆಗಿಲ್ಲ... !
ಈಗ ನನ್ನ ತೂಕ ಜಾಸ್ತಿ ಆಯ್ತು ಅಂತ ಹೀಗೆ ಹೇಳ್ತಿದ್ದಾರೆ..!!"

ನಾಗು ನಗುತ್ತಿದ್ದ..

ದೇಹಕ್ಕೆ.. ಮನಸ್ಸಿಗೆ ನೋವಿದ್ದರೂ ನಗುತ್ತಿದ್ದಾನಲ್ಲ...!
ಸಾವಿನ ದವಡೆಯವರೆಗೆ ಹೋಗಿ ಬಂದಿದ್ದಾನೆ...!
ಶಸ್ತ್ರ ಚಿಕಿತ್ಸೆಯ ನೋವು ಇನ್ನೂ ಇದೆ !!
ಸಾಯುವ ಯಮಯಾತನೆ ಅನುಭವಿಸಿದ ನೋವು ಮುಖದಲ್ಲಿ ಕಾಣುತ್ತಿಲ್ಲ...!

ನಾಗು ನಗುತ್ತಿದ್ದಾನೆ....!!

ನಗುವ ಮನಸ್ಸಿದ್ದರೆ ಹೇಗಿದ್ದರೂ...ನಗಬಹುದು...!

ಅವನ ಹೆಂಡತಿಯನ್ನು ನೋಡಿದೆ...
ನಿಜ ಅವನ ಜೀವನ ಭಾರವಾಗಿದ್ದು ಎದ್ದು ಕಾಣುತ್ತಿತ್ತು !!

"ಪ್ರಕಾಶು... 
ನನಗೆ ವೀಕ್‍ನೆಸ್ಸು ಕಣೊ.. 
ಇನ್ನು ಮುಂದೆ..ಹೇಗೆ ಹೊರಲೊ ಈ ಜೀವನ ಭಾರಾನಾ...?
ನನ್ನ ಜೀವನಾ..! ಪ್ರಾಣಾ..! ಎಲ್ಲಾ ಭಾರ ಆಗಿದೆ...!
ನಿನ್ನ ಮನೆಗೆ ಬರ್ಲಿಕ್ಕೆ ಟ್ಯಾಕ್ಸಿಗೆ ಹೇಳಿದ್ದೀನಿ ಕಣೊ..
ಮೊದಲಿನ ಹಾಗೆ ಬೈಕಲ್ಲಿ ಆಗಲ್ಲ..
ನನ್ನ  ಜೀವನ  ಭಾರ ಆಗಿದೆ ಕಣಪ್ಪಾ..."

ನನಗೆ ನಗು ತಡಿಯಲಿಕ್ಕೆ ಆಗ್ಲಿಲ್ಲ...
ಜೋರಾಗಿ ನಕ್ಕೆ...
ನನ್ನ ಹೊಟ್ಟೆಯೂ "ಗಲ.. ಗಲ..".... ಅಂದಿತು ... !!

ನನ್ನಾಕೆಯ ನೆನಪಾಯಿತು..
ತಕ್ಷಣ ಫೋನಾಯಿಸಿದೆ...

"ಹಲ್ಲೋ..."

"ಏನ್ರಿ...?... !!.."


"ಏನಿಲ್ಲ ಕಣೆ... 
ನಿನ್ನ ಜೀವನ ಹೇಗಿದೆಯೆ..?
ಭಾರ ಆಯ್ತು ಅಂತ ಅನಿಸ್ತಾ ಇದೆಯಾ...?"

"ಏನ್ರಿ.. ಹೀಗಂತೀರಾ...? 
ರಾಯರು ಒಳ್ಳೆ ಮೂಡಲ್ಲಿರೊ ಹಾಗಿದೆ..?"

"ಇಲ್ಲಾ ಚಿನ್ನಾ..
ಹೇಳು ನಿನ್ನ ಜೀವನ ಭಾರ ಆಯ್ತು ಅಂತ ಅನಿಸ್ತಾ ಇದೆಯಾ..?"

"ಇಲ್ರೀ... 
ಏನು ಅಂತ ಮಾತಾಡ್ತೀರಾ?
ನೀವಿರುವಾಗ ಎಂಥಾ ಭಾರ ..?
ಎಲ್ಲಾ ಹಗುರ ರೀ....
ನೀವು ಜೊತೆಯಲ್ಲಿರುವಾಗ ಏನು ಭಾರ ಮಾರಾಯ್ರೆ...?
ಎಲ್ಲಾ ಭಾರ ನೀವೇ ಹೊರ್ತಾ ಇದ್ದೀರಲ್ಲಾ..!
ನಂಗೇನು...?
ನಾನು ಆರಾಮಾಗಿದ್ದೀನ್ರಿ..."

ಹೌದಲ್ವಾ...!!..?

ನಾನು ಫೋನ್ ಕಟ್ ಮಾಡಿದೆ...

ನಿಜ ....
ಅವಳಿಗೇನು? ಜಿಂಕೆ ಹಾಗೆ ಕುಣಿತಾ ಇದ್ದಾಳೆ...!

ಭಾರ ಹೊರ್ತಿರೋದು ನಾನು...!

ಈ ಜೀವನದ ಭಾರ ಕಡಿಮೆ ಮಾಡ್ಕೋ ಬೇಕು ಅನ್ನಿಸ್ತಾ ಇದೆ....!

..................................................................................................................


ಹುಟ್ಟಿದಾಗ ನನ್ನ ತಲೆ ದೊಡ್ಡದಾಗಿತ್ತಂತೆ...
ಡೆಲಿವರಿ ಸಮಯದಲ್ಲಿ ಅಮ್ಮನಿಗೆ ಬಹಳ ಕಷ್ಟವಾಯಿತಂತೆ...

ಹೆರಿಗೆಯ ನೋವು ಊಹೆಗೂ ಮೀರಿದ್ದು...!
ಗಂಡಸರ ಕಲ್ಪನೆಗೆ ಮೀರಿದ್ದು ಅದು...
ಪ್ರತಿ ಹೆರಿಗೆಯಲ್ಲೂ ಮಗುವಿನ ಸಂಗಡ ತಾಯಿಯೊಬ್ಬಳು ಹುಟ್ಟುತ್ತಾಳೆ..
ಮರು ಜನ್ಮ ಪಡೆಯುತ್ತಾಳೆ...

ನೋವಿನಲ್ಲೂ ಸುಖ ಕಾಣುವ ತಾಯಿಯ ಬಗೆಗೆ,
ಹೆಣ್ಣಿನ ಆ ಸ್ವಭಾವದ ಬಗೆಗೆ ನನಗೆ ಹೊಟ್ಟೆಕಿಚ್ಚಿದೆ...

ಅದು ಹೇಗೆ ಸಾಧ್ಯ ಎನ್ನುವ ಕುತೂಹಲವೂ ಇದೆ...

ನಾನು ಹುಟ್ಟಿದ ಮೂರು ತಿಂಗಳಲ್ಲಿ ನನಗೆ ರಿಕೆಟ್ಸ್ ರೋಗ ಆಯಿತು...

ಹುಬ್ಬಳ್ಳಿಯಲ್ಲಿ , ...
ಸಿರ್ಸಿಯ ವಿನಾಯಕ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸಿದ್ದರಂತೆ...

ಬಡಕಲು ಶರೀರ...ಎಲುಬು ಚರ್ಮ...
ತಲೆಯೊಂದು ಮಾತ್ರ ದೊಡ್ಡದು...
ಯಾವಾಗಲೂ ಅಳುತ್ತಿದ್ದನಂತೆ...
ನನ್ನ ಮೈಗೆ "ಕಾಡ್ಳಿವರ್ ಆಯಲ್"
(ಮೀನಿನ ಎಣ್ಣೆ) ಹಚ್ಚಿ ಬೆಳಗಿನ ಬಿಸಿಲಲ್ಲಿ ಮಲಗಿಸುತ್ತಿದ್ದರಂತೆ...
ಸುಮಾರು ಏಳು ವರ್ಷ ಕಾಡಿತ್ತು ಈ ರೋಗ....!


ಅಶಕ್ತತೆಯ ಮಗು, ಕುರೂಪ...
ಎಲುಬು ಚರ್ಮ, ರಕ್ತವಿರದ ...
ಯಾವಾಗಲೂ ರೋಗಿಷ್ಟವಾದ .....
ನಕ್ಕರೂ ಚಂದ ಕಾಣದ ನನ್ನನ್ನು ನನ್ನಮ್ಮ ಎಂದೂ ಅಲಕ್ಷಿಸಲಿಲ್ಲ..

ಪ್ರೀತಿಗೆ ಕೊರತೆ ಮಾಡಲಿಲ್ಲ...
ಯಾವಾಗಲೂ ಮುದ್ದಿಸುತ್ತಿದ್ದರು....
ಎದೆಗೆ ಅವಚಿಕೊಳ್ಳುತ್ತಿದ್ದರು...
"ಚಿನ್ನಾ... ನೀನು ಕೃಷ್ಣನ ಹಾಗಿದ್ದಿಯಾ.." ಅಂತಿದ್ದರು...
ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ದೊಡ್ಡವನ್ನನ್ನಾಗಿಸಿದರು...

ನನ್ನ ತಂದೆ ತೀರಿದ ಒಂದು ತಿಂಗಳ ನಂತರ ನಾನು ಹುಟ್ಟಿದ್ದು...
ಪತಿಯ ಅಗಲಿಕೆಯ ನೋವು...
ಹೆರಿಗೆಯ ನೋವು...
ನನ್ನ ಅನಾರೋಗ್ಯ, ಅಶಕ್ತತೆ...,
ಕುರೂಪ...
ಭವಿಷ್ಯದ ಕತ್ತಲು....!
ಇದ್ಯಾವದೂ ಪ್ರೀತಿಗೆ, ಮಮತೆಗೆ ಅಡ್ಡಿ ಬರಲಿಲ್ಲ...

ಯಾವ ತಾಯಿಗೂ ಇವೆಲ್ಲ ಕಾಣಿಸೋದೂ ಇಲ್ಲ....!!

ನೋವಿನಲ್ಲೂ ಸುಖ ಕಾಣುವ ..
ತಾಯಿಯ ಬಗೆಗೆ, ಹೆಣ್ಣಿನ ಬಗೆಗೆ ನನಗೆ ಹೊಟ್ಟೆಕಿಚ್ಚಿದೆ...

ಅಳುವಿನಲ್ಲೂ ನಗ ಬಲ್ಲರು..
ಅವರು ದುಃಖದಲ್ಲೂ ಸುಖ ಕಾಣ ಬಲ್ಲರು.....
ಕುರೂಪದಲ್ಲೂ ರೂಪ ಕಾಣ ಬಲ್ಲರು...ಮಮತೆ ಕೊಡ ಬಲ್ಲರು...!

ಅಂಥಹ ತಾಯಿಗೆ...
ಸಮಸ್ತ ಹೆಣ್ಣುಕುಲಕ್ಕೆ
ಹೆಣ್ಣು ಹೃದಯಗಳಿಗೆ ನನ್ನ ನುಡಿ ನಮನಗಳು...

.............................................................................................................


ಕಳೆದ ಒಂದು ವರ್ಷದಿಂದ ನಾನು ಬ್ಲಾಗ್ ಬರೆಯುತ್ತಿದ್ದೇನೆ...

ನೀವೆಲ್ಲ ಇಲ್ಲಿ ಬಂದಿದ್ದೀರಿ...
ಓದಿದ್ದೀರಿ...

ಕೆಲವೊಮ್ಮೆ ನಕ್ಕಿದ್ದೀರಿ... ದುಃಖವೂ ಆಗಿರ ಬಹುದು...

ಖುಷಿ ಪಟ್ಟಿದ್ದೀರಿ...
ನನ್ನ ಲೇಖನ ಬೋರ್ ಆಗಿ ಬೇಸರ ಪಟ್ಟಿರ ಬಹುದು
ಕೆಲವು ಶಬ್ಧಗಳ ಪ್ರಯೋಗದ ಬಗ್ಗೆ ಬಯ್ದಿರಲೂ ಬಹುದು... !

ಆದರೂ ....
ನನ್ನ ಬೆನ್ನು ತಟ್ಟಿದ್ದೀರಿ... ಸಂತಸ ಪಟ್ಟಿದ್ದೀರಿ...
!

ನನಗೆ ಇನ್ನಷ್ಟು ಬರೆಯಲು ಪ್ರೋತ್ಸಾಹ ನೀಡಿದ್ದೀರಿ... !

ಈ "ಹೇಸರೇ.. ಬೇಡ" ಪುಸ್ತಕ ನನ್ನ ಮಗು..

ಗುಣ ದೋಷ ನನಗೆ ಕಾಣುತ್ತಿಲ್ಲ...
ಬರಿ ಚಂದ ಮಾತ್ರ ಕಾಣುತ್ತಿದೆ...
ಸೊಗಸು ಮಾತ್ರ ನೋಡುತ್ತಿದ್ದೇನೆ...

ತಾಯಿ ಹೃದಯದ ಭಾವ ಅರ್ಥ ಆಗುತ್ತಿದೆ...
ಗುಣ ದೋಷ ಕಂಡರೂ ಕಾಣದಂತಿದ್ದೇನೆ....
!

ಇದೇ ಭಾನುವಾರ ನನ್ನ ಮಗುವನ್ನು ನಿಮ್ಮ ಕೈಗೆ ಇಡುತ್ತಿದ್ದೇನೆ...
ದಯವಿಟ್ಟು ಬನ್ನಿ...
ನನ್ನ ಸಂತಸದ ಕ್ಷಣಗಳವು.... ನಿಮಗಾಗಿ ಕಾಯುತ್ತೇನೆ.... ಬನ್ನಿ...
ಪ್ರೋತ್ಸಾಹಿಸಿ...


ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ... ಬೆಳಿಗ್ಗೆ ಹತ್ತು ಗಂಟೆಗೆ...

ಅಂದು ಏನೇನಿರುತ್ತದೆ...?


ವಾರದ ರಜಾದಿನದದಲ್ಲಿ ಬೆಚ್ಚನೆಯ ಕಾಫೀ...ತಿಂಡಿ...

ಪುಸ್ತಕ ಪ್ರೇಮಿಗಳಿಗೆ ಪುಸ್ತಕದ ಮಳಿಗೆಗಳು..
ಅವಧಿಯ ಎಲ್ಲಾ...ಪುಸ್ತಕಗಳು... !!

ಜಿ. ಎನ್. ಮೋಹನ್ ರವರ ಸೊಗಸಾದ ಮಾತುಗಳು...
ನಗೆಯುಕ್ಕಿಸುವ ಅವರ ಶೈಲಿಯ ಜೋಕುಗಳು...
ನಿಮ್ಮನ್ನು ನಿರಾಸೆ ಗೋಳಿಸಲಾರದು...

ನಾಗೇಶ ಹೆಗಡೆಯರ ಭಾಷಣ...
ಅವರ ಜ್ಞಾನದ, ತಿಳುವಳಿಕೆಯ ಮಾತುಗಳು...
ಅವರೊಂದು ಸಮುದ್ರ....
ಅಂಥಹ ಪರಿಸರ ತಜ್ಞರು ನಮ್ಮೊಂದಿಗೆ ಇರುವದೇ ನಮ್ಮ ಭಾಗ್ಯ...


ಡಾ. ಬಿ. ವಿ. ರಾಜಾರಾಮರ ಮಾತುಗಳು..
ಅವರು ಸೊಗಸಾದ ವಾಗ್ಮಿಗಳು....

ನಗೆ ನಾಟಕಗಳ ಸರದಾರ..
ಯಶವಂತ ಸರದೇಶಪಾಂಡೆಯವ ನಗೆ ಚಟಾಕಿಗಳು...
ಹೊಟ್ಟೆ ಹುಣ್ಣು ತರಿಸುವ ಹಾಸ್ಯಗಳು... ಜೋಕುಗಳು...

ಅಲ್ಲಿಗೆ ಬರುವ ಸಾಹಿತಿಗಳು... ಅನೇಕ ಗಣ್ಯರು.... !

ನಮ್ಮ ಬ್ಲಾಗ್ ಮಿತ್ರರು...
ಅದೊಂದು ಬ್ಲಾಗ್ ಗೆಳೆಯರ ಸಮಾರಂಭ...ಹಲವಾರು ಮಿತ್ರರ ಮುಖ ಪರಿಚಯ ಆಗುತ್ತದೆ...
ಸುಮಾರು ನೂರು ಬ್ಲಾಗ್ ಮಿತ್ರರು ಬರುತ್ತಿದ್ದಾರೆ...!

ನನ್ನ ಕಥನಗಳಲ್ಲಿ ಬರುವ ಪಾತ್ರಗಳು....


ನನ್ನ ಕೆಲಸದ ಒತ್ತಡದಿಂದಾಗಿ ಪ್ರತ್ಯೇಕವಾಗಿ ಕರೆಯಲು ಸಾಧ್ಯವಾಗದಿದ್ದುದಕ್ಕೆ ಕ್ಷಮೆ ಇರಲಿ...

ಬನ್ನಿ ನನ್ನ ಭಾವ ತೋಟಕ್ಕೆ..
ನಿಮಗಾಗಿ ಅಂದು ನಾನು ಕಾಯುತ್ತೇನೆ...


ನಿಮ್ಮೆಲ್ಲರ ..
ಪ್ರತಿಯೊಬ್ಬರ ನಗುವಿಗಾಗಿ ..
ನಾನು, ನನ್ನ ಗೆಳೆಯರು... ನನ್ನ ಕಥನದ ಪಾತ್ರಧಾರಿಗಳು....
ಬಾಗಿಲಲ್ಲಿ ಕಾಯುತ್ತೇವೆ..... ... ಬರುತ್ತೀರಲ್ಲ...??!!

ಒಂದು ರಜಾದಿನ ...
ಬೋರಾಗಿ...
ಎಂದಿನಂತೆ ಮಾಮೂಲಿಯಂತೆ....
ಕಳೆದು ಹೋಗುವ ಮುನ್ನ...ದಯವಿಟ್ಟು ಬನ್ನಿ..


48 comments:

ದಿನಕರ ಮೊಗೇರ.. said...

ಪ್ರಕಾಶಣ್ಣ,
ಕಾರ್ಯಕ್ರಮ ಯಶಸ್ವಿಯಾಗಲಿ...ಪುಸ್ತಕ ಧಾಖಲೆ ಮಾರಾಟ ಕಾಣಲಿ... ನಮಗೆಲ್ಲಾ ಸಿಗುವ ಹಾಗೆ ಮಾಡಿ ಪ್ಲೀಸ್....

umesh desai said...

ಹೆಗಡೇಜಿ ಸೀಟು ಏನಾದ್ರೂ ಬುಕ್ ಮಾಡಿಸ್ಬೇಕೋ ಹೇಗೆ ನಮ್ಮ ಮನಿ ಸಮಾರಂಭ ತಪ್ಪಿಸಿಕೊಳ್ಳೊದಿಲ್ಲ

ಚುಕ್ಕಿಚಿತ್ತಾರ said...

All the best.Prakaashanna...

Dr. B.R. Satynarayana said...

ಪ್ರಕಾಶ್
ನಾಗು! ವಂಡರ್ ಫುಲ್ ಕ್ಯಾರೆಕ್ಟರ್. ಅದನ್ನು ನಿಮ್ಮ ಬ್ಲಾಗಿನಲ್ಲಿ ಬೆಳೆಸುತ್ತಿರುವುದನ್ನು ನೋಡಿದರೆ ಅದೊಂದು ಮೈಲಿಗಲ್ಲಾಗುತ್ತದೆ ಎನ್ನಿಸುತ್ತಿದೆ. ನಾನು ಅದನ್ನು ಅಂದರೆ ಭಾರವನ್ನು ಹೊರಲಾರದಷ್ಟು ನಿಶ್ಯಕ್ತರಾಗಿರುವ ನಿಮ್ಮ ನಾಗುವನ್ನು, ಭಾವೀ ಮೈಲಿಕಲ್ಲನ್ನು ನಾನು ಭಾನುವಾರ ನೋಡಬಹುದೆ?

AntharangadaMaathugalu said...

ಪ್ರಕಾಶ್ ಅವರಿಗೆ... ಪುಸ್ತಕ ಬಿಡುಗಡೆಯ ಅಭಿನಂದನೆಗಳು.... ನಿಮ್ಮ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲಿ ಎಂದು ಹಾರೈಸುವೆ....

ಶ್ಯಾಮಲ

ಸುಪ್ತವರ್ಣ said...

ನಿಮ್ಮ ಲೇಖನ ಓದಿ ಬೀಚಿಯವರ ಆತ್ಮಕಥೆ ನೆನಪಾಯಿತು. ಇಂಥದೇ ಸನ್ನಿವೇಶದಲ್ಲಿ ಅವರು ಸ್ವತಃ ತಾಯಿಯಿಂದಲೂ ನಿರ್ಲಕ್ಷ್ಯಕ್ಕೊಳಗಾಗಿದ್ದರು. ನಿಮ್ಮ ತಾಯಿಯ ಶ್ರಮ ಅನೂಹ್ಯವಾದದ್ದು. ನಿಮ್ಮ ಪುಸ್ತಕದ ಬಿಡುಗಡೆ ಸಮಾರಂಭ ಯಶಸ್ವಿಯಾಗಲಿ.

ಸವಿಗನಸು said...

ಪ್ರಕಾಶಣ್ಣ,
"ಹೆಸರೇ ಬೇಡ " ಎಟುಕದಷ್ಟು ಹೆಸರಾಗಲಿ......
ಪುಸ್ತಕ ಬಿಡುಗಡೆಯ ಸಮಾರಂಭ ನಿರೀಕ್ಷೆಗೆ ಮೀರಿ ಯಶಸ್ವಿಯಾಗಲಿ ಎಂದು ಹಾರೈಸುವೆ....
ಅಭಿನಂದನೆಗಳು...

ಶಾಂತಲಾ ಭಂಡಿ said...

ಪ್ರಕಾಶಣ್ಣ...
ಪುಸ್ತಕ ಬಿಡುಗಡೆ ಕಾರ್ಯಕ್ರಮ ಚೆಂದಗಾಣಲಿ. ಮತ್ತೊಮ್ಮೆ ಶುಭಾಶಯ ಮತ್ತು ಅಭಿನಂದನೆ.

ಗೋಪಾಲ್ ಮಾ ಕುಲಕರ್ಣಿ said...

ನಿಮ್ಮ ಪುಸ್ತಕ ಬಿಡುಗಡೆ ಅತ್ಯಂತ ಯಶ್ವಸಿಯಾಗುವದು. All the best.

ಮನಸು said...

ಪ್ರಕಾಶಣ್ಣ
ನಿಮಗೆ ಶುಭವಾಗಲಿ, ಕಾರ್ಯಕ್ರಮ ಯಶಸ್ವಿಯಾಗಲೆಂದು ಮನಪೂರ್ವಕ ಆಶಿಸುತ್ತೇವೆ.
ಪುಸ್ತಕ ನಮಗಾಗಿ ಕಾದಿರಿಸಿ...
ವಂದನೆಗಳು

PARAANJAPE K.N. said...

ಶುಭ ಹಾರೈಕೆಗಳು, ನಾನು ಖಂಡಿತ ಬರುವೆ

ಶಿವಪ್ರಕಾಶ್ said...

ಪ್ರಕಾಶಣ್ಣ,
ತಾಯಿಯ ಮಮತೆ ಬಗ್ಗೆ, ನಿಮ್ಮ ಈ ಲೇಖನ ಮನಕಲುಕುವಂತಿದೆ.
ನನಗೆ ನಿಮ್ಮ ಈ ಲೇಖನ ಬಹಳ ಇಷ್ಟವಾಯಿತು.

ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಬಂದೆ ಬರುತ್ತೇನೆ.
ಅಭಿನಂದನೆಗಳು :)

ಕ್ಷಣ... ಚಿಂತನೆ... bhchandru said...

ಪ್ರಕಾಶಣ್ಣ, ಲೇಖನ ಸೊಗಸಾಗಿದೆ. ನಗುವೇ ಜೀವನ, ಅಳುವೇ ನರಕ... ಹಾಗಿದ್ದಮೇಲೆ ನಗದಿದ್ದರೆ ಹೇಗೆ? ಹೇಗಿದ್ದರೂ ನಗಲೇಬೇಕು!!

ಪುಸ್ತಕ ಬಿಡುಗಡೆಯ ಸಮಾರಂಭ ಯಶಸ್ವಿಯಾಗಲಿ. ನಿಮ್ಮ ಮತ್ತು ನಿಮ್ಮ ಗೆಳೆಯರೆಲ್ಲರ ಪುಸ್ತಕಗಳು, ಬರವಣಿಗೆಗಳು ಮತ್ತಷ್ಟು ಬರಲಿ.

Jagadeesh Balehadda said...

ಪ್ರೀತಿಯ ಕರೆಗೆ ಧನ್ಯವಾದಗಳು ಅಣ್ಣಾ.ನಿಮ್ಮ ಪುಸ್ತಕ ಹಲವಾರು ಬಾರಿ ಮರುಮುದ್ರಣಗೊಳ್ಳಲಿ.ಶುಭ ಹಾರೈಕೆಗಳೊಂದಿಗೆ ಜಗದೀಶ ಬಾಳೆಹದ್ದ.

ರಾಜೀವ said...

ನಿಜ. ಹೇಗಿದ್ದರೂ ನಗಬಹುದು. ಇರುವ ಕಷ್ಟಗಳನ್ನು ಮರೆಯಲು ನಗುವೇ ಅತ್ಯದ್ಭುತ ಔಷದಿ.
ಪುಸ್ತಕ ಬಿಡುಗಡೆಗೆ ಮತ್ತೊಮ್ಮೆ ಅಭಿನಂದನೆಗಳು.
ನಿಮ್ಮ ಮತ್ತು ನಿಮ್ಮ ನಾಗುವಿನ ನಗುಮುಖಗಳನ್ನು ನೋಡಲು ಕಾಯುತ್ತಿದ್ದೇನೆ.

Shree said...

anna all the best, b'lore ge bandre batte, ille andre manege bandu wish maadi book tagandu hogte ok na?

smile kodo anna

guruve said...

ಪ್ರಕಾಶ್ ರವರೆ,
ಅಭಿನಂದನೆಗಳು. ಕಾರ್ಯಕ್ರಮ ಮತ್ತು ಪುಸ್ತಕ ಎರಡಕ್ಕೂ ಅಭೂತಪೂರ್ವ ಯಶಸ್ಸು ಸಿಗಲೆಂದು ಹಾರೈಸುವೆ..

ಬಿಸಿಲ ಹನಿ said...

ಪ್ರಕಾಶ್ ಅವರೆ,
ಕಂಗ್ರಾಚುಲೇಶನ್ಸ್! ಅಂತೂ ನಿಮ್ಮ ಪುಸ್ತಕ ಹೊರಬರುತ್ತಿದೆ. ಬರಿ ಬ್ಲಾಗ್ ಓದುಗರಿಗೆ ಮಾತ್ರ ಸೀಮಿತವಾಗಿದ್ದ ನಿಮ್ಮ (ಬಹಳಷ್ಟು) ಹಾಸ್ಯ ಲೇಖನಗಳು ಕನ್ನಡಿಗರಿಗರೆಲ್ಲರಿಗೂ ತಲುಪಿ ಅವರು ನಗುವಂತಾಗಲಿ. ಆದರೆ ಅವತ್ತು ನಾನಲ್ಲಿರಲಾಗುವದಿಲ್ಲವಲ್ಲ ಎನ್ನುವದಷ್ಟೆ ನನ್ನ ಕೊರಗು ಹಾಗೂ ಅನೇಕ ಬ್ಲಾಗ್ ಮಿತ್ರರು, ಸಾಹಿತಿಗಳನ್ನು ಭೇಟಿ ಮಾಡುವ ಅವಕಾಶ ತಪ್ಪಿ ಹೋಗುತ್ತದಲ್ಲ ಎನ್ನುವದೇ ಬೇಸರ. ನಿಮ್ಮನ್ನು, ನಿಮ್ಮ ಪುಸ್ತಕವನ್ನು, ಜೊತೆಗೆ ಕಾಫಿ ತಿಂಡಿಯನ್ನು ಸಹ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇರಲಿ. ದೂರದದಿಂದಲೇ ಶುಭಹಾರೈಸುತ್ತೇನೆ. Wish you all the success! and happy book releasing!

ಸುಮ said...

prakashanna all tha best. samarambhakke barakku anta aase iddu. omme barlaadiddare pustakavannantu kalisikodakku addillya?

ಅಂತರ್ವಾಣಿ said...

ನಿಮ್ಮ ಆಮಂತ್ರಣಕ್ಕೇ ಕಾಯುತ್ತಿದೆ. ನಿಮಗೆ ಶುಭವಾಗಲಿ. ಮತ್ತಷ್ಟು ಪುಸ್ತಕಗಳು ಬರಲಿ. ನಮ್ಮ ಹೊಟ್ಟೆಯಲ್ಲಿ ಹುಣ್ಣಾಗಲಿ.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಶುಭವಾಗಲಿ
ಪುಸ್ತಕ ಬಂದಾಗ ತೆಗೆದುಕೊಳ್ಳುತ್ತೇನೆ,
ಇಲ್ಲದಿದ್ದರೆ ಯಾರಿಂದಲಾದರೂ ತರಿಸಿಕೊಳ್ಳುತ್ತೇನೆ
ಹಾರೈಕೆಗಳೊಂದಿಗೆ
ಗುರು ,

ಸಿಮೆಂಟು ಮರಳಿನ ಮಧ್ಯೆ said...

ದಿನಕರ...

ನೀವು ಕೇಳೋದು ಹೆಚ್ಚೊ... ನಾವು ಕಳಿಸೋದು ಹೆಚ್ಚೊ...?
ಕಾರ್ಯಕ್ರಮ ಮುಗಿದ ಮೇಲೆ....
ಆ ವ್ಯವಸ್ಥೆಯನ್ನೆಲ್ಲ ಮಾಡುವೆ...

ನಿಮ್ಮ ಅಭಿಮಾನ, ಪ್ರೀತಿಗೆ ಹೃದಯ ತುಂಬಿ ಬಂದಿದೆ ದಿನಕರ...

ಕಾರ್ಯಕ್ರಮಕ್ಕೆ ದಯವಿಟ್ಟು ಬರಲು ಪ್ರಯತ್ನಿಸಿ....

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್ ಜೀ...

ತುಂಬಾ ಖುಷಿಯಾಯ್ತು...
ದಯವಿಟ್ಟು ಬನ್ನಿ...
ಕಾಯ್ತಾ ಇರ್ತೇನೆ....

ಸಿಮೆಂಟು ಮರಳಿನ ಮಧ್ಯೆ said...

Thank you chukkichittaaraa...!

plzzzzz come....

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಯಣ ಸರ್...

ಹೌದು ನಾಗು ಬರ್ತೀನಿ ಅಂತ ಹೇಳಿದ್ದಾನೆ...
ತನ್ನ ಭಾರದ" ಜೀವನದೊಂದಿಗೆ...

ಅಂದು ಬಹುಷಃ "ನಾಗು" ನೋಡಲು ಬಹಳ ಜನ ಉತ್ಸುಕರಾಗಿದ್ದಾರೆ..
ನಾಗೂ ಸಹ ಕಾತುರದಿಂದ ಇದ್ದಾನೆ....

ಕಾರ್ಯಕ್ರಮಕ್ಕೆ ದಯವಿಟ್ಟು ಬನ್ನಿ...

ಸಿಮೆಂಟು ಮರಳಿನ ಮಧ್ಯೆ said...

ಅಂತರಂಗದ ಮಾತುಗಳು...

ಶ್ಯಾಮಲಾರವರೆ...

ತುಂಬಾ.. ತುಂಬಾ ಥ್ಯಾಂಕ್ಸ್..

ದಯವಿಟ್ಟು ಬನ್ನಿ ಕಾರ್ಯಕ್ರಮಕ್ಕೆ...

ಸಿಮೆಂಟು ಮರಳಿನ ಮಧ್ಯೆ said...

ಸಪ್ತವರ್ಣ...

ಕಾರ್ಯಕ್ರಮಕ್ಕೆ ದಯವಿಟ್ಟು ಬನ್ನಿ...
ನಿಮ್ಮನ್ನು ಗುರುತು ಹಿಡಿದು ಮಾತನಾಡಿಸುವ ಭರವಸೆ ನನಗಿದೆ...

ದಯವಿಟ್ಟು ಬನ್ನಿ...

ಸಿಮೆಂಟು ಮರಳಿನ ಮಧ್ಯೆ said...

ಸವಿಗನಸು( ಮಹೇಶ್..)

ನಿಮ್ಮನ್ನೆಲ್ಲ ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ...
ನೀವೆಲ್ಲ ಬರುತ್ತಿದ್ದರೆ ತುಂಬಾ ಚೆನ್ನಾಗಿರ್ತಿತ್ತು...

ನಿಮ್ಮ, ಆಝಾದರ ಕಾರ್ಯಕ್ರಮವೂ ಯಶಸ್ವಿಯಾಗಲಿ...

ಫೋಟೊಗಳನ್ನು ನಿಮ್ಮ ಬ್ಲಾಗಿನಲ್ಲಿ ಹಾಕಿ...

ಶುಭ ಹಾರೈಕೆಗಳಿಗೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ...

ನಿಮ್ಮನ್ನೆಲ್ಲ ಬಹಳ ನೆನಪು ಮಾಡಿಕೊಳ್ಳುತ್ತೇವೆ...
ನಿಮ್ಮ ಶುಭ ಕಾಮನೆಗಳಿಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಗೋಪಾಲ್...

ನಿಮ್ಮ ಶುಭ ಹಾರೈಕೆ ಆನೆಯಷ್ಟು ಬಲ ತಂದಿದೆ...
ಕಾರ್ಯಕ್ರಮಕ್ಕೆ ದಯವಿಟ್ಟು ಬನ್ನಿ...

ಪ್ರಕಾಶಣ್ಣ..

ಸಿಮೆಂಟು ಮರಳಿನ ಮಧ್ಯೆ said...

ಮನಸು...

ನೀವು ಪುಸ್ತಕ ಕೇಳೋದು ಹೆಚ್ಚೊ..
ನಾನು ಕೊಡೋದು ಹೆಚ್ಚೊ..?

ನಿಮ್ಮ ಹೆಸರಲ್ಲಿ ಪುಸ್ತಕ ಇಟ್ಟಿರುತ್ತೇನೆ..

ತುಂಬಾ... ತುಂಬಾ ಥ್ಯಾಂಕ್ಸ್...

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ...

ತುಂಬಾ ತುಂಬಾ ...
ಸಿಕ್ಕಾಪಟ್ಟೆ ಥ್ಯಾಂಕ್ಸ್...

ದಯವಿಟ್ಟು ಬನ್ನಿ... ಕಾಯುತ್ತೇನೆ...

ಸಿಮೆಂಟು ಮರಳಿನ ಮಧ್ಯೆ said...

ಶಿವು....

ಅಮ್ಮನ ಮಮತೆ, ಅವರ ತಾಳ್ಮೆ...
ನಮ್ಮಂಥ ಗಂಡಸರಿಗೆ ಅರ್ಥವೇ ಆಗುವದಿಲ್ಲ...

ಅದು ಅರ್ಥವಾಗಬೇಕಾದರೆ ಬಹುಷಃ ಹೆಣ್ಣು ಜನ್ಮವೇ ಬೇಕಾಗ ಬಹುದು...

ದಯವಿಟ್ಟು ಬನ್ನಿ..ಕಾರ್ಯಕ್ರಮಕ್ಕೆ...

Annapoorna Daithota said...

ಕಾರ್ಯಕ್ರಮದ ಆಹ್ವಾನಕ್ಕೆ ಧನ್ಯವಾದಗಳು, ಬರಲಾಗದಿರುವುದಕ್ಕೆ ಬೇಸರ,
ಅಂಕಿತಾಳಿಂದ ಪುಸ್ತಕ ಖರೀದಿಸಿ ಓದುತ್ತೇನೆ.

ಶುಭವಾಗಲಿ...

Umesh Balikai said...

ಪ್ರಕಾಶ್ ಸರ್,

ಪುಸ್ತಕ ಬಿಡುಗಡೆ ಸಮಾರಂಭ ನಿರಾತಂಕವಾಗಿ ಯಶಸ್ವಿಯಾಗಿ ಸಾಗಲಿ. ಕೆಲವು ವೈಯಕ್ತಿಕ ಕಾರಣಗಳಿಂದಾಗಿ ನನಗೆ ಬರಲಾಗುತ್ತಿಲ್ಲ. ಕ್ಷಮೆಯಿರಲಿ. ಇನ್ನೊಂದು ದಿನ ನಿಮ್ಮನ್ನು ಮುಖತಃ ಭೇಟಿ ಮಾಡಿ ಶುಭ ಹಾರೈಸಿ ನಿಮ್ಮ ಪುಸ್ತಕದ ಪ್ರತಿ ಪಡೆಯುತ್ತೇನೆ. ಬ್ಲಾಗು ಮಿತ್ರರನ್ನೆಲ್ಲ ಭೇಟಿ ಮಾಡುವ ಅಪೂರ್ವ ಅವಕಾಶಾನ ಮಿಸ್ ಮಾಡಿಕೊಳ್ತಾ ಇದೀನಿ ಅನ್ನೋ ಬೇಜಾರು ಇದೆ. ಆದರೆ ಅನಿವಾರ್ಯ ಕಾರಣಗಳು.

ನಿಮ್ಮ ಸಾಹಿತ್ಯ ಕೃಷಿ ಮುಂದುವರೆಯಲಿ. ನಿಮಗೆಶುಭವಾಗಲಿ.

-ಉಮೇಶ್

ಚಿತ್ರಾ said...

ಪ್ರಕಾಶಣ್ಣ
"ಹೆಸರೇ ಬೇಡ " ದ ಪುಸ್ತಕ ಖಂಡಿತಾ ಅತ್ಯಂತ ಹೆಸರುವಾಸಿಯಾಗುತ್ತದೆ ಎನ್ನುವುದು ನನ್ನ ವಿಶ್ವಾಸ .
ಕಾರ್ಯಕ್ರಮ ಚಂದವಾಗಿ ನೆರವೇರಲಿ ಎನ್ನುವುದು ನನ್ನ ಮನದಾಳದ ಹಾರೈಕೆ . ನಮ್ಮ ಬ್ಲಾಗ್ ಮಿತ್ರರು ತಮ್ಮ ಪುಸ್ತಕಗಳನ್ನು ಬಿಡುಗಡೆ ಮಾಡಿ ಕನ್ನಡ ಸರಸ್ವತಿಯನ್ನು ಶ್ರೀಮಂತಗೊಳಿಸುತ್ತಿರುವುದಕ್ಕೆ ನಮಗೆ ಬಹಳ ಹೆಮ್ಮೆಯಾಗುತ್ತಿದೆ. ಪುಸ್ತಕವನ್ನು ಕೈಯಲ್ಲಿ ಹಿಡಿಯಲು ಕಾಯಲೇ ಬೇಕಾದ ಅನಿವಾರ್ಯತೆ ನನ್ನದು .
ಪರವಾಗಿಲ್ಲ ಕಾಯುತ್ತೇನೆ.
ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು .

ವಿನುತ said...

ನಿಜ. ನಗಲು ಬೇಕಾಗಿರುವುದು ನಗಬೇಕೆಂಬ ಮನಸ್ಸು! ಅದ್ಭುತವಾಗಿ ಹೇಳಿದ್ದೀರಿ.
ಪುಸ್ತಕ ಬಿಡುಗಡೆಗೊಳ್ಳುತ್ತಿರುವುದಕ್ಕೆ ಅಭಿನಂದನೆಗಳು, ಕಾರ್ಯಕ್ರಮ ಯಶಸ್ವಿಯಾಗಲಿ ಎಂಬ ಹಾರೈಕೆಯೊಂದಿಗೆ.

Ramesh said...

ಅಣ್ಣಾ,ನಿಮ್ಮಂತೆ ನಾನು! ತಂದೆ ಪ್ರೀತಿಕಾಣದ,ತಂದೆ ಎಂಬ ಅಗೋಚರ ವ್ಯಕ್ತಿ (?!) ಮಾತಿಗಸ್ಟ್ಟೆ ನಿಲುಕಿದ್ದು.... ! ಮುದ್ದಿಸುವ,ಬೇಕೆನ್ದಗಲೆಲ್ಲ ಕೇಳಿದ್ದು ಕೊಡಿಸುವ,ಜಾತ್ರೆಲಿ ತಲೆಮೇಲೆ ಹೊತ್ತು ತೇರು ತೋರಿಸುವ,ಜನಜಂಗುಳಿ ಜನರ ನಡುವೆ ಬಣ್ಣಬಣ್ಣದ ಗಿರಿಗಿತ್ಲಿ ಕೊಡಿಸುವ...ಆಸ್ಕೆಂಡಿ ತಿನ್ನಿಸುವ ಪ್ರೀತಿಯ ಅಪ್ಪ ನನ್ನ ಪಾಲಿಗೆ ಕಾಣಲಿಲ್ಲ...ನಾ ಹುಟ್ಟುವ ೩೩ ದಿನ ಮೊದಲೇ ದೂರವಾದ....ಅಣ್ಣಾ ದಯವಿಟ್ಟು ,ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ - ಆ ಸಂಬ್ರಮದಲ್ಲಿ, ಧರೆಗೆ ತಂದ ಆ ಅಪ್ಪ ನೆನಪಾಗಲಿ....ನಿಮ್ಮ ಪುಸ್ತಕ ಪ್ರೀತಿ ಇನ್ನೂ ಹೆಚ್ಚಾಗಲಿ ಮತ್ತು ಅಚ್ಚಾಗುತ್ತಿರಲಿ..೨ ನೆ ಪುಸ್ತಕ ಬಿಡುಗಡೆಗೆ ಖಂಡಿತ ಇರುತ್ತೇನೆ...ನನಗಾಗಿ ಒಂದು ಪುಸ್ತಕ ಎತ್ತಿ ಟ್ಟಿರಿ ಆಗದೆ.....ನಿಮ್ಮ ಕಾರ್ಯಕ್ರಮಕ್ಕೆ ತುಂಬು ಹ್ರದಯದ ಹಾರಯ್ಕೆ......

ರವಿಕಾಂತ ಗೋರೆ said...

All the best....

ಚಂದಿನ | Chandina said...

ನಮಸ್ಕಾರ ಪ್ರಕಾಶ್ ಹೆಗಡೆ ಅವರೆ,

ಹೆಸರೇ ಬೇಡ....ಈಗಾಗಲೇ ಸಾಗಷ್ಟು ಹೆಸರು ಮಾಡಿರುವುದಕ್ಕಾಗಿ ಹೃದಯಪೂರ್ವಕ ಅಭನಂದನೆಗಳು.

ಕಾರ್ಯಕ್ರಮ ಅಮೋಘವಾದ ಯಶ ಕಾಣಲೆಂದು ಹಾರೈಸುವೆ.

ಹೇಗಾದರೂ ಮಾಡಿ ಪುಸ್ತಕದ ಪ್ರತಿ ಪಡೆಯುವೆ.

ನಲ್ಮೆಯ
ಚಂದಿನ

ಸುಧೀಂದ್ರ said...

ಪ್ರಕಾಶಣ್ಣ ... ನಿನಗೆ ಶುಭ ಹಾರೈಕೆ ಗಳು

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನಮ್ಮ ಮನೆಯಲ್ಲಿ ನಾನು, ನನ್ನ ಮಡದಿ ಮತ್ತು ನನ್ನ ತಂದೆ ನಿಮ್ಮ ಪುಸ್ತಕ ಓದಿ ಮುಗಿಸಿದೆವು. ಒಂದೇ ಸಿಟ್ಟಿಂಗಲ್ಲಿ ಓದಿಸಿಕೊಂಡಿತು. ಒಳ್ಳೆ ಮನಂಜನಾ ಚಿತ್ರ ನೋಡಿದ ಅನುಭವ. ಈಗ ಓದಲು ನಮ್ಮ ಅಜ್ಜಿಗೂ ಕೊಟ್ಟಿರುವೆ . ನಾಳೆಗೆ ಚಿಯರ್ಸ್...

namana bajagoli said...

ಆತ್ಮೀಯರೇ ವಿಜಯ ಕರ್ನಾಟಕ ಲವಲವಿಕೆ ಪುಟ ೫ ಬುಕ್ ಚೆಕ್ ಹೆಸರೇ ಬೇಡ...............ಅಭಿನಂದನೆಗಳು...........
..http://www.vijaykarnatakaepaper.com/epaper/svww_zoomart.php?Artname=20091115l_003101002&ileft=243&itop=546&zoomRatio=130&AN=20091115l_೦೦೩೧೦೧೦೦೨

ಕೃಷಿಕನ ಕಣ್ಣು said...
This comment has been removed by the author.
ಕೃಷಿಕನ ಕಣ್ಣು said...

Prakashaa...
congrats!..congrats!..
Pustakakke abhinandanegalu.
"Hesare...Beda.."diddaruu pustakavu 'prakaash'isuvudaralli samshayavilla!.'Prakaasha'da gunave adu!. sanna gyaap sikkaruu adu horahommuttade!.
Sorry kano..samaarambhakke baralaagalilla. Santooshada sandarbhavannu tappisikondantenisitu.(nanage naane sorry helikollabeku annu.)
Pustaka noodalu kaataranaagiruvenu.
Idu praarambha andukolluttene.
Innashtu pustakagalannu nirikshisoonave?.
(Ninna chikkappa nanage gurugalu annuvudu nanna hemme!)
Shivu & Divakara Hegdeyavariguu abhinandanegalu.
pritiyinda....
Nagendra Muthmurdu.

namana bajagoli said...

ನಮಸ್ತೆ,ಈ ದಿನ ಉದಯವಾಣಿಯಲ್ಲಿ......... http://www.udayavani.com/epaper/PDF//2009-11-16/Man16110906M.pdf

Keshav Kulkarni said...

ಪ್ರಕಾಶ,

ಅಭಿನಂದನೆಗಳು. ನಿಮ್ಮ ಪುಸ್ತಕಕ್ಕಾಗಿ ಕಾಯುತ್ತಿದ್ದೇನೆ.

- ಕೇಶವ