Tuesday, July 14, 2009

ಜನಕ್ಕೆ ನಮ್ಮ ಬಗ್ಗೆ ಒಳ್ಳೆ ಅಭಿಪ್ರಾಯ ಬರಲಿಕ್ಕೆ .. ನಮ್ಮ ಒಡನಾಟವಷ್ಟೇ.. ಸಾಲೋದಿಲ್ಲ......


ನನ್ನ ಬಳಿ ಒಂದು ವ್ಯವಸ್ಥಿತವಾದ ಟೀಮ್ ಕಟ್ಟಲಿಕ್ಕೆ ಪ್ರಯತ್ನ ಮಾಡ್ತಾನೆ ಇರ್ತೀನಿ...

ನಂಬಿಗೆ ಜನರನ್ನು ಬಹಳ ಕಷ್ಟಪಟ್ಟು ಕಲೆ ಹಾಕಿದ್ದೇನೆ..
ಹಾಕುತ್ತಿದ್ದೇನೆ... ಇದು ನಿರಂತರ ಕಾರ್ಯ....

ನಮ್ಮ ಕೆಲಸದಲ್ಲಿ ಅದು ಅನಿವಾರ್ಯ ಕೂಡ..

ಮೊನ್ನೆ
ಒಂದು ರೂಫ್ ಕಾಂಕ್ರಿಟಿಗೆ ತಯಾರಿ ನಡೆಸಿದ್ದೆ..

ಮೇಸ್ತ್ರಿ ರಾಜೇಂದ್ರ ನನ್ನ ಬಳಿ ಹೇಳಿದ...

"ಸಾರ್..ಬಾರ್ ಬೆಂಡರ್ ರಾಮಣ್ಣನಿಗೆ ಆರಾಮಿಲ್ಲ.
ವಯಸ್ಸಾಯಿತು
...
ಅವರಿಗೆ
ಕಂಬಿ ಕಟ್ಟಲಿಕ್ಕೆ ಬರ್ಲಿಕ್ಕೆ ಆಗಲ್ಲವಂತೆ..

ಅವನ
ಮಗ ಕೆಲಸಕ್ಕೆ ಬಂದಿದ್ದಾನೆ...
ಸ್ವಲ್ಪ "ಐಲು" ಥರಹ ಕಾಣ್ತಾನೆ...
ಅವನು ತಿಕಲ....
ನಮ್ಮನೆ ಪಕ್ಕದಲ್ಲಿದ್ದ.
..
ಅವನ ಕೆಲಸ
ನೀವೊಮ್ಮೆ ಚೆಕ್ ಮಾಡ್ಬಿಡಿ.."

ರಾಮಣ್ಣ
ನನ್ನ ಬಳಿ ಕಳೆದ ಹದಿನೈದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ...

ತುಂಬಾ
ಸಭ್ಯ ಮತ್ತು ಒಳ್ಳೆಯ ಮನುಷ್ಯ..


"ಸರಿ.. ಮೇಸ್ತ್ರಿ.. ನಾನು ಚೆಕ್ ಮಾಡ್ತೇನೆ ಬಿಡಿ " ಅಂದೆ...

ಎಲ್ಲ ಡಿಟೇಲಾಗಿ ಚೆಕ್ ಮಾಡಿದೆ ...
ಎಲ್ಲವೂ
ಸರಿ ಇತ್ತು...

ಹುಡುಗನನ್ನು ಗಮನಿಸಿದೆ...

ಬಹಳ ವಿಚಿತ್ರವಾಗಿದ್ದವು ಅವನ ಡ್ರೆಸ್ಸುಗಳು...

"ಏನಪ್ಪಾ... ನಿನ್ನ ಹೆಸರು..? ರಾಮಣ್ಣ ಬರ್ಲಿಲ್ವಾ..?" ಅಂತ ಕೇಳಿದೆ.

"ಸಾರ್... ರಾಮಣ್ಣಂಗೆ ಹುಶಾರಿಲ್ಲ..
ನಾನು ಅವರ ಮಗ..

ನನ್ನ
ಹೆಸರು ಗೋವಿಂದ ಅಂತ ಎಲ್ಲರೂ ನನ್ನನ್ನು "ಗೋವು" ಅಂತ ಕರಿತಾರೆ..."

ಆತನನ್ನು
ನೋಡಿದೆ...
ಬೇಜವಾಬ್ದಾರಿ
ಹುಡುಗ ಅನಿಸುತ್ತಿತ್ತು...


ಆತನ
ವಿಚಿತ್ರ ವೇಷ ಭೂಷಣ ...
ಗೋಕರ್ಣದ "ಓಮ್ ಬೀಚ್" ನೆನಪಾಗುತ್ತಿತ್ತು...

" ನಿಮಗೆ ಡ್ರಾಯಿಂಗ್ ಓದಲು ಬರ್ತದೆಯಾ...?
ಅನುಭವ
ಇದೆಯಾ...?
ಇದು...
ಐದು ಟನ್ ಸ್ಟೀಲ್ ಕೆಲಸ..
ಅಪ್ಪನ
ಸಂಗಡ ನಿನ್ನನ್ನು ಎಲ್ಲೂ ನೋಡಿಲ್ಲವಲ್ಲಪ್ಪ..."


"ಸಾರ್... ನಾನು ಅಪ್ಪನ ಸಂಗಡ ಕೆಲಸ ಮಾಡಿಲ್ಲ...
ಆದರೆ
ಬಾರ್ ಬೆಂಡಿಂಗ್ ಕೆಲ್ಸ ಗೊತ್ತು...
ಬೇರೆಯವರ ಬಳಿ ಕೆಲಸ ಮಾಡಿ ಕಲ್ತಿದೀನಿ...

ಡ್ರಾಯಿಂಗ್
ಎಲ್ಲ ಓದ್ತೀನಿ..

ಪಿಯೂಸಿ
ತನಕ ಇಂಗ್ಲೀಷ್ ಮೀಡಿಯಮ್ ನಲ್ಲಿ ಓದಿದೀನಿ..
ನನ್ನ ಕೆಲಸ ನೀವೇ ಚೆಕ್ ಮಾಡಿ ನೋಡಿ.."

ನನಗೆ ಮೇಸ್ತ್ರಿ ಮಾತು ನೆನಪಾಯಿತು...
"ಐಲು"...!!
ನೋಡಿದರೆ ಆ ಥರಹ ಇದ್ದಿದ್ದು ಹೌದು....

ಡ್ರಾಯಿಂಗ್ ತೋರಿಸಿ ಕೆಲವು ಪ್ರಶ್ನೆ ಕೇಳಿದೆ...
ಸರಿಯಾದ
ಉತ್ತರ ಕೊಟ್ಟಿದ್ದ..

ಅದೂ
ಇಂಗ್ಲೀಷಿನಲ್ಲಿ...
!
ನನಗೆ
ಖುಷಿಯಾಯಿತು...

ಕೆಲವೊಮ್ಮೆ
ವೇಶ ಭೂಷಣಕ್ಕೂ,... ಕೆಲಸಕ್ಕೂ ಸಂಬಂಧ ಇರುವದಿಲ್ಲ...

"ನೋಡಪ್ಪ....
ಏನೇ...
ಡೌಟು ಬಂದಲ್ಲಿ ಫೋನ್ ಮಾಡು.
ಇಪ್ಪತ್ತು ನಾಲ್ಕು ಗಂಟೆ ನನ್ನ ಮೊಬೈಲು ಚಾಲು ಇರ್ತದೆ..."


ಗೋವು ನಿಂತೇ ಇದ್ದ...

"ಸರ್... ನನ್ನದು ಒಂದೆರಡು ರಿಕ್ವೆಸ್ಟ್ ಇದೆ..."

ರಾಮಣ್ಣ
ನನ್ನ ಬಳಿ ಯಾವತ್ತೂ ರೇಟಿನ ಬಗ್ಗೆ ಚಕಾರ ಮಾತಾಡಿರಲಿಲ್ಲ...

ಈ ಹುಡುಗ ರೇಟಿನ ಬಗ್ಗೆ ಕೆಳುತ್ತಾನಾ...?

"ಕೇಳಪ್ಪ.."


"ಸರ್...
ನಾನು ಪ್ರತಿದಿನ ನೀವು ಬಂದಾಗ ನಮಸ್ಕಾರ ಮಾಡುವದಿಲ್ಲ...
ನನ್ನ
ಮನಸ್ಸು ಬಂದರೆ ಮಾಡ್ತೇನೆ...
ನನ್ನ ಪಾಡಿಗೆ ಕೆಲಸ ಮಾಡ್ತಾ ಇರ್ತೇನೆ..

ನನಗೆ
ಎಫ್.ಎಮ್ ಹಾಡು ಕೇಳ್ತಾ ಕೆಲಸ ಮಾಡೊ ಅಭ್ಯಾಸ...
ಪ್ಲೀಸ್ ಇಲ್ಲ ಅನ್ನ ಬೇಡಿ.."


" ನೋಡಪ್ಪ...
ನಮಸ್ಕಾರ ಏನೂ ಬೇಕಾಗಿಲ್ಲ...
ಕೆಲಸ ಸರಿ ಮಾಡು..
ಮಾಡುವಾಗ ನಿನ್ನ ಲಕ್ಷ್ಯ ಬೇರೆಕಡೆಗೆ ಹೋಗಿ ಬಿಡ್ತದೆ ..
ಹಾಗಾಗಿ
ಹಾಡು ಬೇಡ ಅನ್ನುವದು..

ಇದು ಏಸಿ ರೂಮಿನ ಕೆಲಸ ಅಲ್ಲ..
ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಅಪಾಯ.."

"ಅಂಥಹ ಸಮಯದಲ್ಲಿ ರೆಡಿಯೋ ಆಫ್ ಮಾಡ್ತೀನಿ ಸರ್"

"ಆಯ್ತಪ್ಪಾ
..." ಅಂದೆ....


ನನಗೆ ಎಲ್ಲೋ ಒಂದು ಕಡೆ ಅಳುಕು ಇದ್ದುದರಿಂದ...
ದಿನಾ ಬಂದಾಗ ಅವನ ಕೆಲಸ ಚೆಕ್ ಮಾಡ್ತಿದ್ದೆ...

ಎಲ್ಲ
ಸರಿಯಾಗಿಯೇ ಮಾಡ್ತಿದ್ದ...

ಕೆಲಸದಲ್ಲಿ
ರಾಮಣ್ಣನಿಗಿಂತ ಬಹಳ ಚುರುಕು...
!

ಒಂದು
ದಿನ ಮುಂಚಿತವಾಗಿ ಮುಗಿಸಿ ಬಿಟ್ಟ...
!

ನನಗೆ
ಖುಷಿಯಾಯಿತು...

ಲೆಕ್ಕಾಚಾರ
ಮಾಡಿ ಹಣ ಕೊಟ್ಟ ಮೇಲೆ ಕೇಳಿದೆ...

"ಏನಪ್ಪಾ... ಗೋವು....?
ನಮ್ಮ ಮೇಸ್ತ್ರಿ.. ಯಾಕೆ ನಿನ್ನನ್ನು ಇಷ್ಟ ಪಡೋದಿಲ್ಲ...?
ಏನಾದ್ರೂ
ಜಗಳ ಆಗಿತ್ತೇನು..?"

"ಏನೂ ಇಲ್ಲ ಸಾರ್...
ನಾನು ತುಂಬಾ ಸ್ಟ್ರೇಟ್...

ಕೇಳುವದನ್ನು
,..
ಅನಿಸಿದ್ದನ್ನು ನೇರವಾಗಿ ಕೇಳಿ ಬಿಡ್ತೀನಿ...

ಅದಕ್ಕೆ ನನ್ನ ಕಂಡರೆ ಆಗಲ್ಲ ಅನಿಸ್ತದೆ.."

"ಏನು
ಕೇಳಿದ್ದೆ ಮೇಸ್ತ್ರಿ ಬಳಿ..?"


"ಈ ಮೇಸ್ತ್ರಿ ನಮ್ಮ ಮನೆ ಪಕ್ಕದಲ್ಲಿ ಇದ್ದ...
ಅಜ್ಜನ
ಮನೆಯಲ್ಲಿ ಓದುತ್ತಿದ್ದ ಅವನ ಮಗಳು
..
ಬಹಳ ದಿನಗಳ ನಂತರ ಮನೆಗೆ ಬಂದಿದ್ದಳು...
ಚಂದ ಇದ್ದಳು..

ನಾನು
ಮೇಸ್ತ್ರಿ ಬಳಿ " ಮೇಸ್ತ್ರಿಯಣ್ಣ.. ನಿನ್ನ ಮಗಳು ಚಂದ ಇದ್ದಾಳೆ" ಅಂದೆ...

ಅದಕ್ಕೆ
ಆ ಯಪ್ಪ...
ಬೇಸರ ಮಾಡ್ಕೊಂಡು ಮನೆ ಬೇರೆಕಡೆ ಮಾಡಿದ..

ಹೇಳಿ
ಸಾರ್ ಇದರ ನನ್ನ ತಪ್ಪು ಏನು ಇದೆ?"


"ಆದ್ರೂ .. ನಿನ್ನ ವಯಸ್ಸಿನವರು ಆಥರಹ ಮಾತೋಡಾದು ತಪ್ಪು"

"ಸಾರ್ ಚಂದ ಇದಾಳೆ ಅಂತ ಮನಸ್ಸಲ್ಲಿ ಇಟ್ಕೊಂಡು ..
ಮೇಸ್ತ್ರಿ
ಎದುರಿಗೆ ಹಲ್ಲು ಕಿರಿದರೆ ಸರಿ ಇರ್ತಿತ್ತಾ..?

ನಾನೇನು
ಅವಳ ಬಳಿ ಕೆಟ್ಟದಾಗಿ ನಡ್ಕೊಂಡಿಲ್ಲವಲ್ಲ...

ನನಗೆ ಚಂದ ಕಂಡ್ಲು...
ಅದನ್ನು ನೇರವಾಗಿ ಹೇಳಿದೆ..
ಏನು ತಪ್ಪು..?"


ಹುಡುಗ ನಿಜಕ್ಕೂ ಐಲು ಅನಿಸಿತು....


"ಹಾಗೆಲ್ಲ ಮಾತಾಡ ಬಾರದು...
ಅದು ಸಭ್ಯತೆ ಅಲ್ಲಪ್ಪ...

ಜನ
ನಿನ್ನ ಬಗ್ಗೆ ತಪ್ಪು ಅಭಿಪ್ರಾಯಕ್ಕೆ ಬಂದು ಬಿಡ್ತಾರೆ..."


"ಈ ಜನಕ್ಕೇನು ಸಾರ್...

ನಮ್ಮ
ಬಗ್ಗೆ ಒಳ್ಳೆ ಅಭಿಪ್ರಾಯ ಬರ್ಲಿಕ್ಕೆ..
ನಮ್ಮ ಒಡನಾಟ ಸಾಲೋದಿಲ್ಲ..
ಸಾರ್..
ಅವರಿಗೆ ಇನ್ನೊಬ್ಬರು "ನಮ್ಮ ಬಗ್ಗೆ" ಹೇಳಬೇಕು...

ಬೇರೆಯವರು ನಮ್ಮ ಬಗ್ಗೆ ಹೇಳಿದ್ದರ ಮೇಲೆ..
ನಮ್ಮ ಒಳ್ಳೆತನ ನಿರ್ಧಾರ ಮಾಡ್ತಾರೆ...
ನಾನು
ಎಂಥವನು ಅಂತ ಈ ಮೇಸ್ತ್ರಿಗೆ ಗೊತ್ತಿಲ್ಲವಾ...?

ಸಣ್ಣ
ಇದ್ದಾಗಿಂದ ನೋಡಿಲ್ಲವಾ...?"


"ಏನೇ ಆದ್ರು.. ನೀನು ಹೇಳಿದ ರೀತಿ, ವಿಷಯ ಸರಿ ಕಾಣೋದಿಲ್ಲ...
ನೀನು ಕೆಟ್ಟ ಅರ್ಥದಲ್ಲಿ ಹೇಳಿದ್ದಲ್ಲ ಅಂತ ಮೇಸ್ಟ್ರಿಗೆ ಹೇಳಬೇಕಿತ್ತು..."

" ಸಾರ್... ಜನ...
ನಾನು ಏನು ಹೇಳ್ತಿನೋ ಅದನ್ನು ಕೇಳಲ್ಲ..
ನನ್ನ ಮಾತನ್ನು ಅವರಿಗೆ ಹೇಗೆ ಬೇಕೋ ಹಾಗೆ ಅರ್ಥ ಮಾಡ್ಕೊತಾರೆ...
ಎಲ್ಲರಿಗೂ ಅವರವರದೇ ದ್ರಷ್ಟಿ... ಅವರದ್ದೇ ರೀತಿ...
ನಾವು ಹೀಗೆ ಅಂಥ ಜನಕ್ಕೆ ಆರ್ಥ ಮಾಡ್ಸೋದು ಬಲು ಕಷ್ಟ ಸಾರ್...
ನಮಗೆ ಹೇಗೆ ಬೇಕೋ ಹಾಗೆ ಇದ್ದುಬಿಡಬೇಕು...
ಪ್ರಭುದೇವ ಫಿಲ್ಮಲ್ಲಿ ಹಾಡು ಇದೆಯಲ್ಲ...
ಟೇಕ್ ಇಟ್ ಈಸಿ ಪಾಲಿಸಿ.. ಥರ ಇರಬೇಕು ಸಾರ್...""


ಹೀಗೆ ಮಾತಾಡುತ್ತ ತನ್ನ ಪಲ್ಸರ್ ಬೈಕ್ ಬಳಿ ಬಂದ..

" ಸಾರ್ .. ಈ ನನ್ನ ಬೈಕ್ ನೋಡಿ...

ಇದಕ್ಕೆ ಸೈಕಲ್ ಬೆಲ್ ಇಟ್ಕೊಂಡಿದ್ದೀನಿ..."

ನಾನು ದಂಗಾಗಿ ಹೋದೆ...

ಪಲ್ಸರ್ ಬೈಕು... ಸೈಕಲ್ ಬೆಲ್ಲು...!


"ಏನಪ್ಪ ಇದು ..?
ಬೈಕಿಗೆ ಸೈಕಲ್ ಬೆಲ್ಲ್ ಯಾಕೆ?"

"ಸಾರ್...
ಎಲ್ಲರ ಥರಹ ನಾವು ಯಾಕೆ ಇರ್ಬೇಕು...?
ಸ್ವಲ್ಪ ಡಿಫರಂಟ್ ಇರಬೇಕು ಸಾರ್...

ಅದಕ್ಕೆ
ಸೈಕಲ್ ಬೆಲ್ ಇಟ್ಟಿದ್ದೀನಿ..
ನಾನು ಸ್ವಲ್ಪ ಡಿಫರೆಂಟು ಸಾರ್...

ಹೊಸತನ ಇರಬೇಕು ಸಾರ್..."

ಎನ್ನುತ್ತಾ ಸ್ಟೈಲಾಗಿ ಗಾಡಿ ಸ್ಟಾರ್ಟ್ ಮಾಡಿಕೊಂಡು ಹೋದ...


ಅಷ್ಟರಲ್ಲಿ ಮೇಸ್ತ್ರಿ ಬಂದ...

"ಸಾರ್....
ಅವನ ಬೈಕ್ ಗೆ ಕಾರ್ಪೋರೇಷನ್ ಕಸ ತುಂಬೋ ಗಾಡಿಗೆ ಗಂಟೆ ಇರುತ್ತದಲ್ಲ...
ಅದನ್ನು
ಕಟ್ಟ ಬೇಕಿತ್ತು ..

ಹೊಸತನ ಇರ್ತಿತ್ತು...
ಅಥವಾ ದೇವಸ್ಥಾನದಲ್ಲಿ ಊದೋ ಶಂಖ ಇಟ್ಕೊಂಡ್ರೆ ಒಳ್ಳೆದು...
ಹಿಂದಗಡೆ ಕುತವನು ಊದುತ್ತಾ ಹೋದರೆ ...
ಇನ್ನೂ ಹೊಸತನ ಇರ್ತದೆ...
......
ಅಹಾ...!!..
ಏನು ಜನಾನೋ...!!
ಏನು ವಿಚಾರನೋ...
!!
ತಲೆ
ತಗೊಂಡು ಗೊಡೆಗೆ ಚಚ್ಕೋ ಬೇಕು
...!!
ಎಲ್ಲ
ಸಿನೇಮಾ ಪ್ರಭಾವ ಸಾರ್...
ಮಕ್ಕಳು ಎಕ್ಕುಟ್ಟುಹೋಗ್ತಾ ಇವೆ...
ಸಾರ್....
ಹುಡುಗರ ..
ಆಚಾರ ವಿಚಾರ..
ರೀತಿ, ನೀತಿ ಎಲ್ಲ ಸಿನೆಮಾ ಟಾಕಿಸಿನಲ್ಲಿ ತಯಾರಾಗ್ತದೆ...."

ನಾನು ತಲೆ ಹಾಕ ಬೇಕೋ ಬೇಡವೋ ಅಂತ ವಿಚಾರ ಮಾಡತೊಡಗಿದೆ......


( ಕೆಲಸ ಕಡಿಮೆ ಇದ್ದರೂ ಬ್ಯೂಸಿಯಾಗಿದ್ದೇನೆ...
ಸಂಗಡ ಒಂದು ಕೊಲೆಯ ಸುತ್ತಮುತ್ತದ ಕಥೆ ಬರೆಯಲು ತೊಡಗಿದ್ದೇನೆ..
"ಕೊಲೆ " ಆಯಿತೆಂದರೆ ಒಂದು ವ್ಯಕ್ತಿಯದಲ್ಲ...
ಅಲ್ಲಿ ಬಹಳಷ್ಟು ಕೊನೆಯಾಗುತ್ತದೆ... ಕೊಲೆಯಾಗುತ್ತದೆ...
ಸಸ್ಪೆನ್ಸ್, ರಹಸ್ಯ ಇದ್ದೆ ಇರುತ್ತದೆ....
ಅದು ಮಿನಿ ಕಾದಂಬರಿಯಾಗುತ್ತಿದೆ...

20 x 20 ಮ್ಯಾಚಿಂದ ಟೆಸ್ಟ್ ಆಡಲು ಹೊರಟ ಹಾಗಿದೆ...

ಇದು ನನ್ನಿಂದ ಆಗ ಬಹುದಾ..?
ಬರೆದು ಏನು ಮಾಡ ಬೇಕು...?

ಪುಸ್ತಕ...?

ಅದರ ಬಗೆಗೂ ತಯಾರಿ ನಡೆದಿದೆ...
ಬ್ಲಾಗಿನ ಲೇಖನಗಳು ಪುಸ್ತಕರೂಪದಲ್ಲಿ...
ಆ ಲೇಖನಕ್ಕೆ ಬಂದ ಒಳ್ಳೆಯ ಪ್ರತಿಕ್ರಿಯೆಗಳು....
ಅವರ ಬ್ಲಾಗ್ ವಿಳಾಸ , ಹಾಗೂ ಅವರ ಈಮೇಲ್ ಕೂಡ ಹಾಕುವ ವಿಚಾರ ನಡೆಯುತ್ತಿದೆ......
ನನ್ನ ಬ್ಲಾಗಿನ ಫಾಲೋ ಮಾಡುವವರ ವಿವರಗಳು...
ಇತ್ಯಾದಿ....

ನಿಮ್ಮ ಅಭಿಪ್ರಾಯ ತಿಳಿಸುವಿರಾ...?

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...)

ಇಟ್ಟಿಗೆ ಸಿಮೆಂಟ್ ಬ್ಲಾಗ್ ಬಗೆಗೆ ಬರೆದ "ಅಶೋಕ್ ಕುಮಾರ್ " ಅವರಿಗೂ...
ಉದಯವಾಣಿ ಪತ್ರಿಕೆಗೂ ...(೧೩/೦೭/೦೯)
ಅನಂತ ವಂದನೆಗಳು....

ಅತ್ಯುತ್ತಮ ಪ್ರತಿಕ್ರಿಯೆಗಳು...!!
ಸ್ನೇಹಿತ ಶಿವೂ ಅವರ ಅನುಭವ, ದೇಸಾಯಿಯವರ ಅನಿಸಿಕೆ...ಎಲ್ಲ ಓದುಗರ ಪ್ರತಿಕ್ರಿಯೆ ಸೊಗಸಾಗಿದೆ... ಒಳ್ಳೆಯ ಸಂವಾದ ಪ್ರತಿಕ್ರಿಯೆಯಲ್ಲಿ ನಡೆಯುತ್ತಿದೆ .. ಓದಿ...
58 comments:

sunaath said...

ಪ್ರಕಾಶ,
ಇದೇ ಅಲ್ವೇನ್ರೀ generation gapಉ?

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್....

ಇನ್ನೂ ಒಂದೆರಡು ಕೆಲಸದಲ್ಲಿ ಇವನನ್ನು ತೊಡಗಿಸಿ..
ಆಮೇಲೆ ಈತ ಹೇಗೆ ಅಂದು ನಿರ್ಣಯಕ್ಕೆ ಬರ ಬಹುದೇನೋ...

ಅವನು ಮಾತಾಡುತ್ತಿದ್ದುದು..
ಮಾಡುತ್ತಿದ್ದುದು ಸರಿಯಾ..?

ಕೆಲವೊಮ್ಮೆ ತೀರಾ ವಿಚಿತ್ರ ಇವನ ನಡುವಳಿಕೆ..
ಕೆಲಸದಲ್ಲಿ ಪರ್ಫೆಕ್ಟ್..!
ಅಲ್ಲಿ ಮಾತನಾಡುವ ಹಾಗಿಲ್ಲ...

ಆ ವಯಸ್ಸಿನ ಹುಡುಗಾಟಿಕೆ ಬುದ್ಧಿ...

ನನಗೆ ಬೇಕಾಗಿದ್ದು ಕೆಲಸವೊಂದೆ ಅಂದು ಕೊಂಡರೆ ನನ್ನ ಬಳಿ ಕೆಲಸ ಮಾಡಲು ಅಡ್ಡಿ ಇಲ್ಲ. ಅಲ್ಲವಾ..?

ಪ್ರತಿಕ್ರಿಯೆಗೆ ಧನ್ಯವಾದಗಳು..

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಪಲ್ಸರ್ ಗಾಡಿಗೆ ಸೈಕಲ್ ಬೆಲ್ಲು...Not a bad idea.. :-)

shivu said...

ಪ್ರಕಾಶ್ ಸರ್,

ಕೆಲವೊಮ್ಮೆ ವೇಶ ಭೂಷಣಕ್ಕೂ,... ಕೆಲಸಕ್ಕೂ ಸಂಬಂಧ ಇರುವದಿಲ್ಲ...

ಈ ಮೇಲಿನ ಮಾತು ಸತ್ಯ. ನನಗೂ ಈ ಅನುಭವವಾಗಿದೆ...

ಹುಡುಗನ ಹೊಸತನ ನನಗೆ ಇಷ್ಟವಾಯಿತು. ಅವನನ್ನು under estimate ಮಾಡುವುದಕ್ಕಿಂತ ಅವನ ಕೆಲಸದ ಕಡೆಗೆ ಗಮನ ಕೊಡುವುದು ಮುಖ್ಯ. ಮತ್ತೆ ಪಲ್ಸರ್ ಗಾಡಿಗೆ ಬೆಲ್ಲು. ಅದು ಮಜಕೊಡುತ್ತೆ. ಸ್ವಲ್ಪ ಅವನನ್ನು ಗಮನಿಸಿ ತೀರ ಬಿನ್ನವೆನಿಸಬಹುದು.

ಮತ್ತೆ FM ಕೇಳಿಕೊಂಡು ಕೆಲಸ ಮಾಡುವುದು ತಪ್ಪಲ್ಲ ಅದರಿಂದ ಸ್ಪೂರ್ತಿ ಬರಬಹುದು. ನಾನು ಪ್ರತಿದಿನ ಗಾಡಿ ಓಡಿಸುವಾಗ ಕಿವಿಗೆ ear phone ಹಾಕಿಕೊಂಡು FM ಕೇಳುತ್ತಿರುತ್ತೇನೆ. ಅದರಿಂದ ನನ್ನ ಬೇಸರ ತಪ್ಪಿದೆ, ಜೊತೆಗೆ ಅನೇಕ ಬಹುಮಾನಗಳು ಬಂದಿವೆ.

ಕೊನೆಯಲ್ಲಿ ಸಂಭಾಷಣೆ ಚುರುಕಾಗಿದೆ.

ಧನ್ಯವಾದಗಳು.

shivu said...

ಪ್ರಕಾಶ್ ಸರ್,

ಇದಕ್ಕಿಂತ ವಿಚಿತ್ರ ನಡುವಳಿಕೆಯಿದ್ದರೂ ಪಕ್ಕಾ ಕೆಲಸ ಮಾಡುವ ನನ್ನ ದಿನಪತ್ರಿಕೆ ಹುಡುಗರಿದ್ದಾರೆ. ನಿಮ್ಮ ಲೇಖನದಿಂದ ಅವರ ಬಗ್ಗೆ ಬರೆಯುವ ಸ್ಪೂರ್ತಿ ಬರುತ್ತಿದೆ..ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಅಜಿತ್ ನಿಮ್ಮನ್ನು Experiment King ಅನ್ನುತ್ತಿದ್ದ. ನಿಮ್ಮ ಬಳಿ ಕೆಲಸ ಮಾಡುವ ಹುಡುಗನ ವಿಚಿತ್ರ ನಡವಳಿಕೆ ಜೊತೆ ಅವನ ಕೆಲಸವನ್ನೂ ಗುರ್ತಿಸಿದ್ದೀರಿ. ಹೊಸ ರೀತಿಯಲ್ಲಿ ಲೋಕವನ್ನು ನೋಡಬೇಕು ನಿಜ ಆದರೆ ಅದು ತೋರಿಕೆಗಾಗಿರಬಾರದು.
ನಿಮ್ಮ ಪುಸ್ತಕದ ಆಲೋಚನೆ ಸೂಪರ್. ಮತ್ತು ಕಾದಂಬರಿ ಬರೆಯಲು ಶುಭ ಹಾರೈಕೆಗಳು. ಓದುಗರಾದ ನಮಗೆ ರಸದೌತಣ.

dileephs said...

ಪ್ರಕಾಶ್ ಸರ್...
ನಿಜವಾಗ್ಲೂ ವೇಷಭೂಶಣಕ್ಕೂ ಮಾಡುವ ಕೆಲಸಕ್ಕೂ ನಿಜಕ್ಕೂ ಸಂಬಂಧ ಇರೋದಿಲ್ಲ. . ಹಾಗೇ ನಂಬಿಗೆ ಜನರನ್ನು ಕಲೆಹಾಕಿಕೊಳ್ಳೋದು ಎಲ್ಲ ಕೆಲಸದಲ್ಲೂ ಅನಿವಾರ್ಯ... ನಿಮ್ಮ ಗೋವು ಸ್ವಲ್ಪ ಡಿಫರೆಂಟ್ ಆಗಿ ಕಂಡ್ರೂ ಇಷ್ಟವಾದ... ಡಿಫರೆಂಟ್ ಆಗಿ ಇದ್ರೆ ತಾನೇ ಜನ ನಮ್ಮನ್ನ ಗುರುತಿಸೋದು...? ಹತ್ತರೊಳಗೆ ಹನ್ನೊಂದು ಆಗೋ ಬದಲು ಈ ರೀತಿ ಇರೋದೆ ಪರವಾಗಿಲ್ಲ ಅನ್ಸತ್ತೆ... ಜನರ ಮನೋಸ್ಥಿತಿಯ ಬಗ್ಗೆಯೂ ಗೋವಿಂದನ ಅಭಿಪ್ರಾಯ ಸರಿಯಾಗೇ ಇದೆ... ಜನರಿಗೆ ನಮ್ಮೊಡನೆ ಒಡನಾಟ ಸಾಲೋದಿಲ್ಲ... ಮೂರನೇ ವ್ಯಕ್ತಿ ನಮ್ಮ ಬಗ್ಗೆ ಹೇಳಿದ್ದನ್ನ ಬೇಗನೇ ನಂಬ್ತಾರೆ... ಅದು ಸುಳ್ಳಾಗಿದ್ದರೂ ಸಹಾ...!!

ಪುಸ್ತಕ ಮಾಡುವ ನಿಮ್ಮ ಆಕಾಂಕ್ಷೆ ಅತೀ ಬೇಗನೇ ಈಡೇರಲಿ... All the best..

Dileep Hegde

ರೂpaश्री said...

ಪ್ರಕಾಶ್ ಅವರೆ,

"ಹುತ್ತವನ್ನು ನೋಡಿ ಹಾವನ್ನು ಅಳೆಯಬಾರದು" ಅಂತಾರೆ. ಹಾಗೆ ವೇಶಭೂಷಣಕ್ಕೂ,ಕೆಲಸಕ್ಕೂ ಸಂಬಂಧ ಇರುವುದಿಲ್ಲ ಅನ್ನೋದಕ್ಕೆ ಈ ನಿಮ್ಮ ಗೋವು ಒಂದು ಒಳ್ಳೆ ಉದಾಹರಣೆ. ಹುಡುಗನ ಪಲ್ಸರ್ ಗಾಡಿಗೆ ಸೈಕಲ್ ಬೆಲ್ಲು ಇಷ್ಟವಾಯಿತು:)
ನಿಮ್ಮ ಪುಸ್ತಕ ಬೇಗ ಹೊರಬರಲೆಂದು ಹಾರೈಸುವೆ!

umesh desai said...

ಹೆಗಡೆ ಅವರೆ ನಿಮ್ಮ ವೃತ್ತಿ ಜೀವನದ ಒಳಗೆ ಹಣಕಿಹಾಕಿ ಅಲ್ಲಿಯ ಜನ ,ಅವರ ಮನ ಪರಿಚಯ ಮಾಡಿಕೊಡುತ್ತಿದ್ದೀರಿ...
ಈ ಕ್ರಿಯೆ ಮುಂದುವರೆಸಿ ಈ ಬೈಕು ,ಬೆಲ್ ಇವುಗಳ ಬಗ್ಗೆ ಕಾಮೆಂಟ ಮಾಡೋಲ್ಲ....ಆದರೆ ನನ್ನ ಗುಜಾರಿಷ್ ಅಂದ್ರೆ
ಯಾಕೆ ನಾವು ಬೇರೆ ವ್ಯಕ್ತಿಗಳ ಬಗ್ಗೆ ನಮ್ಮದೇ ಆದ ಚೌಕಟ್ಟು ನಿರ್ಮಿಸಿಕೊಳ್ಳುತ್ತೇವೆ ಹಾಗೂ ಆ ಚೌಕಟ್ಟಿನಿಂದ ಆ ವ್ಯಕ್ತಿಯ ಚಿತ್ರ
ಹೊರನಡೆದರೆ ಇರಿಸುಮುರಿಸು ಅನುಭವಿಸುತ್ತೇವೆ...?

Ravi Hegde said...

ಆಕಳು ಕಪ್ಪಾದರೆ ಹಾಲು ಕಪ್ಪೆ ?...
ಅದೇ ಥರ ಕೆಲವೊಮ್ಮೆ ವೇಶ ಭೂಷಣಕ್ಕೂ,ಕೆಲಸಕ್ಕೂ ಸಂಬಂಧ ಇರುವುದಿಲ್ಲ.
ಹಾಗೆ ಅಂತ ಹೇಳಿ ವೇಶ ಭೂಷಣಕ್ಕೆ ಗಮನ ಕೊಡದೆ ಇರಲಿಕ್ಕೆ ಅಗುವುದಿಲ್ಲ.

ನಮ್ಮ ಕಾರ್ಪೋರೇಟ್ ವಲಯದಲ್ಲಿ ದಿನಾಲು "think innovate" ಅಂತ ಹೇಳ್ತಾ ಇರ್ತಾರೆ.ಅದೆ ಥರ ನಿಮ್ಮ ಹುಡುಗನಿಗು ಯಾರೋ Different ಎನ್ನುವ ಹುಳ ಬಿಟ್ಟಿರುವ ಹಾಗಿದೆ.ಬರವಣಿಗೆ ಚೆನ್ನಾಗಿದೆ.

ಹೊಸ ಪುಸ್ತಕಕ್ಕೆ All the best.

ರವಿ

Shweta said...

ಪ್ರಕಾಶಣ್ಣ,
ನನ್ನ ಕಾರ್ಪೊರೇಟ್ ಲೋಕದಲ್ಲಿ ಇನ್ನು ಎಂತೆಂತಾ ಐಲು ಇದ್ದ ಅಂದ್ರೆ ಈ ಹುಡಗನ innovative ತಲೆಗೆ 'ಗ್ರೇಟ್' ಹೇಳನ ಕಾಣ್ತು.ಕೆಲಸ ಮುಖ್ಯ ಅಲ್ದಾ?
ನಿಮ್ಮ ಪ್ರತಿಯೊಂದು ಲೇಖನವು ತುಂಬಾ ಚೊಲೋ ಇದ್ದು..ಎಸ್ಟೋ ಸಾರೆ ಆಫೀಸ್ ನಲ್ಲಿ ಒಬ್ಬಳೇ ನಗಾಡದು ನೋಡಿ ಏನಾತು ಕೇಳಿದ್ದ. ಅವಕ್ಕೆಲ್ಲ ಅನುವಾದಾನು ಮಾಡಿದ್ದಾತು.
sikkapatte ಥ್ಯಾಂಕ್ಸ್!!
-shweta

Naveen...ಹಳ್ಳಿ ಹುಡುಗ said...

Prakashanna..
Lekhana superb...

ಬಾಲು said...

namge ishta aago thara irabeke horatu, ibbobbarigintha different irabeku antha try madidre... nijakku thikkalu annisutte.


nimma baravanige mattu pustakakke shubha haaraike galu.

bega barali endu aashisuve.

SUMNE...! said...

prakashannaa... baraha thumba chennagide...
sadashiva ms

ಚಿತ್ರಾ said...

ಪ್ರಕಾಶಣ್ಣ,
ನಿಜ, ಕೆಲವೊಮ್ಮೆ ಒಬ್ಬ ಮನುಷ್ಯನನ್ನು ಕೇವಲ ಅವನ ವೇಷ ಭೂಷಣಗಳಿಂದ ಅಳೆಯಲಾಗದು !
ನಮ್ಮ ಬಗ್ಗೆ ಒಳ್ಳೆ ಅಭಿಪ್ರಾಯ ಬರ್ಲಿಕ್ಕೆ..
ನಮ್ಮ ಒಡನಾಟ ಸಾಲೋದಿಲ್ಲ..ಸಾರ್..
ಅವರಿಗೆ ಇನ್ನೊಬ್ಬರು "ನಮ್ಮ ಬಗ್ಗೆ" ಹೇಳಬೇಕು...
ಬೇರೆಯವರು ನಮ್ಮ ಬಗ್ಗೆ ಹೇಳಿದ್ದರ ಮೇಲೆ..
ನಮ್ಮ ಒಳ್ಳೆತನ ನಿರ್ಧಾರ ಮಾಡ್ತಾರೆ...

ಆ ಹುಡುಗ ಹೇಳಿದ ಮಾತು ಎಷ್ಟು ಸತ್ಯ !!!
ಇನ್ನು , ಅವನ " innovative " ಐದಿಯಾವನ್ನು ಮೆಚ್ಚಿದೆ ಸ್ವಾಮೀ ! ಪಲ್ಸರ್ ಬೈಕ್ ಹಾಗು ಸೈಕಲ್ ಬೆಲ್ !! ಆಹಾಹಾ !
ನಿಮ್ಮ ಕಾದಂಬರಿಗಾಗಿ ಕುತೂಹಲದಿಂದ ಕಾಯುತ್ತಿದ್ದೇವೆ !!! ಸಸ್ಪೆನ್ಸ್ ನಿಮ್ಮ ಪ್ರೀತಿಯ ವಿಷಯ !!!

ಚಿತ್ರಾ said...

ಪ್ರಕಾಶಣ್ಣ,
ನಿಜ, ಕೆಲವೊಮ್ಮೆ ಒಬ್ಬ ಮನುಷ್ಯನನ್ನು ಕೇವಲ ಅವನ ವೇಷ ಭೂಷಣಗಳಿಂದ ಅಳೆಯಲಾಗದು !
ನಮ್ಮ ಬಗ್ಗೆ ಒಳ್ಳೆ ಅಭಿಪ್ರಾಯ ಬರ್ಲಿಕ್ಕೆ..
ನಮ್ಮ ಒಡನಾಟ ಸಾಲೋದಿಲ್ಲ..ಸಾರ್..
ಅವರಿಗೆ ಇನ್ನೊಬ್ಬರು "ನಮ್ಮ ಬಗ್ಗೆ" ಹೇಳಬೇಕು...
ಬೇರೆಯವರು ನಮ್ಮ ಬಗ್ಗೆ ಹೇಳಿದ್ದರ ಮೇಲೆ..
ನಮ್ಮ ಒಳ್ಳೆತನ ನಿರ್ಧಾರ ಮಾಡ್ತಾರೆ...

ಆ ಹುಡುಗ ಹೇಳಿದ ಮಾತು ಎಷ್ಟು ಸತ್ಯ !!!
ಇನ್ನು , ಅವನ " innovative " ಐದಿಯಾವನ್ನು ಮೆಚ್ಚಿದೆ ಸ್ವಾಮೀ ! ಪಲ್ಸರ್ ಬೈಕ್ ಹಾಗು ಸೈಕಲ್ ಬೆಲ್ !! ಆಹಾಹಾ !
ನಿಮ್ಮ ಕಾದಂಬರಿಗಾಗಿ ಕುತೂಹಲದಿಂದ ಕಾಯುತ್ತಿದ್ದೇವೆ !!! ಸಸ್ಪೆನ್ಸ್ ನಿಮ್ಮ ಪ್ರೀತಿಯ ವಿಷಯ !!!

Dr. B.R. Satynarayana said...

ಪ್ರಕಾಶ್ ಸರ್ ನಿಮ್ಮ ಬರವಣಿಗೆಯ ಶಯಲಿಯ ಬಗ್ಗೆ ನನ್ನದೂ ಯಾವತ್ತೂ ಮೆಚ್ಚುಗೆಯೇ! ಖುಷಿಕೊಟ್ಟಿತು ಈ ಕಥೆ ಕೂಡಾ. ನಿಮ್ಮ ಬರಹದ ವಸ್ತು ಸಾಹಿತ್ಯ ಪ್ರಪಂಚಕ್ಕೆ ಹೊಸದು. ಈನಕೆಲಸ ಮಾಡುವವರ ಬಗ್ಗೆ ಯಾರೇ ಬರೆದರೂ ಅದು ಅವರ ಕಲ್ಪನೆಯಲ್ಲಿ ಮೂಡಿಬಂದಿರುವುದಾಗಿತ್ತು. ಆದರೆ ಈಗ ಻ದನ್ನು ಹತ್ತಿರದಿಂದ ಹಲವಾರು ವರ್ಷಗಳಿಂದ ಗಮನಿಸುತ್ತಾ ಬಂದಿರುಇವುದರಿಂದ ೊಮದು ರೀತಿಯ ಻ಧಿಕೃತತೆ ಈ ಸಾಹಿತ್ಯಕ್ಕೆ ಆವಾಹನೆಯಾಗಿದೆ. ಆದ್ದರಿಂದ ೋದಿಸಿಕೊಳ್ಳುವಲ್ಲಿ ಒಂದು ಆಪ್ತತೆಯಿದೆ. ಖುಚಿಆಯಿತು.

Ambika said...

neevu different anta ee hesaru ittideera ? tumba chennagide.

ಶಂಕರ ಪ್ರಸಾದ said...

ಪ್ರಕಾಶಪ್ಪ,
ಈ ಥರ ನೇರ ನುಡಿ ಇರುವ ಜನ ಸಿಗೋದು ಈ ಕಾಲದಲ್ಲಿ ಬಹಳ ಕಷ್ಟ.
ಅಂಕು ಡೊಂಕು ನಡೆ, ಮನ್ಸ್ಸಲೊಂದು ಬಾಯಲ್ಲೊಂದು ಇರುವ ಜನರೇ ಇಷ್ಟ ಆಗೋದು ಎಲ್ಲರಿಗೂ.
ಖಂಡಿತವಾದಿ ಲೋಕ ವಿರೋಧಿ ಅನ್ನೋದು ನೂರಕ್ಕೆ ನೂರು ಸತ್ಯ. ಈತ
ಕೂಡ ಹಾಗೆಯೇ. ಯಾರು ಏನೆಂದರೇನು, ನಾನು ನನ್ನ ನಡೆ ನುಡಿ ನೆರವಾಗಿದೆ ಅನ್ನೋ ಆತನ ವ್ಯಕ್ತಿತ್ವ ಬಹಳ ಒಳ್ಳೇದು.
ಆದರೆ, ಕೆಲವೊಮ್ಮೆ ಈ Attitude ನಿಂದಲೇ ಕೆಲವರು ಸಿಕ್ಕಾಪಟ್ಟೆ arrogant ಆಗ್ತಾರೆ. ಅಂತ ವೇಳೆ ಅವರ ಅಮ್ಬೋನವನ್ನು ಪ್ರಶ್ನಿಸಿದರೆ ಇಲ್ಲದ ರಾದ್ಧಾಂತಕ್ಕೆ ಕಾರಣವಾಗುತ್ತೆ. ಏನಂತೀರಾ?

ಕಟ್ಟೆ ಶಂಕ್ರ

PARAANJAPE K.N. said...

ಪ್ರಕಾಶರೆ
ನಿಮ್ಮ ಪ್ರಬ೦ಧರೂಪದ ಕಥನ ಶೈಲಿ, ಅದರೊಳಗಿನ ವಿಭಿನ್ನಪಾತ್ರಗಳ ಪೋಷಣೆ ಎಲ್ಲವೂ ಸೊಗಸು. ನಿಮ್ಮ ಬರಹ ಪುಸ್ತಕರೂಪದಲ್ಲಿ ಬೇಗ ಬರಲಿ ಎ೦ದು ಹಾರೈಸುವೆ.

ರಾಜೀವ said...

ಪ್ರಕಾಶ್ ಸರ್,

ಹಲವಾರು ಸಲ, ನಾನು ಕೂಡ ಇಂತಹ ದ್ವಂದ್ವದಲ್ಲಿ ಸಿಕ್ಕಿಕೊಂಡಿದ್ದುಂಟು. ನಮಗೆ ಹೇಗೆ ಬೇಕೋ ಹಾಗಿರಬೇಕಾ ಅಥವಾ ಬೇರೆಯವರು ನಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೋ ಎಂದು ಯೋಚಿಸಬೇಕಾ?

ಬೇರೆಯವರಿಗೆ ಹೆಗರಬೇಕಾಗಿಲ್ಲ. ಆದ್ರೆ ಮರಿಯಾದೆ, ಸಭ್ಯತೆಯ ಮಿತಿಯನ್ನು ಮೀರುವುದು ಒಳಿತಲ್ಲ ಅಲ್ಲವೇ?

ಒಂದೊಂತೂ ನಿಜ. ನಾವು ಸಮಾಜವನ್ನು ಬಿಟ್ಟು ಒಬ್ಬರೇ ಬದುಕಲು ಸಾದ್ಯವಿಲ್ಲ ಅಲ್ಲವೇ?

ತೇಜಸ್ವಿನಿ ಹೆಗಡೆ- said...

ಪ್ರಕಾಶಣ್ಣ,
ಅವನ ಮಾತು ವರ್ತನೆಗಳು ಸ್ವಲ್ಪ ವಿಚಿತ್ರವಾಗಿದ್ದರೂ ಆತನ ಮಾತಿನೊಳಗಿನ ಕಟುತ್ವ, ಸತ್ಯತೆ, ನಿರ್ಭಾವುಕತೆ ಮನಮುಟ್ಟಿತು. ನಿಮ್ಮ ಇಷ್ಟವಾದ ಬರಹಗಳಲ್ಲೊಂದು.

ಪುಸ್ತಕ ರೂಪದಲ್ಲಿ ತರುವ ನಿಮ್ಮ ಪ್ರಯತ್ನಕ್ಕೆ ಯಶಸ್ಸಾಗಲೆಂದು ಹಾರೈಸುವೆ.

ರೂಪಾ ಶ್ರೀ said...

ಆ ಹುಡುಗನ ನೇರ ಮಾತು ಇಷ್ಟ ಪಡುವಂಥದ್ದೆ ಆದರೆ ನಾವು ಮಾತನಾಡುವುದಾದರೂ ಯಾತಕ್ಕೆ? ಮತ್ತೊಬ್ಬರನ್ನು ನೋಯಿಸಲಿಕ್ಕೋ ಅಥವಾ keep guessing ಸ್ಥಿತಿಯಲ್ಲಿ ಇರಿಸಲಿಕ್ಕೋ ಅಲ್ಲ ಅಲ್ಲವಾ.. ಸಣ್ಣ ಇದಾಗಿನಿಂದ ಮೇಸ್ತ್ರಿ ತನ್ನನ್ನು ನೋಡಿದ್ದಾನೆ ಆದ್ದರಿಂದ ತನ್ನ ಮಾತನ್ನು ಸರಿ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕೆಂದು ಆ ಹುಡುಗ ಬಯಸುವುದು ಸರಿಯೇ.. ಹಾಗೆಯೇ ಇವನೂ ಸಣ್ಣ ಇದ್ದಾಗಿನಿಂದ ಆ ವ್ಯಕ್ತಿಯನ್ನು ನೋಡಿರುತ್ತಾನಲ್ಲ ಅವನಿಗೆ ಇಂಥ ಮಾತು ಸರಿ ಬಾರದು ಎಂದು ಈ ಹುಡುಗನಿಗೂ ತಿಳಿಯಬೇಕಲ್ಲ! ಸಂದರ್ಭಕ್ಕೆ ಅನುಗುಣವಾಗಿ ನಾವೆಲ್ಲರೂ ಬದಲಾಗುತ್ತೇವೆ.. ಆ ಹುಡುಗನೂ ಕೂಡ..

ನಿಮ್ಮ 20X20 ಗೆ All the Best!! :)

ಮೂರ್ತಿ ಹೊಸಬಾಳೆ. said...

ಪಲ್ಸರ್ ಬೈಕಿಗೆ ಸೈಕಲ್ ಬೆಲ್ ತಪ್ಪಲ್ಲ ಪ್ರಕಾಶಣ್ನ ಇವತ್ತಿಗೂ ನಾನು ಎಡ ಹೆಬ್ಬೆರಳಿಗೆ ಬೆಳ್ಳಿಯ ಉಂಗುರ ಹಾಕುತ್ತೇನೆ.ಮನುಷ್ಯನ ಬಾಹ್ಯ ಸೌಂದರ್ಯ ಕೃತಕ ಜನಪ್ರೀಯತೆಗೆ ದಾರಿಯಾಗುತ್ತದೆ ಆದರೆ ಅವನ ಕೆಲಸದ ಮೇಲಿನ ಶ್ರದ್ದೆ ಮಾತ್ರ ಅವನ ಸರ್ವತೋಮುಖ ಅಬಿವೃದ್ದಿಗೆ ಹಾಗು ನಿಮ್ಮಂತ ಸಜ್ಜನ ಮಾಲಿಕರ ನಂಬಿಕೆಗೆ ಕಾರಣವಾಗುತ್ತದೆ.
ಬಾಯಲ್ಲಿರುವ ಕೆಲವು ಆದರ್ಶಗಳಾದರೂ ಅವನ ಕೆಲಸದಲ್ಲಿದ್ದರೆ ಒಂದಲ್ಲ ಒಂದು ದಿನ ನಿಮ್ಮ ಸಹಕಾರದಲ್ಲಿ ನಡೆಯುವ ಅವನ ಮದುವೆಗೆ ನೀವು ದಂಪತಿಗಳು ಹೋಗಿ ಆಶೀರ್ವದಿಸಿ ಬಂದ ಅನುಭವವನ್ನ ನಿಮ್ಮ ಬ್ಲೊಗ್ ನಲ್ಲಿ ಓದುವ ಸುಸಂದರ್ಭ ಒದಗಿ ಬರುತ್ತದೆ.

ರೂಪಾ said...

ಪ್ರಕಾಶ್ ಸಾರ್
ಈ ಥರಾ ಐಲು ಹುಡುಗರು ಈಗೀಗ ಎಲ್ಲೆಲ್ಲೂ ಕಾಣ್ತಾ ಇದಾರೆ ಅನ್ಸುತ್ತೆ . ಬಹುಷ: ಉಪೇಂದ್ರರ ಕಟಾಕ್ಷ ಇರ್ಬೇಕು ಅನ್ಸುತ್ತೆ.
ಮನಸಲ್ಲಿ ಇರೋದನ್ನೆಲ್ಲಾ ಎದುರಿರೋ ಮುಂದೆ ಹೇಳಿಕೊಂಡ್ರೆ ತಾವೇನೋ ದೊಡ್ಡ ಹೀರೋಗಳಾದ್ವಿ ಅನ್ನೋ ಭ್ರಮೆಯಲ್ಲಿ ತೇಲಾಡ್ತಾರೆ.
ಅಟ್ಲೀಸ್ಟ್ ಬೈಕ್‌ಗೆ ಸೈಕಲ್ ಬೆಲ್ ಹಾಕೊಂಡಿದಾನೆ ನಿಮ್ಮ ಗೋವು
ಆದರೆ ನಾಯಿ ಥರಾ ಎಮ್ಮೆ ಥರಾ ಕಿರುಚೋ ಹಾರ್ನ್ ಬೈಕ್‍ಗಳಿಗೆ ಹಾಕೊಂಡು ನಮಗೆ ತಲೆ ನೋವು ಕೊಡೋ ಎಮ್ಮೆ(?)ಗಳಿಗೇನೂ ಕಡಿಮೆ ಇಲ್ಲ.ಅದೇ ಒಂಥರಾ ಹೊಸಾ ಟ್ರೆಂಡ್ ಅವರಿಗೆ .
ಏನಂತೀರಾ

Ramya Hegde said...

Prakashanna..,
Lekhana channagiddu.
Nimma Kadambarige ALL THE BEST...

ಪಾಚು-ಪ್ರಪಂಚ said...

Prakashanna...

Avaravara bhavakke avaravara bhakutige..!! idu sariyaagi honduttade ee huduganige.!

Ondu arthadalli avana nera naduvalike ishta aaguttade..! Kevala kelasa onde mukhya annuva haagiddaga..!! Kelasada jote bhavanatmaka sambhanda iddare idu vichitra annisabahudeno..!!

Nimma prayatnakke shubhavaagali..

-Prashanth

vinuta said...

Lekhana chennagide.Different agirodu thappalla anisutte.Pulsar bike ge cycle bell olle idea.innu veshabhooshanakku kelasakku sambandhavilla anisuttade,illi eshtondu olle huddeyalliruvavaru kooda vichitravada battegalannu dharisuvadannu noduttiddene.

Annapoorna Daithota said...

ಆತ್ಮವಿಶ್ವಾಸ ಅಹಂಕಾರವಾಗದಿದ್ದರೆ, ವಿನಾಕಾರಣ ಇನ್ನೊಬ್ಬರಿಗೆ ತೊಂದರೆ, ನೋವು ಕೊಡದಿದ್ದರೆ, ಮಾಡುವ ಕೆಲಸಗಳು ಸರಿಯಾಗಿ ನಡೆಯುತ್ತವೆಂದರೆ, ನಾವು ನಾವಾಗೇ ಇರುವುದರಲ್ಲಿ ತಪ್ಪೇನಿದೆ ?

ಲೇಖನ ಚೆನ್ನಾಗಿದೆ :)

Guru's world said...

ಪ್ರಕಾಶ್
ನಿಮ್ಮ ಬಳಿ ಕೆಲಸ ಮಾಡುವ different ಹುಡುಗರ ಬಗ್ಗೆ ಬರೆದಿದ್ದರ... ಚೆನ್ನಾಗಿ ಇದೆ....ಅವನಲ್ಲಿ ಏನೋ different ಇದೆ ಅಂತ ತಾನೆ ನೀವು ಬರೆದಿರುವುದು,,,, ಕೆಲವರು ಇರುತ್ತಾರೆ....ಹೀಗೆ.....ಅವರ ಪಾಡಿಗೆ ಅವರು... ಬೇರೆ ಯಾವುದಕ್ಕೂ ಕ್ಯಾರೆ ಅನ್ನೋದಿಲ್ಲ....ಅವರಿಗೆ ಹೇಗೆ ಇಸ್ಟನೋ ಹಾಗೆ ಇರುತ್ತಾರೆ..... he is ವೆರಿ interesting guy....
ಎಂದಿನಂದೆ ನೀವು ಬರೆದಿರುವ ಲೇಖನ ತುಂಬ ಚೆನ್ನಾಗಿ ಮೂಡಿ ಬಂದಿದೆ... ಹಾಗೆ ನಿಮ್ಮ ಹೊಸ ಆಸೆಗಳು ಕೂಡ,,, ಇದಕ್ಕೆ ನನ್ನ ಸಪೋರ್ಟ್ ಇದೆ..... ಅದಸ್ತು ಬೇಗ.....ಪುಸ್ತಕದ ರೂಪದಲ್ಲಿ ಹೊರಬರಲಿ......ಚೆನ್ನಾಗಿ ಇರುತ್ತೆ....(ಜೊತೆಗೆ ನಮ್ಮ ಹೆಸರು ಬರುತ್ತೆ ಅಲ್ವ ?) :-) ಅದಕ್ಕೆ ಸಪೋರ್ಟ್.......
ಗುರು

ಜಲನಯನ said...

ಹುತ್ತ ನೋಡಿ ಹಾವನ್ನು ಅಳೆಯೋದು...ರೂಪಶ್ರೀ ಮಾತಿಗೆ,,,ನನ್ನ ತಿದ್ದುಪಡಿ ಮಂಡಿಸಲೇ...ಪ್ರಕಾಶ್..?
ಹಾವಿನ ಉದ್ದ ನೋಡಿ ವಿಷದ ತೀವ್ರತೆ ಅಳೀಬಾರ್ದು....ಹೇಗೆ...? ರೂಪ ಮೇಡಂ...ಮಾನವನ ತಿಳುವಳಿಕೆ ಬೆಳೆದಂತೆ ತಿದ್ದುಪಡಿಗಳು ಸಹಜ...
ಸೈಕಲ್ ಟೈರನ್ನು ಬಂಡಿಯಂತೆ ಉಪಯೋಗಿಸಿ ಆಟವಾಡುವಾಗ...ಪೀ.ಪೀಪ್..ಎಂದು ಜೋರಾಗಿ ಬಾಯಲ್ಲೇ ಹಾರ್ನ್ ಮಾಡುತ್ತಿದ್ದ ನಮ್ಮ ಬಾಲ್ಯದ ನೆನಪಾಯ್ತು..ನಿಮ್ಮ ಲೇಖನ ನೋಡಿ..
ಆದರೆ ಇದೇನು..ಉಲ್ಟಾ...ಚಕ್ರ...ಸೈಕಲ್ ಗೆ ಪಲ್ಸರ್ ಹಾರ್ನ್ ಹಾಕಿದ್ದರೆ ..ಸರಿ ಅನ್ನಬಹುದಿತ್ತು...
ರೂಪಾ ಹೇಳೋ ಮಾತೂ ದಿಟ....ನಾಯಿ ಕೂಗೋ ತರಹ, ಕತ್ತೆ ತರಹ..ಇವು ದಾರೀಲಿ ಅಡ್ದಬರೋರನ್ನ ತಪ್ಪಿಸೋದರ ಬದಲು...ಕಿರಿಕಿರಿ ಅಥವಾ..ಅಪಘಾತಕ್ಕೂ ಕಾರಣವಾಗಬಹುದು...
ನಿಮಗೆಲ್ಲಾ ಇನ್ನೊಂದು..ವಿಷಯ ಹೇಳಬಯಸೋದು..
ನನ್ನ ಮಗಳಿಗೆ (ಅವಳು UKG ಯಿಂದ ಕುವೈತಿನಲ್ಲೇ ಓದುತ್ತಿರುವುದು) ಅವಳು ಸೆಕೆಂಡ್ ಸ್ಟಾಂಡರ್ಡ್ ಗೆ ಬರೋವರ್ಗೂ ಗೊತ್ತಿರಲಿಲ್ಲ (ಅಂದು ನಾನು..ಸರ್ವೀಸ್ ಆದ ನಂತರ ಟೆಸ್ಟ್ ಮಾದಲು ಹಾರ್ನ್ ಒತ್ತಿದ್ದರಿಂದ) ನಮ್ಮ ಕಾರ್ ನಲ್ಲಿ ಹಾರ್ನ್ ಎಲ್ಲಿದೆ ಎಂದು...!!! ಇಲ್ಲಿ ಹಾರ್ನ್ ಪ್ರಯೋಗ ಬಹಳ..ಬಹಳ..ಅಪರೂಪ...
ಪ್ರಕಾಶ್ ನಿಮ್ಮ ಲೇಖನ ನೋಡಿದ್ರಾ ಎಷ್ಟೊಂದು..ವಿಚಾರ ಮಂಥನಕ್ಕೆ ದಾರಿ ಮಾಡ್ತು...?

ಸಿಮೆಂಟು ಮರಳಿನ ಮಧ್ಯೆ said...

ಸ್ವಲ್ಪ ಕೆಲಸದ ಒತ್ತಡ....

ನಾಳೆ ಎಲ್ಲರಿಗೂ ಉತ್ತರ ಕೊಡುವೆ....

ಕ್ಷಮೆ ಇರಲಿ...

Anonymous said...

Prakash, ಏನೋ ನೀವು 'ಗಾಯಬ್' ಆಗಿದ್ದೀರಲ್ಲ ಅಂತ ಯೋಚ್ನೆ ಮಾಡ್ತಿದ್ದೆ.. ಹೊಸ ಪೋಸ್ಟ್ ನೋಡಿ ಖುಷಿಯಾಯ್ತು. 'ಡಿಫರೆಂಟ್' ಆಗಿರೋರನ್ನ ಗುರ್ತಿಸಿ ಅವರ ಆಲೋಚನೆಗಳನ್ನ ಕೇಳೋದ್ರಿಂದ ನಾವು ಸಹ ಕೆಲವೊಮ್ಮೆ ಇನೊವೇಟಿವ್ ಆಗ್ತೀವೇನೋ!!

ಎಂದಿನಂತೆ ನಿಮ್ಮ 'ವಿಚಾರಧಾರೆ' ಖುಷಿಯಾಗಿದೆ ಓದೋದಿಕ್ಕೇ. ನೀವು ಕಾದಂಬರಿ ಬರೀತೀನಿ ಅನ್ನೋದೇ 'ಡಿಫರೆಂಟ್ ಥಿಂಕಿಂಗ್'!!! ಬೇಗ ಅದನ್ನ ಓದುವ ಹಾಗೆ ಆಗಲಿ ಅಂತ ಹಾರೈಸ್ತೀನಿ.

ಅಂತರ್ವಾಣಿ said...

ಪ್ರಕಾಶಣ್ಣ,
ಕೆಲಸದ ಟೆಂಶನ್ನಿಂದ ಬಂದು ನಿಮ್ಮ ಬ್ಲಾಗು ಓದಿ, ನಕ್ಕು, ಮನಸ್ಸು relax ಆಯ್ತು.
pulsarಗೆ cycle bell ಸೂಪರ್ idea!

ನಿಮಗೆ ಶುಭಾಶಯಗಳು. ಬೇಗ "ಇಟ್ಟಿಗೆ ಸಿಮೆಂಟ್" ಪುಸ್ತಕ ಕಟ್ಟಿ. ನಿಮ್ಮ ಓದುಗರೇ ಪಿಲ್ಲರ್ಸ್.ಅವರ wishes ನಿಮಗೆ mould.

ಸಿಮೆಂಟು ಮರಳಿನ ಮಧ್ಯೆ said...

ಪೂರ್ಣಿಮಾ....

ಒಂದು ಮನುಷ್ಯನ ನಡೆ ನುಡಿಯಲ್ಲಿ...
ಅವನ ವ್ಯಕ್ತಿತ್ವವನ್ನು ಅಳೆಯ ಬಹುದು ಅನ್ನುತ್ತಾರೆ...

ನಮ್ಮ ಸ್ವಭಾವ ಮತ್ತು ವ್ಯಕ್ತಿತ್ವಕ್ಕೆ..
ನಮ್ಮ ಓದು, ನಾವು ಒಡನಾಡುವ ಗೆಳೆಯರು,
ನಮ್ಮ ಮನೆಯ ವಾತಾವರಣ...
ನಾವಿರುವ ಸಮಾಜ...
ಇತ್ಯಾದಿ ಪ್ರಭಾವ ಬೀರುತ್ತದೆ...

ಇವುಗಳಲ್ಲಿ ನಾವು ಯಾವುದನ್ನು ಹೆಚ್ಚು ಇಷ್ಟ ಪಡುತ್ತೇವೋ...
ಅದರ ಪ್ರಭಾವ ಹೆಚ್ಚಾಗಿರುತ್ತದೆ...

ಈ ಹುಡುಗನ ಮೇಲಾಗಿದ್ದುದು...
ಸಿನೇಮಾ...
ಅದರಲ್ಲೂ "ಉಪೇಂದ್ರನ ಸಿನೇಮಾ....

ಪ್ರತಿಕ್ರಿಯೆಗೆ ಧನ್ಯವಾದಗಳು....

Prabhuraj Moogi said...

ನೇರ ನುಡಿಯನ್ನು ಬಹಳ ಜನ ಒಪ್ಪೋದಿಲ್ಲಾ... ಎಲ್ಲರಿಗೂ ಬಣ್ಣ ಬಣ್ಣದ ಮಾತುಗಳೇ ಇಷ್ಟ. ಆಫೀಸಿನ ಲಿಫ್ಟನಲ್ಲಿ ಕುರ್ತಾ ಧರಿಸಿದ ಜಪಾನಿ ಹುಡುಗಿಗೆ, ಬಹಳ ಚೆನ್ನಾಗಿದೆ ಅಂತ ಹೇಳಿದ್ದು ಇನ್ನೂ ನೆನಪಿದೆ... ಅದನ್ನು ಕೇಳಿದ ಅವಳ ಕೆಂಪು ಮುಖ ಇನ್ನಷ್ಟು ರಂಗೇರಿತ್ತು, ತಡೆಯೋಕಾಗದೇ ಹೇಳಿಬಿಟ್ಟಿದ್ದೆ... ನನಗೇ ನೆಪಸಿಕೊಂಡರೆ ಅವಳೆನು ಅಂದುಕೊಂಡಳೊ ಅಂತ ಮುಜುಗರವೆನಿಸುತ್ತದೆ... ಕಪಾಳಮೊಕ್ಷವಾಗಿಲ್ಲವೆನ್ನುವುದೇ ಸಮಾಧಾನ...
ಕೆಲವೊಮ್ಮೆ ಮುಖವಾಡ ಧರಿಸಿ ರೂಡಿಯಾಗಿ ಅಲ್ಲೇ ಅದರ ಹಿಂದೆಯೇ ಅಡಗಿ ಕೂತುಬಿಡುತ್ತೀವೇನೊ...

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್....

ನಿಜ ವೇಷ ಭೂಷಣಕ್ಕೂ, ಕೆಲಸಕ್ಕೂ ಸಂಬಂಧವಿಲ್ಲ...
ನಾನೂ ಕೂಡ ಬರ್ಮುಡಾ ಹಾಕಿಕೊಂಡು ಸೈಟಿಗೆ ಹೋಗುವದುಂಟು...

ಇನ್ನು ಎಫ್ ಎಮ್ ಕೇಳುತ್ತ ಕೆಲಸ ಮಾಡುವದು...
ನಾವು ಹೆಬ್ಬಾಳದಲ್ಲೊಂದು ರೂಫ್ ಸ್ಟೀಲ್ ಕಟ್ಟುವಾಗ...
ಒಬ್ಬ ಹುಡುಗ ಪಕ್ಕದ ಕರೆಂಟ್ ತಂತಿಗೆ ಕಂಬಿಯನ್ನು ತಾಗಿಸಿಬಿಟ್ಟಿದ್ದ....
ಅಲ್ಲಿ ಸ್ಲ್ಯಾಬಿನ ಮೇಲೆ ನಾವು ಇಪ್ಪತ್ತು ಜನ ಇದ್ದೇವು...!

ನಮ್ಮ ಪುಣ್ಯಕ್ಕೆ ಆಗ ಪವರ್ ಕಟ್ ಇತ್ತು...
ಥ್ಯಾಂಕ್ಸ್ ಗಾಡ್...!
ಥ್ಯಾಂಕ್ಸ್ ಟು ಈಶ್ವರಪ್ಪ...!!

ನಾವು ಮಾಡುವ ಕೆಲಸದ ಮೇಲೆ ಅವಲಂಬಿಸಿರುತ್ತದೆ...
ಹಾಡು ಕೇಳುವದರಿಂದ ನಮ್ಮ ಏಕಾಗ್ರತೆ ಕಡಿಮೆ ಆಗಬಹುದು...

ಅದರಿಂದ ಲಾಭವೂ ಇದೆ..
ರಿಲಾಕ್ಸೇಷನ್ ಕೂಡ ಸಿಗುತ್ತದೆ...

ಎಲ್ಲಿ, ಯಾವಾಗ ಹಾಡು ಕೇಳ ಬೇಕೆನ್ನುವ ವಿವೇಚನೆ ನಮಗಿರಬೇಕು...

ನಿಮ್ಮ ಪತ್ರಿಕೆಯ ಹುಡುಗರ ಕೆಲವು ಕಥೆ ನನಗೆ ಹೇಳಿದ್ದೀರಿ...
ನಿಜಕ್ಕೂ ನಮ್ಮೊಂದಿಗೆ ಹಂಚಿಕೊಳ್ಳಿ...
ಚೆನ್ನಾಗಿರುತ್ತದೆ..

ನನ್ನ ಲೇಖನ ನಿಮಗೆ ಸ್ಪೂರ್ತಿ ಕೊಟ್ಟಿದ್ದಕ್ಕೆ ಸಂತೋಷವಾಗುತ್ತಿದೆ...

ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್....

ನನ್ನ ಅನುಭವದ ಪ್ರಕಾರ ಆಹುಡುಗ ಒಳ್ಳೆಯವನೇ...
ಸ್ವಲ್ಪ ಡೈರೆಕ್ಷನ್ ಸರಿ ಮಾಡಬೇಕಷ್ಟೆ...
ಪ್ರಾಮಾಣಿಕ.. ಒಳ್ಳೆಯ ಕೆಲಸಗಾರ...
ಶ್ರಮಜೀವಿ... ಸುಳ್ಳು ಹೇಳಲ್ಲ...

ಇವೆಲ್ಲ ಈಗ ದುರ್ಲಭ....

ಈ ನಡುವೆ ಆತ ನನ್ನ ಬಲಗೈ ಆಗಿಬಿಟ್ಟಿದ್ದಾನೆ..
"ಬಾಸ್, ಬಾಸ್ ಅನ್ನುತ್ತ " ಷಿಳ್ಳೆ ಹಾಕುತ್ತ ಖುಷಿಯಾಗಿರುತ್ತಾನೆ...

ಅವನ ಬಗೆಗೆ ಇನ್ನೂ ಒಂದು ಲೇಖನ ಬರೆಯುವಷ್ಟಿದೆ...

ನಾನೂ ಕೂಡ ಅವನಿಂದ ಕಲಿಯುತ್ತಿದ್ದೇನೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು...

Mahesh said...

ಪ್ರಕಾಶಣ್ಣಾ,
ಹುಡುಗ ಸ್ವಲ್ಪ different ಅನ್ಸುತ್ತೆ. ಕಾಲಕ್ಕೆ ತಕ್ಕ ವೇಷ.

ಕ್ಷಣ... ಚಿಂತನೆ... Think a while said...

ಪ್ರಕಾಶ್ ಸರ್‍,
ಲೇಖನ ಸೀರಿಯಸ್ಸಾಗಿ ಯೋಚಿಸುವಂತೆ ಮಾಡಿತು. ಕೆಲವರ ವೇಷಭೂಷಣ, ಭಾಷೆಯೇ ಹಾಗಿದ್ದರೂ ಏನೊಂದು ಕೆಲಸವೂ ತಿಳಿದಿಲ್ಲವೆಂಬಂತೆ ಇರುತ್ತಾರೆ. ಅಂತಹವರನ್ನು ಗುರುತಿಸುವುದು ಕಷ್ಟ. ಗಾದೆ ಮಾತೇ ಇಲ್ಲವೇ? ಜನಾರ್ಧನನನ್ನಾದರೂ ಮೆಚ್ಚಿಸಬಹುದು, ಜನನ್ನ ಮೆಚ್ಚಿಸಲು ಆಗೊಲ್ಲ ಅಂತ.


ನಿಮ್ಮ ಮನಸಿಗೆ ಬಂದ ಪುಸ್ತಕ ಪ್ರಕಟಣೆಯ ಯೋಜನೆ ಸಂತಸವಾಗುತ್ತದೆ. ಏಕೆಂದರೆ, ಅನೇಕರಿಗೆ ಅಂತರ್ಜಾಲದಲ್ಲಿಯೇ ಎಲ್ಲವನ್ನೂ ಓದಲು ಕಷ್ಟ ಜೊತೆಗೆ ಅನುಕೂಲವೂ ಇರವುದಿಲ್ಲ. ನಿಮ್ಮ ಯೋಜನೆ ಫಲಪ್ರದವಾಗಲಿ ಎಂಬ ಆಶಯದೊಂದಿಗೆ,

ಧನ್ಯವಾದಗಳು

ಚಂದ್ರಶೇಖರ ಬಿ.ಎಚ್.

ಸಿಮೆಂಟು ಮರಳಿನ ಮಧ್ಯೆ said...

ದಿಲೀಪ್....

ನಿಮ್ಮ ಪ್ರತಿಕ್ರಿಯೆ ಇಷ್ಟವಾಯಿತು....
ವೇಷ ಭೂಷಣವೂ ಸಹ ಇಂಪ್ರೆಸ್ ಮಾಡುತ್ತದೆ...
ಅವುಗಳಿಂದಾಗಿಯೇ ಒಳ್ಳೆ ಅಭಿಪ್ರಾಯ ಮೂಡಿಸ ಬಹುದು...

ನನಗೆ ನಿಮ್ಮೊಂದಿಗೆ ಒಳ್ಳೆಯ ಒಡನಾಟವಿದ್ದರೂ..
ಮೂರನೆಯ ವ್ಯಕ್ತಿ ಕೊಡುವ ಅಭಿಪ್ರಾಯ ಮುಖ್ಯವಾಗಿ ಬಿಡುತ್ತದೆ...
ಇದು ತಪ್ಪಲ್ಲವೇ...?
ದಿಲಿಪನ ಒಡನಾಟ ಒಳ್ಳೆಯ ಅಭಿಪ್ರಾಯ ಮೂಡಿಸಿದರೆ ಸಾಕಲ್ಲವೆ..?
ಯಾಕೆ ಮೂರನೆಯ ವ್ಯಕ್ತಿಯ ಅಭಿಪ್ರಾಯಕ್ಕೆ ಬೆಲೆ ಕೊಡಬೇಕು..?

ಇದು ಎಲ್ಲರಿಗೂ ಅನ್ವಯಿಸುತ್ತದೆ... ಅಲ್ಲವಾ...?
ಆ ಹುಡುಗನ ಮಾತು ನೇರವಾಗಿ,
ಖಾರವಾಗಿದ್ದರೂ..
ಅದರಲ್ಲಿನ ಸತ್ಯ..
ಮನಸ್ಸನ್ನು ಕೆಣಕುತ್ತದೆ...

ಪ್ರತಿಕ್ರಿಯೆಗೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ರೂಪಾಶ್ರೀಯವರೆ....

ನಾನು ಹೊಸತಾಗಿ ಬೆಂಗಳೂರಲ್ಲಿ ಬಿಸಿನೆಸ್ ಶುರುಮಾಡಿದಾಗ..
ಹೊರದೇಶದ ಪ್ರಭಾವದಿಂದಲೋ ಏನೋ..
ಟೀ ಶರ್ಟ್, ಜೀನ್ಸ್ ಹಾಕಿಕೊಳ್ಳುತ್ತಿದ್ದೆ..
ಹಾಗೆ ಮೀಸೆ ಕೂಡ ತೆಗೆದಿರುತ್ತಿದ್ದೆ...
ಒಬ್ಬ ಹಿರಿಯರು ಮನೆ ಕಟ್ಟಲು ಆಹ್ವಾನಿಸಿದ್ದರು...
ಅವರು ನೇರವಾಗಿ "ನಿಮ್ಮನ್ನು ನೋಡಿದರೆ ಮನೆಕಟ್ಟುತ್ತೀರೆಂದು ನನಗೆ ಅನ್ನಿಸುವದಿಲ್ಲ" ಎಂದು ಹೇಳಿದ್ದರು...

ನನಗೆ ಆಗ ಮನಸ್ಸಿಗೆ ಬಹಳ ಕಷ್ಟವಾಗಿತ್ತು...
ವೇಷಕ್ಕೂ, ಪೇಶಕ್ಕೂ(ಕೆಲಸ) ಸಂಬಂಧವಿಲ್ಲವೆಂದು ನಯವಾಗಿ ನಿರಾಕರಿಸಿದ್ದೆ...
ಅವರ ಕೆಲಸ ಸಿಕ್ಕಿ , ಕೆಲಸ ಮುಗಿದ ಮೇಲೆ ಅದೇ ಹಿರಿಯರು..
"ನೀನು ಮೀಸೆ ಬಿಡು ಆಗ ಕಾಂಟ್ರಾಕ್ಟರ್ ಥರಹ ಕಾಣ್ತೀಯಾ" ಅಂತಲೂ ಹೇಳಿದ್ದರು...

ನಮ್ಮ ವ್ಯವಹಾರಕ್ಕೂ, ವೇಷಕ್ಕೂ ..
ನಮಗೆ ಬೇಡದಿದ್ದರೂ...
ಗೊತ್ತಿಲ್ಲದಂತೆ ಸಂಬಂಧ ನುಸುಳಿ ಬಂದು ಬಿಡುತ್ತದೆ...
ಏನಂತೀರಾ...?

ಪ್ರತಿಕ್ರಿಯೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್ ದೇಸಾಯಿಯವರೆ...

ಇದೇ ಪ್ರಶ್ನೆ ನನ್ನನ್ನೂ ಕಾಡಿದೆ...
ನಮ್ಮ ಪರಿಚಯದ ಒಳಗೆ ಬರುವ ವ್ಯಕ್ತಿಗಳನ್ನು ಒಂದು ಚೌಕಟ್ಟು ಹಾಕಿ..
ಫ್ರೇಮಿನಲ್ಲಿಟ್ಟುಬಿಡುತ್ತೇವೆ...
ಅವರ ಆಚಾರ ವಿಚಾರ, ವ್ಯವಹಾರಗಳು ಬೇರೆಯೇ ಇದ್ದರೂ...
ಅವರು ಹೀಗೆಯೇ ಅಂತ ನಮ್ಮಲ್ಲಿಯೇ ಅಂದುಕೊಂಡು ನಿರ್ಣಯಿಸಿ ಬಿಡುತ್ತೇವೆ...

ಆವ್ಯಕ್ತಿಗಳಿಗೂ.. ಒಂದು ವ್ಯಕ್ತಿತ್ವ..
ವಿಭಿನ್ನ ವಿಚಾರ ಇರಬಹುದಲ್ಲಾ...?

ಅವರು ಸಹಜವಾಗಿ ನಮ್ಮ ಪ್ರೇಮಿನೊಳಗಿರದೆ..
ಹೊರಗೆ ಹೋದಾಗ ಮನಸ್ಸಿಗೆ ಬೇಸರವಾಗುವದು ಸಹಜ...
ತಪ್ಪು ನಮ್ಮದು ಅಲ್ಲವಾ...?

ಸರ್ ...
ಚಂದದ ಅಭಿಪ್ರಾಯ ಧನ್ಯವಾದಗಳು...

shivu said...

ಪ್ರಕಾಶ್ ಸರ್,

ಈಗ ತಾನೆ ಒಂದು ಹುಟ್ಟು ಹಬ್ಬದ ಫೋಟೊ ತೆಗೆಯುವ ಕಾರ್ಯಕ್ರಮ ಮುಗಿಸಿ ಬಂದೆ.[ಕಾರ್ಯಕ್ರಮಕ್ಕೆ ಮೊದಲು ನಿಮಗೊಂದು ಫೋನು ಮಾಡಿದ್ದೆ] ಅಲ್ಲಿ ಈಗ ಆದ ಆನುಭವ ಹೇಳಬೇಕೆನಿಸುತ್ತದೆ..

ನಾನು ಶೇವಿಂಗ್ ಮಾಡದೇ ಒಂದು ವಾರವಾಗಿದ್ದರಿಂದ ಸ್ವಲ್ಪ ಕುರುಚುಲು ಗಡ್ಡವಿತ್ತು. ಈ ಫೋಟೋಕಾರ್ಯಕ್ರಮ ತಕ್ಷಣ ಬಂದಿದ್ದರಿಂದ ಹಾಗೆ ಹೋಗಿದ್ದೆ. ನನಗೆ ಆರ್ಡರ್ ಕೊಟ್ಟ ಗೆಳೆಯ ಹೊರಗೆ ಹೋಗಿದ್ದ. ನಾನು ಆ ಮನೆಗೆ ಹೋದ ತಕ್ಷಣ "ಏನಪ್ಪ ತಡಮಾಡಿಬಿಟ್ಟೆ...ನಿಮ್ಮ ಯಜಮಾನರೆಲ್ಲಿ. ಅವರು ಏನೋ ಫೇಮಸ್ ಅಂತ ನನ್ನ ಮಗ ಹೇಳಿದ್ದರಿಂದ ಕರೆಸಿದರೆ ನಿನ್ನನ್ನು ಕಳಿಸಿಬಿಟ್ಟಿದ್ದಾರಲ್ಲ...ನಿನಗೆ ಚೆನ್ನಾಗಿ ತೆಗೆಯಲು ಬರುತ್ತೋ ಹೇಗೆ...ನನ್ನ ಮೊಮ್ಮಗನ ಫೋಟೋ ತುಂಬಾ ಚೆನ್ನಾಗಿ ತೆಗೆಯಬೇಕು ಅಂದರು.[ನಾನು ಮಳೆ ಬರುತ್ತಿದ್ದುದರಿಂದ ಯಾವುದೋ ಹಳೆಯ ಮಳೆ ಜರ್ಕಿನ್ ಹಾಕಿಕೊಂಡು ಕೆದರಿದ ಕೂದಲು ಬಿಟ್ಟುಕೊಂಡು ಅವರ ಮನೆಗೆ ಹೋಗಿದ್ದರಿಂದ ನನ್ನನ್ನು ಫೋಟೋಗ್ರಾಪರನ ಸಹಾಯಕ ಅಂದುಕೊಂಡು ಇಷ್ಟೆಲ್ಲಾ ಹೇಳಿದ್ದರು.]ಕೊನೆಗೆ ನಾನೇ ಫೋಟೋಗ್ರಾಫರ್ ನನಗೆ ಯಾರು ಆಸಿಷ್ಟೆಂಟು ಇಲ್ಲ. ಅಂತ ಹೇಳಿದಾಗ ಅವರಿಗೆ ನಂಬಲಿಕ್ಕೆ ಆಗಲಿಲ್ಲ. ಆಷ್ಟರಲ್ಲಿ ನನ್ನ ಗೆಳೆಯ ಬಂದಿದ್ದರಿಂದ ಎಲ್ಲಾ ಸರಾಗವಾಯಿತು....

ಇದು ಏಕೆ ಹೇಳಬೇಕಾಯಿತೆಂದರೆ ವೇಷ ನೋಡಿ ವ್ಯಕ್ತಿಯನ್ನು ಅಳೆದ ಅನುಭವ..ಈಗ ನನಗೆ ಆಯಿತು..

vignaesh ram said...

nice blog..pls visit http://itboysblog.blogspot.com

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ...

ಮನಸಿಗೆ ಹತ್ತಿರವಾದ ಬರಹ... ನಾನು ತು೦ಬಾ ಸಲ ಆಲೋಚಿಸಿದ್ದೇನೆ ಇದರ ಬಗ್ಗೆ... ನನಗೆ ಇದರ ಅನುಭವ ಕೂಡ ಆಗಿದೆ...

ನಾನು ಆಫೀಸ್ ಒ೦ದನ್ನು ಬಿಟ್ಟು ಬೇರೆ ಎಲ್ಲೇ ಹೋದರೂ ಜೀನ್ಸ್-ಟಿ ಶರ್ಟೇ ಹಾಕುವುದು... ಆಗ ನನ್ನ ಅಕ್ಕ-ಭಾವ "ಯಾವಾಗಲೂ ಜೀನ್ಸ್-ಟಿ ಶರ್ಟ್ ಹಾಕ್ತೀಯಲ್ಲ... ಫಾರ್ಮಲ್ಸ್ ಹಾಕಿಕೊ೦ಡು ಡೀಸೆ೦ಟ್ ಆಗಿರಬಾರದಾ" ಅ೦ತ ಅನ್ನುತ್ತಿದ್ದರು... ನಾನದಕ್ಕೆ "ಜೀನ್ಸ್ ಹಾಕಿಕೊ೦ಡವರೆಲ್ಲರೂ ಡೀಸೆ೦ಟ್ ಅಲ್ವಾ?" ಅ೦ತ್ ಪ್ರತಿವಾದಿಸುತ್ತಿದ್ದೆ....

ವೇಷಭೂಷಣ ನೋಡಿ ಮನುಷ್ಯನನ್ನು ಅಳೆಯಬಾರದು ಅನ್ನುವುದು ನನ್ನ ಭಾವನೆ...

ಗೋಪು ಇಷ್ಟವಾದ:) ನಿಮಗೂ ಆಗಿದ್ದಾನೆ ಅ೦ತ ನನಗೆ ಅನಿಸುತ್ತಿದೆ:)

ಕೊಲೆಯ ಕುರಿತು ಕಾದ೦ಬರಿ! ನಮಗೆಲ್ಲಾ ಬ೦ಪರ್ ಕೊಡುಗೆ ಇದ್ದ೦ತಿದೆ! ಕುತೂಹಲ ಕಾಪಾಡಿಕೊ೦ಡು ಬರೆಯುವುದರಲ್ಲಿ ನಿಮಗೆ ನೀವೆ ಸಾಟಿ... ಅ೦ತದ್ದರಲ್ಲಿ ಕೊಲೆಯ ವಿಷಯ ಅ೦ದರೆ, ಕುತೂಹಲ ತಡೆಯಲಾಗುತ್ತಿಲ್ಲ...

ಆದಷ್ಟು ಬೇಗ ಬ೦ದು ಬಿಡಲಿ ಕಾದ೦ಬರಿ....

Geetha said...

hello sir,
ಒಳ್ಳೆಯ ವಿಶಿಷ್ಟ ವ್ಯಕ್ತಿ ಸಿಕ್ಕಿದ್ದಾರೆ ನಿಮಗೆ!!!
ವೇಷ ನೋಡಿ ವ್ಯಕ್ತಿಯನ್ನು ಅಳೆಯುವುದು ತಪ್ಪಾದರೂ ಎಲ್ಲರೂ ಹಾಗೆ ಮಾಡ್ತಾನೆ ಇರ್ತೀವಿ...first impression ಅಂತ ಒಂದಿರುತ್ತಲ್ಲಾ..

SSK said...

ಪ್ರಕಾಶ್ ಅವರೇ,
ಈ ಸಲ ನಿಮ್ಮ (ಮತ್ತು ಎಲ್ಲರ) ಲೇಖನ ಓದಲಿಕ್ಕೆ ತಡವಾಯಿತು, ಊರಿನಲ್ಲಿ ಇರಲಿಲ್ಲ ಅದಕ್ಕೆ.
ಒಂದು ರಸದೌತಣ ಉಂಡು ಜೀರ್ಣಿಸಿ ಕೊಳ್ಳುವಷ್ಟರಲ್ಲೇ, ಇನ್ನಷ್ಟು ಹೊಸ ಹೊಸ ರುಚಿಗಳಲ್ಲಿ ನಮ್ಮನ್ನು ತೇಲಿಸುತ್ತಿದ್ದೀರಿ! ಏನಾದರೇನಂತೆ ನಮಗೆಲ್ಲ ಹೊಸ ಹೊಸ ರುಚಿಯ ಮೃಷ್ಟಾನ್ನ ಭೋಜನ ದೊರೆಯುತ್ತಿದೆ ಅಷ್ಟೇ, ತುಂಬಾ ತುಂಬಾ ಸಂತೋಷ.

ನಿಮ್ಮ ಹೊಸ ಬ್ಲಾಗ್ ಕವಿತೆಗಳನ್ನೂ ಓದಿದೆ ಚೆನ್ನಾಗಿ ಬರುತ್ತಿದೆ!! ಮತ್ತೆ ಇದರೊಂದಿಗೆ ಕೌತುಕಮಯ ಕಥೆಗಳೂ ಸಹ. ಮುಂದುವರೆಯಲಿ ನಾವೆಲ್ಲಾ ಇದ್ದೇವೆ ನಿಮಗೆ support ಮಾಡಲು ಮತ್ತು ಓದಲು.

Ranjita said...

ಪ್ರಕಾಶಣ್ಣ ,
ಲೇಖನ ಚೆನ್ನಾಗಿದ್ದು ..ಈ ಲೇಖನ ಓದಿ ಇದು 100% "A" ಫಿಲಂ ಉಪೇಂದ್ರರ ಎಫೆಕ್ಟ್ ಇರಬಹುದು ಅನ್ನಸ್ತು. ಬೈಕ್ ಗೆ ಹಾಕಿರೋ ಸೈಕಲ್ ಬೆಲ್ ನ ವಾಚ್ ತರ ಕೈ ಗೆ ಕಟ್ಗೊಂಡಿದ್ರೆ ಇನ್ನು ಜಾಸ್ತಿಯಾಗಿ different ಅಂನಸ್ತಿತತೇನೋ ಅಲ್ವ ? ...ಆದ್ರೂ ಐಡಿಯಾ ಮಾತ್ರ ಸೂಪರ್

Divya Hegde said...

ಪ್ರಕಾಶ್ ಅವರೇ,
ನಿಮ್ಮ ಈ ಆರ್ಟಿಕಲ್ ತುಂಬಾ ಚೆನ್ನಾಗಿದೆ ..
'The way a person dresses,determines his personality'.
ಈ ಮಾತು ಇರುವ ಹಾಗೆ ಯಾವುದೇ ವ್ಯಕ್ತಿಯ ವೇಷ -ಭೂಷಣ ನೋಡಿದ ಕೂಡಲೇ ಅವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಅವ ಹೀಗೇ ಇರಬಹುದು ಎನ್ನುವ ಕಲ್ಪನೆ ಬಂದೆ ಬಿಡುತ್ತದೆ.ಅದು ಆಮೇಲೆ ಅವರೊಡನೆ ಒಡನಾಡಿ ಅವರು ಹೇಗೆ ಎಂಬುದರ ಅರಿವಾಗುತ್ತದೆ ಎನಿಸುತ್ತದೆ. ಕೆಲವರು ಬೇರೆಯವರ ಹೇಳಿಕೆಯ ಮೇರೆಗೆ ವ್ಯಕ್ತಿ ಹೇಗೆ ಎಂದು ಗುರುತಿಸಿದರೆ, ಇನ್ನೂ ಕೆಲವರು ತಾವೇ ಖುದ್ದಾಗಿ ಯೋಚಿಸಿ ನಿರ್ಧರಿಸುತ್ತಾರೆ .ಅದೆಲ್ಲ ಅವರವರಿಗೆ ಬಿಟ್ಟಿದ್ದು.
ಹಾಗೆ ಡಿಫರೆಂಟ್ ಆಗಿ ಇರಬೇಕು ಅಂತ ಎಲ್ಲರೂ ಇಷ್ಟ ಪಡುವುದು ಸಹಜ ಆದರೆ ಅದು ಅತಿ ರೇಖವಾದರೆ ಡಿಫರೆಂಟ್ ಹೋಗಿ ವಿಯರ್ಡ್ ಆಗುತ್ತದೆ.ಹಾಗಾಗದಿದ್ದರೆ ಸರಿ ಅಂತ ನನ್ನ ಅನಿಸಿಕೆ.

jayalaxmi said...

ಈ ಹುಡುಗನ ನಡುವಳಿಕೆ ಅದೇನೊ ನನಗೆ ಇಷ್ಟವಾಯ್ತು. ನೀವು ಹೇಳುವ ಹಾಗೆ " ಜನಕ್ಕೆ ನಮ್ಮ ಬಗ್ಗೆ.... " ಅನ್ನುವುದಂತೂ ಶೇಕಡಾ ನೂರರಷ್ಟು ನಿಜ. ಮಿನಿ ಕಾದಂಬರಿ ಬೇಗ ನಮಗೆಲ್ಲ ಓದಲು ಸಿಗುವಂತಾಗಲಿ. ಬ್ಲಾಗ್ ಬರಹಗಳು ಪುಸ್ತಕದ ರೂಪದಲ್ಲಿ ಬರುತ್ತಿರುವುದು ಸಂತಸದ ವಿಷಯ. ಶುಭ ಹಾರೈಕೆಗಳು. ಉದಯವಾಣಿಯಲ್ಲಿನ ’ಇಟ್ಟಿಗೆ ಸಿಮೆಂಟು’ ಕುರಿತ ಲೇಖನ ನಾವೆಲ್ಲ ಓದಬೇಕಲ್ಲ ಪ್ರಕಾಶ್?

ಸಿಮೆಂಟು ಮರಳಿನ ಮಧ್ಯೆ said...

ರವಿಯವರೆ....

ನಮ್ಮ ವ್ರತ್ತಿಗೊಂದು ತಕ್ಕುದಾದ ವೇಷ ಇರಬೇಕೆ...?
ಅವಶ್ಯಕತೆ ಬೇಡ ಅಲ್ಲವಾ..?
ನಾನೂ ಕೂಡ ಬರ್ಮುಡಾ ಹಾಕಿಕೊಂಡು ಕೆಲಸಕ್ಕೆ ಹೋಗುವವ..
ಹಾಗಾಗಿ ಅವನ ವಿಚಿತ್ರ ಡ್ರೆಸ್ ಏನೂ ಅನ್ನಿಸಲಿಲ್ಲ...
ವೇಷಕ್ಕಿಂತ ಮುಖ್ಯವಾದದ್ದು ಅವನ ನಡೆ ನುಡಿ...

ಅವೂ ಕೂಡ ವಿಚಿತ್ರ...

ನನಗೆ ಮೆಚ್ಚುಗೆಯಾದದ್ದು ಆತನ "ಪ್ರಾಮಾಣಿಕತೆ"

ಈ ಚಿತ್ರ, ವಿಚಿತ್ರ ಎಲ್ಲವನ್ನೂ ತಿದ್ದ ಬಹುದು ಅಥವಾ ಸಹಿಸಬಲ್ಲೆವು...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ರವಿಕಾಂತ ಗೋರೆ said...

ಇದೊಂಥರ ಉಪೇಂದ್ರ ಸ್ಟೈಲ್ಅನ್ಸುತ್ತೆ... ಈಥರದವರು ತುಂಬಾ ಜನ ಇರ್ತಾರೆ... different ಅನ್ನೋದು ಆಲೋಚನೆಯಲ್ಲಿರಬೇಕು.... ಈ ರೀತಿ ನಡವಳಿಕೆ, ಬಟ್ಟೆ ಬರೆಯಲ್ಲಿ different ಆಗಿರೋರು ಕೊನೆಗೊಂದು ದಿನ ಫಜೀತಿ ತಂದಿಡುವ ಪ್ರಸಂಗಗಳು ತುಂಬ ನಡೆದಿವೆ.. ಅದರ ಬಗ್ಗೆ ಮುಂದೆ ಹೇಳುವೆ... ಸ್ವಲ್ಪ ಹುಷಾರಾಗಿರಿ...

Shantala Sayimane said...

ನಾವಿರುವುವಂತೆ ಜಗತ್ತಿರಬೇಕೆಂಬುದು ಎಲ್ಲರ ಆಸೆ. ಹದಿಹರೆಯದಲ್ಲಿ........ ನಾನು ಈ ಜಗತ್ತನ್ನೇ ಬದಲಾಯಿಸಿ ಬಿಡ್ತಿನಿ ಅನ್ನೋ ಆಸೆ. ಜಗತ್ತಿರುವಂತೆ ನಾವಿರಬೇಕು ಎಂದು ಅರ್ಥವಾಗುವ ಹೊತ್ತಿಗೆ ಹರೆಯ ದಾಟಿರುತ್ತದೆ.

ನಿಮ್ಮ ಹೊಸ ಕಾದಂಬರಿಗೆ ಸ್ವಾಗತ.... ನೀವು ಏನೇ ಬರೆದರೂ, ಅದನ್ನು ನಾವು ಓದುತ್ತೇವೆ ಎನ್ನುವುದಕ್ಕಿಂತ ಅದೇ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ ಎನ್ನುವುದೇ ಸರಿ. ನಿಮ್ಮ ಬರವಣಿಗೆಗೆ ಅಂಥ ಶಕ್ತಿ ಇದೆ.

ವಿನುತ said...

ಪ್ರಕಾಶ್ ರವರೇ,

ಪ್ರವಾಸದ ಸಲುವಾಗಿ ಬ್ಲಾಗುಗಳಿಗೆ ಭೇಟಿ ಕೊಡಲಾಗಿರಲಿಲ್ಲ. ಕ್ಷಮೆಯಿರಲಿ.
ಎ೦ದಿನ೦ತೆ ಸುತ್ತಲಿನ ಅನುಭವಗಳಿ೦ದ ಪಾಠ ಕಲಿಯುವ೦ತಹ ನಿಮ್ಮ ಶೈಲಿಯ ಸು೦ದರ ಬರಹ. ಎಲ್ಲೂ ಅತಿ ವಿಜೃ೦ಭಣೆಯಿಲ್ಲದೆ, ನಿಮ್ಮ ಅಭಿಪ್ರಾಯಗಳನ್ನು ಬೆರೆಸದೆ ಸರಳವಾಗಿ ಮು೦ದಿಟ್ಟಿದ್ದೀರಿ. ನಿಜಕ್ಕೂ ಆ ಹುಡುಗನ೦ತಹವರು ಅಪರೂಪ. ಆದರೆ ವಿಭಿನ್ನವಾಗಿರಲೇಬೇಕ೦ತ ಬೈಕಿಗೆ ಸೈಕಲ್ ಬೆಲ್ ಹಾಕಿಕೊ೦ಡಿರುವುದು ಯಾಕೋ ಅತಿರೇಕವೆನಿಸಿತು.

venki said...

hai
chenagidu
venkatesha s sampa
09448219347

ಶಿವಪ್ರಕಾಶ್ said...

ಹುಡುಗ ಕರೆಕ್ಟಾಗಿ ಇದಾನೆ. ಹಾಗೆ ಇರ್ಬೇಕು. ಇಲ್ದೆ ಹೋದ್ರೆ ಲೈಫ್ ಸಿಕ್ಕಾಪಟ್ಟೆ ಬೋರ್ ಹೊಡಿಯುತ್ತೆ.
ನಿಮ್ಮ ಪುಸ್ತಕ ಬೇಗ ಬರಲಿ.. ನಾವು ನಿಮ್ಮ ಜೊತೇಲಿ ಇದಿವಿ.

ಲೋಹಿತ said...

super sir....