Friday, March 27, 2009

ಯುಗಾದಿ ಹಬ್ಬದ ಶುಭಾಶಯಗಳು.....!

ಈ ಮರ ನಮ್ಮೂರ ಬೆಟ್ಟದಲ್ಲಿದೆ...
ನಾನು ಚಿಕ್ಕವನಿದ್ದಾಗಲಿಂದಲೂ ನೋಡುತ್ತಿದ್ದೇನೆ....

ಇದು ಒಂದು ಸೋಜಿಗ......! ವಿಸ್ಮಯ....!

ಪ್ರತಿ ವರ್ಷ ಮಳೆಗಾಲದಲ್ಲಿ ಇದರ ರೆಂಭೆಗಳನ್ನು ಕಡಿಯುತ್ತಾರೆ..
ಛಲ ಬಿಡದೆ ಇದು ಚಿಗುರುತ್ತಿತ್ತು..!

ಮತ್ತೆ .. ಮತ್ತೆ ಚಿಗುರುತ್ತಲಿದೆ.....!

ವಸಂತಾಗಮನಕ್ಕೆ....
ಹಳೆ ಎಲೆಗಳೆಲ್ಲ್ಲ ಉದುರಿ..
ಹೊಸ ಚಿಗುರೆಲೆಗಳೊಂದಿಗೆ...

ಅದೂ.......

ಹ್ರದಯಾಕಾರದಲ್ಲಿ...!!

ಪ್ರೀತಿ.. ಪ್ರೇಮದ ಸಂಕೇತವಾಗಿ....

ಈ ಪ್ರಕ್ರತಿಯೇ ನಮಗೆ ಶುಭ ಕೋರುತ್ತಿದೆ...!

ನಿಮಗೆಲ್ಲರಿಗೂ "ಉಗಾದಿ ಹಬ್ಬದ " ಶುಭಾಶಯಗಳು.....

ನಿಮ್ಮೆಲ್ಲ ಆಸೆ ಕನಸುಗಳು ಈಡೇರಲಿ...
ಸುಖ ಶಾಂತಿ ಸಮ್ರುದ್ಧಿಯನ್ನು ತರಲಿ....



47 comments:

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಪ್ರಕೃಯ ಸಂದೇಶವನ್ನು ಹೊತ್ತು ತಂದ ನಿಮ್ಮ ಬ್ಲಾಗ್ ಗೂ ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣಾ...
ಚೆಂದದ ಫೋಟೋದೊಂದಿಗೆ ಚೆಂದದ ಶುಭಾಶಯ ಕೋರಿದ ನಿಮಗೆ ಧನ್ಯವಾದಗಳು. ಮತ್ತು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು.

guruve said...

ಪ್ರಕಾಶ್,

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಯುಗಾದಿ ಹಬ್ಬ ಎಂದರೆ, ಮರಗಳ ಚಿಗುರುವುದೇ ಮೊದಲಿಗೆ ನೆನಪಿಗೆ ಬರುವುದು. ಅದರಲ್ಲೂ ಹೊಂಗೆ ಮರದ ಚಿಗುರು ನೋಡಲು ಅತ್ಯಾಕರ್ಷವಾಗಿರುತ್ತದೆ.

ನೀವು ತಿಳಿಸಿರುವ ಮರ ಯಾವುದು?

ಸುಪ್ತದೀಪ್ತಿ suptadeepti said...

ಯುಗಾದಿಯ ಶುಭಾಶಯಗಳು ನಿಮಗೆಲ್ಲ, ನಿಮ್ಮ ಬಂಧು ಬಾಂಧವರಿಗೆಲ್ಲ, ಮಿತ್ರ ವೃಂದದವರಿಗೆಲ್ಲ, ನಿಮ್ಮ ಬ್ಲಾಗ್ ಓದುಗರಿಗೆಲ್ಲ.

ವರುಷ ಪೂರ್ತಿ ಹರುಷವಿರಲಿ ಮನೆಮನಗಳಲ್ಲಿ

ಮರದ ಚಿತ್ರ ಚೆನ್ನಾಗಿದೆ. ಪ್ರಕೃತಿಯ ಸಂದೇಶ ಎಷ್ಟು ಸುಂದರವಾಗಿಯೂ ಮೂರ್ತವಾಗಿಯೂ ಸಾಂಕೇತಿಕವಾಗಿದೆ. ಖುಷಿಯಾಯ್ತು.

ಅಂತರ್ವಾಣಿ said...

prakashanna,
yugaadiya shubhaashayaglu..

sakkath mara !

sunaath said...

ಪ್ರಕಾಶ,
ಯುಗಾದಿಯ ಶುಭಾಶಯಗಳು.
ಹೊಸ ವರ್ಷ ನಿಮಗೆ ಹರ್ಷವನ್ನು ತರಲಿ.

ಬಿಸಿಲ ಹನಿ said...

ಪ್ರಕಾಶ್,
ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.

shivu.k said...

ಪ್ರಕಾಶ್ ಸರ್,

ಪ್ರಕೃತಿಯ ಮುಂದೆ ನಾವೆಲ್ಲರೂ ತೃಣ ಸಮಾನರು...ನಮಗೆಲ್ಲಾ ಸಮಯಕ್ಕೆ ಸರಿಯಾಗಿ ಪಾಠ ಕಲಿಸುತ್ತದೆ..
ಸುಂದರ ಹೃದಯವುಳ್ಳ ಮರ...ಮನಸ್ಸಿನಲ್ಲೂ ದೇಹದಲ್ಲೂ....

ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು...

ಸಾಗರದಾಚೆಯ ಇಂಚರ said...

ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು.

ತೇಜಸ್ವಿನಿ ಹೆಗಡೆ said...

ಪ್ರಕಾಶಣ್ಣ,

ಚಿತ್ರ ಮಾತ್ರ ಆಗಿದ್ದು. ರಾಶಿ ಇಷ್ಟ ಆತು. ಪ್ರೀತಿಪೂರ್ವಕ, ಆತ್ಮೀಯ ಸಂದೇಶಹೊತ್ತ ನಿಮ್ಮ ಶುಭ ಹಾರೈಕೆಗೆ ತುಂಬಾ ಧನ್ಯವಾದಗಳು. ಹಾಗೆಯೇ ನಿಮ್ಮ ಮನೆಯವರಿಗೆಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.

ಭಾರ್ಗವಿ said...

ಚಂದವಾಗಿರುವ ಶುಭಾಷಯಕ್ಕೆ ಧನ್ಯವಾದಗಳು. ನಿಮಗೂ ನಿಮ್ಮ ಮನೆಯವರೆಲ್ಲರಿಗೂ ಯುಗಾದಿಯ ಶುಭಾಷಯಗಳು.

NATESH said...

ಯುಗಾದಿ ಶುಭಾಶಯಗಳು

ಮನಸು said...

ನಿಮಗೂ ಹಾಗು ನಿಮ್ಮ ಕುಟುಂಬದವರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು..
ಒಳ್ಳೆಯ ಚಿತ್ರ ಜೊತೆಗೆ ಚೆಂದದ ಶುಭಾಷಯ..
ಧನ್ಯವಾದಗಳು..

ಕ್ಷಣ... ಚಿಂತನೆ... said...

sir, shubhaashayagalu.

prakruthiya sobagannu yaaru taane ichchisuvudilla. chitra sandeshada joteyalli shubha koridakke dhanyavaadagalu.

ಚಿತ್ರಾ said...

Prakashanna,
Sorry , tada aatu. nimagu nimma maneyalli ellarigu nanna haardika shubhashayagaLu. Ee hosa varshadalli kahi kammi sihi hecchirali.

Prabhuraj Moogi said...

sorry sir, ಊರಿಗೆ ಹೋಗಿದ್ದೆ ಬರುವು ತಡವಾಯಿತು, ತಡವಾದರೂ ಸರಿ ಯುಗಾದಿಯ ಶುಭಾಶಯಗಳು...

Vani Satish said...

ಧನ್ಯವಾದಗಳು.ನಿಮಗೂ ಸಹ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಪ್ರಕೃತಿಯ ಸಂದೇಶ , ಫೋಟೋ ತುಂಬಾ ಚೆನ್ನಾಗಿದೆ.ಆ ಮರದ ಹೃದಯ ಚಿತ್ರದಲ್ಲಿ ಸಂಜೆಯ "ಸುಂದರ" ಸೂರ್ಯ ಅಥವಾ ಬೆಳಗಿನ "ಬೆಡಗಿನ" ಭಾಸ್ಕರ ಇದ್ದಿದ್ದರೆ ಇನ್ನೂ ಮನೋಹರವಾಗಿರುತ್ತಿತ್ತು. ಎನ್ನುವದು ನನ್ನ ಅಭಿಪ್ರಾಯ.

Unknown said...

ನಿಮಗೂ ಶುಭಾಶಯಗಳು. ಈ ಹೊಸ ಸಂವತ್ಸರದಲ್ಲಿ ನಿಮ್ಮ ಬ್ಲಾಗ್ ಹೊಸ ಹೊಸ ವಿಷಯಗಳನ್ನು ಹೊತ್ತು ತರಲಿ.ಓದುಗರನ್ನು ಮುದಗೊಳಿಸಲಿ ಎನ್ನುವದು ನನ್ನ ಆಶಯ.ನಮಗೆಲ್ಲ ಒಳ್ಳೆಯ ಫೋಟೋದೊಂದಿಗೆ ಪ್ರಕೃತಿಯ ಬಗೆಗಿನ ಕಾಳಜಿಯನ್ನೂ ಸಂದೇಶವನ್ನೂ ನಿರೂಪಿಸಿದ್ದಕ್ಕೆ ತುಂಬಾ ಧನ್ಯವಾದಗಳು.
(ಖುಷ್ವಂತ್ Pune)

ಹಿತ್ತಲಮನೆ said...

valentine's day ಗೆ ಹಾಕಿದ್ರೆ ಮಸ್ತ್ ಆಗ್ತಿತ್ತು !

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ, ಯುಗಾದಿ ಹಬ್ಬದ ಶುಭಾಶಯಗಳು...
ಹೊಸ ವರುಷ ನಿಮಗೆ ಹೊಸ ಹರುಷವನ್ನು ತರಲಿ...

Ittigecement said...

ಮಲ್ಲಿಕಾರ್ಜುನ..

ನಿಮಗೂ ಈ ವರ್ಷ ಒಳ್ಳೆಯದಾಗಲಿ..
ಮತ್ತಷ್ಟು ಪ್ರಶಸ್ತಿಗಳು ಬರಲಿ...

Ittigecement said...

ಶಾಂತಲಾ...

ಈ ವರ್ಷ ನಿಮ್ಮ ಬ್ಲಾಗಿನಲ್ಲಿ ರಸಕಾವ್ಯದ ಹೊಳೆಯೇ ಹರಿಯಲಿ...
ನಿಮಗೂ ,ನಿಮ್ಮ ಮನೆಯವರೆಲ್ಲರಿಗೂ..
ಶುಭಾಶಯಗಳು...

Ittigecement said...

ಗುರುಪ್ರಸಾದ್...

ಈ ಮರ ಯಾವುದೆಂದು ನನಗೆ ಗೊತ್ತಿಲ್ಲ...
ಪ್ರತಿವರ್ಷ ಹ್ರದಯಾಕಾರದಲ್ಲಿ..
ಬೆಳೆಯುವದನ್ನು ಗಮನಿಸುತ್ತಿದ್ದೇನೆ...
ನಿಮಗೂ ಹೊಸವರ್ಷದ ಶುಭಾಶಯಗಳು..

Ittigecement said...

ಸುಪ್ತದೀಪ್ತಿಯವರೆ...

ಫೋಟೊ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು..
ನಿಮಗೂ..,
ನಿಮ್ಮ ಬ್ಲಾಗ್ ಓದಗರಿಗೂ ಹೊಸವರ್ಷದ

ಶುಭಾಶಯಗಳು

Ittigecement said...

ಅಂತರ್ವಾಣಿಯವರೆ..

ವಿರೋಧಿನಾಮಸಂವತ್ಸರದ ಶುಭಾಶಯಗಳು..

Ittigecement said...

ಸುನಾಥ ಸರ್...

ನಿಮಗೂ ಸಹ ಹೊಸ ವರುಷ

ತರಲಿ ಹರುಷ..

ತರಲಿ ಸುಖ ಶಾಂತಿ, ಸಮ್ರುದ್ಧಿ...

Ittigecement said...

ಉದಯ ಸರ್...

ನಿಮಗೂ , ನಿಮ್ಮ ಓದುಗ ಅಭಿಮಾನಿಗಳಿಗೂ..
ಹೊಸ ವರ್ಷದ ಶುಭಾಶಯಗಳು

Ittigecement said...

ಶಿವು ಸರ್...

ನಿಮಗೂ ನಿಮ್ಮ ಓದುಗ ಅಭಿಮಾನಿಗಳಿಗೂ..
ಹೊಸ ವರ್ಷದ ಶುಭಾಶಯಗಳು..
ಈ ವರ್ಷ ನಿಮ್ಮ ಬ್ಲಾಗ್...
ಇನ್ನಷ್ಟು ರಂಗು ರಂಗಾಗಿ ಬರಲಿ..
ನಮ್ಮನ್ನೆಲ್ಲಾ ರಂಜಿಸಲಿ...

Ittigecement said...

ಗುರುಮೂರ್ತಿಯವರೆ...

ನಿಮಗೂ , ನಿಮ್ಮ ಮನೆಯವರೆಲ್ಲರಿಗೂ..

ಹೊಸ ವರ್ಷದ..
ಹಾರ್ಧಿಕ
ಶುಭಾಶಯಗಳು...

Ittigecement said...

ಭಾರ್ಗವಿಯವರೆ...

ಬಹಳ ದಿನಗಳ ನಂತರ ಬಂದಿದ್ದೀರಿ..
ನಿಮಗೂ ಹೊಸವರ್ಷದ ಶುಭಾಶಯಗಳು...

Ittigecement said...

ತೇಜಸ್ವಿನಿಯವರೆ...
ನಿಮಗೂ ,ನಿಮ್ಮ ಮನೆಯವರಿಗೆಲ್ಲ
ಹೊಸವರ್ಷದ ಶುಭಾಶಯಗಳು...
ನಿಮ್ಮ ಬ್ಲಾಗ್ ಇನ್ನಷ್ಟು ಸುಂದರವಾಗಿ ಬರಲಿ..

Ittigecement said...

ನಟೇಶ್ ವಿಟ್ಲರವರೆ...

ನನ್ನ ಬ್ಲಾಗಿಗೆ ಸುಸ್ವಾಗತ..

ಹೊಸ ವರ್ಷ..
ಶುಭದಾಯಕವಾಗಲಿ..
ಹೀಗೆ ಬರುತ್ತಾ ಇರಿ...

Ittigecement said...

ಮನಸು...

ನಿಮಗೂ, ನಿಮ್ಮ ಕುಟುಂಬದವರಿಗೆಲ್ಲರಿಗೂ..
ಹೊಸ ವರ್ಷದ ಶುಭಾಶಯಗಳು..

Ittigecement said...

ಕ್ಷಣ ಚಿಂತನೆ...

ನಿಮಗೂ ಹೊಸ ವರ್ಷದ ಶುಭಾಶಯಗಳು..

Ittigecement said...

ಚಿತ್ರಾ....

ಎಲ್ಲಿ ಹೋಗಿಬಿಟ್ಟಿದ್ದೀರಿ..
ಇಷ್ಟು ದಿನ...?

ನಿಮಗೂ , ನಿಮ್ಮ ಕುಟುಂಬದವರಿಗೂ..
ಹೊಸ ವರ್ಷದ ಶುಭಾಶಯಗಳು...

Ittigecement said...

ಪ್ರಭು....

ತಡವಾಗಿದ್ದು ನನ್ನಿಂದ...
ನಿಮಗೆ ಉತ್ತರ ಕೊಡಲು...

ನನ್ನ ಗೆಳೆಯನ "ಸತ್ಯ" ನ ಮನೆಯ ಗ್ರಹ ಪ್ರವೇಶದಲ್ಲಿದ್ದೆ...

ನಿಮಗೆಲ್ಲರಿಗೂ ಹೊಸವರ್ಷದ ಶುಭಾಶಯಗಳು

Ittigecement said...

ನಿಜ ವಾಣಿಯವರೆ...
ಈ ಸಾರಿ ಊರಿಗೆ ಹೋದಾಗ..
ಅದರಲ್ಲಿ ಸೂರ್ಯನನ್ನು ಹಿಡಿಯಲು ಪ್ರಯತ್ನಿಸುವೆ...

ನಿಮಗೂ, ನಿಮ್ಮ ಮನೆಯವರಿಗೆಲ್ಲರಿಗೂ..
ಹೊಸವರ್ಷದ ಶುಭಾಶಯಗಳು...

Ittigecement said...

ಖುಷಿಯವರೆ....

ನಿಮ್ಮ ಶುಭಾಶಯದಲ್ಲಿ..
ನನ್ನ ಜವಾಬ್ದಾರಿ ಹೇಳಿದಂತಿದೆ..
ಖಂಡಿತ ನಿಭಾಯಿಸಲು ಪ್ರಯತ್ನಿಸುವೆ...

ನಿಮ್ಮ ಅಭಿಮಾನಕ್ಕೆ ವಂದನೆಗಳು..

ನಿಮಗೂ ಸಹ ಹೊಸವರ್ಷದ ಶುಭಾಶಯಗಳು...

Ittigecement said...

ಹಿತ್ತಲಮನೆಯ ಬೀಗಣ್ಣನವರೆ...

ಬರುವದು ಬಹಳ ಅಪರೂಪವಾಯಿತಲ್ಲ...!

ಪ್ರೇಮಿಗಳ ದಿನಕ್ಕೆ ಹಾಕ ಬೇಕಿಂದಿದ್ದೆ..
ಆಗ "ಚೇತನಾ" ಲೇಖನ ಬರೆಯಲು ಒತ್ತಡ ಇತ್ತು...

ನಿಮಗೂ, ಕುಟುಂಬದವರಿಗೆಲ್ಲರಿಗೂ..
ಹೊಸವರ್ಷದ ಶುಭಾಶಯಗಳು...

Ittigecement said...

ಶಿವಪ್ರಕಾಶ್..

ನಿಮಗೂ, ನಿಮ್ಮ ಮನೆಯವರಿಗೆಲ್ಲರಿಗೂ...
ಹೊಸವರ್ಷದ ಶುಭಾಶಯಗಳು...

Chandrika said...

ಮತ್ತೊಮ್ಮೆ ಯುಗಾದಿಯ ಶುಭಾಶಯಗಳು. ನಿಮ್ಮ ಬ್ಲಾಗಿನಲ್ಲಿ "ಉಗಾದಿ" ಎಂಬ ಪದವನ್ನು ಕಂಡು ಅಚ್ಚರಿಯಾಯಿತು! :)
ಯುಗ+ ಆದಿ = ಯುಗಾದಿ. ಉಗಾದಿಗೆ ಅರ್ಥವಿಲ್ಲ.
ಚಿಕ್ಕವಳು ತಿದ್ದಲು ಹೇಳುತ್ತಾಳೆ ಎಂದು ತಿಳಿದರೆ, ಮನ್ನಿಸಿ. :)

Ittigecement said...

ಚಂದ್ರಿಕಾರವರೆ...

ನಾನು ನಿಮ್ಮ ಪ್ರತಿಭೆ ಕಂಡು..
ಆಶ್ಚರ್ಯ ಪಟ್ಟಿದ್ದೇನೆ...

"ಉಗಾದಿ" ಶಬ್ಧವನ್ನು ಯುಗಾದಿಗೆ ಪರ್ಯಾಯವಾಗಿ ಬಳಸುತ್ತಾರೆ..
ನಾನು ಹಲವು ಕಡೆಗಳಲ್ಲಿ ಓದಿದ್ದೇನೆ..

"ಸುನಾಥ ಅವರ ಬಳಿಯಲ್ಲಿ
(ಅವರು ಯುಗಾದಿ ಬಗೆಗೆ ಹೊಸ ಲೇಖನ ಬರೆದಿದ್ದಾರೆ..
ಅವರಿಗೆ ಪ್ರತಿಕ್ರಿಯೆಯಲ್ಲಿ ಇದರ ಬಗೆಗೆ ಕೇಳಿದ್ದೇನೆ..
ನೀವು ಹೋಗಿ ನೋಡಬಹುದು)

ಅರ್ಥದ ಬಗೆಗೆ ನನಗೆ ಗೊತ್ತಿಲ್ಲ..

ಅಪಾರ್ಥವಂತೂ ಇಲ್ಲ..
ಬಳಸಬಹುದು.. ಬಳಸುತ್ತಿದ್ದಾರೆ ಎಂದಷ್ಟೆ ಹೇಳಬಲ್ಲೆ..

ಬಲ್ಲವರು ಇದನ್ನು ಬಗೆಹರಿಸ ಬೇಕು...

ನೀವು ಕೇಳಿದ್ದಕ್ಕೆ ಖಂಡಿತಾ ಬೇಸರವಿಲ್ಲ...

ನಿಮಗೂ ಯುಗಾದಿಯ ಶುಭಾಶಯಗಳು..

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ನಾನು ಹಬ್ಬದ ಹಿಂದಿನ ದಿನವೇ ಶುಭಾಷಯ ಕೋರಿಯಾಗಿದೆ :)
ಆದರೂ ಮತ್ತೊಮ್ಮೆ ವಿರೋಧಿ ಸಂವತ್ಸರದ ಯುಗಾದಿ ಹಬ್ಬ ಈ ವರ್ಷ ನಿಮಗೆ ಎಲ್ಲಾ ರೀತಿಯ ಏಳ್ಗೆ ತಂದು ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.

ಚಂದ್ರಕಾಂತ ಎಸ್ said...

ಪ್ರಕಾಶ್ ಅವರೆ
ನಮಸ್ಕಾರ. ನೀವೀಗ ನಿರಾಳವಾಗಿ ಉಸಿರಾಡಬಹುದು! ನಿಮ್ಮ " ಉಗಾದಿ " ತಪ್ಪು ಪ್ರಯೋಗವಲ್ಲ!ಭಾಷೆಗೆ ಯಾವುದೇ ಕಟ್ಟುಪಾಡುಗಳಿಲ್ಲ. ಅದು ಮಾತನಾಡುವವರ ಬಾಯಲ್ಲಿ ಬೇರೆ ಬೇರೆ ರೂಪ ಪಡೆಯುತ್ತದೆ. ಬಹು ಹಿಂದೆ ನಮ್ಮ ಕನ್ನಡ ಭಾಷೆ ಸಂಸ್ಕೃತದಿಂದ ಅನೇಕ ಪದಗಳನ್ನು ಸ್ವೀಕರಿಸಿದೆ.

ಹಾಗೆ ಕನ್ನಡಕ್ಕೆ ಬಂದ ಪದಗಳು ಬೇರೆ ಬೇರೆ ಬದಲಾವಣೆಗಳನ್ನು ಪಡೆದುಕೊಂಡಿವೆ.
ಉದಾ : ಸಂಸ್ಕೃತದ ಸೀತಾ , ಮಾಲಾ , ಉಷಾ ಪದಗಳು ಕನ್ನಡದಲ್ಲಿ ಸೀತೆ , ಮಾಲೆ , ಉಷೆ ಆಗಿವೆ.

ಇನ್ನು ಕೆಲವು ಪದಗಳು ಪ್ರಾರಂಭದ ವ್ಯಂಜನ ಕಳೆದುಕೊಂಡು ಸ್ವರ ಮಾತ್ರ ಉಳಿಸಿಕೊಂಡಿವೆ.
ಉದಾ : ಯುಗಾದಿ ಪದ ಕನ್ನಡದಲ್ಲಿ ‘ ಯ್ ’ ಕಳೆದುಕೊಂಡು ‘ಉ’ ಮಾತ್ರ ಉಳಿದು ಉಗಾದಿ ಆಗಿದೆ. ಇವುಗಳಲ್ಲಿ ಯುಗಾದಿ (ತತ್ಸಮ) ಉಗಾದಿ ( ತದ್ಭವ’ ಆಗಿದೆ.

ಇನ್ನು ಕೆಲವು ಪದಗಳಲ್ಲಿ ಪ್ರಾರಂಭದ ‘ಯ’, ‘ಜ’ಆಗುತ್ತದೆ.
ಉದಾ: ಯಾತ್ರೆ > ಜಾತ್ರೆ ; ಯೋಗಿ > ಜೋಗಿ ; ಯೌವನ > ಜವ್ವನ ಆಗಿವೆ

ಇಂತಹ ಅನೇಕ ಬದಲಾವಣೆಗಳಾಗಿವೆ. ಇದ್ಯಾವುದನ್ನೂ ತಪ್ಪೆಂದು ಪರಿಗಣಿಸುವುದಿಲ್ಲ.

ನನ್ನ ಉತ್ತರ ಉದ್ದವಿರುವುದಕ್ಕೆ ಕ್ಷಮೆಯಿರಲಿ ( ಗುರು ಎಂದು ಒಪ್ಪಿದ ತಪ್ಪಿಗೆ ಈ ಕೊರೆತವನ್ನು ಸಹಿಸಿಕೊಳ್ಳಲೇಬೇಕು !!!)

ನಿಮಗೂ ಉಗಾದಿಯ ಶುಭಾಶಯಗಳು !!!

Ittigecement said...

ರಾಜೇಶ್...

ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು...

ನಿಮಗೂ ಒಳ್ಳೆಯದಾಗಲಿ...

ಹೊಸವರ್ಷದ ಶುಭ ಕಾಮನೆಗಳು...

Ittigecement said...

ಚಂದ್ರಕಾಂತರವರೆ...

ನಮ್ಮ ಹಾಗೂ ಚಂದ್ರಿಕಾರವರ
ಅನುಮಾನವನ್ನು ಸುಲಭವಾಗಿ ಪರಿಹರಿಸಿದ್ದಕ್ಕೆ...

ಧನ್ಯವಾದಗಳು...

ಕೆಲವು ಬಾರಿ ನಾವು ಉಪಯೋಗಿಸುವ ಶಬ್ಧಗಳ
ಅರ್ಥವಾಗಿರುವದಿಲ್ಲ...

ಅದರೂ ಬಳಸುತ್ತಿರುತ್ತೇವೆ...

ಇದರ ಬಗೆಗೆ ಚಂದ್ರಿಕಾರವರೂ ಅಪಾರ್ಥಮಾಡಿಕೊಳ್ಳ ಬಾರದೆಂದು
ನನ್ನ ಪ್ರಾರ್ಥನೆ....

ನಿಮಗೆ
ನಮ್ಮ ಕ್ರತಜ್ಞತೆಗಳು..

ಧನ್ಯವಾದಗಳು...

Chandrika said...

nAnu omme paMchAMga shravaNa mADuttiddAga,"yugAdi" embudu sariyAda prayOga eMdu hiriyaru hELiddariMda adE guMginalli idara arthavannu prashniside.

bEsaravAgali, apArthavAgali khaMDita nanna manassinallilla. :)