Tuesday, March 31, 2009

" ಈ.... ಜಗತ್ತು ಸುಧಾರಣೆ ಆದರೂ .. ನೀವು.. ಮಾತ್ರ ಆಗಲ್ಲಾ..!!ಬೆಂಗಳೂರಿನಲ್ಲಿ ನೌಕರಿ ಸಿಕ್ಕಿತ್ತು..
ಹೇಳಲಿಕ್ಕೆ "ಅಸಿಸ್ಟಂಟ್ ಇಂಜನೀಯರ್" ಹುದ್ದೆ..

ಹಗಲಿರುಳು ಕೆಲಸ..!
ಸಂಬಳ "ಏಳುನೂರು ಐವತ್ತು ".....!


ವಿಧ್ಯಾರ್ಥಿ ಜೀವನದಲ್ಲಿ ಸಹಾಯ ಮಾಡಿದವರಿಗೂ...
"ಮಾಡಿದ್ದು ವ್ಯರ್ಥವಾಗಲಿಲ್ಲವಲ್ಲ...
ಈ ಪ್ರಕಾಶ ... ಜೀವನದಲ್ಲಿ "ಸೆಟಲ್" ಆದನಲ್ಲ.."
ಎನ್ನುವ ಭಾವನೆ...


ನನ್ನ ಜೀವನದ ಕಷ್ಟದಲ್ಲಿ, ಸುಖದಲ್ಲಿ, ಬಂಡೆಗಲ್ಲಿನಂತೆ ಇದ್ದ ನನ್ನ ಬಾವ...

ನನ್ನನ್ನು ನೋಡಿ ಬರಲು ಬೆಂಗಳೂರಿಗೆ ಬಂದೇ ಬಿಟ್ಟರು...!

ಸಣ್ಣ ವಯಸ್ಸು.., ಕೈಗೆ ಸಂಬಳ ಸಿಗ್ತಾ ಇದೆ....
ಹುಡುಗ ಚಟಕ್ಕೆ ಬಿದ್ದು ಹಾಳಾದರೆ..?
ಎನ್ನುವ ಕಾರಣವೂ ಇದ್ದೀತು....

ನಾನು ಸಂಭ್ರಮದಿಂದ ಮೆಜೆಷ್ಟಿಕ್ ಹೋಗಿ..
ಕರೆದು ಕೊಂಡು ಬಂದೆ...

ನಮ್ಮ ರೂಮ್ ನೋಡಿ ಬಾವನಿಗೂ ಖುಷಿಯಾಯ್ತು...

ರೂಮಿನಲ್ಲಿ ನಾನು ಮತ್ತು ಸ್ನೇಹಿತ "ಪುಟ್ಟಸ್ವಾಮಿ" ಇದ್ದೆವು...

" ಬಾವ .. ನೀನು ರೂಮಿನಲ್ಲೇ ಇರು..
ಬೇಸರವಾದರೆ ಇಲ್ಲೇ ಹತ್ತಿರ ಅಡ್ಡಾಡಿ ಬಾ...
ನಾನು ಸಾಯಂಕಾಲ ಐದು ಗಂಟೆಗೆ ಬರ್ತೇನೆ.. "

ಎಂದು ಹೇಳಿ ನಾನು ಹೊರಟೆ...

ಬಾವ ರೂಮಿನಲ್ಲೇ ಉಳಿದರು...

ನಾನು ನನ್ನ ಸೀನಿಯರ್ ಇಂಜನೀಯರ ಬಳಿ ಅನುಮತಿ ಪಡೆದು..
ಮಧ್ಯಾಹ್ನವೇ ಮನೆಗೆ ಬಂದು ಬಿಟ್ಟೆ...


ಬಾಗಿಲು ತೆಗೆದರು ಬಾವ...

ಮುಖನೋಡಿದೆ...

ಕೆಂಡಾಮಂಡಲ.. ಕೋಪ ಬಂದಿದೆ...!

ಕಣ್ಣೆಲ್ಲ ಕೆಂಪಾಗಿ ಧುಮು ಧುಮು ಗುಡುತ್ತಿದ್ದರು...!

ನನ್ನನ್ನು ಕಂಡವರೇ... ಜೋರು ಮಾಡಿ.. ಹೇಳಿದರು...

"ಜಗತ್ತು ಸುಧಾರಣೆ ಆದರೂ ..
ನೀವು ಮಾತ್ರ ಸುಧಾರಣೆ ಆಗಲ್ಲ ಬಿಡಿ..."


..ಅಯ್ಯೋ ದೇವರೇ ..!

ಪುಟ್ಟಸ್ವಾಮಿಯ "ವಿಸ್ಕಿ, ಬಿಯರ್ ಬಾಟಲ್. " ನೋಡಿ ಬಿಟ್ಟರಾ..?

ನನಗೋ.. ಹೆದರಿಕೆ... !
ಸಣ್ಣ ಧ್ವನಿಯಲ್ಲೇ ಕೇಳಿದೆ...

" ಏನಾಯ್ತು.. ಬಾವ..?"

" ಅಲ್ಲಾ... ಇದೆಂಥಾ ಪತ್ರನೋ...?"

".. ಯಾವದು..? "....

" ಇದೇ...! ಇದು.... !" ಅಂತ ಅಣ್ಣ ಬರೆದ ಪತ್ರ ತೋರಿಸಿದರು..

" ಇದು ಅಣ್ಣ ಬರೆದದ್ದು..ಮೊನ್ನೆ ಬಂದಿದೆ.."

" ಅದು ನನಗೂ ಗೊತ್ತಾಗ್ತಾ ಇದೆ...
ಏನು ಬರೆದಿದ್ದಾನೆ..ನೋಡು ತಲೆ ಹರಟೆ..?,.."


ಮೊನ್ನೆಯೇ ಓದಿದ್ದರೂ ಮತ್ತೊಮ್ಮೆ ಓದಿದೆ...
ಬಹಳ ಸಣ್ಣ ಪತ್ರ...


" ಪ್ರಕಾಶು..

ನಾವೆಲ್ಲಾ ಆರಾಮು... ನೀನು ಕ್ಷೇಮನಾ..?

ಇಲ್ಲಿ ಮತ್ತೇನೂ ವಿಶೇಷವಿಲ್ಲ...

ಹಾಂ.. ನೆನಪಾಯಿತು..!

ನಮ್ಮೂರ ತಮ್ಮಣ್ಣನ ಹೆಂಡತಿಗೆ ಹಾವು ಕಚ್ಚಿತ್ತು...
ಡಾಕ್ಟರ್ ಬಂದಿದ್ರು.. ಹೆದರಿಕೆ ಏನೂ ಇಲ್ಲ...
ಎಲ್ಲಾ ಸರಿ ಆಗುತ್ತದೆ...
ಐದು ತಿಂಗಳು ಬೇಕು ಅಂದರು..."

ನಿನ್ನ ಆರೋಗ್ಯದ ಬಗ್ಗೆ ಕಾಳಜಿ ಇರಲಿ..

ಆಯಿ ಚೆನ್ನಾಗಿದ್ದಾಳೆ.."

ನಾನು "ಇದರಲ್ಲಿ ಕೋಪ ಬರುವಂಥದ್ದು ಏನಿದೆ..?"...
ತಲೆ ಕೆರೆದು ಕೊಂಡೆ...


ಮತ್ತೊಮ್ಮೆ ಓದಿದರೂ ಅಂಥಹ ವಿಷಯ ಕಾಣಲಿಲ್ಲ...

"ಅಲ್ಲಾ... ನೀವೆಲ್ಲಾ ಯಾವಾಗ ಸುಧಾರಣೇ ಆಗ್ತೀರಪ್ಪಾ..?"

ಮತ್ತೆ ಕೋಪ ತಡೇಯಲಾಗದೆ ಅಬ್ಬರಿಸಿದರು ಬಾವ...

"ಏನಾಯಿತು ಬಾವ.. ?
ಅಂತಹ ವಿಷಯ ಇದರಲ್ಲಿ ಏನಿದೆ..?.. "


ಬಾವನಿಗೆ ಕೋಪ , ಅಸಮಧಾನ.. ಜಾಸ್ತಿಯಾಗತೊಡಗಿತು...

" ಈ ಪತ್ರ ಓದಿಕೊಂಡು...
ಆ..ತಮ್ಮಣ್ಣನ ಅಪ್ಪನಿಗೆ ಫೋನ್ ಮಾಡಿದೆ..!!..."


ತಮ್ಮಣ್ಣನ ತಂದೆ ಊರಲ್ಲಿ ಪ್ರತಿಷ್ಠಿತ ವ್ಯಕ್ತಿ..ಹಿರಿಯರು..!

ಇಡೀ ಊರೇ ಗೌರವ ಕೊಡುತ್ತದೆ...!

ಬಾವನಿಗೂ ಅವರಿಗೂ ಗೌರವದ ಸಂಬಂಧವಿದೆ...!

ನಮ್ಮ ಬಾವನೂ ಸುತ್ತಮುತ್ತಲಿನ ಊರುಗಳಲ್ಲಿ ಗೌರವದ ವ್ಯಕ್ತಿ..!

"ಬ್ಯಾಂಕಿನ ಮ್ಯಾನೇಜರ್"...


ಎಲ್ಲರಿಗೂ ನನ್ನ ಬಾವನೆಂದರೆ ಆದರ.. ಗೌರವ..

ನನಗೆ ಅರ್ಥವಾಗ ಹತ್ತಿತು.. ..

" ಅಣ್ಣ... ಹೀಗೆ "ತಮಾಷೆಗೆ " ಬರೆದದ್ದು....
ನೀವು ಫೋನ್ ಯಾಕೆ ಮಾಡ್ಲಿಕ್ಕೆ ಹೋದ್ರಿ ಬಾವಾ..?..."


" ತಮ್ಮಣ್ಣನ ಮನೆಯವರು ನಮಗೆಲ್ಲ ಆಪ್ತರು...
ಟೆನ್ಷನ್ ಆಗಲ್ವೇನೋ..? ಅದಕ್ಕೇ ಫೋನ್ ಮಾಡಿದೆ.."

"ಆಮೇಲೆ..?"

" ಆಮೇಲೆ ಏನು ? ಮಣ್ಣು ಬದನೆಕಾಯಿ..!..! "

ಬಾವ ನಶೀಕಾಂತ ನಡುಗುತ್ತಿದ್ದರು.. ಕೋಪದಿಂದ...

" .." ಹಾವು" ಕಚ್ಚಿದೆಯಂತಲ್ಲಾ...?
ಯಾವ
" ಹಾವು" ..? ಹೇಗಿತ್ತು..?
ಯಾವಾಗ..?
"ವಿಷ" ತುಂಬಾ ಏರಿಬಿಟ್ಟಿದೆಯಾ..? ಅಂತೆಲ್ಲಾ ಕೇಳಿದೆ..!!..."

ನನಗೆ ಏನು ಹೇಳ ಬೇಕೆಂದು ತೋಚಲಿಲ್ಲ...
ಏನೂ ಹೇಳಲಾಗದೆ ಚಡಪಡಿಸಿದೆ...

ಬಾವ ಮತ್ತೆ ಶುರು ಹಚ್ಚಿಕೊಂಡರು...

"ಅವರು ಹೇಳಿದರು " ಇಲ್ಲಿ ಯಾರಿಗೂ ಹಾವು ಕಚ್ಚಿಲ್ಲ.. ..!

ನಿಮಗೆ ತಪ್ಪು ಮಾಹಿತಿ ಆಗಿದೆ... " ಮ್ಯಾನೆಜರ್ರೆ..."..!!

ನಮ್ಮೂರಲ್ಲಿ ಯಾರಿಗೂ ಹಾವು ಕಚ್ಚಿಲ್ಲಾ"... ಎಂದರು.."


ನಾನು ಸುಮ್ಮನಿದ್ದೆ..ಬಾವನೇ ಮುಂದುವರೆಸಿದರು...


"ಅಲ್ಲಾ... ನೋಡಿ...ಇವರೆ...
ನಾನು ಬೆಂಗಳೂರಲ್ಲಿದ್ದೇನೆ "ಪ್ರಕಾಶನ ಮನೆಯಲ್ಲಿ"
ನಾಗೇಶ ಊರಿಂದ ಪತ್ರ ಬರೆದಿದ್ದಾನೆ....
ನಿಮ್ಮ ಸೊಸೆಗೆ ಹಾವು ಕಚ್ಚಿದೆಯಂತೆ.. !!
ಹೇಗಿದ್ದಾಳೆ ಈಗ..? ..!!..."..


ಈಗ ನಾನು ಕೇಳ ಬಾರದ ಪ್ರಶ್ನೆ ಕೇಳಿದೆ......

" ಬಾವಾ... ಅವರು.. ಏನಂದರು..?"

ಬಾವನಿಗೆ ಮತ್ತೂ ಕೋಪ ಜಾಸ್ತಿಯಾಯಿತು..
ಸಿಟ್ಟು ತಡೆಯಲಾರದೆ ಕೂಗತೊಡಗಿದರು....

ಜಮದಗ್ನಿ ಅವತಾರ...!

"ನೀವು ಅಣ್ಣ , ತಮ್ಮ ಇಬ್ರೂ ಸೇರಿ ..
ನನ್ನ ಗೌರವ ಎಲ್ಲ ಮಣ್ಣುಪಾಲು ಮಾಡಿಬಿಡ್ತೀರಿ..!!...

ನೀನೋ.. !.. ಅಣ್ಣನೋ... !!
ಏನು ಭಾಷೇನೋ ನಿಮ್ಮದು...?

ಅಲ್ಲಾ... . ಯಾವಾಗಾ ನೀವೆಲ್ಲ ಸುಧಾರಣೆ ಆಗೋದು..?

ಅವರ ಸೊಸೆ "ಬಸಿರಾಗಿದ್ದಾಳಂತೆ" ..!!

ಅದನ್ನ ಯಾವರೀತಿ ಬರೆಯೋದು...?

ಹಾವು ಕಚ್ಚಿದೆ ಅಂತಾನಾ..?

ಕನ್ನಡ ಕೊಲೆ ಮಾಡಿ ಬಿಡ್ತೀರಿ ನೀವುಗಳು...!
ಅಹಾ..! ಏನು ಕನ್ನಡಾನೋ ನಿಮ್ಮದು...?

ಏನು ಉಪಮೆ...!!..?... ಏನು ಛಂದಸ್ಸು..?
ಯಾವುದಕ್ಕೆ ಏನು ಹೋಲಿಕೆ...?


ಅಹಹಾ...!! ಜನ್ಮ ಸಾರ್ಥಕವಾಯಿತು...!
ನಿಮ್ಮ ಭಾಷೆ ಕೇಳಿ...!
..ಛೇ.."

"ಅಲ್ಲಾ.. ಬಾವ...
ನೀವ್ಯಾಕೆ... ಅಣ್ಣನ ಪತ್ರ ಓದಲಿಕ್ಕೆ ಹೋದ್ರಿ..?

ಫೋನ್ ಮಾಡೊಕ್ಕಿಂತ ಮೊದ್ಲು ..
ನಂಗೊಂದು ಮಾತು ಕೇಳ್ಬಾರದಿತ್ತಾ..?... "


" ನೀನು ಮಾತಾಡ ಬೇಡ...! ಸುಮ್ನಿರು..!

ನಿಮ್ಮ ಎಡವಟ್ಟು ಕೆಲಸದಿಂದ ನಾನು ಹೇಗೆ ಮುಖ ತೋರಿಸ್ಲೋ..?

ಅವರ ವಯಸ್ಸೇನು..? ನನ್ನ ವಯಸ್ಸೇನು.?.

ನನ್ನ ಮರ್ಯಾದಿ ಎಲ್ಲ ತೊಳೆದು ..
ಸರ್ವ ನಾಶ ಮಾಡಿ ಬಿಟ್ರಿ...!..."


ಬಹಳ ಪೇಚಾಡಿಕೊಂಡರು ನನ್ನ ಬಾವ.....

ಐದು ತಿಂಗಳ ನಂತರ ಅಣ್ಣನ ಪತ್ರ ಮತ್ತೆ ಬಂತು..!

"ಪ್ರಕಾಶು...

ನಾವೆಲ್ಲ ಆರಾಮು..

ತಮ್ಮಣ್ಣನಿಗೆ.. "ಗಂಡು ಕರು"..!

"ತಾಯಿ ಮತ್ತು ಕರು" ಚೆನ್ನಾಗಿದ್ದಾರೆ...!.."


ಅಂದಿನಿಂದ....

ಅಣ್ಣನ ಪತ್ರ ಯಾರಿಗೂ ಸಿಗದ ಹಾಗೆ ಇಡ್ತಾ ಇದ್ದೇನೆ...

72 comments:

PARAANJAPE K.N. said...

ಪ್ರಕಾಶರೇ
"ತಮ್ಮಣ್ಣನ ಹೆ೦ಡತಿಗೆ ಹಾವು ಕಚ್ಚಿದ ಪ್ರಸಂಗ" ಮೊದಲ ಓದಿಗೆ ಅರ್ಥವಾಗಲಿಲ್ಲ.ಅರ್ಥವಾದ ಮೇಲೆ ನಗದೇ ಇರಲಾಗಲಿಲ್ಲ. ಸರಳ ವಿಷಯವನ್ನು ವೈನೋದಿಕ
ಹಿನ್ನೆಲೆಯೊ೦ದಿಗೆ ಚೆನ್ನಾಗಿ ನಿರೂಪಿಸಿದ್ದೀರಿ. ಮು೦ದುವರಿಸಿ.

ಮನಸು said...

haha chennagide codewords...

ಕ್ಷಣ... ಚಿಂತನೆ... Thinking a While.. said...

ಪ್ರಕಾಶ್ ಸರ್‍, ಈ ಲೇಖನವನ್ನು ಏಪ್ರಿಲ್‌ ತಿಂಗಳಲ್ಲಿ ಬರೆದಿದ್ದರೆ... ಓಹ್‌ ಮತ್ತೂ ನಕ್ಕು ನಲಿಯಬಹುದಿತ್ತು. ಈಗಲೂ ಅಷ್ಟೆ, ನಾಳೇನೇ ಏಪ್ರಿಲ್‌ ಒಂದು , ನೆನಪಿರಲಿ.

ವಿಶ್ವಾಸದಿಂದ,

ಸುಶ್ರುತ ದೊಡ್ಡೇರಿ said...

hehe.. olle maja..

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ...

ಹೆಚ್ಚು ಓದಿರದ ನನ್ನಣ್ಣನ ತಮಾಷೆ ಬಲು ಮಜವಾಗಿರುತ್ತದೆ...

ಆತ ನಗುವದೇ ಇಲ್ಲ...
ನಮಗೆ ಹೊಟ್ಟೆ ಹುಣ್ಣಾಗಿ ಬಿಡುತ್ತದೆ....

ಹಾವು ಕಚ್ಚಿದ ಪ್ರಸಂಗ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಪ್ರೋತ್ಸಾಹ ಹೀಗೆಯೇ ಇರಲಿ..

ಸಿಮೆಂಟು ಮರಳಿನ ಮಧ್ಯೆ said...

ಮನಸು....

ನನ್ನಣ್ಣನಿಗೂ ನನಗೂ ನಾಲ್ಕು ವರ್ಷದ ಅಂತರ...

ಭಯ, ಗೌರವನೂ ಇದೆ
ಬಹಳ ದೋಸ್ತಿನೂ ಇದೆ..

ಬಡತನವಿದ್ದರೂ ನಗು ಹೇರಳವಾಗಿತ್ತು...

ಒಳ್ಳೆಯ ಮಾತುಗಾರ..
ಅವನ ತಮಾಷೆ ಬಹಳ ಚೆನ್ನಾಗಿರುತ್ತದೆ...

ಮೆಚ್ಚಿದ್ದಕ್ಕೆ ಧನ್ಯವಾದಗಳು...

ರಾಕೇಶ್ ಕುಮಾರ್ ಕಮ್ಮಜೆ said...

haavu kacchiddu chennaagide. obbara patra innobbaru odidare yeneno aagibiduttade alvaa?

ಮೂರ್ತಿ ಹೊಸಬಾಳೆ. said...
This comment has been removed by the author.
ಮೂರ್ತಿ ಹೊಸಬಾಳೆ. said...

ಪ್ರಕಾಶಣ್ನ,
ನಿಮ್ಮ ಬ್ಲೊಗ್ ಓದಿ ನಾನು ನಮ್ಮ ಅಣ್ಣ ಮಾಡಿದ ಹಲಾವಾರು ಇಂತಹ ಅವಿವೇಕದ ಕೆಲಸಗಳನ್ನ ನೆನಪು ಮಾಡಿಕೊಂಡು ಮನಸಾರೆ ನಕ್ಕೆ (ಬಹಳ ದಿನಗಳ ನಂತರ) ನಮ್ಮ ಹಿರಿಯರು ಹೇಳುತ್ತಿದ್ದಂತೆ ”ನೀವು ಈ ಜನ್ಮದಲ್ಲಿ ಉದ್ದಾರ ಆಗುವುದಿಲ್ಲ” ನೆನಪಾಗಿ ಅವರನ್ನೆಲ್ಲಾ ಒಮ್ಮೆ ಮಾತನಾಡಿಸುವ ಮನಸ್ಸಾಯಿತು.

Dr.Gurumurthy Hegde said...

ಆತ್ಮೀಯ ಪ್ರಕಾಶಣ್ಣ,
ಕೆಲವೊಮ್ಮೆ ನಮ್ಮ ಭಾಷೆಯೇ ಇಷ್ಟೊಂದು ಅರ್ಥ ಮಾಡಿಕೊಳ್ಳೋಕೆ ಕಷ್ಟವಾಗತ್ತೆ ಅಂತ ಇವತ್ತೇ ಗೊತ್ತಾಯ್ತ ಲೇಖನ ಓದಿ. ನಮ್ಮ ಹಳ್ಳಿ ಕಡೆ ಜನ ಇದೆ ರೀತಿ ಅಪಾರ್ಥ ಬರುವ ಅನೇಕ ಶಬ್ದಗಳನ್ನು ಬಳುಸುವುದು ನೆನಪಿಗೆ ಬಂತು. ನಗಿಸುತ್ತಿರಿ,

ಪಾಚು-ಪ್ರಪಂಚ said...

ಪ್ರಕಾಶಣ್ಣ,

ನಿಮ್ಮ ಬರಹ ಓದಿ ನಗು ತಡೆಯಲಾಗಲಿಲ್ಲ...! ನಿಜ ಊರ ಕಡೆಗೆ ಇಂತಹುದೇ ಕೋಡ್ ವರ್ಡ್ ಗಳು ಜಾಸ್ತಿ...!!
ಇನ್ನು ಮುಂದೆ ಯಾರಿಗಾದರು ಹಾವು ಕಚ್ಚಿದ ಸುದ್ದಿ ಕೇಳಿದರೆ...ಸಂತೋಷ ಪಡಬೇಕೋ...ಬೇಸರ ಪಡಬೇಕೋ...!! ಯೋಚನೆ ಆಗ್ತ ಇದೆ..!! ಹ್ಹ ಹ್ಹ..!!

ಪ್ರಶಾಂತ್ ಭಟ್

ಸಿಮೆಂಟು ಮರಳಿನ ಮಧ್ಯೆ said...

ಕ್ಷಣ ಚಿಂತನೆ....

ಇದು ಎಪ್ರಿಲ್ ಗೋಸ್ಕರನೇ ಬರೆದೆ..

ತಮ್ಮಣ್ಣನ ತಂದೆ ರಾಜಕೀಯವಾಗಿ
ಪ್ರತಿಷ್ಠಿತ ವ್ಯಕ್ತಿ..
ನನ್ನ ಬಾವ ಕೂಡ...ಮ್ಯಾನೇಜರ್..

ಇಬ್ಬರಿಗೂ ಮುಜುಗರ..

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುಶ್ರುತ ದೊಡ್ಡೇರಿಯವರೆ...

ಬಹಳ ಅಪರೂಪ ನೀವು ಬರುವದು...
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..

ಪ್ರೋತ್ಸಾಹ ಹೀಗೆಯೇ ಇರಲಿ...

ನಿಮ್ಮ ಬ್ಲಾಗ್ ಅಭಿಮಾನಿ ನಾನು..

ಬರುತ್ತಾ ಇರಿ..

ಸಿಮೆಂಟು ಮರಳಿನ ಮಧ್ಯೆ said...

ರಾಕೇಶ್...

ವಯಸ್ಸಿಗೆ ಬಂದ ಹುಡುಗ..
ಪ್ರೀತಿ.., ಪ್ರೇಮ ಅಂತ ಪತ್ರ ಬರೆದಿರ ಬಹುದಲ್ಲಾ.....?
ಆತ್ಮೀಯತೆ, ಸಲುಗೆ ಇತ್ತಾಲ್ಲ..
ಹಾಗಾಗಿ ಆ ಪತ್ರ ಓದಿದರು..

ಅವರ ಬೇಹುಗಾರಿಕೆ..
ಅವರಿಗೇ ತಿರುಗು ಬಾಣವಾಯಿತು...
ಅಕ್ಕ ಕೂಡ ಇದೇ ರೀತಿ ಮಾಡುತ್ತಿದ್ದಳು..
ಪ್ರೀತಿ, ಕಾಳಜಿಯಿಂದ..

ಪ್ರೇಮ ಪತ್ರ ಬರೆದಿದ್ದರೆ ಕಾಣುವ ಹಾಗೇ ಇಡುತ್ತಿದ್ದೇನಾ..?

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು

Anonymous said...

ಪ್ರಕಾಶ್,
ಸೂಪರ್ ಆಗಿದೆ, ನಕ್ಕು ನಕ್ಕು ಸುಸ್ತಾಯಿತು.

Vinutha said...

ಪ್ರಕಾಶ್ ರವರೆ,

ಕೊನೆಯವರೆಗೂ ಕುತೂಹಲ ಕಾಯ್ದುಕೊಂಡ ಬರಹ. ಎಲ್ಲಿಯೂ ಸುಳಿವು ಸಿಗಲಿಲ್ಲ. ಉತ್ತರ ನೋಡುವ ಮೊದಲು ಪ್ರಯತ್ನಿಸಿದೆ ಊಹಿಸಲು, ಆದರೆ ಸೋತೆ! ಚೆಂದದ ಹಾಸ್ಯ ಬರಹಕ್ಕಾಗಿ ಅಭಿನಂದನೆಗಳು.

ಜ್ಞಾನಮೂರ್ತಿ said...

ಪ್ರಕಾಶಣ್ಣ,

ಎಷ್ಟು ನಕ್ಕಿದಿನಿ ಅಂದ್ರೆ....

ತುಂಬಾ ಚನ್ನಾಗಿದೆ ನಿಮ್ಮ ಹಾಸ್ಯ ಬರಹ .....

ಉಮಿ :) said...

ಹಾವು ಕಚ್ಚೋದು, ಗಂಡು ಕರು... ಹೇ ಹೇ ಹೇ ... ಬೊಂಬಾಟಾಗಿದೆ... ನಕ್ಕೂ ನಕ್ಕೂ ಹೊಟ್ಟೆ ನೋಯ್ತಾ ಇದೆ...

shivu said...

ಪ್ರಕಾಶ್ ಸರ್,

ಲೇಖನ ಹಾಸ್ಯದಿಂದಿದ್ದೂ ಖುಷಿಕೊಡುತ್ತದೆ...ಊರಿನ ಕಡೆ ಹೀಗೆ ಭಾಷೆಯನ್ನು ಬಳಸಿದರೆ ನಮ್ಮಂತೋರಿಗೆ ಹೇಗೆ ಗೊತ್ತಾಗಬೇಕು...ಅದಕ್ಕಿಂತ ದಿಗಿಲೇ ಹೆಚ್ಚಾಗುತ್ತದೆ...ನಮ್ಮಜ್ಜಿ ಹೀಗೆ ಮಾತಾಡುತ್ತಿದ್ದ ನೆನಪು....ಚೆನ್ನಾಗಿದೆ....

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮೂರ್ತಿ....

ಹಳ್ಳಿಯ ಜನ ಇಂಥಹ ಜೋಕುಗಳನ್ನು ಬಹಳ ಮಾಡುತ್ತಾರೆ...
ನಾವು ಮುಗ್ಧವಾಗಿ ಮಾತಾಡಿ ಬಂದಿರುತ್ತೇವೆ..

ಅಮೇಲೆ ತಲೆ ಚಚ್ಚಿಕೊಳ್ಳ ಬೇಕು..
ನಿಮಗೆ ಉತ್ತರ ಬರೆಯುತ್ತಾ ಇನ್ನೊಂದು ಘಟನೆ ನೆನಪಾಗುತ್ತಿದೆ...
ಅದನ್ನೂ ಬರೆಯುವೆ...

ಲೇಖನ ಮೆಚ್ಚಿದ್ದಕ್ಕೆ
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಗುರುಮೂರ್ತಿಯವರೆ...

ಹಳ್ಳಿ ಕಡೆ ಇರುವಷ್ಟು ಹಾಸ್ಯ ನಾನೆಲ್ಲೂ ಕಂಡಿಲ್ಲ...

ಮಾತು ಮಾತಿಗೂ ನಗಿಸುತ್ತಾರೆ...

ಅದನ್ನು ಅನುಭವಿಸದವರಿಗೇ ಗೊತ್ತು..
ಅದರ ಸೊಗಸು..

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ನಿಮ್ಮೆಲ್ಲ ಪ್ರತಿಕ್ರಿಯೆ ನನಗೆ ಇನ್ನಷ್ಟು ಬರೆಯಲು ಸ್ಪೂರ್ತಿ...

ಜ್ಯೋತಿ said...

ಪ್ರಕಾಶಣ್ಣ,
ಚೆನ್ನಾಗಿದೆ ಕತೆ! ಒಳ್ಳೆ ಮಜಾ! :-)
ನಿಮ್ಮ ಅನುಭವಗಳೆಷ್ಟೋ.
ಹಳ್ಳಿ ಜನ ಪೇಟೆ ಜನರಿಗಿಂತ ಬುದ್ದಿವಂತರು ಎಂದು ಇದರಲ್ಲೇ ಗೊತ್ತಾಗುತ್ತದೆ :-)

Annapoorna Daithota said...

Chennaagide :-)

ಸಿಮೆಂಟು ಮರಳಿನ ಮಧ್ಯೆ said...

ಪ್ರಶಾಂತ್...

ಹಾವು ಕಚ್ಚಿದೆ ಅಂತ ಕೇಳಿದರೆ ಯಾರಿಗಾದರೂ ಆತಂಕ ಆಗುವದು ಸಹಜ...

ಬಾವನಿಗೆ ಹೇಗೆ ಗೊತ್ತಾಗ ಬೇಕು ನನ್ನಣ್ಣನ ಈ ಭಾಷೆ..?

ಒಳ್ಳೆ ಮಜಾ ಇತ್ತು ಆ ಸಂದರ್ಭ..

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

agniprapancha said...

ಮಸ್ತಾಗಿದ್ರೂ...ಸುಮಾರಿಗೆಲ್ಲಾ ಅರ್ಥ ಮದಕಳಲೇ ಸಾದ್ಯಿಲ್ಲೇ....

ಚಿತ್ರಾ said...

ಪ್ರಕಾಶ್ ,

ಅಯ್ಯೋ ದೇವ್ರೇ, ಇನ್ನು ನಂಗಳಂಥಾ ಪಾಪದ ಕನ್ನಡಿಗರು ಕನ್ನಡ ಮಾತಾಡಲೇ ಹೆದ್ರ ಹಾಂಗೆ ಮಾಡ್ತಾ ಇದ್ರಿ ನೀವು.’ ಚಪಾತಿ’ ಆತು, ’ ಆತ್ಮ’ ಮುಗೀತು ಇನ್ನು ಯಾರಿಗಾದ್ರು ಹಾವು ಕಚ್ಚಿದ್ದು ಹೇಳದೂ ಕಷ್ಟ ಆಗ ನಮನಿ ಮಾಡಿತ್ರಿ ನೀವು. ಥೋ ,ಎಂತದ್ರೋ ಮಾರಾಯ್ರೆ ಹಿಂಗಾದ್ರೆ ಮಾತಾಡದೇ ಕುತ್ಗಿಗೆ ಬಪ್ಪ ಕಥೆ !!! ಹಿ ಹಿ ಹಿ ...

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನಿಮ್ಮಣ್ಣನ ಹಾಸ್ಯ ಪ್ರಜ್ಞೆ ಅದ್ಭುತ. ಏಪ್ರಿಲ್ ಓಂದರಂದು ಬೆಳೆಗ್ಗೇನೇ ಓದಿದ ಲೇಖನ ನಿಮ್ಮದು. ಒಬ್ಬನೇ ನಗುತ್ತಿರುವೆ.
ನಿಮ್ಮ ಭಾವನವರಿಗೆ ಎಷ್ಟು ಮುಜುಗರ ಆಗಿರಬೇಕು!
ನಾಕಸ್ತೂರಿಯವರ ಅನರ್ಥಕೋಶದ ಹಾಗೆ ನಿಮ್ಮದು ಪ್ರಕರ್ಥಕೋಶ ತಯಾರು ಮಾಡಬಹುದು!

ಸಿಮೆಂಟು ಮರಳಿನ ಮಧ್ಯೆ said...

ಬಾಲಕ್ರಷ್ಣ(ಚಂದನ) ರವರೆ...

ಎಷ್ಟು ಸುಂದರವಾಗಿದೆ ನಿಮ್ಮ ಬ್ಲಾಗ್...!
ನೀವೆಲ್ಲ ಬಂದು ಪ್ರತಿಕ್ರಿಯಿಸುತ್ತೀರಲ್ಲ...
ನನಗೆ ಬಹಳ ಖುಷಿಯಾಗುತ್ತಿದೆ...!

ನನಗೇ ಗೊತ್ತಿಲ್ಲ ನೀವು ನನ್ನ ಬ್ಲಾಗ್ "ಅನುಸರಿಸುತ್ತಿದ್ದೆರೆಂದು"

ಬಿಡುವಿದ್ದಾಗಗ ನಿಮ್ಮೆಲ್ಲ ಲೇಖನ ಓದುವೆ...

ಹಾವು ಕಚ್ಚಿಸಿಕೊಂಡಿದ್ದಕ್ಕೆ..
ಅಭಿನಂದನೆಗಳು..
ಪ್ರೋತ್ಸಾಹಕ್ಕೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ವಿನುತಾರವರೆ...

ಇದರಲ್ಲಿ ಕೊನೆಯ ಪಂಚ್ ಸ್ವಲ್ಪ ಬೇರೆ ...

ಆ ಎರಡನೆ ಪತ್ರವೂ ಕೂಡ ಮಜವಾಗಿದೆ..

ನನಗೆ ಈಗಾಗಲೇ ಮೂರು ಈಮೇಲ್ ಬಂದಿದೆ...
ಹೆಣ್ಣು ಮಕ್ಕಳದ್ದು..
"ಪ್ರಕಾಶಣ್ಣ ನಕ್ಕೂ ನಕ್ಕೂ ಸುಸ್ತಾಗಿದೆ"
ಎಂದು ಈಮೇಲ್ ನಲ್ಲಿ ಪ್ರತಿಕ್ರಿಯೆ ಮುಗಿಸಿದ್ದಾರೆ..!.!

ಹೆಣ್ಣು ಮಕ್ಕಳು ನಕ್ಕರೂ ಇಲ್ಲಿ ಪ್ರತಿಕ್ರಿಯೆ ಕಡಿಮೆ..!

ನಿಮ್ಮ ಧೈರ್ಯದ ಪ್ರತಿಕ್ರಿಯೆಗೆ...
ಲೇಖನ ಮೆಚ್ಚಿದ್ದಕ್ಕೆ...
ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಜ್ಞಾನಮೂರ್ತಿ...

ನನ್ನಣ್ಣ ನನಗೆ ಬರೆದ ಪತ್ರಗಳಲ್ಲಿ..
ಎಲ್ಲವೂ ಇದೇ ಥರಹದವುಗಳು..

ಒಂದೊಂದು ಒಂದೊಂದು ಥರಹ..!

"ಚಿತ್ರಾ ಕರ್ಕೇರ" ಅಣ್ಣನ ಪತ್ರ ಅಂತ ಲೇಖನ ಬರೆದಾಗಲೇ..
ನನಗೆ ನನ್ನಣ್ಣನ ಪತ್ರ ನೆನಪಾಗಿತ್ತು...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಬಾಲು said...

ನಾನು ಹಿಂದೆ ನಂ ಮ್ಯಾನೇಜರ್ ಗಂಡು ಮರಿ ಹಾಕಿದ್ದಾಳೆ ಅಂತ ಇತರ ಸಹೋದ್ಯೋಗಿ ಗಳಿಗೆ ಮೆಸೇಜ್ ಮಾಡಿ, ಸ್ವಲ್ಪ ಕೋಲಾಹಲ ಎಬ್ಬಿಸಿದ್ದೆ!!!

ಇನ್ನೂ ಮುಂದೆ ಹಾವು ಕಚ್ಚಿದ ಪ್ರಸಂಗ ನೆನಪು ಇಟ್ಟು ಕೊಂಡು.... ಹಾವನ್ನು ಮೆಸೇಜ್ ಗಳ ಮದ್ಯೆ ಸೇರಿಸುವೆ!!!

ಒಳ್ಳೆಯ ಲೇಖನ !!

sunaath said...

ಪ್ರಕಾಶ,
ಎಷ್ಟು ನಗಸ್ತೀರಪ್ಪಾ ನೀವು!
ಇನ್ನು ಮುಂದೆ ಒಂದು ಹೊಸಾ codeword ಸಿಕ್ಕಿದ ಹಾಗಾಯ್ತು ನನಗೆ!

ತೇಜಸ್ವಿನಿ ಹೆಗಡೆ- said...

ಪ್ರಕಾಶಣ್ಣ,

ಎತ್ತನ ಹಾವು, ಎತ್ತನ ಕರು? ದೇವ್ರೆ ಎಲ್ಲಿಂದ ಇಂತಹ Codeword ಸಿಗ್ತು ನಿಮ್ಗೆ? :) ನಕ್ಕೂ ನಕ್ಕೂ ಸಾಕಾತಪ್ಪ..

ಸಿಮೆಂಟು ಮರಳಿನ ಮಧ್ಯೆ said...

ಉಮೀ....

ಹಳ್ಳಿಯ ಮುಗ್ಧ ಜೋಕುಗಳಿಗೆ ಕೊನೆಯುಂಟೆ...?

ಇದೇ ಬರುವ ಭಾನುವಾರ

ಅಪ್ಪಟ ಹಳ್ಳಿ ಪ್ರತಿಭೆಯ ಪ್ರದರ್ಶನವಿದೆ..
ಟೌನ್ ಹಾಲ್ ನಲ್ಲಿ..
ಮಧ್ಯಾಹ್ನ ೩ ಗಂಟೆಯಿಂದ...
ದಯವಿಟ್ಟು ತಾವೆಲ್ಲ ಬನ್ನಿ ಪ್ರೋತ್ಸಾಹಿಸಿ..

ಶ್ರೀ. ಎಮ್.ಎ. ಹೆಗಡೆ ತ್ಯಾಗಲಿ
ಇವರ ಹಾಸ್ಯ ಕಾರ್ಯಕ್ರಮ..

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...
ಪ್ರೋತ್ಸಾಹ ಹೀಗೆಯೇ ಇರಲಿ...

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್....

ನಿಜಕ್ಕೂ ಆ ಸಂದರ್ಭ ಮಜವಾಗಿತ್ತು...
ಸುಮ್ಮನೆ ಅಣ್ಣನ ಪತ್ರ ಓದಿ..
ಹಳ್ಳಿಗೆ ಫೋನ್ ಮಾಡಿ ..
ಫಜೀತಿಯಾಗಿ...
ನಗು ಹರಿದದ್ದು ಇತಿಹಾಸ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಜ್ಯೋತಿ....

ಪ್ರತಿಯೊಬ್ಬರ ಜೀವನದಲ್ಲೂ ಹಾಸ್ಯಮಯ ಘಟನೆ ನಡೆದಿರುತ್ತದೆ..

ನನಗೆ ಅದನ್ನು ನೆನಪು ಮಾಡುವ ಒಂದು ದೊಡ್ಡ ಬಳಗವೇ ಇದೆ...

ಆ ಘಟನೆಗಳನ್ನು
ಮಲ್ಲಿಕಾರ್ಜುನ್ ಬಳಿ ಹೇಳಿ..
ಮನೆಯಲ್ಲೊಮ್ಮೆ...ಹೇಳಿ..
ಲೇಖನವಾಗಿ ಬರುತ್ತದೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಅನ್ನಪೂರ್ಣರವರೆ...

ಲೇಖನ ಮೆಚ್ಚಿದ್ದಕ್ಕೆ..
ಧನ್ಯವಾದಗಳು...

ಬರುತ್ತಾ ಇರಿ...

ಸಿಮೆಂಟು ಮರಳಿನ ಮಧ್ಯೆ said...

ಅಗ್ನಿ....

ಸ್ವಲ್ಪ ಬೇರೆಥರದಲ್ಲಿ ಬರೆಯುವ ಪ್ರಯತ್ನ ಇದು...

ಕೊನೆಯಲ್ಲಿನ ಪಂಚ್ ಬೇರೆಯಾಗಿದೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...
ಪ್ರೋತ್ಸಾಹ ಮತ್ತಷ್ಟು ಬರೆಯಲು ಟಾನಿಕ್ ಥರಹ..
ಹೀಗೆಯೇ ಬರುತ್ತಾ ಇರಿ..
ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ....

ನೀವೊಮ್ಮೆ ನಮ್ಮಣ್ಣನ ಬಳಿ ಮಾತಾಡಿ ನೋಡಿ..
ಜೋಕ್ ಬಹಳ ಇರುತ್ತದೆ...

ಪ್ರತಿ ಹಳ್ಳಿಯಲ್ಲಿ ಆ ಥರಹದ ಜನ ಇದ್ದೇ ಇರುತ್ತಾರೆ...

ಅಲ್ಲವೆ..?

ನೀವು ಇಷ್ಟಪಟ್ಟಿದ್ದಕ್ಕೆ..
ಪ್ರತಿಕ್ರಿಯೆಗೆ
ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್...

ನನ್ನ ಲೇಖನದ ಮೊದಲ ಕೇಳುಗರು ನೀವು...
ನಿಮ್ಮ ಪ್ರೋತ್ಸಾಹ ನನಗೆ ಬರೆಯಲು ಉತ್ಸಾಹ ತರುತ್ತದೆ...

ಈ ದಿನದ ಬಗೆಗೆ ಏನು ಬರೆಯಲಿ ಎಂದು ..
ಯೋಚನೆ ಮಾಡುತ್ತಿರುವಾಗ ನೆನಪಾದದ್ದು ಇದು..

ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ..

ಧನ್ಯವಾದಗಳು...

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ..
ಚನ್ನಾಗಿದೆ ರೀ ನಿಮ್ಮ ಭಾಷೆ.
ಒಳ್ಳೆಯ ಹಾಸ್ಯಮಯ ಲೇಖನ ...
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಬಾಲುರವರೆ...

ಗಂಡು ಕರು, ಹೆಣ್ಣು ಕರು..
ಇದು ನಮ್ಮ ಬಳಗದಲ್ಲಿ ಮಾಮೂಲು ಆಗಿ ಬಿಟ್ಟಿದೆ..

ನೀವೂ ಬಳಸಿ...

ಹಾವಿನ ಪ್ರಸಂಗ ಮೆಚ್ಚಿದ್ದಕ್ಕೆ

ವಂದನೆಗಳು..

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್...

ನನ್ನಣ್ಣ ಬರೆದ ಆರು ಪತ್ರಗಳಲ್ಲಿ
ಎರಡು ಇಲ್ಲಿ ಬಂದಿದೆ..
ಇನ್ನೂ ನಾಲ್ಕು ಇವೆ..

ಆಗಾಗ ಹಾಕುವೆ...

ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ತೇಜಸ್ವಿನಿ...

ಇದು ನಮ್ಮಣ್ಣನನ್ನು ಕೇಳಬೇಕು..
ಇದೆಲ್ಲ ಅವನ ಕೋಡ್ ಶಬ್ಧಗಳು...

ನಮಗೆ ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸಿ..
ಆತ ಸುಮ್ಮನಿದ್ದು ಬಿಡುತ್ತಾನೆ...

ಅವನಿಗೆ ತಕ್ಕಂತೆ ನನಗೆ ಇನ್ನೊಬ್ಬ ಚಿಕ್ಕಪ್ಪ(ಕಮಲಾಕರ)
ಇದ್ದಾನೆ..

ಇಬ್ಬರೂ ಸೇರಿದರಂತೂ..
ನಗುವಿನ ಹೊನಲೇ ಹೊನಲು...

ಹೆಣ್ಣುಮಕ್ಕಳು ಇಲ್ಲಿ ಬಂದು ಪ್ರತಿಕ್ರಿಯೆ ಕೊಡುವದಿಲ್ಲವೇನೋ ಅಂದು ಕೊಂಡಿದ್ದಕ್ಕೆ...

ಕ್ಷಮೆ ಇರಲಿ..

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವಪ್ರಕಾಶ್...

ನಿಮ್ಮ ಬ್ಲಾಗಿನ ಲೇಖನಗಳೂ ..
ಚೆನ್ನಾಗಿರುತ್ತದೆ...

ಇದೂ ಸಹ ನಡೆದ ಘಟನೆ..
ಮಸಾಲೆ, ಒಗ್ಗರಣೆ ಹಾಕಿ ನಿಮ್ಮ ಮುಂದೆ ಇಟ್ಟಿರುವೆ...

ಮೆಚ್ಚಿ ಇಷ್ಟಪಟ್ಟಿದ್ದಕ್ಕೆ..
ಧನ್ಯ...
ಧನ್ಯವಾದಗಳು...

ಪ್ರೋತ್ಸಾಹ ಹೀಗೆಯೇ ಇರಲಿ...

guruve said...

ಹ ಹ ಚೆನ್ನಾಗಿದೆ,
ಬಹಳಷ್ಟು ಸನ್ನಿವೇಶಗಳಲ್ಲಿ ಹಿಂದಿನ ಪೀಳಿಗೆಯವರಿಗೆ, ಇಂದಿನ ಪೀಳಿಗೆಯವರ ಮಾತುಗಳು ಹಿಡಿಸುವುದಿಲ್ಲ. ನೀವು ಇದನ್ನು ಹಾಸ್ಯ ರೀತಿಯಲ್ಲಿ ಹೊರ ಹೊಮ್ಮಿಸಿದ್ದೀರ.

Prabhuraj Moogi said...

ಹಳ್ಳೀ ಕಡೆ ಈ ಥರ ಭಾಷೆ ಜಾಸ್ತಿ... ಮಾತಾಡಿದ್ದು ಯಾರಿಗೂ ಅರ್ಥವಾಗದಿರಲೆಂದು ಹೀಗೆ ಮಾತಾಡುತ್ತರೆ ಅನಿಸುತ್ತದೆ...

ಶರಶ್ಚಂದ್ರ ಕಲ್ಮನೆ said...

ಒಳ್ಳೆ ಕೋಡ್ ವರ್ಡ್ ಹೇಳಿಕೊಟ್ಟೆ ಪ್ರಕಾಶಣ್ಣ :) ನಕ್ಕೂ ನಕ್ಕೂ ಸಾಕಾತು ಮಾರಾಯ...

ಸಿಮೆಂಟು ಮರಳಿನ ಮಧ್ಯೆ said...

ಗುರುಪ್ರಸಾದ್...

ನೀವೆನ್ನುವದು ನಿಜ...
ನನಗೆ ಪರಿಚಯದ ಒಬ್ಬ ಅಜ್ಜ ಇದ್ದಾರೆ...
ಅವರೆಷ್ಟು ಹಾಸ್ಯವಾಗಿ ಮಾತಾಡುತ್ತರೆಂದರೆ..
ನಾವು ನಗುತ್ತಲೇ ಇರಬೇಕು...

ಅವರಬಗೆಗೂ ಬರೆಯಬೇಕು ಅನಿಸುತ್ತಿದೆ..

ಹಾವಿನ ಪ್ರಸಂಗ ಖುಷಿಪಟ್ಟಿದ್ದಕ್ಕೆ

ಧನ್ಯವಾದಗಳು

ಸಿಮೆಂಟು ಮರಳಿನ ಮಧ್ಯೆ said...

ಪ್ರಭು....

ಹಳ್ಳಿ ಜನರು ಬುದ್ಧಿವಂತರು ...
ನಗಲಿಕ್ಕೆ ಸುಲಭವಾದ ಮಾರ್ಗ ಕಂಡುಕೊಳ್ಳುತ್ತಾರೆ...

ತಮ್ಮ ಸಹಜ ಮಾತಿನಲ್ಲೇ ನಗಿಸುತ್ತಾರೆ...
ಹಾಗೇ ಗಂಭೀರ ಚಿಂತನೆಯನ್ನೂ ಕೂಡ...
ಲೇಖನ ಮೆಚ್ಚಿದ್ದಕ್ಕೆ

ವಂದನೆಗಳು...

ಧರಿತ್ರಿ said...

ಪ್ರಕಾಶ್ ಸರ್....

ಯಪ್ಪಾ..ಯಾವುರ ಭಾಷೆಯದು? ಉತ್ತರಕನ್ನಡದ್ದಾ?

ಪಕ್ಕಾ ಉಲ್ಟಾ ..ನಂಗಂತೂ ಅರ್ಥವಾಗಲೇ
ಇಲ್ಲ..ಯಾಕೆ ಭಾವ ರೇಗಾಡ್ತಾರೆ? ಅಂತ ಗಲಿಬಿಲಿಯಾಗಿದ್ದೆ.

ಏನಪ್ಪಾ..ಹಾವು ಕಚ್ಚಿದ್ದು? ಅಂದ್ರೆ 'ಬಸುರಿ'ಯಂತೆ!

ದೇವ್ರೇ ಕಾಪಾಡಬೇಕು.. ಅಂತೂ-ಇಂತೂ 'ಏಪ್ರಿಲ್ ಫೂಲ್'!

ಇನ್ನೊಂದು ಹೇಳಲಾ ಮುಟ್ಟಾದರೆ 'ಕಾಗೆ ಮುಟ್ಟಿದ್ದು' ಅಂತಾರೆ ನಮ್ ಕಡೆ...

ನೀವು ಹೇಳಿದ್ದು ಒಳ್ಳೆದಾಯ್ತು ಬಿಡಿ...ಎಲ್ಲಾ ತಿಳ್ಕೋಳ್ಳೋಕೆ...

-ಧರಿತ್ರಿ

ಪ್ರೀತಿಯಿ೦ದ ವೀಣಾ :) said...

Hello prakash,

nimma katteyali coding, decoding superbbbbbbbbbbb...... chennagide

ಸುಧೀಂದ್ರ said...

Chenaagiddu...ha ha ha

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ಕನ್ನಡದ ಬಹುತೇಕ ಪದಗಳನ್ನು ಈಗ ಬಳಸುವ ಮುನ್ನ ಎರಡೆರಡು ಬಾರಿ ಯೋಚಿಸುವಂತಾಗಿದೆ ನಿಮ್ಮಿಂದ :)
ನಗುವಿನ ಸರಕುಗಳ ಸರದಾರರಾಗಿದ್ದೀರಿ ನೀವು, ಮತ್ತೊಂದು ಚೆಂದದ ಬರಹ...

Guru's world said...

ಪ್ರಕಾಶ್,
ಹಾ ಹಾ ತುಂಬ ಚೆನ್ನಾಗಿದೆ ನಿಮ್ ಸ್ಟೋರಿ,,, ಓದ್ತಾ ಇರ್ಬೇಕಾದ್ರೆ,, ಏನಾದ್ರು ಫೂಲ್ ಮಾಡೋಕೆ ಪ್ರಯತ್ನಿಸ್ತಿದಿರ ಅಂತ ಅನ್ನ್ಕೊಂಡೆ,, ಪರವಾಗಿಲ್ಲ ನಿಮ್ಮ ಹಾಗು ನಿಮ್ಮ ಅಣ್ಣನ ಜೊತೆ ಬಹಳಷ್ಟು ಕೋಡ್ ವರ್ಡ್ಸ್ ವಿನಿಮಯ ಆಗುತೆ ಅಂತ ಕಾಣುತ್ತೆ,, ಹೀಗೆ ನಮ್ ಜೋತೆನು ಹಂಚ್ಕೋಲಿ...

ಗುರು

ರವಿಕಾಂತ ಗೋರೆ said...

ಹಾ ಹಾ ಹಾ....!!!! ಲೇಖನ ಓದಿ ನಮ್ಮಣ್ಣನ ನೆನಪಾಯಿತು... ಲೇಖನ ತುಂಬ ಮಜವಾಗಿತ್ತು... ಊರಿಗೆ ಹೋದಾಗ ಅಲ್ಲಿ ಅಣ್ಣನ ಮಾತುಗಳನ್ನು ಕೇಳೋದೇ ಮಜಾ... ಆವತ್ತೊಂದಿನ ನಾವು ಊರಿಗೆ ಹೋದಾಗ ಏನೋ ಇಂಗ್ಲಿಷ್ ನಲ್ಲಿ ಗೆಳೆಯನ ಜೊತೆ ರಿಸೆಸ್ಶಿಯನ್ ಬಗ್ಗೆ ಹೀಗೆ ಏನಾಗುತ್ತೋ ಏನೋ ಅಂತ ಮಾತಾಡ್ತಾ ಇದ್ದೆ ಆವಾಗ ನಮ್ಮಣ್ಣ ಇಂಗ್ಲಿಷ್ನಲ್ಲಿ ಒಂದು ಮಾತು ಹೇಳೇ ಬಿಟ್ಟ...What what haapens at what what time happende happend!!!! (ಯಾವ್ಯಾವ ಸಮಯದಲ್ಲಿ ಯೇನೆನಾಗ್ಬೇಕೋ ಆಗೇ ಆಗುತ್ತೆ)... (ನಮ್ಮಣ್ಣ ಕಲ್ತಿರೋದು SSLC ಆದ್ರೆ ನನಗಿಂತ ಜ್ಞಾನ ಜಾಸ್ತಿ ಇದೆ..) :-)

Kishan said...

fantastlikku !!

ಅಣ್ಣನ ಇನ್ನೊಂದು ಕಥೆ ಯಾವಾಗ !!

ಸಿಮೆಂಟು ಮರಳಿನ ಮಧ್ಯೆ said...

ಶರತ್....

ನಿಮ್ಮ ಭಾವಯಾನದ ಕಥೆ ತುಂಬಾ ಚೆನ್ನಾಗಿದೆ...

ಹಳ್ಳಿ ಕಡೆಯ ಜನರ ಹಾಸ್ಯ ಪ್ರವರ್ತಿ..
ಸಹಜವಾಗಿರುತ್ತದೆ... ನಗು ಉಕ್ಕಿಸುತ್ತದೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಧರಿತ್ರಿ...

ಈ ಥರಹದ ರಹಸ್ಯ ಭಾಷೆ ಎಲ್ಲೆಡೆ ಇದೆ...

ನಮ್ಮ ದೇಶದ ಹಳ್ಳಿಗಳಲ್ಲಿ...

ಉತ್ತರ ಕರ್ನಾಟಕದಲ್ಲಿ ಬಹಳ ಇದೆ....
ಕರಾವಳಿಯಲ್ಲಿಯೂ ಹೇರಳವಾಗಿದೆ...

ಹಳ್ಳಿ ಭಾಷೆಯ ಸೊಗಡಿನಲ್ಲಿ ಕೇಳುವಾಗ
ಅದರ ಮಜವೇ ಬೇರೆ...

ಲೇಖನ ಇಷ್ಟವಾಗಿದ್ದಕ್ಕೆ ...

ಧನ್ಯವಾದಾಗಳು...

ಅಂತರ್ವಾಣಿ said...

ಎಂದಿನಂತೆ ಹಾಸ್ಯರಸ ಭರಿತ ಲೇಖನ.
ಹಾವು ಕಚ್ಚಿದೆ.. ಹುಷಾರಾಗಕ್ಕೆ ೫ ತಿಂಗಳು ಬೇಕು. ವಾವ್! ಎಂತಹ ವಾಕ್ಯ!

ಸಿಮೆಂಟು ಮರಳಿನ ಮಧ್ಯೆ said...

ವೀಣಾರವರೆ....

ನನ್ನ ಬ್ಲಾಗಿಗೆ ಸ್ವಾಗತ...

ನನ್ನ ಹಳೆಯ ಲೇಖನಗಳನ್ನೂ ಓದಿ...

ನನ್ನನ್ನು ಪರಿಕ್ಷಿಸಲು ಓದಿದ ಪತ್ರವನ್ನು ನಂಬಿ...
ನನ್ನ ಬಾವ ಊರಿಗೆ ಫೋನು ಮಾಡಿ ಮುಜುಗರ ಅನುಭವಿಸಿದ

ಘಟನೆ ಯಾವಗಲೂ ನಗೆ ಉಕ್ಕಿಸುತ್ತದೆ....

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಬರುತ್ತಾ ಇರಿ...

ನಿಮ್ಮ ಬ್ಲಾಗಲ್ಲೂ ಹೊಸ ಕವನಗಳು ಬರಲಿ...

ಸಿಮೆಂಟು ಮರಳಿನ ಮಧ್ಯೆ said...

ಸುಧೀಂದ್ರರವರೆ....

ನಿಮ್ಮ "ಜಲವರ್ಣ" ಬ್ಲಾಗ್...
ದರಲ್ಲಿನ ವರ್ಣ ಚಿತ್ರಗಳು ಸಕತ್ ಆಗಿವೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..

ಬರುತ್ತಾ ಇರಿ...

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್....

"ಕನ್ನಡ ಪದಕ್ಕೆ ಹನ್ನೆರಡು ಅರ್ಥಗಳು"
ಎನ್ನುವ ಗಾದೆ ನಮ್ಮ ಕಡೆ ಪ್ರಚಲಿತದಲ್ಲಿದೆ...

ಹಳ್ಳಿಜನರ ಹಾಸ್ಯ ಇದೇಥರಹ ಇರುತ್ತದೆ ಅಲ್ಲವೇ...?

ಲೇಖನ ಮೆಚ್ಚಿದ್ದಕ್ಕೆ

ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಗುರು.....

ನಿಮ್ಮ ಕ್ರಿಯೆಟಿವಿಟಿಯ ಬ್ಲಾಗ್ ಚೆನ್ನಾಗಿದೆ....

ಅಣ್ಣನ ಮುಂದಿನ ಪತ್ರಗಳನ್ನೂ ಬರೆಯುವೆ....

ಬಹಳ ಮಜಾ ಇದೆ...

ಲೇಖನ ಇಷ್ಟ ಪಟ್ಟಿದ್ದಕ್ಕೆ
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ರವಿಕಾಂತ್....

ನನ್ನಣ್ಣ ಎಂಟನೆ ತರಗತಿ ಪಾಸು ಮಾಡಿ ಮನೆಕಡೆ ಕೆಲಸದ ಒತ್ತಡ ಇರುವದರಿಂದ
ಮುಂದೆ ಓದಲಿಲ್ಲ....

ಅವರು ಬದುಕನ್ನು ಬದುಕುವರೀತಿ ನಿಜವಾಗಿಯೂ ಆಶ್ಚರ್ಯ ತರುತ್ತದೆ..

ಅವರಿಗೆ ಇರುವಷ್ಟು ಬದುಕಿನಲ್ಲಿ ಉತ್ಸಾಹ ನಮಗೆ ಇಲ್ಲ...

ಲೇಖನ ಮೆಚ್ಚಿದ್ದಕ್ಕೆ

ವಂದನೆಗಳು..

ಸಿಮೆಂಟು ಮರಳಿನ ಮಧ್ಯೆ said...

ಕಿಶನ್....

ಅಣ್ಣನ ಹಾಸ್ಯಗಳು ಜೊತೆ ಜೊತೆಯಲ್ಲೇ ಬರಲಿವೆ...
ಚಿಕ್ಕಪ್ಪನ ಹಾಸ್ಯದ ಸಂಗಡ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಅಂತರ್ವಾಣಿ....

ಮೊದಲು ಪತ್ರ ಓದಿದ ನನಗೆ ಗೂಢಾರ್ಥ ಅರ್ಥವಾಗಿತ್ತು...
ನಗುವೂ ಬಂದಿತ್ತು...
ನನ್ನಣ್ಣ ಪರಿಚಯವಿದ್ದ ಎಲ್ಲರಿಗೂ ಅರ್ಥವಾಗಿಬಿಡುತ್ತದೆ...

ಲೇಖನ ಮೆಚ್ಚಿದ್ದಕ್ಕೆ ...
ಪ್ರೋತ್ಸಾಹಕ್ಕೆ...
ಧನ್ಯವಾದಗಳು....

Geetha said...

ನಮಸ್ಕಾರ ಸರ್,

ಚೆನ್ನಾಗಿದೆ ನಿಮ್ಮ ಪತ್ರ ವ್ಯವಹಾರ...ಹಹಹ..

ಮತ್ತೆ ಸಾರ್ ಒಂದು ಸಲಹೆ.......
’central crime branch' ಅಲ್ಲಿ ಬಹು ಮುಖ್ಯವಾದ ’executive DECODER' ಹುದ್ದೆ ಖಾಲಿ ಇದೆಯಂತೆ ಸಾರ್. ನಿಮ್ಮ ಹೆಸರು ಸೂಚಿಸೋಣ ಅಂತ ಇದೀನಿ. ಅಪ್ಲಿಕೇಶನ್ ಜೊತೆ ನಿಮ್ಮ ’ರೆಸ್ಯುಮೆ’ ಬದಲು ನಿಮ್ಮ ಬ್ಲಾಗ್ ಲಿಂಕ್ ಹಾಕಿ ಬಿಡುವೆ. ಸೆಲೆಕ್ಶನ್ ಗ್ಯಾರೆಂಟಿ ;) ಎನಂತೀರಿ ಸರ್... :D

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಹಿತ್ತಲಮನೆ said...

ಹಹ್ಹಹ್ಹ !

ಸಿಮೆಂಟು ಮರಳಿನ ಮಧ್ಯೆ said...

ಗೀತಾ....

ಕೋಡ್ ಶಬ್ಧಗಳಿಗಾಗಿ ಈ ಸಲಹೆ...!

ಈ ಇಟ್ಟಿಗೆಸಿಮೇಂಟು ಎಲ್ಲಿ...?
ಆ ಪೋಸ್ಟ್ ಎಲ್ಲಿ....?

ಈ ಆರ್ಥಿಕ ಮುಗ್ಗಟ್ಟಿನಲ್ಲಿ ಕೆಲಸ ಕಡಿಮೆ..
ಎನ್ನುವದನ್ನು ಬಿಟ್ಟರೆ...
ನನಿಲ್ಲಿ ಸಂತೋಷವಾಗಿದ್ದೀನಮ್ಮ...!

ನಿಮ್ಮ ಅಭಿಮಾನ, ಪ್ರೋತ್ಸಾಹಕ್ಕೆ...
ಹ್ರದಯ ಪೂರ್ವಕ ವಂದನೆಗಳು....

ಸಿಮೆಂಟು ಮರಳಿನ ಮಧ್ಯೆ said...

ಹಿತ್ತಲಮನೆಯ ಬೀಗಣ್ಣನವರೆ....

ಹ್ಹೀ....ಹ್ಹೀ.....!

ಧನ್ಯವಾದಗಳು...