Sunday, March 8, 2009

ತಪ್ಪಿಂದಾಗಿ... ಮಿಷ್ಟೇಕು.. ಆಗೋಯ್ತು.. !.!.!..

ಸತ್ಯನಿಗೆ ಯಾವಾಗಲೂ ಹಾಗೇಯೇ..

ತಲೆಗೆ ಒಂದು ವಿಚಾರ ಹೊಕ್ಕಿತೆಂದರೆ ಬಿಡುವದೇ ಇಲ್ಲ..
ನನ್ನನ್ನೂ ಸಹ..

ಎರಡು ಸಾರಿ ಕೆಮ್ಮಿದ್ದಕ್ಕೆ "ಅಸ್ತಮಾ.. ಅಲರ್ಜಿ " ಬಂದಿರಬಹುದೆಂಬ ..
ಗುಮಾನಿಯ ಹುಳ ತಲೆ ಹೊಕ್ಕಿಬಿಟ್ಟಿತ್ತು..


"ಹಾವೇರಿ ಹತ್ತಿರ ಲಕ್ಷ್ಮೇಶ್ವರದಲ್ಲಿ ಒಬ್ಬರು ಔಷಧ ಕೊಡುತ್ತಾರಂತೆ..
ಹೋಗಿಬರೋಣ ಏಳು.."


ಹೊರಡಿಸಿಯೇ ಬಿಟ್ಟ..

ಹ್ಯುಂಡೈ "ವರ್ಣಾ" ಹೊಸಕಾರು..


ನಾನೇ ಡ್ರೈವ್. ಮಾಡಿದೆ...

ಹಾವೇರಿಮೂಲಕ ಲಕ್ಶ್ಮೇಶ್ವರ ಬರುವಷ್ಟರಲ್ಲಿ ಏಳು ಗಂಟೆ..

ಔಷಧ ಕೊಡುವದು ಬೆಳಗಿನ ಜಾವ "ರೋಹಿಣಿ" ನಕ್ಷತ್ರದಲ್ಲಿ...

ಅಲ್ಲಿಯೇ ಹತ್ತಿರವಿದ್ದ ಹೊಟೆಲ್ಲಿನಲ್ಲಿ "ಗೊಬ್ಬರದಂತಹ " ಊಟವನ್ನೂ ಮುಗಿಸಿ..

ಕಾರನ್ನೂ ಅಲ್ಲಿಯೇ ಬಿಟ್ಟು "ಆಟೋ" ದಲ್ಲಿ ಹೊರಡೋಣವೆಂದು ನಿರ್ಣಯ ಮಾಡಿದೇವು..

ಲಕ್ಷ್ಮೇಶ್ವರ .. ಒಂದು ಚಿಕ್ಕ ಪಟ್ಟಣ......
ರೋಡುಗಳಂತೂ ಅಧ್ವಾನ ಆಗಿಬಿಟ್ಟಿದ್ದವು..

ಬಯಲು ಸೀಮೆ.. ಅಂದು ಸಂತೆ ಬೇರೆ ಆಗಿತ್ತು..

ಜನಜಂಗುಳಿಯೂ ಇತ್ತು..

ಬೀದಿ ದೀಪ ಅಲ್ಲೊಂದು .. ಇಲ್ಲೊಂದು....ಇತ್ತು..

ಟ್ಯೂಬ್ ಲೈಟ್ ಬೆಳಕು " ಪಿಣುಕು.. ಪಿಣುಕು " ಆಗ್ತಿತ್ತು..

ಬೆಳಕು.. "ಹೋಗಿ.. ಬಂದು.. ಹೋಗಿ ಬಂದು.." ಆಗುತ್ತಿತ್ತು..

ಎಲ್ಲಪ್ಪಾ ಆಟೊ ಅಂತ ಹುಡುಕುತ್ತಿರುವಾಗ ಸಾವಕಾಶವಾಗಿ ಸದ್ದಿಲ್ಲದೇ ಒಂದು ಆಟೋ ಬಂದು ನಿಂತಿತು...

ಬಂದವನೆ ...ಅತಿ ವಿನಯದಿಂದ ಕೈ ಕಟ್ಟಿ ಕೊಂಡು...

"ಸಾಹೇಬ್ರ ಯಾವ ಕಡೆ ಹೋಗಬೇಕ್ರಿ..?" ಅಂತ ಕೇಳಿದ..

"ನೋಡ್ರಿ ಇಲ್ಲೊಬ್ಬರು ಆಯುರ್ವೇದ ಔಷಧ ಕೊಡ್ತಾರೆ..
ಅಸ್ತಮಾ..ಅಲರ್ಜೀ ಬಗ್ಗೆ..ಅಲ್ಲಿ ಹೋಗಬೇಕು.."

" ಓಹೋ ಅಲ್ಲಿಗಾ... ಅಯ್ತು.. ಬಿಡ್ರಿ..... ಕುತ್ಗೊಳ್ರಿ...
ಸಾಹೇಬರೇ.. .. ಇಪ್ಪತ್ತು ರುಪಾಯಿ.. ಅಷ್ಟೆ.. ." ಅಂತ ಹೇಳಿದ.....

ಇಪ್ಪತ್ತು ರೂಪಾಯಿ ತಾನೆ.. ಎಂದು ಆಟೊ ಹತ್ತಿದೆವು...

ಹಳೆ ಆಟೊ.. ಕತ್ತಲಾಗಿದ್ದರಿಂದ ಸರಿಯಾಗಿ ನೋಡಲಾಗಲಿಲ್ಲ...

ಒಳಗೆ ಕುಳಿತು ಕೊಂಡರೆ ..
ಕಲ್ಲು ಬೇಂಚಿನಮೇಲೆ ಕುಳಿತ ಹಾಗೇ ಇತ್ತು.....
ತೆಂಗಿನ ನಾರಿನ ಸೀಟು..
ಅಲ್ಲಲ್ಲಿ ಚುಚ್ಚಿದ ಅನುಭವ..

"ಏನ್ರಿ ಸೀಟು ಸರಿ ಇಲ್ವಲ್ರಿ...?"

" ಸಾಹೇಬ್ರೆ.....ನಾನು ರಾತ್ರಿ ಮಾತ್ರ ಆಟೋ ಓಡಿಸೋದು ..
ಹಗಲಲ್ಲಿ ಹೊಲದಲ್ಲಿ ಕೆಲ್ಸ ಮಾಡ್ತಿನ್ರಿ...
ರಿಪೇರಿ ಮಾಡ್ಸಕ್ಕೆ ಆಗ್ಲಿಲ್ರಿ..
ಕ್ಷಮಾ ಮಾಡ್ರಿ... ನೀವು ಕುತ್ಗೊಳ್ರಿ..

" ಆಟೊ ಬಿದ್ರೂ ನೀವು ಬೀಳ ಬಾರದು ನೋಡ್ರಿ.."
ಹಾಂಗ "
ಭದ್ರವಾಗಿ ಗಟ್ಟಿಯಾಗಿ" ಹಿಡ್ಕೊಳ್ರಿ.. ಮತ್ತ.... "

" ಆಯ್ತಪಾ.. ನೀನು ಸ್ಟಾರ್ಟ್ ಮಾಡಪಾ.."

ಕೆಳಗಿಂದ ಕೈ ಹೊಡೆದು.. ಹೊಡೆದು..ಹೊಡೆದೂ..

ಅಂತೂ "ಸ್ಟಾರ್ಟ " ಆಯ್ತು...

ಮುಂದೆ ನೋಡಿದರೆ..


ಆಟೋ ಡ್ರೈವರ್ ಕುಳಿತು ಕೊಳ್ಳುವದೇ ಇಲ್ಲ...!

ಅವನ ಮುಂದಿನ ಗ್ಲಾಸೇ ಇಲ್ಲ...!

ಒಂದು ಕೈಯಲ್ಲಿ ಬ್ಯಾಟರಿ "ಟಾರ್ಚ್.." ಹಿಡಿದು..
ತಲೆ ಹೊರಗೆ ಹಾಕಿ...

" ಪಕ್ಕಕ್ಕೆ.. ಹೋಗ್ರಲೇ...
ಪಕ್ಕಕ್ಕೆ.. ಹೋಗ್ರಲೇ.."..
ಅಂತಾನೆ...!


ನಮಗೆ ಆಶ್ಚರ್ಯ...!

"ಹಾರ್ನ್ ಮಾಡಪಾ..... ಯಾಕೆ ಬ್ಯಾಟ್ರಿ ತೋರಸಿ.. ಕೂಗ್ತೀಯಾ.....?.."

" ಸಾಹೇಬ್ರ.. ಹಾರ್ನ್ " ಸೌಂಡೇ ".. ಆಗೋದಿಲ್ರೀ...!...

ಹಂಗೇ " ಹೆಡ್ ಲೈಟೂ " ..ಇಲ್ರೀ..!

ನೀವು ಭದ್ರವಾಗಿ ಹಿಡ್ಕೊಳ್ರೀ.. ಮತ್ತ..

ಏಯ್.. ಕಿವಿ ಕೇಳಾಂಗ್ ಇಲ್ಲೇನು..??

ಪಕ್ಕ ಹೋಗ್ರಲೇ..!
ಪಕ್ಕಕ್ಕೆ ಹೋಗ್ರಲೇ...."
ಮತ್ತೆ ಕೋಗಿದ...


ಗಾಡಿ ಸ್ಪೀಡ್ ಜಾಸ್ತಿ ಆಯಿತು..!

ಸಿಕ್ಕಾಪಟ್ಟೆ ಕಲ್ಲು... ಹೊಂಡ.. ಧಡಕಿ..!!

ಸತ್ಯ ಆಚೆಗೆ ಈಚೆಗೆ ಹಾರತೊಡಗಿದ..

ಅವನ ಎಲುಬುಗಳು ನನ್ನ ಮೈಗೆ ಇರಿಯುತ್ತಿತ್ತು..

ನಾನು ಭಾರಜಾಸ್ತಿಯಾಗಿದ್ದರೂ ..
ನನ್ನನ್ನೂ ಎತ್ತಿ ಎತ್ತಿ ಹಾರಿಸುತ್ತಿತ್ತು.. ಆ ಆಟೋ...!


"ಯಪ್ಪಾ .. ಗಾಡಿ ನಿಲ್ಸಪ್ಪಾ..ನಮ್ಮಿಂದ ಇಲ್ಲಿ ಕೂತ್ಗೊಳ್ಳಿಕ್ಕೆ ಆಗ್ತಾ ಇಲ್ಲಪ್ಪಾ..!

ನಿಲ್ಸು.. ನಿಲ್ಸೋ ಮಾರಾಯಾ.. !.. "

" ಸಾಹೇಬ್ರೇ.. ಈ ಗಾಡೀಗೆ.." ಬ್ರೇಕು " ಇಲ್ರಿ...
ಇದು ಅಲ್ಲಿ ಹೋಗಿಯೇ ನಿಲ್ ಬೇಕ್ರಿ...
ನೀವು ಭದ್ರ ಕುತ್ಗೊಳ್ರಿ.. ಹೆದರಿಕೆ ಆದ್ರೆ ದೇವರ ನೆನಪು ಮಾಡ್ರೀ...

ಏಯ್ ಪಕ್ಕ ಹೋಗ್ರಪ್ಪೋ... !!
ಪಕ್ಕಕ್ಕೇ ಹೋಗ್ರಪೋ..."


ಮತ್ತೇ ಜೋರಾಗಿ ಕೋಗಿದ...

ಗಾಡಿ ನಿಲ್ಲಲೇ ಇಲ್ಲ...!


ನಾನೂ ಸಹ ಎದ್ದೆದ್ದು ಹಾರ ತೊಡಗಿದೆ.. !

ನನಗೆ ಹಿಡಿತ ಸಿಗದೇ..
ಸತ್ಯನ ಮೇಲೆ ಧೊಪ್ಪೆಂದು.... ಬಿದ್ದೆ..

"ಆಯ್ಯೊಯ್ಯೋ.. ಸತ್ತನಪ್ಪೋ..

ದೊಡ್ಡ.. ಬಂಡೆ ಕಲ್ಲು ಬಿದ್ದಾಂಗೆ ಬೀಳ್ತಿಯಲ್ಲೋ..

ನನ್ನ ಚಟ್ನಿ.. ಮಾಡಿದ್ಯೆಲ್ಲೋ.. ಮಾರಾಯಾ..!! "
ಸತ್ಯ ಅರಚಿ ಕೂಗಿದ..


ನಾನು ಸ್ವಲ್ಪ ತಾಕತ್ತು ಹಾಕಿ ಅವನ ಮೇಲಿಂದ ಎದ್ದೆ..

" ಅಯ್ಯಯ್ಯೋ.. ಅಯ್ಯೋ.. ಗಾಡಿ ನಿಲ್ಸಲೇ ಪುಣ್ಯಾತ್ಮಾ.. !

ನಿಂಗೆ ಕೈ ಮುಗಿತಿವೋ ಮಾರಾಯಾ.. ! ಗಾಡಿ ನಿಲ್ಸು.."

ಈಗ ಸತ್ಯ ನನ್ನ ಮೇಲೆ ಬಿದ್ದ..

ಸತ್ಯ ಬಿದ್ದ ಹೊಡೆತಕ್ಕೆ ನನ್ನ ಜೀವ ಹಾರಿ ಹೋದಂತಾಯಿತು...

ಇದೇನಪ್ಪ..! ಒಣ ಕಟ್ಟಿಗೆ ತೆಗೆದು ಕೊಂಡು ಹೊಡೆದು.. ಬಾರಿಸಿದ ಹಾಗೆ ಇದೆ....!!

ನನಗೆ ನೋವು ತಡೆದು ಕೋಳ್ಳಲಾಗಲಿಲ್ಲ...

ಅರಚಿದೆ.. ಕೂಗಿದೆ... ಕೂಗಿದೆ..!

ಸಂಗಡ ಸತ್ಯ ಕೂಡ ಒಂದೇ ಸವನೆ ಕೂಗ್ತಿದ್ದ." ಅಯ್ಯಯ್ಯೋ,, ಅಯ್ಯಯ್ಯೋ,,,"

"ಇರ್ರೀ ಸಾಹೇಬ್ರ.. ಇರ್ರಿ... !..
ಇಲ್ಲೇ ಬಂತು ನೋಡ್ರೆಲಾ.."
ಅಂದ ಡ್ರೈವರ್...


ಏನಾಗ್ತಿದೆ ಅನ್ನುವಷ್ಟರಲ್ಲಿ ಆಟೊ ಇಂಜಿನ್ ಆಫ್ ಆಯಿತು..

ಒಂದು ಮರಕ್ಕೆ ಢಿಕ್ಕಿ ಹೊಡೆಯಿತು... ಧಡ.. ಭಡ.. ಅಲುಗಾಡಿತು..

ಇಲ್ಲಿ ನನಗೂ ಸತ್ಯನಿಗೂ ಢಿಕ್ಕಿ ಆಯಿತು..

ತಲೆಗೆ ತಲೆ " ಡಬ್" ಎಂದು ಹೊಡೆಯಿತು..

ಗಾಡಿ ನಿಂತಿತು...

"ಸಾಹೇಬ್ರ.. ಇದೇ ಜಾಗ ನೋಡ್ರಿ.. ಸಾವಕಾಶ.. ಇಳಿರಿ.. ಮತ್ತ.."

ನಾವು ಮಾತಾಡೋ ಸ್ಥಿತಿಯಲ್ಲಿ ಇರಲಿಲ್ಲ..

ದೇಹದ ಎಲ್ಲ ಪಾರ್ಟು ಮಾತನಾಡುತ್ತಿತ್ತು..
ತಲೆಗೂ ಪೆಟ್ಟು ಬಿದ್ದು... ಧಿಮ್ ಎನ್ನುತ್ತಿತ್ತು...

ಅಸಾಧ್ಯ ನೋವು... ಅಯ್ಯೋ... ಅಯ್ಯಪ್ಪಾ..!

ಕಾಲನ್ನು ಎರಡು ಕೈಯಿಂದ ಎತ್ತಿ ಹೊರಗೆ ಹಾಕಿ ಇಳಿದೆ...
ಹೇಗೊ ಹೇಗೋ ಮಾಡಿ... ನಿಂತು ಕೊಂಡೆವು...


" ಎಂತಾ "ಅಡಪೋಟ್ರು " ಆಟೋ ಇದು...?

ಎಂತಾ ಮನುಷ್ಯನೋ ನೀನು.. ?

ಪೋಲಿಸ್ ಕಂಪ್ಲೇಂಟ್ ಕೋಡ್ತೀವಿ ನೋಡು.. "

ಅಂತ ಸಿಟ್ಟಿನಿಂದ.. ನೋವಿನಿಂದ.. ಕೂಗಿದೆ..

"ಸಾಹೇಬ್ರ.. ಹೆದರ ಬೇಡಿ..
ನನ್ನ ಗಾಡಿಯಿಂದ ಇವತ್ತಿನವರೆಗೆ.. ಯಾರೂ ಸತ್ತಿಲ್ರೀ..

ಯಾವಾಗ್ಲೂ ದೂರದಲ್ಲೇ ಇಂಜಿನ್ನು ಆಫ್ ಮಾಡಿ..
ಢಿಕ್ಕಿ ಮಾಡಿ ಗಾಡಿ ನಿಲ್ಲಸ್ತಿನ್ರಿ...
ಇವತ್ತು " ತಪ್ಪಿಂದಾಗಿ...... ಮಿಷ್ಟೇಕ್ " ಆಗಿ ಹೋತ್ರಿ.....!
ಇವತ್ತು ಹತ್ತಿರದಿಂದ ಢಿಕ್ಕಿ ಹೊಡೆದು ನಿಂತು ಹೋಯ್ತು ನೋಡ್ರಿ... !."
ಕ್ಷಮಾ ಮಾಡ್ರಿ.. ಬಡವ . ನಾನು...
ಪೆಟ್ಟು ಜಾಸ್ತಿ ಆಯಿತೆನ್ರಿ..?.."

ಛೇ.. !

ಇವನ ಬಳಿ ಏನು ಮಾತನಾಡುವದು.. ?
ಅಂತ ಇಪ್ಪತ್ತು ರುಪಾಯಿ ತೆಗೆದು ಕೊಟ್ಟೆ...


ಈ ಸ್ಥಿತಿಯಲ್ಲಿ ಆಯುರ್ವೇದದ ವೈದ್ಯರನ್ನು ಭೇಟಿ ಮಾಡುವದು ಹೇಗೆ..?

ಇಲ್ಲಿಂದ ವಾಪಸ್ಸು ಹೋಗುವದು ಹೇಗೆ...?

ಆ ಕತ್ತಲು ರಾತ್ರಿಯ ಅಪರಿಚಿತ ಜಾಗದಲ್ಲಿ ಸಾವಿರ ಪ್ರಶ್ನೆಗಳು ಶುರುವಾದವು.....

ಆಟೋದವ ಮತ್ತೆ ಎದುರಿಗೆ ಬಂದ..

" ಸಾಹೇಬ್ರೆ..ನಿಮಗೆ ವಾಪಸ್ಸು ಹೋಗಬೇಕಂದ್ರ..
ಇಲ್ಲಿ ಮತ್ತೆ ಯಾವ ಗಾಡೀನೂ ಸಿಗೋದಿಲ್ರೀ... .
ನೀವು ನಿಮ್ಮ ಕೆಲಸ.. ಮುಗ್ಸಿ ಬರ್ರೀ....
ನಾನು ಆ ಸಣ್ಣ ಸಾಹೇಬರ ಸಂಗಡ ಪಕ್ಕ ನಿದ್ದೆ ಮಾಡ್ತಾ ಇರ್ತೆನ್ರಿ..
ನೀವು ಎಬ್ಬಿಸ್ರಿ...!!!.. "

ಆರೇ.. ಹೌದಲ್ಲ !!!

ಈ ಸತ್ಯ ಎಲ್ಲಿ..?...

ಸತ್ಯ...

ಅಲ್ಲಿಯೇ ಇರುವ ಮರದ ಕೆಳಗೆ "ಅಂಗಾತ " ಮಲಗಿ ಬಿಟ್ಟಿದ್ದ...!

ನನಗೆ ಗಾಭರಿ ಆಯಿತು...!

ನಾವು ಅಲ್ಲಿಂದ ತಿರುಗಿ ಹೋಗಿದ್ದೂ.....

ಕೂಡ ಒಂದು... ದೊಡ್ಡ ಕಥೆ...!


ನಲ್ಮೆಯ ಓದುಗರೇ...

ಬರಹಗಾರನಲ್ಲದ ...
ನನ್ನ ಬರಹಗಳನ್ನು ಮೆಚ್ಚಿ ...,
ಅಭಿಮಾನದಿಂದ ಪ್ರೋತ್ಸಾಹದಿಂದ..
ಬೆನ್ನು ತಟ್ಟುತಿದ್ದೀರಿ...

ಈಗ ನನ್ನ ಬ್ಲಾಗನ್ನು ಅನುಸರಿಸುವವರ ಸಂಖ್ಯೆ..
ಅರ್ಧ ಶತಕ ಆಗಿದೆ...

ಅನುಸರಿಸರಿಸದೆ.. ಪ್ರೋತ್ಸಾಹಿಸುವವರ ಸಂಖ್ಯೆ...
ಇದಕ್ಕಿಂತ ಜಾಸ್ತಿ ಇದೆ...

ನಿಮ್ಮ ಪ್ರೋತ್ಸಾಹ ನನಗೆ ಬರೆಯಲು ಟಾನಿಕ್...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ....

ನಿಮ್ಮೆಲ್ಲರ...
ಅಭಿಮಾನಕ್ಕೆ.., ಪ್ರೋತ್ಸಾಹಕ್ಕೆ..

ಧನ್ಯ...

ಧನ್ಯ ವಾದಗಳು...

ಪ್ರೀತಿಯಿಂದ...

ಪ್ರಕಾಶಣ್ಣ...

87 comments:

Prabhuraj Moogi said...

ಹ ಹ ಹ ಬಹಳ ಚೆನ್ನಾಗಿದೆ ನಿಮ್ಮ ಪಯಣ, ಬರುವಾಗ ಅದೇ ಅಟೊನಲ್ಲಿ ಬಂದಿರೊ ಹೇಗೇ??? ಮತ್ಯಾವ ಮರಕ್ಕೆ ಡಿಕ್ಕಿ ಹೊಡಿದಿರಿ... ಸತ್ಯ ಬಿದ್ದಾಗ ಒಣ ಕಟಿಗೆ ತೆಗೆದುಕೊಂಡು ಬಾರಿಸಿದ ಹಾಗಿದೆ ಅಂದದ್ದು ಒದಿ ಬಿದ್ದು ಬಿದ್ದು ನಕ್ಕೆ.... ಹೀಗೇ ಬರೆಯುತ್ತಿರಿ..

ಸುಧೇಶ್ ಶೆಟ್ಟಿ said...

ನಿಮ್ಮ ಲೈಫ್ ಇಡೀ ಇ೦ತಹ ಎಕ್ಸೈಟುಮೆ೦ಟುಗಳೇ ತು೦ಬಿದೆಯಲ್ಲಾ ಪ್ರಕಾಶಣ್ಣ.... ಸೂಪರ್... ಮು೦ದೆ ಏನಾಯಿತು ಅ೦ತ ತಿಳಿಯಲು ತುದಿಕಾಲಲ್ಲಿ ನಿ೦ತಿದ್ದೇನೆ...

Rajendra Bhandi said...

ಮಸ್ತ ಐತ್ರಿ ಸರ, ಹೊರಳಿ ಹ್ಯಾಂಗ್ ಬಂದ್ರಿ ಅಂತ್ ಲಗೂನ್ ಬರಿರಿ ಸರ..

ಮಲ್ಲಿಕಾರ್ಜುನ.ಡಿ.ಜಿ. said...

ಒಳ್ಳೆ ಅಡಪೋಟ್ರು ಆಟೋ ಹಿಡಿದಿದ್ದೀರಲ್ಲ ಸರ್...
ಹುಂಡೈ ನಲ್ಲಿ ಹೋದವರು ಆಟೋ ಹತ್ತಿ Die Die...
ನಿಮ್ಮ ಸ್ನೇಹಿತರಾದ ಸತ್ಯರ ಆಸ್ತಮಾ ಓಡಿಬಿಟ್ಟಿರಬೇಕು!
ಇನ್ನು ಮುಂದೇನಾಯಿತು ಎಂಬ ಕುತೂಹಲದಿಂದ ಕಾಯುವಂತಾಗಿದೆ.
ನಮಗೇನೋ ಓದುವಾಗ ಮಜ ಅನ್ಸುತ್ತೆ. ಆದರೆ ಆ ಜಾಗದಲ್ಲಿ ನಿಂತು ಯೋಚಿಸಿದರೆ ಮೈ ಜುಮ್ಮೆನ್ನಿಸುತ್ತೆ. ಅದರಲ್ಲೂ ಡ್ರೈವರನ ಆಶ್ವಾಸನೆ ಬೇರೆ- ಯಾರೂ ಸತ್ತಿಲ್ಲ ಬಿಡಿ ಸರ್ ಅಂತ!
ಮುಂದೇನಾಯಿತು...?

ಸಿಮೆಂಟು ಮರಳಿನ ಮಧ್ಯೆ said...

ಪ್ರಭು....

ಏನು ಹೇಳಲಿ.. ಸರ್...?

ಸತ್ಯನಿಗೆ ಯಾವುದೇ ಅಲರ್ಜಿ ಇರಲಿಲ್ಲಾ...!

ಸುಮ್ನೆ ಇರಲಿಕ್ಕೆ ಆಗದಿದ್ದವನು ..
ಮೈಮೇಲೆಲ್ಲ ಇರುವೆ ಬಿಟ್ಟುಕೊಂಡಿದ್ನಂತೆ...
ಅಂತಾ ಸ್ಥಿತಿ ಆಗ್ತೋಯ್ತು ನಮ್ಮ ಕಥೆ....!

ನೆನಪಿಸಿ ಕೊಂಡ್ರೆ.. "ಪಕ್ಕೆಲುಬು" ಎಲ್ಲಾ ನೆನಪಾಗುತ್ತದೆ..

" ಅಡಪೋಟ್ರು" ಆಟೋ ಪಯಣ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು..

ಪ್ರತಿಕ್ರಿಯೆಗೆ ಧನ್ಯವಾದಗಳು...!

shivu said...

ಪ್ರಕಾಶ್ ಸರ್,

ಅಹ....ಅಹ...ಅಹ್....ಹೋ....ಓದುತ್ತಾ ಸಿಕ್ಕಾಪಟ್ಟೆ ನಗುಬಂತು....[ಕೆಲವೊಮ್ಮೆ ನಾನು ಅದೇ ಆಟೋದಲ್ಲಿ ಕುಳಿತು ನಿಮ್ಮ ಎಲ್ಲಾ ನೋವು ಅನುಭವಿಸಿದಂತೆ ಭಯವೂ ಆಯಿತು..]

ಕಳೆದ ವರ್ಷ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಹೋಗಲು ಹಾವೇರಿಯಲ್ಲಿ ಟ್ರೈನ್ ಇಳಿದಿದ್ದೆ...ರೈಲು ನಿಲ್ದಾಣದಿಂದ ಬಸ್ ನಿಲ್ದಾಣದ ವರೆಗೆ ನಡೆದೇ ಹೋದೆವು...
.ಸದ್ಯ ಆಟೋದಲ್ಲಿ ಹೋಗಲಿಲ್ಲ !!

ನಂತರ ವಾಪಸ್ಸು ಬರುವಾಗ ಯಾವ ಆಟೋದಲ್ಲಿ ಬಂದಿರಿ...ಮುಂದಿನ ಲೇಖನಕ್ಕೆ ಕಾಯುತ್ತಿರುತ್ತೇನೆ...

Vinutha said...

ಪ್ರಕಾಶ್ ಅವರೇ,

ಗುತ್ತಲದಿಂದ ಕುರುವತ್ತಿಗೆ ಹೋದಾಗಿನ ನಮ್ಮನುಭವದ ಮೆಲುಕು ಹಾಕಿಸಿದಿರಿ. ಮನೆ ತಲುಪುವಷ್ಟರಲ್ಲಿ ದೇಹದ ಭಾಗಗಳೆಲ್ಲ ಸ್ವಸ್ಥಾನದಲ್ಲಿರುವುವೇ ಎಂದು ಹಾಸ್ಯ ಮಾಡಿಕೊಂಡು ನಗುತ್ತಿದ್ದೆವು. ಆದರೆ ಆ ಕುಲುಕಾಟದಲ್ಲಿ ಕೊನೆಗೆ ತಂಗಿಗೆ ಕಾಣಿಸಿಕೊಂಡ Muscle spasm ನೆನೆಸಿಕೊಂಡರೆ, ಈಗಲೂ ಭಯವಾಗತ್ತೆ.
ಈಗ ನಿಮ್ಮ ಲೇಖನ ಓದಿ ಸಂತೋಷ ಪಟ್ಟರೂ, ಅಂದಿನ ನಿಮ್ಮ ಸ್ಥಿತಿ !! :)
ಮುಂದಿನ ಭಾಗಕ್ಕಾಗಿ ನಿರೀಕ್ಷಿಸುತ್ತ, ಈ ಸುಂದರ ಬರಹಕ್ಕಾಗಿ ಧನ್ಯವಾದಗಳು.

ಸಿಮೆಂಟು ಮರಳಿನ ಮಧ್ಯೆ said...

ಸುಧೇಶ್...

ಈ ಘಟನೆ ಮರೆತು ಹೋಗಿತ್ತು..

ಅಮೇರಿಕಾದಲ್ಲಿರುವ ನನ್ನ ಅಕ್ಕನ ಮಗಳು .
ನೆನಪಿಸಿ ಬರೆಯಲಿಕ್ಕೆ ಹೇಳಿದ್ದಾಳೆ...

ನಿಜ ಹೇಳ್ತಿದ್ದೀನಿ..
ಮತ್ತೆಂದೂ ಆ ಕಡೆ ತಲೆ ಹಾಕಿ ಮಲುಗಲಿಲ್ಲ...!

ಅಡಪೋಟ್ರು ಅಟೋ ಪಯಣ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ರಾಜೇಂದ್ರ....

ಏನ ಬರ್ಯೋದು ಸಾಹೇಬ್ರ..?

"" ಕುತ್ಗೊಂಡಂವ .. ಕೋಡಂಗಿ...
ಬಿಟ್ಟಂವ... ವೀರಭದ್ರ.. "

ಹಾಂಗಾಗಿ ಹೋಯ್ತು ನೋಡ್ರಿ...!

ಸಿಂಗಾಪುರಕ್ಕೆ ಹೋಗಿ ಟ್ಯಾಕ್ಸಿ ಮೇಲೆ ಕೂತ್ಗೊಂಡ್ರೂ...
ಈ ಅಡಪೋಟ್ರು ಆಟೊ ನೆನಪು ಹೋಗಲಿಲ್ರೀ..

ಅಲ್ಲೂ ನೆನಪಾಯ್ತ್ರೀ...!

ಹ್ಹಾ...! ಹ್ಹಾ...!

ನಿಮ್ಮ ಅಭಿಮಾನಕ್ಕ.. ಶರಣ್ರೀ... ಸಾಹೇಬ್ರ...!

ಮನಸು said...

ಸರ್ ಏನು ಇದು ಇಷ್ಟು ಕಷ್ಟ ಪಟ್ಟು ಹೋಗಬೇಕಿತ್ತೆ.... ಅಂದಿನ ಕಷ್ಟ ನಮಗೆ ಇಂದು ಹಾಸ್ಯ ತರಿಸಿದೆ... ತುಂಬಾ ಚೆನ್ನಾಗಿದೆ ಮತ್ತೆ ಮುಂದಿನ ಕಥೆ ಮುಂದುವರಿಸಿ... ವಾಪಾಸ್ ಆದ ಕಥೆ ಹೇಗಿದೆಯೆಂದು ನೋಡೋಣ..
ನಿಮ್ಮ ಕಥೆ ಇರಲಿ ಏನೋ ಒಂದು ದಿನ ಕಸ್ಟಪಟ್ಟಿರಿ ಆದರೆ ಆಟೋ ಮಹಾಶಯ ಹೇಗಿದ್ದ ಅನ್ನಿಸುತ್ತೆ... ಅಂತಹ ಆಟೋ ಇಟ್ಟುಕೊಂಡು .... ಆ ಆಟೋಗೇನು ಇಲ್ಲ ಬರಿ ಸೂರೊಂದಿತ್ತೇನೋ ಹ ಹ ಹ ಹ
ಬೆಲ್ ಇಲ್ಲ ಬ್ರೆಕಿಲ್ಲ, ಸೀಟ್ ಇಲ್ಲ .... ನಿಮ್ಮ ಜೀವ ಅವನಿಗೆ ಕೊಟ್ಟುಬಿಟ್ಟಿದೀರಿ ಹ ಹ ಹ ...

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್...

ಹ್ಯುಂಡೈ "ವರ್ಣಾ" ಹೊಸಾ ಕಾರನಲ್ಲಿ ಹೋಗಿ...

ಹುಂಡು.. ಹುಂಡಾಗಿ "ಡೈ .." ಆಗಿ ಬಿಡ್ತ್ವಿದ್ವಲ್ರಿ...!

ಅಸಲಿಗೆ ಸತ್ಯನಿಗೆ ಏನೂ ಆಗಿರಲಿಲ್ಲ...!

ಆ ಡ್ರೈವರ್... "ದೇವರ ಸ್ಮರಣೇ.. ಮಾಡ್ರೀ.. ಸಾಹೇಬ್ರೇ.."

ಅಂತಾನೆ...!

ಈಗ ನೆನಪಿಸಿ ಕೊಂಡರೆ... ಸಿಕ್ಕಾಪಟ್ಟೆ ನಗು ಬರ್ತದೆ...!

ಅಡಪೋಟ್ರು ಆಟೋ ಇಷ್ಟ ಆಗಿದ್ದಕ್ಕೆ.. ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವು...ಸರ್..

ಲಕ್ಷ್ಮೇಶ್ವರ ಹಾವೇರಿಯಿಂದ ೨೫- ೩೦ ಕಿಲೋಮೀಟರ್ ಇರಬಹುದೇನೋ...

ಆ ಭಾಗದ ರೋಡುಗಳೇ ಹಾಗೆ...

ಅಂಥಹ ರಸ್ತೆಗಳಲ್ಲಿ ಇನ್ನೆಂತಹ ಗಾಡಿ ಸಿಗಲಿಕ್ಕೆ ಸಾಧ್ಯ..?

ಅಲ್ಲಿಯ ಜನ ಮಾತ್ರ ತುಂಬಾ ಒಳ್ಳೆಯ ಜನ...

ನಾವು ಬಿದ್ದಾಗ.. ಎತ್ತಲಿಕ್ಕೆ ಅಂತ ಬಂದಿದ್ರು...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ವಿನುತಾರವರೆ...

ಸತ್ಯನನ್ನು ನೋಡಿ ನನಗೆ ಗಾಭರಿಯಾಗಿ ಬಿಟ್ಟಿತ್ತು...

ಕಣ್ಮುಚ್ಚಿ ಅಂಗಾತ ಮಲಗಿ ಬಿಟ್ಟಿದ್ದ...

ಮೈ ಕೈ ನೋವಂತೂ ಹದಿನೈದು ದಿನ ಇದ್ದಿತ್ತು...

ಅಡಪೋಟ್ರು ಆಟೊ ಇಷ್ಟ ಆಗಿದ್ದಕ್ಕೆ..

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮನಸು...

ಆ ಅಡಪೋಟ್ರು ಆಟೋದಲ್ಲಿ ..

ಓಡುವ ಇಂಜಿನ್ನು ಒಂದು ಸರಿ ಇತ್ತು...!

ಢಿಕ್ಕಿ ಹೊಡೆದು ಗಾಡಿ ನಿಲ್ಲಿಸೋ ಆಟೊ ನೆನಪಾದರೆ..

ಈಗಲೂ ಮೈ ಜುಂ ಅನ್ನುತ್ತದೆ...

ಮುಂದಿನದು ಒಂದು ಭಾಗದಲ್ಲಿ ಮುಗಿಸಲಿಕ್ಕೆ ಪ್ರಯತ್ನ ಮಾಡುತ್ತೇನೆ...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...

ಧನ್ಯವಾದಗಳು...

ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ said...

ಅಲ್ರೀ ಸರ್ರ ಅವ ಮೊದಲೇ ಹೆಳ್ಯಾನ ತಪ್ಪಿಂದಾಗಿ ಮಿಸ್ಟೇಕು ಆಗ್ಯದ ಅಂತ ಆ ಹಳ್ಳಿ ಮಂದಿ ಕ್ಯಪ್ಯಾಕಿಟಿನಾ ಇಷ್ಟು ನೀವ್ಯಾಕ್ ಅದನ್ನೆಲ್ಲ ಪಬ್ಲಿಕಿಟಿ ಮಾಡ್ತೀರ್ರೀ ಸರ್ರ?
ಅವಸರದಾಗ್ ಒಮ್ಮೊಮ್ಮೆ ಗಡಿಬಿಡಿ ಆಗ್ತದ.
ಅಂದಂಗ ನೀವು ಮೈ ಕೈ ನೋವಿಗೆ ಯಾವ ಧವಾಕಾನಕ್ಕ್ ಹೋದ್ರಿ ಬರೀರ್ರಲ್ಲ ಮತ್ತೆ!!!!!!!!!!!!!!!!!!

ಜ್ಯೋತಿ said...

ಪ್ರಕಾಶಣ್ಣ,
ಆಯುರ್ವೇದ ಡಾಕ್ಟ್ರರತ್ರ ಅಸ್ತಮಾಕ್ಕಿಂತ ಜಾಸ್ತಿ ಮೂಲೆ ಮುರಿತಕ್ಕೆ ಔಶದಿ ತೆಗೊಂಡ್ರಿ ಅಂತ ಅನ್ಸತ್ತೆ!
ಕತೆ ಚೆನ್ನಾಗಿದೆ, ಆದರೆ ನಿಮ್ಮ ಅವಸ್ತೆ ಕೇಳಿದರೆ ಅಯ್ಯೋ ಅನ್ಸತ್ತೆ.
ಬೆಂಗ್ಳೂರಲ್ಲೂ ಈ ತರ ಆಟೋಗಳಿವೆ ಪ್ರಕಾಶಣ್ಣ, ಇಳಿಯುವಾಗ ಕೈ, ಕಾಲು ನೆಟ್ಟಗಿದ್ದರೆ ಹೆಚ್ಚು.

ಉಮಿ :) said...

ಹ ಹ್ಹ ಹ್ಹಾ... ಪ್ರಕಾಶ್ ಸರ್,
ನಾನೂ ಅದೇ ಭಾಗದವ. ಲಕ್ಷ್ಮೇಶ್ವರ ನಮ್ಮ ಊರಿನಿಂದ ಸುಮಾರು ಮೂವತ್ತೈದು ಕಿಲೋ ಮೀಟರ್ ದೂರದಲ್ಲಿದೆ. ಲಕ್ಷ್ಮೇಶ್ವರ ಇನ್ನೂ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿದೆ ಅಂತ ಅಷ್ಟಾದ್ರೂ ಒಳ್ಳೇ ರಸ್ತೆ. ಇಲ್ಲಾಂದ್ರೆ ಇನ್ನೂ ಅಧ್ವಾನ. ನನಗೂ ಇಂಥ ಅನುಭವಗಳು ಊರಿಗೆ ಹೋದಾಗಲೊಮ್ಮೆಯಾದರೂ ಆಗಿರುತ್ತವೆ. ಕೆಲವು ಸಾರಿ ಪ್ರಯಾಣಿಕರೇ ಆಟೋವನ್ನು ತಳ್ಳಿ ಸ್ಟಾರ್ಟ್ ಮಾಡಲು ಸಹಾಯ ಮಾಡಬೇಕಾಗುತ್ತೆ. ಒಂದು ತಿದ್ದುಪಡಿ, ನೀವು ಹೇಳಿದಂತೆ ಲಕ್ಷ್ಮೇಶ್ವರ ತಾಲೂಕಲ್ಲ. ಅದು ಶಿರಹಟ್ಟಿ ತಾಲೂಕಿನಲ್ಲಿ ಬರುವ ಒಂದು ಪಟ್ಟಣ.
ಮುಂದ್ ಏನಾತ್ರೀ. . . ಅಂಧಂಗ, ನಮ್ಮ್ ಕಡೆ ಮೂಳೆ ಮುರಿತಕ್ಕೂ ಒಳ್ಳೇ ಔಷಧ ಕೊಡ್ತಾರೆ. :)

ಚಿತ್ರಾ said...

ಹಾಹಾಹಾ....
ಪ್ರಕಾಶ್,
ನೀವೂ ಕೂಡ ಮಿಷ್ಟೇಕ್ ಮಾಡಿ ತಪ್ಪಾಗಿ ಆಟೋದಲ್ಲಿ ಕೂತ್ಕೊಂಡ್ರಿ !! ನಿಮ್ಮಗಳ ಕೆಮ್ಮು ದಮ್ಮು ಎಲ್ಲಾ ಮರೆತುಹೋಗಿ , ವೈದ್ಯರಲ್ಲಿ ಮೈ ಕೈ ನೋವಿಗೆ ಔಷಧಿ ತೊಗೊಂಡ್ರಾ ಹೇಗೆ? ಹಿ ಹಿ ಹಿ.. ಒಳ್ಳೇ ಅವಸ್ಥೆ ನಿಮ್ಮದು !
ಈ ಮುಂದಿನ ಗ್ಲಾಸ್ ಇಲ್ಲದ ರಿಕ್ಷಾ ಕಥೆ ನನ್ನ ಅನುಭವವೊಂದನ್ನು ನೆನಪಿಸಿತು . ಯಾವಾಗಲಾದರೂ ಬರೆಯುತ್ತೇನೆ.

ಸಂದೀಪ್ ಕಾಮತ್ said...

ಚಿಕ್ಕ ಮಿಷ್ಟೇಕು ಚಿಕ್ಕದಾಗಿದ್ದಕ್ಕೆ ಸಂತೋಷ ಪಡಬೇಕೇನೋ!!

Dr.Gurumurthy Hegde said...

Prakashanna,

endinante utaama nage baraha, tumba khushiyayitu

sunaath said...

ಪ್ರಕಾಶ,
ಆ ಆ‍^ಟೋದವಾ ಭಾಳ ಛಲೋ ಮನಶ್ಯಾ ಕಾಣಸ್ತಾನ. ನಿಮ್ಮನ್ನ ಸರಿಯಾದ ಗುರಿಗೇ ಸೇರ್ಸ್ಯಾನ!

ಸಿಮೆಂಟು ಮರಳಿನ ಮಧ್ಯೆ said...

ಮೂರ್ತಿ...

ನೀವು ಮಜಾ ಇದ್ದೀರಿ ಬಿಡ್ರಿ...

ಆ ಆಟೋದಂವಂಗೇ ಸಪೋರ್ಟು ಮಾಡ್ತೀರಲ್ರೀ..

ನನ್ನ ಕಥೆ ಇನ್ನೂ ಮುಗಿದಿಲ್ಲಾ...

ಇನ್ನೂ ಐತ್ರಿ ಸಾಹೇಬ್ರಾ..!

ನನ್ನ ಆಟೋದಲ್ಲಿ ಇಲ್ಲಿವರೆಗೆ ಸತ್ತಿಲ್ಲ..
ನೀವೇ ಮೋದಲನೇಯವ್ರೂ..
ಅಂದು ಬಿಟ್ರೆ?

ನಿಮ್ಮ ಅಭಿಮಾನಕ್ಕೆ ಶರಣ್ರೀ ಸಾಹೇಬ್ರಾ..!

ಸಿಮೆಂಟು ಮರಳಿನ ಮಧ್ಯೆ said...

ಜ್ಯೋತಿ...

ಅಡಪೋಟ್ರು ಆಟೊ ಕಥೆ ಇನ್ನೂ ಮಜಾ ಇದೆ...

ಮುಗಿದಿಲ್ಲ...

ನಾವು ಅಲ್ಲಿ ಮುಟ್ಟಿದ್ದು.. ೮.೩೦ ರೀಂದ ೯ ಗಂಟೆ..

ಬೆಳಗಿನ ಜಾವ ೪ ಗಂಟೆಗೆ ಔಷಧ ಕೊಡೊದು...ಅಂವಾ ಅಲ್ಲೇ ಇದ್ದಾ...!

ಪ್ರತಿಕ್ರಿಯೆಗೆ ವಂದನೆಗಳು...

ಹೀಗೆ ಬರುತ್ತಾ ಇರಿ

ಸಿಮೆಂಟು ಮರಳಿನ ಮಧ್ಯೆ said...

ಉಮೀ...

ಭಾಳ ಖುಷಿ ಆತು ಕಣ್ರೀ...

ಎಂಥಾ ರಸ್ತೆ ಅದು ಮಾರಾಯ್ರೆ..?

ಅದಕಿಂತ ನಮ್ಮ ಮಲೆನಾಡಿನ ಬೆಟ್ಟ, ಗುಡ್ಡನೆ ಚೆನ್ನಾಗಿ ಇರ್ತದೆ ಬಿಡ್ರೀ...

ಅದು ತಾಲೂಕ ಅಲ್ಲ ಅಂತ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು...

ಆ ಭಾಗದ ಜನ ಮಾತ್ರ ಒಳ್ಳೆಯವರ್ರೀ..

ನಿಮ್ಮ ಪ್ರೋತ್ಸಾಹ, ಅಭಿಮಾನ ಹೀಗೆಯೇ ಇರಲಿ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ..

ನೀವು ಹೇಳಿದ ಹಾಗೆ... ಮೂಳೆ ತಜ್ಞರನ್ನು ನೋಡ ಬೇಕಾಯ್ತು...

ಅದು ಬಹಳ ದೊಡ್ಡ ಕಥೆ...

ಒಂದೇ ಲೇಖನದಲ್ಲಿ ಮುಗಿಸಲೇ ಬೇಕು...

ನೀವು ಬಹಳ ಚೆನ್ನಾಗಿ ಹಾಸ್ಯ ಬರೆಯುತ್ತೀರಿ..

ಆದಷ್ಟು ಬೇಗನೇ ಬರೆಯಿರಿ...
ಧನ್ಯವಾದಗಳು...

ಪ್ರಕಾಶಣ್ಣ...

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ
ತುಂಬಾ ಚನ್ನಾಗಿದೆ...
ಒಳ್ಳೆ ಅನುಭವ ನಿಮಗೆ..
Return journey ಬಗ್ಗೇನೂ ಬರೀರಿ....

NiTiN Muttige said...

adenta anubhava!!! nakkidde nakkidu!!

aak said...

reminded me of an old joke.. everything else in that auto was making noise, except horn :)

ಶಿವಶಂಕರ ವಿಷ್ಣು ಯಳವತ್ತಿ (ದಿನಕ್ಕೊಂದು ವಿಷಯ) ಮರೆಯದೆ ಭೇಟಿ ನೀಡಿ.. said...

ನಿಮ್ಮ ವಿಡಂಬನಾ ಸಾಹಿತ್ಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ..

ಶುಭ ಹಾರೈಕೆಗಳು

ಇತಿ ನಿಮ್ಮ ಪ್ರೀತಿಯ,

http://shivagadag.blogspot.com

ಕೃಪಾ said...

ನಮಸ್ತೆ.... ಪ್ರಕಾಶ್ ಅವರೇ....
ನಿಮ್ಮ ಆಟೋ ಪುರಾಣ ..... ಓದಿ ನಗು ಬಂತು.....
ಕೆಟ್ಟ ರಸ್ತೆಯಲ್ಲಿ..... ಆಟೋದಲ್ಲಿ ಹೋಗುವಾಗ.......
"ಆಟೋ ಯಾಕಮ್ಮ ಡ್ಯಾನ್ಸ್ ಮಾಡೋದು ? "ಎಂದು ಕೇಳುತಿದ್ದ.... ನನ್ನ ಮಗ.....
ಇಲ್ಲಿ ನೋಡಿದ್ರೆ....ಆಟೋವೆ....ಅಧ್ವಾನ.....!!!
ನಿಮ್ಮ ನಟ್ - ಬೋಲ್ಟ್ ಎಲ್ಲಾ ಲೂಸ್ ಆಗಿರ ಬೇಕಲ್ಲಾ.... ಆಟೋ ತರಾನೆ.....?

PARAANJAPE K.N. said...

ಪ್ರಕಾಶ್
ಚೆನ್ನಾಗಿದೆ ಕಣ್ರೀ ನಿಮ್ಮ ಅನುಭವ, ರಸವತ್ತಾಗಿ ಬರೆದಿದ್ದೀರಿ. ಆ ಊರಿಗೆ ಒಬ್ಬ ಮೂಳೆ ಡಾಕ್ಟರನ್ನು ಕರಕೊ೦ಡು ಹೋಗಿ ಶಾಪ್ ಓಪನ್ ಮಾಡ್ಸೋದು ಛಲೋ ಅನ್ನಿಸ್ತದೆ.

ಶ್ರೀನಿಧಿ.ಡಿ.ಎಸ್ said...

ಮಜವಾಗಿದೆ.

ತೇಜಸ್ವಿನಿ ಹೆಗಡೆ- said...

ಪ್ರಕಾಶಣ್ಣ,

ನಾನು ಎಂಟನೆಯ ತರಗತಿಯಲ್ಲಿದ್ದಾಗ ಊರಿಗೆ ಶಿರಸಿ ಬಸ್‌ಟ್ಯಾಂಡ್ ನಿಂದ ಹೋಗಲು ರಾತ್ರಿ ಸುಮಾರು ಎಂಟುಗಂಟೆಗೆ ಆಟೋ ಒಂದನ್ನು ಹಿಡಿದೆವು. ಆದರೆ ದುರದೃಷ್ಟವಶಾತ್ ಹಣದಾಸೆಗೆ ಆತ ಬ್ರೇಕ್ ಫೈಲ್ ಆಗಿದೆ ಎನ್ನದೇ ಕರಕೊಂಡು ಹೋದು. ೫ ಕಿ.ಮೋ ಹೋಗಲು ಆಟೋಗೆ ಬ್ರೇಕ್ ಇಲ್ಲದ್ದು ತಿಳಿತು. ನಿಲ್ಲಿಸೆಂದು ಗದರಿಸಿದರೂ ಆತನಿಗೆ ನಿಲ್ಲಿಸಲಾಗದು. ಕಡೆಗೆ ಹೊಂಡಕ್ಕೆ ಬಿದ್ದು ಎಗರಿದ ಆಟೋದಿಂದ ಹೇಗೋ ನಾವು ಪಾರಾದೆವು. ಒಂದು ಮಾರು ದೂರದಲ್ಲೇ ಒಂದು ದೊಡ್ಡ ಹಳ್ಳವಿತ್ತು. ಅಲ್ಲೇನಾದರೂ ಅಟೋ ಬಿದ್ದಿದ್ದರೆ ನಾನು ಈರೀತಿ ಟೈಪ್ ಮಾಡುತ್ತಿರಲಿಲ್ಲವೇನೋ!!! ನಿಮ್ಮ ಘಟನೆ ನನಗೆ ಆ ಹಳೆಯ ನೆನಪನ್ನು ಹಸಿರಾಗಿಸಿತು. ಸತ್ಯ ಅವರು ಈಗ ಹೇಗಿದ್ದಾರೆ? ಈಗಲೂ ಅಟೋ ಹತ್ತುತ್ತಾರೋ ಇಲ್ಲವೋ? :)

Chandrika said...

ಹಹಹ ! ಹಾಸ್ಯನಾಟಕದ ಕಲ್ಪನೆ ಮೂಡಿತು!

ಪಾಚು-ಪ್ರಪಂಚ said...

ಪ್ರಕಾಶಣ್ಣ,

ಸಧ್ಯ ಆಟೋಗೆ ಏನೂ ಆಗಿಲ್ಲವಲ್ಲ....!!

-ಪ್ರಶಾಂತ್ ಭಟ್

Greeshma said...

ಹ್ಹಾ ಹ್ಹಾ ! ಆರಾಮ್ ಇದೀರಲ ಈಗ? ;)

ಸುಧೀಂದ್ರ said...

Super !

ಸಿಮೆಂಟು ಮರಳಿನ ಮಧ್ಯೆ said...

ಸಂದೀಪ್...

ನನ್ನ ಬ್ಲಾಗಿಗೆ ಸ್ವಾಗತ...

ಚಿಕ್ಕ ಮಿಷ್ಟೇಕಿನಿಂದಾಗಿ ದೊಡ್ಡ ಅನಾಹುತ ಆಗಲಿಲ್ಲವಲ್ಲ..

ನೀವು ಹೇಳಿದ ಹಾಗೆ ಅಷ್ಟರಲ್ಲೇ ಮುಗಿಯಿತಲ್ಲ...

ಲೇಖನ ಮೆಚ್ಚಿದ್ದಕ್ಕೆ

ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಗುರುಮೂರ್ತಿಯವರೆ...

"ಅಡಪೋಟ್ರು ಆಟೋ" ಮೆಚ್ಚಿದ್ದಕ್ಕೆ ಧನ್ಯವಾದಗಳು...

ಹೀಗೆ ಬರುತ್ತಾ ಇರಿ...

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್....

ನಿಮ್ಮ ಊಹೆ ಸರಿಯಾಗಿದೆ...

ಗುರಿ ಮುಟ್ಟಿಸಿದ..

ಏನಾದರೂ ಎಡವಟ್ಟಾಗಿ ಬಿಟ್ಟಿದ್ದರೆ..

ಕೈಯ್ಯೋ.., ಕಾಲೋ.. ಮುರಿದು ಹೋಗಿದ್ದರೆ..?

ಹ್ಹಾ...ಹ್ಹಾ...

ಹಾಗೆ ಮಾಡಲಿಲ್ಲವಲ್ಲ...
(ಆಗಲಿಲ್ಲವಲ್ಲ)

ಸರ್ ಮುಂದಿನ ಕಥೆ ಓದಿ... ಆಮೇಲೆ ಹೇಳಿ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವ ಪ್ರಕಾಶ್....

ಇನ್ನೊಂದು ಇದೇ ರೀತಿ ಅನುಭವ ..
ತಮಿಳು ನಾಡಿನಲ್ಲಾಗಿದೆ..

ಅದನ್ನು. ಇನ್ನು ಯಾವಾಗಲಾದರೂ ಬರೆಯುವೆ...

ಅಡಪೋಟ್ರು ಆಟೋ ಖುಷಿಪಟ್ಟಿದ್ದಕ್ಕೆ..

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ನಿತಿನ್...

ಈಗ ನೆನಪಾದಾಗಲೆಲ್ಲ.. ನಗುತ್ತೇವೆ..

ಆಗ ಅಪರಾತ್ರಿಯಲ್ಲಿ..
ಮನಸ್ಸಿನಲ್ಲಾದ ತೊಳಲಾಟ.., ನೋವು..
ತುಂಬಾ ಕಷ್ಟವಾಗಿತ್ತು...

ಅಡಪೋಟ್ರು ಆಟೋ" ಇಷ್ಟ ಪಟ್ಟಿದ್ದಕ್ಕೆ..
ವಂದನೆಗಳು....

ಸಿಮೆಂಟು ಮರಳಿನ ಮಧ್ಯೆ said...

ಶಿವಶಂಕರ್...

ನನ್ನ ಬ್ಲಾಗಿಗೆ ಸುಸ್ವಾಗತ...
ಕೆಲಸದ ಒತ್ತಡದಲ್ಲಿ ನಿಮ್ಮ ಬ್ಲಾಗ್ ಸರಿಯಾಗಿ ನೋಡಲಾಗಲಿಲ್ಲ..
ಕ್ಷಮೆ ಇರಲಿ...
ಇನ್ನೆರಡು ದಿನಗಳಲ್ಲಿ ಮತ್ತೆ ಬಂದು ಪ್ರತಿಕ್ರಿಯೆ ಕೊಡುವೆ...

ಧನ್ಯವಾದಗಳು...

ಹೀಗೇ ಬರುತ್ತಾ ಇರಿ...

ಸಿಮೆಂಟು ಮರಳಿನ ಮಧ್ಯೆ said...

ಕ್ರಪಾ...

ಅಡಪೋಟ್ರು ಆಟೋ" ಮೆಚ್ಚುಗೆ ಆಗಿದ್ದಕ್ಕೆ ಖುಷಿಯಾಯಿತು..

ನನಗಿಂತ " ಸತ್ಯನಿಗೆ " ಹೆಚ್ಚು ನೋವಾಗಿತ್ತು...

ಮುಂದಿನ ಲೇಖನ ತಪ್ಪದೇ ಓದಿ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ...

ಆ ಆಟೋದವ ರಾತ್ರಿ ಮಾತ್ರ ಓಡಿಸುವವ..

ಮಧ್ಯರಾತ್ರಿ ಕ್ಲಿನಿಕ್ ಓಪನ್ ಮಾಡಬೇಕಷ್ಟೆ...

ಅಡಪೋಟ್ರು ಆಟೋ ಇಷ್ಟ ಪಟ್ಟಿದ್ದಕ್ಕೆ..
ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಅಶೋಕ್...
ನನ್ನ ಬ್ಲಾಗಿಗೆ ಸ್ವಾಗತ...

ನನ್ನ ಲೇಖನ ಮೆಚ್ಚಿ ನಿಮ್ಮ ಬ್ಲಾಗಿನಲ್ಲಿ ಲಿಂಕ್ ಕೊಟ್ಟಿದ್ದಕ್ಕೆ ...

ಧನ್ಯವಾದಗಳು...

ನಿಮ್ಮ ಬ್ಲಾಗಿನ "ಕಾರ್ಟೂನ್ ಗಳು" ಮಜವಾಗಿರುತ್ತದೆ...

ಲೇಖನ ಇಷ್ಟ ಪಟ್ಟಿದ್ದಕ್ಕೆ..

ಪ್ರೋತ್ಸಾಹಕ್ಕೆ...

ಧನ್ಯವಾದಗಳು..

ಬರುತ್ತಾ ಇರಿ...

ಸಿಮೆಂಟು ಮರಳಿನ ಮಧ್ಯೆ said...

ಶ್ರೀನಿಧಿಯವರೆ...

ಅಡಪೋಟ್ರು ಆಟೋ" ಇಷ್ಟ ಪಟ್ಟಿದ್ದಕ್ಕೆ..

ಪ್ರತಿಕ್ರಿಯೆಗೆ ..

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ತೇಜಸ್ವಿನಿಯವರೆ...

ನೀವು ಬರೆದ ಸುಂದರ ಕಥೆಯ ಗುಂಗಿನಲ್ಲೇ ಇದ್ದೇನೆ...
ಚಂದದ ಕಥೆ.. ಅದು...

ಸತ್ಯನಿಗೆ ನನಗಿಂತ ನೋವಾಗಿತ್ತು...

ನಮ್ಮ ಕಷ್ಟ, ನೋವುಗಳನ್ನು

ಮುಂದಿನ ಲೇಖನದಲ್ಲಿ ಓದಿ..

ಈಗ ಏನನ್ನೂ ಬರೆಯುವ ಸ್ಥಿತಿಯಲ್ಲಿ..

ನಾನಿಲ್ಲ..

ಸತ್ಯ "ಆಟೋ" ಎಂದರೆ ಓಡಿ ಹೋಗುತ್ತಾನೆ...

ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಚಂದ್ರಿಕಾ..

ನಮ್ಮ "ಅಟೋ ಪಯಣ" ಇಷ್ಟಪಟ್ಟು..
ಪ್ರತಿಕ್ರಿಯಿಸಿದ್ದಕ್ಕೆ..

ಧನ್ಯವಾದಗಳು...

ಹೀಗೆಯೇ ಬರುತ್ತಾ ಇರಿ...

ಸಿಮೆಂಟು ಮರಳಿನ ಮಧ್ಯೆ said...

ಪ್ರಶಾಂತ್..

ಅಯ್ಯೊ.... ಆ ಅಡಪೋಟ್ರು" ಆಟೊ ಕಥೆ ಏನು ಕೇಳ್ತೀರಿ..?

ಮುಂದಿನ ಲೇಖನ ತಪ್ಪದೇ ಓದಿ...

ಧನ್ಯವಾದಗಳು...

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ಬೊಂಬಾಟ್ ನಿರೂಪಣೆ... ನಿಮ್ಮ ಬ್ಲಾಗಿನ ಭೇಟಿ ದಿನದ ಕೆಲಸದ ಸುಸ್ತಿನಲ್ಲಿ ಮನೆ ಸೇರುವ ನಮಗೆ ಅದೇನೋ ಅವರ್ಣನೀಯ ನೆಮ್ಮದಿ ನೀಡುತ್ತದೆ.

Annapoorna Daithota said...

ಹ್ಹ ಹ್ಹ ಹ್ಹಾ !! ಸಖತ್ತಾಗಿದೆ :-)

pavana m hegde said...

mama sakkathagi baradde thank u

ಬಾಲು said...

ಇನ್ನೊಮ್ಮೆ ಅ೦ತ ಅಟೋ ದಲ್ಲಿ ಪ್ರಯಾಣ ಮಾಡ ಬೇಕು ಅ೦ದ್ರೆ ಮೊದಲು ಜೀವ ವಿಮೆ ಮಾಡಿಸಿ ಹೊಗೋದು ಒಳ್ಳೆದು.
ನಿರೂಪಣೆ ತು೦ಬ ಚೆನ್ನಾಗಿದೆ.

ಮು೦ದಿನ ಭಾಗಕ್ಕೆ ಕಾಯುತ್ತಾ ಇರುವೆ!!!

ಸಿಮೆಂಟು ಮರಳಿನ ಮಧ್ಯೆ said...

ಗ್ರೀಷ್ಮಾ..

ಕಾಲು ಕೈ.. ಮುರಿಯದೆ ..
ಸುರಕ್ಷಿತವಾಗಿ ಬಂದಿದ್ದೇವೆ..

ಪುಣ್ಯ..!

"ಅಡಪೋಟ್ರು ಆಟೋ" ಮೆಚ್ಚಿದ್ದಕ್ಕೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಸುಧೀಂದ್ರ...

ಅಡಪೋಟ್ರು ಆಟೋ"
ಇಷ್ಟವಾಗಿದ್ದಕ್ಕೆ
ಧನ್ಯವಾದಗಳು..

ಪ್ರೋತ್ಸಾಹ ಹೀಗೆಯೆ ಇರಲಿ..

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್...

ವರ್ಷದ ಕೊನೆ.. ಹಾಗಾಗಿ ಕೆಲಸದ ಒತ್ತಡ..

ಒತ್ತಡದ ಮಧ್ಯ ಲೇಖನ
ಇಷ್ಟ ಪಟ್ಟಿದ್ದಕ್ಕೆ..

ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಅನ್ನಪೂರ್ಣಾರವರೆ..

ನನ್ನ ಬ್ಲಾಗಿಗೆ ಸುಸ್ವಾಗತ..

ಲೇಖನ ಇಷ್ಟ ಪಟ್ಟಿದ್ದಕ್ಕೆ..

ಧನ್ಯವಾದಗಳು..

ಹೀಗೆಯೆ ಬರುತ್ತಾ ಇರಿ..

guruve said...

ಹಾಸ್ಯಭರಿತ ಕಥೆ ಬಹಳ ಚೆನ್ನಾಗಿದೆ. ಇದು ನಡೆದ ಘಟನೆಯೋ? ಕಾಲ್ಪನಿಕವೋ?

Sunil Mallenahalli said...

" ಆಟೊ ಬಿದ್ರೂ ನೀವು ಬೀಳ ಬಾರದು ನೋಡ್ರಿ.."
ಹಾಂಗ " ಭದ್ರವಾಗಿ ಗಟ್ಟಿಯಾಗಿ" ಹಿಡ್ಕೊಳ್ರಿ.. ಮತ್ತ.... "..ಬಹಳ ಚಲೋ ಬರೆದಿದ್ದೀರ...ತುಂಬಾ ಖುಷಿಕೊಡ್ತು ನಿಮ್ಮ ಬರಹ

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಹ್ಹ ಹ್ಹ ಹ್ಹಾ...!!
ಅಡಪೋಟ್ರು ಆಟೋ ... Hesaroo sooper.. :)

Prakashanna.. nin paristithi yarigoo byaaDa maraya!

ಅಂತರ್ವಾಣಿ said...

ಹ ಹ ಹ... ಪ್ರಕಾಶಣ್ಣ
ಸಕ್ಕತ್ ನಕ್ಕಿದ್ದೀವಿ, ನಾನು ಹಾಗು ಅಮ್ಮ.

ನಿಮ್ಮ ಧರ್ಯ ಮೆಚ್ಚಬೇಕು... ಆ ಆಟೋ ಪ್ರಯಾಣ ಮಾಡಿದ್ದಕ್ಕೆ..

ಹಿಂದಿರುಗಿ ಹೇಗೆ ಬಂದಿರಿ ಎಂದು ಹೇಳಲೇ ಇಲ್ಲ

ಶಾಂತಲಾ ಭಂಡಿ said...

ಪ್ರಕಾಶಣ್ಣ...
ಈ ಆಟೋದ ಕಥೆ ಕೇಳಿ ನಕ್ಕೂ ನಕ್ಕೂ ಸಾಕಾತು. ಹೆಡ್ ಲೈಟೂ ಇಲ್ದೆ, ಆಟೋಕ್ಕೆ ಮುಂದಿನ ಗ್ಲಾಸೂ ಇಲ್ಲೆ. ಆ ಆಟೋದಂವ ಬ್ಯಾಟರಿ ಹಿಡ್ಕಂಡು ಆಚೀಚೆ ಹೋಪವ್ರನ್ನೆಲ್ಲ ಆಚಿಗ್ ಹೋಗಿ, ಈಚಿಗ್ ಹೋಗಿ ಹೇಳ್ತಾ ಡ್ರೈವ್ ಮಾಡದು ಕಲ್ಪನೆ ಮಾಡ್ಕ್ಯಂಡು ಇನ್ನೂ ನಗ್ತಾ ಇದ್ದಿ.
ಚೆಂದದ ಬರಹಕ್ಕೆ, ನಗಿಸಿದ್ದಕ್ಕೆ ಧನ್ಯವಾದಗಳು.
ಹೋದ್ವರ್ಷ ಊರಿಗೆ ಬಂದಾಗ ರಾಜೇಂದ್ರ ಮತ್ತೆ ಅಜ್ಜನಮನೆ ಮಾವ ಇಬ್ರೂ ಸೇರಿ ಹುಬ್ಬಳ್ಳಿ ಹತ್ರೆ ಯಾವುದೋ ಊರಿಗೆ ಹೋಗಿದಿದ್ದ. ಹುಬ್ಬಳ್ಳಿಯಿಂದ ಅಲ್ಲಿಗೆ ಹೋಪ್ಲೆ ಆಟೋನೂ ಸಿಗ್ದೇ ಇದ್ದಾಗ ಟ್ರಾಲಿನೂ ಇಲ್ದೇ ಬರೇ ಮುಂದಿನಭಾಗ ಮಾತ್ರ ಇಪ್ಪ ಟ್ರಾಕ್ಟರ್ ಮೇಲೆ ಕುತ್ಗಂಡು ಹೋಗ್ ಬಂದವ್ವು ಇಬ್ರೂವ ‘ಎಂಜಿನ್ ಏನ್ ಬಿಶಿ ಇತ್ತ ಮಾರಾಯಾ’ ಹೇಳ್ಕ್ಯೋತ ಬಂಜ :-)
ಅಂದಹಾಗೆ ಅನುಸರಿಸಿ ಪ್ರೋತ್ಸಾಹಿಸುತ್ತಿರುವವರ ಸಂಖ್ಯೆ ಐವತ್ತು ಆಗಿದ್ದಕ್ಕೆ ಅಭಿನಂದನೆ.

ಸಿಮೆಂಟು ಮರಳಿನ ಮಧ್ಯೆ said...

ಪಾವನಾ...

ನೀನು ನೆನಪಿಸಿದ್ದು ಒಳ್ಳೆದಾಯಿತು..

ಇನ್ನೂ ಏನಾದರೂ ಇದ್ದಲ್ಲಿ ಹೇಳು ಮಾರಾಯ್ತಿ...

ನೆನಪು ಮಾಡಿಕೊ..

ನೆನಪಿಸಿದ್ದಕ್ಕೆ

ಏನುಕೊಡಲಿ... ಪುಟ್ಟಾ..?

ಭಾರತಕ್ಕೆ ಬಾ..

ಸಿಮೆಂಟು ಮರಳಿನ ಮಧ್ಯೆ said...

ಬಾಲು....

ನಾನು ನಿಮ್ಮ ಬ್ಲಾಗನ್ನು ತಪ್ಪದೇ ನೋಡುತ್ತಿರುವೆ..

ಚೆನ್ನಾಗಿರುತ್ತದೆ ನಿಮ್ಮ ಬ್ಲಾಗು...

ಆಟೊ ಕಂಡರೆ ಓಡಿ ಹೋಗುವಂತಾಗಿದೆ...

ಧನ್ಯವಾದಗಳು..

ಹೀಗೆ ಬರುತ್ತಾ ಇರಿ..

ಸಿಮೆಂಟು ಮರಳಿನ ಮಧ್ಯೆ said...

ಗುರು...

ಇದು ನಡೆದ ಘಟನೆ..

ನಾನು, ಸತ್ಯ ಇಬ್ಬರೂ...ಇನ್ನೂ ಇದ್ದೇವೆ....

ಮರೆತು ಹೋದ ಘಟನೆಯನ್ನು ..
ಅಮೇರಿಕಾದಲ್ಲಿರುವ ಅಕ್ಕನ ಮಗಳು ನೆನಪಿಸಿದ್ದಾಳೆ....

ಪ್ರತಿಕ್ರಿಯೆಗೆ ಧನ್ಯವಾದಗಳು..

ಹೀಗೆಯೇ ಬರುತ್ತಾ ಇರಿ...

ಸಿಮೆಂಟು ಮರಳಿನ ಮಧ್ಯೆ said...

ಸುನಿಲ್....

ನಿಮ್ಮ ಈ ಬಾರಿಯ ಲೇಖನ ಚೆನ್ನಾಗಿದೆ..

ಬಯಲು ಸೀಮೆಯ ಗಡಸು ಭಾಷೆ ಬಲು ಚಂದ...

ಡ್ರೈವರನ ಮಾತು ಕೇಳಲಿಕ್ಕೆ ಬಹಳ ಚಂದವಿತ್ತು...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಹೀಗೆ ಬರುತ್ತಾ ಇರಿ...

ಸಿಮೆಂಟು ಮರಳಿನ ಮಧ್ಯೆ said...

ಪೂರ್ಣಿಮಾ.....

ಅಡಪೋಟ್ರು ಶಬ್ಧದ ಜನನದ ಬಗೆಗೆ ಒಂದು ಲೇಖನ ಬರೆಯ ಬೇಕಾಗಿದೆ....

ತುಂಬಾ ಮಜವಾಗಿದೆ...

"ಅಡಪೋಟ್ರು ಆಅಟೊ ಇಷ್ಟವಾಗಿದ್ದಕ್ಕೆ ...

THANKWSU.!

ಸಿಮೆಂಟು ಮರಳಿನ ಮಧ್ಯೆ said...

ಅಂತರ್ವಾಣಿ...

ಅನಿವಾರ್ಯತೆ.. ಧೈರ್ಯಕ್ಕೆ ಕಾರಣ...

ನಮಗೆ ಬೇರೆ ವಿಧಿ ಇಲ್ಲವಾಗಿತ್ತು...

ಮುಂದಿನ ಲೇಖನ ಇದರ ಮುಂದಿನ ಭಾಗ..

ಮೆಚ್ಚಿದ್ದಕ್ಕೆ ಧನ್ಯವಾದಗಳು..

ಅಮ್ಮನವರಿಗೆ ನಮಸ್ಕಾರಗಳು...

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ...

ನಿಮ್ಮ ಅನುಭವ ಮಜವಾಗಿದೆ...

ನಮಗೆ ಇಲ್ಲಿ "ಬಿಸಿ" ಆಗಲಿಲ್ಲ...

ಮಳೆಗಾಲದ ಆರಂಭದ ದಿನಗಳು ಅವು..

ಒದ್ದೆಯಾಗಿದ್ದೆವು..
ಯಾಕೆಂದರೆ..

ಮೇಲೆ ಟಾಪ್ ಕೂಡ ಹರಿದಿತ್ತು...!


ಧನ್ಯವಾದಗಳು..

vani said...

ನಗೆಯ ಬರಹಕ್ಕೆ ಧನ್ಯವಾದಗಳು.!!!!
ನಕ್ಕು, ನಕ್ಕು, ನಕ್ಕು, ನಕ್ಕು,
ನೀನು ನಕ್ಕು, ನಾನು ನಕ್ಕು,
ಅವಳು ನಕ್ಕು, ಅವನು ನಕ್ಕು,
ಹರುಷ ಹರಿಸಿ ,ದುಗುಡ ಮರೆಸಿ,
ಹಗುರವಾಗಿದೆ ಮನವು ಹಗುರವಾಗಿದೆ!!!
ಹಗುರವಾಗಿದೆ, ಜಗವೂ ಹಗುರವಾಗಿದೆ!!!!!!!

vani said...
This comment has been removed by the author.
shivu said...

ಪ್ರಕಾಶ್ ಸರ್,

ನಿಮ್ಮ ಬ್ಲಾಗ್ ಅನುಸರಿಸುತ್ತಿರುವವರ ಸಂಖ್ಯೆ ೫೦ ಆಗಿದೆ...ಅದು ನನಗೆ ಆಶ್ಚರ್ಯ ತರಲಿಲ್ಲ....

ಚಿಕ್ಕಂದಿನಲ್ಲಿ ಹುಣಸೇ ಹಣ್ಣಿನ ತಿಂಡಿಗೆ[ಸ್ವಲ್ಪ ಉಪ್ಪು, ಬೆಲ್ಲ ಮೆಣಸು, ಜೀರಿಗೆ ಇತ್ಯಾದಿ ಸೇರಿಸಿದ ಎಲ್ಲಾ ರುಚಿಗಳ ಸಂಗಮ]ನಾವು ಮುಗಿಬೀಳುತ್ತಿದ್ದಂತೆ ನಿಮ್ಮ ಬರಹ ಮತ್ತು ಮಾತಿನ ಸವಿ ಸವಿಯಲು ನಾನು ಸೇರಿದಂತೆ ಎಲ್ಲಾ ಬ್ಲಾಗಿಗರೂ ಕಾಯುತ್ತಿರುತ್ತೇವೆ...

ಇಂಥ ರುಚಿ ಒಟ್ಟಿಗೆ ಸಿಗುವಾಗ ಎಲ್ಲಾದರೂ ಬಿಡುವುದುಂಟೆ...ಅದಕ್ಕೆ ಐವತ್ತಾಗಿದೆ....ಮುಂದೆ ನೂರು ದಾಟುತ್ತದೆ....

ಅಭಿನಂದನೆಗಳು....

Anonymous said...

ಪ್ರಕಾಶಣ್ಣ
ಪಾಪ ಭಯಂಕರ ಬೆನ್ನು ನೋವು ಬಂದಿರಬೇಕಲ್ಲ .
ನಕ್ಕು ನಕ್ಕು ಸಾಕಾಯಿತು.
ಹಾಗೇ ಒಂದು ಗಾದೆನು ನೆನಪು ಬಂತು ಅದೇ ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಅಲ್ವಾ ಪ್ರಕಾಶಣ್ಣ.
ನಮ್ಮೂರಲ್ಲೂ ಇಂತಹ ರಸ್ತೆಗಳು ಕಾಣಸಿಗುತ್ತವೆ ಆದರೆ ಇಷ್ಟೊಂದು ಅವಸ್ಥೆ ಮಾತ್ರ ಪಟ್ಟಿಲ್ಲ ನಿಮ್ಮ ಸ್ನೇಹಿತ ಹೇಗಿದ್ದಾರೆ ಈಗ

Kishan said...

Namaskara !!
blog version of this story is better than what I heard in person!. Its very juicy indeed... enjoyed every bit/drop of it.

Many congratulations on reaching half century with followers. Time to raise the bat and wave to the crowd :)

ಸಿಮೆಂಟು ಮರಳಿನ ಮಧ್ಯೆ said...

ವಾಣಿ...

ಕವನದ ಸಂಗಡದ ಪ್ರತಿಕ್ರಿಯೆ..

ತುಂಬಾ ಚೆನ್ನಾಗಿದೆ...

ನೀವು ಮೆಚ್ಚಿ.., ನಕ್ಕಿದ್ದಕ್ಕೆ

ಹ್ರದಯ ಪೂರ್ವಕ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಶಿವು...

ನನಗೆ ಬಹಳ ಖುಷಿಯಾಗಿದೆ..

ನನ್ನನ್ನು ಬ್ಲಾಗಿಗೆ ಕರೆ ತಂದವರು..
ನೀವು, ಮಲ್ಲಿಕಾರ್ಜುನ್...
ನೀವು ಒತ್ತಾಯ ಪೂರ್ವಕವಾಗಿ..
ಬ್ಲಾಗ್ ಓಪನ್ ಮಾಡಿದ್ದಕ್ಕೆ ನಾನು ಬರೆಯಲು ಪ್ರಾರಂಭಿಸಿದೆ...

ಎಲ್ಲಿಯ ಇಟ್ಟಿಗೆ ಸಿಮೆಂಟು..,?
ಎಲ್ಲಿಯ ಬ್ಲಾಗು...?

ಇದೆಲ್ಲ ನನ್ನ ಜವಾಬ್ದಾರಿ ಹೆಚ್ಚಿಸಿದೆ...

ಉಳಿಸಿಕೊಳ್ಳಲು ಪ್ರಯತ್ನಿಸುವೆ...

ನಿಮ್ಮ ಪ್ರೋತ್ಸಾಹ, ಅಭಿಮಾನಕ್ಕೆ

ಧನ್ಯ..
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಭಾವನಾ ಲಹರಿ...

ಆಗ ತುಂಬಾ ಕಷ್ಟವಾಯಿತು..

ಅವನೂ .., ನಾನೂ..,
ಕಾಲೇಜಿನಲ್ಲಿ .. ರೂಮ್ ಮೇಟ್..,
ಒಂದೇ ಕಂಪನಿಯಲ್ಲಿ ಕೆಲಸ ಮಾಡೀದ್ದೇವೆ...

ಒಳ್ಳೆಯ ಸ್ನೇಹಿತರು..
ಈಗಲೂ...
ವ್ಯವಹಾರದಲ್ಲಿ ಪಾಲುದಾರರು..

ಅಡಪೋಟ್ರು ಆಟೋ ಇಷ್ಟವಾಗಿದ್ದಕ್ಕೆ..
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಕಿಶನ್....

ಜಾಸ್ತಿ ಬದಲಾವಣೆ ಮಾಡಿಲ್ಲ...

ಒಂದೇ ಲೇಖನದಲ್ಲಿ ಮುಗಿಸಲಾಗಲಿಲ್ಲ...

ಅದಕ್ಕೆ ಹಾಗನಿಸಿತೇನೋ...!

ಪ್ರೋತ್ಸಾಹ ಹೀಗೆಯೇ ಇರಲಿ..

ಧನ್ಯವಾದಗಳು...

dharithri said...

ಪ್ರಕಾಶ್ ಸರ್..
ನಾನು ನೋಡೋವಷ್ಟರಲ್ಲಿ ಕಮೆಂಟುಗಳು ಅರ್ಧ ಸೆಂಚುರಿ ದಾಟಿವೆ.

ಎಂದಿನಂತೆ ಈ ಬರಹನೂ ನಗು ತರಿಸಿದೆ, ಖುಷಿ ಕೊಟ್ಟಿದೆ. ಅದಕ್ಕಾಗಿ ಧನ್ಯವಾದಗಳು.

ನಮ್ಮ ಮಾತುಗಳು ಪ್ರೋತ್ಸಾಹ ನೀಡುವುದಾದರೂ ಸದಾ ನಿಮಗಿರುತ್ತವೆ ಟೀಕೆ, ಸರಿ, ತಪ್ಪು, ಖುಷಿಯ ಮಾತುಗಳು ನಮ್ಮಿಂದ ನಿಮಗೆ ...

ಮುಂದಿನ ಅದೇ ನಕ್ಕು ನಲಿಯುವ ಬರಹಕ್ಕಾಗಿ ಕಾಯುತ್ತಿರುತ್ತೇನೆ..

ಶುಭಾಶಯಗಳೊಂದಿಗೆ,
ಧರಿತ್ರಿ

khushi pune said...

ಹ! ಹಾ !! ಹಾ !!!ಚೆನ್ನಾಗಿದೆ. ಹೀಗೆಯೇ ನಗಿಸುತ್ತಿರಿ.
ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ,
ನಗುವ ಕೇಳುತ ನಗುವುದತಿಶಯದ ಧರ್ಮ,ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ!. ಹೌದಲ್ಲವೇ? ಈ ಸುಂದರವಾದ ಜಗತ್ತಿನಲ್ಲಿ ನಾವೆಲ್ಲರೂ ಸುಖದಿಂದ,ಖುಷಿಯಿಂದ, ನಗುತ್ತ ಬಾಳುವ ವರವನ್ನು ಅಧಿಕವಾಗಿ ಕೊಡು!
ಇದೇ ನಮ್ಮ ನಿಮ್ಮೆಲ್ಲರ ಆಶಯವಲ್ಲವೇ?

ಕ್ಷಣ... ಚಿಂತನೆ... Thinking a While.. said...

ಪ್ರಕಾಶ್ ಅವರೇ, ಅರ್ಧ ಶತಕ ಬಾರಿಸಿದ್ದಕ್ಕೆ ಕಂಗ್ರ್‍ಯಾಟ್ಸ್ (ಸದಸ್ಯರ ಸಂಖ್ಯೆ) ಮತ್ತು ತಪ್ಪಿಂದಾಗಿ ಮಿಷ್ಟೇಕು... ಆಗಿದ್ದಕ್ಕೆ.... ಏನು ಹೇಳಬೇಕೆಂದು ತಿಳಿಯುತ್ತಿಲ್ಲ ಒಟ್ಟಿನಲ್ಲಿ ಬರಹ ಚೆನ್ನಾಗಿದೆ. ನೀವು ಊರಿನಲ್ಲಾದ ಅನುಭವ ಸೊಗಸಾಗಿ ಬರೆದಿದ್ದೀರಿ. ಹೀಗೆಯೇ ಬರೆಯುತ್ತಿರಿ. ಮಹಾನಗರಗಳ ಗುಂಡಿಗಳೂ ಹೀಗೆಯೇ ಅಲ್ಲವೇ, ಉದಾ: ಬೆಂಗಳೂರಿನ ಕೆಲವು/ಹಲವು ರಸ್ತೆಗಳು ವಾಹನಗಳು ಚೆನ್ನಾಗಿದ್ದರೂ ಸರ್ಕಸ್ಸೇ ದಿನವೂ ಅಲ್ಲವೇ?

ಕ್ಷಣಚಿಂತನೆ

ಸಿಮೆಂಟು ಮರಳಿನ ಮಧ್ಯೆ said...

ಧರಿತ್ರಿ...

ನನ್ನ ಬ್ಲಾಗಿಗೆ ಸ್ವಾಗತ...

ನಿಮ್ಮ ಪ್ರೋತ್ಸಾಹದ ನುಡಿಗಳು ನನಗೆ ಟಾನಿಕ್ಕು..

ನಿಮ್ಮ ಒಂದು ನುಡಿ..ನನಗೆ ಬರೆಯಲು..
ಉತ್ಸಾಹ ತರುತ್ತದೆ..

ಹೀಗೆಯೇ ಬರುತ್ತಾ ಇರಿ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಖುಷಿಯವರೆ...

ನಿಮ್ಮ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ...

ಇರುವದು ಮೂರು ದಿವಸ..

ನಗುತ್ತ ಬಾಳಿದರಾಯಿತು..

ಅಲ್ಲವಾ..?


ಚಂದದ ಪ್ರತಿಕ್ರಿಯೆಗೆ ...
ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಕ್ಶಣ ಚಿಂತನೆ...

ಈಗ ಚುನಾವಣೆ ಬರುತ್ತಿದೆಯಲ್ಲಾ..

ಹಾಗಾಗಿ.. ರಸ್ತೆಗಳೆಲ್ಲ ತಾತ್ಕಾಲಿಕವಾಗಿ ದುರಸ್ತಿಯಾಗಿವೆ..

ನೀವು ನಕ್ಕಿದ್ದಕ್ಕೆ..

ಅಡಪೋಟ್ರು ಆಟೊ ಇಷಟಪಟ್ಟಿದ್ದಕ್ಕೆ..

ಧನ್ಯವಾದಗಳು...

ಆಲಾಪಿನಿ said...

ಪ್ರಕಾಶಣ್ಣ, ಓಹ್‌ ನಮ್ಮ ಊರು ಹತ್ತತ್ರ ಹೋಗಿ ಬಂದಿದ್ರಿ... ನೀವು ನುಜ್ಜು-ಗುಜ್ಜು ಆಗಿದ್ದೆಲ್ಲಾನೂ ಕಣ್‌ಮುಂದ ಬಂದ್ಹಂಗ್‌ ಆಗ್ತಿತ್ತು ನೋಡ್ರಿ ಓದಬೇಕಾದ್ರ.ಎಷ್ಟು ಬರಿತೀರಿ ನೀವು.. ಖುಷಿಯಾಗತ್ತಪ್ಪ. ಎನಿ ವೇ ಕಂಗ್ರಾಟ್ಸ್‌

ಸಿಮೆಂಟು ಮರಳಿನ ಮಧ್ಯೆ said...

ಶ್ರೀದೇವಿಯವರೆ..

ನಿಮ್ಮ ಲೇಖನ..
ಕವನಗಳ...
ಅಭಿಮಾನಿ ನಾನು...

ನೀವು ಇತ್ತೀಚೆಗೆ ಏನು ಬರದೇ ಇಲ್ರೀ..

ನಿಮ್ಮ ಕಡೆ ಎಂಥಾ ರಸ್ತೇರಿ..
ಆ ಅಡಪೋಟ್ರು ಆಟೊ ಬೇರೆ..

ಅಬ್ಭಾ...!
ಭಯಂಕರ ಅನುಭವ ಅದು...

ಇದರ ಮುಂದಿನ ಲೇಖನನೂ ಓದ್ರಿ ಮತ್ತ...!

ನಿಮ್ಮ ಪ್ರೈಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಾ ಇರ್ರೀ...