Tuesday, March 24, 2009

ನನ್ನಾಕೆಯ ಗುದ್ದು... ಮತ್ತು ಪ್ರೀತಿ..!

ನಡೆದದ್ದು ಇಷ್ಟು...

ಬಹುದಿನಗಳಿಂದ ನಮ್ಮ ಪರಿಚಯದವರೊಬ್ಬರು ಮನೆಗೆ ಬರುತ್ತೇನೆಂದು ಹೇಳಿದ್ದರು.

ನಾನು ಆಯಿತೆಂದು ಹೇಳಿದ್ದೆ..
ನನ್ನ ಗ್ರಹಚಾರಕ್ಕೆ ...
ಇಂದು ಬಂದೇ ಬಿಟ್ಟಿದ್ದರು....!!

ನನ್ನಾಕೆಗೆ ಹೇಳಲು ಮರೆತು ಹೋಗಿತ್ತು....!

ನನ್ನಾಕೆ ಗಡಿಬಿಡಿ ಬಿದ್ದು ..
ಸ್ವೀಟು , ಊಟ ಬಡಿಸಿ,
ನಗು ನಗುತ್ತ ಉಪಚಾರದ ಮಾತು ಹೇಳಿ ಕಳಿಸಿದಳು...


ನಂತರ ಶುರುವಾದದ್ದು...
ಗುಡುಗು ಸಿಡಿಲು...ಆಗಾಗ ಮಿಂಚು....!

ಇದಕ್ಕೆಲ್ಲಾ ಮಳೆ ಬರುವದಿಲ್ಲ ಬಿಡಿ..

"ಅವರು ಮೊದಲೇ ನಮ್ಮನ್ನು ನೋಡಿ ನಗುವವರು,
ನಾವು ಬಾಡಿಗೆ ಮನೆಯಲ್ಲಿದ್ದಾಗ ನಮ್ಮನ್ನು ಮಾತಾಡಿಸುತ್ತಲೂ ಇರಲಿಲ್ಲ..
ಈಗ ನಿಮ್ಮ ಕಾರು, ಮನೆ ನೋಡಿ ಮನೆಗೆ ಬಂದಿದ್ದಾರೆ..
ಅವರು ಬಂದಾಗ ಮನೆ ಕ್ಲೀನ್ ಇರಬೇಕಿತ್ತು..
ಅಡಿಗೆ ಮನಗೆ ಬಂದು ಕೆಲಸ ಮಾಡಿ ನೋಡಿ ಗೊತ್ತಾಗುತ್ತದೆ..
ಎಷ್ಟು ಕಷ್ಟ ಅಂತ...!!


ನೀವು ಮೊದಲೇ ಯಾಕೆ ಹೇಳಲಿಲ್ಲ..? "


ನನ್ನಾಕೆ ಹೇಳುವದು ಸರಿ ಇತ್ತು..

"ಸಾರಿ ಕಣೆ ಚಿನ್ನಾ..
ಮರೆತು ಹೋಯಿತು .. ನನ್ನ ರಾಜ..!"


" ನಿಮಗೆ ನಿಮ್ಮ ಕೆಲಸ..
ಬ್ಲಾಗು ಬಿಟ್ರೆ ಏನು ನೆನಪಿರುತ್ತದೆ..?
ನಿಮಗೆ ನನ್ನ ಬೆಲೆ ಗೊತ್ತಿಲ್ಲ,
ನೀಮಗೂ , ನಿಮ್ಮ ಪುತ್ರ ರತ್ನನಿಗೂ ...
ನಾನು ಹಾಸ್ಯವಾಗಿ ಹೋಗಿದ್ದೇನೆ,

ನಿಮಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಗಿದೆ..!.
ನೀವು ನನ್ನನ್ನು ಮೊದಲಿನ ಹಾಗೆ ಪ್ರಿತಿಸುತ್ತಿಲ್ಲ...!.. "


ಹಳೆಯ ಎಲ್ಲ ಘಟನೆ ಎಲ್ಲ ತೆಗೆದು, ಝಾಡಿಸ ತೊಡಗಿದಳು..
ಸಮರ್ಥನೆಗೆ ಪುರಾವೆಗಳೂ ಬರತೊಡಗಿದವು...

ಮಂಗಳಾರತಿ, ಮಂತ್ರಾಕ್ಷತೆ ಸಿಗತೊಡಗಿತು...

ಎಲ್ಲದರಲ್ಲೂ ನಾನು ಅಪರಾಧಿಯೇ...ನನ್ನ ತಪ್ಪಿತ್ತು.... !

ಅಷ್ಟರಲ್ಲಿ...ಬಾಗಿಲು ಬಡಿದ ಸದ್ದು.
ನಾನು ಎದ್ದು ಬಾಗಿಲು ತೆಗೆದು ನೋಡಿದೆ...

ಭರತ್, ಅರುಣ ನಿಂತಿದ್ದರು...
ನಮ್ಮ ಅಪಾರ್ಟಮೆಂಟಿನ ಕೆಳಗಡೆ ಇದ್ದವರು...
ಅವರ ತಂದೆಯವರನ್ನು "ಹಾರ್ಟ್ ಎಟಾಕ್ " ಆಗಿ ಆಸ್ಪತ್ರೆಗೆ ಸೇರಿಸಿದ್ದರು...

ಭರತನ ಕಣ್ಣುಗಳು ಕೆಂಪಗಾಗಿದ್ದವು..

ಅರುಣನ ಕಣ್ಣು ತುಂಬ ನೀರಿತ್ತು ..

ಅವನ ಸಂಕಟ , ವೇದನೆ ಹತಿಕ್ಕಲ್ಲಾರದೆ ಹನಿಹನಿಯಾಗಿ ಬೀಳುತ್ತಿದ್ದವು..
ಎಷ್ಟೆಂದರು ಸಣ್ಣವಯಸ್ಸಲ್ಲವೆ..?

"ಪ್ರಕಾಶಣ್ಣ .. ಅಪ್ಪನ ಬೀಪಿ ಕಡಿಮೆಯಾಗುತ್ತಿದೆಯಂತೆ...
ಆಸ್ಪತ್ರೆಯಿಂದ ಅಮ್ಮನ ಫೋನ್ ಬಂದಿತ್ತು.."

ನನಗೆ ನಿಧಾನವಾಗಿ ವಿಷಯ ಅರ್ಥ ಆಗತೊಡಗಿತು...

ಹೌದಾ..? ಮಧ್ಯಾಹ್ನದವರೆಗೂ ಆರಾಮಿದ್ದರಲ್ಲ...?
ಬನ್ನಿ... ಒಳಗೆ ಬನ್ನಿ.."

" ಇಲ್ಲ ಪ್ರಕಾಶಣ್ಣ...
ವರದಳ್ಳಿ ತೀರ್ಥ ಇದೆಯಾ..?

ಅಮ್ಮ ತರಲಿಕ್ಕೆ ಹೇಳಿದ್ದಾರೆ..."

ನಂಬುಗೆ, ವಿಶ್ವಾಸ ಯಾವಾಗಲೂ ಇರಬೇಕು...
ಪುಣ್ಯ ತೀರ್ಥವನ್ನು ಹಾಕಿದರೆ ವಾಸಿಯಾಗ ಬಹುದೇನೋ..

ಆ ತಾಯಿಯ ಆಸೆ....!
ಹೇಗಾದರೂ ಬದುಕಿಬಿಡಲಿ...ಅನ್ನುವದು..!


ಆಸೆ, ಕನಸುಗಳು ಇದ್ದರೆ.. ಬದುಕು...!

ನನ್ನಾಕೆ ಲಗುಬಗೆಯಿಂದ ದೇವರ ಮನೆಗೆ ಹೋಗಿ ತೀರ್ಥದ ಬಾಟಲಿ ತಂದು ಕೊಟ್ಟಳು..

"ಪ್ರಕಾಶಣ್ಣ ನಾವು ಬರ್ತೇವೆ... ಏನಾಯಿತು ಅಂತ ಫೋನ್ ಮಾಡ್ತೇವೆ.."

" ಈಗ ನೀವು ಡ್ರೈವ್ ಮಾಡಿ ಹೋಗುವದು ಬೇಡ .. ನಾನು ಬರ್ತೇನೆ.."

ಮನಸ್ಸು ಬೇಜಾರಿನಲ್ಲಿರುವಾಗ ಡ್ರೈವಿಂಗ್ ಮಾಡುವದು ಕಷ್ಟ.....

"ಇಲ್ಲ ಪ್ರಕಾಶಣ್ಣ ನಾವು ಬರ್ತೇವೆ...
ಏನಾದರೂ ಸಹಾಯ ಬೇಕಿದ್ದರೆ ಕೇಳ್ತೇವೆ..

ನಿನ್ನ ಬಳಿ ಸಂಕೋಚವಿಲ್ಲ.."

ಮೆಟ್ಟಲಿಳಿದು ಹೋದರು...

ನನ್ನಾಕೆ ಬಹಳ ಬೇಸರ ಮಾಡಿಕೊಂಡಳು.....

"ಛೇ ಎಂತಹ ಅನ್ಯಾಯರೀ..
ಇದು ಇಂದು ಮಧಾಹ್ನ ನಮ್ಮನೆಗೆ ಬಂದು ಕಷಾಯ ಕುಡಿದು ಹೋಗಿದ್ದಾರಲ್ಲ..!

ಬೀಪಿ ಕಡಿಮೆಯಾದರೆ ಪ್ರಾಣಕ್ಕೇನೂ ಅಪಾಯವಿಲ್ಲತಾನೇ..?"

" ಭರತ, ಅರುಣರ ಮುಖನೋಡಿದರೆ ..
ಅಪಾಯವಿರಬಹುದೇನೋ ಅನ್ನಿಸುತ್ತದೆ...

ಅವರ ಕಣ್ಣುಗಳು ಅತ್ತು ಅತ್ತು ಕೆಂಪಗಾಗಿದ್ದವು..."

ನನಗೂ ಆಘಾತವಾಗಿತ್ತು..

ನನ್ನಾಕೆಗೂ ಸಹ "ಕಹಿ ಸತ್ಯ" ಅರಗಿಸಿ ಕೊಳ್ಳಲಾಗಲಿಲ್ಲ...

ಮಧ್ಯಾಹ್ನ ನಮ್ಮನೆಗೆ ಬಂದು..
" ಕಾಫೀ ಬೇಡಾ..," ಕಷಾಯ " ಮಾಡು.. ಆಶಾ "

ಅಂತ
ಹೇಳಿ .., ಮಾಡಿಸಿ ಕುಡಿದು ಹೋಗಿದ್ದರು ....!

ಉತ್ಸಾಹದ ಬದುಕು... !

"ಸಾಗರದಲ್ಲಿ ಜಮೀನು ತಗೊ.. ಪ್ರಕಾಶ..
ನಾನು ಕೊಡಸ್ತೇನೆ..! "

ಬಹಳ ಆತ್ಮವಿಶ್ವಾಸದಿಂದ ಹೇಳಿದ್ದರು...!

"ರೀ... ಎದೆ ನೋವು ತುಂಬಾ ಬಂದಿರ ಬಹುದಾ..?
ಹಾರ್ಟ್ ಎಟಾಕ್ ಅಂದರೆ ನೋವು ಜಾಸ್ತಿ ಇರುತ್ತದಾ.?"

ನಿಜ... ಹ್ರದಯಾಘಾತದ ನೋವಿನ ಸಾವು..
ಅತ್ಯಂತ ನೋವಿನ ಸಾವಂತೆ...


ಹೆಂಗಸರ ಡೆಲಿವರಿ ನೋವಿಗಿಂತಲೂ ಜಾಸ್ತಿ ಇರುತ್ತದಂತೆ..

"ಛೇ.. ಏನು ಅನ್ಯಾಯ ಇದು...?
ಒಬ್ಬರಿಗೂ ಅನ್ಯಾಯ, ಕೆಟ್ಟ ಮಾತು ಹೇಳಿದವರಲ್ಲ..
ಅವರಾಯಿತು ಅವರ ದುಡಿಮೆಯಾಯಿತು ಅಂತಿದ್ದವರು..
ಅವರಿಗೇಕೆ ಈ ನೋವಿನ ಸಾವು..?"

ಅವರಿಗೆ ಸಾಯುವಂಥ ವಯಸ್ಸೇನೂ ಅಲ್ಲ..
ಐವತ್ತೈದರ ಅಂಚಿನಲ್ಲಿದ್ದರು....
ಮತ್ತೊಬ್ಬ ಮಗನ ಮದುವೆ ಮಾಡಬೇಕಿತ್ತು..

ಆಗತಾನೆ ಹುಟ್ಟಿದ ಮೊಮ್ಮಗನ ಸಂಗಡ ಆಡುವ ವಯಸ್ಸು....

ಈಗಲೇ ಕರೆ ಬಂದಿತೇ..?


"ಏನು ಮಾಡೋಣ .. ಹುಟ್ಟು ಸಾವು ನಮ್ಮ ಕೈಲಿ ಇಲ್ಲವಲ್ಲ.."

"ಅಲ್ಲಾರೀ.. ಅವರ ತಾಯಿ ನೋಡಿ..
ಎಷ್ಟು ಲಕ್ಷಣವಾಗಿ.. ಹಣೆ ತುಂಬಾ ದೊಡ್ಡ ಕುಂಕುಮ ಇಟ್ಟು ಚಂದವಾಗಿದ್ದರು..
ಅವರನ್ನು ನೋಡಿದರೆ ಕೈಮುಗಿದು ಬಿಡೋಣ ಅನಿಸುತ್ತದೆ ಅಲ್ಲವೇ?

ಅದು ನಿಜ...

ಅವರಲ್ಲಿ ನಾನು ನನ್ನಮ್ಮನ್ನು ನೋಡುತ್ತಿದ್ದೆ..
ಅಮ್ಮ ಊರಲ್ಲಿದ್ದಾಗ ಏನಾದರೂ ನೆಪ ಮಾಡಿ ಅವರ ಮನೆಗೆ ಹೋಗಿ..
ಕಣ್ಣತುಂಬ ನೋಡಿ ಬರುತ್ತಿದ್ದೆ...

ನೆಪ ಸಿಕ್ಕಿದಾಗ ಕಾಲು ಮುಟ್ಟಿ ನಮಸ್ಕಾರ ಮಾಡಿ ಬರುತ್ತಿದ್ದೆ....

ಮತ್ತೆ ಆಶಾಳೇ ಹೇಳಿದಳು..

ಭರತ, ಅರುಣರನ್ನು ನೋಡಿದರೆ... ಪಾಪ..ಅನಿಸುತ್ತದೆ...

ಇಲ್ಲಿಯವರೆಗೆ ಹೆಜ್ಜೆಹೆಜ್ಜೆಗೂ ಇದ್ದ ಅಪ್ಪ... !
ಮಾನಸಿಕವಾಗಿ, ಭೌತಿಕವಾಗಿ ಧೈರ್ಯ ತುಂಬುವ..
ಜೀವಕ್ಕಿಂತ ಪ್ರೀತಿ ಮಾಡುವ ಅಪ್ಪ ಇನ್ನು ಇರುವದಿಲ್ಲ ಅಂದರೆ...!

ಹೇಗಾಗಿರ ಬೇಡ..?
ಛೇ.. ಒಳ್ಳೆಯವರಿಗೇ ದೇವರು ಯಾಕೆ ಹೀಗೆ ಮಾಡುತ್ತಾನೆ...?...


ದೇವರು ಎಷ್ಟು ನಿರ್ದಯಿ ಅಲ್ಲವಾ...?"


" ಇಲ್ಲಿ ನೋಡು... ಪ್ರತಿಯೊಬ್ಬರೂ ಭರತ, ಅರುಣರ ಸ್ಥಾನದ ಅನುಭವ ಅನುಭವಿಸಲೇ ಬೇಕು..

ಪ್ರತಿಯೊಬ್ಬರ ಅಪ್ಪ, ಅಮ್ಮರೂ ಸಾಯುತ್ತಾರೆ...

ನಿನ್ನ ಅಪ್ಪ, ಅಮ್ಮರೂ ಒಂದು ದಿನ ಹೋಗೇ ಹೋಗುತ್ತಾರೆ...ಇದು ಸಹ ಸತ್ಯ.."

"ಛೇ ಹಾಗಲ್ಲ ಅನ್ನ ಬೇಡಿ.. ಛೇ...!"

ನೋಡು ಆಶಿ...
ಪ್ರತಿಯೊಬ್ಬರೂ ಭರತನ ತಂದೆಯ ದಿನ ನೋಡಲೇ ಬೇಕು..

ಸಾವನ್ನು ಎದುರಿಸಲೇ ಬೇಕು...

ಪ್ರತಿಯೊಬ್ಬರಿಗೂ ಸಾವು ಇದ್ದೇ ಇದೆ...!

ನನ್ನಮ್ಮನೂ ಒಂದು ದಿನ ಬಿಟ್ಟು ಹೋಗಿಬಿಡುತ್ತಾಳೆ...!

ನಿನ್ನಪ್ಪ, ಅಮ್ಮನೂ ಸಹ..!

ನಾನೂ ಸಾಯುತ್ತೇನೆ.. ನೀನೂ ಸಹ.. ಸಾಯಲೇ ಬೇಕು....!

ನಮ್ಮ ಸಾವನ್ನು " ನಮ್ಮ ಮಗನೂ" ನೋಡಲೇ ಬೇಕು....

ನಾವಿರುವಷ್ಟು ದಿನ ನಮ್ಮ ಸಂಗಡ ಇದ್ದಾರಲ್ಲ...
ಅವರೊಡನೆ ಪ್ರೀತಿಯಿಂದ ಇದ್ದು ಬಿಡಬೇಕು...!

ಎಷ್ಟು ಪ್ರೀತಿ ಮಾಡ ಬೇಕೋ ಮಾಡಬೇಕು..

ನಾಳೆ ನೋಡಿಲ್ಲವಲ್ಲ...!

ನೀನೂ ಸಹ ಸಾಯುತ್ತೀಯಾ... ನಾನೂ ಸಾಯುತ್ತೀನಿ ...

ನಿನ್ನ ಸಾವನ್ನು ನಾನು ನೋಡ್ತಿನೋ.....

ನನ್ನ ಸಾವನ್ನು ನೀನು ನೋಡ್ತಿಯೋ.. ...ಗೊತ್ತಿಲ್ಲ...!

ನಾನು ಸತ್ತ ಮೇಲೆ ಅಳುವದಕ್ಕಿಂತ ..

ಈಗ ನನ್ನನ್ನು ಪ್ರೀತಿ ಮಾಡೇ ಪ್ಲೀಸ್.....

ಎಷ್ಟು ಪ್ರೀತಿ ಬೇಕಾದರೂ ಮಾಡು... ನಾನೂ ಮಾಡ್ತೇನೆ..


ನಮ್ಮಿಬ್ಬರ ನಡುವೆ ಜಗಳ ಎಲ್ಲ ಯಾಕೆ.. ಬೇಕು..?

ಈಗ ನಿನ್ನ ಕಣ್ಣಮುಂದೆ ಇದ್ದೀನಲ್ಲ......

ಎಷ್ಟು ಬೇಕಾದರೂ ಪ್ರೀತಿ ಮಾಡು ...

ಮಾಡ್ತೀಯಾ..?"


"ಛೇ .. ಎಷ್ಟು ಕ್ರೂರವಾಗಿ ಮಾತಾಡ್ತಿರಿ ..ನೀವು..

ಮನಸ್ಸಾದರೂ ಹೇಗೆ ಬರುತ್ತದೆ...?

ಇರಿ..ನಿಮಗೆ ಮಾಡಿಸ್ತೇನೆ.."

ಅಂತ....

ಆಶಾ... ನನ್ನ ಬೆನ್ನಿಗೆ ಬಲವಾಗಿ..
ಜೋರಾಗಿ..ತಾಕತ್ತೆಲ್ಲಾ ಹಾಕಿ ಗುದ್ದಿದಳು...

ಹಿಂದಿನಿಂದ ಬಿಗಿದಪ್ಪಿದಳು...

ಅವಳ... ಆ.. ಗುದ್ದಿನಲ್ಲಿ ..
ಆ ಅಪ್ಪುಗೆಯಲ್ಲಿ...

ಅವಳ "ಪ್ರೀತಿ ಪ್ರೇಮವೆಲ್ಲ" ... ಇತ್ತು...


ನನ್ನಾಕೆಯ ಪ್ರೀತಿ ಕೆಲವು ಸಾರಿ...

ನನಗೆ ಚೆನ್ನಾಗಿ ಅರ್ಥ ಅಗುತ್ತದೆ.....



( ಇದೀಗ.. ಮಡದಿಯನ್ನು ಗೋಕರ್ಣದ ಬಸ್ಸಿಗೆ ಕಳುಹಿಸಿ ಬಂದಾಗ..
ಮನೆಯಲ್ಲ ಬಿಕೋ ಅನಿಸ ತೊಡಗಿತು..
ಅವಳಿಲ್ಲದೆ.. ಬೇಜಾರಾಗ ತೊಡಗಿತು..
ಹೀಗೊಂದು ನೆನಪು.. ಅವಳಿಗಾಗಿ..)

83 comments:

ತೇಜಸ್ವಿನಿ ಹೆಗಡೆ said...

ಪ್ರಕಾಶಣ್ಣ,

ವಿರಸ, ಸರಸ, ನೋವು, ನಲಿವು ಸಮರಸವಾಗಿ ಬೆರೆತಿದ್ದರೆ ಬದುಕು ಬಲು ಚೆನ್ನ ಅಲ್ಲವೇ? ನಿಮ್ಮಿಬ್ಬರ ಬಾಳಲ್ಲಿ ಈ ನಗು ಶಾಶ್ವತವಾಗಿರಲಿ. ಮನೆಯವರನ್ನು ಬೇಗ ಕರೆಸಿಕೊಳ್ಳಿ..ಮನೆ-ಮನ ತುಂಬಿಕೊಳ್ಳುತ್ತದೆ. :)

Dr.Gurumurthy Hegde said...

ಆತ್ಮೀಯ ಪ್ರಕಾಶ್ ಅಣ್ಣ
ನಿಮ್ಮ ಸರಸ ವಿರಸ ಸಮರಸ , ವರ್ಣಿಸಿದ ರೀತಿ ಮನ ಮುಟ್ಟುವಂತಿದೆ, ಎದೆ ತಟ್ಟುವಂತಿದೆ. ಸದಾ ಸಂತೋಷ ಹೀಗೆಯೇ ಇರಲಿ
ಮತ್ತೊಮ್ಮೆ ಉತ್ತಮ ಬರಹಕ್ಕೆ ಅಭಿನಂದನೆಗಳು

NiTiN Muttige said...

೪ ದಿನದ ಈ ಬದುಕಲ್ಲಿ ನಾವು ಜಗಳ ಅದು ಇದು ಅಂಥ ಹೊಡೆದುಕೊಳ್ಳುವುದೆ ಹೆಚ್ಚು. ಅದೇ ಸಮಯವನ್ನು ನಾವು ಪ್ರೀತಿಯಿಂದ ನಲಿಯುತ್ತ ಕಲಿಯುವಂತಾದರೆ ಅದೇಷ್ಟು ಚೆನ್ನ.? ನಿಧನರಾದ ನಂತರ ಅವರನ್ನು ನೆನೆಸಿಕೊಂಡು ಅವರು ಅಷ್ಟು ಒಳ್ಳೆಯವರಾಗಿದ್ದರು ಎಂದೆಲ್ಲ ಓಳನ್ನು ಬಿಡುವುದಕ್ಕಿಂತ ಬದುಕಿದ್ದಾಗಲೇ ನಮ್ಮಲ್ಲಿನ ವೈಮನಸ್ಸನ್ನು ಕಳಚಿ ಅವರೊಂದಿಗೆ ಸಂತೋಷದ ಜೀವನ ಒಳ್ಳೆಯದಲ್ಲವೆ?

ಪ್ರಕಾಶಣ್ಣ, ಇಲ್ಲಿ ನಿಮ್ಮ ಬರಹ ಹಾರ್ಟಿಗೆ ಟಚ್ಚಾತು!!
ಆಶಾತ್ತಿಗೆ ಆದಷ್ಟು ಬೇಗ ಬಂದು ಮತ್ತೊಂದು ಗುದ್ದನ್ನು ಆದಶಃಟು ಬೇಗ ಕೋಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವ
!!

Unknown said...

tumba emotionallagi baradde mama,,,channagitthu!!!

sunaath said...

ಪ್ರಕಾಶ,
ಗುದ್ದು ತಿಂದೂ ಮುದ್ದು ಎನ್ನುವ ಕಲೆಗೆ ರಸಿಕತನ ಅಂತಾರಪ್ಪ.
ಲೇಖನ ಚೆನ್ನಾಗಿದೆ. ಸರಸವಾಗಿ ಬರೆದಿದ್ದೀರಿ. ಅಭಿನಂದನೆಗಳು.

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...

ಎಷ್ಟು ಚೆಂದದ ಬರಹ. ಸಾವು, ನೋವು, ನಲಿವು, ನವಿರುಗಳನ್ನೆಲ್ಲ ಹೊತ್ತ ಹೃದಯಸ್ಪರ್ಶಿ ಬರಹ. ನಿಮ್ಮ ದಾಂಪತ್ಯ ಸದಾ ಸುಖಕರವಾಗಿರಲಿ.

ಸಾವು ಮತ್ತು ಬದುಕಿನ ಬಗ್ಗೆ ನೀವಾಡಿದ ಮಾತುಗಳು ಎಷ್ಟು ಸತ್ಯ. ಇಂದು ನಮ್ಮೊಡನೆ ಇರುವವರಲ್ಲಿ ನಾಳೆ ಒಬ್ಬರಿಲ್ಲ ಎನ್ನುವುದನ್ನು ಊಹಿಸಿಕೊಳ್ಳುವುದೂ ಕಷ್ಟಸಾಧ್ಯ. ಅಥವಾ ನಾಳೆ ನಾನೇ ಇಲ್ಲವಾದರೆ ನನ್ನ ಜವಾಬ್ಧಾರಿಗಳನ್ನೆಲ್ಲ ಅರ್ಧಕ್ಕೆ ಮುಗಿಸಿಹೋದ ಪಾಪ ನನ್ನು ಸುತ್ತಿಕೊಂಡೀತಾ? ಅಂತೆಲ್ಲ ಕೆಲವೊಮ್ಮೆ ನನಗೂ ಯೋಚನೆ ಬರುತ್ತಿರುತ್ತದೆ.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಸಾವು, ಬದುಕು, ಪ್ರೀತಿ, ವಿರಸ, ವಾಸ್ತವ, ಭ್ರಮೆ ಎಲ್ಲವನ್ನೂ ಒಂದೇ ಬರಹದಲ್ಲಿ ನಿಮ್ಮದೇ ಶೈಲಿಯಲ್ಲಿ ತುಂಬಾ ಚೆನ್ನಾಗಿ ಬರೆದಿರುವಿರಿ.
ಹತ್ತಿರದವರನ್ನು ಕಳೆದುಕೊಂಡ ದುಃಖ ಅನುಭವಿಸಿದವರಿಗೇ ಗೊತ್ತು. ಬೇರೆಯವರಿಂದ ಪಾಠ ಹೇಗೆ ಕಲಿಯಬಹುದೆಂದೂ ತಿಳಿಯುತ್ತದೆ.
ಕಡೆಯದಾಗಿ "ಮನೆಯಾಕೆ" ಇಲ್ಲದ ಮೇಲೆ "ಮನೆ" ಯಾಕೆ?
ಎಂಬುದನ್ನೂ ಹೇಳಿದ್ದೀರಿ.
ಮೊನ್ನೆ ಭಾನುವಾರ ವಿಶ್ವೇಶ್ವರ ಭಟ್ಟರು ತಮ್ಮ "ಜನಗಳ ಮನ" ಅಂಕಣದಲ್ಲಿ ಹೆಂಗಸರ ಕಷ್ಟವನ್ನು , ಅವರ ಕೆಲಸದ ಅಗಾಧತೆಯನ್ನು ಸೊಗಸಾಗಿ ಬರೆದಿದ್ದಾರೆ. ಅದೂ ನೆನಪಾಯಿತು.

shivu.k said...

ಪ್ರಕಾಶ್ ಸರ್,

ಈ ಮನೆವಾರ್ತೆಯ ಲೇಖನ ಓದುತ್ತಿದ್ದಂತೆ ನವರಸಗಳ ಎಲ್ಲಾ ಅನುಭವಗಳು ಮನಮುಟ್ಟುವಂತಿದೆ. ಎಲ್ಲಾ ನೆನಪಾಗುತ್ತದೆ.

ನಮಗೆ ತುಂಬಾ ಇಷ್ಟವಾದವರು ನಮ್ಮ ಕಣ್ಣ ಮುಂದೆ ಕಾಣದಿದ್ದರೆ ಇದೇ ರೀತಿ ಮನಸ್ಸು ಬೇಡುತ್ತದೆ. ಭಾವೋದ್ವೇಗ ಹೆಚ್ಚಾಗುತ್ತದೆ. ಅದನ್ನು ಅದ್ಬುತವಾಗಿ ಚಿತ್ರಿಸಿದ್ದೀರಿ....

ಅದರೆ ಈ ಸಾವು ಯಾವ ರಸ ? ಅದರ ಬಗ್ಗೆ ಹೆಚ್ಚಾಗಿ ಬರೆದಿದ್ದೀರಿ..!

ಮನಸ್ಪರ್ಶಿ ಬರಹಕ್ಕೆ ಅಭಿನಂದನೆಗಳು.

Ittigecement said...

ತೇಜಸ್ವಿನಿ....

ನೀವೆನ್ನುವದು ನಿಜ...
ನನ್ನಾಕೆಯ ಪ್ರೀತಿಯ ದೊಡ್ಡಮ್ಮ ತೀರಿಕೊಂಡಿದ್ದಾರೆ..
ಹಾಗಾಗಿ ಊರಿಗೆ ಹೋಗುವ ಸಂದರ್ಭ...
ಮತ್ತೆ ನಾಲ್ಕು ದಿನಗಳ ನಂತರ..
ಆಪ್ತ ಗೆಳೆಯನ "ಮನೆ ಗ್ರಹಪ್ರವೇಶ"..
ದುಃಖ.., ಸಂಭ್ರಮ ಒಟ್ಟಿಗೇ ಬರಬೇಕೆ..?

ಸಮರಸವೇ ಜೀವನ.. ನಿಜ..!

ನಾಲ್ಕು ದಿನಗಳ ನಂತರ ಬರಲಿದ್ದಾಳೆ..

ಧನ್ಯವಾದಗಳು..

Ittigecement said...

ಗುರುಮೂರ್ತಿಯವರೆ...

ಬರುವ ಮೇ ನಲ್ಲಿ
ಮದುವೆಯಾಗಿ ಹದಿನೈದು ವರ್ಷವಾಗುತ್ತದೆ..
ಇದುವರೆಗೂ ನಮ್ಮನ್ನು ಬಿಟ್ಟು (ಇಷ್ಟು ದಿನ) ಹೋದದ್ದಿಲ್ಲ...

ಮನೆಗೆ ಬಂದಾಗ ಒಂದು ಥರಹದ
ಮಂಕು..ಶೂನ್ಯ ಭಾವ..! ಖಾಲಿ.. ಖಾಲಿ...

ಇನ್ನು ಅಡಿಗೆ ಮನೆಯ ಬಗೆಗೆ ಹೇಳಿದರೆ..
ಒಂದು ಬ್ಲಾಗ್ ಲೇಖನವಾಗುತ್ತದೆ...

ಮಗ ತುಂಟನಲ್ಲ.. ಹಠಮಾರಿಯಲ್ಲ..
ಸಧ್ಯ ಬಚಾವ್..!

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು

Ittigecement said...

ನಿತಿನ್....

ನಮಗೆಲ್ಲರಿಗೂ ಗೊತ್ತಿದೆ...
ನಮ್ಮ ಸಾವು ಯಾವಾಗ ಬೇಕಾದರೂ ಬರಬಹುದು..
ಗೊತ್ತಿದ್ದೂ ಅಮರರಂತೆ ವರ್ತಿಸುತ್ತೇವೆ.. ಅಲ್ಲವಾ..?

ಅವಳ ಗುದ್ದು ಆಗಾಗ ಬೀಳುತ್ತಿರುತ್ತದೆ..
ನೀವು ಮತ್ತೆ ಹಾರೈಸ ಬೇಡಿ..!

ಈಗಲೇ ಹತ್ತು ಬಾರಿ ಫೋನ್ ಬಂತು..
ಅದು ಹಾಗೆ ಮಾಡಿ.., ಇದು ಹೀಗೆ ಮಾಡಿ.. ಅಂತ..!

ಏನೇ ಆದರೂ "ಹೆಣ್ಣಾಗಿ ಜನ್ಮ" ಕಷ್ಟ...!

ಹೆಣ್ಣು ಕುತೂಹಲ..
ಹೆಣ್ಣು ಸುಂದರ...
ಹೆಣ್ಣು ರಹಸ್ಯ..

ಊಹೆಗೂ ನಿಲಕದ್ದು... ಮಾರಾಯರೆ...!

ನಿಮ್ಮ ಮದುವೆ ಆಗಿದೆಯಾ...?

ಲೇಖನ ಇಷ್ಟಪಟ್ಟಿದ್ದಕ್ಕೆ ವಂದನೆಗಳು...

Ittigecement said...

ಪ್ರಶಾಂತು...

ದಾಂಪತ್ಯದ ಸೊಬಗಿನ ಬಗೆಗೆ ಹಲವರು ಬರೆದಿದ್ದಾರೆ..
ಮುದ್ದಣ, ಮನೋರಮೆ ನನಗಿಷ್ಟ...
ಹಾಗೆ "ಕೆ.ಎಸ್.ನ. ಮತ್ತು ಬಿ.ಆರ್. ಲಕ್ಷ್ಮಣರಾಯರ"
ಕವನಗಳು....

ಈ ರೀತಿಯ ತಾತ್ಕಾಲಿಕ ಅಗಲಿಕೆ ಆಗಾಗ ಆಗುತ್ತಿರಬೇಕು..

ಮದುವೆಯಾಗುವ ಹುಡುಗ ಹಾಗಾಗಿ ಹೇಳಿದೆ ಮಾರಾಯಾ...!

ದಾಂಪತ್ಯದಲ್ಲಿ ಸೊಬಗಿದೆ..

ಲೇಖನ ಇಷ್ಟಪಟ್ಟಿದ್ದಕ್ಕೆ... ಧನ್ಯವಾದಗಳು..

Ittigecement said...

ಸುನಾಥ ಸರ್...

ನನಗಿಂತ ಬದುಕು ಕಂಡವರು ನೀವು...
"ಗುದ್ದು ತಿಂದು ಮುದ್ದು"
ನೀವೂ ಮಾಡಿರಬೇಕಲ್ಲ...?

ಲೇಖನ ಇಷ್ಟಪಟ್ಟಿದ್ದಕ್ಕೆ
ವಂದನೆಗಳು...

Ittigecement said...

ಶಾಂತಲಾ...

ನಮ್ಮ ಮನೆಗೆ ಬಂದು "ಶ್ರೀಧರ ಸ್ವಾಮಿಗಳ ಪುಣ್ಯ ತೀರ್ಥ "
ಕೇಳಿದ ಹುಡುಗರ ಪರಿಚಯ...ನಿಮಗೆಲ್ಲರಿಗೂ ಇದೆ...

ಅವರ ಅನುಮತಿ ಕೇಳಿಲ್ಲ..
ಹಾಗಾಗಿ ಹೆಸರು ಬರೆದಿಲ್ಲ...

ಜೀವನದ ಅವಿಭಾಜ್ಯ ಸಂಬಂಧದ ವ್ಯಕ್ತಿ ಇನ್ನು ನಮ್ಮೊಡನೆ ಇರುವದೇ ಇಲ್ಲ...
ಎನ್ನುವ ಭಾವದಲ್ಲಿ ನಮ್ಮಮ್ಮ ನಲವತ್ತೈದು ವರ್ಷದಿಂದ ಇದ್ದಾರೆ...
ನಮ್ಮನ್ನು ಬೆಳೆಸಿದ್ದಾರೆ..
ಅವರ ಬದುಕಿಗೆ ಏನನ್ನೋಣ..?
ಅವರು ಎಲ್ಲಾದರೂ ಹೆದರಿ ಆತ್ಮಹತ್ಯೆಗೆ ಶರಣಾಗಿ ಬಿಟ್ಟಿದ್ದರೆ..?
ನೆನಪಿಡಿ ಅವರು ಓದಿದ್ದು ನಾಲ್ಕನೇಯ ತರಗತಿ ಮಾತ್ರ...

ಅವರ ಬದುಕನ್ನು.., ಬದುಕಿನ ಉತ್ಸಾಹವನ್ನು...
ಕಹಿಸತ್ಯವನ್ನು ತೆಗೆದುಕೊಂಡ ರೀತಿ...ಛಲ...

ನಾನು ಬೆರಗಾಗಿ ನೋಡುತ್ತಿರುತ್ತೇನೆ...

ತಂದೆ ಬಿಟ್ಟು ಹೋದ ಜವಬ್ದಾರಿ ಅವರು ನಿಭಾಯಿಸಿದ್ದಾರೆ..
ಸಾವನು ಮೀರಿದ ಬದುಕು ಅದು..
ಅಲ್ಲವಾ..?

ಲೇಖನ ಮೆಚ್ಚಿದ್ದಕ್ಕೆ
ಧನ್ಯವಾದಗಳು..

ವಿನುತ said...

ಪ್ರಕಾಶ್ ರವರೆ, ಎಂದಿನಂತೆ ಹಾಸ್ಯ, ಗಂಭೀರ ಎರಡು ಇರುವ ನಿಮ್ಮ ಶೈಲಿ ಮತ್ತೊಮ್ಮೆ ಮೋದಿ ಮಾಡಿದೆ. ನಿಮ್ಮ ಕೊನೆಯ ಸಾಲುಗಳು 'ಹೆ೦ಡತಿಯೊಬ್ಬಳು ಮನೆಯೊಳಗಿದ್ದರೆ ... ' ಎಂಬ ಹಾಡನ್ನು ನೆನಪಿಸಿತು! ನಿಮಗೂ ಅದೇ ನೆನಪಾಗಿರಬೇಕಲ್ಲವೆ? :)

Unknown said...

ಪ್ರಕಾಶ್ ನಾವು ಇದನ್ನು ಏನು ಅಂತ ಓದಬೇಕು. ಕಥೆಯಾ? ಕವನವಾ? ಲೇಖನವಾ? ಅಂತೂ ಓದಿ ಮುಗಿಸಿದಾಗ ಮನಸ್ಸಿಗೆ ಸಂತೋಷವಾಯಿತು. ಕುಟುಂಬದಲ್ಲಿನ ಈ ಸರಸ ವಿರಸಗಳೇ ನಮ್ಮಲ್ಲಿನ ವೈವಾಹಿಕ ಬಂಧನಕ್ಕೆ ಸುಮಸಂಕೋಲೆಯಾಗಿವೆ. ನಿಮ್ಮ ಬರವಣಿಗೆಯ ಆಪ್ತ ಶಯಲಿ ಇಷ್ಟವಾಯಿತು. ನನ್ನ ಮೊದಲ ಪ್ರಶ್ನೆಗಳನ್ನು ವಿಮರ್ಶಕರಿಗೆ ಬಿಟ್ಟು ಬಿಡೋಣ. ಏನನ್ನುತ್ತೀರಾ?

PARAANJAPE K.N. said...

ಪ್ರಕಾಶರೇ,
ನಿಮ್ಮ ಬರಹದಲ್ಲಿ ವಾಸ್ತವ-ವೇದಾ೦ತ-ಸರಸ-ವಿರಸ-ತು೦ಟಾಟ ಎಲ್ಲದರ ಸಮಪಾಕವಿದೆ.ಚೆನ್ನಾಗಿದೆ.

Umesh Balikai said...

ನಿಮ್ಮ ಲೇಖನ ಓದುವಾಗ ಮನಸ್ಸಿನಲ್ಲಿ ಆಗುವ ಭಾವನೆಗಳ ಏರಿಳಿತವನ್ನು ಕಂಡು ನನಗೇ ಬೆರಗಾಗುತ್ತೆ. ಪ್ರಾರಂಭದಲ್ಲಿ ತಮಾಷೆಯಾಗಿ, ನಂತರ ತಕ್ಷಣ ತುಂಬಾ ಸೀರಿಯಸ್ಸಾಗಿ, ಮತ್ತೆ ತಮಾಷೆಗೆ ಕರೆದೊಯ್ಯುತ್ತೆ. ದಾಂಪತ್ಯ ದಲ್ಲಿ ಇಷ್ಟೆಲ್ಲಾ ಮೋಜು ಮಜಾ ಇರುತ್ತಾ ಅಂತ ಬೆರಗಾಗುತ್ತೆ :). ಪರಸ್ಪರರ ಬಗ್ಗೆ ಪ್ರೀತಿ, ನಂಬಿಕೆ, ವಿಶ್ವಾಸ ಮತ್ತು ಗೌರವ ಇದ್ದರೆ ಮಾತ್ರ ಇಂಥ ಸಂಬಂಧ ಸಾಧ್ಯ ಅನ್ನಿಸುತ್ತೆ.

ಮನಸು said...

ಪ್ರಕಾಶ್ ಸರ್,
ತುಂಬಾ ಚೆನ್ನಾಗಿ ನಗುವಿಂದ ಅಳು, ಅಳುವಿಂದ ನಿಜ ಸ್ವರೂಪ ಕೊನೆಯಲ್ಲಿ ಪ್ರೀತಿ... ಎಲ್ಲವು ಒಂದೆ ಲೇಖನಿಯಲಿ ತಿಳಿಸಿದ್ದೀರಿ. ನಿಜ ಹುಟ್ಟಿದವ ಸಾಯಲೇ ಬೇಕು... ಇರುವ ಎರಡು ದಿನಕ್ಕೆ ಏನೆಲ್ಲಾ ಮಾಡುತ್ತವೆ ನಾವುಗಳು ಇರುವಾಗ ಎಲ್ಲರೊಂದಿಗೆ ಪ್ರೀತಿ ಇಂದ ಇದ್ದರೆ ಆಯಿತು ಎಂದು ಯಾರು ಭಾವಿಸೋದಿಲ್ಲ.. ವರುಣ್ ತಂದೆ ಹೇಗಿದ್ದಾರೆ ಅವರಿಗೇನು ತೊಂದ್ರೆ ಆಗಿಲ್ಲವೇ..? ದಯವಿಟ್ಟು ತಿಳಿಸಿ..
ನಿಮ್ಮಾಕೆ ಊರಲ್ಲಿಲ ಎಂದು ನಿಮಗೆ ಬೇಸರ .... ಇರ್ಬೇಕು ಇವೆಲ್ಲ ಸ್ವಲ್ಪ ದಿನ ೪ ದಿನ ಅಲ್ಲವೇ ಅವರು ಬರುವುದರೊಳಗೆ ನೀವು ಅವರು ಹೇಳಿರೋ ಕೆಲಸ ಎಲ್ಲ ಮುಗಿಸಿಬಿಡಿ.. ಹ ಹ ಹ ಒಳ್ಳೆಯದಾಗಲಿ ನಿಮ್ಮ ಜೀವನ ಸುಲಲಿತವಾಗಿರಲೆಂದು ಆಶಿಸುತ್ತೇನೆ.. ಧನ್ಯವಾದಗಳು ನಮಗೆ ಜೀವನದ ಸತ್ಯಾನುಸತ್ಯಯತೆಯನ್ನು ನೀಡಿದ್ದಕ್ಕೆ..
ವಂದನೆಗಳು..

ಎಚ್. ಆನಂದರಾಮ ಶಾಸ್ತ್ರೀ said...

ಪ್ರತಿಯೊಬ್ಬನಲ್ಲೂ ಅಂತರ್ಗತವಾಗಿರುವ ಭಾವುಕತೆ, ಅನುಭವ ಮತ್ತು ಅನುಭಾವ ಈ ಗುಣಸಮೂಹದ ಬೆನ್ನಿನಮೇಲೊಂದು ಪ್ರೀತಿಯ ಗುದ್ದು ಕೊಟ್ಟಿದ್ದೀರಿ.
ನಿಮ್ಮಲ್ಲಿರುವ ಇವೇ ಗುಣಗಳೊಡನೆ ನಿಮ್ಮ ಪ್ರಾಮಾಣಿಕತೆ ಹಾಗೂ ಸಾಹಿತ್ಯರಚನಾಕೌಶಲ (ಕಲೆಯೆನ್ನುವುದು ಹೆಚ್ಚು ಸೂಕ್ತ) ಇವೂ ಬೆರೆತಾಗ ಇಂಥ ಸಾಹಿತ್ಯ ರಸಪಾಕ ಸಾಧ್ಯ.
ಹೀಗೇ ಬರೆಯುತ್ತಿರಿ.

ಅನಿಲ್ ರಮೇಶ್ said...

ಪ್ರಕಾಶ್,
ನಿಮ್ಮ ಈ ಬರಹ ಮನ ಮುಟ್ಟುವಂತಿದೆ.
ಜೀವನದಲ್ಲಿ ಸರಸ, ವಿರಸಗಳು ಸಮರಸವಾಗಿದ್ದರೆ ಚೆನ್ನ.

ಒಳ್ಳೆ ಬರಹಕ್ಕೆ ಅಭಿನಂದನೆಗಳು.

Ittigecement said...

ಮಲ್ಲಿಕಾರ್ಜುನ್..

"ಮನೆಯಾಕೆ " ಇಲ್ಲದ ಮನೆ "ಯಾಕೆ"..?

ಸರಿಯಾಗಿ ಹೇಳಿದ್ದೀರಿ...

ಅಂದು ನಮ್ಮ ಜಗಳ ಶುರುವಾದಾಗಲೇ..
ಆ ಗಂಡುಮಕ್ಕಳು ಬಂದದ್ದು.. ನಂತರ
ನಮ್ಮ ಸಂಭಾಷಣೆ...
ಮನಸ್ಸಿಗೆ ಕಾಡುತ್ತಿತ್ತು..
ನಿಮ್ಮ ಬಳಿ ಹೇಳಿಯೂ ಇದ್ದೆ...
ನಿನ್ನೆ ನನ್ನಾಕೆ ಗೋಕರ್ಣಕ್ಕೆ ಹೋದಮೇಲೆ...
ಅವಳಿಲ್ಲದ ಮನೆ... ಬಹಳ..ಕಾಡಿತು..

ಎಷ್ಟೊಂದು ಆವರಿಸಿಕೊಂಡು ಬಿಡುತ್ತಾರೆ..
ಇವರು ನಮ್ಮ ಬದುಕನ್ನು...
ಇದ್ದಾಗ ಏನೂ ಅನ್ನಿಸುವದಿಲ್ಲ...
ದೂರವಾದಾಗ ಅನುಭವಿಸುವ "ವಿರಹ'

ಸೊಗಸೇನೂ ಅಲ್ಲ ಬಿಡಿ...

ಲೇಖನ ಮೆಚ್ಚಿದ್ದಕ್ಕೆ.. ಧನ್ಯವಾದಗಳು...

Ittigecement said...

ಶಿವು ಸರ್...

ನಾನು ಬರಹಗಾರನೇ ಅಲ್ಲ...
ಸಹಿತ್ಯಕ್ಕೂ ನನಗೂ ಸಂಬಂಧವೇ ಇಲ್ಲ..
ಮನೆವಾರ್ತೆಯ ಲೇಖನ ಮೆಚ್ಚಿದ್ದಕ್ಕೆ .. ಧನ್ಯವಾದಗಳು...

ಸಾವು ಯಾವ ರಸ...?

ಸಾವು ಜೀವರಸ ಹೀರುವ..
"ನೀರಸ"ವಂತೂ ಅಲ್ಲ...!

ಮನಸ್ಸಿಗನಿಸಿದ ಭಾವ..,
ಅನುಭವ ಹಂಚಿಕೊಂಡಿರುವೆ..

ಬೆನ್ನು ತಟ್ಟಿ ಉತ್ಸಾಹ ತುಂಬುವ
ನಿಮ್ಮ ಪ್ರೋತ್ಸಾಹಕ್ಕೆ...

ವಂದನೆಗಳು...

Ittigecement said...

ವಿನುತಾ...

ಹಾಡು ಹಾಗಿರಲಿ..
ನನ್ನ ಪಾಡು ಸಾಕಾಗಿದೆ...!
ನನ್ನೊಡನೆ ಮಗನೂ ಇದ್ದಾನೆ...

ನಮ್ಮವರು ಸ್ವಲ್ಪ ದೂರವಾದಾಗ...
ಅವರು ..ನಮ್ಮನ್ನಾವರಿಸಿದ ಪರಿ..
ಗೊತ್ತಾಗುತ್ತದೆ...

ಇಂದು ನಾನೇ ಹತ್ತು ಬಾರಿ ಫೋನ್ ಮಾಡಿದೆ...!

ಆಗಾಗ.. ಹೀಗೆ ಆಗುತ್ತಲಿರಬೇಕು...
ಪ್ರೀತಿ ಪ್ರೇಮದ ಸೊಬಗು ಸವಿಯುತ್ತಲಿರಬೇಕು..

ಲೇಖನ ಮೆಚ್ಚಿದ್ದಕ್ಕೆ.. ಧನ್ಯವಾದಗಳು..

Ittigecement said...

ಸತ್ಯನಾರಾಯಣ ಸರ್...

ಸಾಹಿತ್ಯ ಓದಿದವನು ನಾನಲ್ಲ..
ಇದು ಯಾವ ಪ್ರಕಾರ ಅಂತಲೂ ಗೊತ್ತಿಲ್ಲ..

ಬದುಕಿನ ಅನುಭವ..
ಪ್ರೀತಿ ಪ್ರೇಮದ ಭಾವ... ಹಂಚಿಕೊಂಡಿದ್ದೇನೆ...

ಇಷ್ಟ ಪಟ್ಟು ನಾಲ್ಕು ಸಾಲು ಬರೆದಿದ್ದೀರಲ್ಲ..
ಅದು ನನಗೆ ಬಹುಮಾನ...

ಎಲ್ಲ ದಂಪತಿಗಊ ಜಗಳ ಇದ್ದೇ ಇರುತ್ತದೆ..
ಎರಡು ವಿಭಿನ್ನ ವ್ಯಕ್ತಿತ್ವ ಸೇರಿದಾಗ ..
ಅಭಿಪ್ರಾಯ ಭೇದ.. ಸಹಜ...

ಸಮರಸವೇ ಜೀವನ...

ಲೇಖನ(ಅಂತ ನಾನು ಹೇಳುವದು)
ಮೆಚ್ಚಿದ್ದಕ್ಕೆ

ಧನ್ಯವಾದಗಳು..
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...

ಬಾಲು ಸಾಯಿಮನೆ said...

ನನ್ನ ಹೆಂಡತಿ ನಿನ್ನ ಹೆಂಡತಿಗೆ ಸಪೋರ್ಟ ಮಾಡ್ತಾಳಂತೆ,
ಬಾಲು

ಶರಶ್ಚಂದ್ರ ಕಲ್ಮನೆ said...

ಪ್ರಕಾಶಣ್ಣ,
ನೀನು ಅತ್ಗೆ ಹಿಂಗೆ ಅನ್ಯೋನ್ಯವಾಗಿರಿ.... ಬೇರೆ ಎಂತು ಹೇಳಕ್ಕೆ ತಿಳಿತಲ್ಲೇ...

NiTiN Muttige said...

ಪ್ರಕಾಶ್ ಅಣ್ಣಾ, ಇನ್ನೂ ಆಜಿಲ್ಲೆ..!!!ಏನಾದ್ರು ಕಿವಿ ಮಾತು ಹೇಳುವುದು ಇತ್ತೇ?!!

Ittigecement said...

ಪರಾಂಜಪೆಯವರೆ...

ನಿನ್ನೆ ನಿಮ್ಮ ಫೋನ್ ಬಂದಾಗ ಬಸ್ಸು ಹತ್ತಿಸಲು ಹೋಗುತ್ತಿದ್ದೆ...

ಆತ್ಮೀಯ ಸಂಬಂಧದ ವ್ಯಕ್ತಿ ದೂರ ಇದ್ದಾಗ...
ಅವನ ಸಂಬಂಧದ ಭಾವವನ್ನು ಜಾಸ್ತಿ ಅನುಭವಿಸುತ್ತೇವೆ..
ಅಲ್ಲವಾ,,,?
ಇದು ಯಾವುದೇ ಸಂಬಂಧ ಇರಬಹುದು..
ದೂರ ಹೋಗಿ ಹತ್ತಿರ ಬಂದಾಗ..
ವಾವ್..!!
ಅದನ್ನು ಇನ್ನೂ ಅನುಭವಿಸ ಬಹುದು...

ಪ್ರೋತ್ಸಾಹಕ್ಕೆ ವಂದನೆಗಳು...

ಚಂದ್ರಕಾಂತ ಎಸ್ said...

ಪ್ರಕಾಶ್

ದಯವಿಟ್ಟು ಕ್ಷಮಿಸಿ, ನಿಮ್ಮ ಹಿಂದಿನ ಬರಹ ವಿವರವಾಗಿ ಓದಲಾಗಲಿಲ್ಲ,ಅದಕ್ಕೇ ಪ್ರತಿಕ್ರಿಯಿಸಲಿಲ್ಲ.

ತುಂಬಾ ಸೊಗಸಾದ ಬರಹ. ಮನೆಗೆ ಯಾರಾದರೂ ಬರುವವರಿದ್ದರೆ ಮನೆಯೊಡತಿಗೆಬ್ ಹೇಳುವುದನ್ನು ಮರೆತಿರುವವರಲ್ಲಿ ನೀವು ಮೊದಲಿಗರೂ ಅಲ್ಲಾ ಕಡೆಯವರೂ ಅಲ್ಲಾ ಅನಿಸುತ್ತದೆ. ಮೂರು ದಶಕಗಳ ಹಿಂದೆ ಮದುವೆಯಾಗಿ ಪತಿಗೃಹಕ್ಕೆ ಹೋದ ಹೊಸದರಲ್ಲಿ ಒಂದೇ ದಿನ ಮೂರು ಮೂರು ಜನರನ್ನು ಮನೆಗೆ ಕರೆದಿದ್ದರು ನನ್ನವರು.ಆಗ ಆಶಾ ಅವರಂತೆ ಬೈಯ್ಯುವ ಸಲಿಗೆಯೂ ಇರಲಿಲ್ಲ.

ಎರಡನೆಯ ಭಾಗ ಬದುಕಿನ ಕರಾಳ ವಾಸ್ತವದ ದರ್ಶನ. ಆದರೆ ಒಮ್ಮೊಮ್ಮೆ ಅದೂ ತಿರುವುಮುರುವಾಗುತ್ತದೆ.ನನ್ನ ಅಕ್ಕ ( ಓರಗಿತ್ತಿ) ಹದಿನಾರು ವರ್ಷದ ಮಗನ ಸಾವನ್ನು ಹತ್ತುವರ್ಷಗಳಾದರೂ ಜೀರ್ಣಿಸಿಕೊಳ್ಳಲಿಲ್ಲ.

ನಿಮಗೆ ಮುದ್ದಣ ಮನೋರಮೆಯರು ಇಷ್ಟ ಎಂದದ್ದನ್ನು ಓದಿ ತುಂಬಾ ಖುಷಿಯಾಯಿತು.ಅವರಿಬ್ಬರ ಸಂಭಾಷಣೆಯ ಭಾಗದ ಪಾಠವನ್ನು ಬಹಳ ಸಂತೋಷಪಟ್ಟು ಮಾಡಿದ್ದೇನೆ

ವಿರಹ ಎಲ್ಲರ ಬಾಳಿನಲ್ಲೂ ಇರಬೇಕು. ಆ ಸಂದರ್ಭವೇ ನಮ್ಮ ಆತ್ಮೀಯರ ಬಗ್ಗೆ ನಮಗಿರುವ ಭಾವನೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡುವುದು. ವಿರಹ ಅನುಭವಿಸಿದ ನಂತರ ಅವರು ಹಿಂದಿರುಗಿ ಬಂದಾಗ ನೋಡಿ.. ನೀವು ಇನ್ನೊಂದು ಬರಹ ಬರೆಯುವಿರಿ!!

ಚಂದ್ರಕಾಂತ ಎಸ್ said...

ನಿಮಗೆ ವಿದ್ಯಾರಶ್ಮಿಯವರ ಭೇಟಿಯಾಯಿತಂತೆ. ಅವರು ತಿಳಿಸಿದರು. ನಾನೇ ಇನ್ನೂ ಅವರನ್ನು ನೋಡಿಲ್ಲ!!

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ತುಂಬಾ ಚನ್ನಾಗಿ ಬರಿದಿದ್ದಿರಿ..
ಹುಟ್ಟು ಸಾವು ಬರಲೇಬೇಕು... ಮುಂದಿನ ಪೀಳಿಗೆಗಾಗಿ ಸಮಯ ಬಂದಾಗ ನಾನು ಜಾಗ ಕಾಲಿ ಮಾಡಲೇಬೇಕು .... :)

one small correction:
i think, u have written
"ಮತ್ತೊಬ್ಬ ಮಗನ ಮಾಡುವೆ ಮಾಡಬೇಕಿತ್ತು.."
instead of
"ಮತ್ತೊಬ್ಬ ಮಗನ ಮದುವೆ ಮಾಡಬೇಕಿತ್ತು.."

ತಪ್ಪಿದ್ದರೆ ಕ್ಷಮಿಷಿ
ಧನ್ಯವಾದಗಳು...

b.saleem said...

ಪ್ರಕಾಶ ಸರ್
ನಮ್ಮ ಸಾವನ್ನು " ನಮ್ಮ ಮಗನೂ" ನೋಡಲೇ ಬೇಕು....
ಸಾವು ಮತ್ತು ಪ್ರಿತಿಯ ಕುರಿತು ವಿವರಿಸಿದ ರೀತಿ ತುಂಬಾ ಮಾರ್ಮಿಕವಾಗಿ ನಿರೂಪಿಸಿದ್ದಿರಿ ಧನ್ಯವಾದಗಳು

Unknown said...

Ayyo mama nanage yava urgentu ille,,,innu bekadashtu varsha iddu ...sandharba bandaga neene edra bagge nanage helikodu!!!

Ittigecement said...

ಉಮೀ...

ನಿಜ ಉಮೀಯವರೆ... ದಾಂಪತ್ಯದಲ್ಲಿ ಸೊಬಗಿದೆ...

ಸವಿಯುವಷ್ಟು ರುಚಿಯಿದೆ.....

ದೈಹಿಕ ಆಕರ್ಷಣೆಗೆ ಮಿಗಿಲಾದ ಬಾಂಧವ್ಯವಿದೆ..

ದಿನಕಳೆದಹಾಗೆ ಅನುಬಂಧದ ಭಾವವೇ ಸೊಗಸಿದೆ..

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಮನಸು...

ಆ ಹುಡುಗರ ಹೆಸರು ಬದಲಿಸಿದ್ದೇನೆ..
ಅವರ ತಂದೆಯವರು ಅದೇ ರಾತ್ರಿ ಇಹಲೋಕ ತ್ಯಜಿಸಿದರು..

ನಮಗೆ ಸಾವೇ ಇಲ್ಲ ಅನ್ನೋ ರೀತಿ ವರ್ತಿಸುತ್ತೇವೆ...

ಇರುವ ನಾಲ್ಕುದಿನ ಜಗಳವೇಕೆ..

ಅಲ್ಲವಾ..?

ಅಗಲಿಕೆ ಬೇಸರ ತಂದಿದೆ..
ಫೋನ್ ಇದೆಯಲ್ಲ...!

ನಿಮ್ಮ ಶುಭ ಹಾರೈಕೆಗೆ ಕ್ರತಜ್ಞತೆಗಳು..

Ittigecement said...

ಆನಂದರಾಮ ಶಾಸ್ತ್ರಿಯವರೆ..

ಸರ್ ..
ನನ್ನ ಬ್ಲಾಗಿಗೆ ಸ್ವಾಗತ...

ನಿಮ್ಮ ಲೇಖನಗಳನ್ನು ಓದಿದ್ದೇನೆ..
ಚೆನ್ನಾಗಿರುತ್ತದೆ..
ನೀವು ಬ್ಲಾಗ್ ಲೋಕದಲ್ಲಿದ್ದೀರೆಂದು ತಿಳಿದಿರಲಿಲ್ಲ...

ಸಾಹಿತ್ಯ ಕ್ಷೇತ್ರ ನನಗೆ ಹೊಸದು..
ನನ್ನ ಮಿತ್ರರು ಇಲ್ಲಿಗೆ ಕರೆತಂದಿದ್ದರೆ..
ನನಗೆ ತಿಳಿದ ಹಾಗೆ ಬರೆಯುತ್ತಿರುವೆ...

ನಿಮ್ಮಂಥವರ ಮಾರ್ಗ ದರ್ಶನ ನನಗೆ ಅಗತ್ಯ..

ಬರುತ್ತಾ ಇರಿ ಹೀಗೆ..

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಅನಿಲ್...

ಸರಸ ವಿರಸ ಸಮರಸ ವಾಗಿದ್ದರೆ ಚೆನ್ನ....!

ಕರಗಸವಾದರೆ.. ನೀರಸವಾಗಬಹುದು ಅಲ್ಲವಾ?

ಪ್ರತಿಕ್ರಿಯೆಗೆ ವಂದನೆಗಳು..

Ittigecement said...

ಬಾಲು ಸಾಯಿಮನೆಯವರೆ...

ನನ್ನ ಬ್ಲಾಗಿಗೆ ಸ್ವಾಗತ...

ಹೆಂಗಸರು ಹೆಂಗಸರಿಗೇ ಸಪೋರ್ಟು ಮಾಡುತ್ತಾರೆ ಸ್ವಾಮಿ...!

ಊರಿಗೆ ಬಂದಾಗ ನಿಮ್ಮನ್ನು ಕಾಣುವೆ..

ದಾಂಡೇಲಿಯ ಹುಲಿಯ ಹೆಜ್ಜೆಯ ಲೇಖನ ಇಷ್ಟವಾಯಿತು...
ನಿಮ್ಮ ಬ್ಲಾಗ್ ವೈವಿದ್ಯಮಯವಾಗಿದೆ...

ಅಭಿನಂದನೆಗಳು...

Ittigecement said...

ಶರತ್....

ವಯಕ್ತಿಕ ಏರು ಪೇರುಗಳ ನಡುವೆಯೇ ಜೀವನ...

ಬಂದಿದ್ದನ್ನು ಎದುರಿಸಲೇ ಬೇಕಲ್ಲವೇ..

ಸಾಧಿಸಿ, ಸಾಧನೆ ಮಾಡಿದರೆ ಮೇಲಿಂದ ..

ಹರಸುವರು ನಮ್ಮನ್ನ....

ಶುಭವಾಗಲಿ....

ಪ್ರತಿಕ್ರಿಯೆಗೆ
ಧನ್ಯವಾದಗಳು...

Ittigecement said...

ನಿತಿನ್....

ನಿಮ್ಮ ಪ್ರತಿಕ್ರಿಯೆಗೆ...

ಉತ್ತರಿಸುತ್ತಾ ..
ಹೆಣ್ಣಿನ ಬಗೆಗೆ ಅಷ್ಟೆಲ್ಲ ಹೇಳಿದಿನಲ್ಲಾ...
ಹೆಣ್ಣು ಕುತೂಹಲ..
ಸುಂದರ..
ರಹಸ್ಯ....

ಊಹೆಗೂ ನಿಲುಕದ್ದು... ಎಂದೆಲ್ಲಾ...!

ಹಾಗಾಗಿ ಕೇಳಿದ್ದು..
ಮದುವೆಯಾಗಿದೆಯಾ,," ಎಂದು..

ಮೊದಲು ಮದುವೆಯಾಗುವ ನಿರ್ಧಾರ ಮಾಡಿ...
ಆಮೇಲೆ ಕೊರೆಯೋಣ...!

ಹ್ಹಾ...ಹ್ಹಾ...!

ಧನ್ಯವಾದಗಳು..

Unknown said...

:) ಪರವಾಗಿಲ್ಲ,ಈ ಲೇಖನದ ಒಕ್ಕಣಿಕೆ ವಿಭಿನ್ನವಾಗಿದೆ.
(Khushwant Sing)

Kishan said...

The bare truth about death...and your interpretation about how to face it is very commendable. My wife says always.. "ಸತ್ತವರು ವಾಪಸ್ ಬರುವುದೇ ಇಲ್ಲವಲ್ಲ.. ಅದನ್ನು ಜೀರ್ಣಿಸಿಕೊಳ್ಳುವುದು ಬಹಳ ಕಷ್ಟ. ಸತ್ತವರು ಒಮ್ಮೊಮ್ಮೆಯಾದರೂ, ಅಪರೂಪಕ್ಕಾದರೂ ಹಲವು ವರ್ಷಕ್ಕೊಮ್ಮೆಯಾದರೂ ಬಂದು ಹೋಗಬೇಕಾಗಿತ್ತು...ಭಗವಂತ ಈ ಥರ ಕಾನೂನನ್ನು ಮಾಡಬೇಕಿತ್ತು !"
I somehow vote for this thought !

On the other hand, I totally agree and know the pain of separation with our 'better half'. I go through this almost every year. The inner pain which is experienced while coming back after sending her off.. while entering the "empty" house.. dinner with TV.. its different.

Ittigecement said...

ಚಂದ್ರಕಾಂತರವರೆ..

ನಿಮ್ಮ ಪ್ರತಿಕ್ರಿಯೆ... ನಿಮ್ಮ ಬ್ಲಾಗಿನ ಲೇಖನದಷ್ಟೇ ಸೊಗಸಿರುತ್ತದೆ..
ನನ್ನ "ಮಿಲತಿ ಹೈ ಜಿಂದಗೀ ಮೇ..ಮೊಹಬ್ಬತ್ ಕಭೀ.. ಕಭೀ.."
ಲೇಖನಕ್ಕೆ ನೀವು ಕೊಟ್ಟ ಪ್ರತಿಕ್ರಿಯೆ ಆಗಾಗ ನಾನು ಓದುತ್ತಿರುತ್ತೇನೆ..
ಪ್ರತಿಕ್ರಿಯೆಯಲ್ಲಿ.. ಅನುಭವ, ಅಧ್ಯಯನ ಕಾಣಬಹುದು...

ಸಾವು ಅನಿವಾರ್ಯ ಅಂತ ಗೊತ್ತಿದ್ದರೂ ನಮ್ಮ ನಡೆ ನುಡಿ ಬದಲಾಗಿವದಿಲ್ಲವಲ್ಲ...!

ನೀವೆನ್ನುವ ಹಾಗೆ..
ಅಗಲಿಕೆ ವಿರಹ ಆದಾಗಲೇ..
ಪ್ರೇಮದ ಪಕ್ವತೆ ಹೆಚ್ಚಾಗುವದು..

ಹದಿನೈದು ವರ್ಷದಲ್ಲಿ ಇದೇ ಮೊದಲ ಬಾರಿ...
ಈ ಭಾವ ಅನುಭವಿಸುತ್ತಿದ್ದೇನೆ...
(ಮದುವೆಯಾದ ಶುರುವಿನಲ್ಲಿ ಒಮ್ಮೆ "ಅಗಲಿಕೆ" ಆಗಿತ್ತು ಮುಂದೊಮ್ಮೆ
ಬ್ಲಾಗಿನಲ್ಲಿ ಬರೆಯುವಂಥ ವಸ್ತು ಅದು)

ಚಂದದ ಪ್ರತಿಕ್ರಿಯೆಗೆ..
ಹ್ರದಯ ಪೂರ್ವಕ ಧನ್ಯವಾದಗಳು...

Vani Satish said...

ಲೇಖನ ಚೆನ್ನಾಗಿದೆ.......!!!!!
ನನಗೆ ಈ ಲೇಖನದ "title" ತುಂಬಾನೇ ಹಿಡಿಸಿತು......

ಜಿ.ಎಸ್.ಬಿ. ಅಗ್ನಿಹೋತ್ರಿ said...

ಮತ್ತದೇ ನೆನಪು... ಜತೆಗೆ ನನಗೂ...

Ittigecement said...

ಚಂದ್ರಕಾಂತರವರೆ..

ಈ ಬ್ಲಾಗ್ ಪ್ರಪಂಚ ವಿಚಿತ್ರವಾಗಿದೆ..

ನಾವು ಬ್ಲಾಗಿನ ಲೇಖನ ಓದುತ್ತ, ಪ್ರತಿಕ್ರಿಯೆ ಕೊಡುತ್ತ ..
ನೋಡದೇ ಆತ್ಮೀಯತೆ ಬೆಸೆಯುತ್ತದೆ..

ನನಗೆ ತುಂಬಾ ಸ್ನೇಹಿತರನ್ನು ಕೊಟ್ಟಿದೆ..

ವಿದ್ಯಾ ರಷ್ಮಿಯವರು ಸಿಕ್ಕಿದ್ದರು..
ಅವರೇ ಪರಿಚಯ ಮಾಡಿಕೊಂಡರು..

ಮತ್ತೆ ಈಮೇಲ್ ಮಾಡುವೆನೆಂದು ಹೇಳಿದ್ದಾರೆ..

ಇಟ್ಟಿಗೆಸಿಮೆಂಟಿನಿಂದಾಗಿ
ನನ್ನ ಪರಿಚಯವೂ ಅವರಿಗೆ ಇತ್ತಂತೆ..!

ಮತ್ತೊಮ್ಮೆ ನಿಮಗೆ ಧನ್ಯವಾದಗಳು...

Ittigecement said...

ಶಿವ ಪ್ರಕಾಶ್..

ಸಾವೆಂದರೆ ಭಯವೂ ಕೂಡ...
ಸಾವಿನ ನಂತರ ಏನೆಂದು ಯಾರಿಗೂ ಗೊತ್ತಿಲ್ಲ...
ಅದು ಅನಿವಾರ್ಯ ಕೂಡ...

ನೀವು ಅಕ್ಷರ ದೋಷವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು..
ಅದನ್ನು ಆಗಲೇ ಸರಿಪಡಿಸಿದ್ದೇನೆ..
ನೀವು ಹೇಳುವದು ತಪ್ಪಿಲ್ಲ..

ಹಿರಿಯ ಓದುಗರೊಬ್ಬರು ನನಗೆ ಈಮೇಲ್ ಮಾಡಿ ಧಮಕಿ ಹಾಕುತ್ತಾರೆ...
ಈ ರೀತಿಯ ತಪ್ಪುಗಳಿದ್ದಲ್ಲಿ...

ಲೇಖನ ಮೆಚ್ಚಿದ್ದಕ್ಕೆ..
ತಪ್ಪನ್ನು ತಿಳಿಸಿದ್ದಕ್ಕೆ..

ಧನ್ಯವಾದಗಳು...

Ittigecement said...

ಸಲೀಮ್....

ನಿಮ್ಮ ಫೋಟೊಗ್ರಫಿಯ ಬಗೆಗೆ ಶಿವು ಹೇಳುತ್ತಿರುತ್ತಾರೆ..
ನೀವು ನಿಮ್ಮ ಬ್ಲಾಗಿನಲ್ಲಿ ಹಾಕಿ..
ನಮಗೆಲ್ಲ ನಿಮ್ಮ ಕಲೆಯ ಬಗೆಗೆ ತಿಳಿಸಿರಿ..
ಲೇಖನ ಮೆಚ್ಚಿದ್ದಕ್ಕೆ

ಧನ್ಯವಾದಗಳು...

Ittigecement said...

ಪ್ರಶಾಂತು...

ಹ್ಹಾ...ಹ್ಹಾ...!

ಓಕೆ...
ನೀನು ಹೇಳಿದ ಹಾಗೇ ಆಗಲಿ...

(ಆಗಾಗ ಮಧ್ಯದಲ್ಲಿ ಟ್ಯೂಷನ್ ಕೊಡುತ್ತಿರುತ್ತೇನೆ..!!)

Ittigecement said...

ಖುಷಿಯವರೆ...

ಅರ್ಥವಾಯಿತು...

ಏನುಮಾಡಲಿ..?
ಅಡಪೋಟ್ರು ವಿಷಯವೇ ಹಾಗಿದೆ..!

ಒಕ್ಕಣಿಕೆ ವಿಭಿನ್ನವಾಗಿದೆ ಸರಿ..

ಲೇಖನ ಹೇಗಿತ್ತು..?

ಬಹುದಿನಗಳ ನಂತರ ಬಂದೀರಲ್ಲ..!

Ittigecement said...

ಕಿಶನ್...

ಸತ್ತವರು ಆಗಾಗ ಬರುತ್ತಿದ್ದರೆ ಅವರಿಗಾಗಿ ಯಾರೂ ಅಳುವುದೇ ಇಲ್ಲ...!
ಅಪರೂಪದ ನೆಂಟರ ಹಾಗಾಗಿ ಬಿಡುತ್ತಾರೆ..

ನನಗೆ ತಿಳಿದ ಹಾಗೆ ಪೌರಾಣಿಕದಲ್ಲಿ "ಕಂಸ"ನಿಗೆ ಮಾತ್ರ ತನ್ನ ಸಾವು ಗೊತ್ತಿತ್ತು..
ದೇವಕಿಯ "ಅಷ್ಟಮ ಗರ್ಭದಿಂದ"...!

ಸಾವು ಗೊತ್ತಾದ ಮೇಲಿನ ಬದುಕು..
ಹೇಗೆ ಜೀವಿಸರಬಹುದು ಆತ..?

ಬಹಳ ಕಾಡುತ್ತದೆ..
ಕಂಸನ ಬಗೆಗೆ ಒಮ್ಮೆಯಾದರೂ ಬರೆಯಬೇಕೆನಿಸುತ್ತದೆ..

ಹೆಂಡತಿ, ಮಕ್ಕಳೊಡನೆಯ ಬದುಕಿನ ..
ಹೊರತಾಗಿನ ಪ್ರಪಂಚ ನಮಗೆ ಗೊತ್ತಿರುವದಿಲ್ಲ..
ನನಗೂ ಕೆಲವು ಸ್ನೇಹಿತರಿದ್ದಾರೆ..
ಹೆಂಡತಿ ಮಕ್ಕಳನ್ನು ಬಿಟ್ಟು ಆರಾಮಾಗಿ..
ಸ್ನೇಹಿತರೊಡನೆ ಸುತ್ತಾಡುತ್ತಿರುತ್ತಾರೆ..
ಹೆಂಡತಿಯನ್ನು ಅವರೆ "ತವರಿಗೆಂದು" ಆಗಾಗ ಕಳುಹಿಸುತ್ತಿರುತ್ತಾರೆ..!

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..

Ittigecement said...

ವಾಣಿಯವರೆ...

ಟೈಟಲ್ ಇಷ್ಟವಾಯಿತಾ...?

ಪ್ರೀತಿ, ಪ್ರೇಮವೆಲ್ಲ ಇದ್ದಿದ್ದಕ್ಕೆ...
ನನಗೂ ಇಷ್ಟವಾಯಿತು..

ಆ ಗುದ್ದೂ ಕೂಡ..!

ಲೇಖನ ಮೆಚ್ಚಿದ್ದಕ್ಕೆ..ಧನ್ಯವಾದಗಳು.

Ittigecement said...

ಅಗ್ನಿ....

ನನ್ನ ಬ್ಲಾಗಿಗೆ ಸ್ವಾಗತ...

ನಿಮ್ಮ ಬ್ಲಾಗಿಗೂ ಹೋಗಿ ಬಂದೆ ಚೆನ್ನಾಗಿದೆ...

ಹೀಗೆ ಬರುತ್ತಾ ಇರಿ..

ಮೆಚ್ಚುಗೆಗೆ ಧನ್ಯವಾದಗಳು..

ಧರಿತ್ರಿ said...

ಪ್ರಕಾಶ್ ಸರ್...
'ನಿಮ್ಮಾಕೆಯ ಗುದ್ದು ಮತ್ತು ಪ್ರೀತಿ..' ಲೇಖನ ಓದಿದೆ. ಚೆನ್ನಾಗಿತ್ತು ..

ದಿನದಿನವೂ ಖುಷಿಯಾಗಿರಲಿ....

ಯುಗಾದಿ ಹಬ್ಬದ ಶುಭಾಶಯಗಳು...

ಆಶಿಸ್ ಗೂ , ಎಲ್ಲರಿಗೂ ನನ್ನ ನೆನೆಕೆಗಳನ್ನು ತಿಳಿಸಿ
-ಧರಿತ್ರಿ

Geetha said...

ನಮಸ್ಕಾರ ಸರ್,

ಬಹಳ ಲೇಟಾಗಿ ಓದುತ್ತಿರುವೆ.ತುಂಬ ಚೆನ್ನಾಗಿದೆ ಲೇಖನ. ಲೇಖನ ಓದುವಾಗ ನಡೆಯುವುದನ್ನೆ ನೋಡುತ್ತಿರುವ ಹಾಗೆ ಅನಿಸುತ್ತದೆ.ಬರಹ ’ಸೈನ್ ವೇವ್’ ನ ಹಾಗಿದೆ...ಎಂದಿನಂತೆ ಒಂದೆ ಬರಹದಲ್ಲಿ ಸಿಹಿ, ಕಹಿ ಎಲ್ಲ ಸೇರಿಸಿರುವಿರಿ.

ಮತ್ತು
ನಿಮಗೆ, ನಿಮ್ಮವರಿಗೆಲ್ಲ ಯುಗಾದಿಯ ಶುಭಾಶಯಗಳು

Ittigecement said...

ಧರಿತ್ರಿ...
ನಿಮಗೂ ಸಹ

ಉಗಾದಿ ಹಬ್ಬದ ಶುಭಾಶಯಗಳು...

ವಿರೋಧಿನಾಮ ಸಂವತ್ಸರವು ಸುಖ ಶಾಂತಿ ಸಮ್ರುದ್ಧಿಯನ್ನು ತರಲಿ...

ಧನ್ಯವಾದಗಳು..

Ittigecement said...

ಗೀತಾರವರೆ..

ಬಹಳ ದಿನಗಳಾದವು ನಿಮ್ಮ ಬ್ಲಾಗಲ್ಲಿ ಪೋಸ್ಟ್ ನೋಡದೆ...

ಈ ಯುಗಾದಿಯು..
ಸುಖ, ಶಾಂತಿ ಸಮ್ರುದ್ಧಿಯನ್ನು ತರಲಿ..
ನಿಮ್ಮೆಲ್ಲ
ಆಸೆ, ಆಕಾಂಕ್ಷೆಗಳನ್ನು ಈಡೇರಿಸಲಿ...

ಲೇಖನಮೆಚ್ಚಿದ್ದಕ್ಕೆ ಧನ್ಯವಾದಗಳು..

ಅಂತರ್ವಾಣಿ said...

"ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ....."

ಕವನ ಜ್ಞಾಪಕವಾಯಿತು.

ಸುಪ್ತದೀಪ್ತಿ suptadeepti said...

ಪ್ರಕಾಶ್,
ಸಾವಿನ ಕನ್ನಡಿಯಲ್ಲಿ ಬದುಕಿನ ಪ್ರತಿಫಲನ, ಕಟುಸತ್ಯ ದರ್ಶನ. ಹಿನ್ನೆಲೆ-ಮುನ್ನೆಲೆಗಳ ಘರ್ಷಣೆಯಲ್ಲಿ ಪ್ರೀತಿಯ ಗುದ್ದು, ಸಾಂತ್ವನ. ಇದಲ್ಲವೇ ಬದುಕು?

ರಾಕೇಶ್ ಕುಮಾರ್ ಕಮ್ಮಜೆ said...

bhale sogasaagide

Ittigecement said...

ಅಂತರ್ವಾಣಿ...

ಎಷ್ಟು ಸೊಗಾಸಾಗಿದೆ ಆ ಕವನ...!!

ಹೆಂಡತಿ ಮನೆಯಲ್ಲಿರದಿದ್ದರೆ ನಾನು ಒಬ್ಬ ಬಡಪಾಯಿ...!

ಲೇಖನ ಮೆಚ್ಚಿದ್ದಕ್ಕೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು...!

Ittigecement said...

ಸುಪ್ತದೀಪ್ತಿಯವರೆ...


ನಾನು ಎಷ್ಟೆಲ್ಲ ಕಷ್ಟಪಟ್ಟು ಬರೆದಿದ್ದನ್ನು ..
ನಾಲ್ಕು ಸಾಲುಗಳಲ್ಲಿ ಬರೆದು ಬಿಟ್ಟೀರಲ್ಲ..
ಇದು ಪ್ರತಿಭೆ...
ನಿಮ್ಮ ಪ್ರತಿಕ್ರಿಯೆ ಇಷ್ಟವಾಯಿತು...

ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು...

ಹೀಗೆ ಬರುತ್ತಿರಿ...

Ittigecement said...

ರಾಕೇಶ್....

ನನ್ನ ಬ್ಲಾಗಿಗೆ ಸ್ವಾಗತ..

ನಿಮ್ಮ ಬ್ಲಾಗಿಗೂ ಹೋಗಿ ಬಂದೆ..
ನಿಮ್ಮ ಬರಹ ಇಷ್ಟವಾಗುತ್ತದೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..

ಹಳೆಯ ಲೇಖನಗಳನ್ನೂ ದಯವಿಟ್ಟು ಓದಿ ...

ಹೀಗೆ ಬರುತ್ತಾ ಇರಿ...

ಭಾರ್ಗವಿ said...

ನಗುವಿನಿಂದ ಶುರುವಾಗಿ ,ಅಳಿಸಿ, ಮತ್ತೆ ನಗಿಸಿದ ಲೇಖನ.ಚೆನ್ನಾಗಿದೆ.ನಿಮಗಿಷ್ಟವಾದ ಗುದ್ದು ಆಗಾಗ ಸಿಗುತ್ತಿರಲಿ:-).

ಚಿತ್ರಾ said...

Prakashanna,

chennagiddu. nagisuttira jotege alisibiduttira neevu !

'ನಾವಿರುವಷ್ಟು ದಿನ ನಮ್ಮ ಸಂಗಡ ಇದ್ದಾರಲ್ಲ...
ಅವರೊಡನೆ ಪ್ರೀತಿಯಿಂದ ಇದ್ದು ಬಿಡಬೇಕು...!
ಎಷ್ಟು ಪ್ರೀತಿ ಮಾಡ ಬೇಕೋ ಮಾಡಬೇಕು..

ನಾಳೆ ನೋಡಿಲ್ಲವಲ್ಲ...! '
yako tale koreyuttide ee vaakya

Prabhuraj Moogi said...

ಹೃದಯದ ವಿಷಯದ ಬಗ್ಗೆ ಹೃದಯ ತುಂದಿ ಬರೆದಿದ್ದೀರಿ, ಬ್ಲಾಗು ಕೆಲ್ಸ ಮನೆ ಅಂಥ ಹೇಗೆ ನಿರ್ವಹಿಸುತ್ತೀರೊ, ಲೇಖನ ಓದಿ ಎಲ್ಲರಿಗೂ ಕಾಮೆಂಟು ಬರೆಯುತ್ತೀರಿ, ನನಗಂತೂ ಗೊತ್ತಿಲ್ಲ, ಎನಾದ್ರೂ ಟಿಪ್ಸ ಇದ್ರೆ ಹಂಚಿಕೊಳ್ಳಿ, ನನಗೂ ಸಹಾಯವಾದೀತು...

ಸುಧೇಶ್ ಶೆಟ್ಟಿ said...

ತು೦ಬಾ ಇಷ್ಟವಾಯಿತು ಪ್ರಕಾಶಣ್ಣ...

ಮತ್ತೆ ಅರುಣನ ತ೦ದೆ ಹೇಗಿದ್ದಾರೆ ಈಗ?

Unknown said...

ಬರಹ ನಾನೂ ಓದಿದೆ... ಮನೆಯವಳಿಗೂ ತೋರಿಸ್ದೆ... ನನಗೂ ಒಂದು ಗುದ್ದು ಬಿತ್ತು... :-)

Ittigecement said...

ಭಾರ್ಗವಿಯವರೆ...

ಬಹಳ ದಿನಗಳ ನಂತರ ಬರುತ್ತಿದ್ದೀರಿ....

ನನ್ನಾಕೆಯ ಗುದ್ದು ಆಗಾಗ ಬೀಳುತ್ತಿರುತ್ತದೆ..

ಅದರಲ್ಲಿ ಜಾಸ್ತಿ ಪ್ರೀತಿಯಿದ್ದಷ್ಟು ಜೋರಾಗಿರುತ್ತದೆ...

ಆಗಾಗ ಬರುತ್ತಿರಿ..

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಚಿತ್ರಾ....

ದಾಂಪತ್ಯದಲ್ಲಿ ಸಣ್ಣ ತಕರಾರು ಜಗಳ ಇರಬೇಕಂತೆ...
ಊಟದಲ್ಲಿರೊ ಉಪ್ಪಿನಕಾಯಿಯಂತೆ..
ಊಟದ ರುಚಿ ಹೆಚ್ಚಿಸಲು....

ಆಅದರೆ "ಉಪ್ಪಿನ ಕಾಯಿಯದೇ ಊಟವಾಗಬಾರದಲ್ಲವೆ..?"

ನಲವತ್ತು ದಾಟಿದ ಮೇಲೆ ಈಗೆಲ್ಲ ಸಾಯುವ ವಯಸ್ಸು...

"ಇದ್ದಾಗ ಪ್ರೀತಿ ಮಾಡಿಬಿಡಬೇಕು..
ಸತ್ತ ಮೇಲೆ ಅತ್ತರೆ ಏನು ಪ್ರಯೋಜನ..? ಅಲ್ಲವಾ..?

ನೀವು ಯಾವಾಗಲಾದರೂ ಬನ್ನಿ ಸ್ವಾಗತ ಇದೆ..
ಬರದೆ ಇರಬೇಡಿ ಈ ಅಣ್ಣನ ಮನೆಗೆ....

ಧನ್ಯವಾದಗಳು...

Ittigecement said...

ಪ್ರಭು...

ನಿಜ ಕಷ್ಟ....
ನನಗೂ ಅನಿಸಿತ್ತು...
ಮಾಡುತ್ತ ಹೋದರೆ ಆಗ್ತಾ ಇದೆ... ನಿಭಾಯಿಸುತ್ತಾ ಇದ್ದೇನೆ..

ಇದರಲ್ಲಿ ರಹಸ್ಯವೇನೂ ಇಲ್ಲ...

ಡ್ರೈವಿಂಗ್ ಮಾಡುವಾಗ ನನ್ನ ಮಿತ್ರ "ಮಲ್ಲಿಕಾರ್ಜುನ ಬಳಿ

ನಾನು ಘಟನೆಗಳನ್ನು ಹೇಳುತ್ತೇನೆ... ಕೊರೆಯುತ್ತೇನೆ...

ಅವರು ಇದನ್ನು ಈ ವಾರ ಇದನ್ನು ಹಾಕಿ ಬಿಡಿ" ಅಂದರೆ ..ಹಾಕುತ್ತೇನೆ..

ನನ್ನ ಮೊದಲ ಓದುಗರು ನನ್ನಾಕೆ, ನನ್ನ ಮಗ...

ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು..

ಪ್ರೋತ್ಸಾಹ ಹೀಗೆಯೇ ಇರಲಿ....

Ittigecement said...

ಸುಧೇಶ್...
ವರುಣ್ ಸಹೋದರರ ಹೆಸರು ಬದಲಿಸಿದ್ದೇನೆ..
ಅವರಿಬ್ಬರ ಬ್ಲಾಗ್ ಇದೆ.."ತುಂಬಾ ಜನಪ್ರಿಯ ಅವರ ಬ್ಲಾಗ್ ಗಳು"

ಅವರ ತಂದೆ ಅದೇ ರಾತ್ರಿ ತೀರಿಕೊಂಡಿದ್ದಾರೆ...
ಅವರ ಅನುಮತಿ ಕೇಳಲಿಲ್ಲ...
ಹಾಗಾಗಿ ಹೆಸರು ಹಾಕಲಿಲ್ಲ...

ಧನ್ಯವಾದಗಳು...

Ittigecement said...

ರವಿಯವರೆ...

ಗುದ್ದು ಪ್ರೀತಿಯ ದ್ಯೋತಕ.....
ಬೀಳಲಿ ಬಿಡಿ....
ನನ್ನಾಕೆಗೆ ನಾನು ಈ ಲೇಖನ ಬರೆದದ್ದು "ಗೋಕರ್ಣದಲ್ಲೇ " ಗೊತ್ತಾಗಿದೆ..
ಬಂದವರೇ ನನಗೂ ಒಂದು ಗುದ್ದು ಹಾಕಿದ್ದಾರೆ...

ಗುದ್ದು ಆಗಾಗ ಬೀಳುತ್ತಿರಬೇಕು....
ಪ್ರೀತಿ, ಪ್ರೇಮದ ಸಲ್ಲಾಪ ಆಗುತ್ತಿರುರಬೇಕು...

ಬರುತ್ತಾ ಇರಿ...
ಧನ್ಯವಾದಗ್ಳು...

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ತೀರ ತಡವಾಗಿ ಬರ್ತಿದ್ದೇನೆ ಕ್ಷಮೆ ಇರಲಿ....
ಮದುವೆ ಅಂದರೆ ಹೌಹಾರುತ್ತಿದ್ದ ನನಗು ಸ್ವಲ್ಪ ಮದುವೆ ಆಗೋ ಧೈರ್ಯ ತಂದಿದ್ದೀರಿ, ಧನ್ಯವಾದಗಳು :)
ಬದುಕಿನ ಮಜಲನ್ನು ಮಾರ್ಮಿಕವಾಗಿ ವಿವರಿಸಿದ ಬಗೆ ಅದ್ಭುತ...

Guruprasad said...

ಪ್ರಕಾಶ್,
ತುಂಬ ಚೆನ್ನಾಗಿ ಇದೆ... ಎಲ್ಲವನ್ನು ಒಟ್ಟಿಗೆ ನಿಮ್ಮದೇ ಶೈಲಿನಲ್ಲಿ ಹೇಳಿದ್ದಿರ,, ತಡವಾಗಿ ನಿಮ್ಮ ಈ ಲೇಖನ ವನ್ನು ನೋಡುತೀದೇನೆ.. ಹೀಗೆ ಯಾವಾಗಲು ಸಂತೋಷದಿಂದ ಇರಿ...
ಗುರು

Ittigecement said...

ರಾಜೇಶ್...

ಯಾವಾಗಲಾದರೂ ಬನ್ನಿ....
ದಯವಿಟ್ಟು ಬನ್ನಿ...

ಓದಿ ಪ್ರತಿಕ್ರಿಯಿಸುತ್ತೀರಲ್ಲ...
ಅದು ನನಗೆ ಟಾನಿಕ್...

ನಮ್ಮ ಸಂಪ್ರದಾಯದಲ್ಲಿ, ಸಂಸ್ಕ್ರತಿಯಲ್ಲಿನ

ದಾಂಪತ್ಯ ಬಹಳ ಸೊಗಸಿದೆ...
ಸವಿಯುವ ರೀತಿ ಇಬ್ಬರಿಗೂ..
ತಿಳಿದಿದ್ದಿರೆ ಸ್ವರ್ಗಕ್ಕೆ ಕಿಚ್ಚಿಡ ಬಹುದು..
"ಸರ್ವಜ್ಞನ ತ್ರಿಪದಿ ನೆನಪಾಯಿತಲ್ಲವೇ...?

ಆದಷ್ಟು ಬೇಗ ನಮಗೆಲ್ಲ
ಸಿಹಿಯೂಟ ಹಾಕಿಸಿ ಬಿಡಿ...

ನಮ್ಮನ್ನು ಕರೆಯುವಿರಲ್ಲ...?

ಧನ್ಯವಾದಗಳು...

Ittigecement said...

ಗುರು....

ಅಗಲುವಿಕೆ, ವಿರಹ...

ಪ್ರೇಮಕಾವ್ಯದ ಕಹಿ ಬರಹವಂತೆ...

ಲೇಖನ ಮೆಚ್ಚಿದ್ದಕ್ಕೆ

ವಂದನೆಗಳು..

ಯಾವಾಗಲಾದರೂ ಬನ್ನಿ...

ಓದಿ.. ಪ್ರೋತ್ಸಾಹಿಸಿ...

Srikanth Manjunath said...

ಜಗತ್ತಿನಲ್ಲಿ ಮೊದಲು ಹುಟ್ಟಿದ್ದು ಪ್ರೀತಿ..ನಂತರ ರಾಗ ಭಾವಗಳು..ಬೆಸುಗೆ ಹೆಚ್ಚಿದಂತೆಲ್ಲ..ರಾಗ, ಭಾವಗಳು ಹೃದಯದ ಖಾಲಿ ಮನೆ ಸೇರಿಬಿಡುತ್ತವೆ..ಅಲ್ಲಿ ಪ್ರೀತಿ ಬಂದು ಆವರಿಸಿಕೊಂಡಾಗ...ರಾಗ ವಿರಾಗವಾಗುತ್ತದೆ..ಭಾವ ಅಭಾವ ದಿಂದ ನರಳುತ್ತದೆ..ಪ್ರೀತಿ ಅದೆಲ್ಲವನ್ನು ಹೊಡೆದು ಓಡಿಸುತ್ತದೆ..ಇಲ್ಲಿ ಮುಖ್ಯವಾದದ್ದು ಆ ಪ್ರೀತಿಯನ್ನು ಆದರ ಸಹಿತ ಬರಮಾಡಿಕೊಳ್ಳುವುದು...ಸುಮಧುರ ಲೇಖನ...ಹಳೆಯದಾದರೇನು ನೆನಪುಗಳ ಮೆಲುಕು..ಗೆಜ್ಜೆಯ ಫಲುಕು ಎರಡು ಚಂದ...ಸೊಗಸಾದ ಲೇಖನ ಪ್ರಕಾಶಣ್ಣ..(ಲೇಖನ ಬಿಡುಗಡೆಗೊಂಡ ಮೂರುವರುಶಗಳ ತರುವಾಯ ನನ್ನ ಕಾಮೆಂಟ್ ಹುರ್ರಾ ನಾನು ಒಬ್ಬ ಲೇಟ್ ಲತೀಫ್)

ಜಲನಯನ said...

ಅತ್ಮೀಯರು ಗೆಳೆಯರು..ಮನನೊಂದರೆ ಮನದ ತುಡಿತ ನೋವು ಎಲ್ಲಾ ಅವರ ಸ್ಥಾನದಲ್ಲಿ ನಮ್ಮನ್ನೇ ಇಟ್ಟು ತೂಗುತ್ತದೆ.. ಇದು ಪ್ರೀತಿಯಿಂದ ಗುದ್ದಿದ ಆ ಮಮತಾಮಡದಿಯಲ್ಲಿ ಮಂಥಿತವಾಗಿ ನುಸು ಕೋಪ ಅಪರಿಮಿತ ಆಪ್ಯಾಯತೆ, ಕಾಳಜಿ ಎಲ್ಲಾ ಬಾಹುಬಂಧನಕ್ಕೆ ನೀಡಿತ್ತು.. ಜೀವನವೇ ಹೀಗೆ,, ಒಬ್ಬರ ಸುಖ ದುಃಖಗಳಿಗೆ ಸ್ಪಂದಿಸದೇ ಇದ್ದರೆ ಮರದ ಕೊರಡಿಗೂ ನಮಗೂ ವ್ಯತ್ಯಾಸವಿರದು..
ಭಾವನೆಗಳ ಅಪರಿಮಿತ ಅನುವಾದ ನಿನ್ನ ಲೇಖನದಲ್ಲಿದೆ ಪ್ರಕಾಶೂ...ಬಹಳ ಚನ್ನಾಗಿದೆ.

Ittigecement said...

ಈ ಲೇಖನ ಬರೆದು ಮೂರು ವರ್ಷಗಳೇ ಕಳೆದವು...

ಈ ದಿನ ನನ್ನಾಕೆಯ ಜನುಮ ದಿನ...

ನಮ್ಮಿಬ್ಬರ ಬದುಕು ಶುರುವಾಗಿ ಹದಿನೇಳು ವರ್ಷಗಳೆ ಆಯಿತು...

ಬದುಕು ಬೋರಾಗದಂತೆ ಮಾಡಿದ ಅವಳಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು...

ಸಣ್ಣ ಪುಟ್ಟ ಮುನಿಸು.. ಬೇಸರವಾದರೂ..
ಅದನ್ನು ಮುಂದುವರಿಸದೇ..

ಸದಾ ನನಗೆ ಉತ್ಸಾಹ ತುಂಬುವ ಬಾಳಸಂಗಾತಿ ಪಡೆದ ನಾನೇ ಧನ್ಯ...

ಮತ್ತೊಮ್ಮೆ ಈ ಲೇಖನ ಓದಿ
ಪ್ರೋತ್ಸಾಹಿಸುವ ನಿಮಗೆಲ್ಲರೂ ನನ್ನ ಪ್ರೀತಿಯ ವಂದನೆಗಳು...

bilimugilu said...

Prakash Ji,
Nimma baraha chendavo, nimma chintane, jeevanavanna noduva shaili chendavo...ondakkondu paipoti nadeside.
Asha avrige huttu habbada shubhashayagalu.
"ಪ್ರತಿಯೊಬ್ಬರೂ ಭರತ, ಅರುಣರ ಸ್ಥಾನದ ಅನುಭವ ಅನುಭವಿಸಲೇ ಬೇಕು.."....ee maatu akshara saha nija.
Saavu shaashvata.... saaviginta munche, badukibidabekaagide!.... tumbaa ishtavaaytu....

ರಾಜಿಲೋಕೇಶ್ said...

ಪ್ರಕಾಶಣ್ಣ ಲೇಖನ ತುಂಬಾ ಚೆನ್ನಾಗಿದೆ. ಬಾಳಿನಲ್ಲಿ ಗುದ್ದುಗಳು(ಮೊದಲು ಕೊಟ್ಟ ಗುದ್ದುಗಳು) ಇದ್ದಲ್ಲಿ ಮಾತ್ರ ಎರಡನೆ ಸಲ ನೀವು ತಿಂದ ಗುದ್ದು ಮಹತ್ವ ಪಡೆಯುತ್ತದೆ.
ನಾನು ಗಮನಿಸಿದಂತೆ ಸಂಯಮಕ್ಕೆ ಇನ್ನೊಂದು ಹೆಸರೇ ಹೆಣ್ಣು ಅನ್ನೋದನ್ನು ಸೂಕ್ಷ್ಮವಾಗಿ ತಿಳಿಸಿದ್ದಿರಿ. ತನ್ನ ಏನೇ complaints ಇದ್ದರು.....
ಭರತ ಮತ್ತು ಅರುಣರ ಆಗಮನದಿಂದ ಆಶತ್ತಿಗೆ ಅದನ್ನೆಲ್ಲ ಬದಿಗೊತ್ತಿ ಅವರ ಭಾವನೆಗೆ ಸ್ಪಂದಿಸಿದರು ಅನ್ನೋದನ್ನು ಚೆನ್ನಾಗಿ ತಿಳಿಸಿದ್ದಿರಿ...
ಧನ್ಯವಾದಗಳು ..