Friday, January 23, 2009

ಅಕ್ಕ ನೋಡಿದ.....ಆಗ್ರಾದ ಹುಡುಗಿ... .!!

ಜೆಯಲ್ಲಿ ಮತ್ತೆ ಬೆಂಗಳೂರಿಗೆ ಬಂದಿದ್ದೆ..
ಮದುವೆಯ "ಹುಡುಗಿ" ಫಿಕ್ಸ್ ಆಗಿದ್ದಳು.....


ಆಗ್ರದಲ್ಲಿ ಬೆಳೆದು ..., ಓದಿದ ಹುಡುಗಿ ..

ಒಮ್ಮೆ ಅಕ್ಕನ ಮನೆಗೆ ಆಗ್ರಾಕ್ಕೆ ಹೋದಾಗ ನೋಡಿ ಮನಸೋತಿದ್ದೆ...!

ಅಕ್ಕ ನೋಡಿ.. ನಿಶ್ಚಯ ಮಾಡಿದ ಹುಡುಗಿ....!

ಪತ್ರದ ಮೂಲಕ ಪ್ರೇಮ , ವಿರಹ ಹಂಚಿಕೊಳ್ಳುತ್ತಿದ್ದೇವು...

ದಿನಕ್ಕೊಂದು ಪತ್ರ... ಕೊನೆಕೊನೆಗೆ..

"ಇದು ಪತ್ರ .. ನಂ... ೨೫೪ ಕ್ಕೆ ಉತ್ತರ" ಎಂದೆಲ್ಲ ಬರೆಯುತ್ತಿದ್ದೇವು..

ವಿರಹಾ..ನೂರು..ನೂರು ತರಹಾ...
ವಿರಹಾ..ಪ್ರೇಮ ಕಾವ್ಯದ ...
ಕಹಿ ... ಬರಹಾ.....

ಯಾವ ಕವಿ ಕಲ್ಪನೆಯಿಂದ ಬರೆದನೋ..!
ಬಹಳ ಅನುಭವಿಸಿ ಬರೆದ ಸೊಗಸಾದ ಕವನ.. ಹಾಡು...!

ದೂರ .. ಅಗಲಿಕೆ.. ವಿರಹ...
ಹೇಳಲಾಗದ ಅನುಭಾವ ...

ಅದು.. ನೋವಾದರೂ... ಹಿತವಾಗಿತ್ತು....

ಅವಳ ಪತ್ರದ ತುಂಬೆಲ್ಲ ಪ್ರೇಮ ತುಂಬಿರುತ್ತಿತ್ತು..
ಅದು ಅವ್ಯಕ್ತ ಆನಂದ...

ಎಷ್ಟು ಓದಿದರೂ ಹೊಸತಾಗಿರುತ್ತಿತ್ತು...
ಪ್ರತಿ ಬಾರಿಯೂ ಹೊಸ ಭಾವ,.. ಹೊಸ .. ಅರ್ಥ..!
ಅವಳ ಕಿರು ನಗು... ಅವಳ ರೂಪ...

ಅದರಲ್ಲಿರುತ್ತಿತ್ತು...

ಅವಳ ಪತ್ರಗಳೊ...ಕಾದಂಬರಿ ಥರ ಇರುತ್ತಿತ್ತು...

ಕೆಲಸದಲ್ಲಿರುವಾಗ " ಅದು" ನನಗೆ ಸಿಗುತ್ತಿತ್ತು...

ಹೇಗೆ ಓದುವದು...?

ಆಫಿಸಿನಲ್ಲಿ ಓದಿದರೆ ಸಹವರ್ತಿಗಳು ತಪ್ಪು ತಿಳಿದಾರೆಂಬ.. ಭಾವನೆ..

ಸೈಟಿನಲ್ಲಿ ಓದಲು.. ಲೇಬರ್ ಎದುರು ಸಣ್ಣವನಗಿಬಿಡುತ್ತೇನೆಂಬ ಅಳುಕು...

ಕೊನೆಗೆ ನಾಗುವಿನ ಐಡಿಯಾ ಕೆಲಸಕ್ಕೆ ಬಂತು...

ಟೊಯ್ಲೆಟ್ಟಿಗೆ ಹೋಗಿ ಓದುತ್ತಿದ್ದೆ....!

ಅಲ್ಲಿಯ ಏಕಾಂತ.. ಯಾರ ಭಯವೂ ಇರುತ್ತಿರಲಿಲ್ಲ...
ನನ್ನದೇ ಲೋಕ....ನನ್ನದೇ ಪ್ರಪಂಚ...!

ಅಲ್ಲಿ ಓದುವ ಚಟ ಈಗಲೂ ಮುಂದುವರೆದಿದೆ...

ಪ್ರತಿದಿನ ಬೆಳಿಗ್ಗೆ ಪೇಪರ್ ಓದುವದು....


ತುಂಬುಗಲ್ಲದ ಹುಡುಗಿಯ ನೆನಪಾದೋಡೆ.... ..
ಭಾರತಕ್ಕೆ...ಓಡಿ ಹೋಗಿ ಬಿಡೋಣ ಅನ್ನಿಸಿ ಬಿಡುತ್ತಿತ್ತು...

ಎಲ್ಲ ಪ್ರೇಮಗೀತೆಗಳು..ಗಝಲ್ ಗಳು ನಮ್ಮ ಪ್ರೇಮಕ್ಕ್ಕಾಗಿಯೇ ಇದೆ ಅನಿಸುತ್ತಿತ್ತು...

ಒಮ್ಮೆ ನನ್ನ ಹುಡುಗಿಯನ್ನು ಕಣ್ಣಾರೆ ..
ಮನದಣಿಯೇ ನೋಡಿಕೊಂಡು ಬರೋಣ ಅನಿಸುತ್ತಿತ್ತು...

ಇನ್ನೂ ಅಧಿಕ್ರತವಾಗಿ ಹುಡುಗಿ ನೋಡಿಲ್ಲವಾಗಿತ್ತು...
ಅಕ್ಕ ಕಳುಹಿದ ಮೂರು ಫೋಟೊಗಳಿಂದಲೇ ತ್ರಪ್ತಿ ಪಡಬೇಕಿತ್ತು...

ಈ ರಜೆಯಲ್ಲು ಮದುವೆ ಅಗುವ ಪರಿಸ್ಥಿತಿ ಇಲ್ಲವಾಗಿತ್ತು..

ನನ್ನ ಕಷ್ಟ ಅರ್ಥ ಮಾಡಿಕೊಂಡ ಅಕ್ಕ.....

" ಪ್ರಕಾಶು ಒಂದುಸಾರಿ ಆಗ್ರಾಕ್ಕೆ ಹೋಗಿ ..ಹುಡುಗಿ ನೋಡಿ ಬಾ ಮಗನೆ.....?"
ಹೇಳಿದಳು...


ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು..!

ಇದಕ್ಕೆ ಬಾವನೂ ಆಶೀರ್ವಾದ ಮಾಡಿದ...

ಇನ್ನೇನು..??.... ನಾನು . ಅಮಾಯಕ "ವಿನಾಯಕ" ಹೊರಟೇ ಬಿಟ್ಟೆವು....

ಆಗ್ರಾಕ್ಕೆ...ಟ್ರೇನಿನಲ್ಲಿ....

ದಾರಿಯಲ್ಲಿ..
ವಾಕ್ ಮನ್ನಲ್ಲಿ... "ಆಷೀಖಿ..".... ಹಾಡು...ಕೇಳುತ್ತಿದ್ದೆ...

"ನಝರ್ ಕೆ ಸಾಮನೇ..
ಝಿಗರ್ ಕೆ ಪಾಸ್...

ಕೋಯಿ .. ರೆಹೆ..ಥಾ....ಹೇ ...

ವೋ..ಹೊ...ತುಮ್...!!

( ನನ್ನ.. ಕಣ್ಣಿನ ಮುಂದೆ.....

ಹ್ರದಯದ ಬಳಿ .... ಯಾರಾದರೂ ಇದ್ದರೆ.. ..!

ಅದು..ನೀನೇ..! ... )



ಅಗ್ರಾಕ್ಕೆ ಹೋಗಿ ಹೊಟೆಲ್ಲಿನಲ್ಲಿ ರೂಮು ಮಾಡಿದೆವು...


ನಾವು "ಹುಡುಗಿಯನ್ನು " ನೋಡಲಿಕ್ಕೆ ಬರುವ ವಿಷಯ ಗುಟ್ಟಾಗಿ ಇಟ್ಟಿದ್ದೇವು...

ಅಂದು ಉಗಾದಿ ಹಬ್ಬ...!

ಮಧ್ಯಾನ್ಹ.. ಹನ್ನೊಂದು.. ಗಂಟೆಯ ಸುಮಾರಿಗೆ..

ಏರ್ಫೋರ್ಸ್... ಕಂಪೌಂಡಿನಲ್ಲಿರುವ .. ಅವರಮನೆಗೆ ಬಂದೆವು...

ನಮ್ಮ ಮಾವ " ಏರ್ ಫೋರ್ಸ್ ಆಫಿಸರ್."....!

ನಾನೇ ಬಾಗಿಲು ತಟ್ಟಿದೆ...

ಕಡು ನೀಲಿ ಬಣ್ಣದ ಸ್ಕರ್ಟ್ ತೊಟ್ಟ ನನ್ನ ..
ನನ್ನ ಮನದನ್ನೆಯೇ... ಬಾಗಿಲು ತೆಗೆದಳು...!


ಯಾರಿಗಾಗಿ ಹಗಲಿರುಳು ಹಂಬಲಿಸಿದ್ದೇನೊ..

ಆ ಚಂದದ ಹುಡುಗಿ ಕಣ್ಣ ಮುಂದಿದ್ದಳು.....! ಅವಳಿಗೆ ನನ್ನ ಪರಿಚಯವಾಗಲಿಲ್ಲ..!

.. "ಕೌನ್ ..ಹೇ..?... "

ಕೇಳಿದಳು..

ನನಗೆ ಹೇಳಲಾಗದ ತಳಮಳ...ಆತಂಕ...!

ನನಗೆ ಭಯವಾ..?

ಸಂಕೋಚವಾ..?

ಬಾಯಿಬಡುಕನಾದ ನನಗೆ ಮಾತೇ ಬರಲಿಲ್ಲ...

ಅಷ್ಟರಲ್ಲಿ ಅಮಾಯಕ ವಿನಾಯಕ ಮುಂದೆ ಬಂದ..
ಅವನ ಗುರುತು ಅವಳಿಗೆ ಹತ್ತಿತು..!

"ಅರೆ ವಿನೂ ಅಣ್ಣ!!..ಬಾ..ಬಾ" ಅಂದು ...ಕರೆದು...
ಒಳಗೆ... ಓಡಿದಳು...

ಮನೆಯವರಿಗೆಲ್ಲ ಸಂಭ್ರಮ..!
"ಅಳಿಯನಾಗುವವ ಬಂದಿದ್ದಾನೆ...!
ತನ್ನ ಮಗಳ ಬಾಳ ಸಂಗಾತಿಯಾಗುವವ ಬಂದಿದ್ದಾನೆ...!

ಮಾತಾಡಿಸುವ ಧ್ವನಿ ಆಕಾಶಕ್ಕೇರಿತು...

ಅವರಿಗಾದ ಖುಷಿ.. ಅವರಏರಿದ ಧ್ವನಿಯಲ್ಲಿ ಕಾಣಬಹುದಿತ್ತು...!

ನಮ್ಮ ಧ್ವನಿಯೂ ಅನಿವಾರ್ಯವಾಗಿ ಅವರ ಮಟ್ಟಕ್ಕೆ ಏರಿಸಬೇಕಾಯಿತು...!

"ಲೀಲೂ... ಪಾನಿ ಲಾವೊ..ಬೇಟಾ.."

ನನ್ನತ್ತೆ ಸಂಭ್ರಮದಿಂದ ಹೇಳಿದಳು...

ನನ್ನ ಕಣ್ಣು ಕಾತುರದಿದಂದ..ಒಳ್ಗೆ ನೋಡುತ್ತಿತ್ತು...!

ಟ್ರೇಯಲ್ಲಿ ಎರಡು ಗ್ಲಾಸು ಹಿಡಿದು ನನ್ನ ಮುಂದೆ ನಿಂತಳು...

ನಾನು ಬಹಳ... ಅದ್ರಷ್ಟವಂತ....!

ಎಷ್ಟು ಚಂದದ ಹುಡುಗಿ..!

ಅವಳ.. ಕೈ ಥರಥರ..ನಡುಗುತ್ತಿತ್ತು...
ಆ ಕಂಪನದಿಂದಾಗಿ...
ಟ್ರೇಯಲ್ಲಿ ತುಂಬಿದ ಗ್ಲಾಸಿನ "ಕಣ..ಕಣ "ಶಬ್ಧ ನನಗೂ ಕೇಳಿಸುತ್ತಿತ್ತು..

ನನವಳ ಕಾಲನ್ನೇ ನೋಡುತ್ತಿದ್ದೆ...

ಅದೂ.... ಚಂದವಾಗಿ ,.. ಕಾಣುತ್ತಿತ್ತು..!....!

ವಿನಾಯಕ ನೀರನ್ನು ತೆಗೆದು ಕೊಂಡು
" ತಗೊಳೊ..ಪ್ರಕಾಶಾ."....ಎಚ್ಚರಿಸಿದ..

ನಾನು ನೀರು ಕುಡಿದೆ...

ದಿನಾಲೂ ಕುಡಿಯುತ್ತಲೇ... ಇದ್ದೇನೆ..!

( ಕುಡಿಸುತ್ತಲೆ ಇದ್ದಾಳೆ..!)

ಏನು ಉಪಚಾರ..? ಏನು ಸಂಭ್ರಮ..!

"ಊಟ ಮಾಡಿಕೊಂಡು ಹೋಗಲೇ..ಬೇಕು....."

ನನ್ನ ಮಾವ ಹೇಳಿದರು ..ನಾವೂ ಒಪ್ಪಿದೆವು...

ನಮ್ಮಲ್ಲಿಯ ಪದ್ಧತಿಯಹಾಗೆ ಕುಳಿತು ಊಟದ ವ್ಯವಸ್ಥೆ ಮಾಡಲಾಗಿತ್ತು...

ಉಗಾದಿ ಹಬ್ಬದ ಊಟ..!

ಮೊದಲು ಒಂದೊಂದಾಗಿ ಬಡಿಸಿದರು..

ಮಧ್ಯದಲ್ಲಿ ಜಿಂಕೆ ಮರಿಯೂ... ಬರುತ್ತಿದ್ದಳು...!

ಅವಳು ತಂದಿದ್ದನ್ನು ನಾನು ಬೇಡವೆನ್ನುತ್ತಿರಲಿಲ್ಲ...

ಚಪಾತಿ ಬಡಿಸಿದರು...ಪಲ್ಯ.. ಚಟ್ನಿ..
ನನಗೊ ರುಚಿಯೇ ಗೊತ್ತಾಗುತ್ತಿರಲಿಲ್ಲ....
ಮತ್ತೆ ಬಡಿಸಿದರು..

ನನಗೆ ಅನ್ನದ ರುಚಿ ನೋಡುವ ಆಸೆ...

ಅತ್ತೆ ಮತ್ತೊಂದು ಬಾರಿ ಚಪಾತಿ ಕೇಳಿದರು..
ನಾನು ಬೇಡವೆಂದು ಕೈ ಅಡ್ಡ ಮಾಡಿದೆ...

"ಹಾಕ್ಕೊಳಪ್ಪಾ...!" ಚಪಾತಿಯನ್ನು."....ನಮ್ಮ ಲೀಲು..ತೆಳ್ಳಗೆ ಲಟ್ಟಿಸಿದ್ದಾಳೆ....!

ಅವಳೇ ಬೇಯಿಸಿದ್ದು.. ಉಬ್ಬಿದೆ ನೋಡು.. ಹಾಕ್ಕೊ..!"

"ಇಲ್ಲ..ಸಾಕು..ಸಾಕು... ಆಗಲೇ ಎರಡು.. "ಚಪಾತಿ.." ಹಾಕ್ಕೊಂಡಿದ್ದಿನಲ್ಲ.."

ಛೇ..ಛೇ... ..ಕೈ ತೆಗಿ.. ನಿಮ್ಮಂಥ ಹುಡುಗರು ಹೇಗೆ ತಿನ್ನಬೇಕು ಗೊತ್ತಾ..? ಹಾಕ್ಕೊಪಾ.."

"ಇ..ಇಲ್ಲ..ನನಗೆ.. " ಚಪಾತಿ " ಬಗೆಗೆ ಸಂಕೋಚ ಇಲ್ಲ.."

"ನೋಡಪ್ಪಾ.. ದೋಹಾದಲ್ಲಿ ಎಲ್ಲಿ " ಚಪಾತಿ " ಸಿಗುತ್ತದೆ..?? ನಿಂಗೆ ಅಪರೂಪ..! ಹಾಕ್ಕೊ.."

"ಇಲ್ಲ.. ಇಲ್ಲ.. ನಂಗೆ " ಚಪಾತಿ " ಅಂದರೆ ಪ್ರೀತಿ..!

ಅಲ್ಲಿಯೂ ಸಿಗುತ್ತದೆ ಅಲ್ಲೂ ಹಾಕ್ಕೋತೀನಿ....!

ಆದರೆ ಒಂದು.ಅಥವಾ ಎರಡು..!.. ಜಾಸ್ತಿ.. ಆಗೋದಿಲ್ಲ.....!"


ವಿನಾಯಕನಿಗೆ ನೋಡಿದೆ.. ಅವನಿಗೆ ನಗು ತಡೆಯಲಾಗುತ್ತಿಲ್ಲ...!

ಬಹಳ ಕಷ್ಟಪಟ್ಟು ತಡೇದು ಕೊಂಡಿದ್ದ..!

ಅತ್ತೆಗೆ ಅಳಿಯನಿಗೆ .. " ಚಪಾತಿ " ಹಾಕಿಯೇ ತೀರಬೆಕೆಂಬ ಪ್ರೀತಿ...!

"ನೋಡಪ್ಪಾ.." ಸಣ್ಣ ಚಪಾತಿ." ..!..ಹಾಕ್ಕೋ....ಒಂದು..!!..."

ಅಲ್ಲಿಯವರೆಗೆ ಸುಮ್ಮನಿದ್ದ ವಿನಾಯಕ...

"ಅತ್ತೆ...ಆತ.. ಹಾಕ್ಕೊಳ್ಳೋದು .. " ದೊಡ್ಡ ಚಪಾತಿಯೇ...!.." ...

ನೀವು ಹಾಕಿ..ಬಹಳ.. ಸಂಕೋಚ ಅವನಿಗೆ...!.."

ನನಗೆ ಬರುತ್ತಿದ್ದ ನಗು ಕಷ್ಟಪಟ್ಟು ತಡೇ ಹಿಡಿದುಕೊಂಡಿದ್ದೆ...!

ನಾನು ಮತ್ತೆ ಕೈ ಅಡ್ಡ ಮಾಡಿದೆ...

ಅತ್ತೆ ಈಗ ಮಗಳನ್ನು ಕರೆದಳು...!

"ಲೀಲು.. ನೀನೆ ಹಾಕು . . " ಚಪಾತಿ.."... ಪ್ರಕಾಶನಿಗೆ.....!..

..ನೀನು ಹೇಳಿದರೆ ಹಾಕ್ಕೊಳ್ಳಬಹುದು..!!... "

ಮಗಳಿಗೆ ಹಸ್ತಾಂತರಿಸಿದಳು...

ಅವಳಿಗೂ ಸಂಭ್ರಮ....!

" ಮಾತಾಡದೆ ಕೈ ಮುಂದೆ ಮಾಡಿದಳು.. "..ಚಪಾತಿ " ಹಾಕಲು...

"... ನಾನು ತಂದಿದ್ದಕ್ಕಾದರೂ ... ಮರ್ಯಾದಿ ಕೊಡಿ..!! ."


ಆ.. ಧ್ವನಿ.. ಕೋಗಿಲೆ.. ಹಾಡಿದಂತಿತ್ತು ...

ಸಾವಿರ.. ಸಾವಿರ... ಮಾತು ಹೇಳುವ.. ..

ಆ ..ಕಣ್ಣುಗಳು.....

ಆ.. ಮುಖ.... ನೋಡುತ್ತಾ....

ನಾನು ಕೈ ..ಹಿಂದೆ.. ತೆಗೆದುಕೊಂಡೆ....!



" ಹೌದಾ.. .ನೋಡಿ....ಪ್ರಕಾಶನಿಗೆ..." ಚಪಾತಿ "... ಹಾಕಲು.....

ನಮ್ಮ.... ಲೀಲೂನೆ.. ಬರಬೇಕಾಯಿತು...!!.."


ನನ್ನ ಮಾವ ಗರ್ವದಿಂದ ಹೇಳಿ ಬೀಗಿದರು....!

ವಿನಯಕನಿಗೆ ನಗು ತಡೆಯಲಾಗಲಿಲ್ಲ....

ವಿನಾಯಕನ ಬಾಯಲ್ಲಿದ್ದಿದ್ದೆಲ್ಲ..... ಹೊರಕ್ಕೆ ಬಂತು....!!

ಘೊಳ್ಳನೆ.... ನಕ್ಕುಬಿಟ್ಟ...!...

ಮಾವ ತಬ್ಬಿಬ್ಬಾದರು...!

ವಿನಾಯಕ ಯಾಕೆ ಅಷ್ಟೆಲ್ಲಾ.. ನಕ್ಕ..?...

ಅವರಿಗೆ ಅರ್ಥವಾಗಲಿಲ್ಲ....!




(ಮಡದಿ ಹಾಕಿದ.. "ಚಪಾತಿ.. ".... ಅರ್ಥವಾಗಬೇಕಾದರೆ..

ನಾಗುವಿನ "ಹಾಡು ಮತ್ತು "ಚಪಾತಿ"

ಓದಿ... )

50 comments:

Rajesh Manjunath - ರಾಜೇಶ್ ಮಂಜುನಾಥ್ said...

ನಮಸ್ಕಾರ ಸರ್,
ನಿಮ್ಮ ಮೊದಲ ಎನ್ಕೌಂಟರ್ ಕಥೆ ಬೊಂಬಾಟ್ ಆಗಿದೆ... ನಿಮ್ಮ ಮನೆಯವರಿಗೆ ನನ್ನ ನಮಸ್ಕಾರ ತಿಳಿಸಿ ಬಿಡಿ. ಎಷ್ಟು ನಗಿಸುತ್ತೆ ಸರ್ ನಿಮ್ಮ ಬರವಣಿಗೆ, ಸೂಪರ್ ಸರ್.
-ರಾಜೇಶ್ ಮಂಜುನಾಥ್

ಮನಸ್ವಿ said...

ಎಷ್ಟು ಚಪಾತಿ ತಿಂದಿದ್ದೀರಿ ಎಂದು ನೆನಪಿನಲ್ಲಿ ಉಳಿದಿದೆಯೇ?..ಲೀಲೂ ಹಾಕಿದ ಚಪಾತಿ ಹಾಗೆ ಬಿಡಲೂ ನಿಮಗೆ ಮನಸ್ಸಾಗಲಿಲ್ಲ ಅಲ್ಪಾ... ಚಪಾತಿ ತಂದ ಪಚೀತಿಯಾಗಿತ್ತಾ ನಿಮ್ಮ ಪರಿಸ್ಥಿತಿ.. ಮತ್ತೊಂದು ಸಕತ್ತಾದ ಲೇಖನ ಬರೆದಿದ್ದಕ್ಕೆ.. ಧನ್ಯವಾದಗಳು ಹೀಗೆ ಬರೆಯುತ್ತಿರಿ, ನಾನು ನಿಮ್ಮ ಬ್ಲಾಗನ್ನು ಫಾಲೋ ಮಾಡಲು ಪ್ರಾರಂಭಿಸಿದ್ದೇನೆ...

Ittigecement said...

ರಾಜೇಶ್...

ಆ ದಿನಗಳೇ ಹಾಗೆ....
ಪ್ರತಿ ದಿನ...ಪ್ರತಿ ಕ್ಷಣ..
ಮಜವಾಗಿರುತ್ತದೆ...

ನಮ್ಮ ಪ್ರೀತಿ ... ನಮಗೆ ಸಿಕ್ಕಾಗ ..
ಆಗುವ ಆನಂದ ..
ವರ್ಣನೆಗೆ ಸಿಗದು..!

ನನ್ನತ್ತೆ ಮನೆಯಲ್ಲೂ "ಚಪಾತಿ" ಶಬ್ಧ ನಿಷೇಧ ಹೇರಿದ್ದಾರೆ..
ರೊಟ್ಟಿ ಅನ್ನುತ್ತಾರೆ..

ನನ್ನತ್ತೆ , ಮಾವನಿಗೆ ಮದುವೆಯಾದಮೇಲೆ "ಚಪಾತಿ" ಅರ್ಥ ಗೊತ್ತಾಯಿತು...

ಈಗಲೂ ಪ್ರತಿ ಬಾರಿ ಹೋದಾಗಲೂ..
ಮಗಳಿಂದ "ಚಪಾತಿ" ಹಾಕಿಸಿ ನಗುತ್ತಾರೆ..!

ಚಪಾತಿ ಆನಂದಿಸಿದ್ದಕ್ಕೆ ಅಭಿನಂದನೆಗಳು...

Ittigecement said...

ಮನಸ್ವಿ....

ನನ್ನ ಬ್ಲೋಗಿಗೆ ಸ್ವಾಗತ...

ಅಂದು ಊಟಮಾಡುವಾಗ "ಅಮಾಯಕ ವಿನಾಯಕನಿಗೆ"
ನಕ್ಕು ನಕ್ಕು ಗಂಟಲಲ್ಲಿ ಸಿಕ್ಕು ..

ನೀರು ಕುಡಿದು ಸಮಾಧಾನ ಪಟ್ಟುಕೊಂಡ..

ಮಜಾ ಅಂದರೆ ನನ್ನ ಮಾವನಿಗೆ "ವಿನಾಯಕ " ಯಾಕೆ ನಕ್ಕ ಅಂದು ಅರ್ಥವಾಗಲಿಲ್ಲ...
"ಅಳಿಯನಾಗುವವ" ಎಲ್ಲಿ ಅಪಾರ್ಥಪಟ್ಟುಕೊಳ್ಳುವವನೋ ಎಂದು ಸುಮ್ಮನಿದ್ದು ಬಿಟ್ಟರು...

ಮದುವೆ ಮರುದಿನ ನಮ್ಮ ಮನೆಯಲ್ಲಿ "ಚಪಾತಿ" ಮಾಡಿಸಿ ..

ಅರ್ಥ..ಹೇಳಿ ಮತ್ತೆ ನಕ್ಕೆವು...

ಚಪಾತಿ ಆನಂದಿಸಿದ್ದಕ್ಕೆ ವಂದನೆಗಳು...

Anonymous said...

ತುಂಬಾ ಚೆನ್ನಾಗಿ ಬರೆದಿದ್ದೀರಾ.

ನೀವು ೨೪೪ನೇ ಪತ್ರಕ್ಕೆ ಉತ್ತರ ಅಂದಾಗ ನಾವು ಕೆಲಸ ಮಾಡುವ headers, synchronization mechanism ಎಲ್ಲಾ ನೆನಪಿಗೆ ಬಂತು!!

Ittigecement said...

ಜ್ಯೋತಿಯವರೆ...

ನನ್ನ ಬ್ಲೋಗ್ ಗೆ ಸುಸ್ವಾಗತ...

ನಿಮ್ಮ ಬ್ಲೋಗ ಇದೀಗ ತಾನೆ ನೋಡಿ ಬಂದೆ.. ವೈವಿದ್ಯಮಯವಾಗಿದೆ...

ಸಂಕೋಚದ ಮುದ್ದೆಯಾಗಿದ್ದ ನನ್ನ ಮಡದಿಯ ಅವಸ್ಥೆ ಹೇಳ ತೀರದು...
ವಿಷಯ ಗೊತ್ತಾದ ಮೇಲಂತೂ ಬಹಳ ನಾಚಿಕೆ ಪಟ್ಟರು..

"ನಾಗು" ಬಂದಾಗ ಚಪಾತಿಯ ಅರ್ಥ ಕೆಡಿಸಿದ್ದಕ್ಕೆ ಪ್ರೀತಿಯಿಂದಲೇ ಬೈದರು..

ನಮ್ಮನೆಯಲ್ಲಿ "ಈಗಲೂ" ಚಪಾತಿ ಶಬ್ಧ ನಿಷೆಧಿಸಲಾಗಿದೆ..

ನೀವು ಸರಸತ್ತೆ ಬಿಸಿಬೇಳೆ ಬಾತು ನೋಡಿಲ್ಲ.. ನೋಡಿ ಹೋಗಬೇಕಾಗಿ ವಿನಂತಿ....

ಹೀಗೆ ಬರುತ್ತಾ ಇರಿ...
ಧನ್ಯವಾದಗಳು...

Mohan said...

yes sir , i remember, what it mean chapati, nice sir

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಆರಂಭ ಭಾವುಕತೆಯಿಂದ ಕೂಡಿದೆ. ರಸವತ್ತಾಗಿ ವಿರಹ ವಿವರಿಸುತ್ತ ಹೋದರೆ ಮಧ್ಯಂತರದಲ್ಲಿ ಒಂಥರಾ ಖುಷಿ. ನಿಮ್ಮಿಬ್ಬರ ಮೊದಲ ಭೇಟಿಯನ್ನು ಚೆಂದವಾಗಿ ವಿವರಿಸಿದ್ದೀರಿ. ಅಂತ್ಯದಲ್ಲಿ ಚಪಾತಿ ಘಟನೆಯನ್ನು ನೆನಪಿಸಿ ಮತ್ತೆ ನಗುವಂತಾಗುತ್ತದೆ.
ತುಂಬ ಇಷ್ಟವಾಯ್ತು.

Ittigecement said...

ಮೋಹನ್...

ಧನ್ಯವಾದಗಳು...

ಮನಸು said...

ನಮಸ್ಕಾರ,

ನಿಮ್ಮ ಪ್ರೇಮ ರಾಗ ಚೆನ್ನಾಗಿದೆ. ಚಪಾತಿ ಏಕೆ ಕೊಟ್ಟರು ಯುಗಾದಿ ಹಬ್ಬದೊಂದು ಹ ಹ ಹೋಳಿಗೆ ಬಡಿಸುವುದು ಬಿಟ್ಟು ಹ ಹ ಹ ........ ನಿಮ್ಮ ಪ್ರೇಮ ಪತ್ರಗಳು ಇನ್ನು ಭದ್ರವಾಗಿವೆಯೇ.. ಅಥವ ಆ ಪತ್ರ ಪ್ರೇಮಿ ನಿಮ್ಮೊಂದಿಗೆ ಇದಾರೆಂದು ಗಾಳಿಗೆ ಬಿಟ್ಟಿದೀರೋ ಏನು......... ನಿಮ್ಮ ಪ್ರೇಮ ಚಿರಾಯುವಾಗಲೆಂದು ಆಶಿಸುತ್ತೇನೆ......

ಧನ್ಯವಾದಗಳು..

sunaath said...

ಓಹೋ, "ಚಪಾತಿ"ಯ ನೆನಪಾಗಿ ತುಂಬಾ ನಗು ಬಂದಿತು. ಆದರೆ, ಕೊನೆಗೂ ನೀವು "ಚಪಾತಿ"ಯನ್ನು ತಿನ್ನಲೇ ಬೇಕಾಯಿತಲ್ಲ!

PaLa said...

ನಿಮ್ಮ ಅನುಭವ ಕಥನ ಚೆನ್ನಾಗಿದೆ, ಅಂತೆಯೇ ಇನ್ನೊಂದು ಲೇಖನಕ್ಕೆ ಕೊಂಡಿ ಕೊಟ್ಟಿದ್ದರೆ ಚೆನ್ನಾಗಿತ್ತು.
--
ಪಾಲ

Kishan said...

you have to rename your blog to "Stress-Busters"...
"ಇಟ್ಟಿಗೆ ಸಿಮೆಂಟ್" is a very hard and concrete name I feel !!

hehe..hehe...

ಚಿತ್ರಾ said...

ಹ ಹಾ ಹಾ ...
ಒಳ್ಳೇ ಕಥೆ ಪ್ರಕಾಶ್ ನಿಮ್ಮದು ! ನಕ್ಕೂ ನಕ್ಕೂ ಸುಸ್ತಾತು.
ಅಂದ ಹಾಂಗೇ, ಈಗಲೂ ನಿಮಗೆ " ಲೀಲೂ " ನೇ ಚಪಾತಿ ಹಾಕವಾ? ;)
ಹಿ ಹಿ ಹಿ ...

ಓದಿಗೊಂದು ಬ್ಲಾಗು... said...

ಪ್ರಕಾಶಣ್ಣ.....ಹಶಿ ಚಪಾತಿ ಆದ್ರೆ ಕಷ್ಟ ಮಾರಾಯ...... ಚಪಾತಿ ಗರಿ ಗರಿ ಇದ್ರೆ ಓಕೆ... [:P]

Unknown said...

ಪ್ರಕಾಶಣ್ಣ .... ನನ್ನ ಫರ್ಸ್ಟ್ encounter ನೆನಪಾತೋ ಮಾರಾಯ ! ಚೆನ್ನಾಗಿ ಬರದ್ದೆ.

Hema Powar said...

ಸರ್ ಅದೆಷ್ಟು ಹಾಸ್ಯಪ್ರಸಂಗಗಳು ನಡೆದಿವೆ ನಿಮ್ ಜೀವನದಲ್ಲಿ. ನನಗಂತು ನಕ್ಕು ನಕ್ಕು ಸಾಕಾಯ್ತು. ಕಡೆಗೆ ದೊಡ್ಡ ಚಪಾತಿ ಹಾಕಿಸ್ಕೊಂಡ್ರ, ಸಣ್ಣ ಚಪಾತಿ ಹಾಕಿಸ್ಕೊಂಡ್ರ! (ಸಣ್ಣದಾದ್ರೆ ಕಷ್ಟವಾಗಿರುತ್ತಪ್ಪ ;))

ಹೇಮ ಪವಾರ್

shivu.k said...

ಪ್ರಕಾಶ್ ಸರ್,

ನಂದಿ ಬೆಟ್ಟದಲ್ಲಿ ಈ ಕತೆಯನ್ನು ಬೇರೆ ರೀತಿ ಹೇಳಿದ್ದಿರಲ್ಲ....ಇರಲಿ ಇದು ಇನ್ನೂ ಚೆನ್ನಾಗಿದೆ.....

"ಇದು ಪತ್ರ .. ನಂ... ೨೫೪ ಕ್ಕೆ ಉತ್ತರ" ಇದಂತೂ ನನಗೆ ನಿಮ್ಮ ಪ್ರೇಮ ಕತೆ ಕೇಳಿ ನನಗೆ ಹೊಟ್ಟೆ ಕಿಚ್ಚು ಬರುತ್ತಿದೆ....ಬಲು ಮಜಾ ಮಾಡಿದ್ದೀರಿ.....
ನಿಮ್ಮವರು ಆಗ ನೀರು ಕುಡಿಸಿರಬಹುದು....ಈಗ ಕುಡಿಸುತ್ತಿಲ್ಲ....ಒಳ್ಳೆಯವರು....ನೀವು ಸುಳ್ಳು ಹೇಳುತ್ತೀರಿ.....


"ಟೊಯ್ಲೆಟ್ಟಿಗೆ ಹೋಗಿ ಓದುತ್ತಿದ್ದೆ....!

ಅಲ್ಲಿಯ ಏಕಾಂತ.. ಯಾರ ಭಯವೂ ಇರುತ್ತಿರಲಿಲ್ಲ...
ನನ್ನದೇ ಲೋಕ....ನನ್ನದೇ ಪ್ರಪಂಚ...!

ಅಲ್ಲಿ ಓದುವ ಚಟ ಈಗಲೂ ಮುಂದುವರೆದಿದೆ...

ಪ್ರತಿದಿನ ಬೆಳಿಗ್ಗೆ ಪೇಪರ್ ಓದುವದು...." ಸಹವಾಸದಿಂದ ಸನ್ಯಾಸಿ ಕೆಟ್ಟ ಅನ್ನುವಂತೆ ನನ್ನ ಕತೆಯೂ ಈಗ ಇದೇ ಆಗಿದೆ...ಜೊತೆಗೆ ಮೊಬೈಲ್ ಸಂಭಾಷಣೆ ಕೂಡ....

"ನೋಡಪ್ಪಾ.." ಸಣ್ಣ ಚಪಾತಿ." ..!..ಹಾಕ್ಕೋ....ಒಂದು..!!..." ಇಲ್ಲಿಂದ ಮುಂದೆ ಓದಿ ನಗು ತಡೆಯಲಾಗಲಿಲ್ಲ....

ನಿಮ್ಮ ಬರವಣಿಗೆಯಿಂದ ನಾವೆಲ್ಲಾ ಮನಸ್ಪೂರ್ತಿಯಾಗಿ ನಕ್ಕು ಇರುವ ರೋಗಗಳೆಲ್ಲಾ ವಾಸಿಯಾಗಿಬಿಡುತ್ತವೆ.....ಒಂಥರ ನೀವು ಡಾಕ್ಟರ್ ಆಗುತ್ತಿದ್ದೀರಿ......ಮುಂದುವರಿಸಿ.....ಥ್ಯಾಂಕ್ಸ್...

Ittigecement said...

ಶಾಂತಲಾ...

"ಲೀಲು" ವನ್ನು ಮೊದಲಬಾರಿಗೆ ನೋಡಿದಾಗ ಬೋಲ್ಡ್ ಆಗಿಬಿಟ್ಟೆ...
ಅವಳೇ ನನ್ನ ಆಸೆ...
ಮತ್ತೆ ಆಗದು ನಿರಾಸೆ..
ಅವಳೇ ನನ್ನ ಮಹದಾಸೆ...
ಎಂದು.....
ಅವಳಿಗೆ ನಾನು ಕರೆಯುವ ಹೆಸರು.

"ಆಶಾ"

ನಾನಿವತ್ತು ಕರೆಯುವ ಹೆಸರು...

ಚಪಾತಿ " ENJOY " ಮಾಡಿದ್ದಕ್ಕೆ ಧನ್ಯವಾದಗಳು...

Ittigecement said...

ಮನಸು....

ಉಗಾದಿಹಬ್ಬದ " ಹೋಳಿಗೆಯೂ " ಇತ್ತು....

ನಿಜ ಹೇಳ ಬೇಕೆಂದರೆ ಏನೇನು ಮಾಡಿದ್ದರು ಅನ್ನುವದು ನನಗೆ ನೆನಪಿರುವ ಸಾಧ್ಯತಯೇ ಇಲ್ಲ...

ಅ ಸ್ಥಿತಿ ಹಾಗಿತ್ತು...

ಆದರೆ ನನ್ನಾಕೆ ಹಾಕಿದ "ಚಪಾತಿ" ಮರೆಯಲು ಸಾಧ್ಯವೇ ಇಲ್ಲ...

ಆ ಪತ್ರಗಳಲ್ಲಿ ಎಲ್ಲವೂ ಇಲ್ಲ..

ಹಲವಾರು ಇವೆ...

ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...

ನಿಮ್ಮ ಅಭಿಮಾನಕ್ಕೆ ..

ಕ್ರತಜ್ನತೆಗಳು..

Ittigecement said...

ಸುನಾಥ ಸರ್....

ಚಪಾತಿ ತಿನ್ನಲೇ ಬೇಕಾಯಿತು...

ಅದು " ಆಶಾ.." ಹಾಕಿದ್ದಲ್ಲವೇ..?


ಖುಷಿಯಿಂದಲೇ ತಿಂದೆ...

ಹ್ಹಾ..ಹ್ಹ...

ಚಪಾತಿ ಖುಷಿಪಟ್ಟಿದ್ದಕ್ಕೆ ಧನ್ಯವಾದಗಳು..

Ittigecement said...

ಪಾಲಚಂದ್ರ...

ನನಗೆ ಮೊದಲು ಲಿಂಕ್ ಹೇಗೆ ಕೊಡುವದು ಗೊತ್ತಾಗಲಿಲ್ಲ...

ಈಗ ಕಲಿತು ಕೊಂಡೆ...

ಚಪಾತಿ ಖುಷಿಪಟ್ಟಿದ್ದಕ್ಕೆ ವಂದನೆಗಳು...

ನಿಮ್ಮ ಲಾಲ್ ಬಾಗ್

" ಹೂ "...ಫೋಟೊಗಳು..ಸೂಪರ್...

ಧನ್ಯವಾದಗಳು...

Ittigecement said...

ಕಿಶನ್....

ಅಭಿಮಾನಕ್ಕೆ ಸಾವಿರ..ಸಾವಿರ ವಂದನೆಗಳು...

ಲೇಖನಗಳನ್ನು ಖುಷಿಪಟ್ಟಿದ್ದಕ್ಕೆ ಧನ್ಯವಾದಗಳು...

ಇಟ್ಟಿಗೆ ಸಿಮೆಂಟಿನಲ್ಲಿ ...

ಮನಸ್ಸಿನ.....ಹ್ರದಯ ಸಂಬಂಧಗಳ...

ಮನೆ ಕಟ್ಟುತ್ತೇನೆ ...

ಅಲ್ಲಿ ವ್ಯವಹಾರವಿದ್ದರೂ....

ಹ್ರದಯದ ಭಾವನೆಗಳಿಗೆ ಮಹತ್ವ ಕೊಡುತ್ತೇನೆ...

ಅದೇ... ನನ್ನ ಪರಿಚಯ..!

ಪೆಹಚಾನ್....!

ನಿಮ್ಮ ಅಭಿಮಾನಕ್ಕೆ..

ತುಂಬು ಹ್ರದಯದ.. ಕ್ರತಜ್ನತೆಗಳು....

Ittigecement said...

ಚಿತ್ರಾ....

ಈ..ಲೀಲೂ..ನನ್ನ "ಆಶಾ"

ಹೌದು...ಈಗಲೂ ಅವರೇ ನನಗೆ "ಚಪಾತಿ" ಹಾಕುತ್ತಾರೆ..

ಅಧಿಕಾರಯುತವಾಗಿ..!!


ಚಪಾತಿ ಖುಷಿ ಪಟ್ಟಿದ್ದಕ್ಕೆ ..

ಅನಂತ.. ಅನಂತ..

ವಂದನೆಗಳು...

Ittigecement said...

ಓದಿಗೊಂದು ಬ್ಲೋಗುದಾರರೆ...

ನಿಮಗೆ ನಾನು "ಅನುಜ.." ಎಂದು ಕರೆಯಲೇ...

ಅನುಜರೆ.......

ಚಪಾತಿ.. ಗರಿಗರಿ ಇದ್ದರೆ ಬಹಳ... ಚೆನ್ನ....

ಆದರೆ....

ಹಸಿ ಚಪಾತಿ... ಆರೋಗ್ಯಕ್ಕೂ ಒಳ್ಳೆಯದಲ್ಲ...

ಬಹಳ ಸಮಸ್ಯೆ.. ತರುತ್ತದೆ...

ಹ್ಹ..ಹ್ಹ..

"ಯಾವಗಲೂ "ಗರಿಗರಿ" ಚಪಾತಿಯನ್ನೇ ಉಪಯೋಗಿಸಿ..

ಅಲ್ಲ..ಅಲ್ಲಲ್ಲ... ತಿನ್ನಿರಿ...!

ಧನ್ಯವಾದಗಳು...

Ittigecement said...

ಸುಧೀಂದ್ರ...

ನನ್ನ ಬ್ಲೋಗಿಗೆ ಸುಸ್ವಾಗತ...

ನಿಮ್ಮ ಫಸ್ಟ್.. ಅನುಭವ ಬರೆಯಿರಿ...

ನಾವೂ ಕೂಡ ಉತ್ಸುಕರಾಗಿದ್ದೇವೆ...

ಅದರ.. "ಫಲ" ತುಂಬಾನೇ ಮುದ್ದಾಗಿದೆ...!!

ಅಭಿನಂದನೆಗಳು...

ಚಪಾತಿ ಸಂತೋಷಪಟ್ಟಿದ್ದಕ್ಕೆ ಧನ್ಯವಾದಗಳು...

ಹೀಗೆ ಬರುತ್ತಾ ಇರಿ...

Ittigecement said...

ಹೇಮಾರವರೆ..

ನಿಮ್ಮ ಅಭಿಮಾನಕ್ಕೆ ವಂದನೆಗಳು...

ನಗುವ ಮನಸ್ಸಿದ್ದರೆ.. ನಗಬಹುದಲ್ಲ...
ನಾನು "ಪ್ರಾಣೇಶರ" ಅಭಿಮಾನಿ

ಈ ಚಪಾತಿ ಊಟಕ್ಕೆ ಕುಳಿತಾಗ..
ಸ್ನಾನವಾದ ನಂತರ...
ಖಂಡಿತ ನಗು ತರಿಸುತ್ತದೆ...

ನಾವೆಲ್ಲ "ಚಪಾತಿ ಪಿತಾಮಹ" ....

ನಾಗುವಿಗೆ ..."ಧನ್ಯವಾದಗಳನ್ನು ಅರ್ಪಿಸಲೇ ಬೇಕಲ್ಲವೇ...

ಚಪಾತಿ ಖುಷಿಪಟ್ಟಿದ್ದಕ್ಕೆ...
ನಿಮಗೂ ಧನ್ಯವಾದಗಳು...

Ittigecement said...

ಶಿವು ಸರ್...

ನೀವೆ ಅಲ್ಲವೇ ನನ್ನ ಈ ಪ್ರಪಂಚಕ್ಕೆ ಕರೆ ತಂದ "ಗುರು"

ನಿಮಗೂ, ಮಲ್ಲಿಕಾರ್ಜುನರಿಬ್ಬರಿಗೂ ಕ್ರತಜ್ನತೆಗಳು...

ಕಥೆಯಲ್ಲಿ "ಸ್ವಲ್ಪ" ಬದಲಾವಣೆ ಮಾಡಲೇ ಬೇಕಾಯಿತು..

ಇಲ್ಲದಿದ್ದರೆ ಇನ್ನೂ ಉದ್ದವಾಗುತ್ತಿತ್ತು...
ಸರ್...

ನಿಮ್ಮ ಪ್ರತಿಕ್ರಿಯೆ ಕೇಳಿ.. ನಮ್ಮವರು ಬಹಳ ಖುಷಿಯಾಗಿಬಿಟ್ಟಿದ್ದಾರೆ...

ನೀವೊಬ್ಬರಾದರೂ "ಸಪೋರ್ಟ್" ಮಾಡಿದ್ದೀರಲ್ಲ...ಎಂದು..

ನಿಜ ಅವರು ನೀರು ಕುಡಿಸುತ್ತಿಲ್ಲ.. ತಮಾಷೆಗೆ ಬರೆದೆ..
ಉತ್ತರ ಭಾರತದಲ್ಲಿ ಮನೆಗೆ ಬಂದವರಿಗೆ ಮೊದಲು ನೀರು ಕುಡಿಸುವ ಪದ್ಢತಿ...ಇದೆ..

ಇನ್ನು ನಮ್ಮ ಪ್ರೇಮದ ವಿಚಾರ..

ಮದುವೆ ನಿಶ್ಚಿತಾರ್ಥವಾಗಿ "ಮೂರು" ವರ್ಷದ ನಂತರ ನಮ್ಮ ಮದುವೆ ಆಯಿತು...

"ಕ್ಯಾಸೆಟ್ಟ್ ನಲ್ಲೂ ನಮ್ಮ ಪ್ರೇಮವ್ಯವಾರ ನಡೆದಿತ್ತು...

ನನ್ನ ಮಗ ಈಗಲೂ ಆಗಾಗ ಆ ಕ್ಯಾಸೆಟ್ ಹಾಕುತ್ತಿರುತ್ತಾನೆ...

ತುಂಬಾ "ಮಜವಾಗಿರುತ್ತದೆ."... ಈಗ ಕೇಳಲು...

ಪೇಪರ್ ಓದುವ ವಿಚಾರ...

ನಿಜ ಸರ್...
ನಮ್ಮ ಪ್ರೇಮದ ನೆನಪಿಗೆ "ಟೊಯ್ಲೆಟ್ಟಿನಲ್ಲಿ" ಓದುವ ಅಭ್ಯಾಸ ಮುಂದುವರೆಸಿದ್ದೇನೆ..

ನೀವು ನನ್ನ ಗ್ರುಪ್ ಸೇರಿದ್ದಕ್ಕೆ ಸ್ವಾಗತ ಬಯಸುವೆ...
ನಿಮ್ಮ ಸ್ವಚ್ಛ ಮನಸ್ಸಿನ, ಹ್ರದಯದಕ್ಕೆ ..
ನಾನು ಮೂಕನಾಗಿದ್ದೇನೆ...

ನಿಮ್ಮ ಸ್ನೇಹಕ್ಕೆ ಚಿರ ಋಣಿ...
ಧನ್ಯವಾದಗಳು...

ಶಿವು...

ತೇಜಸ್ವಿನಿ ಹೆಗಡೆ said...

ಪ್ರಕಾಶಣ್ಣ,

ಇಂತಹ ಸುಮಧುರ ಪ್ರಸಂಗಗಳನ್ನು ನೆನೆಸಿಕೊಳ್ಳುತ್ತಾ ನಮ್ಮನ್ನೂ ನಗಿಸುತ್ತಾ ಮನದೊಳಗೆ ಸಂತೋಷದ ಆಶಾಸೌಧವನ್ನೇ ಕಟ್ಟಿತ್ತಿರುತ್ತೀರಿ. ನಿಜಕ್ಕೂ ಅಭಿನಂದನೀಯ. ನಿಮ್ಮ ಬರಹ ಮನಸ್ಸನ್ನು ಮುದಗೊಳಿಸಿ ನಗುವನ್ನರಳಿಸುತ್ತದೆ. ಧನ್ಯವಾದಗಳು.

Ittigecement said...

ತೇಜಸ್ವಿನಿ....

ಆಶಾಳ "ಸೌಧ" ಕಟ್ಟಲು ಬಹಳ ಸಮಯ ಬೇಕಾಯಿತು...!

ದಿನಾಲು ಬೆಳಿಗ್ಗೆ ಆಯ್ಕೆ ನಮ್ಮೆದುರಿಗೆ ಇರುತ್ತದಂತೆ...

ಇಂದಿನ ದಿನ "ನಗುತ್ತ " ಕಳೆಯ ಬೇಕೋ.?.... ಬೇಜಾರದಲ್ಲೋ..?..

"ನಗುವದು ಸುಲಭ ಅಂತ ನನ್ನ ಭಾವನೆ..

ಇರುವ ನಾಲ್ಕು ದಿವಸ ನಗುತ್ತ ಕಳೆಯೋಣ ಅಲ್ಲವಾ..?

ನಿಮ್ಮ ಪ್ರೋತ್ಸಾಹ.. .ಹೀಗೆಯೇ ಇರಲಿ...

ಧನ್ಯವಾದಗಳು...

ಅಂತರ್ವಾಣಿ said...

"ರಾಯರು ಬಂದರು ಮಾವನ ಮನೆಗೆ ಉಗಾದಿ ಹಬ್ಬಕ್ಕೆ"


ಸೂಪರ್ ಕಾಮಿಡಿಯಿದೆ.. ಪ್ರಕಾಶಣ್ಣ...

Ittigecement said...

ಜಯಶಂಕರ್...

ಜೀವನವೆಲ್ಲ ಬರೀ "ನಗುವೇ ಅಲ್ಲ"...

ನೋವು ಬೇಕಾದಷ್ಟಿದೆ..

ಅದು ಎಲ್ಲರ ಬದುಕಿನಲ್ಲೂ ಇದೆ...

ಖುಷಿಯ, ನಗುವಿನ ಕ್ಷಣಗಳನ್ನು ಹಂಚಿಕೊಳ್ಳುವದರಲ್ಲೂ ...
ಒಂದುರೀತೀಯ ಸುಖವಿದೆಯೆಂದು ಗೊತ್ತಾಗುತ್ತಿದೆ...

ಬ್ಲೋಗ್ ಪ್ರಪಂಚಕ್ಕೆ ನನ್ನ ಕರೆದು ತಂದ..

ಆತ್ಮೀಯ.. ಶಿವು, ಮಲ್ಲಿಕಾರ್ಜುನ್ ಅವರಿಗೆ..

ನಾನು ಋಣಿ...

ಪ್ರತಿಕ್ರಿಯೆಗೆ ವಂದನೆಗಳು...

ಚಪಾತಿ ಇಷ್ಟ ಪಟ್ಟಿದ್ದಕ್ಕೆ ಅಭಿನಂದನೆಗಳು...

Rajath said...

Wow realy nice experience for you, it must happen once in life. realy ur editing is nice to read with suspense jokes then klymaxu. I hope she must be genuine girl. b grateful to akka for searching such a wonderful campanion for your life.

ಸುಧೇಶ್ ಶೆಟ್ಟಿ said...

chapaathi puraana innu mugidilla... adara hesaru kedisi bittiralla prakaashanna... :)
ivaththu raathri nanna pg yalli maadida naanu thinnuvudu hege?

Ittigecement said...

ರಜತ್....

ನನ್ನ ಬ್ಲೋಗಿಗೆ ಸುಸ್ವಾಗತ...

ಎಲ್ಲ ರೀತಿಯಲ್ಲೂ "ಅವಳು" ನನಗೆ "ದೀ ಬೆಸ್ಟ್ "

ಮಾತು, ಕಥೆ, ಅಡಿಗೆ, ಊಟ, ...
ಅಥಿತಿಗಳನ್ನು, ಸ್ನೇಹಿತರನ್ನು ಆದರದಿಂದ..

ನೋಡಿಕೊಳ್ಳುವ "ಅವಳೀಗಾಗಿ"...

ಅಕ್ಕನಿಗೆ ಎಷ್ಟು ಕ್ರತಜ್ನತೆ ಹೇಳಲಿ...?

ಎಲ್ಲ ಅರ್ಥದಲ್ಲಿ ನನ್ನ ಮಡದಿ ನನ್ನ ..

ಬಾಳ ... "ಸಂಗಾತಿ.."

ನನ್ನ ಒಳ್ಳೆಯ "ಸ್ನೇಹಿತೆ"

ನಿಮ್ಮ ಪ್ರತಿಕ್ರಿಯೆ ನನಗೊಂದು ಉತ್ಸಾಹ..

ಹೀಗೆ ಬರುತ್ತಾ ಇರಿ..

ಧನ್ಯವಾದಗಳು..

Ittigecement said...

ಸುಧೇಶ್.....

ಚಪಾತಿ ಪುರಾಣಾ ಹೇಗೆ ಮುಗಿಯಲು ಸಾಧ್ಯ..?

ನಾವೆಲ್ಲ "ಚಪಾತಿ" ಪಿತಾಮಹ" ನಾಗುವಿಗೆ ಕ್ರತಜ್ನ ರಾಗಿರೋಣ..!

ಬಿಸಿಬೇಳೆ ಬಾತ್, ದೋಸೆ, ಚಟ್ನಿ ಥರ "ಗಂಭೀರ" ವಾಗಿಲ್ಲವಲ್ಲ..!

ಚಪಾತಿ ಖುಷಿ ಪಟ್ಟಿದ್ದಕ್ಕೆ..

ಧನ್ಯವಾದಗಳು...

ಹೀಗೆ ಬರುತ್ತಿರಿ...

ಮಲ್ಲಿಕಾರ್ಜುನ.ಡಿ.ಜಿ. said...

ಸರ್, ನಮ್ಮನೇಲಿವತ್ತು ಚಪಾತಿ. ಚಳಿ ಜಾಸ್ತಿ ೩ ಚಪಾತಿ ಹಾಕ್ಕೊಳ್ಳಿ ಅಂತ ನಮ್ಮನೆಯವರು ಫೋರ್ಸ್ ಮಾಡ್ತಿದ್ದಾರೆ!!!

Ittigecement said...

ಮಲ್ಲಿಕಾರ್ಜುನ್...

ಧಾರಾಳವಾಗಿ... ಹಾಕ್ಕೊಳಿ ಸರ್....!

ನಲ್ಮೆಯ ಮಡದಿಯವರೇ...

ಪ್ರೇಮದಿಂದ ಕೇಳುವಾಗ...

ಬೇಡವೆಂದು ಹೇಳುವದು...

ಬೇಜಾರಾದೀತು.. ಪ್ರಿತಿಸುವ ಮನಕೆ...!

ಚಪಾತಿಯನ್ನು ಮತ್ತೊಮ್ಮೆ ಇಷ್ಟಪಟ್ಟಿದ್ದಕ್ಕೆ...
ಅಭಿನಂದನೆಗಳು...

Umesh Balikai said...

ಶೃಂಗಾರ ಮತ್ತು ಹಾಸ್ಯ ರಸಗಳ ಸಮ್ಮಿಲನ.. ತುಂಬಾ ರಸವತ್ತಾಗಿತ್ತು ಸರ್. ಸಿಂಪ್ಲೀ ಸೂಪರ್ಬ್.!!

Prashant said...

hey mama...how many chapathis u used to wear when u were at gulf>>>plz reveal that

Unknown said...

ಪ್ರಕಾಶಣ್ಣ,
ತುಂಬಾ ಮಜ ಇದ್ದು. ನಕ್ಕು ನಕ್ಕು ಸುಸ್ತಾಗೋತು.
ನಿಮ್ಮ ನಿರೂಪಣೆ ಬಹಳ ಚೆನ್ನಾಗಿರ್ತು.

Ittigecement said...

ಉಮಿಯವರೆ....

ನನ್ನ ಬ್ಲೋಗಿಗೆ ಸ್ವಾಗತ...

ನಿಮ್ಮ ಹೆಸರು ನನ್ನ ಪರಮಾತ್ಮ ಗೆಳೆಯನೊಬ್ಬನ ಹೆಸರಿದ್ದಾಗೆ ಇದೆ...

ಅವನ ಜ್ಞಾಪಕವಾಯಿತು..

ಇಲ್ಲಿನ , ಬಿಸಿಬೇಳೆ ಬಾತು, ದೋಸೆ ಚಟ್ನಿ ಎಲ್ಲ ರುಚಿ ನೋಡಿ ಹೋಗಿ...

ನೀವು ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು..

ಹೀಗೆ ಬರುತ್ತಿರಿ...

ಧನ್ಯವಾದಗಳು..

Ittigecement said...

ಪ್ರಶಾಂತು...

ಪುಟ್ಟಾ ಅದು ಹೇಳಿಕೇಳಿ ಮರಳುಗಾಡು...

ಸಿಕ್ಕಾಪಟ್ಟೆ ಸೆಖೆ...

ಕಡಿಮೇ ಉಪಯೋಗಿಸಬೇಕಿತ್ತು ಕಣೊ..

ನೀವು , ನಿಮ್ಮ ಗೆಳೆಯರು ಎಷ್ಟು ಉಪಯೋಗಿಸುತ್ತೀರಿ..? ಅದು ಹೇಳು ಮೊದಲು..!

ಹ್ಹಾ...ಹ್ಹಾ...!

ಚಪಾತಿ ಇಷ್ಟವಾಗಿದ್ದಕ್ಕೆ ಶುಭಾಶೀರ್ವಾದ...!

Ittigecement said...

ಮಧು...

ನನ್ನ ಬ್ಲೋಗಿಗೆ ಸುಸ್ವಾಗತ...!

ಮದುವೆಯ ನಿಶ್ಚಿತಾರ್ಥದ ಆ ದಿನಗಳಲ್ಲಿ ...

ಇಂಥಹ ರಸಮಯ ಘಟನೆಗಳು...

ಬಹಳ ಮಜವಾಗಿರುತ್ತದೆ...

ಇತ್ತೀಚೆಗೆ ಗ್ರ್‍ಅಹಸ್ಥಾಶ್ರಮಕ್ಕೆ ಕಾಲಿಟ್ಟ ನಿಮಗೆ ಶುಭ ಹಾರೈಕೆಗಳು...!

ಬಂಗಾರವಾಗಲಿ ನಿಮ್ಮ ಬಾಳೆಲ್ಲ..!

ಶುಭಾಶಯಗಳು...

ಹಿತ್ತಲಮನೆ said...

ಲೇಖನ ಓದಿ ಖುಷಿ ಆತು...ಹಂಗೇ ಸ್ವಲ್ಪ ಹೊಟ್ಟೆಕಿಚ್ಚೂ... ಪತ್ರ ಬರೆಯುವ ಸಂದರ್ಭ ಬರದಿದ್ದಕ್ಕೆ...

Ittigecement said...

ಹಿತ್ತಲಮನೆ ಬೀಗಣ್ಣನವರೆ..

ಪತ್ರಬರೆಯದಿದ್ದಕ್ಕೆ ಹೊಟ್ಟೆಕಿಚ್ಚಾಯಿತಾ..?

ಈಗ ಬರೆಯಿರಿ..

ನಿಮ್ಮ ಪ್ರೇಮವೆಲ್ಲ ಪತ್ರದಲ್ಲಿ ತುಂಬಿರಿ..

ಪ್ರೇಮವಾಗಿ, ಪ್ರೇಮದಿಂದ.., ಪ್ರೇಮಕ್ಕಾಗಿ ಬರೆಯಿರಿ...

ದಿನಾಲೂ ಬರೆಯಿರಿ...

ತೋರಿಸಲಿಕ್ಕೆ ಹೋಗಬೇಡಿ...

ಪ್ರತಿಕ್ರಿಯೆಗೆ ಧನ್ಯವಾದಗಳು...

shivu.k said...

ಪ್ರಕಾಶ್ ಸರ್,

ಅದೆಲ್ಲಾ ಸರಿ.. ಟಾಯ್ಲೆಟ್ಟಿಗೆ ಹೋಗಿ ಬರುವಾಗ ಕೈ ಕಾಲು ತೊಳೆದುಕೊಳ್ಳುತ್ತೇವೆ. ಶುದ್ದವಾಗಿರಲಿ ಅಂತ..

ಅದ್ರೆ ಇಲ್ಲಿ ದಿನಪತ್ರಿಕೆಯನ್ನು ಅಲ್ಲಿಗೆ ಓದಲಿಕ್ಕೆ ತೆಗೆದುಕೊಂಡು ಹೋಗಿ, ಮತ್ತೆ ಮನೆಯ ಹಾಲ್ ರೂಮಿಗೆ ಶುದ್ದ ಮಾಡದೆ ಹೇಗೆ ತೆಗೆದುಕೊಂಡು ಹೋಗುತ್ತಾರೆ ?
[ಈ ಮಾತು ನನ್ನದಲ್ಲ. ಹೇಮಾಶ್ರಿಯದು. ಇದಕ್ಕೆ ನೀವೆ ಉತ್ತರ ಕೊಡಬೇಕಂತೆ !]

ನಿನ್ನೆ ರಾತ್ರಿ ಇಬ್ಬರೂ ಮತ್ತೊಮ್ಮೆ ಓದಿ ಹೊಟ್ಟೊ ಹುಣ್ಣಾಗುವಷ್ಟು ನಕ್ಕೆವು....

Ittigecement said...

ಶಿವು ಸರ್...

ಹೇಮಾಶ್ರೀ.. ಮೇಡಮ್..

ಅಂತೂ ತಲೆಯಲ್ಲಿ ಹುಳ ಬಿಡುವ ಸಂಪ್ರದಾಯ ಮುಂದುವರೆಸಿದ್ದೀರಿ...

ಹ್ಹಾ..ಹ್ಹಾ...!

ಟೊಯ್ಲೆಟ್ಟಿಗೆ ಹೋದಾಗ ಅಲ್ಲಿ ನಡೆದ ಕ್ರಿಯೆಯ.. "ಭಾಗ.."

ಹಾಗೂ ಕ್ರಿಯೆಯ ಪರಿಣಾಮದಿಂದ ಆದಂಥಹ... " ಭಾಗಗಳನ್ನು "..

ಶುದ್ಧ ಮಾಡಿಕೊಳ್ಳುತ್ತೇವೆ...

ಅಲ್ಲವಾ...?

ಪೇಪರ್ "ಆ" ಕೆಲಸದಲ್ಲಿ "ಪ್ರತ್ಯಕ್ಷ"ವಾಗಿಯಾಗಲೀ..

ಪರೋಕ್ಷವಾಗಲಿ ...

ಆ ಕ್ರಿಯೆಯಲ್ಲಿ ಭಾಗಿಯಾಗುವದಿಲ್ಲವಲ್ಲ..!

ಹಾಗಾಗಿ "ಶುದ್ಧ" ಮಾಡುವ ಪ್ರಕ್ರಿಯೆಯಲ್ಲಿ "ಪೇಪರ್" ಗೆ ವಿನಾಯತಿ ಕೊಡಲಾಗುವದು...!

ಹ್ಹಾ..ಹ..!


ನಿಮಗೂ..
ನನ್ನ ಸಹೋದರಿಗೂ..

ಮತ್ತೊಮ್ಮೆ ಹ್ರದಯಪೂರ್ವಕ...
ವಂದನೆಗಳು...

ಪ್ರೋತ್ಸಾಹ ಹೀಗೆಯೆ ಇರಲಿ...!

Harisha - ಹರೀಶ said...

:-) :) :)) :D

Ittigecement said...

ಹರೀಷ್..

ಅರ್ಧ ಸೆಂಚುರಿಗೆ ಅಭಿನಂದನೆಗಳು...

ಪ್ರೋತ್ಸಾಹ ಹೀಗೆಯೆ ಇರಲಿ...

ಧನ್ಯವಾದಗಳು...