" ಅಮಾಯಕ ವಿನಾಯಕ " ಪೇಪರ್ ಓದುತ್ತಿದ್ದ...
ಇದು... "ಸರಸತ್ತೆ" ಇಟ್ಟ ಹೆಸರು...
ಅವನು ಬೆಂಗಳೂರಲ್ಲಿ ಬದುಕು ಕಾಣಲು... ಬಂದಿದ್ದ..
ನಮ್ಮ ಬಾವ "ನೆಸ್ಟ್ಲೆ" ಏಜನ್ಸಿ ಕೊಡಿಸುವವನಿದ್ದ..
ಅದರ ಇಂಟರ್ವ್ಯೂ ಮರುದಿವಸ ಇತ್ತು...
ಯಾವುದೋ ಕಾರಣಕ್ಕೆ ಬ್ಯಾಂಕ್ ಗೆ ..ಬಂದಿದ್ದ ..
ನನ್ನ ಬಾವ ಬಹಳ ಸತ್ಕಾರದ ಮನುಷ್ಯ..
ಮನೆಗೆ ಸ್ನೇಹಿತರು , ನೆಂಟರು ಬಂದಷ್ಟೂ ಖುಷಿ..
ಹೊತ್ತು , ಗೊತ್ತು ಇಲ್ಲದೆ ಸಹಾಯ ಮಾಡುವದು ಅವನ ಹವ್ಯಾಸ..
ಈ ವಿನಾಯಕ ನನ್ನು ಅಂದು.. ಮನೆಗೆ ಕರೆ ತಂದಿದ್ದ...
"ಸರಸತ್ತೆ ಅಂತ.. ದೂರದ ಸಂಬಂಧ..ಹೋಗಿ ಬರೋಣ .. ಬಾ" ಎಂದು... ಒತ್ತಾಯ ಮಾಡಿದ್ದ..
ವಿನಾಯಕನಿಗೆ ಇಲ್ಲವೆನ್ನಲಾಗಲಿಲ್ಲ..
ಹೋಗಿ ಬಂದಮೇಲೆ..
ನಮ್ಮೆಲ್ಲರ..ಹಾಗೆ.. ಮರುದಿವಸ ವಿನಾಯಕನ ಸ್ಥಿತಿ...
ಶೋಚನಿಯವಾಯಿತು...
ಎಲ್ಲರ ಥರಹ...
ಬಾತ್ ರೂಮ್.. ಟೊಯ್ಲೆಟ್ ತಿರುಗಿ.. ತಿರುಗಿ..ತಿರುಗಿ..
"ಇಂಟರ್ವ್ಯೂ" ಹೋಗಲಾಗಲಿಲ್ಲ...!
ಮತ್ತೊಂದು ದಿನ ಸರಸತ್ತೆ ಬಂದಾಗ.. ಅವನಿಗೆ ಆರೋಗ್ಯ ಸರಿ ಇಲ್ಲದ ವಿಷಯ ಕೇಳಿ...
"ಪಾಪ..ಅಮಾಯಕ ವಿನಾಯಕ..!" ಅಂದು ಬಿಟ್ಟಿದ್ದಳು...
ಅದೇ ಹೆಸರು ಇವನಿಗೆ ಖಾಯಮ್ ಆಯಿತು....
ನಾವು ಒಂದು ಹಂತದ ಹನಿಮೂನ ಮುಗಿಸಿ ಅಕ್ಕನ ಮನೆಗೆ ವಾಪಸ್.. ಬಂದಿದ್ದೇವು..
"ಪ್ರಕಾಶ.. ಇವತ್ತು ಒನ್ ಡೇ ಮ್ಯಾಚ್ ಇದೆ.. ಪಾಕಿಸ್ತಾನ್, ಭಾರತ..!! " ಅಂದ... ವಿನಾಯಕ..
ನನಗೆ ಕ್ರಿಕೆಟ್ ಹುಚ್ಚು ಬಹಳ..
ಅಂದು.. ಮನೆ ತುಂಬಾ.. ನೆಂಟರು ... ಊರಿನಿಂದ ಆಯಿ.. ದೊಡ್ಡಮ್ಮ..!
ಪಿಳ್ಳೆ ಮಕ್ಕಳು.. ಗದ್ದಲವೋ..ಗದ್ದಲ...!
ಆರಾಮಾಗಿ ಮುದ್ದು ಮುಖದ ಸಂಗಡ ಲಲ್ಲೆಗರೆಯುತ್ತ ಇದ್ದು ಬಿಡೋಣಾ ಅಂದರೆ ಆಗಲ್ಲ..
ತಲೆಗೊಂದು ಮಾತಾಡಿ.. ಗದ್ದಲ ಮಾಡಿಬಿಡುತ್ತಾರೆ...
ಚಾಳಿಸುತ್ತಾರೆ...!!
ಮ್ಯಾಚ್ ನೋಡೋಣ ಅಂದರೆ ಅಕ್ಕನ ಮನೆಯಲ್ಲಿ ಕೇಬಲ್ ಇಲ್ಲ...
"ಏನು ಮಾಡೋಣವೋ.. ನೀನೆ ಹೇಳು.."
ವಿನಾಯಕನ ದುಂಭಾಲು ಬಿದ್ದೆ...
ನನ್ನ ಕ್ರಿಕೆಟ್ ಹುಚ್ಚು ಅಕ್ಕನಿಗೆ ಗೊತ್ತಿತ್ತು...
"ಸರಸಕ್ಕನ ಮನೆಯಲ್ಲಿ ಕೇಬಲ್ ಇದೆ.. ನೋಡ್ಕೊಂಡು ಬನ್ನಿ.." ಎಂದು ಹೇಳೀದಳು..
" ಯಾಕೆ ನಾವು ಆರಾಮಾಗಿ ಇರುವದನ್ನು ನೋಡಿ ಹೊಟ್ಟೆಕಿಚ್ಚಾ.. ನಿನಗೆ..?
ನಮ್ಮ ಹನೀಮೂನ್ ಕಾರ್ಯಕ್ರಮ ಮುಗಿದಿಲ್ಲ ..!
ನಾನೂ ಇನ್ನೂ ಎರ್ಕಾಡು..ಸೇಲಮ್.. ಕಾರ್ಯಕ್ರಮ ಇಟ್ಟು ಕೊಂಡಿದ್ದೀನಿ..ಮಹತಾಯಿ..!!
ನಿಮ್ಮನೆ ಟೊಯ್ಲೆಟ್ ಸರ್ವೆ ಮಾಡೋದೊಂದೇ ಕೆಲ್ಸಾನಾ..? "
"ಸುಮ್ಮನಿರೋ.. ನಾನು ಒಂದು ಉಪಾಯ ಮಾಡ್ತೀನಿ.."
ಎಂದು ಸರಸತ್ತೆಗೆ ಫೋನ್ ಮಾಡಿದಳು...
"ಸರಸತ್ತೆ... ಪ್ರಕಾಶಾ, ವಿನಾಯಕ.. ಇಬ್ಬರೂ.. ನಿಮ್ಮನೆಗೆ ಕ್ರಿಕೆಟ್.. ನೋಡಲು ಬರಬೇಕಿಂದಿದ್ದಾರೆ.. ಏನಾದರೂ ತೊಂದರೆ ಯಾಗುತ್ತಾ..?
"ಬಹುಶಃ ತೊಂದರೆ ಇಲ್ಲಾ ಅಂದಿರಬೇಕು...
ಅಕ್ಕ ಮತ್ತೆ ತಾನೇ ಮುಂದುವರಿಸಿದಳು...
"ಅವರಿಬ್ಬರಿಗೂ.. ಹೊಟ್ಟೆ ಸರಿ ಇಲ್ಲ.. ನೀನು ತಿನ್ನಲಿಕ್ಕೆ ಏನೂ ಕೊಡಬಾರದು..
ಹಾಗಿದ್ದರೆ ಮಾತ್ರ ಬರ್ತಿನಿ ಅಂತಿದ್ದಾರೆ..!"
ಬಾಣ ಬಿಟ್ಟಳು.. ಅಕ್ಕ...
ಸ್ವಲ್ಪ ಹೊತ್ತು ಚರ್ಚೆ ನಡೆದು ಸರಸತ್ತೆ ತಾನು " ಏನೂ ತಿನ್ನಲು ಕೊಡುವದಿಲ್ಲ ಅವರನ್ನು ನಮ್ಮನೆಗೆ ಕಳಿಸು.." ಅನ್ನುವವರೆಗೆ ಅಕ್ಕ ಬಿಡಲಿಲ್ಲ...
ನನಗೂ.. ವಿನಾಯಕನಿಗೂ ಧೈರ್ಯ ಬಂತು..
ಸರಿ ಅಂತ ಹೊರಟೇ ಬಿಟ್ಟೆವು...
ಮನೆಯ ಬಾಗಿಲಲ್ಲೇ ಕಾಯುತಿದ್ದಳು.. ಸರಸತ್ತೆ..
" ಪ್ರಕಾಶು ..ಏನು ತುಂಬಾ ಬಡವ ಆಗಿ ಹೋಗಿದ್ದೀಯಾ..?
ಹನಿಮೂನ್ ಜೋರಾ,,? ಊಟ ತೀಡಿ ಸರಿ ಹೋಗಿಲ್ಲವೇನೂ..? ಬನ್ನಿ.. ...ಬನ್ನಿ.. "
ಎಂದು ಉಪಚಾರದ ಮಾತಡಿ ಟಿವಿ ಹಚ್ಚಿ ಕೊಟ್ಟಳು.
ಹಾಲಿನಲ್ಲಿ ಒಂದು.. ನಾಯಿ ಸುಮ್ಮನೇ ಮಲಗಿತ್ತು...
ಅದನ್ನು ಕಟ್ಟಲಿಲ್ಲವಾಗಿತ್ತು..
'ಸರಸತ್ತೆ.. ಈ.. ನಾಯಿ.. ಕಟ್ಟಿ ಬಿಡಿ.." ಎಂದೆ...
"ಅಯ್ಯೊ.. ಇದಾ..ಅದು ಏನೂ ಮಾಡಲ್ಲ...
ಹಗಲು ಯಾರಾದರೂ ಬಂದರೆ ..ಬಂದವರೆ ಅದನ್ನು ನೋಡಿ ಕೂಗಬೇಕು...
ರಾತ್ರಿ ಮಾತ್ರಾ ಕೂಗುತ್ತೆ.. ಹಗಲು ಸುಮ್ಮನೆ ಮಲಗಿರುತ್ತೆ..
ನಾನು ಅಡಿಗೆ ಮಾಡುವಾಗ... ಕೂಗುತ್ತದೆ.. ಈ..ನಾಯಿ ಮುಂಡೇದು.."
ಅದಕ್ಕೆ ಹಿಡಿ ಶಾಪ ಹಾಕಿದಳು...
"ನೀವು ನೋಡುತ್ತಾ ಇರಿ.. ನಾನು ನನ್ನ ಕೆಲಸ ಮಾಡಿ ಕೊಳ್ಳುತ್ತೇನೆ...ನಿಮಗೆ ಏನಾದರೂ ಬೇಕಾದರೆ ನನ್ನನ್ನು ಕೂಗಿ.." ಎಂದು ಒಳಗೆ ಹೋದಳು...
ನಾನು ನನ್ನ ಸಕಲ ದೇವರುಗಳಿಗೆ..
ಅಕ್ಕನಿಗೆ ಸಾವಿರ ವಂದನೆ ಅರ್ಪಿಸಿದೆ...
"ಏನೂ ತಿಂಡಿ,ತೀರ್ಥ ಕೊಡಲಿಲ್ಲವಲ್ಲ..!!
"ಹಳೆ ಸ್ಟಾಕ್ ಇರಿಲಿಕ್ಕಿಲ್ಲ ಕಣಪ್ಪಾ..!"
ಈ ವಿನಾಯಕ.... ನನ್ನ ಮನಸ್ಸನ್ನು ಓದಿದವನ ಹಾಗೆ ಹೇಳಿದ.. .
ನಾವು ಟಿವಿ ನೋಡುತ್ತ ಕಳೆದು ಹೋಗಿ ಬಿಟ್ಟೆವು
ಭಾರತ ಪಾಕಿಸ್ತಾನ ಮ್ಯಾಚ್...!!
ರೋಮಾಂಚಕಾರಿಯಾಗಿತ್ತು... ಕೊನೆಯ ೭-೮ ಓವರ್ ಗಳು ಬಾಕಿ ಇತ್ತು...
"ಇನ್ನೂ ಮುಗಿದಿಲ್ಲವಾ.. ಹಸಿವೆ ಆಯಿತೇನ್ರೋ...
ಇರಿ ದೋಸೆ ತಿನ್ನುವೀರಂತೆ.. ದೋಸೆ ಹಿಟ್ಟು ಇದೆ..."
ಎನ್ನುತ್ತ ಬಂದೇ ಬಿಟ್ಟಳು.. ಸರಸತ್ತೆ...
"ಅಯ್ಯೊಯ್ಯೊ.. ಬೇಡವೇ ..ಬೇಡ.. ಸರಸತ್ತೆ.. ನಮ್ಮ ಆರೋಗ್ಯ ಸರಿ ಇಲ್ಲ..
ವ್ರಥಾ ನಿಮಗೇಕೆ ತೊಂದ್ರೆ.."
ನಾವು ಸುನಾಮಿ ಬಂದವರ ಥರಹ ಆಗಿಬಿಟ್ಟೆವು...
"ಇರ್ರೋ.. ಹೊಟೆಲ್ ತಿಂಡಿ ತಿಂದು ಹಾಗಾಗಿರ್ತದೆ... ಮನೆಯದು ತಿಂದರೆ ಏನೂ ಆಗಲ್ಲ.. "
ನಮ್ಮ ಮಾತು ಕೇಳುವ ಸ್ಥಿತಿಲ್ಲೇ ಇಲ್ಲ ಈ ಸರಸತ್ತೆ...!
ಅಯ್ಯೋ ದೇವರೆ.. ಇದೇನಾಗುತ್ತಿದೆ...!!
ವಿಚಾರ ಮಾಡುವದರಷ್ಟರಲ್ಲೆ ಫ್ರಿಜ್ಜಿನ ಬಾಗಿಲು ತೆರೆದೇ ಬಿಟ್ಟರು...
ಓಪನ್ ಕಿಚನ್...!!
ಒಂಥರಾ ವಾಸನೆ ಘಮ್ಮೆಂದು ಮೂಗಿಗೆ ಅಡರಿತು...!!
ನಮ್ಮ ಕೂದಲುಗಳೆಲ್ಲ ನಿಮಿರಿ ನಿಂತು ಬಿಟ್ಟವು..!!
ಸಾವಕಾಶವಾಗಿ... ಹಿಟ್ಟಿನ ಪಾತ್ರೆ ತೆಗೆದಳು..
ಪಾತ್ರೆ ತುಂಬಿಹೋಗಿ ಉಕ್ಕುವಸ್ಥಿತಿಯಲ್ಲಿತ್ತು..
ಹುಳಿ ಬಂದು ನೊರೆ.. "ಜೋರ್ರೆನ್ನುತ್ತಿತ್ತು..!!..
ಇದು ದೋಸೆ ಮಾಡಲಿಕ್ಕೆ ಬರೋದಿಲ್ಲ..!!
ತವದಿಂದ ಎದ್ದರೆ ಮಾತ್ರ ತಾನೆ..?
ನಾನು ಸಿರ್ಸಿ ಸಾಮ್ರಾಟ್ ಹೊಟೆಲ್ಲಿನಲ್ಲಿ ಸಪ್ಲೈರ್ ಕೆಲಸದ ಅನುಭವ ಇಲ್ಲಿ ಉಪಯೋಗಕ್ಕೆ ಬಂತು..!
ನನಗೆ ಧೈರ್ಯ ಬಂತು...
ವಿನಯಕ ಶಾಕ್ ನಿಂದ ಇನ್ನೂ ಚೇತರಿಕೊಳ್ಳುತ್ತಿದ್ದ...
" ನನ್ನಿಂದ ಇಲ್ಲಿ ಇರಲು ಸಾಧ್ಯಾನೆ.. ಇಲ್ಲ...!!
ಮನೆಗೆ ಓಡಿ ಹೋಗಿಬಿಡೋಣಾ. ಪ್ರಕಾಶಾ.. ..."
ಪಿಸು ಮಾತಲ್ಲಿ ಐಡಿಯಾ ಕೊಟ್ಟ...
"ಸುಮ್ನೆ ಇರೊ.. ಇಂಥಾ ಹುಳಿ ಹಿಟ್ಟಿನಿಂದ ದೋಸೆ ಆಗಲ್ಲಪ್ಪಾ..
ತವ ದಿಂದ ಎದ್ದರೆ ತಾನೆ..?
ಸುಮ್ನೆ ಮ್ಯಾಚ್ ನೋಡು... ಧೈರ್ಯದಿಂದಿರು....!!... "'
ನಾನು ಧೈರ್ಯ ಕೊಟ್ಟೆ...ಅವನಿಗೂ ತುಸು ಸಮಾಧಾನ ವಾಯಿತು..
ನಾಯಿ ... ಸುಮ್ಮನೆ ಮಲಗಿತ್ತು....
ಸರಸತ್ತೆ.....ತನ್ನಷ್ಟಕ್ಕೆ ಹಾಡು ಹೇಳುತ್ತ.. ....
ತವಾದ ಮೇಲೆ ದೋಸೆ ಹಿಟ್ಟು ಹೊಯ್ದಳು...
ಚುಂಯ್ ಶಬ್ಧ ಬಂತು...
ಅಲ್ಲಿಯವರೆಗೆ ಸುಮ್ಮನಿದ್ದ ನಾಯಿ ಗುರ್ರ್ ಅಂತ ಒಂದೇಸವನೇ... ಕೂಗಲಿಕ್ಕೆ ಶುರು ಮಾಡಿತು...
ಸರಸತ್ತೆಗೆ ಕೋಪ ನೆತ್ತಿಗೇರಿತು..
"ಎಂಥಾ ಧರಿದ್ರ ನಾಯಿ ಇದು..
ನಾನು ಅಡಿಗೆ ಮಾಡುವಾಗಲೆಲ್ಲ ಕೂಗ್ತದೆ..!
ಬಂದವರೆದುರಿಗೆ ನನ್ನ ಮಾನ ಕಳಿತದೆ.!! ..."
ಎನ್ನುತ್ತ ಅದಕ್ಕೆ ಗ್ಲಾಸಿನಿಂದ ಸ್ವಲ್ಪ ನೀರು ಸೋಕಿದಳು...
ನಾಯಿ ತನ್ನ ಡ್ಯೂಟಿ ಮುಗಿಯಿತು ಎಂಬಂತೆ ಸುಮ್ಮನಾಯಿತು..
"ನಾನು ಹೇಳುವಷ್ಟು ಹೇಳಿದ್ದೇನೆ..ಇನ್ನು ಇವರ ಹಣೆ ಬರಹ..!! ಎನ್ನುವಂತೆ...
ನಮ್ಮ ವಿರುದ್ಧ ದಿಕ್ಕಿಗೆ ಮುಖ ಮಾಡಿ ಮಲಗಿತು...
ಶ್ರೀನಾಥ್ ಬೋಲ್ ಮಾಡುತ್ತಿದ್ದ...!
ಅಫ್ರಿದಿ..ಬ್ಯಾಟು ಮಾಡುತ್ತಿದ್ದ...!
"ದೇವರೇ.... ಈ ಪಾಕಿಸ್ತಾನಿ..ಬೇಗನೇ.. ಔಟಾಗಲಿ..ಎಂದು ಪ್ರಾರ್ಥಿಸುತ್ತಿದ್ದೆ...
ಇಲ್ಲಿ ಜಗತ್ತಿನ ಎಂಟನೆಯ ಆಶ್ಚರ್ಯ...!! ಸರಸತ್ತೆ ದೋಸೆ ಎತ್ತಿ ಪ್ಲೇಟಿಗೆ ಹಾಕುತ್ತಿದ್ದಳು...
ನೋಡು..ನೋಡು ತ್ತಿದ್ದಂತೆ..ನಮ್ಮೆದುರಿಗೆ ಎರಡು ಪ್ಲೇಟಿನಲ್ಲಿ ದೋಸೆಗಳೊಂದಿಗೆ ಸರಸತ್ತೆ ಹಾಜರಾದಳು..
ಈ... ಕ್ರಿಕೆಟ್ ಮ್ಯಾಚ್ ಹಾಳಾಗಿ ಹೋಗಲಿ ಎನಿಸಿತು.....!!
ಆಶಾಳ ಮುದ್ದು ಮುಖ ನೆನನಪಿಗೆ ಬರುತ್ತಿತ್ತು....!
ಎದುರಿಗೆ ಸರಸತ್ತೆ ದೋಸೆ...!
ಅಕ್ಕನ ಮನೆ ಟಾಯ್ಲೆಟ್ ಸಹ.....!
ಬೇಡ.. ಬೇಡವೆಂದರೂ .... ನೆನಪಾಯಿತು..!!
'"ತಗೊಳಿ.. ಎರಡೆ ದೋಸೆ ಹೊಯ್ದಿದ್ದೀನಿ.. ಇದಕ್ಕೆ ಏನು ಹಾಕಲಿ..?.. ತುಪ್ಪ .., ಬೆಲ್ಲ..?..! "
ಅಯ್ಯಯ್ಯೋ..ತುಪ್ಪಾನಾ,....!! ಯಾವ ಶತಮಾನದ್ದೋ..!
" ಏನೂ ಬೇಡ..." ನಮಗೆ ಏನು ಹೇಳ ಬೇಕೆಂದು ತೋಚಲಿಲ್ಲ...
ಇರುಳಲ್ಲಿ ಕಂಡ ಬಾವಿಯಲ್ಲಿ....
ಹಗಲಲ್ಲಿ ಬಿದ್ದದಂತಾಯಿತು ನಮ್ಮ ಸ್ಥಿತಿ...!
ವಿನಾಯಕ ಒಂಥರಾ ಮುಖ ಮಾಡಿ ನನ್ನ ಮುಖಾನೇ ನೋಡುತ್ತಿದ್ದ....!
'ಈ ಪಾಪಿ..ಹೊರಗೆ,,.... ಸಿಗಲಿ.. ನೋಡ್ಕೊತ್ತಿನಿ... ಒಂದು ಕೈನಾ.." ಅನ್ನುವಂತಿತ್ತು..
... ಅಷ್ಟರಲ್ಲಿ ಸರಸತ್ತೆ ಏನೋ ನೆನಒಪಾದವರಂತೆ ಮತ್ತೆ ಫ್ರಿಜ್ ಬಾಗಿಲು ತೆಗೆದರು..
ಯಪ್ಪಾ....!!
ಮತ್ತೆ... ಅದೇ ಯಮಯಾತನೆಯ....ವಾಸನೇ...!!
ಈ.. ಜಗತ್ತಿನಲ್ಲಿ ಅದೆಷ್ಟು ... ಕೆಟ್ಟ...... ವಾಸನೆಗಳಿದಿಯೋ..?
ಅದೆಲ್ಲ "ಸರಸತ್ತೆ " ಫ್ರಿಜ್ಜಿನಲ್ಲೇ ಇದ್ದಿರಬಹುದಾ...!!
" ನೋಡ್ರೊ.. ನಿಮ್ಮ ಅದ್ರಷ್ಟ.. ಚೆನ್ನಾಗಿದೆ... ಚಟ್ನಿ ಇದೆ.....
ತುಂಬಾ ಹಳೆಯದೆನಲ್ಲ....!!
ಹಾಳಾಗಲಿಲ್ಲ.... ಹಾಕ್ಕೊಳ್ಳಿ....
ನನಗೆ ಇತ್ತೀಚೆಗೆ ಮರೆವು ಜಾಸ್ತಿ....!!
ಎಂದು ದೋಸೆ ಪಕ್ಕದಲ್ಲಿ ನಾಲ್ಕು..ನಾಲ್ಕು ಸ್ಪೂನ್ ಹಾಕಿಯೇ ಬಿಟ್ಟರು...!
ಅಷ್ಟರಲ್ಲಿ ಯಾರೋ ಹೊರಗಡೆ... ಕೂಗಿದರು..
"ನೀವು ತಿನ್ನಿ ನಾನು ಬಂದೆ" ಎನ್ನುತ್ತ..ಹೊರಗಡೇ ಹೊರಟರು...
ನಾನು ವಿನಾಯಕನ ಮುಖ.....
ವಿನಾಯಕ ನನ್ನ ಮುಖ ....
ನೋಡುತ್ತ..." ಶಾಕ್ " ಹೊಡೆದವರ ಹಾಗೆ ಕುಳಿತು ಬಿಟ್ಟಿದ್ದೇವು...
ಏನಾದರೂ ಮಾಡಲೇ... ಬೇಕಿತ್ತು...!!...??..
ನಾನು ಚಚಕನೇ ದೋಸೆ ಮಡಚಿ ಪ್ಯಾಂಟಿನ ಕಿಸೆಗೆ ತುರುಕಿ ಕೊಂಡೆ..
ವಿನಾಯಕ ದೋಸೆಯ...ಒಂದು ಚೂರನ್ನು ಮುರಿದು ಬಾಯಿಗೆ ಹಾಕಿ ಕೊಂಡ..
ತಿನ್ನಲಾಗಲಿಲ್ಲ ...
ಅಲ್ಲಿಯವರೆಗೆ.. ನಮ್ಮನ್ನು ಗಮನಿಸುತ್ತಿದ್ದ . ..ನಾಯಿ...
ಬಹಳ ಆಸಕ್ತಿಯಿಂದ ಕಿವಿ ತಿರುಗಿಸಿ ನಮ್ಮನ್ನೇ ನೋಡ ತೊಡಗಿತು...!
"ಅರೆ.. !! .?? ... ತಿನ್ನುತ್ತಿದ್ದಾನಲ್ಲ..!! .. ? ..ಎಂಬಂತೆ...!!
ವಿನಾಯಕ.." ಪಾಪ.. ನಾಯಿ... ನೂಡುತ್ತಿದೆಯೋ ..ಅದಕ್ಕೆ ಹಾಕ್ತಿನಿ .. ಕಣೊ... ! "
ಅಂತ ಅದರ ಮುಂದೆ ಎಸೆದ...
ಅದು ಮೂಸಿ ನೋಡಿತು..
"...ಬುಸುಕ್ ..." ಎಂದು ಶಬ್ದ ಮಾಡಿ......
ಮುಖತಿರುವಿ......
ಮತ್ತೆ ದೂರ.... ಹೋಗಿ.. ಮಲಗಿಬಿಟ್ಟಿತು.... !!...
ಇವರ " ಸಹಾವಾಸವೇ " ..ಸಾಕು ಎಂಬಂತೆ...!
ಚಟ್ನಿ ಏನು ಮಾಡಬೇಕು..??
ಅಲ್ಲಿ ..ಇಲ್ಲಿ ಹುಡು ಕಾಡಿದೆ...
ಟಿಪಾಯಿ ಕೆಳಗೆ " ತಿರುಪತಿ " ಪ್ರಸಾದದ.. ಪೊಲಿಥಿನ್ ಕವರ್ ಖಾಲಿ ..ಇತ್ತು...
ಲಗುಬಗೆಯಿಂದ ಚಟ್ನಿ ಅದರೊಳಗೆ.. ಹೇಗೇಗೋ... ಹಾಕಿದೆ......
ವಿನಾಯಕನೂ ಹಾಗೆ ಮಾಡಿದ..
ಅಷ್ಟರಲ್ಲಿ... ಸರಸತ್ತೆ ಏನೋ ಗೋಣಗುತ್ತ ಒಳಗೆ ಬಂದಳು...
ನಾನು ಸಾವಕಾಶವಾಗಿ ಚಟ್ನಿ ಕವರ್ ಪ್ಯಾಂಟಿನ ಮತ್ತೊಂದು ಕಿಸೆಗೆ ಸೇರಿಸಿದೆ...
"ಇಷ್ಟು ಜಲ್ದಿ ತಿಂದು ಬಿಟ್ರಾ...! ಛೇ..ಈ ಹಾಳು ನಾಯಿಗೆ ಏಕೆ ಹಾಕಿದ್ದೀರಿ...?
ಆ ಧರಿದ್ರ ನಾಯಿ.. ನಾನು ಏನೇ ಮಾಡಿದ್ರೂ ತಿನ್ನಲ್ಲ..
ಹೊಟೆಲ್ಲಿನ ಹಳಸಿದ ತಿಂಡಿಯಾದ್ರೂ ಪರವಾಗಿಲ್ಲ..
ಮುಕ್ಕುತ್ತದೆ.. !! ನಾನು ಮಾಡಿದ್ದು ಮಾತ್ರ ಬೇಡ...!!
ಯಾರು ಹಾಕಿದ್ದು ಅದಕ್ಕೆ...? "
ನಮ್ಮಿಬ್ಬರ ಕಡೆಗೆ ನೋಡಿದಳು..
ನಾನು ವಿನಾಯಕನ ಕಡೆಗೆ ನೋಡಿದೆ...
" ವಿನಾಯಕ...ಏನಪ್ಪಾ ಹೀಗೆ ಮಾಡ್ತೀಯಾ..? ಇದು ಸರಿನಾ..? ... .
ಬೆಳೆಯುವ ಹುಡುಗರು ಹೇಗೆ ತಿನ್ನ ಬೇಕು ಗೊತ್ತಾ..?..
ಇರು ಬೇರೆ ದೋಸೆ ಮಾಡ್ತೀನಿ..."
ಎನ್ನುತ್ತ ಕಿಚನ್ ಕಡೆ ಹೊರಟಳು...
"ಸರಸತ್ತೆ.. ಬೇಡವೇ ಬೇಡ..
ನನ್ನತ್ರೆ ಸಾಧ್ಯನೇ ಇಲ್ಲ.. !
ನೀವು ಹೀಗೆಲ್ಲ ಮಾಡಿದ್ರೆ... ನಾವಿನ್ನು ಬರುವದೇ ಇಲ್ಲ..!! .."
ಅಮಾಯಕ ವಿನಾಯಕ ಗೋಗರೆದ...
" ಇದು ಒಳ್ಳೆ ಚೆನ್ನಾಗಿದೆ...
ನಾನು ನಿಮಗೆ... ಅಂತ ಮಾಡಿದ್ದನ್ನು..
ಆ.. .. ಧರಿದ್ರ .. ನಾಯಿಗೆ ಹಾಕಿದ್ದಿಯಾ... !!....??
ನಾನು ಮಾಡಿದ ಕೆಲಸಕ್ಕೆ ಮರ್ಯಾದಿ ಬೇಡ್ವಾ....?
ನೀನು ತಿನ್ನಲೇ ಬೇಕು,,..!! .."
ಎಂದು ಹೊರಟೇ ಬಿಟ್ಟಳು...
ಚಟ್ನಿ ತಾಗಿದ ಕೈ ತೋಳೆಯಲೇದು ವಾಷ ಬೇಸಿನ್ ಬಳಿ ಹೋದವ...
ವಿನಾಯಕ ಗೇಟಿನ ಕಡೆಗೆ ಓಡ ತೊಡಗಿದ...
ನನಗೂ ಏನು ಮಾಡಬೇಕೆಂದು ತೋಚಲಿಲ್ಲ...
ನಾನೂ ಓಡಿದೆ...
"ನಿಲ್ರೋ..ನಿಲ್ರೋ.."
ಅಂತ ಸರಸತ್ತೆ ಕೂಗುತ್ತಿದ್ದರೂ .......
ನಾವು ಎದ್ದು ಬಿದ್ದು ಓಡಿಯೇ ಬಿಟ್ಟೆವು...
ಸ್ವಲ್ಪ ದೂರ ಬಂದಮೇಲೆ.. ದೋಸೆಯನ್ನು ಎಸೆದು ಬಿಟ್ಟೆ...
"ಮನೆಯಲ್ಲಿ ಏನೂ ..ಹೇಳುವದು ಬೇಡ..
" ಸರಸತ್ತೆ " ಹೇಳಿದರೆ ನೋಡಿ ಕೊಳ್ಳೋಣ....
ಮನೆ ತುಂಬಾ ನೆಂಟರು..
ಸುಮ್ಮನೆ ನಮ್ಮನ್ನು ನೋಡಿ ಗೇಲಿ .ಮಾಡಿ.... ನಗೋದು ಬೇಡ..."
ಎಂದು ವಿನಾಯಕ ಐಡಿಯ ಕೊಟ್ಟ...
ನನಗೂ... ಹೌದೆನಿಸಿತು....
ಮ್ಯಾಚು ಏನಾಯಿತೋ..? ?
ಕೊನೆಯ ಓವರ್ ನೋಡಲಿಕ್ಕೆ ಅಗಲೇ ಇಲ್ಲ.
ಛೆ.....!!
ಮನೆಗೆ ಬಂದು ಊಟ ಮಾಡಿ..
ಹಾಲಿನಲ್ಲಿ ಕುಳಿತು ಅದೂ ಇದೂ ಮಾತಾಡುತ್ತ..ಕುಳಿತ್ತಿದ್ದೇವು..
ಅಷ್ಟರಲ್ಲಿ ಬೆಡ್ಡ .. ರೂಮಿನಿಂದ ಬಾತ್ ರೂಂ ಗೆ ಯಾರೋ ಓಡಿದರು..
"ಉವ್ವೇ... ಊವ್ವೇ..ವ್ಯಾಕ್ಕ್ಕ್ಕ್ಕ್"
ಶಬ್ಧ..!!
ಯಾರೋ " ವಾಂತಿ " ಮಾಡುತ್ತಿದ್ದಾರೆ...ನಾನು ಓಡಿದೆ...
ಮುದ್ದಿನ ಮಡದಿ...!!
ಏನಾಯ್ತೆ..?? ." ನಾನು ಗಾಭರಿಯಾದೆ..
ಅಕ್ಕ ,, ಆಯಿ ಎಲ್ಲ ಓಡಿ ಬಂದರು...
ಮಡದಿಯನ್ನು ಹಿಡಿದು ಕೊಂಡರು..
ಅಕ್ಕನ ಮುಖದಲ್ಲಿ ಖುಷಿ... ಕಾಣುತ್ತಿತ್ತು.. .!!
" ಪ್ರಕಾಶೋ...? ಎಷ್ಟು ಫಾಸ್ಟ್ ಇದ್ದಿಯೋ...?
ಆಯೀ.. ದೊಡ್ಡಮ್ಮಾ...!
ಆಶಾದೂ.... ಹೊಸ ಸುದ್ಧಿ..!!..."
ಅಕ್ಕ.. ಸಂಬ್ರ್ಹಮದಿಂದ ಕುಣಿದಾಡಿಬಿಟ್ಟಳು...!
" ಸುಮ್ನಿರೆ..ಸಾಕು..!!
ಇನ್ನೂ ಮದುವೆಯಾಗಿ ಹದಿನೈದು ದಿನ ಆಗಲಿಲ್ಲ..!!
ಹೊಸ ಸುದ್ಧಿ ಹೇಗೆ ಆಗ್ತದೆ...?.."
ದೊಡ್ಡಮ್ಮ ಅನುಭವ ತೆರೆದಿಟ್ಟಳು...
ಮತ್ತೆ "" ...ಊವ್ವೇ...ಉವ್ವೇ..ಊಊಊವ್ವೇ.." ಶಬ್ಧ...!!
"ದೊಡ್ಡಮ್ಮ ...ನಿನಗೆ ಈಗಿನ ಕಾಲ ಎಲ್ಲ ಗೊತ್ತಗಲ್ಲ...
ಈ ಪ್ರಕಾಶಾ... ಈ ಹುಡುಗಿ..ಎಮ್.ಜೀ ರೋಡು..
ಪಾರ್ಕು.. ಸೀನೇಮಾ ..ಅಂಥಾ ತಿರ್ಗಿದಾರೆ..
ಲಾಡ್ಜಿಗೂ ಹೋಗಿರ್ತಾರೆ..!!
ಈಗೆಲ್ಲ ಇದೆಲ್ಲ ಸಾಮಾನ್ಯಾ..
ದೋಡ್ಡಮ್ಮ " ಇದೆಲ್ಲ " ನಿನಗೆ ..ಗೊತ್ತಾಗಲ್ಲ..!! ."
ಅಕ್ಕ ಖುಷಿಯಿಂದ ಕುಣೀದಾಡಿ ಬಿಟ್ಟಳು..!!
ಅಯ್ಯೋ ದೇವರೆ ಇದೇನಾಗ್ತಾ ಇದೆ..?
ಮತ್ತೆ " ಊಊವ್ವೇ..ಉವ್ವೇ.." ಶಬ್ಧ... !!
ಅದು ನನ್ನ ಎದೆ ಇರಿಯುತ್ತಿರುವಂತೆ ಅನಿಸುತ್ತಿತ್ತು...
ಸ್ವಲ್ಪ ಹೊತ್ತಿಗೆ ಮಡದಿಗೆ ಸ್ವಲ್ಪ ಸಮಾಧಾನ ಆಯಿತು..
ಅಕ್ಕ.. ಅವಳನ್ನು ಹಿಡಿದು ಕೊಂಡು.. ಬೆಡ್ಡ ರೂಮಿಗೆ ಕರೆ ತಂದರು...
ರೂಮಿನಲ್ಲಿ ಒಂಥರಾ.. ವಾಸನೆ.. ಘಮ್ಮೆನ್ನುತ್ತಿದೆ...!
ಮತ್ತೆ ".. ಓಕ್.... ಊಕ್ .." ಅಂದಳು..
... ಏದುಸಿರು ಬಿಡುತ್ತ ...
."...ಮೊದಲು...
ಆ.. ಹೊಲಸು ವಾಸನೆ..!
ಧರಿದ್ರ ...ಪ್ಯಾಂಟನ್ನು... ಹೊರಗೆ ಬೀಸಾಕಿ.. !!
ನನ್ನಿಂದ ತಡೆಯಲು ಆಗ್ತಾ ಇಲ್ಲ.. "
ಅಂತ ಕೂಗಿದಳು..
ನಾನು ಓಡೋಡಿ ಹೋಗಿ ಬಾಥ್ ರೂಮಿಗೆ ಹಾಕಿ ಬಂದೆ...
" ಅದು ಎಂಥದ್ದು..?? ಪ್ಯಾಂಟಿನ.. ಕಿಸೆಯಲ್ಲಿ..?
ತಿರುಪತಿ ಪ್ರಸಾದ ಎಂದು ಮೂಸಿದರೆ. .. ಅಯ್ಯೋ ತಡಿಲಿಕ್ಕೆ ಆಗಲ್ಲ..!!
".. ವ್ಯಾಕ್... ಉಉಕ್...."
ಮತ್ತೆ ಹೇಳಲಾಗಲಿಲ್ಲ..
'ಊಕ್..ಊಕ್.." ಆಯಿತು
ಈ ಅಮಾಯಕ ವಿನಾಯಕ..ನಗಲು ಶುರು ಮಾಡಿದ...!!
ನನಗೆ ದೋಸೆ ಸಂಗಡ".. ಚಟ್ನಿ .." ಎಸೆಯಲು ಮರೆತು ಹೋಗಿತ್ತು....!!.
ಪ್ಯಾಂಟಿನ ಕಿಸೆಯಲ್ಲೇ ಉಳಿದು ಬಿಟ್ಟಿತ್ತು...!!
ಆದರೆ ....
ಯಾವಾಗಲೂ..... ಕ್ರಿಕೆಟ್ ಮ್ಯಾಚ್ ನೋಡುವಾಗಲೆಲ್ಲ " ಇದು " ನೆನಪಾಗುತ್ತದೆ.....
ಈಗಲೂ.......
ನನ್ನ ಪ್ಯಾಂಟಿನ ಕಿಸೆಯಲ್ಲಿ ಏನೇ ...ಇಟ್ಟರೂ....
ಭದ್ರವಾಗಿ ...... ಸುರಕ್ಷಿತವಾಗಿರುತ್ತದೆ.......
ಹಾಗೆಯೇ...
ಅಕ್ಕನ ಆಸೆಯನ್ನೂ... ಬಲು .. ಬೇಗನೇ .. ನೆರವೇರಿಸ ಬೇಕಾಯಿತು...!
(ಇದರ ಮೊದಲ ಭಾಗ ಗಳನ್ನೂ ಓದಿ...)
A) " ನಾನು ಕರೆಯೋದು.. ಹೆಚ್ಚೋ... ನೀವು ಬರೋದು ಹೆಚ್ಚೋ..."
B) ಶ್ರವಣ ಬೆಳಗೊಳದಲ್ಲಿ....
ಓದಿರಿ ...
"ಮಸ್ತ್ ಮಜಾ ಮಾಡಿ..."
Friday, January 9, 2009
Subscribe to:
Post Comments (Atom)
56 comments:
ಪ್ರಕಾಶ್ ಸರ್,
ಅವಿನ್ನೆಷ್ಟಿವೆ ಇಂತಹ ನಗೆ ವಿಚಾರಗಳು ನಿಮ್ಮ ನೆನಪಿನ ಗೋದಾಮಿನಲ್ಲಿ :).
ನಿಮ್ಮ ಸರಸತ್ತೆ ತಿಂಡಿ, ಅಮಾಯಕ ವಿನಾಯಕರ ಪೇಚಾಟ, ನಿಮ್ಮವರ ಒದ್ದಾಟ, ಮತ್ತು ನಿಮ್ಮ ಪೀಕಲಾಟ ನನ್ನನ್ನು ನಗೆಗಡಲಲ್ಲಿ ತೇಲಿಸಿತು, ಬರಹ ಚೆನ್ನಾಗಿದೆ.
-ರಾಜೇಶ್ ಮಂಜುನಾಥ್
ಪ್ರಕಾಶ್ ,
ನಿಮ್ಮ ಬರಹಗಳು ಚೆನ್ನಾಗಿವೆ.
ನಕ್ಕೂ ನಕ್ಕೂ ಸುಸ್ತು.
thanks
ಪ್ರಕಾಶಣ್ಣ...
ನಕ್ಕಿದ್ದು ನಿಜ. ಸರಸತ್ತೆ ಮನೆಯ ನಾಯಿ ತುಂಬ ಇಷ್ಟವಾಯಿತು ನನಗೆ.
ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ ಪ್ರಕಾಶಣ್ಣ.
ನಗಿಸಿದ್ದಕ್ಕೆ ಧನ್ಯವಾದ.
ಪ್ರಕಾಶ್ ಸಾರ್,
ಸರಸತ್ತೆ ಕತೆ ಇನ್ನೂ ಮುಗಿದಿಲ್ಲವೇನು ? ಇಂದು ಬೆಳಿಗ್ಗೆ ಒಳ್ಳೆ ತಿಂಡಿ ಮಾಡಿಸಿಕೊಂಡು ತಿಂದುಹೋಗೋಣವೆಂದು ಬಂದರೆ ಈ ಸರಸತ್ತೆಯನ್ನು ನೆನೆಸಿದಿರಿ..ಹೋಗಲಿ ಬಿಡಿ ಇವತ್ತಿನ ಉಪವಾಸಕ್ಕೊಂದು ನೆಪ....ಮತ್ತೆ ಬರೆವಣಿಗೆ ಓದಿತ್ತಾ ಅದೇ ನಗು, ಒಳನಗು, ಮುಗುಳ್ನಗು, ಹುಸಿನಗು, ಕೊನೆಗೆ ಜೋರಾಗಿ ನಕ್ಕಿದ್ದಾಯಿತು......
ರಾಜೇಶ್...
ಅಮಾಯಕ ವಿನಾಯಕ.. ಇಲ್ಲೇ ಬೆಂಗಳೂರಲ್ಲೇ ಇದ್ದಾನೆ...
ಅಲ್ಲಿ ನಾವೇನೂ ತಿನ್ನಲಿಕ್ಕೆ ಹೋಗಲಿಲ್ಲ...
ಬಾಯಿಗೆ ಒಂದು ಚೂರು ಹಾಕಿದ್ದನ್ನೂ ಅಮಾಯಕ ತಿನ್ನಲಿಲ್ಲ...
ಇಂಥದ್ದನ್ನು ಮನೆಯವರು ರೂಢಿ ಮಾಡಿ ಕೊಂಡಿದ್ದಾರಲ್ಲ..!
ಸಹಜವಾಗಿ ತಿನ್ನುತ್ತಾರಲ್ಲ...!!
ಅದು "ಚಿದಂಬರ ರಹಸ್ಯ" ಅಲ್ಲವಾ..?
ದೋಸೆ ಚಟ್ನಿ ಇಷ್ಟ ಪಟ್ಟಿದ್ದಕ್ಕೆ ....
ಧನ್ಯವಾದಗಳು...
ಹೇಮಾಶ್ರೀ.....
ಬಹಳ ದಿನಗಳ ನಂತರ ಸುಸ್ವಾಗತ....!!
ನಾನು ನಿಮ್ಮ ಗಝಲ್ ಲೆಖನಗಳ ಅಭಿಮಾನಿ....
ಹೀಗೆ ಬರುತ್ತಾ ಇರಿ...
ಚಟ್ನಿ ದೋಸೆ ಇಷ್ಟವಾಗಿದ್ದಕ್ಕೆ ವಂದನೆಗಳು...
u forgot someone mama...in this incident,,someone else was also there with u both!!!!
ಶಾಂತಲಾ....
ಆ ನಾಯಿ ಮಾತ್ರ "ಅದ್ಭುತವಾಗಿತ್ತು...
ನಾವು ಮೊದಲ ಬಾರಿ ಹೋದಾಗ ಕಂಡಿಲ್ಲ....
ಅದು ದೋಸೆ ಚೂರು ಮೂಸಿ ನೋಡಿ.....
ಮಾಡೀದ ರೀತಿ ಇದೆಯಲ್ಲ...
ಅದನ್ನು ನೆನಪಾದಾಗಲೆಲ್ಲ..
ನನ್ನ ಷ್ಟಕ್ಕೆ ನಾನು ಬಹಳಸಾರಿ ನಕ್ಕಿದ್ದೇನೆ...
ಆದರೆ ಇಲ್ಲಿ ಎಷ್ಟರ ಮಟ್ಟಿಗೆ ಸಫಲನಾಗಿದ್ದೇನೆ ಗೊತ್ತಿಲ್ಲ...
ಚಂದದ...ಮುದ್ದಾದ ನಾಯಿ ಅದು...
ನಾಯಿ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...
ಕುತೂಹಲ ಉಳಿಸಿಕೊಳ್ಳುವಂತೆ ಚೆನ್ನಾಗಿ ಬರೆದಿರುವಿರಿ.
ನಾಯಿಯ ವಿಷಯ ಪ್ರಸ್ತಾಪವಾದಾಗ ನೀವು ಸರಸತ್ತೆ ಮನೆಯಿಂದ ಓಡಿಹೋಗುವಾಗ ( ಹಾಗೆಂದು ಮೊದಲೇ ಗೆಸ್ ಮಾಡಿದ್ದೆ.)ಅಟ್ಟಿಸಿಕೊಂಡು ಬಂದು ತೊಂದರೆ ಕೊಡುತ್ತೆ ಅಂದುಕೊಂಡಿದ್ದೆ.
ನಿಮ್ಮ ಆಶಾ ತಿರುಪತಿ ಪ್ರಸಾದ ಎಂದು ಭಾವಿಸಿ ಚಟ್ನಿಯನ್ನು ಬಾಯಿಗೆ ಹಾಕಿಕೊಂಡಿದ್ದರೇನೋ ಎಂದುಕೊಂಡಿದ್ದೆ.
ಆದರೆ ಈ ಎರಡೂ ಊಹೆಗಳನ್ನೂ ಸುಳ್ಳು ಮಾಡಿದ್ದಕ್ಕೆ ಧನ್ಯವಾದಗಳು!!!!
ಈ ಸರಸತ್ತೆ ಕಾಲ್ಪನಿಕ ಪಾತ್ರವೇ ?
ಶಿವು ಸರ್....
ನಿಮ್ಮ ಈಸಾರಿಯ ಲೇಖನ ತುಂಬಾ ಚೆನ್ನಾಗಿದೆ...
ಇದರ ನಂತರ "ಸರಸತ್ತೆ ಮನೆಗೆ ಮತ್ತೆ ಹೋಗಲಿಲ್ಲ...
ಅವರು ಇಲ್ಲೇ ಬಾಣಸವಾಡಿ ಬಳಿ ಇದ್ದಾರೆ...
ತುಂಬಾ ವರ್ಷಗಳಾದವು...
"ಊವ್ವೇ.." ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಪ್ರಶಾಂತು....
ಹೋ..ಹ್ಹೋ..ಹ್ಹೋ... ನೀನು ನಮ್ಮ ಸಂಗಡ ಬಂದಿದ್ಯಾ..?
ನನಗೇ ನೆನಪೇ ಆಗಲಿಲ್ಲ...
ನೀನು ಸಣ್ಣವನಿದ್ದೆ...
ದೋಸೆ ಏನು ಮಾಡಿದೆ...?
ಹೌದು.. ಸ್ವಲ್ಪ.. ಸ್ವಲ್ಪ ನೆನಪಾಗುತ್ತಿದೆ...
ನೀನು ದೋಸೆ ಏನು ಮಾಡಿದೆ..? ನೆನಪಾಗುತ್ತಿಲ್ಲ...
ಹೇಗೆ ನಡಿತಿದೆ ಪ್ರಾಕ್ಟೀಸ್.. ಡಾಕ್ಟರ್ ಸಾಹೇಬರೇ..?
ನಿಮ್ಮನ್ನು ಮರೆತಿದ್ದಕ್ಕೆ ವಿಷಾದಗಳು...
ಆದರೆ ಬಿಸಿ ಬೇಳೆ ಬಾತಿನಲ್ಲಿ ನೀನು ಬಂದಿದ್ದು ನೆನಪಿದೆ...
ಓದುಗರೆ "ಡಾಕ್ಟರ್ ಪ್ರಾಶಾಂತ್ " ನನ್ನ ಅಳಿಯ...
ಚಂದ್ರ ಕಾಂತರವರೆ...
ಈ ಸರಸತ್ತೆ ೧೦೦% ಇದ್ದಾರೆ..
ಇನ್ನೂ ಗಟ್ಟಿ ಮುಟ್ಟಾಗಿದ್ದಾರೆ...
"ಅವರ" ಹೆಸರನ್ನು ಬದಲಿಸಲಾಗಿದೆ...
ನನ್ನ ಅಕ್ಕನ ಮಗನೂ ನಮ್ಮ ಸಂಗಡ ಬಂದಿದ್ದ.. ನನಗೆ ಅದು ನೆನಪಾಗಲಿಲ್ಲ..
ಬೆಳಿಗ್ಗೆಯಿಂದ ಮೂರು ಫೋನ್...
ಅಮೇರಿಕಾದಲ್ಲಿರುವ ನನ್ನ ಅಕ್ಕನ ಮಗಳಂತೂ..ನೆನಪು ಮಾಡಿಕೊಂಡು ನಕ್ಕುನಕ್ಕು ಸುಸ್ತಾದಳಂತೆ....
ಸ್ವಲ್ಪ "ಒಗ್ಗರಣೆ" ಹಾಕಿದ್ದು ಬಿಟ್ಟರೆ ಬಾಕಿ ಎಲ್ಲವೂ ಸತ್ಯ...
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು...
ದೋಸೆ ಚಟ್ನಿ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...
ಹಹ್ಹಹ್ಹಾ...! ಅದ್ಭುತ ನಿರೂಪಣೆ ! This is the best of all posted till now. ಒಬ್ಬನೇ ಕೂತು ಹುಚ್ಚರಂತೆ ನಗುವಾಗ ಮುಜುಗರವಾಯಿತು ! ಹೆಹ್ಹೆಹ್ಹೆ ! ಇವತ್ತು ಬೆಳಿಗ್ಗೆ ತಿಂಡಿ ತಿನ್ನಲು ಹೋದರೆ ಅಲ್ಲೂ ಚಟ್ನಿ. ತಿನ್ನುವಾಗ ಒಂಥರಾ ಆಯಿತು ! ಸರಸತ್ತೆ ಇರುವುದು ಬಾಣಸವಾಡಿಯಲ್ಲಿ ಅಂತ ಬರೆದ್ಯಲ ಪ್ರಕಾಶಣ್ಣ, ನಾವಿರುವುದೂ ಅಲ್ಲೇ ಮಾರಾಯ ಸಾಯ್ಲಿ !
ಪ್ರಕಾಶ್,
ನಿಮ್ಮ ಸರಸತ್ತೆ ಪ್ರಸಂಗಗಳು ... ನಗಿಸಿ ಸುಸ್ತಾಗಿಸುತ್ತವೆ.
" ಆ ಧರಿದ್ರ ನಾಯಿ.. ನಾನು ಏನೇ ಮಾಡಿದ್ರೂ ತಿನ್ನಲ್ಲ..
ಹೊಟೆಲ್ಲಿನ ಹಳಸಿದ ತಿಂಡಿಯಾದ್ರೂ ಪರವಾಗಿಲ್ಲ..
ಮುಕ್ಕುತ್ತದೆ..ನಾನು ಮಾಡಿದ್ದು ಮಾತ್ರ ಬೇಡ... "
ನಕ್ಕೂ ನಕ್ಕೂ ಸುಸ್ತಾದೆ.
ಅಲ್ಲಾ, ನಿಮ್ಮ ಮಾವ ( ಸರಸತ್ತೆಯ ಪತಿ ) ಹ್ಯಾಂಗಿದ್ರು ? ಅವರಿಗೆ ಒಂದು ಮೆಡಲ್ ಕೊಡದೇಯಾ ಹೇಳಿ ನನ್ನ ಅಭಿಪ್ರಾಯ ! ಮತ್ತೆ , ಸರಸತ್ತೆಯ ಮಕ್ಕಳ್ಯಾರೂ ನಿಮ್ಮ ಬ್ಲಾಗ್ ಓದ್ತ್ವಿಲ್ಲೆ ಹೇಳಿ ಕಾಣ್ತು ! ನೀವು ಬಚಾವ್.
ಸರಸತ್ತೆಯ ಕಲಾಪಗಳು ಬಲು ಚೆನ್ನಾಗಿವೆ, ಹ ಹ ಹ ಹ ತುಂಬ ನಗುಬರುತ್ತೆ, ಈ ಅಂಕಣವನ್ನು ಸರಸತ್ತೆಗೆ ಸ್ವಲ್ಪ ತೋರಿಸಿ ಏನು ಹೇಳುತ್ತಾರೋ ನೋಡಿ ಆನಂತರ ಮತ್ತೊಂದು ಲೇಖನ ಬರೆಯಿರಿ ಹ ಹ ಹ .....
ನಿಮ್ಮ ಬರಹಗಳು ಮತ್ತಷ್ಟು ನಗೆಕೂಟವೇರ್ಪದಿಸಲೆಂದು ಆಶಿಸುತ್ತೇನೆ.
ವಂದನೆಗಳು...
:D ಒಳ್ಳೇ ಮಜಾ ಇದ್ದು ಸಂಭಾಷಣೆಗಳು!
ಅಂದಹಾಗೆ, ಒಂದು ರಿಕ್ವೆಸ್ಟು: ದಯವಿಟ್ಟು ನಿಮ್ಮ ಬ್ಲಾಗಿನ ಬಣ್ಣಗಳನ್ನ ಬದಲು ಮಾಡಿ.. ನೋಡಕ್ಕೇ ಸಾಧ್ವಿಲ್ಲೆ ಈ ಕಡುನೀಲಿ ಕಲರಲ್ಲಿ..
ಪ್ರಕಾಶ,
ನೀವೀಗ ಕನ್ನಡದ ಹಾಸ್ಯಸಾಹಿತ್ಯದ ಚಕ್ರವರ್ತಿಯಾಗಿದ್ದೀರಿ.
ನಿಮ್ಮ ಸರಸತ್ತೆ ಇದೇ ರೀತಿ ಆಹಾರ ತಿಂದು ಇನ್ನೂ ಗಟ್ಟಿ ಮುಟ್ಟಾಗಿದ್ದಾರೆಂದರೆ ಮೆಚ್ಚಲೇಬೇಕು.
ಅಥವಾ
ಅವರು ತಿನ್ನಲೊಂದು ತರಹ,ಬಂದವರಿಗೆ ಕೊಡಲೊಂದು ತರಹ ಎನಾದರೂ ಏರ್ಪಾಡು ಇತ್ತೇ?
ಕಂಡುಹಿಡೀರಿ ನೋಡೋಣ!
ಅಶೋಕ ಉಚ್ಚಂಗಿ
http://mysoremallige01.blogspot.com/
ಕೆ ಕ್ಕೆ ..ಕ್ಕೆ...ಕ್ಕೆ....
ಹಿತ್ತಲಮನೆಯ ಬೀಗಣ್ಣನವರೆ....
ಇಂದು ನನ್ನಕ್ಕ ಊರಿನಿಂದ ಬಂದಿದ್ದಾರೆ..
ಮತ್ತೆ ಮನೆಯಲ್ಲಿ ಸರಸತ್ತೆ ಬಗೆಗೆ ಮಾತೇ ಮಾತು..
ಎಲ್ಲಕಡೆಗಳಿಂದ ಫೋನು..!!
ಅಕ್ಕ ಇನ್ನಷ್ಟು ಸ್ವಾರಸ್ಯಕರ ವಿಷಯ ಹೊರ ಹಾಕಿದರು...
ಸ್ವಲ್ಪ ಎದೆ ಗಟ್ಟಿ ಮಾಡಿಕೊಳ್ಳಿ...
"ಸರಸತ್ತೆ ಯವರಿಗೆ ಅಲ್ಲಿಯ ಮಹಿಳಾ ಮಂಡಳದಲ್ಲಿ ನಡೆದ ಸ್ಪರ್ಧೆಯಲ್ಲಿ......
" ಅತ್ಯುತ್ತಮ ಪಾಕಶಾಸ್ತ್ರ ಪ್ರವೀಣೆ" " ಬಹುಮಾನ ಬಂದಿತ್ತಂತೆ..!!
ಅಕ್ಕ ಆ ಕಾರ್ಯಕ್ರಮದ.. ಸಾಕ್ಷಿಯಾಗಿದ್ದರಂತೆ..!
ನಾನು ಮೂರ್ಛೆ ಹೋಗುವದೊಂದು ಬಾಕಿ...
ನಿಮಗೆ ನಮ್ಮ ಸಮಸ್ತ ಓದುಗರ ಸಾಕ್ಷಿಯಾಗಿ ಅವರ ವಿಳಾಸ ಕೊಡುವೆ...
ಒಮ್ಮೆ ದೈರ್ಯ ಮಾಡುವಿರೇನು...?
ಮಡದಿಯವರನ್ನು ಕೇಳಿ ನೋಡಿ..!!
ಧನ್ಯವಾದಗಳು...
ಚಿತ್ರಾ....
ನಿಜವಾಗಿ ಹೇಳಬೇಕೆಂದರೆ ನಿಮ್ಮ ಹೊಸ ಲೇಖನದಿಂದ ನಾನು ಸ್ಪೂರ್ತಿ ಪಡೆದೆ...
ನಾನಂತೂ ನಿಮ್ಮ ಲೇಖನ ಓದಿ ನಕ್ಕು ನಕ್ಕು ಸುಸ್ತಾದೆ..!
ಮತ್ತೊಮ್ಮೆ ಅಭಿನಂದನೆಗಳು...
ಆ ನಾಯಿ ಅವರು ಅಡಿಗೆ ಮಾಡಿ ಮನೆಯವರಿಗೆ ಬಡಿಸುವಾಗ .....
ಕೂಗುತ್ತದೆ ಆನ್ನುವ ಸ್ವಾರಸ್ಯ... ಬಹಳ ಸಾರಿ ತಲೆ ಕೆಡಿಸಿದೆ...
ಡೈನಿಂಗ್ ಟೇಬಲ್ ಕಡೆ ಮುಖ ಮಾಡಿ ..
ಮನೆಯ ಸೀಲಿಂಗ್ ನೋಡಿ..... ಅದು ಕೂಗುವ ಪರಿ ..!!
ನೆನಪಾದರೆ ನಗು ತಡೆಯಲಾಗುವದಿಲ್ಲ....
ಇನ್ನು ಅವರ ಮನೆಯವರ ವಿಚಾರ..
ಬಿಸಿಬೇಳೆ ಬಾತಿನ ಸಂದರ್ಭದಲ್ಲಿ ನಮಗೆ ಹಾಕಿದ್ದನ್ನು ಅವರಿಗೂ ಹಾಕಿದ್ದಾರೆ..
ಏನೂ ಆಗದವರ ಹಾಗೆ ತಣ್ಣಗೆ ತಿಂದಿದ್ದಾರೆ...!!
ಇದು ಜಗತ್ತಿನ ಅದ್ಭುತಗಳಲ್ಲೊಂದು...!
ಮತ್ತೊಮ್ಮೆ ನಿಮ್ಮ ಲೇಖನದಿಂದ ನಕ್ಕಿಸಿದ್ದಕ್ಕೆ ಅಭಿನಂದನೆಗಳು...
ಹೀಗೆ ಬರುತ್ತಾ ಇರಿ...
ಮನಸು...
ಸರಸತ್ತೆ ಮನೆಯವರು ಇದನ್ನು ನೋಡಿರಲೂ ಬಹುದು..
ತಮ್ಮ ಬಗೆಗೆ ಸಾರ್ವಜನಿಕ ಅಭಿಪ್ರಾಯ ಹೀಗಿದೆಯೆಂದು ತಿಳಿದು
ಸುಧಾರಿಸಲೆಂದು ಆಶಿಸೋಣ.. ಅಲ್ಲವಾ..?
ಈಗ ನಮ್ಮಕ್ಕ, ಬಾವ ಇಲ್ಲಿಲ್ಲ..
ಹಾಗಾಗಿ ಅವರ ಸಂಪರ್ಕ ಇಲ್ಲ..
ಪ್ರತಿಕ್ರಿಯೆಗೆ ಧನ್ಯವಾದಗಳು...
ಸುಶ್ರುತ..ದೊಡ್ಡೇರಿ...
ಸರಸತ್ತೆ... ಅಕ್ಕನನ್ನು ಬಹಳ ಒತ್ತಾಯ ಮಾಡಿ...
"ಗಣೇಶ ಹಬ್ಬ"ದ ಪೂಜೆಗೆ ಕರೆದಿದ್ದರಂತೆ...
ಪೂಜೆಯಲ್ಲಿ ಏನೂ ಅನಾಹುತ ಅಗಲಿಕ್ಕಿಲ್ಲವೆಂದು...
ಗಣೆಶನ ಮೇಲೆ ಭಾರ ಹಾಕಿ ಹೋಗಿದ್ದರಂತೆ..
" ಆಲೂಗಡ್ಡೆ ಚಿಪ್ಸ್" ಪ್ರಸಾದವೆಂದು ನೈವೇದ್ಯ ಮಾಡಿ ಕೊಟ್ಟಿದ್ದರಂತೆ....!
ಪೂಜೆಗೆ ಅರ್ಚಕರನ್ನು ಕರೆಸಿದ್ದರಂತೆ..!
ಅ ಅರ್ಚಕರು "ನೈವೇದ್ಯ" ಮಂತ್ರ ಏನು ಹೇಳಿರಬಹುದು...??
ನಿಮ್ಮ ಬ್ಲೋಗ್ ಸ್ವಾರಸ್ಯಕರವಾಗಿರುತ್ತದೆ...
ನಿಮ್ಮಸಲಹೆ ಖಂಡಿತವಾಗಿ ಸ್ವೀಕರಸಿದ್ದೇನೆ..
ಶೀಘ್ರದಲ್ಲಿ ಬದಲಾಯಿಸುವೆ...
ದಯವಿಟ್ಟು ಹೀಗೆ ಬರುತ್ತಾ ಇರಿ...
ಧನ್ಯವಾದಗಳು...
ಬೀಗಣ್ಣನವರೆ, ನೀವು ವಿಳಾಸ ಕೊಡುವುದು ಹೆಚ್ಚೋ ನಾವು ಹೋಗುವುದು ಹೆಚ್ಚೋ ? ಹೆಹ್ಹೆಹ್ಹೆ...ಇದೆಲ್ಲಿಂದ ಬಂತಪ್ಪ ಗ್ರಹಚಾರ !
ಸುನಾಥ ಸರ್....
ಬಹಳ...
ಬಹಳ..
ದೊಡ್ಡದು " ಇದು "...
ನನ್ನ ಯೋಗ್ಯತೆಗೆ ಮೀರಿದ ಬಹುಮಾನ ಕೊಟ್ಟಿದ್ದೀರಿ...
ಇದಕ್ಕಿಂತ ಬದುಕು ದೊಡ್ಡದು....
ಈಗಿನ ಆರ್ಥಿಕ ಸ್ಥಿತಿಯಲ್ಲಿ..
ಒಂದೆರಡು ಮನೆ ಕಟ್ಟುವ ಕೆಲಸ ಸಿಗಲಿ....
ಇನ್ನೂ ನಗುತ್ತ.. ಹಲವಾರು ಲೇಖನ ಬರೇದೇನು...
ನಿಮ್ಮ ಆಶೀರ್ವಾದ ಹೀಗೆಯೆ ಇರಲಿ...
ಧನ್ಯವಾದಗಳು...
ಅಶೋಕ್....
ನಿಮ್ಮ ಅನುಮಾನ ನಮ್ಮನೂ ಬಹಳ ಕಾಡಿದೆ.....
ಬಿಸಿಬೇಳೆ ಬಾತಿನ ಒಂದೆ ಒಂದು ಸಂದರ್ಭದಲ್ಲಿ....
ಅವರ ಮನೆಯವರು ನಮ್ಮ ಸಂಗಡ ತಿಂದಿದ್ದಾರೆ...
ಮತ್ತೆ ನಮ್ಮಕ್ಕ ಮೂರು ನಾಲ್ಕು ಬಾರಿ ಹೋಗಿ ಬಂದರೂ......
ಅವರ್ಯಾರೂ ಅಥಿತಿಗಳ ಸಂಗಡ ಕುಳಿತು ತಿಂದಿಲ್ಲವಂತೆ..!
ಮತ್ತೆ ಅವರ ಮನೆಗೆ ಹೋಗುವ .. ಸಂದರ್ಭವಾಗಲಿ...
ಬಂದರೂ ಹೋಗುವ ಧೈರ್ಯವಾಗಲಿ..
ನಮಗಾರೂ ಇಲ್ಲ...!
ಹಿತ್ತಲಮನೆ ಬೀಗಣ್ಣನವರಿಗೆ ಕಳಿಸೋಣ...
ನಮ್ಮೆಲ್ಲರ ಪ್ರತಿನಿಧಿಯಾಗಿ... ಹೇಗೆ..?
ಸರ್.. ನಿಮ್ಮ ಬ್ಲೋಗ್ ಸ್ವಾರ್ಸ್ಯಕರವಾಗಿದೆ...
ನಿಮ್ಮ ಪ್ರತಿಕ್ರಿಯೆಗಳೂ ಮಜವಾಗಿರುತ್ತದೆ...
ಹೀಗೆ ಬರುತ್ತಾ ಇರಿ..
ಧನ್ಯವಾದಗಳು...
ಕಿಶನ್....
ಕ್ಕಿ...ಕ್ಕಿ...ಕ್ಕೀ......
ಅಕ್ಕ ಇವತ್ತು ಒಂದು ಬ್ರೇಕಿಂಗ್ ನ್ಯೂಸ್ ಹೊರ ಹಾಕಿದ್ದಾರೆ....!
"ನೀವೂ...ಕೂಡ... ಒಮ್ಮೆ "ಸರಸತ್ತೆ " ಮನೆಗೆ ಹೋಗಿ....
ಊಟ ಮಾಡಿ ಬಂದಿದ್ದರಂತೆ..!"
ನಾವೆಲ್ಲ ನಿಮ್ಮ ಅನುಭವ ಕೇಳಲು....
ಕಾತುರದಿಂದ.. ಕಾದು ಕುಳಿತ್ತಿದ್ದೇವೆ...
ಅತೀ ಶೀಘ್ರವಾಗಿ ಹಂಚಿಕೊಳ್ಳಿ....
ಹ್ಹೇ..ಹ್ಹೆ..ಹ್ಹೇ...!
ಹಿತ್ತಲಮನೆ ಬೀಗಣ್ಣನವರೆ...
ನಾನು ವಿಳಾಸ ಕೊಡುವದು ಹೆಚೋ..
ನಿಮಗಾಗುವ ಅನುಭವ... ಹೆಚ್ಚೋ...
ನೋಡೇ ಬಿಡೋಣ....
ಸೊಸೆಯನ್ನು " ನಮ್ಮನೆ " ಯಲ್ಲಿ ಬಿಟ್ಟು ಹೋಗಿ...!
ಪ್ರಕಾಶ್ ಅವರೆ,
ನಕ್ಕೂ ನಕ್ಕೂ ಸುಸ್ತಾದೆ. ನಾನು ಸುಮ್ಮ ಸುಮ್ಮನೆ ಎಣಿಸಿ ಎಣಿಸಿ ನಗುತ್ತಿದ್ದರೆ ನನ್ನ ಯಜಮಾನರು "ಎಂತ ಓದ್ತಾ ಇದ್ದೆ ಹೇಳು ನಾನೂ ಒದ್ತಿ.." ಎಂದು ಅವರೂ ಓದಿದರು.... ನನ್ನೊಳಗಿನ ನಗು ಈಗ ಅವರ ಮುಖದ ತುಂಬೆಲ್ಲಾ. ತುಂಬಾ ಧನ್ಯವಾದಗಳು :)
ನನಗೊಂದು ಸಂದೇಹ.. ಸರಸತ್ತೆ ಮನೆಯ ನಾಯಿ ಅಡಿಗೆ ಮಾಡುವಾಗಲೆಲ್ಲಾ ಮನೆಯ ಸೀಲಿಂಗ್ ನೋಡಿ ಕೂಗುತ್ತಿತ್ತು ಎಂದಿರುವಿರಿ. ಬಹುಶಃ ಅದು ಮುಂದೆ ತನಗೆ ಸಿಗಬಹುದಾದ ತಿಂಡಿಯ ರುಚಿಯನ್ನು ಯೋಚಿಸಿ ಅದನ್ನು ತಿನ್ನುವ ಕರ್ಮವನ್ನು ಎಣಿಸಿ ಸೀಲಿಂಗ್ಗೆ ನೇಣಾದರೂ ಹಾಕಿ ಸಾಯೋಣವೇ ಎಂದು ಸ್ಕೆಚ್ ಹಾಕುತ್ತಿತ್ತೇನೋ ಅಲ್ಲವೇ? :)
ತುಂಬಾ ಉತ್ತಮ ಹಾಸ್ಯ ಪ್ರಜ್ಞೆಯಿದೆ ನಿಮಗೆ. ಮುಂದಿನ ಬರಹಕ್ಕಾಗಿ ತುಂಬಾ ಕಾತುರಳಾಗಿವೆ.
hmmm...even i was there with u in this incident,,and i had taken it in a paper and thrown it too..hi hi
ತೇಜಸ್ವಿನಿಯವರೆ...
ನಿಮಗೂ.., ನಿಮ್ಮ ಯಜಮಾನರಿಗೂ...
" ಊವ್ವೇ..ಉವ್ವೇ.." ಇಷ್ಟ ವಾಗಿದ್ದಕ್ಕೆ ...
ವಂದನೆಗಳು...
ನಾನು " ಸರಸತ್ತೆ " ಮರೆಯ ಬಹುದು..
ಈ ಬಿಸಿಬೇಳೆ ಬಾತು, ಚಟ್ನಿಯ "ವಾಸನೆ"...
ಇತ್ಯಾದಿಗಳನ್ನೂ ಮರೆಯ ಬಹುದೇನೋ...
ಆದರೆ ಆ ನಾಯಿಯ ..
ಎಕ್ಸಪ್ರೆಷನ್ ಮಾತ್ರ ಮರೆಯಲಾರೆ...
ನೆನಪಾದಾಗಲೆಲ್ಲ ನನ್ನಷ್ಟಕ್ಕೇ ನಗುತ್ತಿರುತ್ತೇನೆ...
ಬಹಳ ಮುದ್ದಾದ ನಾಯಿ ಅದು..
ಹೀಗೆ ಬರುತ್ತಾ ಇರಿ...
ಪ್ರಶಾಂತು....
ನಿನ್ನ ಅಮ್ಮ( ನನ್ನಕ್ಕ) ಈಗ ಸಂಪೂರ್ಣವಾಗಿ ನನಗೆ ನೆನಪಿಸಿದ್ದಾಳೆ..
ನಿಜ ನೀನು ಆ ದಿನ ಹಟ ಮಾಡಿ ನಮ್ಮ ಸಂಗಡ ಬಂದಿದ್ದೆ..
ಅಂದಿನ.. ಅವರ ಮನೆಯ "ಪ್ರಜಾವಾಣಿ" ಪೇಪರ್ ನಲ್ಲಿ...
ದೋಸೆಯನ್ನು ಸುತ್ತಿ ಹೊರಗೆ ಎಸೆದು ಬಂದಿದ್ದು ನೆನಪಾಗಿದೆ..
ನಿನ್ನ ಹೆಸರು " ನೆನಪಾಗದೆ " ಬಿಟ್ಟು ಹೋಗಿದ್ದಕ್ಕೆ ವಿಷಾದಗಳು...
ಅದಕ್ಕೆಬೆಂಗಳೂರಿಗೆ ಬಂದಾಗ ಸೂಕ್ತ ಪರಿಹಾರ ಕೊಡಲಾಗುವದು...
ಹ್ಹೇ,,,ಹ್ಹೇಏ..ಹ್ಹೆ..!
k mama...will come soon for that parihara,,will take a big party to forgive u...ha ha
ಇಲ್ಲ, ಇಲ್ಲ.. ನನಗೆ ಅವರ ಮನೆಗೆ ಹೋಗುವ ಸೌಭಾಗ್ಯ ದೇವರ ದಯದಿಂದ ದೊರೆತಿಲ್ಲ! ನಾನು ಅಂದು ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದೇನೆ. ಆದರೆ ಸರಸತ್ತೆಯನ್ನೂ, ಅವರ ಮುದ್ದಿನ ನಾಯಿಯನ್ನೂ ನೋಡಿದ್ದೇನೆ ಹಾಗೂ ಸರಸತ್ತೆಯ ನಾಯಿ ಬಂದ ಕೂಡಲೇ ರೆಖಕ್ಕನ ಮನೆಯ ನಾಯಿ ಕೂಗುವುದಿರಲಿ, ಮುಖ ಕೂಡ ನೋಡದೆ ಅವಸರದಿಂದ ತನ್ನ ಮೂಲೆ ಸೇರುವ ಹಿನ್ನೆಲೆ ಈಗ ಅರ್ಥವಾಗುತ್ತಿದೆ !
ಪ್ರಶಾಂತು...
ಖಂದಿತಾ..ಬಾ..
ನೀನು ಬರುವದು ಹೆಚ್ಚೋ..
ನಾನು ಕೊಡಿಸುವದು ಹೆಚ್ಚೋ..
ಸರಸತ್ತೆ ಮನೆಗೆ ಊಟಕ್ಕೆ ಹೋದರೆ ಹೇಗೆ..?
ಕಿಶನ್.....
ನೀವು ಹೇಳಿದ್ದನ್ನು ನಂಬಬಹುದಾ...??..!!
ಅಕ್ಕನ ಮನೆ ನಾಯಿ ಗಂಡು..
ಸರಸತ್ತೆ ಮನೆ ನಾಯಿ ಹೆಣ್ಣು...
ಆದರೂ ದೋಸ್ತಿಯಾಗಲಿಲ್ಲವಂತೆ...!
ಅಕ್ಕ ನೆನಪು ಮಾಡಿಕೊಂಡು ನಗುತ್ತಿದ್ದಾರೆ..!!
ಹ್ಹೇ...ಹ್ಹೇ..ಹೇ...
ಪ್ರಕಾಶ್ ಸರ್,
ಇಂದಿನ ಇಡೀ ಕನ್ನಡ ಪ್ರಭ ಪತ್ರಿಕೆ ಜಾಲಾಡಿದೆ, ನನಗೆ "ಬ್ಲಾಗಾಯಣ" ಅಂಕಣ ಸಿಗಲಿಲ್ಲ, ದಯವಿಟ್ಟು ಅದರ ಅಂತರ್ಜಾಲದ ಕೊಂಡಿಯೇನಾದರೂ ಲಭ್ಯವಿದ್ದರೆ ಕೊಡುತ್ತೀರಾ.
-ರಾಜೇಶ್ ಮಂಜುನಾಥ್
ರಾಜೇಶ್...
ನಿಮಗೆ ಈಮೇಲ್ ಕಳಿಸಿದ್ದೇನೆ...
ನೋಡಿ...
ಮಗದೊಮ್ಮೆ ಅಭಿನಂದನೆಗಳು...
aha...great ...thanks u asked me before,,no guts to have food at sarsatte mane ,,plz leave me..can go on fast atleast but sarsatte adige no way!!!
ಪ್ರಶಾಂತು...
ನೀ ಬಾರೋ ಮಾರಾಯಾ..!
ನೀನು ಕೇಳಿದಲ್ಲಿ "ಟ್ರೀಟ್" ಕೊಡಿಸ್ತೀನಿ....
ಜಲ್ದಿ ಬಾ.. ಬೆಂಗಳೂರಿಗೆ....
ಸರಸತ್ತೆ ಮನೆಗೆ ಹೋಗುವ ಧೈರ್ಯ ನನಗಂತೂ ಇಲ್ಲ...
ಆಶೀಷ್ ಗೆ ಒಮ್ಮೆ ನೋಡ ಬೇಕಂತೆ...
"ಸರಸತ್ತೆ" ಫೋಟೊ ತೆಗೆಯುವ ಆಸೆ ಇದೆಯಂತೆ ಇದೆಯಂತೆ ಅವನಿಗೆ...
hmmmm k mama,,will come soon for the treat>>>and better convince ashu not to take the risk
prashaantu...
hhaa..hhaa...!
ಪ್ರಕಾಶ್,
ಸಕ್ಕತ್ತಾಗೆದೆ, ಇಷ್ಟು ದಿನ ನನ್ನ ಕಣ್ಣಿಗೆ ನಿಮ್ಮ ಬ್ಲಾಗ್ ಹೆಂಗೆ ಬಿದ್ದಿರ್ಲಿಲ್ವೋ ಎನೋ
--
ಪಾಲ
ಪಾಲಚಂದ್ರ....
ನನ್ನ ಬ್ಲೋಗಿಗೆ ಸುಸ್ವಾಗತ.....
ಈ ಸರಸತ್ತೆ ಪಾರ್ಟ್ ಅರ್ಥ ಆಗಬೇಕಾದರೆ ಈ ಮೊದಲು ಬರೆದ//
೧) ನಾನು ಕರೆಯೋದು ಹೆಚ್ಚೊ.. ನೀನು ಬರೆಯೋದು ಹೆಚ್ಚೋ
೨)ಶ್ರವಣ ಬೆಳಗೊಳದಲ್ಲಿ...
ಭಾಗಗಳನ್ನು ಓದಿ...
ಇನ್ನೂ ಎಂಜೋಯ್ ಮಾಡಬಹುದು.....
ನಿಮ್ಮ ಪ್ರತಿಕ್ರಿಯೆ ನನಗೆ ಬಹಳ ಅಮೂಲ್ಯ..
ಅದು ನನಗೆ ಮತ್ತೂ ಬರೆಯಲು ಸ್ಪೂರ್ತಿ....
ನಾನು ಮೂಲತಃ ಬರಹಗಾರನಲ್ಲ...
ಹೀಗೆ ಬರುತ್ತಿರಿ...
ಧನ್ಯವಾದಗಳು....
ಅವಶ್ಯ, ನಾಳೆ ಹೆಂಗೂ ರಜಾ, ನಿಮ್ಮ ಬ್ಲಾಗ್ ಪೂರ್ತಿ ತಡಕಾಡ್ತೀನಿ :)
ಪ್ರಕಾಶಣ್ಣ.. ಸಾಕಪ್ಪ ಸಾಕು.. ನಿನ್ನ ಲೇಖನಗಳನ್ನ ಓದೋರಿಗೆಲ್ಲ ಸಲ್ಲೇಖನ ವ್ರತ ಮಾಡಿಸಿ ಬಿಡ್ತೆ....
ಪಾಲಚಂದ್ರ...
ಬನ್ನಿ.. ಓದಿ...
ಧನ್ಯವಾದಗಳು...
ಹರೀಷ್....
ಪ್ರತಿಕ್ರಿಯೆಗೆ ಧನ್ಯವಾದಗಳು....
"ಉವ್ವೇ..ವ್ವ್ಯಾಕ್.." ಮಜಾ ಅನುಭವಿಸಿದ್ದಕ್ಕೆ....
ಮತ್ತೆ ಶ್ರವಣ ಬೆಳಗೊಳಕ್ಕೆ ಹೋಗಿ ಬಿಟ್ಟಿದ್ದೀರಲ್ಲ...!
ಹ್ಹಾ...ಹ್ಹ್ಹಾ ಹ್ಹೀ.ಹ್ಹೀ..
ಅಬ್ಬಾ...ನಕ್ಕು ನಗಿಸಿ ಬಿಟ್ಟಿತು...
ತು೦ಬಾ ಚೆನ್ನಾಗಿತ್ತು ಪ್ರಕಾಶಣ್ಣ...
ಸುಧೇಶ್....
ಸರಸತ್ತೆ "ವಿಳಾಸ" ಬೇಕಾದರೆ ಕೊಡುತ್ತೇನೆ..
ಒಮ್ಮೆ ಹೋಗಿಬನ್ನಿ...
hhaaa...hhaaa!
"ನಿಮಗೆ "ದೋಸೆ, ಚಟ್ನಿ" ಇಷ್ಟವಾದುದಕ್ಕೆ ಅಭಿನಂದನೆಗಳು...
ಹೀಗೆ ಬರುತ್ತಾ ಇರಿ...
ಧನ್ಯವಾದಗಳು...
ಬೇಡ ಪ್ರಕಾಶಣ್ಣ... ನಮ್ಮ ಪಿ.ಜಿ. ಅಡುಗೆಯೇನು ಕಡಿಮೆಯಿಲ್ಲ:) ಅದು ನರಸಮ್ಮನ ಅಡುಗೆಗೆ ಪೈಪೋಟಿ ನೀಡುತ್ತದೆ.
ಓಹ್... ನಾಯಿ ಕೂಡ ಸರಸತ್ತೆ ಅಡುಗೆ ಮಾಡೋವಾಗ ಕೂಗುತ್ತೆ ಅಂದ್ಮೇಲೆ.... ನಾವೇನು ಮಹಾ... ಅಲ್ವಾ..?
ಬಹುಶಃ ಅದ್ಕೇ ನೀವು ಸಿಮೆಂಟ್-ಮರಳನ್ನೇ ನೆಚ್ಚಿಕೊಂಡಿದ್ದು. ಹೊಟ್ಟೆಗೆ ಏನೇ ತೊಂದ್ರೆಯಾದ್ರೂ... ಕಾಂಕ್ರೀಟ್ ಹಾಕಿದ್ರಾಯ್ತು ಅಂತನಾ? ;)
ಸುಧೇಶ್...
ಪಿಜಿ ಅಡುಗೆ ಬಹಳ ಕೆಟ್ಟದಾಗಿರುತ್ತದಂತೆ...
ಸರಸತ್ತೆ "ಚಟ್ನಿಯ " ವಾಸನೆಯಷ್ಟು ಇರಲಿಕ್ಕಿರಲ್ಲ ...
ಅಲ್ಲವಾ..?
ಧನ್ಯವಾದಗಳು...
ಅಸತ್ಯ ಅನ್ವೇಷಿ
ಹ್ಹಾ..ಹ್ಹಾ..ಹ್ಹಾ..!!
ಪ್ರತಿಕ್ರಿಯೆಗೆ ವಂದನೆಗಳು...
ಆಫೀಸಿನಲ್ಲಿ ಕೂತು ಓದ್ತಾ ಇದ್ದೀನಿ, ನಗು ತಡಿಯಕ್ಕೆ ಆಗ್ತಿಲ್ಲ... ಅಬ್ಬಾ ನಿಮ್ಮ ಸರಸತ್ತೆ ಪ್ರಸಂಗ ತುಂಬಾ ಚನ್ನಾಗಿದೆ...
Post a Comment