Friday, December 26, 2008

ಮಿಲತೀ..ಹೇ..ಜಿಂದಗೀ...ಮೇ..ಮೊಹಬ್ಬತ್..... ಕಭಿ. .ಕಭೀ..


ಮುಂಬೈಯಲ್ಲಿರುವಾಗ ಜೀವನದಲ್ಲಿ ಒಂದು ಹಂತಕ್ಕೆ ಬರಬೇಕು ಅನ್ನುವದೇ ಗುರಿಯಾಗಿತ್ತು..

ಅಲ್ಲೂ ಕೂಡ ಒಂದೆರಡು ಹೆಣ್ಣು ಮಕ್ಕಳು ಎಡತಾಕಿ ಹೋಗಿದ್ದರು.

ಆದರೆ ನಾನಿನ್ನೂ "ವಿಜಯಾ" ಗುಂಗಿನಿಂದ ಹೊರಬಂದಿರಲಿಲ್ಲ...

ಆರ್ಥಿಕ ಭದ್ರತೆ ಬಂದ ಮೇಲೆ.. ಅವಳ ಮನೆಗೆ ಹೋಗಿ...
ಅವಳ ಅಣ್ಣನನ್ನೇ ಮಾತಾಡಿಸಿ ಬರುವ ವಿಚಾರ ನನ್ನದಾಗಿತ್ತು..

ಒಂದು ಚಂದದ ಮನೆ.. ಅವಳ ಪ್ರೀತಿ.....
ನಮ್ಮಿಬ್ಬರ ಲೋಕವೇ ಬೇರೆ......
ಎಂದೆಲ್ಲಾ ಹಗಲು ಕನಸು ಕಾಣುತ್ತಿದ್ದೆ...

ಅಲ್ಲಿ ಷಹ.., ಸುನಿಲ್ ಅಣ್ಣಮ್.., ವಿಲಾಸ್ ಮ್ಹುಳೆ..
ಇವರುಗಳು.. ನನಗೆ ಹಿಂದಿ ಸಿನೇಮಾ, ಗುಲ್ಜ್ಯಾರ್..ಸಿನೆಮಾಗಳು..
ಹಳೆಯ ಹಿಂದಿ ಸಿನೆಮಾ ಹಾಡುಗಳು...
ಒಳ್ಳೊಳ್ಳೆ ಗಝಲ್ ಗಳ ರುಚಿ ಹತ್ತಿಸಿದರು...

ಅವರೆಲ್ಲ ಈಗ ಎಲ್ಲಿ ಕಳೆದು ಹೋಗಿದ್ದಾರೋ...

ಒಮ್ಮೆ ಮುಂಬೈ ಗೆ ಹೋಗಿ ಪೇಪರನಲ್ಲಿ.., ಟಿವಿ ಯಲ್ಲಿ..,
ಜಾಹಿರಾತು ಕೊಟ್ಟು ಹುಡುಕಿಬಿಡೋಣ ಅನಿಸುತ್ತದೆ...


"ಒಮ್ಮೆ ಸಿಕ್ಕಿದ... ಪ್ರೀತಿಯನ್ನು ಬಿಡಬಾರದು..
ಭದ್ರವಾಗಿ ಹಿಡಿದು ಕೂಂಡು ಬಿಡಬೇಕು..
ಕಳೆದು ಹೋದರೆ ಮತ್ತೆ ಹುಡುಕುವದು ಬಲು ಕಷ್ಟ...

ಪ್ರೀತಿ ಮಾಡುವವರು ಸಿಕ್ಕಿದ್ದಾರಲ್ಲ.. !!
ಅವರನ್ನು ಹೋಗಲು ಬಿಡಬಾರದು...!"

"ಮಿಲತಿ ಹೆ ..ಜಿಂದಗೀ ..ಮೆ...
ಮೊಹಬ್ಬತ್..ಕಭೀ..ಕಬೀ...!!

ಹೋತಿ ಹೆ ದಿಲ್ಬರೋಂಸೆ.....
ಇನಾಯತ್ ..ಕಬೀ..ಕಭ್ಹೀ......"


ಇವರು ನೆನಪಾದಾಗಲೆಲ್ಲಾ..ಈ ಹಾಡು ನೆನಪಾಗುತ್ತದೆ...

ಹ್ರದಯ ಭಾರವಾಗುತ್ತದೆ....
ಅವರೊಂದಿಗೆ ಹಂಚಿಕೊಂಡ ಕ್ಷಣಗಳು..ಮಾತುಗಳು...
ಪ್ರತಿ ಶನಿವಾರ ಷಹಾನ ಪಾರ್ಟಿಗಳು....
ಅವನ ಹೆಂಡತಿ... ಅವನನ್ನು ಬಿಟ್ಟು ಓಡಿ ಹೋದ ಕಥೆ..

..ಅವನ ಹಾಡುವ ಶೋಕ ಗೀತೆಗಳು.....

"ಪಲ್..ಪಲ್..ದಿಲ್..ಕೇ..ಪಾಸ್..
ತುಮ್ ರೆಹತೀ..ಹೋ..."

ಹಾಡು ಮುಗಿದ ಮೇಲೆ ಅವನ ದುಃಖ...
ಅವನ ಕಣ್ಣಿರು...

"ಅವಳು ಯಾವಾಗಲಾದರೂ...ತಿರುಗಿ... ನನ್ನ ಬಳಿ ಬರಲಿ...
ನಾನು ಕಾಯುತ್ತೇನೆ,,,,
ನಾನು ಅವಳನ್ನು.. ಸ್ವೀಕಾರ ಮಾಡುತ್ತೇನೆ....
ಅವಳ.. " ಅವನ " ಮಗುವನ್ನೂ.... ಸಹ ಪ್ರೀತಿಸುತ್ತೇನೆ.."
ಅಂದಿದ್ದ..ಅವನ ಮಾತುಗಳು.....

ಹಣ ..ಐಶ್ವರ್ಯ ಇದ್ದರೂ ತಾನು ಮದುವೆಯಾಗದೆ ಇದ್ದಿದ್ದ....
ಅವಳನ್ನು ಜಿವದಷ್ಟು ಪ್ರೀತಿಸುತ್ತಿದ್ದ.. ಆ ಷಹಾ...!

ಎಲ್ಲ ನೆನಪಾಗುತ್ತಿವೆ...

ಇವರೆಲ್ಲ ಈ ಜಗದ ಜನ ಜಂಗುಳಿಯಲ್ಲಿ..ಕಳೆದು ಹೋಗಿದ್ದಾರೆ...

ಅವರ ಗೆಳೆತನ..ಹುಡುಗಾಟಿಕೆ...
ಅವರ........
ಪ್ರೀತಿಯೂ...
ಸಹ ಕಳೆದು ಹೋಗಿದೆ....

" ಜಾನೆ ಕಂಹಾ.. ಗಯೇ ವೋ..ದಿನ್....."....

ಆಗ ನನ್ನ ಬಾವ ಆಗ್ರಾದಲ್ಲಿದ್ದ.. ರಾಷ್ಟ್ರಿಕ್ರತ ಬ್ಯಾಂಕಲ್ಲಿ ವ್ಯವಸ್ಥಾಪಕ...

"ಪ್ರಕಾಶು..ಇಲ್ಲಿ ಬೋರು .ಬರ್ತಿದೆ... ಮಾರಾಯಾ ..
..ಹಿಂದಿ ಜನ...ಹಿಂದಿ...ಭಾಷೆ..ಒಮ್ಮೆ ಬಂದು ಹೋಗೊ.."
ಅಕ್ಕ ಗೋಗರೆದಿದ್ದಳು...


ಅಕ್ಕ...
ನಾನು ಯವತ್ತೂ ಅವಳನ್ನು "ಅಕ್ಕ " ಎಂದು ಕರೆಯಲೇ ಇಲ್ಲ....
ಹೆಸರು ಹೇಳಿಯೇ ಕರೆಯುತ್ತಿದ್ದೆ....
ಮೊನ್ನೆ ಹೆಂಡತಿ ಮಗನ ಸಂಗಡ " ..ತಾರೆ ಜಮೀನ್ ಪರ್ .." ಸಿನೆಮಾ ನೋಡುತ್ತಿದ್ದಾಗ ..
ಅಕ್ಕನ ನೆನಪಾಗಿ ಕಣ್ಣಲ್ಲಿ.. ನೀರಾಡಿತ್ತು...

ಫೋನ್ ಮಾಡಿ ಹೇಳಿಯೂ ಬಿಟ್ಟಿದ್ದೆ...

ಅಂಥಹ ಅಕ್ಕ...ನನ್ನಕ್ಕ...
ಅವಳು...ನನ್ನಮ್ಮ...ನನ್ನ.."ಆಯಿ" ಕೂಡ...

ನನ್ನ ಗೆಳೆಯ..ಗೆಳತಿ..ಹಾಗೆ...

ನನ್ನ.. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ...ಅವಳು ನಾಲ್ಕು ಗಂಟೆಗೆ ಏಳುತ್ತಿದ್ದಳು..
ನನ್ನನ್ನೂ ಎಬ್ಬಿಸುತ್ತಿದ್ದಳು..
ದೊಡ್ಡದಾಗಿ ಅಂದಿನ ಪರೀಕ್ಷೆಯ.."ಸಂಭಾವ್ಯ" ಪ್ರಶ್ನೋತ್ತರ ಗಳನ್ನು ಓದುತ್ತಿದ್ದಳು...
ನಾನು ಕೇಳುತ್ತಿದ್ದೆ.. ...
ಅವಳು ಮಾಡುತ್ತಿದ್ದುದನ್ನು ನೋಡುತ್ತಿದ್ದೆ...

ಗಣಿತವನ್ನೂ ಸಹ....

ಅವಳು ಮಾಡುತ್ತಿದ್ದುದು ನನ್ನ ಪರೀಕ್ಷೆಯ ತಯಾರಿ...

ಬೆಚ್ಚಗೆ ಚಾದರ ಹೊದ್ದು... ಕುಳಿತಿರುತ್ತಿದ್ದೆ..

ನಾನು ಪಾಸಾದಾಗಾ..ನನಗಿಂತ ಸಂಭ್ರಮ ಪಟ್ಟಿದ್ದಳು....

ನನ್ನ ತುಂಟತನ..ಮೊಂಡುತನ..ತಾಳ್ಮೆಯಿಂದ..ಸಹಿಸುತ್ತಿದ್ದಳು...
..ನನಗಿಂತ ಎರಡು ವರ್ಷ ದೊಡ್ಡವಳು...

ನನಗಾಗಲೇ ತಾಯಿಯಾಗಿದ್ದಳು...

ಇಬ್ಬರೂ ಸೇರಿದಾಗ ಜಗಳ ಮಾಡದೆ ..
ನಮ್ಮ ಪ್ರೀತಿ ಕೊನೆ ಗೊಳ್ಳುವದಿಲ್ಲ...

ಈಗಲೂ ಸಹ....

"ಫೂಲೊಂಕಾ..ತಾರೋಂಕಾ..ಸಬ್ ಕಾ..ಕೆಹನಾ..ಹೆ..
ಏಕ್ ಹಜಾರೋಂ...ಮೇ ..
ಮೇರಿ ಬೆಹೆನಾ..ಹೇ..."


ಪ್ರೀತಿ ಎಲ್ಲಿಯೂ ಸಿಗುವದಿಲ್ಲ...
ನಮ್ಮ ಬಳಿಯೇ ಇರುತ್ತದೆ...

ಹತ್ತಿರವೇ...... ಇರುತ್ತದೆ..

ನೋಡುವ ಕಣ್ಣುಗಳು..ಬೇಕು..
ಪ್ರೀತಿಯನ್ನು ..ಭಾವಿಸುವ.. ಮನಸೂ ಇರಬೇಕು...
ಅನುಭವಿಸುವ ಹ್ರದಯ ಬೇಕು...

ಅಪ್ಪನ ಕಾಣದ ನನಗೆ ಚಿಕ್ಕಪ್ಪ ಇದ್ದಾರೆ...

"ಮಗನೆ ಹೀಗಲ್ಲ..ಹೀಗೆ..
ಮಗನೆ.. ಇದು ಸರಿ..ಇದು ತಪ್ಪು......."
ನನ್ನ ಅಭ್ಯುದಯ ಕಂಡು ಖುಷಿ ಪಡುವ ಚಿಕ್ಕಪ್ಪ ಇದ್ದಾರೆ..

ಓದು ಬರಹ ತಿಳಿಯದ...
ಪ್ರೀತಿಯೊಂದೆ ಗೊತ್ತಿರುವ "ಆಯಿ"....
ಮಕ್ಕಳನ್ನು ಪ್ರೀತಿ ಮಾಡುವದನ್ನು ಬಿಟ್ಟು ಮತ್ತೇನೂ ಅರಿಯದ..ಆಯಿ....

ಹೌದು.....ನಾನೇ ....ಅದ್ರಷ್ಟವಂತ...

ಜೀವನದಲ್ಲಿ.. ಬೆಟ್ಟದಷ್ಟು ಪ್ರೀತಿ ಸಿಕ್ಕಿದೆ..
ನನ್ನ ಅನುಭವದ ಪ್ರತಿಯೊಬ್ಬರ ಪ್ರೇಮ ಸಿಕ್ಕಿದೆ...

ಜೀವಕ್ಕೆ ಜೀವ ಕೊಡುವ ಗೆಳೆಯರು..
ಅಕ್ಕ.. ಅಣ್ಣ..

ದೂರದ ಊರಿನಲ್ಲಿರುವ ತಮ್ಮ..ತಂಗಿ...

ಜಗತ್ತಿನ ಎಲ್ಲ ಬಗೆಯ... ಪ್ರೀತಿ ಪ್ರೇಮದ ಬಾಂಧವ್ಯ..

ಪ್ರೀತಿ ತುಂಬಿದ ಸಂಸಾರ....

ಅದರೆ......

ಅದರೂ.......


" ..ಅಪ್ಪಾ....ಅಪ್ಪಾ.....!

ನೀನೂ ..ಇರಬೇಕಿತ್ತು..!
ನಿನ್ನನ್ನು "...ಅಪ್ಪಾ.." ಎಂದು ಬಾಯಿತುಂಬಾ...ಕರೆಯಲು...!

ನಿನ್ನನ್ನೊಮ್ಮೆ ಬಿಗಿದಪ್ಪಿ..ಅಳಲು...!
ನನ್ನ ..ಖುಷಿ..ದುಃಖ..ನನ್ನ...ಸುಖ..ಸಂತೋಷ.. ಎಲ್ಲ...ಹಂಚಿಕೊಳ್ಳಲು..!

ಪ್ರಿತಿಯಿಂದ... ನನ್ನ .. ತಲೆ.. ಸವರಲು...!

ನೀನೂ ... ಇರಬೇಕಿತ್ತು ..ಅಪ್ಪಾ...!.."


(please read coments also....)

52 comments:

Santhosh Rao said...

ವಾಹ್.. Masterpiece.. ನೀವ್ ಏನೇ ಬರದ್ರುನು ಚೆನ್ನಾಗಿರುತ್ತೆ ಸಾರ್ ..

"ಪಲ್..ಪಲ್..ದಿಲ್..ಕೇ..ಪಾಸ್..
ತುಮ್ ರೆಹತೀ..ಹೋ..."
ನಾನು ಬೇಜಾನ್ ಸಲ ಒಬ್ಬೊಬ್ಬನೇ ಹಾಡ್ಕೊಂದ್ದಿನಿ :)

sunaath said...

ಪ್ರೀತಿಯ ವಿವಿಧ ಮುಖಗಳನ್ನು ತುಂಬಾ ಚೆನ್ನಾಗಿ ತೋರಿಸಿದ್ದೀರಿ, ಪ್ರಕಾಶ. ನನ್ನ ಮನಸ್ಸೂ ಸಹ ಭಾವಸಾಗರದಲ್ಲಿ ಮುಳುಗಿ ಹೋಯಿತು.

Ittigecement said...

ಸಂತೋಷ್....

ನಾನು ಏನೋ ಬರೆಯಲಿಕ್ಕೆ ಹೋಗಿ ಏನೋ ಬರೆದೆ...

ಷಹಾ..ಪ್ರತಿ ಶನಿವಾರ ಗುಂಡು ಹಾಕಿ ಇದೇ ಹಾಡು ಹಾಡುತ್ತಿದ್ದ...
ಅವನ ಹೆಂಡತಿ ಬೇರೆಯವನೊಬ್ಬನ ಸಂಗಡ ಇದ್ದಿದ್ದು..
ಅವರ ಮಗುವನ್ನೂ ತಾನು ಪ್ರೀತಿಸುವೆ..
ಎನ್ನುವ ಭಾವುಕತನಕ್ಕೆ ನಾನು ಮೂಕನಾಗಿದ್ದೆ..
ಅವನಿಗಾದ ಸಂಕಟ.. ಅವಳು ಮತ್ತೆ ಬರಬಹುದೆಂಬ ನಿರೀಕ್ಷೆ..
ತೀರಾ ವಾಸ್ತವವಾಗಿ ನೋಡುವವರು ಅವನು "ಹುಚ್ಚ" ಅಂದುಬಿಡಬಹುದೇನೋ...
ನನಗೆ ಅನ್ನಿಸಲಿಲ್ಲ...
ಸಂತೋಷ್...
ಯಾಕೊ ..ಬರಹ ಬರೆಯುವಾಗ ನಾನು ಅತ್ತು ಬಿಟ್ಟೆ...

ಧನ್ಯವಾದಗಳು..

Ittigecement said...

ಸುನಾಥ ಸರ್...

ಸಣ್ಣವನಿದ್ದಾಗ ನಾನು ತುಂಟತನ ಮಾಡಿದಾಗ
ನನ್ನ ಗೆಳೆಯರು "ನನ್ನ ಅಪ್ಪನಿಗೆ ಹೇಳುತ್ತೇನೆ ..ನೋಡು" ಎಂದು ಹೆದರಿಸಿದಾಗ
ಅಪ್ಪ ನೆನಪಾಗುತ್ತಿದ್ದ...
ನನಗೀಗ ಮದುವೆಯಾಗಿ..ನನ್ನ ಮಗನಿಗೆ ನಾನು ಅಪ್ಪ...
ಈಗಲೂ ಅದೇ ಭಾವ..
'ಅಪ್ಪ ಬೇಕಾಗಿತ್ತು..ಇರಬೇಕಾಗಿತ್ತು.."


ಧನ್ಯವಾದಗಳು...

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...

"ಅದರೆ......

ಅದರೂ.......

" ..ಅಪ್ಪಾ....ಅಪ್ಪಾ.....!
ನೀನೂ ..ಇರಬೇಕಿತ್ತು..!
ನಿನ್ನನ್ನು "...ಅಪ್ಪಾ.." ಎಂದು ಬಾಯಿತುಂಬಾ...ಕರೆಯಲು...!
ನಿನ್ನನ್ನೊಮ್ಮೆ ಬಿಗಿದಪ್ಪಿ..ಅಳಲು...!
ನನ್ನ ..ಖುಷಿ..ದುಃಖ..ಸುಖ..ಸಂತೋಷ.. ಎಲ್ಲ...ಹಂಚಿಕೊಳ್ಳಲು..!
ಪ್ರಿತಿಯಿಂದ... ನನ್ನ .. ತಲೆ.. ಸವರಲು...!
ನೀನೂ ... ಇರಬೇಕಿತ್ತು ..ಅಪ್ಪಾ...!.."

ಹೌದು, ಅಪ್ಪ ಇರಬೇಕು, ಏಕೆಂದರೆ ಜಗತ್ತನ್ನೇ ಮರೆಸಬಲ್ಲ ಅಪ್ಪನನ್ನು ನಾನು ಕಂಡಿದ್ದೇನೆ. ಅಂತಹ ಅಪ್ಪ ಯಾವತ್ತೂ ಜೊತೆಯಲ್ಲೇ ಇರಬೇಕು.

ಬಹಳ ಭಾವುಕರಾಗಿ ಬರೆದಿದ್ದೀರಿ. ನಿಮ್ಮೊಡನೆ ನನ್ನದೂ ಒಂದೆರಡು ಕಣ್ಣಬಿಂದು.

Ittigecement said...

ಶಾಂತಲಾ....

ನಾನು ಏನೇ ಬರೆದರೂ ನನ್ನ ಮೊದಲ ಓದುಗರು ನನ್ನ ಮಗ ,,ನನ್ನ ಮಡದಿ...
ಇಬರಿಗೂ ಕನ್ನ "ಡ" ಬರುತ್ತದೆ..
"ನಾನೇ ಓದಿ ಹೇಳ ಬೇಕು.."
ಈ ಲೇಖನದ ಕೊನೆಯ ಸಾಲುಗಳನ್ನು ಓದಲು ಮತ್ತೆ ನನ್ನಿಂದ ಆಗಲಿಲ್ಲ...
ಯಾಕೋ ಒಮ್ಮೊಮ್ಮೆ ತೀರಾ ಭಾವುಕರಾಗಿ ಬಿಡ್ತಿವಿ..

ನಿನ್ನ "ತಂದೆಯವರಿಗೆ" ನನ್ನ ನಮಸ್ಕಾರಗಳು..

ಕಳೆದು ಕೊಂಡವರಿಗೆ ಗೊತ್ತು "ಇಲ್ಲದುದರ" ಮಹತ್ವ

ಇದ್ದುದೆಲ್ಲವ ಬಿಟ್ಟು ಇಲ್ಲದುದರ....ನೆನೆವುದೆ ..ಜೀವನಾ..
ಅಡಿಗರ ಸಾಲು ನೆನಪಾಗುತ್ತಿದೆ..

ಧನ್ಯವಾದಗಳು...

shivu.k said...

ಪ್ರಕಾಶ್ ಸಾರ್,

ಇದನ್ನು ನಾನು ಅದ್ಭುತ ಲೇಖನವೆಂದು ಹೊಗಳುವುದಿಲ್ಲ. ಮನದಾಳದ ಮಾತುಗಳು, ಅನುಭವಗಳು, ಅಲಾಪಗಳು, ಕೊರತೆಗಳು, ಪ್ರೀತಿಗಳು ಇವುಗಳನ್ನೆಲ್ಲಾ ಹೊಗಳುವುದಾಗಲಿ ಅಥವ ತೆಗಳುವುದಾಗಲಿ ಮಾಡಬಾರದು. ಇಂಥ ಅನುಭವಗಳ ಉಸಿರಿನ ಸನಿಹ ಸುಳಿಯಲು ಅವುಗಳಿಗೆ ಯೋಗ್ಯತೆ ಇರುವುದಿಲ್ಲ. ಮಾತಿಗಿಂತ ಕಣ್ಣುಮುಚ್ಚಿ ಅನಂದಿಸಬೇಕು, ಅನುಭವಿಸಬೇಕು. ಮೊನ್ನೆ ನೀವು ನನ್ನ ಹುಟ್ಟಿದ ದಿನದಂದೂ ನನ್ನ ಮನೆಗೆ ಬಂದಾಗ ನನ್ನ ಜೊತೆ ನೀವಿಬ್ಬರಿಲ್ಲವೆಂದು ನನ್ನ ಇಲ್ಲದ ಅಕ್ಕರೆಯ ಅಪ್ಪನನ್ನು ಮತ್ತು ವಾತ್ಸಲ್ಯದ ತಂಗಿಯನ್ನು ನೆನೆಸಿಕೊಂಡಾಗ ಕಣ್ಣು ತುಂಬಿ ಬಂದಿತ್ತು.............ಸಾಕು ಈ ನಿಮ್ಮ ಬರವಣಿಗೆಯ ಬಗ್ಗೆ ನನಗೆ ಬರೆಯಲಾಗುತ್ತಿಲ್ಲ...ಮತ್ತೊಮ್ಮೆ ಬರೆಯುತ್ತೇನೆ.

Kishan said...

...spell bound. You know the art of translating those feelings from the heart to words. Hats off again.

Kishan said...

..and it brought tears into our eyes.

Ittigecement said...

ಶಿವು ಸರ್...

ನೀವು ಹೇಳಿದ್ದು ಕೆಲವೊಂದು ನನಗೆ ಅರ್ಥ ಆಗಲಿಲ್ಲ...
ನನ್ನ ಜೀವನದ ಪ್ರತಿಯೊಂದು ಘಟ್ಟದಲ್ಲಿ, ಕ್ಷಣದಲ್ಲಿ..
"ಅಪ್ಪ " ನನ್ನನ್ನು ಕಾಡಿದ್ದಾರೆ..
ನಾನು ಹಂಬಲಿಸಿದ್ದೇನೆ...
ಇಷ್ಟು ವರ್ಷದ ಕಾಡಿದ ತುಡಿತ..
ಭಾವನೆ ವ್ಯಕ್ತವಾಗಿದೆ...
ಎಷ್ಟೆ ಬುದ್ಧಿವಂತರಾದರೂ..ಕೆಲವೊಮ್ಮೆ..
ಭಾವಗಳು ಕಾಡುತ್ತವೆ..ಬೇಡವೆಂದರೂ ವ್ಯಕ್ತವಾಗಿಬಿಡುತ್ತವೆ...
ಹೆಚ್ಚಿಗೆ ಹೇಳಲಾರೆ..
ಧನ್ಯವಾದಗಳು...

shivu.k said...

ಪ್ರಕಾಶ್ ಸಾರ್,

ನನ್ನ ಮಾತಿನ ಅರ್ಥ ನಿಮ್ಮ ಈ ಬರಹಕ್ಕೆ ಹೊಗಳಿಕೆ, ತೆಗಳಿಕೆಗಳೆಲ್ಲಾ ಈ ಲೇಖನದ ಹತ್ತಿರ ಸುಳಿಯಬಾರದು ಅಂತ ನಾನು ಹೇಳಿದ್ದೆ. ಈ ಭಾವನಾತ್ಮಕ ಲೇಖನ ಹೊಗಳಿಕೆ ತೆಗಳಿಕೆಗಳನ್ನು ಮೀರಿ ತುಂಬಾ ಎತ್ತರದಲ್ಲಿದೆ. ಇಂಥದ್ದು ಸಿಕ್ಕಾಗ ಮೌನದಲ್ಲಿ ಅನುಭವಿಸಬೇಕು, ಅನುಭಾವಿಸಬೇಕು. ಮಾತಿಗೆ ಕಿಮ್ಮತ್ತಿನ ಬೆಲೆ ಇರುವುದಿಲ್ಲ........ಮತ್ತೆ ಇದರ ಬಗ್ಗೆ ಬರೆಯುತ್ತೇನೆ....

Ittigecement said...

ಕಿಶನ್...

ನನಗೂ ಹೆಚ್ಚಿಗೆ ಹೇಳಲಾಗುತ್ತಿಲ್ಲ...

ನಿನ್ನೆಯಿಂದ ಒಂದುಥರಹದ ಭಾವ..
ದುಃಖವೋ.....
ದುಃಖವನ್ನು ತೋಡಿಕೊಂಡಾಗ ಆಗುವ ಭಾವವೋ..
ತಿಳಿಯುತ್ತಿಲ್ಲ...

ನೆನಪಿನೊಂದಿಗೆ ಕಾಡುತ್ತಿದೆ...

ಧನ್ಯವಾದಗಳು...

Ittigecement said...

ಶಿವು ಸರ್...

ನಿಮ್ಮ ಮಾತು ನಿಜ...
ಒಪ್ಪುತ್ತೇನೆ...

ಧನ್ಯವಾದಗಳು...

ಮನಸು said...

ತುಂಬ ಚೆನ್ನಾಗಿದೆ..
ನಾನು ಸ್ವಲ್ಪ ಭಾವುಕಳಾದೆ!!! ನನಗು ನನ್ನ ಅಕ್ಕನೆಂದರೆ ಬಲು ಪ್ರೀತಿ ನನಗೆ ನಿಮ್ಮ ಲೇಖನದಿಂದ ನನ್ನ ಮನೆಮಂದಿಯೆಲ್ಲಾ ನೆನಪಾದರು..
ಅಪ್ಪ ಇರಬೇಕು ಆ ಸ್ಥಾನದ ಅರ್ಥ ತಿಳಿಯಲು,ಅವರೊಂದಿಗೆ ಒಡನಾಡಲು ತಮೆಲ್ಲ ನೋವ ಮರೆಯಲು...

ಧನ್ಯವಾದಗಳು..

Ittigecement said...

ಮನಸು....

ಜೀವಮಾನದಲ್ಲಿ ಬಾಯ್ತುಂಬಾ "ಅಪ್ಪಾ" ಎಂದು ಕರೆಯಲಾದರೂ....
ಬೇಕಿತ್ತು...
ಊರಲ್ಲಿ ಯಾರನ್ನೂ ಕೇಳಿದರೂ ಹೊಗಳುತ್ತಾರೆ...
ಅವನ ಸಹಸಗಳನ್ನು, ಒಳ್ಳೆಯ ಗುಣಗಳ ಗುಣಗಾನ ಮಾಡುತ್ತಾರೆ...
ಒಮ್ಮೆಯೂ ಸಿಗಲಾರ...
ನೆನಪಿಗೂ ಸಿಗಲಾರ..
ಅನುಭವಕ್ಕೂ ಬರಲಾರ..
ಇದನ್ನೆಲ್ಲ..ಸಣ್ಣವನಿದ್ದಾಗಲೂ..ಈಗಲೂ..
ಅರಗಿಸಿಕೊಳ್ಳಲಾಗುತ್ತಿಲ್ಲ..
ದೇವರು ಇಷ್ಟು ಕ್ರೂರಿಯೆ..?

ಧನ್ಯವಾದಗಳು...

shivu.k said...

ಪ್ರಕಾಶ್ ಸಾರ್,

ಮತ್ತೊಮ್ಮೆ ಲೇಖನ ಓದಿದೆ. ನನಗೆ ಮೊನ್ನೆ ನಿಮಗೆ ಪರಿಚಯಿಸಿದ ಅಕ್ಕ ನೆನಪಾದಳು. ಅವಳೊಂದು ಲೆಕ್ಕದಲ್ಲಿ ಅಮ್ಮನ ಪಾತ್ರಧಾರಿಯೇ. ನಾನಿಂದು ಯಾವುದೇ ಕೆಟ್ಟ ದಾರಿಗೆ ಹೋಗದೆ ಈ ಮಟ್ಟದಲ್ಲಿದ್ದೇನೆಂದರೆ ಅವಳು ಕಾರಣ ಸ್ವಲ್ಪ ಗಟ್ಟಿಗಿತ್ತಿಯಾದ್ದರಿಂದ ಅವಳಿಗೆ ಹೆದರುತ್ತಿದ್ದೆ. ಆ ಹೆದರಿಕೆಯೆ ನನ್ನ ಇವತ್ತಿನ ಈ ಸಂತೋಷಕ್ಕೆ ಕಾರಣ. ನಮ್ಮನ್ನು ಸಾಕಲು ನಮ್ಮಪ್ಪ ಪಡುತ್ತಿದ್ದ ಕಷ್ಟಗಳು ಅದರ ಒಂದು ಉದಾಹರಣೆ: ನನ್ನ ತಂದೆ ಈಗಿರುವ ಸಿಟಿ ಮಾರ್ಕೆಟ್ಟಿನ ಪಾರ್ಕಿನಲ್ಲಿ ಮಾಲಿಕೆಲಸದಲ್ಲಿದ್ದರು.. ಆಗ ಒಲೆಯಲ್ಲಿ ಆಡುಗೆ ಸೌದೆಗಾಗಿ ಪಾರ್ಕಿನಲ್ಲಿ ಬಿದ್ದ ಮರದ ಕೊಂಬೆ ರೆಂಬೆಗಳನ್ನು ಒಟ್ಟು ಮಾಡಿ ಸರಿ ಸುಮಾರು ಐವತ್ತು ಕೇಜಿ ತೂಕವನ್ನು ಅಲ್ಲಿಂದ ತಲೆಯ ಮೇಲೆ ಒತ್ತು ಬರಾಬರಿ ನಾಲ್ಕು ಕಿಲೋ ಮೀಟರ್ ದೂರದ ಶ್ರೀರಾಮಪುರದವರೆಗೆ ಹೊತ್ತು ತರುತ್ತಿದ್ದರು. ಆಗ ಅದರ ಕಷ್ಟ ನನಗೆ ಗೊತ್ತಾಗಿರಲಿಲ್ಲ. ನಾನು ಹದಿನೈದನೆ ವಯಸ್ಸಿನಲ್ಲಿ ೧೦ನೇ ತರಗತಿಯಲ್ಲಿದ್ದಾಗ ಒಮ್ಮೆ ನನ್ನ ಸೈಕಲ್ಲಿಗೆ ಹಾಕಿ ಅದನ್ನು ಕಳುಹಿಸಿದರು. ಆಗ ಅದನ್ನು ನಾನು ತರಲು ಒದ್ದಾಡಿದ್ದು, ಇದನ್ನು ನನ್ನಪ್ಪ ಹೇಗೆ ತಲೆಯ ಮೇಲೆ ಹೊತ್ತು ಇಷ್ಟು ದೂರ ತರುತ್ತಾರೊ ಅನ್ನಿಸಿತ್ತು.
ಮತ್ತು ಅವರು ಕೊನೆ ವರ್ಷಗಳಲ್ಲಿ ಕಾಯಿಲೆ ಬಿದ್ದಾಗ ಅನೇಕ ಬಾರಿ ನಾನು ರೇಗಿದ್ದಿದೆ. ಆ ಸಮಯದಲ್ಲಿ ಅವರ ಮನಸ್ಸಿಗಾದ ನೋವು, ತಲೆಯ ಮೇಲಿನ ಹೊರೆಯ ಬಾರ ಈಗ ನನಗೆ ಗೊತ್ತಾಗುತ್ತಿದೆ......ನಾನು ಅವರನ್ನು ಕೊನೆಯ ದಿನಗಳಲ್ಲಿ ಚೆನ್ನಾಗಿ ನೋಡಿಕೊಂಡೆನೆನೆಸಿದರೂ ಇನ್ನೂ ಅವರನ್ನು ಚೆನ್ನಾಗಿ ನೋಡಿಕೊಳ್ಳಬಹುದಿತ್ತ್ತೇನೊ[ಮಾನಸಿಕವಾಗಿ]ಅನ್ನಿಸುತ್ತಿದ್ದೆ.....ಇನ್ನೂ ಬರೆಯಲು ಹೋದರೆ ನನ್ನ ಭಾವನೆಗಳ ಕಟ್ಟೆ ಹೊಡೆಯಬಹುದು.............
ಮುಂದೆ ಬರೆಯಲು..........ಮತ್ತೆ ಅಕ್ಕ ನೆನೆಪಾಗುತ್ತಿದ್ದಾಳೆ......ತಂಗಿ.......ಮತ್ತೆ ನನ್ನ ನೆನೆಪಿಗೆ......ಕಣ್ಣಂಚಿನ ನೀರು.....ಕೆನ್ನೆಗಿಳಿಯುವ ಮುನ್ನ್ನ......ನಿಲ್ಲಿಸಲಾರದೆ ಬರವಣಿಗೆ ನಿಂತಿದೆ.....

ಇಂಥ ನೆನೆಪುಗಳನ್ನು ಮತ್ತೆ ಕಟ್ಟಿಕೊಟ್ಟಿದ್ದಕ್ಕೆ ದನ್ಯವಾದಗಳು..
ಶಿವು.

Ittigecement said...

ಶಿವು...

ಏನೂ ಹೇಳಲು ತೋಚುತ್ತಿಲ್ಲ...
ಈಗ ನಿಮ್ಮ ಬಳಿ ಇರುವ ಪ್ರೀತಿಯನ್ನು ...
ಜೋಪಾನವಾಗಿ ಕಾಯ್ದುಕೊಳ್ಳಿ ಎಂದಷ್ಟೆ ಹಾರೈಸಬಲ್ಲೆ...

ನೀವು ನಿಮ್ಮ ಜೀವನದಲ್ಲಿ ಕಂಡ ಕಷ್ಟಗಳನ್ನು ಓದಿದಾಗ ನನಗೂ ದುಃಖವಾಯಿತು...
ನಿಜವಾಗಿಯೂ ನಿಮ್ಮಕ್ಕ ದೇವತೆ...
ನಿಮ್ಮ ತಂದೆ ಎಷ್ಟೊಂದು ಕಷ್ಟ ಪಟ್ಟಿದ್ದಾರೆ...!
ನಿಮ್ಮನು ದೊಡ್ಡ ಮಾಡಲು...
ಮನುಷ್ಯನನ್ನಾಗಿ ಮಾಡಲು..!

ಹಿರಿಯರ ಕಷ್ಟದ ಫಲ ನಾವು ಸುಖ ಅನುಭವಿಸುತ್ತಿದ್ದೇವೆ...

ಎಂತೆಂಥಹ ಪ್ರತಿಕ್ರಿಯೆಗಳು...!!

ನಾನು ಮೂಕನಾಗಿದ್ದೆನೆ..

ನನಗೆ ಬಂದ ಎಸ್.ಎಮ್.ಎಸ್. ಗಳು.., ಈಮೇಲ್ ಗಳು..!

ಈ ಬ್ಲೋಗನ್ನು ಮಾಡಿಕೊಟ್ಟ ನಿಮಗೆ ವಂದನೆಗಳು..
ನಿಮ್ಮ ಭಾವ ಪೂರ್ಣ ಪ್ರತಿಕ್ರಿಯೆ ನನ್ನ ಹ್ರದಯದಲ್ಲಿದೆ...
ಧನ್ಯವಾದಗಳು..

ತೇಜಸ್ವಿನಿ ಹೆಗಡೆ said...

ಪ್ರಕಾಶ್ ಅವರೆ,

ಭಾವಗಳಲೆಯಲ್ಲೇ ತೇಲಿಹೋದೆ. ಮೊದಲ ಕೆಲವು ಸಾಲುಗಳು ಕಿರುನಗುವನ್ನು ತಂದರೂ ಕೊನೆಕೊನೆಗೆ ಮನಸು ಭಾರವಾಯಿತು! ನನಗೂ ಅಪ್ಪ ಎಂದರೆ ಬಹಳ ಇಷ್ಟ. ನನ್ನೊಳಗಿನ ಆತ್ಮವಿಶ್ವಾಸಕ್ಕೆ, ಛಲಕ್ಕೆ, ಹೋರಾಟಕ್ಕೆ ಪ್ರಮುಖ ಪ್ರೇರಣೆ, ಸ್ಫೂರ್ತಿ ಹಾಗೂ ಕಾರಣಕರ್ತರು ನನ್ನ ಹೆತ್ತವರು. ಅದರಲ್ಲೂ ನನ್ನ ತಂದೆ ಮತ್ತೂ ಕೂಡಾ..... ಎಲ್ಲರಂತೆ ಜೀವಿಸಲು, ಯೋಚಿಸಲು, ಯೋಚಿಸಿದಂತೆ ನಡೆಯಲು ನನಗೆ ಕಲಿಸಿದವರೇ ಅವರು.

ಅದೆಷ್ಟೋ ರಾತ್ರಿ ಗಂಟೆ ೧೨ರ ನಂತರವೂ ಕೂಡಾ ಅಪ್ಪನ ನೆನಪಾಗಿ ಮಂಗಳೂರಿಗೆ ಫೋನ್‌ಮಾಡಿದ್ದಿದೆ. ಆಗೆಲ್ಲಾ ನನ್ನವರು ನನಗೆ ಹೇಳುತ್ತಿದ್ದರು "ಎಂತಕ್ಕೆ ಇಷ್ಟೊತ್ತಿಗೆಲ್ಲಾ ಅವ್ರ ನಿದ್ದೆ ಹಾಳು ಮಾಡ್ತೆ? ಸುಮ್ಮನೆ ತೊಂದ್ರೆ ಕೊಡ್ತೆ?.."ಎಂದು. ಆದರೆ ಈಗ ಪುಟ್ಟಿಯು ಹುಟ್ಟಿದ ನಂತರ ಹಾಗೆ ಕೇಳುತ್ತಲೇ ಇಲ್ಲಾ. ಕಾರಣ ಅವರೂ ಈಗ ಅಪ್ಪನಾಗಿದ್ದಾರೆ. ಅಪ್ಪ ಮಗುವಿನ ಸಂಬಂಧ ಎಂತಹದು ಎಂಬುದನ್ನು ಬರಿಯ ಮಾತಿನಲ್ಲಾಗಲೀ, ಅಕ್ಷರದಲ್ಲಾಗಲೀ ಮೂಡಿಸಲಾಗದು.

ಏನೇ ಆದರೂ ನಿಮಗೆ ಚಿಕ್ಕಪ್ಪನ ವಾತ್ಸಲ್ಯ, ತಾಯಿಯ ಮಮತೆ, ಅಕ್ಕ, ಅಣ್ಣಂದಿರೆ ಪ್ರೀತಿ, ಸ್ನೇಹ-ಇಷ್ಟೆಲ್ಲಾ ಸಿಕ್ಕಿದೆಯಲ್ಲಾ.. ಅದಕ್ಕಾಗಿ ಆದಷ್ಟು ಸಂತೋಷದಿಂದಿರಿ. "ನಡೆದಷ್ಟಿದೆ ನೆಲ, ಪಡೆದಷ್ಟಿದೆ ಫಲ" ಹೌದಲ್ಲವೇ? ಅಲ್ಲದೇ ತಾಯಿಯ ಸ್ಥಾನ ಎಲ್ಲರಿಗಿಂತಲೂ ದೊಡ್ಡದು. ಅದಕ್ಕಾಗಿಯೇ ತಾಯಿಗೇ ಮೊದಲ ಆದ್ಯತೆ ಕೊಟ್ಟಿರುವುದು ಪೂರ್ವಜರು. ಅಂತಹ ತಾಯಿಯ ಆಶೀರ್ವಾದ, ಪ್ರೀತಿಯಾದರೂ ನಿಮ್ಮೊಂದಿಗಿದೆಯಲ್ಲಾ.. ನಿಜಕ್ಕೂ ನೀವು ಭಾಗ್ಯವಂತರು.

"ಮಾತೃದೇವೋ ಭವ, ಪಿತೃದೇವೋ ಭವ..."

Ittigecement said...

ತೇಜಸ್ವಿನಿಯವರೆ...

ಅಂಥಹ ತಂದೆಯನ್ನು ಪಡೆದ ನೀವೆ ಧನ್ಯ...
ನಿಮ್ಮ ಹಿಂದೆ ಬಂಡೆಗಲ್ಲಿನ ಹಾಗೆ ನಿಂತು ನಿಮ್ಮ ನಗುವಿಗೆ ಶ್ರಮಿಸಿದ ಅವರಿಗೆ ನನ್ನ ನಮನಗಳು...
ಹಾಗೆ ನಿಮ್ಮ ಯಜಮಾನರಿಗೂ..ಕೂಡ..

ನನಗೆ ಇಂದು ಒಬ್ಬರು ಈಮೇಲ್ ಮಾಡಿದ್ದಾರೆ..
ಅವರು ತಮ್ಮ ಪಾಲಕರನ್ನು ಸರಿಯಾಗಿ ನೋಡಿಕೊಳ್ಳುವದಿಲ್ಲವಾಗಿತ್ತಂತೆ..
ನನ್ನ ಬರಹ ಓದಿದ ಮೇಲೆ ಅವರು ಪ್ರೊಮಿಸ್ ಮಾಡಿದ್ದರೆ..
ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತಾರಂತೆ..

ನಿಜ ಹೇಳಬೇಕೆಂದರೆ ಆಶ್ಚರ್ಯದಿಂದ ಮೂಕನಾಗಿದ್ದೇನೆ..
ಹಾಗೆ ನನ್ನ ದುಃಖ ಈ ಥರಹ ಕೆಲಸ ಮಾಡಿದೆಯೆಂಬ ಧನ್ಯತಾ ಭಾವವೂ ಮೂಡಿದೆ...

ಹೌದು ಊಳಿದ ಪ್ರೀತಿಗಳೆಲ್ಲ ನನಗೆ ಸಿಕ್ಕಿದೆಯಲ್ಲ..
ಅದಕ್ಕೆ ಖುಷಿಪಡಲೇ ಬೇಕು...

ಹ್ರದಯ ಪೂರ್ವಕ ವಂದನೆಗಳು...

ಮೂರ್ತಿ ಹೊಸಬಾಳೆ. said...

cheer up ಪ್ರಕಾಶಣ್ನ,
ಎಲ್ಲರಿಗೂ ಬೇಕು ಅನಿಸಿದ್ದು ಸಿಗ್ತಿಲ್ಲೆ ಇಲ್ದೇ ಇಪ್ಪದೇ ನಮಗೆ ಹೆಚ್ಚು ಬೇಕಿತ್ತು ಅನಿಸ್ತು.
ಮುಂಬೈ ನಲ್ಲಿ ಇದ್ದಾಗ ಅಲ್ಲ ಈಗಲೂ ನೀ ವಿಜಯಳ ಗುಂಗಿನಿಂದ ಹೊರಗೆ ಬಂದಂಗೆ ಕಾಣ್ತಿಲ್ಲೆ.
ಯಾವುದಕ್ಕೂ ಅತ್ತಿಗೆಯ ನಂಬರ್ ಕೊಡು!!!!!!!!!!!!!!!!!!!

Ittigecement said...

ಮೂರ್ತಿ.....

ನೆನಪಿನ ಬೇಜಾರಲ್ಲೂ ತಮಾಶೆ....

ನಾನೂ ದೋಹದಲ್ಲಿ ಹೀಗೆ ನಗುತ್ತಾ ಇರ್ತಿದ್ದೆ..


ನಾವು ಎಷ್ಟು ಮಿಸ್ ಮಾಡಿ ಕೊಂಡಿದ್ದೇವೆ..ಅನ್ನುವ.. ಭಾವ..
ಬೇಕಾಗಿತ್ತೆಂಬ ಹಂಬಲ.....
ಒಂಟೀತನ ಕಾಡುತ್ತದೆ...
ಅಲ್ಲವಾ..?

ಜಲ್ದಿ ಮದುವೆಯಾಗಿ ಸಿಹಿ ಸುದ್ದಿ ಕೊಡು..

ಧನ್ಯವಾದಗಳು..

Geetha said...

Sir,
flooded with emotions...
& you just washed all of us away to a land of bondage & love with this article...

Ittigecement said...

ಗೀತಾ ರವರೆ....

ಒಮ್ಮೆಯಾದರೂ ನೋಡಲು,,ಒಡನಾಡಲು ಸಿಗಬೇಕಿತ್ತು..
ಎಂಬುದು ನನ್ನ ಅಳಲು...
ಇಷ್ಟೆಲ್ಲ ಪ್ರೀತಿ..ಭಾಂದವ್ಯ ಸಿಕ್ಕಿದೆಯಲ್ಲ...
ಇದು ಸಮಾಧಾನದ ತರುತ್ತದೆ...
ಅದರೆ..
ಅದರೂ..

"........"

" ಈ " ಜಾಗದಲ್ಲಿ ಯಾರಿದ್ದರೂ...
ಅವರಿದ್ದ ಹಾಗೆ ಅಲ್ಲವಲ್ಲ..
ಅಲ್ಲವಾ..?

ಧನ್ಯವಾದಗಳು....

Ashok Uchangi said...

ಅನೇಕರು ತಮ್ಮ ಭಾವುಕತೆಯನ್ನು ಪದಗಳಲ್ಲಿ ವ್ಯಕ್ತಪಡಿಸುವಾಗ ಸೋಲುತ್ತಾರೆ...ಆದ್ರೆ ನೀವಿದಕ್ಕೆ ಹೊರತು.
ತಮಿಳು ಸಿನಿಮಾದ ಚೇರನ್(ಆಟೋಗ್ರಾಫ್ ಚಿತ್ರ್-ಕನ್ನಡದ ಮೈ ಆಟೋಗ್ರಾಫ್)ನೆನಪಾದರು.
ಅಶೋಕ ಉಚ್ಚಂಗಿ
http://mysoremallige01.blogspot.com/
ನನ್ನ ತಲೆದೂಗುವ ಬ್ಲಾಗುಗಳಲ್ಲಿ ನಿಮ್ಮದೂ ಸೇರ್ಪಡೆಯಾಗಿದೆ.

Ittigecement said...

ಅಶೋಕ್....

ಅನುಭವಿಸಿದ..ನೋವು.. ಪದವಾಗಿದೆ...
ವಾಕ್ಯ ರಚನೆಯಾಗಿದೆ...
ಮೂಲತಹ ನಾನು ಬರಹಗಾರನಲ್ಲ..
ಬರೆದು ಅಭ್ಯಾಸವೂ ಇಲ್ಲ..
ಮಲ್ಲಿಕಾರ್ಜುನ್..ಮತ್ತು ಶಿವು..
ನನ್ನನ್ನು ಇಲ್ಲಿಗೆ ಕರೆ ತಂದು ಬಿಟ್ಟಿದ್ದಾರೆ.....
ಎಷ್ಟು ದಿವಸ ನಡೆಯುತ್ತದೋ ನೋಡೋಣ...
ಅಲ್ಲವಾ..?

ಪ್ರತಿಕ್ರಿಯೆಗೆ ವಂದನೆಗಳು...

ಅಂತರ್ವಾಣಿ said...

ಪ್ರಕಾಶಣ್ಣ,
ಹೆಚ್ಚು ಕಡಿಮೆ... "ಹಿಡಿ ಪ್ರೀತಿ" ಕವನ/ಲೇಖನದ ಹಾಗೆ ಅನ್ನಿಸಿತು.
ಮಧ್ಯದಲ್ಲಿ ಹಿಂದಿ ಹಾಡುಗಳು ಚೆನ್ನಾಗಿತ್ತು.
ಕೊನೆ ಸಾಲುಗಳಲ್ಲಿ ನಿಮ್ಮ ದುಃಖವಾಣಿ...

Ittigecement said...

ಅಂತರ್ವಾಣಿ....

ನಿಜ... ಈ ಪ್ರೀತಿಗಾಗಿ ಎಷ್ಟೊಂದು ಹಂಬಲಿಸುತ್ತೇವಲ್ಲ.. ನಾವು..

ಎಲ್ಲಾದರೂ ಸ್ವಲ್ಪವೇ ಸಿಕ್ಕರೆ ಸಾಕು ಅದಕ್ಕಾಗಿ ಪರಿತಪಿಸುತ್ತೇವೆ.....

ನಿಮ್ಮ ಹಿಡಿ ಪ್ರೀತಿ ಕವನ...
ಹಾಗೆ ಚಿತ್ರಾ ಕರ್ಕೆರಾರವರ..ಲೇಖನ...

ಮನ ತಟ್ಟುವಂತಿದೆ...

ಪ್ರತಿಕ್ರಿಯೆಗಾಗಿ ವಂದನೆಗಳು...

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ಶಿವೂ ಅವರು ಹೇಳಿದಂತೆ ಮೌನವಾಗಿ ಕುಳಿತಿದ್ದೇನೆ, ಸೊಗಸಾಗಿದೆ ಮತ್ತು ಮನೋಜ್ಞವಾಗಿದೆ.
-ರಾಜೇಶ್ ಮಂಜುನಾಥ್

Ittigecement said...

ರಾಜೇಶ್ ಮಂಜುನಾಥ್....

"ಮಿಲತೀ ಹೇ,," ಹಾಡು ಗಂಡು ಹೆಣ್ಣಿನ ಪ್ರೀತಿಗೆ ಸಂಬಂಧಿಸಿದ ಹಾಡು..

"ಮೊಹಬ್ಬತ್" ಪದವನ್ನು ಎಲ್ಲ ರೀತಿಯ "ಪ್ರೀತಿ,,ಪ್ರೇಮ" ದ ಅರ್ಥವಾಗಿ ನಾನು ಬಳಸಿರುವೆ..
ಮೂಲ ಹಾಡನ್ನು ಗಾನ ಕೋಗಿಲೆ "ಲತಾ" ಹಾಡಿದ್ದಾರೆ..
ಎಂಥಹ ಅದ್ಭತ ಕಂಠ..ಭಾವನೆ.. ಹಾಡಿನ ಸಾಲುಗಳು..!

ಷಹಾ ಮುಖೇಶನ ಇನ್ನೊಂದು ಹಾಡನ್ನೂ ಹಾಡುತ್ತಿದ್ದ...
" ಕೋಯಿ ಜಬ್ ತುಮ್ಹಾರಾ..ಹ್ರದಯ್...ಥೋಡದೇ....
ತಡಪ್ ಥಾ ಹುವಾ..ತುಮ್ಹೇ....ಛೋಡದೇ...
ತಬ್ ತುಮ್..ಮೆರೆ ಪಾಸ್ ....ಆನಾ..ಪಿಯೇ...
ಮೇರಾ ಘರ್ ಖುಲಾ..ಹೇ...
ಖುಲಾ ಹೀ ರಹೆಗಾ...
ತುಮ್ಹಾರೇಲಿಯೇ....

ಪ್ರೀತಿ ಮಾಡಿದ ಹುಡುಗಿ ಮೋಸ ಮಾಡಿ ಬಿಟ್ಟು ಹೋದಾಗ

ಬೇರೊಬ್ಬನೂ ನಿನನಗೆ ಮೋಸ ಮಾಡಿ ಕೈ ಕೊಟ್ಟಾಗ..

ಯಾರಾದರೂ ನಿನ್ನ ಹ್ರದಯ ಚೂರು.. ಚೂರು ಮಾಡಿದರೆ...
ಪ್ರೀತಿಗೆ ಮೋಸವಾಗಿ ಒದ್ದಾಡುತ್ತಿರುವ ನಿನ್ನನ್ನು ಹಾಗೆಯೆ..ಬಿಟ್ಟು ಬಿಟ್ಟರೆ..
ಆಗಲಾದರೂ ನೀನು ನಮ್ಮನೆಗೆ ಬಾ...
ನನ್ನ ಮನೆ ಬಾಗಿಲು ಸದಾ.. ತೆರೆದಿದೆ...
ಯಾವಾಗಲೂ ತೆರೆದಿರುತ್ತದೆ...
ನಿನಗಾಗಿಯೇ......

ಆ ಹಾಡು..ಷಹಾನ..ಕಂಠ..
ಅವನ ದುಃಖ... ಅವನ ಪರಿತಾಪ...
ನನಗಂತೂ ಮರೆಯಲು ಸಾಧ್ಯವಿಲ್ಲ....

ಒಮ್ಮೆ ಮುಖೇಶನ ಈ ಹಾಡನ್ನೂ ಕೇಳಿ...

ಧನ್ಯವಾದಗಳು...
ಹೀಗೆ ಬರುತ್ತಿರಿ...

Anonymous said...

:( enu heloku tilitaa illa.... :(

Ittigecement said...

ವೈಶಾಲಿ......

ಹೇಳದೆಯೂ ಮನನವಾಗುವದು.....

ಮೌನವೂ ಮಾತಾಗುವದು..

ಮನಸ್ಸಿನ ಭಾವನೆ..

ಭಾವಿಸಿದಾಗ..

ಧನ್ಯವಾದಗಳು...

ಚಂದ್ರಕಾಂತ ಎಸ್ said...

ನಾನು ಈ ಬರಹ ಓದಲು ಬರುವಷ್ಟರಲ್ಲಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ. ಒಂದೇ ಒಂದು ಮಾತು ಹೇಳಬಲ್ಲೆ. ನೋವು ಅಗಲಿಕೆ ಮನುಷ್ಯನನ್ನು ಬೆಳೆಸುವಷ್ಟು ನಲಿವು ಬೆಳೆಸುವುದಿಲ್ಲ. ಹಾಗಾಗಿ ನಿಮ್ಮನ್ನು ಕಾಡುತ್ತಿರುವ ತಂದೆಯ ಅಗಲಿಕೆಯ ನೋವು ಸದಾಕಾಲ ನಿಮ್ಮ ಬರವಣಿಗೆಗಳಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನೀರೆರೆಯುತ್ತಾ ಹೋಗುತ್ತದೆ.

filter ಮಣ್ಣಿನ ಬಗ್ಗೆ ಪತ್ರಿಕೆಯವರ ಗಮನ ಸೆಳೆದಿದ್ದೆ ಎಂದು ಹೇಳಿದ್ದೆ. ಅವರು ನಿಮ್ಮನ್ನು ಸಂಪರ್ಕಿಸಿ ಒಂದು ಲೇಖನ ಬರೆಯಲು ಹೇಲುತ್ತಾರೆಂದಿದ್ದಾರೆ( ಈಗಾಗಲೇ ಸಂಪರ್ಕಿಸಿರಬಹುದು). ಲೇಖನವನ್ನು ಸಿದ್ಧ ಪಡಿಸಿಕೊಳ್ಳಿ.

Ittigecement said...

ಚಂದ್ರಕಾಂತರವರೆ...

ಆ ನೋವಿನಲ್ಲಿ ನನ್ನ ಹಿಂದೆ ಬಂಡೆಯಂತೆ ನನ್ನವರು ನಿಂತಿದ್ದಾರೆ..
ಎಂದಿಗೂ ನನ್ನ ಬದುಕು ಅಸಹಾಯಕವಾಗದ ಹಾಗೆ ನನ್ನ ಚಿಕ್ಕಪ್ಪ.. ,ಅಮ್ಮ ಇದ್ದಾರೆ..
ಚಿಕ್ಕಪ್ಪ ಕೊಡಿಸಿದ ವಿದ್ಯೆ.. ಪ್ರೀತಿ, ಮಮತೆಯ ಸಾಗರ ಹರಿಸಿದ ನನ್ನಮ್ಮ,..
ಇವೆಲ್ಲ ನೋವಿನಿಂದ ಹೊರಗೆ ಬರಲು ಸಹಾಯ ಮಾಡಿದೆ..
ನಿಮ್ಮ ಮಾತು ನಿಜ..
ನೋವು ಪರೋಕ್ಷವಾಗಿ,, ಮಾನಸಿಕವಾಗಿ,, ನನ್ನನ್ನು ಬೆಳೆಸಿದೆ..

ನಾನು ನಿಮ್ಮ ವಿಧ್ಯಾರ್ಥಿಯಾಗಬೇಕಿತ್ತು..
ನಿಮ್ಮ ಬಳಿ ಕಿವಿ ಹಿಡಿಸಿಕೊಳ್ಳಬೇಕಿತ್ತು....

ನಾನೇ ನಿಮ್ಮನ್ನು ಸಂಪರ್ಕಿಸುವವನಿದ್ದೆ...
ನನ್ನನ್ನು ಒಂದು ಖಾಸಗಿ ಟಿವೀ ಚಾನೆಲ್ ನವರು ಸಂದರ್ಶನ ಮಾಡಿದ್ದಾರೆ..
ಅವರು ಇದರ ಬಗೆಗೆ ಕಾರ್ಯಕ್ರಮ ಮಾಡುತ್ತಿದ್ದಾರೆ..
ಇದು ಯಾವಾಗ ಬರುತ್ತದೆ ತಿಳಿಸುವೆ..
ನಿಮ್ಮ ಕಳಕಳಿಗೆ ನನ್ನದೊಂದು ವಂದನೆಗಳು..
ಅಭಿನಂದನೆಗಳು..

Harisha - ಹರೀಶ said...

ಯಾವುದರ ಬೆಲೆಯೂ ಇದ್ದಾಗ ಗೊತ್ತಾಗದೆ ಇರೋದು ಒಂದು ವಿಪರ್ಯಾಸ ಅಲ್ದಾ? ನೆನಪು ಮಾತಾಗಿ ಚೆನ್ನಾಗಿ ಹರದ್ದು..

Ittigecement said...

ಹರೀಷ್...

ನನ್ನ ಜೀವನದ ಪ್ರತಿಯೊಂದು ನಿರಾಸೆಯಲ್ಲಿ..
ಖುಷಿಯ ಸಂಭ್ರಮದಲ್ಲಿ...
ನಾನು ನನ್ನಪ್ಪನನ್ನು ಕಳೆದು ಕೊಂಡಿದ್ದೇನೆ..
ಯಾವುದೇ ಸಮಾಧಾನದ ಮಾತು "ಅವರಿಲ್ಲ.." ಅವರು ಸಿಗುವದೇಇಲ್ಲ ಅನ್ನುವ ಕಟುಸತ್ಯವನ್ನು
ಮರೆಮಾಚಲಾಗದು..

ಹಾಗಾಗಿ ನಮ್ಮ ಬಳಿ, ಸುತ್ತಲೂ ಇದಾರಲ್ಲ
ಅವರ ಪ್ರೀತಿಗೆ ಅಪಚಾರ ಮಾಡಬಾರದು..ಅಲ್ಲವಾ..?

ಹರೀಷ್.. ಧನ್ಯವಾದಗಳು..

Hema Powar said...

ನಿಮ್ಮ ಬರಹ ಓದಿ ಕೂಡಲೆ ಅಪ್ಪಂಗೊಂದು ಫೋನ್ ಮಾಡ್ದೆ. ಏನು ಮಗಳೇ ಅಂದ ಅಪ್ಪನ ದನಿ ಕೇಳಿದ ಮೇಲೇ ಸಮಾಧಾನವಾಗಿದ್ದು. ನಿಜ ಅಲ್ವೇ ಸಂಬಂಧಗಳು ಜೊತೆಗಿದ್ದಾಗ ಅದರ ಮಹತ್ವ ತಿಳಿಯುವುದಿಲ್ಲ. ತೀರ ಭಾವುಕರಾಗಿ ಬರೀತೀರ ಸಾರ್, ಓದುಗರನ್ನು ನಿಮ್ಮ ಭಾವನಾ ಲೋಕದೊಳಗೆ ಕರೆದೊಯ್ದು ಬಿಡುತ್ತೀರ. ಹೀಗೆ ಬರೆಯುತ್ತಿರಿ.

ಹೇಮ ಪವಾರ್

Ittigecement said...

ಹೇಮಾ ಪವಾರ್ ರವರೆ....

ಹತ್ತಿರದವರು ಇದ್ದಾಗ ಅವರ ಮಹತ್ವ ನಮಗೆ ತಿಳಿಯುವದಿಲ್ಲ...
ಅವರ ಪ್ರೀತಿ.., ಪ್ರೇಮದ ಬಗೆಗೆ ತಲೆ ಕೆಡಿಸಿ ಕೊಳ್ಳುವದಿಲ್ಲ
ಅದು ನಮ್ಮ ಜನ್ಮ ಸಿದ್ಧ ಹಕ್ಕು ಅಂದು ಕೊಂಡು ಬಿಡುತ್ತೇವೆ...
"ಅವರ" ಸ್ಥಾನವನ್ನು ಯಾರಿಂದಲು ತುಂಬಲು ಸಾಧ್ಯವೂ ಇಲ್ಲ..
ಅವರು ಅವರೇ...
ಅಲ್ಲವೆ..?

ನಿಮ್ಮ ಪ್ರತಿಕ್ರಿಯೆಗೆ ಹ್ರದಯ ಪೂರ್ವಕ ವಂದನೆಗಳು...

ಚಿತ್ರಾ ಸಂತೋಷ್ said...

ಪ್ರಕಾಶ್ ಸರ್..ಏನು ಬರೆಯಬೇಕೆಂದು ತಿಳೀತಿಲ್ಲ..ಬರೆಯಕ್ಕೂ ಆಗ್ತಿಲ್ಲ. ಸಾಧ್ಯವಾದರೆ ನನ್ನ ಅಪ್ಪನಿಗೊಂದು ಪತ್ರ ಬರಹದಲ್ಲಿ ಉತ್ತರ ಸಿಗಬಹುದು. ಕಣ್ಣಿಂದ ಸುರಿದು ಕೆನ್ನೆಮೇಲೆ ಜಾರೋ ಹನಿಬಿಂದುಗಳನ್ನು ತಡೆಯಲಾಗುತ್ತಿಲ್ಲ..ಕ್ಷಮಿಸಿ ಸರ್..
-ತುಂಬುಪ್ರೀತಿ,
ಚಿತ್ರಾ

Ittigecement said...

ಚಿತ್ರಾರವರೆ....
ನಿಮ್ಮ ಬ್ಲೋಗಿನಲ್ಲಿ " ಅಪ್ಪನಿಗೊಂದು ಪತ್ರ" ಓದಿದಾಗಲೂ ನನಗೆ ಬಹಳ ಕಷ್ಟವಾಗಿತ್ತು...
ರಾತ್ರಿ ನಿದ್ದೆ ಇಲ್ಲದೆ ಹೊರಳಾಡಿದ್ದೆ...

ಇಬ್ಬರೂ "ಅಪ್ಪನ" ಪ್ರೀತಿಯಿಂದ ವಂಚಿತರಾದರೂ.. ..
ನನ್ನ ಸ್ಥಿತಿ ಸ್ವಲ್ಪ ಮೇಲು ಎನಿಸುತ್ತದೆ..

ನನಗೆ ಅವನ ದುಃಸ್ವಪ್ನವಿಲ್ಲ...

ಏನೇ ಆದರೂ " ಆ... ಅಪ್ಪ...
ನಮ್ಮನ್ನು ಪ್ರೀತಿ ಮಾಡಲಿಕ್ಕೆ ಇರಬೇಕು ಅಲ್ವಾ..?
ದೇವರು ಇಷ್ಟು ಕ್ರೂರಿ ಇರಬಾರದು..

ನಿಮ್ಮ ಕಣ್ಣ ಹನಿಗಳಿಗೆ.. ..
ನನ್ನ ಕಣ್ಣ ಹನಿಗಳೇ ಸಾಂತ್ವನ..

ಹೆಚ್ಚಿಗೆ ಬರೆಯಲಾಗುತ್ತಿಲ್ಲ...

ಕ್ಷಮಿಸಿ...

ಭಾರ್ಗವಿ said...

ಇದ್ದವರಿಗೇನು ಗೊತ್ತು ಇಲ್ಲದವರ ಕಷ್ಟ. ಆದರೂ ನಿಮ್ಮ ಸುತ್ತ ಪ್ರೀತಿಯ ಮಹಾಪೂರವೇ ಇದ್ದದ್ದು ನಿಮ್ಮ ಅದೃಷ್ಟವೇ ಸರಿ. ಒಂದು ಲೇಖನದಲ್ಲಿ ನಮ್ಮನ್ನು ನಾವು ಮರೆತು ನಗುವಷ್ಟು ಹಾಸ್ಯ ತುಂಬಿಸಿ, ಇನ್ನೊಂದು ಲೇಖನದಲ್ಲಿ ನಿಮ್ಮ ಬದುಕಿನ,,, ಈ ಪುಟ ಓದುವಾಗ ನನಗರಿವಿಲ್ಲದೆ ಕಣ್ಣಂಚಿನಲ್ಲಿ ಎರಡು ಹನಿ.ನಿಮ್ಮ ಬರಹ ಆತ್ಮೀಯವಾಗಿರುತ್ತೆ.

Ittigecement said...

ಭಾರ್ಗವಿಯವರೆ...
ನಾನು ನನ್ನ "ಚಪಾತಿ" ಲೇಖನದ ಎರಡನೆ ಭಾಗ ಬರೆಯಲು ಹೊರಟಿದ್ದೆ...
ಏನೋ ಬರೆಯಲು ಹೋಗಿ ಇದನ್ನು ಬರೆದೆ..
ನನಗರಿವಿಲ್ಲದೆ...
ಇಲ್ಲಿಯವರೆಗೆ ನುಂಗಿದ್ದ ನೋವು ಹೊರಬಂತು...
ಇದನ್ನು ಬ್ಲೋಗ್ ಗೆ ಹಾಕುವದು ಬೇಡ ಅಂದು ಕೊಂಡಿದ್ದೆ..
ನನ್ನ ಮಡದಿ ಒತ್ತಾಯ ಮಾಡಿ ಹಾಕಿಸಿದಳು..

ನಿಮ್ಮ ಪ್ರೀತಿ ಹೀಗೆಯೆ ಇರಲಿ...

" ಧನ್ಯವಾದಗಳು" ಅಂತ ಬರೆದರೆ..
ತೀರಾ ಮಾಮೂಲಾಗುತ್ತದೆ... ಫಾರ್ಮಲಿಟಿ ಎನಿಸುತ್ತದೆ..

ಬೇರೆ ಏನಾದರೂ ಹೇಳಲು ನನ್ನಲ್ಲಿ ಶಬ್ಧಗಳಿಲ್ಲ...

Unknown said...

Really you are a unique writer!!!
I flooded with full of emotions!!
Really...GoooD!!!Hats off.

Ittigecement said...

ಖುಷಿ...

ತಂದೆಯೊಬ್ಬ ಇದ್ದಿದ್ದರೆ ಅನ್ನುವ ಭಾವ ನನ್ನನ್ನು
ಜೀವನದ ಪ್ರತಿ ಕ್ಷಣ ಕಾಡಿದೆ..

ಮಗನಿಗೆ ಅಪ್ಪನಾದರೂ..
ನನಗೆ ಅಪ್ಪ ಇರಬೇಕಿತ್ತು ..
ಮನಸ್ಸು ಬಯಸ್ಸುತ್ತದೆ..

ಏನು ಮಾಡೋಣ ಹೇಳಿ..

ನಾವು ಪಡೆದದ್ದು ಇಷ್ಟು..
ಅಲ್ಲವಾ..?

Vani Satish said...

ಇನ್ನೇನು ಪ್ರಾಣವೇ ಹೋಯ್ತು ಅನ್ನಿಸಿ ಕ್ಷಣಕಾಲ ಕಳೆದು ಕಣ್ಣು ಬಿಟ್ಟು ನೋಡಿದಾಗ ಪಕ್ಕದಲ್ಲಿ ಸುಂದರ ಮಗು ಅಮ್ಮ ನಿನ್ನ ಪುನರ್ಜನ್ಮ ನನಗೆ ಹೊಸಜನ್ಮ ಎನ್ನುವಂತೆ ಅನ್ನಿಸುತಿತ್ತು .ಹಗಲಾವುದೂ ರಾತ್ರಿ ಯಾವುದೂ ಪ್ರತಿಕ್ಷಣವೂ ಮಗವನ್ನು ದೇವರ ಸೇವೆಯಂತೆ (ಮಗು ದೇವರ ಸಮಾನವಂತೆ ) ಮಾಡುತ್ತಾ ,ಬೆಳಿಗ್ಗೆ ತಿಂಡಿ ಮದ್ಯಾನ್ನಕ್ಕೆ ಊಟ ,ಸಂಜೆಗೆ ಕೊಟ್ಟಿಗೆ ಕೆಲಸ ,ಮದ್ಯ ಮಗುವಿನ ಕೂಗನ್ನು ಕೇಳಿದರು ಉಳಿದ ಕಾರ್ಯಗಳನ್ನು ಮುಗಿಸಿ ಸಂಜೆ ಮಗುವಿನೊಂದಿಗೆ ಮಲಗಿದಾಗ ಆದ ಶ್ರಮ ಏನು ಅನ್ನಿಸಲೇ ಇಲ್ಲ ,ಬದಲಿಗೆ ಮಗುವನ್ನು ಸುಮ್ಮನೆ ದಿನವಿಡೀ ಅಳಿಸಿದೆ ಎಂದು ಅಲೂಚಿಸುತ್ತ ಮತ್ತೆ ಮರುದಿನ ಎಂದಿನಂತೆ ದಿನಚರಿ ,ಹೀಗೆ ಮಗುವಿಗೆ ಐದನೇ ವರ್ಗ ಮುಗಿದದ್ದೇ ಗೂತ್ತಾಗಲಿಲ್ಲ ,ದಿನೇ ದಿನೇ ಮಗುವು ಶಾಲೆಯಿಂದ ಬಂದು ಮಾಸ್ತರರು ಕೊಟ್ಟ ಮನೆ ಬರಹದ ಗೊತ್ತಾಗದ ಲೆಕ್ಕಾ ನನಗೂ ಗೊತ್ತಾಗದೆ ಇದ್ದಾಗ ,ಮರುದಿನವೇ ದೂರದ ಪಟ್ಟಣಕ್ಕೆ (ಗಂಟೆಗಟ್ಟಲೆ ಬಸ್ಸಿಗೆ ಕಾಯ್ದು )ಮಗನು ಪಕ್ಕದ ಮನೆಯ ಊಟ ಮಾಡಿದನೂ ಇಲ್ಲವೊ ಎಂದು ಪರಿತಿಪಿಸುತ್ತ ಮದ್ಯಾನ್ನದ ಬಿಸಿಲಿನಲ್ಲಿ ಬರಿ ಪಾದದಲ್ಲಿ ಮನೆ ಸೇರಿ ಮಗುವಿಗೆ ಹತ್ತು ಪೈಸೆ ಲಿಂಬೆ ಹುಲಿ ಪೆಪ್ಪರಮೆಂಟು ಕೊಟ್ಟಾಗ ಮಗುಪಟ್ಟ ಕುಶಿ ನೋಡಿ ಬಿಸಿಲಲ್ಲಿ ಬಂದಿದ್ದು ಮರೆತೇ ಹೋಗಿತ್ತು , ನೋಡುತ್ತ ನೋಡುತ್ತ ಮಗನು ಹಾಯ್ ಸ್ಕೂಲ್ ಸೇರಿದಾಗ ಪೀಸ್ ಕೊಡಲು ಬೇಕಾದ ದುಡ್ಡನ್ನು ಅಪ್ಪನ ಮನೆಯಿಂದ ತಮ್ಮನ ಗೊಣಗಿನೊಂದಿಗೆ ಸೇರಿಸಿ ತಂದೂ ತಂದೂ ಅಂತೂ ಮಗನು ಹತ್ತನೆ ವರ್ಗ ಪಾಸಾದಾಗ ಮುಂದೇನು ಮಾಡಿಸಬೇಕು ಎಂದು ಊರ ಹೆಗಡೆರ ಹತ್ತಿರ ಕೇಳಿ ಅಂತೂ ಮಗನಿಗೆ ಕಾಲೇಜಿಗೆ ಸೇರಿಸಿದಾಗ ಕಾದಿದ್ದು ಮುಂದಿನ ಕರ್ಚು !ಮನೆಯ ಮನೆ ಆಳನ್ನು ಬಿಡಿಸಿ , ತೋಟದ ಮತ್ತು ಗದ್ದೆ ಕೆಲಸಕ್ಕೆ ಸ್ವಂತ ಹೋಗಿ ಉಳಿಸಿದ ದುಡ್ಡು ಸಾಕಾಗದಿದ್ದಾಗ ಮಾಡಿದ್ದು ಮಗೆಕಾಯಿ ಬೆಳೆದಿದ್ದು .ಅಂತೂ ಇಂತೂ ಮೈಲು ದೂರದಿಂದ ನೀರು ತಂದು ಹಾಕಿ ಬೆಳೆಸಿ ಕಾಸು ಕಂಡಾಗ ಕಂಡಿದ್ದು ಮಗನ ಕಾಲೇಜು . ಒಂದು ದಿನ ಕಾಲೇಜಿನಿಂದ ಪಾಲಕರಿಗೆ ಬಂದು ಹೋಗುವಂತೆ ಬರೆದಿದ್ದ ಪತ್ರ ನೋಡಿ ಮಗನೊಂದಿಗೆ ಬಸ್ಸಿಗೆ ಹತ್ತಿ ಕಾಲೇಜಿಗೆ ಹತ್ತಿರ ಹೋಗುತ್ತಿದ್ದಂತೆ ಮಗುವಿನ ಮುಜುಗರ ನೋಡಿ , (ಬಹುಷಾ ಚಪ್ಪಲ್ಲಿನಿಂದ ಹಿಡಿದು ಕನ್ನಡಕದ ತನಕ ಒಂದೊಂದೂ ಸರಿ ಹೊಂದಿಕೆಯ ಪೇಟೆ ಅಮ್ಮನ್ದಿರೊಂದಿಗೆ ಬರುವ ಮಕ್ಕಳೊಂದಿಗೆ , ಅಡಿಕೆ ಸೂಲಿದು ಒಡೆದ ಕೈ , ಒಡೆದ ಕಾಲು ತೇಪೆ ಹಾಕಿದ ಮಸುಬು ಸೀರೆ,! ಮುಜುಗುರ ಸಹಜ )ಮಗನನ್ನು ಮುಂದೆ ಕಳಿಸಿ , ನನ್ನ ಸರತಿ ಬಂದಾಗ ಪ್ರಿನ್ಸಿಪಾಲರನ್ನು ಬೇಟಿ ಮಾಡಿ ಬಂದಾಗ ನನಗೆನೆನ್ನಿಸಿತ್ತೂ ನಾನೂ ಅರಿಯೆ!!!!,.ನನ್ನೆದುರಿಗೆ ಮಗ ಗುಟುಕ ಕವಳ ಹಾಕಿದಾಗ ನನ್ನ ತಿಳುವಳಿಕೆ ಮಟ್ಟಿಗೆ ತಿಳಿಸಿ ಹೇಳಿದಾಗ ,ಮಗನು ಇನ್ನೇನು ಕಲಿಯದಿರಲಿ ಎಂದು ದೇವರಲ್ಲಿ ಬಾರಾ ಹಾಕಿ ಅನ್ತೂ ಇಂತೂ ಮಗನು ಒಳ್ಳೆ ಗುಣದೊಂದಿಗೆ (ಸಂಗಡ ಅವಗುನವೇನು ಇಲ್ಲದೆ )ಕಲಿತು ,ಎಲ್ಲೆಲ್ಲಿಂದಲೂ ದುಡ್ಡು ತಂದು ಮಗನಿಗೆ ಹತ್ತಾರು ಸಂದರ್ಶನದ ನಂತರ ಬೆಂಗಳೊರ್ರಿನಲ್ಲಿ ನೌಕರಿ ಸಿಕ್ಕಿದಾಗ ಜೀವನದಲ್ಲಿ ಮೊದಲ ಬಾರಿಗೆ ಮಗನು ಒಬ್ಬನೇ ಹೇಗೆ ಇರುತ್ತಾನೂ ಅನ್ನಿಸಿತ್ತು .ಮಗನಿಗೆ ರೂಮು ಸೆಟ್ಟು ಮಾಡಿ ಕೊಟ್ಟು ತಿರುಗಿ ಊರಿಗೆ ಬಂದಾಗ ಊಟ ತಿಂಡಿ ಮಾಡುವಾಗಲೆಲ್ಲ ಮಗ ಏನು ಮಾಡುತ್ತಿರುವನೋ!,ದೇವರ ಮನಯಲ್ಲೇ ತೋಟದ ಕೆಲಸ ಮಾಡಿಕೊಂಡು ಇಲ್ಲೇ ಇದ್ದಿದ್ದರೆ ಹೊತ್ತಿಗ ಸರಿಯಾಗಿ ಊಟ ಆಸರಿಗೆ ಮಾಡುತ್ತಿದ್ದ , ಆದರೇನು ಇದು ನಮ್ಮ ಕಾಲವಲ್ಲ ,ಮನೆ ನಡೆಯಲು ದುಡ್ಡು ಬೇಕು , ಸಾಲ ತೀರಲು ದುಡ್ಡು ಬೇಕು ,ಮಗನಿಗೆ ಮುಂದಿನ ಜೀವನಕ್ಕೆ ,ಮುಖ್ಯವಾಗಿ ಹೆಣ್ಣು ಬೇಕು ಎಂದರೆ ಪೇಟೆಯಲ್ಲಿ ಕೆಲಸ ಬೇಕು ,ನನ್ನ ಭಾವನೆ ಬೇರೆ , ಮಗನ ವಾಸ್ತವಿಕ ಜೀವನ ಬೇರೆ ,(ಚಿಗುರೆಲೆಗಾಗಿ ಹಣ್ಣೆಲೆ..........!).ವಯಸ್ಸಿಗೆ ಬಂದ ಮಗ , ಯಾವ ಹೆಣ್ಣು , ಹೇಗಿರಬೇಕು , ಮಗನಿಗೆ ಹೊಂದುವನ್ತಿರಬೇಕು ,ಇನ್ನೂ ಏನೆಲ್ಲಾ ಕಾಳಜಿ ,ಆಲೋಚನೆ ,ಆದರೆ ........ ಮಗನಿಗೆ.......,ಅವ್ನಿಗೆ ಬೇಕಾದ ಹುಡುಗಿ ಅವನೇ ಹುಡುಕಿದ್ದ ,.ಜೀವನದಲ್ಲಿ ಮೊದಲ ಬಾರಿಗೆ ಬಾವನೆಗೆ ಬಾವನೆಗೆ ಸೋತಿದ್ದೆ ,ವರ್ಷಕ್ಕೊಮ್ಮೆ ಮಗ ಬರುತ್ತಿದ್ದ ,ಮೊದಲು ಬರುತ್ತಿರುವ ಪ್ರತಿ ವಾರದ ಪೋನು ಇಂದು ಮಾಸಿಕ..., ಹೌದು , ಮಗನಿಗೂ ಕುಟುಂಬ ಕರ್ಚು ಇದೆ . ವಯಸ್ಸು ನನ್ನ ಕೈಯಲ್ಲಿಲ್ಲ , ಆಗಾಗ ಜ್ವರ ಬರುತ್ತಿದ್ದರೂ ಅತ್ತಿ ಚಕ್ಕೆ ಕಷಾಯ , ಅತಿಯಾದಾಗ ಬಾಡಿಗೆ ಬೈಕಿಗೆ ಹೇಳಿ ಔಷಧಿ ತಂದುಕೊಂಡು ಅಂತೂ ಇಂತೂ ಜ್ವರ ಕಡಿಮೆ ಮಾಡಿಕೊಳ್ಳುತ್ತಿದ್ದೆ , ಮಗ ಅಲ್ಲಿಗೆ ಬರಲು ಒಂದೆರಡು ಬಾರಿ ಹೇಳಿದರೂ ಅವರ ಕುಟುಂಬ ಅವ್ರ ಕೆಲಸ ಇದರ ಮದ್ಯದಲ್ಲಿ ನನ್ನ ಕರ್ಚು , ಆರೈಕೆ , ಸುಮ್ಮನೆ ಅವರಿಗೂ ತೊಂದರೆ ಕೊಡುವದು ಸರಿಯಲ್ಲ ,ಹುಟ್ಟಿ ಬೆಳೆದ ಊರು ಬಿಡಲಾರೆ , ಕರುಳ ಕುಡಿಯನ್ನು ಬಿಡಲಾರೆ ...ಏನು ಮಾಡುವದು ,ಹಳ್ಳಿ ಜೀವನವೇ ಸರಿ . ಹೇಗೂ ಸ್ವಲ್ಪ ವರುಷದ ಜೀವನ ಬಾಕಿ ತಾನೇ .... ಮನೆ ಕೆಲಸಕ್ಕೆ ಹೊರಗಿನ ಕೆಲಸಕ್ಕೆ ಎಲ್ಲದಕ್ಕೂ ಆಳುಗಳು ,ಈಗೀಗಲಂತೂ ಅವರು ಏನು ಮಾಡಿದರೂ ಸುಮ್ಮನಿರಬೇಕು , ಅದಕ್ಕೂ ಗತಿ ಇಲ್ಲ ತಾನೇ , ಈಗೀಗಲಂತೂ ಕಣ್ಣು ಸಹ ಸರಿ ಕಾಣುತ್ತಿಲ್ಲ . ಕಿವಿ ಸಹ ಕೇಳುವದು ಕಡಿಮೆ , ಮೊಮ್ಮಕ್ಕಳು ಬಂದಾಗ ಅವರನ್ನೂ ಎತ್ತಿಕೊಂಡು ಓಡಾಡಿಸಿ ಬರಬೇಕೆಂದರೆ ಇನ್ನೆಲ್ಲಿ ಸಾದ್ಯ , ಅಲ್ಪ ಸ್ವಲ್ಪ ಮುದ್ದು ಮಾಡಿ ವರುಷದ ಬೇಜಾರು ಮರೆಯಬೇಕು , ಮೊನ್ನೆ ತಾನೇ ಆರಾಮಿಲ್ಲದೇ ಮಗ ಬಂದು ಒಂದು ವಾರ ನನ್ನು ಆಸ್ಪತ್ರೆ ಸೇರಿಸಿ ತಿರುಗಿ ಹೋದಾಗ ದೇವರೇ ಇನ್ನೂ ಹೆಚ್ಚು ನರಳುವಂತೆ ಮಾಡದೆ ಕಣ್ಣು ಮುಚ್ಚಿಸಿದ್ದ್ರೆ ಸಾಕು, ದೂರ ಇರುವ ಮಗನಿಗೂ ತೊಂದರೆ ಆಗಬಾರದು ಪಾಪ ಅವನಿಗೂ ಕೆಲಸ ಮಕ್ಕಳ ಶಾಲೆ ಎಲ್ಲೆಲ್ಲಿ ನೋಡಲು ಸಾದ್ಯ , ................ ಅರೇ ಎಸ್ಟೆಲ್ಲ ಹೇಳಿದೆ ನಾನು ಯಾರೆಂದೇ ಹೇಳಲಿಲ್ಲ , ಮಕ್ಕ ದೂರ ಇರ್ತ , ಆನು ಊರಲ್ಲಿ ಇಪ್ಪ ಆಯೀ ....
(ಒಬ್ಬಳು ತಾಯಿ ನೂರು ಮಕ್ಕಳ್ಳನ್ನು ಸಾಕುತ್ತಾಳಂತೆ , ಆದರೆ ನೂರು ಮಕ್ಕಳಿಗೆ ಒಬ್ಬಳು ತಾಯಿಯನ್ನು ಸಾಕುವದು ಕಷ್ಟವಂತೆ !!!! ಕಟು ಸತ್ಯವಲ್ಲವೆ!!!!!) ಕೆಲವೊಮ್ಮೆ ಅನಿವಾರ್ಯ, ಕೆಲವೊಮ್ಮೆ ನಮ್ಮ ಅಲಕ್ಷ್ಯ ಅಲ್ಲವೇ .....

Nagaraj Bhat said...

Enage Kannadadallil hyange bareyavu theladille, sorry. Adre e lekna odi enage maathe horatadahaage bhavukanadi, preethi sambhandavanna oodugarige nimma matinalli ati bhavukateyalli heliddi.

Ittigecement said...

ವಾಣಿ ಮತ್ತು ಸತೀಶ್....

ನಿಮ್ಮ ಹ್ರದಯ ಸ್ಪರ್ಶಿ ಪ್ರತಿಕ್ರಿಯೆಗೆ ನನ್ನ ಬಳಿ ಉತ್ತರವಿಲ್ಲ....
ತಂದೆ , ತಾಯಿಯರ ಋಣವನ್ನು,
ಅವರ ಉಪಕಾರವನ್ನು ಸದಾ ಸ್ಮರಣೆ ನಮ್ಮಲ್ಲಿರಬೇಕು...
ತಮಗೆ ಸಿಗದ ಖುಷಿ, ಸಂತೋಷ, ಸುಖ..
ಮಕ್ಕಳಿಗೆ ಸಿಗಲಿ ಎನ್ನುವ ಭಾವ..
ಮಗನ ತಂದೆಯಾದ ಮೇಲೆ ನನಗೆ ಅರ್ಥವಾಗುತ್ತಿದೆ...

ನಿಮ್ಮ ಲೇಖನ ಆ ತಾಯಿಗೆ ಸಹಸ್ರ... ಸಹಸ್ರ ವಂದನೆಗಳು...

ನಿಮಗೂ ಹ್ರದಯ ಪೂರ್ವಕ ಧನ್ಯವಾದಗಳು....

Ittigecement said...

ಆತ್ಮೀಯ ನಾಗು....

ಭಾವನೆಗೆ ಭಾಷೆಯ ಅಗತ್ಯವಿಲ್ಲ...
ಮೌನವೂ ಮಾತಾಗುತ್ತದೆ...

ಮತ್ತೆ ಜೀವನದಲ್ಲಿ ಬಾರದವರ ಜಾಗ...
ಬೇರೆ ಯಾರೂ ತುಂಬಲೂ ಸಾಧ್ಯವಿಲ್ಲ...

ನಾಗು...
ನನಗೆ ಖುಷಿಯಾದ ಘಟನೆ ಇದೆ...
ತಂದೆ, ತಾಯಿಗೆ ಒಬ್ಬನೇ ಮಗ ..
ಬೇಸರವಾಗಿ, ಜಗಳ ಮಾಡಿಕೊಂಡು.. ಮನೆ ಬಿಟ್ಟು ಓಡಿ ಹೋಗಿದ್ದ...
ಐದು ವರ್ಷವಾಗಿತ್ತಂತೆ......
ಈ ಲೇಖನ ಓದಿ ಮನೆ ಸೇರಿದ್ದಾನೆ...
ತಂದೆ, ತಾಯಿಯವರ ಬಳಿ ಪ್ರೀತಿ ವಿಶ್ವಾಸದಿಂದ ಇದ್ದಾನೆ...

ಇತ್ತೀಚೆಗೆ ಅವನ ತಂದೆಯವರು ಬಹಳ ಬಾವುಕರಾಗಿ ಫೋನ್ ಮಾಡಿದ್ದರು...

ಇದಕ್ಕಿಂತ ಖುಷಿ ಯಾವುದಿದೆ... ನಾಗು...?

ಬರ್ತಾ ಇರು ಮಾರಾಯಾ...!
ಬೆಂಗಳೂರಿನಲ್ಲಿ ಕಳೆದು ಹೋಗ ಬೇಡ...

ನಿನ್ನ ಪೀಜಿ...

Anonymous said...

yea, itz nice one, prakashanna...
idu pal pal manasalli nenapritu

Ittigecement said...

ಶ್ರೀ....

ಎಲ್ಲ ಸಿಕ್ಕಿದರೂ...
ಸಿಗದ ಕೊರತೆಯೊಂದು...
ಕಾಡುತ್ತಿರುತ್ತದೆ....

ಸಿಕ್ಕಿದ ಪ್ರೀತಿಯ ಬಿಟ್ಟು..
ಸಿಗದ ಪ್ರೇಮವ ಹುಡುಕುತ್ತಿರುತ್ತದೆ..
ಮನಸು...

ಎಷ್ಟಿದ್ದರೇನು...??
ಏನಿದ್ದರೇನು...?
ಪ್ರೀತಿ, ಪ್ರೇಮದ....
ಅನುಭಾವಕ್ಕೆ...
ತುಡಿಯುವ ಕನಸು
ಕಾಣುತ್ತದೆ ಮನಸು...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ನನ್ನ ಇತರ ಲೇಖನಗಳನ್ನೂ ಓದಿ...

Soumya. Bhagwat said...

ಪ್ರಕಾಶಣ್ಣ .. ಮನಸ್ಸಿಗೆ ನಾಟುವಂಥ ಬರಹ ..... ನಾನೆಲ್ಲೋ ಸ್ನೇಹಿತರ ಬಗ್ಗೆ ಹೇಳಲು ಹೊರಟಿದ್ದೀರಿ ಎಂದುಕೊಂಡೆ.. ಕೊನೆಗೆ ನಾನೇ ಕಳೆದುಹೋಗಿದ್ದೆ ...

Srikanth Manjunath said...

ಮಗುವಿಗೆ ಸದಾ ಕಾಯಲು ಕಾಪಾಡಲು ಎರಡು ಜೀವವನ್ನು ಯಾವಾಗಲು ದೇವರು ಸೃಷ್ಟಿಸಿರುತ್ತಾನೆ....ಅಮ್ಮ ಹೃದಯದ ಒಳ ಬಾಗಿಲನ್ನು ತೆರೆದರೆ..ಅಪ್ಪ ಪ್ರಪಂಚದ ಬಾಗಿಲನ್ನು ತೆರೆಯುತ್ತಾರೆ..ಅಮ್ಮ ಭಾವನೆಗಳನ್ನು ತುಂಬುತ್ತಾರೆ.ಅಪ್ಪ ಭಾವವನ್ನು ತುಂಬುತ್ತಾರೆ..ಅವರ ಪರಿಶ್ರಮ, ಸಾಹಸ ಎಲ್ಲ ಒಂದೇ ಎರಕದಲ್ಲಿ ಇರುತ್ತದೆ..ಅದುವೇ ನಮ್ಮ ಏಳಿಗೆಯಲ್ಲಿ..ಕೆಲವೊಮ್ಮೆ ಒಂದನ್ನು ಕಳೆದು ಕೊಂಡರೆ..ಇನ್ನೊಂದು ಯಾವಾಗಲು ಬೆಂಗಾವಲಾಗಿ ಇದ್ದೆ ಇರುತ್ತಾರೆ..ಅಕ್ಕ, ಅಣ್ಣ, ತಮ್ಮ, ತಂಗಿ ಇವೆಲ್ಲ ಬಾಂಧವ್ಯಗಳು ಪದ ಪುಂಜದಲ್ಲಿ ವಿವರಿಸಲು ಸಾಧ್ಯವಿಲ್ಲ..ಆದ್ರೆ ಅವರ ಪ್ರೀತಿ ಪ್ರೇಮ ನಂಬಿಕೆ..ಎಲ್ಲವು ನಮ್ಮಣ್ಣ ವಜ್ರ ಕವಚದ ಹಾಗೆ ಕಾಯುತಿರುತ್ತೆ..ಗಟ್ಟಿಯಾಗಿ ಅಳಬೇಕು ಅನ್ನಿಸಿದಾಗ ಮನದಲ್ಲಿ ನಿಂತು ಸಮಾಧಾನ ಮಾಡುವುದು ಈ ಸಂಬಂಧಗಳೇ..
ನಿಮ್ಮ ಬರಹ..ಕಣ್ಣಿಂದ ಹೃದಯಕ್ಕೆ ತಾಗುತ್ತದೆ..ಅಪ್ಪ, ಆಯಿ, ಅಕ್ಕ, ಭಾವ ಇವರೆಲ್ಲ ನಿಮ್ಮ ವ್ಯಕ್ತಿತ್ವವನ್ನ ಒರೆ ಹಚ್ಚಿ ಕುಲುಮೆ ಮಾಡಿ ಅಪ್ಪಟ ಚಿನ್ನ ಮಾಡಿದ್ದಾರೆ..ನಿಮ್ಮ ಪ್ರತಿ ಪದಗಳು ಆತ್ಮದಿಂದ ಬಂದಿರುವುದು ಪ್ರತಿ ಅಕ್ಷರದಲ್ಲೂ ಗೋಚರವಾಗುತ್ತದೆ..ತಂದೆ ತಾಯಿ ಶತಕೋಟಿ ದೇವರುಗಳಿಗೆ ಸಮ...ನಿಮ್ಮ ಲೇಖನಕ್ಕೆ ನನ್ನ ನುಡಿ ನಮನಗಳು..

umesh desai said...

hegadeji, lost my father some 23 yrs ago, ok we both hada strange relationship so his absence never really bothered me so far... After reading your article and the comments by shivu i started wondering whether my fathers absence has really bothered me..whether he would have stopped me while i was going in a new direction, would have stopped taking few tricky decisions i wonder. nice article floded with emotions.