ಸಿರ್ಸಿ ರಾಯ್ಸರ್ ಬಿಲ್ಡಿಂಗನಲ್ಲಿ ದಿವಾಕರ ರೂಮ್ ಗೊತ್ತು ಮಾಡಿದ...
ಹತ್ತು ಅಡಿಗೆ ,, ಹತ್ತು ಅಡಿ ವಿಸ್ತೀರ್ಣದ ರೂಮಿನ ಒಂದು ಮೂಲೆಯಲ್ಲೇ ಅಡಿಗೆ ಮಾಡಿಕೊಳ್ಳುತ್ತಿದ್ದೇವು.
ಟೊಯ್ಲೆಟ್,, ಬಾತ್ ರೂಮ್ ಕೆಳಗಡೆ ಇತ್ತು...
ಕೆಳಗಡೆ ಮೂರು ಫಾಮಿಲಿ ಇರುತ್ತಿದ್ದರು...
ಮೇಲೆ ಒಟ್ಟು ಆರು ರೂಮುಗಳು. ಎಲ್ಲ ಗಂಡು ಮಕ್ಕಳೇ.. ಇರುತ್ತಿದ್ದರು.
ಪ್ರತಿ ವಾರ ಅಣ್ಣ ಊರಿನಿಂದ ಬಂದು ಅಕ್ಕಿ ಬೇಳೆ ತಂದು ಕೊಡುತ್ತಿದ್ದ.
ವಾರಕ್ಕೊಮ್ಮೆ ಅರ್ಧ ಲೀಟರ್ ಹಾಲು ತೆಗೆದು ಕೊಳ್ಳುತ್ತಿದ್ದೇವು.....
ಮಧ್ಯದಲ್ಲಿ ಏನಾದರು ತಿನ್ನುವ ಬಯಕೆಯಾದರೆ.....
" ಅವಲಕ್ಕಿ ಇದ್ದಿದ್ದರೆ... ಅವಲಕ್ಕಿ ಮೊಸರು ತಿನ್ನ ಬಹುದಿತ್ತು.. ಮಾರಯಾ..ಮೊಸರೇ ಇಲ್ಲವಲ್ಲೋ.....!!"
ಎಂದು ಹೇಳಿ ನಕ್ಕು ಬಿಡುತ್ತಿದ್ದೇವು...
ಸ್ವಲ್ಪ ದಿನಗಳ ನಂತರ ನಾಗು ನಮ್ಮನ್ನು ಸೇರಿಕೊಂಡ...
ನಂತರ ಊಟ ತಿಂಡಿಗೆ ತೊಂದರೆ ಯಾಗುತ್ತಿರಲಿಲ್ಲ.....
ಆದರೆ ಒಂದು ದೊಡ್ಡ ಸಮಸ್ಯೆ ಎದುರಿತ್ತು...
ಅಲ್ಲಿ ಎರಡು ಟೊಯ್ಲೆಟ್..ಹಾಗೂ ಎರಡು ಬಾತ್ ರೂಮ್ ಇತ್ತು..
ಬಾಗಿಲು... ಒಂದಕ್ಕೂ ಸರಿ ಇರಲಿಲ್ಲ...
ಒಳಗಿನಿಂದ ಚಿಲಕವೇ ಇರಲಿಲ್ಲ...
ಒಳಗಿನಿಂದ ಲಾಕ್ ಮಾಡಲು ಏನೂ ಇರಲಿಲ್ಲ....!!
ಯಾರಾದರೂ...."..ಒತ್ತಡ.." ಜಾಸ್ತಿ ಆದವರು...
ಧಡಾರ್..ಅಂತ ಒಳಗೆ ಬಂದು ಬಿಟ್ಟರೆ..?
ಛೆ..ಇದೇನಪ್ಪ.."ಆಸಮಯವನ್ನು.." ಎಂಜೋಯ್ ಮಾಡ್ಲಿಕ್ಕೂ ಅಗಲ್ಲವಲ್ಲ..!
ನಾನು ದೊಡ್ಡ ಬಕೆಟಿನಲ್ಲಿ ನೀರು ತುಂಬಿಕೋಡು ಬಾಗಿಲಿಗೆ ಅಡ್ಡ ವಾಗಿಟ್ಟು ಮುಂದುವರಿಯುತ್ತಿದ್ದೆ...
ಕೆಮ್ಮು ಬರದಿದ್ದರೂ ಆಗಾಗ "ಕೆಮ್ಮುತ್ತಿದ್ದೆ.."
ನನ್ನ ಇರುವಿಕೆಯನ್ನು ತೋರಿಸಲು...!
ನಾಗುವಿಗೆ ನನ್ನ ಸಮಸ್ಯೆ .... ಹೇಳಿದೆ.....
"ನೀನೇನು ಮಾಡ್ತೀಯಾ ನಾಗು..? ಕೇಳಿದೆ...
ನಾಳೆ ನನ್ನ ಸಂಗಡ ಬಾ" ಅಂದ..
ಸರಿ ಮರುದಿನ ಬೆಳಿಗ್ಗೆ ಅವನ ಸಂಗಡ ಬಕೆಟ್ ಹಿಡಿದು ಹೊರಟೆ...
ಬಕೆಟ್.. ಬೇಡ..ಇಲ್ಲೇ ಬಿಟ್ಟು ಬಾ,,"
ನನಗೆ ನಾಗುವಿನ ಮೇಲೆ ಭರವಸೆ... ಯಾವಾಗಲೂ.....
ಅವನೂ ಒಳಗೆ ಹೋದ ..ನಾನೂ ಒಳಗೆ ಹೋದೆ..
ಬಾಗಿಲನ್ನು ಹಾಕಿದೆ...ಸ್ವಲ್ಪ ಹೊತ್ತು ಸುಮ್ಮನಿದ್ದೆ .
ನಾಗು ಟೊಯ್ಲೆಟ್ಟಿನಿಂದ ಹಾಡುತ್ತಿದ್ದ...!!
ಆ ಕೆಟ್ಟ ವಾಸನೆಯ ತಾಣದಲ್ಲಿ...
" ನೀರಿನಲ್ಲಿ ಅಲೆಯ ಉಂಗುರಾ.....!
ಭೂಮಿಮೇಲೆ ಹೂವಿನ ಊಂಗುರಾ...!
ಮನಸೆಳೆದ ನಲ್ಲ ..ಕೊಟ್ಟನಲ್ಲ......!!.."
ಮಧ್ಯದಲ್ಲಿ ..ಉಸಿರು..ಕಟ್ಟಿ..ಬಿಡುತ್ತಿದ್ದರೂ.....
ಏರಿಳಿತವಿದ್ದರೂ ...ಸ್ವಲ್ಪ ದೊಡ್ಡದಾಗಿ ಹಾಡುತ್ತಿದ್ದ....
ಕೇಳೋಣ ಅನಿಸುವಂತಿತ್ತು..
ಅಂದಿನೀದ ನಾನೂ ಹಾಡುವದನ್ನು ರೂಢಿಸಿ ಕೊಂಡೆ....
ನಾಗೂ ನನಗೆ ಇನ್ನೂ ಬೇರೆ..ಬೇರೆ.. ಹಾಡುಗಳನ್ನೂ.. ಕಲಿಸಿ ಕೊಟ್ಟ...
" ಈ ..ಸಮಯಾ...ಆನಂದ..ಮಯಾ......
ನೂತನ..ಬಾಳಿನಾ..ಶುಭೋದಯ...!!..."
ಕೆಲವು ಸಾರಿ ನಾಗುವು ಆ ಕಡೆಯಿಂದ.....
"ಹಾಗಲ್ಲ ಪ್ರಿಯೆ.. ಈ.... ಸಮಯಾ..ಶ್ರಂಗಾರ ಮಯಾ.....
ಅನ್ನುತ್ತಾ.." ..ಸಾಥ್...".ನೀಡುತ್ತಿದ್ದ....!!.
ಆಗ ತಾನೆ ಕಾಲೇಜು ಶುರುವಾಗಿತ್ತು..
ಒಂದುದಿನ ನಾಗು ಸಾಯಂಕಾಲ ಸಪ್ಪೆ ಮೋರೆ ಹಾಕಿ ಕೊಂಡು ಕುಳಿತಿದ್ದ...ಹೊರಗೆ ಕರೆದರೂಬರಲಿಲ್ಲ...
ಎಲ್ಲರಿಗೂ ಆಶ್ಚರ್ಯ...!! " ಏನಾಯ್ತು ಇವನಿಗೆ..?'
" ಲೇ..ನಾಗೂ ಏನಾಯ್ತೊ..? ಮೈಗೆ..... ಚೆನ್ನಾಗಿಲ್ವೇನೋ...?? "
" ಚೆನ್ನಾಗಿದ್ದೀನಿ....ಮಾರಾಯ್ರಾ..... ..
ಮನೆಯ ಮಾಲಿಕರು ಬಂದಿದ್ರು..!!
ಕೆಳಗಿನ ಬಾಡಿಗೆ ಮನೆಯವರು ಕಂಪ್ಲೇಂಟ್ ನನ್ನ ಮೇಲೆ ಮಾಡಿದ್ದಾರಂತೆ.. !!
ಬಾತ ರೂಮನಲ್ಲಿ ಮಾತಾಡಿದ್ದಕ್ಕೇ ಒಂಥರಾ ಬೈದು ಹೋದ್ರು.. ಅದೂ ನನಗೆ..!..
ಇನ್ನು ಹೇಗೆ ಮುಖಾ ಇಟ್ಗೊಂಡು ಓಡಾಡೋದು..!!."
ತುಂಬಾ ಬೇಜಾರು ಮಾಡಿ ..ಕೊಂಡ...
"ಈಗ ಮತ್ತೆ ಬರ್ತಾರಂತೆ..ಮತ್ತೆ ..ನೀವೆಲ್ಲ ಬಂದ ಮೇಲೆ.. ಮತ್ತೆ ಮಂಗಳಾರತಿ.. ನಾವು ಬೇರೆ ಕಡೆ ಹೋಗೋಣ ..? ..ಈ ರೂಮು ಬೇಡ.. "
ಅಂದು ಗೋಗರೆಯಲು ಶುರು ಮಾಡಿದ...
ಬೇರೆ ಎಲ್ಲೂ ಈಷ್ಟು ಕಡಿಮೆ ದರದಲ್ಲಿ ರೂಮು ಸಿಗುವದಿಲ್ಲವಾಗಿತ್ತು....
ದಿವಾಕರ ಅವನಿಗೆ ಧೈರ್ಯ ತುಂಬಿದ..
ಅಷ್ಟರಲ್ಲಿ... ಕೇಳಗಿನ ಮನೆಯ ಗಂಡಸರು ಬಂದರು.. ಮನೆಯ ಮಾಲಿಕನೂ ಅವರ ಸಂಗಡ ಇದ್ದರು.....ಮುಖದಲ್ಲಿ ಕೋಪ ಎದ್ದು ಕಾಣುತಿತ್ತು...
ಮಾಲಿಕ ಹೇಳಿದ....
" ನೋಡ್ರಪಾ... ಇಲ್ಲಿ ಕೆಳಗಡೆ ಇರೋವ್ರು ಎಲ್ಲ ಮರ್ಯಾದಸ್ತರು..
ನೀವು ಬಾತ್ ರೂಮ್ ನಲ್ಲಿ ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತಿರಂತೆ..
ಇದೆಲ್ಲ ಚೆನ್ನಾಗಿರಲ್ಲ..ಹೆಂಗಸರು..ಹೇಣ್ಣೂ ಮಕ್ಕಳು ಇರುವ ಜಾಗ..
ಹೀಗೆಲ್ಲ.. ಮಾಡೋದಿದ್ರೆ ನೀವು ಬೇರೆ ಕಡೆ.. ಹೋಗಿ.."
ಖಡಾ ಖಂಡಿತವಾಗಿ ಮಾತಾಡಿದ....
ನಮಗೋ..ಹೆದರಿಕೆ..
ಕಡಿಮೆ ದರದ ಬಾಡಿಗೆ ಮನೆ.. ನಾಗು ಬಂದ ಮೇಲೆ ಊಟ ತಿಂಡಿಗೆ ತೊಂದರೆ ಇರಲಿಲ್ಲ......
" ನಮ್ಮಿಂದ ಏನು ತಪ್ಪಾಗಿದೆ..? ಏನೇ ಆದರೂ ನಾವು ತಿದ್ದಿ ಕೊಳ್ತೇವೆ.. ಏನು ಹೇಳಿದ್ದೇವೆ..?"
ದಿವಾಕರ ಸ್ವಲ್ಪ ಧೈರ್ಯದಿಂದ ಮಾತಾಡಿದ..
ಆಗ ಒಬ್ಬ ಬಾಡಿಗೆ ಮನೆಯವರು ..
" ಅದನ್ನು ಹೇಗೆ ಹೇಳುವದು..? ನಮಗೆ ನಾಚಿಕೆ ಯಾಗುತ್ತದೆ..
ಅದರಲ್ಲೂ ಈ ಹುಡುಗ..ದೊಡ್ಡದಾಗಿ ಗಂಟಲು ಹರಿದು ಹೋಗೊ ಹಾಗೆ ಕೂಗುತ್ತಾನೆ....!! "
ಎಂದು ನಾಗುವನ್ನು ತೋರಿಸುತ್ತಾ ಹೇಳಿದ...
ನನಗೆ ಗೊತ್ತಾಯಿತು...!!
ಈ ನಾಗುವಿಗೆ ಮರೆವಿನ ಅಭ್ಯಾಸ.!!
ಕೆಳಗಡೇ ಸ್ನಾನಕ್ಕೆ ಹೋಗುವಾಗ ಅಂಡರ್ವೆರ್ ಮರೆತು ಹೋಗುತ್ತಿದ್ದ.. ..!!
ಸ್ನಾನ ಆದ ಮೇಲೆ ಅಲ್ಲಿಂದಲೇ......
" ಪ್ರಕಾಶಾ..ಕಾಚಾ.. ತಂದು ಕೊಡೊ.. "
ಅಂತ ಜೀವ ಹೋಗುವವರ ಹಾಗೆ ಕೂಗುತ್ತಿದ್ದ..
ಈ ಕನ್ನಡ ಪ್ರೇಮಿ ನಾಗು....!!
" ಬೇಡ ಮಾರಯಾ..ಇಂಗ್ಲೀಷನಲ್ಲಿ ಹೇಳು.. ಮರ್ಯಾದಿ ಇರುತ್ತದೆ ..."
ಅಂದರೂ ಕೇಳುತ್ತಿರಲಿಲ್ಲ...
ಅದು ಈಗ ದೊಡ್ಡ ಸಮಸ್ಯೆಯಾಗಿ ಕುಳಿತಿದೆ..!
ಇನ್ನೊಬ್ಬ ಬಾಡಿಗೆಯವ..ತನ್ನುದೂ ಸೇರಿಸಿದ..
" ನೋಡಿ ನಾನು ಬೆಳಿಗ್ಗೆ ಪೂಜೆಗೆ ಕೂತಿರ್ತಿನಿ,,..
ಅಗಲೇ ಇಂವ ಕೂಗುತ್ತಾನೆ..ನನಗೆ ಡಿಸ್ಟರ್ಬ್ ಆಗುತ್ತದೆ...
ಮನಸೆಲ್ಲ ಎಲ್ಲೊ ಹೋಗಿಬಿಡುತ್ತದೆ....!! "
ಮಾಲಿಕನಿಗೆ ಸಮಸ್ಯೆ.....!.
" ಏನು ಹೇಳುತ್ತಾರೆ ಇವರು..?'
"ಹೇಳುವದಿಲ್ಲ ಸ್ವಾಮಿ.. ..ಕೂಗುತ್ತಾರೆ..!
ಇಲ್ಲಿಯ ವಠಾದವರಿಗೆಲ್ಲ ಕೇಳುವಷ್ಟು ..ಕೂಗುತ್ತಾರೆ ..!
ಮನೆಯಲ್ಲಿ ಮದುವೆಗೆ ಬಂದ ಹೆಣ್ಣು ಮಕ್ಕಳಿದ್ದಾರೆ....
ನಾವು ಮರ್ಯಾದಸ್ತರು ಏನು ಮಾಡ ಬೇಕು..?
ಹೀಗಾದರೆ ನಾವೆಲ್ಲ ಬೇರೆ ಕಡೆ ನೋಡಿಕೊಳ್ಳುತ್ತೇವೆ..."
ಮತ್ತೊಬ್ಬ ನಿರ್ಣಯ.. ಸೇರಿಸಿದ...
" ಆದರೆ ಇವರು ಏನು ಕೂಗುತ್ತಾರೆ...?..? ಅದನ್ನ ಹೇಳಿ..ಮೊದಲು.."
ಮಾಲಿಕನಿಗೆ ಸಮಸ್ಯೆ ಬಗೆಹರಿಯಲಿಲ್ಲ...!!.
" ಅದನ್ನು..ಹೇಗೆ ..ಹೇಳುವದು.....? ಇವನ ಬಳಿಯೆ ಹೇಳಿಸಿ.."
ಎಂದು ಒಬ್ಬ ಮೈಗೆ ಎಣ್ಣೆ ಹಚ್ಚಿಕೊಂಡ..
ಈಗ ಕಾಲು ಬುಡಕ್ಕೇ ಬಂತು.!!.
ಆ ಥರ ಕೂಗುತ್ತಿದ್ದ ನಾಗುವಿಗೂ , ಏನು ಹೇಳದವನಂತಾಗಿ....ಸುಮ್ಮನೆ.... ಕುಳಿತಿದ್ದ..
ಅಷ್ಟರಲ್ಲಿ ದಿವಕರ ಮಧ್ಯದಲ್ಲಿ ಬಾಯಿ ಹಾಕಿದ..
" ಹೋಗಲಿ ಬಿಡಿಸಾರ್.. ಇನ್ನು ಮುಂದೆ ಹೀಗೆ ಕೂಗದ ಹಾಗೆ ನಾನು ನೋಡಿಕೊಳ್ಳುತ್ತೇನೆ.. ನೀವು ಬೇಜಾರು ಮಾಡಿಕೊಳ್ಳ ಬೇಡಿ..'
ಸಮಾಧಾನ ಪಡಿಸಲು ಪ್ರಯತ್ನಿಸಿದ..
" ಯಾವ ಗ್ಯಾರೆಂಟಿ..?? ಇವನಿಗೆ ದಿನಾಲೂ ಮರೆತು ಹೋಗುತ್ತದೆ.. ಮತ್ತೆ ಕೂಗಿಬಿಟ್ಟರೆ..?"
" ನಿಜ.. ಇವನಿಗೆ ಮರೆವಿನ ಅಭ್ಯಾಸ ಇದೆ.. ..ಅದರ..ಬದಲು..ನಾವು ಬೇರೆ ಒಳ್ಳೆಯ ಶಬ್ಧ ಕೂಗಲು ಹೇಳುತ್ತೇವೆ..
ಒಟ್ಟಿನಲ್ಲಿ ನಿಮಗೆ ಈ ಸಮಸ್ಯೆ ಬರದ ಹಾಗೆ ನೋಡಿಕೊಳ್ಳುತ್ತೇವೆ.."
' ಮಾಲಿಕರೆ ನೀವಿನ್ನು ಹೊರಡಿ.. ಇದು ಇನ್ನು ಮುಂದೆ ಆಗದ ಹಾಗೆ ನೋಡಿ ಕೊಳ್ಳುತ್ತೇವೆ...."
ಎಂದು ಸಾಗ ಹಾಕಿದೆವು...
ಮಾಲಿಕನಿಗೆ ಕೊನೆಯವರೆಗೆ "ಏನು ಕೂಗುತ್ತಾನೆ?" ಅಂತ ಗೊತ್ತಾಗಲಿಲ್ಲ....!!
ಹೋದ ಮೇಲೆ ರೂಮಿನಲ್ಲಿ ಸ್ಮಾಶನ ಮೌನ....
ನಾಗು ಮುಖ ದಪ್ಪ ಮಾಡಿ ಕೊಂಡು...ಕುಳಿತ್ತಿದ್ದ...ಮಾತಾಡಲಿಲ್ಲ..
" ನೋಡೊ ಬೇಜಾರು ಮಾಡ್ಕೋಬೇಡ..ನಾವೆಲ್ಲ ನಿನ್ನ ಸಂಗಡ ಇದ್ದೇವೆ ಮಾರಾಯ..
ಅದಕ್ಕೆ ಬೇರೆ ಶಬ್ಧ ಹೇಳಿದರಾಯಿತು.."
ಎಂದು ವೇದಾಂತಿಯಂತೆ.. ಸಮಾಧಾನ ಪಡಿಸಿದ...
ಆದರೆ "ಯಾವ" ಶಬ್ದ ಹೇಳ ಬೇಕು...? ತಲೆ ಕೆರೆದು ಕೊಳ್ಳುತ್ತಿದ್ದೆವು....
ದಿವಾಕರ ರಾತ್ರಿ ಚಪಾತಿ ಮಾಡಲು ಹಿಟ್ಟಿನ ಡಬ್ಬ ತೆಗೆದ..
ತಕ್ಷಣ ನಾಗುವಿನ ಮುಖದಲ್ಲಿ ನಗು ಕಾಣಿಸಿತು..
ತಕ್ಷಣ..ಆರ್ಕಿಮಿಡಿಸನ...ಹಾಗೆ ದೊಡ್ಡದಾಗಿ ಕೂಗಿದ....!
ಯುರೆಖಾ..!
" ನೋಡ್ರೊ... ನನ್ನ ಸಮಸ್ಯೆ ಬಗೆ ಹರಿಯಿತು..!
ಇನ್ನು ಮುಂದೆ ನಾನು ಆ ಶಬ್ದ ಅನ್ನೊಲ್ಲ..! ಚಪಾತಿ ಅನ್ನು ತ್ತೇನೆ....!
ಎರಡರ ಆಕಾರ ಒಂದೆ ತರಹ ಇರುತ್ತದೆ.....
ಚಪಾತಿ ಅನ್ನೋದೇ ಸರಿಯಾಗಿದೆ..!! "
ಏನೋ ಸಂಶೋಧನೆ ಮಾಡಿದವರ ಹಾಗೆ ಹೇಳಿದ..
..ನಾವೂ ಸಮ್ಮತಿಸಿದೇವು....
ಅಂದಿನಿಂದ ಈತ ಬಾತ್ ರೂಮಿನಿಂದ ದೊಡ್ಡದಾಗಿ
" ಪ್ರಕಾಶಾ.....ಚಪಾತಿ...! "
ಅನ್ನುತ್ತಿದ್ದ...
ನಾನು ತಂದು ಕೊಡುತ್ತಿದ್ದೆ...
ಒಂದುವಾರ ಕಳೆದಿರಬಹುದು...
ಕೆಳಗಡೆ ಮನೆಯವರೊಬ್ಬ.. ನನ್ನನ್ನು ಮಾತಾಡಿಸಿದರು..
ನಾನು ನಕ್ಕೆ..
"" ಏನ್ರಪಾ...ಈಗ.. ನಾನೇ.. ಅಡ್ಜಸ್ಟ್ ಮಾಡಿ ಕೊಂಡಿದ್ದೇನೆ..
ನಾನು ದೇವರ ಪೂಜೆ ಸಮಯ ಬದಲಿಸಿದ್ದೇನೆ.....
ಆದರೆ..ಅಂವ ಎಂಥಾ ಮನುಷ್ಯ ಮಾರಾಯಾ..?.....?
ಅವನಿಂದಾಗಿ...
ನಮ್ಮನೆಯಲ್ಲಿ .......ಚಪಾತಿಗೆ...ಚಪಾತಿ... ಅನ್ನುವದನ್ನು.....
ಬಿಟ್ಟು ಬಿಟ್ಟಿದ್ದೇವೆ....!!
ರೊಟ್ಟಿ ಹೇಳುವದನ್ನು ಅಭ್ಯಾಸ ಮಾಡಿ ಕೊಂಡಿದ್ದೇವೆ..!!..""
ಅಂದರು...
"" ಚಪಾತಿ ಬಹಳ ಜನಪ್ರಿಯವಾಯಿತು...""
Tuesday, December 23, 2008
Subscribe to:
Post Comments (Atom)
49 comments:
:) :)
ಪ್ರಕಾಶ್ ಸಾರ್,
ಎಂದಿನಂತೆ ನಿಮ್ಮದೇ ಶೈಲಿ !
ಅದರೆ ನನಗೆ ಮತ್ತೊಂದು ತೊಂದರೆಯಾಯಿತಲ್ಲ! ನಾನು ಬ್ಲಾಗ್ ಬರೆಯುವಾಗ ನಿಮ್ಮ "ಪದ" ನೆನಪಿಸಿಕೊಂಡರೆ "ಡಿಸ್ಟರ್ಬ್ ಆಗುತ್ತದೆ, ಮನಸೆಲ್ಲೋ ಹೋಗುತ್ತದೆ" ಏನು ಮಾಡಲಿ ?
ಪ್ರಕಾಶಣ್ಣ,
ಭಾಷೆ ಯಾವುದಾದರೇನು... "ಅದು".. "ಅದೇ" ತಾನೆ?
ಪ್ರಕಾಶ್,
ಸೂಪರ್...
ಪ್ರಕಾಶಣ್ಣ...
ಚೆಂದದ ನಿರೂಪಣೆ...ಯಾವತ್ತಿನಂಗೆ.
ಮನೆಗೆ ನೆಂಟರು ಬಂದಾಗ ಚಪಾತಿ ಮಾಡಿರೆ ‘ಚಪಾತಿ ಹಾಕ್ಯಳಿ’ ಹೇಳಲೂ ಒಂಥರಾ ಅಗ್ತು ಇನ್ಮೇಲೆ :-)
ಪ್ರಕಾಶ್ ಸರ್,
ಬರಹ ಅದ್ಬುತ... ಅದೆಷ್ಟು ನಕ್ಕಿದ್ದೇನೆ ಅಂದರೆ ನಂಗೆ ಗೊತ್ತಿಲ್ಲ. ನಿಮ್ಮ ಈ ಲೇಖನ ನೆನಪಿಸಿ ಕೊಂಡು ನಗ್ತಾನೆ ಇದ್ದೀನಿ. ಹೋಟೆಲ್ನಲ್ಲಿ ಚಪಾತಿ ಕೊಡಿ ಎನ್ನಲಿಕ್ಕು ಸಂಕೋಚ, ಏಕೆಂದರೆ ಅವನು ಎಲ್ಲಾದರು ನಿಮ್ಮ ಬ್ಲಾಗ್ ಓದಿದ್ದರೆ ಅಂತ. ತುಂಬಾ ತುಂಬಾ ಚೆನ್ನಾಗಿದೆ.
-ರಾಜೇಶ್ ಮಂಜುನಾಥ್
ಕರ್ಮಕಾಂಡ! ಬಿಸಿಬೇಳೆಬಾತೇ ಇನ್ನೂ ಮರೆತಿಲ್ಲಾ, ಆಗಲೇ ಚಪಾತಿಗೂ ಒಂದು ಗತಿ ಕಾಣಿಸಿದ್ರಾ?!
ತೇಜಸ್ವಿನಿಯವರೆ...
ನೀವು ಓದಿದಾಗ ಇರುವದಕ್ಕಿಂತ ಸ್ವಲ್ಪ ಕಟ್ ಮಾಡಿದ್ದೇನೆ...
ಕಟ್ ಮಾಡಿದ " ಸಂದರ್ಭ" ಇನ್ನೊಮ್ಮೆ ಬರೆಯುವೆ...
ಕೆಲವು " ಶಬ್ಧ" ಗಳನ್ನು ಇನ್ನೂ "ಸಭ್ಯ" ಮಾಡಿದ್ದೇನೆ...
ಇನ್ನೊಮ್ಮೆ ಓದಿ ಎಂದು ಪ್ರಾರ್ಥನೆ...
ನಿಮ್ಮ ಮುಗುಳ್ನಗೆಯೆ ಸಾಕು ಎಮ್ಮಗೆ...
ಓದಿ ನಗು ಬಂತಲ್ಲ..ಎಂಬ ಧನ್ಯತೆ ಎನಗೆ...
ಧನ್ಯವಾದಗಳು...
ಶಿವುರವರೆ.....
ಅಂದು ನಂದಿ ಬೆಟ್ಟದಲ್ಲಿ ಇದರ ಮುಂದಿನ ಕಥೆ ಹೇಳಿದ್ದೇನೆ..
ನನಗೆ ಬ್ಲೋಗಿನಲ್ಲಿ ಏನು ಬರೆಯಬೇಕು ಎಂದು..
"ತಲೆ" ಕೆರೆದುಕೊಳ್ಳುತ್ತಿರುವಾಗ ಮಲ್ಲಿಕಾರ್ಜುನ್ "ಚಪಾತಿ" ಬರೆಯಿರಿ ಅಂದರು...
" ಚಪಾತಿ" ಶಬ್ಧ "ಶುರು" ವಾಗಿದ್ದು ಹೀಗೆ...
ಮುಂದೆ ನೋಡಿ ಏನಾಗುತ್ತದೆ ಎಂದು...!!
" ನೀರಿನಲ್ಲಿ..ಅಲೆಯ ಉಂಗುರ ಹಾಡು ನೆನಪಿಸಿದ್ದು ನೀವು..
ಜಯಶ್ಂಕರ್.ಪೂರ್ತಿಯಾಗಿ ಜ್ನಾಪಿಸಿ ಕೊಟ್ಟರು...
" ನಾನು ಕಲಿತ ಹಾಡು ನೆನಪೇ ಆಗಲಿಲ್ಲ.."
ದಯವಿಟ್ಟು ಬ್ಲೋಗ್ ಬರೆಯುವಾಗ ಆ "ಪದ" ನೆನಪಿಸಿ ಕೊಳ್ಳ ಬೇಡಿ....
ಚಪಾತಿ "ENJOY " ಮಾಡಿದ್ದಕ್ಕೆ ಧನ್ಯವಾದಗಳು...
ಅಂತರ್ವಾಣಿ.....
ನಮ್ಮ ಜನಕ್ಕೆ ಆಂಗ್ಲ ವ್ಯಾಮೋಹ ಜಾಸ್ತಿ ಸರ್....
ಕನ್ನಡ ಅಭಿಮಾನಿ ನಾಗು ಕನ್ನಡ ಹೇಳಿದ್ದಕ್ಕೆ "ಅದು" ಆದದ್ದು..
" ಸಭ್ಯವಾಗಿ " ಅಂಡರವೇರ್" ಅಂತ ಕೂಗಿದ್ದರೆ ನಾವೇನು ಬೇಡ ಅಂತೀವಾ?.." ಅಂತ ಒಬ್ಬ ಕೇಳಿದ್ದ..!
ಇನ್ನೊಬ್ಬ "ಆ" ಶಬ್ಧವೂ ಬೇಡ ಅಂದಿದ್ದ ..!
" ನೀರಿನಲ್ಲಿ ಅಲೇಯ ಉಂಗುರ.." ಹಾಡು ಜ್ನಾಪಿಸಿದ್ದಕ್ಕೆ ಧನ್ಯವಾದಗಳು...
ನಾಗುವಿನ "ಹಾಡು " ಕೇಳಿ ಮಜಾ ಮಾಡಿದ್ದಕ್ಕೆ ಧನ್ಯವಾದಗಳು...
ಅನಿಲ್....
ಆ ಕಡಿಮೆ ಬಾಡಿಗೆಯ ರೂಮು ತಪ್ಪಿ ಹೋಗ ಬಾರದು...
ನಾಗುವೂ ನಮ್ಮ ಬಿಟ್ಟು ಹೋಗ ಬಾರದು..
ಸಧ್ಯ ಎರಡೂ ಈಡೇರಿತು...!
"ಹಾಡು..ಚಪಾತಿ " ಮಜಾಮಾಡಿದ್ದಕ್ಕೆ ಅಭಿನಂದನೆಗಳು...
ವಂದನೆಗಳು...
ಶಾಂತಲಾ.....
ಪತಿಮಹಾಶಯನಿಗೂ ಚಪಾತಿ ಹಾಕುವಾಗಲೂ "ಸಂಕೋಚ" ಆಗಬಹುದು!
ಅಂದಹಾಗೆ "ನಮ್ಮನೆ"ಯಲ್ಲೂ " ಚಪಾತಿ" ಶಬ್ಧ" ಬಳಸಲಾಗುವದಿಲ್ಲ..
ಕಿಚನ್ ಒಳಗೂ..ಮತ್ತು ಹೊರಗೂ..ಕೂಡ..!
ಹಾಡು ಚಪಾತಿ ಓದಿ..
ಮಸ್ತ್ ಮಾಜಾ ಮಾಡಿದ್ದಕ್ಕೆ
ಧನ್ಯವಾದಗಳು...
ರಾಜೇಶ್ ಮಂಜುನಾಥ್....
ಸಂಕೋಚ ಮಾಡಿಕೊಳ್ಳ ಬೇಡಿ
"ರೊಟ್ಟಿ ಕೊಡಿ" ಅಂದು ಬಿಡಿ..
"ಅವನು ರೊಟ್ಟಿ ಇಲ್ಲ ಚಪಾತಿ" ಅಂದರೆ..
"ಅದನ್ನೇ ಕೊಟ್ಟು ಬಿಡಿ" ಅಂದು ಬಿಡಿ...
ಚಪಾತಿ ತಿಂದು ಖುಷಿಯಾಗಿದ್ದಕ್ಕೆ ಧನ್ಯವಾದಗಳು...
ಗಿರಿಜಾರವರೆ....
ನಮ್ಮನೆಯಲ್ಲಿ..
ನಮ್ಮಮ್ಮ..ನಮ್ಮೂರಲ್ಲಿ ಅಣ್ಣ ,,ಅತ್ತಿಗೆ...
ನನ್ನ ಅತ್ತೆ,,ಮಾವ...
"ನನ್ನಾಕೆಯ ತವರು ಮನೆಯಲ್ಲೂ ..
" ಚಪಾತಿ "
ಶಬ್ಧವನ್ನು ಕಡ್ಡಾಯವಾಗಿ ನಿಷೆಧಿಸಲಾಗಿದೆ..
ಅಪ್ಪಿ..ತಪ್ಪಿ ಬಳಸಿದರೆ...
ಅದು " ಶಿಕ್ಷಾರ್ಹ "....ಕೂಡ....!!
ಚಪಾತಿ.. ಹಾಡು ಇಷ್ಟವಾಗಿದ್ದಕ್ಕೆ..
ಧನ್ಯವಾದಗಳು...
ಪ್ರಕಾಶಣ್ಣ...
ಪದಗಳ ಬಳಕೆಯನ್ನು ನಿಷೇಧಿಸಲಿಕ್ಕೆ ಹೋದರೆ ನಮ್ಮ ಮನೆಯಲ್ಲಿ ಬಹಳೇ ಪದಗಳನ್ನು ನಿಷೇಧಿಸಬೇಕಾಗುತ್ತದೆ.
ಇದ್ದುದರಲ್ಲಿ ಎರಡರ್ಥ ಕೊಡುವ ಪದಗಳ ಬಗ್ಗೆಯಾಗಲೀ, ಜೋಕುಗಳನ್ನಾಗಲೀ ನಾನಿರುವಾಗ ಹೇಳಬಾರದಂತ ಕೋರಿಕೊಂಡಿದ್ದೇನೆ. ಅಷ್ಟಾಗ್ಯೂ ಉದುರುವ ಎರಡರ್ಥದ ಮಾತುಗಳು ನನಗೆ ಕೆಲವೊಮ್ಮೆ ನಿಜವಾಗಿಯೂ ಅರ್ಥವಾಗುವುದಿಲ್ಲ, ಇನ್ನು ಕೆಲವೊಮ್ಮೆ ಅರ್ಥವಾದರೂ ನಾನು ಅರ್ಥೈಸಿಕೊಳ್ಳುವುದಿಲ್ಲ :-)
ನಮ್ಮ ಚಂದದ ಕನ್ನಡ ಪದಗಳಿಗೆ ಸಲೀಸಾದ ಅರ್ಥಗಳೇ ಒಂದಕ್ಕಿಂತ ಹೆಚ್ಚು ಇರುವಾಗ ಹೊಸ ಅರ್ಥಗಳ ಬಳಕೆ ನನಗೆ ಒಗ್ಗದ್ದು. ಬಳಸುವವರು ಬಳಸಿಕೊಳ್ಳಿ ಅಂತ ಹೇಳಿಬಿಡ್ತೇನೆ
:-)
ಶಾಂತಲಾ....
"ನಿಷೇಧ" ವಿದ್ದರೂ ಒಮ್ಮೊಮ್ಮೆ ಅಂಥಹ ಶಬ್ಧಗಳು ನುಸುಳಿ ಬಂದು ಬಿಡುತ್ತವೆ..
ಹಾಗೆ ಮಾಡುವಾಗಲೂ ಮಜವಿರುತ್ತದೆ...
ಒಟ್ಟಿನಲ್ಲಿ ನಾವು "ನಗ" ಬೇಕು...
ಒಮ್ಮೆ ಮನಸಾರೆ "ನಕ್ಕು" ನೋಡು ಎಷ್ಟು ಚಂದವಾಗಿ ಕಾಣುತ್ತೀಯಾ..?
" ಶಿವು " ತೆಗೆದ ಆಸ್ಸಾಮ್ ಮುಗ್ಧ ಮಹಿಳೆಯರ ಥರಹ..!!
"ಮಲ್ಲಿಕಾರ್ಜುನ್ ತಮ್ಮ ಬ್ಲೊಗ್ ನಲ್ಲಿ ಹಾಕಿದ ಮಕ್ಕಳಾಟದ ಥರಹ..!
ಮನಸಾರೆ ನಕ್ಕ ನಗುವಿನ "ಮುಗ್ಧತೆ" ಬಹಳ ಚಂದ..!
ನಗುವಿಗೆ " ನಿಷೆಧ" ಇರಬಾರದು..
ಆ ಸಂದರ್ಭಗಳನ್ನು ಬಿಡಬಾರದು...
ಅಲ್ಲವಾ..?
ಪ್ರಕಾಶಣ್ಣ,
ನಿಂಗಳ ಭಾಷೆಯಲ್ಲಿ ಚಪಾತಿ ಅಂದ್ರೆ ಎಂತದು ಅಂತ ಗೊತ್ತಿತ್ತು.ಆದ್ರೆ ಅದು ಎಂತಕ್ಕೆ ಚಪಾತಿ ಆತು ಅಂತ ಗೊತ್ತಿತ್ತಿಲ್ಲೆ.ಶಾಂತಲಾ ಅವರು ಹೇಳಿದಂಗೆ ನೆಂಟರು ಬಂದಾಗ ಚಪಾತಿ ಹಾಕ್ಯ ಹೇಳಲ್ಲು ಮುಜುಗರ ಆಗ್ತು.ಅವು ಮತ್ತೆ ನಿನ್ನ ಬ್ಲಾಗ್ ಓದಿದ್ರೆ ಹಾಕ್ಯಂಡೆ ಇದ್ದೆ ಅಂದು ಬಿಟ್ಟರೆ ಅಂತ....,ಮೊನ್ನೆ ಒಬ್ಬರು ಫ್ರೆಂಡ್ ಮಗನ ಬರ್ತ್ ಡೇ ಪಾರ್ಟಿ ಗೆ ಹೋಗಿದ್ಯ.ಅಲ್ಲಿ ಬಿಸಿ ಬೇಳೆಬಾತ್ ಮಾಡಿದಿದ್ದ.ಕಷ್ಟ ಪಟ್ಟು ತಿಂದೆ.
ನಾನು ಒಬ್ಬಳೇ ಇದ್ದಗೂ ಸಹ ನಿನ್ನ ಲೇಖನ ನೆನಪಾದ್ರೆ ನಗು ಬತ್ತು.
ರಮ್ಯಾರವರೆ.....
ನಿಮ್ಮ ಮನೆಯಲ್ಲೂ ಆ ಶಬ್ಧಕ್ಕೆ ನಿಷೇಧ ಹಾಕಿಬಿಡಿ...!!
ನಮ್ಮನೆಯಲ್ಲಿ ಕೆಲವುಸಾರಿ "ಮೂಲ ಒರಿಜಿನಲ್ ಶಬ್ಧ " ಬಳಸಿದಾಗಲೂ ನಗು ಬರುತ್ತದೆ..
" ನಾನು ಹೇಳಿದ್ದು ಒರಿಜಿನಲ್ ಚಪಾತೀ ಅರ್ಥ ಮಾರಯ್ರೆ.." ಅಂತ ನನ್ನ ಮಡದಿ ವಿವರಣೆ ಕೊಡುವದುಂಟು...
ಹೀಗಗಿ "ಚಪಾತಿ " ತನ್ನ ಮೂಲ ಅರ್ಥವನ್ನು ಕಳೆದು ಕೊಳ್ಳುವ ಸಂಭವ ಇದೆ..
ಧನ್ಯವಾದಗಳು...
ಚಪಾತಿ ಇಷ್ಟವಾಗಿದ್ದಕ್ಕೆ..!!
ನಿಮ್ಮ ಯಜಮಾನರಿಗೆ " ಚಪಾತಿ " ಇಷ್ಟವಾಯಿತಾ..?
naanu chapatiya rotti hange madte.namma yajamanarige rotti andre raaaashi ishta.:D
ಗೆಳೆಯರೊಂದಿಗೆ ಕಳೆದ ದಿನ ಮರುಕಳಿಸಿದೆ, ನಿಮ್ಮೆಲ್ಲ ಸ್ನೇಹಿತರನ್ನು ನೆನಪು ಮಾಡಿಕೊಳ್ಳಿ ಹ ಹ... ಹಾಗೆ ಇನ್ನು ಬೇರೇನಾದರೂ ಇದ್ದರೆ ನಮ್ಮೆಲ್ಲರಿಗೂ ಹಂಚಿ.... ನಾವು ಕೂಡ ನಗುತ್ತೇವೆ...
nakku...nakku saakauithu.. :)
ರಮ್ಯಾ...
ಆಕಾರ ಯಾವುದೇ ಇರಲಿ...
ಚಪಾತಿ..ಚಪಾತೀನೆ..
ಹೀಗೆ ಬರುತ್ತಾ ಇರಿ..
ಧನ್ಯವಾದಗಳು..
ಸೂಪರ್ರೋ ಸೂಪರು.
ಮನಸು....
ಗೆಳೆಯರೊಡನೆ ಕಳೆದ ದಿನಗಳು ಬಹಳಷ್ಟು ಇವೆ...
ಜಗದ ಜನ ಜಂಗುಳಿಯಲ್ಲಿ ಕೆಲವರು ಕಳೆದು ಹೋಗಿದ್ದಾರೆ...
ನಾಗೂ ಇಲ್ಲೇ ಬೆಂಗಳೂರಲ್ಲಿದ್ದಾನೆ...
ಆ ದಿನಗಳ ಮಜಾನೇ ಬೇರೆ..ಅಲ್ಲವಾ..?
ಪ್ರತಿಕ್ರಿಯೆಗೆ ಧನ್ಯವಾದಗಳು...
ಸಂತೋಷ .....
ಚಪಾತಿ, ಹಾಡು, ಇಷ್ಟವಾಗಿದ್ದಕ್ಕೆ....
ಧನ್ಯವಾದಗಳು...
ಕಿಶನ್....
ಮಲೇಶಿಯಾದಲ್ಲಿ "ಬೇರೆ" ಥರಹದ ಚಪಾತಿ ಸಿಗುತ್ತಂತೆ ಹೌದಾ..?
ಚಪಾತಿ ..ಹಾಡು ಇಷ್ಟಪಟ್ಟಿದ್ದಕ್ಕೆ..
ಅಭಿನಂದನೆಗಳು...
ಪ್ರಕಾಶ,
ತುಂಬಾ ವಿನೋದಮಯ ಲೇಖನ.
ನಿಮ್ಮ stockನಲ್ಲಿ ಎಷ್ಟೆಲ್ಲಾ ವಿನೋದಿ ಘಟನೆಗಳು ಸಿಕ್ಕುತ್ತಲ್ಲಾಅಂತ ಅಚ್ಚರಿಯಾಗುತ್ತದೆ.
ಹ ಹ ಹ ಪ್ರಕಾಶಣ್ಣ ಬರವಣಿಗೆ ಶೈಲಿ ತುಂಬಾ ಹಿಡಿಸಿತು.
ಇಂತಹ ಬರಹಗಳು ಎಲ್ಲರ ಜೀವನದಲ್ಲೂ ನಡೆದ ಇಂತಹ ಘಟನೆ ಗಳನ್ನ ನೆನಪಿಸುತ್ತದೆ.ಒಟ್ಟಿನಲ್ಲಿ ಕೆಲವು ಜನ ಚಪಾತಿ ಎಂಬ ಚಪಾತಿಗೆ ಬೇರೆ ಹೆಸರಿಡುವ ಹಾಗೆ ಮಾಡಿದೆ ನೀನು.
ಹೀಗೆ ದೋಸೆ,ಉಪ್ಪಿಟ್ಟು,ಏನಾದರೂ ಇದ್ದರೆ ಬರೆಯುತ್ತಾ ಇರು.
ಸುನಾತ ಸರ್....
ಓಶೊ ಒಂದೆಡೆ ಹೇಳುತ್ತಾರೆ.." ಜೀವನವನ್ನು ಯಾವಾಗಲೂ ನಾವು ನಾವಾಗಿ ಅನುಭವಿಸಿದರೆ...
ಪ್ರತಿ ಕ್ಷಣದಲ್ಲೂ ನಗು ನಮ್ಮದಾಗಿರುತ್ತದೆ......
ಸರ್...
ಒಮ್ಮೆ " LIFE IS BEAUTIFUL " ಸಿನೇಮಾ ನೋಡಿ..PLZ...
ಪ್ರತಿಕ್ರಿಯೆಗೆ ಧನ್ಯವಾದಗಳು..
ಮೂರ್ತಿ.....
ನಿನ್ನ ಮದುವೆಗೆ..ಬಿಸಿಬೇಳೆ ಬಾತ್..ಮತ್ತು ಚಪಾತಿ ಮಾಡಿಸುವಾ..
ಹೇಗೆ..?
ಉಪ್ಪಿಟ್ಟಿನ ಕಥೆಯೂ ಇದೆ..
ಮುಂದೆ ಯಾವಾಗಲಾದರೂ..ಬರೆಯುವೆ...
ಊಟದಲ್ಲಿ ಚಪಾತಿ ಇತ್ತೇ,,?
ವಂದನೆಗಳು...
ಪ್ರಕಾಶ್,
ನಿಮ್ಮ ಲೇಖನ ಓದಿ ಹೊಟ್ಟೆ ತುಂಬಾ ನಕ್ಕಿದೀನಿ. ರಿಯಲಿ ಸೂಪರ್ಬ್. ಓದಲು ಚೂರು ತಡವಾಯ್ತು. ಮಸ್ತಾಗಿ ಬರ್ದಿದ್ದೀರಿ.
ಹೇಮ
ಹೇಮಾರವರೆ...
ನನ್ನ ಬ್ಲೋಗಿಗೆ ಸುಸ್ವಾಗತ...
ಹಾಡು ಚಪಾತಿ ..
ಇಷ್ಟವಾಗಿದ್ದಕ್ಕೆ ಧನ್ಯವಾದಗಳು....
ಹೀಗೆ ಬರುತ್ತಾ ಇರಿ...
nakku nakku hotte novu banthu...
chapaathi nanage ishta aagadiruvudakke naanu ivaththu kushi patte:)
ಸುಧೇಶ್....
ನನ್ನ ಬ್ಲೋಗಿಗೆ ಸುಸ್ವಾಗತ....
ಇಷ್ಟಾದಮೇಲೂ ಚಪಾತಿ ನಿಮಗಿಷ್ಟವಾ..?
ನನ್ನ ಧಾರವಾಡದ ಕಡೆ ಸ್ನೇಹಿತರೋಬ್ಬರು.." ಮತ್ತ... ರೊಟ್ಟಿ ಸುದ್ದಿಗೆ ಬರಬ್ಯಾಡಪಾ.. ನಾನು ರೊಟ್ಟಿ ಬಿಟ್ಟು ಮತ್ತೇನೂ ತಿನ್ನೂದಿಲ್ಲ..ಅದಕ್ಕೂ ಕಲ್ಲ ಹಾಕ್ಬ್ಯಾಡಪಾ" ಅಂತ ಈಮೇಲ್ ಕಳ್ಸಿದ್ದಾರೆ..
ಬಂದಿದ್ದೀರಾ...ಸರಸಕ್ಕನ ಬಿಸಿ ಬೇಲೇ ಬಾತು ತಿಂದು ಕೊಂಡು ಹೊಗ್ರಲಾ..
ಪ್ರತಿಕ್ರಿಯೆಗೆ ಧನ್ಯವಾದಗಳು...
ಸರ್, ನಮ್ಮನೇಲಿವತ್ತು ತಿಂಡಿ ಚಪಾತಿ ಮತ್ತು ಕ್ಯಾರೆಟ್ ಹುಸ್ಲಿ! ನಾನು ಮನೆಯಲ್ಲಿ ರೇಗಿಸುತ್ತಿದ್ದೆ.ಪ್ರಕಾಶ್ ಹೆಗಡೆಯವರು ಚಪಾತಿ ಬಗ್ಗೆ ಬರೆದಿದ್ದಾರೆ ಅಂತ. ನಮ್ಮ ಮನೆಯವರು ರಾಗವಾಗಿ "ಚಪಾತಿ ತಿನ್ರೀ..." ಎಂದು ನಗಾಡುತ್ತಿದ್ದಾರೆ....!
ನಾನು ಚಪಾತಿ ತಿನ್ನದೇ ಸುಮಾರು ದಿನ ಆಗಿತ್ತು.. ತಿನ್ನವು ಮಾಡಿದಿದ್ದಿ ... ಈಗ ಈ ಲೇಖನ ನೋಡಿದಮೇಲೆ :( :( :(
ಮಲ್ಲಿಕಾರ್ಜುನ್...
ಇನ್ನೂ ಉಪ್ಪಿಟ್ಟು, ದೋಸೆಗಳ ಬಗೆಗೆ ಹೇಳೇ ಇಲ್ಲಾ..!
ಅಂತೂ ಶ್ರೀಮತಿಯವರಿಂದ ಚಪಾತಿ ಹಾಕಿಸಿ ಕೊಂಡಿದ್ದಿರಿ ಅನ್ನಿ,,!
ಪ್ರತಿಕ್ರಿಯೆಗೆ ವಂದನೆಗಳು...
ಹರೀಷ್...
ಚಪಾತಿನೊ.. ರೊಟ್ಟಿನೋ..
ಚಪಾತಿಯ ಇನ್ನೊಂದು ಕಂತು ಇದೆ...
ಸಧ್ಯದಲ್ಲಿಯೇ..
ಚಪಾತಿ ಇಷ್ಟಪಟ್ಟಿದ್ದಕ್ಕೆ
ಧನ್ಯವಾದಗಳು..
ಹೋ ಚಪಾತಿ ಬಗ್ಗೆ ಇಲ್ಲಿದ್ಯ, ಚೆನ್ನಾಗಿದೆ ಚಪಾತಿ ಪುರಾಣ :)
ಲಿಂಕ್ ಕೊಡಲು ಕಲಿತು ಕೊಂಡಿದ್ದಕ್ಕೆ ಅಭಿನಂದನೆಗಳು
--
ಪಾಲ
ಪಾಲಚಂದ್ರ...
ಚಪಾತಿ ಮಜಾ ಮಾಡಿದ್ದಕ್ಕೆ...
ಮತ್ತೊಮ್ಮೆ ಧನ್ಯವಾದಗಳು...
ನಿಮ್ಮ ಸಲಹೆ ಉಪಯುಕ್ತವಾಗಿತ್ತು...
ನನ್ನ ಲೇಖನಗಳು.. ಒಂದಕ್ಕೊಂದು ಕೊಂಡಿ ಇರುವದು ಸಾಮಾನ್ಯ...
ಧನ್ಯವಾದಗಳು...
ನನ್ನ ರೂಮ್ ಮೇಟ್ ಪರಾಟ ಮಾಡಿದಾಗ, ನಾನೂ ನನ್ನ ಇನ್ನೊಂದು ರೂಮ್ ಮೇಟ್ ಸೇರಿಕೊಂಡು ನೀನಿ ಮಾಡಿದ ಪರಾಟ ನೋಡಲು ಬೇರೆ ಥರ ಕಾಣಿಸುತ್ತದೆ ಅಂತ ಹೇಳುತ್ತಿದ್ದೆವು! ಅದು ಇಷ್ಟೊಂದು ವಿ(ಕು)ಖ್ಯಾತವಾಗಿದೆ ಅಂತ ಗೊತ್ತೇ ಇರಲಿಲ್ಲ! :-)
ಜ್ಯೋತಿಯವರೆ....
ನನ್ನ ಪರಿಚಯದವರಾರೂ ನಾನು ಹೋದಾಗ ಚಪಾತಿ ಮಾಡುವದೇ ಇಲ್ಲ...
ಪರಿಚಯದ, ಪರಿಚಯದವರೂ ಸಹ...
ಒಂದುವೇಳೆ ಮಾಡಿದರೂ..
ಚಪಾತಿಗೆ ರೊಟ್ಟಿ ಅಂತ ಕರೆದು "ನಗುತ್ತಾರೆ.."
" ಚಪಾತಿ ಪಿತಾಮಹ" ನಾಗುವಿಗೆ ಅಭಿನಂದನೆಗಳು..
ಪುಣ್ಯಾತ್ಮ ತಂಪಾಗಿರಲಿ..
ನೀವೆಲ್ಲ ಚಪಾತಿ "ಮಸ್ತ್ ಮಜಾ ಮಾಡಿದ್ದಕ್ಕೆ"
ವಂದನೆಗಳು..
ಪ್ರೋತ್ಸಾಹ ಹೀಗೆಯೆ ಇರಲಿ...
ರೀ ಪ್ರಕಾಶ್,
" ನಮ್ಮನೆಯಲ್ಲಿ .......ಚಪಾತಿಗೆ...ಚಪಾತಿ... ಅನ್ನುವದನ್ನು.....
ಬಿಟ್ಟು ಬಿಟ್ಟಿದ್ದೇವೆ....!! "
ಈ ಲೈನ್ ಓದಿದಾಗ, ಆಫೀಸಿನಲ್ಲಿದ್ದ ನನಗೆ ನಗು ತಡೆಯಲಾಗಲಿಲ್ಲ,
ಜೋರಾಗಿ ನಕ್ಕು ಬಿಟ್ಟೆ ..
ಶಿವ ಪ್ರಕಾಶ್....
ನನ್ನ ಬ್ಲೋಗಿಗೆ ಸ್ವಾಗತ...
ನಾವೆಲ್ಲ "ಚಪಾತಿ ಪಿತಾಮಹ " ನಾಗುವಿಗೆ ಧನ್ಯವಾದ ಹೇಳಬೇಕು..
ನಿಮ್ಮ ಪ್ರತಿಕ್ರಿಯೆ ನನಗೆ ಉತ್ಸಾಹ ತಂದಿದೆ..
ಹೀಗೆ ಬರುತ್ತಾ ಇರಿ...
ಚಪಾತಿ "ಮಸ್ತ್ ಮಜಾ ಮಾಡಿದ್ದಕ್ಕೆ" ವಂದನೆಗಳು...!
baravanige tumba chennagide..,
heege munduvareyali.
first time to your blog :)
ಸುಷ್ಮಾರವರೆ...
ನಿಮ್ಮ ಬ್ಲಾಗಿಗೂ ಹೋಗಿ ಬಂದೆ..
ಬಹಳ ಚೆನ್ನಾಗಿದೆ...
ನನ್ನ ಹಳೆಯ ಲೇಖನಗಳನ್ನೂ ಓದಿ..
ಹೀಗೆ ಬರುತ್ತಾ ಇರಿ..
ಪ್ರೋತ್ಸಾಹಕ್ಕೆ
ಧನ್ಯವಾದಗಳು...
ಪ್ರಕಾಶಣ್ಣ,
ಇನ್ನು ಮೇಲೆ ನಿಮ್ಮ ಲೇಖನ office ನಲ್ಲಿ ಓದಬಾರ್ದು ಯಾಕೆ ಅನ್ದರೆ ನಗು ತಡ್ಯೊಕೆ ಆಗೊಲ್ಲ ಇಲ್ಲಿ ....ಬಹಳ ಚೆನ್ನಾಗಿತ್ತು ಚಾಪತಿ...
ಮಹೇಶ್...
ಎಷ್ಟು ಪ್ರೀತಿ, ಅಭಿಮಾನವಿದೆ... ನಿಮ್ಮ ಪ್ರತಿಕ್ರಿಯೆಯಲ್ಲಿ...!!
ತುಂಬಾ ಖುಷಿಯಾಗುತ್ತದೆ...
ಯಾವಾಗಲಾದರೂ ಬನ್ನಿ... ಓದಿ...
ಬಿಚ್ಚುಮನಸ್ಸಿನ ಪ್ರತಿಕ್ರಿಯೆಗೆ ಧನ್ಯವಾದಗಳು...
ಬರುತ್ತಾ ಇರಿ...
Sir e story nanage thumba ista aytu.....(modalasala comment madtha irodu en baribeko gottagilla)
Post a Comment