ನನಗೆ ನಾಯಿ ಎಂದರೆ ಬಹಳ ಪ್ರೀತಿ...
ಹಡಬೆ ಬೀದಿ ನಾಯಿ ತಂದು ಸಾಕುತ್ತಿದ್ದೆ...ಆಯಿ ..ಚಿಕ್ಕಪ್ಪ ಬೈದರೂ ಬಿಡುತ್ತಿರಲಿಲ್ಲ...
ಸಣ್ಣ ಮರಿ...ರಾತ್ರಿಯೆಲ್ಲಾ ತಾಯಿಯ ನೆನಪಾಗಿ ಕುಂಯ್ ..ಕುಂಯ್..ಅನ್ನುವಾಗ ನನ್ನ ಹಾಸಿಗೆಯಲ್ಲೇ.. ಮಲಗಿಸುತ್ತಿದ್ದೆ...
ಚಿಕ್ಕಪ್ಪ ಒಂದು ನಾಯಿ ಮರಿ ತಂದಿದ್ದರು.. " ಇದು ಅಲ್ಷೆಷ್ಯನ್..ನಾಯಿ " ಅಂದಿದ್ದರು...ನನಗೆ ಬಹಳ ಖುಷಿಯಾಯಿತು..
ಅದಕ್ಕೆ ಮಾತು ಕಲಿಸಬೇಕು ಎಂದು ಶುರು ಮಾಡಿದೆ... ಸ್ಕೂಲಿಂದ ಬಂದವನೇ..ಪಾಟಿ ಚೀಲ ಎಸೆದು ನಾಯಿ ಮರಿಗೆ ಪಾಠ ಶುರು ಮಾಡುತ್ತಿದ್ದೆ....
ಅದರ ಹೆಸರು "ಗುಂಡ".... ಕೆಲವೊಂದು ಮಾತು ಅದು ಕಲಿಯಿತು..
ಆದರೆ.....
ಮನೆಯಲ್ಲಿ ಎಲ್ಲರೂ ... ನನಗೆ ...ಬೈದರು....!!!
ಅದು ಮಾತು ಕಲಿಯುವ ಭರದಲ್ಲಿ....ಕೂಗುವದನ್ನೇ ಮರೆತು ಬಿಟ್ಟಿತು....ಮಾರಾಯರೇ...!!!
ಮನೆಗೆ ಬಂದವರೆ......ಅದನ್ನು ನೋಡಿ ಕೂಗ ಬೇಕಾಗಿತ್ತು....!!
ಹೊಸಬರು ಬಂದರೆ ಬಾಲ ಅಲ್ಲಾಡಿಸಿ ನಕ್ಕು ಬಿಡುತ್ತಿತ್ತು....
ನಾಯಿ ನಗುವುದೇ..??
ನಿಜ ಸ್ವಾಮಿ...ಮನುಷ್ಯರ ನಂತರ ಮುಖದಲ್ಲಿ ಹೆಚ್ಚಿನ ಭಾವನೆ ವ್ಯಕ್ತಪಡಿಸುವ ಪ್ರಾಣಿ ಅಂದರೆ..." ನಾಯಿ" ಅಂತ ಕೇಳಿದ್ದೇನೆ....
ನಾಯಿ ತನ್ನ ಭಾವನೆಯನ್ನು....ಪ್ರೀತಿಯನ್ನು...ತುಂಬ ಆತ್ಮೀಯವಾಗಿ..ವ್ಯಕ್ತಪಡಿಸುತ್ತದೆ...
ಭಾವನೆಯನ್ನು,,ಪ್ರೀತಿಯನ್ನು..ಎಲ್ಲ ಪ್ರಾಣಿಗಳು.. ಮುಖದಲ್ಲಿ..ವ್ಯಕ್ತ ಪಡಿಸುವದಿಲ್ಲ...
ನಾವು ಯಾವಾಗಲೋ..ಎಸೆದ ದೋಸೆಯ ಚೂರನ್ನು....
ತನ್ನ ..ಜೀವನ ಪರ್ಯಂತ...ನೆನಪಿಟ್ಟುಕೊಳ್ಳುತ್ತದೆ....
ನಮಗೆ ಹೆಚ್ಚಾದ...ಅನ್ನ ತಿಂದು...
ಬಾಲ ಅಲ್ಲಾಡಿಸುತ್ತದೆ... ಮನೆಕಾಯುತ್ತದೆ....
ಕ್ರತಜ್ನತೆಯಿಂದ..ಇರುತ್ತದೆ...... ಅಲ್ಲವೇ....?
(ಮೇಲಿನ..ಫೋಟೋಗಳಲ್ಲಿ ನಾಯಿಯ ಕಣ್ಣನ್ನು ಅವಲೋಕಿಸಿ.. ಕ್ಲೋಸ್-ಅಪ ನಲ್ಲಿ ನೋಡಿ)
12 comments:
ಪ್ರಕಾಶ್ ಸಾರ್,
ನಾಯಿಯ ಮೇಲೆ ನಿಮಗೆಂತ ಪ್ರೀತಿ ಇದೆ ಅಂತ ನಮಗೆ ನಂದಿ ಬೆಟ್ಟದಲ್ಲೇ ಗೊತ್ತಾಗಿತ್ತು. ನಾವು ಕ್ಯಾಮೆರಾ ಹಿಡಿದು ಇಬ್ಬನಿ ಮತ್ತು ಮನುಷ್ಯರ ಹಿಂದೆ ಬಿದ್ದಿದ್ದರೆ ನೀವು ನಾಯಿಗಳ ಹಿಂದೆ ಬಿದ್ದಿದ್ದಿರಿ. ಬೀಳುವುದೇನು ! ಮಾತಾಡಿಸುದೇನು, ಇದೆಲ್ಲದರ ಜೊತೆಗೆ ನಿಮ್ಮೂರಿನ ನಾಯಿಗಳ ಸಮಾಚಾರವನ್ನು ರಸವತ್ತಾಗಿ ಹೇಳಿದ್ದೀರಿ..
ಆಗಲೇ ನಮಗೂ ನಿಮ್ಮೂರಿನ ನಾಯಿಗಳ ಬಗ್ಗೆ ಕುತೂಹಲ ಉಂಟಾಗಿದ್ದು. ನಾವು ಕಾಯುತ್ತಿದ್ದೆವು. ಇವು ಬ್ಲಾಗಿಗೆ ಯಾವಾಗ ಬರುತ್ತವೆಂದು. ಅವುಗಳ ಭಾವನೆಗಳನ್ನು ವಿವರಣೆ ಕೊಡುವುದರ ಮೂಲಕ ಚೆನ್ನಾಗಿ ವಿವರಿಸಿದ್ದೀರಿ. ಹೀಗೆ ಮುಂದುವರಿಸಿ...
ಶಿವು..ಸರ್...
ವಿಶ್ವಾಸಕ್ಕೆ ಮತ್ತೊಂದು ಹೆಸರು..ನಾಯಿ..
"ಓಶೊ" ಒಂದುಕಡೆ ಹೇಳುತ್ತಾರೆ...
ತನ್ನ ಯಜಮಾನನ ಪ್ರೀತಿ ಕಂಡು ಬೆಕ್ಕು " ತನ್ನಲ್ಲೇನೋ ವಿಷೇಶವಿದೆ ಅದಕ್ಕೇ ಯಜಮಾನ ತನ್ನನ್ನು ಪ್ರೀತಿಸುತ್ತಾನೆ..." ಅಂದುಕೊಳ್ಳುತ್ತದಂತೆ..
"ತನ್ನ ಯಜಮಾನ ಎಷ್ಟು ಒಳ್ಳೆಯವನು.. ತನ್ನನ್ನೂ..ಪ್ರೀತಿಸುತ್ತಾನಲ್ಲ..!!' ಎಂದು ನಾಯಿ ಅಂದು ಕೊಳ್ಳುತ್ತದಂತೆ...
ಪ್ರತಿಕ್ರಿಯೆಗೆ..ಧನ್ಯವಾದಗಳು...
ತಮಗೆ ಸಿಕ್ಕ ಪ್ರಶಸ್ತಿಗೆ...
ಅಭಿನಂದನೆಗಳು...
ತ೦ಬ ಚೆನ್ನಾಗಿವೆ sir ಫೊಟೊಗಳು.... ನಾಯಿ ಮರಿ ನಾಯಿ ಮರಿ ತಿ೦ಡಿ ಬೇಕೆ....ಹಾಡು ನೆನಪಾಯ್ತು
ಗೀತಾರವರೆ...
ನಾನು ಸಿಂಗಾಪುರಕ್ಕೆ ಹೋಗಿದ್ದೆ..ಅಲ್ಲಿ ಒಂದೇ ಒಂದು ಬೀದಿ ನಾಯಿ ನೋಡಿಲ್ಲ.. ಅಲ್ಲಿ ನಾಯಿ ಸಾಕಲಿಕ್ಕೂ ಸರಕಾರದ ಅನುಮತಿ ಬೇಕು ಅಂತ ಕೇಳಿದ ನೆನಪು.. ಹಾಗಾಗಿ ಬೀದಿನಾಯಿ ಅಲ್ಲಿ ನೋಡಲಿಕ್ಕೆ ಸಿಗಲೇ ಇಲ್ಲ. ಕತಾರ್ ದೇಶದಲ್ಲೂ ಬೀದಿನಾಯಿಗಳು ಕಾಣಸಿಗುವದಿಲ್ಲ.
ನಮ್ಮ ದೇಶದ ಬೀದಿ ನಾಯಿ ಬಗೆಗೆ ಹೇಳುವದು ಬೇಡ ಅಲ್ಲವಾ?
ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರಕಾಶಣ್ಣ,
ನಾಯಿ ನಿಯತ್ತಿನ ಪ್ರಾಣಿ ಅಲ್ಲದೇ ಭಾವನೆ ತೋರುವ ಪ್ರಾಣಿಯಂತ ತಿಳಿಯಿತು.
ಈ ಚಿತ್ರ ಗುಂಡನ ಚಿತ್ರನಾ? ಇದರಲ್ಲಿ ಅದು ಯಾಕೋ ಬೇಸರದಲ್ಲಿದೆ ಅನಿಸಿತು...
ಅಂತರವಾಣಿ....
ಫೋಟೊಗಳಲ್ಲಿ ಯಾವುದೇ..."ಜಾತಿ ನಾಯಿಗಳಲ್ಲ"
ಬೀದಿ"ನಾಯಿಜಾತಿ"ಗಳು..!
ನಮ್ಮ ನೆಂಟರ ಮನೆಯ ನಾಯಿ.."ರಾಣಿ"
"ಗುಂಡ " ಇದಲ್ಲ...
ಪ್ರತಿಕ್ರಿಯೆಗೆ...ಧನ್ಯವಾದಗಳು...
ಈ ಲೇಖನ ಓದಿದಾಗ ನಮ್ಮ ಸ್ನೇಹಿತರೊಬ್ಬರು ತಮ್ಮ ಮನೆಯಲ್ಲಿ ಸಾಕಿದ ನಾಯಿ(ಗಳಿ)ಗೆ 'ಪಾಟೀಲ', 'ಮಹಾಬಲೇಶ್ವರ' ಮುಂತಾದ, ಮನುಷ್ಯರಿಗಿಡುವ ಹೆಸರು ಹಿಡಿದು ಕೂಗುವುದು ನೆನಪಾಯಿತು !
ಹಿತ್ತಲಮನೆಯವರೆ...
ನಾನು ಸಣ್ಣವನಿದ್ದಾಗ ನಾಯಿಗೆ ಏಕೆ ಹೆಸರಿಡಬೇಕು?
"ನಾಯಿ" ಅಥವಾ "ಕುನ್ನಿ" ಅಂತ ಕರೆದರೆ ಏನು ತಪ್ಪು ಅಂದಿದ್ದೆ...
ಹೌದಲ್ಲವಾ...
"ನಾಯಿಗೆ " ಮನುಷ್ಯರ ಹೆಸರಿಟ್ಟು ಅವಮಾನ ಮಾಡಿದ ಹಾಗಲ್ಲವೇ..!!
ಧನ್ಯವಾದಗಳು...
Please write some of the many famous stories on "Gunda".
ಕಿಶನ್...
ಹೌದು..ಹೌದು...ನೆನಪಿಸಿದ್ದಕ್ಕೆ...ಧನ್ಯವಾದಗಳು...!!
ನಾಯಿಮರಿ ಮತ್ತು ಆಕಳು ಅಂದ್ರೆ ನಂಗೆ ತುಂಬಾನೇ ಇಷ್ಟ. ವಾಹ್..ನಂಗೆ ಒಂದು ವಸ್ತು ಹೊಳೇತು..ಬ್ಲಾಗ್ ಗೆ ಬರೇತೀನಿ.
-ಚಿತ್ರಾ
ಚಿತ್ರಾ ಕರ್ಕೇರಾರವರೆ...
ನನಗೂ ಸಹ ಆಕಳೆಂದರೆ ಬಹು ಪ್ರೀತಿ...
ಏನು ಎಂದು ಬ್ಲೋಗನಲ್ಲಿ ಬರೆಯಿರಿ...
ಧನ್ಯವಾದಗಳು....
Post a Comment