Wednesday, December 3, 2008

ನಾನು ಕರೆಯೋದು ಹೆಚ್ಚೋ..? ನೀನು ಬರುವದು ಹೆಚ್ಚೋ..?

ನಾನಾಗ ಕತಾರ್ ನಿಂದ ಬಂದು ಮದುವೆಯಾಗಿದ್ದೆ. ಮದುವೆಯಾದ ಮೂರನೆ ದಿವಸ ಬೆಂಗಳೂರಿಗೆ ಬಂದಿದ್ದೇವು. ಇಲ್ಲಿಂದ ಮೊದಲು ಊಟಿ, ನಂತರ ಕೊಡೆಕೆನಾಲ್..ಆಮೇಲೆ ಶ್ರವಣಬೆಳಗೊಳ, ಬೇಲೂರು ಹಳೆಬೀಡು ಕಾರ್ಯಕ್ರಮ ಹಾಕಿ ಕೊಂಡಿದ್ದೆ.
ಬೆಳಿಗ್ಗೆ ಬಸ್ಸಿಗೆ ಬಂದು ನನ್ನಕ್ಕನ ಮನೆಗೆ ಬಂದು ಬಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ..

ಅಕ್ಕ ಹುಡುಕಿದ ಮುದ್ದಾದ .. ...ಹೊಸ ಹೆಂಡತಿ... ಪತ್ರದಲ್ಲಿ ಮಾತ್ರ ಪ್ರೇಮ ಸಲ್ಲಾಪ ನಡೆದಿತ್ತು..ಹೆಚ್ಚಿಗೆ ಮಾತುಕತೆ ಆಗಲಿಲ್ಲವಾಗಿತ್ತು..
ಊರಲ್ಲಿ ಎಲ್ಲರೂ ನನಗೆ ತುಂಬಾ ಕೀಟಲೆ ಮಾಡುತ್ತಿದ್ದರಿಂದ ಮಾತನಾಡಲಿಕ್ಕೆ ಆಗಿಲ್ಲವಾಗಿತ್ತು.

ಸ್ವಲ್ಪ ಹೆದರಿಕೆ.. ಸಂಕೋಚ.. ಚಂದದ ಈ ಹುಡುಗಿ ಇನ್ನು ನನ್ನ ಮಡದಿ..
ನನ್ನ ಬಾಳ ಸಂಗಾತಿ....

ಒಂದುರೀತಿಯ ಭಯ ಮಿಶ್ರಿತ ಖುಷಿಯ ಅನುಭಾವ ಅನುಭವಿಸುತ್ತ ಇದ್ದೆ.

.' ಪ್ರಕಾಶು.. ಇಲ್ಲಿ ಬಾ " ಅಕ್ಕ ಕರೆದಳು..

ಈ ಅಕ್ಕನಿಗೆ ಕನಿಷ್ಟ ಮಟ್ಟದ ಸಾಮಾನ್ಯ ಜ್ನಾನವಾದರೂ ಬೇಡವೆ..? ಛೆ..
ಹೊರಕ್ಕೆ ಬಂದೆ .. ಡ್ರಮ್ಮು ಸೈಜಿನ ಮಹಿಳಮಣಿ ಬಂದಿದ್ದರು.
ನನ್ನನ್ನು ನೋಡಿದವರೇ...
"ಅರೇರೇ..ಪ್ರಕಾಶಾ..ಎಷ್ಟು ದೊಡ್ಡಾಗಿಬಿಟ್ಟಿದ್ದೀಯಾ..!! ಮದುವೆ ಆಯಿತಂತಲ್ಲೋ.?? ಎಲ್ಲೋ ನಿನ್ನ ಹೆಂಡತಿ..? ತೋರಿಸೊ.."
ಅಂದರು..

ಮುಖದ ತುಂಬಾ ಬಾಯಿನೊ..ಬಾಯಿ ತುಂಬಾ ಮುಖಾನೊ..
ಅಹಾ ಹಾ..ಏನು ಕಂಠ..ಏನು ಕಥೆ...?

ಈ ಗಲಾಟೆ ಕೇಳಿ ಗಾಭರಿ ಮುಖಮಾಡಿಕೊಂಡ ನನ್ನಾಕೆ ಓಡಿಬಂದಳು..

"ಓಹೊಹೊ..ಇವಳೇನಾ... ಇಲ್ಲಿ ಎಲ್ಲೂ ಸಿಗಲಿಲ್ಲ ಅಂತ ಆಗ್ರಾದಿಂದ ಬಂದವಳು..
ಒಳ್ಳೆ ಖುಷ್ಬು ಥರ ಇದ್ದಾಳಲ್ಲೋ..!! ಕನ್ನಡ ಬರುತ್ತೇನೋ..?"

ಏರಿದ ಕಂಠದಿಂದ ಮಾತಾಡುತ್ತಿದ್ದ ಆ ಮಾತೇಯನ್ನು ನಾವಿಬ್ಬರೂ ಅವಕ್ಕಾಗಿ ನೋಡುತ್ತಿದ್ದೇವು.

ಇಷ್ಟೆಲ್ಲಾ ಆತ್ಮೀಯವಾಗಿ ಮಾತಾಡುತ್ತಿದ್ದ ಇವರು ಯಾರು ಅಂತ ನನಗೆ ಗೊತ್ತಾಗಲಿಲ್ಲ.

ಸಾವಿರಾರು ಪ್ರಶ್ನಾರ್ಥಕ ಚಿನ್ಹೆ ಇಟ್ಟುಕೊಂಡು ಅಕ್ಕನ ಮುಖ ನೋಡಿದೆ.
ಅದು ಅವರಿಗೂ ಗೊತ್ತಾಯಿತು ಅನ್ನಿಸಿತ್ತೆ..ಮತ್ತೆ ಬಾಯಿತೆರೆದರು..
ಧಡೂತಿ ಮಹಿಳೆ ಆತ್ಮೀಯವಾಗಿ ಮಾತಾಡುತ್ತಿದ್ದಳು....

"ಅಲ್ಲೋ ಪ್ರಕಾಶಾ.. ನಿಂಗೆ ನನ್ನ ನೆನಪು ಇಲ್ಲೇನೋ..? ನಾನು ನಿನ್ನ ಎತ್ತಿ ಆಡಿಸಿ ಬೆಳಿಸಿದ್ದೀನೊ..
ನಿನ್ನ ಚಾಚಿ ತೆಗೆದು ಕ್ಲೀನ್ ಮಾಡಿದ್ದೀನೊ..ಗೊತ್ತಾಗಲಿಲ್ಲೇನೋ..?"

ನಮಗೆ ತಲೆ ಆಡಿಸುವದನ್ನು ಬಿಟ್ಟು ಮತ್ತಿನ್ನೇನಕ್ಕೂ ಅವಕಾಶವೇ ಇರಲಿಲ್ಲ...

"ನಾನು ದೂರದ ಸಂಬಂಧದಿಂದ ಅತ್ತೆ ಅಗಬೇಕು ಕಣೊ..ನೀವೆಲ್ಲ ಆಗ ಬಹಳ ಚಿಕ್ಕವರಿದ್ರಿ..ಎಲ್ಲಿ ನೆನಪಿರುತ್ತೆ?'

ಅವರೆ ಪ್ರಶ್ನೆ ಕೆಳಿಕೊಳ್ಳುತ್ತಿದ್ದರು..ಅವರೆ ಉತ್ತರ ಕೊಡುತ್ತಿದ್ದರು..

"ನಾನು ಸರಸತ್ತೆ...!!"

ಅಂತೂ ನಮಗೆ ಬೇಕಾದ ವಿಷಯ ಸಿಕ್ಕಿತು..!!

"ನೋಡೊ ತುಂಬಾ ಅಪರೂಪಕ್ಕೆ ಸಿಕ್ಕಿದೀಯಾ..ನಮ್ಮನೆಗೆ ಊಟಕ್ಕೇ ಕರೆಯೋಣ ಅಂತಿದ್ದೆ. ನಿಮಗೆ ಹನಿಮೂನಿಗೆ ಹೋಗಬೇಕಂತೆ.. ಅಕ್ಕ ಹೆಳಿದ್ದಾಳೆ.. ನಿಮ್ಮ ಸಮಯ ವೇಷ್ಟು ಮಾಡಲಿಕ್ಕೆ ನನಗೆ ಮನಸ್ಸಿಲ್ಲ..
ಯಾವಾಗ್ಲೂ ನಾನೊಬ್ಬಳೆ ನಿಮ್ಮನೆಗೆ ಬರ್ತಾ ಇರ್ತೀನಿ... ಇಂದು ಮಧ್ಯಾನ್ಹ ೫ ಗಂಟೆಗೆ ನೀವೆಲ್ಲರೂ ಬರಬೇಕು.."
ರಾಜಾಜ್ಞೆಥರ ಹೇಳಿದಳು..

ಇಲ್ಲಿಯವರಗೆ ಬಡಬಡಿಸುತ್ತಿದ್ದ ಬಾಯಿಗಳಿಗೆ ಸ್ವಲ್ಪ ಬ್ರೇಕ್ ಕೊಟ್ಟಳು..

"ನೋಡಿ ಸರಸತ್ತೆ ..ನಿಮಗ್ಯಾಕೆ ತೊಂದರೆ ಇನ್ನೊಂದು ದಿವಸ ಬರ್ತೇವೆ.."

ಕಾರ್ಯಕ್ರಮ ಮುಂದೂಡಿದವನು ಬಾಳಿಯಾನು ಎಂಬಂತೆ...ಹೇಳಿದೆ...

"ಛೆ..ಛೆ..ನಾನು ಕರೆಯೋದು ಹೆಚ್ಚೋ..ನೀನು ಬರೋದು ಹೆಚ್ಚೊ.. ಬರ್ಲೇ ಬೇಕಪ್ಪ. ವಾರದ ಹಿಂದಿನಿಂದಲೇ...ನಾನು ಎಲ್ಲ ತಯ್ಯಾರಿ ಮಾಡಿ ಕೊಂಡುಬಿಟ್ಟಿದ್ದೇನೆ.."

ಅಕ್ಕ ಮಧ್ಯ ಪ್ರವೇಶ ಮಾಡಿದಳು " ಆಯ್ತು ಸರಸತ್ತೆ " ನಾವೂ ಕೂಡ ನಿಮ್ಮನೆ ನೋಡಿಲ್ಲ. ಬಹಳ ದಿನದಿಂದ ಹೇಳ್ತಿದ್ದೀರ. ಎಲ್ಲರೂ ಬರ್ತೇವೆ"

ನಂತರ ಹೆಚ್ಚಿಗೆ ಮಾತನಾಡದೆ ಹೋದಳು..
ಒಂದುರೀತಿಯ ದೊಡ್ಡ ಮಳೆ ಬಂದು ಹೋದಂತಾಯಿತು...

ಅಕ್ಕ ಹೇಳಿದಳು " ನಂಗೂ ಕೂಡ ನೆನಪಿಲ್ಲ ಕಣೊ.... ಇಲ್ಲಿ ಒಮ್ಮೆ ಸಿಕ್ಕು ಅವಳೆ ಪರಿಚಯ ಹಿಡಿದು ಮಾತನಾಡಿ ಬಹಳ ಕರೆಯುತ್ತಿದ್ದಾಳೆ. ಏನೇನೊ ಸಂಬಂಧ ಹೇಳ್ತಾಳೆ....ನಾವೂ ಕೂಡ ಹೋಗಿಲ್ಲ. ಹೋಗಿ ಬಂದರಾಯಿತು ಬಿಡು."

"ಇವರು ಯಾವಾಗಲೂ ಹೀಗೆನಾ..? ಏನು ಧ್ವನಿ..ಏನು ಕಂಠ..? ಹೇಗೆ ಇವರ ಸ್ವಭಾವ?" ನಾನು ಕೇಳಿದೆ.

"ಅಯ್ಯೊ ಅದೇನು ಕೇಳ್ತೀಯಾ..ನಮ್ಮನೆಗೆ ಬಂದಾಗ ಟೀ ಸಂಗಡ ಲಾಡು..ಚಿಪ್ಸು ಏನೆ ಇಟ್ಟರೂ ಅದನ್ನು ಸೆರಗಿನಲ್ಲಿ ಗಂಟು ಕಟ್ಟಿ ಬಿಡುತ್ತಾಳೆ. ನಮ್ಮನೆಯ ಹಿರಿಯರ ತಿಥಿ, ಶ್ರಾದ್ಧ ಎಲ್ಲ ಇವರಿಗೆ ಗೊತ್ತು.. !
ಆ ಸಮಯದಲ್ಲಿ ಅವಳೇ ಮಾತನಾಡಿಸಿ ದಿನ ತಿಳಿದು ಕೊಂಡು ತಪ್ಪದೆ ಹಾಜರಾಗುತ್ತಾಳೆ..
ಅಂದೂ ಕೂಡ ಬಾಳೆ ಎಲೆಯಲ್ಲಿನ ಸ್ವೀಟು ಸೆರಗಿಗೆ ಗಂಟು ಕಟ್ಟುತ್ತಾಳೆ... ಹೋಗ್ಲಿಬಿಡು..ಸರಿ ನೀವುಗಳು ರೆಸ್ಟ್ ತಗೊಳಿ."

ಅಂತೂ ನಮ್ಮಕ್ಕ ಜ್ನಾನದ ಮಾತಾಡಿದಳು..

ಇಷ್ಟು ದೊಡ್ಡ ಮಳೆ ಬಂದು ಹೋದ ಮೇಲೆ ಇನ್ನೇನೂ ಆಗಲಿಲ್ಲ.

ಹೇಗಿದ್ದರೂ ರಾತ್ರಿ ಬೇಕಾದಷ್ಟು ಸಮಯವಿದೆಯಲ್ಲ..ನಾಳೆ ಬೆಳಿಗ್ಗೆ ಊಟಿ ಹೋಗುತ್ತಿದ್ದೇವಲ್ಲ ...ಅಂದು ಕೊಳ್ಳುತ್ತ.. ಸುಮ್ಮನೆ ಮಲಗಿದೆ...
ಮಧ್ಯದಲ್ಲಿ ನನ್ನಕ್ಕನ ಕೀಟಲೆ ಬೇರೆ..
ನಾಲ್ಕು ಗಂಟೆಯ ಸುಮಾರಿಗೆ ಬಾವ ಬಂದರು.
ಅವರ ಸಂಗಡ ನನ್ನ ದೊಡ್ಡಮ್ಮನ ಮಗ ವಿನಾಯಕ ಕೂಡ ಇದ್ದ.
ಎಲ್ಲರೂ ಸರಸತ್ತೆ ಮನೆಗೆ ಹೋದೆವು.ಮನೆ ತುಂಬಾ ಚೆನ್ನಾಗಿತ್ತು...

ದೊಡ್ಡ ದೇಶಾವರಿ ನಗುವಿನಿಂದ ಸ್ವಾಗತಿಸಿದಳು ಸರಸಕ್ಕ..."ನೋಡು ..ನಾನು ಕರೆಯೋದು ಹೆಚ್ಚಾ..ನೀನು ಬರೋದು ಹೆಚ್ಚಾ..?""
ಗಂಡನೂ ಅಲ್ಲಿಯೇ ಇದ್ದ ,ಬಹಳ ಮ್ರದು ಸ್ವಭಾವ ಅನ್ನಿಸುತ್ತಿತ್ತು.. ಹಾಗೆ ಇರಬೇಕಾದ ಅನಿರ್ವಾಯತೆಯೆನೊ..? ಮನಸ್ಸಿನಲ್ಲೆ ನಗು ಬಂತು...

"ಸರಸಕ್ಕ ಟಿ ಮಾಡಲಾ..ಕಾಫಿ..ಮಾಡಲಾ.." ಕೇಳಿದರು..
ನಾವು ಬೇಡ ..ಬೇಡ..ಅಂದೆವು...ಸ್ವಲ್ಪ ಹೊತ್ತು ಮಾತಿನಲ್ಲೆ ಕಳೆಯಿತು..

ನಾನು ನನ್ನಕ್ಕನ ಮುಖ ನೋಡಿದೆ..ಮನೆಯಲ್ಲಿ ಏನೂ ಸೇವಿಸದೆ ಬಂದಿದ್ದೇವು...

"ಸರಸಕ್ಕ ಏನು ಮಾಡ್ತಿರೊ ಮಾಡಿ..ಹೊಸ ಜೋಡಿಗಳು ಬ್ರಿಗೇಡ್ ರೋಡ್ ಕಡೆ ಹೋಗಿ ಬರ್ತಾರಂತೆ.." ಅಕ್ಕ ಸ್ವಲ್ಪ ಸಂಕೋಚ ಬಿಟ್ಟು ಹೇಳಿದರು...
" ಅಯ್ಯೊ ಎಲ್ಲ ರೆಡಿಯಾಗಿದೆ..ನಿಮ್ಮ ಬರುವದನ್ನೇ ಕಾಯುತ್ತಿದ್ದೆ.." ಅನ್ನುತ್ತ ಎದ್ದು ಒಳಗೆ ಹೋದರು..

ಸಂಗಡ ಅಕ್ಕ, ನನ್ನಾಕೆಯೂ ಹೀಂಬಾಲಿಸಿದರು...

ಸ್ವಲ್ಪ ಸಮಯದಲ್ಲಿ ಪ್ಲೇಟ್ ಗಳೊಂದಿಗೆ ಬಂದರು...
ದೊಡ್ಡ ಪ್ಲೇಟ್..ಅದರಲ್ಲಿ ಬಿಸಿಬೇಳೆ ಬಾತ್,
ಪಕ್ಕದಲ್ಲಿ ಹೋಳಿಗೆ.. ಅದಕ್ಕೆ... ಮೇಲಿಂದ ತುಪ್ಪ , ಸಕ್ಕರೆಪಾಕ...!
ವಾವ್..ಮನಸ್ಸಿಗೆ ಖುಷಿಯಾಯಿತು.. "ಇಷ್ಟೆಲ್ಲ ಬೇಡಾಗಿತ್ತು.. " ಎನ್ನುತ್ತ ಹೇಳುವಾಗಲೇ.. ಬಾಯಲ್ಲಿ ನೀರು ಬಂದಿತ್ತು.

ಹೊಸ ಮಡದಿಯ ಮುಖ ನೋಡಿದೆ..

ಕಣ್ಣಿಂದ ಏನೋ ಹೇಳುವಂತಿತ್ತು...

ಗೊತ್ತಾಗಲಿಲ್ಲ..ಅಕ್ಕನ ಮುಖನೋಡಿದೆ..
ಅಕ್ಕ ಕಣ್ಸನ್ನೇಯಿಂದ ತನ್ನ ಪ್ಲೇಟ್ ತೋರಿಸಿದಳು...

ಅವಳಿಗೆ ಬಿಸಿ ಬೇಳೆ ಬಾತ್ ಅಂದರೆ ಪಂಚ ಪ್ರಾಣ..ಪ್ಲೇಟಲ್ಲಿ ಸ್ವಲ್ಪವೇ ಇತ್ತು...!!
ಹೋಳಿಗೆ ಮೂರು ಹಾಕಿಸಿ ಕೊಂಡಿದ್ದಳು...ಹೋಳಿಗೆ ಅಕ್ಕಂಗೆ ಇಷ್ಟವೇ ಇಲ್ಲ.. !!

ನನಗೆ ಅರ್ಥವಾಗಲಿಲ್ಲ..
ಬಿಸಿಬೇಳೆ ಬಾತಿಗೆ ಸ್ಪೂನ್ ಹಾಕಿದೆ...
ಸ್ಪೂನ್ ಮೇಲೆ ಎತ್ತಿ ಬಾಯಿಗೆ ಹಾಕಿದೆ.... ಸ್ವಲ್ಪ ಲೋಳೆಯ ಥರ ಅನ್ನಿಸಿತು.....
ಇನ್ನೊಂದು ಸ್ಪೂನ್ ಬಾಯಿಗೆ ಹಾಕಿ ಕೊಂಡೆ..

ಹೌದು...ಸಿಂಬಳದ.. ಹಾಗೆ ಅನಿಸಿತು....

" ಇದು ಬಿಸಿ ಬೇಳೆ ಬಾಥ್ ಅಲ್ಲವೇ..?" ತುಂಬಾ ಆತಂಕದಿಂದ ಕೇಳಿದೆ..

" ಹೌದೊ ಮಾರಯಾ..ನಿನಗೆ ಪ್ರೀತಿ ಅಂತ... ಸಂಕೋಚ ಮಾಡಿಕೋಳ್ಳ ಬೇಡ..ಇನ್ನೊಂದು ಸಾರಿ ಹಾಕ್ಸೋಬೆಕು" ಅಂದಳು..ಸರಸತ್ತೆ.

ಇದೆಂಥದು.. ಬಿಸಿಬೇಳೆ ಬಾತ್... ??

ಬಾಯಿಗಿಟ್ಟೆ.. .ಒಂಥರಾ.. ..ಲೋಳೆ...ಲೋಳೇ.....ಏನೇನೋ ಆಯಿತು... !

ಆದರೆ..ಸುವಾಸನೆ..ಪರವಾಗಿಲ್ಲವಾಗಿತ್ತು....ಬಹಳ ಬಿಸಿ...

ಹಾಕಿದೆ..ಗಂಟಲಲ್ಲಿ ಇಳಿಯೋದೆ ಇಲ್ಲ.."ದೇವರೆ..ಇದೆಂಥ ಶಿಕ್ಷೆಯಪ್ಪ.." ಅಂದುಕೊಂಡೆ..


"ಪ್ರಕಾಶು...ಕತಾರ್ ದೇಶದಲ್ಲಿ ಇಂಥದ್ದೆಲ್ಲ ಸಿಗಲ್ಲಪ್ಪ..ನಿಧಾನವಾಗಿ ತಿನ್ನು..."
ಸರಸತ್ತೆ ಉಪಚಾರ ಮಾಡುತ್ತಿದ್ದಳು..

ಬಾವನನ್ನು ನೋಡಿದೆ..


ಬಾಯಿಗೆ ಹಾಕುತ್ತಿದ್ದರು......ನೀರು ಕುಡಿಉತ್ತಿದ್ದರು..!!

ಇದು.. ಗಂಟಲಿಗೆ ಇಳಿಸುವ ಉಪಾಯ..! ವಿನಾಯಕನೂ ಹಾಗೆ ಮಾಡುತ್ತಿದ್ದ...!
ಮನೆ ಯಜಮಾನನ್ನು ನೋಡಿದೆ...

ತನ್ನ ಪಾಡಿಗೆ ನಿರ್ವಿಕಾರವಾಗಿ ತಿನ್ನುತಿದ್ದರು...

ನಾನು ತಿನ್ನಲೇ ಬೇಕಾಗಿತ್ತು..!

ಹಾಗು ಹೀಗೂ.. ಮುಕ್ಕಾಲು ಭಾಗ ತಿನ್ನೊ ಹೊತ್ತಿಗೆ...
ಹೊಟ್ಟೆ ಇದು..ತನ್ನಿಂದ ಆಗಲ್ಲ..ಹೊರಗೆ ಕಳಿಸುತ್ತೇನೆ ಅನ್ನುವಂತಿತ್ತು...

ಇದು ಸಾಕು ಎಂದು ಹೋಳಿಗೆಗೆ ಕೈ ಹಚ್ಚಿದೆ....


ಮಡಿಸಿಟ್ಟ ಪದರು ಬಿಡಿಸಿದೆ..ಒಳಗೆ ಹತ್ತಿಯಂತೆ... ಬೂಸ್ಟ್ ಬಂದಿತ್ತು.. !


"ಅಯ್ಯೊ ದೇವರೆ..ಎಂಥಹ..ಧರ್ಮ ಸಂಕಟ...!! ಅದರ....ಸಕ್ಕರೆ ಪಾಕ ಖಾಲಿಯಾಗಿತ್ತು.....!!

ಅದನ್ನು ಬಿಸಿ ಬೇಳೆ ಬಾತಿಗೆ ಬಳಸಿ ಕೊಂಡಿದ್ದೆ... !!
ತಕ್ಷಣ ಒಂದು ಉಪಾಯ ಬಂತು...
ನನ್ನ ಪ್ಲೇಟ್ ಕೈ ಜಾರಿ ಕೆಳಗೆ ಬೀಳೀಸಿದೆ...!!

ಅಬ್ಭಾ ಗೆದ್ದೆ.....ಅನ್ನಿಸಿತು..!!


ಸರಸಕ್ಕ " ಸ್ವಲ್ಪ ಇರು ಪ್ರಕಾಶಾ....ಬೇರೆ ಪ್ಲೇಟ್....ತರುತ್ತೇನೆ.." ಅಂತ ಒಳಗೆ ಹೋಗಲು ಅನುವಾದಳು..

ಅಕ್ಕ ತಡೆದಳು..." ಸರಸಕ್ಕ..ಇವತ್ತು ನಾವೆಲ್ಲರೂ ಮಧಾನ್ಹ ಹೊಟೆಲ್ ಊಟ ಮಾಡಿದ್ದೇವೆ..ಯಾರಿಗೂ ಹಸಿವಿಲ್ಲ..ಯಾರಿಗೂ ಒತ್ತಾಯ ಬೇಡ.." ಎಂದು ಬಚಾವ್ ಮಾಡಿದಳು..
ಹಾಗೆ ಬಾವ , ವಿನಾಯಕರೂ ಅರ್ಧಕ್ಕಿಂತ ಬಿಟ್ಟು ಎದ್ದರು.. !!

"ಇರು.... ಕಾಫಿ.. ಮಾಡುತ್ತೇನೆ " ಅನ್ನುತ್ತ ಮತ್ತೆ ಆಕ್ರಮಣ ಮಾಡಲು ರೆಡಿ ಆದಳು.. ..

ನಾವೆಲ್ಲ ಬೇಡ ಬೇಡ ಅನ್ನುತ್ತ ತಪ್ಪಿಸಿ ಕೊಂಡು ಬರುವಷ್ಟರಲ್ಲಿ ಬಹಳ ಸಾಹಸ ಪಟ್ಟೆವು...!!

ಮನೆಗೆ ಬಂದವರು ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ...

ಹೊಟ್ಟೆಯಲ್ಲಿ ಒಂಥರ ಶಬ್ಧ..ಬೇಡವೆಂದರೂ ದೊಡ್ಡದಾಗಿ....ಬರುತ್ತಿತ್ತು... !

.ಟುಂಯಿ..ಟುಸ್ಕ್...ಕುಂಯ್ಯ್..ಅನ್ನುತ್ತಿತ್ತು..!!

ಬಾವ ಪರಿಚಯದ ಡಾಕ್ಟ್ರಿಗೆ ಫೋನ್ ಮಾಡಿದ...

ನಮ್ಮ ಹನಿ ಮೂನ್ ಪ್ರೊಗ್ರಾಮ್ ಟುಸ್ಸ್ ಆಯಿತು.. !
ಐದು ದಿವಸ ಹಾಸಿಗೆ ಬಿಟ್ಟು ಏಳಲಿಕ್ಕೆ ಆಗಲಿಲ್ಲ...!!


ಕೊನೆಗೆ ಬೇಲೂರು..ಹಳೆಬೀಡು.. ಶ್ರವಣಬೆಳ್ಗೊಳ ಮಾತ್ರ ಸಾಧ್ಯವಾಯಿತು.



ಈಗ ಶ್ರವಣಬೆಳಗೊಳ ಮಾತ್ರ ನೆನಪಿದೆ...!!

60 comments:

NilGiri said...

ಮದುವೆಯಾದ ಹೊಸದರಲ್ಲಿ, ಒಬ್ಬರಲ್ಲ ಒಬ್ಬರು ಊಟಕ್ಕೆ ಕರೆದರೆಂದು ದಿನಕ್ಕೊಂದು ಮನೆಗೆ ಹೋಗುವ ಪ್ಲಾನ್ ಹಾಕಿದ್ದೆ. ಆದರೆ ಹೋದವರ ಮನೆಗಳಲ್ಲಿ ಎಲ್ಲರದೂ ಒಂದೇ ಮೆನು :( ಜೋಳದ ರೊಟ್ಟಿ, ಬದನೇಕಾಯಿ ಎಣ್ಣೇಗಾಯಿ, ಶೇಂಗಾ ಚಟ್ನಿ, ಬೇಳೆ ಸಾರು ನೋಡಿ ಸಾಕಪ್ಪಾ ಸಾಕು. ಆ ಯಮಖಾರ! ನೆನೆಸಿಕೊಂಡರೆ ಮೈ ಜುಂ!

ನಿಮ್ಮ ಅನುಭವ ಬಹಳ ಚೆನ್ನಾಗಿ ಬರೆದಿದ್ದೀರಿ. ನಿಮ್ಮದು ಓದಿ ನಮ್ಮದೂ ನೆನಪಿಗೆ ಬಂತು :D.

Ittigecement said...

ಗಿರಿಜಾ ರವರೆ...
ಈ ಸರಸತ್ತೆ ಕಥೆ ಇಲ್ಲಿಗೆ ಮುಗಿದಿಲ್ಲ..
ಇನ್ನೊಂದು ಇದೆ..ಮುಂದೆ ಯಾವಾಗಾಲಾದರು ಹೇಳಲೇ ಬೇಕು....ಹೇಳುತ್ತೇನೆ...
ನಮ್ಮನೆಯಲ್ಲಿ ನೀವು ಹೇಳಿದ "ಭಾರ ಇಳಿಸು ಸಪ್ತಾಹ ಶುರುವಾಗಿದೆ"..
ಆಶೀರ್ವಾದ ಮಾಡಿ ಬಿಡಿ..ಅಲ್ಲಿಂದಲೆ...
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು...

Harisha - ಹರೀಶ said...

>> ಈಗ ಶ್ರವಣಬೆಳಗೊಳ ಮಾತ್ರ ನೆನಪಿದೆ...!!

ROFL!!

Ittigecement said...

ಹರೀಶ್...
ಬಿಸಿಬೇಳೆ ಬಾತ್ ವರ್ಣನೆ ಜಾಸ್ತಿ ಇತ್ತು. ಸೆನ್ಸಾರ್ ಮಾಡಲಾಗಿದೆ..
ವರ್ಣನೆ ಕೇಳಿದ ನಮ್ಮ ಸ್ನೇಹಿತರೊಬ್ಬರು ಬಿಸಿ ಬೇಳೆ ಬಾಥ್ ತಿನ್ನುವದನ್ನೇ ಬಿಟ್ಟು ಬಿಟ್ಟಿದ್ದಾರೆ...
ನಾವೂ ಕೂಡ...!
ಮೊದ ಮೊದಲು ಊಟ ಮಾಡುವಾಗ ಈ ಘಟನೆ ನೆನಪಾದರೆ..ಊಟ ಬಿಟ್ಟು ಎದ್ದು ಬಿಡುತ್ತಿದ್ದೇವು..!!
ಆ ಸಮಯದ ಸಂಕಟ ನಿಮಗೆ ಅರ್ಥ ಆಗುವದಿಲ್ಲ ಬಿಡಿ..
ಧನ್ಯವಾದಗಳು..!

Mohan said...

:D ಇದೆ ಶನಿವಾರ ನರಸಕ್ಕನ ಮನೆಗೆ ಯಾರರುಊಟಕ್ಕೆ ಬರುವವರು ದಯವಿಟ್ಟು ಅವರ ಹೆಸರನ್ನು ಪ್ರಕಾಶರಲ್ಲಿ ಮೊದಲು ನೊಂದಯಿಸಿ. :D

shivu.k said...

ಪ್ರಕಾಶ್ ಸಾರ್,

ಹೀ ಹೀ.... ಪೂರ್ತಿ ಓದಿ ಜೋರಾಗಿ ನಕ್ಕು ಬಿಟ್ಟೆ ನನ್ನಾಕೆಗೂ ತೋರಿಸಿದ್ದಕ್ಕೆ ಅವಳು ಜೋರಾಗಿ ನಕ್ಕುಬಿಟ್ಟಳು. ಕೊನೆಗೆ "ಪ್ರಕಾಶ್ ಹೆಗಡೆನೋ, ಅವರ ತಲೆನೋ" ಅಂತ ಹೇಳಿ ಹೊರಟು ಹೋದಳು.

ನಾವೇ ಪುಣ್ಯವಂತರು. ನಾವ್ಯಾರ ಗಾಳಕ್ಕೂ ಸಿಕ್ಕದೆ ಕೊಡೈಕಿನಲ್ ಬಸ್ ಹತ್ತಿಬಿಟ್ಟಿದ್ದವು. ಹೀಗೆ ಬರುತ್ತಿರಲಿ ನಿಮ್ಮ ನೆನಪುಗಳು.

shivu.k said...

ಪ್ರಕಾಶ್ ಸಾರ್,

ಹೇಮ ಮತ್ತೆ ಬಂದು " ಆಯ್ಯೋ ಪಾಪ, ಅವರು ಈಗಲಾದರೂ ಹನಿಮೂನಿಗೆ ಹೋಗಿಬರಲಿಕ್ಕೆ ಹೇಳಿ ನಿಮ್ಮ ಮಗ ಆಶಿಸ್ ಬಗ್ಗೆ ಚಿಂತಿಸಬೇಕಿಲ್ಲವಂತೆ, ಬೇಕಾದರೆ ಅವನನ್ನು ನಮ್ಮ ಮನೆಯಲ್ಲಿ ಬಿಟ್ಟಿದ್ದರೆ ನೀವು ಬರುವವರೆಗೂ ನಾವು ನೋಡಿಕೊಳ್ತೀವೆ" ಅಂದಿದ್ದಾಳೆ

ಚಿತ್ರಾ ಸಂತೋಷ್ said...

ಸರ್.........ಹಿಹಿಹಿ ಶಿವಣ್ಣ..ಫೋನ್ ಮಾಡಿ ..ತಂಗೀ ಪ್ರಕಾಶ್ ಸರ್ ಬ್ಲಾಗ್ ನೋಡು ಅಂದ್ರು..ಹಾಗೇ ಓದಿದೆ.! ಓದಿದ ಮೇಲೆ ಒಂದು ನಿರ್ಧಾರ ತೆಕೊಂಡಿದ್ದೀನಿ..ಅದನ್ನು ಈಗ ಹೇಳಲ್ಲ!!!! ಅಯ್ಯೋ ದೇವ್ರೇ......ಪಾಪ ಪ್ರಕಾಶ್ ಸರ್..
-ಚಿತ್ರಾ

Ittigecement said...

ಮೋಹನ್....
ಸರಸಕ್ಕನ ಮನೆ ವಿಳಾಸ ನಿಮಗೆ ಕೊಡುತ್ತೇನೆ..
ನೊಂದಾಯಿಸಿದ ಅರ್ಹ ಅಭ್ಯರ್ಥಿಗಳನ್ನು ನೀವು ಕರೆದು ಕೊಂಡು ಹೋಗಬೇಕಾಗಿದೆ..!!

ಅವರು ಯಾಕೆ ಹಾಗೆ ಮಾಡಿದರು? ಯಾಕೆ ಹಾಗೆ ಮಾಡುತ್ತಿದ್ದರು? ಅದು ಇನ್ನೂ ಸ್ವಾರಸ್ಯಕರವಾಗಿದೆ..
ಮತ್ತೊಮ್ಮೆ ಯಾವಾಗಲಾದರೂ ಹೇಳುತ್ತೇನೆ..
ಬಿಸಿಬೇಳೆ ಬಾತ್ ENJOY ಮಾಡಿದ್ದಕ್ಕೆ ವಂದನೆಗಳು...

Ittigecement said...

ಆತ್ಮೀಯ ಶಿವು, ಹೇಮಾ....
ಇಬ್ಬರೂ ಸಂತೋಷಪಟ್ಟಿದ್ದಕ್ಕೆ ಧನ್ಯವಾದಗಳು...

ನಿಮ್ಮನೆಗೆ.. ಆಶೀಶ್ ಯಾವಾಗ ಕಳಿಸಲಿ..?
ಇಬ್ಬರಿಗೂ ವಂದನೆಗಳು...

Ittigecement said...

ಚಿತ್ರಾರವರೆ...
ಅಣ್ಣ, ತಂಗಿ ಸೇರಿಕೊಂಡು ಏನು ಪ್ಲಾನ್ ಹಾಕಿದ್ದೀರಿ..?
ಸರಸತ್ತೆಗೆ ಸನ್ಮಾನ ಮಾಡಿಸೋಣ..! ನೀವೆ ಶಾಲು ಹೊದೆಸಿ.. ಮಾಡಿ ಅಂತ...!
ಅವರ ಪತಿ, ಮಕ್ಕಳು ಇನ್ನೂ ಗಟ್ಟಿ ಮುಟ್ಟಾಗಿದ್ದಾರೆ...!!
ಇದು ಅದ್ಭುತಗಳಲ್ಲೊಂದು....
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....

ರಾಘವೇಂದ್ರ ಕೆಸವಿನಮನೆ. said...

ಅಯ್ಯೋ ಹೆಗಡೇರೆ!!?
ಊರ ಮಂದಿಯ ಕೀಟಲೆಯ ಬಾಣಲೆಯಿಂದ ತಪ್ಪಿಸಿಕೊಂಡು ಬಂದು ಬಿಸಿಬೇಳೆಬಾತಿನ ಬೆಂಕಿಗೆ ಬಿದ್ದ ಕತೆ ಬಹಳ ಮಜವಾಗಿತ್ತು.(ಆಗಿನ ನಿಮ್ಮ ಪಾಡು ನೆನೆದು ಮರುಕವೂ ಆತು)ಏನೇ ಆಗ್ಲಿ ನಮ್ಮಂತವರಿಗೆ ಬರಹದ ಮೂಲಕ ಒಂದು ಮುನ್ನೆಚ್ಚರಿಕೆ ರವಾನೆ ಮಾಡಿದ್ದಿ!!!!:) ಇದಕ್ಕೆ ಸಂಬಂಧಿಸಿದ ಇನ್ನುಳಿದ ಕಂತುಗಳೂ ಹೊರ ಬರಲಿ.
- ರಾಘವೇಂದ್ರ ಕೆಸವಿನಮನೆ.

Ittigecement said...

ರಾಘವೇಂದ್ರರವರೆ....
ನೀವು ಹುಷಾರಾಗಿರಿ...ಜಲ್ದಿ ಸಿಹಿ ಊಟ ಹಾಕಿಸಿಬಿಡಿ...
ಹೀಗೆ ಬರುತ್ತ ಬರುತ್ತ ಇರಿ...
ಹೋಳಿಗೆ ರುಚಿ ನೋಡಿದ್ದಕ್ಕೆ ಧನ್ಯವಾದಗಳು...

ಚಂದ್ರಕಾಂತ ಎಸ್ said...

ಅಬ್ಬಾ, ಬೆಳಿಗ್ಗೆ ನಿಮ್ಮ ಬರಹ ಓದಿ ಮಧ್ಯಾನ್ಹ ಬಂದು ಕಾಮೆಂಟ್ ಬರೆಯುವಷ್ಟರಲ್ಲಿ ಅದೆಷ್ಟು ಜನ ಬರೆದುಬಿಟ್ಟಿದ್ದಾರೆ. ಸಧ್ಯ ನಾನಂದುಕೊಂಡದ್ದನ್ನು ಯಾರೂ ಬರೆದಿಲ್ಲ! ಸರಸತ್ತೆ ವಾರದಿಂದ ಸಿದ್ಧ ಮಾಡಿಕೊಂಡಿದ್ದೀನಿ ಅಂದರಲ್ಲಾ ಅದರ ಫಲ ಈ ವಿಶಿಷ್ಟ ಬಿಸಿಬೇಳೆಬಾತ್.

ಆದ್ದರಿಂದ ಇನ್ನು ಮುಂದೆ ಯಾರಾದರೂ ಅನೇಕ ದಿನಗಳಿಂದ ನಿಮ್ಮನ್ನು ಕಾಯುತ್ತಿದ್ದೇವೆ ಎಂದರೆ ಹುಷಾರಾಗಿರಬೇಕು.

ಅದೆಲ್ಲಾ ಸರಿ ಅಷ್ಟೊಂದು ಕೆಟ್ಟ ಬಿಸಿಬೇಳೇಬಾತನ್ನು ಅದು ಹೇಗೆ ಹೊಟ್ಟೆಗೆ ಇಳಿಸಿದಿರಿ? ಇಷ್ಟೊಂದು ದಾಕ್ಷಿಣ್ಯ ಇರಬಾರದು ನೋಡಿ!!

Mohan said...

ಹೆಗಡೇರೆ ಬಿಸಿಬೇಳೆ ಬಾತ್ ನಾನು ಬಿಜಿಂಗನಲ್ಲಿ ತಿನ್ದಿದಿನಿ , ನೆನುಸ್ಕುಂಡು ನಗ್ತಾ ಇದಿನಿ.ನರಸತ್ತೆ ಮನೆಗೆ ಇನ್ನು ಯಾರು ನೊಂದಾಯಿಸಿಲ್ಲಾ.

ಚಿತ್ರಾ ಸಂತೋಷ್ said...

ಸರ್..ನನ್ ಐಡಿಯಾ ನಿಮಗೆ ಗೊತ್ತೇ ಆಗ್ಲಿಲ್ಲ...!!!ಹಿಹಿಹಿ
-ಚಿತ್ರಾ

shivu.k said...

ಸಾರ್,
ಆಶೀಶ್ ನ ನೀವು ಹೋಗುವಾಗ ಬಿಟ್ಟು ಹೋದರೆ ಸಾಕು. ಇನ್ನು ನನ್ನ ಬಳಿ ಈ ಚಳಿಗಾಲದಲ್ಲಿ hillstation ಗಳಿಗೆ free 3 days acamadation gift voucher ಇದೆ ನೀವು ಹೂ ಅಂದರೆ ಈಗಲೇ online book ಮಾಡಿಸ್ತೀನಿ. ಬೇಗ ತೀರ್ಮಾನಿಸಿ ಚಳಿಗಾಲ ಮುಗಿದು ಹೋಗುತ್ತೆ.

Ittigecement said...

ಶಿವು..
ಹಹ್ಹಾ..ಹಾ..ಬೇಸಿಗೆಯಲ್ಲಿ ಹೋಗೋಣ ಸರ್...


ಚಿತ್ರಾರವರೆ...
ನಿಮ್ಮ ಪ್ಲಾನ್ ನನಗೆ ಅರ್ಥವಾಗಲಿಲ್ಲ.. ಸಾರಿ..

Ittigecement said...

ಚಂದ್ರಕಾಂತರವರೆ...
ಈ ಲೇಖನ ರೆಡಿ ಆದಾಗ ಇನ್ನೂ ದೊಡ್ಡದಿತ್ತು. ಅದನ್ನು ಬಹಳ ಟ್ರಿಮ್ ಮಾಡಿ ಈ ಸೈಜಿಗೆ ತರುವಾಗ ಬಹಳ ಕಷ್ಟವಾಯಿತು..
ಹಾಗೆ ಮಾಡುವಾಗ "ಮನೆಯ ಯಜಮಾನ ಆರಾಮಾಗಿ ತಿನ್ನುತ್ತಿದ್ದ" ಅನ್ನೋದು ಕಟ್ ಆಗಿಬಿಟ್ಟಿತ್ತು. ಈಗ ಸೇರ್ಸಿದ್ದಿನಿ.
ಮನೆಯ ಯಜಮಾನ ತಿನ್ನುವಾಗ ನಾವು ಬೇಡ ಅನ್ನಲಿಕ್ಕಾಗುತ್ತದೆಯೆ..? ಆಮೇಲೆ ಮನೆಗೆ ಬಂದಮೇಲೆ ನನ್ನಕ್ಕನಿಗೆ ಸಂಶಯ " ಮನೆಯವರಿಗೆ ಬೇರೆ ಕೊಟ್ಟಿರ ಬಹುದಾ" ಎಂದು.. ಇಲ್ಲವಂತೆ ನನ್ನಾಕೆ ಪ್ಲ್ಲೇಟ್ ಗೆ ಹಾಕುವಾಗ ಅಲ್ಲಿಯೇ ಇದ್ದರಂತೆ..
ಈಗಲೂ ನಾವು ಬಿಸಿಬೇಳೆ ಬಾತ್ ತಿನ್ನುವದಿಲ್ಲ
ತುಂಬಾ ಧನ್ಯವಾದಗಳು...

Ittigecement said...

ಮೋಹನ್...
ಬಿಸಿಬೇಳೆ ಬಾತ್ ಚೀನಾದಲ್ಲಾ?
ಅಲ್ಲಿ " ಹಾವು, ಜಿರಲೆ" ತಿಂತಾರೆ ಅಂತ ಕೇಳಿದ್ದೇನೆ....
ಆ ಜೀವಿಗಳನ್ನು ಬಿಸಿಬೇಳೆ ಬಾತ್ ಗೆ ಸೇರಿಸಿದ್ದರಿಂದ ನಿಮಗೆ ಆ ರುಚಿ ಬಂದಿರ ಬಹುದಾ?
ಈ ಸರಸತ್ತೆ ಚೀನಾದ ರುಚಿಯಲ್ಲಿ ಮಾಡಿದ್ದರಾ?
ಒಂದು ತನಿಖಾ ಆಯೋಗ ಮಾಡಲೇ ಬೇಕು..
ಮತ್ತೆ ನೀವೆ ಅಧ್ಯಕ್ಷರಾಗಬೇಕು ನೋಡಿ...!!!

ಚಿತ್ರಾ ಸಂತೋಷ್ said...

ಇರಲಿ ಬಿಡಿ..ನಿಮಗೆ ಅರ್ಥವಾಗಲ್ಲ. ನಾನು ಮದ್ವೆಯಾದ್ರೆ....ಮೊದಲು ಯಾರ ಮನೆಗೂ ಊಟಕ್ಕೆ ಹೋಗಲ್ಲ. ಮತ್ತೆ ನಿಮ್ ಥರ ಆಸ್ಪತ್ರೆ ಸೇರ್ಕೊಂಡ್ರೆ ಕಷ್ಟ..ಅದ್ಕೆ ಏನಿದ್ರೂ ಫಸ್ಟು....! ಹಿಹಿಹಿ..ಹೇಗಿದೆ ಐಡಿಯಾ ಸರ್?ಇನ್ನೂ ಅರ್ಥವಾಗಿಲ್ಲಾಂದ್ರೇಏಏಏಏಏಏಏಏಏಏ........
-ಚಿತ್ರಾ

Lakshmi Shashidhar Chaitanya said...

ಪ್ರಕಾಶ್ ಅಂಕಲ್.....ಪಾಪ ನಿಮ್ಮ ಸ್ಥಿತಿ !!!!!!!!! ನಿಮ್ಮ ಈ ಅತಿ comedy + ಕರುಣಾಜನಕವಾದ ಕಥೆಯನ್ನ ಓದಿದ ಮೇಲೆ ನಾನು ಚಿತ್ರಾರವರ ಪ್ಲಾನ್ ನನ್ನೇ ಹಾಕಿರುವೆ :)

Ittigecement said...

ಚಿತ್ರಾರವರೆ...

ಪ್ಲಾನ್ ಕಾರ್ಯಗತ ಮಾಡಿ...
ಜಲ್ದಿ ಸಿಹಿ ಊಟ ಹಾಕಿಸಿ..ತಡವೇಕೆ..?

Ittigecement said...

ಲಕ್ಶ್ಮೀಯವರೆ...
ನೀವು ಅಷ್ಟೆ ತಡ ಮಾಡ ಬೇಡಿ..ಸಿಹಿ ಊಟ ಹಾಕಿಸಿ..


ನೀವಿಬ್ಬರೂ ನಿಮ್ಮ ಜೋಡಿ ಸಂಗಡ "ನಮ್ಮನೆ"ಗೆ ಬರಬೇಕು..!
ವಿಶೇಷ ಆಕರ್ಷಣೆಯಾಗಿ ...
""ಸರಸತ್ತೆ ಕರೆಯುತ್ತೇನೆ...
ಬಿಸಿಬೇಳೆ ಬಾತ್ ಅವರಿಂದ ಮೊದಲೇ ಮಾಡಿಸಿಡುವೆ..""

ಹಹ್ಹಾ..ಹಹಾ..!!!
ಪ್ರತಿಕ್ರಿಯೆಗಳಿಗೆ, ಬಿಸಿಬೇಳೆ ಬಾತ್ ರುಚಿ ಮಾಡಿದ್ದಕ್ಕೆ

ಧನ್ಯವಾದಗಳು....

ಅನಿಲ್ ರಮೇಶ್ said...

ಪ್ರಕಾಶ್,

ನಿಮ್ಮ ಅನುಭವ ನನ್ನ ಶತ್ರುಗಳಿಗೂ ಬೇಡ...

ಆದರೂ ಚೆನ್ನಾಗಿದೆ...

Ittigecement said...

ಅನಿಲ್ ರಮೇಶ್...
ನಿಜ ಯಾರಿಗೂ ಬೇಡ ಅಂಥ ಅನುಭವ.
ಪ್ರತಿಕ್ರಿಯೆಗೆ ಧನ್ಯವಾದಗಳು...

Mohan said...

ಇಲ್ಲಾ ಪ್ರಕಾಶ್ , ಅಲ್ಲಿ ಯಾರು " ಹಾವು, ಜಿರಲೆ" ತಿನ್ನಲ್ಲ, ಮತ್ತು ನಾನು ಇರೊದೆ ಜಾಸ್ತಿ , ಹಾಂಕಾಂಗ್,ಮತ್ತು ಚಿನಾನಲ್ಲಿ,ಅಲ್ಲಿ ಸಿಗೊ ತರಕಾರಿಲಿ ನಾವು ಮಾಡಿ ರುಚಿ ನೊಡಿದಿವಿ,ನಿಜವಾಗಿ ಚಿನಾ ಆಹಾರ ಪದ್ದತಿ ಆರೊಗ್ಯಕ್ಕೆ ಒಳ್ಳೆದು, ನಾನು ಒಬ್ಬ ವ್ಯೆದ್ಯನಾಗಿ ಹೆಳತಾ ಇದಿನಿ, ಹಂಗೆನೆ ನಿಮ್ಮ ಅಧ್ಯಕ್ಷತೆಯಲ್ಲಿ "ಸರಸತ್ತೆ ಭಾತ ಪುರಾಣ" ಸಿನಿಮಾ ತೆಗಯಣ ನಾನಂತು ಪಾತ್ರ ಮಾಡಲ್ಲ ,ಆದರೆ ಪಾತ್ರೆ ಕಾಲಿಮಾಡ್ತಿನಿ.

Ittigecement said...

ಮೋಹನ್....
ನೋಡಿ ಏನೇನು ವಿಷಯ ಗೊತ್ತಾಗ್ತ ಇದೆ ಅಂತ. ದಯವಿಟ್ಟು ನಿಮ್ಮ ಬ್ಲೋಗನಲ್ಲಿ ನಿಮ್ಮ ಅನುಭವ, ಜ್ನಾನವನ್ನು ನಮ್ಮೊಂದಿಗೆ ಹಂಚಿಕೊಳ್ಳಿ..
ಆ ದೇಶದ ಬಗೆಗೆ ತಿಳಿಸಿ..ಅಲ್ಲಿಯ ಹೊಟೆಲ್ಲುಗಳಲ್ಲಿ ಕೆಟ್ಟ ವಾಸನೆ ಏಕೆ? ಬರೆಯಿರಿ ಮೋಹನ್..
ನಾವು ಅಗಶ್ಟ್ ತಿಂಗಳಲ್ಲಿ ಸಿಂಗಾಪುರ ಹೋಗಿದ್ದೆವು. ನನ್ನ ತಮ್ಮನ ಮನೆಗೆ..
ಹಾಗಾಗಿ ಗೊತ್ತಾಗಿದ್ದು..
ಬರೆಯಿರಿ..
ಓದಲು ನಾವಿದ್ದೇವೆ..

Geetha said...

ಹ.ಹ.ಹಾ..........ಸಾದ್ಯ ಆದ್ರೆ ಇನ್ನು ಸ್ವಲ್ಪ edit ಮಾಡಿ sir... ಬಿಸಿ ಬೆಳೇ ಬಾತ್ ನಾವು ಮತ್ತೆ ತಿನ್ಬೆಕೊ ಬೆಡ್ವೋ!!!

Ittigecement said...

ಗೀತಾರವರೆ...
ಈ ಘಟನೆಯನ್ನು ಹೇಳಲಿಕ್ಕೆ ಸಾಮಾನ್ಯವಾಗಿ ನನಗೆ ಕನಿಷ್ಟಒಂದುವರೆ ತಾಸು ಬೇಕು... ಇಷ್ಟು ಇಷ್ಟವಾಗುತ್ತದೆ ಅಂತ ಗೊತ್ತಿದ್ದರೆ ಟ್ರಿಮ್ ಮಾಡುತ್ತಲೆ ಇರಲಿಲ್ಲ. ಇದರ ಇನ್ನೊಂದು ಭಾಗ ಇದೆ. ಅದನ್ನು ಟ್ರಿಮ್ ಮಾಡದೆ ಹಾಗೆಯೆ ಇಡುತ್ತೇನೆ..

ನಿಮ್ಮ ಕವನ ಓದಿದೆ . ತುಂಬಾ ಚೆನ್ನಾಗಿದೆ..
ಅದನ್ನು ಕನ್ನಡ ಭಾವಾನುವಾದ ಮಾಡಿ ನೋಡಿ..ಇನ್ನೂ ಚಂದವಾಗಿರುತ್ತದೆ...

ಬಿಸಿಬೇಳೆ ಬಾತ್ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Prakash Payaniga said...

prakash,
ellaroo katheya bagge comment kottare chennaagiralla. adke naanu swalpa diferent. nimma katheya wasthu chennaagide. aadare, bhaashe innashtu prabuddhawaagabeku. kathe bareyuwa rabhasadalli bhaasheyannu jaari bidabedi. hiriya lekhakara kathegalannu odi. innondu marete... ade nimma haasya manobhaawa chennagide. prayatna munduwarisi.

Ittigecement said...

ಪ್ರಕಾಶ್ ನಿಡ್ಲೆಯವರೆ...
ನಿಜ ಕಥೆ ಬರೆಯುವ ಭರಾಟೆಯಲ್ಲಿ..ಭಾಷೆ ಮರೆಯಬಾರದು...!
ಮುಂದಿನ ದಿನಗಳಲ್ಲಿ ಅದನ್ನು ತಿದ್ದಿ ಕೊಳ್ಳಲು ಪ್ರಯತ್ನ ಮಾಡುವೆ...
ಈ ಸಿಮೆಂಟು ಮರಳಿನ ನಡುವೆ ಖ್ಯಾತ ಲೇಖಕರ ಕಾವ್ಯವನ್ನು ಓದಲು ಶುರು ಮಾಡಿದ್ದೇನೆ..

ನಿಮ್ಮ ಸಲಹೆಗೆ ತುಂಬು ಹ್ರದಯದ ಸ್ವಾಗತ...

ಧನ್ಯವಾದಗಳು..

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಶ್ರವಣಬೆಳಗೊಳಕ್ಕೆ ಹೋದಾಗ ತೆಗೆದ ಫೋಟೋ ವರ್ಣನೆಯೊಂದನ್ನ ನನ್ನ ಕಾಕನ್ನ ಬಾಯಲ್ಲಿ ಕೇಳಿದ ನೆನಪು, ೮-೧೦ ವರ್ಷದ ಹಿಂದೆಯೇ...
ಅದೇನಾದ್ರೂ ನೀವೇ ತೆಗೆದ ಫೋಟೋನ ಅಂತ ಯೋಚಿಸ್ತಾ ಇದ್ದಿ :-)

ಅಂತರ್ವಾಣಿ said...

ಪ್ರಕಾಶ ಅವರೆ,
ನನಗೆ ನಕ್ಕು ನಕ್ಕು ಸಾಕಾಯ್ತು. ನೀವು ತಟ್ಟೆ ಬೀಳಿಸಿ ಒಳ್ಳೆ ಕೆಲಸ ಮಾಡಿದ್ದೀರಿ.

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಅಂದಹಾಗೆ ಹೇಳಲೆ ಮರ್ತಿ. ನಿನ್ನೆ ಅಡುಗೆ ಮಾಡ್ತಾ ಇದ್ದಿ. ಫ್ರೆಂಡ್ ಒಬ್ಬರ ಕಾಲ್ ಬಂತು. ಹೀಗೆ ಮಾತಾಡ್ತಾ ಮಾತು ಬ್ಲಾಗ್’ಗಳ ಬಗ್ಗೆ ಶುರುವಾಗಿ ನಿಮ್ಮ ಸರಸತ್ತೆ ಬಿಸಿಬೇಳೆಬಾತಿನ ಲೇಖನ ನೆನಪಾಗಿ ಅದರ ಬಗ್ಗೆ ಹೇಳ್ತಿದ್ದಾಗ ನೆನಪಾಗಿದ್ದು, ಯಾವತ್ತೂ ಇಲ್ದೇ ನಾನು ನಿನ್ನೆ ಬಿಸಿಬೇಳೆಬಾತ್ ಮಾಡ್ತಾ ಇದ್ದಿದ್ದಿ. ಸರಸತ್ತೆ ಮನೆಯ ಬಿಸಿಬೇಳೆಬಾತ್ ವರ್ಣನೆ ಓದಿದ್ದು ನೆನಪಾಗಿ ಊಟನೇ ಬೇಡ ಅನಿಸ್ತಾ ಇತ್ತು.
ಇಡೀ ಲೇಖನ ನಗು ತರಿಸ್ತು :-)

Ittigecement said...

ಶಾಂತಲಾ....
ಛೆ..ಛೇ...ಅದಲ್ಲಾ... ಇನ್ನೂ ಯಾಕೆ "ಶ್ರವಣ ಬೆಳಗೊಳ ಮಾತ್ರ ಯಾಕೆ ನೆನಪಿದೆ??"ಎಂದು ಯಾರೂ ಕೇಳಿಲ್ಲ ಅಂದು ಕೊಳ್ಳುತ್ತಿದ್ದೆ...
ಅಲ್ಲಿ ಕೂಡ ಒಂದು ಕಥೆ ನಡೆದಿತ್ತು ಮುಂದಿನ ವಾರ ಹಾಕ್ತಿ... ನೀ ಹೇಳಿದ ಫೋಟೋ ತೆಗೆದದ್ದು ನಾನಲ್ಲ..!!"

ಧನ್ಯವಾದಗಳು...

Ittigecement said...

ಅಂತರ್ವಾಣಿಯವರೆ...
ನಾವು ಒಟ್ಟು ಎಂಟುಜನ ಅಲ್ಲಿಗೆ ಹೋಗಿದ್ದೇವು,,ನನ್ನ ಬಾವನ ಮನೆಯಲ್ಲಿ ಜನಸಂಖ್ಯೆ ಸ್ವಲ್ಪ ಜಾಸ್ತಿ... (ನೆಂಟರು). ಅವರೂ ಬಂದಿದ್ದರೂ. ಏನೂ ಪಾಪ ಮಾಡದ ಅಮಾಯಕ "ವಿನಾಯಕ"ನ ಅವಸ್ಥೆ ಹೇಳತೀರದು...
ನಿನ್ನೆ ಅಕ್ಕನ ಮಗಳ ಫೋನ್ ಅಮೇರಿಕಾದಿಂದ ಬಂದಿತ್ತು
(ಬ್ಲೋಗ್ ಓದಿದ್ದಳಂತೆ) ಫೋನ್ ನಲ್ಲಿ ಮಾತೇ ಆಡಲಾಗಲಿಲ್ಲ ,,, ನಕ್ಕಿದ್ದೇ.. ನಕ್ಕಿದ್ದು!

ಧನ್ಯವಾದಗಳು...

Ittigecement said...

ಶಾಂತಲಾ...
ಒಬ್ಬ ಬ್ಲೋಗ್ ಓದುಗರು (ಗೋವಿಂದ ಅಂತ ಅವರ ಹೆಸರು) ಫೋನ್ ಮಾಡಿದರು..
ಪ್ರೀತಿಯಿಂದ ಆಕ್ಷೇಪಣೆ ಮಾಡಿದರು..
ಅವರಿಗೆ ಬಿಸಿಬೇಳೆ ಬಾತ್ ಅಂದರೆ ಪಂಚ ಪ್ರಾಣವಂತೆ..
"ಏನೇ ಆದರೂ ನೀವು ಬಿಸಿಬೇಳೆ ಬಾತ್ ಹೆಸರು ತೆಗೆದು ಕೊಳ್ಳಬಾರದಿತ್ತು.. ಚಿತ್ರಾನ್ನ ಅನ್ನಬಹುದಿತ್ತು...ನನಗೆ ತಿನ್ನಲಿಕ್ಕೇ ಆಗ್ತಾಇಲ್ಲ ಮಾರಯರೆ.." ಅನ್ನುತಿದ್ದರು..!!
(ಬಿಸಿಬೇಳೆ ಬಾತಿನ ವರ್ಣನೆ ಇನ್ನೂ ಇತ್ತು.. ಲೇಖನ ತುಂಬಾ ಉದ್ದಾವಾಗುತ್ತಾದೆ ಎಂದು ಕಟ್ ಮಾಡಿದ್ದೇನೆ)
ಅದರೂ ಸಾರಿ ಗೊವಿಂದರೆ...

ಇದನ್ನು ಓದಿಯೂ ಬಿಸಿಬೇಳೆ ಬಾತ್ ENJOY ಮಾಡಿದ ನಿಮಗೆ ಅಭಿನಂದನೆಗಳು...!!
ಹಹ್ಹಾ..ಹಾ..ಹಾ...

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಇಲ್ಲೆ...ನಾ ಬಿಸಿಬೇಳೆಬಾತ್ ತಿಂಜ್ನಿಲ್ಲೆ. ಚಪಾತಿ ತಿಂದಿ. ಊಟ ಮುಗ್ಯದೇ ಕಾಯ್ತಾ ಇದ್ದಿದ್ದಿ. ಯಜಮಾನ್ರಿಗೆ ಈ ಲೇಖನ ಓದಲೆ ಕೊಟ್ಟಿ. ‘ಇನ್ಯಾವತ್ತರೂ ಈ ಲೇಖನ ತೋರ್ಸಿದ್ರಾಗ್ತಿತ್ತು, ಅಥ್ವಾ ಊಟಕ್ಕಿಂತ ಮೊದಲೇ ತೋರ್ಸಿದ್ರೂ ಆಗ್ತಿತ್ತು’ ಅಂದ್ರು :-)

ಹಾಂಗಿದ್ರೆ ಅದು ದೇವಿಸರದ್ ಚಿಕ್ಕಪ್ಪ(ನಾಗೇಶ) ತೆಗೆದ ಫೋಟೋ ಆಗಿಕ್ಕು. ವನಿತಕ್ಕನ ಫೋಟೋ ಇರವ್ವು. ಸರಿಯಾಗಿ ನೆನಪಿಲ್ಲೆ.

ಚಿತ್ರಾ said...

ಪ್ರಕಾಶ ಹೆಗಡೆಯವರೇ,

ನೆಗ್ಯಾಡಿ ಸುಸ್ತಾತು. ಏನೇ ಅಂದ್ರೂ ನಿಮ್ಮ ಹನೀಮೂನು ಹೀಂಗಾಗಕಾಗಿತ್ತಿಲ್ಲೆ! ಆ ಸರಸತ್ತೆ ಕಿವಿಗೆ ಈ ನಿಮ್ಮ ಬ್ಲಾಗಿನ ವಿಷಯ ಬೀಳದ ಹಾಗೆ ನೋಡ್ಕ್ಯಳಿ. ಇಲ್ದೇ ಹೋದ್ರೆ, ಮತ್ತೊಂದು ಸಲ ಬಿಸಿಬೇಳೆ ಭಾತ್ ಮಾಡಿ ನಿಮ್ಮ ಮನೆಗೇ ತಂದುಕೊಟ್ಟರೆ ಕಷ್ಟ !

ಅಂದಹಾಗೇ , ಶ್ರವಣ ಬೆಳಗೊಳ ಆದ್ರೂ ನೆನಪಿದ್ದು ಹೇಳಾತು!!

Ittigecement said...

ಶಾಂತಲಾ...
ಈ ಜಗತ್ತು ಬಹಳ ಸಣ್ಣದಾಜು ನೋಡು...
ದೇವಿಸರದ ನಾಗೇಶನ ತಮ್ಮ ನಾನು...
ನನಗೆ ಈಮೇಲ್ ಮಾಡು....(ನನ್ನ ಈ ಮೇಲ್ ನಿನ್ನ್ ಬ್ಲೊಗ್ ಪ್ರತಿಕ್ರಿಯೆಯಲ್ಲಿದ್ದು)

ಹಾಗಾದರೆ..ಶ್ರವಣಬೆಳಗೊಳದ ಫೋಟೊ ತೆಗೆದದ್ದು ನಾನೇ...!!!

ಎಲ್ಲೇ ಸುತ್ತಿದರೂ ಕಾಲು ಬುಡಕ್ಕೆ ಬರ್ತಾ ಇದೆ....!!

ನಿನ್ನ ಯಜಮಾನ ನನ್ನ ಅಳಿಯ ಅಲ್ದಾ?
ಬಿಸಿಬೇಳೆ ಬಾತ್ ಬಗ್ಗೆ ಸಿಕ್ಕಾಪಟ್ಟೆ ಸಾರಿ ಕೇಳಿದ್ದಿ ಹೇಳು...

Harisha - ಹರೀಶ said...

ಚಿಕ್ಕಪ್ಪ-ಮಗಳು ಬರೀ ಕಷ್ಟ ಸುಖ ಮಾತಾಡ್ತ್ರೋ ಅಥವಾ ಯಾವ ಫೋಟೋ ಅಂತಲೂ ಹೇಳ್ತ್ರೋ?

Ittigecement said...

ಚಿತ್ರಾ...

ಆ ಶ್ರವಣಬೆಳಗೊಳ "ಪುಣ್ಯಾತ್ಗಿತ್ತಿ ಸರಸತ್ತೆ" ಹಾಗೆನೆ..
ಮರೆಯಲು ಸಾಧ್ಯವೇ ಇಲ್ಲ...
ಪ್ರತಿಕ್ರಿಯೆಗೆ...ಧನ್ಯವಾದಗಳು...

Ittigecement said...

ಹರೀಶ್....
ಆ ಫೋಟೊ...ನೋಡಲೆ ದೇವಿಸರಕ್ಕೆ ಹೋಗಬೇಕು....
ನನ್ನ ಅಣ್ಣನ ಬಳಿ ಇದ್ದಿರಬಹುದು...!!

Kishan said...

ಚೆನ್ನಾಗಿದೆರೀ ವರ್ಣನೆ!ನನಗೂ ಅವರ(ಸರಸತ್ತೆ) ನೆನಪಿದೆ.
ನನಗೂ ಬಿಸಿ ಬೇಳೆ ಬಾತಿಗೂ ಅಷ್ಟಕ್ಕಷ್ಟೇ. ನನ್ನ ಶ್ರೀಮತಿಗೆ ನಾನೂ ಕೂಡ ನಿಮ್ಜೊತೆ ಹೋಗಿದ್ನೇನೋ ಮತ್ತು ಅದಕ್ಕೇ ಹೀಗೋ ಅಂತ ಗುಮಾನಿ ಶುರುವಾಗಿದೆ ಈಗ !

Kishan said...

thank you very many plenty!

Ittigecement said...

ಆತ್ಮೀಯ ಕಿಶನ್...
ಇದೆ ರೀತಿ ತುಂಬಾ ಜನರಿಗೆ ಗುಮಾನಿ ಬಂದಿದೆ...
"ಸರಸತ್ತೆ ಮನೆ ಬಿಸಿಬೇಳೆ ಬಾತ್ ತಾವು ತಿನ್ನಲು ಬಂದಿಲ್ಲವೆಂದು ಈ ಮೂಲಕ ಪ್ರಮಾಣಿಕರಿಸಲಾಗಿದೆ.."
ಹಾ..ಹ್ಹಾ...
ಧನ್ಯವಾದಗಳು...

Ittigecement said...

ಕಿಶನ್....
ಧನ್ಯವಾದಗಳು.....!!

ಮನಸ್ವಿ said...

ಹಹ್ಹಹ್ಹ.. ಬಿಸಿ ಬೇಳೆ ಸಿಮ್-ಬ್ಳಬಾತ್...... ಚನಾಗಿ ಬರದ್ದೆ.. ಹಂಗೆ ಪ್ಲೇಟ್ ಕೆಡಗಿದ ತಕ್ಷಣ ಇನ್ನು ದೊಡ್ಡ ಪ್ಲೇಟ್ ತುಂಬಾ ಅದೇ ಲೋಳೆ ಬಾತ್ ತಂದು ಕೈಗೆ ಕೊಟ್ಟಿದ್ರೆ ಎಂತ ಮಾಡ್ತಿದ್ದೆ? ಅಂದಂಗೆ ಯಾವ ಫೋಟೋ ಬಗ್ಗೆ ಇಷ್ಟೆಲ್ಲ ಚರ್ಚೆ ಗೊತಾಗ್ಲೆ,ಬೇಲೂರು ಹಳೆ ಬೀಡು ನೆನ್ಪಿಟ್ಗಳಕ್ಕೆ ಆಗಲ್ಯ ಛೇ!

ಸೂಚನೆ: ಉದ್ದಿನ ವಡೆ ಮತ್ತೆ ಮಸಾಲೆ ದೋಸೆ ಪ್ರಿಯರು ಇದನ್ನ ಓದ್ಕ್ಯಂಡು ನಂಗೆ ಬೈಯ್ಯಡಿ,
ನನ್ನ ಅತ್ತೆ ಮಗಳು ಮಸಾಲೆ ದೋಸೆ ಮಾತ್ರ ತಿನ್ನದಿಲ್ಲೆ ಹೇಳ್ತ ಯಾವಗಲೂ.. ಎಂತಕ್ಕೆ ಅಂತ ವಿಚಾರ್ಸಿರೆ, ಅವಳ ಪ್ರೆಂಡ್ ಅಪ್ಪಂದು ಒಂದು ಹೋಟಲ್ ಇದ್ದಡ, ಅವಳ ಮನೆಗೆ ಇವಳು ಒಂದಿನ ಹೋಗಿದ್ಲಡ ಅವ್ರ ಮನೇಲಿ ಆಲೂಗಡ್ಡೆನ ಪಲ್ಯಕ್ಕಾಗಿ ನುರಿತಾ ಇದಿದ್ವಡ ಅದನ್ನ ನೋಡ್ಕ್ಯಂಡು ಬಂದ ಮೇಲಿಂದ ಇವಳು ಮಸಾಲೆ ದೋಸೆ ಅಂದ್ರೆ ದೂರ ಓಡಿ ಹೋಗ್ತ.. ಎಂತಕ್ಕೆ ಅಂತ ಅರ್ಥ ಆಗಲ್ಲೆ ಅಲ್ದ... ಅವರ ಮನೇಲಿ ಪಲ್ಯಕ್ಕಾಗಿ ಆಲೂ ಗಡ್ಡೆನ ನೆಲದಮೇಲೆ ರಾಶಿ ಹಾಕ್ಯಂಡು ತುಳಿತಾ ಇದಿದ್ವಡ ಮೂರು ನಾಲ್ಕು ಜನ ಬರಿಗಾಲಲ್ಲಿ... !
ಇನ್ನು ಕೆಲವು ಕಡೆ ರಾಗಿ ಮುದ್ದೆ ರಾಶಿ ರಾಶಿ ಮಾಡಿ ಇಡ್ತ್ವಡ ಅದನ್ನ ನೋಡಿರೂ ಯಾರು ರಾಗಿ ಮುದ್ದೆ ತಿಂತ್ವಲ್ಲೆ..

ಹಂಗೆ ನನ್ನ ಸೋದರಮಾವ ಯಾವಾಗಲು ಹೇಳ ಹೋಟೆಲ್ ಜೋಕ್ ಬರ್ತಿ ಇಷ್ಟ.. ಅದನ್ನ ಸ್ಪಲ್ಪ ಬಿಡಿಸಿ ದೊಡ್ಡಕ್ಕೆ ಮಾಡಿ ನಿಂಗೂ ಹೇಳವು ಅನುಸ್ತಾ ಇದ್ದು..
ಒಂದು ಹೋಟೆಲ್ ಇತ್ತಡ ಅಲ್ಲಿ ವಡೆ ತುಂಬಾ ರುಚಿ ಇರ್ತಿತ್ತಡ, ಅದೂ ಅಲ್ದೆ ವಡೆ ಮಾಡ ಭಟ್ಟಂಗೆ ಎಡಗೈ ಇರ್ಲ್ಯಡ ಆದ್ರೂ ವಡೆನ ರುಚಿ ರುಚಿಯಾಗಿ ಮಾಡ್ತಿದ್ನಡ..ಅಡುಗೆ ಮನೆಗೆ ಯಾರನ್ನು ಬಿಡ್ದೆ ಬಾರಿ ಸೀಕ್ರೇಟ್ ಆಗಿ ಇಟ್ಟಿದ್ವಡ ವಡೆ ಮಾಡ ವಿಧಾನನ, ಒಂದಿನ ಎರಡು ಜನ ಪ್ರೆಂಡ್ಸ್ ಮಾತಡ್ಕ್ಯಂಡ್ವಡ ಹೆಂಗಾರು ಮಾಡಿ ಅಡುಗೆ ಮನೆಗೆ ಹೋಗಿ ನೋಡಕ್ಕು ಅಂತ ಹೋಟೆಲ್ ಹಿಂಬಾಗಕ್ಕೆ ಹೋಗಿ ನೋಡಿದ್ವಡ ಇವರ ಅದೃಷ್ಟಕ್ಕೆ ಒಂದು ಕಿಟಕಿ ಓಪನ್ ಆಗಿತ್ತಡ ಹಣಕಿ ನೋಡಿರೆ ಅಲ್ಲಿ ಮೂರು ಜನ ಅಡುಗೆ ಬಟ್ಟರು ಇದಿದ್ವಡ ಒಬ್ಬವ ಹಿಟ್ಟು ಬೀಸ್ತಾ ಇದಿದ್ನಡ ಬೀಸಿ ಬೀಸಿ ಸುಸ್ತಾಗಿ ಅವನ ಮೈ ಪೂರ್ತಿ ಬೆವರಿ ಹೋಗಿತ್ತಡ ಹಣೆ ಮೇಲೆ ಬೆವರು ನೀರು ಸಾಲು ಗಟ್ಟಿತ್ತಡ. ತಕ್ಷಣ ಉಸ್ ಅಂತ ಆ ಹಣೆ ಮೇಲಿನ ನೀರನ್ನ ಕೈಯಾಗೆ ವರಸ್ಕ್ಯಂಡು ಕೈಲಿದ್ದ ನೀರನ್ನ ಒರಳಿಗೆ ಪ್ರೋಕ್ಷಣ್ಯ ಮಾಡಿಕ್ಯಂಡು ಹಿಟ್ಟು ಬೀಸದರಲ್ಲಿ ಬಿಜಿ ಆಗಿದ್ನಡ.. ಅದನ್ನ ನೋಡಿದವ್ರು ಇಬ್ಬರೂ ಓಡಿ ಹೋಗಿಬಿಟ್ವಡ, ಅವ್ವು ಎಲ್ಲರ ಹತ್ರನೂ ನಾವು ವಡೆ ತಿನ್ನದಾರೆ ಇದೆ ಹೋಟಲ್ಲೆ ಸೈ ಅಂತ ಹೇಳ್ಕ್ಯಂಡ್ ಬಿಟಿದ್ವಡ ಅದಕ್ಕಾಗಿ ಯಾರತ್ರನೂ ವಡೆ ಮಾಡವ ಹಂಗೆ ಮಾಡ್ತ ಅಂತ ಹೇಳಕ್ಕೆ ಸುಮಾರಾತು ಅಷ್ಟರ ಮೇಲೆ ಆ ಹೋಟ್ಲಿಗೆ ಹೋದ್ರು ವಡೆ ಮಾತ್ರ ತಿಂತಿರ್ಲ್ಯಡ,
ಸ್ಪಲ್ಪ ದಿನ ಆತಡ ದಿನದಿಂದ ದಿನಕ್ಕೆ ವಡೆ ರುಚಿ ಹೆಚ್ತಾನೆ ಹೋತಡ.. ಅಡುಗೆ ಮನೆ ಬಾಗಿಲಿಗೆ ಮುಂಚೆ ಇದಿದ್ದಕ್ಕಿಂತ ದೊಡ್ಡ ಬೋರ್ಡ್ ಹಾಕಿದ್ವಡ ಅದೂ ಕೆಂಪಿ ಅಕ್ಷರದಲ್ಲಿ.. ಕಡ್ಡಾಯವಾಗಿ ಅಡುಗೆ ಬಟ್ಟರನ್ನು ಬಿಟ್ಟು ಮತ್ಯಾರಿಗು ಪ್ರವೇಶವಿಲ್ಲ ಅಂತ, ಮೇಲೆ ಹೇಳಿದಂಗೆ ಮತೊಬ್ಬವಂಗೂ ಏನಪಾ ಇಷ್ಟು ಗುಟ್ಟು ಮಾಡ್ತ್ವಲಾ ಅಂತ ಹಿಂದಿನ ಕಿಟಕಿಲಿ ಹಣಕಿ ನೋಡಿದ್ನಡ
ಒಬ್ಬವ ಅಲ್ಲಿ ಹಿಂದಿನ ದಿನ ರಾತ್ರಿ ಬೀಸಿಟ್ಟ ಹಿಟ್ಟನ್ನ ಕೈಯಾಗೆ ಒಂದ್ಸರಿ ತೊಳಸ್ತಾ ಇದಿದ್ನಡ, ಅವ ತುಂಬಾ ಹುಷಾರಿದಿದ್ನಡ.. ಹಿಟ್ಟಲ್ಲಿ ಎನಾರು ಬಿದಿದ ಪರಿಶೀಲನೆ ಮಾಡಕ್ಕಾಗಿ ಕೈಹಾಕಿ ತೊಳಸ್ತಿದ್ನಡ, ಹಾ ಸಿಕ್ಕೇ ಬಿಡ್ತು ಅಂತ ಮತೋಬ್ಬವ ಅಡುಗೆ ಭಟ್ಟಂಗೆ ತೋರ್ಸಿದ್ನಡ ಇಲಿ ಬಾಲ ಹಿಡಿದು.. ಅದ್ರ ಮೈಗೆ ಬಡ್ಕಂಡಿರ ಹಿಟ್ಟನ್ನ ಪಾತ್ರಿಗೆ ಸವರಿ ಹಾಕ್ಯಂಡು ಇಲಿ ತಗಂಡು ಹೋಗಿ ಹೊರಗೆ ವಗದಿಕ್ಕಿ ಬಂದ್ನಡ, ಅಲ್ಲೆ ಪಕ್ಕದಲ್ಲಿ ವಡೆನ ಕೈ ಇಲ್ದೇ ಹೋದ ಭಟ್ಟ ಕಟ್ತಾ ಇದಿದ್ನಡ ಅವ ಬಲಗೈಲಿ ಹಿಟ್ಟಿನ ಉಂಡೆ ಕಟ್ಗ್ಯಳದು ಎಡಗಡೆ ಕಂಕಳಲ್ಲಿ ಇಟ್ಗಂಡು ಅದಕ್ಕೆ ವಡೆ ಆಕಾರ ಕೊಡ್ತಿದ್ನಡ ಅದ್ಕೆ ವಡೆ ಅಷ್ಟು ರುಚಿ!
ಮತ್ತೆ ಹೇಳ್ತಿ ಈಗ ಈ ಕಮೆಂಟ್ ಓದಿದವ್ರು ಯಾರು ನಂಗೆ ಬೈಯಲೆ ಇಲ್ಲೆ... ಆನಂತು ಮುಂಚೇನೆ ಹೇಳಿಗಿದಿ, ಎನಗೆ ಬೈಯ್ಯಲಿಲ್ಲೆ ಅಂತ..

Ittigecement said...

ಮನಸ್ವಿ.....
ನನಗೆ ಉದ್ದಿನ ವಡೆ ಅಂದ್ರೆ ಪ್ರೀತಿ ಮಾರಯಾ....!! ರುಚಿ ಕೆಡಿಸಿ ಬಿಟ್ಯಲೊ ....!!
ಮಸಲೆ ದೋಸೆ..ಅಷ್ಟೆಲ್ಲ ಇಷ್ಟ ಇಲ್ಲೆ...
ಚೊಲೊ ಬರದ್ದೆ..ನಿನ್ನ ಬ್ಲೊಗಿನಲ್ಲೇ ಹಕಬಹುದಿತ್ತು...
ಚಂದದ ಪ್ರತಿಕ್ರಿಯೆಗೆ... ವಂದನೆಗಳು...

ಮನಸ್ವಿ said...

ಇದನ್ನ ಎನ್ನ ಬ್ಲಾಗಲ್ಲಿ ಹಾಕಿದ್ರೆ ಎನಗೆ ಮಸಾಲೆ ದೋಸೆ ಪ್ರಿಯರು, ಮತ್ತೆ ನಿನ್ನಂಗೆ ಉದ್ದಿನ ವಡೆ ಪ್ರಿಯರು ಶಾಪ ಹಾಕ್ತ ಅಂತನೆ ಇಲ್ಲಿ ಬರ್ದಿದ್ದು!

Ittigecement said...

ಮನಸ್ವಿ...

ಈಗ ನಾನು ಬಿಸಿಬೇಳೆ ಬಾತ್ ಸಂಗಡ..ಇದರ ಬೈಗಳನೂ ತಗೊಬೇಕು......
ಹಹ್ಹಾ...ಹಹ...

ಹಿತ್ತಲಮನೆ said...

ವ್ಯಾಕ್ ....ಹಾಳಾಗಿ ಹೋಗ್ಲಿ ಬಿಡು ಮಾರಾಯಾ...ನೀನು ಶ್ರವಣಬೆಳಗೊಳದ ಕಥೆ ಯಾವಾಗ ಬರಿಯದು ? ಅಂದ ಹಾಗೆ ಹಳೆ ಹೆಂಡತಿ ಯಾರು ? ಆಶತ್ಗೆ ಹತ್ರ ಕೇಳ್ತಿ ಬಿಡು...

Ittigecement said...

ಹಿತ್ತಲಮನೆಯವರೆ...

ಅಪರೂಪಕ್ಕೆ ಬಂದು ಕೇವಲ "ನಾಯಿಮರಿ" ನೋಡಿ ಹೋದರೇನೋ ಅಂದು ಕೊಂಡೆ...

ಬಿಸಿಬೇಳೆ ಬಾತ್ ರುಚಿ ನೋಡಿ "ಪ್ರತಿಕ್ರಿಯೆ" ಕೊಟ್ಟಿದ್ದಕ್ಕೆ ವಂದನೆಗಳು...

"ಹಳೆ ಹೆಂಡತಿ" ಎಲ್ಲಿಂದ ಬಂತು ಮಾರಾಯಾ...?

ಹಿತ್ತಲಮನೆ said...

ಹೊಸ ಹೆಂಡತಿ ಹೇಳಿ ಬರ್ದಿದ್ಯಲ.. ಅದ್ಕೆ ಕೇಳ್ದಿ ;-)

Ittigecement said...

ಹಿತ್ತಲ ಮನೆಯವರೆ...

ಮದುವೆಯಾದ ಹೊಸತರಲ್ಲಿ "ಹೊಸ ಹೆಂಡತಿ"

ಆದರೆ...
ದಿನ ಕಳೆದಂತೆ.."ಹಳತಾಗ ಬಾರದು.." !!

ಹಹ್ಹಾ..ಹಾ..

ಭಾರ್ಗವಿ said...

ಪ್ರಕಾಶ್ ಅವರೇ ,
ಕಾಮೆಂಟ್ ಗಳನ್ನು ಓದಿ ನನ್ನ ಅನಿಸಿಕೆ ಬದಲಾಯಿಸುತ್ತಿದ್ದೇನೆ. ನೀವು ಒಂದು ಕಡೆ ನಿಜ,ಯಾರಿಗೂಬೇಡ ಅಂಥ ಅನುಭವ ಅಂತಹೇಳಿ, ಎಷ್ಟು ಚಂದದ ಪ್ಲಾನ್ ಮಾಡಿರೋ ಚಿತ್ರ& ಲಕ್ಷ್ಮಿಯವರಿಗೆ ,,,,ನೀವಿಬ್ಬರು ನಿಮ್ಮಜೋಡಿಸಂಗಡ "ನಮ್ಮನೆ"ಗೆ ಬರಬೇಕು ,,ವಿಶೇಷ ಆಕರ್ಷಣೆ ಸರಸತ್ತೆಯಿಂದಲೇ ಬಿಸಿಬೇಳೆ ಮಾಡಿಸಿಟ್ಟಿರುತ್ತೇನೆ ಹಹ್ಹ ಹಹಾ,,,!!!!! ಅನ್ತಿದೀರಲ್ಲ ಇದು ನ್ಯಾಯವಾ?(ಹ್ಹ ಹ್ಹ ಹ್ಹ)

Ittigecement said...

ಭಾರ್ಗವಿಯವರೆ...

ನಿಮಗೆ ಸ್ವಾಗತ...
ಆ ತುಂಟ ಹೆಣ್ಣುಮಕ್ಕಳಿಬ್ಬರೂ ನನ್ನ ಕಾಲೆಳೆಯುತ್ತಿದ್ದಾರೆಂದು ಹಾಗೆ ಹೇಳಿದೆ..!
ಸರಸತ್ತೆಯ ಆತಿಥ್ಯ ಸತ್ಕಾರ ಯಾರಿಗೂ ಬೇಡ..!!

ಅವರು ಜೋಡಿಯಲ್ಲಿ ಬಂದರೆ ನನ್ನ ಮಡದಿ ಬಿಡುವಳೆ?
ಅವರು ಒಳ್ಳೆಯ ಅಡುಗೆ ಮಾಡುತ್ತಾರೆ..!
ಅವರಿಂದಲೇ ಬಡಿಸೋಣ...
ನೀವು ಬನ್ನಿ
ಬರುತ್ತಾ ಇರಿ...
ಧನ್ಯವಾದಗಳು...

ಭಾರ್ಗವಿ said...

ಪ್ರಕಾಶ್ ರವರೆ,
ನೀವು ಸುಮ್ಮನೆ ಕರೆದಿದ್ದರೆ ಅವರಿಬ್ಬರೂ ಖಂಡಿತ ನಿಮ್ಮನೆಗೆ ಮಾತ್ರ ಧೈರ್ಯವಾಗಿ ಬರ್ತಿದ್ರೇನೋ (ಕಷ್ಟ ಅರಿತವರಾದ್ದರಿಂದ) ಅಂತ ಹಾಗೆ ಕೇಳಿದೆ. ನೀವು ನನ್ನನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು.ಆ ದಿನ ತಿಳಿಸಿದರೆ ಇಟ್ಟಿಗೆ ಸಿಮೆಂಟ್ನಿಂದಲಾದ್ರು ಖಂಡಿತ ಬರ್ತೇನೆ ನಿಮ್ಮಾಕೆಯ ಅಡುಗೆ ರುಚಿ ನೋಡಲು. ಈಗಲೇ ನಿಮಗೂ ನಿಮ್ಮಾಕೆಗು ಥ್ಯಾಂಕ್ಸ್:).

Ittigecement said...

ಭಾರ್ಗವಿಯವರೆ...
ನಾನು ಕರೆಯೋದು ಹೆಚ್ಚೊ..ನೀವು ಬರೋದು ಹೆಚ್ಚೋ..?
ಹಹ್ಹಾ..ಹ್ಹಾ..!!(ಇದು ಸರಸತ್ತೆಯ ಬಹಳ ಜನಪ್ರಿಯ ಮಾತು)
ತಮಾಷೆಗೆ ಹೇಳಿದೆ...
ದಯವಿಟ್ಟು ಬನ್ನಿ "ನಮ್ಮನೆ"ಗೆ
ಧನ್ಯವಾದಗಳು...