ನನಗೆ ಬಹುದಿನಗಳಿಂದ ಮನದಲ್ಲೇ ಉಳಿದ...
ಮಹದಾಸೆ ಒಂದಿದೆ...
ಅವಳು...ವಿಜಯಾ....
ನಾನು ಹೈಸ್ಕೂಲಲ್ಲಿ ಓದುತ್ತಿರುವಾಗ ಉದ್ದ ಲಂಗದ ಹುಡುಗಿ ಬಹಳವಾಗಿ ಕಾಡಿದ್ದಳು.
ಅದು ಪ್ರೇಮವಾ..?
ಹದಿಹರೆಯದ ಬಣ್ಣದ ಕನಸಾ..?
ಗೊತ್ತಿಲ್ಲ. ಅವಳೂ ನನ್ನ ಕಡೆಗೆ ನೋಡುತ್ತಿದ್ದಳು. ನಾನೂ ಕೂಡ.
ಮಲೆನಾಡಿನ ಹಳ್ಳಿ ಶಾಲೆಯಲ್ಲಿ ಇದಕ್ಕಿಂತ ಹೆಚ್ಚಿಗೆ ಆಗ ನಡೆಯುತ್ತಿರಲಿಲ್ಲ.
ಎಲ್ಲೊ ಅಪರೂಪಕ್ಕೆ ಒಂದು ಮಾತನಾಡಿದರೆ ಸ್ವರ್ಗದಷ್ಟು ಸಂತೋಷ.. ...
ಅವಳು ಹೈಸ್ಕೂಲ್ ನಂತರ ನನಗೆ ಸಿಕ್ಕೇ ಇಲ್ಲ. ಈಗ ಎಲ್ಲಿದ್ದಾಳೊ.. ಏನೊ..
ಆದರೆ ಅವಳು ನನ್ನ ಹೃದಯದಲ್ಲಿ... ಮನಸ್ಸಲ್ಲಿ ಯಾವಾಗಲೂ ಉಳಿದು ಬಿಟ್ಟಿದ್ದಳು....
ನನಗೂ ಮದುವೆಯಾಗಿ ಸಂಸಾರದ ಸಂತೋಷ ದಲ್ಲಿರುವಾಗಲೂ...........
ಕಾಡುತ್ತಾಳೆ... ನೆನಪಾಗಿ....
ನನ್ನ ಈ ಪರಿತಾಪ ನನ್ನ ಗೆಳೆಯ "ನಾಗು"ಗೆ ಗೊತ್ತು.
ಅವನು ಬೆಂಗಳೂರಲ್ಲೆ ಇದ್ದಾನೆ. ಸಿರ್ಸಿ ಬಿಟ್ಟು ಬೆಂಗಳೂರಿಗೆಬಂದು..
ಕೆಲಸ ಹುಡುಕಿ.. ಬಾಡಿಗೆ ಮನೆ ಮಾಡಿದಾಗ ಮತ್ತೆ ಕಾಡಿದ್ದಳು..ಆ ..ಹುಡುಗಿ..
ದೇಶವೆಲ್ಲ ಸುತ್ತಿ.. ನೌಕರಿ ಮಾಡಿ..
ಬಳಲಿದಲಾಗಲೆಲ್ಲ ಅವಳ ನೆನಪಾಗುತ್ತಿತ್ತು..
ನಾನು ಮದ್ರಾಸಿನಲ್ಲಿ, ಬಾಂಬೆಯಲ್ಲಿ,, ಕಲ್ಕತ್ತಾದಲ್ಲಿ...
ದೆಹಲಿಯ ಬೀದಿಯಲ್ಲಿ ಸುತ್ತುವಾಗ .....
ದೂರದ ಕತಾರ್ ದೇಶದ ದೋಹಾದಲ್ಲಿ..
ಎಲ್ಲ ಕಡೆ ಕಾಡಿದ್ದಳು ಆ ಹುಡುಗಿ..
ಅವಳ ದಟ್ಟನೆಯ ಕಣ್ಣು..... ಮರೆಯಲು ಆಗಲೇ ಇಲ್ಲ....
ದೋಹಾದಲ್ಲಿದ್ದಾಗ ಮನೆಯಿಂದ ಮದುವೆ ಪ್ರಸ್ತಾಪ ಬಂದಿತು.
ಮತ್ತೆ ನೆನಪಾದಳು .
ವಿಚಾರಿಸಿದೆ....
ನಾಗು ಹೇಳಿದ " ಹೈಸ್ಕೂಲ್ ಮುಗಿದ ನಂತರ ಅವಳಣ್ಣ ಮದುವೆ ಮಾಡಿಬಿಟ್ಟಿದ್ದ"..
ಬೇಜಾರಾಯಿತು..
ಬಹುಶಃ ನನಗೆ ಅವಳ ನೆನಪಿನ ಭಾಗ್ಯವನ್ನು ಮಾತ್ರ..
ಆ ಭಗವಂತ ಬರೆದಿದ್ದಾನೋ.... ಇದ್ದಿರ ಬಹುದು....
ಅಕ್ಕ ಹುಡುಕಿದ ಹುಡುಗಿ ಮುದ್ದಾಗಿದ್ದಳು.... ಈಗಲೂ ಕೂಡ....
ಕನಸಿನಲ್ಲಿ ಬಯಸುವಂಥಹ ಹುಡುಗಿ...
ಅವಳಾದಳು ನನ್ನ ಮಡದಿ..
ಮಡದಿಗೆ ಕಾಡಿದ ಹುಡುಗಿಯ ಬಗೆಗೆ ಹೇಳಿದೆ..
ಅವಳಿಂದ ಮೊದಲನೆ ಪ್ರಶ್ನೆ " ಹೇಗಿದ್ದಾಳೆ ನಿಮ್ಮ ಕಾಡಿದ ಹುಡುಗಿ..?"
" ನನ್ನ ಹದಿಹರೆಯ ಬಯಸಿದ ಹುಡುಗಿ...
ಚೆನ್ನಾಗಿದ್ದಳು... ಆಗ...
ನನಗೆ ಮಹದಾಸೆ ಒಂದಿದೆ..
ಕಾಡಿದ ಹುಡುಗಿಯನ್ನು ನಿನಗೊಮ್ಮೆ ತೋರಿಸಬೇಕು.." ..
ನನ್ನಾಕೆಗೂ ಕುತೂಹಲ...!
ಆ ನನ್ನ ಅಭಿರುಚಿ ಹೇಗಿತ್ತು ಅಂತಿರ ಬಹುದಾ...?
ನಾನು ಆ ಬಗೆಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಲಿಲ್ಲ....
ಆದರೆ ಹೇಗೆ.. ತೋರಿಸುವದು...??
ನಾಗು ನನ್ನ ಪರಿತಾಪ ಅರ್ಥ ಮಾಡಿಕೊಂಡಿದ್ದ.
"ನಾನು ಪ್ರಯತ್ನ ಮಾಡುತ್ತೇನೆ.. ಕಣೊ.." ಎಂದಿದ್ದ.
ಅವನೂ ನಾನೂ ಊರಿಗೆ ಹೋಗಿದ್ದಾಗ ಗೆಳೆಯರನ್ನ, ...
ಅವರಿವರನ್ನು ಕೇಳಿದ್ದರೂ ಯಾರೂ ಸರಿಯಾಗಿ ಹೇಳಲಿಲ್ಲ..
ಹಾಗೆ ದಿನಕಳೆಯಿತು..
ಬಿಸಿನೆಸ್ ವ್ಯವಹಾರ..ಮಕ್ಕಳು ಮರಿ ಸಂಸಾರ..
ಏನೇ ಇದ್ದರೂ ಅಗಾಗ ನೆನಪಾಗುತಿದ್ದಳು....
ಒಂದು ದಿವಸ ನಾಗು ಫೋನ್ ...
" ನೋಡಪ್ಪಾ.. ನಿನ್ನ ಪ್ರೀತಿ ಪ್ರೇಮದ ಹುಡುಗಿಯ ಮಗಳ ಮದುವೆ.
ರಾಜಾಜಿ ನಗರದ ಕಲ್ಯಾಣ ಮಂಟಪದಲ್ಲಿ.
ಭಾನುವಾರ. ನಿನ್ನ ಹೆಂಡತಿ ಮಗನನ್ನು ಕರೆದು ಕೊಂಡು ಬಾ. ನಿನ್ನ ಮಹದಾಸೆ ಈಡೇರುತ್ತದೆ..... "
ಹೌದಾ...? ನಿಜವಾ...?
ನನಗೆ ಆಶ್ಚರ್ಯ.. ಸಂತೋಷ.. ಭಾವನೆ ಹೇಳಲಿಕ್ಕೆ ಶಬ್ಧಗಳೀಲ್ಲವಾಗಿತ್ತು....!
ಮಡದಿಗೂ ಹೇಳಿದೆ.....!
ಹೇಗಿರಬಹುದು..??
ಹೇಗಾಗಿರ ಬಹುದು,,.?
ಆ ಕಣ್ಣು ಹಾಗೆ ಇದ್ದಿರ ಬಹುದಾ...?
ಹಾಗೆ ಒಂದು ತರಹದ ಹೆದರಿಕೆ ಕೂಡ ಆಗಿತ್ತು..
ಯಾವ ಡ್ರೆಸ್ಸ್ ಹಾಕಿ ಕೊಳ್ಳಲಿ..?
ನನ್ನ ಸಂಭ್ರಮ ಸಡಗರ ನೋಡಿ ಮಡದಿಗೂ ಹೊಟ್ಟೆಕಿಚ್ಚಾಯಿತಾ?
ಆಗಿದ್ದರೂ ಹೇಳಲಿಲ್ಲ.
ಅವಳಿಗೂ " ಹೇಗಿದ್ದಿರ ಬಹುದು" ಎಂಬ ಕುತೂಹಲ.
ಭಾನುವಾರ ಬಂದೇಬಿಟ್ಟಿತು.
ನಿಜ ಹೇಳ ಬೇಕೆಂದರೆ ರಾತ್ರಿ ನಿದ್ರೆ ಸರಿಯಾಗಿ ಆಗಿರಲಿಲ್ಲ.
೯ ಗಂಟೆಗೆ ಕಲ್ಯಾಣಮಂಟಪಕ್ಕೆ ಬರಲಿಕ್ಕೆ ಹೇಳಿದ್ದ ನಾಗು.
ಟೆನ್ಶನ್ನಲ್ಲಿ ಡ್ರೈವ್ ಮಾಡಿ ಕಲ್ಯಾಣ ಮಂಟಪಕ್ಕೆ ಬಂದೇವು.
ನಾಗು ನಮಗಾಗಿ ಕಾಯುತ್ತಿದ್ದ.
ನನಗೊ ಒಳಗೊಳಗೆ ಒಂದುರೀತಿಯ ಭಯ ಆತಂಕ..
ಹೊಸತಾಗಿ ಮದುವೆಯಾಗಲು ಹುಡುಗಿಯನ್ನು ನೋಡುವ ತರಹ ಭಯ... ಆತಂಕ....!!
ಛೇ... !!
ಬೆಳೆಯುತ್ತಿರುವ ಮಗ... ಹೆಂಡತಿ...
ಮುದ್ದಾದ ಸಂಸಾರ.....!!
ಇಂಥಹ ಭಾವಗಳು ಯಾಕೆ....?
ನಾವು ಒಳಗೆ ಹೋದೆವು. ನನ್ನ ಕಣ್ಣುಗಳು ಹುಡುಕುತ್ತಿದ್ದವು.
ಹೇಗಾಗಿದ್ದಾಳೆ..??
ತವಕ.. ಆತಂಕ..ಎದೆ ಢವ..ಢವ..!!
ನಾನೀಗ ಕಾಲೇಜಿಗೆ ಹೋಗುವ ಹುಡುಗ ಅಲ್ಲವಲ್ಲ. ...
ಗಾಂಭಿರ್ಯತೆ ಅಗತ್ಯವಾಗಿತ್ತು.
ಒಬ್ಬ ದೊಡ್ಡ ಹೊಟ್ಟೆಯ.. ಬಕ್ಕುತಲೆಯ ಬಾಂಡ್ಲಿ ನಮ್ಮ ಬಳಿ ಬಂದ.
"ಪ್ರಕಾಶು.... ಇವರು ,,ವಿಜಯಾ.... ಯಜಮಾನರು..
ಸರ್.. ಇವರು ಪ್ರಕಾಶ ಹೆಗಡೆ.."
ಎಂದು ನಾಗು ಪರಿಚಯ ಮಾಡಿಕೊಟ್ಟ.
ನಾನು ನಮಸ್ಕಾರ ಮಾಡಿದೆ..
ಹೌದಾ..? ಕಾಡಿದ ಹುಡುಗಿಗೆ ಇಂಥಾ ಗಂಡನಾ..?
ಇನ್ನೂ ಸ್ವಲ್ಪ ಚಂದ..... ಸ್ವಲ್ಪ ಬೆಳ್ಳಗಾದರೂ.. ಇರಬಹುದಿತ್ತು ..ಅಂದುಕೊಂಡೆ..
ಇವನೇ ಹಿಗಿದ್ದಾನೆ... !!
ಅವಳು ಹೇಗಾಗಿರ ಬಹುದು....?
ನನ್ನ ಮಗ " ಅಪ್ಪಾ ಊಟ ಮಾಡೋಣ.. ಆಮೇಲೆ ನಿಮ್ಮ ಫ್ರೆಂಡ್ ಭೆಟಿಯಾಗು ..
ಹಸಿವು..ಆಮೇಲೆ ಸೀಟು ಸಿಗೊದಿಲ್ಲ" ಅಂದ.
ಅದಕ್ಕೆ ನಾಗು.. ನನ್ನ ಹೆಂಡತಿ ಎಲ್ಲರೂ ಓಕೆ ಅಂದರು...
ನಾನು ಒಳಗೊಳಗೆ ಕುದಿಯುತ್ತಿದ್ದೆ.
ಇನ್ನೇನು ..ನಾನೂ ಅವರನ್ನು ಹಿಂಬಾಲಿಸಿದೆ.
ಊಟವಾಯಿತು..
ಉಡುಗೋರೆ ಕೊಡೊಣ ಎಂದು ಹೊರಟೆವು..
ತುಂಬಾ ರಷ್....!
ವಧು ವರರ ಸಂಗಡ ಆ ಡುಮ್ಮ ..ಬಾಂಡ್ಲಿ ನಿಂತಿದ್ದ... ಪಕ್ಕದಲ್ಲಿ..?
ಉಹೂಂ....!.
ಅವಳಲ್ಲ ನನ್ನ ಕಾಡಿದ ಹುಡುಗಿ.. ..!
ಹಾಗದರೆ ಇನ್ನೆಲ್ಲಿ..?...??....
ನಾನು ನಾಗು ಹಿಂಬಾಲಿಸಿದೆ.
ನಾಗು ವಧು ವರರಿಗೆ ನನ್ನ ಪರಿಚಯಿಸಿದ.
" ಇವರು ಪ್ರಕಾಶ.. ಅಂತ. ದೊಡ್ಡ ಗುತ್ತಿಗೆ ದಾರ..
ನಿಮ್ಮಮ್ಮನ ಕ್ಲಾಸ್ ಮೇಟ್."
ನಾನು ಉಡುಗೋರೆ.. ಕೊಟ್ಟೆ.. ನನ್ನ ಕಣ್ಣುಗಳು ಹುಡುಕುತ್ತಿದ್ದವು....
ಡುಮ್ಮ ಪರಿಚಯದ ನಗು ನಕ್ಕ.
ಎಲ್ಲಿ...? ಎಲ್ಲಿ.. ಆ ಹುಡುಗಿ..??
ಡುಮ್ಮನ ಪಕ್ಕದಲ್ಲಿದ್ದ ದಪ್ಪನೆಯ ಹೆಂಗಸು ಬಾಯಿತುಂಬಾ ನಗುತ್ತಿದ್ದಳು.
ಸಂಭ್ರಮ ನೋಡಿದರೆ ಅವಳೆ ವಧುವಿನ ಅಮ್ಮನಂತಿದ್ದಳು.
ಅವಳೆ ನಮ್ಮ ಬಳಿ ಬಂದಳು..
" ಹೋಯ್ ಪ್ರಕಾಶಾ.. !!
ನಾನು ..ವಿಜಯಾ... ನನ್ನ ಗುರುತು ..ಸಿಗಲಿಲ್ಲವಾ?..
ನಾಗೂಗೆ ನಿನ್ನನ್ನೂ ಕರೆದು ಕೊಂಡು ಬರಲು ಹೇಳಿದ್ದೆ.
ಬಂದ್ಯಲ್ಲ ಬಹಳ ಖುಷಿಯಯಿತು.. ಎಷ್ಟು ವರ್ಷ ಆಯಿತೋ ಮಾರಾಯಾ...
ನಿನ್ನನ್ನೆಲ್ಲ ನೋಡಿ...!!"
ಓಹೋ.....!!
ಈ ವಿಜಯಾನಾ.. ?..??...
ನಮ್ಮ ಕ್ಲಾಸಿನಲ್ಲಿ ಇಬ್ಬರು ವಿಜಯಾಗಳಿದ್ದರು....!!!!
ನಾನು ನಾಗು ಮುಖ ನೋಡಿದೆ..
ಅವನಲ್ಲಿ ತುಂಟ ನಗು ಇತ್ತು.
" ಸಾರಿ ..ಕಣೊ ... ಪ್ರಕಾಶು...."
ಅಂದ.
ನನ್ನ ಕೈಯಲ್ಲಿ ಚಾಕು ಇದ್ದರೆ ಅವನ ಹೊಟ್ಟೆಗೆ ಹಾಕಿ ಸಾಯಿಸಿ ಬಿಡುತ್ತಿದ್ದೆ...,,,
ಬಡ್ಡಿಮಗ ನಾಗು....!!
Friday, November 7, 2008
Subscribe to:
Post Comments (Atom)
30 comments:
ಸೂಪರಾಗಿತ್ತು!! ಇದು ನನ್ನ ಮಾತಲ್ಲ ನನ್ನಾಕೆಯ ಮಾತು ನಾನು ಓದುವಾಗ ಅವಳು ನನ್ನ ಜೊತೆಯಲ್ಲೇ ಇದನ್ನು ಓದಿ ನಂತರ ಬಂದ ಮಾತಿದು. ಇನ್ನೂ ನನ್ನ ಅಭಿಪ್ರಾಯ ಬೇಕಿಲ್ಲವಲ್ಲ! ಇನ್ನೂ ನನಗನ್ನಿಸಿದ್ದು, ನಿಮ್ಮ ರಾತ್ರಿ ನಿದ್ರೆ ಹಾಳಾಯಿತಲ್ಲ, ಅದರ ಬಗ್ಗೆ ನನಗೆ ಸಹಾನುಭೂತಿ ಇದೆ. ಮತ್ತು ಬರಹದ ವಿಷಯಕ್ಕೆ ಬಂದರೆ ಬಲು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಕೊನೆಯಲ್ಲಿನ ಪಂಚ್ ಮಾತ್ರ ಸೂಪರ್ !
ಶಿವು ಸರ್.. ನಿಮಗೂ, ಮೇಡಮ್ ರವರಿಗೂ ಧನ್ಯವಾದಗಳು...
ಚೆನಾಗಿತ್ತು !
ಪಾಪ ನೀವು ಎಷ್ಟೆಲ್ಲ ಕಷ್ಟ ಪಟ್ಟು ತಯಾರಾಗಿ ಹೋಗಿದ್ರೇನೋ ಮದುವೆಗೆ ...
ಅಂದಹಾಗೇ, ನಿಮ್ಮ ’ ನಾಗು’ ಗಾದ್ರೂ ಸರಿಯಾಗಿ ಗೊತ್ತಿತ್ತಾ ನಿಮ್ಮನ್ನು ಕಾಡಿದ್ದು ಯಾವ ವಿಜಯಾ ಅಂತ ?
ಚಿತ್ರಾರವರೆ.. "ನಾಗು" ಗೆ ಗೊತ್ತಿದೆ. ಸ್ವಲ್ಪ ತಲೆ ಹರಟೆ.. ಚಡ್ಡಿ ದೋಸ್ತನಲ್ಲವೆ... ನನ್ನ ಬ್ಲೊಗ್ ಗೆ ಬಂದಿದ್ದಕ್ಕೆ ಧನ್ಯವಾದಗಳು..
ಇದು ಸತ್ಯ ಕಥೆಯೇ? ಸತ್ಯ ಕಥೆಯೇ ಆಗಿದ್ದರೆ ನನ್ನ ಸಹಾನೂಭೂತಿಯಿದೆ :) ಸತ್ಯವೇ ಆಗಿರಲಿ ಇಲ್ಲಾ ಬರಿಯ ಕಾಲ್ಪನಿಕವೇ ಆಗಿರಲಿ.. ಕಥಾ ವಸ್ತು ಹಾಗೂ ಕುತೂಹಲಭರಿತ ನಿರೂಪಣಾ ಶೈಲಿ ತುಂಬಾ ಇಷ್ಟವಾಯಿತು. ಇಟ್ಟಿಗೆ ಸಿಮೆಂಟು ಮರಳುಗಳ ನಡುವೆ ಇಷ್ಟೊಂದು ಸುಂದರ ಭಾವನಾ ಸೌಧವೆದ್ದು ನಿಂತಿರುವುದು ತುಂಬಾ ಆಶ್ಚರ್ಯ :) ಹೀಗೇ ಬರೆಯುತ್ತಿರಿ.
ಅಂದಹಾಗೆ ನಿಮ್ಮ ಊರೂ ಶಿರಸಿಯೇ?
ತೇಜಸ್ವಿನಿ ಹೆಗಡೆಯವರೆ.. ಇದು ಸತ್ಯ ಘಟನೆ.ಹುಡುಗಿಯ ಹೆಸರು ಬದಲಾಯಿಸಲಾಗಿದೆ. ನಿಮ್ಮ ಪ್ರತಿಕ್ರಿಯೆ ಬಹಳ ಉತ್ತೇಜನಕಾರಿಯಾಗಿದೆ. ನನ್ನನ್ನು ಬ್ಲೊಗ್ ಗೆ ತಂದು ಪರಿಚಯಿಸಿ ಬರೆಯಲು ಹಚ್ಚಿದ ಇಬ್ಬರು ಗೆಳೆಯರಿಗೆ ನಿನ್ನೆ ಚೆನ್ನಾಗಿ ಬಯ್ದಿದ್ದೇನೆ. ನಿಮ್ಮ ಪ್ರತಿಕ್ರಿಯೆ ನೋಡಿದ ಮೇಲೆ SORRY..ಹೇಳುವೆ. ನಿಮ್ಮ ಹೊಗಳಿಕೆ ಸಹಜವಾಗಿ ಬಹಳ ಖುಶಿ ತಂದಿದೆ, ಮತ್ತೂ ಬರೆಯೋಣ ಅನಿಸಿದೆ. ಹೌದು ಮೇಡಮ್.. ನನ್ನೂರು ಸಿರ್ಸಿ.
ಆ ದಿನ - ಜೋಗಿಯವರ ಪುಸ್ತಕ ಬಿಡುಗಡೆಯ ದಿನ ನಾನು ನಿಮಗೆ ಫೋನ್ ಮಾಡಿದಾಗ, 'ನನ್ನ ಕ್ಲಾಸ್ ಮೆಟ್ ಮಗಳ ಮದುವೆಗೆ ಹೊಗ್ತಿದೀನಿ' ಅಂದಿದ್ರಿ. ಲೇಖನ ಓದಲು ಶುರುಮಾಡುತ್ತಿದ್ದಂತೆಯೇ ನೆನಪಾಗಿ ಆ ಹುಡುಗಿ ಹೇಗಿರಬಹುದು ಎಂಬ ಕುತೂಹಲದೊಂದಿಗೆ ಓದತೊಡಗಿದೆ.ಕೊನೆಗೆ ನಿಮ್ಮಂತೆಯೇ ಪಿಗ್ಗಿ ಬಿದ್ದೆ. ನಿಮ್ಮ ಆ ಆ ಸ್ನೇಹಿತೆ ನಿಜಕ್ಕೂ ಒಮ್ಮೆ ಸಿಗಲಿ ಎಂಬ ಸವಿ ಸವಿ ಹಾರೈಕೆಗಳು.
ಮಲ್ಲಿಕಾರ್ಜುನರವರೆ.. ಅಂದು ನಿಮ್ಮ ಸಂಗಡ ಪುಸ್ತಕ ಬಿಡುಗಡೆ ಸಭೆಗೆ ಬಂದಿದ್ದರೆ ಚೆನ್ನಾಗಿತ್ತು.. ಅಲ್ಲವಾ? ನೋಡೊಣ ಯಾವಾಗಾದರೂ ಭೇಟಿಯಾಗಬಹುದು. ನಿಮಗೆ ಧನ್ಯವಾದಗಳು..
ok ok annayaaaaaa suuuuuuuuper punch.
amelunu vijayi agalyidille alda?????.
k yavagadru siglakku :)all d best :)
ಪ್ರಕಾಶ್,
ಮಜವಾಗಿದ್ದು. ಇಷ್ಟ ಆತು.
ನಿಜವಾಗಲೂ ನಿಮ್ಮ ಹೆಂಡತಿ great!! ತುಂಬಾ sportive!!!
ಇಷ್ಟು ವರ್ಷ ಆದ ಮೇಲೂ ಅವಳನ್ನು ನೋಡುವ ಕಾತುರ ನೋಡಿದ ಇನ್ಯಾರೇ ಹೆಂಗಸಾಗಿದ್ದರೂ ನಿಮ್ಮನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ತಾ ಇದ್ರು :)
ನಾನಾಗಿದ್ರೆ ನಿಮಗೆ, ನಿಮ್ಮ friend ನಾಗುಗೆ ಇಬ್ರಿಗೂ ಬಡಿಗೆ ತಗತ್ತಿದ್ದಿ ... Joking;)
೯೦% ಹೆಂಡತಿ ಬಳಿ ನಿಜ ಹೇಳಿ ಬಿಡಬೇಕಂತೆ... ಹೇಳಿದ್ದೇನೆ. ನಾನು ಹೇಗೆ, ಏನು ಎಂದು ಅರ್ಥ ಮಾಡಿ ಕೊಂಡಿದ್ದಾಳಲ್ಲಾ..
ನಾನು ಬಹಳ ಅದ್ರಷ್ಟವಂತ. ಯಾಕೆಂದರೆ
೧) ಇಂಥಹ ಮಡದಿಗಾಗಿ..
೨) ನಿಮ್ಮಿಂದ ಏಟು ತಪ್ಪಿಸಿಕೊಂಡಿದ್ದಕ್ಕಾಗಿ ( joke..!)
thank you ..
good one ಸಾರ್.
ಇದನ್ನ ಓದ್ತಾ ಓದ್ತಾ ಎಲ್ಲೋ ಮುಳುಗಿ
ಹೋಗಿಬಿಟ್ಟಿದ್ದೆ. ಈಗಲೂ ನೆನೆಸಿಕೊಂಡ್ರೆ ಒಬ್ಬನೇ ನಗ್ತಾ ಇರ್ತೀನಿ( ಬಹುಶಃ 'ನಾಗು' ಅವರ ಥರಾ ;) ).
ಆದಷ್ಟು ಬೇಗ 'ವಿಜಯಾ' ಅವರನ್ನ ಭೇಟಿ ಮಾಡೋ ಅವಕಾಶ ನಿಮ್ಗೆ ಸಿಗ್ಲಿ.
ರಘುರವರೆ.. ನನ್ನ ಬ್ಲೊಗ್ ಬಂದಿದ್ದಕ್ಕೆ ಸ್ವಾಗತ..
ನಿಮ್ಮ ಹಾರೈಕೆಯಂತೆ ಅವಳು ಸಿಗಲಿ.. ಅವಳ ಮನಸ್ಸಿನಲ್ಲೂ ಅದೇ ಭವನೆ ಇತ್ತಾ? ಅದು ನನ್ನ ಕಾಡುವ ಪ್ರಶ್ನೆ...
ಧನ್ಯವಾದಗಳು...
ಏನ್ ಬರ್ದಿದ್ದೀರಿ ಸಾರ್ ಸಿಕ್ಕಾಪಟ್ಟೆ ನಗು ಬಂತು :) . ಪಾಪ ನಾಗು ಅವರನ್ನ ಬಿಟ್ಬಿಡಿ... ನಿಮ್ಮ ನಿಜವಾದ ವಿಜಯನ ಹುಡುಕೋಕೆ ಬೇಕಲ್ವ?
Ha Ha Ha..
Tumbaa chennagi ide...
Ondalla ondu dina nimmaakege nimagishtavidda 'Vijaya'na torisi ... :-D
ಹೇಮಾರವರೆ.. ನನ್ನ ಬ್ಲೊಗ್ ಗೆ ಸುಸ್ವಾಗತ.. ಬರ್ತಾ ಇರಿ.. ಪ್ರತಿಕ್ರಿಯೆ ಕೊಡ್ತಾ ಇರಿ..
ಆ ನಾಗು ನನ್ನ ಚಡ್ಡಿ ದೋಸ್ತ, ಅವನಿಗೆ ಈಗ ಪಾಪ ಪ್ರಜ್ನೆ ಕಾಡ್ತಾ ಇದೆಯಂತೆ..
ಬ್ಲೊಗ್ ನಿಂದ ಉಪಕಾರ ಅಂತೂ ಆಗಿದೆ... ಧನ್ಯವಾದಗಳು..
ಪೂರ್ಣಿಮಾರವರೆ..
ನನ್ನ ಹೆಂಡತಿಗೆ ಆ ಪುಣ್ಯಾತ್ಗಿತ್ತಿ ಒಂದು ಸಾರಿ ತೋರಿಸ ಬೇಕು ಆನ್ನೋದೆ "ನನ್ನ ಮಹದಾಸೆ"
ನನ್ನ ಮಡದಿ ಹೇಳ್ತಾ ಇರ್ತಾಳೆ " ನಿಮ್ಮ ಬ್ಲೊಗ್ ಗೆ ಬರುವ ಹೆಣ್ಣು ಮಕ್ಕಳಲ್ಲಿ ಒಬ್ಬರು ನಿಮ್ಮ ವಿಜಯಳ ಮಗಳೂ ಇದ್ದಿರ ಬಹುದು..!!??"
ನನಗೆ ಅನ್ನಿಸಿದ್ದು "ಇದ್ದಿರ ಬಹುದಲ್ಲಾ!!"
ನನ್ನ ಬ್ಲೊಗ್ ಗೆ ಬರ್ತಾ ಇರಿ.. ಪ್ರತಿಕ್ರಿಯೆ ಕೊಡ್ತಾ ಇರಿ..
ರಾಶಿ ರಾಶಿ ಧನ್ಯವಾದಗಳು...
ಛೆ ಛೆ ! ಪಾಪ !
ಹಿತ್ತಲ ಮನೆಯವರೆ..
ಯಾರಿಗೆ ಪಾಪ..?
ಸ್ವಲ್ಪ ವಿವರಿಸಿ ಹೇಳಿ ಮಾರಾಯರೆ..!!
ಧನ್ಯವಾದಗಳು..
ನಂಗೊತ್ತಿತ್ತು.. ಇದು ಹಿಂಗೇ ಎಲ್ಲೋ ಫಾಲ್ಟ್ ಹೊಡೀತು ಅಂತ!!
ಹರೀಷ್...
ಸೀಮ ಹೆಗಡೆಯವರ ಗಾದೆ ನೆನಪಾಗುತ್ತಿದೆ..
"ಗಂಡ ಸತ್ತಿದ ನೋವು ಬೇರೆ..
ಬಡ್ಡು ಕೂಪಿನ ಉರಿ ಬೇರೆ..!!"
ಧನ್ಯವಾದಗಳು...
ಇವತ್ತು ಮುಂಗಾರು ಮಳೆ ಹಾಡು ಕೇಳ್ತಾ ಇದ್ದಿದ್ದಿ...ನಿನ್ನ ವಿಜಯಾ ಲೇಖನ ನೆನಪಾತು. ಹಂಗೇ ನೀನು ಮುಂಗಾರುಮಳೆ ಕ್ಲೈಮಾಕ್ಸ್ ನಲ್ಲಿ ಅತ್ತಿದ್ದು ಎಂತಕ್ಕೆ ಹೇಳೂ ಹೊಳ್ತು....ಹಹ್ಹಹ್ಹ... ಹೊಡ್ಯಡ ಮಾರಾಯಾ ...ಸುಮ್ನೆ ಅಂದಿ..
ಹಿತ್ತಲ ಮನೆಯವರೆ..
ನಂಗೆ ಅಷ್ಟೆಲ್ಲ ಫೀಲಿಂಗ್ ಇಲ್ಲ ಮಾರಾಯಾ..!
ಅವಳಿಗೆ ನನ್ನ ಮೇಲೆ ಏನು ಭಾವನೆ ಇತ್ತು..?
ಕೇಳ ಬೇಕು ಒಮ್ಮೆ..
ವಾಸ್ತವದಲ್ಲಿ ಅದು ಸಾಧ್ಯನೇ ಇಲ್ಲ..
ಅಲ್ಲವಾ?
nice article ... keep it up...
i will also pray the god ... u get "vijaya" as soon as possible:):)
ರೂಪಾರವರೆ...
ನಿಮ್ಮ ಹಾರೈಕೆಯಂತೆ "ವಿಜಯಾ" ಸಿಕ್ಕಳು ಅಂದುಕೊಳ್ಳೋಣ...
ಏನನ್ನಬಹುದು...?
ಆಗ .. ಆ ವಯಸ್ಸಿನಲ್ಲಿ ..
ಇಷ್ಟವಾಗಿದ್ದರೂ..
ಹಾಗೆ ಅನಿಸಿತ್ತು ಎಂದು ಹೇಳ ಬಹುದಾ...?
ಖಂಡಿತಾ ಇಲ್ಲ...
ಆದರೂ..
ದೂರದಿಂದಲಾದರೂ ನೋಡುವ..
"ಮಹದಾಸೆ"..
ನನಗೂ, ನನ್ನ ಮಡದಿಗೂ.. ಇದೆ...
ಧನ್ಯವಾದಗಳು...
Hello,
ha ha ha :)
chenngide nima Vijaya kathe...
" ನಿನ್ನನ್ನೂ... ಕಣ್ ತುಂಬಾ..." odida mele idanu odide.... idu Kannada prabha nali Praktavagithu alwe????
Yeloo odida nenapu :)
ವೀಣಾರವರೆ...
ಇದು ಕನ್ನಡ ಪ್ರಭದಲ್ಲಿ ಬಂದಿತ್ತು...
ನಿಮ್ಮ ಮೆಚ್ಚುಗೆಗೆ..
ಪ್ರೋತ್ಸಾಹದ ನುಡಿಗೆ
ಧನ್ಯವಾದಗಳು...
ಕಾಡುವ ಹುಡುಗಿಯ ದರ್ಶನ ನನಗೆ ನಿಮ್ಮ ಕುತುಹಲ,ಹಂಬಲ, ಬಯಕೆಯಲ್ಲಿಯೇ ಕಂಡಿತು, ಪಾಪ ನಿಮ್ಮ ನಿದ್ದೆ ! ನನಗು ನನ್ನ ಬಾಲ್ಯದ ಕಾಡುವ ಗೆಳೆಯ ನೆನಪಗುತಿದ್ದಾನೆ. ಅಬ್ಭಾ ಈ ಕದುವವವ್ರು ನಮ್ಮ ಜೀವನದಲ್ಲಿ ನಮ್ಮನು ಮಕ್ಕರ್ ಮಾಡುತಾರೆ, ಕವಿಗಳನ್ನಗಿಸುತಾರೆ , ಜೋಕೆರ್ ಮಾಡುತಾರೆ, ಒಟ್ಟಿನಲ್ಲಿ ಕಾಡುವ ಎಲ್ಲ ಹುದ್ಗರಿಗೂ ಮತ್ತು ಹುಡುಗಿಯರಿಗೂ ಜೀವನಪೂರ್ತಿ ಕಾಡುವ ನೆನಪುಗಳ ಅರ್ಪಿಸುವೆ.
ಹ ಹ್ಹ ಹ್ಹಾ !!!! ಸಕ್ಕತ್ಥಾಗಿತ್ತು,
ನೀವು ಬಡ್ಡೀ ಮಗ ಅ೦ದ್ರಲ್ಲಾ, ಬಹುಶಃ ಇದನ್ನು ಬರೆಯುವಾಗಲೂ ಸಹ ನಿಮಗೆ ನಾಗು ಮೇಲೆ ಸಿಟ್ಟು ಬ೦ದಿತ್ತು ಎ೦ದು ಕಾಣುತ್ತದೆ.
Post a Comment