Saturday, January 11, 2014

.........ಅ ಸಕ್ರಮ .

ನನ್ನಾಕೆ ಪೇಪರ್ ಓದುತ್ತಿದ್ದಳು..

"ರ್ರೀ...
ಪ್ರತಿಷ್ಠಿತರು... ಸಿನೇಮಾದವರು..
ಪ್ರಖ್ಯಾತರು ಯಾಕೆ ಹೀಗೆ ?"

ನನ್ನಾಕೆಯೊಡನೆ ನಾನು ಮಾತನಾಡುವದು ಬಲು ಕಡಿಮೆ...

ನನ್ನ ಹುಬ್ಬು ಮೇಲೇರಿತು..

"ಇವರುಗಳಿಗೆ ....
ಒಂದು ದಾಂಪತ್ಯ ಸಂಬಂಧ ಯಾಕೆ ಸಾಕಾಗುವದಿಲ್ಲ...?

ಅಂಥಹದ್ದು ಏನಿರುತ್ತದೆ ಅಕ್ರಮ ಸಂಬಂಧಗಳಲ್ಲಿ ? "

ಮಡದಿಯಲ್ಲವೆ ? .... ಸಂಶಯ ಸಹಜ  !

ನನಗೆ ಅರ್ಥವಾಯಿತು.. 
ಹಾಗಂತ ನನ್ನನ್ನು ನೇರವಾಗಿ ಕೇಳಲಾಗುವದಿಲ್ಲವಲ್ಲ... 

ಸಂಶಯವನ್ನು 
ಚಿಗುರಿದ್ದಾಗಲೇ 
ಚಿವುಟಿಬಿಟ್ಟರೆ ಮತ್ತೆ ಚಿಗುರುವದಿಲ್ಲ... 

" ಸಾರ್ವಜನಿಕ ವ್ಯಕ್ತಿಗಳಿಗೆ ..
ಅಂಥಹ ಅವಕಾಶಗಳು ಸುಲಭವಾಗಿ ಸಿಗುತ್ತವೆ....

ಅದು ಮನುಷ್ಯ ಸಹಜ ಸ್ವಭಾವ..

ಒಂದೇ ರುಚಿ ನಾಲಿಗೆಗೆ ಸಾಕಾಗುವದಿಲ್ಲ..

ಅವಕಾಶ..
ಸಂದರ್ಭ ಸಿಕ್ಕಲ್ಲಿ ... 
" ಸಾಮಾನ್ಯರೂ " ಹೊಟೆಲ್ಲಿಗೆ ಹೋಗಲು ಇಚ್ಛಿಸುತ್ತಾರೆ..."

ನನ್ನಾಕೆಯ ದೃಷ್ಟಿ ತೀಕ್ಷ್ಣವಾಯಿತು..

ನಾನು ದೃಷ್ಟಿ ತಪ್ಪಿಸಿದೆ..

"ಟೀ ಬೇಕಿತ್ತು....ಕಣೆ ... . "

ನನ್ನಾಕೆ ಅಡಿಗೆ ಮನೆಗೆ ಹೋದಳು.
ನನ್ನಾಕೆಯನ್ನು ಸಂಭಾಳಿಸುವದು ಸುಲಭ... 

ನಿಮಗೆ ಗೊತ್ತಿರದೆ ಏನು...?

ನಾನೊಬ್ಬ 
ಯಶಸ್ವಿ ಟಿವಿ ಧಾರವಾಹಿ ನಿರ್ದೇಶಕ...
ನನ್ನ ಹೆಸರಲ್ಲಿ ಅನೇಕ ಧಾರವಾಹಿಗಳು ನಡೆಯುತ್ತವೆ.. 
ಜನ ನೋಡುತ್ತಾರೆ..

ಎಲ್ಲೋ ಒಂದು ಕಡೆ ಅಪರಾಧಿ ಮನೋಭಾವ ಕಾಡುತ್ತದೆ...

ಮತ್ತೇನಿಲ್ಲ...

ಅವಳು...

ಅವಳೆಂದರೆ ಅವಳು..!
ಸಾಮಾನ್ಯ ಗ್ರಹಿಣಿ...

ಅವಳ ಪರಿಚಯವಾದದ್ದು ನಾಲ್ಕಾರು ವರ್ಷಗಳ ಹಿಂದೆ..

ಆಗ 
ನಾನಿನ್ನೂ ನನ್ನ ವೃತ್ತಿ ಬದುಕಿನಲ್ಲಿ ಅಂಬೆಗಾಲಿಡುತ್ತಿದ್ದೆ...

ನಾನು 
ಗೀಚುತ್ತಿದ್ದ ಕವನಗಳನ್ನು ಬಹಳ ಮೆಚ್ಚಿಕೊಳ್ಳುತ್ತಿದ್ದಳು..

ನನ್ನ ಯಶಸ್ಸಿನ ಬಗೆಗೆ ಹರಕೆ ಹೊತ್ತುಕೊಳ್ಳುತ್ತಿದ್ದಳು...

ಆರ್ಕುಟಿನಲ್ಲಿ ಪರಿಚಯವಾಯಿತು...
ಫೇಸ್ ಬುಕ್ಕಿಗೆ ಬರುವಷ್ಟರಲ್ಲಿ ಹೃದಯಕ್ಕೆ ಬಹಳ ಹತ್ತಿರವಾಗಿಬಿಟ್ಟಿದ್ದಳು...

ನನಗೆ ಮೊದಲ ಕೆಲಸ ಸಿಕ್ಕಾಗ 
ಎರಡು ದಿನ ಉಪವಾಸವಿದ್ದು ಹರಕೆ ತೀರಿಸಿದ್ದಳು...!
ನನಗಿಂತ ಖುಷಿ ಪಟ್ಟಿದ್ದಳು... 

ನಾವು ಎಂದಿಗೂ ಭೇಟಿಯಾಗಿಲ್ಲ..
ಆಗುವದೂ ಇಲ್ಲ ಬಿಡಿ...

ನಮ್ಮ ಇತಿಮಿತಿ...
ನಮ್ಮ ಸಂಸಾರದ ಚೌಕಟ್ಟು ಎಷ್ಟೆಂದು ಇಬ್ಬರಿಗೂ ಗೊತ್ತು..

ಈಮೇಲ್... ಎಸ್ಸೆಮ್ಮೆಸ್ಸು...
ಚಾಟ್...
ಫೋನಿನಲ್ಲಿ ಹರಟುವದು... ಇಷ್ಟೆ..!

ನಾನು ಅಥವಾ ಅವಳು..
ದಿನದಲ್ಲಿ ಯಾವಾಗ ಫ್ರೀ ಇದ್ದರೂ ಮೆಸ್ಸೇಜ್ ಕಳಿಸುತ್ತೇವೆ..... 

"ಶುಭೋದಯ..." ಶುಭೋದಯ.."

ಇಬ್ಬರಿಂದಲೂ ಸಂದೇಶ ವಿನಿಮಯವಾದ ಮೇಲೆ.. 
 ನಾನು ಫೋನ್ ಮಾಡುತ್ತಿದ್ದೆ..

"ಶುಭೋದಯ " ಸಂದೇಶ ನಮ್ಮಿಬ್ಬರ ಸಂಕೇತವಾಗಿತ್ತು... 

ನಮ್ಮ ದಿನ ನಿತ್ಯದ ದಿನಚರಿ... 
ಘಟನೆಗಳು..
ನನ್ನ ಹೊಸ ಐಡಿಯಾಗಳು.. 

ನನ್ನ ಹೊಸ ಕವನಗಳನ್ನು ಹಂಚಿಕೊಳ್ಳುವದು..

ನಾನು ಗೀಚುವ  ಕವನಗಳನ್ನು 
ಧಾರಾವಾಹಿಗಳಲ್ಲಿ 
ಬಳಸಿಕೊಳ್ಳುವಂತೆ ಸಲಹೆ  ಕೊಟ್ಟವಳೂ ಅವಳೇ.... 

ಈಗ  ಅದು ಬಹಳ ಜನಪ್ರಿಯವಾಗಿದೆ !

ನನ್ನ ಮಡದಿ ...
ಮನೆಯಲ್ಲಿ ಎಲ್ಲದಕ್ಕೂ ಸಿಗುತ್ತಾಳೆ..
ಅಂದ ಚಂದದಲ್ಲಿ ಯಾವ ಕೊರತೆಯೂ ಇಲ್ಲ..

ಹೆಣ್ಣು ..
ಮಡದಿಯಾದಮೇಲೆ 
ಯಾಕೆ ಅಷ್ಟು ನೀರಸವಾಗಿಬಿಡುತ್ತಾಳೆ  ? 

ಗೊತ್ತಿಲ್ಲ... !

ಆದರೂ..
ನಾನೆಂದೂ ನೋಡದ 
ಅವಳೊಡನೆ ಹರಟುವದರಲ್ಲಿ ಏನೋ ಸಂತೋಷ.. !
ಖುಷಿ...

ನನ್ನ ಸ್ವಭಾವದೊಡನೆ ಅವಳು ಬದುಕುತ್ತಿಲ್ಲವಲ್ಲ...

ನನ್ನ 
ದೌರ್ಬಲ್ಯಗಳು ಅವಳಿಗೆ ಗೊತ್ತಿಲ್ಲವಲ್ಲ...

ನಮ್ಮ ಮಾತುಕತೆಗಳಿಗೆ ಬೇಲಿ ಇರುವದಿಲ್ಲ...

ಒಮ್ಮೆ ನಾನು ಕೇಳಿದ್ದೆ..

"ನಿಮ್ಮಿಬ್ಬರ..
ರಾತ್ರಿ ದಾಂಪತ್ಯದ ಪ್ರೀತಿ ಎಷ್ಟು ಸಮಯ ನಡೆಯುತ್ತದೆ ?"

ಬಹುಷಃ 
ಅವಳಿಗೆ ಗಂಟಲು ಕಟ್ಟಿತ್ತು..

ಧ್ವನಿ ಸಣ್ಣಗೆ ಕಂಪಿಸುತ್ತಿತ್ತು..!

"ಹೆಚ್ಚೇನಿಲ್ಲ... ಐದು ನಿಮಿಷ..."

ಮಡದಿಯನ್ನು ಬಿಟ್ಟು 
ಬೇರೆ ಹೆಣ್ಣಿನೊಡನೆ..  
ಮಾತನಾಡುವ ರೋಮಾಂಚನೆಯ ಸೊಗಸೇ ಬೇರೆ...!

"ಗಂಡಿನಂತೆ..
ಹೆಣ್ಣಿಗೂ ಒಂದು..
ತೃಪ್ತಿಯ...
ಸಮಾಧಾನದ "ಕೊನೆಯ ಹಂತ " ಇರುತ್ತದೆ ಗೊತ್ತಾ ?.... "

ಕಂಪಿಸುವ ಧ್ವನಿಯಲ್ಲಿ ಮತ್ತೆ ಉತ್ತರ ಬಂತು.. 

"ಉಹುಂ ... ಇಲ್ಲ...!... "

ರೋಚಕತೆ... 
ಕ್ರಿಯೆಯಲ್ಲಿ ಒಂದೇ ಅಲ್ಲ... 

ಸಂಭಾಷಣೆಯಲ್ಲೂ  ಇದೆ  !

ಗೊತ್ತೇ ಇರಲಿಲ್ಲ.. !

ಎಲ್ಲೆ ಇಲ್ಲದ ಈ ಸಂಬಂಧದ..
ಮಾತುಕತೆಗಳ ರೋಮಾಂಚನೆ ನನಗೆ ಬಲು ಇಷ್ಟವಾಗುತ್ತಿತ್ತು...

ಯಾವ ವಿಷಯವನ್ನೇ ಆಗಲಿ... 
ಮುಕ್ತವಾಗಿ ಮಾತನಾಡುತ್ತಿದ್ದೆವು... 

ಮಡದಿಯೊಡನೆ ಏಕಾಂತದಲ್ಲಿರುವಾಗಲೂ ಅವಳ ನೆನಪು ಕಾಡುತ್ತಿತ್ತು...

ವಾಸ್ತವದಲ್ಲಿ..
ಅವಳ ಕಲ್ಪನೆಯ ರೂಪವಿಟ್ಟು ಸುಖಿಸುತ್ತಿದ್ದೆ...

ನಮ್ಮಿಬ್ಬರ 
ಈ ಮಾತುಕತೆಯ ಸಂಬಂಧ.. 
ನಮ್ಮಿಬ್ಬರ ಕೌಟುಂಬಿಕ ಬದುಕಿಗೆ ತೊಡಕಾಗಲಿಲ್ಲ... 

ನಾಲ್ಕಾರು ವರ್ಷಗಳು ನಮ್ಮ ಈ ಸಂಬಂಧಕ್ಕೆ...

ನಾನು ನನ್ನ ಸಂಸಾರದಲ್ಲಿ..
ಅವಳು ಅವಳ ಸಂಸಾರದಲ್ಲಿ...
ಖುಷಿಯಾಗಿದ್ದೆವು... 

ಅವಳ ಗಂಡ ಬೆಳಿಗ್ಗೆ ಮನೆ ಬಿಟ್ಟರೆ.. 
ಮಧ್ಯ ರಾತ್ರಿ ಬರುತ್ತಿದ್ದ... 

ಆತ ಅವಳೊಡನೆ ಮಾತನಾಡುವದು ಕಡಿಮೆ... 
ಆತ ತನ್ನ ಪ್ರಪಂಚದಲ್ಲಿರುತ್ತಿದ್ದ.. 

ನಾನು..
ನನ್ನ ಮಡದಿಗೆ ಗೊತ್ತಾಗದಂತೆ ...
ಅವಳು ಅವಳ ಪತಿಯೊಡನೆ ಬಚ್ಚಿಟ್ಟು..
ನಮ್ಮ ಮಾತುಕತೆ ನಡೆಯುತ್ತಿತ್ತು...

ಒಂದು ದಿನ...
ಅವಳ ಮೆಸ್ಸೇಜ್ ಬರಲಿಲ್ಲ..

ನನಗೆ ಚಡಪಡಿಕೆ...

ಮರುದಿನ  "ಶುಭೋದಯ" ಅಂತ ಮೆಸೇಜ್ ಕಳಿಸಿದೆ..
ಬಹಳ ತಡವಾಗಿ " ಶುಭೋದಯ " ಅಂತ ಉತ್ತರ ಬಂತು.. !

ಲಗುಬಗೆಯಿಂದ ಫೋನ್ ರಿಂಗಿಸಿದೆ..

"ಏನಾಯ್ತು ..!!..."

ಅವಳ ಧ್ವನಿ ತಣ್ಣಗಿತ್ತು...

"ಏನಿಲ್ಲ..
ನಿನ್ನೆ ನನ್ನ ಗಂಡ ನನ್ನ ಫೋನಿನ ಕರೆಗಳನ್ನು ನೋಡಿದ.."

ನನ್ನೆದೆ ಢವ ಢವ ಹೊಡೆದುಕೊಳ್ಳತೊಡಗಿತು..

ಕಳ್ಳನಿಗೆ ಅಳ್ಳೆದೆ !

"ಮುಂದೆ..  ?..... "

" ಅವರು...
ಒಂದೂ ಮಾತನಾಡಲಿಲ್ಲ...
ಸುಮ್ಮನೆ ಕೋಣೆಗೆ ಹೋಗಿ ಮಲಗಿಬಿಟ್ಟರು...

ಊಟನೂ ಸರಿ ಮಾಡಿಲ್ಲ...

ನನಗೆ ಆತಂಕವಾಗುತ್ತಿದೆ..."

ಛೇ.... !

ನಮ್ಮದು ಕೇವಲ ಮಾತುಕತೆ.. !
ಎಸ್ಸೆಮ್ಮೆಸ್ಸುಗಳು !

ಮಾಡಬಾರದ ತಪ್ಪುಗಳನ್ನೇನೂ ನಾವು ಮಾಡಿಲ್ಲ...
ಕೆಡುಕೆನಿಸಿತು... 

"ನೋಡು...
ನಿನ್ನ ಗಂಡನಿಗೆ..
ಬೇಸರ ಮಾಡುವ.. ದುಃಖ ಕೊಡುವ ಹಕ್ಕು
ನಮಗಿಬ್ಬರಿಗೂ ಇಲ್ಲ..

ಅವರ ದೃಷ್ಟಿಯಲ್ಲಿ ಇದು ತಪ್ಪು.."

"ಏನು ಮಾಡೋಣ.. ?"

"ನಮ್ಮ ಮಾತುಕತೆಗಳನ್ನು ನಿಲ್ಲಿಸಿಬಿಡೋಣ..
"ಶುಭೋದಯ" ಸಂದೇಶಗಳನ್ನು ಕಳಿಸುವದು ಬೇಡ..."

ಅವಳು ಅಳುತ್ತಿದ್ದಳು.... 
ಅವಳ ಅಳುವ ಸ್ವರ ನನ್ನ ಹೃದಯ ಕಲಕಿತು...

"ಹೇಗೆ ಮರೆಯಲೋ ನಿನ್ನ..   ?
ನಿನ್ನ ಪ್ರೀತಿಯಾ ?"

"ನೋಡು..
ಪ್ರೀತಿ..
ಪ್ರೇಮ.. ಬೇಸರ.. ದುಃಖಗಳೆಲ್ಲ ಭಾವನೆಗಳು...

ಮನಸ್ಸು ಗಟ್ಟಿ ಇದ್ದಲ್ಲಿ ಭಾವನೆಗಳನ್ನು ಹತ್ತಿಕ್ಕಬಹುದು... ..

ನಮ್ಮ ಪ್ರೀತಿ ಹೇಗೆ ಹುಟ್ಟಿತು ಗೊತ್ತಾ ?"

"ಪ್ರೀತಿ... ಹೇಗೆ ಹುಟ್ಟಿತೊ ಗೊತ್ತೇ ಆಗಲಿಲ್ಲ..

ಈ ಪ್ರೀತಿಗೆ ಕಾರಣವೇ ಇಲ್ಲ  ಕಣೊ..."

"ಕಾರಣವಿಲ್ಲದೆ ಹುಟ್ಟುತ್ತದೆ ಪ್ರೀತಿ..
ಹಾಗೆ ಕಾರಣವಿಲ್ಲದೆ ದ್ವೇಷವೂ ಹುಟ್ಟಿಕೊಳ್ಳುತ್ತದೆ..

ಮರೆಯ ಬಹುದು... ಕಾಲ ಮರೆಸುತ್ತದೆ...

ಮನಸ್ಸು ಗಟ್ಟಿ ಮಾಡಿಕೊ..."

"ಕಷ್ಟ ಕಣೊ...."

ಹುಡುಗಿ ಅಳುತ್ತಿದ್ದಳು...

" ಕಿಡಕಿ ಮುಚ್ಚಿದ ...
ನನ್ನ ಕಿಚನ್ನಿನ ದಿನಗಳಲ್ಲಿ ಬೆಳಕು ಹುಟ್ಟಿಸಿದವನು ನೀನು..

ನನ್ನ  ಒಂಟೀ ಬದುಕಿನಲ್ಲಿ ನಗು ತೋರಿಸಿದವ ನೀನು... 
ಹೇಗೆ ಮರೆಯಲೋ.. ?.... "

"ನೋಡು ಹುಡುಗಿ..

ನಮ್ಮಿಬ್ಬರ ಸಂಬಂಧದ ಅರ್ಥವೇನು ? 
ಗುರಿ ಏನು ?  

ಏನೂ ಇಲ್ಲ.... !

ನಾನು 
ನನ್ನ ಮಡದಿ ಮಕ್ಕಳನ್ನು ಬಿಟ್ಟು ಬರಲಾರೆ..

ನೀನು 
ನಿನ್ನ ಸಂಬಂಧಗಳನ್ನು ಕಡಿದುಕೊಂಡು ಇರಲಾರೆ..
ಹಾಗೆ ಮಾಡುವದು  ಸರಿಯೂ ಅಲ್ಲ... 

ಮಧ್ಯದಲ್ಲಿ 
ನಮ್ಮ ಶುಷ್ಕ ಮಾತುಗಳಿಗೆ ಅರ್ಥವೇ ಇಲ್ಲ...

ಇಷ್ಟು ದಿನ 
ನಮ್ಮಿಬ್ಬರನ್ನು ಸಂತಸಗೊಳಿಸಿದ .. 
ಮಾತನಾಡಿದ ಸಮಯಗಳನ್ನು ನೆನೆಯೋಣ... !

ಅದು ನಮ್ಮ ಭಾಗ್ಯ... 

ವಾಸ್ತವದ  ನಮ್ಮ ಬದುಕನ್ನು 
ನಮ್ಮ ಕೈಯ್ಯಾರೆ ಹಾಳು ಮಾಡಿಕೊಳ್ಳುವದು ಮೂರ್ಖತನ...

ಸಮಯ ಎಲ್ಲವನ್ನೂ ಮರೆಸುತ್ತದೆ.."

"ಸರಿ..."

ಅವಳು ಫೋನ್ ಕಟ್ ಮಾಡಿದಳು..

ನನಗೂ ಬೇಸರವಾಯ್ತು..

ಈ ವಿಷಯ ಹೇಗಾದರೂ ಪಬ್ಲಿಕ್ ಆಗಿಬಿಟ್ಟರೆ ?

ನನ್ನ ಖ್ಯಾತಿ..
ಹೆಸರಿನ ಚಿಂತೆ ನನ್ನನ್ನು ಕಾಡಿತು..

ಅವಳ ಮುಗ್ಧ ಪ್ರೀತಿ ನೆನಪಾಯಿತು...

ಒಮ್ಮೆ ಫೇಸ್ ಬುಕ್ಕಿನಲ್ಲಿ ಒಂದು ಫೋಟೊ ಹಾಕಿಕೊಂಡಿದ್ದೆ..

ನನ್ನ ಧಾರವಾಹಿಯ ನಾಯಕಿಯ ಹೆಗಲ ಮೇಲೆ ಕೈ ಹಾಕಿ ಫೋಟೊ ತೆಗೆಸಿಕೊಂಡಿದ್ದೆ...

ಅವಳು ಎರಡು ದಿನ ನನ್ನ ಬಳಿ ಮಾತು ಬಿಟ್ಟಿದ್ದಳು...
ನಾನು ವಿವರಣೆ ಕೊಟ್ಟು..
ಅವಳ ಕೋಪ ಶಮನ ಮಾಡುವಾಗ ಸಾಕು ಸಾಕಾಗಿತ್ತು..

ನನ್ನ ಮಡದಿಯೊಡನೆ 
ಪ್ರೀತಿಯಲ್ಲಿದ್ದರೆ ಅವಳಿಗೆ ಏನೂ ಅನ್ನಿಸುತ್ತಿರಲಿಲ್ಲ..
ಖುಷಿ ಪಡುತ್ತಿದ್ದಳು...

ಅಕ್ರಮದಲ್ಲೂ ಅಸೂಯೆ !
ಆಶ್ಚರ್ಯ ಈ ಸಂಬಂಧ !

"ಶುಭೋದಯ" ಸಂದೇಶವಿಲ್ಲದೆ ಒಂದು ದಿನ ಕಳೆಯಿತು...

ನನ್ನ ಭಾವನೆಗಳನ್ನು ಹಂಚಿಕೊಳ್ಳಲು ಆವಳಿಲ್ಲ..

ಎರಡನೆಯ ದಿನ ಸಾಯಂಕಾಲದ ತನಕ ಹೇಗೋ ಹೇಗೊ ಸಹಿಸಿಕೊಂಡೆ...

ತವಕ..
ಚಡಪಡಿಕೆ ತಡೆಯಲಾಗಲಿಲ್ಲ...

"ಶುಭೋದಯ"  ಸಂದೇಶ ಕಳಿಸಿಯೇ ಬಿಟ್ಟೆ... !

ಉತ್ತರವಿಲ್ಲ...
ಸ್ವಲ್ಪ ಹೊತ್ತು ಕಳೆಯಿತು....

ಒಂದು ಖಾಲಿ ಮೆಸ್ಸೇಜ್ ಬಂತು...!

ಇದು ಅವಳು ಕಳುಹಿಸಿದ್ದು ಇರಲಿಕ್ಕಿಲ್ಲ...

ಮತ್ತೊಂದು "ಶುಭೋದಯ" ಸಂದೇಶ ಕಳಿಸಿದೆ...

ಸ್ವಲ್ಪ ಹೊತ್ತಿನ ನಂತರ ಮತ್ತೊಂದು ಬ್ಲ್ಯಾಂಕ್ ಮೆಸ್ಸೇಜ್  !

ಇನ್ನೊಮ್ಮೆ ಶುಭೋದಯ ಕಳುಹಿಸಿದೆ 

ಈಗ ಒಂದು ಮಿಸ್ಸಡ್ ಕಾಲ್ ಬಂತು..

ಅವಳು ಎಷ್ಟೊ ಬಾರಿ ನನಗೆ ಹೀಗೆ ಮಾಡಿದ್ದಳು..!

ಆಸೆಗಳು ಗರಿಗೆದರಿದವು  !!

ಲಗುಬಗೆಯಿಂದ ಕಾಲ್ ಮಾಡಿದೆ...
ನನಗೆ ಚಡಪಡಿಕೆ... 
ನಾಲ್ಕು ವರ್ಷಗಳ ಮಾತುಕತೆಯ ಸಂಬಂಧ... !

ಫೋನ್ ರಿಂಗಾಯಿತು...


" ಹಲ್ಲೋ.."

ಅಲ್ಲಿಂದ ಗಡಸು... ಗೊಗ್ಗರು ....  ಕರ್ಕಶ ಧ್ವನಿ  !

ಢವ.. ಢವದ ಆತಂಕ...!

ಅವಳ ಗಂಡನಿರಬಹುದಾ ?

ಗಡಸು ಧನಿ ಮತ್ತಷ್ಟು ಕಠಿಣವಾಯಿತು...!

"ಹಲ್ಲೋ.. ಯಾರ್ರೀ  ನೀವು... ?"

ನಾನು ತೊದಲಿದೆ...

"ನಾನು.. ನಾನು..."

ಧ್ವನಿ ಹೊರ ಬರಲು ಕಷ್ಟವಾಯಿತು... ಕಂಪಿಸಿತು... 

"ನೋಡಿ..

ನಾನು ಪೋಲಿಸ್ ಇನ್ನಸ್ಪೆಕ್ಟರ್ ಮಾತಾಡ್ತಿರೋದು..!

ಇಲ್ಲೊಂದು ಹೆಣ್ಣು ಮಗಳ ಸಾವು ಆಗಿದೆ...

ಕೊಲೆಯೋ.. ಆತ್ಮಹತ್ಯೆಯೋ ಗೊತ್ತಾಗುತ್ತಿಲ್ಲ... !

ನೀವ್ಯಾರು ?

ಈ ಸಂಜೆ ಹೊತ್ತಿನಲ್ಲಿ 
ಯಾಕೆ "ಶುಭೋದಯ" ಅಂತ ಮೆಸ್ಸೇಜ್ ಕಳ್ಸಿರೋದು  !

ನಿಮಗೂ..
ಇವರಿಗೂ ಏನ್ರೀ  ಸಂಬಂಧ...  ?..."

ನನ್ನ ಜಂಘಾಬಲ ಉಡುಗಿಹೋಯಿತು.....  !

ಕೈ ಕಾಲು ಥರ ಥರ ನಡುಗ ತೊಡಗಿತು.... !



(ಕಥೆ)

(ದಯವಿಟ್ಟು ಪ್ರತಿಕ್ರಿಯೆಗಳನ್ನು ಓದಿ.... )

33 comments:

ನಿಮ್ಮ ಪ್ರೀತಿಯ ಹುಡುಗ said...
This comment has been removed by the author.
ನಿಮ್ಮ ಪ್ರೀತಿಯ ಹುಡುಗ said...

Thumba chennagiddu anna...:)

Ittigecement said...

ಪ್ರೀತಿಯ..
ನಿಮ್ಮ ಪ್ರೀತಿಯ ಹುಡುಗ.. ರಾಘು...

ಈಗತಾನೆ ಗೆಳೆಯರೊಬ್ಬರು ಕೇಳುತ್ತಿದ್ದರು..

"ಈ ಕಥೆ ನೀವೇ ಬರೆದಿರೋದಾ ?
ಈ ಕಥೆಯಲ್ಲಿ ಏನು ಹೇಳಲಿಕ್ಕೆ ಹೊರಟಿದ್ದೀರಿ ?"

ಅಕ್ರಮ....
ಅಕ್ರಮ ಸಂಬಂಧಗಳು ಎಂದಿಗೂ ಅತೀತವಾಗಿ ಕಾಡುತ್ತವೆ...
ನೈತಿಕತೆಯನ್ನು ಚುಚ್ಚುತ್ತವೆ...

ತಪ್ಪು ಅಂತ ಮನಸ್ಸಿಗನ್ನಿಸಿದರೂ.. ಮಾತುಕತೆ ನಡೆಸುತ್ತಾರೆ..

ಕೊನೆಯಲ್ಲಿ ನಾಯಕ ಅದರ ಪ್ರತಿಫಲ ಅನುಭವಿಸುತ್ತಾನೆ....

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು....

Srikanth Manjunath said...

ಲೇಖನ ಓದಿದ ಮೇಲೆ ಒಮ್ಮೆ Rewind ಬಟನ್ ಒತ್ತಿದೆ.. ಈ ಕಥೆಗೆ ಹೆಸರೇನು ಅಂತ... ಮತ್ತೆ ಓದುತ್ತಾ ಸಾಗಿದೆ ಅಚಾನಕ್ಕಾಗಿ "ಕಿಡಕಿ ಮುಚ್ಚಿದ ನನ್ನ ಕಿಚನ್ನಿನ ದಿನಗಳಲ್ಲಿ ಬೆಳಕು ಹುಟ್ಟಿಸಿದವನು ನೀನು.." ಈ ಸಾಲುಗಳಿಗೆ ಕಣ್ಣು ಕಣ್ಣು ನಿಂತಿತು.. ಇಡಿ ಲೇಖನ ಈ ಸಾಲುಗಳ ಮೇಲೆ ನಿಂತಿದೆ ಅನ್ನುವ ಭಾವನೆ ಮನದಲ್ಲಿ ಹರಡಿತು. ಹೌದು ಇಂದನ ಇಲ್ಲದ ಕಾರು ನಿಂತಾಗ ಮಾತ್ರ ಇಂಧನದ ಮಹತ್ವ ಅರಿವಾಗುವುದು. ಮಾತುಗಳಲ್ಲೇ ಸುಮಧುರ ಭಾವ ಸಿಕ್ಕಾಗ ಆ ಮಾತುಗಳು ಜೀವನದ ಸಕಲ ದುಃಖಗಳನ್ನೂ ಮರೆಸುವ ತಾಕತ್ ಇರುತ್ತದೆ.. ಆ ಮಾತುಗಳೇ ಇಲ್ಲವಾದಾಗ ಮಿಕ್ಕ ವಸ್ತುಗಳು ನೀರಿನ ಮೇಲೆ ಗಾಳಿಯ ಸಹಾಯದಿಂದ ಕ್ಷಣ ಮಾತ್ರವ ಉರಿಯುವ ದೀಪದ ಹಾಗೆ ಆಗಿ ಬಿಡುತ್ತದೆ ಬದುಕು.. ವಿಚಿತ್ರ ಎನಿಸಿದರು, ಕಥೆಯೊಳಗಿನ ಮಾರ್ಮಿಕ ಸಂದೇಶ ಅರಿವಾಗುತ್ತದೆ. ಯಾವುದು ಅಕ್ರಮ ಅಲ್ಲ ಅದು ಸರಿಯಾದ ಕ್ರಮ ಇರಬಹುದು ಎನ್ನುವ ತಿರುವು ಹಾದಿಯಲ್ಲಿ ನಿಂತಾಗ.. ಅದು ಸಕ್ರಮ ಅಲ್ಲ ಅ"ಸಕ್ರಮ" ದ ಹಂತಕ್ಕೆ ನಿಲ್ಲುತ್ತದೆ.. ಕಥಾ ನಾಯಕಿಯ ಅಂತ್ಯ ಏನೇ ಆದರೂ ದುರ್ಬಲ ಹೃದಯದ ಭಾವಗಳಿಗೆ ಕನ್ನಡಿಯೊದಗಿಸುತ್ತದೆ ಈ ಅಂತ್ಯ.. ವಿಚಿತ್ರ ಕಥೆ ಆದರೆ ಸಂದೇಶ ಅಮರ.. ಸೂಪರ್ ಸರ್ಜಿ

Ittigecement said...

ಪ್ರಿಯ ಶ್ರೀಕಾಂತೂ...

ಇದು ಒಬ್ಬರ ಅನುಭವ...

ಅಂತ್ಯ ಮಾತ್ರ ನನ್ನ ಕಲ್ಪನೆ............

ಒಬ್ಬರನ್ನು ನಂಬಿ.. ಬದುಕನ್ನು ಹಂಚಿಕೊಂಡು...
ಅವರ ಸ್ವಭಾವದೊಡನೆ ಬದುಕುವಾಗ "ಅಪೂರ್ಣತೆ" ಕಾಡುತ್ತದೆ...

ಇರುವುದೆಲ್ಲವ ಬಿಟ್ಟೂ... ಇರದುದೆಡೆಗೆ ಸೆಳೆಯುವದು ಮನುಷ್ಯ ಸಹಜ ಸ್ವಭಾವ...

ಅವಳ ಒಂಟೀ ಬದುಕಿಗೆ ಇವನ ಮಾತುಗಳು ಸಂತಸಕೊಟ್ಟಿರ ಬಹುದು...
ಇವನಿಗೆ ಇವನ ಬದುಕಿನ ಹೋರಾಟದ ದಿನಗಳಲ್ಲಿ ಉತ್ಸಾಹ ಅವಳು ಕೊಟ್ಟಿರ ಬಹುದು...

ಆದರೆ ವಾಸ್ತವದಲ್ಲಿ
ಅವರವರ ಬದುಕು..
ಆ ಬದುಕು ಬಯಸುವದು ಇವರಿಬ್ಬರ ಸಂಬಂಧವನ್ನಲ್ಲ...

ಅದು ಇವರಿಬ್ಬರಿಂದ ಬೇರೆ ಬಯಸುತ್ತದೆ.. ತಮಗೆ ಬೇಕಾಗಿದ್ದನ್ನು ಮಾಡಿಸುತ್ತದೆ..

ತಪ್ಪು ಅಂತ ಬೇರೆ ಆದರೂ..
ಅತೀತ ಕಾಡುತ್ತದೆ..

ಪೋಲೀಸರು ಈಗ ಅವನ ಫೋನ್ ಕಾಲ್ ಇತಿಹಾಸವನ್ನು ಕೆದಕಿದರೆ.. ಇವನ ಬಳಿ ಉತ್ತರವಿಲ್ಲ.. ಅಲ್ಲವಾ ?

ಬಲು ಚಂದದ ಪ್ರತಿಕ್ರಿಯೆ..

ತುಂಬು ಹೃದಯದ ಪ್ರೀತಿ ಶ್ರೀಕಾಂತೂ....

Savitha SR said...

ಕಥೆ ಚೆನ್ನಾಗಿದೆ ಪ್ರಕಾಶಣ್ಣ..ಅ ಸಕ್ರಮಕ್ಕಾಗಿ ಸಾವೇ ಕೊನೆಯ ದಾರಿಯಾಗಬಾರದಿತ್ತು..

Nandhini. N said...

Nangyako ishta aaglilla idu

Ittigecement said...

ಸವಿತಾ...

ಎಂಥಹ ಸಾವು ?
ಕೊಲೆಯೋ.. ಆತ್ಮ ಹತ್ಯೆಯೋ ?

ಗೊತ್ತಿಲ್ಲ...

ಪತಿ.. ಪತ್ನಿಯರ ಪ್ರೀತಿ ತುಂಬಾ ಪೊಸ್ಸೆಸ್ಸಿವ್ ಆಗಿರುತ್ತದೆ...

ಸಿಟ್ಟು ಬಂದ ಗಂಡ ಮಡದಿಯ ಕೊಲೆ ಮಾಡಿರಲೂಬಹುದು...

ಒಮ್ಮೆ ಮಾಡಿದ ತಪ್ಪು..
ಸಂದರ್ಭಗಳಲ್ಲಿ ಹೇಗೆ ಕಾಡ ಬಹುದು ಎನ್ನುವದಕ್ಕಾಗಿ ಹೇಳಲು ಹೀಗೆ ಮಾಡುವದು ಸೂಕ್ತ ಅನ್ನಿಸಿತು...

ಅವರಿಬ್ಬರ ವಾಸ್ತವದ ಬದುಕಿಗೆ..
ಅವರಿಬ್ಬರ ಮಾತುಕತೆ ಅನಾವಶ್ಯಕ... ಅನಗತ್ಯ...

ಅವರಿಬ್ಬರ ವೈಯಕ್ತಿಕ ಬದುಕು ಬೇರೆ ಏನನ್ನೊ ಬಯಸುತ್ತದೆ..
ಅದನ್ನು ಅವರು ಮಾಡಬೇಕಾಗಿತ್ತು...

ಮನೆಯಲ್ಲಿ..
ತಮ್ಮ ಹತ್ತಿರದಲ್ಲಿ . ತಮಗೆ ಸಿಕ್ಕಿರುವದರಲ್ಲಿ..
ತಮ್ಮ "ಪೂರ್ಣತೆಯನ್ನು"
ತಮಗೆ ಬೇಕಾಗಿದ್ದನ್ನು ಕಂಡುಕೊಳ್ಳಬೇಕು.. ಎನ್ನುವದಕ್ಕಾಗಿ "ಸಾಯಿಸಿರುವದು" ಸೂಕ್ತ ಎನ್ನಿಸಿತು...

ಕಥೆಯನ್ನು ಇಷ್ಟಪಟ್ತಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು...

ಚಿನ್ಮಯ ಭಟ್ said...

climax khatarnak :D

Badarinath Palavalli said...

ಯಾಕೋ ಕಮೆಂಟಿಸಲೂ ಬೆರಳಿಗೆ ನಡುಕ.
ಕೆಲ ಸಂಬಂಧಗಳನ್ನು ವಿಶ್ಲೇಷಿಸುವ ಮಟ್ಟಿಗಿನ ಜಾಣ್ಮೆ ನನಗಿಲ್ಲದಿದ್ದರೂ, ಊಹಿಸದ ಅಂತ್ಯದ ಆಘಾತ ನಾಯಕನ ಬದುಕಿನಲ್ಲಿ ಎಬ್ಬಿಸಿರಬಹುದಾದ ಬಿರುಗಾಳಿಯನ್ನು ಊಹಿಸಬಲ್ಲೆ.
ಮಾತಿಗೆ ನಿಲುಕದ ಸೂಕ್ಷ್ಮ ಅನುಬಂಧಗಳ ಕಣ್ಮರೆ ಮತ್ತು ನಂತರದ ಖಾಲೀ ಬದುಕಿನ ಹಿಂಸೆಯು ಹೇಳಲಸದಳ.
ಇಂತಹ ಘಟನೆ ಎಲ್ಲೋ ನಡೆದಿದ್ದೀತು, ಅದರ ಪರಿಣಾಮದ ಊಹೆ ಸಿಗುತಿಲ್ಲ!

Ittigecement said...

ಪ್ರಿಯ ನಂದಿನಿ ನಂಜಪ್ಪನವರೆ..

"ಕೊನೆಯವರೆಗೂ ಕಥಾ ನಾಯಕನಿಗೆ "ತನ್ನ ತಪ್ಪಿನ ಅರಿವಾಗಲಿಲ್ಲ"..
ನಾಯಕನ ಪಾತ್ರ ಇಷ್ಟವಾಗಲಿಲ್ಲ." ಎಂದು ವಿವರವಾಗಿ ತಿಳಿಸಿದ್ದೀರಿ..(chat ಫೇಸ್ ಬುಕ್ ಸಂದೇಶದಲ್ಲಿ )

ಹೂಂ...

ಇಂಥಹ ವಿವಾಹಿತರು ಮಾತನಾಡುವದು...
ಒಳ್ಳೆಯ ಸ್ನೇಹಿತರಾಗಿರೋದು ತಪ್ಪಲ್ಲ...

ಆದರೆ..
ಅವನ ಮಡದಿ.. ಅಥವಾ ಇವಳ ಗಂಡ .. ಇವರಿಬ್ಬರ ಅನುಮತಿ ಇದ್ದಲ್ಲಿ
ಈ ರೀತಿ ಮಾತನಾಡುವದು ತಪ್ಪಲ್ಲ...

ಒಂದು ಥರಹದ ಒಂಟೀತನ ಎಲ್ಲರನ್ನೂ ಕಾಡುತ್ತದೆ..
ತನ್ನವರಲ್ಲದ..
ಬೇರೊಬ್ಬರ..
ಅನ್ಯ ಲಿಂಗಿ ಸ್ನೇಹ ಆಗ ಹಿತವೆನಿಸುತ್ತದೆ...

ಇದು ಅಂಥದ್ದೊಂದು ಸಂದರ್ಭ...

ನಾಯಕನಿಗೆ ತನ್ನ ತಪ್ಪಿನ ಅರಿವು ಸ್ವಲ್ಪ ಮಟ್ಟಿಗೆ ಆಗಿದೆ..
ಹಾಗಾಗಿ ಇಬ್ಬರೂ ಸೇರಿ "ಮಾತುಕತೆಯನ್ನು" ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ...

ಇದು ನನ್ನ ಪರಿಚಯದ ಹಿರಿಯರೊಬ್ಬರ ಅನುಭವ..
ಕಥೆಯ "ಕೊನೆ" ಮಾತ್ರ ನನ್ನ ಕಲ್ಪನೆ..

ಹಿರಿಯರು ಮತ್ತು ಅವರ ಗೆಳತಿ ಹೀಗೆ ಬೇರೆಯಾಗುತ್ತಾರೆ.
ಇತ್ತೀಚೆಗೆ ಅವರ ಗೆಳತಿ ತೀರಿಕೊಂಡಿರುವ ವಿಷಯ ತಿಳಿದು ಬಹಳ ಬೇಸರದಲ್ಲಿದ್ದರು..

ಗೆಳತಿಯ ಪತಿಗೆ ಇವರಿಬ್ಬರ ಸ್ನೇಹದ ವಿಷಯ ತಿಳಿದು ಮನೆಯಲ್ಲಿ ರಂಪಾಟ ನಡೆದಿರುತ್ತದೆ..

ಅಂದ ಹಾಗೆ ಇವರಿಬ್ಬರ ಸ್ನೇಹ "ಪತ್ರ" ಮುಖೇನ ನಡೆದಿರುತ್ತದೆ..

ಕಥೆ ಇಂದಿನ ಕಾಲಕ್ಕೆ ತಕ್ಕಂತೆ ಫೇಸ್ ಬುಕ್.. ಆರ್ಕೂಟ್.. ಮೊಬೈಲ್ ಸಂದೇಶಗಳನ್ನು ಬಳಸಿಕೊಂಡಿರುವೆ..

ಘಟನೆಗಳನ್ನು ತಿದ್ದಿ ಮಾರ್ಪಾಡು ಮಾಡಿರುವೆ..

ನಿಮ್ಮ ಪ್ರತಿಕ್ರಿಯೆಗೆ ಪ್ರೀತಿಯ ಧನ್ಯವಾದಗಳು...

Oha Yoha said...

ಅದ್ಭುತವಾದ ಕಥೆ, ಎಷ್ಟೋ ಜನರ ಜೀವನದಲ್ಲಿ ಆಗುವ ನೈಜ ಘಟನೆಯಂತಿದೆ....
ಕೊನೆಯಲ್ಲಿ ನಮ್ಮನ್ನು ಕಾಡುವ ಪ್ರಶ್ನೆ...ಇದು ಆತ್ಮಹತ್ಯೆಯೋ... ಕೊಲೆಯೋ?
ಎರಡೂ ಆಗಿರಬಹುದು....
ಕೊಲೆ ಎಂದಾಗಿದ್ದರೆ... ಹೆಂಡತಿ ತನ್ನ ಸ್ವತ್ತು, ತಾನು ಅವಳಿಗೆ ಪ್ರೀತಿ ಮಾತುಗಳನ್ನು ಕೊಡದೇ ಇದ್ದಾಗ, ಬೇರೆಯಾರೊ ಕೊಟ್ಟಿದ್ದಾರೆ ಎಂಬುದನ್ನು ತಿಳಿದ ಗಂಡ, ಸಮಾಜ ಮಾಡಿರುವ ಸಕ್ರಮ ಸಂಬಂಧ ಎಂದು ಕರೆಯಲಾಗುವ ಗಂಡ ಹೆಂಡತಿ ಸಂಬಂಧಕ್ಕೆ ಚ್ಯುತಿ ತಂದಿದ್ದಾಳೆ ಎಂಬ ಮೌಡ್ಯವನ್ನಾವರಿಸಿಕೊಂಡು, ಕೊಂದಿರುವುದರಲ್ಲಿ ಆಶ್ಚರ್ಯವಿಲ್ಲ.

ಆತ್ಮಹತ್ಯೆ ಎಂದಾಗಿದ್ದರೆ... ಅವಳಿಗೆ ಕಥಾನಾಯಕನನ್ನು ಬಿಟ್ಟಿರಲು ಸಾಧ್ಯವಿಲ್ಲ... ಅವನೋಂದಿಗಿರಲೂ ಸಾಧ್ಯವಿಲ್ಲ.. ಈಗ ಅವನ ಬಳಿ ಮಾತನಾಡುವ ದಾರಿಯೂ ಕೊನೆಯಾಗಿದೆ... ಗಂಡನಿಗೂ ತಿಳಿದು ಗಂಡನ ಅಲ್ಪ ಸ್ವಲ್ಪ ಪ್ರೀತಿಯೂ ಕೊನೆಯಾಗಿದೆ.. ಅತೀ ಸಾಮನ್ಯ ಗೃಹಿಣಿಗೆ ಜೀವನದಲ್ಲಿ ಬೇಕಾಗಿರುವುದು ಪ್ರೀತಿ ಒಂದೇ... ಅದೇ ಇಲ್ಲ... ತನ್ನ ಖಾಲಿ ಜೀವನವನ್ನು ಕೊನೆಗೊಳಿಸಿಕೊಂಡರೆ ತಪ್ಪಿಲ್ಲ...

ಚಿತ್ರಾ said...

ವಾಸ್ತವದ ಜೊತೆಗೆ ಒಂದು ಕನಸನ್ನೂ ಕಟ್ಟಿ ಕೊಳ್ಳುತ್ತಾ
ಬದುಕುವವರು ಬಹಳ ಜನ. ಜೀವನ ನಮ್ಮಿಷ್ಟದಂತೆಯೇ ಇರಬೇಕೆಂದಿಲ್ಲವಲ್ಲ ? ಆಗ ಕಟ್ಟಿ ಕೊಳ್ಳುವ ಕನಸುಗಳು ಏನೋ ಒಂದು ಸಮಾಧಾನ ಕೊಡುತ್ತವಾ?
ಆದರೆ ಅದು ವಾಸ್ತವವನ್ನು ಮಸುಕಾಗಿಸಿ ಜೀವನವನ್ನೇ ಕೊನೆಗೊಳಿಸುವಷ್ಟು ಬಲವಾಗಿ ಬಿಡುವುದೇ?
ನನ್ನ ಪರಿಚಯದಲ್ಲೂ ಇಂಥ ಹಲವು ಮುಖಗಳನ್ನೂ ಕಂಡಿದ್ದೇನೆ !
ಚಂದದ ಕಥೆ . ಅಂತ್ಯ ಮಾತ್ರನೋವು ತಂದಿತು . ಆದರೆ ಅದಕ್ಕೆ ಪರ್ಯಾಯವಿತ್ತೆ?

sunaath said...

ಜೀವಕ್ಕೆ ತಂಪು ಕೊಡುವುದೇ ಪ್ರೀತಿಯ ಉದ್ದೇಶ. ಆದರೆ ಪ್ರೀತಿಯ ಸಂಬಂಧ ಅನೇಕ ಬಗೆಯದಾಗಿರಬಹುದು. ಇಂತಹ ಮಧುರ ಸಂಬಂಧವನ್ನು ಮುಚ್ಚಿಡುವಂತಹ ಪರಿಸ್ಥಿತಿಯನ್ನು ಹಾಗು ಅದರ ದುರಂತವನ್ನು ಸರಳವಾಗಿ, ಸುಂದರವಾಗಿ ಚಿತ್ರಿಸಿದ್ದೀರಿ. ಅಭಿನಂದನೆಗಳು.

Ittigecement said...

ಪ್ರೀತಿಯ ಚಿನ್ಮಯ...

ಈ ಕಥೆಯನ್ನು ನಿರೂಪಕಿಯಾಗಿ.. ನಾಯಕಿಯ ಮನದಾಳದ ಕಥೆಯಾಗಿ ಬರೆಯೋಣ ಅಂತ ಅಂದುಕೊಂಡಿದ್ದೆ..

ಕಥೆ ಕೇಳಿದ ನನ್ನಾಕೆ..
ನನ್ನ ಸಹೋದರಿಯರಿಬ್ಬರು..
ಗೆಳೆಯ ನಾಗೂ.. ಸುತರಾಮ್ ಒಪ್ಪಲಿಲ್ಲ..

"ಹೆಣ್ಣು ಮಕ್ಕಳು ಎಷ್ಟೇ ಮುಂದುವರೆದಿದ್ದಾರೆ ಅಂದರೂ..
ಅವಕಾಶ ಸಿಕ್ಕಲ್ಲಿ ಸಂತೋಷ ಪಡುವವರು ಶೆಕಡವಾರು ಕಡಿಮೆ ಇದ್ದಾರೆ...

ಕಥಾವಸ್ತುವನ್ನು ಹೆಣ್ಣು ಹೇಳಿದಂತಿದ್ದರೆ ಸಹಜತೆಯಿಲ್ಲ.."
ಅಂತ ಮುಖದ ಮೇಲೆ ಹೊಡೆದ ಹಾಗೆ ಹೇಳಿಬಿಟ್ಟರು..

ಈ ಕಥೆಯನ್ನು ಗಂಡು ಹೇಳಿದ ಹಾಗೆ ಹೇಳಿದಲ್ಲಿ ನನ್ನ ಕಥೆ ಅಂತ ತಿಳಿದುಕೊಳ್ಳುವ ಸಂಭವವೂ ಇತ್ತು..

ಆಗ ಸಹಾಯ ಮಾಡಿದ್ದು "ಟಿವಿ ನಿರ್ದೇಶಕ"
ಇದು ಟಿವಿ ನಿರ್ದೇಶಕನ ಕಥೆಯಾದಲ್ಲಿ ಅಂಥಹ ಸಂಭವ ಕಡಿಮೆ ಅಂತ ಎಲ್ಲರ ಅಭಿಮತ ಬಂತು...

ನನಗೆ ತಮ್ಮ ಅನುಭವ ಹೇಳಿದ ಹಿರಿಯರೂ ಸಹ ಇದನ್ನು ಒಪ್ಪಿದರು...

ಹೀಗೆ ಈ ಕಥೆ ಹೆಣೆಯಲ್ಪಟ್ಟಿತು....

ಕಳೆದ ತಿಂಗಳು ಈ ಕಥೆ ಬರೆಯ ಬೇಕಿತ್ತು...

ಮನಸ್ಥಿತಿ..
ಮೂಡ್ ಅಂತ ಒಂದು ಇರುತ್ತದಲ್ಲ..

ಅದು
ನಮಗೆ ಬೇಕಾದಾಗ ಸಿಗುವಂತಿದ್ದರೆ ಎಷ್ಟು ಸೊಗಸಿತ್ತು ಅಲ್ಲವಾ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...

[NENapu] said...

ಸರಿಯಾದರೂ ಸರಿ... ತಪ್ಪಾದರೂ ಸರಿ..
ನೀವು ಬರೆದೆದಕ್ಕೆಲ್ಲ ಸಮ್ಮತಿ ವ್ಯಕ್ತ ಪಡಿಸಿ, ಓದುವದೊಂದೆ ನಮಗೆ ಗೊತ್ತು ಪ್ರಕಾಶಣ್ಣ.

Sudha ChidanandaGowda said...

ಓದಿದೆ. ತುಂಬ ಚೆನ್ನಾಗಿದೆ ಕಥೆ. bold & realistic. ಇಷ್ಟವಾಯ್ತು ನಂಗೆ. ನಿಜಕ್ಕೂ ಇದು ಯಾಕಾಯ್ತು, ಹೇಗಾಯ್ತು ಎಮದೆಲ್ಲ ಚರ್ಚಿಸುವುದು ಮುಖ್ಯವಲ್ಲ. ಹೀಗಾಗಿಯೇ ಬಿಡ್ತದಲ್ಲ ಅನ್ನೋದೇ ಮುಖ್ಯ. ಸಹರದಯರಾಗಿದ್ದರೆ ಆತ್ಮಹತ್ಯೆಯನ್ನು ತಡೆಯುವ ಪ್ರಯತ್ನ ಮಾಡಬಹುದು. ಅದು ಅಗತ್ಯ ಕೂಡ. ಪ್ರಾಯಶ; ಮಹಿಳೆಗೆ ಈ ತರದ್ದನ್ನು ನಿಭಾಯಿಸಲು ಬರುವುದಿಲ್ಲವೇನೋ..ಹಾಗೆಯೇ ಪತಿಯಾದವನಿಗೂ ಇದನ್ನು ಹೇಗೆ ತೆಗೆದುಕೊಳ್ಳಬೇಕೋ ಗೊತ್ತಾದೆ, ದಿಢೀರನೆ ಅವಳನ್ನು ಅಪರಾಧಿ ಅನ್ನೋ ರೀತಿಯಲ್ಲಿ ನೋಡಿದಾಗ ಅವಳಿಗೆ ಅದು ಇಷ್ಟವಾಗದೆಯೂ ಹೋಗಬುಹುದು. ಎಲ್ಲಕ್ಕಿಂತ ಮುಖ್ಯ ಇಂಥವನ್ನು ಅತೀ ಮಡಿವಂತಿಕೆ ತೋರದೆ, ಓಪನ್ನಾಗಿ ಹೇಳುವುದೇ ಮೊದಲ ಅಗತ್ಯ. ಅಂಥದ್ದೊಂದು ಪ್ರಯತ್ನ ನೀವು ಮಾಡಿದ್ದೀರಿ. ಅಭಿನಂದನೆ ನಿಮಗೆ. ಒಳ್ಳೆ ಕಥೆ. keep writing. good luck.

Rajesh said...

ಕಥೆ ಓದಿದ ನಂತರ ಮಾಡಿದ ಮೊದಲ ಕೆಲಸವೆಂದರೆ ನನ್ನ ಮಡದಿಗೆ ಆರ್ಟಿಕಲ್ ಲಿಂಕ್ ಫಾರ್ವರ್ಡ್ ಮಾಡಿದ್ದು ... ಈ ರಸದೌತಣಕ್ಕೆ ಧನ್ಯವಾದ ಸರ್
.. ನಿಮ್ಮ ಅಭಿಮಾನಿ ರಾಜೇಶ್ ಆನಗೋಡು ಮೇಲ್ಮನೆ

Ittigecement said...

ಬದರಿ ಭಾಯ್....

ಮಾತುಕತೆಯ..
ನಾಲ್ಕುವರ್ಷದ ಸಂಬಂಧಕ್ಕೆ.....
ಒಂದು ಆತ್ಮೀಯ ಬಾಂಧವ್ಯಕ್ಕೆ ಮುಕ್ತಾಯ ಹಾಡಲು ನಿಶ್ಚಯಿಸುತ್ತಾರೆ...

ತಮ್ಮ..
ತಮ್ಮ ಕುಟುಂಬದ ಜೊತೆಇರಲು ನಿರ್ಣಯಿಸುತ್ತಾರೆ..

ಆಗ ಹುಡುಗಿಯ ಸಾವು ಸಂಭವಿಸುತ್ತದೆ..

ಅದು ಕೊಲೆಯೊ.. ಆತ್ಮ ಹತ್ಯೆಯೊ .. ಗೊತ್ತಿಲ್ಲ..!

ಏನೇ ಆಗಿದ್ದರೂ ನಾಯಕನಿಗೆ...
ಅವನ ಖ್ಯಾತಿಗೆ ಧಕ್ಕೆ ತಗಲುವದಂತೂ ಹೌದು... !

ವಿಷಯ ಅದಲ್ಲ..

ನಮ್ಮ ನಡುವೆ
ಇಂಥಹ ಎಷ್ಟೋ ಸಂಬಂಧಗಳಿವೆ..
ಹಾಗಂತ ಈ ಕಥೆ ಬರೆದ ಮೇಲೆ ಗೊತ್ತಾಯಿತು...

ನನ್ನ ಗೆಳೆಯರಲ್ಲೇ ....
ಅನೇಕರು ಒಪ್ಪಿಕೊಂಡು ಬಿಟ್ಟರು !!!!!!!!

ಇಂಥಹ ಸಂಬಂಧಗಳು..... ಬಾಂಧವ್ಯಗಳಾಗಿ...
ಮನೆಯವರಿಗೆ ಗೊತ್ತಿದ್ದು..
ಒಂದು ಎಲ್ಲೆಯ ಒಳಗಿದ್ದಲ್ಲಿ ತಪ್ಪಲ್ಲ ಎನ್ನುವದು ನನ್ನ ಅಭಿಪ್ರಾಯ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ನಮನಗಳು.... ಬದರಿ ಭಾಯ್....

ಕಾವ್ಯಾ ಕಾಶ್ಯಪ್ said...

ಚೊಲೊ ಇದ್ದು... ಆದ್ರೆ ಪಾಪ ಆ ಹೆಣ್ಣಿನ ಸಾವು ಬೇಜಾರಾತು ... :(

bilimugilu said...

kathe chennaagide Prakash Ji.
Akrama SambandhagaLu - idarinda oLetaadaddu noDiruvudu, kELiruvudu tumbaa kammi.
AvaLa maatugaLu ishtavaaytu, ಕಿಡಕಿ ಮುಚ್ಚಿದ ನನ್ನ ಕಿಚನ್ನಿನ ದಿನಗಳಲ್ಲಿ ಬೆಳಕು ಹುಟ್ಟಿಸಿದವನು ನೀನು! intha ondu aalOchanege, preethige (attention anthaloo parigaNisabahudu), kaathoreyuva heNNu makkaLu bahaLashtiddaare!!
Katheya anthya / twist also has a message. Idanna hege bekaadaru tiLiyabahudu. Saavu yaakaayitu / hegaayitu annuva oohe odugarige bittiddu katheya jaaNathana.
Jai Ho, Jai Ho :)

Anonymous said...

"ಇಂಥಹ ಸಂಬಂಧಗಳು..... ಬಾಂಧವ್ಯಗಳಾಗಿ...
ಮನೆಯವರಿಗೆ ಗೊತ್ತಿದ್ದು.. ಒಂದು ಎಲ್ಲೆಯ ಒಳಗಿದ್ದಲ್ಲಿ ತಪ್ಪಲ್ಲ" ಎನ್ನುವ ಉತ್ತಮ ಸಂದೇಶ ಸಾರಿದ ರವಾನಿಸಿದ ತಮಗೆ ಹೃದಯ ಪೂರ್ವಕ ಧನ್ಯವಾದಗಳು. ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಇಂತಹ ಕಥನದ ಮೂಲಕ ತಮ್ಮ ತಮ್ಮ ನಡೆಯನ್ನು ಸಿಂಹಾವಲೋಕನ ಮಾಡಿಕೊಳ್ಳಲು ಇದೋದು ಉತ್ತಮ ಅವಕಾಶ ಎಂದು ಭಾವಿಸುತ್ತೇನೆ- ಲಲಿತ ರವಿಶಂಕರ್.ಟಿ.ಸಿ.

ಭಾವಲಹರಿ said...

ಮನೋ ವಿಶ್ಲೇಷಕ ಬರಹ, ಇಲ್ಲಿ ಯಾರದು ತಪ್ಪಿಲ್ಲ; ನೋಡುವ ಅನುಮಾನಿಸುವ ಕಣ್ಣುಗಳು ಸತ್ಯದ ಅರಿವಿಲ್ಲದೆ ಮತ್ತೊಬ್ಬರ ವ್ಯಕ್ತಿತ್ವವ ಅಳೆಯುವುದು ಸರಿಯಲ್ಲ. ತುಂಬಾ ಚೆನ್ನಾಗಿ ಅರ್ಥೈಸಿದ್ದೀರಿ.

ಭಾವಲಹರಿ said...

ಮನೋ ವಿಶ್ಲೇಷಕ ಬರಹ, ಇಲ್ಲಿ ಯಾರದು ತಪ್ಪಿಲ್ಲ; ನೋಡುವ ಅನುಮಾನಿಸುವ ಕಣ್ಣುಗಳು ಸತ್ಯದ ಅರಿವಿಲ್ಲದೆ ಮತ್ತೊಬ್ಬರ ವ್ಯಕ್ತಿತ್ವವ ಅಳೆಯುವುದು ಸರಿಯಲ್ಲ. ತುಂಬಾ ಚೆನ್ನಾಗಿ ಅರ್ಥೈಸಿದ್ದೀರಿ.

Niharika said...

Kathe thumba chennagi bandide Anna. Egina dinagalalli e rithiyavaru thumba sigtare. Always ultimate sufferers are "GIRLS".
Adikke Gaade Maathu helirodu ansutte "Batte mullinamele bidru, Mullu batte mele bidru hariyodu Battene".

Unknown said...

ಪ್ರಕಾಶಣ್ಣ ಕಥೆ ತುಂಬಾ ಚನ್ನಾಗಿದೆ.......

"ಕಾರಣವಿಲ್ಲದೆ ಹುಟ್ಟುತ್ತದೆ ಪ್ರೀತಿ..
ಹಾಗೆ ಕಾರಣವಿಲ್ಲದೆ ದ್ವೇಷವೂ ಹುಟ್ಟಿಕೊಳ್ಳುತ್ತದೆ..

ಮರೆಯ ಬಹುದು... ಕಾಲ ಮರೆಸುತ್ತದೆ...

ಮನಸ್ಸು ಗಟ್ಟಿ ಮಾಡಿಕೊ..."

ಈ ಸಾಲುಗಳು ಮನಸನ್ನು ಮುಟ್ಟಿತು.....

balasubramanya said...

ಬಹಳ ಚಂದದ ಕಥೆ, ಸನ್ನಿವೇಶಗಳು ಬಹಳ ನಿಜವಾಗಿ ಚೆನ್ನಾಗಿದೆ , ಇಷ್ಟವಾದ ನಿರೂಪಣೆ, ಪಾತ್ರಗಳ ನಿರ್ವಹಣೆ ವಾಸ್ತವತೆಗೆ ಹತ್ತಿರವಾಗಿದೆ ,ಗುಡ್ ಪ್ರಕಾಶಣ್ಣ

shubha hegde said...

ಕಥೆ ವಾಸ್ತವಿಕತೆಗೆ ಹತ್ತಿರವಾಗಿದೆ.
ಇಂದಿನ ಪತಿ ಪತ್ನಿಯರ ಸಂಬಂಧ, ಇವುಗಳ ಮಧ್ಯ ಸಾಮಾಜಿಕ ತಾಣಗಳ ಪಾತ್ರ, ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಸಮಾಜ, ಸಮಾಜದ ಮೌಲ್ಯಗಳು,
ತಮ್ಮ ತಮ್ಮ ಸಂಸಾರ ಮನೆ, ಪತ್ನಿ, ಮಕ್ಕಳು, ಕುಟುಂಬ ಪ್ರೀತಿ, ಇವುಗಳ ಮಧ್ಯೆ ಪ್ರೀತಿಗಾಗಿ ಹಂಬಲಿಸುವ ಮನಸ್ಸು,
ಇಲ್ಲಿ ತಪ್ಪು ಯಾರದ್ದು ಅಂತ ನಿರ್ಧಾರ ಮಾಡುವದು ಕಷ್ಟ.
ಕಥೆಯನ್ನು ಪೂರ್ತಿಯಾಗಿ ಓದಿದ ಮೇಲೆ ಏನು ಪ್ರತಿಕ್ರಿಯಿಸಬೇಕು ಅಂತ ಗೊತ್ತಾಗುವದಿಲ್ಲ. ಕಥೆ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ.
ಕಥೆಯ ಗುಂಗು ಮನಸ್ಸಲ್ಲಿ ಉಳಿದುಬಿಡುತ್ತದೆ.
ಚಂದದ ಕಥೆಗಾಗಿ ಧನ್ಯವಾದಗಳು.

Asha said...

Prakashanna, nanna friend obbala kate nenapaatu, 2 varshada hinde avalu ide tara anubhavavanna share maadikondaga naanu artane maadikollade eneno heligidi.. tap maaddi anta eega anastu..

shubha hegde said...

You have narrated this story very beautifuly. concept is nearest to the reality.. subject is little controversial but still often hearing to happening about such emotional relationship..It is difficult to judge as ' valid or good relationship' .. here is a moral dilemma with regards to such relationship.. we have to think whether it is necessary to look for outside our marital frame. however, in some situations made misleads towards immoral things..'But better to find a candle than to curse and die with the darkness, here also he had lighten her candle of dreams, coloured her empty sky with full of stars.. and became gate of all their secrets and feelings.. but end is very painful..after they decided to strengthen their family frame and and their welfare towards an ideal family and being a part of an ideal society unfortunately one part of the frame had broked... u have put good awarness about such emotional relationship..hmm 'every thing has a limit'.. good story.

Nagaraja Somayaji said...

anna channgide kathe :)

ನೂತನ said...

ಪಾಪ....ಯಾಕೋ ಈ ನಡುವೆ ಈ ಪ್ರೀತಿ ಎನ್ನುವುದು ಬಡಪಾಯಿ ಶಬ್ದ ಅನ್ನಿಸುತ್ತಿದೆ.

ಇಲ್ಲದಿದ್ದರೆ ಹೀಗಾ?

ಇದೆಂಥಾ ಸಂಬಂಧ? ಸಂಬಂಧವೇ ಇಲ್ಲದ್ದು?

ಬರಿಯ ಗಾಳಿಮೇಲಿನ ಮಾತುಗಳು...
ಬರಹಗಳು...
ಚಿತ್ರಗಳು...

ಜೀವಪಡೆದು ಜೀವನದ ಭಾಗವಾಗುವುದಾದರೂ ಹೌದ?

ನಿಜಬದುಕಿನ ಭಾಗವನ್ನೇ ನಿರಾಕರಿಸುವಷ್ಟು ಈ ಮನುಷ್ಯರು ಹಚ್ಚಿಕೊಳ್ಳುವುದು ಹೌದ?

ವಿಚಿತ್ರ ಈ ಮನ್ಷ... ಅಲ್ವ ಪಕ್ಕೂಮಾಮ?

SANTOSH KULKARNI said...

Kate chennagide mattu niroopaneyantu super...