Friday, April 11, 2014

..... ಬೇಲಿ .....

"ಪ್ರೀತಿಯನ್ನು  ... 
ಹೇಗೆ ಮಾಡಬೇಕು ಗೊತ್ತಾ ?

ನಮ್ಮವರ ದೌರ್ಬಲ್ಯಗಳನ್ನು..

ನಮ್ಮ 
ಪ್ರೀತಿಯನ್ನಾಗಿ ಮಾಡ್ಕೋಬೇಕು..

ಅಷ್ಟು ಪ್ರೀತಿಮಾಡಿದರೆ..

ಎಲ್ಲ 
ಸಂಬಂಧಗಳು ಮಧುರವಾಗಿರುತ್ತವೆ..."

ಹುಡುಗ 

ಗಂಭೀರವಾಗಿ ಸಭಿಕರತ್ತ ನೋಡಿದ,..

"ವಿಚ್ಛೇಧನಗಳು 

ಯಾಕೆ ಆಗುತ್ತವೆ ಗೊತ್ತಾ ?.... 

ನಮ್ಮ ಸಂಗಾತಿ ....

ನಮಗಾಗಿ ಹೀಗಿರಬೇಕು ಎನ್ನುವ ಸ್ವಭಾವ...

ಸಂಗಾತಿ ಬಗೆಗಿನ

ನಿರೀಕ್ಷೆಗಳು..

ನಿರೀಕ್ಷೆಗಳ ಬದಲಾಗಿ ....

ನಾವೇನು ಮಾಡಬೇಕು 
ಎನ್ನುವದನ್ನು ಮರೆತುಬಿಡುತ್ತೇವೆ...

ಸಂಗಾತಿ ಬಗೆಗಿನ 

ನಮ್ಮ ಕರ್ತವ್ಯಗಳನ್ನು ಮರೆತು....
ನಮ್ಮ ನಿರೀಕ್ಷೆಗಳೇ ನಮ್ಮ ಸಂಬಂಧಗಳನ್ನು ಕೊಲ್ಲುತ್ತವೆ..."

ಎಷ್ಟು ಚಂದ ಮಾತಾಡ್ತಾನೆ ಈ ಹುಡುಗ.. !


ಹುಡುಗ ಆಕರ್ಷಕವಾಗಿದ್ದ...

ಬುದ್ಧಿವಂತ...

ಯಾಕೋ ಮಾತನಾಡಿಸಬೇಕು ಅನ್ನಿಸ್ತು...


ನಿಜ ಹೇಳ್ತೀನಿ..

ಬಹಳ ನಾಚಿಕೆ.. ಆತಂಕ ಆಯ್ತು..

"ನೀವು ಬಹಳ ಚಂದ ಮಾತಾಡ್ತೀರಿ...!!.. "


ಹುಡುಗನ ಕಣ್ಣುಗಳು ಮಿನುಗುತ್ತಿದ್ದವು..


"ತುಂಬಾ ಜನ 

ಅಭಿನಂದನೆ ಹೇಳಿದ್ರು...

ಆದರೆ ....

ಅತ್ಯಂತ ಖುಷಿಯಾಗಿದ್ದು ನಿಮ್ಮ ಪ್ರತಿಕ್ರಿಯೆಯಿಂದ..."

"ಯಾಕೆ...?"


"ಚಂದ 

ಅಂದರೆ ನನಗೆ ಬಲು ಇಷ್ಟ..

ಚಂದಿರನಂತೆ 

ಚಂದ ಇದ್ದವರು ಮತ್ತೂ ಇಷ್ಟ..!

ನೀವು ಚಂದ ಇದ್ದೀರಿ....".. 


ಈ ನಾಚಿಕೆಯಿಂದ ಆಗುವಷ್ಟು ಎಡವಟ್ಟುಗಳು ಅಷ್ಟಿಷ್ಟಲ್ಲ...!


ಏನೇನೊ ಮಾತನಾಡಬೇಕು ಅಂದುಕೊಂಡಿದ್ದೆ...


ಆಗಲಿಲ್ಲ..


ಅಲ್ಲಿ 

ನಿಲ್ಲಲಾಗದೆ ಓಡಿಹೋಗಿಬಿಟ್ಟೆ...!

ಹುಡುಗ ಓದಿನಲ್ಲೂ ಮುಂದು...

ಕ್ಲಾಸಿನಲ್ಲಿ ಆಗಾಗ ನನ್ನೆಡೆಗೆ ನೋಡುವದು ಗಮನಕ್ಕೆ ಬಂತು...

"ಯಾಕೆ ....

ನಾವಿಬ್ಬರೂ ಸ್ನೇಹಿತರಾಗಬಾರದು...?"

ನಾನು ತಲೆ ತಗ್ಗಿಸಿದೆ..


ಹಾಳಾದ್ದು ...

ಈ ಎದೆಯ ಢವ.. ಢವ...!
ಮಾತನಾಡಲು  ಕೊಡ್ತಾ ಇಲ್ಲ  ನೋಡಿ...!

"ಒತ್ತಾಯವಿಲ್ಲ..

ಬೇಸರವಾಗಿದ್ದಲ್ಲಿ ಕ್ಷಮಿಸಿಬಿಡಿ..."

"ಬೇಸರವೇನಿಲ್ಲ..

ಜನ ಅಪಾರ್ಥ ಮಾಡಿಕೊಂಡರೆ ಅಂತ..."

"ಅಯ್ಯೋ..

ಈ ಜನಕ್ಕೇನು...?

ಅವರಿರೋದೆ ಕೊಂಕು.. ಡೊಂಕು  ಹೇಳೋಕೆ...


ನಮ್ಮ ಮನಸ್ಸು..

ಹೃದಯ ಸ್ವಚ್ಛವಾಗಿದ್ದರೆ ಸಾಕು..

ಚಂದದ ಸ್ನೇಹ ನಮ್ಮದಿರಲಿ.."


ಎಷ್ಟು ಖುಷಿ ಆಯ್ತು ಗೊತ್ತಾ !


ಅವತ್ತು..

ದಿನವಿಡಿ ಹಾಡು ಗುನುಗುತ್ತಿದ್ದೆ...

ಹುಡುಗ ಬಹಳ ಸಹಾಯ ಮಾಡುತ್ತಿದ್ದ..


ಕ್ಲಾಸಿನಲ್ಲಿ ನೋಟ್ಸ್ ಕೊಡುವದು..

ಒಳ್ಳೊಳ್ಳೆ ಪುಸ್ತಕಗಳನ್ನು ಕೊಡುವದು...

ಅವನ ತುಂಟತನ ಬಹಳ ಇಷ್ಟವಾಗುತ್ತಿತ್ತು..


"ಹುಡುಗಿ..

ಒಂದು ಮಾತು ಕೇಳ್ತೀನಿ..."

"ಕೇಳು.."


"ನೀನು 

ಹೆಣ್ಣು ಅಂತ ... 
ಮೊದಲಬಾರಿಗೆ  ನಿನಗೆ ಅನ್ನಿಸಿದ್ದು  ಯಾವಾಗ...?"

ಆತನೇನೊ 

ನಿರಾಳವಾಗಿ ಪ್ರಶ್ನೆ ಕೇಳಿಬಿಡ್ತಿದ್ದ..

ನನಗೆ 

ನಾಚಿಕೆಯಾಗಿ..
ಮುದುಡಿ ಮುದ್ದೆಯಾಗಿ ಬಿಡ್ತಿದ್ದೆ..

"ಹೆಣ್ಣಿನ ಬಳಿ 

ಎಷ್ಟೆಲ್ಲ ಚಂದ ಇದೆ ಮಾರಾಯ್ತಿ...!!... "

"ಏನೇನು ಚಂದ..?... "


"ನಾಚಿಕೆ ..

ಕೋಪ..
ಕೊಂಕು ನೋಟ...
ನಗು.. 
ಕಿರು ನಗು..!

ಬೇಸರವಾದಾಗ.. 

ತುಟಿ 
ಕಚ್ಚುತ್ತ ಇರ್ತೀಯಲ್ಲ... 
ಅದೂ ಕೂಡ ಚಂದ ಕಣೆ...!!... "

ನನಗೆ ಹೇಗೊ.. ಹೇಗೊ ಆಗುತ್ತಿತ್ತು...


" ನನ್ನ 

ಹುಚ್ಚು ಹುಚ್ಚು ಪ್ರಶ್ನೆ 
ನಿನಗೆ ಕಷ್ಟವಾಗ್ತದೆ ಅಂತ ಗೊತ್ತು..

ದಿನಕ್ಕೊಮ್ಮೆಯಾದರೂ ನಿನ್ನ ನಾಚಿಕೆ ನೋಡಬೇಕು..

ಹಾಗಾಗಿ ಎಡವಟ್ಟು ಪ್ರಶ್ನೆ ಕೇಳ್ತೀನಿ..

ಹುಡುಗಿ...

ಈ ನಿನ್ನ ನಾಚಿಕೆ ಇದೆಯಲ್ಲ..!

ವಾಹ್..!!


ನಿನ್ನ ನಾಚಿಕೆಯ ಅಭಿಮಾನಿ ನಾನು ಕಣೆ..."


ನನಗೆ ಮತ್ತೂ ನಾಚಿಕೆ ಆಯ್ತು..


ನಮ್ಮ ಭೇಟಿ...

ನಮ್ಮಿಬ್ಬರ ಮಾತುಕತೆ ಕಾಲೇಜಿನಲ್ಲೆಲ್ಲ ಹರಡಿತು..

ಅದು..

ಕಾಲೇಜಿನ ಕೊನೆಯ ವರ್ಷದ ಕೊನೆಯ ದಿನಗಳು...

ಪ್ರಿನ್ಸಿಪಾಲರು ನಮ್ಮನ್ನು ಕರೆಸಿದರು..


ಹುಡುಗ ಎದೆಯುಬ್ಬಿಸಿ ಹೇಳಿದ..


"ನಾವಿಬ್ಬರೇ 

ಮಾತನಾಡುತ್ತೇವೆ ನಿಜ..
ನಮ್ಮಿಬ್ಬರದು ಪವಿತ್ರವಾದ ಸ್ನೇಹ..

ಆದರೆ ಎಂದೂ ಕೆಟ್ಟ ಯೋಚನೆ ಮಾಡಿದವರಲ್ಲ.."


ಅವನ ಮಾತಿಗೆ ನಾನೂ ಸಹ "ಹೂಂ" ಅಂದೆ... 


"ಒಬ್ಬ ಹುಡುಗಿ.. 

ಒಬ್ಬಹುಡುಗನ  
ಭೇಟಿ.. 
ಸ್ನೇಹವನ್ನು .. ಕೇವಲ ಸ್ನೇಹ ಅಂತ ಯಾರೂ ಒಪ್ಪುವುದಿಲ್ಲ..

ನಿಮ್ಮ ಸ್ನೇಹವನ್ನು ಕಾಲೇಜಿನ ಆವರಣದ ಹೊರಗಡೆ ಇಡಿ..


ನಿಮ್ಮಿಂದಾಗಿ 

ಕಾಲೇಜಿನ ವಾತಾವರಣ ಹಾಳಾಗುವದು ಇಷ್ಟವಿಲ್ಲ..."

ಹುಡುಗ 

ವಿದ್ಯಾರ್ಥಿ ಸಂಘದ ನಾಯಕನಾಗಿದ್ದ..

ಸಮಾಜವಾದ.. 

ಸಮಾನತೆ  
ನಮ್ಮ ದೇಶ... 
ಅಂತೆಲ್ಲ 
ನಮ್ಮ ಸಂಸ್ಕೃತಿಯ ಬಗೆಗೆ ಹೆಮ್ಮೆ ಪಟ್ಟುಕೊಳ್ಳುವವನಾಗಿದ್ದ..

ಹುಡುಗ ಅಂದು ಯಾಕೋ ಮುಖ ಬಾಡಿಸಿಕೊಂಡು  ಕುಳಿತಿದ್ದ.. 


"ಹುಡುಗಿ..

ನಮ್ಮಿಬ್ಬರದು ಒಳ್ಳೆಯ ಸ್ನೇಹ ಅಲ್ಲವಾ ?"

"ನಿಜ"


"ನಮ್ಮ 

ಮನೆಯ ಹಿರಿಯರು ನಮಗೆ  ಒಳ್ಳೆಯ ಸಂಸ್ಕಾರವನ್ನು ಕೊಟ್ಟಿದ್ದಾರೆ..

ಹಿರಿಯರ 

ಆ ಸಂಸ್ಕಾರದ ಬೇಲಿ ನಮಗಾಗಿ..
ನಮ್ಮ ಒಳಿತಿಗಾಗಿ.. 

ಅವರು ಕೊಟ್ಟ 

ಸ್ವಾಂತಂತ್ರ್ಯ... 
ಬೇಲಿಯನ್ನು  ಹಾರುವದಕ್ಕಲ್ಲ...

ಒಪ್ಪುವ ಮನಸ್ಸಿಗಿಂತ..


ಬಯಸುವ  ದೇಹಕ್ಕಿಂತ ... 


ನಮಗೆ ನಾವೆ ಹಾಕಿಕೊಂಡ .. 

ನೀತಿ..
ನಿಯತ್ತು .. ಬಲು ದೊಡ್ಡದು..

ನಿನ್ನ 

ಚಂದದ ಸ್ನೇಹವನ್ನು  ಯಾವಾಗಲೂ ಮರೆಯುವದಿಲ್ಲ.."

ಹುಡುಗ ಮತ್ತಷ್ಟು ಇಷ್ಟವಾದ..


ಬದುಕೇ ಹೀಗೆ..

ಓಡುವ ಅದರ ವೇಗ ಗೊತ್ತೇ ಆಗುವದಿಲ್ಲ..

ಹುಡುಗನ ಭೇಟಿ..

ಅವನ ತುಂಟಾಟದ ಮಾತುಗಳು..

ನಾನು ನಾಚಿಕೆ ಪಟ್ಟಿದ್ದು..

ಆತ ಕಣ್ ತುಂಬಾ ... 
ನನ್ನ ನಾಚಿಕೆಯನ್ನೇ ನೋಡುತ್ತಿದ್ದುದು..

ಅಪ್ಪ ನೋಡಿದ ಹುಡುಗನೊಂದಿಗೆ

ನನಗೆ ಮದುವೆಯಾಗಿದ್ದು..

ಮುದ್ದಾದ  ಪಾಪುವಾಗಿದ್ದು... 

ಇವೆಲ್ಲ ನಿನ್ನೆ ಮೊನ್ನೆಯ ಘಟನೆಯಂತಿದೆ..

ಮೊನ್ನೆ...

ನನ್ನ ಯಜಮಾನರಿಗೆ ಯಾವುದೋ ಸರಕಾರಿ ಕೆಲಸವಾಗಬೇಕಿತ್ತು...

ಲಂಚವಿಲ್ಲದೆ ಯಾವ ಕೆಲಸವೂ ಆಗುವದಿಲ್ಲವಲ್ಲ..


ಅಲ್ಲಿ 

ಈ ಹುಡುಗ ಸಿಕ್ಕಿದ್ದ..
ಬಹಳ ಸುಲಭವಾಗಿ ಕೆಲಸ ಮುಗಿಸಿಕೊಟ್ಟಿದ್ದ..
ನನ್ನ ಯಜಮಾನರಿಗಂತೂ ಅವನ ಬಗೆಗೆ ಬಹಳ ಗೌರವ ಹುಟ್ಟಿಬಿಟ್ಟಿತ್ತು..

ಅವನೀಗ ದೊಡ್ಡ ಅಧಿಕಾರಿ..


ಮತ್ತೆ ಅದೇ ಆಸಕ್ತಿಯಿಂದ ನನ್ನನ್ನು  ಮಾತನಾಡಿಸಿದ..


"ಸರ್...

ನಿಮ್ಮ ಮಡದಿ ಇದ್ದಾಳಲ್ಲ..

ನನ್ನ ಒಳ್ಳೆಯ ಸ್ನೇಹಿತಳು..

ತುಂಬಾ ತುಂಬಾ ಒಳ್ಳೆಯ ಗುಣ... ನಿಮ್ಮಿಬ್ಬರ ಜೋಡಿ ಅಪರೂಪದ ಜೋಡಿ..."

ನನ್ನ ಯಜಮಾನರಿಗೆ ಮತ್ತೂ ಖುಷಿಯಾಯಿತು..


ಅಂದಿನಿಂದ ಆತನ ಸಂಪರ್ಕ ಮತ್ತೆ ಜಾಸ್ತಿ ಆಯಿತು..


ತನ್ನ ಮಡದಿ..

ಸಂಸಾರವನ್ನೂ ಪರಿಚಯಿಸಿದ...

ದಿನಾಲೂ ಫೋನ್...

ಹರಟೆ... ಮಾತುಕತೆ... ನಗು... !

ಆತ ಬದಲಾಗಿಯೇ ಇರಲಿಲ್ಲ...

ಥೇಟ್ ಅದೇ ಕಾಲೇಜಿನ ಹುಡುಗ...!

ನಮ್ಮಿಬ್ಬರ ಕುಟುಂಬಗಳ ಭೇಟಿ ಶುರುವಾಯಿತು..


ನನ್ನ ಯಜಮಾನರ ಅನೇಕ ಕೆಲಸಗಳನ್ನು..

ಬಹಳ ಸುಲಭವಾಗಿ ಮಾಡಿಕೊಡುತ್ತಿದ್ದ..

ಅಂದು 

ಆತನೊಬ್ಬನೆ ನಮ್ಮ ಮನೆಗೆ ಬಂದಿದ್ದ..
ಯಾವುದೋ ಕಾಗದ ಪತ್ರಗಳನ್ನು ನನ್ನವರಿಗೆ ಕೊಡಲು..

ನನ್ನವ ಆಗಲೇ ಹೊರಗಡೆ ಹೋಗಿಯಾಗಿತ್ತು..


ಎಂದಿನಂತೆ ನಗುಮುಖದಿಂದ ಸ್ವಾಗತಿಸಿದೆ...


ಆತ 

ಎಂದಿನಂತೆ ಹಾಸ್ಯ..
ನಗುವಿನ ಮೋಡಿಯಲ್ಲಿದ್ದ..

ನಮಗೆ ಇಷ್ಟವಾದವರ.. 

ಹಾಸ್ಯ.. ನಗು ... 
ಮಾತುಕತೆ ಯಾವಾಗಲೂ ಖುಷಿಕೊಡುತ್ತದೆ.. 

"ನಿನ್ನ ಯಜಮಾನರು ತುಂಬಾ ಸೆಕ್ಸಿ ಇದ್ದಾರೆ ಕಣೆ..".


ನನಗೆ ಮತ್ತೆ ನಾಚಿಕೆ ಆಯ್ತು..


"ನಿನ್ನ ಹೆಂಡ್ತಿ ಕೂಡ ಚಂದ ಇದ್ದಾರೆ ಕಣೊ..!


ಪಾಪು ತುಂಬಾ ಮುದ್ದು ಮುದ್ದಾಗಿದೆ..

ಕಣ್ಣು ನಿನ್ನ ಥರಹ... 

ನೂರಾರು ಪ್ರಶ್ನೆಗಳ ಕಣ್ಣು..!!... "


ಹುಡುಗ  ಕಣ್ ಮುಚ್ಚಿ ನಕ್ಕ..


" ನನ್ ಹೆಂಡ್ತಿ ತುಂಬಾ ಚೆನ್ನಾಗಿದ್ದಾಳೆ..


ನೋಡುವದಕ್ಕೊಂದೇ ಅಲ್ಲ..

ಮನಸ್ಸೂ ಕೂಡ..

ಮದುವೆಯಾಗಿ 

ಇಷ್ಟು ವರ್ಷ ಆದರೂ .. .... 
ಸಂಸಾರ ಬೇಸರ ಬರಲಿಲ್ಲ ನೋಡು..."

" ನನ್ನ ಯಜಮಾನರೂ ಅಷ್ಟೆ..

ನನ್ನನ್ನು ತುಂಬಾ ಪ್ರೀತಿ ಮಾಡ್ತಾರೆ..

ಆಫೀಸಿನಲ್ಲಿದ್ರೂ ದಿನಕ್ಕೆ ಹತ್ತು ಬಾರಿ ಫೋನ್ ಮಾಡ್ತಾರೆ..


ಪಾರ್ಕು..

ಪಾನಿಪುರಿ... 

ಸಿನೇಮಾ..


ಹಾಡು.. ಸಂಗೀತ...!


ಬದುಕು ತುಂಬಾ ಸುಂದರ ಕಣೊ..."


ಮಾತನಾಡುತ್ತ ಜ್ಯೂಸ್ ತಂದೆ...


ಜ್ಯೂಸ್ ಕೊಡುವಾಗ 

ಟಿಪಾಯಿ ಕಾಲಿಗೆ ತಾಗಿ  ... 
ಸ್ವಾಧೀನ  ತಪ್ಪಿ ಅವನ ಮೇಲೆ ಬಿದ್ದೆ...

ಆತ ತಕ್ಷಣ ನನ್ನನ್ನು ಹಿಡಿದುಕೊಂಡ...


ನಾನು ಸಂಪೂರ್ಣವಾಗಿ ಅವನ ತೆಕ್ಕೆಯಲ್ಲಿದ್ದೆ...


ಹಿಡಿತ ಬಲವಾಗಿತ್ತು...


ಅವನ

ಬಿಸಿಯುರು ಕಿವಿಗೆ ತಾಗುತ್ತಿತ್ತು..

ನಾನು ಮುಚ್ಚಿದ್ದ ಕಣ್ಣನ್ನು ಮೆಲ್ಲಗೆ ತೆರೆದೆ..


ಆತ 

ನನ್ನನ್ನೇ ನೋಡುತ್ತಿದ್ದ..

ಮತ್ತೆ ನಾಚಿಕೆಯಾಯ್ತು..


ಕಣ್ ಮುಚ್ಚಿಕೊಂಡೆ..... 


ಆತ 

ಮೆಲ್ಲಗೆ ನನ್ನ ಕಿವಿಯಲ್ಲಿ ಉಸುರಿದ... 

"ಎಷ್ಟು ಚಂದವೆ ಈ ನಿನ್ನ ನಾಚಿಕೆ... !


ವಾಹ್  !.. "


ಆತನ ಹಿಡಿತ ಹಿತವಾಗಿತ್ತು...


ದೇಹಲ್ಲೇನೋ ಕಂಪನ.... 

ಮೈ ಜುಮ್ ... ಎಂದಿತು.... !

ಅವನ 
ತುಟಿ .. 
ನನ್ನ ಕಣ್ಣ ರೆಪ್ಪೆಯನ್ನು ಚುಂಬಿಸಿತು...

ಬೇಡ..

ಬೇಡವೆಂದುಕೊಂಡೆ...

ಅವನನ್ನು 

ದೂಡಿ...
ದೂರವಾಗಬೇಕಿತ್ತು...   

ಮನಸ್ಸು ಕೇಳಲಿಲ್ಲ...


ನನ್ನ ಕೈಗಳು ಅವನನ್ನು ಬಳಸಿದವು....
{ಕಥೆ }
ದಯವಿಟ್ಟು ಪ್ರತಿಕ್ರಿಯೆಗಳನ್ನೂ  ನೋಡಿ... 

(ಈ ಕಥೆ ಬರೆದು ಬ್ಲಾಗಿನಲ್ಲಿ ಹಾಕುವಾಗ ಈ ಕಥೆಯನ್ನು ಮುಂದುವರೆಸಬಹುದೆನ್ನುವ ಕಲ್ಪನೆ ಕೂಡ ಇರಲಿಲ್ಲ..
http://dinakarmoger.blogspot.in/2014/04/blog-post_14.html 
ನಮ್ಮ ಪ್ರೀತಿಯ ಪಡೆಯಪ್ಪನ್ "ದಿನಕರ" ಈ ಕಥೆಯನ್ನು ಮುಂದುವರೆಸಿದ್ದಾರೆ..

33 comments:

Srikanth Manjunath said...

"ಸಮಾಜವಾದ..
ಸಮಾನತೆ
ನಮ್ಮ ದೇಶ...
ಅಂತೆಲ್ಲ
ನಮ್ಮ ಸಂಸ್ಕೃತಿಯ ಬಗೆಗೆ ಹೆಮ್ಮೆ ಪಟ್ಟುಕೊಳ್ಳುವವನಾಗಿದ್ದ.."

ಇದೆ ಲೇಖನ ಈ ಮೇಲಿನ ಸಾಲಿನ ಮೇಲೆ ನಿಂತಿದೆ ಎಂದು ಅರಿವಾಯಿತು. ಕಣ್ಣೆತ್ತಿ ಈ ಲೇಖನದ ಶೀರ್ಷಿಕೆ ನೋಡಿದೆ. ತಲೆ ಅಲ್ಲಾಡಿಸಿದೆ. ಇದಕ್ಕಿಂತ ಬೇರೆ ಶೀರ್ಷಿಕೆ ಇರಲು ಸಾಧ್ಯವೇ ಇಲ್ಲ.

ಬೇಲಿ ಹಾಕುವುದು ಏಕೆ. ನಮಗೆ ಇರುವ ಚಾಪಲ್ಯತೆ ಅಥವಾ ಇರುವ ಆಸೆ ಆಕಾಂಕ್ಷೆಗಳಿಗೆ ತೋರ್ಪಡಿಕೆಗೆ ಹಾಕಿಕೊಳ್ಳುವ ಒಂದು ಸುಳ್ಳು ಸುಳ್ಳು ಕಡಿವಾಣ. ಬೇಲಿ ಹಾಕುವಾಗಲೇ ಹಾಕುವಾತ ಹೇಳುತ್ತಾನೆ.. ಸರ್ ಇದನ್ನ ಸ್ವಲ್ಪ ಬಗ್ಗಿಸಿದರೆ ದಾಟಬಹುದು.. ಅಂತ ಅಂದ್ರೆ ಬೇಲಿ ಹಾಕುವಾಗಲೇ ಹಾರುವ ಉಪಾಯ.

ಕಥೆ ಅಂತ್ಯ ಅನ್ನಬಹುದಾದ ಆರಂಭ ಅರಗಿಸಿಕೊಳ್ಳಲು ಕಷ್ಟವಾದರೂ ಆಕೆ ಹೇಳುವ ಮಾತುಗಳು.. ಗಂಡ ಆಫೀಸ್ ನಲ್ಲಿದ್ದರು ಹತ್ತಾರು ಬಾರಿ ಫೋನ್, ಪಾರ್ಕು ಸಿನಿಮಾ, ಪಾನಿ ಪುರಿ ಹೀಗೆ ಬರಿ ಬಾಹ್ಯ ಆಕರ್ಷಣೆಯಲ್ಲಿ ತಳುಕು ಹಾಕಿಕೊಂಡ ಜೀವನ ಅನ್ನಿಸುತ್ತದೆ ಆಕೆಯದು. ಹಾಗಾಗಿ ಆಕರ್ಷಣೆಗೆ ಬಲಿಯಾಗಿ ಬೇಲಿ ಹಾರಿದ ನಾಯಕಿ ಎನ್ನುವ ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಸಂದೇಶ ನೆನಪಿಗೆ ಬಂತು. ಅಲ್ಲಿ ಏನೂ ಇಲ್ಲದೆ ಬೇಕಾದದ್ದಕ್ಕಾಗಿ ಬೇಲಿ ಹಾರಿದರೆ.. ಇಲ್ಲಿ ಎಲ್ಲವೂ ಇದ್ದು ಆಕರ್ಷಣೆಗೆ "ಮನೋದೇಹದ"ಆಕರ್ಷಣೆಗೆ ಒಳಗಾಗಿ ಬೇಲಿ ಜಿಗಿದ ನಾಯಕಿ ಆಗುತ್ತಾಳೆ.

ನಾಯಕ ಪುರಾಣ ಇರೋದು ಹೇಳೋಕೆ ಬದನೇಕಾಯಿ ತಿನ್ನೋಕೆ ತತ್ವದ ಆಸಾಮಿ ಎಂದು ನಾಯಕಿ "ಜಾರಿದ" ತಕ್ಷಣದ ಕ್ರಿಯೆಯಿಂದ ಅರಿವಾಗುತ್ತದೆ.

ಅಂತ್ಯದಲ್ಲಿ ಉಸಿರು ತೆಗೆದುಕೊಳ್ಳುವಂತೆ ಮಾಡಿರುವುದು ನಿಮ್ಮ ಲೇಖನದ ಸತ್ವ ಮತ್ತು ತಾಕತ್.

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಶ್ರೀ.....

ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದ್ದೆ..

ದೇಹ..
ಮನಸ್ಸುಗಳಿಗೆ ನಾವೇ ಹಾಕಿಕೊಂಡದ್ದು ಈ " ಬೇಲಿ.." . .

ಬೇಲಿ ಕಟ್ಟಿಕೊಂಡವನಿಗೆ ಗೊತ್ತು ಬೇಲಿಯ ತಾಕತ್ತು..
ದೌರ್ಬಲ್ಯ...

ಬೇಲಿಯನ್ನು ಭಂಗಮಾಡಲಿಕ್ಕಾಗಿಯೇ ಹಾತೊರೆಯುವ .
ಸಮಯ
ಸಂದರ್ಭಗಳು...

ರಾಮಾಯಣದಲ್ಲಿ
ಲಕ್ಷಣ ಅತ್ತಿಗೆಗಾಗಿ ಬೇಲಿ ಕಟ್ಟಿರಲ್ಲಿಲ್ಲ..
" ರೇಖೆ"ಯನ್ನು ಎಳೆದಿದ್ದ..

ದೇಹ..
ಮನಸ್ಸನ್ನು ಮೀರಿದ "ವಿವೇಕ"ವಿದ್ದಲ್ಲಿ
ಬೇಲಿ.. ಲಕ್ಷ್ಮಣ ರೇಖೆಗಳ ಅಗತ್ಯ ಬರುವದಿಲ್ಲ...

ಬೇಲಿಯ ಬದಲಿಗೆ ಕಂಡಿಯಿಲ್ಲದ ಗೋಡೆ ಕಟ್ಟಿದರೂ... ಉಪಯೋಗವಿಲ್ಲ...

ಮೊದಲ ಒದುಗ ನನ್ನಾಕೆ ...
ಮಂಗಳಾರತಿ ಎತ್ತಿದ್ದಾಳೆ...

"ಅಂತ್ಯ ಧನಾತ್ಮಕವಾಗಿರಬೇಕು...
ಈ ಥರಹ ಎಡವಟ್ಟು ಇರಬಾರದು " ಅಂತ..

ಪ್ರೀತಿಯ ಶ್ರೀಕಾಂತ್..
ಪ್ರೀತಿಯ ವಂದನೆಗಳು...

ಸಂಧ್ಯಾ ಶ್ರೀಧರ್ ಭಟ್ said...

Chanda kathe prakashanna ...

ಸಿಮೆಂಟು ಮರಳಿನ ಮಧ್ಯೆ said...

ಸಂಧ್ಯಾ ...

ಸರಿ...
ತಪ್ಪುಗಳ ವಿಶ್ಲೇಷಣೆ ಮಾಡುವದು ಕಷ್ಟ...

ಹಾಗಾದರೆ
ನೀತಿ.. ನೀಯತ್ತುಗಳು ಬೇಡವೆ ?....

ಬೇಲಿ ಎಲ್ಲಿರಬೇಕು ?
ರೇಖೆಯ ಪರಿಮಿತಿ ಎಷ್ಟು ?

ನಮ್ಮ ಧರ್ಮ ಹೇಳುತ್ತದೆ "ಕೆಟ್ಟ ವಿಚಾರ ಮಾಡುವದೂ ಕೂಡ ಕೆಟ್ಟ ಕೆಲಸ ಮಾಡಿದಂತೆ..."

ಮನಸ್ಸಿನಲ್ಲಿ ಬರುವ ಕೆಟ್ಟ ವಿಚಾರ ಕೂಡ..
ವ್ಯಭಿಚಾರ..
ಮಾನಸಿಕ ವ್ಯಭಿಚಾರ!...

ಮನಸ್ಸಿಗೂ ಬಣ್ಣಗಳಿರುತ್ತವಲ್ಲ...

ಆ ಬಣ್ಣಗಳ "ಅನಾವರಣದ ಪ್ರಯತ್ನ" ಈ ಕಥೆ...

ಪ್ರೀತಿಯ ವಂದನೆಗಳು ಸಂಧ್ಯಾ ಪುಟಾಣಿ...

Ashith said...

ಸುಮಾರು ವರ್ಷ ಕಟ್ಟಿದ್ದ ಬೇಲಿ ಕೇವಲ ಒಂದು ಸಣ್ಣ ಘಟನೆಯಿಂದ ಮುರಿದು ಬಿದ್ದದ್ದರಿಂದ ಮನಸ್ಸು ಎಷ್ಟು ದುರ್ಬಲ ಎಂಬುದು ಅರಿವಾಗುತ್ತದೆ. ಕೇವಲ ಒಂದು ಸಣ್ಣ ಘಟನೆ ಕೂಡ ನಮಗೆ ಕೆಲವರ ಬಗೆಗಿನ ಅಭಿಪ್ರಾಯಗಳನ್ನೇ ಬದಲಿಸಿಬಿಡುತ್ತದೆ.

ಮನಸ್ಸು ಹೃದಯವೆನ್ನುವುದು ಹೊರಗಿನಿಂದ ಸ್ವಚ್ಚವೆನಿಸಿದರೂ ಒಳಗಡೆ ಹುದುಗಿರುವ ಕೆಲವು ಭಾವನೆಗಳು ಹುಟ್ಟುವುದು ಸಾಂದರ್ಭಿಕ ಕಾರಣಗಳಿಂದ ಮಾತ್ರ.

ಕೇವಲ ಕಳೆದ ವಾರ ಓದಿದ ಒಂದು ವಾಕ್ಯ ನೆನಪಿಗೆ ಬಂತು "ಮಿತ್ರ ಮತ್ತು ಶತ್ರುಗಳು ಹುಟ್ಟುವುದು ಸಂದರ್ಭಗಳಿಗನುಸಾರವಾಗಿ ಮಾತ್ರವಲ್ಲದೆ ಬೇರೆ ಕಾರಣಗಳಿಂದಲ್ಲ"


ಸಾಂದರ್ಭಿಕವಾಗಿ ಅವರಿಬ್ಬರ ನಡುವೆ ಸ್ನೇಹ ಹುಟ್ಟಿತು. ಸಂಸ್ಕೃತಿಯ ನೆಪದಿಂದ ಸ್ನೇಹ ಪ್ರೀತಿಯಾಗಲಿಲ್ಲ. ಆದರೆ ಮತ್ತೆ ಸಾಂದರ್ಭಿಕ ಕಾರಣಗಳಿಂದ ಆದ ಅವರಿಬ್ಬರ ಭೇಟಿ ಮತ್ತು ಮುಂದೆ ನಡೆದ ಘಟನೆಗಳು ಒಳಗೆ ಹುದುಗಿರುವ ಪ್ರೀತಿ ಹೊರಗೆ ಬರಲು ಕಾರಣವಾಯಿತು.

ನಿಮ್ಮ ಪ್ರತಿ ಕಥೆಗಳಲ್ಲೂ ಇರುವ ತಿರುವು ಇಲ್ಲೂ ಇರುವುದರಿಂದಲೋ ಏನೋ ಈ ಕಥೆ ಇಷ್ಟವಾಯಿತು.

sunaath said...

ತುಂಬ ವಾಸ್ತವವಾದ ಕಥೆ. ಸಂಸ್ಕಾರಗಳು ಮನಸ್ಸಿನ ಮೇಲ್ಭಾಗದಲ್ಲಿದ್ದು ನಮ್ಮ ವರ್ತನೆಯನ್ನು ನಿಯಂತ್ರಿಸುತ್ತ ಇರುತ್ತವೆ. ಆದರೆ ಮನಸ್ಸಿನ ಒಳಭಾಗದಲ್ಲಿರುವ ದೈಹಿಕ ಬಯಕೆಗಳಿಗೆ ಅವಕಾಶ ಸಿಕ್ಕಾಗ, ಸಂಸ್ಕಾರಕ್ಕೆ ಸೋಲಾಗುತ್ತದೆ.

ಭಾಶೇ said...

WOW! :D

Sudarshan Hegde said...

ತಪ್ಪಿದ ಕೈಗಳಿಗೆ, ಮುಚ್ಚಿರುವ ಕಂಗಳಿಗೆ...
ನಾಳಿನ ಚಿಂತೆ ಇಲ್ಲವೇ?

ಪ್ರತಿದಿನವೂ ನಮ್ಮಿಷ್ಟದಂತೆ ಬದುಕಿ,
ಪ್ರತಿ ಕ್ಷಣವೂ ಖುಷಿಯಿಂದಿದ್ದರೆ,
ಪೂರ್ತಿ ಜೀವನವೂ ಸುಖಕರವಂತೆ...

ಜೀವನದಲ್ಲಿ ಬೇರೆಲ್ಲವೂ ಇದೆ,
ಸಂಸಾರದಲ್ಲಿನ ಪ್ರೀತಿ, ಯಾಂತ್ರಿಕವಾಗಿದೆ,

ಹೃದಯ ತುಂಬುವಂತಾ ಪ್ರೀತಿ ಈ ಕ್ಶಣದಲ್ಲಿ ಸಿಕ್ಕಿದೆ...
ನಾಳೆಗಾಗಿ ಬಿಡಬೇಕೋ? ಬಿಟ್ಟು ಮರುಗಬೇಕೋ?
ಹಿಡಿದಪ್ಪಬೇಕೋ? ಹಿಡಿದಪ್ಪಿ ನಾಳೆ ಮರುಗಬೇಕೋ?

ಮನಸ್ಸಿಗಾಗಿ ಬದುಕಬೇಕೋ? ಬೇಲಿಗಾಗಿ ಬದುಕಬೇಕೋ?
ಮನಸ್ಸಿಗಾಗಿಯೇ ಬದುಕಲಿ ಬಿಡಿ...
ಇರುವುದೆಷ್ಟು ದಿನ ಈ ಜಗದಲಿ...

ಸೂಪರ್ ಪ್ರಕಾಶಣ್ಣಾ...
ನಿಮ್ಮಿಂದ ಈ ತರಹದ ಕತೆಗಳು ಬರುತ್ತಿರಲಿ...
ನಮಗೆಲ್ಲಾ ನೈಜ ಜೀವನದ ಕಿರುನೋಟಗಳನ್ನಾ ಕೊಡುತ್ತಾ ಇರಲಿ..

Vrinda Bhat said...
This comment has been removed by the author.
Vrinda Bhat said...

Nice writing :)

Vrinda Bhat said...

Nice :)

ಜಲನಯನ said...

ತೋಟವೊಂದು ಮಾಲಿಕ ಜೊತೆಗೆ ಮಾಲಿ ಕಳಕಳಿಯ ಫಲ.
ತೋಟದ ಬೇಲಿಯಲ್ಲೇ ತೋಟದ ಫಸಲು
ಕದಿಯುವ ಮನಸಿರುವವನಿಗೂ ಬೇಲಿಯ ಬೇಲಿ
ನಿಯಂತ್ರಣ ಅಲ್ಲೇ ಹುಟ್ಟೋದು.
ಭಾವನೆಗಳಿಗೆ ಬೇಲಿಯಿಲ್ಲ ಎನ್ನುವುದಂತೂ ನಿಕ ಆದರೆ
ಅವನ್ನು ಹರಿಯ ಬಿಡುವ ಪರಿಗೆ ಬೇಲಿ..
ಬೇಲಿಯಿಲ್ಲದಿದ್ದರೆ ಆರಾಜಕತೆ
ಹುಚ್ಚು ವ್ಯಾಮೋಹಗಳ ಮೂಲಕ ಹಿಡಿತ ಮೀರಿದ ಹರಿವು -ಪರಿಣಾಮ ಅಲ್ಲೋಲ ಕಲ್ಲೋಲ, ಸುನಾಮಿ, ಭೂಕಂಪ, ಪ್ರವಾಹ.
ಪ್ರಕಾಶೂ...ಎಂದಿನಂತೆ ಹಿಡಿದಿಡುವ ಸಂಭಾಷಣೆ ಮತ್ತು ಕಥೆಯನ್ನು ಓದಿಸಿಕೊಂಡು ಹೋಗುವ ನಿರೂಪಣಾ ಶೈಲಿ ಬಹಳ ಇಷ್ಟವಾದವು.
ಇತ್ತೀಚೆಗೆ ನಮ್ಮ ಸೃಜನ ಶೀಲತೆ "ಫೇಸ್ಬುಕ್’ ಎಂಬ ಮಾಯಾ ಲೋಕದ ಭೂಲ್ ಭುಲೈಯ್ಯದಲ್ಲಿ ಕಳೆದು ಹೋಗುತ್ತಿದೆ...ಈ ಸಲ ಬಂದಾಗ ಒಂದು ಬ್ಲಾಗಿಗಳ ಪುನಃಮಿಲನ ಆಗಬೇಕು.

Badarinath Palavalli said...

ಪ್ರೀತಿಯ ಮತ್ತು ವಿಚ್ಛೇದನದ ವ್ಯಾಖ್ಯಾನವು ಸರಿಸುಮಾರು ಸರಿಯಾಗೆ ಇದೆ.
ಹೆಣ್ಣಿನ ಚಂದಗಳ ಪಟ್ಟಿಯೂ ಸಹ.

ಬೇಲಿಗಳು ಬದುಕನ್ನು ಹಸನಾಗಿಡುತ್ತವೆ, ಅಂತೆಯೇ ಸಂಬಂಧಗಳನ್ನೂ ಕೂಡ.
ಆದರೂ, ಇದು ಉಪ್ಪು ಹುಳಿ ತಿನ್ನುವ ದೇಹವಲ್ಲವೇ, ಅದಕ್ಕೆ ಹದ ತಪ್ಪಲೇ ಬೇಕಾಗುತ್ತದೆ, ಬೇಡ ಬೇಡವೆಂದರೂ
ಉಪಸಂಹಾರ ರೋಚಕವಾಗಿದೆ.

ಇಡೀ ಕಥನ ಎಲ್ಲೂ ಸಭ್ಯತೆಯ ಹಳಿತಪ್ಪದೆ - ಒಪ್ಪವಾಗಿದೆ.

best quote:
'ಈ ನಾಚಿಕೆಯಿಂದ ಆಗುವಷ್ಟು ಎಡವಟ್ಟುಗಳು ಅಷ್ಟಿಷ್ಟಲ್ಲ...!'

(ಬ್ಲಾಗೋತ್ತಮರು, ಹೀಗೆ ಅಪರೂಪಕ್ಕೆಂತ ಬ್ಲಾಗಿಸಿದರೆ, ಅಭಿಮಾನಿಗಳಾದ ನಮ್ಮ ಪಾಡೇನು?)

ಚಿನ್ಮಯ ಭಟ್ said...

ಕಥೆ ಪ್ರಕಾಶಣ್ಣಾ!!!..
ಕೊನೆಯಲ್ಲಿ ಇನ್ನೇನೋ ಬೇರೆ ತಿರುವು ಸಿಗುತ್ತದೆ ಎಂದು ಓದಿಕೊಳ್ಳುತ್ತಲೇ ಹೋಯಿತು ಕೊನೆಯ ತನಕ...
ಧನ್ಯವಾದಗಳು ನಿಮಗೆ, ನಿಮ್ಮ ಆ ಬರವಣಿಗೆಯ ಶೈಲಿಗೆ...
ಕಥೆಯ ವಿಷಯದ ಬಗ್ಗೆ ನಂಗೆನೂ ಗೊತ್ತಿಲ್ಲಾ :P

Kavi Nagaraj said...

ಸಹಜತೆಯಿದೆ. ಸಭ್ಯತೆಯ ಎಲ್ಲೆ ದಾಟದಿರುವ ಪ್ರಜ್ಞೆ ಒಂದು ಘಳಿಗೆಯಲ್ಲಿ ಮರೆತರೆ ಹೀಗಾಗಿಬಿಡುತ್ತದೆ. ಮುಂದೆ ಅನಾಹುತಗಳಿಗೂ ಎಡೆ ಮಾಡಿಕೊಡಬಹುದು. ಎಚ್ಚರಿಕೆ ತಪ್ಪದಿರಬೇಕು ಎಂದು ನೆನಪಿಸುವ ಬರಹ. ಅಭಿನಂದನೆಗಳು.

Harish Ukkunda said...

sir nimma kathe nirupana shyli chennagide sir aadaru nangu ondu prashne kadtide e preeti annod mansig sambanda pattiddo atva dehakko antha neev illi hennina naachike bagge helidira nija adare ata adanna tanna indryagala moolakane feel madidda howdalva agidmele manasinda preeti heg shuru agate koneyallu neev helidiira allu kuda daihika anubhava ne avnu feel madidane agidmele manasu annodadru enu anta

Harish Ukkunda said...

sir nimma kathe nirupana shyli chennagide sir aadaru nangu ondu prashne kadtide e preeti annod mansig sambanda pattiddo atva dehakko antha neev illi hennina naachike bagge helidira nija adare ata adanna tanna indryagala moolakane feel madidda howdalva agidmele manasinda preeti heg shuru agate koneyallu neev helidiira allu kuda daihika anubhava ne avnu feel madidane agidmele manasu annodadru enu anta

ಸಿಮೆಂಟು ಮರಳಿನ ಮಧ್ಯೆ said...

ನಮ್ಮ ಬ್ಲಾಗಿಗೆ ಪ್ರೀತಿಯ ಸ್ವಾಗತ "ಆಶೀತ್ ಜೀ.."

ಈ ಕಥೆ ಬರೆಯುವ ವಿಚಾರ ಬಂದಾಗ ನನ್ನ ಮಡದಿಗೆ ಹೇಳಿದೆ..
"ಇಂಥಹ ಕಥೆಗಳು ಬೇಡ.. ಬ್ಲಾಗಿನಲ್ಲಿ ಬರೆಯ ಬೇಡಿ" ಇದು ಅವರ ಅಭಿಪ್ರಾಯವಾಗಿತ್ತು..

ಇದೊಂದು ಸತ್ಯ ಘಟನೆಯಿಂದ ಸ್ಪೂರ್ತಿ ಪಡೆದದ್ದು..

ಅವರಿಬ್ಬರೂ ಒಂದೇ ಕಛೇರಿಯಲ್ಲಿ ಕೆಲಸ ಮಾಡುವವರು..
ಒಂದು ಕ್ಷಣದಲ್ಲಿ
ಈ ಘಟನೆ ನಡೆದು ಹೋಯಿತು..

ಈಗ ಅವರಲ್ಲಿ ಅಪರಾಧಿ ಮನೋಭಾವನೆ..

"ಮಗುವಿನಂಥಹ ಸಂಗಾತಿಗೆ ಮೋಸ ಮಾಡಿದ ಪಾಪ ಪ್ರಜ್ಞೆ".. !

ನನಗೆ ಹುಡುಗ ಮಾತ್ರ ಗೊತ್ತು..
ಹುಡುಗನಿಗೆ ಮನೋವೈದ್ಯರ ಬಳಿ ಚಿಕಿತ್ಸೆ ನಡೆಯುತ್ತಿದೆ...

ಹುಡುಗಿ ಇವನ ಕಛೇರಿಯನ್ನು ಬಿಡುವ ಯೋಚನೆಯಲ್ಲಿದ್ದಾಳೆ..


ಕಥೆಯನ್ನು
ಇಷ್ಟಪಟ್ಟು ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ...
ಪ್ರೀತಿಯ ವಂದನೆಗಳು...
ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಸುನಾಥ ಸರ್...

ಈಗ ಕಾಡುವ ಪ್ರಶ್ನೆ ಏನು ಗೊತ್ತಾ ? ....

ಹತ್ತು ವರ್ಷ ಸಂಸಾರ ನಡೆಸಿ...
ಸಂಗಾತಿಯ ಪ್ರೀತಿ ಪ್ರೇಮವನುಂಡು...
ಮಗುವನ್ನೂ ಪಡೆದರೂ...

ಸಂಸ್ಕಾರ...
ಸಭ್ಯತೆಯ ಬೇಲಿ ಇದ್ದರೂ..

"ಒಂದು ಕ್ಷಣದಲ್ಲಿ" ಇವೆಲ್ಲ ಎಲ್ಲಿರುತ್ತವೆ ?....

ಒಂದು ವೇಳೆ ಈ ಘಟನೆ..
ಆಕ್ಷಣದ ಸಂದರ್ಭ ಘಟಿಸದೆ ಇದ್ದಿದ್ದರೆ
ಅವರು..
ಅವರು ಕಟ್ಟಿಕೊಂಡ ಬೇಲಿಯೊಳಗೆ...
ಇಂದಿಗೂ ಅವರು ಮೊದಲಿನಂತೆಯೇ ಇರುತ್ತಿದ್ದರು ಅಲ್ಲವಾ ?

ಸುನಾಥ ಸರ್...
ಕಥೆಯನ್ನು ಇಷ್ಟಪಟ್ಟು ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...
ದಿನಕರ ಮೊಗೇರ said...

ಪ್ರಕಾಶಣ್ಣ,
ಕಥೆಗೆ ನಕಾರಾತ್ಮಕ ಅಂತ್ಯ ಅನ್ನಿಸೊಲ್ಲ... ಇದು ಎಲ್ಲೋ ನಡೆದಿರಬಹುದು ಅಥವಾ ನಡೆಯಬಹುದು.. ಬೇಲಿ ಅನ್ನೋದು ದೇಹಕ್ಕಷ್ಟೇ ಸಂಭಂದಿಸಿದ್ದಲ್ಲ, ಮನಸ್ಸಿಗೂ ಇರಬೇಕು.. ಕಥೆಯ ಸಾರ ತುಂಬಾ ಚೆನ್ನಾಗಿದೆ.. ಎಂದಿನಂತೆ ನಿರೂಪಣೆ ಸೂಪರ್...

balasubrahmanya k.s. balu said...

ಪ್ರಕಾಶಣ್ಣ, ಇಂತಹ ಕಥೆ ಬರೆಯುವುದರಲ್ಲಿ ನೀವೇ ಸಿದ್ದ ಹಸ್ತರು, ಸಭ್ಯತೆಯ ಎಲ್ಲೇ ಮೀರದ, ನಿಜ ಜೀವನಕ್ಕೆ ಹತ್ತಿರವಾದ, ಸನ್ನಿವೇಶಗಳ ಅನಾವರಣ ಗೊಳಿಸಿ, ಅದಕ್ಕೆ ಒಂದಷ್ಟು ಅನುಭವದ ಹೂರಣ ಸೇರಿಸಿ, ಎಲ್ಲರೂ ವಾಹ್ ವಾಹ್ ಎನ್ನುವಂತೆ ಕಥೆ ಹೆಣೆಯುವ ಕಲೆಯನ್ನು ತಾಯಿ ಸರಸ್ವತಿ ನಿಮಗೆ ವರವಾಗಿ ನೀಡಿದ್ದಾಳೆ, ಕಥೆಯಲ್ಲಿನ ಪಾತ್ರಗಳು ಬರೀ ಪಾತ್ರಗಳಲ್ಲಾ ನಮ್ಮ ಮುಂದೆ ಇರುವ ನಿಜ ಜೀವನದ ಚಿತ್ರಗಳು ಎನ್ನುವಂತೆ ಭಾಸವಾಗುತ್ತದೆ. ಸರಸ್ವತಿ ಪುತ್ರನಿಗೆ ನಮನಗಳು

bilimugilu said...

Prakash Ji,
manasinalli mohisidaru apraamanikane! apramaanikaLe.....
anthya odi, besara - sittu eradu bantu! samsaaragaLu odeyoke intha vichaaragaLu kaarana. TathvagaLu heLoke chenna, life-values eshtu nikatavaagi paalisthidaare? Jeevanada moulyagaLe naashavaagthirodu nijakkoo besarada sangathi.
Nimma kathe, niroopane ellavoo chennaagide.

Dr.D.T.Krishna Murthy. said...

ಪ್ರಕಾಶಣ್ಣ;ವಾಸ್ತವಾಂಶವನ್ನು ಒಳಗೊಂಡ ಸುಂದರ ಕಥೆ.ಕಲಾವಿದನೊಬ್ಬ,ಸುಂದರ ಚಿತ್ರ ಒಂದನ್ನು ಬಿಡಿಸುವಂತೆ,ಬಹಳ ತಾಳ್ಮೆಯಿಂದ ಎಳೆ,ಎಳೆಯಾಗಿ ಕಥೆಯನ್ನು ಹೆಣೆದಿದ್ದೀರಿ.ಸಾಧನೆಯ ಹಾದಿಯಲ್ಲಿ ಜಾರಿಕೆ ಬಹಳ.ಸರಿಯಾದ ರೀತಿಯಲ್ಲಿ ಜೀವನ ನಡೆಸುವುದೂ ಒಂದು ದೊಡ್ಡ ಸಾಧನೆಯೇ ಸರಿ!!! ಸಮಾಜ ಎಷ್ಟೇ ಕಟ್ಟುಪಾಡಿನ,ನೀತಿ ನಿಯಮಗಳ ಬೇಲಿ ಹಾಕಿದರೂ,ಬೇಲಿ ಮುರಿಯುವವರು ಮತ್ತು ಬೇಲಿ ಹಾರುವವರೇ ಹೆಚ್ಚು."ಅಡಿ ಜಾರಿ ಬೀಳುವುದು ಮತ್ತು ತಡವಿಕೊಂಡು ಏಳುವುದು"ಇಲ್ಲಿ ಮಾಮೂಲು.ಆ ನಿಟ್ಟಿನಲ್ಲಿ ನೋಡಿದರೆ ಕಥೆಯಲ್ಲಿ ಯಾವುದೇ ಉತ್ಪ್ರೆಕ್ಷೆಯಾಗಲೀ,ಅಸಹಜವಾದುದಾಗಲೀ ಇಲ್ಲ.
ನಿಮ್ಮ ಕಥೆಯನ್ನು ಓದುತ್ತಿದ್ದಂತೆ ಡಿ.ವಿ.ಜಿ.ಯವರ ಕಗ್ಗದ ಈ ಸಾಲುಗಳು ನೆನಪಾದವು; "ಸರ್ವರುಂ ಸಾಧುಗಳೇ,ಸರ್ವರುಂ ಬೋಧಕರೇ!! ಜೀವನ ಪರೀಕ್ಷೆ ಬಂದು ಎದಿರು ನಿಲುವ ತನಕ!!ಭಾವ ಮರ್ಮಂಗಳು ಏಳುವವಾಗ ತಳದಿಂದ!!ದೇವರೇ ಗತಿಯಾಗ-ಮಂಕು ತಿಮ್ಮ!!

umesh desai said...

ಹಿರಿಯರಾದ ಸುನಾಥ್ ಅವರ ಅನಿಸಿಕೆಗೆ ನನ್ನ ಸಹಮತವಿದೆ.
ಅಲ್ಲಮಪ್ರಭುವಿನ ವಚನ ಇದೆಯಲ್ಲ "ತನುವ ತೋಂಟವ ಮಾಡಿ.."
ಈಗ ನಿಮ್ಮ ನಾಯಕಿ/ನಾಯಕ ತಪ್ಪು ಮಾಡಿದರು ಅದು ಸರಿಯಲ್ಲ ಅನ್ನೋಕಿಂತ
"ಟೀಪಾಯಿ ಗೆ ಕಾಲುತಾಕಿ" ಹೊಡೆದ ಜೋಲಿಯ ಗಳಗಿ ಮತ್ತು ಅದು ಬಿಚ್ಚಿಟ್ಟ ಸತ್ಯ ಎರಡೂ ಸತ್ಯ ನಿತ್ಯ...!
ನನ್ನ ಬ್ಲಾಗಿಗೂ ಬರ್ರಿ ಅಲ್ಲಿ ಒಂದು ಕತೆ ಇದೆ ಸ್ವಲ್ಪ ವಿವಾದಾತ್ಮಕ ಅದ ನಿಮ್ಮ ಅನಿಸಿಕೆಗೆ ಸ್ವಾಗತ ಇರತದ.

ಸಿಮೆಂಟು ಮರಳಿನ ಮಧ್ಯೆ said...

ಭಾಶೆ....

ಮನಸ್ಸಿನ ಆಸೆಗಳಿಗೆ ಸಂಸ್ಕಾರದ..
ಓದಿನ.. ತಿಳುವಳಿಕೆಯ ಬೇಲಿ ಇರುತ್ತದೆ..

ಆದರೆ ದೈಹಿಕ ಆಸೆಗಳು ಇವುಗಳನ್ನು ಮೀರಿದ್ದೆ ?

ದೈಹಿಕ ಕಾಮನೆಗಳು ಯಾಕೆ ಅಷ್ಟು ಬಲವಾಗಿವೆ ? ಅಲ್ವಾ ?

ಪ್ರಾಣಿಗಳಿಗೂ ಮತ್ತು ಮನುಷ್ಯರ ಮಧ್ಯ ಒಂದು ಗೆರೆಯನ್ನು ಎಳೆದದ್ದು "ಬೇಲಿ" ಅಲ್ಲವಾ ?

ಹೀಗೆ ಒಂದಷ್ಟು ಪ್ರಶ್ನೆಗಳು ತಲೆ ಕೊರಿತಾ ಇವೆ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ನಮನಗಳು...

ಭಾಶೇ said...

ಬೇಲಿ...

ಈ ದಿನಗಳು ದೈಹಿಕ ಆಸೆಯನ್ನು ಮೂಲಭೂತ ಅವಶ್ಯಕತೆಗಳೊಂದಿಗೆ ಸೇರಿಸಿರುವಾಗ ಬೇಲಿ ಬಲು ಸಡಿಲವಾಗಿದೆ... ನುಸುಳಲು ತುಂಬಾ ಜಾಗ!

ಭಾಶೇ said...

Then...

http://bhashegonibeedu.blogspot.in/2014/04/blog-post.html

ಅವನ ಮನೆ ಸೇರುವಷ್ಟರಲ್ಲಿ ನಾನು ಬೆವತು ಹಣ್ಣು. ಅಲ್ಲಿ ಏನೇನು ಆಗಬಹುದು ಊಹಿಸಿಯ ಮನಸ್ಸುಹಕ್ಕಿ ಹಾಗೆ ಹಾರಡಿತ್ತು. ನನ್ನ ನಾಚಿಕೆ, ಅವನ ಹೊಗಳಿಕೆ, ಅಯ್ಯಯ್ಯೊ... ಅಬ್ಬಬ್ಬಾ...

ನನಗಾಗಿಯೇ ಕಾದಿದ್ದ ಅವನು...

ಮೊದಲು ಟೀ ನಂತರ ಫೈಲ್ ಕೆಲಸ ಎಂದ...

ಹಾರುತ್ತಿದ್ದ ನನ್ನ ಎದೆಯನ್ನು ಹಿಡಿದು ಅಡಿಗೆ ಮನೆಗೆ ನಡೆದೆ...

ಗ್ಯಾಸ್ ಹಚ್ಚಲು ಲೈಟರ್ ತೆಗೆದೆ...

ಗ್ಯಾಸ್ ಆನ್ ಮಾದಿದೆ... ಅಷ್ಟರಲ್ಲಿ ಅವನು ಅಡುಗೆ ಮನೆ ಬಾಗಿಲಿಗೆ ಬಂದ...

ಅವನ ತುಂಟ ನಗು ನೋಡುತ್ತಾ ನಿಂತೆ ನಾನು... ಮಾತಿಗೆಳೆದ ಅವನು...

ಗ್ಯಾಸ್, ಸದ್ದೇ ಇಲ್ಲದೆ, ವಾಸನೆಯೂ ಇಲ್ಲದೆ ಅಡುಗೆ ಮನೆಯ ಗಾಳಿಯನ್ನು ಆವರಿಸಿಕೊಳ್ಳುತ್ತಿತ್ತು... ಅದರ ಅರಿವು ಇಬ್ಬರಿಗೂ ಇರಲಿಲ್ಲ

ಫೋನ್ ರಿಂಗ್ ಆದದ್ದು ಕೇಳಿ, ಅವ, ಟೀ ಮಾಡು, ಅಲ್ಲೇ ಬಾ, ಮಾತಾಡೋಣ ಎಂದು ಹೇಳಿ ಹಾಲ್ ಗೆ ನಡೆದ...

ಫೋನ್ ನಲ್ಲಿ ಅವನು ಹಾಯ್ ಎಂದು ನನ್ನ ಪತಿಯ ಹೆಸರು ಹೇಳಿದಾಗ ಕನಸಿನ ಲೋಕದಲ್ಲಿದ್ದ ನಾನು ವಾಸ್ತವಕ್ಕೆ ಬಂದಿದ್ದೆ...

ಮನಸು said...

wow.. tumba chennagide kathe

Pradeep Rao said...

ಪ್ರಕಶಣ್ಣ ಎಂದಿನಂತೆ ನಿಮ್ಮ ಕಥೆ ಕೊನೆಯಲ್ಲಿ ರೋಮಾಂಚಕಾರಿ ತಿರುವು ಪಡೆದುಕೊಂಡಿದೆ

ನಮಗೆ ಪಿಯುಸಿಯಲ್ಲಿ ಒಂದು ಹಳಗನ್ನಡ ಪದ್ಯವಿತ್ತು "ಅಬ್ಧಿಯೋರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೆ" ರಾವಣನು ಸೀತೆಯನ್ನು ಕಂಡು ಮೋಹಿತನಾಗಿ ಅಪಹರಿಸುವ ಬಯಕೆ ಉಂಟಾಗಿದ್ದರಲ್ಲಿ ರಾವಣನ ತಪ್ಪನ್ನು ಸಮರ್ಥಿಸಿಕೊಳ್ಳುವಂಥ ಕಾವ್ಯ ಅದು. ಸಾಗರವೂ ಒಮ್ಮೊಮ್ಮೆ ವಿಧಿಯಾಟಕೆ ಒಳಗಾಗಿ "ಬೇಲಿ" ದಾಟುತ್ತದೆ. ದಡಕ್ಕೆ ಉಕ್ಕಿ ಬರುತ್ತದೆ. ಅಂಥ ದೊಡ್ಡ ಸಾಗರವೇ ಬೇಲಿ ದಾಟುವಾಗ ಉಪ್ಪು ಹುಳಿ ತಿನ್ನುವ ಮನುಷ್ಯ ಬೇಲಿ ಹಾರದೇ ಇರುತ್ತಾನೆಯೇ ಎಂದು ಅ ಶೀರ್ಷಿಕೆಯ ಅರ್ಥ!

ಕಥೆ ಅತ್ಯಂತ ಕುತೂಹಲ ಮೂಡಿದೆ. ಆರು ಭಾಗಗಳನ್ನು ಇಂದೇ ಕುಳಿತು ಓದುತ್ತೇನೆ.

Partha sarathy n said...

ಕತೆಯೊಂದು ಕ್ರಿಯೆ,
ಪ್ರತಿಕ್ರಿಯೆಗಳೆ
ಕತೆಯ ಮುಂದಿನ ಬಾಗ

Sudhiendra Vijayeendra said...

ಖೋ ಖೋ ಆಟದಲ್ಲಿ ಭಾಗವಹಿಸುವ ಹಂಬಲ ನನಗೂ ಆಯಿತು. ಬಂದ ಕೆಲಸಗಳನ್ನೆಲ್ಲ ಬದಿಗೊತ್ತಿ ಈ ಕಥೆಯನ್ನು ಮುಂದುವರೆಸಿರುವೆ. ಮೂಲ ಹಾಗು ಮುಂದುವರೆಸಿದ ಲೇಖಕರಂತೆ ನಾನೂ ಕೂಡ ಕಥೆಯಲ್ಲಿ ಎಲ್ಲೂ ಎಲ್ಲೆ ಮೀರಿ ಹೋಗದಂತೆ ನೋಡಿಕೊಂಡಿದ್ದೇನೆ. ಕಥೆಯ ಈ ಎಂಟನೇ ಭಾಗವನ್ನು ನೀವು ಓದುವಿರೆಂದು ನಂಬಿದ್ದೇನೆ. http://sudhieblog.blogspot.in/2014/05/blog-post.html

santosh kulkarni said...

Kathe tumba chennagi barediddira praksh....Gandu hennu konevaregoo snehitaragiralu parishtiti biduvudilla annodakke mattondu nidarshana nimma kate....

ಮೌನಿಯಾಗು ನೀ ........... said...

prakashanna chennagi bardiddira......