Tuesday, November 17, 2009

ಸಂತಸ ಅರಳಿದ ಸಮಯಾ...ಸಂಭ್ರಮ ಹಾಸ್ಯದ ರಸ ಗಾನ...!!

ಮೋಹನರೆಂದರೆ.....ದಿಗ್ಗಜರು....
ಮೋಹಕ ಮಾತಿನಿಂದ ಮೋಡಿ ಮಾಡುವವರು ಅಂತ ಅರ್ಥ ..!!


" ಓಂಕಾರ ರೂಪನಂತೆ..." ಸ್ವಾಗತ ಗೀತೆ ಹಾಡಿದ ....
ಅಪ್ಪಟ ಹಳ್ಳಿ ಪ್ರತಿಭೆ...
ನನ್ನ ಬಾಲ್ಯದಲ್ಲಿ ಆತ್ಮವಿಶ್ವಾಸ ತುಂಬಿದ ನನ್ನ ಚಿಕ್ಕಮ್ಮ...

ಎಂಬತ್ತು ವರ್ಷದ ಹಿರಿಯಜ್ಜನ ಆಗಮನ....ಇದು ಆಶೀರ್ವಾದ...!


ಆತ್ಮೀಯ ಗೆಳೆಯ "ಗಿರಿ ಕಾಮತ್" ದಂಪತಿಗಳು ನಮ್ಮ ಸಂಭ್ರಮದಲ್ಲಿ ....!!



ಇದೊಂದು ಬ್ಲಾಗ್ ಗೆಳೆಯರ ಕೂಟ...!


ವಸುಧೇಂದ್ರ ಅಂದ್ರೆ ನಂಗಿಷ್ಟ...!!
ಅವರ ಸರಳತೆ ಎಲ್ಲರಿಗೂ ಆದರ್ಶ...!


ಸಾಹಿತ್ಯ ಲೋಕದ ದಿಗ್ಗಜರು ನಮ್ಮ ಸಂಭ್ರಮದಲ್ಲಿ ಭಾಗವಹಿಸಿದ್ದು ಹೀಗೆ...!


ಎಂಥಾ ನಗೆ ಹಬ್ಬ ಮಾರಾಯ್ರೆ...!
ತಡೆದು ಕೊಳ್ಲಿಕ್ಕೆ.. ಆಗ್ತಿಲ್ಲ...ಮಾರಾಯ್ರೇ....!!
ಹಾಸ್ಯ ರಸಾಯನ...!


ನಾಟಕ ಲೋಕದ ಸಾಮ್ರಾಟನ ಸುಂದರ ಮಾತುಗಳು... ಮನಮೋಹಕವಾಗಿತ್ತು...!


ಇವರು ಆರ್.ಟೀ. ಕುಲಕರ್ಣಿಯವರು..
ಒಳಗಡೆ ಜಾಗ ಕಡಿಮೆ ಇತ್ತು.....!

ನೋಡಿ ಸ್ವಾಮಿ ನಾವು ನಗೋದು ಹೀಗೆ...!


ಟೀ,ವಿ. ನೈನ್ ರಿಂದ ಸಣ್ಣ ಸಂದರ್ಶನ..
ನನ್ನ ಆಕಾರವನ್ನು ಟಿವಿಯಲ್ಲಿ ಹಿಡಿದಿಡುವ ಪ್ರಯತ್ನ...!!.


ಸಾಹಿತ್ಯ ಲೋಕದ ದಿಗ್ಗಜರಿಂದ ನನ್ನನ್ನು ಬೆಳೆಸಿದ ಚಿಕ್ಕಪ್ಪನಿಗೆ ಸನ್ಮಾನ....

ಸಂಕೋಚ , ಸೌಜನ್ಯದ ಮೂರ್ತಿ .. ಅಪರೂಪದ ಅಪಾರ ಪ್ರತಿಭೆ "ರಘು ಅಪಾರ"

ನಮ್ಮ ಕರೆಗೆ ಓ ಗೊಟ್ಟು ಬಂದ ನಿಮಗೆಲ್ಲ ನನ್ನ ವಂದನೆ... ಅಭಿವಂದನೆ....!

ಸ್ವಾಗತ ಗೀತೆಯಿಂದ ಕೊನೆಯ ಮಾತಿನವರೆಗೆ ...
ಭಾಷಣ ಕಾರರ ಮಾತಿನ ಮೋಡಿಗೆ ಒಳಗಾದ ಜನ ಸಮೂಹ...!

ಕಾತುರ... ಸಂಭ್ರಮ... !!

ಸಂತಸ.... ಅರಳುವ ಸಮಯಾ....!!


ದಿವಾಕರನ ಮಾತಿನ ಮೋಡಿ...
ಅದ್ಭುತ ಪ್ರತಿಭೆಯ.. ಮಾತುಗಾರ...!


ನಾಗೇಶ ಹೆಗಡೆಯವರೆಂದರೆ ಎಲ್ಲರಿಗೂ ಗೌರವ ...ಆದರ....!


ಸರಳತೆಯ , ಹಿರಿತನದ ಉದಾಹರಣೆ...!
ವಸುಧೇಂದ್ರ... ಮಂಗಳತ್ತೆ...ಗಿರಿ ದಂಪತಿಗಳು.. ಮತ್ತು ಇತರರು...!
ಇವರೆಲ್ಲ ಯಾರೆಂದು ಹೇಳ ಬೇಕಿಲ್ಲ ತಾನೆ...?

(ನಮ್ಮೆಲ್ಲರ ಮೆಚ್ಚಿನ ನಟಿ ಮಂಗಳತ್ತೆ ... ಜಯಲಕ್ಷ್ಮಿ ಪಾಟಿಲ್..!! ಯಾರೆಂದು ಗೊತ್ತಾಯಿತಲ್ಲ...?)

ಅಕ್ಷರ ಮಣಿಯಿಂದ ...
ಮುತ್ತಿನ ಹಾರದ ಶಬ್ಧಗಳಿಂದ ಮೋಡಿ ಮಾಡುವ ನನ್ನ ಮೆಚ್ಚಿನ "ಮಣಿಕಾಂತ"


( ಇನ್ನೂ ಹೆಚ್ಚಿನ ಫೋಟೋಗಳಿಗೆ...
ಪುಸ್ತಕ ಬಿಡುಗಡೆಯ ವಿವರಗಳಿಗೆ... ಸ್ನೇಹಿತ ಶಿವೂ ಅವರ ಬ್ಲಾಗ್ ನೋಡಿ....
ಹುಡುಕಾಟದ "ಮಲ್ಲಿಕಾರ್ಜುನ್"

35 comments:

ಕ್ಷಣ... ಚಿಂತನೆ... said...

ಪ್ರಕಾಶಣ್ಣ,

ಅಭಿನಂದನೆಗಳು.
ಮೊದಲಿಗೆ ನಿಮ್ಮನ್ನು ಭೇಟಿ ಮಾಡಿದ ಖುಷಿಯ ಜೊತೆಗೆ ನಿಮ್ಮ ಬಂಧು-ಮಿತ್ರರನ್ನೂ ಪರಿಚಯಿಸಿದಿರಿ. ನನಗಂತೂ ಬಹಳ ಖುಷಿಯಾಯಿತು. ಬೆಳಗಿನ ಉಪಾಹಾರವೂ ರುಚಿಯಾಗಿತ್ತು.
ಪುಸ್ತಕ ಬಿಡುಗಡೆ ಸಮಾರಂಭವೂ ಸಹ ತುಂಬಾ ಚೆನ್ನಾಗಿತ್ತು. ಅದರಲ್ಲಿಯೂ ನೀವು ಹೊಸ ಗೆಳೆಯರನ್ನು ಪರಿಚಯಿಸುತ್ತಿದ್ದ ರೀತಿ ಕುತೂಹಲವಾಗಿತ್ತು. ಕುತೂಹಲ ಕ್ಷಣಗಳ ಫೋಟೋಗಳು ಚೆಂದಾಗಿವೆ.

ನಿಮ್ಮಮತ್ತು ನಿಮ್ಮ ಸ್ನೇಹಿತರ ಇನ್ನಷ್ಟು ಪುಸ್ತಕಗಳು ಲೋಕಾರ್ಪಣೆಯಾಗಲಿ.

ಚಂದ್ರು.

ಚುಕ್ಕಿಚಿತ್ತಾರ said...

ಅನೇಕ ಕಾರಣಗಳಿದ್ದರೂ ನಿಮ್ಮ ಕಾರ್ಯಕ್ರಮಕ್ಕೆ ಬರಲಾಗದ್ದಕ್ಕೆ ಬೇಜಾರಿದೆ.......
ಈಗ ಇನ್ನೂ ಹೆಚ್ಚಾಯಿತು.....
ಕಾರ್ಯಕ್ರಮ ಚೆನ್ನಾಗಾಗಿದ್ದು ಕೇಳಿ ಸ೦ತೋಷವಾಯಿತು.
ವ೦ದನೆಗಳು.

ಸುಪ್ತವರ್ಣ said...

ಹೆಗಡೆಯವರೆ,

ಕಾರ್ಯಕ್ರಮ ತುಂಬಾ ಅದ್ಭುತವಾಗಿತ್ತು. ಮೂರೂ ಪುಸ್ತಕಗಳನ್ನು ಖರೀದಿಸಿದ್ದೇನೆ. ಅನೇಕರನ್ನು ಪ್ರತ್ಯಕ್ಷ ನೋಡಲು ಸಾಧ್ಯವಾಯಿತು, ಧನ್ಯವಾದಗಳು!

sunaath said...

ಪ್ರಕಾಶ,
ಸಮಾರಂಭದ ಚಿತ್ರಗಳನ್ನು ನೋಡಿ ಖುಶಿಯಾಯಿತು. ನಿಮಗೆ ದೂರದಿಂದಲೇ ಅಭಿನಂದನೆಗಳು.

ರಾಜೀವ said...

ಪ್ರಕಾಶ್ ಅವರೇ,

ಹೃದಯಪೂರ್ವಕ ಅಭಿನಂದನೆಗಳು.
ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ.
ಕಾರ್ಯಕ್ರಮದ ಯಶಸ್ಸನ್ನು ಕಂಡು ನಿಜಕ್ಕೂ ಸಂತೋಷವಾಯಿತು.
ನಿಮ್ಮ "ಹೆಸರೇ ಬೇಡ"ವನ್ನು ಖಂಡಿತ ಕೊಂಡು ಓದುತ್ತೇನೆ.

ದಿನಕರ ಮೊಗೇರ said...

ಪ್ರಕಾಶಣ್ಣ....
ಅಭಿನಂದನೆಗಳು..... ನಿಮ್ಮ ವಿಳಾಸ ಕೊಡಿ, ಪುಸ್ತಕ ಕಳಿಸಿಕೊಡಿ... ಹೆಚ್ಚಿಗೆ ಕಾಯಿಸಬೇಡಿ.....
ಕಾರ್ಯಕ್ರಮದ ಫೋಟೋ ನೋಡಿ ಹೊಟ್ಟೆಕಿಚ್ಚಾಗುತ್ತಿದೆ...

Unknown said...

ಪ್ರಕಾಶಣ್ಣ...ಕಾರ್ಯಕ್ರಮ ತುಂಬಾ ಸೊಗಸಾಗಿತ್ತು.

ಶಿವಪ್ರಕಾಶ್ said...

ಪ್ರಕಾಶಣ್ಣ,
ಕಾರ್ಯಕ್ರಮ ತುಂಬಾ ಚನ್ನಾಗಿ ಮೂಡಿ ಬಂತು..
ಧನ್ಯವಾದಗಳು

ಕೃಷಿಕನ ಕಣ್ಣು said...

"ಸಂತಸ ಅರಳುವ ಸಮಯ"ಕ್ಕೆ ಅಲ್ಲಿಗೆ ಬರಲಿಕ್ಕೆ ಆಗ್ಲಿಲ್ಲ ಅನ್ನೋ ಸಂಕಟ ಬೇರೆ....,
ಈಗ ಇಲ್ಲಿ ಇವ್ನ ಫೊಟೊಗಳ್ನ ನೋಡ್ತಾ ಪಟ್ಗೊಳೋ ಉರಿ ಬೇರೆ.....,
ಉರಿಯೋ ಬೆಂಕಿಗೆ ಮತ್ತೆ ತುಪ್ಪ ಸುರ್ದಂಗೆ!!!!......
ಆದ್ರೆ ಇದು ’ಖುಶಿ’ಯ ಉರಿ ಕಣೋ.
ಬರಲಾಗದಿದ್ದ ಬೇಸರದಲ್ಲಿದ್ದಾಗ, ನಿನ್ನ ಮತ್ತು ಶಿವು ಬ್ಲಾಗ್ಗಳನ್ನು ನೋಡಿ,’ಹಬ್ಬ’ದ ಸಂಭ್ರಮದ ಚಿತ್ರಣ ಸಿಕ್ಕಂತಾಗಿ
ತುಂಂಂಂಂಂಂಂಂಂಂಂಂಂಬಾ
ಖುಶಿ ಆಯ್ತು ಕಣೋ.
ಪುಸ್ತಕ "ಪ್ರಕಾಶಿ"ಸುವುದರಲ್ಲಿ ಸಂಶಯವಿಲ್ಲ.
ಪ್ರಕಾಶ,ಶಿವು ಮತ್ತು ದಿವಾಕರ ಹೆಗಡೆ ಮೂವರಿಗೂ
ತುಂಬಾ ತುಂಬಾ ತುಂಬಾ
ಅಭೀಈಈಈಈಈಈಈಈಈಈನಂದನೆಗಳು.
ಪ್ರೀತಿಯಿಂದ...
ನಾಗೇಂದ್ರ

ವನಿತಾ / Vanitha said...

ಫೋಟೋ ನೋಡಿ ಸಮಾರಂಭಕ್ಕೆ ಬಂದಂತೆ ಕುಶಿ ಆಯ್ತು...ಟಿವಿ ೯ ನಲ್ಲಿ ಕಾರ್ಯಕ್ರಮ ನೋಡಿದೆ..ಏನೋ ತಿನ್ಕೊಂಡು ಇದ್ರಿ!!!!!

Ranjita said...

ಕ೦ಗ್ರಾಜುಲೆಶನ್ ಪ್ರಕಾಶಣ್ಣ ...ಕಾರ್ಯಕ್ರಮ ಚೆನ್ನಾಗಾಯ್ತು ಅನ್ಸತ್ತೆ ..ಲೇಖನ ಮತ್ತೆ ಫೋಟೋಸ್ ನೋಡಿ ಖುಷಿ ಆತು.. ಪಾರ್ಟಿ ಕೊಡವು

Ittigecement said...

ಚಂದ್ರು.. (ಕ್ಷಣ ಚಿಂತನೆ..)

ತುಂಬಾ ಭಾವುಕ ಸನ್ನಿವೇಶಗಳು ಅವು...

ನಾವು ಎಷ್ಟೇ ಬುದ್ಧಿವಂತರಾದರೂ...
ಅಷ್ಟೆಲ್ಲ ಜನರ ಪ್ರೀತಿಗೆ ... ಅಭಿಮಾನಕ್ಕೆ..
ಕಣ್ಣಲ್ಲಿ ನೀರಾಡಿತ್ತು...

ತೀರಾ ಸಾಮಾನ್ಯನಾದ ನಾನು ಇದಕ್ಕೆಲ್ಲ ಅರ್ಹನೇ.. ಎಂಬ ಪ್ರಶ್ನೆಗಳು ನನ್ನ ಮೂಡುತ್ತಿವೆ...

ನನ್ನ ಅಂದಿನ ಅನುಭವಗಳನ್ನು ಸಧ್ಯದಲ್ಲೇ ಬರೆಯುವೆ...

ಬಂದು...ನಮ್ಮೊಡನೆ ಇದ್ದು...
ಬರದೆ ದೂರದಿಂದ.. ಹೃದಯ ಪೂರ್ವಕವಾಗಿ ಶುಭ ಹಾರೈಸಿದ...
ನಿಮಗೆಲ್ಲರಿಗೂ ನನ್ನ ಕೃತಜ್ಞತೆಗಳು...
ವಂದನೆಗಳು...
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯ ...
ಅನಾಮಿಕನಾಗಿದ್ದ ನನಗೆ...
ಇಷ್ಟೆಲ್ಲ ಸಂತೋಷ ಕೊಟ್ಟಿರುವ ನಿಮಗೆ..

ಮಾತು, ಶಬ್ಧಗಳು ಬೇಕಿರದ... ಭಾವ ನಮನಗಳು....

ಮುಸ್ಸ೦ಜೆ said...

Congrats ಪ್ರಕಾಶಣ್ಣ.. ಕಾರ್ಯಕ್ರಮದ ಸೊಬಗು ಇಲ್ಲಿ೦ದನೆ ಅರ್ಧ ಸಿಕ್ತು! ಅಭಿನ೦ದನೆಗಳು.

ಸುಮ said...

ಪ್ರಕಾಶಣ್ಣ ಕಾರ್ಯಕ್ರಮ ತುಂಬ ಚೆನ್ನಾಗಿತ್ತು ಅಂತ ಪ್ರಶಾಂತ್ ಹೇಳ್ದ. ಅನಿವಾರ್ಯ ಕಾರಣಗಳಿಂದ ಬರಲಾಗದ್ದಕ್ಕೆ ನಮಗೇ ಬೇಸರವಾಯಿತು. ಫೋಟೊಗಳನ್ನು ನೋಡಿ ಸಂತೋಷವಾಯಿತು.

ಸೀತಾರಾಮ. ಕೆ. / SITARAM.K said...

ನಮಸ್ಕಾರ ಪ್ರಕಾಶ್ ಹೆಗ್ಡೆ-ಯವರೇ,
ತಮ್ಮ ಪುಸ್ತಕ ಬಿಡುಗಡೆ ಸಮಾರಂಭ ಅದ್ದೂರಿಯಿಂದ ನಡೆದದ್ದು ಕೇಳಿ ಸಂತೋಷವಾಯಿತು.
ಕೆಲಸದ ಒತ್ತಡದಿಂದ ಪ್ರವಾಸದಲ್ಲಿದ್ದರಿಂದ ನನಗೆ ಬರಲಾಗಲಿಲ್ಲ.
ಆ ಸ೦ತಸದ ಕ್ಷಣಗಳನ್ನು ಕಳೆದುಕೊಂಡಿದ್ದಕ್ಕೆ ತು೦ಬಾ ಬೇಸರವಿದೆ.
ಸಮಾರ೦ಭದ ಫೋಟೋಗಳು ಚೆನ್ನಾಗಿ ಬ೦ದಿವೆ.
ತಮ್ಮ ಬರವಣಿಗೆ ಮು೦ದುವರೆಯಲಿ.
ಧನ್ಯವಾದಗಳು.

Unknown said...

ಪ್ರಕಾಶ್ ಮತ್ತು ಶಿವು,
ಇತ್ತೀಚಿನ ದಿನಗಳಲ್ಲಿ ಇಂತಹುದೊಂದು ಪುಸ್ತಕ ಬಿಡುಗಡೆಯ ಸಮಾರಂಭವನ್ನು ನಾನು ಕಂಡಿರಲೇ ಇಲ್ಲ. ಸಮಾರಂಭ ಅನ್ನುವುದಕ್ಕಿಂತ ಅದನ್ನು ಸಂಭ್ರಮ ಎಂದು ಕರೆಯುವುದೇ ಮೇಲು. ಅಷ್ಟು ಚೆನ್ನಾ ಗಿತ್ತು, ಅಚ್ಚುಕಟ್ಟಾಗಿತ್ತು. ಪುಸ್ತಕಗಳು ಖರ್ಚಾಗುತ್ತಿದ್ದುದನ್ನು ನೋಡಿ ನನಗೆ ಕನ್ನಡ ಪುಸ್ತಕೋದ್ಯಮಕ್ಕೆ ಇಂತಹ ಪುಸ್ತಕಗಳು, ಬಿಡುಗಡೆಯ ಸಂಭ್ರಮ ಸಹಾಯಕವಾಗಲಬಲ್ಲವು ಎನ್ನಿಸಿತು.
ಇನ್ನು ನೀವು ವಿರಮಿಸುವಂತಿಲ್ಲ. ಈಗ ನಿಮ್ಮ ಜವಾಬ್ದಾರಿ ಇನ್ನೂ ಹೆಚ್ಚಿದೆ ಜೊತೆಗೆ ನಮ್ಮ ನಿರೀಕ್ಷೆಯೂ ಕೂಡಾ!
ಮುಂದೆಯೂ ಇನ್ನೂ ಒಳ್ಳೊಳ್ಳೆಯ ಪುಸ್ತಕಗಳು ಬರಲಿ.

AntharangadaMaathugalu said...

ಪ್ರಕಾಶ್ ಅವರೇ...
ಚಿತ್ರಗಳನ್ನು ನೋಡಿ ತುಂಬಾ ಸಂತೋಷವಾಯಿತು. ನಿಮಗೆ ಮತ್ತೊಮ್ಮೆ ಅಭಿಮಾನಪೂರ್ವಕ ಅಭಿನಂದನೆಗಳು. ನಿಮ್ಮ ಪುಸ್ತಕವನ್ನೂ ಕೊಂಡು ಓದುತ್ತೇನೆ. ಹೀಗೇ ಸಾಗುತ್ತಿರಲಿ ನಿಮ್ಮ ಸಾಹಿತ್ಯದ ಪಯಣ.....
ಶ್ಯಾಮಲ

Unknown said...

ಅಭಿನಂದನೆಗಳು... ಇಂತಹ ಅನೇಕ ಕೃತಿಗಳು ನಿಮ್ಮ ಲೇಖನಿಯಿಂದ ಮೂಡಿಬರಲಿ... ಅಂದ ಹಾಗೆ ಈ ಪುಸ್ತಕ ನನಗೂ ಕಳಿಸುತ್ತೀರಾ?? ಅದರ ಖರ್ಚು ನಾನು ನಿಮ್ಮ ಅಕೌಂಟ್ ಗೆ ತುಂಬುವೆ...

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ಅಭಿನಂದನೆಗಳು
ನಿಮ್ಮ ವಿವರಣೆ ಓದಿ ಬಂದಂತೆ ಆಯಿತು
ಹೀಗೆಯೇ ಇನ್ನಷ್ಟು ಪುಸ್ತಕಗಳು ಬರಲಿ
ಶುಭ ಹಾರೈಕೆಗಳು

Naveen ಹಳ್ಳಿ ಹುಡುಗ said...

ಪ್ರಕಾಶಣ್ಣ.. ಪುಸ್ತಕ ಪೂರ್ತಿ ಓದಿ ಮುಗಿಸಿದೆ.. ನಗಿಸಿದ್ದಕ್ಕೆ ಜೊತೆಗೆ ಅಳಿಸಿದ್ದಕ್ಕೆ ಧನ್ಯವಾದಗಳು..
ಮತ್ತೊಂದು ಪುಸ್ತಕದ ನಿರೀಕ್ಷೆಯಲ್ಲಿ..
ಶುಭವಾಗಲಿ..

Raghu said...

ಅಭಿನಂದನೆಗಳು... ಫೋಟೋಸ್ ಎಲ್ಲಾ ಚೆನ್ನಾಗಿದೆ... ಹೊಸ ಹೊಸ ಪುಸ್ತಕಗಳು ನಿಮ್ಮಿಂದ ಯಾವಾಗಲು ಬರ್ತಾ ಇರಲಿ..
ನಿಮ್ಮವ,
ರಾಘು.

ಸವಿಗನಸು said...

ಅಭಿನಂದನೆಗಳು ಪ್ರಕಾಶಣ್ಣ....
ಇಂತಹ ಅನೇಕ ಕೃತಿಗಳು ನಿಮ್ಮ ಲೇಖನಿಯಿಂದ ಮೂಡಿ ಬರಲಿ ಎಂದು ಹಾರೈಸುತ್ತೇವೆ......

ಜಲನಯನ said...

ಪ್ರಕಾಶ್..ಹೆಸ್ರು ಯಾಕ್ರೀ ಬ್ಯಾಡ..?? ಅಲ್ಲ ಅದ್ಯಾಕೆ ಅಂತೀನಿ..ಅಂತಿದ್ದ ನನ್ನ ಸ್ನೇಹಿತ...ಈ ಗ..ಯಕಪ್ಪಾ ಬೇಕು ಹೆಸರು..ಮುದ್ರೇನೇ ಹೇಳುತ್ತೆ ಇದು ಅವರ್ದೇ ಕೃತಿ ಅಂತ...
ಪ್ರಕಾಶ್, ಹೃದಯದಾಳದ ಅಬಿನಂದನೆಗಳು..ನಿಮಗೆ ಮತ್ತು ಶಿವುಗೂ...ಈ ಸರ್ತಿ ಬಂದಾಗ ಖಂಡಿತ ನಿಮ್ಮನ್ನ ಮೀಟ್ ಮಾಡೇಕು...ಪುಸ್ತಕಕ್ಕಾದರೂ...

ಗೋಪಾಲ್ ಮಾ ಕುಲಕರ್ಣಿ said...

ಅಭಿನಂದನೆಗಳು ಕಾರ್ಯಕ್ರಮಕ್ಕೆ ನಾನು ಬಂದಿದ್ದೆ. ತುಂಬಾ ಚೆನ್ನಾಗಿತ್ತು ಶ್ರೀ ನಾಗೇಶ್ ಹೆಗಡೆ ಸರ್ , ಶ್ರೀ ಜಿ ಮೋಹನ್, ಮತ್ತು ಶ್ರೀ ದೇಶಪಾಂಡೆ ಸರ್ ಹಾಸ್ಯಗಳು.
ನಿಮ್ಮನ್ನು ಮತ್ತು ಶಿವೂ ಮತ್ತೆ ದಿವಾಕರ್ ಅವರ ಪುಸ್ತಕ ಖರಿದಿಸಿದ್ದೇನೆ. ಹೀಗೆ ಇನ್ನಷ್ಟು ಪುಸ್ತಕಗಳು ಹೊರಬರಲಿ ಎಂದು ಆಶಿಸುತ್ತೇನೆ. ಮುಂದಿನ ಸಾರಿ ದೊಡ್ಡ ಹಾಲ್ ಬುಕ್ ಮಾಡಿ ಸರ್.

umesh desai said...

ಹೆಗಡೇಜಿ ಸಂಭ್ರಮ ಛಲೊ ಅನಿಸ್ತು. ನಿಮ್ಮ ಪುಸ್ತಕ ಓದಿ ಮುಗಿಸೇನಿ ಅದರ ಬಗ್ಗೆ ನಿಮ್ಮೊಡನೆ ಚರ್ಚಾ ಮಾಡಬೆಕಾಗೇದ
ಮೇಲ್ ಹಾಕ್ತೆನಿ ಓಕೆ ಮುಂದಿನ ಪುಸ್ತಕಕ್ಕರೆ ಹೆಸರು ಇಡ್ರಿ....!

nenapina sanchy inda said...

hmmm very nice pics Prakash!! Glad to know there were so many of your fans present at your moment of joy
Write more, publish more.
will surely buy your book.
:-)
malathi S

Kishan said...

Congratulations again.. all the very best.

Unknown said...

ಮತ್ತೆ ಮತ್ತೆ ಅಭಿನದನೆಗಳು ಹೇಳುವಂತೆ ಅನಿಸುವುದು ನಿಮ್ಮ ಫೋಟೋಗಳ ನೋಡುತ್ದಿದ್ದರೆ ಸರ್....

ಮನಸು said...

ನಾವು ಬರದಿದ್ದರೂ ಕಾರ್ಯಕ್ರಮದ ವಿವರ ಚೆನ್ನಾಗಿ ತಿಳಿಸಿದಿರಿ ಧನ್ಯವಾದಗಳು, ಮತ್ತೆ ಇನ್ನೊಂದು ವಿಷಯ ನಿಮ್ಮ ಕಾರ್ಯಕ್ರಮಕ್ಕೆ ಭಾಗವಹಿಸಿ ಕೆಲವರು ಹೀರೋ ಆಗಿಬಿಟ್ಟಿದ್ದಾರೆ ಅದು ಅತಿ ವಿಶೇಷ ಹಹಹ ಯಾರಿಗುಂಟು ಯಾರಿಗಿಲ್ಲ ಈ ಹೀರೋ ಪಟ್ಟ ಹೇಳಿ ಹಹಹ
ನಿಮಗೆ ಒಳ್ಳೆಯದಾಗಲಿ, ನಿಮ್ಮ ಮತ್ತಷ್ಟು ಪುಸ್ತಕಗಳು ಹೊರಬರಲಿ. ನಿಮ್ಮ ಪುಸ್ತಕವನ್ನು ಆದಷ್ಟು ಬೇಗ ಓದುತ್ತೇನೆ.
ವಂದನೆಗಳು

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ....

I am so sorry. ಕ್ಷಮಿಸಿ ಬಿಡಿ.... ಕಾರ್ಯಕ್ರಮಕ್ಕೆ ಬರಲಾಗಲಿಲ್ಲ... ಪರೀಕ್ಷೆ ಇತ್ತು :(

ಫೋಟೋ ನೋಡಿ ಕಾರ್ಯಕ್ರಮ ಮಿಸ್ ಮಾಡಿಕೊ೦ಡಿದ್ದಕ್ಕೆ ಬೇಜಾರು ಆಗುತ್ತಿದೆ... :(

ನಿಮ್ಮ ಪುಸ್ತಕವನ್ನು ಓದಿ ಸ೦ತೋಷ ಪಡುತ್ತೇನೆ....

Prabhuraj Moogi said...

ಅಭಿನಂದನೆಗಳು ಸರ್, ಪುಸ್ತಕ ಬಿಡುಗಡೆ ಸಮಾರಂಭದ ಬಗ್ಗೆ ಶಿವೂ ಅವರ ಬ್ಲಾಗ ಅಲ್ಲದೇ ಇಲ್ಲಿ ಕೂಡ ಓದಿದೆ, ಬರಲಾಗದಿದ್ದುದಕ್ಕೆ ಬೇಜಾರಾಯ್ತು... ಹೀಗೆ ಮುಂದುವರೆಯಲಿ ನಿಮ್ಮ ಪಯಣ... ಇಟ್ಟಿಗೆ ಸಿಮೆಂಟು ಅಂತ ಗಟ್ಟಿ ತಳಪಾಯ ಹಾಕಿದ್ದೀರಿ ಎತ್ತರದ ಸೌಧ ಮೇಲೇರಲಿ...

ಮನಮುಕ್ತಾ said...

’ಹೆಸರೇ ಬೇಡ’ ಹೆಸರು ಕತೆಯ ಬಗ್ಗೆ ಕುತೂಹಲ ತರುತ್ತದೆ
ಏನಿರಬಹುದು... ಕತೆಯೊಳಗೇ... ಅ೦ತ.
ಕಾರ್ಯಕ್ರಮಗಳ ಯಶಸ್ಸು ತಿಳಿದು ಸ೦ತೋಷವಾಯಿತು.
ಅನೇಕ ಪುಸ್ತಕಗಳು ನಿಮ್ಮಿ೦ದ ಹೊರಬರಲಿ ಎ೦ದು ಹಾರೈಸುತ್ತೇನೆ.

ವಿನುತ said...

ಫೋಟೋಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಪ್ರಕಾಶ್ ರವರೇ. ಸಮಾರಂಭವೇ ಕಣ್ಣಮುಂದೆ ಬಂದಂತಾಯಿತು. ಕಾರಣಾಂತರಗಳಿಂದ ಬರಲಾಗಲಿಲ್ಲ, ಅದಕ್ಕಾಗಿ ವಿಷಾದವಿದೆ. ಕ್ಷಮೆಯಿರಲಿ.

Ittigecement said...

ಪುಸ್ತಕ ಬೇಕಾದವರು ದಯವಿಟ್ಟು ವಿಳಾಸ ಕೊಡಿ..
ಕಳುಹಿಸಿಕೊಡುತ್ತೇನೆ...
ನನ್ನ ಈಮೇಲ್...
kash531@gmail.com

ನಂಜುಂಡ said...

ಈ ಫೋಟೋ ಎಲ್ಲ ನೋಡಿದ ಮೇಲೆ ನಮಗೆ ಈ ಸಂಭ್ರಮದಲ್ಲಿ ಭಾಗಿಯಾಗೋ ಅವಕಾಶ ಸಿಕ್ಕಿದ್ದಿಲ್ಯಲಿ ಹೇಳೇ ಬೇಜಾರಾಗ್ತಾ ಇದ್ದು.