Wednesday, November 25, 2009

ಬಡತನ, ಕುರೂಪ ಪ್ರೀತಿ, ಪ್ರೇಮದಿಂದ ದೂರ ಇರ್ತವೆ ಅಲ್ವಾ...?


ಪೆಟ್ಟಿಗೆ ಗಪ್ಪತಿಗೆ ಒಮ್ಮೆ ತಲೆಯಲ್ಲಿ ಒಂದು ವಿಚಾರ ಹೊಕ್ಕಿತು...

ಅದನ್ನ ಕಪನೀಪತಿಯ ತಲೆಗೂ ಹಾಕಿದ..
ಸೀತಾಪತಿಯೂ ಅವರ ಸಂಗಡ ಜೊತೆಗೂಡಿದ...

ಇಂಥಹ ಸಂದರ್ಭಗಳಲ್ಲಿ ಕೊನೆಯ ನಿರ್ಧಾರ ತೆಗೆದುಕೊಳ್ಳುವದು ನಾಗುವಿನ ಸಲಹೆಯ ನಂತರವೇ....

ಏನದು...?

"ಏನೂ ಇಲ್ಲ.. ನಾಗು ಕಾಲೇಜಿನ ಮೊದಲ ವರ್ಷ ಮುಗಿತಾ ಬಂದಿದೆ..
ಹೀಗೆಯೇ ಇದ್ದರೆ ಕಾಲೇಜು ಜೀವನವೇ ಮುಗಿದು ಹೋಗಬಹುದು...
ಏನಾದರೂ ಮಾಡಬೇಕು... ಆ ಅನುಭವವನ್ನೂ ಪಡೆದುಕೊಳ್ಳಬೇಕು ನೋಡು..."

ಏನದು...?

"ಅಲ್ಲಾ... ನಾಗು ನಮ್ಮ ಕ್ಲಾಸಿನ ಹೆಚ್ಚಿನ ಗಂಡು ಮಕ್ಕಳನ್ನು ನೋಡು..
ಅವರೆಲ್ಲರೂ ಹೆಣ್ಣು ಮಕ್ಕಳಿಗೆ ಲೈನ್ ಹೊಡಿತಾರೆ..
ನಮಗೆ ಮಾತ್ರ ಆಗ್ತಾ ಇಲ್ಲ ಕಣೊ..
ಒಂದು ಸಾರಿ ನಾವೂ ಒಮ್ಮೆ ಲೈನ್ ಹೊಡಿಬೇಕು ನೋಡು..
ಏನಾಗ್ತದೆ ಅಂತ ನೋಡಿ ಬಿಡಬೇಕು...!!"

"ಹೋಗ್ರೊ... ಪಕ್ಕಾ ಪೋಲಿ ಅಂತಾರೆ..
ಇದಕ್ಕೆಲ್ಲ ನಾನು ಸಹಾಯ ಮಾಡೊಲ್ಲ..
ಯಾರಾದ್ರೂ .. ಪೋಲಿ ಹುಡುಗರ ಸಹಾಯ ತಗೊಳ್ಳಿ..
ಹಾಗೆ ನನ್ನ ದೋಸ್ತಿನೂ ಮರೆತು ಬಿಡಿ"

ನಾಗು ಖಡಾ ಖಂಡಿತವಾಗಿ ಹೇಳಿ ಬಿಟ್ಟ...

"ಅಲ್ವೊ ನಾಗು ತೀರಾ ಎಡವಟ್ಟುಗಳ ಹಾಗೆ ಲೈನ್ ಹೋಡೆಯೋದು ಬೇಡ್ವೊ..
ಸ್ವಲ್ಪ ಡೀಸೆಂಟಾಗಿ ಹೋಡಿಯೋಣ್ವೊ..
ಸ್ವಲ್ಪ ಡೀಸೆಂಟಾಗಿ ಲೈನ್ ಹೊಡೆಸಿಕೊಳ್ಳೋದು ಹೆಣ್ಣುಮಕ್ಕಳಿಗೂ ಇಷ್ಟವಂತೆ..."

"ಮಾಡೋದೆ ಪೋಲಿ ಕೆಲ್ಸ..!!
ಅದರಲ್ಲಿ ಡೀಸೆಂಟ್ ಅಂತ ಬೇರೆ ಇದೆಯಾ...? ಮಾಡೋಕೆ ಬೇರೆ ಕೆಲ್ಸ ಇಲ್ವಾ...?
ಹೋಗ್ರೋ.. ಓದ್ಕೊಳಿ ಹೋಗಿ..."

"ಇಲ್ವೊ ನಾಗು ಹೀಗೆಲ್ಲ ಹೇಳಿ ನಿರಾಸೆ ಮಾಡಬೇಡ್ವೊ..
ನಿನ್ನ ಎಲ್ಲ ಬೇಡಿಕೆ ಈಡೇರ್ಸ್ತೇವೆ ಕಣೊ..
ಎಂಥಹ ಕಂಡೀಷನ್ ಬೇಕಾದ್ರೂ ಹಾಕು. ಮಾಡ್ತೇವೆ..."

ನಾಗು ಸ್ವಲ್ಪ ಹೊತ್ತು ವಿಚಾರ ಮಾಡಿದ...

"ಓಕೆ... ಎರಡು ಕಂಡಿಷನ್ ಇದೆ...
ಮೊದಲನೆಯದುಮಸಾಲೆ ದೋಸೆ, ಸಿನೇಮಾ ಎಲ್ಲಾ ಇರಬೇಕು...
ಎರಡನೇ ಕಂಡೀಷನ್ ನಿಮ್ಮ ಕೆಲ್ಸ ಆದಮೇಲೆ ಕೇಳ್ತೀನಿ..."

ಸರಿ ಆಯ್ತು ಎಂದರು...

ಅವತ್ತಿನಿಂದ ಕಾಲೇಜು ಬಿಟ್ಟ ಮೇಲೆ ಭಟ್ಟರ ಮನೆಯ ಹಿಂದಿನ ಬೆಟ್ಟದ ಮೇಲೆ ಟ್ರೇನಿಂಗ್ ಶುರುವಾಯಿತು....

ತರಬೇತಿ ಒಂದುವಾರ ನಡೆಯಿತು....

ತರಬೇತಿಗಾಗಿ ಆರ್ಟ್ಸ್ ವಿದ್ಯಾರ್ಥಿ "ಕಾಚಶ್ರೀ" ವಿಶೇಷ ತರಬೇತಿ ಕೊಡಲು ಬಂದಿದ್ದ..

ಕಾಚಶ್ರೀ ಅಂದರೆ ಕಾನೂರು ಚನ್ನಪ್ಪನ್ನ ಮಗ ಶ್ರೀಪಾದ ಅಂತ...

ಇಂಥಹ ಕೆಲಸಗಳಲ್ಲಿ ಆತ ಬಲು ಪ್ರಸಿದ್ಧಿ...

ಹೇಗೆ ನಿಲ್ಲ ಬೇಕು..?
ಹೇಗೆ ಸ್ಟೈಲ್ ಮಾಡ ಬೇಕು...
ತಲೆಕೂದಲನ್ನು ಹೇಗೆ ಒಪ್ಪವಾಗಿ ಸರಿಸಿಕೊಳ್ಳ ಬೇಕು...?
ಅನ್ನುವದೆಲ್ಲ ಹೇಳಿಕೊಡಲಾಯಿತು....

ಕಪನೀಪತಿಗೆ ಒಂದು ಸಂಶಯ ತಲೆಹೊಕ್ಕಿತು...

"ಇಷ್ಟು ಚೆನ್ನಾಗಿ ಲೈನ್ ಹೊಡೆದರೆ ಲವ್ವು ಶುರುವಾಗಿ ಬಿಟ್ಟರೆ..?"

"ಶುರುವಾದರೆ... ಏನು..? ಮಾಡಿಬಿಡು.."

"ಛೇ.. ಚೇ.. ಅದೆಲ್ಲ ಆಗೋದಿಲ್ಲಪ್ಪ...
ಆಮೇಲೆ ಓದಲಿಕ್ಕೆ ಅಗಲ್ಲಪ್ಪ... ಎಕ್ಸಾಮ್ ಹೇಗೆ ಬರೆಯೋದು...?"

"ಅದೆಲ್ಲ ಸಮಸ್ಯೆ ಅಲ್ರೋ... ಯಾರಿಗೆ ಲೈನ್ ಹೊಡೆಯ ಬೇಕು ಅನ್ನುವದು.. ಬಲು ಮುಖ್ಯ ಆಗ್ತದೆ.."
ಕಾಚಶ್ರೀ ತನ್ನ ಅನುಭವದ ಪ್ರವಚನ ಶುರು ಮಾಡಿದ..

"ಹುಡುಗಿ ತೀರಾ ಹಳ್ಳಿಯ ಸಂಪ್ರದಾಯಸ್ಥರ ಮನೆಯಿಂದ ಬಂದಿದ್ದರೆ ಅದಕ್ಕೆ ಬೇರೆ ಥರಹ ಇದೆ..
ಪಟ್ಟಣದಲ್ಲಿ ಬೆಳೆದಿದ್ದರೆ ಬೇರೆ ಥರಹ ವ್ಯವಹಾರ ಮಾಡಬೇಕಾಗುತ್ತದೆ..."

ಕಪನೀಪತಿ ತಲೆಕೆರೆದು ಕೊಂಡ...

" ನೀನೇ ಹೇಳಪ್ಪಾ...! ಅನುಭವಸ್ಥ... ನಮಗೇನು ಗೊತ್ತಾಗ್ತದೆ...?"

"ನಿಮಗೆ ಯಾರು ಇಷ್ಟ ಅದನ್ನು ಹೇಳಿ.. ಅವರಿಗೆ ತಕ್ಕಂತೆ ಟ್ರೇನಿಂಗ್ ಕೊಡ್ತೇನೆ..."

ಸೀತಾಪತಿ ಗಾಭರಿ ಬಿದ್ದ..

"ಹಾಗೆಲ್ಲ ಮಾಡಬೇಡಪ್ಪಾ... ಇಷ್ಟವಾದವರಿಗೆ ಇದೆಲ್ಲ ಮಾಡೋದು ಬೇಡ..
ಆಮೇಲೆ ಬೇಸರ ಮಾಡಿಕೊಂಡು ಬಿಟ್ಟಾರು..
ಯಾರಾದ್ರು ಬೇರೆ ಕ್ಲಾಸಿನ ಹುಡುಗಿಯರಿಗೆ... ಸ್ವಲ್ಪ ಚಂದ ಇದ್ದವರಿಗೆ.. ಓಕೆ..."

ಈಗ ನಾಗು ತಲೆ ಹಾಕಿದ...

"ಈ ಪ್ರೀತಿ, ಪ್ರೇಮಕ್ಕೆ ಚಂದಕ್ಕೆ, ಶ್ರೀಮಂತಿಕೆಗೆ ಎಷ್ಟು ನಂಟಿದೆ ನೋಡಿ...
ಲೈನ್ ಹೊಡಿಲಿಕ್ಕೂ ಚಂದ ಬೇಕು ಅಂತಾಯಿತು...

ಬಡತನ, ಕುರೂಪ ಪ್ರೀತಿ, ಪ್ರೇಮದಿಂದ ದೂರ ಇರ್ತವೆ ಅಲ್ವಾ...?

ಹುಡುಗಿ ಶ್ರೀಮಂತಳಿರ ಬೇಕೆನ್ರಪ್ಪಾ...?

ಯಾವುದಾದ್ರೂ ಚಂದ ಇಲ್ದಿರೊವ್ರಿಗೆ ಹೊಡೆಯಿರಿ...
ಅವಳೂ ಖುಷಿಯಾಗ್ತಾಳೆ.."

ಕಾಚಶ್ರೀ ತನ್ನ ಅನುಭವವನ್ನೂ ಹೇಳಿದ...

"ಚಂದ ಇರೋವ್ರಿಗೆ ಧಿಮಾಕು ಜಾಸ್ತಿ... ಕಣ್ರೋ...
ನಾಳೆ ಬೆಳಿಗ್ಗೆ ಕಾಲೇಜಿನ ಮುಂದುಗಡೆ ಸಿರ್ಸಿ ರೋಡಿಗೆ ಎಲ್ರೂ ಬರ್ರೋ...
ನಾನೇ ನಿಮಗೆ ಹೇಳಿಕೊಡ್ತೀನಿ..."

ಅಂದಿನ ಶಿಬಿರ ಮುಕ್ತಾಯವಾಯಿತು....

ಮರುದಿನ ಬೆಳಿಗ್ಗೆ ಕಾಲೇಜು ಶುರುವಾಗುವ ಸಮಯಕ್ಕೆ ಮೊದಲೇ ಎಲ್ಲರೂ ಅಲ್ಲಿ ಸೇರಿದ್ದೆವು...

ಕಾಚಶ್ರೀ ಅಲ್ಲಿ ತಮಿಳು ಸಿನೇಮಾದ ಹೀರೋ ಹಾಗೆ ತಯಾರಾಗಿ ಬಂದಿದ್ದ...

" ನಿಮ್ಮದೆಲ್ಲ ಎಂಥಾ ಡ್ರೆಸ್ಸೋ ಇದು...
ಇದಕ್ಕೆಲ್ಲ ಈ ಥರಹದ ಡೀಸೆಂಟ್ ಇದ್ರೆ ಆಗಲ್ರಪ್ಪಾ...
ಸ್ವಲ್ಪ ಕೆಂಪು.. ಕಪ್ಪು ಹಳದಿ ಬಣ್ಣದ ಡ್ರೆಸ್ಸ್ ಇರಬೇಕು.. ಛೇ..!!"

ಕಪನೀಪತಿಯ ಕಣ್ಣು ರೋಡಿನ ಮೇಲಿತ್ತು....

"ಅಲ್ಲಿ ನೋಡ್ರೋ ರಾಜಿ ಬರ್ತಾ ಇದ್ದಾಳೆ...
ಅದೂ ಒಬ್ಬಳೆ ಬರ್ತಾ ಇದ್ದಾಳೆ... ಎಲ್ಲಾ ರೆಡಿ ಆಗ್ರೋ..."

ಗಡಬಡಿಸಿದ....!
ಎಲ್ಲರೂ ತಡಬಡಿಸಿ ಮಾನಸಿಕವಾಗಿ ತಯಾರಗತೊಡಗಿದರು...!!

ನಾನು ನಾಗು ಮುಖ ನೋಡಿದೆ....
50 comments:

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಬರಹ ಕುತೂಹಲ ಹುಟ್ಟಿಸುತ್ತಿದೆ ಬೇಗ ಮುಂದಿನದನ್ನು ಹಾಕಿ
ಎಂದಿನಂತೆ ಒಳ್ಳೆಯ ಶೈಲಿ

ಕ್ಷಣ... ಚಿಂತನೆ... bhchandru said...

ಪ್ರಕಾಶಣ್ಣ, ಕುತೂಹಲಭರಿತ ಬರಹ. ಮುಂದೇನು? ಏನಾಯಿತು ಅಂತ ಕಾಯಿಸುವ `ಶೈಲಿ' ಚೆನ್ನಾಗಿದೆ.

ಚಿತ್ರಾ said...

ಪ್ರಕಾಶಣ್ಣ,
ಡೀಸೆಂಟ್ ಆಗಿ ಲೈನ್ ಹೊಡೆಯೋದು ಬೇರೆ ಇರುತ್ತದೆ ಅಂತ ಈಗಲೇ ಗೊತ್ತಾಗಿದ್ದು !!! ಹಾ ಹಾ ಹಾ ..
ಲವ್ ಆಗದೆ ಇರೋ ತರ ಬೇರೆ ಲೈನ್ ಹೊಡೆಯೋದು ಹೇಗೆ ಅಂತ ಬೇರೆ ನಿಮ್ಮ ತಲೆ ಬಿಸಿ !
ಇನ್ನು ,ಅದರಲ್ಲಿ ವಿವಿಧ ಪ್ರಕಾರಗಳು !! ಇಷ್ಟ ಆಗದಿರುವವರಿಗೆ, ಚೆಂದ ಇರುವವರಿಗೆ, ಶ್ರೀಮಂತರ ಮಗಳಿಗೆ...
ಮಜಾ ಇದೆ ನಿಮ್ಮ ಕಥೆ. ಈಗಲೇ ನಗು ತಡೆಯಲಾಗುತ್ತಿಲ್ಲ ನೀವೆಲ್ಲ ಲೈನ್ ಹೊಡೆದ ಬಗೆಯನ್ನು ತಿಳಿಯಲು ಕಾಯುತ್ತಿದ್ದೇನೆ !
ಬೇಗ ಮುಂದಿನ ಭಾಗವನ್ನೂ ಹಾಕಿ.

shruthi said...

its very nice story..i am very curious to know what is going to happen..waiting for the next session....

ರಾಜೀವ said...

ಲೈನ್ ಹೊಡೆಯುವುದಕ್ಕೂ ಟ್ರೈನಿಂಗ್ ಇರತ್ತೆ ಎಂದು ತಿಳಿದದ್ದೇ ಇವತ್ತು !!
ಇತ್ತೀಚಿಗೆ ಬಡತನ ಪ್ರೀತಿ ಪ್ರೇಮಕ್ಕೆ ಹತ್ತಿರವಾಗುತ್ತಿದೆ. ಆದರೆ ಕುರೂಪ ಪ್ರೇಮದಿಂದ ದೂರವೇ ಇಳಿದಿದೆ. (ಗಂಡಸರ ಗ್ರಹಿಕೆಯಲ್ಲಿ)

ಮುಂದೆ ಏನಾಗುತ್ತದೆ ಅನ್ನುವದಕ್ಕಿಂತ ನಾಗುವಿನ ಎರಡನೇ ಕಂಡೀಶನ್ ಏನಿರಬಹುದೆಂಬ ಕುತೂಹಲ.

ಮನಸು said...

hahaha prakashanna chennagide haha training chennage nededide..

ಸವಿಗನಸು said...

ಪ್ರಕಾಶಣ್ಣ,
ಕುತೂಹಲಭರಿತವಾಗಿದೆ......
ಡೀಸೆಂಟ್ ಆಗಿ ಲೈನ್ ಹೊಡೆಯೋದು....ಚೆನ್ನಾಗಿದೆ
ನಾಗುವಿನ ಇನ್ನೊಂದು ಕಂಡೀಶನ್ ತಿಳಿದುಕೊಳ್ಳಬೇಕು....
ಬೇಗ ಮುಂದಿನ ಭಾಗವನ್ನು ಹಾಕಿ....

PARAANJAPE K.N. said...

ಡೀಸೆ೦ಟ್ ಆಗಿ ಲೈನ್ ಹೊಡೆಯೋದರಲ್ಲಿ ತರಬೇತಿ ಪಡೆದಿರುವ ಪ್ರಕಾಶರೆ, ನಿಮ್ಮ ಅನುಭವಾಮೃತ ದ ಮುಂದಿನ ಭಾಗ ಬೇಗ
ಹಾಕುವ೦ಥವರಾಗಿ.

ಚುಕ್ಕಿಚಿತ್ತಾರ said...

ಇಷ್ಟೆಲ್ಲಾ ತಯಾರಿ ಮಾಡಿ ಕಡೆಗೂ ಲೈನ್ ಹೊಡೆದಿರಾ ...ಇಲ್ಲವಾ ಅನ್ನುವುದೇ ಟೆನ್ಶನ್ ಆಗುತ್ತಿದೆ ನನಗೆ.....!!

ಸಿಮೆಂಟು ಮರಳಿನ ಮಧ್ಯೆ said...

ಡಾ. ಗುರುಮೂರ್ತಿಯವರೆ(ಸಾಗರದಾಚೆ ಇಂಚರ)

ಬರಿ ಪುಸ್ತಕ.. ಪುಸ್ತಕ ಅಂತ ನನಗೂ ಬೋರಾಗಿ ಹೋಗಿತ್ತು...
ಹೊಸ ಪ್ರಾಜೆಕ್ಟ್ ಬೇರೆ ಶುರುವಾಗಿತ್ತು..
ಕೆಲಸದ ಒತ್ತಡದ ಮಧ್ಯೆ ಬರೆಯಲು ತಡವಾಯಿತು...

ಗೆಳೆಯರ ಬ್ಲಾಗ್‍ಗಳಿಗೆ ಹೋಗಲೂ ಆಗಲಿಲ್ಲ...
ದಯವಿಟ್ಟು ಬೇಸರ ಪಟ್ಟುಕೊಳ್ಳದಿರಿ...

ಈ ಲೈನ್ ಹೊಡಿಯೋ ವಿಚಾರ ಮೊದಲು ಹೊಕ್ಕಿದ್ದು ಪೆಟ್ಟಿಗೆ ಗಪ್ಪತಿಗೆ...

ನಮಗೆಲ್ಲ ಟ್ರೇನಿಂಗ್ ಕೊಟ್ಟ "ಕಾಚಶ್ರೀ" ಮಹಾಶಯ,
ಅವನ ಸ್ಟೈಲುಗಳು ಮಸ್ತ್ ಇದ್ದವು...

ನಾನು ಕೆಲವು ಬಾರಿ ಸ್ಟೇಜಿನ ಮೇಲೆ ಮಿಮಿಕ್ರಿ ಮಾಡುವಾಗ ಬಳಸಿಕೊಡಿದ್ದಿದೆ...

ಅವನಲ್ಲಿ ಒಂದು ಕಲೆಯಿತ್ತು...

ಎಂಥಹ ಹೆಣ್ಣುಮಕ್ಕಳನ್ನೂ ನಿಮಿಷದಲ್ಲಿ "ಅಪಾರ್ಥ" ಬಾರದ ಹಾಗೆ ಲೈನ್ ಹೊಡೆದು ಮಾತಾಡಿಸಿ ಬರುತ್ತಿದ್ದ...!

ಅದು, ಅಂಥಾದ್ದು ಅವನಿಗೆ ಮಾತ್ರ ಸಾಧ್ಯ...
ಅಂಥವರಿಗೆ ಮಾತ್ರ ಸಾಧ್ಯ...!!

ಮೊದಲನೆ ಪ್ರ್ತಿಂಟ್ ಖಾಲಿ ಆಗಿದೆ...
ಎರಡನೆ ಆವ್ರತ್ತಿ ಇನ್ನೂ ನನ್ನ ಕೈಗೆ ಸಿಕ್ಕಿಲ್ಲ...

ಸಿಕ್ಕ ಕೂಡಲೆ ನನಗೆ ವಿಳಾಸ ಕೊಟ್ಟ ಎಲ್ಲರಿಗೂ ಕಳುಹಿಸಿ ಕೊಡುವೆ...

ನಿಮ್ಮ ಪ್ರೋತ್ಸಾಹಕ್ಕಾಗಿ ಅನಂತ
ಅನಂತ ಧನ್ಯವಾದಗಳು....

ದಿನಕರ ಮೊಗೇರ.. said...

ಪ್ರಕಾಶಣ್ಣ,
ಶೀರ್ಷಿಕೆ ತುಂಬಾ ಗಂಭೀರವಾಗಿತ್ತು...... ಓದುತ್ತಾ ಹೋದಂತೆಲ್ಲಾ ನಗು ತಡೆಯಲಾಗಲಿಲ್ಲ..... ನಗಿಸುತ್ತಾ ನಗಿಸುತ್ತಾ , philosophy ಹೇಳಿದ್ದೀರಾ... ಬಡತನ, ಕುರೂಪ ಪ್ರೀತಿ, ಪ್ರೇಮದಿಂದ ದೂರ ಇರ್ತವೆ ಅಲ್ವಾ...? ಇದೆಲ್ಲಾ ಮಾತು ತುಂಬಾ ಆಳದಿಂದ ಬರತ್ತೆ ಆಲ್ವಾ .... ತುಂಬಾ ಕುತೂಹಲ ಮುಡಿಸಿದ್ದೀರ...... ನಾಗನ ಷರತ್ತು, ನಿಮ್ಮ ಅನುಭವ, ನೀವು ಆಯ್ಕೆ ಮಾಡಿದ ಹುಡುಗಿ...... ಬೇಗ ಮುಂದಿನ ಭಾಗಕ್ಕಾಗಿಕಾಯುತ್ತಿದ್ದೇನೆ....

ಸಿಮೆಂಟು ಮರಳಿನ ಮಧ್ಯೆ said...

ಕ್ಷಣ ಚಿಂತನೆ (ಚಂದ್ರು..)

ಪ್ರೇಮಕ್ಕೂ ಚಂದಕ್ಕೂ ಯಾಕೆ ನಂಟು...?

ಪ್ರೇಮಿಸುವವರಿಗೆ ಕಣ್ಣು, ಮುಖ ದೇಹ ಇತ್ಯಾದಿಗಳು ಸುಂದರವಾಗಿ ಕಂಡು ಆಕರಷಣೆಗೆ ಒಳಗಾಗುತ್ತಾರೆ...

ಹಾಗಾದರೆ ಪ್ರೇಮ ಹೃದಯದಲ್ಲಿಲ್ಲ...!

ತಲೆಯಲ್ಲಿ...

ತಲೆಗೆ ಚಂದ ಬೇಕು.. ಕುರೂಪ ಬೇಡ... ಅಲ್ಲವಾ..?

ಕುರೂಪ ಇದ್ದವರು ಪ್ರೀತಿ ಪ್ರೇಮಕ್ಕೆ ಅನರ್ಹರಾ...?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ಶಿವಪ್ರಕಾಶ್ said...

ಒಹ್... ಲವ್ ಟ್ರೈನಿಂಗ್ ಸ್ಕೂಲ್... ಹ್ಹಾ ಹ್ಹಾ ಹ್ಹಾ...
ಚನ್ನಾಗಿದೆ ಪ್ರಕಾಶಣ್ಣ...
ಅಂದಹಾಗೆ ಮುಂದೇನಾಯ್ತು ಪ್ರಕಾಶಣ್ಣ....?

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ...

ಸ್ವಲ್ಪವೂ ಲೈನ್ ಹೊಡೆಸಿಕೊಳ್ಳದಿದ್ದರೆ ಜನ್ಮವೇ ವೇಸ್ಟ್ ಅಂತೆ...
ತನ್ನ ಅಲಂಕಾರ ಚಂದವನ್ನು ಬೇರೆಯವರು ಗಮನಿಸುತ್ತಿದ್ದಾರೆ...
ನೋಡುತ್ತಿದ್ದಾರೆಂಬ "ಹೆಮ್ಮೆ" ಹೆಣ್ಣಿಗೆ ಬೇಕಂತೆ...

ಅದರಲ್ಲಿ ಅವಳ ಅಲಂಕಾರದ , ಅಂದದ ಸಾರ್ಥಕತೆ ಇದೆಯಂತೆ...

ಲೈನ್ ಹೊಡೆಯುವದೆಂದರೆ ಅಂದದ, ಅಲಂಕಾರದ "ಪ್ರಶಂಸೆ"

ಪ್ರಶಂಸೆಯನ್ನು ಹೇಗೆ ಮಾಡುತ್ತಾರೆ ಎನ್ನುವದ್ದು ಅವರವರ ಸಂಸ್ಕಾರಕ್ಕೆ ಬಿಟ್ಟ ವಿಚಾರ...

ಆ ದಿನಗಳಲ್ಲಿ ...

"ಯಾಕೆ ನೋಡಿ ಅನುಭವ ತೆಗೆದುಕೊಳ್ಳ ಬಾರದೆಂಬ ಕುತೂಹಲಕ್ಕೆ ಒಳಗಾಗಿದ್ದರೆ
ಅದಕ್ಕೆ ಕಾರಣ ಆ ವಯಸ್ಸು...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

goutam said...

ಮುಂದ ?:)

ದಿಲೀಪ್ ಹೆಗಡೆ said...

ನಿಮ್ಮ ಗ್ಯಾಂಗ್ ಮೇಲೆ ಹೊಟ್ಟೆ ಉರಿ ಪಟ್ಟುಕೊಳ್ತಿದ್ದೇನೆ ಪ್ರಕಾಶಣ್ಣ...
ಕಾಲೇಜ್ ದಿನಗಳಲ್ಲಿ ಸಕ್ಕತ್ ಮಜಾ ಉಡಾಯಿಸಿದೆ ನಿಮ್ಮ ಗ್ಯಾಂಗ್...
ಮುಂದೇನಾಯ್ತು..? ಕಾಚಶ್ರೀ ಯ ಲವ್ ಟ್ರೈನಿಂಗ್... ಅಲ್ಲಲ್ಲ... ಲೈನ್ ಟ್ರೈನಿಂಗ್ ಯಾವ ಬಾನಗಡೆಗೆ ಕಾರಣವಾಯ್ತು..?? ಬೇಗ ಹೇಳಿ..

Chetana said...

very interesting ..Prakashanna..waiting for the next part.

ಸಿಮೆಂಟು ಮರಳಿನ ಮಧ್ಯೆ said...

ಶ್ರುತಿಯವರೆ...

ನನ್ನ ಬ್ಲಾಗಿಗೆ ಸ್ವಾಗತ....!

ಲೈನ್ ಹೊಡೆಯುವ ಶಬ್ಧಕ್ಕೆ ಕನ್ನಡದಲ್ಲಿ "ಚುಡಾಯಿಸುವದು" ಅನ್ನಬಹುದು..

ಆ ಕೆಲಸಕ್ಕೊಂದು ಗೌರವ ರೂಪ ಕೊಡಲು ಹೋದವರು ನಾವು...

ಹ್ಹಾ...ಹ್ಹಾ....!

ಈಗ.. ಈ ದಿನಗಳಲ್ಲಿ
ಆ ಹಳೆಯ ನೆನಪುಗಳು, ಆ ಪುಂಡಾಡಿಕೆಗಳು ಮುದಕೊಡುವದಂತೂ ನಿಜ...

ಇಷ್ಟಪಟ್ಟಿದ್ದಕ್ಕೆ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

umesh desai said...

ಹೆಗಡೆಜಿ, ನಾ ಭಾಳ ಸಂಭಾವಿತ ಹುಡುಗ ನಿಮ್ಮ ಲೇಖನ ಓದಿ ಕೆಡಬಹುದು ಏನು ಮಾಡಲಿ

Umesh Balikai said...

ಪ್ರಕಾಶ್ ಸರ್,

ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬರಲಾಗಲಿಲ್ಲ; ಕ್ಷಮೆಯಿರಲಿ..

ಲೇಖನ ತುಂಬಾ ಕುತೂಹಲಕಾರಿಯಾಗಿದೆ... ನನ್ನ ಕಾಲೇಜು ದಿನಗಳು ನೆನಪಿಗೆ ಬರ್ತಾ ಇವೆ.. ಲೈನೂ ಹೊಡೀಬೇಕು, ಹುಡುಗ ಡೀಸೆಂಟ್ ಅಂತಾನೂ ಅನ್ನಿಸ್ಕೋಬೇಕು ಅನ್ನೋ ದ್ವಂದ್ವ ಪ್ರತಿ ಹುಡುಗನಲ್ಲೂ ಇರುತ್ತೆ ಅನ್ಸುತ್ತೆ... ನಿಮ್ಮ ಬರವಣಿಗೆ ಶೈಲಿ ನೋಡ್ತಾ ಇದ್ರೆ ನೀವು ಫುಲ್ಲ್ ಟೈಮ್ ಬರಹಗಾರರಾಗುವ ಎಲ್ಲ ಗುಣಗಳೂ ಗೋಚರಿಸ್ತಾ ಇವೆ.. ಮುಂದಿನ ಭಾಗಕ್ಕೆ ಕಾಯ್ತಾ ಇದೀವಿ..

- ಉಮೇಶ್

ಸೀತಾರಾಮ. ಕೆ. said...

mundine sanchikege kutuhaladinda kaaytha iddeve. rochaka kathe nadithaaa ide

sunaath said...

ಮತ್ತೆ ಸಸ್ಪೆನ್ಸು!
‘ಯಾವದೂ ಎಡವಟ್ಟು ಆಗದಿರಲಿ ದೆವರೇ’, ಎಂದು ಪ್ರಾರ್ಥಿಸುತ್ತಾ ಕೂತಿರುವೆ.

ವಿನುತ said...

ಗಂಭೀರ ವಿಷಯಗಳನ್ನು ಹಾಸ್ಯದಲ್ಲಿ ಹಾಗೇ ತೇಲಿಸಿಬಿಡುತ್ತೀರಿ. ನಿಜ, ಬಡತನದ ಖಾತ್ರಿಯಿಲ್ಲ, ಆದರೆ ಕುರೂಪ ಪ್ರೀತಿ-ಪ್ರೇಮದಿಂದ ದೂರವೇ!
ನೆನೆಗುದಿಗೆ ತಳ್ಳಿದ್ದೀರಿ. ಎಲ್ಲರಂತೆ ಮುಂದಿನ ಭಾಗಕ್ಕೆ ಕಾಯುತ್ತಿರುವೆ.

AntharangadaMaathugalu said...

ಪ್ರಕಾಶ್ ಸಾರ್...

ಎಲ್ಲವನ್ನೂ ಒಳ್ಳೆಯ ಕುತೂಹಲಕರವಾಗಿ ನಿಲ್ಲಿಸಿ ಬಿಟ್ಟು ಮುಂದಿನ ಭಾಗಕ್ಕೆ ಕಾಯುವಂತೆ ಮಾಡಿತ್ತೀರ... ಲೈನ್ ಹೊಡೆಯಲು ಟ್ರೈನಿಂಗ್ ಬೇಕಾಗಿತ್ತಾ ನಿಮಗೆಲ್ಲಾ? ’ಕಾಚಶ್ರೀ’ ಅತ್ಯಂತ ಆಸಕ್ತಿಕರ ಪಾತ್ರ ಅನ್ನಿಸ್ತಿದೆ..... ಬೇಗ ಮುಂದೆ ಏನಾಯಿತು ಹೇಳಿ...

ಸಿಮೆಂಟು ಮರಳಿನ ಮಧ್ಯೆ said...

ರಾಜೀವ...

ಲೈನ್ ಹೊಡೆಯೋದರ ಬಗೆಗೆ ಟ್ರೇನಿಂಗ್ ಬೇಕು ಅಂದು ಐಡಿಯಾ ಕೊಟ್ಟವನೂ "ಪೆಟ್ಟಿಗೆ ಗಪ್ಪತಿ"
"ಕಾಚಶ್ರೀ" ಕರೆತಂದವನು ನಾಗು....

ಪ್ರೇಮಕ್ಕೆ ಬಡತನ ಪ್ರಭಾವ ಬೀರಿದರೂ...
ಕುರೂಪ ಮಾತ್ರ ಪ್ರೇಮಕ್ಕೆ ದೂರವಾಗಿಯೇ ಇದೆ...

ಕುರೂಪ ಇದ್ದವರಿಗೂ ಮನಸ್ಸಿರುತ್ತದೆ ಅಲ್ಲವಾ...?
ಹೃದಯ ಇರುತ್ತದೆ ಅಲ್ಲವಾ...?

ಜೀವನ ಪೂರ್ತಿ ಸಹಜ ಆಸೆಗಳನ್ನು ಹತ್ತಿಕ್ಕಿ...
ಎಷ್ಟು ನಿರಾಸೆ ಪಡ ಬಹುದು ಅವರು...?

ಹಾಗಾದರೆ ಈ ಪ್ರೇಮ, ಪ್ರೀತಿ ಹೃದಯಕ್ಕೆ ಸಂಬಂದಿಸುದುದಲ್ಲ...!!
ಅದು ವಿಚಾರಕ್ಕೆ.., ತಲೆಗೆ ಸಂಭದಿಸಿದ್ದು...
ಅಲ್ಲವಾ...?

ಇಷ್ಟ ಪಟ್ಟು ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಧನ್ಯವಾದಗಳು...

ನಿಮ್ಮ ಪ್ರೋತ್ಸಾಹ ಇನ್ನಷ್ಟು ಉತ್ಸಾಹ ಕೊಡುತ್ತದೆ...

ಸುಪ್ತವರ್ಣ said...

ಎರಡನೇ ಪುಸ್ತಕದ ತಯಾರಿ ಆಗಲೇ ಶುರುಮಾಡಿಬಿಟ್ಟಿದ್ದೀರಿ ! ಚೆನ್ನಾಗಿದೆ. ನೀವೊಂದು murder mystery ಬರೆಯುತ್ತೇನೆಂದು ತುಂಬಾ ಮೊದಲು ಹೇಳಿದ್ದಿರಿ. ಅದರ ತಯಾರಿ ಎಲ್ಲಿಗೆ ಬಂತು ಹೆಗಡೆಯವರೆ?

ಸಿಮೆಂಟು ಮರಳಿನ ಮಧ್ಯೆ said...

ಮನಸು....

ಕಾಲೇಜಿನ ಆ ದಿನಗಳು ಯಾರಿಗೂ ಮತ್ತೆ ಮರಳಿ ಬರುವದಿಲ್ಲ..
ಸುವರ್ಣ ದಿನಗಳು ಅವು...

ತುಂಟತನ ಮಾಡಿದ್ದರೂ ಸಭ್ಯತೆಯನ್ನು ಮೀರಿ ನಡೆಯಲಿಲ್ಲ...
ನಮ್ಮ ಗೆಳೆಯರ ಗುಂಪು ಹಾಗಿತ್ತು...

ಪೆಟ್ಟಿಗೆ ಗಪ್ಪತಿಯ ಮದುವೆ ಪ್ರಸಂಗ..
ನಾಗು, ರಾಜಿಯ ಕಥೆ...

ಇನ್ನೂ ಹಲವು ವಿಷಯಗಳು ಹೇಳಲೇ ಬೇಕಾಗಿದೆ...
ಮುಂದಿನ ದಿನಗಳಲ್ಲಿ ಹೇಳುವೆ...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸವಿಗನಸು.. (ಮಹೇಶ್)

ನಾಗುವಿನ ಇನ್ನೊಂದು ಕಂಡಿಷನ್ ಈಗಲೇ ಹೇಳುವಂತಿಲ್ಲ...
ತುಂಬಾ ಲೆಕ್ಕಾಚಾರದ ಮನುಷ್ಯ.. ಆತ...

ಅಂದು ಪುಸ್ತಕ ಬಿಡುಗಡೆಗೆ ಬರಬೇಕಿತ್ತು...

ಅನಾರೋಗ್ಯದ ಕಾರಣ ಬರಲಿಲ್ಲ...

ಅದನ್ನೂ ಬರೆಯಬೇಕು... ವಿಷಯ ಹಾಗಿದೆ...

ಯಾವುದನ್ನು.. ಎಲ್ಲಿಂದ ಶುರು ಮಾಡಲಿ..?
ನನ್ನಲ್ಲೇ ಗೊಂದಲವಿದೆ...

ಬರೆಯಲು ಶುರುಮಾಡಿದ್ದೇನೆ.. ನೋಡೋಣ...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...

ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ....

ತುಂಟತನ ಮಾಡಬೇಕೆಂದು ಎಲ್ಲರ ಮನದಲ್ಲೂ ಸುಪ್ತವಾಗಿ ಇದ್ದೇ ಇರುತ್ತದೆ...
ನಮ್ಮ ಗೆಳೆಯರ ಗುಂಪು ಹಾಗಿತ್ತು...

ಕಳೆದ ಒಂದು ತಿಂಗಳಿಂದ ಪುಸ್ತಕ... ಪುಸ್ತಕ ಅಂತ ಬೋರು ಬಂದು ಬಿಟ್ಟಿತ್ತು...
ಮತ್ತೆ ಫ್ರೆಷ್ ಆಗಿದ್ದೇನೆ...

ನಿಮ್ಮ ಪ್ರೋತ್ಸಾಹಕ್ಕೆ ಚಿರ ಋಣಿ...
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಚುಕ್ಕಿ ಚಿತ್ತಾರ....

ನಿಮ್ಮ ಈ ಸಾರಿಯ ಲೇಖನ ಓದಿ ನಕ್ಕು, ನಕ್ಕು ಸುಸ್ತಾಗಿದ್ದೇನೆ...
ತುಂಬಾ ಸೊಗಸಾಗಿ ಬರೆದಿದ್ದೀರಿ...
ಮತ್ತೊಮ್ಮೆ ಅಭಿನಂದನೆಗಳು...

ಪುಸ್ತಕ ಬಿಡುಗಡೆಯ ಗುಂಗಿನಿಂದ ಹೊರ ಬರಲು ಕಷ್ಟವಾಯಿತು...

ಪುಸ್ತಕ ಬಿಡುಗಡೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು...
ಅದಕ್ಕೆ ನಿಮ್ಮ ಶುಭ ಹಾರೈಕೆ..
ನಿಮ್ಮ ಪ್ರೋತ್ಸಾಹ ಕಾರಣ...

ನಿಮಗೆಲ್ಲರಿಗೂ ಕೃತಜ್ಞನಾಗಿದ್ದೇನೆ...


ಅಂದು ಕಾರ್ಯಕ್ರಮಕ್ಕೆ ರಾಜಿ ಬಂದಿದ್ದಳು...!!!!!!!!

ಪ್ರತಿಕ್ರಿಯೆಗಾಗಿ ಧನ್ಯವಾದಗಳು... ಚುಕ್ಕಿ ಚಿತ್ತಾರ...

ಸಿಮೆಂಟು ಮರಳಿನ ಮಧ್ಯೆ said...

ದಿನಕರ...

ಆಕರ್ಷಣೆಗೆ ಚಂದ ಬೇಕು ...
ಇದು ಪ್ರಕೃತಿ...
ಸಹಜ...

ಕುರೂಪ ಏನು ಮಾಡ ಬೇಕು...?

ಕುರೂಪ ಕೂಡ ಚಂದವನ್ನು ಬಯಸುತ್ತದೆ... ಅಲ್ಲವಾ...?
ಇದು ಸೋಜಿಗ...!!!!!!!

ಇದರ ಬಗೆಗೆ ಬಹಳ ಬಾರಿ ತಲೆ ಕೆಡಿಸಿಕೊಂಡಿದ್ದಿದೆ...

ನಿಮ್ಮ ಚಂದದ ಪ್ರತಿಕ್ರಿಯೆಗಳು ಮತ್ತಷ್ಟು ಉತ್ಸಾಹ ತಂದಿದೆ...

ನನಗೆ ಪ್ರತಿಕ್ರಿಯೆಗಳು ಬಂದಷ್ಟು ಬರೆಯಲು ಖುಷಿ..
ಇದು ತಪ್ಪೆಂದು ನನಗೆ ಅನ್ನಿಸುವದಿಲ್ಲ...

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

ಸುಧೇಶ್ ಶೆಟ್ಟಿ said...

interesting aagide.. mundina bhaagakke kaayteeni...

haudu.. sapthavarna avaru helida haage yellige banthu kaadambariya vishaya... eradane pusthaka kaadambariye aagali prakashanna :)

ಆನಂದ said...

ನನ್ನ ಕಾಲೇಜಿನ ದಿನಗಳನ್ನು ಮತ್ತೆ ನೆನಪಿಸಿದಿರಿ ನೀವು. ಕಥೆ ತುಂಬಾ ಚಿನ್ನಾಗಿದೆ. ಮುಂದಿನ ಭಾಗಕ್ಕೆ ಕಾಯ್ತಾ ಇದ್ದೀನಿ. :)

ರವಿಕಾಂತ ಗೋರೆ said...

ಸೂಪರಾಗಿದೆ... ಬೇಗ ಮುಂದುವರೆಸಿ...

ಸಿಮೆಂಟು ಮರಳಿನ ಮಧ್ಯೆ said...

ಶಿವಪ್ರಕಾಶ್....

ನಮ್ಮ ಕಾಲೇಜಿನ ಬಹಳಷ್ಟು ಸಭ್ಯ ಹುಡುಗರ ಸಮಸ್ಯೆ ಇದಾಗಿತ್ತು...
ಹೆಣ್ಣುಮಕ್ಕಳನ್ನು ಮಾತನಾಡಿಸಬೇಕು...

ಅದರಲ್ಲಿ ಸಭ್ಯತೆ ಇದ್ದಿರ ಬೇಕು...

"ಕಾಚಶ್ರೀ" ಕಂಡು ಸ್ವಲ್ಪ ಹೊಟ್ಟೆಯುರಿ ಎಲ್ಲರಿಗೂ ಇತ್ತು...

ಕಾಚಶ್ರೀ ಒಬ್ಬ ಅಧ್ಬುತ ಲೈನ್ ಮಾಸ್ಟರ್" ಆಗಿದ್ದ..

ಅವನ ಮಾತು, ರೀತಿ ಮಸ್ತ್ ಇದ್ದವು...

ಅವನ ಬಗೆಗೆ ಬರೆಯಲು ಬೇಕಾದಷ್ಟು ವಿಷಯಗಳಿವೆ....

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಗೌತಮ್....

ಹೇಳಿಬಿಟ್ಟರೆ ಸ್ವಾರಸ್ಯ ಇರುವದಿಲ್ಲವಲ್ಲ...
ಸ್ವಲ್ಪ ಕಾಯಿರಿ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ದಿಲಿಪ್...

ನಮ್ಮ "ಕಾಚಶ್ರೀ" ಇಷ್ಟೆಲ್ಲ ಜನಪ್ರಿಯ ಆಗುತ್ತಾನೆಂದು ಗೊತ್ತಿರಲಿಲ್ಲ...
ಅವನ ಇನ್ನೊಂದೆರಡು ಘಟನೆ ಮಸ್ತ್ ಆಗಿದೆ...

ಯಾವುದೇ ಹುಡುಗಿಯಿರಲಿ ಅವಳನ್ನು ಮಾತಾಡಿಸಿ ಬರುವ ತಾಕತ್ತು "ಕಾಚಶ್ರೀ" ಗೆ ಇತ್ತು...
ಬಹುಷಃ ಪ್ರತಿ ಕ್ಲಾಸಿನಲ್ಲಿ ಅಂಥವರೊಬ್ಬರು ನಮಗೆ ಸಿಕ್ಕೇ ಸಿಗುತ್ತಾರೆ...

ಅವನ ಮಾತುಗಳೋ... ಅವನ ಥಿಯರಿಗಳೋ...
ಒಂಥರಾ ಮಜವಾಗಿದ್ದವು...

ನಮ್ಮ ಅಂದಿನ ತುಂಟಾಟ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

shivu said...

ಪ್ರಕಾಶ್ ಸರ್,

ಮತ್ತೆ ಎಂದಿನಂತೆ ಹೊಸ ಹುರುಪಿನಿಂದ ಲೈನ್ ಹೊಡೆಯುವ, ಕಲಿಯುವ ಲೇಖನವನ್ನು ಹಾಕಿದ್ದೀರಿ. ಕುತೂಹಲಬರಿತವಾಗಿದೆ.
ಒಂದು ವಾರದ ಜ್ವರದಿಂದ ಚೇತರಿಸಿಕೊಳ್ಳಲಾಗದೆ, ಬರಹ, ಬ್ಲಾಗ್ ಲೋಕವನ್ನು ಮರೆತಿದ್ದೇನೆ. ನಿಮ್ಮ ಈ ಬರಹ ನನ್ನ ಜ್ವರವನ್ನು ಹೋಗಲಾಡಿಸುವುದೆ!

ಗೌತಮ್ ಹೆಗಡೆ said...

ಪ್ರಕಾಶಣ್ಣ ಎಂತ ಮಾರಾಯ ಎಂಗೆಲ್ಲ ಬಹುವಚನ ಕೊಟ್ಟು " ಕಾಯಿರಿ ಗೀಯಿರಿ " ಎಲ್ಲ ಹೇಳ್ತೆ . :)

ಜಲನಯನ said...

ಪ್ರಕಾಸಪ್ಪೋ..ಎಂತಾ ಎಡವಟ್ಮಾಡ್ಕಂಡಿವ್ನಿ ನಾನು ಅಂತೀನಿ..ಅಲ್ಲಾ..ಇಂಗಿಂಗೆ...ನನ್ತಾವು..ಲೈನು ಒಡೀಯಾಕೆ ತರ್ಬೇತೀಗೆ ಜನ ಅವ್ರೆ ಅಂತ ಯೋಳಕಿಲ್ವ...ಒಂದಪ ನನ್ಗೆ..ಒಂದುಡ್ಗೀಗೆ ಲೈನು ಒಡ್ದೆ..ಅಡ್ಕಸ್ಬಿ ಅಂಗೆ ಅವ್ಳ ಸೋದರ್ಮಾವ ಅಟ್ಕಾಯ್ಸವ್ನೆ..ಎಂಗಪ್ಪಾ..?..ಅಂದ್ಕಂಡಿದ್ದೆ...ತಗಾ...ಬಂದ್ಬಿಡ್ತೀನಿ ನಿಂತಾವ್ಕೆ...ಆಲಲ್ಲಾದ್ರೂ ಆಕು..ನೀರಲ್ಲಾದ್ರೂ ಆಕು...ಸರೀನಾ..???

ಸಿಮೆಂಟು ಮರಳಿನ ಮಧ್ಯೆ said...

ಚೇತನಾ....

ನನ್ನ ಬ್ಲಾಗಿಗೆ ಸ್ವಾಗತ...

ಹದಿಹರೆಯದ ಆದಿನಗಳಲ್ಲಿ...
ಹುಚ್ಚುಕೋಡಿಯ ಮನಸು..
ಬಾಲವೊಂದು ಇತ್ತಿಲ್ಲ ಅನ್ನುವದೊಂದು ಬಿಟ್ಟರೆ
ಬಾಕಿ ಎಲ್ಲ ಲಕ್ಷಣಗಳು ನಿಚ್ಚಳವಾಗಿದ್ದವು..

ಈಗ ನಗು ಬರುತ್ತದೆ..
ನೆನಪು ಮಾಡಿಕೊಳ್ಳುವದರಲ್ಲಿ ಸುಖವೂ ಇದೆ..

ಧನ್ಯವಾದಗಳು...

manamukta said...

ಹಾಸ್ಯಭರಿತ ಲೇಖನದ ಅ೦ತ್ಯದ ಬಗ್ಗೆ ಕುತೂಹಲ ಉ೦ಟಾಗುತ್ತಿದೆ.....ಮು೦ದೇನಾಯ್ತು???

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಸಕತ್ತಾಗಿದೆ ನಿಮ್ಮ ಆಟಗಳು. ನಾವೆಲ್ಲ ಕಾಲೇಜಿನ ದಿನಗಳಿಗೆ ಜಾರುವಂತಾಯ್ತು. ತುಂಬಾ ಕುತೂಹಲದಿಂದ ಮುಂದಿನ ಕಂತಿಗೆ ಕಾಯುತ್ತಿರುವೆವು. ಬೇಗ ಹಾಕಿ ...
ಕಚಶ್ರೀ, ಡಿಸೆಂಟಾಗಿ ಲವ್!!!
ನೀವು ಹೊಸ ಡಿಕ್ಷನರಿ ಬರೀತೀರ ...!

Ramesh said...

ಕಾಲೇಜು ದಿನಗಳ ಆ ಹಕಿಕತ್ತು ನೆನಪಿಸುತ್ತಿದ್ದಿರಿ ...ಈಗ ಅದನ್ನೆಲ್ಲ ಹೇಳಿದರೆ ನಾಚಿಕೆ ಬಿಟ್ಟು ಹೇಳುತ್ತಿದ್ದನಲ್ಲ ಅನಿಸಿದರು ಮದುವೆಆಗಿ ಮಕ್ಕಳಗಿರುವುದರಿಂದ ಹೆಂಡತಿಯು ಏನು ಹೇಳಲಾರಳು ಎಂಬ ಕೆಟ್ಟ ದಯ್ಯಿರ್ಯ ಬೇರೆ..!!ಮುಂದುವರಿಸಿ...ನನ್ನ ಜೀವನದ ನೆನಪನ್ನು...ಕೆದಕುತ್ತಿದೆ?!ಅಲ್ಲದೆ ಆ ಅವ್ಳು..ಸಿರ್ಸಿಯವಳು ಅನ್ನುವುದು ಕಾಕತಾಳಿಯ!!

ರೂಪಾ said...

ಪ್ರಕಾಶ್ ಸಾರ್
ಟ್ರೈನಿಂಗ್ ಹೇಗೆ ನಡೆಯಿತು ಎಂಬ ಬಗ್ಗೆ ಕುತೂಹಲವಿದೆ . ಮುಂದಿನ ಕಂತು ಓದಿ ಪ್ರತಿಕ್ರಿಯೆ ಹಾಕುವೆ

Shree said...

maja iddo prakashanna..

ಎಚ್.ಎನ್. ಈಶಕುಮಾರ್ said...

ಲೈನ್ ಹೊಡೆಯೋಕೆ ತರಬೇತಿ ಸಿಕ್ಕಿತು ಸರ್ ನಮಗೆ...

ಕೃಷಿಕನ ಕಣ್ಣು said...

ಮುಂದೇನಾಯ್ತೊ ?. ಲೈನ್ ಹೊಡೆದಿರಾ ..ಇಲ್ಲ.."ಹೊಡೆಸಿ"ಕೊಂಡ್ರಾ?!.
ಪ್ರಕಾಶಾ,
ಪುಸ್ತಕ ಓದಿದೆ. ಹಲವನ್ನು ಬ್ಲಾಗಿನಲ್ಲಿ ಓದಿದ್ದೆನಾದರೂ ,ಪುಸ್ತಕ ರೂಪದಲ್ಲಿ ಓದುವ ಮಜವೇ ಬೇರೆ ನೋಡು !.
ಮತ್ತೆ ಮೊದಲಬಾರಿಗೆ ಓದುತ್ತಿರುವಂತೆ ಅನಿಸಿತು. ಓದುವಾಗ ಹಲವು ಬಾರಿ ಒಬ್ಬನೇ " ಗುಳುಕ್ಕ್" ನೇ ನಕ್ಕು,
ತಕ್ಷಣವೇ ಹುಳ್ಳಗೆ ಸುತ್ತ ಮುತ್ತ ನೋಡಿಕೊಂಡು ಮತ್ತೆ ಓದು ಮುಂದುವರಿಸ್ತಿದ್ದೆ !!.
-" ಅರೆ...! ..ತಿನ್ನುತ್ತಿದ್ದಾನಲ್ಲ....!...ಎಂಬಂತೆ..!"....,
-(ಭಾಷಣಕ್ಕಾಗಿ ಕಿಚಾಯಿಸಿ, ನಂತರ) " ರೀ...ತಮಾಷೆಗಂದೆ ...ಕೂತ್ಗೊಳ್ಳಿ...!" ,
-" ಚಪಾತಿಗೆ... ಚಪಾತಿ...ಅನ್ನುವುದನ್ನು....", - ಮುಂತಾದ ಅನೇಕ ಕಡೆಗಳಲ್ಲಿ ಹಾಗೇ ಆಯ್ತು.
ಮನೆಯವರಿಗೆಲ್ಲ ( ಪಕ್ಕದ ಮನೆಯವರಿಗೂ ) ಪುಸ್ತಕ ಕೊಟ್ಟು ಓದಿಸಿದೆ.
" ಹೆಸರೇ ಬೇಡ " ಪುಸ್ತಕ ಅಂದ್ಕೊಂಡು , " ಓದೋದೇ ಬೇಡ " ಅಂತ ಯಾರಾದ್ರೂ ಬಿಟ್ರೆ ,
ಅವರಿಗಾಗುವ ನಷ್ಟ ಅಷ್ಟಿಷ್ಟಲ್ಲ !!.
" ಇದೀಗ ನಗು ಬೇಕಾಗಿದೆ " ಅನಿಸುವಾಗೆಲ್ಲ ತೆರೆದು ಓದಲು ಪುಸ್ತಕವನ್ನು ಕೈಗೆಟಕುವಂತೆ ಇಟ್ಟುಕೊಳ್ಳುವಂತಿದೆ.
ಪುಸ್ತಕದಲ್ಲಿ ಹಾಸ್ಯದ ಜೊತೆಗೇ ನಮ್ಮೊಳಗಿನ ಅಪಸವ್ಯಗಳ ಬಗ್ಗೂ ಓಂದಿಷ್ಟು ಸಂದೇಶಗಳೂ ಉಂಟೆಂಬುದು ವಿಶೇಷ.
ಪುಸ್ತಕವು ಹಲವು ಮುದ್ರಣಗಳನ್ನು ಕಂಡರೂ ಆಶ್ಚರ್ಯವಿಲ್ಲ. ಹಾಗೇ ಆಗಲಿ ಕೂಡ.
" ಹೆಸರೇ ಬೇಡ " ದಿದ್ದರೂ ನಿನ್ನಿಂದ ಪುಸ್ತಕಗಳು ಬರುತ್ತಲೇ ಇರಲಿ !!.
ಮತ್ತೊಮ್ಮೆ ಅಭಿನಂದನೆಗಳೊಂದಿಗೆ ,
-ನಾಗೇಂದ್ರ .

ಕೃಪಾ said...

ನಮಸ್ತೆ ಪ್ರಕಾಶ್ ಹೆಗಡೆಯವರೇ......

ಅಭಿನಂದನೆಗಳು.........

ನಿಮ್ಮ ಮತ್ತು ಶಿವಣ್ಣನವರ ಪುಸ್ತಕ ನಾವು ಓದಬೇಕಲ್ಲ.....
ಹೇಗೆ....?

ಮತ್ತೊಮ್ಮೆ ಅಭಿನಂದನೆಗಳು........

Deepak said...

Dear Bawa, The story was very nice , it really touched my heart! Your writing skills are truly amazing! Regards, Deepu.