ಪ್ರತಿದಿನವೂ... ಕತ್ತಲಾಗುವ ಸಮಯ....
ಸೂರ್ಯ ಮುಳುಗವ ಮುಸ್ಸಂಜೆಯ.. ವೇಳೆ.....
ಹಲವು ಭಾವನೆಗಳನ್ನು... ಮೂಡಿಸುತ್ತದೆ...
ನಮ್ಮ ಮನದ ಭಾವಗಳಿಗೆ ತಕ್ಕಂತೆ... ಬಾನಿನ ಚಿತ್ರ ಕಾಣುತ್ತದೆ....
ಮರೆಯಾಗುತ್ತಿರುವ ನೇಸರ....
ಆಗಸದ ಹೃದಯದಲ್ಲಿ...
ಬಿಡಿಸುವ ... ಬಣ್ಣದ ಚಿತ್ತಾರ... ಮನಮೋಹಕ....!
ಇದೋ... ನಿಮಗಾಗಿ...
ಮರೆಯಲ್ಲಿ ನ ರವಿಯ...ಹಲವು ಭಾವಗಳು..... ಬಣ್ಣದ ಚಿತ್ತಾರಗಳು....!
ಬೆಳ್ಳಿ ಮೊಡವೆ... ಎಲ್ಲಿ ಓಡುವೆ...?.
ಸಂಜೆಯ ನೇಸರನ ನೋಡಲು....
ಸಂಭ್ರಮವೇ...?
ಇರುಳಿನ ಚಂದ್ರಮನ ಆಗಮನದ... ನಾಚಿಕೆಯೇ...?
ಆ... ಮೋಡ ಬಾನಲ್ಲಿ... ತೇಲಾಡುತಾ...
ನಿನಗಾಗಿ.. ನಾ... ಬಂದೆ.. ನೋಡೆನ್ನುತಾ....
ನಲ್ಲಾ..... ನಿನ್ನ ಸಂದೇಶವಾ.... ನನಗೇ... ಹೇಳಿದೆ.....
ನೇಸರನ ನಿರ್ಗಮನ....
ಪ್ರಿಯಕರ ಚಂದ್ರಮನ... ಆಗಮನದ...
ಕಾತುರ... ಸಂಭ್ರಮ... ಬಾನಿಗೆ...!
ಗಗನವು... ಎಲ್ಲೋ...
ಭೂಮಿಯು.. ಎಲ್ಲೋ...
ಒಂದೂ....... ಅರಿಯೆ... ನಾ....
ಆಕಾಶದಾಗೆ...ಬಣ್ಣದ ಚಿತ್ತಾರಾ.. ಮಾಡಿದವನೇ...
ಮನಸ್ಸನ್ನು ಗೆದ್ದ ಮೋಡಿಗಾರನೆ.....
ಈ... ಸಂಜೆ ಯಾಕಾಗಿದೆ....?
ನೀನಿಲ್ಲದೆ...?
ವಿರಹವೇದನೆ... ನಿವೇದನೆಗೂ... ಸ್ಪೂರ್ತಿ.... ಈ...ಬಾನು....
ಸುತ್ತ.. ಮುತ್ತಲೂ...
ಸಂಜೆ.. ಕತ್ತಲು... ಮೆತ್ತ.. ಮೆತ್ತಗೆ.... ಬಯಕೆ... ಮತ್ತಲು...!
ಯಾವ ಕಲಾಕಾರನೂ ಬಿಡಿಸಲಾರಾ.....
ಮನಸೂರೆಗೊಳ್ಳುವ... ಇಂಥಹ ಬಣ್ಣದ ಚಿತ್ತಾರವಾ...
ಇದೇನು...? ಚಂಬಲ್... ಕಣಿವೇಯಾ...?
ಪಕ್ಕದಲ್ಲೊಂದು ಬೆಟ್ಟ... ಮೋಡಗಳ ಬೆಳಕಿನ ಬಣ್ಣದಾಟ...!
ಯೇ.... ಶ್ಯಾಮ್... ಮಸತಾನಿ....
ಮಧುಹೊಶ್... ಕಿಯೇಜಾಯ್...
ಮುಜ್ಹೆ ದೂರ್.. ಕೋಯಿ.. ಕೀಛೇ.....
ತೇರಿ ಔರ್... ಲಿಯೇ ಜಾಯೆ....
ಸಂಜೆ.. ಕೆಂಪು ಮೂಡಿತು...
ಇರುಳು.. ಸೆರಗು ಹಾಸಿತು...
ಇಂದು ನಾಳೆಯ ಸೇರಿತು.......
..ವೋ..... ಶ್ಯಾಮ್... ಕುಛ್... ಅಜೀಬ್ ಥೀ....
ಯೇ .. ಶ್ಯಾಮ್... ಭೀ... ಅಜೀಬ್ ಹೇ....
ವೋ... ಪಲ್.... ಭೀ... ಪಾಸ್.. ಪಾಸ್ ಥೀ.. ವೋ... ಆಜ್ ಭೀ ಕರಿಬ್ ಹೇ....
ಕಹೀ... ದೂರ್.. ಜಬ್ ದಿನ ಢಲ.. ಜಾಯೆ...
ಸಾಂಜ್ ಕಿ ದುಲ್ಹನ್..... ಬದನ ಚುರಾಯೇ...... ಚುಪಕೆಸೆ... ಆಯೇ...
ಮೇರೆ... ಖಯಾಲೋ ಕೆ ಆಂಗನ್ ಮೇ...
ಕೋಯಿ ಸಪನೋಕೆ ದೀಪ್ ಜಲಾಯೇ....!
ಕೈಲಾಸ ಮಾನಸ ಸರೋವರ ಹೀಗೆ ಇದ್ದಿತಾ...?
ಎಂಥಹ ಬಣ್ಣದ ಚಿತ್ತಾರಾ...!!
ಒಂಟಿ ಮನಕೆ...
ಸಂಜೆ ಏಕಾಂತವು... ಅಪ್ಯಾಯಮಾನವು...
ಮತ್ತದೇ... ಬೇಸರ...
ಅದೇ ಸಂಜೆ... ಅದೇ ಏಕಾಂತ... ನಿ ಜೊತೆಯಿಲ್ಲದೆ....
ನಿನ್ನ ನೆಪಾಗಿದೆ....
ಹಿಮಾಲಯದ ಪರ್ವತ ಶ್ರೇಣಿ...
ಪಕ್ಕದಲ್ಲೊಂದು ಕೊಳ... ಮೋಡಗಳ... ಬಣ್ಣದ ದೋಕುಳಿಯಾಟ....
ಮುಗಿಲ ಮಾರಿಗೆ... ರಾಗ ರತಿಯ...
ರಂಗ ಏರಿತ್ತ.... ಆಗ ಸಂಜೆಯಾಗಿತ್ತ....!!
ಮುಸ್ಸಂಜೆಯ ಹೊತ್ತು...
ಕ್ಷಣ ಕ್ಷಣಕ್ಕೂ ರಂಗು ಬದಲಾಯಿಸುತ್ತ...
ಬಣ್ಣದ ಚಿತ್ತಾರ ಬಿಡಿಸುತ್ತ....
ಮುಳುಗುವ ನೇಸರನಿಗೊಂದು.. ಸಂಭ್ರಮದ ವಿದಾಯ...
ಮತ್ತೆ ಮರಳಿ ಬಾ.... ಭಾಸ್ಕರ...!
ಭರವಸೆಯ...
ಭಾವಗಳನ್ನು ಹೊತ್ತು ತಾ...!.
ನಮ್ಮ ಭಾವನೆಗಳಿಗೆ ತಕ್ಕ ರಂಗಸ್ಥಳ...
ಈ ಬಾನಿನಂಗಳ...
ಪ್ರೇಮಿಗಳಿಗೆ.. ವಿರಹಿಗಳಿಗೆ... ಅನಾಥ ಭಾವದ ನೋವುಣ್ಣುವವರಿಗೆ...
ಬದುಕು ಸಾವಿನ ಅಂಚಿನಲ್ಲಿರುವವರಿಗೆ...
ಮದಿರೆಯ ಮಧ್ಯದಲ್ಲಿ.. ಮೋಜು ಮಾಡುವವರಿಗೆ...
ಸ್ವಲ್ಪ ಏಕಾಂತ...
ಹಕ್ಕಿಗಳ ಚಿಲಿಪಿಲಿ ಗಾನದ ಜೊತೆ....
ಗುನುಗು ...ನಿನ್ನ ಇಷ್ಟದ ಹಾಡು....
ಆಗಸದ ಮೂಲೆಗೊಮ್ಮೆ ನೋಡು....
ಬದಲಾಗುವದು ಮನದ ಭಾವದ ಗೂಡು...
ಬಂದೇ ಬರುವನು...
ಭರವಸೆಯ ಭಾಸ್ಕರ...
ಹೊಸ ಭಾವಗಳ....
ಹೊಸತತನದ ಹೊಸ ದಿನವನ್ನು...
ತಂದೇ... ತರುವನು... ನಮ್ಮ ದಿನಕರ..
Sunday, August 30, 2009
Subscribe to:
Post Comments (Atom)
81 comments:
ಹೆಗಡೆಜಿ ಎಲ್ಲಿ ಹೋಗಿದ್ರಿ ಇಂಥ ಚಿತ್ರ ತೆಗೆಯಲಿಕ್ಕೆ
ನಿಜ್ಜಕ್ಕೂ ಆಕಾಶ ಹೀಗು ಇದೆಯಾ
ಶಬ್ದಗಳೇ ಇಲ್ಲ ಹೇಳಲು...
ಅಹಾ!! ಎಂಥಹ ಆಗಸ...
ನೋಡಲು ಬಲು ಸೊಗಸ....
ತೇಲಿ ಹೋದೆ ಒಂದ್ನಿಮಿಷ....
ಆಕಾಶ ನೀಲಿ ಮಾತ್ರ ಅಂತ ತಿಳಿದವರಿಗೆ ಹಲವು ಬಣ್ಣಗಳ ಬಿತ್ತಾರ....
ಸೂಪರ್ ಪ್ರಕಾಶಣ್ಣ....
ಸುಂದರ ಚಿತ್ರಗಳಿಗೆ ಹಾಡಿನ ಸಾಲುಗಳು ಇನ್ನಷ್ಟು ಮೆರಗು ನೀಡಿವೆ.ನಯನ ಮನೋಹರ.
ಉಮೇಶ್ ದೇಸಾಯಿಯವರೆ....
ನಮ್ಮ ಮನೆ ದೊಡ್ಡ ಬೆಟ್ಟದ ಮೇಲಿದೆ...
ನಾಲ್ಕನೆಯ ಅಂತಸ್ತು....
ಸಂಜೆಯ ಸೊಬಗು ಬಹಳ ಚೆನ್ನಾಗಿರುತ್ತದೆ...
ನಮಗೆ ಬೇಸರವಾಗಿದ್ದರೆ... ಈ ಸಂಜೆ ಸಾಂತ್ವನ ನೀಡುತ್ತದೆ...
ಖುಷಿಯಾಗಿದ್ದರೆ ಮತ್ತೂ ಖುಷಿ ನೀಡುತ್ತದೆ...
ನಮ್ಮ ಭಾವಗಳಿಗೆ ಸ್ಪೂರ್ತಿ ಈ ಮುಸ್ಸಂಜೆಯ ಬಾನು...
ಪ್ರತಿಕ್ರಿಯೆಗೆ ವಂದನೆಗಳು....
ಮಹೇಶ್.. (ಸವಿಗನಸು...)
ಸೂರ್ಯಾಸ್ತದ ಕುರಿತು ಎಷ್ಟೊಂದು ಹಾಡುಗಳಿವೆ...
ಎಲ್ಲವೂ ನೆನಪಾಗಲಿಲ್ಲ....
ಇಲ್ಲಿ ಒಂದು ವಿಷಯವನ್ನು ಗಮನಿಸ ಬೇಕು...
ಎಲ್ಲೂ ಸೂರ್ಯ ಕಾಣುವದಿಲ್ಲ....
ತೆರೆಯ ಮರೆಯಲ್ಲಿ ನೇಸರನ ಬಣ್ಣದೋಕುಳಿಯಾಟ...
ಪ್ರೋತ್ಸಾಹಕ್ಕೆ ಧನ್ಯವಾದಗಳು....
ಉಷಾರವರೆ...
ನನ್ನ ಬ್ಲಾಗಿಗೆ ಸ್ವಾಗತ...
ಮುಳುಗುವ ಸೂರ್ಯ..
ದುಃಖದ..ವಿರಹದ ಸಂಕೇತವಾ...?
ನನಗಂತೂ ಹಾಗನ್ನಿಸುವದಿಲ್ಲ...
ಮನಸ್ಸಿಗೆ ಖುಷಿಯಾದಗ ಒಮ್ಮೆ ಸೂರ್ಯಾಸ್ತ ನೋಡಿ...
ಮತ್ತೂ ಸಂತೋಷವಾಗುತ್ತದೆ...
ಸಣ್ಣಗೆ ಹಾಡು...
ಸಂಜೆಯ ಏಕಾಂತ ಮನಸ್ಸಿಗೆ ಮುದ ಕೊಡುತ್ತದೆ...
ಪ್ರತಿಕ್ರಿಯೆಗೆ ಧನ್ಯವಾದಗಳು...
ವಾವ್ ಪ್ರಕಾಶಣ್ನ,
ಸುಂದರ ಪ್ರಕೃತಿ,ಅದ್ಬುತ ಫೊಟೋಗ್ರಫಿ,ಅತ್ಯದ್ಬುತ ಬರಹ.
oh super foto's
ಪ್ರಕಾಶಣ್ಣ ,
ಅದ್ಭುತ ಫೋಟೋಗಳು !! ಪ್ರತಿಕ್ಷಣವೂ ಬಣ್ಣ ಬದಲಾಯಿಸುವ ಮುಸ್ಸಂಜೆಯ ಸೌಂದರ್ಯವನ್ನು ಹಿಡಿದಿಟ್ಟಿದ್ದಕ್ಕೆ ಧನ್ಯವಾದಗಳು. ಜೊತೆಗೆ ನೀವು
ಕೊಟ್ಟ ಅಡಿಬರಹಗಳೂ ತುಂಬಾ ಹೊಂದಿಕೊಳ್ಳುತ್ತಿವೆ
ಪ್ರಕಾಶ,
ಎಂಥೆಂಥಾ ಅದ್ಭುತ ಚಿತ್ರಗಳನ್ನು ಕೊಟ್ಟಿದ್ದೀರಲ್ಲಾ! ಅವುಗಳಿಗೆ ನೀವು ನೀಡಿದ ಅಡಿಬರಹಗಳು, ಕೆಲವೊಂದೆಡೆ ನೀವು ನೀಡಿದ ಸಿನೆಮಾ ಗೀತೆಗಳು ತುಂಬಾ fitting ಆಗಿವೆ!
ಅಭಿನಂದನೆಗಳು.
ಪ್ರಕಾಶ್ ಸರ್,
ನೇಸರ ಈ ಭೂಮಿ ಆಕಾಶಕ್ಕೆ ಮನೆಯೊಡಯನಿದ್ದಂತೆ. ಅವನಿದ್ದಾಗ ಇಡೀ ಮನೆ ಗಂಭೀರವಾಗಿರುತ್ತದೆ. ಅವ ಮಾಯವಾಗುವ ಸಮಯ ಬಲು ಸುಂದರ. ಇಲ್ಲಿ ಯಜಮಾನ ಮನೆಯಲ್ಲಿ ಇಲ್ಲದಾಗ ಮಕ್ಕಳದೇ ಪಾರುಪತ್ಯವಾಗಿ ಮನೆ ತುಂಬ ಬಣ್ಣ ಬಣ್ಣದ ಕಲರವ ತುಂಬಿ ತುಳುಕಾಡುತ್ತಿರುತ್ತದೆ. ಆದೇ ರೀತಿ ನಿಮ್ಮ ಫೋಟೊಗಳಲ್ಲಿ ಭಾಸ್ಕರನಿಲ್ಲದ ಸಮಯದಲ್ಲಿ ಮೋಡಗಳು ಮಕ್ಕಳಂತೆ ಬಣ್ಣದ ಓಕುಳಿಯಾಡುತ್ತಿವೆಯಲ್ಲವೇ...
ಬೇಸರವಾದಾಗ ಒಮ್ಮೆ ಇಂಥಹ ಫೋಟೋಗಳನ್ನು ನೋಡಿದರೆ ಮನಕ್ಕೆ ಏನೋ ಉಲ್ಲಾಸ....
ಧನ್ಯವಾದಗಳು.
ಮೂರ್ತಿ ಹೊಸಬಾಳೆ..
ಪ್ರಕೃತಿಯೇ.... ದೊಡ್ಡ ಕಲಾಕಾರ....
ಇಲ್ಲಿ ಕೆಲವು ಫೋಟೊಗಳಲ್ಲಿ ಎಷ್ಟೊಂದು ಬಣ್ಣಗಳಿವೆ ಗೊತ್ತಾ...?
ಎಷ್ಟು ಹದವಾದ... ಬಣ್ಣಗಳ ಮಿಳಿತ ಇದು...!!
ಪ್ರತಿ ದಿನವೂ ಹೊಸರೂಪ... ಹೊಸತನ... ದಿಗಂತದ ರಂಗಸ್ಥಳ...!!
ನೋಡುವ ಮನ,..
ಭಾವವಿರಬೇಕು ಅಷ್ಟೆ....
ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು....
ಮನಸು....
ನಿಮ್ಮ ಬ್ಲಾಗಿನಲ್ಲಿ ಪ್ರತಿಕ್ರಿಯೆ ಕೊಡಲು ಆಗುತ್ತಿಲ್ಲ...
ಏನೋ ತಾಂತ್ರಿಕ ದೋಷವಿರಬೇಕು... ದಯವಿಟ್ಟು ಸರಿಪಡಿಸಿ....
ಫೋಟೊ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....
ಚಿತ್ರಾ.....
ಆನಂದ್ ಸಿನೇಮಾದ "ಕಹೀ ದೂರ್ ಜಬ್ ದಿನ್.."
ನನ್ನ ಅತ್ಯಂತ ಮೆಚ್ಚಿನ ಹಾಡುಗಳಲ್ಲಿ ಒಂದು...
ತನಗೆ ಕ್ಯಾನ್ಸರ್.. ಸಾಯುವದು ನಿಶ್ಚಿತ...
"ಮೆರೆ ಖಯಾಲೋ ಕೆ ಅಂಗನ್ ಮೆ ಕೋಯಿ ಸಪನೋ ಕಾ ದೀಪ್ ಜಲಾಯೆ.."
ಎಂಥಹ ಶಬ್ಧಗಳು...!!
ಆ ಅರ್ಥಗಳಿಗೆ ಸಮರ್ಥವಾಗಿ ಭಾವ ತುಂಬಿದ ಮುಖೇಷ್ಗೆ ನನ್ನ ನಮನಗಳು....
ನೀವೆಲ್ಲ ಇಷ್ಟಪಟ್ಟಿದ್ದು ನನಗೆ ಇನ್ನಷ್ಟು ಸ್ಪೂರ್ತಿ....!
ಧನ್ಯವಾದಗಳು.....
ಸುನಾಥ ಸರ್....
ಕಿಶೋರ್ ಕುಮಾರ್ ಹಾಡಿದ
" ವೋ ... ಶಾಮ್ ಕುಛ್ ಅಜೀಬ್ ಥೀ..."
ಸುಂದರವಾದ ಹಾಡು...
"ಅಂದು ಸಂಜೆಯೂ ವಿಚಿತ್ರವಾಗಿತ್ತು... ಆ..ಹುಡುಗಿ ನನ್ನ ಪಕ್ಕದಲ್ಲಿದ್ದಳು...
ಈ ಸಂಜೆಯೂ ವಿಚಿತ್ರವಾಗಿದೆ... ಇಂದೂ ಸಹ ಅದೇ ಹುಡುಗಿ.. ಪಕ್ಕದಲ್ಲಿದ್ದಾಳೆ...
ಅಂದು ಅವಳು ನನ್ನ ಬಗೆಗೆ ವಿಚಾರ ಮಾಡುತ್ತಿರ ಬಹುದೆಂದು ಆಲೋಚಿಸುತ್ತಿದ್ದೆ...
ಇಂದು ಈ ಸಂಜೆ ನನಗೆ ಗೊತ್ತಿದೆ ಅವಳು ನನ್ನ ಬಗ್ಗೆಯೇ ಮುಗುಳ್ನಗುತ್ತಿದ್ದಾಳೆ..."
ಆ ಹಾಡು...!
ಅದರ ಭಾವಾರ್ಥ...!
ಕಿಶೋರ್ ಕುಮಾರನ ಕಂಠಸಿರಿ...
ವಾಹ್.. ಅದ್ಭುತ....!!
ಸರ್... ಪ್ರೋತ್ಸಾಹಕ್ಕಾಗಿ ವಂದನೆಗಳು.....
ಶಿವು ಸರ್....
ವಾಹ್... ನಿಮ್ಮ ಕಲ್ಪನೆ ಸುಂದರವಾಗಿದೆ...!
ಗಗನದಲ್ಲಿ ಮಕ್ಕಳಾಟ..!
ಬಣ್ಣ ಬಣ್ಣದ ಓಕುಳಿಯಾಟ...!
ಪ್ರತಿಕ್ಷಣವೂ ರಂಗನ್ನು ರಂಗೇರಿಸುವ...
ರವಿಯ ಬಣ್ಣದ ಕುಂಚಕ್ಕೊಂದು ನಮನ...!
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....
ಒಳ್ಳೆ ಫೋಟೊಗಳನ್ನೇ ಸೆರೆ ಹಿಡಿದಿದ್ದೀರಾ, ಮೊಡದ ಮರೆಯಲ್ಲಿ ನೇಸರನ ಮುಚ್ಚುಮರೆಯಾಟ ಚೆನ್ನಾಗಿದೆ.
ಪ್ರಕಾಶ
ನಿಮ್ಮ ಲೇಖನಾ ಚೆನ್ನಾಗಿದೆ
ಸೂಪರ್ ಫೋಟೋಗಳು !
ಪ್ರಭು....
ಮೋಡದ ಮರೆಯಿಂದ ಮುಳುಗುವ ದಿವಾಕರ ಚಂದ...
ಇಲ್ಲಿ ಸೂರ್ಯ ಕಾಣುವದೇ ಇಲ್ಲ...
ಸೂರ್ಯಾಸ್ತ ಇನ್ನೊಂದು ಭಾಗದಲ್ಲಿ ತೋರಿಸುವೆ....
ನಂದೊಂದು ಮಾತು" ಬ್ಲಾಗಿನ ಸತ್ಯನಾರಾಯಣ ಅವರು ಪುರಾಣದಲ್ಲಿನ ಸೂರ್ಯಾಸ್ತದ ವರ್ಣನೆ ಬರೆದಿದ್ದಾರೆ...
ಅದು ನನಗೆ ಫೋಟೊ ತೆಗೆಯಲು ಉತ್ಸಾಹ ಕೊಟ್ಟಿತು....
ಸೂರ್ಯನಿಲ್ಲದ ಗಗನ.. ಮೋಡದ ಮರೆಯಲ್ಲಿನ ಬಣ್ಣದಾಟ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....
ಪ್ರಕಾಶ್,,,
ವಾಹ್....simply superb.....ಮೋಡಗಳ ಮಧ್ಯದಲ್ಲಿ ಕಳೆದು ಹೋಗಿದ್ದೆ.......ಮೋಡಗಳ ಚಿತ್ತಾರವನ್ನ ಚೆನ್ನಾಗಿ ಸೆರೆ ಹಿಡಿದಿದ್ದಿರ....ತುಂಬ ಚೆನ್ನಾಗಿ ಇದೆ......ಇಷ್ಟ ಆಯಿತು... ಅದಕ್ಕೆ ನಿಮ್ಮ ಪಂಚಿಂಗ್....ಸಾಲುಗಳು..ಇನ್ನಸ್ಟು ಎಫೆಕ್ಟ್ ಆಗಿ ಇದೆ.......
ಪ್ರಕಾಶ್ ಅವರೆ,
ಅದ್ಭುತ ಫೋಟೋಗಳು! ಅವುಗಳಿಗೆ ಜೊತೆಯಾಗಿ ನೀವು ಹಾಕಿರುವ ಸಿನೆಮಾ ಗೀತೆಗಳ ಸಾಲುಗಳು ತುಂಬಾ ಚೆನ್ನಾಗಿವೆ!
'ನೇಸರ ನೋಡು’
’ಕೆಂಪಾದವೋ ಎಲ್ಲಾ ಕೆಂಪಾದವೊ’
’ಕಹೀ ದೂರ್ ಜಬ್ ದಿನ್’ ಇವು ನನ್ನ ನೆಚ್ಚಿನ ಹಾಡುಗಳು:))
ಕನಸು....
ನಿಮ್ಮ ಕನಸು ಬ್ಲಾಗ್ ಚೆನ್ನಾಗಿದೆ....
ಎಷ್ಟೊಂದು ಕನಸಿದೆ ನಿಮ್ಮಲ್ಲಿ ... ಖುಷಿಯಾಗುತ್ತದೆ....
ನನಗೊಬ್ಬ ಮಲೆಯಾಳಿ ಸ್ನೇಹಿತನಿದ್ದಾನೆ...
ಮುಳುಗುವ ಸೂರ್ಯ "ಅಪಶಕುನ" ಅಂತಾನೆ... ಅವನು ಸೂರ್ಯಾಸ್ತ ನೋಡುವದೇ ಇಲ್ಲ...
ನಮ್ಮ ನಾಗು ಹೇಳ್ತಾನೆ..
" ಸೂರ್ಯ ಪ್ರತ್ಯಕ್ಷ ದೇವತಾ...!ಇದು ನಮ್ಮ ಪುರಾಣದಲ್ಲಿನ ನಂಬಿಕೆ..."
ದೇವರನ್ನು ನೋಡಿದರೆ ಎಂಥಹ ಅಪಶಕುನ...?
ದ್ವಂದ್ವಗಳು ಎಲ್ಲೆಡೆ ಇವೆ...
ಫೋಟೊ ಇಷ್ಟವಾಗಿದ್ದಕ್ಕೆ ಧನ್ಯವಾದಗಳು....
ಸುಧೀಂದ್ರ....
ಇದರಲ್ಲಿ ಆರು ಫೋಟೊಗಳನ್ನು ಆಶೀಷ್ ತೆಗೆದಿದ್ದಾನೆ....
ಶಿವು, ಮಲ್ಲಿಕಾರ್ಜುನ್ ಮಾರ್ಗದರ್ಶನ....
ಪ್ರತಿಕ್ಷಣ ಬದಲಾಗುವ..
ಬಣ್ಣಗಳು ಬದಲಾಗುವ ಮೋಡಗಳು...
ಕ್ಯಾಮರಾದಲ್ಲಿ ನೋಡಲು ಬಲು ಚಂದ...
ಪ್ರಪಂಚ ಮರೆತು ಹೋಗುತ್ತದೆ....
ಮೆಚ್ಚುಗೆಗೆ ಧನ್ಯವಾದಗಳು....
ಸರ್,
ನಿಮ್ಮ ಮನೆಯ ಬಾಲ್ಕನಿಯಿಂದ ನಮಗೆಲ್ಲ ಸ್ವರ್ಗವನ್ನು ತೋರಿಸಿದ್ದೀರಿ. ಇಂತಹ ಅದ್ಭುತ ಚಿತ್ರಗಳನ್ನು ತೆಗೆದ ಆಶೀಷನಿಗೆ ಮೊದಲ ಅಭಿನಂದನೆಗಳು ,ನಂತರದ್ದು ನಿಮಗೆ!
ನೀವು ಚಿತ್ರಕ್ಕೆ ತಕ್ಕಂತಹ ಸಾಲುಗಳನ್ನು ಹೆಣೆದಿರುವುದಂತೂ ಇನ್ನೂ ಸುಂದರ. ಒಟ್ಟಾರೆ ಆಹ್ಲಾದಕರ ಅನುಭವ.
WOW............,Prakashanna..,superb.Fantastic photography and equally superb lines...
ಗುರು....
ಕೆಲವೊಮ್ಮೆ ಬಹಳ ಸುಂದರ ಸೂರ್ಯಾಸ್ತ ಆಗುತ್ತಿರುತ್ತದೆ...
ಕ್ಯಾಮರಾ ಇಲ್ಲದೆ ಪೇಚಾಟ ಆಗುತ್ತದೆ...
ಇದು ನನಗೆ ಹಲವು ಬಾರಿ ಅಗಿದೆ...
ನಮ್ಮನೆಯ ಬಾಲ್ಕನಿ ಸೂರ್ಯೋದಯಕ್ಕೆ, ಸೂರ್ಯಾಸ್ತ ಚಂದ ಅನುಭವಿಸಲು ಪ್ರಶಸ್ತವಾದ ಜಾಗ...
ಬೆಟ್ಟದ ಮೇಲೆ.. ನಾಲ್ಕನೆಯ ಫ್ಲೋರ್...!
ಫೋಟೊಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಸೂರ್ಯಾಸ್ತದ ವರ್ಣವೈಭವವನ್ನು ನೋಡಿ ಮನಸ್ಸಿನಲ್ಲಿ ಹಲವಾರು ಭಾವನೆಗಳ ಮೆರವಣಿಗೆಯೇ ನಡೆಯುತ್ತಿದೆ. ಖುಷಿಕೊಟ್ಟ ಚಿತ್ರಗಳು, ನಮ್ಮನ್ನೊಮ್ಮೆ 'ತಲೆಯೆತ್ತಿ ನೋಡಿ' ಎಂದು ಮುದ್ದಿನಿಂದ ಗುದ್ದು ಕೊಡುತ್ತಿರುವಂತಿವೆ. ಇಂತಹ ಚಿತ್ರಗಳು ನಾವು ನಿತ್ಯ ಕಾಣುವ ಸೂರ್ಯಶ್ತಕ್ಕೇ ಸುವರ್ಣ ಚೌಕಟ್ಟು ಹಾಕಿದ ಹಾಗೆ!
ನಿಮ್ಮ ಮನೆಯಿಂದಲೇ ತೆಗೆದಿದ್ದಾ? ಅಬ್ಬ! ನಾನು ನೀವೆಲ್ಲಿಗೆ ಹೋಗಿದ್ದಿರಿ ಇಂತಹ ಅದ್ಭುತ ಚಿತ್ರಗಳನ್ನು ತೆಗೆಯಲು ಎಂದು ಯೋಚಿಸುತ್ತಿದ್ದೆ. ಹಾಡುಗಳ ಜೋಡಣೆಯಂತೂ ತುಂಬಾ ಚೆನ್ನಾಗಿದೆ. ನಿಜವಾಗಿ ಸೌಂದರ್ಯ ನಮ್ಮ ಸುತ್ತಲೂ ಇದೆ, ನೋಡುವುದಕ್ಕೆ ಕಲಾವಿದನ ಕಣ್ಣಿರಬೇಕಷ್ಟೆ!!
ಶ್ಯಾಮಲ
ವಾಹ್!! ಸಕ್ಕತ್. ಒಂದೊಂದು ಮೋಡವೂ ಒಂದೊಂದು ಕಥೆಯನ್ನ ಹೇಳತ್ತೆ. ಸುಖವೋ, ದುಃಖವೋ, ಬಿಳಿಯೋ, ಕಪ್ಪೋ, ಬೆಸರವೋ, ನೆಮ್ಮದಿಯೋ, ಏಕಾಕಿತನವೋ, ಸುಟಿಯೋ - ಎಲ್ಲವೂ ತುಂಬಿದೆ ಈ ಮೋಡಗಳಲ್ಲಿ. ಭಾವನೆ, ನೋಡುವ ಕಣ್ಣುಗಳ ಮೇಲೆ ಆಧಾರಿತ. ಅಲ್ಲವೇ?
ಯಾವ ಕ್ಯಾಮೆರಾ ಇಂದ ತೆಗೆದದ್ದು ಈ ಚಿತ್ರಗಳು? ಏನು ಸೆಟ್ಟಿಂಗ್ಸ್ ಇಂದ ತೆಗೆದದ್ದು? ಒಂದೆರಡು ಕ್ಯಾಮೆರಾ ಸಲಹೆಗಳು ಕೊಟ್ಟರೆ ಇನ್ನೂ ಚೆನ್ನಾಗಿರುತ್ತಿತ್ತು ;-)
great.. sakhath photosu prakashanna..
ಪ್ರಕಾಶ್ ಸರ್,
ಮಧ್ಯಾಹ್ನ ನಮ್ಮ ತಲೆ ಸುಡುವಂತೆ ಆರ್ಭಟಿಸುವ ರವಿತೇಜ ಸಂಜೆ ಹೊತ್ತಿಗೆ ನಮ್ಮ ಕಣ್ಮನ ತಣಿಸುವ ದೃಶ್ಯ ನಿಜಕ್ಕೂ ಮನಮೋಹಕ. ಹೋಗುವ ಮುಂಚೆ ಮೋಡಗಳೊಂದಿಗೆ ಬೆಳಕಿನ ರಂಗಿನಾಟ ಆಡಿ, ಗುಡ್ ಬೈ ಹೇಳುತ್ತ ದಿಗಂತ ದಲ್ಲಿ ಕಣ್ಮರೆಯಾಗುವ ಆದಿತ್ಯ ಮರುದಿನ ಬೆಳ್ಗಾಗುವವರೆಗೂ ಕಣ್ತುಂಬಾ ತುಂಬಿಕೊಂಡು ಆನಂದಿಸಬಲ್ಲ ಅಪೂರ್ವ ಚೆಲುವಿನ ದೃಶ್ಯಗಳನ್ನು ನೀಡಿ ಹೋಗುತ್ತಾನೆ. ಸೂರ್ಯೋದಯ, ಸೂರ್ಯಾಸ್ತದ ಸಂದರ್ಭಗಳು ನನ್ನ ಫೋಟೋಗ್ರಫೀ ಗೂ ತುಂಬಾ ಅಚ್ಚುಮೆಚ್ಚಿನ ದೃಶ್ಯಗಳನ್ನು ನೀಡಿವೆ. ಎಷ್ಟೋ ಸಲ ಸುಂದರ ಸೂರ್ಯಸ್ತದ ದೃಶ್ಯಗಳನ್ನು ಕೈಯಲ್ಲಿ ಕ್ಯಾಮರ ಇಲ್ಲದೇ ಮಿಸ್ ಮಾಡಿಕೊಂಡದ್ದಿದೆ. ಆ ಥರ ನಾನು ಮಿಸ್ ಮಾಡಿಕೊಂಡ ದೃಶ್ಯಗಳನ್ನೆಲ್ಲ ನೀವು ನನಗಾಗಿ ಮತ್ತು ಉಳಿದೆಲ್ಲರಿಗಾಗಿ ಸೆರೆಹಿಡಿದು ಇಲ್ಲಿ ನೀಡಿದಂತಿದೆ. ತುಂಬಾ ಆಹ್ಲಾದಕರ ದೃಶ್ಯಗಳು. ನೋಡಿ ಖುಷಿಯಾಯಿತು.
ಧನ್ಯವಾದಗಳು.
- ಉಮೇಶ್
ನೇಸರನ ವರ್ಣವಿನ್ಯಾಸ, ಮೋಡಗಳ ಮೇಲಾಟ, ಸಂಜೆ ಹೊತ್ತಿನ, ಗೋಧೂಳಿ ಸಮಯದ ಪ್ರಕೃತಿಚಿತ್ರಣ ನಿಮ್ಮ ಕ್ಯಾಮೆರಾಗಣ್ಣಿನಲ್ಲಿ ಚೆನ್ನಾಗಿ ಚಿತ್ರಣಗೊ೦ಡಿದೆಯಲ್ಲದೇ, ಪೂರಕವಾಗಿ ಹಳೆಯ ಚಿತ್ರಗೀತೆಗಳ ಸಾಲುಗಳನ್ನು ಪೋಣಿಸಿ ಸು೦ದರ ಹಾರವನ್ನಾಗಿಸಿ ನಮ್ಮ ಮು೦ದೆ ಇಟ್ಟಿದ್ದೀರಿ. ಚೆನ್ನಾಗಿದೆ.
ಪ್ರಕಾಶಣ್ಣ .
ಅದ್ಬುತ ಚಿತ್ರ ಗಳು .. ನಿಮಗೆ ಶಿವು ಸರ್ ಹಾಗು ಮಲ್ಲಿ ಸರ್ ಅವರ ಪ್ರಭಾವ ಸರಿ ಯಾಗಿ ಆಗಿದೆ .. :-) :-) .. ನೀವು ಅದಕ್ಕೆ ಸರಿಯಾಗಿ ಜೋಡಿಸಿದ ಪದ್ಯಗಳು .. ವಾವ !! ಬೇರೆಯೆದೆ ಲೋಕ !!!! ..
ಪ್ರಕಾಶಣ್ಣ ಫೋಟೋ ಯಲ್ಲ ತುಂಬಾ ಸಕ್ಕತಾಗಿದೆ …
ಆ ಒಂದೊಂದು ಚಿತ್ರಗಳಿಗೂ ತಾವು ಹಾಡುಗಳ ತಾಳ ಮೇಳ ಮಾಡಿದ್ದು ಕೂಡ ತುಂಬಾ ಸೊಗಸಾಗಿ ಮೂಡಿ ಬಂದಿದೆ…….
ಆಗಸವನ್ನು ನೋಡಿದಾಗಲೆಲ್ಲ ಏನೋ ಒಂದು ರೀತಿಯ ಸಂತೋಷ ಸಿಗುತ್ತದೆ ಅಲ್ಲವ ಪ್ರಕಾಶಣ್ಣ..
ಧನ್ಯವಾದಗಳು..
ದಿವ್ಯ ..:)
ರೂಪಾಶ್ರೀಯವರೆ....
ಕೆಂಪಾದವೋ ಹಾಡು ನನಗೆ ನೆನಪಾಗಲಿಲ್ಲ...
ಇಲ್ಲಿ ಆ ಹಾಡು ಸೊಗಸಾಗಿ ಹೊಂದಿಕೆಯಾಗುತ್ತಿತ್ತು...
" ನೇಸರ ನೋಡು" ಈ ಹಾಡನ್ನು ಸೂರ್ಯೋದಯದ ಫೋಟೊಗಳನ್ನು ಹಾಕುವೆನಲ್ಲ..
ಆಗ ಉಪಯೋಗಿಸಿಕೊಳ್ಳುವೆ...
ಮಳೆಗಾಲದ ಹೊರತಾಗಿ ಉಳಿದ ಕಾಲಗಳಲ್ಲಿ ಸೂರ್ಯೋದಯ, ಸೂರ್ಯಾಸ್ತಗಳು ತುಂಬಾ ಸೊಗಸಾಗಿ, ವೈವಿಧ್ಯಮಯವಾಗಿರುತ್ತದೆ...
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಮಲ್ಲಿಕಾರ್ಜುನ್....
ಇಲ್ಲಿರುವ ಆರು ಫೋಟೊಗಳನ್ನು "ಆಶೀಷ್" ತೆಗೆದದ್ದು..
ನಮ್ಮನೆಯಲ್ಲಿ ಕನ್ಫ್ಯೂಸನ್ ಇದೇ ಆಗುತ್ತದೆ...
ಅವನೂ ಮತ್ತು ನಾನು ತೆಗೆದ ಫೋಟೊಗಳು ವ್ಯತ್ಯಾಸ ಗೊತ್ತೇ ಆಗುವದಿಲ್ಲ..
ಹಳೆಯ ಹಾಡುಗಳ ಹುಚ್ಚು ಹಿಡಿಸಿದ್ದು ನನ್ನ ಮಡದಿ...
ಅದರ ಅರ್ಥ, ಭಾವಾರ್ಥ.. ರಾಗಗಳು..
ಬಿಡಿಬಿಡಿಯಾಗಿ..
ಎಳೆ, ಎಳೆಯಾಗಿ .. ಅರ್ಥ ಹೇಳಿ ಹುಚ್ಚು ಹಿಡಿಸಿದ್ದು ಆಕೆ...
ಹಾಡುಗಳನ್ನು, ಫೋಟೊಗಳನ್ನು ಇಷ್ಟಪಟ್ಟಿದ್ದು..
ತುಂಬಾ ಖುಷಿಯಾಗುತ್ತದೆ... ಧನ್ಯವಾದಗಳು...
ರಮ್ಯಾ....
ಇನ್ನಷ್ಟು ಫೋಟೊಗಳಿದ್ದವು...
ಅವುಗಳನ್ನು ವಿಭಾಗಿಸಿ ಹೆಕ್ಕಿ ತೆಗೆಯುವದು ಕಷ್ಟವಾಯಿತು...
ಆಮೇಲೆ ಅವುಗಳಿಗೆ ಹಾಡುಗಳನ್ನು...
ಸಾಲುಗಳನ್ನು ಹೊಂದಿಸುವದು...
ಊಪಾಶ್ರೀಯವರು ಹೇಳಿದ "ಕೆಂಪಾದವೋ..." ಹಾಡು ನೆನಪಾಗಲಿಲ್ಲ...
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಡಾ. ಸತ್ಯನಾರಾಯಣ ಸರ್...
ನೀವು ನಿಮ್ಮ ಬ್ಲಾಗಿನ ಸೂರ್ಯಾಸ್ತದ ಲೇಖನಗಳು ನನಗೆ ಸ್ಪೂರ್ತಿಯಾದವು...
ನಮ್ಮ ಪುರಾಣ ಕಥನಗಳಲ್ಲಿನ ಸೂರ್ಯಾಸ್ತದ ವರ್ಣನೆ ಮಸ್ತ್ ಆಗಿದೆ....
ಫೋಟೊ ತೆಗೆದುದಕ್ಕಿಂತ ಇವುಗಳ ಜೋಡಣೆ..
ಯಾವುದರ ನಂತರ ಯಾವುದನ್ನು ಹಾಕಬೇಕು ಅನ್ನುವದು ಬಹಳ ತಲೆ ತಿಂದಿತು...
ನೀವೆಲ್ಲ ಇಷ್ಟಪಟ್ಟಿದ್ದು ಖುಷಿಯಾಯಿತು...
ಇವುಗಳ ಇನ್ನಷ್ಟು ಸರಣಿ ಬರಲಿದೆ....
ಪ್ರೋತ್ಸಾಹಕ್ಕೆ....
ಸ್ಪೂರ್ತಿಕೊಟ್ಟಿದ್ದಕ್ಕೆ ಧನ್ಯವಾದಗಳು...
ಬಾನು ಯಾವಾಗಲೂ ವಿಸ್ಮಯಗಳ ಆಗರ. ಅದನ್ನು ಸುಂದರ ಚಿತ್ರಗಳಲ್ಲಿ ಸೆರೆ ಹಿಡಿದು ಪದಪುಂಜಗಳಲ್ಲಿ ಅಲಂಕರಿಸಿದ್ದಕ್ಕೆ ನಿಮಗಿದೋ ವಂದನೆಗಳು. ನಮ್ಮ ಊರಿನ ನೆನಪು ತುಂಬಾ ಕಾಡಿತು. ಬೆಂಗಳೂರಲ್ಲಿ ಈ ಚೆಲುವು ನೋಡುವ ಅವಕಾಶ ಸಮಯ ಎರಡೂ ಇಲ್ಲ.
ಬೆ೦ಗ್ಳುರ್ ನಲ್ಲಿ ಕೂತು ಇ೦ತ ಫೊಟೊ ತೆಗೆದ್ರ? ವಾವ್..
ಅಧ್ಬುತ ಫೊಟೊ ಗಳು, ಜೊತೆಗೆ ಸೂಕ್ತ ಅಡಿ ಬರಹಗಳು.
ನಾಲ್ಕನೆಯ ಕ್ಲಾಸಿನಲ್ಲಿ ಓದುತ್ತಿರುವ ನನ್ನ ಮಗನಿಗೆ ಫೋಟೋ ತೋರಿಸಿದೆ.ಅವನು ಹೇಳಿದ್ದು god's painting in the sky.
ಆಗಸದ ಈ ಚಿತ್ರಗಳು ನನ್ನನ್ನು ಮೂಕವಿಸ್ಮಿತಳನ್ನಾಗಿ ಮಾಡಿದವು!!!! ಅದ್ಭುತ !ಅತ್ಯದ್ಭುತ!!
ಚೆನ್ನಿವೆ ಚಿತ್ರಗಳು. ಪ್ರಕೃತಿಗಿ೦ತ ಕಲಾಕಾರರಿಲ್ಲ. ಅ೦ತದೊ೦ದು ಕಲೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಅವುಗಳಿಗೊ೦ದಿಷ್ಟು ಹಾಡುಗಳನ್ನು ಪೋಣಿಸಿ ಒ೦ದು ಸು೦ದರ ಮಾಲೆಯನ್ನು ನಮಗೆ ಕೊಟ್ಟಿದ್ದೀರಿ. ನಮ್ಮೆಲ್ಲರ ನೆನಪುಗಳನ್ನು, ಭಾವನೆಗಳನ್ನು ಕೆದಕಿ ಮುದಗೊಳಿಸಿದ್ದೀರಿ. ಕಳೆದುಹೋಗಿದ್ದೇನೆ ಆ ಮೋಡಗಳ ಮರೆಯಲ್ಲಿ, ಅಸ್ತ೦ಗತನಾದ ಸೂರ್ಯನೊ೦ದಿಗೆ.
ಧನ್ಯವಾದಗಳು.
ಸೂರ್ಯಾಸ್ತ, ಮೋಡ, ಇವೆಲ್ಲ ಯಾವಾಗಲೂ ಸುಂದರ. ಅದನ್ನು ಅದ್ಭುತವಾಗಿ ಸೆರೆಹಿಡಿದಿರುವಿರಿ. ಪದಗಳು ಚೆನ್ನಾಗಿವೆ
superb!!!!!
ಅಂತರಂಗದ ಮಾತುಗಳು...(ಶ್ಯಾಮಲಾ)
ಬೆಟ್ಟದ ಮೇಲಿನ ಮನೆ..
ನಾಲ್ಕನೆಯ ಪ್ಲೋರ್... ಬೆಳಿಗ್ಗೆ ಮತ್ತು ಸಾಯಂಕಾಲ ಸೊಗಸಾಗಿರುತ್ತದೆ...
ನಮ್ಮ ಮನೆಯೇ ಎತ್ತರದಲ್ಲಿರುವದರಿಂದ ಫೋಟೊ ತೆಗೆಯಲು ತುಂಬಾ ಅನುಕೂಲವಾಯಿತು...
ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...
ರಾಜೀವ....
ಒಂಟೀತನವೊ, ಬೇಸರವೊ.. ಖುಷಿಯೋ...
ಏನೇ ಇದ್ದರೂ... ನಮಗೆ ಧನಾತ್ಮಕವಾಗಿ ಸ್ಪಂದಿಸುತ್ತದೆ...
ಈ ಆಗಸ... ಚಿತ್ತಾರಗಳು...
ಹಾಲಂಡ್ ದೇಶದಲ್ಲಿರುವ ನನ್ನ ಸ್ನೇಹಿತರೊಬ್ಬರು ಇದನ್ನೇ ವ್ಯಕ್ತ ಪಡಿಸಿದರು..
ಅವರೂ ಸಹ ಟ್ರೇನಿನಲ್ಲಿ ಬರುವಾಗ ಆಕಾಶವನ್ನೇ ನೋಡುತ್ತ..
ನಿನ್ನೆ ಪೂರ್ತಿ ಖುಷಿಯಾಗಿದ್ದರಂತೆ...
ನೀವು ಏನಂತೀರಿ ಓದುಗರೆ...?
ನಿಮಗೂ ಇಂಥಹ ಅನುಭವಗಳಾಗಿದೆಯಾ...?
ರಾಜೀವ್ ..
ಫೋಟೊಗ್ರಫಿಯಲ್ಲಿ ನನಗೆ ತಂತ್ರಿಕವಾಗಿ ಹೆಚ್ಚಾಗಿ ತಿಳಿಯದು...
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....
ಸುಶ್ರುತ....
ಫೋಟೊಗಳನ್ನು ಇಷ್ಟಪಟ್ಟಿದ್ದಕ್ಕೆ..
ಖುಶಿ ಪಟ್ಟಿದ್ದಕ್ಕೆ ಧನ್ಯವಾದಗಳು...
ಉಮೇಶ್ರವರೆ...
ಚಿಟ್ಟೆ ಮತ್ತು ಹಕ್ಕಿಗಳ ಫೋಟೊ ತೆಗೆಯುವಷ್ಟು ಕಷ್ಟವಲ್ಲ ಇದು...
ಆದರೆ ಅದೃಷ್ಟವಿರಬೇಕು....
ಸುಂದರ ದೃಷ್ಯಗಳು ಕಂಡಾಗ ಕ್ಯಾಮರಾ ಹತ್ತಿರವಿದ್ದರೆ ಸಾಕು..
ತೆಗೆದು ಬಿಡಬಹುದು....
ನನ್ನ ಫೋಟೊಕ್ಕಿಂತಲೂ ನಿಮ್ಮ ಪ್ರತಿಕ್ರಿಯೆ ತುಂಬಾ ಸೊಗಸಾಗಿದೆ....
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರಕಾಶಣ್ಣ..
ಫೋಟೋಗಳು ತುಂಬಾ ಚೆನ್ನಾಗಿವೆ.
ಹಾಗೇ ನನ್ನ ಬ್ಲಾಗ್ ಗೆ ಬಂದು ಪ್ರತಿಕಿಯಿಸಿದ್ದಕ್ಕೆ ಧನ್ಯವಾದಗಳು.
ಹೀಗೇ ಬರ್ತಾ ಇರಿ.
ಪರಾಂಜಪೆಯವರೆ....
ಹಳೆಯ ಹಾಡಿನ ಸೊಬಗೇ ಹಾಗೆ...!!
"ಸಂಜೆ ಕೆಂಪು ಮೂಡಿತು...
ಇರುಳು ಸೆರಗು ಹಾಸಿ...
ಇಂದು ನಳೆಯ ಸೇರಿತು..."
ಎಂಥಹ ಸುಂದರ ವರ್ಣನೆ ಅಲ್ಲವಾ...?
ಹಾಗೆ ಅದರ ರಾಗ..
ಹಾಗೆ ಗಾಯಕಿಯ ಕಂಠಸಿರಿ....
ಫೋಟೊಗಳನ್ನು ನೋಡುತ್ತಿರುವಾಗ ಹಾ ಹಾಡುಗಳು ಸಣ್ಣಗೆ ಬಂದು ಬಿಡಬೇಕಿತ್ತು...
ಅಂಥಹ ಟೆಕ್ನಾಲಜಿ ಬರಬಹುದು ಅಲ್ಲವಾ...?
ಫೋಟೊ, ಹಾಡುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....
ಪ್ರಕಾಶ್ ಸರ್, ಬಾನಂಗಳದ ದೃಶ್ಯಗಳು ಬಹಳ ಅದ್ಭುತವಾಗಿ ಮೂಡಿಬಂದಿವೆ. ಸರ್, ನಿಜಕ್ಕೂ ಜನರಲ್ಲಿ ಬಾನನ್ನು ನೋಡುವ, ಅದರಲ್ಲಿರುವ ಬಣ್ಣಗಳನ್ನು ನೋಡುವ ಅವಕಾಶ ಇತ್ತೀಚೆಗೆ ಕಡಿಮೆಯೆನ್ನಬಹುದು. ಆದರೆ, ಅದನ್ನು ಸೆರೆಹಿಡಿದು ನಮಗೆಲ್ಲಾ ಖುಷಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ರೂಪಾರವರೆ....
ಫೋಟೊಗ್ರಫಿಯಲ್ಲಿ ನನ್ನ ಹಾಗು ನನ್ನ ಮಗನ ಮೇಲೆ..
ಶಿವು ಹಾಗೂ ಮಲ್ಲಿಯಯವರ ಪ್ರಭಾವ ಸಿಕ್ಕಾಪಟ್ಟೆ ಆಗಿದೆ...
ನಮ್ಮ ಕೂತೂಹಲ, ಸಂಶಯವನ್ನು ಅವರು ತಾಳ್ಮೆಯಿಂದ ತಿಳಿಸಿ ಹೇಳುತ್ತಾರೆ..
ಅವರು ತುಂಬಾ ಪ್ರತಿಭಾವಂತರು....
ಮುಳುಗುತ್ತಿರುವ ನೇಸರ ಭರವಸೆ ಕೊಡುತ್ತಾನೆ...
ಈಗ ಹೋಗುತ್ತಿರುವೆ...
ಮತ್ತೆ ಬರುತ್ತೇನೆ...
ಹೊಸದಿನ
ಹೊಸತನ ತರುತ್ತೇನೆ ಎಂದು...
ಪ್ರತಿ ಮುಂಜಾನೆಯೂ ಹೊಸದು.. ನವ ನವೀನ ಅಲ್ಲವಾ...?
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
ಚೆಂದನೆಯ ಫೋಟೋಗಳು ಪ್ರಕಾಶಣ್ಣ!
September 2, 2009 5:31 AM
ಪ್ರಕಾಶ್, ಸಿಮೆಂಟಿಗೆ ಮರಳನ್ನು ಮಿಕ್ಸಿಸುವ ನೀರಿನ ನಿರೀಕ್ಷೆಯಲ್ಲಿದ್ದವರಿಗೆ ಮಳೆಹನಿಯನ್ನು ಹೊತ್ತೂ ಹನಿಸದೆ ತೇಲಾಡಿ ಆಟವಾಡಿಸುವ ಹತ್ತಿಯುಂಡೆಗಳು ನಿಮ್ಮ ಮನಸೆಳೆದುದರಲ್ಲಿ ಅತಿಶಯೋಕ್ತಿಯೇನಿಲ್ಲ...ಮೊದಲ ಬಾರಿಗೆ ಗೌಹಾತಿಯಿಂದ ಇಂಪಾಲ್ ಗೆ ವಾಯುಪ್ರಯಾಣದ ಸಮಯದಲ್ಲಿ ನನಗೂ ಮೂಕಸ್ಮಿತ ಮಾಡಿದ್ದೂ ಈ ಮೋಡಗಳೇ....ಚನ್ನಾಗಿದೆ ನಿಮ್ಮ ಚಿತ್ರಗಳ ಸರಣಿ ಮತ್ತು ಅದ್ಕೊಪ್ಪುವ ಸಾಲುಗಳು...ಕಹೀಂ ದೂರ್ ಜಬ್ ದಿನ ಢಲ್ ಜಾಯೇ..ಮೋಡದ ಮರೆಯ ...ಆಡುತಿರುವ ಮೋಡಗಳೇ....ಹಲವಾರು ಸಂಗತಿಗಳನ್ನು ಹಾಡುಗಳಜೊತೆಗೆ ನೆನಪಿಗೆ ತಂದಿರಿ.
WOW
I am wonderstruck.
Lovely pic and lovelier captions. all my fav songs are mentioned too.
:-)
malathi S
ದಿವ್ಯಾ...
ಅದು ನಿಜ ..
ಸುಮ್ಮನೆ ಬೋರ್ ಆದಾಗಲೂ ಸಹ ಆಕಾಶ ನೋಡಿದಾಗ ಖುಷಿಯಾಗುತ್ತದೆ...
ಕಡು ನೀಲಿ ಬಣ್ಣ... ಬೆಳ್ಳನೆಯ ಮೋಡಗಳು.. ಸಕತ್ ಆಗಿರುತ್ತದೆ...
ನಾನು ಸಣ್ಣವನಿದ್ದಾಗ "ನಾರದ ವಿಜಯ" ಅಂತ ಒಂದು ಸಿನೇಮಾ ನೋಡಿದ್ದೆ..
ಅದರಲ್ಲಿ ನಾರದ(ಅನಂತ್ ನಾಗ್) ಮೋಡಗಳ ಸಂಗಡ ಹೋಗುತ್ತ ಇರುವಾಗ ವಿಮಾನ ನೋಡುತ್ತಾನೆ...
ಆ ಬೆಳ್ಳನೆಯ ಚಲಿಸುತ್ತಿರುವ ಮೋಡಗಳು .. ವಿಮಾನ ... ಆ ದೃಶ್ಯ ತುಂಬಾ ಚೆನ್ನಾಗಿತ್ತು..
ಮೊದಲ ಬಾರಿಗೆ ವಿಮಾನ ಹತ್ತಿದಾಗ ..
ಮನದಣಿಯೇ ಆಕಾಶದಲ್ಲಿನ ಮೋಡಗಳ ಸೊಬಗನ್ನು ಸವಿದಿದ್ದೆ....
ಫೋಟೊಗಳನ್ನು.. ಹಾಡುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ವರ್ಣಿಸಲಸದಳವು ನಿಮ್ಮೀ ಸುಂದರ ಚಿತ್ರಗಳು!! ನಿಜಕ್ಕೂ ಅದ್ಭುತವಾಗಿವೆ. ಬೇರೆನೂ ಬರೆಯಲು ತೋಚುತ್ತಿಲ್ಲ.
ಪ್ರಕಾಶಣ್ಣ...
ಮತ್ತೊಮ್ಮೆ, ಮಗದೊಮ್ಮೆ, ಇನ್ನೊಮ್ಮೆ, ಇವತ್ತು, ನಾಳೆ, ನಿನ್ನೆಯೆಲ್ಲ ದಿನಕ್ಕೆರಡುಬಾರಿ ಚೆಂದದ ಪರದೆಯಡಿ ಅಡಗುವ ಈ ಭಾಸ್ಕರನ ಬಣ್ಣಗಳನ್ನೆಲ್ಲ ನಮ್ಮ ಮುಂದೆ ಯಥಾವತ್ತಾಗಿ ತಂದಿಟ್ಟ ನಿಮಗೊಂದು ನಮಸ್ಕಾರ. ನಿಸರ್ಗಕಲಾಕಾರನ ಕುಂಚ ಆರುವ ಮುನ್ನವೇ ಹಿಡಿದಿಟ್ಟ ಈ ಫೋಟೋಗಳು ಮನದುಂಬಿಕೊಂಡಷ್ಟೂ ಮನದಣಿಯದು.
ಮನೆ ಮೇಲಿದ್ದ ಮಾತ್ರಕ್ಕೆ ಇಂಥ ಚಿತ್ರ ಹಿಡಿದಿಡುವುದು ಸಾಧ್ಯವಾ? ಅನಂತ ಆಗಸನತ್ತ ಒಂದಿಷ್ಟು ಆಗ್ರಹವೂ ಬೇಕು.
ಪ್ರಶಾಂತ್ ಕನ್ನಡಿಗ ಬ್ಲಾಗ್....
ನನ್ನ ಬ್ಲಾಗಿಗೆ ಸುಸ್ವಾಗತ....
ಈ ಮನೆಗೆ ಬರುವ ಮೊದಲು ಸೂರ್ಯಾಸ್ತ, ಸೂರ್ಯೋದಯ ಇಷ್ಟು ಚೆನ್ನಾಗಿ ನೋಡಿದ್ದೇ ಇಲ್ಲ..
ಊರಲ್ಲಿ ....
ಎರಡು ದೊಡ್ಡ ಬೆಟ್ಟಗಳ ನಡುವೆ ನಮ್ಮ ಊರು ಇರುವದರಿಂದ..
ಮುಳುಗುವ ಮತ್ತು ಉದಯಿಸುವ ಸೂರ್ಯ ನೋಡುವದು ದುಸ್ಥರ...
ಹಾಗಾಗಿ ನನಗೆ ಬಹಳ ಆಕರ್ಷಣೆ... ಈ ದಿನಕರನಲ್ಲಿ...
ಬಹಳ ಸುಲಭವಾಗಿ ಕಾಣುವ ದೃಶ್ಯ ಇದು ನಮ್ಮನೆ ಬಾಲ್ಕನಿಯಿಂದ...
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಬಾಲು ಸರ್...
ಇವೆಲ್ಲ ಬೆಂಗಳೂರಲ್ಲೇ ತೆಗೆದದ್ದು... ನಮ್ಮನೆ ಬಾಲ್ಕನಿಯಿಂದ...
ನಿಜ ಹೇಳ ಬೇಕೆಂದರೆ ಕೆಲವು ಗಝಲ್ ಗಳಿವೆ... ವಿರಹದ...
ಕುಡುಕರ ಗಝಲ್ಗಳು ಮಸ್ತ್ ಇದ್ದವು...
ಎಲ್ಲವನ್ನೂ ಬರೆಯಲಾಗಲಿಲ್ಲ...
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಉಷಾರವರೆ...
ನಿಮ್ಮ ಮಗುವಿನ ಕಲ್ಪನೆಗೊಂದು ಸಲಾಮ್....
ನಿಜ ಇದು ಬಾನಿನಲ್ಲಿ ಬಣ್ಣದ ಚಿತ್ತಾರ..!
ಮುಂದೆ ಆತ ಕವಿಯಾಗ ಬಹುದು...!
ನನ್ನ ಬಳಿ ಇನ್ನೂ ಹಲವು ಫೋಟೊಗಳಿವೆ...
ಮೋಡಗಳಿಲ್ಲದ ಸೂರ್ಯಾಸ್ತ...!
ಅದನ್ನೂ ಒಮ್ಮೆ ಹಾಕುವೆ...
ನಿಮಗೂ.. ನಿಮ್ಮ ಮಗುವಿಗೂ ಧನ್ಯವಾದಗಳು...
ಜಯಲಕ್ಷ್ಮೀಯವರೆ....
ಮೋಡಗಳ ಮರೆಯಲ್ಲಿ ನೇಸರ..
ಅವನ ಬಣ್ಣದ ಓಕುಳಿಯಾಟ ತುಂಬಾ ಸೊಗಸು...
ಅಲ್ಲಿ ಎಷ್ಟೊಂದು ಬಣ್ಣಗಳು...!
ಜಗತ್ತಿನ ಎಲ್ಲ ಶ್ರೇಷ್ಠಕವಿಗಳಿಂದ ಬಣ್ಣಿಸಲ್ಪಟ್ಟಿವೆ...!
"ಸಂಜೆ ಕೆಂಪು ಮೂಡಿತು...
ಇರುಳು ಸೆರಗು ಹಾಸಿದಂತೆ..." ವಾಹ್...!
ಅಂಥಹ ಕಲ್ಪನೆಗಳಿಗೆ ಸ್ಪೂರ್ತಿ ಈ ಸೂರ್ಯಾಸ್ತ...!
ನಿಮ್ಮ ಮೆಚ್ಚುಗೆಗೆ ಹೃದಯ ಪೂರ್ವಕ ಧನ್ಯವಾದಗಳು...
ಪ್ರೋತ್ಸಾಹ ಹೀಗೆಯೇ ಇರಲಿ....
ವಿನುತಾ...
ಈ ಫೋಟೊಗಳನ್ನು ಆರ್ಕುಟ್ಲ್ಲಿ ಹಾಕಲಿಕ್ಕೆ ಹೊರಟಿದ್ದೆ..
ನನ್ನ ಮಗ ಇದು ಬ್ಲಾಗಿಗೆ ಹಾಕಿ ಚೆನ್ನಾಗಿರುತ್ತದೆ ಅಂತ ಹೇಳಿದ...
ನೀವೆಲ್ಲ ಮೆಚ್ಚಿಕೊಂಡಿದ್ದು ಖುಷಿಯಾಗುತ್ತಿದೆ...
ಇನ್ನೊಂದು ಹಿಂದಿ ಹಾಡಿದೆ...
"ಜಬ್ ದೀಪ್ ಜಲೆ... ಆನಾ...
ಜಬ್ ಶ್ಯಾಮ್ ಢಲೇ... ಆನಾ..."
ಏಸುದಾಸ್ ಹಾಡಿದ ಹಾಡು ತುಂಬಾ ಸೊಗಸಾಗಿದೆ...
ಫೋಟೊ.. ಮತ್ತು ಹಾಡುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....
ದೀಪಸ್ಮಿತ...
ನಿಮ್ಮ ಬ್ಲಾಗಿನ ಫೋಟೊಗಳು ತುಂಬಾ ಚೆನ್ನಾಗಿರುತದೆ...
ಸೂರ್ಯಾಸ್ತವನ್ನು ಹೆಚ್ಚಾಗಿ ನಿರಾಸೆ.. ವಿರಹ..
ಒಂಟೀತನಕ್ಕೆ ಹೋಲಿಸುತ್ತಾರೆ...
ಮುಳುಗುತ್ತಿರುವ ಸೂರ್ಯ ಅಪಶಕುನ ಅನ್ನುವವರೂ ಇದ್ದಾರೆ....
"ಲೋಕೋ ಭಿನ್ನ ರುಚಿ..."
ಜಗತ್ತಿನಲ್ಲಿ ಬಹಳಷ್ಟು ವಿಭಿನ್ನ ರುಚಿಗಳಿವೆಯಂತೆ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
ಸುಮಾ ಸುಧಾಕಿರಣ್ ಅವರೆ...
ನನ್ನ ಬ್ಲಾಗಿಗೆ ಸ್ವಾಗತ...
ಕನ್ನಡದ ಇನ್ನೊಂದು ಹಾಡಿದೆ...
"ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ...
ಚಂದ್ರ ಮೇಲೇ ಬಂದಾ..
ನೋಡು ಎಂತಾ ಚಂದಾ...."
ಸೂರ್ಯಾಸ್ತ... ಚಂದ್ರೋದಯ... ಸೂರ್ಯೋದಯದ ಎಲ್ಲ ಹಾಡುಗಳೂ ಸೊಗಸಾಗಿವೆ...!
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಗಣೇಶ್.....
ನನ್ನ ಬ್ಲಾಗಿಗೆ ಸ್ವಾಗತ...
ನಿಮ್ಮ ಮಳೆಹನಿಯ ಫೋಟೊಗಳು ತುಂಬಾ ಸೊಗಸಾಗಿವೆ...
ನಿಮ್ಮ ಫೋಟೊಗ್ರಫಿ ಚೆನ್ನಾಗಿದೆ....
ಸೂರ್ಯಾಸ್ತದ ಫೋಟೊ.. ಹಾಡುಗಳನ್ನು
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ನಿಮ್ಮ ಫೋಟೊಗಳನ್ನು ನೋಡಿ ರಾಜಕುಮಾರ್ ಹಾಡಿದ "ಬಾನಿನ ಅಂಚಿಂದ ಬಂದೆ.." ಹಾಡು ನೆನಪಾಯಿತು.
ಚೆನ್ನಾಗಿವೆ ಫೋಟೊಗಳು.
WOW,PRAKASHANNA.....adhbuta photoggraphy,ashte chandada hadina moolaka baravanige,fentastic........superb,hogalalle padagale ille.............
ಚಂದ್ರ ಶೇಖರ್...(ಕ್ಷಣ ಚಿಂತನೆ)
ನಗರದ ಒತ್ತಡದ ಜೀವನ, ಯಾಂತ್ರಿಕತೆಯಿಂದಾಗಿ
ನಾವೆಲ್ಲ ಕೆಲವು ಖುಷಿ, ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇವೆ...
ನಮ್ಮ ದಿನದ ಹಗಲೆಲ್ಲ ದುಡಿತಕ್ಕೆ ಇಟ್ಟಿದ್ದೇವೆ..
ರಾತ್ರಿ ಮಲಗಲಿಕ್ಕೆ ಮನೆಗೆ ಬರುತ್ತೇವೆ...
ಈ ಆಕಾಶ.. ಸಣ್ಣ ಪುಟ್ಟ ಸೊಬಗು.. ಪ್ರಕೃತಿ ಇವುಗಳನ್ನು ನೋಡುವದನ್ನೂ ಬಿಟ್ಟಿದ್ದೇವೆ..
ನಮ್ಮ ಮಕ್ಕಳನ್ನೂ ಅದೇರಿತಿ ಬೆಳೆಸುತ್ತಿದ್ದೇವೆ...
ಮಕ್ಕಳಿಗೆ ಆಕಾಶ.. ಮೋಡ, ಮಳೆ.. ಗಿಡ, ಮರ ಹಕ್ಕಿ..
ಏನನ್ನೂ ತೋರಿಸುತ್ತಿಲ್ಲ...
ಅವರ ಮುಂದೆ ಪರಿಕ್ಷೆ , ಮಾರ್ಕ್ಸು...ಪುಸ್ತಕದ ಓದು
ಇಷ್ಟನ್ನೇ ಇಟ್ಟಿದ್ದೇವೆ...
ಹವ್ಯಾಸವೆಂದರೆ ಟಿ.ವಿ.. ಸಿನೇಮಾ...
ನಾವು ತಪ್ಪಿದ್ದೇವೆ ಅಲ್ಲವಾ...?
ಚಂದ್ರು ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
Wow!!!!!!!!!!!!
Nice photos........and the main thing is very good photography...........
ಪೂರ್ಣಿಮಾ....
ಮೋಡ.. ಮಳೆ..ಸೂರ್ಯಾಸ್ತ...ಸೂರ್ಯೋದಯ...
ಇವೆಲ್ಲ ತೀರಾ ಭಾವುಕ ಸಂಗತಿಗಳು...
ಕಲ್ಪನೆಯೊಳಗೆ ಮುಳುಗುವವರಿಗೆ ಇವೆಲ್ಲ ಇಷ್ಟವಾಗುತ್ತದೆ...
ವಾಸ್ತವದಲ್ಲಿ ಇವೆಲ್ಲ ತೀರಾ ಸಾಮಾನ್ಯ ವಿಷಯಗಳು...
ಸಹಜವಾಗಿ ಆಗುವಂಥ ಸಂಗತಿಗಳು...
ವಿಶೇಷ ಏನೂ ಕಾಣ್ತಾ ಇಲ್ಲ...
ಇದು ನನ್ನ ಆತ್ಮೀಯ ಸ್ನೇಹಿತನೊಬ್ಬನ ಅಭಿಪ್ರಾಯ...
ಏನಂತೀರಿ...?
ಪೂರ್ಣಿಮಾ....
ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
Prakashanna,
Super aagide ella photos,but first prize goes to the 1st picture..
please visit the link below..amazing photography,nimma maganigu torisi..........
http://www.stevemccurry.com/main.php
ಒಳ್ಳೆಯ ಚಿತ್ರಗಳನ್ನು ಸೆರೆ ಹಿಡಿದು,ಅವನ್ನು ಸಮರ್ಥವಾಗಿ ಬಳಸಿಕೊಂಡಿದ್ದೀರಿ.
ಆತ್ಮೀಯ ಪ್ರಕಾಶ ,
ಕಣ್ಣು ಮತ್ತೆ ಮನಸ್ಸು ಎರಡು ಭಾರ ಆಯಿತು ... ಕೈ ಕಟ್ ಬಾಯಿ ಮುಚ್ಚು...ಮುಂದೆ ಮಾತಿಲ್ಲ ..
ಸೂಪರ್ರು
ಮೋಡಗಳನ್ನು ನೋಡುತ್ತಾ ಅವುಗಳಲ್ಲಿ ವ್ಯಕ್ತಿ, ವಸ್ತುಗಳನ್ನು ಹುಡುಕುತ್ತಾ ಕಳೆದು ಹೋಗುವುದು ನನ್ನ ಹವ್ಯಾಸಗಳಲ್ಲೊಂದು ಪ್ರಕಾಶ್ ಅವರೆ. ಹೀಗಾಗಿ ಆಗಸ ಅನ್ನುವ ಆ ಹಿರಿದಾದ ಕ್ಯಾನ್ವಾಸ್ ಬಗ್ಗೆ ನನಗೆ ಎಲ್ಲಿಲ್ಲದ ಕುತೂಹಲ ಮತ್ತು ಮೆಚ್ಚುಗೆ.
Post a Comment