Saturday, August 22, 2009

ಅವರ ಮಕ್ಕಳಿಗೆ... ಅವರೇ... ಹೆಸರಿಟ್ಟಿದ್ದಾರೆ...!


ಶಾರಿ ಊರಿಂದ ಫೋನ್ ಮಾಡಿದ್ದಳು...

" ಹೋಯ್... ಗೊಮಟೇಶ್ವರ..!!
ಟಿವಿ ೯ ರವರಿಗೆ ಒಂದು ಥ್ಯಾಂಕ್ಸ್ ಹೇಳಪ್ಪ..."


"ಯಾಕೆ ಏನಾಯ್ತೆ..? ಶಾರಿ...??"

"ಅಲ್ಲಾ...!!
ಅಷ್ಟು ಸಣ್ಣ ಟಿವಿಯಲ್ಲಿ ನಿನ್ನಂಥಹ ದೈತ್ಯನನ್ನು ತೋರಿಸಿದರಲ್ಲಾ...?

ಅದು ಹೇಗೆ ಸಾಧ್ಯ..!!.?"

ಗಣೇಶ ಹಬ್ಬದ ಕಾರ್ಯಕ್ರಮದಲ್ಲಿ ನಾನು ನನ್ನಾಕೆ ಟಿವಿ ನೈನ್‍ನಲ್ಲಿ ಬಂದಿದ್ದೇವು ..
ಲೇಡೀಸ್ ಕ್ಲಬ್ ಕಾರ್ಯಕ್ರಮದಲ್ಲಿ...

ಈ ಶಾರಿ ನಿಜವಾಗಿಯೂ ಕೇಳ್ತಾ ಇದ್ದಾಳೋ...!
ಅಥವಾ ನನ್ನನ್ನು ಹಾಸ್ಯ ಮಾಡ್ತಿದಾಳೊ.. ಗೊತ್ತಾಗಲಿಲ್ಲ...


"ಏಯ್.. ಶಾರಿ ಚೆನ್ನಾಗಿದ್ದಿಯೇನೆ..? ಏನಂತಾನೆ ಗಣಪ್ತಿ...?.."

" ಅಯ್ಯೋ ಅವರಿಗೇನೊ...?
ಆರಾಮಾಗಿ ಬಾಯಿತುಂಬಾ ಎಲೆ ಅಡಿಕೆ ಹಾಕ್ಕೊಂಡು ಆರಾಮಾಗಿದ್ದಾರೆ...
ಎಲೆ ಅಡಿಕೆ ಇದ್ರೆ ಅವರಿಗೆ ಈ ಪ್ರಪಂಚದಲ್ಲಿ ಏನು ಬೇಡ....
ನನಗೇ ಟೆನ್ಷನ್ ಕಣಪ್ಪಾ..."

" ಏನಾಯ್ತೆ.. ? ಶಾರಿ ನಿಂಗೂ ಟೆನ್ಷನ್ನಾ...?"

" ಹೌದೋ ಪ್ರಕಾಶು...
ಅದೇನೋ ಹಂದಿ ಜ್ವರನಂತೆ ನಂಗೆ ಸ್ವಲ್ಪ ಅದರ ಬಗ್ಗೆ ಹೇಳೊ...

ನಾನು ನಮ್ಮವರಿಗೆ ಹೇಳಿದೆ ಹಂದಿ ಜ್ವರದ ಬಗೆಗೆ ಪ್ರಕಾಶನ ಹತ್ರ ಕೇಳಿ...
ಶರೀರ ದೊಡ್ಡದಾದ್ರೂ.. ಬುದ್ಧಿವಂತನ ಥರ ಕಾಣ್ತಾನೆ......
ಬೆಂಗಳೂರಲ್ಲಿ ಇದ್ದಾನೆ..
ಫೋನ್ ಮಾಡಿ ಅಂದ್ರೆ ಬಾಯಿಂದ ಎಲೆ ಅಡಿಕೆ ತೆಗಿತಾನೆ ಇಲ್ಲ... "

ಇವಳು ಈ ಥರಹ ಹೊಗಳುವದು ನಂಗೆ ಸ್ವಲ್ಪ ಅಭ್ಯಾಸವಾಗಿತ್ತು....

"ಶಾರಿ... ಈ ರೋಗ.. ಗಾಳಿಯಲ್ಲಿ ಹರಡ್ತದೆ..
ರೋಗ ಬಂದವನು ಒಮ್ಮೆ ಕೆಮ್ಮಿದರೆ...

ಅವನಿಂದ ಬರುವ ವೈರಸ್‍ಗಳು.. ಐದು ತಾಸು ಹವೆಯಲ್ಲಿ ಇರ್ತದೆ..
ಮುಖಕ್ಕೆ ಬಟ್ಟೆ ಕಟ್ಗೋ ಬೇಕು... ರೋಗಿಗೂ ಬಟ್ಟೆ ಕಟ್ ಬೇಕು..."

" ಹೌದೇನೋ ..?
ಇಡೀ ದಿನ ಕಟ್ಟಿಕೊಂಡಿರ ಬೇಕು ಅನ್ನು...

ಅಲ್ಲಾ ಎಂಥಾ ಪರಿಸ್ಥಿತಿ ಬಂದೋಯ್ತು...!!...??...
ನಮ್ಮ ಮುಖ ಬೇರೆಯವರಿಗೆ ತೋರ್ಸೋದಿರೋ ಹಾಗಾಯ್ತಲ್ಲಪ್ಪ...!!
ಮುಖ ನೋಡಿ ಪ್ರೀತಿನೂ..... ಮಾಡೋಕ್ಕೆಆಗೋಲ್ಲ ಅನ್ನು...! ಛೇ...
ಛೇ... ಕಲಿಗಾಲಾ...!!"


" ಹುಂ ಮತ್ತೆ ತುಂಬಾ ಎಚ್ಚರಿಕೆಯಲ್ಲಿರ ಬೇಕು...
ಸಿರ್ಸಿ ಕಡೇನೂ ಬಂದಿದೆಯಂತೆ ..

ಹುಷಾರು.. ಮಕ್ಕಳಿಗೂ ಕರ್ಚೀಫ್ ಕಟ್ಟಿ ಶಾಲೆಗೆ ಕಳಿಸು..."

" ಇದೊಳ್ಳೆ ಸಮಸ್ಯೆ ಆಯ್ತಲ್ಲಪಾ... !!
ನನ್ನ ಮಾವ ದಿನಕ್ಕೆ ಹತ್ತು ಕಟ್ಟು ಬೀಡಿ ಕುಡಿತಾನೆ..

ಮುಖಕ್ಕೆ... ಬಟ್ಟೆ ಕಟ್ಟಿಕೊಂಡು ... ಹೇಗೆ ಕುಡಿತಾನೆ...?"

"ಶಾರಿ... ಕರ್ಚೀಫ್ ಒಂದು ಸಣ್ಣ ತೂತು ಮಾಡಿದ್ರಾಯ್ತಪಾ..."

"ಸರಿ.... ಆಯ್ತು ಕಣಪಾ..
ನಂಗೆ ನನ್ನ ಯಜಮಾನ್ರದ್ದೇ ಚಿಂತೆ...!!

ರಾತ್ರಿ ಮಲಗುವಾಗ ಎಲೆ ಅಡಿಕೆ ಹಾಕಿ ...
ಬೆಳಿಗ್ಗೆ ಎದ್ದು ತುಪ್ಪೋ ಅಭ್ಯಾಸ ....ಇವರಿಗೇನು ಮಾಡುವದು..?

ಬಾಯಿಗೆ ಬಟ್ಟೆ ಕಟ್ಟಿಕೊಂಡು... ಎಲೆ ಅಡಿಕೆ ಹೇಗೆ ಹಾಕ್ಕೊಳ್ತಾರೆ..?

ಗಣಪ್ತಿಗೆ ಎಲೆ ಅಡಿಕೆ ಜಗಿಯೋ ಅಭ್ಯಾಸ....
ಎಲೆ ಮಡಚಿ ಬಾಯಿಗೆ ಹಾಕಿ... ಸಂಗಡ ಸುಣ್ಣ, ತಂಬಾಕಿನ ಪೀಸು ಹಾಕುತ್ತಲೇ ಇರಬೇಕು...
ಅದು ಒಂದಾದಮೇಲೊಂದು ಬಾಯಿಗೆ ಹೋಗುತ್ತಲೇ ಇರಬೇಕು...
ಅದೋಂಥರಾ ಎಲೆ ಅಡಿಕೆ ಅಗಿಯೋ ಮಶಿನ್ನು....!!

"ಇದಕ್ಕೆ ನನ್ನ ಬಳಿ ಏನೂ ಐಡಿಯಾ ಇಲ್ಲ ಮಾರಾಯ್ತಿ..!!
ಒಂದು ದೊಡ್ಡ ಲುಂಗಿ ಕಟ್ಟಿ ಕಳಿಸು....
ನೋಡು ಇನ್ನೊಂದು ವಿಷಯ...
ಹೊರಗಡೆಯಿಂದ ಬದವರು ಕೈ, ಮುಖತೊಳೆದು ಕೊಂಡೇ....
ತಮ್ಮ ಮೂಗು, ಕಣ್ಣು ಮುಟ್ಕೋ ಬೇಕು..

ಅಲ್ಲೆಲ್ಲ ವೈರಸ್ ಅಂಟಿಕೊಳ್ಳೋ ಸಾಧ್ಯತೆ ಇವೆಯಂತೆ...
ಮಕ್ಕಳಿಗೆ ಎಲ್ಲವನ್ನೂ ತಿಳ್ಸಿ ಹೇಳು ಮಾರಾಯ್ತಿ.."

"ಆಯ್ತು ಮಾರಾಯಾ...!
ಎಲ್ಲಾ ರೋಗ ಬಡವರನ್ನೇ ಸಾಯಿಸ್ಲಿಕ್ಕೆ ಬರ್ತದೆ ನೋಡು...
ಬಗ್ಗಿಕೊಂಡು ಗದ್ದೆ ನೆಟ್ಟಿ ಮಾಡೋರು...
ಅಡಿಕೆ ಮರ ಹತ್ತಿ , ತೆಂಗಿನ ಮರಹತ್ತೋರಿಗೆಲ್ಲ ಇದು ಹೇಗೆ ಸಾಧ್ಯ...?
ಗದ್ದೆ ಊಳೋನಿಗೆ ಬಾಯಿಗೆ ಬಟ್ಟೆ ಕಟ್ಟಿ ಕೆಲಸ ಮಾಡು ಅಂದ್ರೆ ಹೇಗಪ್ಪಾ...?
ಇದೆಲ್ಲಾ ಬರೋದು ಬಡವರನ್ನ ಸಾಯಿಸಲಿಕ್ಕೆ..."


" ಹೌದು ಕಣೆ... ಇದಕ್ಕೆಲ್ಲ ಏನೂ ಮಾಡ್ಲಿಕ್ಕೆ ಬರಲ್ಲ... ಎಚ್ಚರಿಕೆಯಲ್ಲಿರ ಬೇಕು..."

" ಪ್ರಕಾಶು ನಂಗೆ ಇನ್ನೊಂದು ಡೌಟು....
ಈ ರೋಗದ ಹೆಸರೆಲ್ಲ ಯಾಕೇ ಹೀಗಿರ್ತದೆ...?
ಕೋಳಿ ಜ್ವರ.. ಹಕ್ಕಿ ಜ್ವರ... ಹಂದಿ ಜ್ವರ...?
ಎಲ್ಲಾ ಮಾಂಸಹಾರಿಗಳದ್ದೇ ಆಗೋಯ್ತಲ್ಲಾ..??."

" ಶಾರಿ ....ಅದೆಲ್ಲಾ ಅಮೇರಿಕದಲ್ಲಿ ಹುಟ್ಟಿದ ರೋಗ ಕಣೆ..
ಅವರ ಮಕ್ಕಳಿಗೆ.. ಅವರೇ ನಾಮಕರಣ ಮಾಡಿದ್ದಾರೆ.."


" ಅಲ್ಲಿ ತರಕಾರಿಗಳು ಸಿಗೋದಿಲ್ವಾ..?
ಒಪ್ಪವಾಗಿ, ಲಕ್ಷಣವಾಗಿ....
ಬಸಳೆ ಸೊಪ್ಪಿನ ಜ್ವರ,..!!
ಬದನೆಕಾಯಿ ಜ್ವರ...!! ಅನ್ನೋ ಬಹುದಿತ್ತು...

ಹೋಗ್ಲಿ ಬಿಡು... ನೀನೂ ನಿನ್ನ ಹೆಂಡ್ತೀನೂ ಹುಷಾರಿಯಲ್ಲಿರ್ರಪಾ..."

"ಆಯ್ತು ಕಣೆ..."

" ಆಲ್ಲಾ ಹೊರಗಿನಿಂದ ಬಂದು ಹೆಂಡ್ತೀನಾ ತಬ್ಬಿಕೊಳ್ಳೋದಿಕ್ಕೆ ಹೋಗ್ಬೇಡ...!
ಕೈ . ಮುಖ ಎಲ್ಲ ತೊಳ್ಕೊಂಡು... ಪ್ರೀತಿ ಮಾಡ್ಕೊಳ್ಳಿ...!
ಪ್ರೀತಿ, ಪ್ರೇಮ ಮಾಡ್ಕೊಳ್ಳೋ ಮೊದ್ಲು ಸೋಪು ಹಚ್ಚಿ ಸ್ನಾನ ಮಾಡಿ.....
ಯಾಕೊ ಪ್ರಕಾಶು ಹೂಂ ಅಂತಾನೇ ಇಲ್ಲಾ...??"

" ಶಾರಿ... ಸಾಕು ಮಾರಾಯ್ತಿ...ನಾನು ಹೇಳಿದ್ದು ನಂಗೇ ಹೇಳ್ತಿದ್ದಿಯಲ್ಲ..."

"ನೀನು ನಂಗೆ ಯಾವಾಗ್ಲೂ ಸಣ್ಣವನೇ ಕಣಪ್ಪಾ...!
ಅಲ್ಲೋ ಪ್ರಕಾಶು... ಈ ರೋಗ ಪ್ರಾಣಿ.. ಪಕ್ಷಿಗಳಿಗೆ ಬರೋಲ್ವೇನೊ...?"

"ಇಲ್ಲ.. ಕಣೆ..."

" ನೋಡು ನಮಗಿಂತ ಮಾತು ಬರದ ಮೂಕ ಪ್ರಾಣಿಗಳೇ ಮೇಲು...
ಈ ಥರಹ ಅವಾಂತರಗಳನ್ನು ಮಾಡ್ಕೊಂಡಿಲ್ಲ...
ತಮ್ಮ ಪಾಡಿಗೆ ತಾವು... ಆರಾಮಿಗಿವೆ..."


ನನಗೆ ಏನು ಹೇಳ್ಬೇಕು ಅಂತ... ಗೊತ್ತಾಗಲಿಲ್ಲ.....
!!

"ಪ್ರಕಾಶು .. ನಮ್ಮ ಸಮಸ್ಯೆಗೆ ಏನು ಕಾರಣ ಗೊತ್ತಾ..?"

" ನಮಲ್ಲಿನ ಬಡತನ... ಅನಕ್ಷರತೆ... ಅಜ್ಞಾನ..."

" ನೀನು ಪೇಟೆ ಸೇರಿ ಬುದ್ಧಿವಂತ ಆಗಿದಿಯಾ ಅಂದು ಕೊಂಡರೆ ...
ನೀನು ... ನನ್ನ ಯಜಮಾನ್ರ ತರಹ ಆಗಿ ಬಿಟ್ಯಲ್ಲೋ...!!
ಒಳ್ಳೆ ವೋಟ್ ಕೇಳಲಿಕ್ಕೆ ಬಂದ ರಾಜಕಾರಣಿ ತರಹ ಅದನ್ನೇ ಉರು ಹೊಡೆದು ಹೇಳ್ತಾ ಇದ್ದೀಯ...!
ಮ್ಮ ಸಮಸ್ಯೆಗಳಿಗೆ " ಅಮೇರಿಕಾ" ಕಾರಣ...
ಎಲ್ಲಾ ರೋಗ ಹುಟ್ಟಿ ಹಾಕೋದೇ.... ಅಮೇರಿಕಾ...

ಅಷ್ಟರಲ್ಲಿ ಗಣಪ್ತಿ ಬಂದ ಅನಿಸುತ್ತದೆ...
ಗಣಪ್ತಿ ಬಾವ ಫೋನ್ ತೆಗೆದು ಕೊಂಡ...

" ಪ್ರಕಾಶು... ನಿನಗೊಂದು ವಿಷಯ ಹೇಳ ಬೇಕು....
ಕಳೆದ ಒಂದು ತಿಂಗಳಿಂದ .. ನಮ್ಮನೆಗೆ ಟಿವಿ ಬಂದಿದೆ...
ಪೇಪರು ಬರ್ತಾ ಇದೆ..."

" ಅದರಿಂದ ಏನಾಯ್ತು...?"

" ಏನೋ ಹೇಳ್ತಾರಲ್ಲ ... ಮಾರಾಯಾ...!
ಸುಮ್ನೆ ಇರಲಿಕ್ಕೆ ಆಗದೆ ಇರೋನು ಮೈ ಮೇಲೆ ಇರುವೆ ಬಿಟ್ಕೊಂಡಿ ದ್ನಂತೆ ....
ನಿನ್ನ ಶಾರಿಗೆ ಈಗ ನಲವತ್ತೈದು ವರ್ಷ...
ಇಲ್ಲಿಯವರೆಗೆ ಏನೂ ಚಿಂತೆ ಇಲ್ದೆ ಹಾಯಾಗಿದ್ಲು... ಮನೆ.. ಮಕ್ಕಳು ಸಂಸಾರ ಅಂತ....
ಟಿವಿ, ಪೇಪರ್ರು ಬಂದ ಮೇಲೆ ಹೀಗಾಗಿ ಬಿಟ್ಟಿದ್ದಾಳೆ...."

" ಓದಲಿ.. ಬಿಡು ಗಣಪ್ತಿ... ಬಾವ... ಪ್ರಪಂಚ ಜ್ಞಾನ ಬೆಳಿತದೆ..."

"ಪ್ರಕಾಶು ನೀನು....
ನಿಜ ಹೇಳಿದ್ರೂ..... ಹುಂ ಅಂತಿಯಾ....
ಸುಳ್ಳು ಹೇಳಿದ್ರೂ.... ಹುಂ.. ಅಂತಿಯಾ....
ನಿನ್ನ ಶಾರಿ ನನಗೆ ಕುಳಿತಲ್ಲಿ ಕುತ್ಕೊಳೋದಕ್ಕೆ ಬಿಡಲ್ಲ ಕಣಪಾ...
ಹೆಂಗಸರು ಓದಿದ್ರೆ ಹಿಂಗೆ ಆಗೋದು.....
ನೋಡು...!!.
ಗಂಡಸರಿಗೆ ಆರಾಮಾಗಿ ಇರಲಿಕ್ಕೆ ಬಿಡಲ್ಲ...!!."ಎಲ್ಲರಿಗೂ .. ಗೌರಿ ಗಣೇಶ ಹಬ್ಬದ ಶುಭಾಶಯಗಳು.....


(ಪುಸ್ತಕದ ತಯಾರಿ ಜೋರಾಗಿಯೇ ನಡೆದಿದೆ....
ಪುಸ್ತಕದ ಹೆಸರು ಕೂಡ ಸಿಲೆಕ್ಟ್ ಆಗಿದೆ....
ಪ್ರಕಾಶಕರ ಒತ್ತಡ ಭರ್ಜರಿಯಾಗಿಯೇ ಇದೆ...
ಸಧ್ಯದಲ್ಲಿ ಇನ್ನೊಂದು ಖುಷಿಯ ವಿಚಾರ ಹಂಚಿಕೊಳ್ಳುವೆ...
ಪ್ರೋತ್ಸಾಹ ಹೀಗೆಯೇ ಇರಲಿ....)

58 comments:

vinuta said...

Flu ge yava tarahada kalaji irabeku annuvadannu chennagi heliddira.Shari swalpa jasti matu annistu.

ಸುಧೇಶ್ ಶೆಟ್ಟಿ said...

ಅಬ್ಬಾ.... ಮೊದಲ ಬಾರಿಗೆ ಎರಡನೆಯವನಾಗಿ ಕಮೆ೦ಟು ಮಾಡ್ತಾ ಇದೀನಿ ಅನ್ನಿಸ್ತಿದೆ...ಇಲ್ಲದಿದ್ದರೆ ನಾನು ಯಾವಾಗ ಕಮೆ೦ಟು ಮಾಡಲು ಬ೦ದರೂ ೬೦-೭ ಕಮೆ೦ಟುಗಳು ಬ೦ದಿರುತ್ತವೆ.... ಯಾವಾಗಲೂ ಲೇಟು ಎ೦ದು ಬೇಜಾರಾಗುತ್ತದೆ... :) ಇವತ್ತು ಖುಶಿಯಾಯ್ತು....

ಎ೦ದಿನ೦ತೆ ಬರಹ ಸೂಪರ್.... ಶಾರಿಯವರ ಮಾತುಗಳು.... ಅಬ್ಬಾ!

ಸಿಮೆಂಟು ಮರಳಿನ ಮಧ್ಯೆ said...

ವಿನೂತಾ....

ಶಾರಿ ಹೇಳೊ ಮಾತಲ್ಲಿ ಸತ್ಯ ಇದೆ...ಅಂತ ಅನಿಸ್ತದೆ....
ಅವಳು ಯಾವಾಗಲೂ ಹಾಗೇನೆ ಮಾತು ಜಾಸ್ತಿ...
ಈಗಂತೂ ಅವರ ಮನೆಗೆ ಟಿವಿ, ಪೇಪರ್ ಬರ್ತಾ ಇದೆ....
ಅವರ ಮನೆಯವರಲ್ಲ ಹೇಗೆ ಸಹಿಸಿ ಕೊಳ್ತಾರೊ...

ಆದರೆ ಮುಗ್ಧತೆ ಹಾಗೇ ಇದೆ ಅನಿಸ್ತದೆ.....

ಪ್ರತಿಕ್ರಿಯೆಗೆ ಧನ್ಯವಾದಗಳು...

ಗಣೇಶ ಹಬ್ಬದ ಶುಭಾಶಯಗಳು.....

ಸಿಮೆಂಟು ಮರಳಿನ ಮಧ್ಯೆ said...

ಸುಧೇಶ್....

ನೀವು ಮೊದ ಮೊದಲು ಬಂದು ಪ್ರತಿಕ್ರಿಯೆ ಕೊಟ್ಟಿದ್ದು ತುಂಬಾ ಖುಷಿಯಾಯ್ತು....

ಕಳೆದ ಹತ್ತು ದಿನಗಳಿಂದ ನಿಮ್ಮೆಲ್ಲರ ಬ್ಲಾಗಿಗೆ ಬರಲಾಗಲಿಲ್ಲ....
ವೈರಲ್ ಜ್ವರ ಇತ್ತು...

ಶಾರಿಯ ಮಾತುಗಳು ಇಷ್ಟ ಆಗಿದ್ದಕ್ಕೆ ಧನ್ಯವಾದಗಳು.....

ಗಣೇಶ ಹಬ್ಬದ ಶುಭಾಶಯಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಈಗ ನಾವೆದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾರಿಯವರು ಹಾಸ್ಯ, ವ್ಯಂಗ್ಯ ಮತ್ತು ಅವರದೇ ಶೈಲಿಯಲ್ಲಿ ಅರ್ಥೈಸಿದ್ದಾರೆ ಅಲ್ವಾ? ಅದು ಕಟು ಸತ್ಯ ಕೂಡ!
ನಮ್ಮೆಲ್ಲಾ ಸಮಸ್ಯೆಗಳಿಗೆ ಮೂಲ ಅಮೆರಿಕ! ಒಂದೇ ಉತ್ತರದಲ್ಲಿ ನೂರು ಪ್ರಶ್ನೆಗಳಿವೆ ಹಾಗೇ ಅರ್ಥಗಳೂ ಇವೆ.
ಎಲ್ಲಾ ಕಷ್ಟಗಳು ಬಡವರ ಬೆನ್ನು ಮುರಿಯಲು ಎಂಬ ವಾಸ್ತವ ;
ಅವರ ಮಕ್ಕಳಿಗೆ ಅವರೇ ಹೆಸರಿಟ್ಟಿದ್ದಾರೆ ಅನ್ನುವಲ್ಲಿ ಅವರ ವ್ಯಕ್ತಿತ್ವ... ಯೋಚಿಸುವಂತಿದೆ.
ಬೀಡಿಗಾಗಿ ಮಾಸ್ಕಲ್ಲಿ ತೂತು!
ಎಲೆ ಅಡಿಕೆ ಜಗಿಯುವವರು ಲುಂಗಿ ಕಟ್ಟಿಕೊಳ್ಳುವ ಐಡಿಯಾ ಸೂಪರ್!!!

umesh desai said...

ಹೆಗಡೆಜಿ ಅ ಗಣಪ್ಪ ನಿಮಗೆ ಶುಭ ತರಲಿ. ನಿಮ್ಮ ಶಾರಿಯನ್ನು ಭೆಟ್ಟಿ ಮಾಡಿಸಿ ಬಹಳ ದಿನಗಳಾಗಿದ್ದವು . ಯಾವಾಗ ನೀವು ಟಿವಿ ೯ ರಲ್ಲಿ ಬಂದಿದ್ದು ಇಂಥ ವಿಷಯ ಮೊದಲೇ ಹೇಳಿದರೆ ನೋಡಬಹುದು ಹಬ್ಬಕ್ಕ ಏನ್ ಅಡಿಗಿ ಮನ್ಯಾಗ

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್....

ಬೀಳುತ್ತಿರುವ ಮರ ನಂಬಿಕೊಂಡ ಹಾಗಿದೆ....
ಅಮೇರಿಕಾ ಬೀಳುತ್ತಿರುವ ಮರ...
ಬೀಳುವಾಗ ಇನ್ನೆಷ್ಟು ಗಿಡಗಳು ಸಾಯುತ್ತವೊ...?
ಎಷ್ಟು ಹಕ್ಕಿಗಳ ಗೂಡು ನಾಶವಾಗುತ್ತವೊ...?

ನಮ್ಮ ದೇಶದಲ್ಲೇ ಹಂದಿಜ್ವರ ಶುರುವಾಗಿದ್ದರೆ...
ಇಡಿ ಜಗತ್ತಿನ ತುಂಬ ಅಮೇರಿಕಾನೇ ಸುದ್ಧಿ ಮಾಡ್ತಿತ್ತು...
ನಮ್ಮ ವಿಮಾನ ಸಂಚಾರ ಬ್ಯಾನ್ ಮಾಡುವ ಮೊದಲ ದೇಶ ಅಮೇರಿಕಾ....

ನಮಗ್ಯಾಕೆ ಅದರ ಹಂಗು...?

ಈಗ ಅಮೇರಿಕಾಕ್ಕೆ ನಮ್ಮ ದೇಶದ ಅಗತ್ಯ ಇದೆ...
ಇಲ್ಲಿನ ವಿಶಾಲ ಮಾರ್ಕೆಟ್ಟಿನ ಅಗತ್ಯ ಇದೆ....

ಲಾಲ್ ಬಹಾದ್ದೂರ್ ಶಾಸ್ತ್ರಿಯವರೋ, ವಲ್ಲಭ ಪಟೇಲರಂಥಹ ನಾಯಕರು ಈಗ ಇರಬಾರದಿತ್ತಾ...?

ಎಲ್ಲ ಇದ್ದು ಕೊಂಡು ಭಿಕ್ಷುಕರ ಥರಹ ಮಾಡಿ ಬಿಟ್ಟಿದ್ದಾರಲ್ಲ....ನಮ್ಮನ್ನ....

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

shivu said...

ಪ್ರಕಾಶ್ ಸರ್,

ಈ ಲೇಖನವನ್ನು ನಾವಿಬ್ಬರೂ ಇವತ್ತು ಹಬ್ಬದ ದಿನ ಓದಿ ಸಕ್ಕತ್ ನಕ್ಕೆವು. ಹಂದಿಜ್ವರ, ಕೋಳಿಜ್ವರ ದಂತ ಮಾಂಸಹಾರಿ ಜ್ವರಗಳ ಬದಲು ಬದನೇಕಾಯಿ ಜ್ವರ, ಸೊಪ್ಪಿನ ಜ್ವರ ಬರಲ್ವೇ ಅನ್ನೋ ವಿಚಾರ ಓದಿ ಅವಳಂತೂ ಸಕ್ಕತ್ ನಕ್ಕಳು.

ಬೀಡಿಗಾಗಿ ಮಾಸ್ಕ್ ತೂತು, ಎಲೆಅಡಿಕೆ ಅಗಿಯುವವರಿಗಾಗಿ, ಇತ್ಯಾದಿ ವಿಚಾರಗಳು ಹೊಸದೆನೆಸಿದವು..

ಹಳ್ಳಿಯ ಮುಗ್ದತೆಯ ಚಿತ್ರಣಗಳನ್ನು ಮಾತಿನ ಮೂಲಕ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ....

ಮನಸು said...

prakshanna,

baari joru ide maatu kaate hahaha.. nimma pustaka aadastu bega bidugadeyaagali haage namagu talupuvantaagali..

hosa vishayakkaagigi kaadiddeve..

gowri ganesh habbada shubhashayagaLu.

ಮೂರ್ತಿ ಹೊಸಬಾಳೆ. said...

ಪ್ರಕಾಶಣ್ಣ, ನನಗೆ TV9 ಕಾರ್ಯಕ್ರಮ ನೋಡಲಾಗಲಿಲ್ಲ.
ಸಾದ್ಯವಾದರೆ ವೀಡಿಯೋವನ್ನ ಅಪ್ ಲೋಡ್ ಮಾಡಿ.
ಅಂದ ಹಾಗೆ ತಂಬಾಕಿನ ಕವಳ ಹಾಕುವವರಿರೆ ಬೇರೆ ಯಾವುದೇ ರೋಗನಿರೋಧಕದ ಅವಶ್ಯಕತೆ ಇರುವುದಿಲ್ಲ,ಸುಣ್ನ ಮತ್ತೆ ತಂಬಾಕು ಸೇರಿದರೆ ಸರ್ವರೋಗಕ್ಕೂ ಆಂಟೀಬಯಾಟಿಕ್. ಆದರಿಂದ ಗಣಪ್ತಿ ಭಾವನಿಗೆ ಯಾವ ಸಮಸ್ಯೆ ಇಲ್ಲ.ಮತ್ತೆ ಶಾರಿಯ ಮಾವನವರೂ ಹಾಗೆ ಬೀಡಿ ಸೇದಿ ಕೆಮ್ಮಿದರೆ ಮೂಗು ಹಾಗು ಗಂಟಲಲ್ಲಿ ಸೇರಿಕೊಂಡ ಬ್ಯಾಕ್ಟೀರಿಯಾ ಕೂಡಾ ಹೊರಗೆ ಹೋಗುತ್ತದೆ ಆದ್ದರಿಂದ ಅವರಿಗೂ ಸಮಸ್ಯೆ ಇಲ್ಲ.
ಬಾಕಿ ಇದ್ದವರು ಸ್ವಲ್ಪ ಜಾಗ್ರತರಾಗಿ ಇದ್ದರೆ ಆಯಿತು.

ಸವಿಗನಸು said...

ಪ್ರಕಾಶಣ್ಣ,
ಶಾರಿಯ ಚುರುಕು ಮಾತು ಸಖ್ಖತಾಗಿತ್ತು...ಗ್ರಾಮೀಣ ಪ್ರದೇಶದವರ ಮಾತೆ ಹಾಗೆ ಕೇಳಲು ಬಲು ಚೆಂದ...ಗಣಪ್ತಿ ಭಾವನ ಕವಳ ತಂಬಾಕು ಚೆನ್ನಾಗಿತ್ತು...ಶಾರಿಯ ಮಾವನವರ ಬೀಡಿಗಾಗಿ ಮಾಸ್ಕ್ ತೂತು ಮಾಡೋದು.......ಎಲ್ಲಾ ಸೊಗಸಾಗಿ ನೇರಾ ಮಾತುಕಥೆ ತರಹ ಇತ್ತು.....
ಆಶಾ ಹೇಳಿದ್ರು TV9 ಕಾರ್ಯಕ್ರಮದ ಬಗ್ಗೆ...ಆದರೂ ನೋಡಲಾಗಲಿಲ್ಲ. ವೀಡಿಯೋವನ್ನು ಅಪ್ ಲೋಡ್ ಮಾಡಿ.
ಗೌರಿ ಗಣೇಶ ಹಬ್ಬದ ಶುಭಾಶಯಗಳು....
ಪುಸ್ತಕ ಬೇಗ ಹೊರ ಬರಲಿ ಅಂತ ಹಾರೈಸುತ್ತೇವೆ.....

Prabhuraj Moogi said...

ಶಾರಿಗೆ ಹೇಳ್ತಾ ಎಲ್ರಿಗೂ ಜ್ವರದ ಮಾಹಿತಿ ಕೊಟ್ಟಿದೀರಾ ಬಿಡಿ... "ಕರ್ಚೀಫ್ ಒಂದು ಸಣ್ಣ ತೂತು" ಮಾಡೊ ಐಡಿಯಾ ಓದಿ ನಗು ಬಂತು, ಬಹಳ ಇಶ್ಟ ಆಯ್ತು.
ವಿಜಯ ಕರ್ನಾಟಕದ ಮೀಡಿಯ ಮಿರ್ಚಿನಲ್ಲಿ, ನಿಮ್ಮ ಬಗ್ಗೆ ಬಂದಿತ್ತು, ಸರ್ ಬ್ಲಾಗ ಲೋಕದ ಸಜ್ಜನ ಅಂತ ಬರೆದದ್ದರಲ್ಲಿ ಅತಿಶಯೋಕ್ತಿ ಏನಿಲ್ಲ, ಪುಸ್ತಕ ಬೇರೆ ಪಬ್ಲಿಶ್ ಆಗ್ತಿದೆ.. ಅಲ್ ದಿ ಬೆಸ್ಟ್...

sunaath said...

ಪ್ರಕಾಶ,
ನಿಮ್ಮಿಂದ ಮತ್ತೊಂದು ವಿನೋದಪೂರ್ಣ ಲೇಖನ.ಸಾಲುಸಾಲಿಗೂ ನಗುತ್ತಲೇ ಓದಿದೆ. ಹಾಂ, ಆದರೆ ಕೆಲವೊಂದು ideaಗಳು ಸಖತ್ತಾಗಿ realistic ಆಗಿವೆ.(ಮುಖ ತೊಳೆದುಕೊಂಡೇ ಮುತ್ತು ಕೊಡುವ idea!)

ಜಲನಯನ said...

ಪ್ರಕಾಶ್, ಹಾಸ್ಯದ ಲೇಪನ ವಿಷಯ ಪ್ರಸ್ತಾವನೆ ನಿಮ್ಮ ಪೋಸ್ಟ್ ಗಳಲ್ಲಿ ಎಥಾವತ್ತಾಗಿ ಮೂಡುತ್ತವೆ, ಇದಕ್ಕೆ ಎರಡು ಮಾತಿಲ್ಲ. ಹಾಸ್ಯಕ್ಕಾಗಿ ತೂತು ಕೊರೆಯುವ ವಿಷಯ ಹೇಳಿದಿರಿ ಅಲ್ಲಿ ನೀವು ಸ್ವಲ್ಪ ಎಡಿಟ್ ಮಾಡಿದ್ರೆ ಚೆನ್ನು,...ಉಂ...ತಮಾಷೇಗೆ ಹೇಳ್ದೆ ಮಾರಾಯ್ತಿ ಹಂಗೆಲ್ಲಾದರೂ ತೋತು ಕೊರ್ದು ಕೊಟ್ಟೀಯಾ..ಇಲ್ಲಿ ಮಾಸ್ಕನ್ನು ಚನ್ನಾಗಿ ಪರಿಶೀಲಿಸಿ ಎಲ್ಲೂ ಸೋರುವುದಿಲ್ಲವೇ ಎಂದು ಖಾತ್ರಿ ಮಾಡಿ ಬಳಸಿ ಎಂತಲೂ, ಒಮ್ಮೆ ಉಪಯೋಗಿಸಿದ ಮಾಸ್ಕನ್ನು ಮತ್ತೆ ಬಳಸಬಾರದೆಂದೂ, ಮಾಸ್ಕ್ ಬಲಕೆಯ ನಂತರ ಮುಖ ಕೈ ಚನ್ನಾಗಿ ಸಬೂನು ಹಚ್ಚಿ ತೊಳೆಯಬೇಕೆಂದೂ ಹೇಳ್ತಾ ಇದಾರೆ....ಇತ್ಯಾದಿ....
ಸೈದ್ಧಾಂತಿಕವಾಗಿ ಹಂದಿ ಜ್ವರ ಮಾನವನಿಗೆ ಬರಬಾರದಿತ್ತು, ನನ್ನ ಬ್ಲಾಗ್ ನಲ್ಲಿ ತಿಳಿಸಿರುವಂತೆ ಇದು ಹಂದಿ ಜ್ವರದ ವೈರಸ್ಸಿನಲ್ಲಾದ ಮಾರ್ಪಾಡಿನಿಂದ ಸಾಧ್ಯವಾಯ್ತು. ಬಹುಶಃ ೧೯೧೮ ರಲ್ಲಿ ಹಂದಿ ಮತ್ತು ಮಾನವನಲ್ಲಿ ಒಟ್ಟಿಗೇ ಫ್ಲೂ ಜ್ವರ ಬಂದ ಪರಿಣಾಮ ಇರಬೇಕು, ಆಗ ವೈರಸ್ ವಿನಿಮಯ ಅಥ್ವಾ ಮಾರ್ಪಾಡುಗೊಂಡ ವೈರಸ್ ಮಾನವನಲ್ಲಿ ಸೋಂಕನ್ನುಂಟುಮಾಡುವಂತಾಯಿತು. ಇದೇ ಕಾರಣಕ್ಕೆ ಬಹುಶಃ ಹಕ್ಕಿ ಜ್ವರದ ವೈರಸ್ ಮಾನವನಿಗೆ ಬಂದಿರಬೇಕು,
ನಿಮ್ಮ ಸಾಮಾನ್ಯರನ್ನು ಎಚ್ಚರಿಸುವ ಧಾಟಿ ಇಷ್ಟವಾಯಿತು.

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ದೇಸಾಯಿಯವರೆ....

ಶಾರಿ ಇತ್ತೀಚೆಗೆ ಬಹಳ "ಶಾಣ್ಯಾ" ಆಗಲಿಕ್ಕೆ ಹೊರಟಿದ್ದಾಳೆ...

ಟಿವಿ ನೈನ್‍ರವರ ಕಾರ್ಯಕ್ರಮ ದಿಢೀರ್ ಅಂತ ಆಗಿದ್ದು...
ಅದರಲ್ಲಿ "ನಮ್ಮೂರ ಹೊಟೆಲ್" ಮಾಲಿಕರು..
ಗಣೇಶ ಹಬ್ಬದ ಕಾರ್ಯಕ್ರಮದ ಪ್ರಯುಕ್ತ ಕಜ್ಜಾಯ ಮಾಡುವದನ್ನು ಹೇಳಿಕೊಟ್ಟರು...
ಕೊನೆಯಲ್ಲಿ ಒಂದು ಐದು ನಿಮಿಷ
ಗಣೇಶನಿಗೆ ಪೂಜೆ ಮಾಡುವ ಸಮಯದಲ್ಲಿ...
ನಮ್ಮನ್ನು, ನನ್ನ ಗೆಳೆಯ ಸತ್ಯ ದಂಪತಿಗಳನ್ನು ತೋರಿಸಿದರು...
ಅದರಲ್ಲಿ ವಿಶೇಷವೇನೂ ಇಲ್ಲ...

ನನಗೆ ವಿಶೇಷ ಅನಿಸಿದ್ದು ನಮ್ಮೂರ ಹೊಟೆಲ್ ಮಾಲಿಕರು...
ಅವರ ಹೊಟೆಲ್‍ನಲ್ಲಿ ಸಂಭಾರ್, ತಿಳಿಸಾರು ಇತ್ಯಾದಿ ದ್ರವ ಪದಾರ್ಥಗಳು.. ಲೀಟರಿನಲ್ಲೂ..
ಪಲ್ಯ , ಪಲಾವ್ ಇತ್ಯಾದಿಗಳು ಕೇಜಿ ಲೆಕ್ಕದಲ್ಲೂ ಸಿಗುತ್ತವೆ...

ಇಂಥಹ ಐಡಿಯಾ ಅವರಿಗೆ ಹೊಳೆದದ್ದು ಹೇಗೆ...?

ಈಗ ಪರಿಚಯವಾಗಿದ್ದಾರೆ...
ಅದರ ಬಗೆಗೆ ಒಮ್ಮೆ ಬ್ಲಾಗಿನಲ್ಲಿ ಬರೆವೆ...

ಗಣೇಶ ಹಬ್ಬದ ಶುಭಾಶಯಗಳು...

jayalaxmi said...

ಅವರ ಮಕ್ಕಳಿಗೆ...ಅವರೇ... ಹೆಸರಿಟ್ಟಿದ್ದಾರೆ...! ವ್ಹಾ! ಪ್ರಕಾಶ್ ಅದ್ಭುತ ತಲೆಬರಹ. ನಿಮ್ಮ ಸ್ನೆಹಿತೆ ಶಾರಿ ಸೂಪರ್! ನಿಮ್ಮ ಮೂಲಕ ಆಕೆ ಪರಿಚಯವಾದುದು ಖುಷಿ ಕೊಡ್ತಿದೆ.

ವಿನುತ said...

ಶೀರ್ಷಿಕೆ ತು೦ಬಾ ಸೂಕ್ತವಾಗಿದೆ. ಆದರೆ ಮೈಕ್ರಾನು ಅಳತೆಯಲ್ಲಿರುವ ವೈರಸ್ಸುಗಳನ್ನು ಮುಖಕವಚ ಖ೦ಡಿತವಾಗಿಯೂ ತಡೆಯಲಾರದು. ಶುಚಿತ್ವ ಹಾಗೂ ಆರೋಗ್ಯಕರ ಆಹಾರ ಸಹಾಯ ಮಾಡಬಹುದು. ಮಾಧ್ಯಮಗಳು ಬಿ೦ಬಿಸುತ್ತಿರುವಷ್ಟು ಭೀಕರವಾಗಿಲ್ಲ ಪರಿಸ್ಥಿತಿ. ಜನರಲ್ಲಿ ಅನಗತ್ಯ ಗಾಬರಿ ಹುಟ್ಟಿಸುತ್ತಾದ್ದರಷ್ಟೆ, ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಿ. http://kendasampige.com/article.php?id=2772
ಪುಸ್ತಕ ಬಿಡುಗಡೆಗೆ ಶುಭಾಶಯಗಳು.

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್....

ಬನಶಂಕರಿಯಲ್ಲಿ ತರಕಾರಿ ಮಾರಿ ಜೀವಿಸುವ ದಂಪತಿಗಳ ಪರಿಚಯವಿದೆ...
ನಾವು ಅವರಿಗೆ ಹಂದಿಜ್ವರದ ತಿಳುವಳಿಕೆ ಹೇಳಿದೆವು...
"ಈ ರೋಗವೆಲ್ಲ ಬಡವರನ್ನ ಸಾಯಿಸಲಿಕ್ಕೆ ಬರ್ತದೆ ಸಾರ್..
ನಿಮಿಷಕ್ಕೊಮ್ಮೆ ಕೈ ತೊಳೆಯುತ್ತ ನಾವು ತರಕಾರಿ ಮಾರಲಿಕ್ಕೆ ಸಾಧ್ಯನಾ...?
ಮಣ್ಣು ಕೆಲಸ ಮಡುವವನು, ಕಾಂಕ್ರೀಟು ಹಾಕುವವನಿಗೆ..
ಮೂಗಿಗೆ ಬಟ್ಟೆ ಕಟ್ಟಿ ಕೆಲಸ ಮಾಡಿ ಅಂದ್ರೆ ಹೇಗೆ ಕೆಲಸ ಮಾಡ್ಲಿಕ್ಕೆ ಸಾಧ್ಯಾ..?"

ಅವಳ ಪ್ರಶ್ನೆಗಳಿಗೆ ಉತ್ತರ ಇರ್ಲಿಲ್ಲ...

ಆ ರೋಗ ಎದುರಿಸಲು ನಮ್ಮ ತಯಾರಿ ಏನೇನೂ ಸಾಲದು...

ಹೇಮಾರವರಿಗೂ, ನಿಮಗೂ...
ಧನ್ಯವಾದಗಳು...

Dr. B.R. Satynarayana said...

ಸೊಗಸಾದ ಲೇಖನ ಓದಿಸಿ ಕೊನೆಯಲ್ಲಿ ಸಸ್ಪೆನ್ಸ್ ಇಟ್ಟಿದ್ದಿದ್ದೀರಾ? ಅದೇನೆಂದು ನಮ್ಮ ಕಿವಿಯಲ್ಲಾದರೂ ಉಸುರಬಾರದೇ? ಅಧಮ ಹಾಗೆ ಪುಸ್ತಕದ ಹೆಸರೇನು? ಅದನ್ನು ಹೇಳದೆ ಕನ್ನಡ ಸಿನಿಮಾ ನಿರ್ಮಾಪಕರ ರೀತಿಯಲ್ಲಿ ಸಸ್ಪೆನ್ಸ್ ಕಾಯ್ದುಕೊಳ್ಳುವುದನ್ನು ನೋಡಿದರೆ ಭರ್ಜರಿಯಾಗೇ ಇರಬೇಕು. ಒಮ್ಮೆ ಮೇಲ್ ಮಾಡಿ ನಮ್ಮ ಕುತೂಹಲ ತಣಿಸಿಬಿಡಿ

shridhar said...

ಪ್ರಕಾಶಣ್ಣ,
ಮುಗ್ದ ಮನಸ್ಸಿಗೆ ಮುನ್ನೂರು ಪ್ರಶ್ನೆಗಳು ಎಂಬಂತೆ ನಿಮ್ಮ ಶಾರಿಯ ಮಾತುಗಳು .. ಅವು ಬರಿ ಲೋಖಾರೂಡಿ ಮಾತುಗಳಲ್ಲ ಕಟು ಸತ್ಯದ ಮಿಲನವು ಸಹ .. ಎಂದಿನಂತೆ ಸುಂದರ , ಚಿಂತನಶೀಲ ಬರಹ .. ನಿಮ್ಮ ಪುಸ್ತಕ ತಯಾರಿಗೆ ಅಭಿನಂದನೆಗಳು ,
ಕರೆಯೋಲೆಯ ನೀರಿಕ್ಷೆಯಲ್ಲಿ :) .....

ಶ್ರೀಧರ್ ಭಟ್

ಸಿಮೆಂಟು ಮರಳಿನ ಮಧ್ಯೆ said...

ಮನಸು....

ಮುಗ್ಧತನ ಇರುವವರು...
ಎಷ್ಟೇ ಓದಿದರೂ.. ವಯಸ್ಸಾದರೂ....
ಅದನ್ನು ಕಳೆದು ಕೊಳ್ಳುವದಿಲ್ಲ.....

ನಮ್ಮ ಶಾರಿಯೂ ಹಾಗೇನೆ....

ಗಣೇಶ ಹಬ್ಬದ ಶುಭಾಶಯಗಳು....

Thank you....

ಸಿಮೆಂಟು ಮರಳಿನ ಮಧ್ಯೆ said...

ಮೂರ್ತಿ ಹೊಸಬಾಳೆಯವರೆ....

ನಿಮ್ಮ ತರ್ಕ ಮತ್ತು ನಮ್ಮ ಶಾರಿಯ ಮತು ಸೇರಿದರೆ ಬಲು ಸೊಗಸು....
ನಿಮ್ಮ ಫೋನ್ ನಂಬರನ್ನು ಶಾರಿ ಮತ್ತು ಗಣಪ್ತಿ ಬಾವನಿಗೆ ಕೊಡುವೆ...

ಬೀಡಿ ಸೇದಿ ಕೆಮ್ಮಿದರೆ ಒಳಗಿದ್ದ ಬ್ಯಾಕ್ಟೀರಿಯಾಗಳು ಹೊರಗೆ ಹೋಗುತ್ತವೆ...

ಹ್ಹಾ...ಹ್ಹಾ...!!

ಅದ್ಭುತ.... ಶಾರಿಗೆ ವಿಷಯ ತಿಳಿಸುವೆ....

ನನ್ನ ಲೇಖನಕ್ಕಿಂತ ನಿಮ್ಮ ಪ್ರತಿಕ್ರಿಯೆ ಚೆನ್ನಾಗಿದೆ....

ಧನ್ಯವಾದಗಳು....

ಚಿತ್ರಾ said...

ಪ್ರಕಾಶಣ್ಣ,

ಸಧ್ಯ ! ನಿಮ್ಮ ವೈರಸ್ ಬಿಟ್ಟು ಹೋಯ್ತು ತಾನೇ?
ಸುಮಾರು ದಿನದ ಮೇಲೆ , ಇಟ್ಟಿಗೆ ಸಿಮೆಂಟ್ ನಲ್ಲಿ ನಿಮ್ಮ ಮಾಮೂಲು ಶೈಲಿಯ ಬರಹ ಓದಿ ಖುಷಿಯಾಯಿತು.
ನಿಮ್ಮ ಐಡಿಯಾಗಳು ಅಪ್ಪಿ ತಪ್ಪಿ ಈ ಮಾಸ್ಕ್ ತಯಾರಿಕರಿಗೆ ಸಿಕ್ಕಿ ಬಿಟ್ರೆ, ನಮಗೇ ಇನ್ನೂ ವಿಧ ವಿಧವಾದ ಮಾಸ್ಕ್ ಗಳು ಕಾಣ ಸಿಗಬಹುದು . Smoker's mask , chewer's mask ಇತ್ಯಾದಿ !
ಇನ್ನು ಬದನೇಕಾಯಿ ಸ್ವರ , ಬಸಳೆ ಸೊಪ್ಪಿನ ಜ್ವರ ಗಳ ಬಗ್ಗೆಯಂತೂ ನೀವು ಮಾತ್ರ ಯೋಚಿಸಲು ಸಾಧ್ಯ !! ಹಾ ಹಾ ಹಾ !
ಅಂದಹಾಗೆ, ಈ ಬದನೆ ಕಾಯಿ ಜ್ವರ ನಮ್ಮನೇಲಿ ಇದೆ. ಮನೆಯೊಳಗೆ ಬದನೇಕಾಯಿ ಕಂಡ ಕೂಡಲೇ ನನ್ನ ಮಗಳ temperature ಹೆಚ್ಚಾಗಿ ಬಿಡುತ್ತದೆ !
ಒಟ್ಟಿನಲ್ಲಿ ಎಂದಿನಂತೆ ನಗಿಸಿದ್ದಕ್ಕೆ ಧನ್ಯವಾದಗಳು !

Shweta Bhat said...

ನಿಮ್ಮ ಬ್ಲಾಗನ್ನೇ ಓದುತ್ತಿದ್ದೆ. ಅಸ್ಟರಲ್ಲಿ ನಿಮ್ಮದೊಂದು ಕಾಮೆಂಟು ನನ್ನ ಬ್ಲಾಗಿನಲ್ಲಿ.
ಬಸಳೆ ಸೊಪ್ಪಿನ ಜ್ವರ,..!!
ಬದನೆಕಾಯಿ ಜ್ವರ...!! ಅನ್ನೋ ಬಹುದಿತ್ತು...
ಓದಿದಾಗ.. ಹೀಗೆ ಒಬ್ಬ ಬರಹಗಾರರು ತಮ್ಮ ಮಕ್ಕಳಿಗೆ ಹೂವು ,ಹಣ್ಣು ಎಂದು ನಾಮಕರಣ ಮಾಡಿದ್ದುದರ ನೆನಪಾಯಿತು .ಪರಿಚಯದ ಒಬ್ಬರ ಮನೆಯಲ್ಲಿ ,ಮಕ್ಕಳಿಗೆ ತರಕಾರಿ , ಹಣ್ಣುಗಳ ಹೆಸರಿನಿಂದ ಗದರಿಸುತ್ತಿದುದು ನೆನಪಿಗೆ ಬಂತು.

ಪುಸ್ತಕ ಯಾವಾಗ ಬರುತ್ತೆ ? ಏನು ಹೆಸರು ಇಟ್ಟಿದ್ದೀರಾ? ಯಾರಿಗೆ ಬಹುಮಾನ ಬಂದಿದೆ?
ಉತ್ತರಗಳ ನೀರಿಕ್ಷೆಯಲ್ಲಿ
ಫೇಸ್ ಬುಕ್ ನಲ್ಲಿ ನೀವು ಇದ್ದೀರ ಅಲ್ಲವಾ? ನಿಮ್ಮ ಫ್ರೆಂಡ್ ರಿಕ್ವೆಸ್ಟ್ ನೋಡಿದೆ...

sitaram said...

ತುಂಬಾ ಚೆನ್ನಾಗಿದೆ ತಮ್ಮ ಬರವಣಿಗೆ ಶೈಲಿ. ಶಾರಿ ಪಾತ್ರ ಅದ್ಭುತವಾಗಿದೆ.

ರಾಜೀವ said...

<< ಒಳ್ಳೆ ವೋಟ್ ಕೇಳಲಿಕ್ಕೆ ಬಂದ ರಾಜಕಾರಣಿ ತರಹ ಅದನ್ನೇ ಉರು ಹೊಡೆದು ಹೇಳ್ತಾ ಇದ್ದೀಯ...! >>
ನಿಮ್ಮ ಶಾರಿಯ ಮಾತು ಸೆರಿ ಕಣ್ರೀ. ಈ ಓದು ಬರಹ ನಮ್ಮನ್ನು ಹೆಚ್ಚು ದಡ್ಡರನ್ನಾಗಿ ಮಾಡ್ತಿದೆ ಅನ್ಸತ್ತೆ. ಬರೀ ಉರು ಹೊಡೆದು ಎಗ್ಜಾಮ್ನಲ್ಲಿ ಪಾಸ್ ಆಗ್ಬಿಟ್ರೆ ಸಾಕೆ?

ಗಣೇಶ ಹಬ್ಬದ ಶುಭಾಶಯಗಳು.

ಸಿಮೆಂಟು ಮರಳಿನ ಮಧ್ಯೆ said...

ಮಹೇಶ್.... (ಸವಿಗನಸು)

ಹಳ್ಳಿಯ ಜನರ ಆತ್ಮೀಯತೆ, ಕಪಟತನವಿಲ್ಲದ ಮಾತುಗಳು ನನಗಂತೂ ಬಹಳ ಇಷ್ಟ....
ಶಾರಿಯ ಮನೆಗೆ ಹೋದಾಗ ಇನ್ನೊಂದು ಹೃದಯ ಸ್ಪರ್ಷಿ ಘಟನೆ ಹಂಚಿಕೊಳ್ಳುವದಿದೆ....

ಪುಸ್ತಕದ ಬಿಡುಗಡೆಯ ದಿನಾಂಕ ಇಷ್ಟರಲ್ಲೇ ಪ್ರಕಟಿಸುವೆ.....

ಪ್ರತಿಕ್ರಿಯೆಗೆ ಧನ್ಯವಾದಗಳು...

ತೇಜಸ್ವಿನಿ ಹೆಗಡೆ- said...

ಪ್ರಕಾಶಣ್ಣ,

ಎಂದಿನ ಹಾಸ್ಯಶೈಲಿಯ ಲೇಖನ. ಚೊಲೋ ಬಂಜು. ಅಂದಹಾಗೆ ಪುಸ್ತಕದ ಹೆಸರೇನು? ಯಾವತ್ತು ಬಿಡುಗಡೆ? ಅಭಿನಂದನೆಗಳು.

ಬಾಲು said...

ಐಡಿಯ ಗಳು ಚೆನ್ನಾಗಿವೆ!! ಕರ್ಚಿಫ್ ನಲ್ಲಿ ತೂತು :)

ಎಲ್ಲಾ ಕಡೆ ಬರಿ ಮಾ೦ಸಾಹಾರಿ ಜ್ವರಗಳ ಬಗ್ಗೆನೆ ಸುದ್ದಿ. ನಮ್ಮ ಮಲೆನಾಡಿನಲ್ಲಿ ಮ೦ಗನ ಖಾಯಿಲೆ ಅ೦ತ ಬರುತ್ತದೆ. ಅದು ಕೂಡ ಬೆರೆ ಪ್ರಾಣಿ ಹೆಸರು!!!

"ಅವರ ಮಕ್ಕಳಿಗೆ... ಅವರೇ... ಹೆಸರಿಟ್ಟಿದ್ದಾರೆ...!" ನಿಮ್ಮ ಲೇಖನದ ಶೀರ್ಶಿಕೆ ಸರಿ. ನಿಮ್ಮ ಪುಸ್ತಕಕ್ಕು ನೀವೆ ಹೆಸರಿಟ್ಟಿದ್ದಿರಿ ಅ೦ತ ಕಾಣುತ್ತೆ. ಪುಸ್ತಕ ಬೇಗ ಹೊರ ಬರಲಿ.

ಸಿಮೆಂಟು ಮರಳಿನ ಮಧ್ಯೆ said...

ಪ್ರಭು....

ಬೀಡಿ ಚಟದವರು ಇನ್ನೇನು ಮಾಡ ಬಹುದು...?
ಹಾಗೆ ತೂತು ಮಾಡ ಬಾರದಂತೆ... ನಮ್ಮ ಆಝಾದ್ ಸರ್ ಹೇಳಿದ್ದಾರೆ..
ಅದು ತಮಾಶೆಗೆ ಹೇಳಿದ್ದು...
ವಿನೂತಾ ರವರು ಹೇಳಿದ ಹಾಗೆ ಕರ್ಚೀಫ್ ಕೂಡ ಅವಕ್ಕೆ ಸಾಲದಂತೆ...
ನಮಗೆಲ್ಲ ದೇವರೇ ಗತಿ....

ಅನಾಮಧೇಯ ಹೆಸರಿನಿಂದ ನನ್ನ ಬ್ಲಾಗಿಗೆ ಪ್ರತಿಕ್ರಿಯೆ ಬರಲಿಲ್ಲ...
ಅನಾಮಧೇಯರು ನನ್ನ ಬಗ್ಗೆ ಕರುಣೆ ತೋರಿದ್ದಾರೆ...

ಮೋಹನ್ ಸರ್ ನಮ್ಮಂಥವರಿಗೆ ಬಹಳ ಪ್ರೋತ್ಸಾಹ ಮಡುತ್ತಿದ್ದಾರೆ...
ಅವರಿಗೆ ಹಲವಾರು ಕನಸುಗಳಿವೆ...
ಬ್ಲಾಗಿಗರ ಕೂಟ , ಸಭೆ ನಡೆಸ ಬೇಕೆಂದು...

ನಾವೆಲ್ಲ ಅವರಿಗೆ ಸಪೋರ್ಟ್ ಮಾಡೋಣ....

ಪ್ರಭು,
ನನ್ನ ಅನಾರೋಗ್ಯದ ನಿಮಿತ್ತ ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ...
ಇನ್ನು ಬರುವೆ.... ಧನ್ಯವಾದಗಳು...

PARAANJAPE K.N. said...

ಪ್ರಕಾಶರೇ
ಹಾಸ್ಯದ ತುಣುಕಿನೊ೦ದಿಗೆ ಗ೦ಭೀರ ವಿಷಯವನ್ನು ಬೆರೆಸಿ,ಪ್ರಸ್ತುತ ನಮ್ಮೆದುರಿಗಿರುವ ಹಂದಿಜ್ವರದ ಬಗ್ಗೆ ಪ್ರಸ್ತಾಪಿಸಿದ್ದಿರಿ. ಬರಹದ ಲಹರಿ ಚೆನ್ನಾಗಿದೆ. ಅ೦ದ ಹಾಗೆ, ಅಮೃತಾರಿಷ್ಟ ಕುಡಿದರೆ resistance power ಜಾಸ್ತಿ ಆಗುತ್ತೆ, ಹಂದಿಜ್ವರನು ಬರೋಲ್ಲ, ಏನು ಬರೋಲ್ಲ.

Umesh Balikai said...

ಹ್ಹ ಹ್ಹ ಹ್ಹಾ.. ಬೆಳಿಗ್ಗೆ ಬೆಳಿಗ್ಗೆ ಓದಿದ ನಿಮ್ಮ ಲೇಖನ.. ಹೊಟ್ಟೆ ಹುಣ್ಣಾಗಿಸುವಷ್ಟು ನಗೀಸ್ತು. ಬಸಲೆ ಸೊಪ್ಪಿನ ಜ್ವರ, ಬದನೇಕಾಯಿ ಜ್ವರ .. ಹ್ಹೆ ಹ್ಹೆ ಹ್ಹೇ.. ಸಖತ್ತಾಗಿದೆ. ಎಲೆ ಅಡಿಕೆ ಅಗಿಯೋ ಮಶಿನ್ನು.. ಹೋ... :) :)

ನಿಮ್ಮ ಪುಸ್ತಕ ತಯಾರೀ ಆದಷ್ಟು ಬೇಗ ಸುಸೂತ್ರವಾಗಿ ಮುಗಿದು ನಮ್ಮ ಕೈ ಸೇರುವಂತಾಗಲಿ. ಶುಭಸ್ತ್ಯ ಶೀಘ್ರಮಸ್ತು!!

ಏನ್ ಸಾರ್ ಇನ್ನೊಂದು ಖುಷಿಯ ವಿಚಾರ? ಇನ್ನೊಂದು ಮರಿ ಪ್ರಕಾಶ / ಪ್ರಕಾಶಿನಿ ಏನಾದ್ರೂ ಬರ್ತಾ ಇದೆಯಾ :)

- ಉಮೇಶ್

ರೂಪಾ said...

ಪ್ರಕಾಶ ಸಾರ್
ಚೆನ್ನಾಗಿದೆ
ಶಾರಿಯ ಮಾತು ಅವನ್ನು ನೀವು ನಿರೂಪಿಸಿರುವ ರೀತಿ ಅಬ್ಬಾ ತುಂಬಾ ಚೆನ್ನಾಗಿದೆ.
ನನ್ನ ಪ್ರಕಾರ ಎಲ್ಲಾ ರೋಗಗಳಿಗೂ ಮಾನವನ ಪ್ರಕೃತಿಯಲ್ಲಿನ ಅತಿಕ್ರಮಣ ಬುದ್ದಿಯೇ ಕಾರಣ ಅಂತ ಅನ್ನಿಸುತ್ತದೆ

Kishan said...

very educative writing and a timely post. Nicely put! Probably in every village there is a need to educate people with "Do's" and "Don't"s related to these flavours of fevers we have. Thanks for this effort.

Divya Hegde said...

ಪ್ರಕಾಶಣ್ಣ ತುಂಬಾ ಚೆನ್ನಾಗಿ ಬರೆದಿದ್ದೀರ ...
ನಿಮ್ಮ ಪುಸ್ತಕ ಆದಷ್ಟು ಬೇಗ ಬರಲಿ ಎಂದು ಹಾರೈಸುತ್ತೇನೆ ..
ಧನ್ಯವಾದಗಳು ....
ದಿವ್ಯ

Ranjita said...

ಇನ್ನು ಬಸಳೆ ಸೊಪ್ಪು ತಿನ್ನೋವಾಗೆಲ್ಲ ಪ್ರಕಾಶಣ್ಣ ಮತ್ತು ಅವರ ಶಾರಿ ನೆನಪಾಗಿ ನಗು ಬರತ್ತೇನೋ.. ಈ ಲೇಖನ ತುಂಬಾ ಇಷ್ಟ ಆತು ಪ್ರಕಾಶಣ್ಣ .. ಆವತ್ತು comment ಮಾಡೋದಿಕ್ಕೆ ಆಗಿತ್ತಿಲ್ಲೆ ಅದಿಕ್ಕೆ ಈಗ ಕೂತು ಮಾಡ್ತಾ ಇದೀನಿ .. ನಿಮ್ಮ ಖುಷಿಯ ವಿಚಾರ ತಿಳಿಯೋದಿಕ್ಕೆ ಕಾಯ್ತಾ ಇದಿವಿ..ಬೇಗ ತಿಳಿಸಿ :)

ಕ್ಷಣ... ಚಿಂತನೆ... Think a while said...

ಸರ್‍, ಲೇಖನ ನಗಿಸುವುದರ ಜೊತೆಗೆ ಹೌದಲ್ವಾ?? ಎಂಬ ಗಂಭೀರತೆಯೂ ಇಣುಕು, ಶಾರಿಯವರ ಮಾತಿನಲ್ಲಿದೆ ಎನಿಸುತ್ತದೆ.

PaLa said...

ಹಿ ಹಿ, ಸಕ್ಕತ್ತಾಗಿದೆ

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್...

ನಿಜ ವಾಸ್ತವತೆ ಭೀಕರವಾಗಿದೆ...
ಮುಖ ಕಟ್ಟಿಕೊಂಡು ಕೆಲಸ ಹೇಗೆ ಮಾಡಲಿಕ್ಕಾಗುತ್ತದೆ...?

ನಿನ್ನೆ ನನ್ನ ಮೇಸ್ತ್ರಿ ಮಗನಿಗೆ ಹಂದಿ ಜ್ವರ ಕನ್‍ಫರ್ಮ್ ಆಗಿದೆ....

ಅವನಿಗೂ ಸ್ವಲ್ಪ ದಿನಗಳ ಹಿಂದೆ ಜ್ವರ ಬಂದಿತ್ತು...
ಈಗ ಅವನ ಸಂಗಡಿಗರು (ಕೆಲಸಗಾರರು) ಕೆಮ್ಮು ಜ್ವರ ಅನುಭವಿಸುತ್ತಿದ್ದಾರೆ...

ಇಂದಿನ ದುಡಿತ ಇಂದಿನ ಊಟ ಅವರಿಗೆ...
ಕೆಲಸಕ್ಕೆ ಬರಬೇಡಿ ಅಂದರೆ ಕೇಳುವ ಸ್ಥಿತಿಯಲ್ಲಿ ಅವರಿಲ್ಲ...
ಬಾಯಿಗೆ ಕರ್ಚೀಫ್ ಕಟ್ಟಿಕೊಳ್ಳಲೂ ತಯಾರಿಲ್ಲ....

ಅವರಿಗೆ ಸಂಬಳದ ಸಂಗಡ ರಜೆ ಕೊಟ್ಟರೂ ತೆಗೆದು ಕೊಳ್ಳಲು ತಯಾರಿಲ್ಲ...!!

ಈಗ ತಾನೆ ಅವರಿಗೆಲ್ಲ ಬಯ್ದು, ಬುದ್ಧಿ ಹೇಳಿ ರಜಾ ಘೋಷಣೆ ಮಾಡಿ ಬಂದಿರುವೆ....

ಪ್ರತಿಕ್ರಿಯೆಗೆ ಧನ್ಯವಾದಗಳು....

ಗೋಪಾಲ್ ಮಾ ಕುಲಕರ್ಣಿ said...

ಗೌರಿ ಗಣೇಶ ಹಬ್ಬದ ಶುಭಾಶಯಗಳು.

Deepasmitha said...

ಲೇಖನ ಖುಶಿ ಕೂಟ್ಟಿತು

ಸಿಮೆಂಟು ಮರಳಿನ ಮಧ್ಯೆ said...

ಆಝಾದ್ ಸರ್....

ನಿಮ್ಮ ಸಲಹೆಯನ್ನು ಪುರಸ್ಕರಿಸಿದ್ದೇನೆ....
ಶಾರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದೇನೆ...

ಹೆಚ್ಚಾಗಿ ನನ್ನ ಬ್ಲಾಗ್ ಓದುವವರು ಪಟ್ಟಣದಲ್ಲಿರುವವರು...
ಹಾಗಾಗಿ ವ್ಯಂಗ್ಯ, ಹಾಸ್ಯಕ್ಕೆ ಒತ್ತು ಕೊಟ್ಟೀದ್ದೇನೆ...

ಪುಸ್ತಕದ ಕೆಲಸದಲ್ಲಿ...
ದೈನಂದಿನ ವ್ಯವಹಾರದ ಕೆಲಸದ ಒತ್ತಡದಲ್ಲಿರುವದರಿಂದ...
ನಿಮ್ಮ ಪ್ರತಿಕ್ರಿಯೆಗಳಿಗೆ ಸಕಾಲಿಕವಾಗಿ ಉತ್ತರಿಸಲು ಆಗುತ್ತಿಲ್ಲ...

ನಾಳೆಯಿಂದ ಪ್ರೀ ಆಗುವೆ...

ಆಝಾದ್ ಸರ್...
ನಿಮ್ಮ ಕಳಕಳಿಗೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಜಯಲಕ್ಷ್ಮೀಯವರೆ.....

ಈ ಅಮೇರಿಕಾದವರ ಉಪಟಳದ ಕುರಿತು ಇನ್ನಷ್ಟು ಬರೆಯಲಿದ್ದೇನೆ....
ಇಂದಿನ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಅವರೇ ಕಾರಣ...

ಈ ಕೆಟ್ಟ ರೋಗಗಳ ಜನ್ಮಸ್ಥಾನವೂ ಹೌದು...
ಅವರ ಮಕ್ಕಳಿಗೆ ಅವರೇ ಹೆಸರಿಟ್ಟಿದ್ದಾರೆ...

ಪ್ರತಿಕ್ರಿಯೆಗೆ ಧನ್ಯವಾದಗಳು....

venki said...

masthagidddu :)

ಸಿಮೆಂಟು ಮರಳಿನ ಮಧ್ಯೆ said...

ವಿನುತಾರವರೆ....

ನೀವು ಕೊಟ್ಟ ಮಾಹಿತಿ ನನಗೆ ಹೊಸದು...
ನೀವು ಕೊಟ್ಟ ಲಿಂಕ್ ತುಂಬಾ ಉಪಯುಕ್ತವಾಗಿದೆ...

ನಾವು ಉಸಿರಾಟ ಮಾಡುವ ವಾಯು ವೀಷವಾದರೆ ಬದುಕುವದೆಂತು...?

ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಾಅಯಣ ಸರ್....

ಖ್ಂಡಿತ ಹೇಳುವೆ..
ಕೆಲವೇ ದಿನ ಕಾಯಿರಿ...
ನಿಮ್ಮೆಲ್ಲ ಪ್ರ್‍ಓತ್ಸಾಹದಿಂದ ಈ ಪುಸ್ತಕ ಆಗುತ್ತಿದೆ....
ಬ್ಲಾಗ್ ಶುರು ಮಾಡಿ ಇನ್ನೂ ಒಂದು ವರ್ಷ ಆಗಲಿಲ್ಲ....

ತುಂಬಾ ಖುಷಿಯಾಗ್ತಾ ಇದೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಶ್ರೀಧರ್...

ನಿಮ್ಮ ಅಭಿಮಾನಕ್ಕೆ ವಂದನೆಗಳು...

ಶಾರಿಯ ಹತ್ತಿರ ಮಾತಾಡುವದೇ ಖುಷಿ....
ಪ್ರಶ್ನೆಗಳು ಮುಗ್ಧವಾಗಿದ್ದರೂ ಅವುಗಳು ಅಪ್ಪಟ ಸತ್ಯ... ಅಲ್ಲವಾ...?

ಪುಸ್ತಕ ಬಿಡುಗಡೆಯ ದಿನಾಂಕ ನಿಗದಿಯಾಗುತ್ತಲೇ ತಿಳಿಸುವೆ...

ಬರುವಿರಲ್ಲ...?

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ....

ಶಾರಿಯನ್ನು ಪುಸ್ತಕ ಬಿಡುಗಡೆಗೆ ಕರೆಸುವ ವಿಚಾರವಿದೆ...
ನಾನು ಬರೆದ ಎಲ್ಲ ಪಾತ್ರಗಳನ್ನು ಅಲ್ಲಿಗೆ ಬಂದರೆ ಹೇಗೆ?
ನಾಗು ಒಬ್ಬ ಬರುವದಂತೂ ಗ್ಯಾರೆಂಟಿ...
ಶಾರಿ, ಪೆಟ್ಟಿಗೆ ಗಪ್ಪತಿ, ರಾಜಿ(ಬರಲಿಕ್ಕಿಲ್ಲ), ...!!

ನೋಡೋಣ ಏನಾಗುತ್ತದೆ ಎಂದು...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಶ್ವೇತಾ....

ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ...
ನೀವು ಕನ್ನಡದಲ್ಲೇ ಬರೆಯಿರಿ ಚೆನ್ನಾಗಿರುತ್ತದೆ....

ಹಂದಿ, ಕೋಳಿ ಎಲ್ಲ ಹೆಸರು ಯಾಕೆ..?

ರೋಗವಂತೂ ಕೆಟ್ಟದಿರುತ್ತದೆ..
ಹೆಸರಾದರೂ ಒಳ್ಳೆಯದಿರಬಾರದೆ...?

ಪ್ರೋತ್ಸಾಹಕ್ಕಾಗಿ ವಂದನೆಗಳು....

ಸಿಮೆಂಟು ಮರಳಿನ ಮಧ್ಯೆ said...

ಸೀತಾರಾಮ್ ಸರ್....

ನಿಮ್ಮ ಬ್ಲಾಗಿಗೂ ಹೋಗಿ ಬಂದೆ...
ನೀವು ಏನನ್ನೂ ಬರಿಲೇ ಇಲ್ಲ... ಬರೆಯಿರಿ ಏನಾದರೂ....
ಓದಲು ನಾವಿದ್ದೇವೆ....

ನಿಮ್ಮ ಪ್ರತಿಕ್ರಿಯೆ ನನಗೊಂದು ಟಾನಿಕ್ಕು...
ಇನ್ನಷ್ಟು ಬರೆಯಲ್ಲು ಉತ್ಸಾಹ....

ಧನ್ಯವಾದಗಳು... ಬರುತ್ತಾ ಇರಿ....

ಸಿಮೆಂಟು ಮರಳಿನ ಮಧ್ಯೆ said...

ರಾಜೀವ್....

ಕಳೆದ ಬೇಸಿಗೆಯಲ್ಲಿ ಊರಿಗೆ ಹೋದಾಗ ಶಾರಿಯ ಸಂಗಡ ಒಂದು ಹ್ರ್‍ಅದಯ ಸ್ಪರ್ಷಿ ಘಟನೆಯಾಯಿತು...
ಇನ್ನೂ ಬರೆಯಲಾಗಲ್ಲಿಲ್ಲ...

ಇನ್ನೊಮ್ಮೆ ಬರೆಯುವೆ...

ಶಾರಿಯ ಮಾತುಗಳೇ ಹಾಗೆ...
ಚುಚುವಂತಿದ್ದರೂ... ಮುಗ್ಧವಾಗಿರುತ್ತದೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು

ಸಿಮೆಂಟು ಮರಳಿನ ಮಧ್ಯೆ said...

ತೇಜಸ್ವಿನಿಯವರೆ....

ನಿಮ್ಮ ಹೊಸ ಲೇಖನಕ್ಕೆ ನನ್ನ ಅಭಿನಂದನೆಗಳು...
ತುಂಬಾ ಚೆನ್ನಾಗಿದೆ...

ಪುಸ್ತಕದ ಬಿಡುಗಡೆಯ ದಿನಾಂಕ ಗೊತ್ತಾದ ಕೂಡಲೇ ತಿಳಿಸುವೆ...

ಶಾರಿಯ ಮಾತುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಬಾಲು ಸರ್....

ಮಂಗನ ಕಾಯಿಲೆಗೆ ನಮ್ಮ ದೇಶ ಮೂಲ ಇರ್ಲಿಕ್ಕಿಲ್ಲ...
ನಮ್ಮ ನಡೆನುಡಿಯಲ್ಲಿ ಧಾರ್ಮಿಕತೆ ಎಷ್ಟು ಹಾಸುಹೊಕ್ಕಾಗಿದೆಯೆಂದರೆ...
ರೋಗಗಳಿಗೆ ಯಾವುದಾದರೂ
"ಮಾರಿಯಮ್ಮ" ರಾಕ್ಷಸರ" ಹೆಸರಿಡುತ್ತೇವೆ...!

ಪುಸ್ತಕಕ್ಕೆ ಹೆಸರು ಕೊಟ್ಟವರು ಗೆಳೆಯ "ಮಲ್ಲಿಕಾರ್ಜುನ್"

ಪ್ರೋತ್ಸಾಹಕ್ಕಾಗಿ ವಂದನೆಗಳು....

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ....

ಅಮೃತ ಬಳ್ಳಿ ದೇಹಕ್ಕೆ ಉಷ್ಣವಂತೆ...
ದಿನಾಲೂ ಸೇವಿಸುವಂತಿಲ್ಲ...

ಶಾರಿಯ ಮಾತುಕಥೆ ಇನ್ನೂ ಮುಗಿದಿಲ್ಲ...

ಶಾರಿ ಮತ್ತು ನಾಗು ಜಗಳವೊಂದು ಇತ್ತೀಚೆಗೆ ಆಯಿತು..
ಫೋನಿನಲ್ಲಿ ಸುಮಾರು ಅರ್ಧ ತಾಸು ಕಿತ್ತಾಡಿಕೊಂಡರು...
ಬ್ಲಾಗಿನಲ್ಲಿ ಬರೆಯತಕ್ಕಂಥಹ ವಿಷಯ...

ಮುಂದೊಮ್ಮೆ ಬರೆಯುವೆ...

ಪ್ರೋತ್ಸಾಹಕ್ಕಗಿ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್ ರವರೆ....

ರೋಗವಂತೂ ಕೆಟ್ಟದಿರುತ್ತದೆ...
ಹೆಸರಾದರೂ ಸುಂದರವಾಗಿರಲಿ...
ಮಕ್ಕಳು ಎಷ್ಟೇ ಕೆಟ್ಟರಾದರೂ.. ಒಳ್ಳೆಯ ಹೆಸರಿಡಬೇಕಲ್ಲವೆ...?

ಅಂಥ್ರ್ಯಾಕ್ಸ್..!!
ಈ ರೋಗದ ಹೆಸರು ನಮ್ಮ ಶಾರಿಗೆ ಹೇಳಲಿಕ್ಕೆ ಬರಲಿಲ್ಲ...!

"ಯಾವುದಾದರೂ ಸರಳ ಹೆಸರು ಇಡ್ರಪಾ" ಅಂತ ಗೋಗರೆದಿದ್ದಾಳೆ...!

ಪ್ರತಿಕ್ರಿಯೆಗೆ ಧನ್ಯವಾದಗಳು...

ಪ್ರೀತಿಯಿ೦ದ ವೀಣಾ :) said...

congrats sir....
Pusthaka bidugade vishya namagu thilisi... odonanthe :)
All the best :)