Friday, July 31, 2009

ಗಂಜಿಯಲ್ಲಿ.. ಬಿದ್ದ ..ನೊಣದ ...ಹಾಗೆ..!!

ನಲ್ಮೆಯ... ಓದುಗ ಸಹೋದರ ಸಹೋದರಿಯರಿಗೆ...

" ರಕ್ಷಾ ಬಂಧನದ " ಶುಭಾಶಯಗಳು...

ನಿಮ್ಮೆಲ್ಲ... ಆಸೆ ..
ಕನಸುಗಳು...
ನನಸಾಗಲಿ....
ಪ್ರೀತಿಯಿಂದ....
ಪ್ರಕಾಶಣ್ಣ..)
.................................................................................................................



ಮಲ್ಲಿಕಾರ್ಜುನ್‍ರ ಹೊಸಕಾರು "ರಿಟ್ಜ್ " ನಾನು ಡ್ರೈವ್ ಮಾಡುತ್ತಿದ್ದೆ....


ನಾವು "ಆ" ಊರನ್ನು ತಲುಪಿಯಾಗಿತ್ತು...

ಎಲ್ಲಿಗೆ ಹೋಗಬೇಕಾಗಿತ್ತೊ ಅಲ್ಲಿನ ವಿಳಾಸ ಸರಿಯಾಗಿ ಗೊತ್ತಿರಲಿಲ್ಲ....

ಕಾರು ಪಕ್ಕಕ್ಕೆ ತೆಗೆದುಕೊಂಡು..
"ಇಲ್ಲಿ ವಿಶ್ವ ಜ್ಞಾನ ಶಾಲೆ ಎಲ್ಲಿ ಬರುತ್ತದೆ...?"
ಅಂತ ಒಬ್ಬನನ್ನು ಕೇಳಿದೆವು...

ತಲೆಗೂದಲನ್ನು ಎಣ್ಣೆಹಾಕಿ ಒಪ್ಪವಾಗಿ ಬಾಚಿ, ಹಣೆಗೊಂದು ಗಂಧದ ಬೊಟ್ಟು...
ಬಿಳೆಲುಂಗಿ...
ಜಗತ್ತಿನಲ್ಲಿರುವ ಎಲ್ಲ ಬಗೆಯ ಆತ್ಮ ಸಂತೃಪ್ತಿಯ ಮುಖ ...
ತಲೆಕೆರೆದು ಕೊಳ್ಳುತ್ತ...

"ಏನು ಸಾರ್... ವಿಶ್ವನಾಥ ದೇವಸ್ಥಾನವಾ...?"

ಮಲ್ಲಿಕಾರ್ಜುನ್ ತಮ್ಮ ಎರಡೂ ಕೈಯ್ಯನ್ನು ತಮ್ಮ ಬಾಯಿ ಬಳಿತಂದು..
ತಮ್ಮಲ್ಲಿದ್ದ ಬಲವನ್ನೆಲ್ಲ ಹಾಕಿ ಕೂಗಿ ಮತ್ತೆ ಕೇಳಿದರು..

" ಸಾರ್... ವಿಶ್ವ ಜ್ಞಾನ ಶಾಲೆ..."

ಮತ್ತೆ ತಲೆ ಕೆರೆದು ಕೊಂಡಿತು ಆವ್ಯಕ್ತಿ...
ಆಕಾಶ ನೋಡಿದ....

" ವಿಶಾಖ ಪಟ್ಟಣವಾ...?
ಈ ಹೆಸರು ಎಲ್ಲೋ ಕೇಳಿದಿನಿ... ಅದು ಇಲ್ಲಿ ಬರಲ್ಲ ಸಾರ್.."

ನಾಗು ಕಾರಿನಿಂದ ಇಳಿದು...
ಅವರ ಬಳಿ ಹೋಗಿ...ಜೋರಾಗಿ ಕೇಳಿದ...

"ಸಾರ್... ವಿಶ್ವ ಜ್ಞಾನ ಶಾಲೆ ಎಲ್ಲಿದೆ...?"

"ನಿಧಾನಕ್ಕೆ ಹೇಳಿ.. ನನ್ನ ಕಿವಿ ಸರಿಯಾಗಿದೆ...
ಸಾರ್.... ಪ್ರಾರ್ಥನಾ ಶಾಲೆನಾ...? ಇಲ್ಲೇ ಮುಂದಕ್ಕೆ ಹೋಗಿ..." ಅಂದ....

ನಾಗು ಅತ್ಯಂತ ತಾಳ್ಮೆಯಿಂದ...
"ಹೌದಾ ಸಾರ್... ತುಂಬಾ ಉಪಕಾರವಾಯ್ತು...
ಏನ್ ಸಾರ್ ನೀವು ಇದೇ ಊರಿನವರಾ.....?"
ಅಂತ ಕೇಳಿದ....

"ಹೌದು ಸಾರ್... ಇಲ್ಲೇ ಹುಟ್ಟಿ ಬೆಳ್ದಿರೋದು....
ಮಾರಮ್ಮನ ದೊಡ್ಡಿಯವನು..."

ಮುಂದೆ ಹೋಗಿ ಬೇರೆಯವರನ್ನು ಕೇಳೋಣ ಅಂದು ಕೊಳ್ಳುವಷ್ಟರಲ್ಲಿ ಇನ್ನಿಬ್ಬರು ಬೈಕಿನಲ್ಲಿ ಬಂದರು...
ಅವರನ್ನು ಕೇಳಿದೆವು ..
ಅವರು ಸರಿಯಾದ ವಿಳಾಸ ಕೊಟ್ಟರು...

ನಾಗು ಅವರನ್ನು "ಸಾರ್ ನೀಮ್ಮೂರು ಯಾವುದು..?" ಅಂತ ಕೇಳಿದ....

"ಸಾರ್ ನಾವು ಮಂಗಳೂರಿನವರು" ಅಂತ ಹೇಳಿದರು...

ನಾವು ಅವರು ಹೇಳಿದ ಹಾಗೆ ಆ ಜಾಗ ತಲುಪಿದೆವು...
ಮತ್ತೆ ನಮ್ಮ ಸ್ನೇಹಿತರಿಗೆ ಫೋನ್ ಮಾಡಿ ನಾವು ಅಲ್ಲಿ ಬಂದಿದ್ದೇವೆ ಎಂದೆವು...

" ನೀವು ಅಲ್ಲಿಂದ ನೇರವಾಗಿ ಇನ್ನೂ ಮೂರು ಕಿಲೊಮೀಟರ್ ಮುಂದೆ ಚನ್ನ ಕೇಶವ ಟೆಂಪಲ್ ಬಳಿ ಬನ್ನಿ.." ಎಂದರು....

ನಾವು ಮತ್ತೆ ಮುಂದೆ ಹೋದೆವು...

ನಾವು ಅಲ್ಲಿ ಬರುವಷ್ಟರಲ್ಲಿ ಆ ಮಹಾಶಯರೂ ಬಂದಿದ್ದರು...

"ನೀವು ಈ ವಿಳಾಸ ಮೊದಲೇ ಹೇಳ ಬಹುದಿತ್ತಲ್ಲ... ಸರ್..
ನಮಗೆ ಸ್ವಲ್ಪ ಕನ್ಫ್ಯೂಸ್ ಆಯ್ತು.."

"ಅಯ್ಯೋ... ಹೆಗಡೆಯವರೆ.. ನಾನು ಸ್ವಲ್ಪ ದೂರದಲ್ಲಿದ್ದೆ..
ಬರಲಿಕ್ಕೆ ತಡ ಆಯ್ತು.. ಇರ್ಲಿ...
ಬನ್ನಿ ಜಾಗ ತೋರಸ್ತೀನಿ..."

ಅವರು ಅಲ್ಲಿಂದ ಎರಡು ಗಂಟೆ ಓಡಾಡಿಸಿ ಜಾಗ ತೋರಿಸಿದರು...

ಅವರು ತೋರಿಸಿದ ಸೈಟು, ಪೇಪರ್, ಜಾಗ ಯಾವುದೂ ಸರಿ ಇಲ್ಲವಾಗಿತ್ತು...

"ಸರ್... ನಾವು ಬೆಂಗಳೂರಿಗೆ ಹೋಗಿ ಮನೆಯಲ್ಲೊಮ್ಮೆ ಮಾತಾಡಿ ತಿಳಿಸ್ತೇವೆ..."

ಅವರ ಹಾಗೆ ಮಾತಾಡಿದೆವು...

ಸೈಟ್ ನೋಡಲು ಬಂದಿದ್ದ ನಮ್ಮ ಉತ್ಸಾಹ ಟುಸ್ ಆಯಿತು...!

ಸರಿ ಇನ್ನು ಏನು...?
ವಾಪಸ್ ಹೊರಡ ಬೇಕಲ್ಲ... ಮತ್ತೆ ವಿಳಾಸದ ಸಮಸ್ಯೆ...!

ಈ ಬಾರಿ ಆ ಸ್ನೇಹಿತರೇ ಹೇಳಿದರು..
"ನೀವು ನನ್ನ ಫಾಲೋ ಮಾಡಿ...
ನನ್ನ ಶಾಪ್‍ನಿಂದ ನಿಮಗೆ ಮುಖ್ಯ ರಸ್ತೆ ಸಿಗುತ್ತದೆ"

ನಾವು ಅವರನ್ನು ಅನುಸರಿಸಿ ಅವರ ಶಾಪ್‍ಬಳಿ ಬಂದೆವು...

"ಹೆಗಡೆಯವರೆ... ಬನ್ನಿ ಟೀ ಕುಡಿದು ಹೋಗುವಿರಂತೆ.."

ನಮಗೆ ಸಾಕುಸಾಕಾಗಿತ್ತು...
ಏನೋ ನೆಪ ಹೇಳಿ ಅಲ್ಲಿಂದ ಹೊರಟೇವು....

ನಮಗೆಲ್ಲ ಬಹಳ ಆಶ್ಚರ್ಯವಾಗಿತ್ತು...
" ಅಲ್ಲ ... ಊಟ ಮಾಡುವ ಸಮಯ...ಟೀ ಗೆ ಕರಿತಾ ಇದ್ದಾರಲ್ಲ...!"

ನಾಗುವೇ ಹೇಳಿದ...

"ಅವರು ವ್ಯವಹಾರಸ್ಥರಾಗಿದ್ದರೆ..
ಮುಂದೊಂದು ದಿನದ ಬಿಸಿನೆಸ್ ಲೆಕ್ಕಾಚಾರ ಇಟ್ಟುಕೊಂಡಾದರೂ ಊಟಕ್ಕೆ ಕರಿಯ ಬೇಕಿತ್ತು..
ಪ್ರಕಾಶ್ ಗುತ್ತಿಗೆದಾರ, ಶಿವು, ಮಲ್ಲಿ ಫೋಟೊಗ್ರಾಫರ್ಸ್...
ಇವುರುಗಳ ಸ್ನೇಹ ಲಾಭ ಇತ್ತು...
ಹೋಗಲಿ ಸ್ವಲ್ಪ ಮಾನವೀಯ ಭಾವನೆಗಳು ಇದ್ದಲ್ಲಿ ,..
ಸ್ನೇಹಕ್ಕಾದರೂ ಊಟಕ್ಕೆ ಕರೆಯ ಬೇಕಿತ್ತು..

ನನಗೆ ಅನಿಸುತ್ತೆ...
ಈ ಮನುಷ್ಯ.. ಇಲ್ಲಿನ ಮೂಲ ನಿವಾಸಿ...
ಇಲ್ಲಿಯೇ ಹುಟ್ಟಿ ಬೆಳೆದವರು... ಹೌದೋ.. ಅಲ್ಲವೋ..?"


ನನಗೆ ಆಶ್ಚರ್ಯ...!

"ನಿಜ ಮಾರಾಯಾ...
ಅವನು ಇಲ್ಲಿನ ಮಗ...!! ನೀನು ಹೇಗೆ ಗೆಸ್ ಮಾಡಿದೆ..!!..??.."

ನಾಗು ಮುಗುಳು ನಗೆ ನಕ್ಕ.......

"ಇವತ್ತು ಈ ಊರು ಬಿಡುವದರೊಳಗೆ ನಿಮಗೊಂದು ಆಶ್ಚರ್ಯದ ವಿಷಯವೊಂದನ್ನು ಹೇಳುತ್ತೇನೆ...
ನೀವೂ ಕೂಡ ಜನರನ್ನು ನೋಡಿ ಗೆಸ್ ಮಾಡ ಬಹುದು... ನೋಡುತ್ತಿರಿ.." ಅಂದ...

ನಮಗೆಲ್ಲ ಆಶ್ಚರ್ಯ... ಕುತೂಹಲ....!

ಶಿವು ತಮ್ಮ ಪರಿಚಯದವರೊಬ್ಬರಿಗೆ ಬ್ಯಾಗ್ ಬಗ್ಗೆ ಕೇಳುತ್ತಿದ್ದರು...

"ಹದಿನೈದು ದಿನಗಳ ಹಿಂದೆ ಆರ್ಡರ್ ಕೊಟ್ಟಿದ್ದೆ..
ನಿನ್ನೆನೂ ಫೋನ್ ಮಾಡಿದ್ದೆ..ಬನ್ನಿ ನಾಳೆ ಕೊಡ್ತಿನಿ ಅಂದಿದ್ದರು..
ಆದರೆ ಈಗ ಆ ಬ್ಯಾಗ್ ರೆಡಿ ಇಲ್ಲ ಅನ್ನುತ್ತಿದ್ದಾರೆ ..."

ಬೇಸರ ಮಾಡಿಕೊಳ್ಳುತ್ತಿದ್ದರು...

ನಾಗು ಮತ್ತೆ ಬಾಯಿ ಹಾಕಿದ...
"ಶಿವು ಸಾರ್...
ಆ ಬ್ಯಾಗ್‍ನವರು ಇಲ್ಲಿಯೇ ಹುಟ್ಟಿ ಬೆಳೆದ ಮೂಲನಿವಾಸಿಗಳು.. ಹೌದೋ ಅಲ್ಲವೋ...?"

ಶಿವುಗೂ ಆಶ್ಚರ್ಯ...
"ನಿಮಗೆ ಹೇಗೆ ಗೊತ್ತಾಯಿತು ಮಾರಾಯಾ..?"

ನಾಗು ಮತ್ತೆ ಮುಗುಳು ನಗೆ ನಕ್ಕ..

ಆ ಉರಿನಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ
ಶಿವು ಮಲ್ಲಿಕಾರ್ಜುನ್‍ರಿಗೆ ಬಹಳ ದಿನಗಳ ಹಿಂದೆ ಪ್ರಶಸ್ತಿ ಬಂದಿತ್ತು...
ಆದರೆ ಆ ಕಮೀಟಿ ಜನ ಫೋಟೊ ವಾಪಸ್ ಮಾಡಿರಲಿಲ್ಲ...
ಫೋನ್ ಮಾಡಿ ಕೇಳಿದರೆ ಫೋನ್ ಎತ್ತುತ್ತಲೇ ಇಲ್ಲ...
ಅವರಿಗೆ ಹೊರಗಿನಿಂದ ಬಂದು ಪ್ರಶಸ್ತಿ ಪಡೆದ ಇವರ ಬಗೆಗೆ ಅಸೂಯೆ ಇತ್ತಾ...?

ನಾಗು ಮತ್ತೆ ಕೇಳಿದ...
"ಮಲ್ಲಿಯವರೆ...
ನೀವು ಫೋನ್ ಮಾಡಿದ ವ್ಯಕ್ತಿ ಈ ಊರಿನ ಮೂಲ ನಿವಾಸಿಗಳು.. ನಿಜಾನಾ...?"


"ಹೌದೋ ಮಾರಾಯಾ...!
ಸರಿಯಾದ ಊಹೆ... ಇದು ಹೇಗೆ ಗೆಸ್ ಮಾಡ್ತೀಯಾ ...ಪುಣ್ಯಾತ್ಮಾ..!!.."

ನಾಗು ಸ್ವಲ್ಪ ಗಂಭೀರವಾಗಿ ಹೇಳಿದ....

"ನೋಡಿ ನೀವು ಯಾವುದೇ ಸಿಟಿಗೆ ಹೋಗಿ...

ಸಿರ್ಸಿಯಿಂದ ಹಿಡಿದು .., ಸಿಂಗಾಪುರದವರೆಗೂ ಹೋಗಿ ನೋಡಿ...

ಹೆಚ್ಚಿನದಾಗಿ ಆ ಸಿಟಿ ಹೊರಗಿನಿಂದ ಬಂದ ಜನರಿಂದ ಬೆಳೆದಿರುತ್ತದೆ...

ಅಲ್ಲಿನ ಮೂಲ ನಿವಾಸಿಗಳು
ಗಂಜಿಯಲ್ಲಿ ಬಿದ್ದ ನೊಣದ ಹಾಗೆ ಇರುತ್ತಾರೆ...

ಜೀವನ ಉತ್ಸಾಹ... ಏನಾದರೂ ಮಾಡ ಬೇಕೆಂಬ , ಸಾಧಿಸುವ ಛಲ ಬತ್ತಿ ಹೋಗಿರುತ್ತದೆ...

ಆ ನಗರ ಬೇಳೆಯುವ ಓಟದಲ್ಲಿ ಓಡಲಾಗದೆ...
ಹಿಂದುಳಿದು ಬಿಡುತ್ತಾರೆ...
ಅದರಿಂದಾಗಿ ಹೊರಗಿನಿಂದ ಬಂದವರ ಮೇಲೆ..
ಹೊಟ್ಟೆಕಿಚ್ಚು.., ಮತ್ಸರ ಬೆಳೆಸಿಕೊಳ್ಳುತ್ತಾರೆ..."


"ಇದು ಯಾಕೆ... ಹೀಗೆ...?"

"ಹೊರಗಿನಿಂದ ಬಂದವರಿಗೆ ಇಲ್ಲಿ ಪ್ರತಿಯೊಂದನ್ನೂ ತಾವೇ ಸೃಷ್ಟಿಸಿಕೊಳ್ಳ ಬೇಕು...

ಯಾವುದೂ ಪುಕ್ಕಟೆಯಾಗಿ ಇಲ್ಲಿ ಸಿಗುವದಿಲ್ಲ...

ಹಾಗಾಗಿ ಅವರಿಗೆ ಬದುಕು ಕಲಿಸಿದ ಪಾಠ..

ಚುರುಕಾಗಿ ಇರುವ ಅನಿವಾರ್ಯತೆಯಲ್ಲಿ ಅವರಿರುತ್ತಾರೆ...

ಸ್ಪರ್ಧೆಯಲ್ಲಿ ಮುಂದಿರುತ್ತಾರೆ...

ಆದರೆ ಇಲ್ಲೇ ಹುಟ್ಟಿ ಬೆಳೆದ ಶ್ರೀಮಂತರಾದರೆ ಅಪ್ಪ ಮಾಡಿದ ಆಸ್ಥಿಯಿರುತ್ತದೆ...

ಬಡವಾರಾದರೆ ಹೊರಗಿನಿಂದ ಬಂದ ಜನರ ಸ್ಪರ್ಧೆಗೆ ನಿಲ್ಲಲಾಗುವದಿಲ್ಲ...

ಹೀಗಾಗಿ ಒಂಥರಾ ಜೋಗುಭಧ್ರ ಆಗಿಬಿಟ್ಟಿರುತ್ತಾರೆ... "

ನಾಗು ಮತ್ತೂ ಮುಂದುವರೆಸಿದ...

"ನೋಡಿ....
ಮುಂಬೈ ಪಟ್ಟಣ ಹೆಚ್ಚಾಗಿ ಬೆಳೆದದ್ದು ಗುಜರಾತಿಗಳು, ಮಾರ್ವಾಡಿಗಳಿಂದ...
ನಮ್ಮ ಬೆಂಗಳೂರೂ ಸಹ... ಹೀಗೇನೇ...
ಚೆನ್ನೈ.. ಯಾಕೆ ಹೈದರಬಾದ್, ಬೆಂಗಳೂರ್ ಥರಹ ಬೆಳೆದಿಲ್ಲ ಗೊತ್ತಾ...?"

"ಅಯ್ಯೋ.. ಅಲ್ಲಿ ಹೊರಗಿನವರಿಗೆ ಮೂರುಕಾಸಿನ ಬೆಲೆಯೇ ಇಲ್ಲ...!!"

"ಹಾಗೂ ಇರಬಹುದು...
ಅಮೇರಿಕಾ ಡೆವಲಪ್ ಆಗಿದ್ದರೆ ಅಲ್ಲಿನ ಮೂಲನಿವಾಸಿಗಳಿಂದ ಅಲ್ಲ...
ಯುರೋಪ್‍ನಿಂದ ಹೋದ ಬ್ರಿಟಿಷರಿಂದ...ಪೋರ್‍ಚುಗೀಸರಿಂದ...

ಇನ್ನು ಆಸ್ಟ್ರೇಲಿಯಾದಲ್ಲಿ..
ಹೊಟ್ಟೆಕಿಚ್ಚು, ಮತ್ಸರದಿಂದ ಭಾರತೀಯರ ಮೇಲೆ ದಾಳಿ ಆಗ್ತಾ ಇದೆ..."


ನಾಗುವಿನ ವಿಚಾರ ಸರಣಿ ಹೀಗೇ ಸಾಗಿತ್ತು...
ಅದು ಸರಿಯೋ ತಪ್ಪೊ ಅಂತ ವಿಮರ್ಶೆಮಾಡುವ ಸ್ಥಿತಿ ನಮ್ಮದಿರಲಿಲ್ಲ...
ನಮಗೆಲ್ಲ ಬಹಳ ಹಸಿವಾಗಿತ್ತು...
ಹೊಟೆಲ್ ಬಳಿ ಕಾರು ನಿಂತಿತು...

ನಾಗು ಹೇಳಿದ
"ನಮಗೆಲ್ಲ ಒಂದು ಸ್ಪರ್ಧೆ ಇಲ್ಲಿದೆ...
ತಿಂಡಿ ನಾನು ಆರ್ಡರ್ ಮಾಡ್ತೇನೆ..
ನೀವೆಲ್ಲ ನೋಡ್ತಾ ಇರಿ.. ಒಂದು ಮಜಾ ಇದೆ......" ಅಂದ...


ಹೊಟೆಲ್‍ನಲ್ಲಿ ಸಪ್ಲಾಯರ್ ನಾಗು ಕರೆದ...
"ನೋಡಪಾ... ಈ ಹೊಟೆಲ್‍ನಲ್ಲಿ ಯಾವ ತಿಂಡಿ ಚೆನ್ನಾಗಿದೆ...?"

"ಸಾರ್ ಇಡ್ಲಿ ವಡೆ... ಮಸಾಲೆ ದೋಸೆ..ಪ್ಲೇನ್ ದೋಸೆ... ಸೆಟ್ ದೋಸೆ...."

"ನೋಡಿ.. ಇಲ್ಲಿ ಮಾಡಿರುವ ತಿಂಡಿ ನೀವು ರುಚಿನೋಡಿರುತ್ತೀರಿ...
ಅಥವಾ... ಇಲ್ಲಿ ಹೆಚ್ಚಾಗಿ ಇಷ್ಟ ಪಟ್ಟು ತಿನ್ನುವ ತಿಂಡಿಯನ್ನು ಐದು ಪ್ಲೇಟ್ ತನ್ನಿ"
ಅಂದ......

ಸಪ್ಲಾಯರನಿಗೆ ಆಶ್ಚರ್ಯವಾಗಿರ ಬೇಕು... ಸ್ವಲ್ಪ ಹೊತ್ತು ತಲೆಕೆರೆದು ಕೊಂಡ...

"ಆಯ್ತು ಸಾರ್.. " ಅಂತ ಒಳಗೆ ಹೋದ...

ನಾಗು ಮತ್ತೆ ಶುರು ಹಚ್ಚಿಕೊಂಡ.....

"ನೋಡ್ರೊ....
ಅವನು ತರುವ ತಿಂಡಿಯ ರುಚಿಯ ಮೇಲೆ ನಾವೆಲ್ಲ ಹೇಳ ಬೇಕು..
ಅವನು ಇಲ್ಲಿನ ಮೂಲನಿವಾಸಿ ಹೌದೋ ಅಲ್ಲವೋ ಅಂತ...
ಇದು ಸ್ಪರ್ಧೆ...ಬಹುಮಾನ ಗ್ಯಾರೆಂಟಿ ಇದೆ..."

ನಮಗೆಲ್ಲ ಕುತೂಹಲದಿಂದ ಟೆನ್ಷನ್ ಶುರುವಾಯಿತು....

ಈ ತರಲೆ ನಾಗು ಏನಾದರೂ ಒಂದು ಮಾಡುತ್ತಲೇ ಇರುತ್ತಾನೆ....
ಸ್ವಲ್ಪ ಹೊತ್ತಿನ ಮೇಲೆ ಸಪ್ಲಾಯರ್ ಬಂದ....

ಅವನ ಟ್ರೇ ನಲ್ಲಿ ಐದು "ಮಸಾಲೆದೋಸೆಗಳಿದ್ದವು..."

ನಾಗು ಹೇಳಿದ..
"ರುಚಿನೋಡೀ ... ಹೇಳ್ರೋ...!."

ನಾವು ಲಗುಬಗೆಯಿಂದ ಮಸಾಲೆ ದೋಸೆ ಬಾಯಿಗಿಟ್ಟೇವು...

ನಾಗು ನನ್ನ ಮುಖ ನೋಡಿದ...

"ಈ ಹುಡುಗ ... ಬೇರೆ ಊರಿನವನು..." ಅಂದೆ...

ಮಲ್ಲಿಕಾರ್ಜುನ್ ಹೇಳಿದರು
"..ರುಚಿ ಓಕೆ... ಇವನು ಬೇರೆ ಊರಿನವನೇ ಇರಬಹುದು.."

ನಾಗು ಶಿವು ಮುಖ ನೋಡಿದ...

"ಇದು... ಕ್ರಾಸ್ ಬೀಡ್.... ಸಾರ್.... !!

ಹಳ್ಳಿ ಹಲಸಿನ ಮರ..!

ಪೇಟೆಯ ಜಾತಿ ಮರ...ಮಿಕ್ಸ್ ಆಗಿಬಿಟ್ಟಿದೆ...!!."

ನಮಗೆ ನಗು ತಡೇಯಲಾಗಲಿಲ್ಲ....!
ಹಂಚು ಹಾರಿಹೋಗುವಷ್ಟು ನಗು....!

ನಾಗು ಅಜಿತ್ ಮುಖ ನೋಡಿದ....

" ನಾಗು ಸಾರ್.... ಇದು ಕಸಿ ಮರ.... ಮಿಕ್ಸಡ್ ಸ್ಯಾಂಪಲ್ಲು...."

ನಮಗೆಲ್ಲ ಮತ್ತೆ ನಗು...!
ತಡೆಯಲಾರದಷ್ಟು ನಗು...!

ತಿಂಡಿ ತಿಂದಾಯಿತು ಸಪ್ಲಾಯರ್ ಬಂದು ಬಿಲ್ಲು ಕೊಟ್ಟ......

ನಾಗು ಈಗ ಕೇಳಿದ...
"ನಿಮ್ಮೂರು ಯಾವುದು ಯಜಮಾನ್ರೆ..??."

"ನಮ್ಮೂರಾ... ತುಮಕೂರಿನ ಹತ್ತಿರ ಕೊರಟಗೆರೆ...!!"

ನಮಗೆಲ್ಲ ಮತ್ತೆ ನಗು... ನಗುತ್ತಲೆ ಇದ್ದೆವು...

ನಾಗು ಬಿಲ್ಲ್ ಹಣ ಕೊಟ್ಟ......

ನನಗೆ, ಮಲ್ಲಿಕಾರ್ಜುನ್‍ಗಿಬ್ಬರಿಗೂ ಖುಷಿಯಾಯಿತು.....ನಾವು ಹೇಳಿದ್ದು ಸರಿಯಾಗಿತ್ತಲ್ಲ..!

ಆತ ಬಿಲ್ ವಾಪಸ್ ತಂದು ಕೊಟ್ಟ...

ಅಜಿತ್‍ಗೆ ಇನ್ನೂ ಕುತೂಹಲ ಬಿಟ್ಟಿರಲಿಲ್ಲ...

"ನೋಡ್ರಿ...ಯಜಮಾನ್ರೆ...!
ನಿಮ್ಮ ರಿಲೇಟಿವ್ಸ್ ಯಾರಾದರೂ ಈ ಊರಲ್ಲಿ ಇದ್ದಾರಾ...?"

ಸಪ್ಲಾಯರ್ ತುಂಬ ಖುಷಿಯಿಂದ ಹೇಳಿದ...!!

"ಹೌದು ಸಾರ್....!!

ನನ್ನ ಅಮ್ಮ .... ಇದೇ ಊರಿನವರು..!!.??.!!"

ನಮಗೆಲ್ಲ ನಗು ತಡೆಯಲು ಸಾಧ್ಯವಾಗಲೇ ಇಲ್ಲ....!

ಹೊಟ್ಟೆ ಹುಣ್ಣಾಗುವಷ್ಟು ನಕ್ಕೇವು...
ನಕ್ಕು ನಕ್ಕು ಕಣ್ಣಲ್ಲಿ ನೀರು ಬಂತು.....

ದಾರಿಯಲ್ಲಿ ಬರುವಾಗ ಬಸ್‍ಸ್ಟ್ಯಾಂಡ್‍ಗಳಲ್ಲಿ ನಾಗು ಬಹಳಷ್ಟು ಮೂಲನಿವಾಸಿಗಳನ್ನು ತೋರಿಸಿದ....

ಅವರಲ್ಲಿ ಕೆಲವರು......

ತಲೆ ಮೇಲೆ ಕೈಹೊತ್ತು ಕುಳಿತಿದ್ದರು.....

ಬಾಯಿಗೆ ಕಡ್ಡಿಹಾಕಿ ಕ್ಲೀನ್ ಮಾಡುತ್ತ ಮಾತಾಡುತಿದ್ದರು...

ಸುಮ್ಮನೆ ಆಕಾಶ ನೋಡುತ್ತಿದ್ದರು... ಆಕಳಿಕೆ ಹೊಡೆಯುತ್ತಿದ್ದರು...

ಕೆಲವರ ಮುಖದಲ್ಲಿ ಜಿಗುಪ್ಸೆ ಬೇಸರವಿತ್ತು... ನಿರಾಸೆಯಿತ್ತು...

ಇನ್ನೂ ಕೆಲವರ ಮುಖದಲ್ಲಿ...

ಈ ಜಗತ್ತಿನ ಎಲ್ಲ ಬಗೆಯ ಆತ್ಮ ಸಂತೃಪ್ತಿ ಕಾಣುತ್ತಿತ್ತು...
ತೃಪ್ತ ಭಾವನೆ ಇತ್ತು....

ಆಳಸಿತನದ ಪರಮಾವಧಿ ಭಾವ ಎದ್ದು ಕಾಣುತ್ತಿತ್ತು....

ಗಂಜಿಯಲ್ಲಿ ಬಿದ್ದ ನೊಣದ ಹಾಗೆ...

ಜೋಗ್ ಭದ್ರನ ಮುಖದ ಕಳೆ ತುಂಬಿ ತುಳುಕುತ್ತಿತ್ತು........

ನಾಗು ಮತ್ತೂ ಹೇಳಿದ....
ಮೂಲ ನಿವಾಸಿಗಳೆಂದರೆ... ಗಂಡಂದಿರುಗಳ ....ಹಾಗೆ...
ಆಫೀಸಿಗೆ ಹೋದರೆ ಕೆಲಸ ಮಾಡ್ತಾರೆ...

ಮನೆಯಲ್ಲಿ
...ಐದು ಪೈಸೆ... ಕೆಲಸ ಮಾಡಲ್ಲ...!!
ಪುಕ್ಕಟೆ ಉಪದೇಶ ಹೊಡೆಯುತ್ತ...
ಕೂತಿರ್ತಾರೆ...!!
(ನನ್ನ ಬ್ಲಾಗ್ ಫಾಲೋ ಮಾಡುವ ಕೆಲವು ಬ್ಲಾಗುಗಳ ಲಿಂಕ್ ಸಿಗುತ್ತಿಲ್ಲ...
ಇನ್ನು ಕೆಲವು ಸ್ನೇಹಿತರ ಈಮೇಲ್ ಕೂಡ ಸಿಗುತ್ತಿಲ್ಲ...
ದಯವಿಟ್ಟು...
ತಮ್ಮ ಬ್ಲಾಗ್ ಲಿಂಕ್ ನೊಂದಿಗೆ ನನಗೆ ಈಮೇಲ್ ಮಾಡುವಿರಾ...?
ನನ್ನ ಈ ಮೇಲ್..
kash531@gmail.com) )


(ಪ್ರಿಯ ಓದುಗರೇ... ನನ್ನ ಪುಸ್ತಕಕ್ಕೆ ಏನು ಹೆಸರು ಇಡಬೇಕು..?
ಹೆಸರುತೋಚುತ್ತಿಲ್ಲ... ದಯವಿಟ್ಟು ಒಳ್ಳೆಯಹೆಸರನ್ನು ಸೂಚಿಸಿ...
ಪುರಸ್ಕಾರವುಂಟು...
ಮೇಲ್ ಮಾಡುವಿರಾ...?)

( ಲೇಖನಕ್ಕೆ ಸುಂದರ
ಪ್ರತಿಕ್ರಿಯೆಗಳಿವೆ... ದಯವಿಟ್ಟು ಓದಿ... ಭಾಗವಹಿಸಿ...)


47 comments:

ಮೂರ್ತಿ ಹೊಸಬಾಳೆ. said...

ಹೌದು ಈ ತರ್ಕ ನೂರಕ್ಕೆ ನೂರು ಸತ್ಯ.ಖತಾರ್ ನಲ್ಲಿ ಇಂತಹಾ ಗಂಜಿಯಲ್ಲಿ ಬಿದ್ದ ನೊಣಗಳನ್ನ,ಜೋಗುಬದ್ರ ಮುಖದವರನ್ನ ನೋಡಬಹುದು.

Ittigecement said...

ಮೂರ್ತಿಯವರೆ....

ಮೊದಲ ಪ್ರತಿಕ್ರಿಯೆಗಾಗಿ ಅಭಿನಂದನೆಗಳು...

ನಾವು ನಮ್ಮೂರಿನ ವಿಷಯ ಬಂದಾಗ ಮೂಲನಿವಾಸಿಗಳಿಗೆ ಸಪೋರ್ಟ್ ಮಾಡುತ್ತೇವೆ...
ನಾವು ಪರಸ್ಥಳದಲ್ಲಿದ್ದಾಗ ಮೂಲ ನಿವಾಸಿಗಳನ್ನು ಅಷ್ಟಾಗಿ ಇಷ್ಟ ಪಡೋದಿಲ್ಲ...

ಕನಸ್ಟ್ರಕ್ಷನ್ ವ್ಯವಾಹಾರದಲ್ಲಿರುವ ನನಗೆ ಇದರ ಅನುಭವ ಯಥೇಚ್ಛವಾಗಿ ಆಗುತ್ತದೆ...
ತಮಿಳು ಹುಡುಗರಷ್ಟು, ಗುಲಬರ್ಗದಷ್ಟು ಚೆನ್ನಾಗಿ ಇಲ್ಲಿನ ಮೂಲನಿವಾಸಿಗಳು ಕೆಲಸ ಮಾಡುವದಿಲ್ಲ..
ಸಿರ್ಸಿಯಲ್ಲಿ ನನ್ನ ಸ್ನೇಹಿತನ ಅನುಭವವೂ ಇದೇ ಆಗಿದೆ..
"ಲೋಕಲ್ ಜನ ಸರಿಯಾಗಿ ಕೆಲಸ ಮಾಡೋದಿಲ್ಲ ಮಾರಾಯ" ಅಂತಾನೆ...

ಹೊರಗಿನವರು ಬಂದು ಯಶಸ್ಸು ಸಾಧಿಸುವದನ್ನು ಕಂಡು...
ಎಲ್ಲೋ ಒಂದು ಕಡೆ ಮತ್ಸರ, ಅಸೂಯೆ ಉಂಟಾಗುತ್ತದೆ...

ಇದು ಸರಿನಾ...? ತಪ್ಪಾ...? ಅನ್ನೋದಕ್ಕಿಂತ...
ಎಲ್ಲವನ್ನೂ ಸ್ಪರ್ಧಾ ಮನೋಭಾವದಿಂದ ತೆಗೆದುಕೊಳ್ಳ ಬೇಕಲ್ಲವೆ...?

ಮೂರ್ತಿಯವರೆ...
ಕತಾರ್ ದೇಶದಲ್ಲಿ ನಾನೂ ಇದ್ದೇ...
ಅಲ್ಲಿ ಗಂಜಿಯಲ್ಲಿ ಬಿದ್ದ ನೊಣಗಳು ಸಿಕ್ಕಾಪಟ್ಟೆ ಇವೆ...
ಜ್ಞಾಪಿಸಿದದಕ್ಕೆ ವಂದನೆಗಳು...

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಬರಹ ಚೆಂದ. ಪುಸ್ತಕ ಬೇಗ ಬರಲಿ.
ಪುಸ್ತಕಕ್ಕೆ ಹೆಸರು ಹುಡುಕ ಹೊತ್ತಿಗೆ ಇಲ್ಲಿಗೆ ಬಂದಿದ್ದಿ. ಪುಸ್ತಕದ ತಯಾರಿ ಭರಾಟೆಯಲ್ಲಿ ಸಾಗ್ತಾ ಇತ್ತು. ಅಲ್ಲಿ ಅಡುಗೆಮನೆಯಲ್ಲಿ ಪಲ್ಯದ ಒಗ್ಗರಣೆ ಸೀದು ಹೋದ್ರೆ ‘ವರಮಹಾಲಕ್ಷ್ಮಿ’ಗೆ ಬೇಜಾರಾಗೋಗ್ತು ಹೇಳಿ ಅಡುಗೆ ಮನೆಗೆ ಓಡಿದಿ:-)
ವಾಪಸ್ ಬಂದಿದ್ದು ಸುಮಾರು ಹೊತ್ತಿನ್ ಮೇಲೆ. ಪುಸ್ತಕಕ್ಕೆ ಹೆಸರು ಹುಡುಕಿಯಾತಾ?

Ittigecement said...

ಶಾಂತಲಾ....

ಇಲ್ಲಮ್ಮ....

ಪುಸ್ತಕಕ್ಕೆ ಹೆಸರು ಇನ್ನೂ ಹುಡುಕಿಯಾಗಿಲ್ಲ...
"ಇಟ್ಟಿಗೆ ಸಿಮೆಂಟು" ಅಂತ ಬೇಡ ಅಂತ ಎಲ್ಲರ ಆಗ್ರಹ...
ಮನೆಕಟ್ಟುವ ಕೆಲಸದ ಬಗೆಗೆ ಎಂದಾಗಿ ಬಿಡುತ್ತದೆ ಅನ್ನುವದು ಅವರ ವಾದ...
ಅದು ನಿಜ ಕೂಡ...

ದಯವಿಟ್ಟು ಒಂದು ಒಳ್ಳೆಯ , ಸೂಕ್ತ ಹೆಸರು ಹುಡುಕಿ ಕೊಡಿ....
(ಬಹುಮಾನವುಂಟು...!!)

ಮೂಲನಿವಾಸಿಗಳ ಸಮಸ್ಯೆ ....
ಅಮೇರಿಕಾದಲ್ಲಿದ್ದ ನಿಮಗೆ ಚೆನ್ನಾಗಿ ಅನುಭವಕ್ಕೆ ಬಂದಿರ ಬಹುದು....

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಆಗಾಗ ಆದರೂ....
ಬರ್ತಾ ಇರು...

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
"ನಿಂತ ನೀರು ಆಗಬಾರದು" ಎಂದು ಹಿರಿಯರು ಹೇಳುವುದು ಇದನ್ನೇ ಅಲ್ಲವೇ? ಹರಿಯುವ ನೀರು ಚಲನೆ, ಚುರುಕು, ಮತ್ತು ಎಲ್ಲರಿಗೂ ಉಪಯೊಗಕರ.
ನಾನೂ ಅಷ್ಟೇ ಇದ್ದ ಊರಲ್ಲೇ ಇರಬೇಕು, ಏನೇನೋ ಕಡಿದು ಸಾಧಿಸಬೇಕೆಂದು ಗೂಟ ಹೊಡೆದು ಕೂತವನು. ಇದರಿಂದ ನನ್ನ ಆತ್ಮವಿಮರ್ಶೆಯನ್ನೂ ಮಾಡಿಕೊಂಡೆ!
"ಮೂಲನಿವಾಸಿಗ"ಳು ಬೇರೆಯವರ ಬಗ್ಗೆಯೇ ಚಿಂತಿಸುತ್ತಿರುತ್ತಾರೆ! ಬೇರೆಯವರ ಲೇವಡಿ, ಕಾಲೆಳೆಯುವುದು ಇವರ ಮುಖ್ಯ ಹವ್ಯಾಸ.ಇತರರು ಮೊಲದಂತೆ ಓಡುತ್ತಿದ್ದರೆ, ತಾವು ಆಮೆಯಂತೆ ತೆವಳುತ್ತಿರುತ್ತಾರೆ(ಪಂಚತಂತ್ರದ ಕಥೆಯಂತೆ ತಾವೇ ಗೆಲ್ಲುವುದೆಂಬ ಭ್ರಮೆ!)
ನೀವು ಅವರ ಸೈಕಾಲಜಿ ಚೆನ್ನಾಗಿ ಅಭ್ಯಸಿಸಿದ್ದೀರ. ನನ್ನ ಸ್ನೇಹಿತನೊಬ್ಬನ ರೇಷ್ಮೆ waste factory ಯಲ್ಲಿ ಬಿಹಾರದಿಂದ ಬೆಂಗಾಲದಿಂದ ಬಂದ ಕೆಲಸಗಾರರು hardwork ಮಾಡಿ ಕೈತುಂಬ ಹಣ ಪಡೆದು, ಇಲ್ಲಿಯೂ ಖರ್ಚು ಮಾಡಿ ಮನೆಗೂ ಕಳಿಸುತ್ತಾರೆ.

umesh desai said...

ಹೆಗಡೆಜಿ ಉತ್ತಮ ಬರಹ "ಗಂಜಿಯೊಳಗಿನ ನೊಣ" ಅದ್ಭುತ ಕಲ್ಪನೆ ಪುಸ್ತಕ ಹೊರತರುವ ಗಡಿಬಿಡಿ ಇದೆ ಹೆಸರು ನೀವೇ
ಯೋಚಿಸಿದ್ದು ಚೆನ್ನಾಗಿಯೇ ಇರುತ್ತದೆ ಶುಭಮಸ್ತು...!

Unknown said...

ಪ್ರಕಾಶ್ ಸರ್,
ನಿಮ್ಮ ಲೇಖನ ಸೊಗಸಾಗಿ ಇದೆ .. ನಿಮ್ಮ ಪುಸ್ತಕಕ್ಕೆ ಅ೦ಕುರ ಅಥವಾ ಮುಗುಳು ನಗು ಎ೦ದು ಇಡಿ .. ಇದು ನನಗೆ ಅನ್ನಿಸಿದ್ದು .. ಬೇರೆ ಹೆಸರು ಈಗ ನೆನಪಾಗುತ್ತಿಲ್ಲ .. :-)
ಒಳ್ಳೆಯ ಹೆಸರು ನೆನಪಾದರೆ ನಿಮಗೆ ತಿಳಿಸುತ್ತೇನೆ ..:-)

PARAANJAPE K.N. said...
This comment has been removed by the author.
PARAANJAPE K.N. said...

ನಿಮ್ಮ ಬರಹದೊಳಗಿನ ವಿಚಾರ ನಿಜ. ನಾನು ಬಹಳಷ್ಟು ಊರು ನೋಡಿದ್ದೇನೆ. ಆ ಊರಿನ ಮೂಲ ನಿವಾಸಿಗಳಿಗಿ೦ತ ಹೊರಗಿ೦ದ ಬ೦ದು ಸೇರಿಕೊ೦ಡವರೇ active ಆಗಿರ್ತಾರೆ. ಯಾಕೆ೦ದರೆ ಅವರಿಗೆ ಜೀವನದ ಪ್ರಶ್ನೆ, ಅಪ್ಪ ಮಾಡಿಟ್ಟದ್ದು ಇರುವುದಿಲ್ಲ. ಹಾಗಾಗಿ ಕಷ್ಟಪಟ್ಟು ದುಡೀತಾರೆ, ನಿಮ್ಮ "ಗ೦ಜಿಯಲ್ಲಿ ಬಿದ್ದ ನೊಣ" "ಜೋಗುಭದ್ರ" ಇ೦ತಹ ನುಡಿಗಟ್ಟುಗಳು ಇಷ್ಟವಾದವು.

ಒ೦ದು ಪುಟ್ಟ ಸಲಹೆ, ನಿಮ್ಮ ಪುಸ್ತಕಕ್ಕೆ ನೀವೇ ಒ೦ದು ಹೆಸರು ಆಯ್ಕೆ ಮಾಡಿಕೊಳ್ಳಿ, ಇನ್ನೊಬ್ಬರ ಸಲಹೆ
ಎಷ್ಟಾದರೂ ಅದು ಅಷ್ಟೇ. ನಮ್ಮ ಮನಸ್ಸಿಗೆ ಹಿಡಿಸುವ ಒ೦ದು ತಲೆಬರಹವನ್ನು ನಾವೇ ಆಯ್ಕೆ ಮಾಡಿ
ಕೊಟ್ಟಾಗಿನ ತೃಪ್ತಿ ಬೇರೆಯದೇ ಇರುತ್ತದೆ. ನಮ್ಮ ಮಗುವಿಗೆ ನಾವೇ ಹೆಸರು ಇಟ್ಟರೆ ಆಗುವಷ್ಟು ಖುಷಿ
ಇರುತ್ತದೆ.

Unknown said...

ಅತ್ಯಂತ ುತ್ತಮ ಮಟ್ಟದ ಬರವಣಿಗೆ. ನಿಮ್ಮ ನಾಗುವನ್ನು ನಮಗೊಮ್ಮೆ ಪರಿಚಯ ಮಾಡಿಕೊಡಿ ಮಾರಾಯ್ರೆ.
ಅಂದ ಹಾಗೆ, ಕಾಲದ ಜೊತೆ ಹೆಜ್ಜೆ ಹಾಕಲಾಗದ ಮೂಲನಿವಾಸಿಗಳದು ಮೂಲವ್ಯಾಧಿ ಸಮಸ್ಯೆ ಎನ್ನಬಹುದೆ!?

ಸವಿಗನಸು said...

ಪ್ರಕಾಶಣ್ಣ,
ನೀವು ಹೇಳೋದು ನಿಜ.... "ಗ೦ಜಿಯಲ್ಲಿ ಬಿದ್ದ ನೊಣ"ಗಳನ್ನು ಕೇರಳಗೆ ಹೋದ್ರೆ ಹೆಚ್ಚು ಕಾಣಬಹುದು...ಅಲ್ಲಿ ಒಬ್ಬನೂ ಕೆಲಸ ಮಾಡೊಲ್ಲ ಇಲ್ಲಿ ಗಲ್ಫ್ ನಲ್ಲಿ ಎಲ್ಲ ಕೆಲಸ ಮಾಡುತ್ತಾರೆ, ಕಸ ಗುಡ್ಸೊದುರಿಂದ ಇನ್ನು ಎನೆನೊ ಕೆಲಸ ಮಾಡುತ್ತಾರೆ ಅದ್ರೆ ಅವರ ಊರಲ್ಲಿ ಅವರು ಮಾಡೊಲ್ಲ.....ಹಾಗೆ ಕುವೈಟ್ ನಲ್ಲು "ಗ೦ಜಿಯಲ್ಲಿ ಬಿದ್ದ ನೊಣ" ಗಳು ತುಂಬ ಇವೆ
ಲೇಖನ ಸೊಗಸಾಗಿ ಮೂಡಿ ಬಂದಿದೆ.

sunaath said...

It is good psychology!

shivu.k said...

ಪ್ರಕಾಶ್ ಸರ್,


ಮೂಲನಿವಾಸಿಗಳ ವಿಚಾರದಲ್ಲಿ ನಿಮ್ಮ ಲೇಖನ ಅವರ ಅನೇಕ ವಿಚಾರಗಳನ್ನು ಹೊರಗೆಡಹಿದೆ.

ನನ್ನ ದಿನಪತ್ರಿಕೆ ವಿತರಣೆ ಕೆಲಸದ ಎಂಟು ಜನರಲ್ಲಿ ನಾಲ್ವರು ತಮಿಳು, ಇಬ್ಬರು ತೆಲುಗು, ಒಬ್ಬ ರಾಜಸ್ಥಾನಿ ಮಾರ್ವಾಡಿ, ಮತ್ತೊಬ್ಬ ನಮ್ಮ ಕನ್ನಡಿಗ ಹುಡುಗರಿದ್ದಾರೆ. ಇವರಲ್ಲಿ ತೀರ ಸೋಮಾರಿಯೆಂದರೇ ನಮ್ಮ ಕನ್ನಡ ಹುಡುಗನೇ. ಈಗ ಪಿ.ಯು.ಸಿ ಓದುತ್ತಿದ್ದಾನೆ. ಅರ್ಧ ಗಂಟೆಯ ಕೆಲಸವನ್ನು ಗಂಜಿಯಲ್ಲಿ ಬಿದ್ದ ನೊಣದಂತೆ ಒಂದುಗಂಟೆ ಮಾಡುತ್ತಾನೆ. ಚುರುಕುತನವಿಲ್ಲ. ಅದಕ್ಕೆ ವಿರುದ್ಧವಾಗಿ ಇತರೇ ಹುಡುಗರು ಪಟಾಪಟ್ ಅಂತ ತಮ್ಮ ಕೆಲಸ ಮುಗಿಸಿ ಮನೆಗೆ ಹೋಗಿ ರೆಡಿಯಾಗಿ ಮತ್ತೊಂದು ಕೆಲಸಕ್ಕೆ ಹೋಗಿಬಿಡುತ್ತಾರೆ.
ಇದು ನನ್ನ ನಿತ್ಯದ ಆನುಭವ.

ನಿಜಕ್ಕೂ ಈ ಮೂಲನಿವಾಸಿಗಳೆಂದರೇ ಒಂಥರ ಮೂಲವ್ಯಾದಿಗಳೇ ಸರಿ....

ಮೊನ್ನೆ ನಾವೆಲ್ಲಾ ಒಟ್ಟಾಗಿ ಒಂದು ದಿನ ಮಲ್ಲಿಕಾರ್ಜುನ್‍ರವರ ಹೊಸ ಕಾರಿನಲ್ಲಿ ಸುತ್ತಾಟ, ಮಾತು, ನಗು, ಎಲ್ಲಾ ಬಲು ಮಜವೆನಿಸಿತ್ತು.

ಧನ್ಯವಾದಗಳು.

ಬಾಲು said...

ಪ್ರಕಾಶ್ ರವರೆ,
ನೀವು ಹೇಳಿದ್ದು ಸತ್ಯ. ಇದರ ಪ್ರತ್ಯಕ್ಷ ಅನುಭವ ನನಗೆ ದಿನ ಆಗುತ್ತದೆ.
ರಿಕ್ರುಟ್ ಮೆಂಟ್ ನಲಿ ಇರೋದ್ರಿಂದ ದಿನಾಲೂ ಹಲವಾರು ಜನರ ಬಳಿ ಮಾತಾಡುವೆ. ಮೂಲತಃ ಬೆಂಗಳೂರಿನ ಜನ ರಿಸ್ಕ್ ತೆಗೆದು ಕೊಳ್ಳಲು ತಯಾರು ಇರೋದಿಲ್ಲ. ಅವರಿಗೆಲ್ಲ ಎಲ್ಲ ಮನೆ ಪಕ್ಕದಲ್ಲೇ ಆಗಬೇಕು!!!
ಇನ್ನು ದುಬಾಯಿ ನಲ್ಲೂ ಅಷ್ಟೇ, ಮೂಲನಿವಾಸಿ ಗಳ ಸೋಂಬೇರಿ ತನ ಪರಾಕಾಷ್ಟೆ. horagininda hoda bhaaratheeyaru ಅ ನಾಡನ್ನು ಕಟ್ಟಿ ಬೆಳೆಸಿದ್ದಾರೆ.
(ನಮ್ಮ ಆಫೀಸ್ ನಲ್ಲೂ ೨ ದುಬೈ ಮೂಲ ನಿವಾಸಿ ಗಳು ಇದ್ದಾರೆ. ಅವರು ಕೆಲಸ madiddanna ನಾನು / naavugalu yaavattu nodilla!! )

ಚಿತ್ರಾ said...

ಪ್ರಕಾಶಣ್ಣ,
'ನಾಗು' ಅವರ ಅಬ್ಸರ್ವೇಶನ್ ಹಾಗು ತರ್ಕ ಎರಡೂ ಸೂಪರ್ ! ಹೊರಗಿಂದ ಬಂದವರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆಯಿರುತ್ತದೆ .ಆದ್ದರಿಂದಲೇ ಅವರು ಚುರುಕಾಗಿ ಕೆಲಸ ಮಾಡುವುದು ಎಂಬುದು ೧೦೦% ನಿಜ ! ಇಲ್ಲಿಯೂ ಕೂಡ ನಾನು ಗಮನಿಸಿದಂತೆ, ಉತ್ತರ ಭಾರತ, ಬಿಹಾರಗಳಿಂದ ಕೆಲಸಕ್ಕೆ ಬಂದವರು ಕಾಲ ಹರಣ ಮಾಡದೆ ಕೆಲಸ ಮಾಡುವುದರಿಂದಲೇ ಸಣ್ಣ ಪುಟ್ಟ ಫ್ಯಾಕ್ಟರಿಗಳಲ್ಲಿ ಅವರ ಸಂಖ್ಯೆ ಹೆಚ್ಚು. ಇಲ್ಲಿನವರೇ ಆದರೆ, ಅವರಿಗೆ ೫ ಗಂಟೆಯಾಗುತ್ತಿದ್ದಂತೆ ಓಡುವ ತವಕ . ನಡು ನಡುವೆ ,ಟೀ ಬ್ರೇಕ್ ಜೊತೆ ತಂಬಾಕು ಬ್ರೇಕ್ !!! ಯಾವುದಕ್ಕೂ ಅವಸರವಿಲ್ಲದೆ ' ಗಂಜಿಯಲ್ಲಿ ಬಿದ್ದ ನೊಣಗಳೇ " ಆಗಿರುತ್ತಾರೆ ! ಇದು ಗೊತ್ತಿದ್ದೇ , ಇಲ್ಲಿ ಮಾಲೀಕರು ಮಹಾರಾಷ್ಟ್ರದವರಿದ್ದರೂ ಕೆಲಸಗಾರರು ಮಾತ್ರ ಪರವೂರಿನವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ !

ವಿನುತ said...

ಪ್ರಕಾಶ್ ರವರೇ,

ಸುತ್ತಲಿನ ವಾತಾವರಣದಲ್ಲೇ ಗ್ರಹಿಸಿ ಬರೆಯುವ ನಿಮ್ಮ ಬರಹದ ಶೈಲಿ ಇಷ್ಟವಾಗುತ್ತದೆ.
ನಿಜ. ಮೂಲನಿವಾಸಿಗಳ ಆ ದ್ವೇಷದ ಮನೋಭಾವ ಅಮೆರಿಕದಲ್ಲಿ ಕೆಲವೊಮ್ಮೆ ಅನುಭವಕ್ಕೆ ಬ೦ದದ್ದು೦ಟು. ಅದವರ ಕೀಳರಿಮೆಯೋ, ಎಲ್ಲಿ೦ದಲೋ ಬ೦ದವರು ನಮ್ಮದನ್ನು ಬಳಸಿ ಉದ್ಧಾರವಾಗುತ್ತಿದ್ದಾರೆ೦ಬ ಹೊಟ್ಟೆಯುರಿಯೋ, ಬೇರೆಯವರಿಗೆ ದಕ್ಕಿ ನಮಗೇ ಇಲ್ಲವಾಗುತ್ತದೆ ಎ೦ಬ ಹೆದರಿಕೆಯೋ ಗೊತ್ತಿಲ್ಲ.

Guruprasad said...

ಪ್ರಕಾಶ್,
ನಿಮ್ಮ ಈ ಲೇಖನ ತುಂಬ ಸಿಂಪಲ್ ಆಗಿ,,, ನಗು ತರಿಸುವ ಹಾಗಿದ್ದರೆ...ಇನ್ನೊದು ಕಡೆ ತುಂಬ ವಿಚಾರ ಮಾಡುವಂತ್ತದ್ದೆ.. ಒಟ್ಟಿನಲ್ಲಿ ಕೆಲವರಿಗೆ(ಮೂಲ ನಿವಾಸಿಗಳು) ನಮ್ಮತನ , ನಮ್ಮ ಮನೆ ಎಂಬ ಆಲಸ್ಯ ಹೀಗೆ ಮಾಡಿಸುತ್ತೆ ಅಂತ ಕಾಣುತ್ತೆ..... ಮಾಡಿದ್ರೆ ಆಯಿತು, ಯಾರು ಕೇಳ್ತಾರೆ ,ಅನ್ನೋ ಸೋಂಬೇರಿ ತನ ಅಲ್ವ.......ನಮ್ಮ ಮನೆನಲ್ಲಿ ನಾವು ಮಾಡೋ ಹಾಗೆ,, ಅದೇ ಬೇರೆಯವರ ಮನೆಗೆ ಹೋದರೆ.....ಏನು ಗೊತ್ತಿಲ್ಲದೆ ಹೋದರು,,,,ನಾವೇ ಮುಂದಾಗಿ ಮಾಡುತ್ತಾರೆ.....ಇದೆ ಸಂಪ್ರದಾಯ ಹಳ್ಳಿ,, ಊರು,,, ಸಿಟಿ,,, ಹೀಗೆ ಬೆಳೆದು ಬಂದಿದೆ ಅಂತ ಕಾಣುತ್ತೆ....
ಒಳ್ಳೆ observation ಹಾಗು ಒಳ್ಳೆ thinkining ನಿಮ್ಮ ನಾಗುಗೆ.....

Prabhuraj Moogi said...

ನಾಗು ದೊಡ್ದ ಚಿಂತಕ, ಈ ನಾಗು ಕಲ್ಪನೆ ಪಾತ್ರವಾ ಅಥವಾ ನಿಜವಾಗ್ಲೂ ನಾಗು ಇದ್ದಾನಾ... ನಮ್ಮೂರಿನ ವಿಷಯ ಬಂದಾಗ ನಾವು ಮೂಲನಿವಾಸಿಗಳಾಗಿ ಬಿಡುತ್ತೇವೆ... ಪರಸ್ಥಳದಲ್ಲಿ ಮೂಲನಿವಾಸಿಗಳ ಮೂದಲಿಸುತ್ತೇವೆ ಅನ್ನೊದು ಸತ್ಯ.

ಕೃಷಿಕನ ಕಣ್ಣು said...
This comment has been removed by the author.
ಕೃಷಿಕನ ಕಣ್ಣು said...

Moolanivaasigala 'Moolakke' kai hakibittyallo maaraayaa!!.
Anthavara "Basic instincts"galannu pattehachchida Naagu nijakkuu obba
nurita pattedaarane sari!!.
(Nannolguu adagi kulitiruva "moolanivaasi"yannomme mutti, tatti, tadakaadi nodikonde!!!!.)
Pattedaarikege (& agatya ullavarige kotta ondu putta chhdiyetigaagi)
Hats off!.
Pustakada kelasa ellivarege bantu?. Begane horabaruvantaagali.
With well wishes,
Nagendra Muthmurdu.
(Neenu ee barahavannu post maadida kelave gantegalalli noodidde!.
Nannade modala comment ennutta bareyalu kulitidde.(aa velege "no comments yet" endittu.)
Aadare bareyuvudarolagaagi 3-4 baari kai kotta electricity & net, eega sariyaaytu noodu!)

Ittigecement said...

ಮಲ್ಲಿಕಾರ್ಜುನ್ ....

ನಿಂತ ನೀರಾಗ ಬಾರದು...
ಅಭಿವೃದ್ಧಿಗೆ ಹೊರಗಿನವರು ಬೇಕು...
ಆದರೆ ಅವರನ್ನು ಕಂಡರೆ ಅಸಹನೆ... ಅಸೂಯೆ...

ನಮ್ಮೂರಿನ ವಿಷಯ ಬಂದಾಗ ಮೂಲನಿವಾಸಿಗಳಿಗೆ ಬೆಂಬಲ...
ನಾವು ಪರಸ್ಥಳಕ್ಕೆ ಹೋದಾಗ ಮೂಲನಿವಾಸಿಗಳ ಬಗ್ಗೆ ತಾತ್ಸರ...

ಒಂದು ಕಡೆ ಸಮನ್ವಯತೆ ಬೇಕಲ್ಲವೆ...?

ಚಂದದ ಪ್ರತಿಕ್ರಿಯೆಗೆ...
ಸೊಗಸಾದ ಹೊಸ ಕಾರಿಗೆ
ಅಭಿನಂದನೆಗಳು...

ಪಾರ್ಟಿ ಇನ್ನೂ ಸಿಕ್ಕಿಲ್ಲ ಗೆಳೆಯಾ...!!

Ittigecement said...

ಉಮೇಶ್ ದೇಸಾಯಿಯವರೆ....

ಕೆಲವು ವರ್ಷಗಳ ಹಿಂದೆ ನಮ್ಮ ಬಾಡಿಗೆ ಮನೆಯ ಮಾಲಿಕರು ತೆಲುಗು ಇದ್ದರು...
ಅವರ ಬಳಿ ಒಳ್ಳೆಯ ಸಂಬಂಧ ಇತ್ತು...
ಒಂದು ವಿಷಯ ಗಮನಿಸ ಬೇಕು...
ತೆಲುಗಿನವರು ನಮಗೆ ಹೊರಗಿನವರೆಂದು ಅನಿಸುವದಿಲ್ಲ...
ಇದು ಯಾಕೆ...?

ತೆಲುಗಿನವರು ತಮ್ಮ ಮನೆಯಲ್ಲಿ ತಮ್ಮ ಭಾಷೆ..
ಹೊರಗಡೆ ವ್ಯವಾಹಾರಕ್ಕೆ ಕನ್ನಡ ಬಳಸುತ್ತಾರೆ
ಇದು ಕಾರಣವಿರ ಬಹುದಾ...?

ಬ್ಲಾಗಿನ ಲೇಖನಗಳ ಪುಸ್ತಕ ಮಾಡುವ ಕೆಲಸ...
ಸ್ವಲ್ಪ ವ್ಯವಹಾರದ ಕೆಲಸ
ಹಾಗಾಗಿ ಪ್ರತಿಕ್ರಿಯೆಗೆ ಉತ್ತರ ಬರೆಯುವಲ್ಲಿ ಸ್ವಲ್ಪ ತಡವಾಗುತ್ತಿದೆ...

ಬೇಸರವಿಲ್ಲ ತಾನೆ....?

ಉಮೇಶ್‍ಜಿ ಧನ್ಯವಾದಗಳು...

Ittigecement said...

ರೂಪಾರವರೆ....

ವಂದನೆಗಳು....

ಮುಗುಳು ನಗು ಹೆಸರು ಚೆನ್ನಾಗಿದೆ...
ಈಗ ಸುಮಾರು ಹತ್ತು ಹೆಸರುಗಳು
ಚೆನ್ನಾಗಿರುವವು ಬಂದಿವೆ...

ಪ್ರತಿಕ್ರಿಯೆ ಕಂಡು ಖುಷಿಯಾಗುತ್ತಿದೆ...

ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ....

Ravi Hegde said...

ಪ್ರಕಾಶ್ ಸರ್,
ಒಳ್ಳೆ ಕಲೆ ನಿಮ್ಮ ನಾಗುವಿನದು,ಮುಖ ನೋಡಿ ಅಥವಾ ಹಾವ ಭಾವ ನೋಡಿ ಹೇಳುವಂಥದ್ದು :೦
ಲೇಖನವನ್ನ ಚೆನ್ನಾಗಿ ಪ್ರಸ್ತುತ ಪಡಿಸಿದ್ದೀರಿ.
ಒಮ್ಮೆ ನಮಗೂ ಭೇಟಿ ಮಾಡಿಸಿ.

ರವಿ

Shweta said...

ಪ್ರಕಾಶಣ್ಣ ,
ನಾಗುವಿನ ಸ್ಟಾಕ್ ನಿಂದ ಇನ್ನು ಏನೇನು ಇದೆ?
'sence of humor ' ನಾಗುವಿನಲ್ಲಿ ಮಾತ್ರ ಇದೆಯ ಅನ್ನುವ ಯೋಚನೆಯೊಂದು ನಿಮ್ಮ ಲೇಖನ ಓದುತ್ತ ಅನ್ನಿಸತೊಡಗಿದೆ..
ನಿಮ್ಮ ಈ ಲೇಖನ ಓದಿದಾಗ ಈ ರೀತಿ ಅನ್ನಿಸಿತು....ಪ್ರತಿಯೊಬ್ಬರಲ್ಲೂ,ಪ್ರತಿಯೊಂದರಲ್ಲೂ ವಿಶೇಷತೆ ಇದೆ ,ಹುಡುಕುವ ಕಲೆ ಮಾತ್ರ ನಮಗೆ ತಿಳಿದಿರಬೇಕು ಅಲ್ಲವೇ?
ಜೊತೆಗೆ ,ಬದುಕು ಎಲ್ಲವನ್ನು ಕಲಿಸುತ್ತದೆ ....

ಧನ್ಯವಾದಗಳೊಂದಿಗೆ ,
ಶ್ವೇತಾ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ ಒಳ್ಳೆಯ ಬರಹ,
ಪುಸ್ತಕದ ಕೆಲಸ ಎಲ್ಲಿಗೆ ಬಂತು

ರಾಜೀವ said...

ಪ್ರಕಾಶ್ ಸರ್,

ನಿಂತ ನೀರಂತೆ ಇರಬಾರದೆಂದು ನಾನೂ ಒಪ್ಪುತ್ತೇನೆ. ನಾಗುವಿನ ಸಮಯಪ್ರಜ್ಞೆಗೆ ಹಾಟ್ಸ್ ಆಪ್. ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದ.

ಆದರೆ ಹೊರಗಿನಿಂದ ಬಂದವರೇ ಹೆಚ್ಚು ಯೆಶಸ್ವಿ ಆಗುತ್ತಾರೆ. ಮೂಲ ನಿವಾಸಿಗರು ಸ್ಪರ್ಧೆಯಲ್ಲಿ ಹಿಂದೆ ಉಳಿಯುತ್ತಾರೆ ಎಂಬುದು ಸೇರಿಯೇ? ಅಮೆರಿಕ ಅಮೆರಿಕ ಚಿತ್ರದಲ್ಲಿ ಸೂರ್ಯ (ರಮೇಶ್) ಹೇಳುವ ಮಾತು ನೆನಪಾಗತ್ತೆ. ಮನುಷ್ಯ ರೆಕ್ಕೆ ಬಿಚ್ಚಿ ಹಾರುವುದಕ್ಕಿಂತ ಆಳವಾಗಿ ಬೇರು ಬೆಳಸಿ ನಿಲ್ಲುವುದು ಮುಖ್ಯ ಎಂದು.

ಹೊರಗಿನಿಂದ ಬಂದು ಅಪ್ಪನ ಆಸ್ತಿ ತಂದು, ಯಾವ ಸ್ವಂತ ಧ್ಯೇಯೆಗಲಿಲ್ಲದೆ ಬದುಕಿತ್ತಿರುವವರು ಹಲವಾರು. ಸ್ವಂತ ಜಾಗದಲ್ಲೇ ನಿಂತು ಯಶಸ್ವಿಯಾಗಿರುವವರು ಕೂಡ ಹಲವಾರು. ಯೇತ್ತನಿಂದೆತ್ತ ಸಂಬಂಧವಯ್ಯಾ.

Ittigecement said...

ಪರಾಂಜಪೆಯವರೆ....

ಭಾರತೀಯರು ಸಾಫ್ಟ್‍ವೇರ್‍ನಲ್ಲಿ ಮುಂದಿದ್ದಾರೆಂದು ಅಮೇರಿಕನ್ನರಿಗೂ ಹೊಟ್ಟೆಕಿಚ್ಚಂತೆ...

ಸರ್.. ಪುಸ್ತಕದ ಬಗೆಗೆ ನಿಮ್ಮ ಸಲಹೆ ಬಗೆಗೆ ನಾಗುವಿಗೆ ಹೇಳಿದೆ..
ಆತ ತಮಾಶೆಯಾಗಿ ನಕ್ಕ...
"ನಮ್ಮ ಕರ್ಮ, ಕೆಲಸಗಳಿಗೆ
ಹೆಚ್ಚಾಗಿ ಬೇರೆಯವರೆ, (ಸಮಾಜ) ಹೆಸರಿಡುತ್ತದೆ...
ಪುಸ್ತಕ ನೀನು ಮಾಡುವ ಕಾರ್ಯ...
ಅದಕ್ಕೆ ಓದುಗರು ಹೆಸರಿಡ ಬಹುದು...."

ಪರಾಂಜಪೆಯವರೆ ನಾಗು ತಮಾಶೆ ನಿಮಗೆ ಗೊತ್ತಲ್ಲ...!
ಬರೆಯುವದಕ್ಕಿಂತ ಬಹಳ ಕಷ್ಟ ಈ ಹೆಸರು ಹುಡುಕುವದು...
"ನಕ್ಕುಬಿಡಿ ಒಮ್ಮೆ" ಹೇಗಿದೆ...?

Ittigecement said...

ಸತ್ಯನಾರಾಯಣ ಸರ್....

ಈ ಮೂಲನಿವಾಸಿಗಳ ಬಗೆಗೆ ಸಂಬಂಧ ಪಟ್ಟ ಇನ್ನೊಂದು ವಿಷಯ ಬರೆಯುವದಿದೆ...
ಆಗ ಮೂಲವ್ಯಾಧಿಅಯ ಬಗೆಗೆ ಬರೆಯುವೆ....

ನಮ್ಮ ನಾಗುವಿನ ಆರೋಗ್ಯ ಅಷ್ಟು ಚೆನ್ನಾಗಿಲ್ಲ...
(ಬ್ಲಾಗ್‍ನಲ್ಲಿ ಬರೆಯುವಂಥಹ ವಿಷಯ)

" ಏನೇ ಇದ್ದರೂ, ಹೇಗೇ ಇದ್ದರೂ.. ನಮ್ಮ
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾಗು ಖಂಡಿತ ಬರುತ್ತಾನೆ"

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಮಹೇಶ್....

ಕೇರಳದ ಕಥೆ ಗೊತ್ತಿರಲಿಲ್ಲ...
ಆದರೆ ಗಲ್ಫಿನಲ್ಲಿ ಅವರು ಭಯಂಕರ ಕೆಲಸ ಮಾಡುವದನ್ನು ನೋಡಿದ್ದೇನೆ...
ಗಲ್ಫಿನಲ್ಲಿ ಬಹಳ "ಜೋಗುಭದ್ರ" ಇದ್ದಾರೆ...

ಗಂಜಿಯಲ್ಲಿ ಬಿದ್ದ ನೊಣಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...
This comment has been removed by the author.
Ittigecement said...

ಸುನಾಥ ಸರ್....

"ಮೂಲನಿವಾಸಿಗಳೆಂದರೆ ಗಂಡಂದಿರುಗಳ ಹಾಗೆ
ಆಫೀಸ್‍ನಲ್ಲಿ ಕೆಲಸ ಮಾಡ್ತಾರೆ...
ಮನೆಯಲ್ಲಿ ಮಾಡೋದಿಲ್ಲ..."
ಇದು ನನ್ನ ಸ್ನೇಹಿತೆಯೊಬ್ಬಳ ಹೇಳಿಕೆ...

ಹ್ಹಾ...ಹ್ಹಾ... ಹೇಗಿದೆ...?

ಮಹೇಶ್ ಹೇಳಿದಹಾಗೆ ಮೂಲನಿವಾಸಿಗಳು ಮನೆಯಲ್ಲಿ ಕೆಲಸ ಮಾಡೋದಿಲ...
ಹೊರಗಡೆ ಬಂದಾಗ ಕೆಲಸ ಮಾಡುತ್ತಾರೆ..

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಶಿವು ಸರ್....

ಹೋದ ಕೆಲಸ ಆಗದೇ ಇದ್ರೂ...
ನಿಜಕ್ಕೂ ನಮ್ಮ ಟ್ರಿಪ್ ಮಸ್ತ್ ಇತ್ತು..

ಮೂಲನಿವಾಸಿಗಳೆಂದರೆ.. ಮೂಲವ್ಯಾಧಿಗಳೆ..
ನಿಮಗೆ ಬಹುಮಾನ ಬಂದು ಬಿಟ್ಟಿದೆಯೆಂಬ ಹೊಟ್ಟೆ ಕಿಚ್ಚು...
ಎರ್ಡುತಿಂಗಳು ಮೊದಲೇ ಆರ್ಡರ್ ಕೊಟ್ಟರೂ ಬ್ಯಾಗ್ ರೆಡಿ ಮಾಡದ ಪುಣ್ಯಾತ್ಮ...
ಊಟದ ಸಮಯದಲ್ಲಿ "ಟೀ ಕುಡಿಯಲು " ಕರೆಯುವ ಮಹಾನುಭಾವ...!

ನಾವು ಅವರ ಊರಿಗೆ ಹೋದಾಗ ಕಣ್ಣಿಗೆ ಕಾಣಿಸಿಕೊಳ್ಳದೆ..
"ಇನ್ನೊಮ್ಮೆ ಬಂದಾಗ ನಮ್ಮನೆಗೆ ಬನ್ನಿ"
ಹೇಳುವ ಮಹರಾಯನ ಬಗೆಗೆ ಬರೆದಿಲ್ಲ...
ಲೇಖನ ಉದ್ದವಾಗಿದೆಯೆಂದು....

ಒಳ್ಳೆಯ ಕಂಪನಿ ಕೊಟ್ಟ ನಿಮಗೆಲ್ಲ ವಂದನೆಗಳು...

Ittigecement said...

ಬಾಲು ಸರ್...

ನಾನು ಮುಂಬೈಯಲ್ಲಿ ಕೆಲಸ ಮಾಡುವಾಗ ನನಗೆ ಇಂಥಹ ಅನುಭವಗ ಆಗಿದೆ...
ಪನ್‍ವೇಲ್ ಸೆಕ್ಟರ್ ಸೆವೆನ್‍ನಲ್ಲಿ ನಮ್ಮ ಕೆಲಸ...
ನಮ್ಮ ಸಂಗಡ ಒಬ್ಬ ಮಹರಾಷ್ಟ್ರದವ ಇದ್ದ...

ಆತನಿಗೆ ಪನ್‍ವೇಲ್‍ನಲ್ಲಿಯೇ ಮನೆ ಬೇಕೆಂದು ಹಠಹಿಡಿದಿದ್ದ...
ಎಲ್ಲಿಯವರೆಗೆ ಜಗಳ ಮಾಡಿದ ಎಂದರೆ ತನಗೆ ನೌಕರಿಯೇ ಬೇಡ ಎಂದು ಬಿಟ್ಟು ಹೋದ...

ಚಂದದ ಪ್ರತಿಕ್ರಿಯೆಗೆ ವಂದನೆಗಳು...

ಸುಮ said...

ನಿಮ್ಮ ಬರಹದಲ್ಲಿಯ ವಿಚಾರ ಸತ್ಯ. ಎಲ್ಲ ಊರುಗಳಲ್ಲಿ ಈ ಪಿಡುಗು ಇದೆ. ಮಲೆನಾಡಿನಲ್ಲಿ ಇದೇ ಸಮಸ್ಯೆಯ ಇನ್ನೊಂದು ಮುಖ ಕಾಣಬಹುದು. ಇಲ್ಲಿಯ ಹಳ್ಳಿಗಳನ್ನು ತೊರೆದು ಪಟ್ಟಣ ಸೇರಿ ಕಷ್ಟಪಟ್ಟು ನೆಲೆಕಂಡುಕೊಂಡ ಅನೇಕರ ಬಗ್ಗೆ ಇಲ್ಲಿಯ ನಿವಾಸಿಗಳಿಗೆ ಒಂದು ವಿಧದ ಮತ್ಸರ.ಪ್ರಪಂಚದ ಎಲ್ಲ ಕಷ್ಟಗಳನ್ನು ತಮಗೆ ಆರೋಪಿಸಿಕೊಳ್ಳುವ ಇವರಿಗೆ ವಲಸಿಗರು ಅನುಭವಿಸುವ ತೊಂದರೆಯ ಅರಿವಿರುವುದಿಲ್ಲ.ಬಾವಿಯೊಳಗಿನ ಕಪ್ಪೆಯಂತೆ ಹೆಚ್ಚಿನ ಮೂಲನಿವಾಸಿಗಳಿರುತ್ತಾರೆ.

ರೂಪಾ ಶ್ರೀ said...

ಪ್ರಕಾಶ್ ರವರೆ,
ನಾಗು ಅವರ ಸೂಕ್ಷ್ಮ ದೃಷ್ಟಿ ಇಷ್ಟ ಆಯಿತು.. ನಾವು ಹುಡುಗಿಯರೂ ಈ ಮೂಲನಿವಾಸಿಗಳ ಮನೋಭಾವದವರೇ.. ತವರಿನಲ್ಲಿ ಗಂಜಿಯಲ್ಲಿ ಬಿದ್ದ ನೊಣದ ಥರ comfort zone ಅಲ್ಲಿ ಬದುಕುತ್ತೇವೆ .. ಆದರೆ ಮದುವೆಯಾದೊಡನೆ ನಮ್ಮ survivalಗಾಗಿ ಬದುಕುತ್ತೇವೆ.. ಸಾಧ್ಯವಾಗದಿದ್ದಲ್ಲಿ ಇನ್ನೊದು comfort zone ಅಥವಾ ಗಂಜಿ ಬಟ್ಟಲನ್ನು ಸೃಷ್ಟಿಸಿಕೊಳ್ಳುತ್ತೇವೆ..
ಈ ರೀತಿಯ ಜೋಗುಭದ್ರರು ಎಲ್ಲ ಕಡೆಯೂ ಸಿಗುತ್ತಾರೆ.. ಕೆಲವೊಮ್ಮೆ ನಾವೂ ಹಾಗೇ ಆಗುತ್ತೇವೆ.. ಹೊರಗಿನವರು ನಮ್ಮಲ್ಲಿ ಸೃಷ್ಟಿಸುವ insecurity ಇಂದ ನಾವು ಹಾಗೆ ಆಗುತ್ತೇವೆ..
ನನ್ನದೊಂದು ಪುಟ್ಟ ಸಲಹೆ.. "ಕಣ್ಣಿನಾಚೆ"

PrashanthKannadaBlog said...

ಅದ್ಭುತವಾದ ಬರವಣಿಗೆ. ಮನಸ್ಸಿಗೆ ತುಂಬಾ ಹಿಡಿಸಿತು. ಧನ್ಯವಾದಗಳು.

nenapina sanchy inda said...

Dear mr. Hegde
It is intersting to study people and places.
fine write up
my best to ur book
:-)
malathi S

Ittigecement said...

ಚಿತ್ರಾ....

ಇಂದು ಹಿರಿಯ ಪರಿಸರವಾದಿಗಳೊಬ್ಬರ ಸಂಗಡ ಮಾತಾಡುತ್ತಿದ್ದೆ...
ಸ್ಥಳಿಯರಿಗೆ ಯಾವಾಗಲೂ ಹೊರಗಿನಿಂದ ಬಂದವರನ್ನು ದೂರುವದೇ ಕೆಲಸ...
"ನೋಡಿ ಪಾನಿ ಪೂರಿ ಅಂಗಡಿ ಇಟ್ಟುಕೊಂಡು
ಎರಡು ಸೈಟು, ಮನೆಮಾಡಿಕೊಂಡಿದ್ದಾರೆ..."

ಇವರಿಗೆ ಆಸ್ಥಿ ಮಾಡಿಕೊಳ್ಳಲಿಕ್ಕೆ ಯಾರು ಬೇಡವೆಂದಿದ್ದಾರೆ...?
ಸ್ಪರ್ಧೆಯಲ್ಲಿ ಇರಲಾಗದೆ...
ಛಲ, ಸ್ಥೈರ್ಯ ಕಳೆದು ಕೊಂಡಿರುತ್ತಾರೆ...

ಇದು ಶೋಚನೀಯವೂ ಹೌದು...
ಇದರ ಬಗೆಗೆ ಇನ್ನೊಮ್ಮೆ ಮಾತಾಡೋಣ....

ನೊಣ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ವಿನೂತಾರವರೆ.....

ಬಹಳ ದಿನಗಳಿಂದ ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ...
ಕ್ಷಮಿಸಿ...

ಮೂಲನಿವಾಸಿಗಳ ಮೂಲಸಮಸ್ಯೆಗಳು ಹಲವಾರು...
ತನ್ನ ತನವನ್ನು ಕಳೆದು ಕೊಳ್ಳುವ ಭೀತಿ..
ವಲಸಿಗರಿಂದ ಲಾಭವೂ ಇದೆ....
ಹಾಗೆಯೇ ನಷ್ಟವೂ... ಸಹ ಹೇರಳವಾಗಿದೆ....

ಈ ಮೂಲವ್ಯಾಧಿ ಸಮಸ್ಯೆಗೆ ಪರಿಹಾರವೇನು...?

ಪ್ರತಿಕ್ರಿಯೆಗೆ ವಂದನೆಗಳು...

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ...

ನಾನ೦ತೂ ನಿಮ್ಮ ಬರಹಗಳಲ್ಲಿ ನಾಗು ವಿಷಯ ಓದಿ ಓದಿ ಅವರ ಫ್ಯಾನ್ ಆಗಿ ಬಿಟ್ಟಿದೀನಿ.... :)

ಮೂಲ ನಿವಾಸಿಗಳ ಲಾಜಿಕ್ ತು೦ಬಾ ಇಷ್ಟವಾಯಿತು....

ನನಗೊ೦ದು ಹೆಸರು ಹೊಳೆಯಿತು ನಿಮ್ಮ ಪುಸ್ತಕಕ್ಕೆ.... ಮೇಲ್ ಮಾಡಿದೀನಿ.... ನೋಡಿ...

Veena DhanuGowda said...

Hello sir,

Nivu,nimma Nagu olle jodi....!
nimibara bage thilidukoluvude chanda
adara jothe haasya lepana thumbba chennagi bandide
bariyuthiri namanu hige ranjisuthiri

Inthi
Ranjitha Veena

Ittigecement said...

ಹರಿಹರದ ....
ಡಾ. ಶ್ರೀನಿವಾಸ್ ರಾವ್‍ರವರು
ಕನ್ನಡ ಬ್ಲಾಗರ್ಸ್‍ನಲ್ಲಿ ಕೊಟ್ಟ ಪ್ರತಿಕ್ರಿಯೆ ಹೀಗಿದೆ...


Comment by ...
Dr.Harihara Sreenivasa Rao

ನಿಮ್ಮಅನಿಸಿಕೆ ಸರಿಯಾಗಿದೆ.
ಜೋ ಭದ್ರತೆ ಮನುಷ್ಯನ ಸಹಜ ತಾಮಸಿಕ ಗುಣ.
ನಮ್ಮಲ್ಲಿಏಇದರ ನೆಲೆ.
ಅದಕ್ಕೇ ನಮ್ಮ ಮನೆ ಅಥವಾ ಪಕ್ಕದವರ ಹತ್ತಿರ ಎಷ್ಟೇ ಒಳ್ಳೆಯ ದಿದ್ದರೂ ಗುರುತಿಸುವುದಿಲ್ಲ.
ಆದರೂ....
ನಿಮ್ಮತರಹವರೂ ನನ್ನತರಹವರೂ,
ಮಲ್ಲಿಕಾರ್ಜುನರಂಥವರೂ ಹೀಗೆ
ಬದುಕಿದ್ದೀವಲ್ಲ?
ಇದು ಆಶ್ಚರ್ಯ ಆದರೂ ನಿಜ.
ಇದು ಬರೀ ಇಟ್ಟಿಗೆ ಸಿಮೆಂಟುಗಳ ಕೆಮಿಕಲ್ ರಿಯಾಕ್ಷ್ನ್ ಅಲ್ಲ;
ಹಿಡನ್ ಡಿಸ್ಕ್ ನ relation.
ನಿಮ್ಮ ಬರಹಗಳು ಹೃದಯ ಸ್ಪರ್ಶಿಯಾಗಿರುತ್ತವೆ.
Down to earth.ಇದಕ್ಕಾಗಿ
ಧನ್ಯ ವಾದಗಳು.
ಒಮ್ಮೆ ಕಲೆಯುವಾ. ಸಂದರ್ಭ ಸೃಷ್ಟಿಸಿ. ಇಂತೀ

Umesh Balikai said...
This comment has been removed by the author.
Umesh Balikai said...

ಪ್ರಕಾಶ್ ಸರ್,

ಎಲ್ಲೋ ಓದಿದ ನೆನಪು - 'ಮನುಷ್ಯ ಯಾವಾಗ ತನ್ನ ಸುತ್ತಲೂ ಒಂದು ಕಂಫರ್ಟ್ ಝೋನ್ ಸೃಷ್ಟಿಸಿಕೊಳ್ತಾನೋ ಅವತ್ತೇ ಅವನ ಕ್ರಿಯಾಶೀಲತೆಯ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತೆ' ಅಂತ. ನಿಮ್ಮ ಲೇಖನ ಓದಿದ ಮೇಲೆ ಅದು ನೂರಕ್ಕೆ ನೂರರಷ್ಟು ಸತ್ಯ ಅನ್ನಿಸ್ತು. ಮನುಷ್ಯನಿಗೆ ಕಷ್ಟಪಟ್ಟು ಬದುಕುವ ಹರಕತ್ತು ಇಲ್ಲ ಅನಿಸಿಬಿಟ್ಟರೆ ಅದೇ ಈ ಥರದ 'ಗಂಜಿಯಲ್ಲಿ ಬಿದ್ದ ನೊಣಗಳ' ಸೃಷ್ಟಿಯ ನಾಂದಿ ಅಲ್ಲವೇ. ನಿಮ್ಮ ಲೇಖನಗಳಲ್ಲಿ ಜೀವನದ ಪಾಠಗಳೂ ಅಡಗಿರ್ತವೆ. ಚಂದದ ಬರಹಕ್ಕೆ ಅಭಿನಂದನೆಗಳು ಮತ್ತು ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.

-ಉಮೇಶ್

Unknown said...

hiiii prakashanna,
sakathagiddu.. :).

ಸೀತಾರಾಮ. ಕೆ. / SITARAM.K said...

It is the true logic& nice article