Sunday, July 26, 2009

ಹಕ್ಕಿ... ಹಕ್ಕಿ..! ಬಣ್ಣದ ಹಕ್ಕಿ...!

ನಾನು..ತಾಯಿ...

ನನ್ನ.. ಮಗು ಇದು...

ಈ ಪುಟ್ಟ ಮರಿಗೆ.. ನಾನು ಹೊಟ್ಟೆ ತುಂಬಿಸ ಬೇಕು.....

ಗೂಡು ಕಟ್ಟಿ ಸಂಸಾರ ಮಾಡಬೇಕು...

ಪುಟ್ಟ ಹಕ್ಕಿಗಳಿಗೆ ಹೇಗೆ ತಿಳಿಯುತ್ತದೆ...??





ಬಣ್ಣ ಬಣ್ಣದ ಹಕ್ಕಿಗಳು....
ಜಾತಿಗಳು ಬೇರೆ.. ಬೇರೆ...!
ಬದುಕಲಿಕ್ಕೆ ಏನೂ ತೊಂದರೆ ಇಲ್ಲವಲ್ಲ.....!!



ನಾನೂ, ನೀನು ಜೋಡಿ...

ಜೀವನ ಎತ್ತಿನ ಗಾಡಿ...

ಗೂಡು ಕಟ್ಟುವದು ಗಂಡು ಹಕ್ಕಿ,..
ಪುಟ್ಟ ಮರಿಗೆ ಹೊಟ್ಟೆ ತುಂಬಿಸಿ..
ಹಾರುವದನ್ನು ಕಲಿಸುವದು ತಾಯಿ ಹಕ್ಕಿ....
ಪುಟ್ಟ ಹಕ್ಕಿಗಳಿಗೆ ಇದೆಲ್ಲ... ಹೇಗೆ ಗೊತ್ತಾಗುತ್ತದೆ...??



"ಹೇಗಿದೆ ಜೀವನಾ... ? ಮಳೆ ಬೆಳೆ ಎಲ್ಲಾ ಹೇಗೆ...?"

ಪಕ್ಷಿಗಳು
ಮಾತಾಡುತ್ತಾವಾ...?
ಸ್ಪಂದಿಸುತ್ತಾವಾ...?
ಅವುಗಳಿಗೊಂದು ಭಾಷೆ ಇದೆಯಾ...?



ಒಂದೊಂದು ಹಕ್ಕಿಗೂ..
ಒಂದೊಂದು ಬಣ್ಣ..
ಇದು ಸ್ರಷ್ಟಿಯ ವೈಚಿತ್ರ್ಯ ಕಣಣ್ಣಾ...


ಕಾಡಿನ ನಾಶ..!
ವಾತಾವರಣ ಮಾಲಿನ್ಯ...!
ಮೂಕ
ಹಕ್ಕಿಯ ರೋದನ.. ಕೇಳುವರಾರು...?




ಹಸಿರೆಲೆ ನಡುವೆ ಹಾಯಾಗಿರುವ...
ನನ್ನ ಪ್ರಪಂಚಕ್ಕೂ ಬಂದಿದೆ ಕುತ್ತು....!


ನಾನು ಪಕ್ಷಿ ರಾಜ...
ನನ್ನ
ಚಂದವೇ ನನಗೆ ವೈರಿ....!




ನನ್ನ ರೆಕ್ಕೆ, ಪುಕ್ಕ ಹೇಗಿದೆ...?



ಕಪ್ಪಿದ್ದರೇನು...?
ಚಂದವೇ ಅಲ್ಲವೇ...?




ಬಾ ಕಟ್ಟೋಣ ಪುಟ್ಟ ಮನೆಯೊಂದನು... .......
ಕೆಟ್ಟ ..ಮಾನವನ ಕಣ್ಣು ಬೇಳದೆಡೆ....



ನನ್ನ ಚಂದಕೆ ಸಾಟಿಯಾರು...?





ಕ್ರೂರತೆಯೂ ಅಂದ...
ಕ್ರೌರ್ಯವೂ..
ಚಂದ... ! ಚಂದ...!




ನಾನು ಹೀಗಿದ್ದರೆನೆ ಚಂದ.....!

ಎಲ್ಲಿ ನನ್ನ ಆಹಾರ....??



ತಲೆಗೊಂದು ಜುಟ್ಟು...
ಇದೆ
ನನ್ನ ಅಂದದ ಗುಟ್ಟು....!



ಸದ್ದಿರದ ಪಸಿರುಡೆಯ..
ಮಲೆನಾಡ
ಬನಗಳಲಿ..........
ಮೊರೆವ ತೊರೆಯೆಡೆಯಲ್ಲಿ... ಗುಡಿಸಲೊಂದಿರಲಿ...




ಕಾಡೆಲ್ಲ ಅಳಿದ ಮೇಲೆ....
ಎಲ್ಲಿದೆ ನನ್ನ ನೆಲೆ...??



ನಮ್ಮ ಪುಟ್ಟ ಸಂಸಾರದ...
ಮೇಲೆ ನಿನಗೇಕೋ... ಕೆಟ್ಟ ..ಕಣ್ಣು.. ??




ನೀಲಿ ಆಗಸದಲ್ಲಿ ... ಸ್ವಚ್ಚಂದವಾಗಿ...

ಹಾಯಾಗಿ ಹಾರಾಡಲು ಬಿಡ ಬಾರದೆ...?



ಬಿಳಿಯ..
ಕರಿಯ...
ಭೇದ ಭಾವ ನಮ್ಮಲ್ಲಿಲ್ಲವೋ...!

ಪ್ರೀತಿಯಿಂದ ಬದುಕುವ ರೀತಿ, ನೀತಿ..ತಿಳಿಯೋ... !


(ನನ್ನ ಬ್ಲಾಗ್ ಫಾಲೋ ಮಾಡುವ ಕೆಲವು ಬ್ಲಾಗುಗಳ ಲಿಂಕ್ ಸಿಗುತ್ತಿಲ್ಲ...
ಇನ್ನು ಕೆಲವು ಸ್ನೇಹಿತರ ಈಮೇಲ್ ಕೂಡ ಸಿಗುತ್ತಿಲ್ಲ...
ದಯವಿಟ್ಟು...
ತಮ್ಮ ಬ್ಲಾಗ್ ಲಿಂಕ್ ನೊಂದಿಗೆ ನನಗೆ ಈಮೇಲ್ ಮಾಡುವಿರಾ...?
ನನ್ನ ಈ ಮೇಲ್..
kash531@gmail.com) )

ಇಲ್ಲಿ ನೋಡಿ..
ಛಾಯಾ ಚಿತ್ತಾರಾ...
(ನನ್ನ ಪ್ರೊಫೈಲ್)

52 comments:

nenapina sanchy inda said...

:-)
tumbaaa chennagive !!!
malathi S

ಜಲನಯನ said...

ಪ್ರಕಾಶ್, ಇದೇನಪ್ಪ ಶಿವು ಮಲ್ಲಿಕಾರ್ಜುನ್ ಮತ್ತು ಇನ್ನೂ ಹಲವು ಚಿತ್ರಗ್ರಾಹಕ ಮಿತ್ರರ ಗಾಲಿ ನಿಮಗೂ ಬಡಿತಾ..ಅಂತ..? ಒಳ್ಲೆಯ ಸಂಗ್ರಹ, ತಕ್ಕ ಶೀರ್ಷಿಕೆ, ನಿಮ್ಮ ಪೋಸ್ಟ್ ಗಳಲ್ಲಿ ವೈವಿಧ್ಯತೆ ಮೂಡಿದೆ. ಸಿಮೆಂಟು, ಇಟ್ಟಿಗೆ, ಇವುಗಳ ಜೊತೆಗೆ ಮರಳು, ನೀರು, ಬಣ್ಣ, ...ವ್ಹಾವ್...Allround effort...keep itup.

Ittigecement said...

ಮಾಲತಿಯವರೆ....

ಎಲ್ಲೆಲ್ಲೂ ನೀರಿಗೆ ಹಾಹಾಕಾರವಿದೆ...
ಮೂಕ ಪಕ್ಷಿಗಳು ಎಷ್ಟು ಕಷ್ಟ ಪಡ ಬಹುದು...
ಪಟ್ಟಣದಲ್ಲಿ ಕೆಟ್ಟ ನೀರು, ವಾತಾವರಣ..
ಮೂಕ ಪಕ್ಷಿ...
ಜೀವಸಂಕುಲಕ್ಕೆ ಭವಿಷ್ಯ ಭಯಾನಕವಿದೆ..
ಅಲ್ಲವಾ..?

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಆಝಾದ್ ಸರ್.. (ಜಲನಯನ)

ಇವುಗಳಲ್ಲಿ ಹೆಚ್ಚಿನವು ನನ್ನ ಮಗ ಆಶೀಷ್ ತೆಗೆದದ್ದು..
ಶಿವು, ಮಲ್ಲಿಕಾರ್ಜುನ್, ಪಾಲಚಂದ್ರ, ಅಗ್ನಿ..
ಇನ್ನೂ ಮುಂತಾದವರ ಬ್ಲಾಗ್ ನೋಡಿ ಉತ್ತೇಜಿತನಾಗಿ...
ತನ್ನ ಭ್ಯಾಸದ ಜೊತೆ...
ಈ ಪ್ರಯತ್ನದಲ್ಲೂ ತೊಡಗಿದ್ದಾನೆ...

ಕ್ಯಾಮರಾದಿಂದ ಈ ಹಕ್ಕಿಗಳನ್ನು ನೋಡುವಾಗ...
ನನಗೆ ಕಾಣಿಸುವದು ಅವುಗಳ ಮುಗ್ಧತೆ...
ತನ್ನ ಸಂಸಾರದ ಅವುಗಳಿರುವ ಬದ್ಧತೆ...
ಗೂಡು ಕಟ್ಟುವ ಅವುಗಳ ಸಿದ್ಧತೆ...

ನೂರಾರು ಮೈಲು ಹಾರಾಡಿ ಮರಳಿ ತನ್ನ ಗೂಡಿಗೆ ತಿರುಗಿ ಬರುವ
ಅವುಗಳ ತಿಳುವಳಿಕೆ...!

ಏನಿದರ ಗುಟ್ಟು..?

ಪ್ರತಿಕ್ರಿಯೆಗೆ ಧನ್ಯವಾದಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಆಶೀಷನಿಗೆ ಅಭಿನಂದನೆಗಳನ್ನು ತಿಳಿಸಿ. ಚಿತ್ರಗಳನ್ನು ಚೆನ್ನಾಗಿ ತೆಗೆದಿದ್ದಾನೆ. ನಿಮ್ಮ ಆಡು ಮಾತಿನಲ್ಲಿ ಈ ಹಕ್ಕಿಗಳ ಹೆಸರುಗಳನ್ನು ಕೊಟ್ಟಿದ್ದರೆ ಚೆನ್ನಿತ್ತು. ಹಕ್ಕಿಗಳಷ್ಟೇ ಮುದ್ದಾದ ಪದಪುಂಜಗಳನ್ನು ಜೋಡಿಸಿಟ್ಟಿದ್ದೀರ. ನಿಮ್ಮ ತಂದೆ ಮಕ್ಕಳ ಜೋಡಿಯಂತೆ ಫೋಟೋ ಮತ್ತು ವಿವರಣೆ ಸಮತೂಕವಾಗಿದೆ.
ಎರಡನೆ ಚಿತ್ರ: ಮುನಿಯ ಮತ್ತು ಬೀ ಈಟರ್
ಮೂರನೆ ಚಿತ್ರ: ಮುನಿಯ
ನಾಲ್ಕು, ಐದು, ಆರು : ಗ್ರೀನ್ ಬೀ ಈಟರ್
ಏಳು: ಗ್ರೀನ್ ಬಾರ್ಬೆಟ್
ಹತ್ತು: ಇಂಡಿಯನ್ ರಾಬಿನ್
ಹನ್ನೊಂದು,ಹನ್ನೆರಡು: Brahmini Myna
13 , 14 : Paraiah Kite
15 : Red wented Bulbul

Prabhuraj Moogi said...

ಬಹಳ ಚೆನ್ನಾಗಿವೆ ಬಣ್ಣ ಬಣ್ನದ ಹಕ್ಕಿಗಳು, ನಿಮ್ಮ ಮಗ ತೆದೆದದ್ದು ಅಂತ ಕೇಳಿ ಖುಶಿಯಾಯ್ತು, ಶಿವು ಸರ್ ಹತ್ರ ಟ್ರೇನಿಂಗ ಕಳಿಸಿಬಿಡಿ..
ಬಾ ಕಟ್ಟೋಣ ಪುಟ್ಟ ಮನೆಯೊಂದನು... .......
ಕೆಟ್ಟ ..ಮಾನವನ ಕಣ್ಣು ಬೇಳದೆಡೆ....
ಈ ಲೈನ್ ಬಹಳ ಹಿಡಿಸಿತು.

SSK said...

ಪ್ರಕಾಶ್ ಅವರೇ,
ತುಂಬಾ ಚೆನ್ನಾಗಿದೆ ನಿಮ್ಮ ಮತ್ತು ಮಗನ, ಹಕ್ಕಿಗಳ ಭಾವನೆಗಳನ್ನು ತಿಳಿಸುವ ಪ್ರಯತ್ನ!
ಸುಂದರವಾದ ಫೋಟೋಗಳೊಂದಿಗೆ, ಲೇಖನ ಮತ್ತು ವಿವರಣೆಗಳಿಗೆ ಧನ್ಯವಾದಗಳು!!
ಎಲ್ಲಾ ಹಕ್ಕಿಗಳ ಹೆಸರನ್ನು ಪರಿಚಯಿಸಿದ ಮಲ್ಲಿಕಾರ್ಜುನ್ ಅವರಿಗೂ ನನ್ನ ನಮನಗಳು!!!

NiTiN Muttige said...

bahala chennagide

ಸವಿಗನಸು said...

ಪ್ರಕಾಶಣ್ಣ,
ಎನು ಸಿಮೆಂಟು, ಮರಳು ಕಾಂಕ್ರೀಟ್ ಬಿಟ್ಟು ಪಕ್ಷಿಧಾಮಕ್ಕೆ ಕರೆದೊಯ್ದಿದೀರಾ..
ಸುಂದರ ರಮ್ಯ ಚಿತ್ರಗಳು....
ಆಶೀಷ್ ಗೆ ಧನ್ಯವಾದಗಳು..

Ittigecement said...

ಮಲ್ಲಿಕಾರ್ಜುನ್....

ನಿಮ್ಮ ಬ್ಲಾಗ್ ನೋಡಿ ಸ್ಪೂರ್ತಿ ಹೊಂದಿದ್ದಾನೆ ಆಶಿಷ್...
ನೀವು ಕೊಟ್ಟ ಹಲವಾರು ಟಿಪ್ಸಗಳು ಅವನಿಗೆ ಸಹಾಯಕವಗಿದೆ...
ಇಲ್ಲಿಯ ಹೆಚ್ಚಿನ ಫೋಟೊಗಳನ್ನು ಅವನೇ ಪಿಕಾಸದಲ್ಲಿ ಸಂಸ್ಕಾರಕೊಟ್ಟಿದ್ದಾನೆ...

ಹಕ್ಕಿಯ ಹೆಸರುಗಳನ್ನು ಹಾಕಿದರೆ ಲೇಖನದ ಮೂಲ ಭಾವ ಬರುವದಿಲ್ಲವೆಂದು ಹಾಕಲಿಲ್ಲ...
( ಇದೂ ಕೂಡ ನಿಜ..
ನನಗೆ ಹಕ್ಕಿಗಳ ಹೆಸರು ತಿಳಿಯದಾಗಿತ್ತು)

ಹಕ್ಕಿಗಳ ಹೆಸರು ತಿಳಿಸಿಕೊಟ್ಟಿದ್ದಕ್ಕಾಗಿ,
ಆಶೀಷನಿಗೆ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

Ittigecement said...

ಪ್ರಭು....

ನಿನ್ನೆ ವಸಂತರಪುರದ ಆಶ್ರಮಕ್ಕೆ ಹೋದಾಗ ಅಲ್ಲಿ..
ಆತನಿಗೆ ಸಿಕ್ಕ ಹಕ್ಕಿಗಳು ಇವು(ಪುಟ್ಟ ಹಕ್ಕಿಗಳು)
ಫೋಟೊತೆಗೆಯುವದರಲ್ಲಿ ಮುಳುಗಿ ಹೋಗಿದ್ದ....

ಶಿವು, ಮಲ್ಲಿಕಾರ್ಜುನ್ ಇಬ್ಬರೂ ಅವನಿಗೆ ಟಿಪ್ಸಕೊಡುತ್ತಾರೆ...

ಫೋಟೊ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಎಸ್ಸೆಸ್ಸ್ಕೆಯವರೆ....

ಈ ಹಕ್ಕಿಗಳು ಎಷ್ಟು ಸೋಜಿಗ ಅಲ್ಲವಾ...?

ನಮ್ಮನೆಯಲ್ಲಿ ಗುಬ್ಬಚ್ಚಿಯ ಗೂಡಿದೆ...
ಅವುಗಳಿಗೆ ಅಕ್ಕಿ ಹಾಕುತ್ತ ಅವುಗಳ ಸ್ನೇಹ ಪಡೆಯುವ ಪ್ರಯತ್ನ ನಡೆಯುತ್ತಿದೆ..
ತಾಯಿ ಗುಬ್ಬಚ್ಚಿ ತನ್ನ ಮರಿಗೆ ತಿಂಡಿತಿನ್ನಿಸುವ
ರೀತಿ ತುಂಬಾ ಸೊಗಸಾಗಿರುತ್ತದೆ...
ಆ ಪುಟ್ಟ ಮರಿ ಗುಬ್ಬಚ್ಚಿ ತನಗೆ ಬೇಡ ಅಂತ ಒಡಿ ಹೋಗುವದಿದೆಯಲ್ಲ...
ವಾಹ್..
ಆದರೂ ಮರಿಗುಬ್ಬಚ್ಚಿಗೆ ಅದು ತಿಂಡಿ ತಿನ್ನಿಸುತ್ತದೆ..
ಥೇಟ್ ಅಶಿಷ್ ಸಣ್ಣವನಿದ್ದಾಗ ಮಾಡುತ್ತಿದ್ದ ಅದೇ.. ಥರಹ!

ಆ ಪುಟ್ಟತಲೆಯಲ್ಲಿ ಈ ಭಾವ ಸಂಬಂಧಗಳು ಹೇಗೆ ಬಂದವು...?

ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...

ಗೋಪಾಲ್ ಮಾ ಕುಲಕರ್ಣಿ said...

ತುಂಬಾ ಚೆನ್ನಾಗಿದೆ ....

Unknown said...

ಸಾರ್ ಬಣ್ಣದ ಹಕ್ಕಿಗಳ ಚಿತ್ರ ನೋಡಿ ಖುಷಿಯಾಯಿತು. ಅವಕ್ಕೆ ನೀವು ನೀಡಿರುವ ಅಡಿಟಿಪ್ಪಣಿಗಳು ಮುದ ನೀಡಿದವು. ಅದರಲ್ಲಿ ಒಂದು ಕ್ರೂರತೆಯೂ ಅಂದ...
ಕ್ರೌರ್ಯವೂ.. ಚಂದ... ! ಚಂದ...!
ಇದನ್ನು ಓದಿ ನನಗೆ 'ರೌದ್ರಮು ರಸಮಲ್ತೆ' ಎಂಬ ಕವಿವಾಣಿ ನೆನಪಾಯಿತು.

AntharangadaMaathugalu said...

ಸಾರ್ ಚಿತ್ರಗಳು ತುಂಬಾ ಚೆನ್ನಾಗಿವೆ...

ಶ್ಯಾಮಲ

Sushrutha Dodderi said...

ಸಖ್-ಸಖತ್ ಫೋಟೋಸು ಪ್ರಕಾಶಣ್ಣ.. ಕ್ಯಾಪ್ಷನ್ಸೂ..

Unknown said...

sooooper pics!!!

sunaath said...

ಸುಂದರವಾದ ಹಕ್ಕಿಗಳನ್ನು ತೋರಿಸಿದ್ದೀರಿ. Thanx.

ಗೌತಮ್ said...

ಪ್ರಕಾಶ್ ಹೆಗ್ಡೆ ಸರ್ ....
ಫೋಟೋ ಗಳು ತುಂಬಾ ಚೆನ್ನಾಗಿವೆ.... ಆಶೀಷನಿಗೆ ಅಭಿನಂದನೆಗಳನ್ನು ತಿಳಿಸಿ

Santhosh Rao said...

ella photogalu super.. tumba chennagide..

ನಾಗೇಶ್ said...

ಎಲ್ಲಾ ಫೋಟೋಗಳು ತುಂಬಾ ಚೆನ್ನಾಗಿ ಇದೆ ಅಣ್ಣ, ಅಶೀಶ್ ನಿಂದ ಮತ್ಹೊಬ್ಬ ಟಿ.ಎಸ್ ಸತ್ಯನ್ ಬರಲಿ ಕನ್ನಡ ನಾಡಿಗೆ ............

Shweta said...

ಪ್ರಕಾಶಣ್ಣ,
ಕಾಕತಾಳಿಯ ವೆಂಬಂತೆ ನನ್ನ ಬ್ಲಾಗಿನಲ್ಲಿ ಹೊಸದೊಂದು ಲೇಖನ ಹಾಕಿ ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟರೆ ಅಲ್ಲಿಯೂ ಪಕ್ಷಿಗಳದೆ ಸಂಭ್ರಮ... ಕುಶಿ ಆಯಿತು ....ತುಂಬಾ ಚೆನ್ನಾಗಿದೆ.....
ನನ್ನ ಬ್ಲಾಗಿಗೊಮ್ಮೆ ಬನ್ನಿ ನಿಮಗೂ ಅಚ್ಚರಿ ಆದೀತು ....

ರಾಜೀವ said...

ಚಿತ್ರಗಳು ಸಕ್ಕತ್ತಾಗಿದೆ. ಎಲ್ಲಿ ತೆಗದಿದ್ದು?
'ಆಶೀಷ್'ಗೆ ಮತ್ತು ನಿಮಗೆ ದನ್ಯವಾದಗಳು.

ಪಾಚು-ಪ್ರಪಂಚ said...

ಹಾಯ್ ಪ್ರಕಾಶಣ್ಣ,

ತಂದೆಯಂತೆ ಮಗ. !! ಬಾಲಪ್ರತಿಭೆ ಆಶೀಷ್ ಗೆ ಪುಟ್ಟ ಅಭಿನಂದನೆ ..!!

ಬಣ್ಣದ ಹಕ್ಕಿಗಳ ಸುಂದರ ಚಿತ್ರಗಳು ಹಿಡಿಸಿದವು.

ಚಿತ್ರಾ said...

ಪ್ರಕಾಶಣ್ಣ,
ಹಕ್ಕಿಗಳ ಭಾಷೆ ಯಾವಾಗ ಕಲಿತಿದ್ದು? ತುಂಬಾ ಚೆನ್ನಾಗಿದೆ. ಪಕ್ಷಿ ಸಂಕುಲದ ವರ್ಣ ವೈವಿಧ್ಯ, ವೈಶಿಷ್ಟ್ಯಗಳನ್ನು ಗಮನಿಸುವುದೇ ಒಂದು ಸಂಭ್ರಮ ! ನಮ್ಮ ಕಿಟಕಿಯಾಚೆ ಪ್ರತಿ ಬೆಳಿಗ್ಗೆ ಮತ್ತು ಸಂಜೆ ಹಾರುವ ಗಿಳಿ ಮತ್ತು ಪಾರಿವಾಳಗಳ ಹಿಂಡನ್ನು ನೋಡುವುದು ನನ್ನ ಮೆಚ್ಚಿನ ಕೆಲಸ . ಒಳ್ಳೆಯ ಲೇಖನಕ್ಕೆ ಧನ್ಯವಾದಗಳು. ಹಾ, ಬಹುಶಃ ಇನ್ನು ಕೆಲವೇ ದಿನಗಳಲ್ಲಿ,ಆಶೀಷ್ ನದೇ ಒಂದು ಹೊಸ ಬ್ಲಾಗ್ ಶುರುವಾದರೆ ಆಶ್ಚರ್ಯವೇನಿಲ್ಲ ಎನಿಸುತ್ತಿದೆ !!!

Guruprasad said...

ಪ್ರಕಾಶ್..
ಹಕ್ಕಿಗಳ ಚಿತ್ರ ತುಂಬ ಚೆನ್ನಾಗಿ ಇದೆ.....ನಿಮ್ಮ ಬ್ಲಾಗ್ ಏನೋ ದಿಫ್ಫೆರೆಂತ್ ಆಗಿ ಮೂಡಿ ಬಂದಿದೆ ಇವೊತ್ತು...ತುಂಬ ಇಷ್ಟ ಆಯಿತು....ಎಲ್ಲ ಫೋಟೋಗಳನ್ನು ನೀವೇ ತೆಗೆದಿದ್ದ

Ittigecement said...

ನಿತಿನ್....

ನಾವಿಬ್ಬರೂ ಹೊರಗಡೆ ಫೋಟೊತೆಗೆಯಲು ಹೋದಾಗ..
ನಾನು ಫೋಟೊ ತೆಗೆದಿರುತ್ತೇನೆ.., ಆಶೀಷ್ ಕೂಡ ತೆಗೆದಿರುತ್ತಾನೆ...
ಅಲ್ಲಿ ಯಾವ ಫೋಟೊ ಯಾರು ತೆಗೆದದ್ದು ಅನ್ನುವ ಸಂದೇಹ..
ಅದಕ್ಕೆ ಈಗ ಆಶಿಷ್ ತಾನು ತೆಗೆದ ಫೋಟೊಗಳ ನಂಬರ್ ಬರೆದಿಟ್ಟು ಕೊಳ್ಳುತ್ತಾನೆ...

ಫೋಟೊಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..

Ittigecement said...

ಮಹೇಶ್...

ಚಟ ತುಂಬಾ ಕಷ್ಟ...
ಇದು ಇದ್ದರೆ ನಮ್ಮ ವ್ರತ್ತಿ ಕೆಲಸದಲ್ಲಿ
ಮತ್ತಷ್ಟು ಆಸಕ್ತಿ, ಉತ್ಸಾಹ ತರುತ್ತದೆ...

ನನಗಂತೂ ಖುಷಿಯಾಗುತ್ತಿದೆ...

ಫೋಟೊಗಳನ್ನು ಹೆಚ್ಚಿನವು ಆಶೀಷ್ ತೆಗೆದಿದ್ದು...

ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ಗೋಪಾಲ್ ಕುಲಕರ್ಣಿಯವರೆ...

ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ಸತ್ಯನಾರಾಯಣ ಸರ್....

ನನ್ನ ಬಳಿ ಒಂದು ಹುಲಿಯ ಚಿತ್ರವಿದೆ...
ಎಂಥಾ ಭಯಂಕರವಿದೆಯೆಂದರೆ
ಮೈ ಜುಮ್ ಎನ್ನುತ್ತದೆ...

ಅಲ್ಲೂ ಒಂದು ಚಂದವಿದೆ ಅಲ್ಲವಾ..?

ಜೋಗ್ ಫಾಲ್ಸ್ ನೋಡಿದರೆ (ಈಗ) ಹೆದರಿಕೆ ಆಗುತ್ತದೆ...
ಆ ರುದ್ರ ರಮಣೀಯತೆಯಲ್ಲೂ ಚಂದವಿದೆ...

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಅಂತರಂಗದ ಮಾತುಗಳು (ಶ್ಯಾಮಲಾ)

ನನ್ನ ಬ್ಲಾಗಿಗೆ ಸ್ವಾಗತ....
ದುರ್ಗಾಸ್ಥಮಾನ ಕಾದಂಬರಿಯ ಬಗೆಗೆ ನಿಮ್ಮ ಲೇಖನ ಇಷ್ಟವಾಯಿತು..
ನಿಮ್ಮ ಬರವಣಿಗೆ ಇಷ್ಟವಾಗುತ್ತದೆ...

ಫೋಟೊಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಕ್ಷಣ... ಚಿಂತನೆ... said...

ಪ್ರಕಾಶ್ ಸರ್‍,

ಆಶಿಷ್ ತೆಗೆದ ಈ ಹಕ್ಕಿಗಳ ಚಿತ್ರಗಳು ಮನಮೋಹಕವಾಗಿವೆ. ಇವನ್ನೆಲ್ಲ ಯಾವ ಯಾವ ಜಾಗಗಳಲ್ಲಿ ತೆಗೆದದ್ದು ಎಂದು ಸೇರಿಸಿದ್ದರೆ... ಅನುಕೂಲ ಮತ್ತು ಕುತೂಹಲ ಹೆಚ್ಚಾಗಿ ಇರುತ್ತಿತ್ತು. ಈಗಲೂ ಕುತೂಹಲವಿದೆ.

ಆಶಿಷನಿಗೆ ಅಭಿನಂದನೆಗಳು.

ಧನ್ಯವಾದಗಳು,

ಚಂದ್ರಶೇಖರ ಬಿ.ಎಚ್.

Ittigecement said...

ಸುಶ್ರುತ ದೊಡ್ಡೇರಿಯವರೆ...

ತುಂಬಾ.. ತುಂಬಾ ಥ್ಯಾಂಕ್ಸು...

ಬರುತ್ತಾ ಇರಿ...

Unknown said...

Prakash Anna,
Photography tumba chennagide.Ashish nige dhanyavadagalau. Adakke thakkante baraha kooda chennagide. nijakku ee pakshigala prapancha sundara.

shivu.k said...

ಪ್ರಕಾಶ್ ಸರ್,

ಹಕ್ಕಿಗಳ ಫೋಟೋಗಳು ಚೆನ್ನಾಗಿವೆ. ಅವುಗಳಿಗೆ ಕೊಟ್ಟ ವಿವರಗಳು ಕಾವ್ಯಾತ್ಮಕವಾಗಿವೆ.

ಆಶೀಷನ ಪ್ರಯತ್ನಕ್ಕೆ ನನ್ನ ಕಡೆಯಿಂದ ಅಭಿನಂದನೆಗಳು...
ಮತ್ತೆ ಮಲ್ಲಿಕಾರ್ಜುನ್ ಹೇಳಿದಂತೆ ಹಕ್ಕಿಗಳ ಹೆಸರುಗಳನ್ನು ಹಾಕಿದ್ದರೆ ಚೆನ್ನಾಗಿತ್ತು. ಕಣ್ಣಿಗೆ ಸೌಂದರ್ಯದ ಅನುಭವ, ಮನಸ್ಸಿಗೆ ಮಾಹಿತಿಯ ಸವಿ ಎರಡು ಇದ್ದರೇ ಚೆನ್ನ ಎನ್ನಿಸಿತ್ತು.

ಕೆಲವು ಆಡುಭಾಷೆಯ ಹೆಸರುಗಳನ್ನು ಸೂಚಿಸಲು ಪ್ರಯತ್ನಿಸುತ್ತೇನೆ.

2,4,5,6,17,18-ಕಳ್ಳಿ ಪೀರ.

3.ಚುಕ್ಕೆ ರಾಟವಾಳ[spotted munia]

7. ಕುಟ್ರು ಹಕ್ಕಿ[white-cheeked barbet]

8. ಗಂಡು ನವಿಲು[peacock]

9.ಮಟಪಕ್ಷಿ [Indian Treepie]

10.ಗಂಡು ಚಿಟ್ಟು ಮಡಿವಾಳ[Indian rabin male]

11,12. ಬೈತಲೆ ಬಸವಿ[Brahaminiy starling]

13. ಹದ್ದು[Block or paria kite]

14, 19. ಗರುಡ[Brahminy kite]

15. ಕೆಮ್ಮೀಸೆ ಪಿಕಳಾರ[Red whiskered bulbul]


ಆಶೀಷನಿಗೆ ಮತ್ತಷ್ಟು ಯಶಸ್ಸು ಸಿಗಲಿ...

Ittigecement said...

ಆಲಾಪಿನಿ....

ಧನ್ಯವಾದಗಳು....
ಪ್ರೋತ್ಸಾಹ ಯಾವಾಗಲೂ ಇರಲಿ....

umesh desai said...

ಹೆಗಡೆ ಸರ್ ಮಗ ದಾಖಲಾಗಿದ್ದಾನೆ ಆಗಲೇ ನಮ್ಮೆಲ್ಲರ ಹೃದಯಕ್ಕೆ ಚಿತ್ರಗಳು ಸ್ವತಃ ಮಾತನಾಡುತ್ತವೆ ಆದ್ರೂ ಒಂದು ಸಂಶಯ
ಈ ಬೆಂಗಳೂರಿನಲ್ಲಿ ಗುಬ್ಬಿ ಸಹ ಚಿಂವ್ ಅನ್ನೂದಿಲ್ಲ ಇವೆಲ್ಲ ಎಲ್ಲಿ ಚಿತ್ರಗಳು...

ಸುಧೇಶ್ ಶೆಟ್ಟಿ said...

ಎಲ್ಲಿ ಸೆರೆಹಿಡಿದ್ರಿ ಈ ಖಗಗಳನ್ನು? ಎಷ್ಟು ಚ೦ದ ಇವೆ...

ಮಿನಿಕಾದ೦ಬರಿ ಎಲ್ಲಿಯವರೆಗೆ ಬ೦ತು?

PARAANJAPE K.N. said...

ಚೆಂದದ ಹಕ್ಕಿ ಗಳ ಚಿತ್ರ, ಅದಕ್ಕೊಪ್ಪುವ ನುಡಿಗಟ್ಟುಗಳು, ವಿಶೇಷವಾಗಿದೆ, ಚೆನ್ನಾಗಿದೆ.

Anonymous said...

Awesome... photo, caption yella muddaagide

Ittigecement said...

ಸುನಾಥ ಸರ್...

ನನ್ನ ಮೊದಲ ಲೇಖನದಿಂದ ಇಲ್ಲಿಯವರೆಗೂ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದೀರಿ...
ನಿಮಗೊಂದು ತೊಂದರೆ ಕೊಡ ಬೇಕೆಂದಿರುವೆ...
ಈ ಮೇಲ್ ಕಳಿಸಿದ್ದೀನಿ...
ದಯವಿಟ್ಟು ಒಪ್ಪಿಕೊಳ್ಳಿ...

ನಿಮ್ಮ ಪ್ರೋತ್ಸಾಹ..
ಆಶೀರ್ವಾದ ಯಾವಾಗಲೂ ಇರಲಿ...
ಧನ್ಯವಾದಗಳು...

Ittigecement said...

ಗೌತಮ್...

ನಿಮ್ಮ ಬ್ಲಾಗ್ ಕೂಡ ಚೆನ್ನಾಗಿದೆ..

ಆಶೀಷನಿಗೆ ತಾಂತ್ರಿಕವಾಗಿ ಏನೂ ಅಷ್ಟಾಗಿ ಗೊತ್ತಿಲ್ಲ...
ಶಿವು, ಮಲ್ಲಿಕಾರ್ಜುನ್ ಅವನಿಗೆ ತಿಳಿಸಿಕೊಡುವ ಉತ್ಸಾಹ..
ಅವನಿಗೂ ತಿಳಿಯಬೇಕೆಂಬ ಹಂಬಲ...
ಸಂಗಡ ಆತನ ಓದು..

ಏನಾಗುತ್ತದೆ ನೋಡೋಣ...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಸಂತೋಷ್....

ನಮ್ಮನೆ ಬಳಿ ಒಂದು ಆಶ್ರಮವಿದೆ
ಅಲ್ಲಿ ಊಟದ ಹಾಲ್ ಕೆಲಸ ನಡೆದಿದೆ..
ಆಶೀಷ್ ನನ್ನ ಸಂಗಡ ಬಂದಿದ್ದ..
ಅವನ ಲಕ್ ಎಷ್ಟಿತ್ತೆಂದರೆ ಅವನು ಕ್ಯಾಮರಾ ಹಿಡಿದು ನೋಡುತ್ತಿರುವಾಗ..
ಹತ್ತಿರದಲ್ಲೇ ಹಕ್ಕಿಗಳು ಬರುತ್ತಿದ್ದವು...
ಒಟ್ಟು ಅರ್ಧ ಗಂಟೆಯಲ್ಲಿ ಇಲ್ಲಿರುವ ಬಹುತೇಕ ಫೋಟೊಗಳನ್ನು ತೆಗೆದಿದ್ದಾನೆ...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ನಾಗೇಶ್...

ಟಿ.ಎಸ್. ಬಹಳ ದೊಡ್ಡ ವ್ಯಕ್ತಿ...
ಅವರಂತಾಗಲು ಆಶೀಷ್ ಬಹಳ... ಬಹಳ ಕಷ್ಟ..
ಪರಿಶ್ರಮ ಪಡಬೇಕು...

ನಿಮ್ಮ ಆಶೀರ್ವಾದ, ಶುಭ ಹಾರೈಕೆಗಳು..
ಅವನಮೇಲಿರಲಿ...

ಧನ್ಯವಾದಗಳು...

ಬಾಲು said...

superbbbbbb photos!!!

nithin c v said...

nice photos.and thanx .i can sence your concern about birds.

ದೀಪಸ್ಮಿತಾ said...

ತುಂಬಾ ಚೆನ್ನಾಗಿವೆ ಫೋಟೋಗಳು. ಅದಕ್ಕೆ ತಕ್ಕಂತಹ ಬರಹ

ಶರಶ್ಚಂದ್ರ ಕಲ್ಮನೆ said...

ಪ್ರಕಾಶಣ್ಣ,
ಫೋಟೋಗಳು ಚನ್ನಾಗಿದ್ದು. ಆಶಿಶಂಗೆ ಒಂದು ಥ್ಯಾಂಕ್ಸು :)

Unknown said...

chitragalu chennaagive... dhanyavaadagalu...

Umesh Balikai said...

ಪ್ರಕಾಶ್ ಸರ್,

ಆಹ್ಹಾ..!! ಎಷ್ಟೊಂದು ಸೊಗಸಾಗಿವೆ ಪಕ್ಷಿಗಳ ಚಿತ್ರಗಳು. ನಿಜಕ್ಕೂ ಮನಮೋಹಕ.!!! ಚಿತ್ರಗಳನ್ನು ನೋಡಿದ ತಕ್ಷಣ ನಿಜಕ್ಕೂ ಮನಸಿಗೆ ಒಂಥರಾ ಉಲ್ಲಾಸವಾಯಿತು.
ಚಿತ್ರಗಳ ಜೊತೆಗಿರುವ ಅಡಿಬರಹಗಳೂ ತುಂಬ ಅರ್ಥವತ್ತಾಗಿವೆ. ಪಕ್ಷಿಗಳ ಮನದ ಭಾವನೆಗಳು, ಅವುಗಳ ಸಂತಸ, ಸಂಕಟ, ಮಾನವನ ಕ್ರೂರ ಮನಸ್ಸು, ಮತ್ತು ಪಕ್ಷಿಗಳ ಮೌನ ನಿವೇದನೆಗಳನ್ನು ತುಂಬ ಚೆನ್ನಾಗಿ ಬಿಂಬಿಸಿವೆ.

- ಉಮೇಶ

ವಿನುತ said...

ಚೆ೦ದದ ಚಿತ್ರಗಳು, ಅಷ್ಟೇ ಸೊಗಸಾದ ಹೊ೦ದುವ೦ತಹ ಸಾಲುಗಳು. ಹಕ್ಕಿಗಳ ಹೆಸರುಗಳಿಗೆ ಶಿವು ಹಾಗೂ ಮಲ್ಲಿಕಾರ್ಜುನ್ ಅವರಿಗೂ ಧನ್ಯವಾದಗಳು.
ಮತ್ತೊಬ್ಬ ಪುಟಾಣಿ ಫೋಟೋಗ್ರಾಫರನಿಗೆ ಸ್ವಾಗತ. ನಿಮ್ಮೆಲ್ಲರ ಮಾರ್ಗದರ್ಶನದಲ್ಲಿ ಅವನು ಇನ್ನೂ ಎತ್ತರಕ್ಕೆ ಬೆಳೆಯಲಿ ಎ೦ಬ ಹಾರೈಕೆಗಳು.

ರೂpaश्री said...

ಬಹಳ ಚೆನ್ನಾಗಿವೆ ಹಕ್ಕಿಗಳು, ನಿಮ್ಮ ಮಗ ತೆದೆದದ್ದು ಅಂತ ಕೇಳಿ ಇನ್ನೂ ಖುಶಿಯಾಯ್ತು:))
ಹಕ್ಕಿಗಳ ಹೆಸರುಗಳನ್ನು ತಿಳಿಸಿಕೊಟ್ಟ ಮಲ್ಲಿಕಾರ್ಜುನ್ ಮತ್ತು ಶಿವು ಅವರಿಗೂ ವಂದನೆಗಳು!