Tuesday, July 7, 2009

... ಮಾತಿಲ್ಲದೆ... ಮೌನವಾಗಿ... ಪ್ರೇಮಿಸುವ... ಪ್ರೇಮಿಯ.... ಪ್ರೆಮದಂತಿರಬೇಕು .!!.!

(ಹಿಂದಿನ ಲೀಖನದಿಂದ......)

ನಮಗೆಲ್ಲಾ ಆಶ್ಚರ್ಯದ ಜೊತೆಗೆ ಒಂದು ದೊಡ್ಡ ಶಾಕ್...!

ರಾಜಿ ತನ್ನ ಅಪ್ಪ... ಮಿಲಿಟರಿ ಸುಬ್ಬರಾವ್....
ಸಂಗಡ ಲೆಕ್ಚರರ್ ಸಂಗಡ ಬರ್ತಾ ಇರೋದು .....
ಆತಂಕದ ಸಂಗಡ ಹೆದರಿಕೆ....!

ಇದ್ದಕಿದ್ದಂತೆ ನೀರವ ಮೌನ....!
ನಮ್ಮೆದೆಯ ಬಡಿತದ ಶಬ್ಧ...!

ಹ್ರದಯ ಬಾಯಿಗೆ ಬಂದ ಸ್ಥಿತಿ....!

ಮಿಲಿಟರಿ ಸುಬ್ಬರಾವ್ ದಾಪುಗಾಲು ಹಾಕುತ್ತ ನಮ್ಮ ಬಳಿಯೇ ಬಂದು ನಿಂತರು.....

"ಇಲ್ಲಿ ಪೆಟ್ಟಿಗೆ ಗಪ್ಪತಿ ಅಂದರೆ ಯಾರು..?"

ನಾವು ಮಾತಾಡೋಣವೆಂದರೆ ಧ್ವನಿಯೇ ಬರುತ್ತಿಲ್ಲ....
ಬಾಯೆಲ್ಲ ಒಣಗಿದ ಅನುಭವ....

ಅಷ್ಟರಲ್ಲಿ ರಾಜಿ ಮುಂದೆ ಬಂದು
ನಾಗುವನ್ನು ನೋಡುತ್ತ
"ಇಲ್ಲಿ ಗಪ್ಪತಿ ರೂಮ್ ಎಲ್ಲಿ...?"


ನಾಗು ತೋರಿಸಿದ...

ಅಷ್ಟರಲ್ಲಿ ಪೆಟ್ಟಿಗೆ ಗಪ್ಪತಿನೂ...
ಏನು ಅಂತ ನೋಡುತ್ತ ... ಹೊರಗೆ ಬಂದ...

ರಾಜಿ ತನ್ನ ಪರ್ಸಿನಿಂದ ರಾಖಿ ತೆಗೆದು..

"ಗಪ್ಪತಿ ಅಣ್ಣ ...
ತುಂಬಾ ಥ್ಯಾಂಕ್ಸು...
ಎಲ್ಲರೂ ಕೆಟ್ಟ ದ್ರಷ್ಟಿಯಲ್ಲಿ ನೋಡುವಾಗ ...
ನಿನಗೊಬ್ಬನಿಗಾದರೂ...

ಒಳ್ಳೆಯ ಭಾವನೆ, ಮನಸ್ಸು ಇದೆಯಲ್ಲ...
ಖುಷಿಯಾಗ್ತದೆ..
ಎಲ್ಲಿ ನಿನ್ನ ಕೈ ಕೊಡು"

ಅಂತ ನಾವೆಲ್ಲ ನೋಡುತ್ತಿದ್ದ ಹಾಗೆ ರಾಖಿ ಕಟ್ಟೇ ಬಿಟ್ಟಳು....!!

"ನೀನು ಬರೆದ ಪ್ರೀತಿಯ ಪತ್ರಕ್ಕೆ...
ನನ್ನ ಉತ್ತರ ಅದರ ಹಿಂಬದಿಗೆ ಬರೆದ್ದಿದ್ದೇನೆ ..
ತಗೋ ಗಪ್ಪತಿ ಅಣ್ಣಾ.."


ಪೆಟ್ಟಿಗೆ ಗಪ್ಪತಿ ಬಾಯಿ ತೆರೆದು ....
ಅವಕ್ಕಾಗಿ... ನಿಂತು ಬಿಟ್ಟಿದ್ದ...!!


ಆಗ ಮಿಲಿಟರಿ ಸುಬ್ಬರಾವ್ ತಮ್ಮ ದಪ್ಪ ಧ್ವನಿಯಲ್ಲಿ...

" ಖುಷಿಯಾಗ್ತಿದೆ.... ಹುಡುಗ... ಶಭಾಸ್....!
ನನ್ನ ಮಗಳನ್ನು ನೋಡಿದರೆ ನಿನಗೆ ನಿನ್ನ ತಂಗಿಯ ನೆನಪಾದರೆ...
ನಮಗೂ ಸಹ ನಮ್ಮನ್ನು ಅಗಲಿದ ನಮ್ಮ ಮಗನ ನೆನಪಾಗುತ್ತಿದೆ...
ನಿಮ್ಮ ಅಣ್ಣ, ತಂಗಿ ಬಾಂಧವ್ಯ ಯಾವಾಗಲೂ ಇರಲಪ್ಪ....
ರಜೆಯಲ್ಲಿ ನಮ್ಮನೆಗೆ ಬಾ...
ಕೆಟ್ಟು ಹೋಗುತ್ತಿರುವ ಇಂದಿನ ಯುವಕರಿಗೆ ನೀನು ಆದರ್ಶ ಕಣಪ್ಪಾ...
ನಮ್ಮ ಹುಡುಗರು ಕಾಲೇಜಿಗೆ ಬಂದ ಕೂಡಲೇ ಕೆಟ್ಟು ಹೋಗ್ತಾರೆ...
ನಮ್ಮ ಸಂಸ್ಕ್ರತಿ ಮರೆತು ಬಿಡ್ತಾರೆ..
ಮನೆಯಲ್ಲಿ ಅಕ್ಕ, ತಂಗಿ ಇದ್ದಾರೆ ಅನ್ನೋದನ್ನ ಮರೆತು ಬಿಡ್ತಾರೆ....
......ಹೂಂ....
ಇಲ್ಲಿ....
ನಾಗು, ಮತ್ತೆ ಪ್ರಕಾಶ ಅಂದರೆ ಯಾರು..?"

ಸಿಡಿಲಿನಂಥಹ ಮಾತು...!!

ಅವರ ನೋಟ ನಮ್ಮ ಮೇಲಿತ್ತು...

"ಡ್ಯಾಡಿ... ಅದೆಲ್ಲ ಮುಗಿದ ಕಥೆ...
ಆ ಕವನ ನನ್ನ ಮೇಲೆ ಬರೆದಿದ್ದಲ್ಲ ಅಂತ ..
ಇವರೆಲ್ಲ ಪ್ರಿನ್ಸಿಪಾಲರ ಮುಂದೆ ಹೇಳಿ ಆಗಿದೆ...

ಆ ಬಗ್ಗೆ ನೋಟಿಸ್ ಬೋರ್ಡಿನಲ್ಲಿ ಇನ್ನೊಂದು ಕವಿತೆ ಕೂಡ ಹಾಕಿದ್ದಾರೆ...
ನೀನು ಬಾ ...."
ಸುಬ್ಬರಾವ್ ಕೈ ಹಿಡಿದು ಎಳೆದಳು...

ಅಷ್ಟರಲ್ಲಿ ಲೆಕ್ಚರರ್ ಕೂಡ
" ಸುಬ್ಬರಾವ್... ಅದು ಮುಗಿದ ಕಥೆ...
ಅದು ನಿಮ್ಮ ಮಗಳ ಬಗ್ಗೆ ಅಲ್ಲ... ಬನ್ನಿ ಹೋಗೋಣ....."

ಸುಬ್ಬರಾವ್ ಹೊರಟರು...
ಅವರ ಅನುಮಾನದ ಕೆಂಗಣ್ಣು ನಮ್ಮ ಮೇಲೇಯೇ ಇತ್ತು....

" ರಾಜಿ, ಮಗಳೆ...
ನಿನ್ನ ಬಳಿ ಇನ್ನೂ ರಾಖಿ ಇದೆಯಾ...?

ಇವರಿಗೆಲ್ಲ ಒಂದೊಂದು ಕಟ್ಟಿಸಿ ಬಿಡೋಣ..."

ಅಯ್ಯೋ....! ದೇವರೆ....!
ನಾಗುವಿಗೆ ರಾಜಿ ಕೈಯಿಂದ ರಾಖಿ ಕಟ್ಟಿಸಿ ಬಿಡ್ತಾರಾ...?

ಮತ್ತೆ ಡವ...ಢವ....!

"ಇಲ್ಲಪ್ಪ.... ಎಲ್ಲ ಖಾಲಿ ಆಗಿದೆ....
ನೀ ಬಾ ಡ್ಯಾಡಿ... ಲೇಟ್ ಅಗೋಯ್ತು..."

ಸುಬ್ಬರಾವ್ ರನ್ನು ಬಲವಂತವಾಗಿ ಎಳೆದು ಕೊಂಡು ಹೋದಳು...

ನಾಗು ನನ್ನ ಬಳಿ ಪಿಸು ಗುಟ್ಟಿದ..
" ಪ್ರಕಾಶು...
ಈ ...
ಮಸಾಲೆ..ಹಸಿಮೆಣಸಿನ ಕಾಯಿ ...
ಗೇಟು ದಾಟುವದರೊಳಗೆ...
ತಿರುಗಿ ನೋಡಿಯೇ... ನೋಡ್ತಾಳೆ ನೋಡು..."


ಒಂದು...!
ಎರಡು....!
ಮೂರು...!
ಮುಂದೆ ಹೋಗುತ್ತಾ ಇದ್ದವಳು...

ನಿಂತಳು....!!!

ಸಾವಕಾಶವಾಗಿ ಕೂದಲು ಸರಿ ಮಾಡಿಕೊಳ್ಳುವ ಹಾಗೆ...
ಕತ್ತು ಬಗ್ಗಿಸಿ ..
ಓರೆ ನೋಟದಿಂದ ನಮ್ಮನ್ನು ಒಮ್ಮೆ ನೋಡಿದಳು....!


ಅಬ್ಭಾ....!
ಏನಿತ್ತು ... ನೋಟದಲ್ಲಿ..?
ಅದು ಇಷ್ಟವಾ...? ಆಸಕ್ತಿಯಾ...?

ಎಷ್ಟೊಂದು ರಹಸ್ಯ ಈ ನೋಟ...!

ಮಿಂಚಿನ ನೋಟದ ಸಂಗಡ...
ಕಂಡೂ ಕಾಣದಂಥ

ತುಟಿಯೊಲ್ಲೊಂದು ಕಿರುನಗು....!!.

ಏನು ಇದರ ಅರ್ಥ...?

ನಾಗು ಸಣ್ಣಗೆ ಚೀರಿದ...
"ಪ್ರಕಾಶು... ಬಾಣ ಬಿತ್ತು ಕಣೋ..."

ನಾಗು ಪೂರ್ತಿ ಬೋಲ್ಡ್ ಆಗಿದ್ದ....

ಅವರೆಲ್ಲ ಹೋದ ಮೇಲೆ ಗಪ್ಪತಿ ದೊಡ್ಡದಾಗಿ ಅಳಲು ಶುರು ಮಾಡಿದ...

ಅವನ ಕೈಲಿದ್ದ ಪತ್ರ ಉಮಾಪತಿ ಓದಿದ...

ಸೀತಾರಾಮನಿಗೆ ಕುತೂಹಲ ತಡೆಯಲಾಗದೇ ಕೇಳಿದ...

" ರಾಜಿ ಬಂದು ರಾಖಿ ಕಟ್ಟಿ.." ಅಣ್ಣಾ " ಅಂತಾ ಹೋಗಿಬಿಟ್ಟಳಲ್ಲ...!!
ಏನಿದೆಯೋ ಅದರಲ್ಲಿ!!??"

"ಇದರಲ್ಲಿ.. ಎಲ್ಲ ಇದೆ ಮಾರಾಯಾ...!
ಕರುಳು ಕಿತ್ತು ಬರುವ ಹಾಗೆ..
ರಕ್ತ ಸಂಬಂಧ, ಕರಳು ಸಂಬಂಧ..
ಹ್ರದಯ, ಭಾವ ಅಂತೆಲ್ಲ ರಾಜಿಗೆ ಬರೆದು ...
"ನಿನ್ನ ನೋಡಿದರೆ ನನ್ನ ಅಮೇರಿಕಾದ ತಂಗಿಯ ನೆನಪಾಗ್ತದೆ" ಅಂತೆಲ್ಲ ಇದೆ ಕಣೊ..
ಇದನ್ನು ಒದಿದ ರಾಜಿ ಗಪ್ಪತಿಗೆ ರಾಖಿ ಕಟ್ಟದೆ ಇನ್ನೇನು ಮಾಡ್ತಾಳೆ..?
ರಾಜಿ... ಅಲ್ಲ ..
ಅವಳ ಅಮ್ಮ ಇದ್ದರೂ ಇದೇ ಕೆಲಸ ಮಾಡ್ತಿದ್ದ್ರು.."

ಪೆಟ್ಟಿಗೆ ಗಪ್ಪತಿ ಮತ್ತೂ ದೊಡ್ಡದಾಗಿ..
" ಲಬೋ... ಲಬೋ."..ಅಂತ ಅಳಲು ಶುರು ಮಾಡಿದ...

"ಅವಳ ಅಮ್ಮ ಕಟ್ಟಿದ್ದರೆ ಬೇಜಾರಿತ್ತಿಲ್ಲ ಕಣೋ...!
ರಾಜಿ ಕಟ್ಟಿ ಬಿಟ್ಟಳಲ್ಲೋ..!!
ನಾಳೆಯಿಂದ ಹೇಗೆ ನೋಡಲೋ ಅವಳನ್ನಾ..?
ಏನು ಅಂತ ನೋಡಲೋ..?
ಎಲ್ಲ ನಾಗು ಮಾಡಿದ್ದು..
ನನ್ನ ಹಣದಲ್ಲಿ ಮಸಾಲೆ ದೋಸೆ, ಸಿನೆಮಾ ಎಲ್ಲ ನೋಡಿದ್ದಲ್ದೆ...
ಸರಿಯಾದ ನಾಮಾನೂ ಹಾಕಿ ಬಿಟ್ರಲ್ಲೋ.....
ಪಾಪಿ ಮುಂಡೆದು.."

ಉಮಾಪತಿ ಗಪ್ಪತಿಗೆ ಸಮಾಧಾನ ಮಾಡಿದ...

"ನೀನು ಮಾಡಿದ್ದು ತಪ್ಪು.. ಗಪ್ಪತಿ..
ರಾಜಿಯನ್ನು ನಾಗು ಇಷ್ಟ ಪಡ್ತಾನೆ ಅಂತ ಗೊತ್ತಿದ್ದೂ ಹೀಗೆ ಮಾಡಬಾರದಿತ್ತು..
ನೀನು ಅವನಿಗೆ ಇಂಥಾ ಹುಡುಗಿ ಅಂತ ಹೇಳಲೂ ಇಲ್ಲ...
ಹೋಗಲಿಬಿಡು ...
ನಿನ್ನ ಎರಡನೆ ಆಪ್ಷನ್ "ನಯನಾ " ಇದ್ದಾಳಲ್ಲ..
ಬೇಜಾರು ಮಾಡ್ಕೋಬೇಡ..
ನಾವೆಲ್ಲ ನಿಂತು... ನಿನ್ನ ಲವ್ವು ಮಾಡಿಸ್ತಿವಿ ಕಣೋ...
ಅಲ್ವೇನೋ ನಾಗು..?.."

ನಾಗು ತಲೆ "ಓಕೆ" ಅನ್ನುವಂತೆ ಅಲ್ಲಾಡಿಸಿದ...
ಅವರೆಲ್ಲ ಗಪ್ಪತಿ ಕರೆದು ಕೊಂಡು ರೂಮಿಗೆ ಹೋದರು...

ನಾಗು ನನ್ನ ಹೆಗಲ ಮೇಲೆ ಕೈ ಹಾಕಿದ....

" ಲೋ ಪ್ರಕಾಶು....
ಈಗ.. ನಂಗೆ ಪತ್ರ ಲೇಖನ ಬೇಕು ಕಣೋ...!

ಪತ್ರ ಲೇಖನ ಅಂದರೆ ಹೇಗಿರಬೇಕು ಗೊತ್ತಾ...?

ಅಪ್ಪ ಮಗನನ್ನು ಪಕ್ಕಕ್ಕೆ ಕುಳ್ಳಿರಿಸಿಕೊಂಡು..
ತಲೆ ಸವರುತ್ತ ಹೇಳುವ...
ಹಿತವಚನದಂತಿರ ಬೇಕು..!

ತಾಯಿಯ ಮಡಿಲಲ್ಲಿ...ಬೆಚ್ಚಗೆ..
ಕುಳಿತ ಮಗುವಿಗೆ ಕೇಳಿಸುವ...

ಜೋಗುಳದಂತಿರಬೇಕು...!

ನೋವಾದ ....
ಒಂಟಿಮನಸ್ಸಿಗೆ...
ಗೆಳೆಯನು ಹೇಳುವ ಸಾಂತ್ವನದಂತಿರಬೇಕು...!

ಪ್ರಿಯತಮೆ.....
ಪ್ರಿಯನ ಕಿವಿಯಲ್ಲಿ ...
ಪಿಸುಗುಟ್ಟುವ ಮಾತಿನಂತಿರಬೇಕು..!

ಲೇಖನವೆಂದರೆ...
ಮಾತಿಲ್ಲದೆ... ಮೌನವಾಗಿ...
ಪ್ರೇಮಿಸುವ...
ಪ್ರೇಮಿಯ.. ..
ಪ್ರೆಮದಂತಿರ ಬೇಕು....!

ಹೇಳಲಾಗದೆ....
ತನ್ನೊಳಗೆ...
ಬಚ್ಚಿಟ್ಟ
ಭಾವಗಳ...
ನಿವೇದನೆಯಂತಿರಬೇಕು..!

ಬರೆದದ್ದು... ಪೆನ್ನಿನಿಂದಲ್ಲ...
ಹ್ರದಯದಿಂದ ಬರೆದಂತಿರ ಬೇಕು ...ಪ್ರಕಾಶು....


ನನಗೆ ರಾಜಿ ಬೇಕು.... ಕಣೋ...
ರಾಜಿ ಬೇಕೆ ಬೇಕು....!
ನಾನು ರಾಜಿ ಪ್ರೀತಿಸ್ತಾ ಇದ್ದೀನಿ...
ರಾಜಿ .. ನನ್ನ ಜೀವ.. ಕಣೋ...
ನನ್ನ ಜೀವನ..ಕಣೋ...

ಅವಳನ್ನು ಬೆಟ್ಟದಷ್ಟು ಪ್ರೀತಿಸ್ತೀನಿ ... ಪ್ರಕಾಶು...!
"

"ನಾಗು...
ಈ ಹುಡುಗಿ ...
ತುಂಬಾ ಜೋರಾಗಿದ್ದಾಳೆ ... ಮಾರಾಯಾ...!
ಅವಳಿಗೆ ನಿನ್ನ ಮೇಲೆ ಆಸಕ್ತಿ ಇದ್ದರೂ ಇರಬಹುದು....

ಆದರೆ....
ಈ ಮಿಲಿಟರಿ...
ಮೀಸೆ... ಸುಬ್ಬರಾವ್ ಗೆ ಏನು ಮಾಡ್ತೀಯಾ...?"


plz visit.....


( ನನ್ನ ಪ್ರೊಫೈಲ್ ವಿಕ್ಷಿಸಿ...
ಪ್ರೋತ್ಸಾಹ ಹೀಗೆಯೇ ಇರಲಿ...
ಹ್ರದಯ ಪೂರ್ವಕ ಧನ್ಯವಾದಗಳು..)


53 comments:

NiTiN Muttige said...

ಅಂತೂ ನಮ್ಮೇಲ್ಲರ ಕುತೂಹಲಕ್ಕೆ ಬ್ರೇಕ್ ಬಿಳಿಸಿದ ನಿಮಗೆ ನಮೋ ನಮ:!!! ತುಂಬಾ ಚೆನ್ನಾಗಿತ್ತು ೩ ಭಾಗಗಳು...
ಅಂದಿನ ಪತ್ರಿಕೆಯಲ್ಲಿ ಈ ಸುದ್ದಿ ಪ್ರಕಣವಾಗಿದ್ದರೆ;
"ಪ್ರಕಾಶ್ ಹೆಗಡೆ ಲೇಖನ ಫಲ;ನಾಗು,ರಾಜಿ ಲವ್ವಿಗೆ!"

Amit Hegde said...

wow....! ultimate...! saar nimma article sakattagi bandide.....! keep it up... :)

ಕ್ಷಣ... ಚಿಂತನೆ... said...

ಸರ್‍, ಲೇಖನ ಕುತೂಹಲದಿಂದ ಕೂಡಿದೆ. ಅಂತೂ ಗಪ್ಪತಿಗೆ ರಾಖಿ ಕಟ್ಟಿಸಿದ್ದಾಯಿತು. ಇನ್ನು ನಾಗುವಿಗೆ ಯಾವ ಪತ್ರ ಲೇಖನ ಮೂಡಿಬರುತ್ತದೋ ಎಂಬುದು. ಇದರಲ್ಲಿ ರಾಜಿಯ ಅಪ್ಪನ ಬಗ್ಗೆ ಬರಬಹುದೇ ಎಂಬ ಕುತೂಹಲ...

ಲೇಖನ ಚೆನ್ನಾಗಿದೆ. ಸರಳ ಹಾಸ್ಯನಿರೂಪಣೆಯಲ್ಲಿ ಹೀಗೆಯೆ ಮುಂದುವರೆಯಲಿ.

ಸಸ್ನೇಹದೊಂದಿಗೆ,

ಚಂದ್ರಶೇಖರ ಬಿ.ಎಚ್.

PARAANJAPE K.N. said...

ಪ್ರಕಾಶರೆ
ನಿಮ್ಮ ಧಾರಾವಾಹಿ ಕುತೂಹಲಭರಿತವಾಗಿದೆ. ಮು೦ದುವರಿಸಿ. ನಿಮ್ಮ ನಿರೂಪಣೆಯ ಶೈಲಿ, ನವಿರು ಹಾಸ್ಯ, ಎಲ್ಲವು ಪ್ರಾಸ೦ಗಿಕವಾಗಿದೆ.

ರಾಜೀವ said...

ಪ್ರಕಾಶ್ ಸರ್,

ಅಂತು ಗಪ್ಪತಿಗೆ ಒಂದು ಗತಿ ಕಾಣ್ಸಿದ್ರಿ. ಆ ಪತ್ರದಲ್ಲಿ ಯೇನಿದೆ ಅಂತ ಗೊತ್ತಾಯ್ತು. ಆದ್ರೆ ನಿಮ್ಮ ರಾಜಿ ಅಪ್ಪನನ್ನೂ ಕರ್ಕೊಂಡು ಬಂದ್ಲು ಅಂದ್ರೆ, ನೀವು ಹೇಗೆ ಬರ್ದಿದೀರ ಎಂದು ತಿಳಿದುಕೊಳ್ಳೋ ಕುತೂಹಲ.

shivu.k said...

ಪ್ರಕಾಶ್ ಸರ್,

ಕೊನೆಗೂ ರಾಜಿ ಯಾರ ಪಾಲು ಅಂತ ತಿಳಿಯಿತು. ಗಪ್ಪತಿ ಪರಿಸ್ಥಿತಿ ನೋಡಿ..ನಗು ಬಂತು. ನೀವೆಲ್ಲಾ ಸೇರಿ ಅವನನ್ನು ಈ ರೀತಿ ಗಮಾರನನ್ನಾಗಿ ಮಾಡಿದ್ದು ಓದಿ ನಗು ಬಂತು..ನಾಗುವಿನ ಕಿಲಾಡಿತನ ಇನ್ನಷ್ಟು ಮತ್ತು ಪತ್ರವನ್ನು ಓದುವ ತವಕವಿದೆ...ಮುಂದುವರಿಸಿ....

ಎಂದಿನಂತೆ ಅದೇ ಸರಳವಾಗಿ ಹಾಸ್ಯಬರಿತವಾಗಿ ಬರೆಯುತ್ತಿದ್ದೀರಿ..ಧನ್ಯವಾದಗಳು.

ಕೃಪಾ said...

ಗಪ್ಪತಿಗೆ ರಾಖಿ ಕಟ್ಟಿಸಿ, ಉಮಾಪತಿಗೆ ರಾಜಿಯ ಸಿಂಬಳ ಮುಖದ ವಿಶ್ವ ದರ್ಶನ ಅಮಾವಾಸ್ಯೆ ದಿನ ಮಾಡಿಸಿ, ರಾಜಿಗಾಗಿ ಈ ಪರಿ ಪಡಿಪಾಟಲು ಪಟ್ಟ ನಾಗುಗೆ ಕೊನೆಗೂ ರಾಜಿ ಸಿಕ್ಕಳೆ? ನಾನು ತುಂಬಾ ಕುತೂಹಲಿಯಾಗಿದ್ದೇನೆ....

Ittigecement said...

ನಿತಿನ್....

ಲಂಗುಲಗಾಮಿಲ್ಲದ...
ಆ ಹುಡುಗಾಟಿಕೆ ದಿನಗಳು....
ಏನು ಹೇಳಲಿ...?

ನನಗೆ ಬರೆಯುವದನ್ನು ಕಲಿಸಿದ ಗುರು..
ಈ ತರ್ಲೆ ನಾಗು...

ಅವನ ಪ್ರೇಮ ಪ್ರಕರಣ ಹೇಳಲು ..
ಇಬ್ಬರ ಕಡೆಯಿಂದಲೂ ಅನುಮತಿ ಸಿಕ್ಕಿದೆ...

ಈಗಲೇ ಬೇಡ...
ಏಕತಾನತೆ ಆಗಿಬಿಡ ಬಹುದು...
ಸ್ವಲ್ಪ ಬೇರೆ ವಿಚಾರ ವಿಷಯಗಳು...
ಮುಂದಿನ ಭಾಗದಲ್ಲಿ....

ಹಿಂದಿನ ಭಾಗದಲ್ಲೇ ಲೇಖನ ಮುಗಿಸಲು ಹೊರಟಿದ್ದ ನನ್ನನ್ನು ತಡೆದ..
ನಿಮಗೆ ಧನ್ಯವಾದಗಳು...

Ittigecement said...

ಅಮಿತ್....

ರಾಜಿಗೆ ನಾಗು ಮೇಲೆ ಮೊದಲಿನಿಂದಲೂ ಒಂದು ಕಣ್ಣಿತ್ತಾ...?

ಕಪ್ಪು ಕವನ ಅವಳಿಗೆ ಇಷ್ಟವಾಗಿತ್ತಾ..?
ಅದರನಂತರ ಬರೆದ ಕವನ ಹಿಂದಿನ ಲೇಖನದ "ಕಮೆಂಟ್ಸ್" ಭಾಗದಲ್ಲಿ ಹಾಕಿದ್ದೇನೆ..
ಅದೂ ಕೂಡ ಇಷ್ಟವಾಗಿತ್ತಾ...?

ಇರಬಹುದೇನೋ....

ಅರ್ಥ ಮಾಡಿಕೊಳ್ಳುವದು ಕಷ್ಟ ...
ಈ ಕಣ್ಣಿನ ಚೆಲುವೆಯ ...
ನಡೆ, ನುಡಿಯನ್ನು....

ಲೇಖನ ಮೆಚ್ಚಿದ್ದಕ್ಕೆ..
ಪ್ರೋತ್ಸಾಹಕ್ಕೆ
ಧನ್ಯವಾದಗಳು...

Ittigecement said...

ಚಂದ್ರ ಶೇಖರ್....

ಮಿಲಿಟರಿ ಮೀಸೆ ಸುಬ್ಬರಾವ್...
ಈಗಷ್ಟೇ ಎಂಟರ್ ಆಗಿದ್ದಾರೆ...
ನಾಗು, ರಾಜಿ ಪ್ರೇಮ ಪ್ರಕರಣದಲ್ಲಿ...
ಅವರು ಬಂದೇ ಬರ್ತಾರೆ...
ಬರಿಯಲೇ ಬೇಕು...

ಅದೊಂದು ವಿಚಿತ್ರ... ವಿಲಕ್ಷಣ....ಅನುಭವ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಪ್ರೋತ್ಸಾಹದ ನುಡಿಗಳು
ಇನ್ನಷ್ಟು ಬರೆಯಲು..
ಜವಬ್ದಾರಿ..
ಮತ್ತು ಟಾನಿಕ್ ಥರಹ...

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನಿಮ್ಮ ಗಪ್ಪತಿಗೆ ಹೀಗೆ ಪಿಗ್ಗಿ ಬೀಳಿಸಿದ್ದು ನ್ಯಾಯವಾ? ಆದರೂ ಆ ಹುಡುಗಾಟದ ದಿನಗಳು Golden Days ಅಲ್ವಾ? ಅಂದಿನ ದಿನಗಳನ್ನು ಸೊಗಸಾಗಿ, ನಮ್ಮನ್ನು ತುದಿಗಾಲಲ್ಲಿ ನಿಂತು ಓದುವಂತೆ ಬರೆಯುವ ನಿಮಗೆ, ಹಾಗೆ ಬರೆಯಲು ಪ್ರೇರಣೆಯಿತ್ತ ನಾಗು ಅವರಿಗೆ ನಮೋನಮಃ.

Ittigecement said...

ಪರಾಂಜಪೆಯವರೆ....

ಇಲ್ಲಿ ಪೆಟ್ಟಿಗೆ ಗಪ್ಪತಿಗೆ ಸ್ವಲ್ಪ ಅನ್ಯಾಯ ಆದಂತೆ ಅನಿಸುತ್ತದೆ...

ಆದರೆ ಆತ ಮಾಡಿದ್ದು "ಅತೀ ಬುದ್ಧಿವಂತಿಕೆ" ಅಲ್ಲವೆ..?

ನಾಗು ನಮ್ಮ ಗುಂಪಿನವರಿಗೆಲ್ಲ ಎಂಥಹ ಸಹಾಯ ಮಾಡಲೂ ತಯಾರಿರುತ್ತಿದ್ದ...
ಗಪ್ಪತಿ ಕೂಡ ಅವನಿಂದ ಬೇಕಾದಷ್ಟು ಬಾರಿ ಸಹಾಯ ತಗೊಂಡಿದ್ದ...

ಇಂಥಹ ಸ್ನೇಹ ಇರುವಾಗ ನಾಗು ಮೆಚ್ಚಿದ "ರಾಜಿ" ಯನ್ನು..
ನಾಗೂ ಕೈಯಿಂದಲೇ ಪತ್ರ ಬರೆಸಿ...
"ಲವ್ವ್" ಮಾಡ ಹೊರಟೀರುವದು ಎಲ್ಲಿಯ ನ್ಯಾಯ...?

"ನಯನಾ" ಮತ್ತು "ಗಪ್ಪತಿ" ಪ್ರೇಮ ಪ್ರಸಂಗ ಪ್ರಸಂಗ ...
ಅದೂ ಕೂಡ ಮಜವಾಗಿದೆ...

ಆ ದಿನಗಳು ಮಜವಾಗಿದ್ದವು...
ಲೇಖನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

Ittigecement said...

ರಾಜೀವ....

ಅದು "ಅಣ್ಣ ..ತಂಗಿಗೆ " ಬರೆದ ಪತ್ರದಂತಿತ್ತು...
ಗಪ್ಪತಿಯ ಸ್ವಂತ ತಂಗಿ ಅಮೇರಿಕಾದಲ್ಲಿದ್ದಳು..
ರಾಜಿಯಲ್ಲಿ ಆ ತಂಗಿಯನ್ನು ಕಂಡು ಬರೆದಂತೆ ಇತ್ತು..

ತುಂಬಾ ಭಾವನಾತ್ಮಕವಾಗಿ ಬರೆದ ಪತ್ರ ಅದು...

ರಾಜಿಯ ಅಣ್ಣ ಒಬ್ಬರು ಅಪಘಾತದಲ್ಲಿ ತೀರಿಕೊಂಡು ಆರು ತಿಂಗಳಾಗಿತ್ತಂತೆ...
(ಇದು ನಮಗೆ ಆಗ ತಿಳಿದಿಲ್ಲವಾಗಿತ್ತು)

ಅವರೆಲ್ಲ ತುಂಬ "ಇಮೋಷನಲ್" ಆಗಿ ಬಂದಿದ್ದರು...
ರಾಖಿ ಕಟ್ಟಲು..

ಈ ಮಿಲಿಟರಿಯವರು ತುಂಬಾ ಆದರ್ಶವಾದಿಗಳೂ...
ಅವರದ್ದೇ ಆದ ಒಂದು ಲೋಕದಲ್ಲಿರುವವರು...

ಈ ಮಿಲಿಟರಿ ಸುಬ್ಬರಾವ್.....

ಓಹ್...!
ಮುಂದೆ ಬರೆಯುತ್ತಿನಲ್ಲ....

ಪ್ರೋತ್ಸಾಹದ ಪ್ರತಿಕ್ರಿಯೆಗೆ ವಂದನೆಗಳು....

ನಮ್ಮನೆ.. SWEET HOME..... said...

ಪೆಟ್ಟಿಗೆ ಗಪ್ಪತಿ ಪ್ರೇಮ ಪತ್ರ ಪ್ರಕರಣದಲ್ಲಿ...ಲೇಖನ, ಕವನಗಳು..
ಹೇಗೆ ಇರಬೇಕು..?
ಹೇಗೆ ಇರಬಾರದು ಹೇಳಿದ್ದೀರಿ...

"ನಯನಾ" ಕಥೆ ಯಾವಾಗ..?

ನೀವು ಬೀಡಿ ಸೇದಿದ ಕಥೆ ಹೇಳಿ ಮಾರಾಯ್ರೆ...!

Ittigecement said...

ಶಿವು ಸರ್....

ಕಥೆ ಇನ್ನೂ ಮುಗಿದಿಲ್ಲ...
ರಾಜಿ ಯಾರಪಾಲಾಯಿತು ಅನ್ನುವದೂ ಸಹ ಕುತೂಹಲವಾಗಿದೆ...
ಗಪ್ಪತಿ ನಾಗುವನ್ನು ಬೆಸ್ತು ಬೀಳಿಸಲು ಹೋಗಿ ತಾನೇ ಸಿಕ್ಕಿಹಾಕಿಕೊಂಡ...
ಅದು "ಗಮಾರ" ಆದ ಹಾಗಲ್ಲ....

ಲೇಖನ ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

ಜಿ.ಎಸ್.ಬಿ. ಅಗ್ನಿಹೋತ್ರಿ said...

ಉರಕಡೆ ಕೆಲ ಸನ್ನಿವೇಶಗಳನ್ನು ನೆನಪಿಸಿಕೊಳ್ಳಲು ಅನುವಾಯ್ತು.

Anonymous said...

hoy prakashanna, chendakiddu, nanu rakhi tagalavu clg alli ellarigu katta plan iddu henge?

Ravi Hegde said...

ಪ್ರೇಮ ಪ್ರಸಂಗದ ಸರಣಿ ಚೆನ್ನಾಗಿದೆ.
ಅಭಿನಂದನೆಗಳು...


ರವಿ

Kishan said...

Without saying, your narration technique is Impeccable. I like the way you maintain your anonymity and you just being a background catalyst to the main story!

ಬಾಲು said...

ಗೇಟ್ ದಾಟೋಕು ಮುನ್ನ ರಾಜಿ ಒಮ್ಮೆ ಕುಡಿ ನೋಟ ಕೊಟ್ಟಳು,
ನಾಗು ಹೃದಯಾನ ಹಾಗೆ ಮೋಡಿ ನು ಮಾಡಿದಳು.

ಭಗ್ನ ಪ್ರೇಮಿ ಗಪ್ಪತಿ ಗೆ ಜೈ ಹೋ, ಯಾಕೆಂದರೆ ಮತ್ತೊಂದು ಒಪ್ಶನ್ ಇತ್ತಲ್ಲ..
ನಯನ ರೂಪದಲ್ಲಿ.
ನಾಗುವಿಗೆ ಅ ತರ ಬೇರೆ ಸೆಕೆಂಡ್ ಆಪ್ಶನ್ ಇರಲಿಲ್ವ?
ಲೇಖನ ಮಾಲಿಕೆ ಮುಂದುವರಿಸಿ, ಏಕತಾನತೆ ಏನು ಆಗೋಲ್ಲ. ನಿಮ್ಮ ಬರಹ ಓದಿಸಿ ಕೊಂಡು ಹೋಗುತ್ತದೆ.
ನಿಮ್ಮ ಬ್ಲಾಗಿನಲ್ಲಿ ಬರಪೂರ ಹಾಸ್ಯ, ಆಪ್ತವಾಗುವ ಬರವಣಿಗೆ, ಒಂದಿಷ್ಟು ಫ್ಲಾಶ್ ಬ್ಯಾಕ್ ಓದುಗರನ್ನ ಸೆಳೆಯುತ್ತದೆ.

ಆಮೇಲೆ ನಿಮ್ಮ ಪ್ರೇಮ ಪ್ರಕರಣ ಗಳ ಬಗ್ಗೆ ನು ಬರೆಯಿರಿ. (ಸ್ನೇಹಿತರ ಲವ್ ಗೆ ಅಷ್ಟು ಕವನ ಬರೆದ ನೀವು, ನಿಮ್ಮ ಪ್ರೇಯಸಿಗೆ / ಪ್ರೆಯಸಿರರಿಗೆ ಬರೆದ ಕವನ ಗಳ ಬಗ್ಗೆ ಕುತೂಹಲ ವಿದೆ )

Ranjana Shreedhar said...

ಪ್ರಕಾಶಣ್ಣ,

ಬರಹ ಸೂಪರ್... ಗಪ್ಪತಿ ಕತೆ ಅಂತು ಮುಗೀತು. ಇನ್ನು ನಾಗು ಕತೆ ಏನು? ಕೊನೆಗೂ ಅವನ 'ರಾಜಿ' ಸಿಕ್ಕಿದ್ಲಾ ಅವನಿಗೆ?
ಬರಹ ಕಣ್ಣಿಗೆ ಕಟ್ಟುವಂತಿದೆ... ಮುಂದುವರಿಸಿ..
ಕಾಯ್ತಾ ಇರ್ತಿವಿ...

umesh desai said...

ಹೆಗಡೆ ಸರ್ ನಿಮ್ಮ ಹಾಗೆ ಬರೆಯುವುದಾಗುವುದಿಲ್ಲ ಸೂಪರ್ ರಿ
ರ‍ಾಜಿ ಹೊರಹೋಗುವಾಗ ಹೊರಳಿನೋಡಿದ್ದು ಯಾರನ್ನು ನೀವೆ, ನಾಗೂನೇ ಅಥವಾ ಗಪ್ಪತಿ ಯೇ
ಒಳ್ಳೇ ಗಮ್ಮತ್ತು ..

Unknown said...

ಪ್ರಕಾಶ್ ಸಾರ್
ಸಖತ್ತಾಗಿ ಓದಿಸಿಕೊಂಡು ಹೋಯಿತು, ಹಿಂದಿನ ಲೇಖನದ ಜೊತೆ. ನಿಮ್ಮ ಗದ್ಯದ ಶೈಲಿ ಹೆಚ್ಚೆಚ್ಚು ಖುಷಿಕೊಡುತ್ತಿದೆ. ಒಮ್ಮೆ ಓದಲು ಪ್ರಾರಭಿಸದೆವೆಂದರೆ ಮುಗಿಯುವವರೆಗೂ ನಮ್ಮನ್ನು ಅತ್ತಿತ್ತ ಚಲಿಸಲು ಬಿಡುವುದಿಲ್ಲ. ಈಗ ತಾನೆ ಶಿವು ಬಂದಿದ್ದರು. ಮಾತನಾಡುವ ಮದ್ಯೆ ನಿಮ್ಮೆ ಗದ್ಯದ ಶಯಲಿಯಬಗ್ಗೆ ಮಾತನಾಡಿ ಅವರನ್ನು ಕಳುಹಿಸಿ ಒಳ ಬಂದು ನಿಮ್ಮ ಈ ಬರಹವನ್ನು ಓದಿದೆ!

ಚಿತ್ರಾ said...

ಪ್ರಕಾಶಣ್ಣ ,
ಸ್ವಲ್ಪ ಸಮಾಧಾನ ಆಯ್ತು ಮತ್ತಷ್ಟೇ ಕುತೂಹಲ ! ಪಾಪ ಗಪ್ಪತಿ ! ಯಾವುದಕ್ಕೂ ಆಪ್ಶನ್ ಇದ್ದಿದ್ದಕ್ಕೆ ಪರವಾಗಿಲ್ಲ ! ಬಹಳ ಚೆನ್ನಾಗಿ ಬರುತ್ತಿದೆ ಈ ಪ್ರೇಮಕಥೆ !
ಇನ್ನು ನಾಗುವಿನಕಥೆ ಏನಾಯ್ತು ಎಂದು ಕಾಯುತ್ತಿರಬೇಕಲ್ಲಪ್ಪ ! ಒಟ್ಟಿನಲ್ಲಿ ನೀವು ನಮ್ಮನ್ನು ಬಹಳ ಸತಾಯಿಸ್ತೀರಿ .

ಸವಿಗನಸು said...

ಪ್ರಕಾಶಣ್ಣ ,
ಚೆನ್ನಾಗಿತ್ತು ಪ್ರೇಮಕಥೆ....ಹಾಗೆ ಮುಂದುವರೆಯಲಿ ದಾರಾವಾಹಿ ತರಹ.....ಪಾಪ ಗಪ್ಪತಿ !!!! ಯಾವುದಕ್ಕೂ ಎರಡನೆ ಆಪ್ಶನ್ ಇಟ್ಟಿದರಲ........ನಾಗುಗೆ ಆಪ್ಶನ್ ಇರಲಿಲ್ಲ.....ಸುಬ್ಬರಾಯರ ಆಗಮನ ಚೆನ್ನಾಗಿದೆ. ಇನ್ನು ಎನೆನು ಅನುಭವಿಸರಬೇಕು ನಮ್ಮ ನಾಗು ಸುಬ್ಬರಾಯರಿಂದ.....ಅವರ ಕೈನಲ್ಲಿ ಬಂದೂಕು ಇರಲಿಲ್ವ....ರಾಜಿ ತಿರುಗಿ ನೋಡಿದ್ದು ಸೂಪರ್ ಆಗಿತ್ತು......ಹೀಗೆ ಬರೆಯುತ್ತೀರಿ....

sunaath said...

ಆಹಾ, ಸಸ್ಪೆನ್ಸ್ ಮುಗೀತು ಅಂತ ಅನ್ನೋದರಲ್ಲಿ, ಮತ್ತೆ ಮುಂದಿನ ಭಾಗಕ್ಕೇ ಖೋ ಸಿಕ್ಕಿತಲ್ಲ! ಹೀಗೇ ಮುಂದುವರಿಯಲಿ,
ನಮಗೆಲ್ಲ ಖುಶಿ ಕೊಡಲಿ.

Ramya Hegde said...

"... ಮಾತಿಲ್ಲದೆ... ಮೌನವಾಗಿ... ಪ್ರೇಮಿಸುವ... ಪ್ರೇಮಿಯ.... ಪ್ರೆಮದಂತಿರಬೇಕು .!!.!"..
Sundaravaada saalugalu..,suspense innu mugidilla.matte 'Nayana'!!!!.channagide.

Unknown said...

ಚೆನ್ನಾಗಿದೆ ನಿಮ್ಮ ಅನುಭವ ಸರಣಿ.... ಓಡಿಸಿಕೊಂಡು ಹೋಯಿತು... ಪಾಪ ಗಪ್ಪತಿ!!....

Ittigecement said...

ಕ್ರಪಾ ಅವರೆ...

ಇಲ್ಲಿ ನಾನು ಗಪ್ಪತಿ ಪ್ರೇಮ ಪತ್ರ ಹೇಳುತ್ತಿರುವಾಗ ....
ಕೆಲವರು ಈ ಅಂತ್ಯವನ್ನು ಊಹೆ ಮಾಡಿದ್ದರು...

ಎಲ್ಲ ನಾವೆಂದು ಕೊಂಡಂತೆ ಆಗಲಿ ಎಂದು ನಾವು ಬಯಸುವದು ಸಹಜ...

ನಾಗುವಿನ ಮಿತ್ರನಾಗಿ ನಾನು ಅವನ ಆಸೆ ಈಡೇರಲಿ ಎಂದು ಬಯಸುವವನು ನಾನು....
ಅವನಿಗಾಗಿ ನಮ್ಮ ಇಡಿ ಗುಂಪೇ ಇದೆ...
ಪೆಟ್ಟಿಗೆ ಗಪ್ಪತಿಯೂ ಸಹ....

ಆದರೆ...
ಮಸಾಲೆ ಹಸಿಮೆಣಸಿನ ಕಾಯಿಯ ಮನದಲ್ಲಿ ಏನಿದೆಯೋ....!!..??

ನೋಡಿಯೇ ಬಿಡೋಣ ಅಲ್ಲವೆ...?

ನಿಮ್ಮ ಪ್ರೋತ್ಸಾಹ ನನಗೆ ಇನ್ನಷ್ಟು ಬರೆಯಲು ಉತ್ತೇಜನ ನೀಡಿದೆ....

ಧನ್ಯವಾದಗಳು...

ವಿನುತ said...

ನಿರೂಪಣೆ ಚೆನ್ನಾಗಿದೆ. ನಿಮ್ಮ ಹಾಸ್ಯದಲ್ಲೊ೦ದು ಹೊಸತನವಿರುತ್ತದೆ. ಬೇಜಾರಾಗುವುದಿಲ್ಲ. ಪತ್ರಲೇಖನದ ಕುರಿತು ನಾಗುವಿನ ಮಾತುಗಳು ಇಷ್ಟವಾದವು.

Unknown said...

ತುಂಬಾನೇ ಚೆನ್ನಾಗಿದೆ......... ನಂಗಂತೂ ತುಂಬಾ ಇಷ್ಟಾ ಆಯ್ತು ಕಂಡ್ರಿ..............

Unknown said...

Prakashanna, Raksha bandhana chennagi ayitu. Nagu super, kelavshtu bhavanegalannu helalu kashta, patradalli bhavanegalu hege modibarabeku annuvadannu Nagu tumba chennagi heliddane.aa prema patravannu oduva kutuhala.lekhana chennagide.

ರೂpaश्री said...

ಗಪ್ಪತಿಯನ್ನು ಸರ್ರಿಯಾಗಿ ಬೆಸ್ತು ಮಾಡಿದ್ರಿ. "everything is fair in love" ಅಲ್ವ?

ನೀವು ಬರೆಯೋ ಶೈಲಿ ತುಂಬಾ ಚೆನ್ನಾಗಿದೆ. ಪತ್ರ ಲೇಖನ ಅಂದರೆ ಹೇಗಿರಬೇಕು ಅಂತ ಬಣ್ಣಿಸಿದ್ದೀರಲ್ಲಾ ಅದು ತುಂಬಾ ಇಷ್ಟವಾಯಿತು, esp ಬರೆದದ್ದು ಪೆನ್ನಿನಿಂದಲ್ಲ ಹ್ರದಯದಿಂದ ಬರೆದಂತಿರ ಬೇಕು !!!ವಾಹ್..
ನಿಮ್ಮ ಕಾಲೇಜಿನ ದಿನಗಳನ್ನು ದಾರಾವಾಹಿ ಮಾಡಿದ್ರೆ ಸೂಪರ್ ಆಗಿರುತ್ತೆ ನೋಡಿ!

ಧರಿತ್ರಿ said...

ಕೆಲಸದೊತ್ತಡದಿಂದ ಯಾರದೇ ಬ್ಲಾಗ್ ನೋಡಲಾಗಲಿಲ್ಲ...ಅಂತು ನಿಮ್ಮ ಕಂತುಗಳ ರೂಪದಲ್ಲಿರುವ ಬರಹಗಳನ್ನು ಓದಬೇಕಾದರೆ. ಮೊದಲಿನಿಂದ ಓದುತ್ತಾ ಹೋಗೋಣ ಅಂದ್ರೆ ಹಿಂದಿನಿಂದನ್ನು ಮಿಸ್ ಮಾಡಿದ್ದೆ. ಅಂತೂ-ಇಂತೂ ಓದಿ ಮುಗಿಸಿದೆ. ಭಾರೀ ಸಸ್ಪೆನ್ಸ್ ಕಾದಿಡೋಕೆ ಶುರುಮಾಡಿದ್ದೀರಿ..ಕೊನೆಗೆ ಖುಷಿ ಅಂತು ಕೊಟ್ಟಿದೆ. ಧನ್ಯವಾದಗಳು ಸಸ್ಪೆನ್ಸ್ಉ ಸರ್..
-ಧರಿತ್ರಿ

Prabhuraj Moogi said...

ಈ ನಾಗು ಕ್ಯಾರಕ್ಟರ್ರೇ ಸೂಪರ್ ಸರ್... ರಾಜಿನಾ ಲವ್ ಮಾಡೊಕೇ ಅವನೇ ಲಾಯಕ್ಕು... ಒಳ್ಳೆ ಮ್ಯಾಚ್ ಆಗತ್ತೆ... ರಾಜಿಗೂ ಅವನ ಮೇಲೆ ಇಷ್ಟ ಆದ ಹಾಗಿದೆ...

ರೂಪಾ ಶ್ರೀ said...

ತುಂಬಾ ಸೊಗಸಾಗಿ ಇತ್ತು... ನಾಗು ಪತ್ರ ಲೇಖನದ ಬಗ್ಗೆ ವಿವರಿಸಿದ್ದೇ ತುಂಬಾ ಚೆನ್ನಾಗಿದೆ :)

ಇಳಾ said...

please see http://ilaone.blogspot.com

ಸುಧೇಶ್ ಶೆಟ್ಟಿ said...

ಟ್ವಿಸ್ಟ್ ಮೇಲೆ ಟ್ವಿಸ್ಟ್ ಬರ್ತಾ ಇದೆ.... ಮು೦ದಿನ ಕ೦ತಿಗೆ ತುದಿಕಾಲಲ್ಲಿ ಕಾಯುತ್ತಾ ಇದ್ದೇನೆ....

harini said...

prakash re
nimage ishtondu type maadi kollokke elli time sigutte...enu kelsa illava...?
madyadalli cartoon adru haaki maarayre....
bore odiyothe...

harini
mangalore

Dileep Hegde said...

ಸೂಪರ್ ಆಗಿತ್ತು ಪ್ರಕಾಶಣ್ಣ...
ಒಂದು ಸಿನೆಮಾ ನೋಡಿದ ಅನುಭವ..
ಶಿರಸಿಯ ನನ್ನ ಕಾಲೇಜ್ ದಿನಗಳು ಒಮ್ಮೆ ಕಣ್ಣ ಮುಂದೆ ಬಂದು ಹೋದವು...
ಇಂತ ಒಳ್ಳೆಯ ಲೇಖನ ಮಾಲೆ ದಯಪಾಲಿಸಿದ್ದಕ್ಕೆ ಶುಕ್ರಿಯಾ...


ಪ್ರೀತಿಯಿಂದ...
ದಿಲೀಪ್ ಹೆಗಡೆ..

Shweta said...

Hi Prakash anna,
tumba chennagide.....
evellavuu nija ghataneye?
heege bareyuttiri.

ನಂಜುಂಡ said...

ಸೂಪರ್!!! ಮಾತೆ ಬರ್ತಾ ಇಲ್ಲೇ ಇದನ್ನ ಓದಿದ ಮೇಲೆ.. ಇನ್ನೂ ಬರ್ತಾ ಇರ್ಲಿ.. ಕಾಯ್ತಾ ಇರ್ತಿ..

* ನಮನ * said...

ನಮಸ್ತೆ,ಉದಯವಾಣಿಯಲ್ಲಿ ಮೆಚ್ಹುಗೆಯ ಮಾತುಗಳು.ಅಭಿನಂದನೆಗಳು.ನಮನ

Ittigecement said...

ಮಲ್ಲಿಕಾರ್ಜುನ್...

ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸರಿಯಂತೆ...
ಗಪ್ಪತಿ ಗೊತ್ತಿದ್ದೂ ನಾಗು ಬಯಸಿದ ರಾಜಿ ಲವ್ ಮಾಡಬಾರದಿತ್ತು...
ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಶಿವಶಂಕರ್...

ಸ್ವಲ್ಪ ಕೆಲಸದ ಒತ್ತಡ ನಿಮ್ಮ ಬ್ಲಾಗಿಗಲ್ಲಿ ಪ್ರತಿಕ್ರಿಯೆ ಕೊಡಲಾಗಲಿಲ್ಲ...
ಕ್ಷಮಿಸಿ...

ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು...

Ittigecement said...

......

ನಯನಾ ಕಥೆ ಸಧ್ಯದಲ್ಲೇ ಬರೆಯುವೆ....

ಬೀಡಿ ಸೇದಿದ ಕಥೆ ಕೂಡ ಬರೆವೆ...
ಆದರೆ "ಮಗನಿಗೆ" ಗೊತ್ತಾಗಬಾರದಷ್ಟೆ...
ಪ್ರೋತ್ಸಾಹದ ಮಾತುಗಳಿಗೆ ವಂದನೆಗಳು..

Ittigecement said...

ಅಗ್ನಿಹೋತ್ರಿಯವರೆ....

ಲೇಖನ ಓದಿ..
ಊರಿನ ನೆನಪಾಗಿದ್ದಕ್ಕೆ ವಂದನೆಗಳು...

ಏನು ಆ ನೆನಪುಗಳು..
ನಮ್ಮೊಂದಿಗೂ ಹಂಚಿಕೊಳ್ಳಿ...

Ittigecement said...

ಶ್ರೀ....

ನಿನ್ನನ್ನು ನೋಡಿ ಪಡ್ಡೆ ಹುಡುಗರು ಓಡಿಹೋಗಿ ಬಿಡುತ್ತಾರಷ್ಟೆ....

ಲೇಖನ ಓದಿ ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ರವಿಯವರೆ....

ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಕಿಶನ್...

ನಿಮ್ಮ ಪ್ರೋತ್ಸಾಹದ ಮಾತುಗಳು ಮತ್ತಷ್ಟು ಬರೆಯಲು..
ಉತ್ಸಾಹ ತರುತ್ತಿದೆ....

ಧನ್ಯವಾದಗಳು...

Ittigecement said...

ಬಾಲು ಸರ್....

ನಿಮ್ಮ ಪ್ರತಿಕ್ರಿಯೆ ಯಾವಾಗಲು ಸ್ವಲ್ಪ ಹೆದರಿಕೆ ಹುಟ್ಟಿಸುತ್ತವೆ...

ನಾಗುವಿಗೆ ಸೆಕೆಂಡ್ ಆಪ್ಷನ್ ಆಗಲೂ ಇರಲಿಲ್ಲ...

ಇನ್ನು ನನ್ನ ಪ್ರೇಮ ಪ್ರಕರಣ ಸ್ವಲ್ಪ ಇವೆ...
ಅದನ್ನು ಮುಂದೆ ಯಾವಾಗಲಾದರೂ ಹೇಳುವೆ....

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Naveen M said...

ಸರ್ ಕಥೆ ತುಂಬಾ ಚನ್ನಾಗಿ ಇದೆ .... ಧನ್ಯವಾದಗಳು ಇಂಥ ಕಥೆ ಬರೆದಿದಕ್ಕೆ :)

Ittigecement said...

Thank you Naveen....