Friday, June 13, 2014

ಮಥನ

ಬಹಳಷ್ಟು ಬಾರಿ ...
ನನ್ನನ್ನೇ ನಾನು ಕೇಳಿಕೊಂಡಿದ್ದಿದೆ.... 

"ನನ್ನ
ಬದುಕಿನಲ್ಲೇ ಯಾಕೆ ಹೀಗಾಗುತ್ತದೆ ?.."

ಇದೀಗ
ಅವನಿಂದ ಸಂದೇಶ ಬಂದಿದೆ....

"ಇಂದು ರಾತ್ರಿ ನನ್ನ ಬಳಿ ಬಾ...."

ಮೊದಲ ಬಾರಿ 
ನಾನಾಗಿಯೇ ಅವನ ಬಳಿ ಅನಿವಾರ್ಯವಾಗಿ ಹೋಗಿದ್ದೆ...

ಆದರೆ ಈಗ ಹಾಗಲ್ಲವಲ್ಲ...

ಅವನಿಗಾಗಿ
ಬಯಸಿ...
ಎದೆಯಲ್ಲಿ ಪ್ರೀತಿಯ ಹೂ ಹೊತ್ತು ಹೋಗುತ್ತಿರುವೆ....

ನಾನು "ತಾರೆ..."
ಕಿಷ್ಕೆಂದೆಯ ವಾಲಿಯ ಮಡದಿಯಾಗಿದ್ದವಳು...

ವಾಲಿ 
ನಿಮಗೆಲ್ಲ ಗೊತ್ತಲ್ಲ...
ಮಹಾ ಶಕ್ತಿಶಾಲಿ....

ಹಿಂದೆ
ಸಮುದ್ರ ಮಥನವಾಗುತ್ತಿದ್ದಾಗ ಅಲ್ಲಿ ಬಂದಿದ್ದ...

ರಾಕ್ಷಸರೂ..
ದೇವತೆಗಳು ಸಮುದ್ರ ಮಥನ ಮಾಡುತ್ತಿದ್ದಾಗ ಅವರಿಗೆ ದಣಿವಾಗಿದ್ದಾಗ
ವಾಲಿ ಅಲ್ಲಿದ್ದನಂತೆ..

ತಾನೊಬ್ಬನೇ 
ವಾಸುಕಿಯನ್ನು ಎರಡೂ ಕಡೆ ಎಳೆದು...
ಕಡೆದು 
ಮಥನ ಮಾಡಿದ್ದನಂತೆ..

ಅಂಥಹ " ಮಥನದ "  ಸಂದರ್ಭದಲ್ಲಿ ನಾನು ಹುಟ್ಟಿದ್ದು....

ಆಗ... 
ಅಲ್ಲಿರುವ ರಾಕ್ಷಸರು... 
ದೇವತೆಗಳು 
ನನ್ನನ್ನು ಆಸೆಯಿಂದ ನೋಡುವಂಥಹ ಸಂದರ್ಭದಲ್ಲಿ... 

ವಾಲಿ  ನನ್ನನ್ನು ಕಂಡು ...
ಮೋಹಿತನಾಗಿ...
ಎಲ್ಲ ದೇವತೆಗಳ ಸಮ್ಮುಖದಲ್ಲಿ ಬಹಳ ಸೊಕ್ಕಿನಿಂದ ಹೇಳಿದ್ದ...

"ಇವಳು ನನ್ನವಳು....
ಇವಳನ್ನು ನಾನು ಮದುವೆಯಾಗುತ್ತೇನೆ..."

ಅಲ್ಲಿದ್ದ 
ಯಾವ ರಾಕ್ಷರೂ..
ದೇವತೆಗಳೂ ತುಟಿ ಬಿಚ್ಚಲಿಲ್ಲವಾಗಿತ್ತು...

ಜವಬ್ದಾರಿ...
ಪರಿಶ್ರಮದ.. ಕೆಲಸ ..
ತಾಕತ್ತು...
ಅಧಿಕಾರವನ್ನು ಸಹಜವಾಗಿ ಕೊಡುತ್ತವೆ....

ನಾನು ಹೆಣ್ಣಲ್ಲವೆ... ?
ನನ್ನ
ಇಷ್ಟ.. ಕಷ್ಟಗಳನ್ನು ಯಾರೂ ಅಲ್ಲಿ ಕೇಳಲೇ ಇಲ್ಲ..... !

ಶಕ್ತಿಯ ಮೇಲೆ ... 
ಸೊಕ್ಕಿರುವ  ಗಂಡಸು 
ಹೆಣ್ಣನ್ನು... 
ಪ್ರಕೃತಿಯನ್ನು ಪ್ರೀತಿಸಲಾರ... 

ಅಧಿಕಾರದ ದರ್ಪವನ್ನು ಮಾತ್ರ ತೋರಿಸಬಲ್ಲ... 

ನಾನು ವಾಲಿಯ ಮಡದಿಯಾದೆ....
ಕಿಷ್ಕಿಂದೆಯ
ಪಟ್ಟದ ರಾಣಿಯಾದೆ...

ಮುಂದಿನ ವಿಷಯ ನಿಮಗೆ ಗೊತ್ತಲ್ಲ...

ವಾಲಿ
ಸುಗ್ರೀವರಿಬ್ಬರೂ ಮಾಯಾವಿ ರಾಕ್ಷನನ್ನು ಕೊಲ್ಲಲು ಹೋಗಿದ್ದು...

ವಾಲಿ ಮಾಯಾವಿ ರಾಕ್ಷಸನಿಂದ ಸತ್ತು ಹೋದ ಅಂತ ಸುಗ್ರೀವ ವಾಪಸ್ಸು ಬಂದಿದ್ದು...


ಸುಗ್ರೀವ ರಾಜಾನಾದದ್ದು..


ನಾನು 
ಅವನ ಸಿಂಹಾಸನದ ಪಕ್ಕದಲ್ಲಿ ಹೋಗಿ ಕುಳಿತದ್ದು...

ಕೆಲವು ದಿನಗಳ ನಂತರ ವಾಲಿ ಬಂದು 
ಸುಗ್ರೀವನಿಗೆ ಚೆನ್ನಾಗಿ ಹೊಡೆದು..
ಬಡಿದು ಕಾಡಿಗೆ ಅಟ್ಟಿದ್ದು...

ಸುಗ್ರೀವನ ಹೆಂಡತಿ "ರುಮೆಯನ್ನು" ತಾನು ಇಟ್ಟುಕೊಂಡಿದ್ದು...


ಶ್ರೀರಾಮ ಬಂದು..

ಮರೆಯಿಂದ ಬಾಣ ಹೊಡೆದು ವಾಲಿಯನ್ನು ಸಾಯಿಸಿದ್ದು....

ಇದು
ನಿನ್ನೆಯವರೆಗಿನ ಕಥೆ....

ಇಂದು
ಮತ್ತೆ ಸುಗ್ರೀವನಿಗೆ ಪಟ್ಟಾಭಿಷೇಕ..!

ವಾಲಿ
ಸತ್ತಿದ್ದಾನೆಂದು ದುಃಖಪಡಬೇಕೊ..?

ಸುಗ್ರೀವ ಮತ್ತೆ ಬಂದಿದ್ದಾನೆಂದು ಖುಷಿಪಡಬೇಕೊ ...!


ನನ್ನ
ಅಂತರಂಗವನ್ನು..
ನನ್ನ ಭಾವನೆಯನ್ನು ಕೇಳುವರ್ಯಾರು ?

ಈ ಗಂಡಸರಿಗೆ ನಾಚಿಕೆ ಇಲ್ಲ....

ಶಾಸ್ತ್ರ ಸಮ್ಮತವಾಗಿ..
ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾದ ರುಮೆಯನ್ನು ಬಿಟ್ಟು...
ನನಗೆ ಬಾ ಎಂದಿದ್ದಾನೆ...

ನನ್ನ
ಮೊದಲ ಮದುವೆಯಲ್ಲೂ ಇಷ್ಟು ಸಂಭ್ರಮ ನನಗಾಗಿರಲಿಲ್ಲ...

ಸುಗ್ರೀವನ 
ಅಂತಃಪುರದ ಬಾಗಿಲು ತೆರೆದು ಒಳಗೆ ಪ್ರವೇಶಿಸುವಾಗ
ನನ್ನ ಕೈಯೆಲ್ಲ ಬೆವರಿತ್ತು....

ಈ ಸುಗ್ರೀವ ನನಗೆ ಹೊಸಬನೇನಲ್ಲ....

ಆದರೆ

ಇಂಥಹ ... 
ಪ್ರತಿಬಾರಿಯ ಸಂದರ್ಭ ಹಾಗಾಗಿಬಿಡುತ್ತದೆ... .... 

ಅಗಲಿಕೆ ಇದೆಯಲ್ಲ...
ಬಾಂಧವ್ಯವನ್ನು..
ಸಂಬಂಧದ ಬೆಸುಗೆಯನ್ನು ಬಲವಾಗಿ ಹೊಸೆದುಬಿಡುತ್ತದೆ...

ಇಷ್ಟು ದಿನ
ವಾಲಿಯಬಳಿ ನರಳುವಾಗ ಸುಗ್ರೀವ ನೆನಪಾಗುತ್ತಿದ್ದ...

ಈಗ ಮತ್ತೆ ಸುಗ್ರೀವ ಸಿಕ್ಕಿದಾನೆ..

ವಾಲಿಯ ಯಾವುದೇ ಆತಂಕವಿಲ್ಲದೆ....

ಸುಗ್ರೀವ ನನ್ನ ಕೈ ಹಿಡಿದು ಪಕ್ಕಕ್ಕೆ ಕುಳ್ಳಿರಿಸಿಕೊಂಡಾಗ ಮೈ ಜುಮ್ಮೆನ್ನುತ್ತಿತ್ತು....

ಸುಗ್ರೀವ ಯಾವಗಲೂ ಹಾಗೆ....

ಹೂವಿನಂಥವನು...

"ತಾರೆ...
ನನ್ನದು ಒಂದಷ್ಟು ಪ್ರಶ್ನೆಗಳಿವೆ...."

"ಇದೆನು ?
ಕೂಡುವಾಗ.. ಪ್ರಶ್ನೆಗಳೆ ?

ಸುಗ್ರೀವ ನನ್ನನ್ನೇ ದಿಟ್ಟಿಸುತ್ತಿದ್ದ...

"ಪ್ರಶ್ನೆಗಳು ... 
ಇರುವದಕ್ಕಾಗಿಯೆ 
ಕೂಡುವದು..
ಕಳೆಯುವದು ಹುಟ್ಟಿಕೊಂಡಿದೆ..."

ಇವ ಸೊಗಸಾದ ಮಾತುಗಾರ...
ನಾನು ನಕ್ಕುಬಿಟ್ಟೆ.... 

" ಇರು ಮಾರಾಯಾ...
ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡು..."

ಸುಗ್ರೀವ
ತನ್ನ ಬೆರಳುಗಳುಗಳಿಂದ ನನ್ನ ಕಿವಿ ಬಳಿ ಕಚಗುಳಿ ಇಡುತ್ತಿದ್ದ...
ನನ್ನನ್ನು ಬಳಸಿ ಕೇಳಿದ.... 

"ಏನು ...?"

"ಅಣ್ಣನ ಮಡದಿಯಾಗಿದ್ದಾಗ ... 
ನೀನು 
ನನ್ನ ಕಾಲುಂಗುರ ನೋಡುತ್ತಿದ್ದೆ.....

ಈಗ 
ನನ್ನೆದೆಯ  ಬಂಗಾರದ ಸರಗಳನ್ನು ಕಣ್ಣ್ಮುಚ್ಚದೆ ನೋಡುತ್ತೀಯಾ... 
ಸೊಂಟದ ಪಟ್ಟಿಗೆ ಕೈ ಹಾಕುತ್ತೀಯಾ.. ?

ಏನಿದು

ಸಂಬಂಧ... ಬಾಂಧವ್ಯಗಳ ಅರ್ಥ ?

ದೇಹ.. ಮನಸ್ಸು.. 
ಬಯಕೆ ... 
ಆಸೆಗಳು ... 
ಸಂಬಂಧ...   ಇವುಗಳ ನಡುವಿನ ಪರಿಧಿ  ಏನು   ?  "

ಸುಗ್ರೀವ ತನ್ನ ಕೈ ಸಡಿಲಿಸಿದ... 
ದೂರ ಕುಳಿತ...

ಸ್ವಲ್ಪ ಹೊತ್ತು ಸುಮ್ಮನಿದ್ದ...

"ದೇಹವಾಗಲಿ.. 
ಮನಸ್ಸಾಗಲಿ .... 
ಸಿಕ್ಕಿದ "ಸಂದರ್ಭವನ್ನು" ಬೇಡವೆನ್ನುವದಿಲ್ಲ..   

ದೇಹ... 
ಮನಸ್ಸು... ಆಸೆಗಳಿಗಾಗಿಯೇ ಹಂಬಲಿಸುತ್ತವೆ... 
ಬದುಕುತ್ತವೆ.... 

ಬೇಡವೆನ್ನುವದು ಶಿಷ್ಟಾಚಾರ... 

ಸರಿ... ತಪ್ಪುಗಳು  .. ಮನಃಸಾಕ್ಷಿಗೆ ಬಿಟ್ಟಿದ್ದು.... 

ನಮ್ಮ 
ಈ ವರ್ತಮಾನದಲ್ಲಿ "ವಿಧವೆ" ... 
ಅತ್ತಿಗೆಗೆ ಬಾಳು ಕೊಡುವದು ತಪ್ಪಲ್ಲ...

ಅದು ಶಾಸ್ತ್ರ ಸಮ್ಮತ...


ಈಗ.... 

ನಿನ್ನ ಅಂತರಂಗವನ್ನು ಕೇಳಿಕೊ...

ಅಂದು

ಸಿಂಹಾಸನದಲ್ಲಿ 
ನಾನು ನನ್ನ ಮಡದಿ 
ರುಮೆಯೊಡನೆ ಕುಳಿತಿರುವಾಗ
ಮೊದಲಿಗೆ ನೀನಾಗಿಯೆ ಬಂದು ಕುಳಿತುಕೊಂಡೆ...

ನಾನು ಕರೆದಿರಲಿಲ್ಲ...


ಆಗ ನಿನಗೇನು ಅನ್ನಿಸಲಿಲ್ಲವಾ?


ಮೈದುನ.. 

ಅತ್ತಿಗೆ .. ಸಂಬಂಧ ಅಂತ..?... "

ನಾನು ಸಣ್ಣದಾಗಿ ಬೆವರುತ್ತಿದ್ದೆ... 

ನನ್ನ 
ಧ್ವನಿ ಕಂಪಿಸುತ್ತಿತ್ತು.... 


"ಅಂದು ..... 
ನಾನು ಹೆಣ್ಣಾಗಿ ನಿನ್ನ ಬಳಿ ಬರಲಿಲ್ಲ..

ನನ್ನ ಮಗ "ಅಂಗದನ" ಭವಿಷ್ಯಕ್ಕಾಗಿ..

ಒಬ್ಬ ತಾಯಿಯಾಗಿ ಬಂದೆ...

ಒಂದು 

ಹೆಣ್ಣಿಗೆ ಹಿಂದೆ ಮುಂದೆ ಯೋಚಿಸಬೇಕಾಗುತ್ತದೆ ..

ಒಬ್ಬ  ತಾಯಿಗೆ... 
ಮಗ ಮತ್ತು ಅವನ ಭವಿಷ್ಯ ಮಾತ್ರ ಕಾಣುತ್ತದೆ.."

ಸುಗ್ರೀವ  ಪಕ ಪಕನೆ ನಗುತ್ತಿದ್ದ....
ಮತ್ತೆ ಹತ್ತಿರ ಬಂದ....

"ತಾರೆ...
"ಮೈದುನ" ಎನ್ನುವ ಶಬ್ಧ ..... 

"ಮೈಥುನ"ದಿಂದ ಹುಟ್ಟಿರಬಹುದಾ ?"

ನನಗೆ ನಾಚಿಕೆಯಾಯಿತು....
ಸುಗ್ರೀವನನ್ನು ತಬ್ಬಿಕೊಂಡೆ...

ತನ್ನದಲ್ಲದ್ದು..
ಇದೀಗ ತನ್ನದ್ದಾಗಿದೆ....

ಮೈ ಹಿತವಾಗಿ ಕಂಪಿಸುತ್ತಿತ್ತು... ಕಣ್ಮುಚ್ಚಿದೆ..


ಸುಗ್ರೀವ ಮೆಲ್ಲಗೆ ಕಣ್ಣು ಬಿಡಿಸಿದ...


"ಈಗ ಹೇಳು...
ನನ್ನಣ್ಣ ಜಗಜಟ್ಟಿ...
ಅವನನ್ನು ಸೋಲಿಸಲು ದೇವತೆಗಳಿಂದಲೂ ಸಾಧ್ಯವಿಲ್ಲವಾಗಿತ್ತು...

ನಾನು ತೀರಾ ಸಾಮಾನ್ಯದವ..


ನನಗೂ..

ವಾಲಿಗೂ ಹೇಗೆ ಹೋಲಿಕೆ ? 
ಏನನ್ನಿಸುತ್ತದೆ ?.."

ನನಗೆ ಕೋಪವುಕ್ಕಿತು.. ಸುಗ್ರೀವನನ್ನು ದೂಡಿದೆ...

"ರುಮೇಯನ್ನೂ..
ನನ್ನನ್ನೂ ನೋಡಿದ್ದೀಯಾ... ನಿನಗೇನನ್ನಿಸುತ್ತದೆ ?

ಇಂದು 

ರುಮೆಯನ್ನು ಬಿಟ್ಟು ನನ್ನನ್ನು ಕರೆದಿದ್ದೀಯಾ ? 

ಯಾಕೆ ? "

ಸುಗ್ರೀವ ಮತ್ತೂ ಬಿಗಿಯಾಗಿ ತಬ್ಬಿಕೊಂಡ...
ಕಿವಿಯಲ್ಲಿ ಉಸುರಿದ..

"ಅಕ್ರಮವಾಗಿ 
ಸಿಗುವದು ರೋಮಾಂಚಕಾರಿಯಾಗಿರುತ್ತದೆ..

ಈಗ ನೀನು ಹೇಳು ... 

ನನ್ನಣ್ಣನ ತಾಕತ್ತಿನ ನಿನ್ನ ಅನುಭವ..."

ಈಗ ನಾಚಿಕೆಯಾಗಲಿಲ್ಲ... 

ಆದರೆ 
ಸುಗ್ರೀವನ ಮುಖ ನೋಡಲಾಗಲಿಲ್ಲ... 

"ಸುಗ್ರೀವಾ... 
ನಿನ್ನ ಅಣ್ಣನಿಗೆ ಒಂದು ವರವಿತ್ತು ಗೊತ್ತಿದೆಯಲ್ಲ ?

ಆತ 

ಯಾರ ಸಂಗಡ ಕುಸ್ತಿಯನ್ನಾಗಲಿ..
ಯುದ್ಧವನ್ನಾಗಲಿ ಮಾಡುವಾಗ..
ಎದುರಾಳಿಯ ಅರ್ಧ ಬಲ ಅವನಿಗೆ ಸಿಗುತ್ತಿತ್ತು...

ಅವನನ್ನು ಸೋಲಿಸಲು 

ಯಾರಿಂದಲೂ ಸಾಧ್ಯವಿರುತ್ತಿರಲಿಲ್ಲ... ..."

ಸುಗ್ರೀವ ಹುಬ್ಬೇರಿಸಿದ

"ಏನು ಇದರ ಅರ್ಥ ?"

"ನಿನ್ನಣ್ಣ...
ಮಡದಿಯೊಡನೆಯ ದಾಂಪತ್ಯ ಪ್ರೀತಿಯನ್ನೂ ..
ಕುಸ್ತಿ.. 
ಹೊಡದಾಟ ಅಂತಲೇ ತಿಳಿದುಕೊಂಡಿದ್ದ...

ನನಗೆ  ಪ್ರತಿ ದಿನ ರಾತ್ರಿ ... 
ಕುಸ್ತಿಯಾಡಿ ಸೋತ ಅನುಭವ...
ಮೈಕೈ ನೋವು.... "

ಸುಗ್ರೀವ ನನ್ನ ಕಣ್ಣುಗಳನ್ನೇ ದಿಟ್ಟಿಸಿದ..

"ದಾಂಪತ್ಯಕ್ಕೆ ಶಕ್ತಿ ಬೇಕಿಲ್ಲವೆ ?..."

ನನಗೆ ನಗು ತಡೆಯಲಾಗಲಿಲ್ಲ...

ಕಣ್ಮುಚ್ಚಿ ನಕ್ಕು ಬಿಟ್ಟೆ...


"ಸುಗ್ರೀವಾ...

ಹೂ ಅರಳಲು... 

ಯಾವುದೇ ತಾಕತ್ತು ಬೇಕಿಲ್ಲ...

ಸೂರ್ಯನ

ಮೃದು ಕಿರಣ .... 
ಹಿತವಾಗಿ ಚುಂಬಿಸಿದರೆ ಸಾಕು...

ಹೂ ಅರಳಿ ನಕ್ಕು ಬಿಡುತ್ತದೆ...."


ಸುಗ್ರೀವ
ಕೆಲ ಹೊತ್ತು ಮೌನವಾದ....

ಕಿವಿಯಲ್ಲಿ ಪಿಸುಗುಟ್ಟಿದ...

"ಪಾಪ !
ನನ್ನ ರುಮೆ...

ಅವಳು ನಿನ್ನಷ್ಟು ಬಲಶಾಲಿಯಲ್ಲ...


ಹೂವಿನಂತವಳು... "

ನಾನು ತಡಮಾಡಲಿಲ್ಲ...

ನಮ್ಮಿಬ್ಬರ ಏಕಾಂತದಲ್ಲಿ ಮಾತಿನದೇನು ಗಲಾಟೆ ?


ಮೆಲ್ಲಗೆ  
ದೀಪವಾರಿಸಿದೆ...


(ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ...)

35 comments:

SANTOSH KULKARNI said...

wow....what a romantic conversation along with unknowing information. Thanks a lot for this story.

Ittigecement said...

ಸಂತೋಷರವರೆ...

ರಾಮಾಯಣದ "ತಾರೆಯ" ಪಾತ್ರ ನನಗೆ ಬಹಳ ಕಾಡುತ್ತದೆ..

ಮೊದಲು ವಾಲಿಯ..
ನಂತರ ಸುಗ್ರೀವನ..

ಮತ್ತೆ ವಾಲಿಯ...

ಅಮೇಲೆ ಸುಗ್ರೀವನ "ಮಡದಿಯಾಗುತ್ತಾಳೆ..

ಅವಳ ಮನಸ್ಥಿತಿ ಹೇಗಿದ್ದಿರಬಹುದು ?

ಇದರ ಬಗೆಗೆ ಮೂರು ಪುಸ್ತಕ ಓದಿದೆ... ವಾಲ್ಮಿಕಿ ರಾಮಾಯಣ ಮುಖ್ಯವಾದದ್ದು.

ನಂತರ ಖ್ಯಾತ ಯಕ್ಷಗಾನ ಕಲಾವಿದರಾದ "ಶ್ರೀ ಶಶಿಕಾಂತ ಶೆಟ್ಟಿ..."
ರವೀಶ್ ಹೆಗಡೆ...
ನನ್ನ ಆತ್ಮೀಯ ಧಾರವಾಡದ "ದಿವಾಕರ" ಇವರ ಬಳಿ ಚರ್ಚಿಸಿದ್ದೆ...

ತಾರೆ ಬಹಳ ಬುದ್ಧಿವಂತಳಿದ್ದಳು,...
ರಾಜತಾಂತ್ರಿಕ ವಿಚಾರಮತಿಯಾಗಿದ್ದಳು..

ಸೊಕ್ಕಿನ ವಾಲಿಗೂ ಸಹ ಯಾವುದೇ ಸಮಯದಲ್ಲಿ ಸಲಹೆ ಸೂಚನೆಕೊಡಬಲ್ಲವಳಾಗಿದ್ದಳು...

ಮಧ್ಯರಾತ್ರಿಯಲ್ಲಿ ಸುಗ್ರೀವ ಯುದ್ಧಕ್ಕೆ ಕರೆದಾಗ ವಾಲಿಯನ್ನು "ಬೇಡವೆಂದು" ತಡೆಯಲು ಪ್ರಯತ್ನಿಸಿದ್ದಳು..

ಮುಂದೆ ಲಕ್ಷ್ಮಣ ಸುಗ್ರೀವನನ್ನು ಹುಡುಕುತ್ತ ಕಿಷ್ಕಿಂದೆಗೆ ಬಂದಾಗ ಅವನನ್ನು ಸಮರ್ಥವಾಗಿ ಸಮಧಾನಿಸಿ ಕಳುಹಿಸುತ್ತಾಳೆ...


ಇಂಥಹ ತಾರೆ "ಬಹು" ಸಂಬಂಧವನ್ನು ....
ಗಂದಿನೊಡನೆಯ "ಅಹಂ"ನೊಡನೆ ಹೇಗೆ ಸಂಭಾಳಿಸಿದಳು ಎನ್ನುವದು ಸೋಜಿಗ ಮತ್ತು ಕುತೂಹಲದ ವಿಷಯ....

ಕಥೆಯನ್ನು ಇಷ್ತಪಟ್ಟಿದ್ದಕ್ಕೆ ಪ್ರೀತಿಯ ಧನ್ಯವಾದಗಳು....

Asha said...

Waaah!!! Wonderful Prakashanna..

Ittigecement said...

ಆಶಾ....

ಆಗಿನ ಕಾಲದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ
ಉಳಿದೆಲ್ಲವರೂ "ವಿಧವೆಯರನ್ನು" ಕೆಟ್ಟದಾಗಿ ನಡೆಸಿಕೊಳ್ಳುತ್ತಿರಲಿಲ್ಲ...

ಅಣ್ಣ ಸತ್ತರೆ ತಮ್ಮ "ಅತ್ತಿಗೆಯನ್ನು" ಮದುವೆಯಾಗಿ ಬಿಡುತ್ತಿದ್ದ...
ಅದು ಸಹಜವಾಗಿತ್ತು..

ಆದರೆ..
ತಮ್ಮನ ಹೆಂಡತಿಯನ್ನು "ಅಣ್ಣ" ಮದುವೆಯಾಗುವದು ಶಾಸ್ತ್ರಕ್ಕೆ ವಿರುದ್ಧವಾಗಿತ್ತು...
ಅದು ಅಪರಾಧವಾಗಿತ್ತು..

ಹಾಗಾಗಿ
ವಿಷಯ ತಿಳಿದ ಶ್ರೀರಾಮ ಸುಗ್ರೀವನಿಗೆ ಸಹಾಯ ಮಾಡಲು ಒಪ್ಪುತ್ತಾನೆ.

ಕಡೆದಷ್ಟೂ "ವಿಷಯ" ಸಿಗುತ್ತವೆ ನಮ್ಮ ಧರ್ಮ ಗ್ರಂಥಗಳಲ್ಲಿ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಧನ್ಯವಾದಗಳು...

Anil said...

ಮೊದಲ ಬಾರಿ ಓದಬೇಕಾದ್ರೇ ಕುತೂಹಲ ಉಳಿಸಿ ಓದಿಸುತ್ತಾ ಹೋಯ್ತು ನಿಮ್ಮೀ ಕಥೆ! ಕಥೆಯಲ್ಲಿರುವ ಕೊಂಡಿಗಳು ನನಗೆ ಇಷ್ಟವಾಯ್ತು. ಆ ಭಾವನೆ ಯಾಕೆ ಬಂತು ಅನ್ನೋದರ ಪರಿಚಯ ಅಲ್ಲಿ ಬಂದು ಹೋಗುವ ಇನ್ನೊಂದು ಭಾವನೆ ಹೇಳುತ್ತದೆ. ಕುತೂಹಲಕ್ಕೆ ಉತ್ತರ ಅಲ್ಲಲ್ಲಿ ಸಿಗುತ್ತಾ ಹೋಯ್ತು.

ನಾನು ಓದುವಾಗ ಇದನ್ನ ಕಲ್ಪನೆ ಮಾಡ್ಕೋತಾ ಹೋದೆ, ಆಗ ಕಥೆ ಆಪ್ತ ಅನ್ಸೋಕೆ ಶುರು ಅಯ್ತು. ಹಾಗಾಗಿ ಕಥಾ ಚಿತ್ರಣ ಕಣ್ಣಿಗೆ ಕಟ್ಟುತ್ತಿದ್ದಂತೆಯೇ ಅಲ್ಲಿ ಬರುವ ನೆನಪು / ಭಾವ ಎಲ್ಲವೂ ಹತ್ತಿರವಾಗ್ತಾ ಹೊಯ್ತು.

ನಿಮ್ಮ ಶೈಲಿಯಲ್ಲಿ ಬರೆದಿರುವ ಆ ಹೆಣ್ಣಿನ ಭಾವನೆ, ತುಮುಲ ಮನಸ್ಸು, ದುಗುಡ, ಕೋಪ, ನಾಚಿಕೆ, ತುಡಿತ ಮತ್ತು ಗಂಡು ಹೆಣ್ಣಿನ ನಡುವೆ ಆಗಾಗ್ಗೆ ಬಂದು ಹೋಗುವ ಮಾತುಗಳು ಅರ್ಥೈಸಿಕೊಳ್ಳಲು ಸಹಾಯಕಾರಿಯಾಗಿದೆ. ಇದಲ್ಲದೇ ಅಲ್ಲಿರುವ ರಸಿಕತನವನ್ನ ಸೂಕ್ಷ್ಮ ರೀತಿಯಲ್ಲಿ ಹೇಳಿರುವ ಪರಿ ನನಗೆ ತುಂಬಾ ಇಷ್ಟವಾಯ್ತು. ಹಾಗೆಯೇ ಮಾತುಗಳ ಮಧ್ಯೆ ಬರುವ ಆತಂಕ, ಭಯ, ಆತ್ಮಸಾಕ್ಷಿಯ ಎಚ್ಚರಿಕೆ - ಇದೆಲ್ಲವೂ ಕಥೆಯಲ್ಲಿನ ನನಗಿಷ್ಟವಾದ ಸಂಗತಿಗಳು.

ಒಂದೇ ಉಸಿರಲ್ಲಿ ಈ ಕಥೆಯನ್ನು ಓದಿದ ಅನುಭವ, ನನಗೆ ಖುಷಿ ಕೊಟ್ಟಿದೆ.

ಮತ್ತೆ ಒದುತ್ತೇನೆ. ಆಗ ಮತ್ತೀನಾದರು ಅನಿಸಿದ್ದಲ್ಲಿ ನಿಮಗೆ ತಿಳಿಸುವೆ.
ಸದ್ಯಕ್ಕೆ ಚಂದದ ಕಥೆ ಕೊಟ್ಟಿದ್ದಕ್ಕೆ ತುಂಬ ಥ್ಯಾಂಕ್ಸ್ ಅಣ್ಣ :)

- ಅನಿಲ್

Badarinath Palavalli said...

ಪತಿವ್ರತಾ ಶ್ಲೋಕದಲ್ಲಿ ಸ್ಥಾನ ಪಡೆದವಳು ತಾರೆ.

ಈ ಬರಹವು ತಮ್ಮ ಅಧ್ಯಯನಶೀಲತೆ ಮತ್ತು ವಿಚಾರಗ್ರಹಿಕೆಗೆ ಹಿಡಿದ ಕನ್ನಡಿ.

ಲೇಖಕ ತುಸು ಆಯ ತಪ್ಪಿದರೂ ಪಾತ್ರ ಔನತ್ಯಕ್ಕೆ ಚ್ಯುತಿಬಂದು, ಮತ್ತೊಂದು ಶೀಲ ಸಂಬಂಧಿ ಕಥೆಯಾಗಿ ಹೋಗುವ ಅಪಾಯವಿತ್ತು, ಆದರೆ ತಾವು ಎಲ್ಲೂ ಎಡವಲೇ ಇಲ್ಲ.

ನನಗೆ ಹಿಡಿಸಿದ ಸಾಲುಗಳು:
'ಜವಬ್ದಾರಿ...
ಪರಿಶ್ರಮದ.. ಕೆಲಸ ..
ತಾಕತ್ತು...
ಅಧಿಕಾರವನ್ನು ಸಹಜವಾಗಿ ಕೊಡುತ್ತವೆ....'

Krishna Mohan said...

ವಾಲಿ ಸುಗ್ರೀವರ ಕಾಳಗಕ್ಕಿಂತ ಹೆಚ್ಚು ಸಂಕೀರ್ಣವಾದ ಸಂಬಂದಗಳ ಜಗಳವನ್ನು ಚೆನ್ನಾಗಿ ಹೆಣೆದಿದ್ದೀರಿ.

Srikanth Manjunath said...

ಮೊದಲಿಗೆ ಬಿದ್ದ ಒದೆಗಳ ಲೆಕ್ಕಬೇಕು .. !!!!

ಬಹುಪತ್ನಿತ್ವ, ಬಹುವಲ್ಲಭ, ಬಹು ನಾರಿ ಪುರುಷ ಹೌದು ಎಲ್ಲಾ ವಿಶೇಷಣ ಪುರುಷನಿಗೆ ಇದ್ದರೂ, ಅರಳಿದ ಆಸೆ ಕಮರಿದ ಕನಸುಗಳು, ನನಸಾಗಬೇಕಾದ ಭವಿಷ್ಯ ಇದರ ಮುಂದೆ ಬರಿ ಸ್ತ್ರೀ ರತ್ನವೇ ಅಲ್ಲಾ ಕಾಲನೂ ಕೈ ಕಟ್ಟಿ ಕೂರುತ್ತಾನೆ ಎನ್ನುವುದಕ್ಕೆ ಮಾರ್ಕಂಡೇಯ ಪುರಾಣ , ಸಾವಿತ್ರಿ ಪುರಾಣ, ಅಹಲ್ಯಾ ಪುರಾಣ ಅತ್ಯುತ್ತಮ ಉದಾಹರಣೆ..

ಬಲವಂತವಾಗಿಯೋ, ಬೇಸರದಿಂದಲೋ, ಇಲ್ಲವೇ ಅತಿ ಆಸಕ್ತಿಯಿಂದಲೋ ಜೀವನ ಸಾಗಿಸಿದ ತಾರೆ.. ಸುಗ್ರೀವನ ಕಣ್ಣಲ್ಲಿ ಮಿನುಗುವ ತಾರೆಯಾಗಿದ್ದು ಸೋಗಿಜವೇ ಸರಿ..

ಆಳಕ್ಕೆ ಇಳಿದು ಘಟನೆಯ ಇನ್ನೊಂದು ಮಗ್ಗುಲಿಗೆ ಹೊರಳಿ ನೋಡುವ ನಿಮ್ಮ ಕಥಾ ನಿರೂಪಣೆ, ಮಾತುಗಳು, ಅದಕ್ಕೆ ತೊಡಿಸುವ ಬಣ್ಣದ ಪೋಷಾಕುಗಳು ಆಹಾ ಒಂದಕ್ಕಿಂತ ಒಂದು ಚೆನ್ನಾ..

ಅಶ್ಲೀಲತೆಯಲ್ಲಿ ಮುಳುಗಿ ತೇಲಿಸಬಹುದಾದ ಲೇಖನವನ್ನು ಓದುಗರ ಕುತೂಹಲದ ಅಂಚಿಗೆ ಕರೆದು ಒಯ್ಯುವ್ವ ನಿಮ್ಮ ನಿರೂಪಣೆಯ ಶೈಲಿ ಸೂಪರ್ ಪ್ರಕಾಶಣ್ಣ..

ವಿಭಿನ್ನ ಅನುಭವ ಕೊಡುವ ಕಥಾ ಲೇಖನ ಭೇಷ್ ಅನ್ನಿಸಿಕೊಳ್ಳುತ್ತದೆ..

Unknown said...

ಇಷ್ಟೆಲ್ಲಾ ಕಥೆ ನೆನೆಪೇ ಇತ್ತಿಲ್ಲೆ, ನಾನು ಓದಕಾತು ಇನ್ನೊಂಸರ್ತಿಯ. ಕಥೆ ಬರ್ಯ ಶೈಲಿ ಮಾತ್ರ ಸೂಪರ್.....

Unknown said...
This comment has been removed by the author.
ravish.blogspot.com said...

Prakashannaaa nijawagiyoo nimma kushalatege mechchale beku..... Nannondige nivu charche madiddeeri adare istu sogasagi expose maduvirendukondiralilla...... Kaviya chaturyakke mechchle beku......

Unknown said...

Very good narration,

Unknown said...

Super....!!!

ಪವನ್ ಅಡಿಗ said...

ಎಂದು ಮನ ಕೇಳದ, ಮನ ಹೇಳದ ಸುಮಧುರ ಪ್ರೇಮ ಕಾವ್ಯ

Niharika said...

Thumba Chennagi Bandide Annayya.
Kannada Vaali movie li Anna Tammana yendatiyanna bayastane adu Shashthrakke virudda na?

Ittigecement said...

ಅನಿಲ್ ಕುಲಕರ್ಣಿಯವರೆ...

ಈ ಕಥೆ ಹೊಳೆದಾಗ ಮೊದಲಿಗೆ ನನ್ನಾಕೆಗೆ ಹೇಳಿದೆ...
ನಂತರ ನನ್ನ ಇನ್ನೊಬ್ಬ ಆತ್ಮೀಯರಿಗೆ ಹೇಳಿದೆ...

"ಚೆನ್ನಾಗಿದೆ ಕಥಾವಸ್ತು ಬರಿರಿ" ಅಂದರು...
ನನ್ನಾಕೆ ಸಣ್ಣದಾಗಿ ಗದರಿಕೆ ಹಾಕಿದ್ದರು ಅನ್ನಿ...

ಅದರೂ ಧೈರ್ಯ ಸಾಲಲಿಲ್ಲ..

ಹಿರಿಯರಾದ ಗೋಪಾಲ ವಾಜಪೇಯಿಯವರ ಬಳಿ ಚರ್ಚಿಸಿದೆ...

"ನೀವು ಬರೆಯಿರಿ..
ವಿರೋಧ ಬರಲಾರದು.. ನೀವು ಪತ್ರಿಕೆಗಳಿಗೆ ಕಳುಹಿಸಿ ಕೊಡಿ " ಅಂತ ಬೆನ್ನು ತಟ್ಟಿದರು...

ಅಂತೂ ಬರೆದಾಯ್ತು.

ಕಥೆಯನ್ನು ಓದಿದ ಪತ್ರಿಕಾ ಮಿತ್ರರೊಬ್ಬರು "ಇಂಥಹ ಕಥೆಗಳನ್ನು ನಮ್ಮ ಪತ್ರಿಕೆಗೆ ಕಳುಹಿಸಿ ಕೊಡಿ... ಆಮೇಲೆ ಬ್ಲಾಗಿಗೆ ಹಾಕಿಕೊಳ್ಳಿ" ಅಂತ ಪ್ರೀತಿಯಿಂದ ಸಲಹೆ ಕೊಟ್ಟರು.

"ಮುಂದಿನ ಕಥೆ ಬರೆದಾಗ ಹಾಗೆ ಮಾಡುವೆ" ಅಂತ ಹೇಳಿದ್ದೇನೆ...

ನಾನು ಬರೆವ ಈ ವಿಚಿತ್ರ ಶೈಲಿಯ ಕಥೆಗಳು ಪತ್ರಿಕೆಯಲ್ಲಿ ಹೇಗೆ ಕಾಣಬಹುದು ? !!!!

ವಿಚಿತ್ರ ಕುತೂಹಲವಿದೆ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಧನ್ಯವಾದಗಳು...

Ashith said...

ಮರೆತುಹೋಗಿದ್ದ ರಾಮಾಯಣದ ಕೆಲವು ಪಾತ್ರಗಳನ್ನು ಸೊಗಸಾದ ರೀತಿಯಲ್ಲಿ ನೆನಪಿಸಿದಿರಿ.

ತಾರೆಯ ಮನಸ್ಥಿತಿಯನ್ನು ಚೆನ್ನಾಗಿ ವರ್ಣಿಸಿರುವಿರಿ. ಆದರೆ ಅಣ್ಣ ತಮ್ಮಂದಿರ ಈ ಜಗಳದಲ್ಲಿ ನಷ್ಟವಾದದ್ದು ಅವರ ಹೆಂಡತಿಯರಿಗೆ ಅನ್ನುವುದು ವಿಷಾದ. ಇಲ್ಲಿ ರುಮೆಯ ಮನಃಸ್ಥಿತಿಯನ್ನು ಕೂಡ ಅರಿಯಬೇಕಲ್ಲವೇ? ತನ್ನ ಗಂಡ ಬೇರೊಬ್ಬಳ ವಶವಾಗಿರುವುದು ಅವಳಿಗೆ ಬಹಳ ದುಃಖ ತಂದಿರಬಹುದಲ್ಲವೇ?

ಒಟ್ಟಿನಲ್ಲಿ ತುಂಬಾ ದಿನಗಳ ನಂತರ ಕಥೆಯನ್ನು ಒಂದು ವಿಶಿಷ್ಟವಾದ ಪೌರಾಣಿಕ ಕಥೆಯನ್ನು ಬರೆದಿರುವಿರಿ. ಚೆನ್ನಾಗಿದೆ

sunaath said...

ಗಂಡು, ಹೆಣ್ಣಿನ ಸಂಬಂಧ ವಿಚಿತ್ರವಾದದ್ದು. ಆ ಸಂಬಂಧದ ಒಂದು ಮುಖವನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ. ಈ ಸಂದರ್ಭದಲ್ಲಿ ನನಗೆ ಶಿವರಾಮ ಕಾರಂತರ ಕಾದಂಬರಿ, "ಮೈ ಮನಗಳ ಸುಳಿಯಲ್ಲಿ" ನೆನಪಾಗುತ್ತದೆ.

shubha hegde said...

Amazing story u have presented here.I find very impressive lines all u have specified in RED color.story it self creates many unanswered queries regarding social relationship between men and woman.. but really appreciate your attempt to clarify this.u have justified how cruelty negatively affects nature and love.. very good story.

Unknown said...

ಚಿಕ್ಕವನಿದ್ದಾಗ ಹಾಸಣಗಿಯ ಅಜ್ಜ ರಾಮಾಯಣ ಕಥೆಯನ್ನು ವಿವರವಾಗಿ ೩ ತಿಂಗಳುಗಳ ಕಾಲ ನಮಗೆ ಹೇಳಿದ್ದು ಇಂದಿಗೂ ನೆನಪು ಇದೆ. ನಂತರ ಮಕ್ಕಳ ರಾಮಾಯಣ, ವಾಲ್ಮೀಕಿ ರಾಮಾಯಣಗಳನ್ನೂ ಓದಿದರೂ "ತಾರಾ" ವಾಲಿಯ ನಂತರ ಸುಗ್ರೀವನ ಮದುವೆ ಆದಳು ಅನ್ನುವಿದಷ್ಟೇ ಗೊತ್ತಿತ್ತೆ ಹೊರತು ಇ ರೀತಿಯಾಗಿ ಯಾವತ್ತು ಯೋಚನೆ ಮಾಡಿರಲಿಲ್ಲ. ತುಂಬಾ ಧರ್ಮಸುಕ್ಷ್ಮವಾದ ವಿಷಯವನ್ನು ಆರಿಸಿಕೊಂಡು ಚೆನ್ನಾಗಿ ವಿವರಿಸಿದ್ದಿರ. ತುಂಬಾ ಇಷ್ಟವಾಯಿತು ಪ್ರಕಾಶಣ್ಣ.

Unknown said...
This comment has been removed by the author.
Unknown said...

ಪ್ರಕಾಶ್ ಜಿ,
'ಮಥನ' ಎಂಬ ಶೀರ್ಷಿಕೆಯೇ ಬಲು ಚಮತ್ಕಾರಿಕವಾದುದಾಗಿದೆ. ಈ 'ಮಥನ'ವನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಅರ್ಥ ಹೊಳೆಯಿಸುವ ರೀತಿಯಲ್ಲಿ ಬಳಸಿದ್ದೀರಲ್ಲ... ನಿಮಗೆ ಮೊದಲು ಹ್ಯಾಟ್ಸ್ ಆಫ್.
ಇನ್ನು ಕತೆಗೆ ಬರೋಣ. ನಾನು ಓದುತ್ತಿದ್ದಷ್ಟು ಕಾಲ ನನಗೆ ಕಂಡವರು ಕೇವಲ 'ತಾರಾ' ಮತ್ತು 'ಸುಗ್ರೀವ'. ಹಾಗೂ ಆಯಾ ಪ್ರಸಂಗಗಳನ್ನು ನೀವು ವಿವರಿಸುವಾಗ ಆಯಾ ಪ್ರಸಂಗ ಮತ್ತು ಪಾತ್ರಗಳು ಕಣ್ಣೆದುರು ಕಟ್ಟಿದುವು. ಇದು ಯಶಸ್ವೀ ಕತೆಯೊಂದರ ಲಕ್ಷಣ. ಮತ್ತು ನಿಮ್ಮ ತಂತ್ರಗಾರಿಕೆಯೂ ಹೌದು. ಎಂದಿನಂತೆ ಕತೆ ಆರಂಭದಿಂದ, ಅಂತ್ಯ ಕಾಣುವತನಕ ಓದುಗನನ್ನು ಕುತೂಹಲದ ಮೆಟ್ಟಿಲುಗಳನ್ನೂ ಹತ್ತಿಸುತ್ತಲೇ ಹೋಗುತ್ತದೆ. ಇಲ್ಲಿ ಒಂದು ಹೆಣ್ಣಿನ ಅಂತರಂಗವನ್ನು ಬಿಚ್ಚಿಡುವುದರ ಜೊತೆಗೆ ಗಂಡಿನ ಘಮಿಂಡಿ ಮತ್ತು ಅದನ್ನು ಭಂಗಿಸುವ ಹೆಣ್ಣಿನ ಜಾಣ್ಮೆಗಳನ್ನು ಬಹು ಚೆನ್ನಾಗಿ ಬಿಂಬಿಸಿದ್ದೀರಿ. ಅಲ್ಲಲ್ಲಿ ನೀವು ಮಾಡುವ ಕೆಲವು ಸ್ಟೇಟ್ಮೆಂಟುಗಳು ಕೋಲ್ಮಿಂಚಿನಂತಿವೆ. ಇವು ನನಗೆ ನುಡಿಗಟ್ಟುಗಳಾಗಿ ಮಹತ್ವದ್ದೆನಿಸುತ್ತವೆ. ಉದಾಹರಣೆಗೆ : ''ಪ್ರಶ್ನೆಗಳು ಇರುವುದಕ್ಕಾಗಿಯೇ ಕೂಡುವುದು ಕಳೆಯುವುದು ಹುಟ್ಟಿಕೊಂಡಿದೆ...'' ''ಒಬ್ಬ ತಾಯಿಗೆ ಮಗ ಮತ್ತು ಅವನ ಭವಿಷ್ಯ ಮಾತ್ರ ಕಾಣುತ್ತದೆ..." "ಅಕ್ರಮವಾಗಿ ಸಿಗುವುದು ರೊಮಾಂಚಕಾರಿಯಾಗಿರುತ್ತದೆ..."
ಹೀಗೆ ಈ ಒಂದು ಸಣ್ಣ ಕತೆಯ ಮೂಲಕ ನೀವು ಏನೆಲ್ಲಾ, ಎಷ್ಟೆಲ್ಲಾ ವಿಷಯಗಳನ್ನು ಹೇಳುತ್ತೀರಿ?!
ಕೇವಲ ನಿಮ್ಮ ಬ್ಲಾಗಿನಲ್ಲಿ ಹಾಕಿಕೊಂಡು ಅಸಂಖ್ಯಾತ ಓದುಗರಿಗೆ ನೀವು ಮೋಸ ಮಾಡುತ್ತಿದ್ದೀರಿ. ಇನ್ನಾದರೂ ಇದನ್ನು ನಿಲ್ಲಿಸಿ, ಮೊದಲು ಪತ್ರಿಕೆಗಳಿಗೆ ಕಥೆ ಕಳುಹಿಸಿ. ಅಲ್ಲಿ ಪ್ರಕಟವಾದ ನಂತರ ನಿಮ್ಮ ಬ್ಲಾಗಿಗೆ ಹಾಕಿಕೊಳ್ಳಿ. ಇದನ್ನಂತೂ ನಾನು ಮೊದಲಿನಿಂದಲೂ ನಿಮಗೆ ಹೇಳುತ್ತಲೇ ಬಂದಿದ್ದೇನೆ.
ಇಷ್ಟೆಲ್ಲಾ ಹೇಳಿದ ಮೇಲೆ ಒಂದು ಹೇಳಲೇಬೇಕಾದ ಮಾತು : ನೀವು ಕತೆಯನ್ನು ಟೈಪ್ ಮಾಡಿದ ಮೇಲೆ, ಒಂದೆರಡು ಗಂಟೆ ಹಾಗೆ ಬಿಟ್ಟುಬಿಡಿ. ಆ ಮೇಲೆ ಮತ್ತೊಮ್ಮೆ ಓದಿ ನೋಡಿ. ಅಕ್ಷರಸ್ಖಾಲಿತ್ಯಗಳು (spelling mistakes) ನಿಮಗೆ ಗೊಚರಿಸುತ್ತವೆ. ಅವುಗಳನ್ನು ಸರಿಪಡಿಸಿದ ಮೇಲೆಯೇ ಮುಂದಕ್ಕೆ ಬಿಡಿ.
ಇಂಥ ಎಷ್ಟು ಕತೆಗಳನ್ನು ನೀವು ಬರೆದರೂ ನಮಗೆ ಬೇಕು. ಮತ್ತು ಅವೆಲ್ಲವುಗಳ ಒಂದು ಸಂಕಲನವನ್ನು ನೀವು ಬೇಗನೆ ನಮ್ಮ ಕೈಗಿಡಬೇಕು...

ಜಲನಯನ said...

ಪ್ರಕಾಶ್...ಎಂದಿನಂತೆ ವಿಭಿನ್ನ ಮತ್ತು ಹಿಡಿದಿಡುವ ನಿರೂಪಣಾ ಶೈಲಿ ಮೆಚ್ಚುಗೆಯಾಯ್ತು. ಸುಗ್ರೀವ ಎರಡು ಸಲ ಮದುವೆಯಾಗುವುದು ನನಗೆ ತಿಳಿದಿರಲಿಲ್ಲ, ವಾಲಿ ಸತ್ತ ನಂತರ ಮದುವೆಯಾಗುವುದು ಎಂದುಕೊಂಡಿದ್ದೆ. ಬಹುಶಃ ಇದೇ ಪರಂಪರೆಯ ಕುರುಹುಗಳು ಮಾನವ ಸಮಾಜದಲ್ಲೂ ಇದ್ದವು ಎನ್ನುವುದಕ್ಕೆ ಕೆಲ ಪರ್ವತ ಪ್ರದೇಶದ ನಡವಳಿಕೆಯಲ್ಲಿ ಕಾಣಸಿಗುತ್ತವೆ. ಪಂಜಾಬಿ ಸಮಾಜದಲ್ಲೂ ಇತ್ತೇನೋ ಎನ್ನುವ ಅನುಮಾನವೂ ನನ್ನದು "ಏಕ್ ಚಾದರ್ ಮೈಲಿ ಸಿ" ಕಥೆಯಲ್ಲಿ ಈ ಉಲ್ಲೇಖ ಇದೆ. ತರ್ಕವೂ ಒಂಥರಾ ಬೇರೆಯೇ ದಿಶೆಯಲ್ಲೂ ಸಾಗುತ್ತದೆ.

Umesh Balikai said...
This comment has been removed by the author.
Umesh Balikai said...

ಚೆನ್ನಾಗಿದೆ ಪ್ರಕಾಶ್ ಸರ್.. ತುಂಬಾ ಇಷ್ಟವಾಗಿದ್ದು ನಿಮ್ಮ ನಿರೂಪಣಾ ಶೈಲಿ:-)

Harini Narayan said...

ಹೆಣ್ಣು - ಹಿಂದೆಯೂ , ಇಂದಿಗೂ, ಮುಂದೂ ಸಮಾಜದ ದೃಷ್ಟಿಯಲ್ಲಿ ಏಕಮುಖವಾಗಿಯೇ ವಿಮರ್ಶೆಗೊಳಗಾಗಿದ್ದಾಳೆ. ನಿಮ್ಮ ನಿರೂಪಣಾ ಶೈಲಿ, ಹೆಣ್ಣನ್ನು ವಿಭಿನ್ನ ದೃಷ್ಟಿಯಿಂದ ನೋಡಿದ್ದು, ಚೆನ್ನಾಗಿದೆ. ತಾರಾ- ಳ ಪಾತಿವ್ರತ್ಯದ ಬಗ್ಗೆ ಈಗ ನಾವುಗಳು ಪ್ರಶ್ನಿಸಲು ಹೋದರೆ, ನಮಗೆ ಸಿಗುವ ಉತ್ತರವೇ ಬೇರೆ :) ಲೋಕ ಕಲ್ಯಾಣಾರ್ಥವಾಗಿ ಕೆಲವು ಪಾತ್ರಗಳ / ಕಾರಣಿಕರ ಸೃಷ್ಟಿಗಾಗಿ ಆ ವಿಧಾನ ಸಮಂಜಸವಾಗಿತ್ತು, ಇರಬೇಕಿತ್ತು.. ಎನ್ನುತ್ತಾರೆ. ತಮ್ಮ ಮಥನದ ದೃಷ್ಟಿಯೂ ಒಂದು ವಿಚಾರಾತ್ಮಕವೇ...

ಶ್ರೀವತ್ಸ ಕಂಚೀಮನೆ. said...

ತುಂಬಾ ಇಷ್ಟ ಆತು ಪ್ರಕಾಶಣ್ಣ...

ಸಂಧ್ಯಾ ಶ್ರೀಧರ್ ಭಟ್ said...

ರಾಮಾಯಣವನ್ನು ಮಥಿಸಿ ತಂದ ಕಥೆ ಚೆಂದ ...

ಓದುತ್ತಿರುವಂತೆ ಪ್ರತಿ ಪಾತ್ರಗಳ ಮನಸ್ಥಿತಿಯಲ್ಲಿ ಸ್ವಲ್ಪ ಸ್ವಲ್ಪ ಹೊತ್ತು ನಾವೇ ನಿಂತು ಹೊರಡುತ್ತೇವೇನೋ ಎನಿಸುತ್ತೆ ...

Unknown said...

ಶ್ರೀ ಪ್ರಕಾಶ್ ಸರ್,
ಬಹಳ ತಿಂಗಳುಗಳಿಂದ ನಿಮ್ಮ ಬ್ಲಾಗ್ ಓದ್ತೇನೆ!! ಹೌದು. ಆದರೆ ಇದು ನನ್ನ ಮೊದಲ ಕಾಮೆಂಟ್.

ಗೆಳೆಯರೊಬ್ಬರು ನಿಮ್ಮ, ಬೇಡವಾದ ಹೆಸರಿನದು" : ) ಪುಸ್ತಕ ಕೊಟ್ಟಿದ್ರು, ಒದಿದೆ. ಆಮೇಲೆ ಬ್ಲಾಗ್ ಓದೋದು ಶುರು ಮಾಡಿದೆ.

ನನಗ ನೀವು ಒಮ್ಮೊಮ್ಮೆ, ಭಾರಿ ವಿಚಿತ್ರ ಮತ್ತ ವಿಶಿಷ್ಟ ಅನಸ್ತಿರಿ. ನಕ್ಕು ನಗಿಸೋ ಮನುಷ್ಯ, ಒಮ್ಮೆಲೇ ಭಾವುಕ ಮಾಡ್ತೀರಿ, ಮತ್ತೊಮ್ಮೆ ವಿಚಾರ ಮಾಡುವಂಗ!!

ನಿಮ್ಮ ಬೆಳವಣಿಗೆ ಮುಂದು ವರಿಲಿ.

ನಮಸ್ಕಾರ
ದಯಾನಂದ್ ಬ್ಯಾಡಗಿ.

bilimugilu said...

PatragaLella kaNNa mundhe haadi hoguvanthe maadide katheya niroopaNe....
Ramayana Mahabharatadalli baruva sthree pathragaLu obbariginta obbaru vishesha, vibhinna....
Adhyayana, kalikege merugu needuva pushtineeduva jeevakaLegaLu....
Indina namma heNNumakkaLige holisidare, aa hindina kaaladillada aa dhairya, sthairya, samarthya, samaanathe ellavoo eegilla annodu vishaada........
Like always, Liked the story a lot Prakash Ji :) Ishtavaaytu........
Taara manasige iLididdaaLe, katheya gunginalliruvante maadiddaale.

Sujata said...

Very nice Prakashanna

Sujata said...
This comment has been removed by the author.
Unknown said...

ಪ್ರಕಾಶಣ್ಣಾ ನಿಮ್ಮ ಬರವಣಿಗೆ ಶೈಲಿ ತುಂಬಾ ಹಿಡಿಸಿತು. ಒಂದು ಹೆಣ್ಣಿನ ಮನಸ್ಸನ್ನು, ಸಂಬಂಧಗಳನ್ನು ಆ ಪೌರಾಣಿಕ ಪಾತ್ರದ ಘನತೆಗೆ ಚ್ಯುತಿ ಬಾರದಂತೆ ವಿಶ್ಲೇಷಿಸುವುದು ಸುಲಭವಲ್ಲ. ಇಂದಿಗೂ ಸಂಬಂಧಗಳು ಅರ್ಥವೇ ಆಗುವುದಿಲ್ಲ. ಭಾವನೆಗಳ ಬದಲಾವಣೆ ನಮ್ಮ ಕೈಯಲ್ಲಿಲ್ಲ. ಭಾವ ಬದಲಾದಂತೆ ಸಂಬಂಧಗಳು ಬದಲಾಗುತ್ತವೆ.
ಹೊಸ ವಿಷಯಗಳನ್ನ ತಿಳಿಸಿದ್ದಕ್ಕೆ, ಸಂಬಂಧ ಮತ್ತು ಭಾವನೆಗಳ ಕುರಿತು ಚಿಂತಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು...

ದಿನಕರ ಮೊಗೇರ said...
This comment has been removed by the author.
ದಿನಕರ ಮೊಗೇರ said...

ಪ್ರಕಾಶಣ್ಣ,
ಈ ಪಾತ್ರಗಳೆಲ್ಲಾ ಆ ಕಾಲಕ್ಕೆ ಮುಗಿದರೂ ಈಗ ಪ್ರಸ್ತುತ ವಾಗುವ ಹಾಗೆ ಬರೆದಿದ್ದೀರಿ.. ಎಂದಿನಂತೆ ನಿರೂಪಣೆ ಸುಪರ್.. ನಾಯಕಿಯ ದ್ವಂದ್ವ , ಆಕೆಯ ಬಯಕೆ ಎರಡೂ ಮಿಳಿತಗೊಂಡಿದೆ... ಆಕೆ ಮಾಡಿದ್ದು, ಕಾಲ ಕಾಲಕ್ಕೆ ಸತ್ಯ ಎನ್ನುತ್ತಾ ಹೊಗುತ್ತದೆ ಪಾತ್ರ ನಿರೂಪಣೆ... ಅದು ನಿಜ ಕೂಡ... ಮನುಷ್ಯ , ತಪ್ಪು ಮಾಡಿದಾಗ ಸಹಜವಾಗಿ ಮನಸ್ಸಿಗೆ ಗೊತ್ತಾಗುತ್ತದೆ.. ಆದರೆ ನಾವು ಮಾಡೋದೇನು ಎಂದರೆ, ಅದಕ್ಕೊಂದು ಸುಳ್ಳ್ ಸುಳ್ಳೇ ಬಲೆ ಕಟ್ಟಿ, ಗಟ್ಟಿ ಮಾಡಿ , ಅದನ್ನೆ ನಂಬಲು ಶುರು ಮಾಡುತ್ತೇವೆ.... ಕಥಾ ವಸ್ತು, ನಿರೂಪಣೆ ಎರಡಕ್ಕೂ ಸಲಾಮ್... ಕಥಾ ಸಂಕಲಕ್ಕೆ ಇನ್ನೂ ಎಷ್ಟು ಸಮಯ ಬೇಕು..? ಬೇಗ ಘಳಿಗೆ ಹುಡುಕಿ...