Tuesday, September 11, 2012

.................ಅರ್ಧ ಸತ್ಯ .

ಆಗಾಗ....
ನನ್ನೆದೆಯಲ್ಲಿ ಒಂದು ಥರಹದ "ಆತಂಕ " ಆದ ಅನುಭವ ಆಗುತ್ತಿತ್ತು...

ತಣ್ಣಗೆ... 
ತಲ್ಲಣ ... ಆದ ಅನುಭವ ...  ........... !

ಹಾಗೆ ಆಗುವದು ಕೆಲವೇ ಕ್ಷಣಗಳು ಮಾತ್ರ ...!

ನಲವತ್ತೈದು ವರ್ಷ ಆಯಿತಲ್ಲ.... 
ಸಕ್ಕರೆ.. 
ಬಿಪಿ ಶುರುವಾಗಿರ ಬಹುದೆಂಬ ಅನುಮಾನ ನನ್ನ ಮಡದಿಗೆ.....

ನನ್ನ ಪ್ರೀತಿಯ ಮುದ್ದಿನ ಮಡದಿ...
ಅವಳು ಹೇಳಿದ ಹಾಗೆ ಕೇಳಲೇ ಬೇಕಲ್ಲ..

ನಾನೂ.. ಅವಳೂ..
ಒಂದು ಮಲ್ಟಿ ಸ್ಪೆಷಲ್ ಆಸ್ಪತ್ರೆಗೆ ತಪಾಸಣೆ ಮಾಡಲು ಹೋದೆವು...

ಅವರು ಹತ್ತು ಹಲವಾರು ಟೆಸ್ಟ್ ಮಾಡಿ ವರದಿ ಕೊಟ್ಟರು.....

ಅದನ್ನು ನೋಡಿದ ಡಾಕ್ಟರು...

" ನಿಮ್ಮ ..
ಆರೋಗ್ಯ ತುಂಬಾ ಚೆನ್ನಾಗಿದೆ...
ಎಲ್ಲವೂ ಸರಿಯಾಗಿಯೇ ಇದೆ...

ಆದರೆ ಒಂದು ಸಮಸ್ಯೆ ಇದೆ  ....! ... "

"ಏನು.....?"

"ಮತ್ತೇನಿಲ್ಲ...
ನೀವು ಒತ್ತಡದಲ್ಲಿ ಕಾರ್ಯ ನಿರ್ವಹಿಸುವಾಗ ..
ಹೃದಯದ ಒಂದೆರಡು ಭಾಗಕ್ಕೆ ರಕ್ತ ಸಂಚಲನೆಯಾಗುವದಿಲ್ಲ..."

"ಅಂದರೆ ಏನು ...?"

ನನ್ನ ಹೆಂಡತಿ ನನಗಿಂತ ಗಾಭರಿಯಾದಳು....!

" ನಿಮ್ಮ ಹೃದಯದಲ್ಲಿ ಬ್ಲಾಕೇಜು ಇದೆ....
ಇದು ಹೃದಯಾಘಾತದ ಮುನ್ಸೂಚನೆ...

ನಿಮ್ಮ  ಬಿಪಿ ಕೂಡ  ಜಾಸ್ತಿ ಇದೆ..."

ಇಷ್ಟು ಬೇಗ  ವಯಸ್ಸಾಗಿ ಹೋಯಿತಾ ನನಗೆ...?
ಮುಪ್ಪು ಆವರಿಸಿ ಬಿಟ್ಟಿತಾ  ?

ನನ್ನಮಡದಿಗೆ ಅಳು ಬಂದಿತು...
ನಾನು ಸಮಾಧಾನಿಸುವ ಪ್ರಯತ್ನ ಮಾಡಿದೆ...

"ನೀವು ...
ಗಾಭರಿ ಪಡುವಂಥಾದು ಏನೂ ಇಲ್ಲ...

ಇದು ಹೃದಯದ ಸ್ನಾಯುಗಳು ಸ್ವಲ್ಪ ಕಠಿಣವಾದರೂ ..
ಈ ಫಲಿತಾಂಶ ಬರುತ್ತದೆ...

ಇದಕ್ಕಾಗಿ "ಇಕೋ " ಟೆಸ್ಟ್ ಮಾಡಿಸಿ..."

 ನಾವು ಒಪ್ಪಿದೆವು...

ಅತಂಕಗೊಂಡ ನನ್ನಾಕೆ ಲಾಬ್ ನ ಬಾಗಿಲವರೆಗೆ ಬಂದಳು...

ತಬ್ಬಿಕೊಂಡೇ ಬಂದಳು... 
ಕಣ್ಣಲ್ಲಿ ನೀರು ಜಿನುಗಿತ್ತು...

"ಏನೂ ಆಗಿಲ್ಲಾರಿ...
ಏನೂ ಆಗೋದೂ ಇಲ್ಲ ಬಿಡಿ...
ನಾನು ಹರಕೆ ಹೊತ್ತಿದ್ದೇನೆ... ನಮ್ಮ ಮನೆ ಕುಲ ದೇವರಿಗೆ..."

ನನಗೆ ಪ್ರೀತಿಯುಕ್ಕಿತು...

ನನ್ನ 
ಎಷ್ಟೆಲ್ಲ ದೌರ್ಬಲ್ಯಗಳ ಜೊತೆ ಬದುಕುತ್ತಿದ್ದಾಳೆ...!
ಆದರೂ ಎಷ್ಟೊಂದು ಪ್ರೀತಿ... ನನ್ನ ಮೇಲೆ... !

ನನ್ನಾಕೆಯ ಕೆನ್ನೆಯೆಂದರೆ ನನಗೆ ಬಲು ಇಷ್ಟ...

ಅವಳ ಕೆನ್ನೆಯನ್ನು ಸಣ್ಣದಾಗಿ ಚಿವುಟಿದೆ   ..
ನಾನು ಹಾಗೆ ಚಿವುಟುವದು  ಅವಳಿಗೂ ಇಷ್ಟ...

ಒಳಗೆ ಬಂದು ಷರ್ಟ್ ಬಿಚ್ಚಿ ಮಲಗಿದೆ...

ನರ್ಸ್ ನನ್ನೆದೆಗೆ ಜೆಲ್ ಸವರಿ... 
ಒಂದು ಸಣ್ಣ ಮಷೀನನ್ನು ಎದೆಯ ಭಾಗದಲ್ಲಿ ಓಡಾಡಿಸ ತೊಡಗಿದಳು...

ಪಕ್ಕದ ಕಂಪ್ಯೂಟರಿನಲ್ಲಿ ಅದರ ಚಿತ್ರ ಬರುತ್ತಿತ್ತು...

" ಕಂಪ್ಯೂಟರಿನಲ್ಲಿ ಏನು ಕಾಣುತ್ತಿದೆ...?"

" ನಿಮ್ಮ ಹೃದಯ...! "

 ನನಗೆ ಕುತೂಹಲವಾಯ್ತು...

" ವಾವ್... !
ನನ್ನ ಹೃದಯವಾ...?
ಪ್ಲೀಸ್... ದಯವಿಟ್ಟು ನನಗೊಮ್ಮೆ ತೋರಿಸಿ...

ನನ್ನ ಹೃದಯ ನಾನು ಇನ್ನೂ ನೋಡೇ ಇಲ್ಲ .. !"

ನರ್ಸ್ ಕಂಪ್ಯೂಟರ್ ಟೇಬಲ್ಲನ್ನು ನನಗೆ ಕಾಣುವ ಹಾಗೆ ತಿರುಗಿಸಿದಳು...

 ನಾನು ಮಲಗಿದ್ದಲ್ಲೇ  ಹೃದಯವನ್ನು ನೋಡಿದೆ...

ಅದು ವಿಲ ..ವಿಲನೆ  .. 
ಒದ್ದಾಡಿದ ಹಾಗೆ ಭಾಸವಾಗುತ್ತಿತ್ತು....!

ಅಯ್ಯೋ....!
ನನ್ನ ಹೃದಯ ಸಂಕಟ ಪಡುತ್ತಿದೆಯಾ !!

"ನೋಡ್ರೀ...
ನನ್ನ ಹೃದಯ ಅಳುತ್ತಿದೆಯಾ?
ತುಂಬಾ ಸಂಕಟ  ಪಡುವ ಹಾಗೆ ಕಾಣುತ್ತಿದೆ... !’

"ಹೌದು ಸಾರ್....
ಅಳುತ್ತಾ ಇರೋ ಹಾಗೆ ಕಾಣ್ತಿದೆ...

ನೀವು ಏನು ಮಾಡಿಕೊಂಡಿದ್ದೀರಿ...?"

"ನನ್ನದು ಸ್ವಂತ ಬಿಸಿನೆಸ್ ಇದೆ..."

"ಬೇಸರ ಮಾಡ್ಕೋಬೇಡಿ.. 
ಸಾರ್..
ವ್ಯಾಪಾರಮ್ ದ್ರೋಹ ಚಿಂತನಮ್...

ಜನರಿಗೆ ಮೋಸ ಮಾಡುತ್ತೀರಾ ಸಾರ್...?"

" ಇಲ್ವಲ್ಲಮ್ಮಾ...
ಇಷ್ಟು ವರ್ಷವಾದರೂ ..
ಒಂದು ಸೈಟು ಖರಿದಿಸಿಲ್ಲ...

ಬದಲಿಗೆ ಜನರೇ ನನಗೆ ಕೆಲವು ಬಾರಿ ಮೋಸ ಮಾಡಿದ್ದಾರೆ..."

 ನರ್ಸ್ ಮಾತನಾಡುವ ರೀತಿ ನನಗೆ ಬಲು ಇಷ್ಟವಾಯ್ತು...

" ಸಾರ್..
ತಪ್ಪು ತಿಳಿಯ ಬೇಡಿ...

ಕಾಲೇಜು ದಿನಗಳಲ್ಲಿ ..
ಯಾವುದಾದರೂ ಹುಡುಗಿ ..
ಪ್ರೀತಿ ಮಾಡಿ..ನಿಮಗೆ ಮೋಸ ಮಾಡಿದ್ದಳಾ...?"

"ಇಲ್ಲಮ್ಮ...
ಒಂದು ಹುಡುಗಿಯನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ...

ಆದರೆ ಹೇಳಲಿಕ್ಕೆ ಧೈರ್ಯ ಸಾಲದೆ... 
ಸುಮ್ಮನಿದ್ದು ಬಿಟ್ಟೆ..

ಬಹುಷಃ ಆ ನೋವು  ..
ನನ್ನ ಹೃದಯದಲ್ಲಿ ಉಳಿದು ಬಿಟ್ಟಿದೆ ಅಂತ ಅನ್ನಿಸುತ್ತದೆ..."

"ಹೋಗಿ ಸಾರ್ ನೀವು..!

ಅಂಥಹ ಪ್ರೀತಿ ..
ಯಾವಾಗಲೂ ಒಂದು ಮಧುರ ಭಾವನೆಯನ್ನು ಉಳಿಸುತ್ತದೆ...
ಅದು ನಿಮ್ಮ ಹೃದಯಕ್ಕೆ ಖುಷಿ ಕೊಡುತ್ತದೆ..."

"ಹಾಗಾದರೆ...
 ನನ್ನ ಹೃದಯ ವಿಲ ವಿಲನೆ  ಒದ್ದಾಡುತ್ತಿರುವುದು ಏಕೆ...?"

"ನೀವು ಯಾರಿಗಾದರೂ..
ಮೋಸ ಮಾಡಿರುತ್ತೀರಿ ಸರ್..
ಬಿಸಿನೆಸ್ ಅಲ್ಲವಾ?...."

"ಇಲ್ಲಮ್ಮ..
ನನಗೆ ಲಾಸ್ ಆದರೂ ಪರವಾಗಿಲ್ಲ...
ವ್ಯವಹಾರದಲ್ಲಿ ನಾನು ತುಂಬಾ ಕ್ಲೀನ್...

ನಾನು ಯಾವಾಗ್ಲೂ ನಗು ನಗ್ತಾ ಇರ್ತಿನಿ...
ನನ್ನ ಹೃದಯಕ್ಕೆ ..
ಅಳು.. 
ದುಃಖ ಕೊಡುವದು ಕಡಿಮೆ.."

"ಸಾರ್...
ನಾನು ದಿನಾಲೂ  ..
ನೂರಾರು ಹೃದಯ ನೋಡ್ತಾ ಇರ್ತೇನೆ...

ಎಲ್ಲ ಹೃದಯಗಳು ಅಳುತ್ತಾ ಇರುತ್ತವೆ... ವಿಲಿ ವಿಲಿ ಒದ್ದಾಡುತ್ತ ಇರುತ್ತವೆ...!

ಎಲ್ಲರೂ...
ಬೇರೆಯವರಿಗೆ ಮೋಸ ಮಾಡುತ್ತಾರೆ...!

ಅಥವಾ..

ತಮಗೇ  ತಾವು ಮೋಸ ಮಾಡಿಕೊಳ್ಳುತ್ತಾರೆ... "

"ಇಲ್ಲಮ್ಮ...
ನಾನು ಯಾರಿಗೂ ಮೋಸ ಮಾಡಿಲ್ಲಮ್ಮ..."

"ಸಾರ್..
ನಾನು ಇಂಥಾದ್ದೆಲ್ಲ ನಿಮ್ಮ ಬಳಿ ಮಾತನಾಡಬಾರದು...

ಹೋಗ್ಲಿ ಬಿಡಿ ...

ಇಲ್ಲಿ ಹೃದಯದ ಟೆಸ್ಟಿಗೆ ಬರುವವರೆಲ್ಲ ಹೆಚ್ಚಾಗಿ ಸಾವಿನ ಹತ್ತಿರ ನಿಂತಿರುವವರು......

ಸಾವಿನ ಎದುರಿಗೆ ..
ಎಲ್ಲರೂ ಪ್ರಾಮಾಣಿಕರಾಗಿರುತ್ತಾರೆ...
ತಮ್ಮೊಳಗೂ ಪ್ರಾಮಾಣಿಕರಾಗಲು ಪ್ರಯತ್ನಿಸುತ್ತಾರೆ..

ನೀವು ನಿಜ ಹೇಳಿರ್ತೀರಿ...

ನಿಮ್ಮ ಹೃದಯ ..
ನಿಮ್ಮ ಮಡದಿಯ ದುಃಖ ನೋಡಿ ಅಳುತ್ತಿರಬಹುದು...."

ನನಗೀಗ ಸಮಾಧಾನವಾಯಿತು...

ಎಲ್ಲರ ಹೃದಯಗಳೂ ಅಳುತ್ತವೆ.. 
ನನ್ನೊಬ್ಬನದೇ ಅಲ್ಲ...

ಟೆಸ್ಟ್ ಮುಗಿಸಿ ಹೊರಗಡೆ ಬಂದೆ...

ನನ್ನಾಕೆ ಕಾಯ್ತ ನಿಂತಿದ್ದಳು...

"ತಗೊಳ್ಳಿ...
ನಿಮ್ಮ ಮುದ್ದಿನ ಮಗಳು ಫೋನ್ ಮಾಡಿದ್ದಾಳೆ..."

"ಹಲ್ಲೋ.. 
ಏನಮ್ಮಾ ಪುಟ್ಟಿ...?
ನಿನ್ನಮ್ಮ ಸುಮ್ಮನೆ ಗಾಭರಿಯಾಗಿದ್ದಾಳಮ್ಮ..
ನನಗೇನೂ ಆಗಿಲ್ಲ..
ಈಗ ತಾನೆ..
ನನ್ನ ಹೃದಯ ನೋಡ್ಕೊಂಡು ಬಂದೆ ಕಣೆ..."

"ಅಪ್ಪಾ...
ನಿನ್ನ ಹೃದಯಕ್ಕೆ ಏನೂ ಆಗೊಲ್ಲಪ್ಪಾ...
ನಾನೂ ಅಮ್ಮ.. ಪ್ರೀತಿಯಿಂದ ಕಾಯ್ತಾ ಇರ್ತೀವಿ....

ಅಪ್ಪೂ ...
ಇನ್ನು ಮುಂದೆ ನೋ ಡ್ರಿಂಕ್ಸ್... ಪ್ಲೀಸ್.. !.."

" ಓಕೆ ಪುಟ್ಟಾ...
ಆಮೇಲೆ ಸಿಗೋಣ..."

ನಾನೇ..
ಕಟ್ಟಿಕೊಂಡ ಈ ಪುಟ್ಟ ಗೂಡು ಯಾಕೋ ಬಹಳ ಆಪ್ತವಾಯಿತು....

ನನ್ನವರೆನ್ನುವ ಭರವಸೆ...
ಆಪ್ತವಾಯಿತು...

ಕಣ್ಣು ಒದ್ದೆಯಾಯಿತು...
ಅಲ್ಲೇ ಮಡದಿಯ ಭುಜ ಹಿಡಿದು ತಬ್ಬಿಕೊಂಡೆ...

ನನ್ನಾಕೆಯ ಕಣ್ಣಲ್ಲಿನ ನೀರು ಹಾಗೆ ಇತ್ತು....

ಅಷ್ಟರಲ್ಲಿ..
ನರ್ಸ್ ಲ್ಯಾಬಿನಿಂದ ಹೊರಗೆ ಬಂದಳು...

"ಸಾರ್..
ಮೊಬೈಲ್ ಬಿಟ್ಟು ಬಂದಿದ್ದೀರಿ... ತಗೊಳ್ಳಿ..
ಮೆಸೇಜ್ ಇದೆ...

ಕ್ಷಮಿಸಿ.. "

ನಾನು ಲಗುಬಗೆಯಿಂದ ಮೆಸೇಜ್ ನೋಡಿದೆ...

ಓಹ್...
ಚಂದದ ಮೊಂಡು ಮೂಗಿನ...
ಚೂಪು ಗಲ್ಲದ  ಹುಡುಗಿ.... !

" ಗೆಳೆಯಾ...
ಹೇಗಿದ್ದೀಯೋ ಪುಟ್ಟಣ್ಣಿ...!

ಹೃದಯ ಸ್ಕ್ಯಾನಿಂಗ್ ಮಾಡಿಸಿದೆಯಾ...?

ನಿನ್ನ ..
ಹೃದಯದ ಕತ್ತಲ ಕೋಣೆಯಲ್ಲಿ ...
ನನ್ನನ್ನು ಎಲ್ಲಿ ಬಚ್ಚಿಟ್ಟಿದ್ದೀಯಾ ..?

ನಾನು ನಿನ್ನ ಹೃದಯದಲ್ಲಿ ಎಲ್ಲಿದ್ದೆನೆ  ? 

ನನ್ನನ್ನು ಕಂಡೆಯೇನೋ...?

ನನ್ನ ಹೃದಯ ಅಲ್ಲಿ ಸುಮ್ಮನಿತ್ತೇನೋ...!... "

ನಾನು ನರ್ಸ್ ಮುಖ ನೋಡಿದೆ...

ನರ್ಸ್ ...
ನನ್ನನ್ನು ಒಂಥರಾ ನೋಡುತ್ತ ಲ್ಯಾಬ್ ಒಳಗೆ ಹೋದಳು....



(ಇದು ಕಥೆ ....)

52 comments:

Ittigecement said...

ಗೆಳೆಯರೆ...

ಈ ಮೊದಲು ಪ್ರತಿಕ್ರಿಯೆ ಕೊಟ್ಟು..
ಪ್ರೋತ್ಸಾಹಿಸಿದ ಎಲ್ಲ ಹದಿನೇಳು ಗೆಳೆಯರ ಕ್ಷಮೆ ಇರಲಿ...

ನನ್ನ ತಪ್ಪಿನಿಂದಾಗಿ ಕಥೆ ಅಳಿಸಿ ಹೋಗಿತ್ತು...

ಪ್ರವೀಣ್ ಭಟ್ ಮತ್ತೆ ಕಳಿಸಿದರು...

ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು...

ಆಸು ಹೆಗ್ಡೆ said...

ನಿಮ್ ಕತಿಯಂಗ್ ಒಂದೇ ಮಾರಾಯ್ರೇ...
ನನ್ ಗತಿ ಎಂತಾ... ನನ್ ಕತಿ ಎಂತಾ...?
ಎಣ್‍ಸುವಂಗೇ... ಛಳಿ ಶುರು ಆಯ್ತಲೇ...!

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ಪ್ರಕಟಣೆಯ ಕಾಪಿ ಸಿಕ್ಕಿದ್ದು , ತುಂಬಾ ಒಳ್ಳೆಯ ಸುದ್ದಿ.. ಹಾಗೆಯೇ ಪ್ರತಿಕ್ರಿಯೆಗಳು ಕೂಡ ಮತ್ತೆ ತುಂಬಿಕೊಳ್ಳುತ್ತವೆ .. ಕೆಲವು ಪದಗಳ ಅದಲು ಬದಲಾದರೂ ಸಹ , ಪ್ರತಿಕ್ರಿಯೆಗಳ ಭಾವನೆ ಮೊದಲಿನದ್ದೇ ಆಗಿರುತ್ತದೆ .. ಕಾರಣ ಕಥೆಯು ಮತ್ತು ಅದಕ್ಕೆ ಮೂಡಿದ ಚಿಂತನೆ ಬದಲಾಗಲು ಸಾಧ್ಯವಿಲ್ಲವಲ್ಲ .. ಇದೊಂದು ಭಾವನಾತ್ಮಕ ಕಥೆ.. ಇಲ್ಲಿ ಭಾವನೆಗಳ ಸ್ವೀಕರಿಸಬೇಕು ... ಕಥೆಯಲ್ಲಿನ ಸೂಕ್ಷ್ಮ ಸಂದೇಶಗಳನ್ನು ಅರಿಯಬೇಕು .. :)

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ನಮ್ಮ ಹಳೆಯ ಪ್ರತಿಕ್ರಿಯೆಯ ವಿಷಯ ..
ಅರೋಗ್ಯ ತಪಾಸಣೆಯ ಬಗ್ಗೆ ಎಲ್ಲರೂ ಕಾಳಜಿವಹಿಸಬೇಕು .. ಅನ್ನುವ ಸಂದೇಶವನ್ನು ಸೂಕ್ಷ್ಮವಾಗಿ ಮತ್ತು ಮೈ ಜುಮ್ಮೆನ್ನುವ , ಮನ ಕರಗುವ ಸನ್ನಿವೇಶಗಳ ಕಲ್ಪನೆಯಲ್ಲಿ ತಿಳಿಯುವಂತೆ ಮಾಡಿರುವುದು .. ನಿಮ್ಮ ಅನುಭವವು ಓದುಗರಲ್ಲಿ ಮೂಡಿಸುವ ಕಲ್ಪನಾ ಜಗತ್ತು ನಿಜಕ್ಕೂ ಅತೀ ರಮಣೀಯ ಚಿತ್ರಣ .. :)

Srikanth Manjunath said...

ಸುಂದರ ಲೇಖನ ಪ್ರಕಾಶಣ್ಣ..ಅಂತ್ಯದ ಅಚಾನಕ್ ತಿರುವು ನಾವೆಲ್ಲರೂ ಮನುಜರೆ..ಅರ್ಧ ಸತ್ಯ ಹೇಳಿಕೊಂಡು ಭಾವನೆಗಳ ತೋಟದಲ್ಲಿ ಓಲಾಡುವ ಹೂವುಗಳೇ ಎನ್ನುವ ಪೂರ್ಣ ಸತ್ಯವನ್ನು ನಿಮ್ಮ ಅರ್ಧ ಸತ್ಯ ಲೇಖನ ಹೊರಹಾಕಿತು..

ಲೇಖನ ಓದುತ್ತ ಹೋದ ಹಾಗೆ..ಮೊತ್ತ ಮೊದಲ ಬಾರಿಗೆ ಏನು ಬರೆಯುವುದು ಎಂದು ತೋಚಲಿಲ್ಲ..ಸಾಮಾನ್ಯವಾಗಿ ಯಾವುದು ಕಥೆ, ಲೇಖನ, ಕವನ ಓದುತಿದ್ದ ಹಾಗೆ ಅದರ ಸಾರಾಂಶ ಬರೆಯುವ ಸಲುವಾಗಿ ಕೈಗಳು ಕೀಲಿ ಮನೆಯ ಮೇಲೆ ನರ್ತನ ಮಾಡುತ್ತದೆ..ಇಂದು ತಲೆ ಸುತ್ತುತಿತ್ತು..ಮೆದುಳು ಅದನ್ನ ಬರಿ ಅಂತ ಹೇಳ್ತಿತ್ತು, ಹೃದಯ ಪಕ ಪಕ ನಗುತಿತ್ತು..
ಹೃದಯ ನಮಗೆ ಎಂದು ಮೋಸ ಮಾಡುವುದಿಲ್ಲ..ಕಾರಣ ಅದಕ್ಕೆ ನಾವು ಯಾರು ಎಂದು ಚೆನ್ನಾಗಿ ಗೊತ್ತು..ಆದ್ರೆ ಹೃದಯಕ್ಕೆ ನಾವು ಮೋಸ ಮಾಡೋಲ್ಲ ಅನ್ನುವ ನಂಬಿಕೆ ಅದಕ್ಕೆ..
ಕೊನೆಯ ಸಾಲುಗಳಲ್ಲಿ ಇರುವ ನರ್ಸ್ ನೋಟ, ಮತ್ತೆ ಇನ್ನೊಂದು ಅರ್ಧ ಸತ್ಯ ತಿಳಿಯಲು ಲ್ಯಾಬ್ಗೆ ಹೋದ ರೀತಿ ಇವೆಲ್ಲ ಸನ್ನಿವೇಶಕ್ಕೆ ಉತ್ತಮ ಕನ್ನಡಿ...
ನಾನು ಬರೆಯುತ್ತ ಹೋದ ಹಾಗೆ..ನನ್ನ ಮೇಜಿನ ಮೇಲೆ ನನ್ನ ಹೃದಯ ಕುಳಿತು ಪಕ ಪಕ ನಗಲು ಶುರು ಮಾಡಿತು..
ರೇಡಿಯೋದಲ್ಲಿ ಅಣ್ಣಾವ್ರ "ಹೃದಯದಲಿ ಇದೇನಿದು........ಒಂದು ಓಡಿದೆ" ಹಾಡು ಬರುತ್ತಿತ್ತು..

Ittigecement said...

Coment by Bhagwat ....

superb ,take care of YOUR REAL AND REEL HEART, ಕುಡಿಯೊದು ನಿಜ ಆಗಿದ್ರೆ ದಯವಿಟ್ಟು ಬಿಟ್ ಬುಡಿ ಪ್ರಕಾಶಣ್ಣ on
bhagwat

Ittigecement said...

Coment by Praveen Gowda

ಶ್ರೀಮಾನ್ ಪ್ರಕಾಶಣ್ಣನವರೇ, ನಿಮ್ಮ ಈ ಲೇಖನ ಓದಿ ಏನು ಅಭಿಪ್ರಾಯ ಹೇಳಬೇಕೋ ಗೊತ್ತಾಗ್ತಿಲ್ಲ. ಇದು ಕತೆಯೋ ಅಥವಾ (ನಿಮ್ಮ)ಇತಿಹಾಸವೋ??? ಏನೇ ಆದರೂ ಮನ ಮುಟ್ಟಿತು. on
Remove content | Delete | Spam
ಮನದಾಳದಿಂದ....

Ittigecement said...

Coment by ಪ್ರಶಾಂತ್ ಖಟಾವಕರ್

ಕೊನೆಯಲ್ಲೇನೋ ಒಂದು ವಿಭಿನ್ನ ಮೆಸೇಜ್ ಇದೆ.. ಬ್ರದರ್ .. ಓದಲು ತುಂಬಾ ಸೂಪರ್.. ಅರೋಗ್ಯ ತಪಾಸಣೆಯ ಮಹತ್ವ ಮತ್ತು ಅಲ್ಲಿ ಸಿಕ್ಕುವ ಭಾವನೆಗಳ ಪುಟ್ಟ ಲೋಕ... ತುಂಬಾ ಚೆಂದ ಇದೆ ಕಥೆ .. :)

|| ಪ್ರಶಾಂತ್ ಖಟಾವಕರ್ || *Prashanth P Khatavakar*

Ittigecement said...

Coment by Suguna "ಮನಸು "

ಎಂದಿನಂತೆ ಒಳ್ಳೆಯ ಬರಹ... ಎಲ್ಲರ ಹೃದಯವೂ ಅಳುತ್ತದೆ ಗೊತ್ತಾಗುವುದಿಲ್ಲ ಅಷ್ಟೇ ಅಲ್ಲವಾ ಅಣ್ಣ:)

ಮನಸು

Ittigecement said...

Coment by Manjula ...

ವಾಹ್! ವಾಹ್! ಒಂದೇ ಹೃದಯದ ಬಗ್ಗೆ ಒಂದು ಮನಸು ಕುತೂಹಲಿಯಾಗಿತ್ತು, ಇನ್ನೊಂದು ಅಳುತಿತ್ತು.. ಮತ್ತೊಂದು ಕಾಮೆಂಟಿಸುತ್ತಿತ್ತು! :-) ಮೆಚ್ಚಿಗೆಯಾಯ್ತು ನಿಮ್ಮ ಅನುಭವ...

Manjula

Ittigecement said...

Coment by Azad ...

ಮನವು ಮುನಿದು ಹಾಡುತಿದೆ ಮುದುಡಿ ನಿನ್ನೆಡೆ ನೋಡುತಿದೆ ಕತೆಯೊಂದು ಹೀಗೇ ಯಾಕಾಯ್ತು?... ಹರಿವ ನದಿಯ ನೀರಿನಲೆ ಹರಳೊಂದ ತಾಗುತಲೇ ಸ್ವಲ್ಪ ಹಾಗೇ ನಿಂತು ನಡೆಯಿತು.... ಶುಭ್ರ ಮನದ ಚಂಚಲತೆ ಹೀಗೇನೇ... ಏನೇನೋ ಯೋಚಿಸುತ್ತೆ ಕತೆ ಕಟ್ಟುತ್ತೆ, ತಾನೇ ಪಾತ್ರವಾಗುತ್ತೆ, ಅದರೊಂದಿಗೆ ಹೋಲಿಸಿಕೊಳ್ಳುತ್ತೆ... ನಿನ್ನ ಕಥಾನಾಯಕನ ಶುದ್ಧ ಮನಸು, ನೇರ ಮನಸು, ಅಪಾರ ಪ್ರೀತಿ ತೋರುವ ನಾಯಕನ ಮಡದಿ, ಮಗಳು...ಮತ್ತೆ ಸ್ಪಂದಿಸೋ ನೂರಾರು ಮನಗಳು ಇಷ್ಟು ಸಾಕು ..ಅಲೆಗೆ ಸಿಕ್ಕ ಸಣ್ಣ ಹರಳಷ್ಟೇ..ಅಲೆಯ ಭರಕೆ ಕರಗುತ್ತೆ... ತುಂಬಾ ಮಿಡಿವ ಶೈಲಿ ಪ್ರಕಾಶೂ - ಎಂದಿಗಿಂತ ವಿಭಿನ್ನವಲ್ಲದಿದ್ದರೂ ನಾನೂ ಭಾವುಕನಾದೆ.

ಜಲನಯನ

Ittigecement said...

coment by SHUBHA Hegde...

wah! very very nice story..heart is very important part of our body..so have to take much care abt its health..not only its physical health but also its emotional health..it is very easy to say somebody is in our heart or ask a request to keep them in their heart it is physically not possible..u told this truth very beautifully..we know the truth that heart is symbol of love that's why everybody keeps lovers in heart only!! on

shubha hegde

Ittigecement said...

Coment by SHRIKANTH MANJUNATH ....

ಮೊತ್ತ ಮೊದಲ ಬಾರಿಗೆ..ನನ್ನ ತಲೆ, ಹೃದಯ, ಮೆದುಳು ಎಲ್ಲವು ನಿಂತ ಅನುಭವ..ಸಾಮಾನ್ಯ ಯಾವುದೇ ಕಥೆ, ಕವನ, ಸಿನಿಮಾ ಓದಿದಾಗ ಒಂದು ಭಾವ, ಸಾರಾಂಶ ತಲೆಗೆ ನಾಟುತ್ತೆ...ಆದ್ರೆ ನಿಮ್ಮ ಲೇಖನ ಓದುತ್ತ ಹೋದ ಹಾಗೆ..ಮೆದುಳು ಕೆಲವು ಸಾಲುಗಳನ್ನು ಬರಿ ಅಂತು, ತಲೆ ಸುತ್ತುತ್ತಾ ಇತ್ತು, ಹೃದಯ ನಗುತ್ತ ಇತ್ತು...ಯಾಕೆಂದರೆ..ಹೃದಯ ನಮಗೆ ಮೋಸ ಮಾಡೋಲ್ಲ ಕಾರಣ ಹೃದಯಕ್ಕೆ ನಾವು ಯಾರು ಅಂತ ಗೊತ್ತು...ಹಾಗೆ ನಾವು ಹೃದಯಕ್ಕೆ ಮೋಸ ಮಾಡೋಲ್ಲ ಅನ್ನುವ ನಂಬಿಕೆ ಕೊಡಬೇಕು..ಲೇಖನದ ಅನ್ತ್ಯದಲ್ಲಿರಿವ ಟ್ವಿಸ್ಟ್ ಸೂಪರ್..ಅದೇ ಇದರ ಸಾರಾಂಶ...ಹಾಗು ನರ್ಸಿನ ನೋಟ..ಹಾಗು ಇನ್ನೊಂದು ಅರ್ಧ ಸತ್ಯದ ಹೃದಯದ ತಪಾಸಣೆಗೆ ಹೋದ ಅಂತ್ಯ.. ನಿಮ್ಮ ಲೇಖನ ಸುಂದರ..ಭಾವನೆಗಳ ತೋಟದಲ್ಲಿ ಓಲಾಡುತ್ತಿರುವ ಮಾತುಗಳು, ಅರ್ಧ ಸತ್ಯಗಳು ಸುಂದರವಾಗಿವೆ.. ಟೈಪ್ ಮಾಡುತ್ತಾ ಹೋದೆ..ನನ್ನ ಮೇಜಿನ ಮೇಲೆ ಹೃದಯ ಪಕ ಪಕ ಅಂತ ನಗುತಿತ್ತು.. "ಹೃದಯದಲಿ ಇದೇನಿದು..........ಒಂದು ಓಡಿದೆ" ಅಣ್ಣಾವ್ರ ಹಾಡು ನೆನಪಿಗೆ ಬಂತು.. on
Srikanth Manjunath

Ittigecement said...

Coment by Vandana Shigehalli ...

ಪ್ರಕಾಶಣ್ಣ ಸುಂದರ ಬರಹ .... ಇ ತರಹ ವಿಚಾರ ಗಳೆಲ್ಲ ಬಂತಾ? ಅದಿಕ್ಕೆ , ನಿಮ್ಮ ವಿಚಾರ ಗಳು ಬರಹ ಇಸ್ತವಾಗೋದು... on

vandana shigehalli

Ittigecement said...

Coment by MS HEBBAR ....

ಸ್ವಲ್ಪ ತಲೇನಾ MRI ಮಾಡಿದ್ರೆ, ಒಳಗೆ ಏನಿದೆ ಅಂತ ನೋಡಬಹುದಿತ್ತು !-msh
mshebbar

Ittigecement said...

Coment by Seetaram K

hrudaya yawagalu vilivili oddaduttee... adara bagge tamma kalpane sutta heneda kathe ondu madhura anubava nedutte...
ಸೀತಾರಾಮ. ಕೆ. / SITARAM.K

Ittigecement said...

Coment by Dr. D.T. Krishna Murthy

ಪ್ರಕಾಶಣ್ಣ;ಕಥೆ ಹೆಣೆದಿರೋ ರೀತಿ ಚೆನ್ನಾಗಿದೆ.ಆದರೆ ಹೃದಯ ವಿಲ ವಿಲನೆ ಒದ್ದಾಡುವುದು ಇಷ್ಟು ದೊಡ್ಡ ದೇಹಕ್ಕೆ ರಕ್ತ ಪೂರೈಸಲು.ಇನ್ನಾದರೂ ಅದಕ್ಕೆ ಅಯ್ಯೋ ಪಾಪ ಎನ್ನೋಣ.ನಮ್ಮದೇಹಗಳ ತೂಕ ಕಮ್ಮಿ ಮಾಡಿಕೊಳ್ಳೋಣ.

Dr.D.T.Krishna Murthy.

Ittigecement said...

Coment by Dinakar Mogera ..

ಪ್ರಕಾಶಣ್ಣ, ಬರೆದ ರೀತಿ ಸುಪರ್..... ಅಂತ್ಯ ಮಾತ್ರ ನಿಮದಲ್ಲ..... ಕಲ್ಪನೆ...... ನೀವು ಬರೆದ ಎಲ್ಲಾ ಮಾತುಗಳು ಸತ್ಯ... ನಾನು ಸಹ ನನ್ನ ಹ್ರದಯ ನೋಡಲು ಹೋಗಬೇಕಿದೆ....

ದಿನಕರ ಮೊಗೇರ

Mahesh Gowda said...

ANNA e hrudayada probum yenu adre...at lest obbarandru badravagi bacchitkolutte !

Ittigecement said...

ಪ್ರೀತಿಯ ಭಾಗವತರೆ...

ಇದು ಕಥೆ...
ಮೊನ್ನೆ ನನ್ನ ಹಾರ್ಟ್ ಚೆಕ್ ಅಪ್ಪಿಗೆ ಹೋದಾಗ ಅಲ್ಲಿನ ನರ್ಸ್ ಒಬ್ಬಳೊಡನೆ ಮಾತುಕತೆ ಈ ಕಥೆಗೆ ಸ್ಪೂರ್ತಿ...
ನನಗೆ ಇಕೋ ಟೆಸ್ಟ್ ಮಾಡುತ್ತ ಇಲ್ಲಿ ನಡೆದ ಬಹುತೇಕ ಮಾತುಕತೆ ಅಲ್ಲಿ ನಡೆದಿತ್ತು...
ನಾನು ಅವಳೊಡನೆ ಮಾತನಾಡುವಾಗ ನನ್ನಾಕೆ ಬಿದ್ದೂ ಬಿದ್ದೂ ನಗುತ್ತಿದ್ದಳು..
ನಿಜ ಹೇಳ್ತೀನಿ..
ಆಗ ನನ್ನ ಹೃದಯ ಅಳುತ್ತಿರುವ ಹಾಗೆ ಅನ್ನಿಸುತ್ತಿತ್ತು....

ನಮ್ಮ ದೇಹದೊಳಗೆ ನಮಗೆ ತಿಳಿಯದ ಎಷ್ಟೆಲ್ಲ ವಿಷಯಗಳಿವೆ ಅಲ್ಲವಾ?

ನಿಮ್ಮೆಲ್ಲರ ಪ್ರತಿಕ್ರಿಯೆ ಸಿಕ್ಕಾಪಟ್ಟೆ ಟಾನಿಕ್ ಕೊಟ್ಟಿದೆ... ಧನ್ಯವಾದಗಳು...

Ittigecement said...

ಶ್ರೀಯುತ ಪ್ರವೀಣು...

ಇದು ಕಲ್ಪನೆಯ ಕಥೆ...

ನರ್ಸ್ ಸಂಗಡದ ಮಾತುಕಥೆ ಅಲ್ಲಿ ಸ್ವಲ್ಪ ನಡೆದಿತ್ತು...
ಹೊರಗೆ ನಾವೆಲ್ಲ ಎಷ್ಟೇ ಬಚ್ಚಿಟ್ಟುಕೊಂಡು.. ಸಭ್ಯರೆನಿಸಿದರೂ...
ನಮ್ಮೊಳಗಿನ "ಹೃದಯಕ್ಕೆ" ಮೋಸ ಮಾಡಲು ಸಾಧ್ಯವೇ...?

ಅದು ಅಳುತ್ತಿರ ಬಹುದಲ್ಲವೆ?

ಬಹುಷಃ...

ಈ ಹಾರ್ಟ್ ಬ್ಲಾಕೇಜ್.. ಬೀಪಿ... ಷುಗರ್ ಇತ್ಯಾದಿಯೆಲ್ಲ.. ನಾವು ನಮ್ಮ ಹೃದಯಕ್ಕೆ ಮೋಸ ಮಾಡಿದ್ದರ ಫಲ ಇದ್ದಿರ ಬಹುದಲ್ಲವೆ?

ಧನ್ಯವಾದಗಳು ಪ್ರವೀಣು....

ನೀನಿನ್ನೂ ಹುಡುಗ... ಹೃದಯದ ಬಗೆಗೆ ಕಾಳಜಿ ಇರಲಿ ಅಳಿಮಯ್ಯಾ.... on

Ittigecement said...

ಪ್ರೀತಿಯ ಪ್ರಶಾಂತ್ ಭಾಯ್...

ಈ ಕಥೆಯ ಎಳೆಯನ್ನು ಮೊದಲು ನನ್ನ ಚಿಕ್ಕಮ್ಮ ಮತ್ತು ಮಡದಿಗೆ ಹೇಳಿದೆ...

ತುಂಬಾ ಇಷ್ಟಪಟ್ಟರು...

ಕೊನೆಯ "ತಿರುವು" ಬಗ್ಗೆ ಗರಮ್ ಆಗಿದ್ದಳು ಅನ್ನಿ...
"ಇಂಥ್ಹಾದ್ದೆಲ್ಲ ಹೇಗೆ ತಲೆಯಲ್ಲಿ ಬರುತ್ತದೆ ಅಂತ ಮೊಟಕಿದ ಹಾಗೆ ಮಾಡಿದಳು...

ಹಾರ್ಟು..
ಹಾರ್ಟ್ ಬ್ಲಾಕೇಜು...

ಇದೆಲ್ಲವೂ ನನಗಂತೂ ಹೊಸ ವಿಷಯ..

ತುಂಬಾ ಕುತೂಹಲದಿಂದ ನೊಡಿ ಬಂದೆ...

ಫೋರ್ಟ್ತೀಸ್ ಆಸ್ಪತ್ರೆಯ ನರ್ಸ್ ಗೆ..

ಅವಳ ಸಮಯಸ್ಪೂರ್ತಿ ಮಾತಿಗೆ ತುಂಬಾ ಖುಷಿ ಆಯ್ತು...

ರೋಗಿಯ ಅರ್ಧ ನೋವನ್ನು ಡಾಕ್ಟರುಗಳ ಹಸನ್ಮುಖ ಗುಣ ಪಡಿಸಿಬಿಡುತ್ತದೆ ಅಲ್ವಾ?

ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಶಂತ್ ಜೀ... on

prashasti said...

ಸೂಪರ್.. :-)

Sudeepa ಸುದೀಪ said...

ಪ್ರಕಾಶ್ ಸರ್...ಇದು ಕಥೆಯಾದರೂ ಚಿಂತಿಸುವ ವಿಷಯ ಸಾಕಷ್ಟಿದೆ... ಎಲ್ಲರನ್ನೂ ಒಮ್ಮೆ ಹೆದರಿಸಿಬಿಟ್ಟಿರಿ...

Ashok.V.Shetty, Kodlady said...

ಪ್ರಕಾಶಣ್ಣ,

ಮೊದಲು ನಿಮ್ ಬಗ್ಗೆ ಬರೆದದ್ದು ಅಂತ ದಿಗಿಲಾಗಿತ್ತು.....ಮತ್ತೆ 'ಮಗಳ ' ಫೋನ್ ಅಂದ್ಮೇಲೆ ಮನಸ್ಸಿಗೆ ಬಂದದ್ದು ಓಹ್ ..ಪ್ರಕಾಶಣ್ಣ ನಿಗೆ 'ಮಗ' ಇರೋದು ಅಂತ ನಿರಾಳನಾದೆ.....ಎಂದಿನಂತೆ ಸುಂದರ , ಸುಲಭವಾಗಿ ಓದಿಸಿಕೊಂಡು ಹೋದ ಬರಹ....ಈ ಹೃದಯ ಅಳುವುದನ್ನು ನಾನು ನೋಡಬೇಕು.....

Ittigecement said...

ಅತ್ರಾಡಿ ಸುರೇಶಣ್ಣಾ...

ನನ್ನ ತಪ್ಪಿಂದಾಗಿ ಬರೆದ ಕಥೆ ಡಿಲೀಟ್ ಆಗಿ ಹೋದಾಗ ಬಹಳ ಬೇಸರವಾಯಿತು...
ಮೊದಲು ಬರೆದ ಕಚ್ಛಾ ಬರಹ ಇತ್ತು..
ಅದರಲ್ಲಿ ತುಂಬಾ ಮಾರ್ಪಾಡು ಮಾಡಿದ್ದೆ..

ಒಟ್ಟೂ ಹತ್ತು ಜನ ನನಗೆ ಮೇಲ್ ಮಾಡಿ ಮೂಲ ಕಥೆ ಕಳಿಸಿಕೊಟ್ಟರು..

ಅದರಲ್ಲಿ "ಪ್ರವೀಣ ಭಟ್ ಸಂಪ, ಹಾಗೂ ಅಳಿಮಯ್ಯ ಗಿರಿಶ್ ಎಸ್. " ಇವರಿಗೆ ತುಂಬಾ ತುಂಬಾ ಧನ್ಯವಾದಗಳು..

" ಗಿರೀಶ್ ಗೌಡ., ಪ್ರಶಾಂತ್, ಜನಾರ್ಧನ, ಪೂರ್ಣಿಮಾ, ನಿಧಿ, ಶುಭಾ, ಪ್ರವೀಣ್ ಹೆಗಡೆ, ಎಸ್. ಪೂಜಾರಿ, "
ಇವರೆಲ್ಲರಿಗೂ ಹೃದಯ ಪೂರ್ವಕ ವಂದನೆಗಳು...

ಕಥೆ ಹಾಕಿದ ಎರಡು ತಾಸುಗಳಲ್ಲಿ ಹತ್ತು ಕಾಪಿಗಳಾಗಿದ್ದವಾ !

ಇವರೆಲ್ಲ ಕಾಪಿ ಮಾಡದೆ ಇದ್ದಲ್ಲಿ ಬಹಳ ತೊಂದರೆ ಆಗ್ತಿತ್ತು..
ಮತ್ತೊಮ್ಮೆ ತಿದ್ದಲು ಬಹಳ ಸಮಯ ಬೇಕಾಗುತ್ತಿತ್ತು...
ಸಕಾಲದಲ್ಲಿ ಸಹಾಯ ಮಾಡಿದ್ದಕ್ಕೆ ಎಲ್ಲರಿಗೂ ವಂದನೆಗಳು..

ಸುರೇಶಣ್ಣ..

ನಿಮ್ಮ ಹಾಸ್ಯದ ಚಟಾಕಿ ಬೊಂಬಾಟಾಗಿದೆ... ಜೈ ಹೋ !!

Ittigecement said...

ಮನಸು....

ಇಲ್ಲಿ ನಾಯಕ ಒಂದು ಸುಂದರ ಪುಟ್ಟ ಗೂಡನ್ನು ಕಟ್ಟಿಕೊಂಡಿದ್ದಾನೆ...
ಅದರಲ್ಲಿ ಖುಷಿ ಇಲ್ಲವೆ?
ಖಂಡಿತಾ ಇದೆ...

ಆದರೆ ಮತ್ತೆ ಆ ಗೆಳತಿ ಯಾಕೆ ?

ವ್ಯವಹಾರದಲ್ಲಿ ಶುದ್ಧ ಇದ್ದು...
ಸಂಸಾರದಲ್ಲಿ ಸುಖ ಇದ್ದರೂ ಹೃದಯ ಅಳುತ್ತಿರುತ್ತದೆ...

ಬಹುಷಃ
ಮಡದಿಗೂ... ತನಗೂ.. ಒಳಗೊಳಗೆ ಮೋಸ ಮಾಡುತ್ತಿರುವದಕ್ಕೆ ಅಂತರಂಗ ಅಲುತ್ತಿದೆಯಾ?

ನಿನ್ನೆ ನಾಲ್ಕೈದು ಗೆಳೆಯರಿಗೆ ಈ ಕಥೆ ಕಳಿಸಿಕೊಟ್ಟಿದ್ದೆ...

"ಚೆನ್ನಾಗಿದೆ " ಅಂದಿದ್ದರು..

ಇವತ್ತು ತಿದ್ದಿ ಹಾಕಿದೆ...

ಇಷ್ಟೆಲ್ಲ ಉತ್ಸಾಹದ ಪ್ರತಿಕ್ರಿಯೆಗಳು ಬಹಳ ಖುಶಿ ಆಯ್ತು..

ಧನ್ಯವಾದಗಳು ಸುಗುಣಾ ....

Ittigecement said...

ಮಂಜುಳಾರವರೆ...

ನಿಮ್ಮ ಮೂಲ ಪ್ರತಿಕ್ರಿಯೆ ಅಳಿಸಿ ಹೋಗಿದ್ದಕ್ಕೆ ಕ್ಷಮೆ ಇರಲಿ...

"ಇರುವುದೆಲ್ಲವ ಬಿಟ್ಟು..
ಇರದುದೆಡೆ ತುಡಿಯುವದೇ ಜೀವನಾ... ! "

ಪ್ರೀತಿಸುವ ಮಗಳ.. ಮಡದಿ...
ತಾನೆ ಕಟ್ಟಿಕೊಂಡ ಪುಟ್ಟ ಗೂಡು ..

ಇಷ್ಟು ಸಂತೋಷದ ಸಂಸಾರಕ್ಕೆ ಸಾಕಾಗಬೇಕಿತ್ತು.. ಅಲ್ಲವಾ?

ಮತ್ತೆ ಆ ಗೆಳತಿ ಬೇಕಿತ್ತಾ?..

ಪ್ರತಿಕ್ರಿಯೆಗೆ ಪ್ರೀತಿಯ ವಂದನೆಗಳು...

Ittigecement said...

ಆಜಾದೂ...

ಪುಟ್ಟ ಗೂಡಿನ ಸಂಸಾರದಲ್ಲಿ ಖುಷಿ ಇತ್ತು...

ಮತ್ತೆ ಆ ಗೆಳತಿ...

ಗೆಳತಿಯೊಡನೆ ಶುದ್ಧ ಸ್ನೇಹವೇ ಇದ್ದಿರ ಬಹುದು....

ಆದರೂ ಅಂಥಹ ಒಂದು ಸ್ನೇಹ ಬೇಕು ಅಂತ ಆಯಿತಲ್ಲ.... !

ಅಂಥಹ ಸ್ನೇಹವಾದರೂ "ಹೆಣ್ಣಿನೊಡನೆಯೇ.." ಯಾಕೊ...? .......

ಕಥೆ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸು ಪುಟ್ಟಣ್ಣಾ.. ಜೈ ಹೋ !

umesh desai said...

ಯಾವುದೇ ಕಥೆಗೆ ಸೊಗಸಾದ ಪ್ರಾರಂಭ ಅನೀರೀಕ್ಷಿತ ತಿರುವಿನ ಅಂತ್ಯ ಇದ್ರೆ ಆ ಕತೆಯ ಮಾತೇ ಬೇರೆ
ಅದು ಇದರಲ್ಲಿದೆ..ಹೌದು ಇದನ್ನು ಪತ್ರಿಕೆಗೆ ಕಳಿಸಬಹುದಿತ್ತು..ಸೊಗಸಾದ ಶೈಲಿ ನಿಮ್ದು ಎಂದಿನಂತೆ33

ಸಂಧ್ಯಾ ಶ್ರೀಧರ್ ಭಟ್ said...

ಚಂದದ ಕಥೆ. unexpected ತಿರುವು ಎಂದಿನಂತೆ ...
ಸಾವಿನ ಎದುರಿಗೆ ಎಲ್ಲ ಪ್ರಾಮಾಣಿಕರಾಗಿರುತ್ತಾರೆ ಎಂದು ನರ್ಸ್ ಹೇಳುತ್ತಾಳೆ.
ಇಲ್ಲಿ ನಾಯಕನದು ಪ್ರಾಮಾಣಿಕತೆಯೇ . ಆತ ಹೆಂಡತಿ ಮಗಳ ಹೊರತಾದ, ತನ್ನದೇ ಆದ ಮಾನಸಿಕ ಜೀವನದಲ್ಲಿ ನಿಭಾಯಿಸುತ್ತಿರುವ ಸ್ನೇಹ ತಾನು ಹೆಂಡತಿಗೆ ಮಾಡುತ್ತಿರುವ ದ್ರೋಹ ಎಂದು ಅವನಿಗೆ ಅನ್ನಿಸಿಲ್ಲ. ಹಾಗಾಗಿಯೇ ಅವನು ನಾನು ಯಾರಿಗೂ ಮೋಸ ಮಾಡಿಲ್ಲ ಎಂದು ಪ್ರಾಮಾಣಿಕವಾಗಿಯೇ ಹೇಳಿದ್ದಾನೆ ಎನಿಸುತ್ತದೆ.

Ittigecement said...

ಶುಭಾರವರೆ...

ನಿಜ ಹೃದಯದಲ್ಲಿ ಎಲ್ಲರನ್ನೂ ಇಟ್ಟುಕೊಳ್ಳಲು ಆಗುವದಿಲ್ಲ...
ಮಾನಸಿಕವಾಗಿ ಇಷ್ಟವಾದವರೇ ಅಲ್ಲಿರುತ್ತಾರೆ ಎನ್ನುತ್ತದೆ ಭಾವುಕ ಮನಸ್ಸು...

ಒಬ್ಬ ವೈದ್ಯನಿಗೆ... ಸರ್ಜನ್ ರಿಗೆ ಹೃದಯವೆಂದರೆ ಬೇರೆಯೇ ಅರ್ಥ..
ಅದೇ..
ಒಬ್ಬ ಪ್ರೇಮಿಗೆ ಹೃದಯವೆಂದರೆ ಬೇರೆನೇ ಅರ್ಥ...

ವಾಸ್ತವವಾದಿ ಹೃದಯಕ್ಕೆ ಬೇರೆಯ ಅರ್ಥ, ವಿವರಣೆ ಕೊಡಬಹುದು...

ಆ ಹೃದಯಕ್ಕೆ ಪೆಟ್ಟಾದಾಗ ಆಗುವ ನೋವು ಯಾರಿಗಾದರೂ ತಡೆದುಕೊಳ್ಳುವದು ಕಷ್ಟ...

ಎಲ್ಲರಿತೀಯಿಂದಲೂ
ನಲವತ್ತರ ವಯಸ್ಸಿನವರೆಗೆ ಹೃದಯಕ್ಕೆ ಬೇಕಾದಷ್ಟು...
ಅಧಿಕ ಕೆಲಸ ಕೊಟ್ಟು..

ಅದು ಸರಿ ಇಲ್ಲ ಅಂತ ಆದಾಗ..
ಅದೊಂದು ದೊಡ್ಡ ಆಘಾತ... ಷಾಕ್.. !

ಅಂಥಹದೊಂದು ಸನ್ನಿವೇಶದ ಕಥಾ ಚಿತ್ರಣ ಇದು...

ಯಾರ್ಯಾರೆಲ್ಲ ಇರುತ್ತಾರೆ ಆ ಪುಟ್ಟ ಹೃದಯಲ್ಲಿ ಅಲ್ಲವಾ?

ತುಂಬಾ ಚಂದದ ಪ್ರತಿಕ್ರಿಯೆಗೆ ..
ತುಂಬಾ ತುಂಬಾ ಥ್ಯಾಂಕ್ಸು....

Ittigecement said...

ಪ್ರೀತಿಯ ಶ್ರೀಕಾಂತ...

ನಮ್ಮ ಹೃದಯದಲ್ಲಿ ಏನೆಲ್ಲ ಇಟ್ಟುಕೊಂಡಿರ್ತಿವಿ ಅಲ್ವಾ?

ಬೇಕಾಗಿದ್ದು..
ಬೇಡವಾಗಿದ್ದು..
ಎಲ್ಲವನ್ನೂ ಇಟ್ಟುಕೊಂಡು ಕಸದ ಕೊಚ್ಚೆ ಮಾಡಿಕೊಂಡಿರುತ್ತೇವೆ...

ಮಡದಿ..
ಮಕ್ಕಳ ಪುಟ್ಟ ಗೂಡಿನಲ್ಲಿ ಸಂತೋಷವಾಗಿರಲು
ಸ್ನೇಹಿತರು...
ಹಿತೈಷಿಗಳು.. ಸಾಕಲ್ಲವೆ?...

ಈ ಕಥೆ ಬರೆದಾದ ಮೇಲೆ ಮದದಿಗೆ ಓದಿ ಹೇಳಿದೆ...

"ಹೆಂಗಸರು ..
ಸಂಸಾರದ ಪುಟ್ಟಗೂಡಿಗೂ...
ಹೃದಯದ ಪ್ರೇಮ ಗೂಡಿಗೂ ಒಂದು ಫ್ರೇಮ್ ಹಾಕಿ ಇಟ್ಟು ..
ನೆಮ್ಮದಿಯಿಂದ ಇರುತ್ತಾರೆ..

ಈ ಗಂಡಸರಿಗೆ ಸಿಕ್ಕಾಪಟ್ಟೆ ದೊಡ್ಡ ಫ್ರೇಮು ಬೇಕು ಅಲ್ವೇನ್ರಿ?
ಹೆಚ್ಚಿನ ಸಂದರ್ಭದಲ್ಲಿ ಫ್ರೇಮಿನ ಹೊರಗಡೆ ಇರುವದರ ಬಗೆಗೆ ಆಸಕ್ತಿ ಜಾಸ್ತಿ ಅಲ್ವಾ?" ಅಂದಳು...

ನಾನು ತಲೆ ಅಲ್ಲಾಡಿಸಲಿಲ್ಲ ಅನ್ನಿ...

ಶ್ರೀಕಾಂತ್..
ನೀವು ಕಥೆ ಚೆನ್ನಾಗಿದೆ ಅಂತ ಎಸೆಮ್ಮೆಸ್ ಕಳಿಸಿದಾಕ ಖುಷಿಯಾಗಿತ್ತು..
ಪ್ರತಿಕ್ರಿಯೆ ನೋಡಿ ಇನ್ನೂ ಹೆಚ್ಚಾಯ್ತು..

ತುಂಬಾ ತುಂಬಾ ಥ್ಯಾಂಕ್ಸು...

ಗೆಳತಿ said...

ಮೊದಲಿಗೆ ತಕ್ಷಣಕ್ಕೆ ಓದುವಾಗ ಇದೇನಾಯಿತು ಅಣ್ಣಯ್ಯನಿಗೆ ಅಂತ ಗಾಬರಿಯಾಯಿತು.. ಅಮೇಲೇ ನಿಧಾನವಾಗಿ ವಿವೇಚನೆಗೆ ಕೆಲಸ ಕೊಟ್ಟಾಗ ಇದು ಕತೆ ಇರಬಹುದು ಎನಿಸಿತು..ಅದರೂ ಸಾಮಾನ್ಯವಾಗಿ ಬರಹಗಾರರು ತಮ್ಮ ಜೀವನಕ್ಕೆ ಸಮೀಪವಾಗಿ ಬರೆಯುತ್ತಾರಲ್ಲವಾ.. ಎನೇ ಇರಲಿ ನಿಮ್ಮ ಆರೋಗ್ಯದ ಬಗ್ಗೆ ನಿಗವಿರಲಿ...ನಿಮ್ಮ ಆರೋಗ್ಯದಲ್ಲಿ ಕಿಂಚಿತ್ತು ಏರುಪೇರಾದರೂ ನೀವೇ ಕಟ್ಟಿಕೊಂಡ ಗೂಡಿನ ಹಕ್ಕಿಗಳು, ಹೊರ ಗೂಡಿನ ಹಕ್ಕಿಗಳು ಸಹಿಸುವುದಿಲ್ಲ... ನಿಮ್ಮ ಗೂಡು ಸದಾ ಸಂತೋಷದಿಂದಿರಲಿ...

ಇನ್ನು ಕತೆಯ ಬಗ್ಗೆ ಹೇಳುವುದಾದರೆ ಪದಗಳ ಜೋಡಣೆ ಅದ್ಬುತ.. ಒಂದೊಂದು ಪದಗಳು ಮನಮುಟ್ಟುವಂತೆ ಇವೆ... ಕತೆ ಒದುತ್ತಾ ಇದ್ದರೆ ವಾಸ್ತವದಲ್ಲಿಯೇ ನಡೆಯುತ್ತಿದೆಯೇನೊ ಅನ್ನಿಸುತ್ತಿದೆ...

ಪ್ರತಿ ಹೃದಯವು ಅಳುತ್ತಲೇ ಇರುತ್ತವೆ.... ಪ್ರತಿ ಹೃದಯದಲ್ಲೂ ನಿಮ್ಮ ಗೆಳತಿಯ ಹಾಗೇ ಒಂದು ಸುಂದರ ಸಿಹಿಯಾದ/ಕಹಿಯಾದ ನೆನಪುಗಳು ಇದ್ದೆ ಇರುತ್ತದೆ...

Sujata said...

so nice Prakashanna.

Ittigecement said...

ವಂದನಾ...

ನರ್ಸ್ ಮತ್ತು ನನ್ನ ನಡುವೆ ನಡೆದ ಮಾತುಕತೆಗೆ ನನ್ನಾಕೆಯೇ ಸಾಕ್ಷಿ...
ಎಷ್ಟು ಚಂದವಾಗಿ ಮಾತಾಡಿದಳು ಅಂದರೆ ನಾನಂತೂ ಅವಳ ಮಾತಿಗೆ ಮಾರು ಹೋದೆ...

ನನ್ನಾಕೆಯಂತೂ ಬಿದ್ದೂ ಬಿದ್ದೂ ನಗುತ್ತಿದ್ದಳು..

"ಇವರೆಲ್ಲ ಏನು ಅಂದ್ಕೋತಾರೆ ಅಂತ ಕಲ್ಪನೆ ಕೂಡಾ ಇಲ್ವಲ್ರಿ..
ಸ್ವಲ್ಪ ಸೀರಿಯಸ್ಸಾಗಿರಿ" ಅಂತ ಗದರಿದಳು...

ನಮ್ಮ ಡಾಕ್ಟರ್ರು ಡಿಟಿ ಕೃಷ್ಣಮೂರ್ತಿಯವರು ಹೇಳಿದ ಹಾಗೆ ಹೃದಯ ಅಳುತ್ತಿರುವದು..
ತೂಕ ಜಾಸ್ತಿಯಾಗಿದ್ದಕ್ಕೆ...
ರಕ್ತ ಸಂಚಲನೆಗಾಗಿ ಕಷ್ಟ ಪಡುತ್ತಿದೆ..

ಹಾಗಾಗಿ ತೂಕ ಇಳಿಸಲು ಪ್ರಯತ್ನ ನಡೆದಿದೆ...

ನೋಡೋಣ..
ನನ್ನ ತೂಕ ಕಡಿಮೆ ಮಾಡಲು ಹೋಗಿ ಆಶಾ ತೂಕ ಜಾಸ್ತಿ ಆಗಿಬಿಡುತ್ತದೊ ಅಂತ... !

ಪ್ರತಿಕ್ರಿಯೆ
ಪ್ರೋತ್ಸಾಹಕ್ಕೆ ಧನ್ಯವಾದಗಳು..

Ittigecement said...

ಪ್ರೀತಿಯ ಹೆಬ್ಬಾರ್ ಸರ್....

ನಿಮ್ಮ ಪ್ರತಿಕ್ರಿಯೆ ಓದಿ ನಾನು..
ನನ್ನಾಕೆ.. ಆಶೀಷ್ ಮತ್ತು ನನ್ನ ಅಳಿಯ ಪ್ರಶಾಂತ್..
ಎಷ್ಟು ನಕ್ಕಿದ್ದೀವಿ ಅಂದ್ರೆ ಹೊಟ್ಟೆ ಹುಣ್ಣಾಗುವಷ್ಟು.... !

ಪ್ರಶಾಂತ್ ಹೇಳ್ತಾ ಇದ್ದ...

"ಹೃದಯ ಒಂದೇ ಅಲ್ಲ...
ತಲೆನೂ ಸ್ಕ್ಯಾನ್ ಮಾಡ್ಬೇಕಿತ್ತು ಮಾಮಾ..." ಅಂತ.. !
ಇದಕ್ಕೆ ಉಳಿದವರೆಲ್ಲರ ಬೆಂಬಲ..

ಬಹುಷಃ ತಲೆ ಸ್ಕ್ಯಾನ್ ಮಾಡಿದ್ರೆ...

"ಮಿದುಳು ನಗ್ತಾ ಇರ್ತಿತ್ತೇನೊ...
ಯಾಕೆ ಅಂದರೆ ಮೆದುಳು "ಹೃದಯ" ಅಲ್ಲವಲ್ಲ...

ಸ್ವಲ್ಪ ಆಕಡೆ ಈಕಡೆ ನೋಡಿಕೊಂಡು ವಿಚಾರ ಮಾಡಿಕೊಂಡು ಅಳಬಹುದು...!

ಎಷ್ಟೆಂದೆರೂ ವಿಚಾರ ಮಾಡುವ ಅಂಗ ಅಲ್ಲವಾ?

ಸರ್...

ಪ್ರತಿಕ್ರಿಯೆ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಪ್ರೀತಿಯ ಸೀತಣ್ನ...

ಮಕ್ಕಳ ಹೃದಯ ಯಾವಾಗಲೂ ನಗುತ್ತಿರ ಬಹುದು..
ನಾವೆಲ್ಲ ದೊಡ್ಡವರಾದ ಹಾಗೆ "ಹೃದಯದ" ಮಾತುಕೇಳದೆ ಬುದ್ಧಿವಂತರಾಗಿಬಿಡುತ್ತೆವೆ ಅಲ್ಲವ?

ಬಾಲ್ಯ... ಆಟ..
ಓದು.. ಸ್ನೇಹಿತರು...
ನೌಕರಿ..
ಮಡದಿ.. ಮಕ್ಕಳು... ಹೀಗೆ ಓಡುತ್ತಿರುವಾಗ..

ಧುತ್ತೆಂದು ನಮ್ಮನ್ನು ಒಮ್ಮೆ ನಿಲ್ಲಿಸಿಬಿಡುವದು.. ಇಂಥಾದ್ದೊಂದು ಟೆಸ್ಟುಗಳು... !

ಇದನ್ನು ಅರಗಿಸಿಕೊಳ್ಳುವದು ಬಲು ಕಷ್ಟ.....

ಪ್ರತಿಕ್ರಿಯೆ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಪ್ರೀತಿಯ ಡಾಕ್ಟ್ರೆ...

ನಿಜ ತೂಕ ಜಾಸ್ತಿ ಆಯ್ತು..
ತೂಕ ಇಳಿಸಿಕೊಳ್ಳಲು ಎಲ್ಲ ತಯಾರಿ ಮಾಡುತ್ತಿರುವೆ....

ಹೃದಯ ಕಷ್ಟ ಪಡುತ್ತಿರುವದು ಈ ದೊಡ್ಡ ದೇಹಕ್ಕೆ ರಕ್ತ ಪೂರೈಸಲು...

ಪ್ರತಿಕ್ರಿಯೆ ಪ್ರೋತ್ಸಾಹಕ್ಕೆ ಪ್ರೀತಿಯ ನಮನಗಳು...

Badarinath Palavalli said...

ಎಲ್ಲರ ಹೃದಯಗಳೂ ಅಳುತ್ತವೆ..
ನನ್ನೊಬ್ಬನದೇ ಅಲ್ಲ...

ಒಬ್ಬ ಅಪ್ರತಿಮ ಕವಿ ಮಾತ್ರ ಬರೆದುಕೊಡಬಲ್ಲ ಸಾಲುಗಳಿವು.

ಕಥೆ ಬರೆಯುತ್ತಾ ಬರೆಯುತ್ತಾ, ನರ್ಸ್ ಕೇಳುವ ಪ್ರಶ್ನೆಗಳ ಮೂಲಕ ನಮ್ಮ ಮನೋ ಪರಿಕ್ಷೆಯನ್ನು ಮಾಡಿದ್ದೀರಿ.

ನಾನು ತೂಕ ಇಳಿಸ ಬೇಕಪ್ಪಾ.

ರಾಜಿಲೋಕೇಶ್ said...

ಪ್ರಕಾಶಣ್ಣ, ವಾಸ್ತವಕ್ಕೆ ಹತ್ತಿರವಾದ ನಿಮ್ಮ ಕಥೆ ಸೊಗಸಾಗಿದೆ. ಹೃದಯಕ್ಕೆ ನಾಟಿ, ಒಂದು ಸಲ ನಿಜವಾಗಿಯೂ ಆಗಿರಬಹುದೇ ಎಂದು ಯೋಚಿಸಿದೆ..
ಆದರೆ ನೀವೇ ಹೇಳಿದಂಗೆ ಇದು ಅರ್ಧ ಸತ್ಯ ಅಂತ ಸಮಾಧಾನ ಮಾಡಿಕೊಂಡರು..

ಹೆಣ್ಣು ಮನಸ್ಸು ಅಲ್ಲವೇ, ಸ್ವಲ್ಪ ದುಃಖನು ಆಯ್ತು...

ನಂತರ ಇದು ಕಥೆ ಅಂತ ಎಲ್ರನ್ನು ಸಮಾಧಾನ ಮಾಡಿದ್ದೀರಾ ..ಥ್ಯಾಂಕ್ಸ್...
ನೀವು ಮೆದುಳ(ಹೃದಯ ಅಲ್ಲದೆ ಇದ್ರೂನು)ನ್ನು ಉಪಯೋಗಿಸಿದರು ಹೃದಯಕ್ಕೆ ಹತ್ತಿರ ಆಗುತ್ತೆ ನಿಮ್ಮ ಲೇಖನ..

Ittigecement said...

ಪ್ರೀತಿಯ ದಿನಕರ..

ಸಂಶಯವೇ ಬೇಡ..
ಇದು ಕಥೆ...
ಕಥೆಯನ್ನು ಬರೆಯುವಾಗ ನಿರೂಪಕನಾಗಿ "ನಾನು" ಬರುವದರಿಂದ ಗೊಂದಲ ಉಂಟಾಗಿದೆ...

"ನಾನು" ಇಲ್ಲದೆಯೆ ಕಥೆ ಬರೆಯುವ ಆಸೆಯಿದೆ..
ಕಷ್ಟವಾಗಬಹುದು .. ಮುಂದೊಂದು ದಿನ ಪ್ರಯತ್ನಿಸುವೆ...

ಕಥೆಯನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕೆ ಧನ್ಯವದಗಳು...

Ittigecement said...

ಮಹೇಶು...

ನಿನ್ನೆ ಒಂದು ಒಳ್ಳೆಯ ಎಸ್ಸೆಮ್ಮೆಸ್ಸು ಬಂದಿತ್ತು...

"ಮನಸ್ಸು ವಿಶಾಲವಾಗಿರುತ್ತದೆ... ಬಹಳಷ್ಟು ಜನರು ಅಲ್ಲಿರುತ್ತಾರೆ..

ಹೃದಯದಲ್ಲಿ ಹಾಗಲ್ಲ..
ಅಲ್ಲಿ ಒಬ್ಬರೋ.. ಇಬ್ಬರೋ ಇರುತ್ತಾರೆ.. ಅದು ಚಿಕ್ಕದಾಗಿರುತ್ತದೆ.."

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಪ್ರಶಸ್ತಿಯವರೆ....

ಈ ಕಥೆಯ ಕೊನೆಯನ್ನು ಹೀಗೆ ಮಾಡಬಾರದಿತ್ತು...
ನಾಯಕ ತನ್ನ ಕುಟುಂಬದ ಪ್ರೀತಿಯೊಡನೆಯೇ ಇರಬೇಕಿತ್ತು ಎನ್ನುವದು ಒಂದೆರೆಡು ಗೆಳೆಯರ ಅಭಿಪ್ರಾಯವಾಗಿತ್ತು...

ಅದು ಸಾಮಾನ್ಯ ಘಟನೆಯಾಗಿ ಬಿಡುತ್ತಿತ್ತು ಎನ್ನುವದು ನನ್ನ ಅಭಿಪ್ರಾಯ..
ನಮ್ಮ ನಿಮ್ಮೆಲ್ಲ ಅನುಭವದಂತೆ...

ಕಥೆಯನ್ನು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು...

Shruthi B S said...

ಚನಾಗಿದ್ದು ಪ್ರಕಾಶಣ್ಣ....

ಮಹಿಮಾ said...

ಸೂಪರ್..ಭಾವಗಳ ಬೆಲ್ಲ ನಿಮ್ಮ ಬರಹ..ಜೊತೆಗೆ ಸತ್ಯದ ಕಹಿ ಕಶಾಯ...ಅರೋಗ್ಯಕ್ಕೆ ಒಳ್ಳೆಯದು

balasubramanya said...

ಒಂದು ವಿಚಿತ್ರ ಅನುಭವ ನೀಡಿದ ಲೇಖನ ಇದು, ಸಾವಿನ ಸನಿಹ ಇದ್ದಾರೆ ಸತ್ಯ ಹೇಳುತ್ತಾರೆ ಎಂಬ ಮಾತು ನಿಜ ಆದರೆ ಆ ಪುಣ್ಯಾತ್ಮ ಸುಳ್ಳು ಹೇಳಿ ನರ್ಸ್ ಎದುರು ಸಣ್ಣ ಮನುಷ್ಯನಾಗಿದ್ದು , ಆದರೂ ಈ ಸನ್ನಿವೇಶದಲ್ಲಿ ಹೆಂಡತಿ, ಹಾಗು ಮಗಳು ತೋರಿದ ಕಾಳಜಿ ಸಮಾಧಾನ ನೀಡಿತು. ಬಹಳಷ್ಟು ಮನುಷ್ಯರ ಮನಸುಗಳ ಮುಚ್ಚಿಟ್ಟ ಸತ್ಯಗಳ ದರ್ಶನ ಮಾಡಿಸುತ್ತದೆ. ಜೈ ಹೋ ಸಾರ್

Ittigecement said...

ಸುದೀಪ.....

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

ನನಗೆ ಬಂದ ಎಸ್ಸೆಮ್ಮೆಸ್ಸುಗಳಲ್ಲಿ "ಸೌರಭಾ" ಅವರದ್ದು ನನಗೆ ಬಹಳ ಇಷ್ಟವಾಯ್ತು...
ಇವರು ತುಂಬಾ ಚಂದದ ಕವನ.. ಬರಿತಾರೆ..
ಶಿವಮೊಗ್ಗದಲ್ಲಿ ವಿದ್ಯಾರ್ಥಿನಿ.. ಅವರದ್ದೂ ಬ್ಲಾಗ್ ಇದೆ...

ಅವರ ಅಭಿಪ್ರಾಯ ಹಂಚೊಕೊಳ್ಳುವ ಆಸೆ ಆಯ್ತು....

"ವ್ಯಕ್ತಿಯೊಬ್ಬ ತೆರೆದ ಪುಸ್ತಕ ಆಗಬೇಕೆಂದೇನೂ ಇಲ್ಲ..

ಎಲ್ಲರ ಬದುಕಿನಲ್ಲೂ ಯಾರೂ ಓದದ ಪುಟಗಳಿರುತ್ತವೆ..

ನಾವೇ ಓದಿ ಖುಷಿ ಪಡುವ
ಕಣ್ಣೀರಾಗುವ ಪುಟಗಳು ಅವು....""

ನಿಜ ಅಲ್ವಾ?

ಕಥೆಯನ್ನು ಓದಿ ಇಷ್ಟಪಟ್ಟಿದ್ದಕ್ಕೆ.. ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸೌರಭಾ .... ನಿಮಗೂ ಧನ್ಯವಾದಗಳು...

Ittigecement said...

ಅಶೋಕ್ ಭಯ್ಯಾ...

ನಿಮ್ಮ ಹೃದಯ ಗಟ್ಟಿಯಾಗಿ ನೂರುಕಾಲ ಇರಲಿ..
ಅದರ ಪರೀಕ್ಷಿಸುವ ಸಂದರ್ಭ ಬಾರದಿರಲಿ...

ವ್ಯಕ್ತಿಯೊಬ್ಬನ ಕಾಣುವ ಪುಟಗಳಿಗಿಂತ
ಓದದಿರುವ ಪುಟಗಳ ಬಗೆಗೆ ಆಸಕ್ತಿ ಜಾಸ್ತಿ ಅಲ್ಲವೆ? ...

ಈ ಕಥೆಗೆ ಇನ್ನೊಂದು ತಿರುವು ಕೊಟ್ಟಿದ್ದೆ...

ಆ ನರ್ಸ್ ನಾಯಕನನ್ನು ಒಂಥರಾ ನೋಡಿದಳು ಎನ್ನುವಂಥಾದ್ದು...

ಅದು ಯಾಕೋ ಅಸಹಜ ಅನ್ನಿಸಿಬಿಡ್ತು...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

Ittigecement said...

ಉಮೇಶ ದೇಸಾಯಿಯವರೆ...

ಪತ್ರಿಕೆಗಳಿಗೆ ಕಳಿಸಿದರೆ ಪ್ರಕಟವಾಗಬಹುದಾ? ಎನ್ನುವ ಅನುಮಾನ..
ಹಾಗಾಗಿ ಕಳಿಸಲಿಲ್ಲ..

ಒಮ್ಮೆ ಕಳಿಸಿ ನೋಡೋಣ ಎನ್ನುವ ಆಸೆ ಇದೆ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ...
ಪ್ರೋತ್ಸಾಹಕ್ಕೆ ಧನ್ಯವಾದಗಳು....




ಚಿನ್ಮಯ ಭಟ್ said...

ಪ್ರಕಾಶಣ್ಣ,ನಿಮ್ಮ ಕಥೆಯ ಬಗ್ಗೆ ವಿಮರ್ಶಿಸುವಷ್ಟು ದೊಡ್ಡವನು ನಾನಲ್ಲ,ಆದರೂ ನನಗನಿಸಿದ ಒಂದು ಮಾತು ಹೇಳುತ್ತೇನೆ ತಪ್ಪಿದ್ದರೆ ಕ್ಷಮಿಸಿ...

ಅಲ್ಲಿ ಹ್ರದಯದ ಬಗ್ಗೆ ಹೇಳುವಾಗ ನರ್ಸಿನ ಬದಲು ಬೇರೆಯಾರಾದರೂ ಆಪ್ತರನ್ನು(ಸ್ನೇಹಿತರೋ,ನೆಂಟರೋ) ಕರೆ ತಂದಿದ್ದರೆ ಹೇಗಿರುತ್ತಿತ್ತು ಎಂಬ ಯೋಚನೆ ನಂದು...ಏಕೆಂದರೆ ಗುರುತು ಪರಿಚಯವಿಲ್ಲದವರ ಜೊತೆ ಹಳೆಯ ಅಳಿಸಿ ಹೋದ ಪ್ರೀತಿಯ ಬಗ್ಗೆ ಹೇಳಿಕೊಳ್ಳುವುದು ಹೇಗೋ ನಾಕಾಣೆ,ಅಥವಾ ಅಷ್ಟು ವರ್ಷಗಳಾದ ಮೇಲೆ,ನನ್ನ ವಯಸ್ಸಿನಲ್ಲಿ ಇರುವ ಕುತೂಹಲ,ಗೊಂದಲ,ನಾಚಿಕೆಗಳೆಲ್ಲ ಕಾಲದೊಡನೆ ಕೊಚ್ಚಿಹೋಗಿ,ಅವೆಲ್ಲಾ ಸಹಜ ಎನ್ನುವ ಭಾವ ಬರುವುದೋ ಗೊತ್ತಿಲ್ಲ...

೨)ಅಲ್ಲಿ ಹ್ರದಯದ ಮೇಲೆ ಮನಸ್ಸಿನ ಹಿಡಿತವನ್ನು ವಿವರಿಸಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತೇನೋ...ಎಷ್ಟೋ ಬಾರಿ ವ್ಯವಹಾರದಲ್ಲಿ ಹ್ರದಯ ಕೊಡು ಎಂದರೆ,ಮನಸ್ಸು ಬೇಡ ಎನ್ನುತ್ತದೆ...ಮನಸ್ಸು ತೆಗೆದುಕೋ ಎಂದರೆ,ಹ್ರದಯ ಬೇಡ ಎನ್ನುತ್ತದೆ..ಹೀಗೆ..ನೀವು ಹ್ರದಯವನ್ನು ಒಳಮನಸ್ಸಾಗಿ ಚಿತ್ರಿಸಿರುವುದನ್ನು ನಾನು ಅರ್ಥಮಾಡಿಕೊಂಡಿಲ್ಲವೋ ಅಥವಾ ನಿಮ್ಮ ದ್ರಷ್ಟಿಕೋನವೇ ಬೇರೆ ತರಹ ಇತ್ತೋ ಗೊತ್ತಿಲ್ಲ...ಒಟ್ಟಿನಲ್ಲಿ ಅದೊಂದು ನನಗೆ ಅರ್ಥವಾಗುತ್ತಿಲ್ಲ...

ಏನೇ ಇರಲಿ,ಒಳ್ಳೆಯ ಕಥೆ..ಹೊಸ ತರಹದ ವಿಷಯ,ಕೆಲವೇ ಕೆಲವು ಪಾತ್ರಗಳು..ಇಷ್ಟವಾಯ್ತು...ಇನ್ನುಳಿದದ್ದನ್ನು ಹೇಳಲು ಉಳಿದ ೫೦ ಕಮೆಂಟುಗಳೇ ಸಾಕು..ಅವರೆಷ್ಟೆಲ್ಲಾ ನಾನು ದೊಡ್ಡವನಲ್ಲ..

ನಮಗೆಲ್ಲಾ ಮಾದರಿಯಾದ ನಿಮ್ಮ ಬ್ಲಾಗಿನಲ್ಲಿ ಮತ್ತೆ ಒಂದು ಒಳ್ಳೆಯ ಕಥೆಯನ್ನು ಓದಿ ಖುಷಿಯಾಯ್ತು...

ನನ್ನಿಂದೇನಾದರೂ ತಪ್ಪಾದರೆ ದಯವಿಟ್ಟು ಕ್ಷಮಿಸಿ....ಅದೇ ಭರವಸೆ ಹೊತ್ತು,

ನಿಮ್ಮನೆ ಹುಡುಗ,
ಚಿನ್ಮಯ ಭಟ್.

Unknown said...

ಸುಪರ್