Saturday, September 8, 2012

ಯಾರೆಲ್ಲ ಅವತರಿಸಿದರೂ...ಈ ಜಗತ್ತು ಹೀಗೆಯೇ ಇರುತ್ತದೆ...!


ಪಾಂಡವರು ವನವಾಸ...
ಒಂದು ವರ್ಷ ಅಜ್ಞಾತವಾಸ ಮುಗಿಸಿ ಕುಳಿತಿದ್ದರು...

ಎಲ್ಲರಿಗೂ ಚಿಂತೆ ಒಂದೆ ಇತ್ತು...


"ದುರ್ಯೋಧನ ರಾಜ್ಯವನ್ನು ಬಿಟ್ಟುಕೊಟ್ಟಾನೆಯೇ...?

ಸಂಧಾನವೋ...?
ಸಂಗ್ರಾಮವೋ....? ...

ಸಂಗ್ರಾಮವಾದರೆ ಸಾವು.. 

ನೋವುಗಳು... !
ಅನಿವಾರ್ಯವಾದ ರಕ್ತಪಾತ...
ಮಾನಸಿಕ ಹಿಂಸೆ....!

ಬಂಧುಗಳೊಡನೆ ಹೊಡೆದಾಟ ಮಾಡಬೇಕೆ...?"


ಕೃಷ್ಣ ಹೇಳಿದ...


"ನಿಮಗೆ...

ಏನು ಬೇಕೊ.. ಅದರ ಬಗೆಗೆ ಹೋರಾಟ ಮಾಡಲೇ ಬೇಕು....!
ಯುದ್ಧವನ್ನಾದರೂ  ಮಾಡಲೇ ಬೇಕು....
ಪ್ರಯತ್ನ ಮಾಡಲೇ ಬೇಕು....

ಇಲ್ಲವಾದಲ್ಲಿ...

ಸಿಗದಿರುವದರ ಬಗೆಗೆ ..
ದುಃಖಿಸಲು..
ಬೇಸರ ಪಟ್ಟು ಕೊಳ್ಳಲು ನಿಮಗೆ  ಅಧಿಕಾರವಿಲ್ಲ... ! .."

ಪಾಂಡವರು ಕೃಷ್ಣನ ಮಾರ್ಗದರ್ಶನದಲ್ಲೇ ನಡೆದರು...


............. ..........  .............................


ಕೃಷ್ಣ ...

ಹೇಳಿದ ಮಾತು ದುರ್ಯೋಧನನ ಕಿವಿಗೂ ಬಿತ್ತು....!

ಧುರ್ಯೋಧನ ಕೃಷ್ಣನ ಮಾತನ್ನು ಸಮರ್ಥಿಸಿದ....


"ಕೃಷ್ಣ ಹೇಳಿದ್ದು ನಿಜ...


ಈ ಸಿಂಹಾಸನ ...

ಕುಲಕ್ಕೆ ಹಿರಿಯನಾದ ದೃಥರಾಷ್ಟ್ರನ ಮಕ್ಕಳಾದ ಕೌರವರ ಹಕ್ಕು.. !

ಈ ರಾಜ್ಯ...

ಈ ಅಧಿಕಾರ... ನಮ್ಮದು...!

ನಮಗೇ ಸಿಗಬೇಕಾಗಿದ್ದರ ಬಗೆಗೆ ನಾವು ಹೋರಾಟ ಮಾಡಲೇ ಬೇಕು...


ಯುದ್ಧವಾದರೂ ಸರಿ...

ನಮ್ಮ ಈ ರಾಜ್ಯಕ್ಕಾಗಿ ಹೋರಾಟ ಮಾಡಲೇ ಬೇಕು.... !.."

ದುಃಶ್ಯಾಸನ ...

ಶಕುನಿಗಳು "ಹೌದು" ಅಂತ ಬೆಂಬಲಿಸಿದರು  ....

.............  ..........  .............  ...............


ಮಹಾಭಾರತದ ಯುದ್ಧ ನಡೆಯಿತು......ಗೆದ್ದವರು ... ಸೋತರು...
ಸೋತವರು.. ಸತ್ತರು.... ..!

ಪಾಂಡವರ... 
ಕೌರವರ ಛಲದ ಗದ್ದುಗೆಗಾಗಿ ...
ಧರ್ಮದ... 
ನ್ಯಾಯದ... ಸ್ಥಾಪನೆಗಾಗಿ ಎಷ್ಟೋ ಅಮಾಯಕರು ಹತರಾದರು....

ಹಿಂಸೆ...

ಕ್ರೌರ್ಯ  ಕುರುಕ್ಷೇತ್ರದಲ್ಲಿ ವಿಜ್ರಂಭಿಸಿತು .... !

ಕೊನೆಯಲ್ಲಿ 


"ನ್ಯಾಯ..

ಧರ್ಮ ಗೆದ್ದಿತು " ಎಂದು ಸಾರಲಾಯಿತು ....

 ............  ...........  ......  .... .......... 


ಉಪದೇಶಗಳು .....

ಪುಣ್ಯ ಗ್ರಂಥಗಳು ....
ಮತ ಧರ್ಮಗಳಿಂದ ಏನು ಲಾಭ ?

ತಾವು ಇಟ್ಟ ನಡೆ..

ನಿರ್ಧಾಗಳಿಗೆ ತಮಗೆ ಬೇಕಾದಂತೆ "ಸಮರ್ಥನೆ" ಸಿಗುತ್ತದೆ...!

ಕಾಯಿದೆ..

ಕಾನೂನುಗಳ  ಹಾಗೆ ..
ತಮ್ಮ ಅನೂಕೂಲಕ್ಕೆ ತಕ್ಕ ಹಾಗೆ ಅರ್ಥೈಸಿಕೊಳ್ಳುತ್ತಾರೆ...!

ಭಗವಂತ...

ದಾರ್ಶನಿಕರು...
ಏಸು..
ಪೈಗಂಬರರು....
ಬಸವಣ್ಣ... ಗುರುವೃಂದ....

ಯಾರೆಲ್ಲ ಅವತರಿಸಿದರೂ...


ಜಗತ್ತು ಇರುವದು ಹೀಗೆಯೇ... ಹೀಗೆಯೇ ಇರುತ್ತದೆ...!


ಈ ಜಗತ್ತು...

ಅವರ "ಉಪದೇಶದ"  ಮಾತುಗಳಿಂದ ...
ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತದೆ..

ಎಲ್ಲರೂ..

ಬುದ್ಧಿವಂತರು....

ಹಾಗಾಗಿ ಯಾರಿಗೂ ..

ಉಪದೇಶದ...
ಧರ್ಮಗ್ರಂಥಗಳ ಅಗತ್ಯವಿರುವದಿಲ್ಲ...

ಒಂದುವೇಳೆ ..

ಬೇಕಿದ್ದರೂ.. ಅದು ತಮ್ಮ ..
ನಡೆಯ...
ನಿರ್ಧಾರದ ಸಮರ್ಥನೆಗೆ ಮಾತ್ರ.....

.........  ..............  .......................... ......................(ಒಳ್ಳೆಯ ಪ್ರತಿಕ್ರಿಯೆಗಳಿವೆ...
ದಯವಿಟ್ಟು ಓದಿ....)

......

24 comments:

umesh desai said...

ಹೆಗಡೇಜಿ ನಿಮ್ಮ ಮಾತು ನಿಜ ಸಾಹಿರ್ ಒಂದು ಗೀತೆಯಲ್ಲಿ ಕೇಳುತ್ತಾನೆ..
"ಹರ್ ಯುಗ್ ಮೆ ಬದಲತೆ ಧರ್ಮೊಂಕಾ ಕೈಸೆ ಆದರ್ಶ ಬನಾವೋಗೆ.." ಅಂತ
ಯಾಕೆ ನಿಮಗೆ ಈ ವಿಚಾರ ಬಂತು ಅಂಥದ್ದೇನಾದರೂ ಆಯಿತೋ ಹೇಗೆ..

ದಿಲೀಪ ಹೆಗಡೆ said...
This comment has been removed by the author.
ದಿಲೀಪ ಹೆಗಡೆ said...

ಹಾಗೆ ತಾವು ಏನೋ ಓದಿ, ಏನೋ ಅರ್ಥೈಸಿಕೊಂಡು, ಇನ್ಯಾರದ್ದೋ ತಟ್ಟೆಯಲ್ಲಿ ಬಿದ್ದಿರೋ ನೊಣ ಹೆಕ್ಕಿ ತೋರಿಸೋ ಕೈಂಕರ್ಯದಲ್ಲಿ ಮೈ ಮರೆತು ಮಜಾ ತಗೋತಿರುವಾಗ ತಮ್ಮ ತಟ್ಟೆಯಿಲ್ಲಿ ಸತ್ತು ಬಿದ್ದು ಗಬ್ಬು ನಾರುತ್ತಿರುವ ಹೆಗ್ಗಣ ಕಣ್ಣಿಗೆ ಕಾಣುವದೆ ಇಲ್ಲ... ತತ್ವ. ಆದರ್ಶ ಬರೀ ಉಪದೇಶಕ್ಕಾಗಿ.. ಅನುಸರಣೆಗಲ್ಲ... ಸಕಾಲಿಕ ಬರಹ ಪ್ರಕಾಶಣ್ಣ...

ಸಿಮೆಂಟು ಮರಳಿನ ಮಧ್ಯೆ said...

ದೇಸಾಯಿಯವರೆ....

ಕೃಷ್ಣನ ಉಪದೇಶದ ಮಾತು...

ಧರ್ಮರಾಜನಿಗೂ...
ದುರ್ಯೋಧನಿಗೂ ಅರ್ಥವಾಗಿದ್ದರಲ್ಲಿ ವ್ಯತ್ಯಾಸ ವಿಪರ್ಯಾಸವಲ್ಲವೆ?

ಉಪದೇಶದ ಶಬ್ಧಗಳು...
ವ್ಯಕ್ತಿಯಿಂದ ವ್ಯಕ್ತಿಗೆ ಕಿವಿಯಿಂದ ಒಳಗೆ ಹೋದಮೇಲೆ ಏನೆಲ್ಲ ಅರ್ಥವಾಗಿಬಿಡುತ್ತವೆ ಅಲ್ಲವೆ?

ಬಹಳ ಸೋಜಿಗ... !

ಎಷ್ಟೆಲ್ಲ ಪುಣ್ಯಾತ್ಮರು ಹುಟ್ಟಿದರು...!
ಇದು ಸರಿ... ಇದು ತಪ್ಪು ಅಂತೆಲ್ಲ ತಿಳಿಸಿಕೊಟ್ಟರು...

ಬುದ್ಧಿವಂತ ಜನ ತಮಗೆ ಹೇಗೆ ಬೇಕೊ ಹಾಗೆ ಅರ್ಥ ಮಾಡಿಕೊಂಡರು....

ಧನ್ಯವಾದಗಳು ಉಮೇಶ ಭಾಯ್ ....

Srikanth Manjunath said...

ನಿಮಗೆ...ಏನು ಬೇಕೊ.. ಅದರ ಬಗೆಗೆ ಹೋರಾಟ ಮಾಡಲೇ ಬೇಕು.ಅತಿ ಸುಂದರ ಸಾಲುಗಳು..ಹಾಗೆಯೇ...ನಮಗೆ ಏನು ಬೇಕೋ ಅದರ ಅರ್ಥ ತಿಳಿಯಬೇಕು..ಎಲ್ಲ ಪ್ರವಚನ, ಸಂದೇಶ ಎಲ್ಲವು ಕೂಡ ಸಾರ್ವಕಾಲಿಕ ಸತ್ಯವಾದರೂ..ಅರ್ಥೈಸಿಕೊಳ್ಳುವ ಮನುಜನ ಸ್ಥಿತಿಯ ಮೇಲೆ ಅವನ ಆ ಸಂದೇಶ ನಿಲ್ಲುತದೆ..ಬೇಸರವಾಗಿದ್ದ ಮನಸು..ಒಂದು ಪುಟಿದೇಳುವ ಸಂದೇಶ ಕೇಳಿದಾಗ, ನೋಡಿದಾಗ ಅದು ಅವನಿಗೆ ಚೇತನ ನೀಡುತ್ತದೆ..ಅದೇ ಉಲ್ಲಾಸವಾಗಿದ್ದಾಗ ಅದೇ ಸಂದೇಶ ಹೊಟ್ಟೆ ತುಂಬಿದಾಗ ಊಟದ ಜೊತೆ ಇರುವ ಸಂಡಿಗೆ, ಉಪ್ಪಿನಕಾಯಿಯಾಗಿರುತ್ತದೆ..ರುಚಿ ಇರುತ್ತದೆ..ಆದರೆ ಬೇಡವೆನಿಸುತ್ತದೆ..
ಕೃಷ್ಣ ಹೇಳಿದ ಮಾತು..ನಾನು ಹೇಳಿದ ಹಾಗೆ ಮಾಡು..ನಾನು ಮಾಡಿದ ಹಾಗೆ ಮಾಡಬೇಡ..ರಾಮ ತಾನು ಹೇಳಲಿಲ್ಲ ಆದ್ರೆ ನೆಡೆದು ತೋರಿಸಿದ...ನೀವು ಮಹಾಭಾರತಕ್ಕೆ ಲಗ್ಗೆ ಇಟ್ಟದು ಬಲು ಖುಷಿ ತಂದಿತು..ಸುಂದರ ಲೇಖನ..ಪ್ರಕಾಶಣ್ಣ..

ಜಲನಯನ said...

ಸುಂದರ ವಿಚಾರಕ್ಕೆ ಸೂಕ್ತ ಹಿನ್ನೆಲೆ ಬಹಳ ಚನ್ನಾಗಿದೆ ಲೇಖನ ಪ್ರಕಾಸೂ, ಎಲ್ಲ ಧರ್ಮದ ತತ್ವವೂ ಒಂದೇ ಆದರೆ ಅವನ್ನು ಅಥೈಸಿಕೊಳ್ಳೂವ ರೀತಿ ವಿಭಿನ್ನ, ಕವಲೊಡೆಯುವ ಮರದ ಮುಖ್ಯಕಾಂಡದಂತೆ, ಹತ್ತಾರು ಕವಲೊಡೆದನಂತರ ಆ ತುದಿಯಲ್ಲಿ ಕುಳಿತ ಕಪಿಗೆ ತನಗೆ ಆಶಯ ನೀಡಿದ ಮರವೇ ಮೇಲು ಎನ್ನುವ ಭಮೆ...ಮರೆತಿರುತ್ತೆ ಎಲ್ಲಾ ರೆಂಬೆಗಳೂ ಹೋಗಿ ಸೇರಿವುದು ಅದೇ ಕಾಂಡವನ್ನೇ.

shubha hegde said...

well said...we only responsible for what we made...everybody thinks according to their own knowledge.

ಸಿಮೆಂಟು ಮರಳಿನ ಮಧ್ಯೆ said...

ದಿಲೀಪ್..

ಮನಸಾಕ್ಷಿಗಿಂತ ಬೇರೆ ತಿಳುವಳಿಕೆ ಬೇಕಾ?

ಎಲುಬು ಇಲ್ಲದ ನಾಲಿಗೆ ಏನೇ ಹೇಳಿದರೂ...
ಅಂತರಂಗ ಸುಮ್ಮನಿರುತ್ತದಾ?

ಮನಸಾಕ್ಷಿಯನ್ನೇ ಮುಚ್ಚಿಸುವವರಿಗೆ ..
ಮತ.. ಧರ್ಮಗಳಿಂದ...
ಧರ್ಮ ಗ್ರಂಥಗಳಿಂದ ಏನಾದರೂ ಪರಿಣಾಮ ಆಗಬಹುದಾ?...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

Dr.D.T.Krishna Murthy. said...

ಜೀವನ ವಿಚಿತ್ರ!!!ಅರ್ಥೈಸುವುದು ಕಡು ಕಷ್ಟ!!!ಒಬ್ಬರಿಗೆ ಸರಿ ಎನಿಸಿದ್ದು ಇನ್ನೊಬ್ಬರಿಗೆ ತಪ್ಪು!!!ಈ ತಪ್ಪು ಸರಿಗಳ ಹೊಡೆದಾಟ,ಹೋರಾಟ ಮುಗಿಯುವುದೇ ಇಲ್ಲ!!ಚೆಂದದ ಲೇಖನ ಪ್ರಕಾಶಣ್ಣ.ಅಭಿನಂದನೆಗಳು.

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಶ್ರೀಕಾಂತ...

ಯಾವುದು ತಪ್ಪು ?
ಯಾವುದು ಸರಿ ಅನ್ನೋದು ಸಾಮಾನ್ಯ ಜನಕ್ಕೂ ಗೊತ್ತಿರುತ್ತದೆ...

ಒಂದು ಹೆಜ್ಜೆ ಇಟ್ಟಮೇಲೆ ..
ಅದು ತಪ್ಪಿದೆ ಅಂತ ಗೊತ್ತಾದ ಮೇಲೆ ಅಹಂಭಾವ ಕಾಡುತ್ತದೆ...

ಆಗ ಸಹಾಯಕ್ಕೆ ಧರ್ಮಗ್ರಂಥಗಳು...
ಉಪದೇಶಾಮೃತಗಳು ಬಾಯಲ್ಲಿ ಬರುತ್ತವೆ...

ಮನಸಾಕ್ಷಿ ಇದ್ದಾಗ ..
ಅದರ ಮಾತನ್ನು ಕೇಳಿಬಿಟ್ಟರೆ ಎಲ್ಲ ಧರ್ಮ.. ಮತಗಳು ಒಳ್ಳೆಯದಾಗಿರುತ್ತವೆ...

ಯಾವುದೇ ಧರ್ಮ ಗುರುವಿನ ಮಾತನ್ನು ಕೇಳಿರಿ..
ಅವೆಲ್ಲವೂ ನಮಗೆ ಗೊತ್ತಿರುತ್ತದೆ...

ಆದರೆ ನಾವು ಅದನ್ನು ನಮ್ಮ ಹೆಜ್ಜೆ ತಪ್ಪಿದಾಗ ಬಳಸಿಕೊಳ್ಳುವದು ವಿಪರ್ಯಾಸ..... ಅಲ್ಲವೆ?

ನಿಮ್ಮ ಪ್ರತಿಕ್ರಿಯೆಗಳಿಗೆ ನಾನು ಕಾಯುತ್ತಾ ಇರ್ತೇನೆ..

ಚಂದದ "ಟಾನಿಕ್ಕಿಗಾಗಿ" ಧನ್ಯವಾದಗಳು....

ಚುಕ್ಕಿಚಿತ್ತಾರ said...

ಪ್ರಕಾಶಣ್ಣ..
ಅದು ಹಾಗೆಯೇ ಇರುತ್ತದೆ..:)))

Badarinath Palavalli said...

ಉಪದೇಶಗಳಿಂದ ನಮಗೆ ಸಿಗುವುದು ಕವಡೆಯೇ.

ಧರ್ಮ ಯುದ್ಧದಲ್ಲಿ ಅಮಾಯಕರು ಬಲಿ ಬೀಳಬಾರದು. ಕೃಷ್ಣ ತನ್ನ ದೈವತ್ವದ ಪ್ರಭಾವವನ್ನು ಬಳಸಿಕೊಂಡು, ಕೌರವರ ಮನೋ ಪರಿವರ್ತನೆ ಮಾಡಿ, ಮಹಾಭಾರತವನ್ನು ನಡೇಯದಂತೆ ತಡೆಯಬಹುದಿತ್ತು.

ನಾವು ಯಾವುದನ್ನೂ ಪ್ರಶ್ನಿಸುವಂತಿಲ್ಲ. ಆಸ್ತಿಕ ಪ್ರಭುಗಳು ಮೈ ಮೇಲೆ ಬರುತ್ತಾರೆ.

ಉಮೇಶಣ್ಣ ಹೇಳಿದಂತೆ ನನಗೂ ಮೊದಲು ನೆನಪಾದವನೇ ಸಾಹಿರ್. ನಿಮಗೆ ಯಾಕಿಂತ ಬರಹ ಹೊಳೆಯಿತೋ?

ಸಿಮೆಂಟು ಮರಳಿನ ಮಧ್ಯೆ said...ಫೇಸ್ ಬುಕ್ಕಿನಲ್ಲಿ "ರಾಘವೇಂದ್ರ ಜೋಷಿಯವರ ಅಭಿಪ್ರಾಯ ಸೊಗಸಾಗಿದೆ...

ಇದು ರಾಘವೇಂದ್ರ ಜೋಷಿಯವರ ಅಭಿಪ್ರಾಯ

"


Raghavendra Joshi

" ಜಗತ್ತಿನ ಎಲ್ಲ ಧರ್ಮಗಳೂ,ಧರ್ಮಗ್ರಂಥಗಳದ್ದೂ ಒಂದೇ ಕೆಲಸ:ನಮ್ಮಲ್ಲೊಂದು ಅರಿವು ಮೂಡಿಸುವದು.ಆ ಅರಿವಿನ ಆಳ ಅಳೆಯುವದಕ್ಕಾಗಿ ಅವು ಮತ್ತೊಂದಿಷ್ಟು ಆಮಿಷ ಒಡ್ಡುತ್ತವೆ. "ನನ್ನಲ್ಲಿ ಇಷ್ಟೆಲ್ಲ ಇವೆ.ನಿನಗೇನೂ ಬೇಕೋ ಅದು ಆರಿಸಿಕೋ.." ಅಂತ ಪ್ರಲೋಭನೆಗೆ ಒಡ್ಡುತ್ತವೆ..ಸರಿಯಾದುದನ್ನು ಆರಿಸಿಕೊಂಡವ ಜಾಣ.ಇಲ್ಲವಾದರೆ ಕೋಣ!"

ಸಿಮೆಂಟು ಮರಳಿನ ಮಧ್ಯೆ said...

ಆಜಾದೂ..

ಇಲ್ಲಿ ವ್ಯಕ್ತ ಪಡಿಸಿರುವದು ಒಂದು ಮುಖದ ಅನುಭವ...

ಧರ್ಮ ಗುರುಗಳಿಂದ..
ಗ್ರಂಥಗಳಿಂದ.. ಲಾಭಗಳು ಇದ್ದೇ ಇವೆ...

ಆದರೆ ಹೀಗೂ ಆಗುತ್ತದಲ್ಲ...

ಮೂಕಜ್ಜಿಯ ಕನಸುಗಳು ಕಾದಂಬರಿಯಲ್ಲಿ ಮೂಕಜ್ಜಿ ಒಮ್ಮೆ ಹೀಗೆ ಹೇಳುತ್ತಾಳೆ..

"ದೇವರು ಅವತಾರವಾಗಿ ಹುಟ್ಟಿ...
ಬೆಳೆದು ದೊಡ್ದವನಾಗಿ ಕೆಟ್ಟವರ ಸಂಹಾರ ಮಾಡುವ ತನಕ ಯಾಕೆ ಕಾಯ ಬೇಕಿತ್ತು...?

ತನ್ನ ಶಕ್ತಿಯಿಂದ ಕೂಡಲೆ ಸಂಹಾರ ಮಾಡಬಹುದಾಗಿತ್ತಲ್ಲವೆ? "

ನಾನು ಅಮೃತಸರದ ಚಿನ್ನದ ದೇವಾಲಯಕ್ಕೆ ಹೋಗಿದ ಅನುಭವ ಅವಿಸ್ಮರಣೀಯ..
ಅದರ ಬಗೆಗೆ ಇನ್ನೊಮ್ಮೆ ಬರೆಯುವೆ..

"ದೇವರಿದ್ದಾನೆ ಎನ್ನುವ ನಂಬಿಕೆ ಒಳ್ಳೆಯದನ್ನೂ ಮಾಡುತ್ತದೆ".

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

balasubrahmanya k.s. balu said...

ಇಂತಹ ವಿಚಾರಗಳು ನಿಮ್ಮ ಬರವಣಿಗೆಯಲ್ಲಿ ಉತ್ತಮವಾಗಿ ಮೂಡುತ್ತವೆ. ಹೌದಲ್ವಾ ,
ಭಗವಂತ...
ದಾರ್ಶನಿಕರು...
ಏಸು..
ಪೈಗಂಬರರು....
ಬಸವಣ್ಣ... ಗುರುವೃಂದ.....

ಯಾರೆಲ್ಲ ಅವತರಿಸಿದರೂ...

ಜಗತ್ತು ಇರುವದು ಹೀಗೆಯೇ... ಹೀಗೆಯೇ ಇರುತ್ತದೆ...!

ಈ ಜಗತ್ತು...
ಅವರ "ಉಪದೇಶದ" ಮಾತುಗಳಿಂದ ...
ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತದೆ..
ಜಗತ್ತು ತನ್ನ ಸಹಜತೆಯನ್ನು ಉಳಿಸಿಕೊಂಡೆ ಇದೆ, ಯಾರ ಪ್ರಭಾವಕ್ಕೂ ಮಣಿಯದೆ ತನ್ನ ಹಿರಿಮೆ ಸಾರಿದೆ, ಎಲ್ಲಾ ಧರ್ಮಗಳನ್ನು, ಜನಗಳನ್ನು ಪೋರೆದಿದೆ.
ಎಲ್ಲರೂ..
ಬುದ್ಧಿವಂತರು....ಎಲ್ಲರು ಇಂದು ತಮಗೆ ಬೇಕಾದುದನ್ನು ಪಡೆದುಕೊಳ್ಳಲು ಸಮರ್ಥರಿದ್ದಾರೆ.ಮಹಾಭಾರತದ ಹಲವು ಘಟನೆಗಳು ಇಂದಿಗೂ ಪ್ರಸ್ತುತವಾಗಿರುವುದು ವ್ಯಾಸ ಮಹರ್ಷಿಯ ಜ್ಞಾನ ದೀಪಕ್ಕೆ ಶರಣಾಗುವಂತೆ ಮಾಡುತ್ತದೆ. ನಿಮ್ಮ ಲೇಖನ ಇಷ್ಟ ಆಯ್ತು ಜೈ ಹೋ

ಮನಸು said...

ಎಲ್ಲಾ ಧರ್ಮದ ನಿಲುವು ಒಂದೇ ಆದರೆ ನಾವುಗಳು ಅರ್ಥೈಸಿಕೊಳ್ಳುವುದರ ಮೇಲೆ ಹೋಗುತ್ತೆ.. ಚೆಂದದ ಬರಹ ಎಂದಿನಂತೆ

ಮೌನರಾಗ said...

ಚಂದದ ಬರಹ..
ನಮ್ಮ ಪರಿಸ್ಥಿತಿಗೆ ತಕ್ಕಂತೆ ಧರ್ಮ ಗ್ರಂಥಗಳ ನೀತಿಗಳನ್ನು ಬಳಸಿಕ್ಕೊಳ್ಳುವುದು ವಿಪರ್ಯಾಸ.
ನಿಜ...ಯಾರೆಲ್ಲ ಅವತರಿಸಿದರೂ...ಈ ಜಗತ್ತು ಹೀಗೆಯೇ ಇರುತ್ತದೆ...!
--

ಸಂಧ್ಯಾ ಶ್ರೀಧರ್ ಭಟ್ said...

ಹಾಗಾಗಿ ಯಾರಿಗೂ ..
ಉಪದೇಶದ...
ಧರ್ಮಗ್ರಂಥಗಳ ಅಗತ್ಯವಿರುವದಿಲ್ಲ...

ಒಂದುವೇಳೆ ..
ಬೇಕಿದ್ದರೂ.. ಅದು ತಮ್ಮ ..
ನಡೆಯ...
ನಿರ್ಧಾರದ ಸಮರ್ಥನೆಗೆ ಮಾತ್ರ.....

ನಿಜ ಈ ಮಾತು ಪ್ರಕಾಶಣ್ಣ. ಅಜ್ಜಿ ಹೇಳುತ್ತಿದ್ದ "ಮೀನಾ ತಿಂದರೆ ಮಹಾ ಪಾಪ" ಎನ್ನುತ್ತಾ ಮೀನು ತಿನ್ನುತ್ತಿದ್ದ ಕೊಕ್ಕರೆಯ ಕಥೆ ನೆನಪಾಯಿತು.ಒಳ್ಳೆಯದೇ ಅಗಲಿ ಕೆಟ್ಟದ್ದೇ ಅಗಲಿ ತಾವು ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಎಲ್ಲರೂ ಉಪದೇಶದ, ಧರ್ಮಗ್ರಂಥಗಳ ಮೊರೆ ಹೋಗುತ್ತಾರೆ. ಮಹಾಭಾರತದ ಹಿನ್ನೆಲೆಯಲ್ಲಿ ವಾಸ್ತವವನ್ನು ತೆರೆದಿಟ್ಟಿದ್ದು ಸೊಗಸಾಗಿದೆ.
-

ದಿನಕರ ಮೊಗೇರ said...

ಹೌದು..ಎಲ್ಲರ ಧರ್ಮದ ಸಾರ ಒಂದೇ ಇರತ್ತೆ...ಆದರೆ ಅದನ್ನು ಓದಿ ಅರ್ಥೈಸಿಕೊಳ್ಳುವವರ ಮೇಲೆ ನಿರ್ಧಾರಿತವಾಗಿರತ್ತೆ..... ನಮಗನಿಸಿದ ಹಾಗೆ , ನಮಗೆ ಬೇಕಾಗಿದನ್ನಷ್ಟೇ ತೆಗೆದುಕೊಳ್ಳುತ್ತೇವೆ... ಕ್ರಷ್ಣ, ಧುರ್ಯೋಧನನಿಗೂ ಧರ್ಮರಾಯನಿಗೂ ಹೇಳಿದ್ದು ಒಂದೇ...ಆದರೆ ಅವರವವ ಭಾವಕ್ಕೆ ತೋಚಿದ ಹಾಗೆ ಮಾಡಿದರು....

ತುಂಬಾ ಚೆನ್ನಾಗಿ ವಿವರ ನೀಡಿದ್ದೀರಿ..

ಸೀತಾರಾಮ. ಕೆ. / SITARAM.K said...

ಸಾರ್ವತ್ರಿಕವಾಗಿ ಒಪ್ಪಿಕೊಳ್ಳಬಲ್ಲ ಸತ್ಯ ಮತ್ತು ಮಿಥ್ಯೆಗಳು ಈ ಜಗದಲ್ಲಿ ಇಲ್ಲ..ಒಂದು ಕಡೆಯ ಸತ್ಯ ಇನ್ನೊಂದೆಡೆ ಮಿಥ್ಯ. ಈ ಸತ್ಯ-ಮಿಥ್ಯೆಗಳ ಅರ್ಥ ಸಾಂಧರ್ಭಿಕ ವ್ಯಕ್ತಿಗತವಾಗಿದ್ದು ಸಮಯದೊಂದಿಗೆ, ಪರಿಸ್ಥಿತಿಯೊಂದಿಗೆ, ಪರಿಸರದೊಂಡಿದೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಸದಾ ಬದಲಾಗುವ ಅರ್ಥವ್ಯಾಪ್ತಿ ಹೊಂದಿವೆ.
ಇಂದು ನನಗೆ ಇಲ್ಲಿ ಸರಿ ಎನಿಸಿದ್ದು ನಾಳೆ ಇಲ್ಲಿಯೇ ತಪ್ಪೆನಿಸಬಹುದು, ಅಥವಾ ಈಗ ಇಲ್ಲಿ ಸರಿ ಎನಿಸಿದ್ದು ಇನ್ನೋದೆದೆ ತಪೆನಿಸಬಹುದು... ನನಗೆ ಇಲ್ಲಿ ಸರಿಎನಿಸಿದ್ದು ಇಗಲೇ ಇನ್ನೊಬ್ಬರಿಗೆ ತಪ್ಪೆನಿಸಬಹುದು...
ಈ ದಿಟ್ಟಿನಲ್ಲಿ ತಮ್ಮ ಲೇಖನ ತುಂಬಾ ಅದ್ಭುತವಾಗಿ ಹಿಡಿದಿಟ್ಟಿದೆ... ಜನ ತಮಗೆ ಬೇಕಾದ ಹಾಗೆ ತಮ್ಮ ಲಾಭಕ್ಕೆ ವಸ್ತುವನ್ನು ವಿಶ್ಲೇಷಣೆಯನ್ನು ವಿಶ್ಲೇಷಿಸುತ್ತಾ ಸಮರ್ಥನೆ ಹೊಂದುವ ಕ್ರಿಯೆಯ ಒಂದು ವಿಸ್ಮಯ ಅಲ್ಲವೇ!

Vinayak Hegde said...

FYI, "Dharma" word is used as a similar word for religion. Actually "Dharma" is not religion. It means the way of life. Instead of Dharma, we can use "Mata" word.
Coming to the article point of view, you are absolutely right. war between Sura and Asuras is always on. And that is rule of the world. (On a lighter note, once a purohit who come for puja at my home, quoted, "without 'gharshane' no birth no death!") And being good and bad always depends on how you portray it. Yakshagana is best example for that. Only here even Ravan can defeat Rama!.
Recently I was reading an article, which explained how America portrayed itself as a good nation and enemys are bad. A number of world war based movies released in between 1940-50, has been censored by US govt itself, also given variouse kind of supports for the makers of the movies where they portray America as a very good nation and rest as Aliens.

Ashok.V.Shetty, Kodlady said...

ಪ್ರಕಾಶಣ್ಣ,
ನಾಗರಹಾವನ್ನು ದೇವರು ಎಂದು ಕೈ ಮುಗಿಯುವರು ನಮ್ಮಲ್ಲಿದ್ದಾರೆ, ಹಾಗೆಯೇ ವಿಷ ಜಂತುವೆಂದು ಕಲ್ಲು ಹೊಡೆಯುವವರು ಸಹ....ಒಬ್ಬನಿಗೆ ಕಲ್ಲಿನ ಮೂರ್ತಿಯಲ್ಲಿಯೇ ದೇವರು ಕಂಡರೆ, ಮತ್ತೊಬ್ಬನಿಗೆ ಅದು ಬರೀ ಕಲ್ಲು ಬಂಡೆ.......ಅದಕ್ಕೆ ಅಲ್ಲವೇ ಹೇಳುವುದು ಅವರವರ ಭಾವಕ್ಕೆ, ಅವರವರ ಭಕುತಿಗೆ ಎಂದು.......ಸೀತಾರಾಂ ಸರ್ ಮೇಲೆ ಹೇಳಿದಂತೆ ಸಾರ್ವತ್ರಿಕವಾಗಿ ಒಪ್ಪಿಕೊಳ್ಳುವಂತ ವಿಷಯಗಳುಇಲ್ಲಿಲ್ಲ......ಒಬ್ಬರಿಗೆ ಸಿಹಿ ಎನಿಸುವುದು ಇನ್ನೊಬ್ಬನಿಗೆ ಕಹಿ ಎನಿಸ ಬಹುದು....ವ್ಯಕ್ತಿ, ಸ್ಥಳ ಸಂದರ್ಭಕ್ಕನುಸಾರವಾಗಿ ಎಲ್ಲಾ ವಿಷಯಗಳು, ಅಭಿಪ್ರಾಯಗಳು ಬದಲಾಗಬಹುದು. ಭಾರತದಲ್ಲಿ ರಾವಣನನ್ನು ರಾಕ್ಷಸ ನೆಂದು ಭಾವಿಸಿದರೆ ಶ್ರೀಲಂಕಾ ದವರಿಗೆ ಅವನೇ ದೇವರು.....

ಸುಂದರ ಬರಹ......ಜೈ ಹೊ......

Shruthi Rao said...

ಬರಹ ಬಹಳ ಚನ್ನಾಗಿದ್ದು ಪ್ರಕಾಶಣ್ಣ.... ಈ ಧರ್ಮ, ಆಧ್ಯಾತ್ಮಿಕತೆ, ದೇವರು ಎಲ್ಲ ಆಳಕ್ಕೆ ಇಳಿದಷ್ಟೂ ಗೊ೦ದಲಗಳು ಹೆಚ್ಚಾಗುತ್ತಾ ಹೋಗುತ್ತೆ. ಬಹುಶಃ ನಾವದನ್ನು ಅರ್ಥಮಾಡಿಕೊಳ್ಳುವಷ್ಟು ಸಾಮರ್ಥ್ಯವನ್ನು ಇನ್ನು ಹೊ೦ದಿಲ್ಲವೇನೋ.... ಎಲ್ಲಾ ಧರ್ಮಗಳು ಪ್ರೀತಿಸುವುದನ್ನು ಹೇಳಿಕೊಡುತ್ತದೆ. ದೇವರನ್ನು ಪ್ರೀತಿಸು ಅದರ ಬದಲು ಆತನಿ೦ತ ಸಹಸ್ರ ಪಾಲು ಹೆಚ್ಚಿನ ಪ್ರೀತಿಯನ್ನು ಪಡೆ ಅ೦ತ. ಇದೊ೦ದು ನಾವು ಸುಲಭವಾಗಿ ಮಾಡಬಹುದು.

bilimugilu said...

tumbaa aaLavaada maathugaLu...,athee sooktha.....
arthaisikollalu jeevanada anubhavagaLellavoo saaladu Prakash Ji....
Lekhanada Aashaya Bahala Bahala Ishtavaaytu....
ROopa