Sunday, July 4, 2010

ಕದ..

ಹಾಕದ..
ತೆಗಿಯದ..
ಕದ...
ಯಾಕದ?
ಯಾಕಂದ್ರ "ರಜಾ ಅದ."..

ಗೋಡೆ  ಕಟಗೊಂಡವರಿಗೆ... ಕದದ್ದೇ.. ಕಷ್ಟಅದ....

ತೆಗದ್ರ ...
ಗಾಳಿ ಧೂಳು ಒಳಗೆ ಬರ್ತದ..
ಹಾಕಿದ್ರೆ ...
ಉಸಿರು  ಕಟ್ಟತದ..

ಬಾಗಿಲು ಹಾಕಿ..
ಕಿಟಕಿ ತೆರೆದರ ಹೆಂಗಿರ್ತದ?

ಪರದೆ ಒಳಗೆ ಕುಳಿತವರು  ಸೊಳ್ಳೆ ಎಣಿಸಿದಂಗಿರ್ತದ...
ಇಲ್ಲಂದ್ರ...
ಮಗಳಿಗೆ  ಕಾಲೇಜ್ ಬಿಡಿಸಿ ಮೊಬೈಲ್ ಕೊಡಿಸಿದಂಗಿರ್ತದ....

ಗೋಡೆ ಕಟಗೊಂಡವರಿಗೆ... ಕದದ್ದೇ.. ಕಷ್ಟಅದ....


ಮಗನ ರೂಮು ಬಾಗಿಲು ಹಾಕ್ಯದ..
ಅಂವ ಇಂಟರ್ ನೆಟ್ ನಲ್ಲಿದಾನ ..
ಮಗಳೂ ...
ರೂಮಿನ ಬಾಗಿಲು ಮುಚ್ಯಾಳ...
ಅವಳ ಕೈಯಲ್ಲಿ  ಮೊಬೈಲ್  ಅದ..

ಗೋಡೆ ಕಟಗೊಂಡವರಿಗೆ... ಕದದ್ದೇ.. ಕಷ್ಟಅದ.....

ಯಜಮಾನ ಮನೆ ಬಾಗಿಲು ಬಡಿತಿದ್ದಾನ...
ಆದರ...
ಅಮ್ಮಾವ್ರಿಗೆ ಅದು ಕೇಳಂಗಿಲ್ಲ...
ಅವರ ಕೈಯಲ್ಲಿ  "ರಿಮೋಟ್ "  ಅದ....

ಗೋಡೆ  ಕಟಗೊಂಡವರಿಗೆ  ಕದದ್ದೇ... ಕಷ್ಟ ಅದ..


ತೆಗದ್ರ..
ಗಾಳಿ ಧೂಳು ಒಳಗೆ ಬರ್ತದ...
ಮುಚ್ಚಿದರ ..
ಉಸಿರುಗಟ್ಟತದ ....( ಗೆಳೆಯರೇ...
ಅಪಾರ ಪ್ರತಿಭೆಯಿದ್ದು...
"ಕದ" ಮುಚ್ಚಿದಂಗೆ ಇದ್ದು...
ಪ್ರತಿಭೆಗೊಂದು  ಸರಿಯಾದ ವೇದಿಕೆ ಸಿಗದ
ನನ್ನ ಜೀವದ ಗೆಳೆಯ... "ದಿವಾಕರನ"  ರಚನೆ ಇದು...)


ದಿವಾಕರನ  ರಚನೆ ...
 "ಹ್ಯಾಂಗದ?"   ?"

(ಮಿತ್ರರೇ..
ಇನ್ನೊಬ್ಬ ಬ್ಲಾಗ್ ಮಿತ್ರ  " ಅನಿಲ್ ಬೆಡಗೆ" ಪ್ರೀತಿಯಿಂದ...
ನನ್ನ ಬಗೆಗೆ ಕೆಲವು "ಜೋಕ್ " ಬರೆದಿದ್ದಾರೆ...
ನೋಡಿ ನಕ್ಕುಬಿಡಿ...
ವಿ.ಸೂ.  " ಗಂಭಿರವಾಗಿ "  ತೆಗೆದುಕೊಳ್ಳ ಬೇಡಿ... ಹ್ಹಾ..ಹ್ಹಾ... !

http://pennupaper.blogspot.com/2010/07/blog-post.html

36 comments:

ಪ್ರೀತಿಯಿ೦ದ ವೀಣಾ :) said...

diwakar rachanne super ada :)

ಸಿಮೆಂಟು ಮರಳಿನ ಮಧ್ಯೆ said...

ವೀಣಾರವರ...

ನನ್ನ ಧನ್ಯವಾದ ನಿಮಗ ಅದ..

ನಾನು ಪಿಯೂಸಿ "ಆರ್ಟ್ಸಿನಲ್ಲಿ (ಕನ್ನಡ ಮಾಧ್ಯಮದಲ್ಲಿ) ಫೇಲಾಗಿ..
ಇಂಗ್ಲಿಷಿಗೆ ಹದಿನಾರು ಮಾರ್ಕ್ಸ್ ತೆಗೆದುಕೊಂಡು...
ಮನೆಯಲ್ಲಿ ...
ಕೊಟ್ಟಿಗೆಯಲ್ಲಿ" ಹಸು, ಎಮ್ಮೆ ಮೈತೊಳೆಸುತ್ತಿದ್ದಾಗ..
ನನ್ನಲ್ಲಿ ನೀನು "ಮತ್ತೆ ಓದು ಎಂದು" ಹುರಿದುಂಬಿಸಿ..
ನನ್ನ ಬದುಕಿನ ತಿರುವಿಗೆ ಕಾರಣನಾದ ..
ನನ್ನ ಬದುಕಿನ "ದಿವಾಕರ" ಈತ...

ನಿಮ್ಮ ಪ್ರತಿಕ್ರಿಯೆ ಅವನಿಗೆ ತಿಳಿಸುವೆ ಧನ್ಯವಾದಗಳು "ವೀಣಾ"

RAGHU said...

great...........

ಆಕಾಶಬುಟ್ಟಿ said...

ತುಂಬಾ ಸೊಗಸಾಗಿದೆ ಪ್ರಕಾಶಣ್ಣ..

ಉತ್ತರ ಕರ್ನಾಟಕ ಭಾಷೆಯ ಅಂದವೇ ಬೇರೆ..
ತುಂಬಾ ಮಾರ್ಮಿಕವಾದ,,ಸತ್ಯವನ್ನು ಬಿಂಬಿಸುವ ಸಾಲುಗಳಿವು..
ನಿಮ್ಮ ಹೃದಯ ಗೆದ್ದ ಗೆಳೆಯ ದಿವಾಕರ್ ಅವರಿಗೆ

Hats off...

Dr.D.T.K.Murthy. said...

ಪ್ರಕಾಶಣ್ಣ(ನಿಮ್ಮ ಪುಸ್ತಕದ ಎಫೆಕ್ಟು!)ದಿವಾಕರ ಅವರ ಕದದ ಪದ ಮತ್ತೆ ಮತ್ತೆ ಓದುಹಂಗ ಅದ.ಅವರ ಪ್ರತಿಭೆ ಮುಚ್ಚಿದ ಕದ ತೆಗೆದು ಹೊರಬರಬೇಕದ.ಅವಕಾಶಗಳ ಕದ ಮತ್ತ ಮತ್ತ ತಟ್ಟ ಬೇಕದ.ಅದು ಸುಮ್ನೆ ಯಾಕದ?

ಸಿಮೆಂಟು ಮರಳಿನ ಮಧ್ಯೆ said...

ರಘು...

ಇದು
ನಮ್ಮ ಬದುಕು ಅದ..
ನಗ..ನಗದು(ಕ್ಯಾಷ್)
ಎಲ್ಲ ಇದ್ರನೂ....
"ನಗದು" ನಗು..
ಯಾಕೆ ಇಲ್ಲದ ?

ನಿಮಗೆ ನಮ್ಮ ಧನ್ಯವಾದ ಅದ..

ದಿನಕರ ಮೊಗೇರ.. said...

divaakar andre, divaakar hegadeyavaraa..............?

sundara rachane.......

dhanyavaada tilisi....

ಸೀತಾರಾಮ. ಕೆ. / SITARAM.K said...

ಅದ್ಭುತವಾದ ವಿಷಯ!
ಗೋಡೆ ಕಟ್ಟಿಕೊಂಡು ಇರುವವರ ಕದ/ಕಿಟಕಿ ಹಾಕಬೇಕೆ ತೆಗೆಯಬೇಕೆ ಎಂಬ ದ್ವ೦ದ್ವದಲ್ಲಿ ಸಧ್ಯದ ಸಾಮಾಜಿಕ ಪರಿಸ್ಥಿತಿಯಲ್ಲಿನ ಮುಖ್ಯ ಪ್ರಶ್ನೆಯನ್ನೇ ಎತ್ತಿದ್ದಾರೆ!
ಚೆ೦ದದ ಬರಹ. ಅವರು ಹೀಗೆ ಬರೆಯುತ್ತಿರಲಿ. ತಮ್ಮ ಅವರ ಭಾಂಧವ್ಯ ಸದಾ ಹಸಿರಾಗಿರಲಿ.

ಮನಸು said...

tumba chennagi barediddaare.... nammellara paravaagi avarige abhinandanegaLannu tiLisi...haage mattastu bareyalu heLi...

ಸವಿಗನಸು said...

ಪ್ರಕಾಶಣ್ಣ
ಸಾಲುಗಳು ಸೂಪರ್ ಅದ....
ದಿವಾಕರ್ ರವರಿಗೆ ಅಭಿನಂದನೆಗಳು.....

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

:-) :-) :-)

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ಇದು ಭೆಷಾಗದ ''

ಸುಮ said...

kavana cennagide prakashanna.

sunaath said...

ದಿವಾಕರರ ಕದ ತೆಗೆದು, ನಮಗೆಲ್ಲ ಅವರ ಕವನದ ಚೆಲುವನ್ನು ತೋರಿಸಿದಿರಿ. ನಿಮಗೆ ಧನ್ಯವಾದಗಳು. ದಿವಾಕರರಿಗೆ ಅಭಿನಂದನೆಗಳು.

ಕ್ಷಣ... ಚಿಂತನೆ... bhchandru said...

ಪ್ರಕಾಶಣ್ಣ,

'ಕದ'ದ ಬಗೆಗಿನ 'ಪದ'ಗಳೊಂದಿಗಿನ ಪದ್ಯ ನಮ್ಮ ಮನದ 'ಕದ' ತಟ್ಟಿದೆ.

ಶ್ರೀ ದಿವಾಕರ ಅವರಿಗೆ ಧನ್ಯವಾದಗಳು.

ಸ್ನೇಹದಿಂದ,

Manasa said...

ದಾದಾ,
ಮಸ್ತ ಅದ..
ಮತ್ತ ಮತ್ತ ಓದುಹಂಗದ
ಮನಸಿನ ಕದ ತೆಗಿಯುವಹಂಗದ :)

ಮನದಾಳದಿಂದ............ said...

ಪ್ರಕಾಶಣ್ಣ...........
ಗೆಳೆಯನ ಪ್ರತಿಭೆಗೆ ನೀವು ಕದ ತೆಗೆದಿದ್ದು ಸಂತೋಷ ಆಗ್ಯಾದ.
ಗೋಡೆ ಕಟ್ಟಿಕೊಂಡವರ ಕಷ್ಟ ಚಲೋ ಅದ
ನಿಮ್ಮ ಗೆಳೆಯನಿಗೆ, ನಿಮಗೆ ಧನ್ಯವಾದ.........

Subrahmanya said...

ಹಹ...ಪರಿಚಯದ ಧಾಟಿ ಮತ್ತು ಪರಿಚಯ ಎರಡೂ ಮುದನೀಡಿತು. All the best.

"NRK" said...

ಭಾಳ ಚೊಲೋ ಅದ
ಯಾರು ಕೆಮ್ಮಂಗಿಲ್ಲ ಅನ್ನೋಹಂಗ ಅದ
ಓದಿ ಖುಷಿಯಾತು

ಸಿಮೆಂಟು ಮರಳಿನ ಮಧ್ಯೆ said...

ಆಕಾಶ ಬುಟ್ಟಿ...

ನಾನು ಪಿಯೂಸಿಯಲ್ಲಿ ಸೋತು..
ಅವಮಾನ, ಅಧೈರ್ಯದಿಂದ ಕುಗ್ಗಿ ಹೋಗಿದ್ದೆ.
ಆಗ ದಿವಾಕರ ಬಂದು ನನ್ನ ಹುರಿದುಂಬಿಸಿ..
ನನ್ನ ರೂಮ್ ಮೇಟ್ ಆಗಿ.. ಸದಾ ನನ್ನ ಜೊತೆಯಲಿದ್ದು..
ಕೊನೆಗೆ ನಾನು ನನ್ನ ಫೈನಲ್ ಪರೀಕ್ಷೆಯಲ್ಲಿ ೭೮% ಮಾಡಿದಾಗ ನನಗಿಂತ ಖುಷಿ ಪಟ್ಟಿದ್ದ..

ಆತ ಆಗ ಕಾನೂನು ವಿದ್ಯಾರ್ಥಿ..

ಅವನ ಗೆಳೆತನಕ್ಕೆ ನನ್ನ ಬಳಿ ಮಾತುಗಳೇ ಇಲ್ಲ..

ಧನ್ಯವಾದಗಳು ಚೇತನಾ...

ಸಾಗರಿ.. said...

ಕದದ ಹಿಂದಿನ ಕತಿ ಭಾಳ ಛಲೋ ಅದ, ಕದದ ಹಿಂದಿರೋರೂ ಭಾಳ್ ಚಾಲೂ ಅದಾರ್ರ್ ಬಿಡ್ರಿ. ಭಾಳ ಛಂದ ಹೇಳ್ಯಾರ್ರಿ ನಿಮ್ ಫ್ರೆಂಡು.

Raghu said...

ಕದ ಚೆನ್ನಾಗಿದೆ ಸರ್.. ಪೆನ್ನು ಪೆಪ್ಪರ್ ಓದಿದ್ದೀನಿ ಸರ್..
ನಿಮ್ಮವ,
ರಾಘು.

shridhar said...

ಈ ಕವನ ಚೆನ್ನಾಗದ ....!!!!
ದಿವಾಕರ ಅವರು ಚೆನ್ನಾಗಿ ಬರೆದಿದ್ದಾರೆ ,,,

ನನ್ನ ಬ್ಲೊಗ್ ಗೆ ಒಮ್ಮೆ ಭೇಟಿ ಕೊಡಿ ...

ಜಲನಯನ said...

ಆಕಿದ್ರೆ ಆಕು
ತಗ್ಯಂಗೆ ಆಕು
ಬೇಕೂಪಾ
ಆಕಾಕೆ ಬರಲ್ಲಾಂದ್ರೆ
ಯಾಕ್ಲಾ ಆಕೀಯಾ?
ಮಂಕಪ್ಪಾ...?
ಕದ ಹಾಕಿ ತೆಗೆಯೋಕೆ ಬರದ ತನ್ನ ದೋಸ್ತ್ ಬಗ್ಗೆ
ನನ್ನ ಮಂಡ್ಯದ್ ದೋಸ್ತ್ ವರಸೇ..ಇದು
ಭೋ ಪಸಂದಾಗೈತಪ್ಪಾ..ಅಲ್ಲಾ ಈ ಪಾಟಿ ಹೊಸಾ ವರಸೆ ಎಲ್ಲಿತ್ತು?

ವನಿತಾ / Vanitha said...

ದಿವಾಕರ್ ಹಾಗು ಅನಿಲ್ ಅವರ ರಚನೆ ಸಕತ್ತಾಗಿದೆ:))

ಸೀತಾರಾಮ. ಕೆ. / SITARAM.K said...

ಚೆಂದದ ಕವನ. ದಿವಾಕರರಿಗೆ ನಮ್ಮ ಅಭಿನಂದನೆಗಳು. ಅವರ ಕವನಗಳು ಹೀಗೆ ಬರುತ್ತಿರಲಿ. ಅವರಲ್ಲಿನ ತಮ್ಮ ಅಭಿಮಾನಕ್ಕು ನಮ್ಮ ವಂದನೆಗಳು.
ತಮ್ಮನ್ನು ಬದುಕಿನ ಮಹತ್ತರ ಘಟ್ಟ ಮುಟ್ಟಲು ಕಾರಣರಾದ ಅವರಿಗೆ ನಮ್ಮ ಅಭಿನಂದನೆಗಳು.

ಸಿಮೆಂಟು ಮರಳಿನ ಮಧ್ಯೆ said...

ಡಾ.ಕೃಷ್ಣಮೂರ್ತಿಯವರೆ..

"ಹೆಸರೇ.. ಬೇಡ" ಪುಸ್ತಕ ಇಷ್ಟವಾಗಿ ನಿಮ್ಮ ಸಹದ್ಯೋಗಿಗಳಿಗೆ ನೀಡಿದ್ದು..
ಫೋನ್ ಮಾಡಿ..ಪ್ರೋತ್ಸಾಹದ ಮಾತುಗಳಾಡಿದ್ದು ...
ತುಂಬಾ ಸಂತೋಷವಾಯಿತು..

ನಿಮ್ಮ ಬ್ಲಾಗ್ "ಕೊಳಲು" ಕೂಡ ತುಂಬಾ ಚೆನ್ನಾಗಿ ಬರುತ್ತಿದೆ..
ನಮಗೆಲ್ಲ ವೈವಿಧ್ಯತೆಯ ಲೇಖನಗಳನ್ನು, ಕವಿತೆಗಲನ್ನು ಉಣ ಬಡಿಸುತ್ತಿದ್ದೀರಿ..
ನಿಮಗೂ ಸಹ ನಮ್ಮೆಲ್ಲರ ಅಭಿನಂದನೆಗಳು..

"ದಿವಾಕರಗ..
ಇನ್ನೂ ಕದ ಮುಚ್ಯದ..
ಯಾಕೆ ಹೀಗಾಗದ..
ಹಾಕದ..
ತೆಗಿಯದ..?

ನಿಮ್ಮ ಪ್ರೋತ್ಸಾಹಕ್ಕ ನಮ್ಮ ಧನ್ಯವಾದ ಅದ ಡಾಕ್ಟ್ರ.......

ಸಿಮೆಂಟು ಮರಳಿನ ಮಧ್ಯೆ said...

ದಿನಕರ...

ದಾಂಪತ್ಯವೂ...
ಒಂದು.. ಕಟಗೊಂಡ ಗೋಡೆ..
ಇಟಗೊಂಡ ಕದ..

ಯಾವಾಗ ತೆಗಿಯ
ಬೇಕಿದ..
ಹಾಕ ಬೇಕಿದ..
ಆನ್ನೋದರ ಮೇಲಿದ..
ಈ ಕದ..

ಹೆಂಡತಿಗ
ಬೆಳಕು ಬೇಕದ..
ಗಂಡಗ ಬ್ಯಾಡಾಗದ..

ಕದ ಹಾಕಿ
ಹೊಂದಾಣಿಕೆಯಾದರ..
ಎಲ್ಲವೂ ಚಂದ ಆಗ್ತದ..

ಯಾಕಂದ್ರ..ಇದು
ಅವರೇ.. ಇಟಗೊಂಡ ಕದ..
ಕಟಗೊಂಡ ಗೋಡೆ..

ಧನ್ಯವಾದ ದಿನಕರ..

Dr.D.T.K.Murthy. said...

ಕದದ ಪದ ಸೂಪರ್ ಅದ.ಕೆಳುತಾನ ಇರಬೇಕು ಅನಿಸ್ತದ.ಧನ್ಯವಾದ!

ಶಿವಪ್ರಕಾಶ್ said...

baari adaa... khoobusat :)

ವಸಂತ್ said...

ಬಾಷೆ ಅದ್ಭುತವಾಗಿದೆ ಧನ್ಯವಾದಗಳು.

ವಸಂತ್

shree said...

its nice... :)

ವಿ.ಆರ್.ಭಟ್ said...

ಕವನ ಲೇಖನ ಹಾಕದ ದಿವಾಕರನ ಕನಸು ನನಸಾಗ್ತದ, ಕವನ ಕಟ್ಟುಮಸ್ತಾಗದ, ಹೊಸಕದಕ್ಕ ಹಳೆಪದ ಹೊಸಪದ ಎಲ್ಲ ಸೇರದ, ಎಲ್ಲರ ಮನಸ್ಸಿಗೂ ಲಗ್ಗೆ ಹಾಕದ! ಧನ್ಯವಾದಗಳು

umesh desai said...

ತೆಗೀರಿ ಕದ...
ಇರಲಿ ಅದಕೂ ಒಂದ
ಹದ...
ಹೆಗಡೇಕಜಿ ನಿಮ್ಮ ದಿವಾಕರ್ ಬರೆದ ಕದ ಕದನ ಕುತೂಹಲಕಾರಿ....

ಗುರುಪ್ರಸಾದ್, ಶೃಂಗೇರಿ. said...

ಕದ...
ತುಂಬಾ ಚೆಂದಾಗದ... :)

ರಾಘವೇಂದ್ರ ಹೆಗಡೆ said...

ದಿವಾಕರ್ ಅವ್ರ ರಚನೆ ಚೆಂದ್ ಅದ ರೀ ಸರ್..