Saturday, June 26, 2010

" ಮೇ ಫ್ಲವರ್ ಮಿಡಿಯಾ " ಆಫಿಸಿನಲ್ಲಿ ......

ಅಂದು  ಮೇ ಫ್ಲವರ್ ಮಿಡಿಯಾ   ಆಫಿಸಿನಲ್ಲಿ ನಾನು ಹೇಳಿದ್ದು ಇಷ್ಟು.

"ಎಷ್ಟೊಂದು ಬ್ಲಾಗರ್ಸ್  ಇದ್ದಾರೆ ನಮ್ಮ ಕನ್ನಡದಲ್ಲಿ...!
ಕೆಂಡ ಸಂಪಿಗೆ, ಸಂಪದ, ದಟ್ಸ್ ಕನ್ನಡ,
ಬನವಾಸಿ ಗೆಳೆಯರ ಬಳಗ, ....ಸಾಂಗತ್ಯ...
ಅವಧಿ,....ಇತ್ಯಾದಿ....
 ಬಹಳ ಬಹಳ ಇವೆ...
ಇದನ್ನು ಬಿಟ್ಟು ವಯಕ್ತಿಕವಾಗಿ  ಸಾವಿರಾರು ಬ್ಲಾಗುಗಳಿವೆ...
ಇವರೆಲ್ಲರನ್ನು ಒಟ್ಟು ಸೇರಿಸಿ ಒಂದು  ಸಮ್ಮೇಳನ ಮಾಡಬೇಕು...
ಕೆಲವೇ.. ಗೆಳೆಯರ  ಕೂಟ ಆಗಬಾರದು....
ಇದನ್ನೆಲ್ಲಾ ಬಹಳ ವ್ಯವಸ್ಥಿತವಾಗಿ ಮಾಡ ಬೇಕು "

ಇದಕ್ಕೆ ಸಹಮತವಾಗಿ ಗೆಳೆಯ ಶಿವು, ಮತ್ತಿತರರು  ಮಾತನಾಡಿದರು..

ಎಲ್ಲರ  ಅಭಿಪ್ರಾಯವು ಒಂದೆ ಆಗಿತ್ತು  !!

"ಈ ಸಮ್ಮೇಳನ  ವ್ಯವಸ್ಥಿತವಾಗಿ, ಯಶಸ್ವಿಯಾಗಿ..
ಎಲ್ಲರೂ  ಸೇರಿ  ಸಂಭ್ರಮದ  ಸಂತೋಷದ ಹಬ್ಬದಂತೆ  ಮಾಡಬೇಕು..."

ಇದಕ್ಕೆ  ಜಿ. ಎನ್. ಮೋಹನರು ತಮ್ಮ ಅಭಿಪ್ರಾಯವನ್ನು ಸೇರಿಸಿದರು...

" ಈಗ ಇರುವ  ಸಮಯದಲ್ಲಿ ಇದನ್ನು ವ್ಯವಸ್ಥಿತವಾಗಿ ಮಾಡಲು ಕಷ್ಟ..
(ಅಗಸ್ಟ್ ೨೨)

ಅಂದು  ಶಿವು ಮತ್ತು ಆಜಾದರ  ಕೃತಿಗಳ ಬಿಡುಗಡೆ ಸಮಾರಂಭವಾಗಲಿ..
ಅದು ನಮ್ಮ ಕನ್ನಡ  ಬ್ಲಾಗರ್ಸ್ ಕೃತಿಗಳ  ಬಿಡುಗಡೆ  ಸಮಾರಂಭ..

ಅಂದು  ಎಲ್ಲರೂ ಸೇರೋಣ.. 
ಬಿಡುಗಡೆ ಸಮಾರಂಭಾವಾದಮೇಲೆ ಒಂದು ವಿಚಾರ ಸಂಕಿರಣ ಇಟ್ಟುಕೊಳ್ಳೋಣ..

ಆಗ ಒಂದು ಕಮಿಟಿಯನ್ನು ರಚಿಸಿ...
ಮುಂದಿನ ಕಾರ್ಯಕ್ರಮದ ಬಗೆಗೆ ಸಮಗ್ರವಾಗಿ ಚರ್ಚಿಸಿ ನಿರ್ಧಾರ ತೆಗೆದು ಕೊಳ್ಳೋಣ.

ಈ ಹಿಂದೆ ಬ್ಲಾಗರ್ಸ್  ಕೂಟ ನಡೆಸಿದ "ಪ್ರಣತಿ" ಸಂಸ್ಥೆಯ ಅನುಭವ..ಮಾರ್ಗದರ್ಶನ  ಎಲ್ಲವನ್ನೂ ಪಡೆಯೋಣ.."

ತಮ್ಮ ಪೂರ್ಣ ಸಹಕಾರದ, ಮಾರ್ಗದರ್ಶನದ  ಭರವಸೆಯನ್ನು ಕೊಟ್ಟರು...
ಇದಕ್ಕೆ ಎಲ್ಲರ  ಸಹಮತ ವ್ಯಕ್ತವಾಯಿತು....

 ನಾವೆಲ್ಲರೂ ಅಗಸ್ಟ ೨೨ ಕ್ಕೆ  ಕನ್ನಡ ಭವನದಲ್ಲಿ ಸೇರೋಣ..
ಗೆಳೆಯರಾದ  ಶಿವು ಮತ್ತು  ಆಜಾದರ  ಕೃತಿಗಳ ಬಿಡುಗಡೆಯ ಸಂಭ್ರಮದಲ್ಲಿ ಪಾಲ್ಗೊಂಡು  ಮುಂದಿನ  ಕಾರ್ಯಗಳ ಬಗೆಗೆ ಚರ್ಚಿಸೋಣ..

ಎಲ್ಲವೂ ಮುಗಿದ ಮೇಲೆ  ಗೆಳೆಯ ಶಿವಪ್ರಕಾಶ್ ನನ್ನನ್ನು ಕೇಳಿದರು..

"ಪ್ರಕಾಶಣ್ಣ ..
ನಿಮ್ಮ ಎರಡನೇ ಕೃತಿ ಯಾವಾಗ ಬರುತ್ತದೆ...?
ಪ್ರಕಾಶಕರು ಯಾರು..?"

"ಪ್ರಕಾಶಕರು ಯಾರೆಂದು ಇನ್ನೂ  ನಿರ್ಣಯವಾಗಿಲ್ಲ...
ಮುಖ ಪುಟ " ಅಪಾರ" ಮಾಡುತ್ತಿದ್ದಾರೆ...
ಈ ಬಾರಿ  ನಾಡಿನ  ಹೆಸರಾಂತ ವ್ಯಂಗ ಚಿತ್ರಕಾರರು   ಚಿತ್ರ ಬಿಡಿಸಿಕೊಡುತ್ತಾರೆ..."

"ಈ ಪುಸ್ತಕದಲ್ಲಿ  ಏನಿರುತ್ತದೆ...?"

"ಮೊದಲಿನ ಹಾಗೆ ಬ್ಲಾಗಿನಲ್ಲಿ ಪ್ರಕಟವಾದ ಲೇಖನಗಳು.."

" ಪ್ರಕಾಶಣ್ಣ..
 ಒಂದು ಸಲಹೆ...
ಇದರಲ್ಲಿ  ನಾವು ಓದಿರದ  ಕೆಲವು  ಲೇಖನ  ಸೇರಿಸಿ...
ನೀವು ಬೀಡಿ ಸೇದಿದ್ದು...
ಕುಷ್ಟನ,...
 ನಾಗುವಿನ , ರಾಜಿಯರ ಲವ್ವು.... ಇತ್ಯಾದಿ...."

ನನಗೂ ಹೌದೆನಿಸಿತು...

"ಪ್ರಕಾಶಣ್ಣ...
ಈ ಪುಸ್ತಕದ ಹೆಸರೇನು.....?..?  "

" ಇದೇ... ಇದರ ಹೆಸರು...!"

" ಏನು  ??  !!.. "

" ಎರಡನೇ.. ಪುಸ್ತಕದ ಹೆಸರು...

" ಇದೇ... ಇದರ ಹೆಸರು....!!!  "


(ಅಗಸ್ಟ್ ೨೨ಕ್ಕೆ .... ಕನ್ನಡ ಭವನದಲ್ಲಿ  ಗೆಳೆಯರಾದ "ಆಜಾದ್"ರ ಕವನ ಸಂಕಲನ 
"ಜಲನಯನ"
ಹಾಗೂ ...
ನನ್ನನ್ನು ಬ್ಲಾಗ್ ಲೋಕಕ್ಕೆ ಕರೆ ತಂದ ಮತ್ತೊಬ್ಬ ಗೆಳೆಯ 
ಕೆ. ಶಿವುರವರ ....
ಪುಸ್ತಕ ಬಿಡುಗಡೆ ಸಮಾರಂಭಕ್ಕೆ  ನಾವೆಲ್ಲಾ ಸೇರೋಣ...
ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ  ಬನ್ನಿ...) 

42 comments:

ಚುಕ್ಕಿಚಿತ್ತಾರ said...

all d best...ide idara hesarige....:)

ಸಿಮೆಂಟು ಮರಳಿನ ಮಧ್ಯೆ said...

ಥ್ಯಾಂಕ್ಸು "ಚುಕ್ಕಿ ಚಿತ್ತಾರಾ"

ಸಧ್ಯದಲ್ಲೆ ಪ್ರಕಟಣೆಯ ದಿನಾಂಕ, ಸ್ಥಲ ಹೇಳುವೆ...

ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ...

ಧನ್ಯವಾದಗಳು " ಚುಕ್ಕಿ ಚಿತ್ತಾರ"

ಶಿವಪ್ರಕಾಶ್ said...

Thank you prakashanna :)
nimma mundina pustakakkagi kaayuttiddeve :)

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಶಿವು...

ನಿಮ್ಮ ಸ್ನೇಹ, ಪ್ರೀತಿ, ಪ್ರೋತ್ಸಾಹ ಹೀಗೆಯೇ ಇರಲಿ...

ನಾವೆಲ್ಲರೂ ಅಗಸ್ಟ್ ೨೨ ಕ್ಕೆ "ಕನ್ನಡ ಭವನದಲ್ಲಿ ಸೇರೋಣ..."

ಗೆಳೆಯರ ಪುಸ್ತಕ ಬಿಡುಗಡೆಯ ಸಂಭ್ರಮ...!
ಸಂಗಡ "ಬ್ಲಾಗಿಗರ ಕೂಟದ ಬಗೆಗೆ ಚರ್ಚಿಸೋಣ" ..

ನಿಮ್ಮ ಪ್ರೋತ್ಸಾಹಕ್ಕೆ ಮತ್ತೊಮ್ಮೆ ವಂದನೆಗಳು...

HEBBAR'S PICTURES said...

ಮರೆಯಲಾಗದ "ಸಂಭ್ರಮ"ವಾಗಲಿ. - ಮ ಶ್ರೀ ಹೆಬ್ಬಾರ

ಸಿಮೆಂಟು ಮರಳಿನ ಮಧ್ಯೆ said...

ಹೆಬ್ಬಾರ್ ಸರ್...

ನನ್ನ ಮೊದಲ ಪುಸ್ತಕದ ಬಿಡುಗಡೆಗೆ ನೀವು ಬಂದು ಆಶೀರ್ವಾದ ಮಾಡಿದ್ದು ಇನ್ನೂ ನೆನಪುಗಳು ಹಸಿರಾಗಿದೆ...

ನಿಮ್ಮ ಆಶಿರ್ವಾದ ಯಾವಗಲೂ ಬೇಕು...

ನಿಮ್ಮ ಪ್ರೋತ್ಸಾಹಕ್ಕೆ ಯಾವಾಗಲೂ ಕೃತಜ್ಞತೆಗಳು...

Ranjita said...

All the best ಪ್ರಕಾಶಣ್ಣಾ ಇದೆ ಇದರ ಹೆಸರಿಗೆ ! :)

ಗೌತಮ್ ಹೆಗಡೆ said...

ಗುಡ್ ಸುದ್ದಿ :)ಒಂಟೆ ಹಾಲು ಕುಡದಷ್ಟೇ ಖುಷಿ ಆತು ;) ;) ಎಲ್ಲರಿಗೂ ಒಂಟೆ ಹಾಲು ಸಿಕ್ತು ಅನ್ಕತಿ ಈ ಬುಕ್ ಲಿ:):)

"NRK" said...

ALL THE BEST.

ಸಿಮೆಂಟು ಮರಳಿನ ಮಧ್ಯೆ said...

ರಂಜಿತಾ...

ಈ ಬ್ಲಾಗ್ ಲೋಕಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು...
ನೀವೆಲ್ಲ ಪರಿಚಯವಾಗಿದ್ದು...
ಪ್ರೋತ್ಸಾಹ, ಸ್ನೇಹ ಸಿಕ್ಕಿದ್ದು ಈ ಬ್ಲಾಗಿನಿಂದಾಗಿ...

ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ...

ಪ್ರೀತಿಯಿಂದ..
ಪ್ರಕಾಶಣ್ಣ...

ಸಿಮೆಂಟು ಮರಳಿನ ಮಧ್ಯೆ said...

ಗೌತಮ್....

ಹೌದಲ್ವಾ !!
ನಾನು ಕತಾರ್ ದೇಶದಲ್ಲಿದ್ದಾಗ ಒಂಟೆ ಹಾಲು ಕುಡಿದ ಘಟನೆ !!
ಖಂಡಿತ ಹಾಕುವೆ...!

ಹ್ಹಾಅ.. !! ಹಾ.. !!

ನನ್ನ ಕತಾರ್ ದೇಶದ ಅನುಭವ ಪ್ರತ್ಯೇಕವಾಗಿ ಬರೆಯಬೇಕು ಅಂದುಕೊಂಡಿದ್ದೆ...

ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..

ದಿವ್ಯಾ said...

All the best Prakahanna...:-)

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಅನಿಲ್.. (NRK)

ಥ್ಯಾಂಕ್ಯೂ.... ವೆರಿ ಮಚ್ !

ಪ್ರೋತ್ಸಾಹಕ್ಕೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ದಿವ್ಯಾ....

ಅಗಸ್ಟ್ ಇಪ್ಪತ್ತೆರಡರಂದು ಒಂದು ಕಮೀಟಿ ಮಾಡಿಕೊಂಡು..
ಮುಂದಿನ ಕಾರ್ಯಕ್ರಮಗಳ ಬಗೆಗೆ ಚರ್ಚಿಸೋಣ"

ದಯವಿಟ್ಟು ಎಲ್ಲರೂ ಬನ್ನಿ..

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Dileep Hegde said...

All the best Prakashanna

aak said...

ಎನ್ ಲೈನ್ ಮೂಲಕವೇ ಭಾಗವಹಿಸುವುದು ನನಗಿಷ್ಟ ..ಅವಕಾಶ ಕಲ್ಪಿಸಿ

Ramya Hegde said...

Tumbu manada abhinandanegalu Prakashanna..,nimma mattashtu pustakagalu bidugade aagali endu haaraisutteve.

Dr.D.T.K.Murthy. said...

ಪ್ರಕಾಶ್ ;ನಿಮ್ಮ 'ಹೆಸರೇ ಬೇಡ 'ಕೊಂಡು ಓದಿ ಸಂತೋಷಪಟ್ಟಿದ್ದೇನೆ.ಈಗ 'ಇದೇ,ಇದರ ಹೆಸರು'ಎದುರು ನೋಡುತ್ತಿದ್ದೇನೆ.All the best.

ಸವಿಗನಸು said...

ಹೆಸರೇ ಬೇಡ...ಆದ ಮೇಲೆ...ಈಗ ಇದೇ .....ಇದರ ಹೆಸರು...
ಬಹಳ ಸಂತಸದ ವಿಷಯ...
ಶುಭವಾಗಲಿ...
ಜೈ ಹೋ....

ಮನಸು said...

shubhavaagali......

Raghu said...

ಆಜಾದ್ ಸರ್ಗೆ ಹೇಳಿದ್ದೇನೆ ಏನೇ ಸಹಾಯ/ಕೆಲಸ ಇದ್ದಲ್ಲಿ ನಾನು ಸಾದಾ ಸಿದ್ದ.
ಎಲ್ಲಾ ಒಳ್ಳೇದ್ ಅಗಲಿ.
ನಿಮ್ಮವ,
ರಾಘು.

* ನಮನ * said...

ಸಮಯ ಸಿಕ್ಕರೆ ನನಗೂ ಬರಬೇಕು ಅನ್ನುವ ಮನಸಿದೆ..........ನೋಡೋಣ!!!!!!

ಸಿಮೆಂಟು ಮರಳಿನ ಮಧ್ಯೆ said...

ದಿಲಿಪ್...

ತುಂಬಾ ತುಂಬಾ ಧನ್ಯವಾದಗಳು...
ಕೆಲಸದ ಒತ್ತಡ ಇರೋದರಿಂದ ಕಾರ್ಯಕ್ರಮದ, ಪುಸ್ತಕದ ಎಲ್ಲ ಜವಾಬ್ದಾರಿ "ಪ್ರಕಾಶಕರಿಗೆ" ವಹಿಸಬೇಕೆಂದಿರುವೆ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಅಶೋಕ್ ಸರ್...

ಇದರ ಬಗೆಗೆ ನಿಮ್ಮ ಬಳಿ ಮಾತನಾಡಬೇಕು...
ಖಂಡಿತ ಪ್ರಯತ್ನಿಸುವೆ...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ದಿನಕರ ಮೊಗೇರ.. said...

ಪ್ರಕಾಶಣ್ಣ,
ನಿಮ್ಮ ಪುಸ್ತಕವೂ ಅಂದೇ ಬಿಡುಗಡೆ ಆಗತ್ತಾ....? ಕೆಲವು ಹೊಸ ಅಧ್ಯಾಯ ಇರಲಿ, ಯಾಕಂದ್ರೆ,....... ಪುಸ್ತಕ ಕೊಂಡವರಿಗೆ ಹೊಸ ಹೊಸ ನಗು ಟಾನಿಕ್ ಇರಲಿ....... ನಿಮ್ಮ ಕೆಲವು ಅದ್ಭುತ ಕತೆಗಳನ್ನೂ ಸೇರಿಸಿ........ ಒಳ್ಳೆಯದಾಗತ್ತೆ ಬಿಡಿ ಪ್ರಕಾಶಣ್ಣ......

Subrahmanya said...

ನಿಮ್ಮ ಇದೇ ಇದರ ಹೆಸರಿಗೆ ನನ್ನ ಶುಭಾಷಯಗಳು.

Anonymous said...

ಸಮ್ಮೇಳನ ಮಾಡಬೇಕು ... fantastic idea!!

ಸುಶ್ರುತ ದೊಡ್ಡೇರಿ said...

ನಂದೂ ಒಂದು ಜೈ! :-)

ಬ್ಲಾಗರ್ಸ್ ಮೀಟಿಗೆ ’ಪ್ರಣತಿ’ಯ ಸಂಪೂರ್ಣ ಸಹಕಾರ ಇರುತ್ತೆ. ಅವತ್ತು ಸಿಕ್ಕಾಗ ಮಾತಾಡೋಣ.

ಸೀತಾರಾಮ. ಕೆ. / SITARAM.K said...

'ಇದೇ ಇದರ ಹೆಸರು" ಬೇಗ ಹೊರ ಬರಲಿ ಮತ್ತು ಓದುಗರನ್ನು ರಂಜಿಸಲಿ ಎಂದು ಹಾರೈಸುವೆ.
ಶಿವೂ ಮತ್ತು ಅಜಾದರ ಪುಸ್ತಕದ ಬಿಡುಗಡೆ ಸಮಾರ೦ಭದ೦ದು ಸೆರೋಣ.

AntharangadaMaathugalu said...

ಪ್ರಕಾಶ್ ಸಾರ್
ನಿಮ್ಮ ಮುಂದಿನ ಪುಸ್ತಕ ಬಿಡುಗಡೆಗೆ ಹೃತ್ಪೂರ್ವಕ ಅಭಿನಂದನೆಗಳು....

ಶ್ಯಾಮಲ

Ramesha said...

"ಇದೇ ಇದರ ಹೆಸರು"... ಬಹಳ ಚೆನ್ನಾಗಿದೆ ಹೆಸರು...ನಿಮಗೆ ಹಾಗು ನಿಮ್ಮ ಈ ಹೊಸ ಪುಸ್ತಕಕ್ಕೆ ನನ್ನ ಶುಭಾಕಾಂಕ್ಶೆಗಳು... ಒಳ್ಳೆಯದಾಗಲಿ... ಹೀಗೆ ಬರಿತಾ ಇರಿ...

ಸಾಗರದಾಚೆಯ ಇಂಚರ said...

Good luck Prakaashanna

ಸಿಮೆಂಟು ಮರಳಿನ ಮಧ್ಯೆ said...

ರಮ್ಯಾ....
ನಿಮ್ಮ ಪ್ರೋತ್ಸಾಹದ ಮಾತುಗಳೇ.. ನನಗೆ ಇನ್ನಷ್ಟು ಬರೆಯಲು ಸ್ಪೂರ್ತಿ...
ಪುಸ್ತಕ ಆಗುವದು/ ಬಿಡುವದು ನನ್ನ ಕೈಯಲ್ಲಿ ಇಲ್ಲ...

ಪ್ರಕಾಶಕರೇ... ಮುಂದೆ ಬಂದಿದ್ದಾರೆ...

ಬಹುಷಃ ಅಗಸ್ಟ್ ನಲ್ಲಿ "ಇದೇ.. ಇದರ ಹೆಸರು.." ಬಿಡುಗಡೆಯಾಗ ಬಹುದು...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...

ಪ್ರಕಾಶಣ್ಣ...

ಬಾಲು said...

ಇದೆ ಇದರ ಹೆಸರಿಗೆ,

Olledu aagali, aadashtu bega pustaka namma kai serali. :)

ಸುಮ said...

ಎರಡನೆಯ ಪುಸ್ತಕ! ಕಂಗ್ರಾಟ್ಸ್ ಪ್ರಕಾಶಣ್ಣ . all the best ...

ಸಾಗರಿ.. said...

ಪ್ರಕಾಶಣ್ಣ ತುಂಬಾ ಖುಶಿ ಆಗ್ತ ಇದೆ. ತಮ್ಮ ಪುಸ್ತಕಗಳು(ಶಿವು ಅವರ ವೆಂಡರ್ ಕಣ್ಣು) ನನಗೆ ಕೆಲವೊಂದು ಅಂಗಡಿಗಳಲ್ಲಿ ಕೇಳಿದರೂ ಸಿಗಲಿಲ್ಲ. ಪುಸ್ತಕದ ಲಭ್ಯತೆಯ ಬಗ್ಗೆ ಹೇಳಿ. ತಮ್ಮ ಪುಸ್ತಕಗಳು ಯಾವ್ಯಾವ್ದು?

Anonymous said...

Nice Name and all the best anna :)

ಜಲನಯನ said...

Prakaash -ide idara hsaru- chennagide hesaru...nimma maneyali bhetiyaadaaga ee pustakada bagge keli santosha aitu..dhanyavaada... namma pustaka bidugade bagge nimma blognalli prastaapa maadiddakke. halavaaru snehitarau seridare namma bloggigala ondu vyavasthita sanghatanege nimmanthaha hiriyariaya blogigalinda shubhaarambhavaagali...

ಸುಧೇಶ್ ಶೆಟ್ಟಿ said...

aha... yeradane pusthakadha hesaru kooda adbhuthavaagide PrakashaNNa... best of lucku :)

sunaath said...

ಪ್ರಕಾಶ,
ನಿಮ್ಮ ಎರಡನೆಯ ಪುಸ್ತಕ ಬಿಡುಗಡೆಯಾಗುತ್ತಿರುವದು ಸಂತೋಷದ ಸಂಗತಿ. ನಿಮಗೆ ಶುಭಾಶಯಗಳು.

umesh desai said...

ಹೆಗಡೇಜಿ ಜಯಗೋಪಾಲ್ "ಇದೇ ನನ್ನ ಉತ್ತರ" ಅಂದ್ರು ಈಗ ನೀವು ಅದೇ ಧಾಟಿಯಲ್ಲಿ ಮುಂದುವರೆಯಿರಿ...
ಅಭಿನಂದನೆಗಳು....